ಇಸ್ರೇಲ್ ಯುದ್ಧ ಹಮಾಸ್ ವಿರುದ್ಧವೇ ಹೊರತು ಗಾಜಾ ಮತ್ತು ಪ್ಯಾಲೆಸ್ತೈನಿಗಳ ಮೇಲಲ್ಲ
– ಅಶ್ವಿನ್ ಅಮಿನ್
“Save Gaza… Save Palestine”
“ಗಾಜಾ ಉಳಿಸಿ, ಇಸ್ರೇಲ್ ಅಳಿಸಿ”
“Israel will Fail.. Palestine will raise..”
ಭಾರತದಲ್ಲಿ ಕೆಲ ಸಂಘಟನೆಗಳು ರಸ್ತೆಬದಿಗಳ ಗೋಡೆಗಳಲ್ಲಿ, ಸಾಮಾಜಿಕ ತಾಣಗಳ ಗೋಡೆಗಳಲ್ಲಿ ಮೇಲ್ಕಂಡ ಘೋಷಣೆಗಳನ್ನೊಳಗೊಂಡ ಪೋಸ್ಟರ್ ಅಭಿಯಾನ ಪ್ರಾರಂಭಿಸಿರುವುದನ್ನು ಗಮನಿಸಿರುತ್ತೀರಿ.
ಆದರೆ ಅವರ ಈ ನೈತಿಕತೆ ಮುಂಬೈ ಸರಣಿ ಸ್ಪೋಟ, ತಾಜ್ ಹೋಟೆಲ್ ಧಾಳಿ, ಸಂಸತ್ ಮೇಲಿನ ಧಾಳಿ, ದೇಶದ ವಿವಿದೆಡೆ ನಡೆದ ಬಾಂಬ್ ಧಾಳಿಗಳಲ್ಲಿ ಅದೆಷ್ಟೋ ಮುಗ್ಧ ಭಾರತೀಯರು ಬಲಿಯಾಗುವಾಗ ಎಲ್ಲಿ ಅಡಗಿ ಹೋಗಿತ್ತು ಎಂಬುದು ಮಾತ್ರ ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.
ಬಹುಶಃ ಸತ್ತು ಹೋಗಿರುವವರು ಭಾರತೀಯರು ಮತ್ತು ಧಾಳಿ ಸಂಘಟಿಸಿದವರು ನಮ್ಮ ಸಮಾಜದವರು ಎಂಬ ಅಭಿಮಾನ ಇದ್ದಿತ್ತೇನೋ.. !
ಅಷ್ಟಕ್ಕೂ ಈ “Save Gaza.. Save Palestine” ಅನ್ನುವ ಕೂಗು ಯಾಕೆ ಬೇಕು..?
ನಿಜಕ್ಕೂ ಪ್ಯಾಲೆಸ್ತೀನ್ ಅಮಾಯಕವೇ..? ಇಸ್ರೇಲ್ ಸರ್ವಾಧಿಕಾರಿಯೇ..?
ಖಂಡಿತ ಅಲ್ಲ..
ಈ ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಮಸ್ಯೆ ಇಸ್ರೇಲ್ ಅಸ್ತಿತ್ವಕ್ಕೆ ಬಂದಾಗಿನಿಂದ ಇದೆ. ವಿಶ್ವದ ಏಕೈಕ ಯಹೂದಿ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದ ಇಸ್ರೇಲ್ ಅನ್ನು ಯಹೂದಿಗಳು ಧಾರ್ಮಿಕವಾಗಿ ತಮ್ಮ ಪವಿತ್ರ ಭೂಮಿ ಎಂದು ನಂಬುತ್ತಾರೆ. ಆ ನಂಬುಗೆಯೇ ವಿಶ್ವದಾದ್ಯಂತ ಹರಡಿದ್ದ ಯಹೂದಿಗಳನ್ನು ಇಸ್ರೇಲ್ ನಲ್ಲಿ ಸೇರಿಸಿತು. ಈ ಹಿಂದೆ ಇಸ್ಲಾಂ ಮತಾಂತರ ಹಾಗು ದೌರ್ಜನ್ಯಕ್ಕೆ ಹೆದರಿ ಊರು ತೊರೆದಿದ್ದ ಯಹೂದಿಗಳೆಲ್ಲ ಕ್ರಮೇಣ ಇಸ್ರೇಲ್ ಗೆ ವಾಪಸಾದರು. ಕಾಲಾಂತರದಲ್ಲಿ ಅದೇ ಇಸ್ರೇಲ್ ರಾಷ್ಟ್ರವಾಯಿತು. ಮುಂದೆ ವಿಶ್ವ ಸಂಸ್ಥೆಯು 1948 ರಲ್ಲಿ ಇಸ್ರೇಲ್ ಅನ್ನು ಅಧಿಕೃತ ದೇಶ ಎಂದು ಘೋಷಿಸುವುದರೊಂದಿಗೆ ಇಸ್ರೇಲ್ ನ ಅಸ್ತಿತ್ವಕ್ಕೆ ಅಧಿಕೃತ ಮುದ್ರೆ ಬಿತ್ತು.
