ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 22, 2014

116

ಮನುಸ್ಮೃತಿ : ಪ್ರಗತಿಪರ ಮತ್ತು ಬುದ್ಧಿಜೀವಿಗಳ ಅನ್ನದಾತ

‍ನಿಲುಮೆ ಮೂಲಕ

–      ರಾಕೇಶ್ ಶೆಟ್ಟಿ

ಮನು ಸ್ಮೃತಿಒಂದು ವೇಳೆ “ಬೆಳಗಾನ ಎದ್ದು ನಾ ಯಾರ್ಯಾರ ನೆನೆಯಲಿ” ಎನ್ನುವ ಪ್ರಶ್ನೆ ನಮ್ಮ ಪ್ರಗತಿಪರ ಮಿತ್ರರರನ್ನು ಒಮ್ಮೆ ಕಾಡಿದರೆ ಅವರು ಯಾರನ್ನು ನೆನಯಬಹುದು…?

“ಮನುಸ್ಮೃತಿ!”

ಹೌದು! ಅವರು ನೆನೆಯಬೇಕಿರುವುದು ಮನುಸ್ಮೃತಿಯನ್ನು.ಯಾಕೆಂದರೆ ಬಹಳಷ್ಟು ಪ್ರಗತಿಪರರು ತಮ್ಮ ದಿನನಿತ್ಯದ ಭಾಷಣಗಳಲ್ಲಿ,ಬರಹಗಳಲ್ಲಿ ಕಡ್ಡಾಯವೇನೋ ಎಂಬಂತೆ ಬಳಸಿಯೇ ಬಳಸುವ ಪದಗಳಲ್ಲಿ  “ಮನು, ಮನುವಾದಿ, ಮನುಸ್ಮೃತಿ, ಮನುವಾದಿ ಸಂವಿಧಾನ” ಇತ್ಯಾದಿಗಳು ಬಂದೇ ಬರುತ್ತವೆ (ಸಿನೆಮಾಕ್ಕೊಬ್ಬ “ಹೀರೋ/ವಿಲನ್”ಅನಿವಾರ್ಯವೆಂಬಂತೆ) ಆ ಪದಗಳನ್ನು ಬಳಸಿ ಬಳಸಿಯೇ ಹೆಸರು,ಹಣ,ಪ್ರಶಸ್ತಿ ಪಡೆದುಕೊಂಡವರ ಪಾಲಿಗೆ “ಮನುಸ್ಮೃತಿ” ಅನ್ನದಾತನೇ ಸರಿ.ಮನುಸ್ಮೃತಿಯ ಅತಿ ದೊಡ್ಡ ಫಲಾನುಭವಿಗಳು ಇವರೇ.

ಮನುವಾದಿ ಸಂವಿಧಾನ,ಮನುಸ್ಮೃತಿಯೇ ಹಿಂದೂಗಳ ಕಾನೂನು ಗ್ರಂಥ ಅಂತೆಲ್ಲ ಈ ಪ್ರಗತಿಪರರು ಮಾತನಾಡುವಾಗ ನನ್ನಂತ ಜನ ಸಾಮಾನ್ಯರಿಗೆ ಯಾರೀತ “ಮನು”?,”ಮನುಸ್ಮೃತಿ” ಎಂದರೇನು? ಎನ್ನುವ ಪ್ರಶ್ನೆಗಳೇಳುತ್ತವೆ.ಈ ಪ್ರಶ್ನೆಗಳು ನಮ್ಮಲ್ಲಿ ಯಾಕೆ ಮೂಡುತ್ತವೆಯೆಂದರೆ,ನನ್ನ ದಿನನಿತ್ಯದ ಜೀವನದಲ್ಲಿ,ನನ್ನ ಅನುಭವ,ಆಚರಣೆಗಳಲ್ಲಿ ನಾನೆಂದಿಗೂ ಈ ಮನುವನ್ನೋ, ಮನುಸ್ಮೃತಿಯನ್ನೋ ಮುಖಾಮುಖಿಯಾಗಿಲ್ಲ.ಹಳ್ಳಿಗಳಲ್ಲಿ ನಡೆಯುತಿದ್ದ/ನಡೆಯುತ್ತಿರುವ ನ್ಯಾಯ ಪಂಚಾಯಿತಿಗಳನ್ನು ನಾನು ನೋಡಿದ್ದೇನೆ ಅಲ್ಲಿ ಎಲ್ಲೂ ಮನುಸ್ಮೃತಿಯ ಆಧಾರದ ಮೇಲೆ ತೀರ್ಮಾನಗಳನ್ನು ನೀಡಿದ್ದನ್ನು ಕಂಡಿಲ್ಲ. ನಿಜವಾಗಿಯೂ “ಮನುಸ್ಮೃತಿ” ಅನ್ನುವುದೊಂದಿದೆ ಎನ್ನುವುದು ನನಗೆ ತಿಳಿದಿದ್ದೇ ಬುದ್ಧಿಜೀವಿಗಳ ಮಾತುಗಳನ್ನು ಕೇಳಲು (ಅದು ನನ್ನ ೨೦ನೇ ವಯಸ್ಸಿನ ನಂತರ) ಆರಂಭಿಸಿದ ಮೇಲೆಯೇ ಹೊರತು,ಅದಕ್ಕೂ ಮೊದಲು ನನ್ನ “ಹಿಂದೂ ಸಂಪ್ರದಾಯ”ಕ್ಕೊಂದು “ಕಾನೂನು ಗ್ರಂಥ”ವಿದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ.ನಮಗೇ ಪರಕೀಯವಾಗಿರುವ ಈ “ಮನು ಮತ್ತು ಮನುಸ್ಮೃತಿ” ಅದೇಗೆ “ಹಿಂದೂ ಕಾನೂನು ಗ್ರಂಥ”ವಾಗುತ್ತದೆ? ಈ ವಾದಗಳು ಹುಟ್ಟಿಕೊಂಡಿದ್ದು ಹೇಗೆ ಅಂತ ನೋಡಲಿಕ್ಕೆ ಹೊರಟರೆ ನಾವು ಹೋಗಿ ನಿಲ್ಲುವುದು ಬ್ರಿಟಿಷರ ಬಳಿ.