ಆದರೆ ಇಸ್ರೇಲ್ ನ ಅಸ್ತಿತ್ವವನ್ನು ಅರಬ್ ಒಕ್ಕೂಟ ಒಪ್ಪದೆ ಬಲವಾಗಿ ವಿರೋಧಿಸಿತು. ಅರಬ್ ಒಕ್ಕೂಟದ ರಾಷ್ಟ್ರಗಳಾದ ಲಿಬೆನಾನ್, ಸಿರಿಯಾ, ಇರಾಕ್, ಜೋರ್ಡಾನ್, ಈಜಿಪ್ಟ್ ಗಳು ಏಕಕಾಲಕ್ಕೆ ಇಸ್ರೇಲ್ ಅನ್ನು ಮುತ್ತಿದವು. ಇಸ್ರೇಲ್ ಗಿಡು ಅನಿರೀಕ್ಷಿತ… ಆದರೆ ಅಷ್ಟೂ ರಾಷ್ಟ್ರಗಳ ಏಕಕಾಲದ ಆಕ್ರಮಣವನ್ನು ಹಿಮ್ಮೆಟ್ಟಿಸಿ ಇಸ್ರೇಲ್ ವಿಜಯದ ನಗೆ ಬೀರಿತು.
ಸೋಲಿನಿಂದ ಪಾಠ ಕಲಿಯದ ಅರಬ್ ಒಕ್ಕೂಟ ಮತ್ತೆ ಇಸ್ರೇಲ್ ಮೇಲೆ ಮುಗಿ ಬೀಳಲು ಸಮಯ ಕಾಯುತ್ತಿತ್ತು. ಭಯೋತ್ಪಾದನೆಯಿಂದ ಮಾತ್ರ ಇಸ್ರೇಲ್ ನ ನಾಶ ಸಾಧ್ಯ ಎಂಬ ನೀತಿಗೆ ಪಾಲೆಸ್ತೀನ್ ಅರಬ್ಬರು ಅದಾಗಲೇ ಅಂಟಿಕೊಂಡಿದ್ದರು. ಅರಬ್ ಒಕ್ಕೂಟವೂ ಇದೇ ಮನಸ್ಥಿತಿ ಹೊಂದಿತ್ತು.
1967 … ಪಾಲೆಸ್ತೀನ್ ಪರವಾಗಿ ಈಜಿಪ್ಟ್, ಸಿರಿಯಾ ಮತ್ತು ಜೋರ್ಡಾನ್ ಗಳು ಮತ್ತೊಮ್ಮೆ ಯುದ್ಧ ಸಾರಿ ಇಸ್ರೇಲ್ ಗೆ ಅಖಾಖ ಕೊಲ್ಲಿಯ ಮೂಲಕ ಹಿಂದೂ ಮಹಾ ಸಾಗರಕ್ಕಿದ್ದ ಏಕೈಕ ಸಮುದ್ರ ಮಾರ್ಗವನ್ನು ಮುಚ್ಚಿ ಹಾಕಿ, ಇಸ್ರೇಲ್ ಹಡಗುಗಳ ಸಂಚಾರಕ್ಕೆ ನಿರ್ಭಂಧ ಹೇರಿತು. ಪರಿಣಾಮ ಇಸ್ರೇಲ್ ನ ಪ್ರತಿಧಾಳಿಗೆ ಪಾಲೆಸ್ತೀನ್ ತನ್ನ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಗಳನ್ನು ಕಳೆದುಕೊಳ್ಳುವುದರ ಜತೆಗೆ ಈಜಿಪ್ಟ್ ಸಿನಾಯ್ ದ್ವೀಪವನ್ನೂ, ಸಿರಿಯಾ ತನ್ನ ಗೊಲಾನ್ ಪ್ರದೇಶವನ್ನೂ ಕಳೆದುಕೊಂಡಿತು.
ತನ್ನ ತಂಟೆಕೋರ ನೀತಿಯಿಂದ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಎರಡನ್ನೂ ಕಳೆದುಕೊಂಡ ಪಾಲೆಸ್ತೀನ್ ಅರಬರು ನೆಲೆಯಿಲ್ಲದಂತಾದರು. ಸುಮಾರು ಎರಡೂವರೆ ಲಕ್ಷದಷ್ಟು ಪಾಲೆಸ್ತೀನಿಯರು ನಿರಾಶ್ರಿತರಾಗಿ ಜೋರ್ಡಾನ್ ನಲ್ಲಿ ಆಶ್ರಯ ಪಡೆದರು. ಆದರೆ ಆಶ್ರಯ ನೀಡಿದ ದೇಶಕ್ಕೇ ದ್ರೋಹ ಬಗೆದ ಪಾಲೆಸ್ತೀನಿಯರು ಪಾಲೆಸ್ತೀನ್ ಲಿಬರೇಶನ್ ಆರ್ಗನೈಶೇಷನ್ (ಪಿ.ಎಲ್.ಒ) ಮುಂದಾಳತ್ವದಲ್ಲಿ ಅರಾಜಕತೆ ಸೃಷ್ಟಿಸಿ ಜೋರ್ಡಾನಿನ ಸರಕಾರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಪಿತೂರಿ ನಡೆಸಿ ವಿಫಲರಾದರು. ಅದೇ ಕಾರಣಕ್ಕೆ ಅವರನ್ನು ಜೋರ್ಡಾನಿನಿಂದ ಹೊರಗಟ್ಟಲಾಯಿತು. ಜೋರ್ಡಾನಿನಿಂದ ಗಡಿಪಾರಾಗಿ ಲಿಬೆನಾನಿಗೆ ಬಂದ ಪಾಲೆಸ್ತೀನಿಯರು ತಮ್ಮ ಗೆರಿಲ್ಲಾಗಳ ಮೂಲಕ ಇಸ್ರೇಲ್ ಮೇಲೆ ಧಾಳಿ ಶುರುವಿಟ್ಟುಕೊಂಡರು. ೧೯೮೨ ರಲ್ಲಿ ಭಯೋತ್ಪಾದನಾ ದಮನ ಕಾರ್ಯಾಚರಣೆ ಕೈಗೊಂಡ ಇಸ್ರೇಲ್ ಲಿಬೇನಾನಿನಲ್ಲಿದ್ದ ಪಿ.ಎಲ್.ಓ ಗೆರಿಲ್ಲಾಗಳನ್ನು ಹೊರಗಟ್ಟಿತು.
ಇತ್ತ ೧೯೬೭ ರಲ್ಲಿ ತಾನು ಕಳೆದುಕೊಂಡಿದ್ದ ಪ್ರದೇಶಗಳನ್ನು ಮತ್ತೆ ವಶಪಡಿಸಿಕೊಳ್ಳಲು 1974 ರಲ್ಲಿ ಇಸ್ರೇಲ್ ಮೇಲೆ ಧಾಳಿ ಮಾಡಿದ ಈಜಿಪ್ಟ್ ಮತ್ತೊಮ್ಮೆ ಸೋತು ಹೋಯಿತು. ಯುದ್ಧದಿಂದ ತನ್ನ ಪ್ರದೇಶಗಳನ್ನು ಮರಳಿ ಪಡೆಯುವುದು ಅಸಾಧ್ಯ ಎಂದರಿತ ಈಜಿಪ್ಟ್ ಇಸ್ರೇಲ್ ಗೆ ಶಾಂತಿ ಸಂದೇಶ ಕಳುಹಿಸಿತು. ಮೊದಲಿನಿಂದಲೂ ಶಾಂತಿಯ ಪ್ರತಿಪಾದನೆ ಮಾಡುತ್ತಾ ಬಂದಿದ್ದ ಇಸ್ರೇಲ್ ತಕ್ಷಣ ಈ ಕುರಿತು ಕಾರ್ಯಪ್ರರ್ವತ್ತವಾಯಿತು. 1978 ರಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಬೀಳುವುದರೊಂದಿಗೆ ಈಜಿಪ್ಟ್ ಇಸ್ರೇಲ್ ನ ಅಸ್ತಿತ್ವವನ್ನು ಮಾನ್ಯ ಮಾಡಿತು. ಪ್ರತಿಯಾಗಿ ತಾನು ವಶಪಡಿಸಿದ್ದ ಈಜಿಪ್ಟ್ ನ ಸಿನಾಯ್ ದ್ವೀಪವನ್ನು ಹಿಂತಿರುಗಿಸಿತು.