ವ್ಯಾಪಾರಕ್ಕೆಂದು ಇಲ್ಲಿಗೆ ಬಂದು ನಮ್ಮ ನೆಲವನ್ನೇ ಕಬಳಿಸಿ ಇಲ್ಲಿ ಕುಳಿತ ಬ್ರಿಟಿಷರಿಗೆ ಇಲ್ಲಿನ ಅಗಾಧ ಸಾಮಾಜಿಕ,ಸಾಂಸ್ಕೃತಿಕ ವೈವಿಧ್ಯಮಯ ಸಮಾಜದ ತಲೆಬುಡ ಅರ್ಥವಾಗಲಿಲ್ಲ.ಇಲ್ಲಿ ಅವರ ಆಳ್ವಿಕೆ ಜಾರಿಗೆ ತರಲಿಕ್ಕಾಗಿ ಅವರಿಗೆ ಅವರ ದೇಶದಲ್ಲಿರುವಂತದ್ದೇ ಒಂದು ವ್ಯವಸ್ಥೆ ಬೇಕು ಎಂದುಕೊಂಡು ಯುರೋಪಿಯನ್ ಸಾಮಾಜಿಕ ವ್ಯವಸ್ಥೆಯನ್ನೇ ನಮ್ಮ ಸಮಾಜಕ್ಕೂ ಸಮೀಕರಿಸಿದರು.ಅವರಿಗೆ ಇಲ್ಲಿ ಮುಖ್ಯವಾಗಿ ತಲೆನೋವು ತರುತಿದ್ದ ವಿಷಯಗಳಲ್ಲಿ “ವ್ಯಾಜ್ಯದ ತೀರ್ಮಾನಗಳು” ಪ್ರಮುಖವಾಗಿದ್ದವು.

ಕೋರ್ಟುಗಳಲ್ಲಿ ಬ್ರಿಟಿಷ್ ನ್ಯಾಯಾಧೀಶರಿಗೆ ಪಂಡಿತರು ಸಹಾಯಕರಾಗಿ ನಿಯೋಜಿತರಾಗಿದ್ದರು.ಈ ಪಂಡಿತರು ನಮ್ಮ ಸಮಾಜದ ಬಹುತ್ವಕ್ಕೆ ತಕ್ಕಂತೆ ಒಂದೇ ವಿಷಯಗಳ ಮೇಲೆ ಭಿನ್ನ ವ್ಯಾಖ್ಯಾನ,ಅಭಿಪ್ರಾಯಗಳನ್ನು ನೀಡುವುದನ್ನು ನೋಡಿದ ಬ್ರಿಟಿಷರು ಈ ಪಂಡಿತರನ್ನು ಬಿಟ್ಟು ತಾವೇ ತಮ್ಮ ರಿಲಿಜನ್ನ್ ಗ್ರಂಥಗಳ ಆಧಾರದ ಮೇಲೆ ನಡೆಯುವ ಯುರೋಪ್ ಸಮಾಜದಂತೆಯೇ ಇಲ್ಲಿಯೂ ಒಂದು ಕಾನೂನು ಗ್ರಂಥವಿರಲೇಬೇಕು ಎಂದು ಹುಡುಕಲು ಹೊರಟವರಿಗೆ ಹಲವು ಸ್ಮೃತಿಗಳು ಸಿಕ್ಕಿದವು.

ಆದರೆ,ಅವರಿಗೆ ಪ್ರಿಯವೆನಿಸಿದ್ದು “ಮನುಸ್ಮೃತಿ” (ಯಾಕೆ ಮನುಸ್ಮೃತಿಯೇ ಪ್ರಿಯವಾಯಿತು? ಬಹುಷಃ ಅದರೊಳಗೆ “ಹಿಂದೂ ರಿಲಿಜನ್ (?)” ಎಂಬುದು ಎಷ್ಟು ಘನಘೋರ ಎಂದು ತೋರಿಸಲಿಕ್ಕೆ ಬ್ರಿಟಿಷರಿಗೆ ಬೇಕಾದಷ್ಟು ಸಾಲುಗಳು ಕಾಣಿಸಿದ್ದರಿಂದ ಇದ್ದಿರಬಹುದು).ವಿಲಿಯಂ ಜೋನ್ಸ್ ಮನುಸ್ಮೃತಿಯನ್ನು ಅನುವಾದಿಸಿದ ನಂತರ ಬ್ರಿಟಿಷರು “ಮನುಸ್ಮೃತಿ”ಯೇ “ಹಿಂದೂಗಳ ಕಾನೂನು ಗ್ರಂಥ” ಎಂದು ದೊಡ್ಡ ದನಿಯಲ್ಲಿ ಪ್ರಚಾರ ಮಾಡಲಿಕ್ಕೆ ಶುರುಮಾಡಿದರು.ಅದರ ಜೊತೆಗೆ ಅದರೊಳಗಿನ ಕೆಲವು ವಾಕ್ಯಗಳನ್ನು ಉಲ್ಲೇಖಿಸಿ,ಇಂತ ಗ್ರಂಥದ ಆಧಾರದ ಮೇಲೆ ನಿಂತಿರುವ ಸಮಾಜ ಭ್ರಷ್ಟವಾಗಿದೆ,ಸ್ತ್ರೀ ವಿರೋಧಿಯಾಗಿದೆ ಎನ್ನಲಾರಂಭಿಸಿದರು.ಬ್ರಿಟಿಷರಿಂದ ಶಿಕ್ಷಣ ಪಡೆದ ಇಲ್ಲಿನ ಜನರೂ ಬ್ರಿಟಿಷರ ಈ ತಪ್ಪು ಅನಿಸಿಕೆಗಳನ್ನು ನಿಜವೆಂದು ನಂಬಿಕೊಂಡರು.ಹಾಗಾಗಿಯೇ ಇವತ್ತಿಗೂ ಪ್ರಗತಿಪರರು ಮಾತಿಗೊಮ್ಮೆ “ಮನುವಾದಿ,ಮನುಸಂವಿಧಾನ,ಮನುಸ್ಮೃತಿ” ಎನ್ನುವುದು.

“ಮನುಸ್ಮೃತಿ”ಯನ್ನು “ಹಿಂದೂಗಳ ಕಾನೂನು ಗ್ರಂಥ” ಎಂದು ಮನುಸ್ಮೃತಿಯನ್ನು ವಿರೋಧಿಸುವವರಿಗೂ ಮತ್ತು ಮನುಸ್ಮೃತಿಯ ಪರವಾಗಿ ವಾದಿಸುವವರಿಗೂ ಒಂದಿಷ್ಟು ಪ್ರಶ್ನೆಗಳಿವೆ.

೧.ಮನುವಿನ ಜೀವಿತಾವಧಿಯ ಕಾಲಘಟ್ಟ ಮತ್ತು ಮನುಸ್ಮೃತಿ ರಚನೆಯಾದ ಕಾಲಮಾನವೇನು?

೨.ಬ್ರಿಟಿಷರು ಬರುವವರೆಗೂ ರಾಜಕೀಯವಾಗಿ ಎಂದಿಗೂ ಒಂದಾಗಿದ್ದಿರದ (ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಇವತ್ತಿಗೂ ವೈವಿಧ್ಯತೆ ಇದ್ದೇ ಇದೆ ಎನ್ನುವುದನ್ನೂ ಒಪ್ಪುತ್ತೀರಿ ಎಂದುಕೊಳ್ಳುತ್ತಾ) ಈ ದೇಶದಲ್ಲಿ ಯಾರ ಆಳ್ವಿಕೆಯ ಕಾಲದಲ್ಲಿ ಮನುಸ್ಮೃತಿಯನ್ನು ಜಾರಿಗೆ ತರಲಾಯಿತು?

೩.ಬ್ರಿಟಿಷರು ಬರುವ ಮೊದಲಿಗೆ ಆ ರೀತಿಯ ಕಾನೂನು ಇಲ್ಲಿ ಪಾಲನೆಯಾಗುತ್ತಿತ್ತು ಅನ್ನುವುದಾದರೆ,ಆಗಿನ ಕಾಲದ ಪಂಡಿತರಿಗೇಕೆ ಈ ಬಗ್ಗೆ ಏಕೆ ಗೊತ್ತಾಗಲಿಲ್ಲ? ಮತ್ತು ಬ್ರಿಟಿಷರಿಗೇಕೆ ನಮಗಾಗಿ ಒಂದು ಕಾನೂನು ಗ್ರಂಥವನ್ನು ಹುಡುಕುವ ಸ್ಥಿತಿ ಬಂತು?

೪.ಮನುಸ್ಮೃತಿ ಎನ್ನುವುದು ಇಡೀ ಭಾರತದಾದ್ಯಂತ ಕಾನೂನಿನ ರೂಪದಲ್ಲಿ ಜಾರಿಯಲ್ಲಿತ್ತು ಎನ್ನುವುದಾದರೆ, ಸಂಸ್ಕೃತ ಕಲಿತ ಯಾವ ಶೂದ್ರನ ಕಿವಿಗೆ ಸೀಸ ಸುರಿಯಲಾಗಿತ್ತು ಅಥವಾ ಅದರಲ್ಲಿ ಉಲ್ಲೇಖಿಸಿರುವ ಇನ್ನಿತರ ಯಾವ ಶಿಕ್ಷೆಗಳನ್ನು ಯಾರ ಮೇಲೆ ಜಾರಿತೆ ತರಲಾಗಿತ್ತು? ಈ ಬಗ್ಗೆ ಸಾಕ್ಷ್ಯಗಳು,ಪುರಾವೆಗಳು ಕನಿಷ್ಟ ಉಲ್ಲೇಖಗಳು ಎಲ್ಲಾದರೂ ಇವೆಯೇ?