ಐತಿಹಾಸಿಕ ಮಹತ್ವ ಪಡೆದ ಈ ಶಾಂತಿ ಒಪ್ಪಂದ ಇಸ್ರೇಲ್ ನ ಶಾಂತಿ ಕುರಿತ ಬದ್ಧತೆಯನ್ನು ವಿಶ್ವಕ್ಕೇ ಪ್ರಚುರಪಡಿಸಿತು. ಪಾಲೆಸ್ತೀನ್ ಗೆರಿಲ್ಲಾ ಸಂಘಟನೆ ಪಿ.ಎಲ್.ಓ ಗೂ ಇದರ ಮನವರಿಕೆಯಾಗಿ 1988 ರಲ್ಲಿ ಪಿ.ಎಲ್.ಓ ಅಧ್ಯಕ್ಷ ಯಾಸಿರ್ ಅರಾಪತ್ ಇಸ್ರೇಲ್ ವಿರುದ್ಧದ ತನ್ನ ಹಿಂಸಾ ಮಾರ್ಗವನ್ನು ಕೈ ಬಿಡುತ್ತಿರುವುದಾಗಿ ಘೋಷಿಸಿದರು. ಮುಂದೆ 1993 ರ ಸೆಪ್ಟೆಂಬರ್ 13 ರ ವಾಷಿಂಗ್ಟನ್ ಒಪ್ಪಂದದ ಮೂಲಕ ಪಿ.ಎಲ್.ಓ ಇಸ್ರೇಲ್ ನ ಅಸ್ತಿತ್ವವನ್ನು ಒಪ್ಪಿಕೊಂಡಿತು. ಪ್ರತಿಯಾಗಿ ಪಾಲೆಸ್ತೀನ್ ರಚನೆ ಕಾರ್ಯಕ್ಕೆ ಇಸ್ರೇಲ್ ಚಾಲನೆ ನೀಡಿ ಒಪ್ಪಂದದಂತೆ ಗಾಜಾ ಮತ್ತು ಜೆಂಕೋ ಪ್ರದೇಶಗಳನ್ನು ಪಾಲೆಸ್ತೀನ್ ಅರಬರಿಗೆ ಹಿಂತಿರುಗಿಸಲಾಯಿತು. ಮುಂದೆ ವೆಸ್ಟ್ ಬ್ಯಾಂಕ್ ಕೂಡ ಪಾಲೆಸ್ತೀನ್ ಅರಬ್ಬರ ಕೈಗೆ ಬಂತು. ಹಲವು ದಶಕಗಳ ಇಸ್ರೇಲ್-ಪಾಲೆಸ್ತೀನ್ ಸಮಸ್ಯೆ ಸುಖಾಂತ್ಯ ಕಂಡಿತ್ತು.
ಆದರೆ..
2006 ರಲ್ಲಿ ಇಸ್ರೇಲ್ ನ ಕಡು ವಿರೋಧಿ ಪಾಲೆಸ್ತೀನ್ ಮೂಲಭೂತವಾದಿ ಉಗ್ರ ಸಂಘಟನೆ ‘ಹಮಾಸ್’ ಗಾಜಾ ಪ್ರಾಂತೀಯ ಚುನಾವಣೆಗಳಲ್ಲಿ ಜಯಭೇರಿ ಬಾರಿಸುವುದರೊಂದಿಗೆ ರಕ್ತಪಾತದ ಮತ್ತೊಂದು ಇತಿಹಾಸ ತೆರೆದುಕೊಂಡಿತು.