೫.ಈಗೀನ ನಮ್ಮ ನ್ಯಾಯಾಲಯಗಳಂತೆ  ಅಥವಾ ಬ್ರಿಟಿಷ್ ನ್ಯಾಯಾಲಯಗಳಂತೆ ನಮ್ಮ ಸಮಾಜದಲ್ಲಿ ಆಗಲೂ ಕೇಂದ್ರಿಕೃತ (ದೆಹಲಿಯೋ ಮತ್ತಿನ್ಯಾವುದೋ ದೊಡ್ಡ ನಗರ ಅಂದುಕೊಳ್ಳೋಣ)ನ್ಯಾಯದಾನವಾಗುತಿತ್ತೇ ಅಥವಾ ಗ್ರಾಮೀಣ ಮಟ್ಟದಲ್ಲಿಯೋ ಅಥವಾ ಆಯಾ ಪಂಗಡಗಳಲ್ಲಿ ಇವೆಲ್ಲ ತೀರ್ಮಾನಗಳಾಗುತಿದ್ದವೇ? (ಉದಾ: ಜಿಲ್ಲಾ ಕೋರ್ಟ್,ಹೈಕೋರ್ಟ್,ಸುಪ್ರೀಂ ಕೋರ್ಟ್ ಇತ್ಯಾದಿ).ಆಗುತಿದ್ದರೆ,ಅದು ಜಾರಿಯಾಗುತ್ತಿದೆಯೋ ಇಲ್ಲವೋ ಎಂದು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದವರು ಯಾರು?

೬.ಸಂಸ್ಕೃತ ಕೇವಲ ಬ್ರಾಹ್ಮಣರ ಸ್ವತ್ತು ಎನ್ನುವ ಮತ್ತು ಮನುಸ್ಮೃತಿಯೇ ನಮ್ಮ ಕಾನೂನುಗ್ರಂಥ ಎನ್ನುವ ವಾದವನ್ನು ಒಪ್ಪಿಕೊಂಡು ಮುನ್ನಡೆಯುವುದಾದರೇ, ಮುಂದಿನ ಪ್ರಶ್ನೆ : ಈ ದೇಶದ ಎಲ್ಲಾ ಜಾತಿಗಳ/ಪಂಗಡಗಳ ನ್ಯಾಯ ತೀರ್ಮಾನಿಕೆಯಲ್ಲಿ ಬ್ರಾಹ್ಮಣರು ಪಾತ್ರ ವಹಿಸುತಿದ್ದರೇ? ಇಲ್ಲವೆಂದಾದರೆ, ಸಂಸ್ಕೃತದಲ್ಲಿದ್ದ ಮನುಸ್ಮೃತಿಯು ಭಾರತದ ಇತರ ಜಾತಿಯ ಜನರಿಗೆ ಹೇಗೆ ಅರ್ಥವಾಗುತಿತ್ತು ಮತ್ತು ಅವರೇಗೆ ಅದರಲ್ಲಿ ಬರೆದಿರುವಂತ ಶಿಕ್ಷೆ,ನ್ಯಾಯ ತೀರ್ಮಾನಗಳನ್ನು ಜಾರಿಗೆ ತರುತಿದ್ದರು?

ಪ್ರಶ್ನೆಗಳೂ ಇನ್ನೂ ಒಂದಿಷ್ಟಿವೆ.ಮೊದಲು ಇಷ್ಟಕ್ಕೆ ಉತ್ತರ ಸಿಕ್ಕರೆ,ಆ ನಂತರ ನಮ್ಮ ಸಮಾಜದಲ್ಲಿ ಸ್ಮೃತಿಗಳ ಸ್ಥಾನ,ಮಹತ್ವ,ನ್ಯಾಯ ತೀರ್ಮಾನ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ಅನುಕೂಲವಾದೀತು.

ಒಂದು ವೇಳೆ ಮೇಲಿನ ಪ್ರಶ್ನೆಗಳಿಗೆ ಸಾಕ್ಷ್ಯ,ಪುರಾವೆಗಳು,ಉತ್ತರಗಳು ಇಲ್ಲವೆಂದಾದರೇ ಮನುಸ್ಮೃತಿಯ ಕುರಿತು ಈಗ ಇರುವ ವಾದಗಳೇ ಮಹತ್ವ ಕಳೆದುಕೊಳ್ಳುತ್ತವೆ ಮತ್ತು ಅವು ಕೇವಲ ಬ್ರಿಟಿಷರು ಸೃಷ್ಟಿಸಿ ಹೋಗಿರುವ ಸುಳ್ಳಿನ ಸರಮಾಲೆಯ ಮೇಲಿನ ಬೌದ್ಧಿಕತೆಯಾಗುತ್ತದಷ್ಟೆ.

ಯಾಕೆಂದರೆ, ಜಾರಿಯಲ್ಲೇ ಇರದಿದ್ದ “ಗ್ರಂಥ”ವೊಂದರಿಂದ ಯಾರಿಗೆ ತೊಂದರೆಯಾದೀತು? ಮನುವೇನೋ ಮನುಸ್ಮೃತಿಯನ್ನು ಬರೆದ ಸರಿ.ಅದನ್ನು ಯಾರಾದರೊಬ್ಬರು ಜಾರಿಗೆ ತರದೇ ಅದರಿಂದ ಸಮಸ್ಯೆಯಾಗಿದ್ದು ಯಾರಿಗೆ? ಅದು ಒಂದು ವೇಳೆ ಜಾರಿಯಲ್ಲಿ ಇದ್ದಿರಬಹುದಾದರೆ,ಅದೊಂದು ಸೀಮಿತ ಪ್ರದೇಶಕ್ಕೋ,ಪಂಗಡಕ್ಕೋ ಇದ್ದಿರಬಹುದೇ ಹೊರತು ಇಡಿ ಭಾರತದಾದ್ಯಂತ ಇರಲಿಕ್ಕೆ ಸಾಧ್ಯವೇ?, ಉದಾಹರಣೆಗೆ ; ಶಂಕರಾಚಾರ್ಯರು ಹಿಂದೂ ಧರ್ಮದ ಪುನರುತ್ಥಾನ ಮಾಡಿದರು, ಬೌದ್ಧ ಧರ್ಮವನ್ನು ಇಲ್ಲಿಂದ ಕಾಲ್ಕೀಳುವಂತೆ ಮಾಡಿದರು ಎನ್ನುವ ಭ್ರಮೆಯೊಂದಿದೆಯಲ್ಲವೇ?,ಹಾಗಿದ್ದರೆ, ಇವತ್ತಿಗೆ ಭಾರತಾದಾದ್ಯಂತ ಇರುವ “ಬ್ರಾಹ್ಮಣ”ರಲ್ಲಿ ಎಷ್ಟು ಜನ “ಅದ್ವೈತ ಮತ/ಶಂಕರರ” ಅನುಯಾಯಿಗಳಿದ್ದಾರೆ? ಅದು ಬಿಡಿ. ನಮ್ಮ “ಮಧ್ವಾಚಾರ್ಯ”ರ ಉಡುಪಿಯಲ್ಲಿ ಇರುವವರೆಲ್ಲ “ಮಾಧ್ವ”ರೇ? ಅಲ್ಲಿ “ಸ್ಮಾರ್ತ”ರಿಲ್ಲವೇ?. ಇನ್ನೂ ರಾಮಾನುಜಾಚಾರ್ಯರ ಅನುಯಾಯಿಗಳೆಷ್ಟು ಜನ? ಅಥವಾ ಈ “ದ್ವೈತ/ಅದ್ವೈತ/ವಿಶಿಷ್ಟಾದ್ವೈತ” ಮತಕ್ಕೇ ಸೇರದ ಬ್ರಾಹ್ಮಣ ಪಂಗಡಗಳೆಷ್ಟಿವೆ ಭಾರತದಲ್ಲಿ? ಭಾರತದ ವೈವಿಧ್ಯತೆಯ ಅಗಾಧತೆಯ ಮಟ್ಟವೇ ಅಂತದ್ದು.ಇಂತ ವೈವಿಧ್ಯಮಯ ದೇಶದಲ್ಲಿ ಒಂದೇ ಕಾನೂನು ಗ್ರಂಥವಿದ್ದಿರಲಿಕ್ಕೆ ಎಂದಾದರೂ ಸಾಧ್ಯವೇ? ಶಂಕರ,ಮಾಧ್ವ,ರಾಮಾನುಜ,ಬುದ್ಧ (ಹಾಗೇ ಇನ್ನಿತರ ಭಕ್ತಿಪಂಥ ಮತ್ತು ಅನುಭಾವಿಗಳು) ರಂತವರೇ ಈ ನೆಲದ ವೈವಿಧ್ಯತೆಯ ಅಗಾಧತೆಯಲ್ಲಿ ವ್ಯಾಪಿಸಿರಲಿಲ್ಲವಾದರೇ,ಅದೇಗೆ “ಮನುಸ್ಮೃತಿ”ಯೊಂದೇ ಇಡೀ ಭಾರತವನ್ನೂ ಮತ್ತು ಹಿಂದೂಗಳನ್ನೂ ವ್ಯಾಪಿಸಿಕೊಂಡಿತ್ತು

ಸಾಮಾನ್ಯ ಜನರ ಭಾಷೆಯಲ್ಲಿ ಹೇಳುವುದಾದರೆ,ಇದೊಂದು ರೀತಿ ವಿದ್ಯಾರ್ಥಿಯೊಬ್ಬ ಯಾವುದೋ “ದೊಡ್ಡ ಪುಸ್ತಕ”ವನ್ನು ಸಲ್ಪವೂ ಓದಿಕೊಳ್ಳದೇ,’ತಲೆದಿಂಬು’ ಮಾಡಿಕೊಂಡು ಗಡದ್ದಾಗಿ ಮಲಗಿ,ಮರುದಿನ ಪರೀಕ್ಷೆಯಲ್ಲಿ Rank ಪಡೆದಂತೆ ಕನಸು ಕಟ್ಟಿಕೊಳ್ಳುವಂತೆ ಅನ್ನಿಸುತ್ತದೆಯಷ್ಟೇ. (ಈ ರೀತಿಯ ಚಮತ್ಕಾರಿ ಪುಸ್ತಕ ಸಿಕ್ಕರೆ ನಮ್ಮ ವಿದ್ಯಾರ್ಥಿ ಮಿತ್ರರು ಬಿಟ್ಟಾರೆಯೇ!)