ಇರಾನ್ ಮುಂತಾದ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡ ಹಮಾಸ್ ಶಾಂತಿ ಒಪ್ಪಂದವನ್ನು ಭಂಗಗೊಳಿಸಿ ಇಸ್ರೇಲ್ ಮೇಲೆ ಧಾಳಿಯೆಸಗಲು ಶುರುವಿಟ್ಟುಕೊಂಡಿತು. ಹಲವಾರು ಅಮಾಯಕ ಇಸ್ರೇಲ್ ನಾಗರಿಕರು ಬಲಿಯಾದರು. ತನ್ನ ರಾಕೆಟ್ ಧಾಳಿಗಳಿಂದ ಯಹೂದಿ ರಾಷ್ಟ್ರದಲ್ಲಿ ಭೀತಿಯ ವಾತಾವರಣ ಸೃಷ್ಟಿಸಲು ಯಶಸ್ವಿಯಾದ ಹಮಾಸ್ ನ ಹುಮ್ಮಸ್ಸು ಇಮ್ಮಡಿಯಾಯಿತು. ಶಸ್ತ್ರಾಸ್ತ್ರ ಸಂಗ್ರಹವನ್ನು ಮತ್ತಷ್ಟು ಹೆಚ್ಚಿಸಿಕೊಂಡ ಹಮಾಸ್ 2012 ರಲ್ಲಿ ಮತ್ತೆ ಇಸ್ರೇಲ್ ಮೇಲೆ ರಾಕೆಟ್ ಧಾಳಿ ಆರಂಭಿಸಿತು. ಪ್ರತಿಯಾಗಿ ಧಾಳಿಗೈದ ಇಸ್ರೇಲ್ ಹಮಾಸ್ ನ ಸದ್ದಡಗಿಸಿದರೂ ಹಮಾಸ್ ನ ಉಗ್ರ ರೂಪಕ್ಕೆ ಕೊಂಚ ಭೀತಿಗೊಳಗಾದಂತೆ ಕಂಡಿದಂತೂ ನಿಜ…
ಈಗ ಮತ್ತೆ ಇಸ್ರೇಲ್ ಮೇಲೆ ಧಾಳಿ ಆರಂಭಿಸಿರುವ ಹಮಾಸ್ ತಾನು ಇರಾನಿನಿಂದ ಪಡೆದ ರಾಕೆಟ್ ಗಳನ್ನು ಗಾಜಾದ ಗಡಿಯುದ್ದದ ನೂರಾರು ಸುರಂಗಗಳಲ್ಲಿ ಅಡಗಿಸಿಟ್ಟಿದೆ. ಪ್ರತಿಯಾಗಿ ವಾಯುದಾಳಿ ನಡೆಸುತ್ತಿರುವ ಇಸ್ರೇಲ್ ಗೆ ಆ ಹುದುಗಿಸಿಟ್ಟಿರುವ ರಾಕೆಟ್ ಸಂಗ್ರಹವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಹೀಗಾಗಿ ಹಮಾಸ್ ನ ರಾಕೆಟ್ ಸಂಗ್ರಹವನ್ನು ನಾಶ ಮಾಡಬೇಕಾದರೆ ಇಡೀ ಗಾಜಾವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಇಂಚಿಂಚೂ ನೆಲವನ್ನೂ ಶೋಧಿಸುವ ಅನಿವಾರ್ಯತೆ ಇಸ್ರೆಲಿಗಿದೆ. ಪಾಲೆಸ್ತೀನ್ ನ ಸರ್ವಾಧಿಕಾರಿಯಾಗ ಹೊರಟ ಉಗ್ರ ಸಂಘಟನೆ ಹಮಾಸ್ ಇಸ್ರೇಲ್ ನ ನಾಯಕರಲ್ಲಿ ಭೀತಿ ಹುಟ್ಟಿಸಲು ಆರಂಭಿಸಿದ ರಕ್ತಪಾತ ಈಗ ಅದಕ್ಕೇ ಮುಳುವಾಗುವ ಹಂತಕ್ಕೆ ಬಂದು ನಿಂತಿದೆ.
ಭಯೋತ್ಪಾದನೆಯನ್ನು ಯಾವ ದೇಶವೂ ಸಹಿಸದು. ಇಸ್ರೆಲಿಗಿದು ತನ್ನ ರಾಷ್ಟ್ರದ ನಾಗರಿಕರ ರಕ್ಷಣೆಯ ಪ್ರಶ್ನೆ. ತನ್ನ ರಾಷ್ಟ್ರದ ರಕ್ಷಣೆಗಾಗಿ ಇಸ್ರೇಲ್ ಏನು ಮಾಡಲೂ ಹಿಂಜರಿಯದು. ಅದನ್ನೇ ಈಗ ಇಸ್ರೇಲ್ ಮಾಡುತ್ತಿರುವುದು. ಇಲ್ಲಿನ ಚಿತ್ರಣವಂತೂ ಸ್ಪಷ್ಟವಾಗಿದೆ. ಇದು ಭಯೋತ್ಪಾದನೆಯ ವಿರುದ್ಧದ ಇಸ್ರೇಲ್ ನ ಹೋರಾಟವೇ ವಿನಃ ಇಸ್ರೇಲ್ ತಾನಾಗಿಯೇ ಕಾಲು ಕೆರೆದುಕೊಂಡು ಮಾಡುತ್ತಿರುವ ಯುದ್ಧವಲ್ಲ.