ಒಂದು ವಿಷಯ ಸ್ಪಷ್ಟಪಡಿಸುತ್ತ ಲೇಖನ ಮುಗಿಸುತ್ತೇನೆ ; ಮನುಸ್ಮೃತಿಯಿಂದ ಹೆಕ್ಕಿ ಹೇಳಲಾಗುವ ಸಾಲುಗಳನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ.ಸಾಲುಗಳನ್ನು ಬಿಡಿ, ಮೊದಲೇ ಹೇಳಿದಂತೆ ಈ “ಮನುಸ್ಮೃತಿ”ಯೋ ಅಥವಾ ಇನ್ನೊಂದು ಸ್ಮೃತಿಯೋ ಅದ್ಯಾವುದೂ ನನ್ನ ದೈನಂದಿನ ಮತ್ತು ಇದುವರೆಗಿನ ಜೀವನದಲ್ಲಿ ಮುಖಾಮುಖಿಯಾಗಿಲ್ಲ.ಹಾಗಾಗಿ ಅದರ ಮೇಲೆ ನನಗೇನು ವಿಶೇಷ ಮಮಕಾರವೂ ಇಲ್ಲ,ಪ್ರೀತಿಯೂ ಇಲ್ಲ.ಆದ ಕಾರಣ,ಮನುಸ್ಮೃತಿಯಲ್ಲಿ ಬರೆದಿರುವುದು ಸರಿಯೋ/ತಪ್ಪೋ ಅದನ್ನು ನೀವು ಒಪ್ಪುತ್ತೀರೇ ಎನ್ನುವಂತ ಪ್ರಶ್ನೆಗಳು ಈ ಲೇಖನಕ್ಕೆ ಸರಿಹೊಂದುವುದಿಲ್ಲ.ಹಾಗಾಗಿ ಅಂತ ಪ್ರಶ್ನೆಗಳನ್ನು ಬಿಟ್ಟು ಮೇಲೆ ಪಟ್ಟಿಮಾಡಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ ಹಾಗೆಯೇ ನಿಮ್ಮಲ್ಲೇ ಇನ್ನೊಂದಿಷ್ಟು ಪ್ರಶ್ನೆಗಳನ್ನು ಅದನ್ನೂ ಸೇರಿಸಿ.ಲೇಖನದಲ್ಲಿ ಕೇಳಿರುವ ಪ್ರಶ್ನೆಗಳು ಸರಿಯೆನಿಸಿದರೆ,ಇನ್ನುಮುಂದೆ “ಮನುಸ್ಮೃತಿ”ಯ ಬಗ್ಗೆ ಭಾಷಣಬಿಗಿಯುವ ಮಂದಿಯ ಮುಂದೆ ಇದೇ ಪ್ರಶ್ನೆಗಳನ್ನು ಕೇಳಿ.

ಪ್ರಶ್ನೆಗಳು ಮನುಸ್ಮೃತಿಯನ್ನು “ಹಿಂದೂಗಳ ಕಾನೂನು ಗ್ರಂಥ” ಎಂದು ಮನುಸ್ಮೃತಿಯನ್ನು ವಿರೋಧಿಸುವವರಿಗೂ ಮತ್ತು ಮನುಸ್ಮೃತಿಯ ಪರವಾಗಿ ವಾದಿಸುವ ಈ ರಾಜ್ಯದ ಪ್ರಗತಿಪರರು,ಬುದ್ಧಿಜೀವಿಗಳು ಮತ್ತು ಪಂಡಿತರಿಗೆ.ಉತ್ತರ ಸಿಗಬಲ್ಲದೇ?

116 ಟಿಪ್ಪಣಿಗಳು Post a comment
 1. Dr.G.Bhaskara Maiya
  ಸೆಪ್ಟೆಂ 22 2014

  Now most of the kannada intellectuals are dead. Corporate generalists scold some writers as Corporate ones, so as to shield their intellectual bankruptcy like Devanoor .No one can enlighten such black holes.

  ಉತ್ತರ
 2. Dr.G.Bhaskara Maiya
  ಸೆಪ್ಟೆಂ 22 2014

  Rakesh Shetty has correctly expounded and logically presented the real, timely issue.Definitely decriers had been rotten long back screaming with H2S stinky odor and also spreading their deadliest poisonous tentacles continuously in our literary horizon. But ‘ and miles to go before we sleep’. Any how, I heartily congratulate Rakesh.

  ಉತ್ತರ
 3. ಗಿರೀಶ್
  ಸೆಪ್ಟೆಂ 22 2014

  ಈ ಮನು ಎನ್ನುವ ಮಹಾಶಯ ಹುಟ್ಟಿದ್ದು ಯಾವಾಗ ಸತ್ತಿದ್ದು ಯಾವಾಗ? ಏಕೆಂದರೆ ಇದು ಅತ್ಯಂತ ಅಗತ್ಯ.
  ಅವನ ಕಾಲಮಾನ ಯಾವುದು?
  ಯಾವ ಪ್ರದೇಶದಲ್ಲಿ ಜೀವಿಸಿದ್ದ?
  ಮನು ತನ್ನ ಹೆಸರಿನ ಸ್ಮೃತಿಯನ್ನು ರಚಿಸಿದ್ದು ಯಾವಾಗ?
  ಇವೆಲ್ಲಕ್ಕೂ ಮೊದಲು ಸ್ಮೃತಿಗಳು ಹೇಗೆ ರಚನೆಗೊಳ್ಳುತ್ತಿದ್ದವು? ಅವನ್ನು ಹೇಗೆ ಅನುಷ್ಠಾನಗೊಳಿಸಲಾಗುತ್ತಿತ್ತು?

  ಉತ್ತರ
 4. bhaskara
  ಸೆಪ್ಟೆಂ 22 2014

  ಕೆಲವರಿಗೆ ಇದೊಂದು ಥರಾ ಸಮಸ್ಯೆ 🙂 ಹೇಗಾದರೂ ಸರಿ ಚಲಾವಣೆಯಲ್ಲಿ ಇರಬೇಕು ಅನ್ನುವ ತೆವಲು. ಕನ್ನಡ ಭಾಷ ಉಳಿಸಿ ಬೆಳಸಲಾಗದವರು, ಸಂಸ್ಕೃತದ ವಿರುದ್ದ ಕಿಡಿಕಾರಿದ ಹಾಗೆ!!

  ಉತ್ತರ
 5. Nagshetty Shetkar
  ಸೆಪ್ಟೆಂ 22 2014

  ಮನುಸ್ಮೃತಿಯು ಭಾರತದ ಅನ್ ಅಫಿಶಿಯಲ್ ಸಂವಿಧಾನವೇ ಆಗಿದೆ. ಅನಾದಿ ಕಾಲದಿಂದ ಮನುಸ್ಮೃತಿಯು ಭಾರತದ ಜನಜೀವನವನ್ನು ನಿರ್ದೆಶಿಸುತ್ತಲೇ ಬಂದಿದೆ.

  ಉತ್ತರ
  • k govinda bhat
   ಸೆಪ್ಟೆಂ 23 2014

   ನಾಗ್ ಶೆಟ್ಟಿಯವರೆ, ರಾಕೇಶ್ ಶೆಟ್ಟಿಯವರ ಲೇಖನವನ್ನು ತಾವು ಪೂರ್ಣವಾಗಿ ಓದಿಲ್ಲ ಅಂತ ಕಾಣುತ್ತಿದೆ ಓದಿದ್ದರೆ ಆ ಮೇಲೂ ಹೀಗೆ ಬರೆಯುತ್ತಿರಲಿಲ್ಲ ಅಂತ ನನ್ನ ಭಾವನೆ. ನನ್ನ ಅನಿಸಿಕೆ ಏನೆಂದರೆ ಮನುಸ್ಮೃತಿ ಈ ಕಾಲಘಟ್ಟದಲ್ಲಿ “ಚಲಾವಣೆಯಲ್ಲಿಲ್ಲದ ನಾಣ್ಯ” .ಆದರೆ ಬ್ರಾಹ್ಮಣ ವಿರೋಧಿಗಳೂ ಕೂಡಾ ಅವರಿಂದಲೇ ಮದುವೆ,ಪೂಜೆ, ಹೋಮ-ಹವನ, ವಾಸ್ತು, ಜ್ಯೋತಿಷ್ಯ,ಭವಿಷ್ಯ,ಮನೆ – ಹಟ್ಟಿ ಇತ್ಯಾದಿಗಳ ಒಕ್ಕಲು, ಶೋಢಷ ಸಂಸ್ಕಾರಗಳನ್ನು ಮಾಡಿಸಿವುದೇಕೆ??? ಅಲ್ಲದೆ ಭುತಧನೆಯಲ್ಲ್ಲು ಅವರೇ ಯಾಕೆ ಬೇಕು??

   ಉತ್ತರ
 6. ಸೆಪ್ಟೆಂ 22 2014

  ಅವರು ‘ಮನುಸ್ಮ್ರತಿ’ಯನ್ನು ಉಪಯೋಗಿಸಿ ಫಲಾನುಭವಿಗಳಾದರು . . . ನೀವು ‘ಪ್ರಗತಿಪರ ಮತ್ತು ಬುದ್ಧಿಜೀವಿ’ಯನ್ನುಪಯೋಗಿಸಿ ಫಲಾನುಭವಿಗಳಾಗಲು ಪ್ರಯತ್ನಿಸುತ್ತಿದ್ದೀರೇನೋ. . . ಪಾತ್ರಗಳು ಮತ್ತು ಹೆಸರುಗಳು ಬದಲಾಗಿವೆಯಷ್ಟೇ. . . . ಒಳ್ಳೆಯದಾಗಲಿ. .

  ಉತ್ತರ
  • ಗಿರೀಶ್
   ಸೆಪ್ಟೆಂ 22 2014

   ಅಶೋಕ್ ಅವರೆ ಮನುಸ್ಮೃತಿಯನ್ನು ಅವರು ಉಪಯೋಗಿಸಿಕೊಂಡರು ಎಂಬ ನಿಮ್ಮ ಹೇಳಿಕೆಯಂತೆ ಅದು ಪ್ರಗತಿಪರರು ಮಾಡಿದ್ದಾರೆ ಎಂದಂತಾಯ್ತು. ಅಲ್ಲಿಗೆ ಪ್ರಗತಿಪರ ಅಸ್ತಿತ್ವವಿದೆ. ಅವರು ಇಲ್ಲದ ಮನುಸ್ಮೃತಿಯನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದು ಇವರ ವಾದ. ಪ್ರಗತಿಪರರನ್ನು ಉಪಯೋಗಿಸಿಕೊಳ್ಳುವುದು ಹೇಗೆ ಅವರು ಇದ್ದಾರಲ್ಲ. ಅಕಸ್ಮಾತ್ ಉಪಯೋಗಿಸಿಕೊಳ್ಳಲು ಇವರು ಹವಣಿಾಿದರೆ ಅದಕ್ಕೆ ಸಿಗದಂತೆ ಅವರು ತಪ್ಪಿಸಬಹುದಲ್ಲವೆ? ಅದನ್ನು ಮಾಡಲು ಪ್ರಗತಿಪರ ರು ನಾವು ಇಲ್ಲದ ಮನುಸ್ಮೃತಿಯನ್ನು ಉಪಯೋಗಿಸುತ್ತಿದ್ದೇವೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಅದು ನೀವೂ ಸೇರಿದಂತೆ.ಪ್ರಗತಿಪರರಿಗೆ ಸಾಧ್ಯವೆ?