ಗಾಜಾ ಉಳಿಸಿ ಎಂದು ಬೊಬ್ಬಿರಿಯುತ್ತಿರುವವರು ಹಮಾಸ್ ಎಂಬ ನಿಷೇಧಿತ ಸಂಘಟನೆ ಮತ್ತು ಅದು ಜನವಸತಿ ಪ್ರದೇಶವನ್ನು ತಮ್ಮ ಅಡಗುತಾಣ ಮಾಡಿಕೊಂಡ ಬಗ್ಗೆ ಚಕಾರವೆತ್ತುವುದಿಲ್ಲ ಇಂತವರು ಶಾಂತಿಯ ಪ್ರತಿದಕರಾಗಲು ಸಾಧ್ಯವೇನು? ಜಗತ್ತಿನ ಪ್ರತಿಯೊಬ್ಬ ಶಾಂತಿ ಪ್ರತಿಪಾದಕನು ಇಲ್ಲಿ ಇಸ್ರೇಲ್ ನ ಗೆಲುವನ್ನೇ ಬಯಸುತ್ತಾನೆ.ಅಷ್ಟಕ್ಕೂ, ಇಸ್ರೇಲ್ ಯುದ್ಧ ಹಮಾಸ್ ವಿರುದ್ಧವೇ ಹೊರತು ಗಾಜಾ ಮತ್ತು ಪ್ಯಾಲೆಸ್ತೈನಿಗಳ ಮೇಲಲ್ಲ.
ಚಿತ್ರಕೃಪೆ : ಅಲ್ಜೆಮಿನೆರ್.ಕಾಂ
ಇಸ್ರೇಲ್ ತನ್ನ ಸದುದ್ದೇಶದಲ್ಲಿ ಗೆದ್ದು ಶಾಂತಿಯನ್ನು ಕಾಪಾಡಿಕೊಳ್ಳಲಿ.
ಇಸ್ರೇಲ್ ನ್ನು ಕ್ರೂರ, ಕಾಲು ಕೆದರಿ ಪಾಲೆಸ್ತಿನಿಯನ್ನರ ಕಗ್ಗೊಲೆಗೆ ಇಳಿದಿದೆ ಎಂಬಂತೆ ಚಿತ್ತಿಸ ಹೊರಟಿರುವವರ ನಾಟಕವನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಇದು ತಾವು ಬರೆದಂತೆ ಈ ‘ಕಾಳಜಿ’ ಸಮಾಜ ಬಾಂಧವರಿಗಷ್ಠೆ ಸೀಮಿತವಲ್ಲ. ಗಾಂಧೀಜಿಯ ಯಾವುದೋ ಹಳೆಯ ಪತ್ರವನ್ನು ಪ್ರಕಟಿಸುವುದು..ಯಾವುದೋ ಸಿನೆಮಾ ವಿಮರ್ಷೆ ಬರೆದು..ಅದಕ್ಕೆ ಇಸ್ರೇಲ್ ಘಟನೆ ಹೊಂದಿಸಿದ್ದು, ತನ್ನ ಏರಿಯಾದಲ್ಲಿ ಶಾಲಾಮಕ್ಕಳು ಬಾಂಬ್ ಧಾಳಿಯಲ್ಲಿ ಸತ್ತಾಗ ಹಮಾಸ್ ಉಗ್ರ ರೂಪ ತಾಳುವಂತಾಯಿತು ಎಂಬ ಸಿಂಪಥಿ ಕಥೆ, ಗಾಝಾ ಯಾವ ದಿಕ್ಕಿನಲ್ಲಿದೆ ಎಂದು ಕೇಳಿದರೆ ತಲೆ ಕೆರೆದುಳ್ಳುವ ಕೆಲವು ಮರಿ ಸಾಹಿತಿಗಳು ತಮ್ಮ ಫೇಸಬುಕ್ ಕವರ್ ನಲ್ಲಿ ‘ಸೇವ್ ಗಾಝಾ” ಚಿತ್ರ ಹಾಕಿಕೊಂಡಿದ್ದು ಇವೆಲ್ಲ ಇಲ್ಲಿ ಕರ್ನಾಟಕದಲ್ಲಿಯೇ ನಡೆದಿವೆ. ನಮ್ಮ ಪುಣ್ಯವೆಂದರೆ, ಕಾಶ್ಮಿರಕ್ಕೆ ಸ್ವಾತಂತ್ರ್ಯ ಕೊಡಿ ಎಂಬ ಲೇಖನವನ್ನು ಈ ಸ್ವಯಂಘೋಷಿತ ‘ಮಾನವೀಯತೆಯ ವಕ್ತಾರರು ಬರೆಯದಿರುವುದು ಮತ್ತು ಪ್ರೀಡಂ ಪಾರ್ಕನಲ್ಲಿ ಧರಣಿ ಕೂಡದಿರುವುದು..ಅಕಸ್ಮಾತ ಮಧ್ಯಪ್ರ್ಯಾಚ್ಯದಿಂದ ಕೆಲವು ಬೆಂಗಳೂರು-ಮಂಗಳೂರು ನಾಯಕರಿಗೆ ಸರಿಯಾಗಿ ಫಂಡಿಂಗ್ ಆದರೆ ಅದೂ ಆಗುತ್ತದೆಯೇನೊ!
( ನನಗೆ ಇವೆಲ್ಲಕ್ಕಿಂತ ಮಜ ಅನಿಸಿದ್ದು..ಒಬ್ಬ ‘ವಾರೆವ್ಹಾ..ಖಾತೆ ಹೊ ಇಂಡಿಯಾಕಾ..ಗಾತೆ ಹೊ ಇಸ್ರೇಲ್ ಕಾ!” ಅಂತ ಕಮೆಂಟ್ ಹಾಕಿದ್ದ!!!)
ಈಗ ನಡೆಯುತ್ತಿರುವ ಯುದ್ಧ ಹಮಾಸ್ ನ ಅಧಿಕಪ್ರಸಂಗತನ ಮತ್ತು ಕಾಲು ಕೆದುರುವಿಕೆಯಿಂದ ಆದದ್ದು. ಎಲ್ಲವೂ ಸ್ವಲ್ಪ ಮಟ್ಟಿಗಾದರೂ ಶಾಂತವಾಗಿದ್ದ ಸಮಯದಲ್ಲಿ, ಕೆಲವು ಇಸ್ರೇಲಿ ನಾಗರಿಕರ ಅನುಮಾನಾಸ್ಪದ ಸಾವಾಗಿದ್ದು..ಅದನ್ನು ಇಸ್ರೇಲ್ ಪ್ರಶ್ನಿಸಿ, ಪ್ರತಿಭಟಿಸಿದಾಗ..ಒಮ್ಮಿಂದೊಮ್ಮೆಲೆ ರಾಕೆಟ್ ಧಾಳಿಗಿಳಿದಿದ್ದು ಇದೇ ಹಮಾಸ್. ಏನೇ ಮಾಡಿದರೂ ನಮ್ಮಂತೆ ಶಾಂತಿಮಂತ್ರ ಜಪಿಸಿದರೆ , ಇಸ್ರೇಲ್ ನ್ನು ಈ ಅರಬ್ ರಾಷ್ಟ್ರಗಳು ಬದುಕಲು ಬಿಡುವುದಿಲ್ಲ. ನೀವು ನಮ್ಮ ಐದು ಜನರನ್ನು ಮುಟ್ಟಿದರೆ ನಿಮ್ಮ ಐವತ್ತು ಜನರ ಬಲಿಯಾಗುತ್ತದೆ ಎಂದಾಗಲೇ ಇವು ಬಾಲ ಮುದುರಿಕೊಳ್ಳುವುದು.
ಇಸ್ರೇಲ್ ನ ಯಹೂದಿ ಜನಾಂಗ ಬಹುಕಾಲದ ತನಕ ಫುಟಬಾಲ್ ಚೆಂಡಿನ ಪರಿಸ್ಥಿತಿ ಅನುಭವಿಸಿದೆ. ಅಲ್ಲಿಂದಿಲ್ಲಿ, ಇಲ್ಲಿಂದಲ್ಲಿ ಫೇರಿ ಕಿತ್ತು..ಕೊನೆಗೊಮ್ಮೆ ತನ್ನ ಮೂಲನಾಡಾದ ಈಗಿನ ಪ್ರದೇಶಕ್ಕೆ ಬಂದು, ಸುತ್ತಲೂ ವೈರಿಗಳನ್ನಿಟ್ಟುಕೊಂಡು ಧೀರತೆಯಿಂದ ಬದುಕಿರುವ ಇಸ್ರೇಲ್ ಪ್ರಶಂಸೆಗೆ ಅರ್ಹವಾದದ್ದು. ಈ ಅರಬ್ ರಾಷ್ಟ್ರಗಳು ತಮ್ಮ ಎಂದಿನ ಅಧಿಕ ಪ್ರಸಂಗತನ್ನು ಬಿಟ್ಟರೆ ಶಾಂತಿ ಸಾಧ್ಯವಿದೆ. ಇಸ್ರೇಲ್ ತಾನು ಶಾಂತಿಗೂ ಬದ್ಧ ಎಂಬುದನ್ನು ಈ ಮೊದಲು ಕೂಡ ಸಿದ್ಧ ಮಾಡಿದೆ. ಈಗ ಶಾಂತಿ ಬೇಕೆಂದರೆ ಹಮಾಸ್ ತನ್ನ ವರ್ತನೆ ತಿದ್ದಿಕೊಳ್ಳಬೇಕು..ಅಷ್ಟೆ!
ಇಸ್ರೇಲ್ ಇಡೀ ಪ್ಯಾಲೆಸ್ಟೀನ್ ವಾಸಿಗಳನ್ನೇ ನಿರ್ನಾಮ ಮಾಡಿದ ನಂತರವೂ ನೀವು ಹೀಗೆ “ಇಸ್ರೇಲ್ ಯುದ್ಧ ಹಮಾಸ್ ವಿರುದ್ಧವೇ ಹೊರತು ಗಾಜಾ ಮತ್ತು ಪ್ಯಾಲೆಸ್ತೈನಿಗಳ ಮೇಲಲ್ಲ” ಅಂತ ಹೇಳುತ್ತೀರಿ. ನಿಮ್ಮಿಂದ ಇನ್ನೇನನ್ನು ನಿರೀಕ್ಷಿಸಬಹುದು ಹೇಳಿ? ನವ ನಾಟ್ಜಿಗಳು.
Noam Chomsky: “The media constantly intone that Hamas is dedicated to the destruction of Israel. In reality, Hamas leaders have repeatedly made it clear that Hamas would accept a two-state settlement in accord with the international consensus that has been blocked by the U.S. and Israel for 40 years. In contrast, Israel is dedicated to the destruction of Palestine, apart from some occasional meaningless words, and is implementing that commitment.”
_http://rabble.ca/news/2014/08/noam-chomsky-nightmare-gaza
ಲೇಖನ ವಾಸ್ತವವನ್ನು ಹಿಡಿದಿಟ್ಟಿದೆ. ಹಮಾಸ್ ಅಧಿಕಾರಕ್ಕೆ ಬಂದಾಗಲೇ ಇಂಥ ಆತಂಕ ಅಲ್ಲಿನ ಇತಿಹಾಸ ಬಲ್ಲವರಿಗೆ ಇತ್ತು. ಪಿಎಲ್ಒ ಪಾಕಿಸ್ತಾನದಲ್ಲೂ ಬೇರೂರಿದೆ. ಮೊದಲು ಇವರಿಗೆ ಮಣೆ ಹಾಕಿದ ಪಾಕ್ ಭಾರತದ ವಿರುದ್ಧ ಅವರನ್ನು ಬಳಸಿಕೊಳ್ಳುವ ಹುನ್ನಾರ ಮಾಡಿದ್ದೂ ಸುಳ್ಳಲ್ಲ. ಆದರೆ ಅವರು ಪಾಕ್ ನೆಲದಲ್ಲೇ ಭಯೋತ್ಪಾದನೆಗೆ ಇಳಿದಾಗ ಪಾಕ್ ನಲ್ಲೇ ಇರುವ ವಹಾಬಿಗಳು-ಪಠಾಣರು (ಇವರೇ ಪಾಕ್ ಸೇನೆಯಲ್ಲಿ ಹೆಚ್ಚಾಗಿರುವವರು) ಸಿಡಿದೆದ್ದರು. ಪಾಕ್ ನಲ್ಲಿ ಇಂದಿಗೂ ನಡೆಯುತ್ತಿರುವ ಆಂತರಿಕ ಸಂಘರ್ಷಕ್ಕೂ ಈ ಬೆಳವಣಿಗೆಗೂ ಸಂಬಂಧವಿದೆ. ಇರಾನ್ ಮತ್ತು ಪಿಎಲ್ಒಗಳ ಒಳ ಒಪ್ಪಂದ ತಿಳಿದೇ ಇಸ್ರೇಲ್ ಇರಾಕಿನ ಮಿತ್ರನಾಗಿದೆ. ಇರಾನ್-ಇರಾಕ್ ಸಮರವಾದಾಗಲೆಲ್ಲ ಇದು ರಟ್ಟಾಗುವ ಸಂಗತಿ. ಇರಾನ್ ಸುಮ್ಮನೇ ಹಮಾಸ್ ಗೆ ನೆರವಾಗುತ್ತಿಲ್ಲ. ಈ ಕಚ್ಚಾಟ ಮಧ್ಯ ಪಶ್ಚಿಮ (ಯೂರೋಪ್ ಮತ್ತು ಅಮೆರಿಕದವರಿಗೆ ಮಧ್ಯಪ್ರಾಚ್ಯ) ದೇಶಗಳಲ್ಲಿ ಎಂದೂ ಬಗೆಹರಿಯುವ ಲಕ್ಷಣಗಳಿಲ್ಲ.
atuttama baraha nimma katu satyada baravanige janakke tiliyabekide