   ಉತ್ತರ
   • ಗಿರೀಶ್
    ಸೆಪ್ಟೆಂ 22 2014

    ವಿಷಯ ಇಷ್ಟ ಇಲ್ಲದ್ದನ್ನು ಊಹೆ ಮಾಡಿಕೊಂಡು ಉಪಯೋಗಿಸುವ ಕೆಲಸ ಮಾಡಬೇಡಿ. ಅದನ್ನು ಮಾಡಿದರೆ ಇವರು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಾರೆ. ನೀವೆ ಇರದಿದ್ದರೆ ಇವರು ಯಾರನ್ನು ಉಪಯೋಗಿಸಿಕೊಳ್ಳಲಾಗುವುದಿಲ್ಲವಲ್ಲ!!

    ಉತ್ತರ
  • ಸೆಪ್ಟೆಂ 22 2014

   ಅಶೋಕ್, ಫಲಾನುಭವಿಗಳಾಗುವುದು,ಫಲಕ್ಕಾಗಿಯೇ ಹಂಬಲಿಸುವುದು ಪ್ರಗತಿಪರ ಮತ್ತು ಬುದ್ಧಿಜೀವಿ ಗುಂಪಿನ ಕೆಲಸ.ನಾನು ಆ ಗುಂಪಿಗೆ ಸೇರಿದವನಲ್ಲ.ನಾನು ಪ್ರಚಲಿತದಲ್ಲಿರುವ “ಕಲ್ಪಿತ ಹಿಂದೂ ಕಾನೂನು ಗ್ರಂಥ”ದ ಕುರಿತು ಪ್ರಶ್ನೆಗಳನ್ನೆತ್ತಿದ್ದೇನೆ.ಆ ಬಗ್ಗೇ ಏನಾದರೂ ಹೇಳುವುದಿದ್ದರೆ ಹೇಳಿ.
   ನೀವು ಸೈನ್ಸ್ ವಿದ್ಯಾರ್ಥಿ ಅಲ್ಲವೇ? ನನ್ನ ಲೇಖನವೇನಾದರೂ ನಿಮಗೆ ಇಲ್ಲಾಜಿಕಲ್ ಅನ್ನಿಸಿದರೆ ಆ ಬಗ್ಗೆ ಹೇಳಿ ಚರ್ಚಿಸುವ,ಹಾಗೆಯೇ ನೀವೂ ಸಹ ಯೋಚಿಸಿ ನೋಡಿ

   ಉತ್ತರ
 7. praveen Konandur
  ಸೆಪ್ಟೆಂ 22 2014

  ಶೇಟ್ಕರ್ ಮತ್ತು/ಅಥವಾ ದರ್ಗಾ ರವರಿಗೆ ಮನುಸ್ಮೃತಿ ಮಾಡಿದಷ್ಟು ಪ್ರಭಾವ ಬಸವಣ್ಣನವರೂ ಮಾಡಿದಂತೆ ಕಾಣುತ್ತಿಲ್ಲ. ದರ್ಗಾರ “ಬಸವಪ್ರಜ್ಞೆ” ಎಂಬ ಕೃತಿಯಲ್ಲಿ ಬಸವಣ್ಣನವರಷ್ಟೇ ಸಾರಿ ಉಲ್ಲೇಖಗೊಳ್ಳುವುದು ಮನು ಮತ್ತು ಅವರ ‘ಸ್ಮೃತಿ’ . ಹಾಗಾಗಿ ರಾಕೇಶ್ ಕೇಳಿರುವ ಪ್ರಶ್ನೆಗಳಿಗೆ ದರ್ಗಾರವರು ಉತ್ತರಿಸಲೇ ಬೇಕಾದ ಅನಿವಾರ್ಯತೆ ಇದೆ.. ಹಾಗೆಯೇ ಉತ್ತರಿಸಲು ಅರ್ಹರು ಎಂದು ಭಾವಿಸಿದ್ದೇನೆ. ಇಲ್ಲವೆಂದಾದರೆ ಮತ್ತೊಂದು (ಅನ್ನಕ್ಕಾಗಿ, ಅಸ್ತಿತ್ವಕ್ಕಾಗಿ ಬಳಸಿದ್ದಾರೆ ಎಂಬ) ತೀರ್ಮಾನಕ್ಕೆ ಬರಬೇಕಾಗುತ್ತದೆ.

  ಉದಾ: ಅವರ ಪುಸ್ತಕದ ಉಲ್ಲೇಖವನ್ನು ಗಮನಿಸಿ: “…ಮನುಸ್ಮೃತಿ ಎಂಬ ಪ್ರಳಯದ ಕಸ ಈ ನಾಡಿನ ಜನಕೋಟಿಯ ಮನೋಭೂಮಿಯಲ್ಲಿ ಹುಟ್ಟುತ್ತಿರುವುದನ್ನು ತಡೆದು,ಲೋಕಮಾನ್ಯವಾದ ಶರಣ ಸಂಸ್ಕೃತಿಯ ಬೀಜ ಬಿತ್ತಿ, ಸುಜ್ಞಾನವೆಂಬ ಬೆಳೆ ತೆಗೆಯಲು ಬಸವಣ್ಣನವರು ಮಾಡಿದ ಪ್ರಯತ್ನ, ಪಟ್ಟ ಕಷ್ಟ, ಸವೆಸಿದ ದಾರಿ ಮತ್ತು ಆತ್ಮ ಸಂಶೋಧನೆಯ ಪರಿ ಹೃದಯಸ್ಪರ್ಶಿಯಾಗಿವೆ”. (ಪು. ಸಂ-2) ..
  ಲೇಖಕರೇ ಸ್ವತಃ ಬಸವಣ್ಣನವರ ಜೊತೆಗಿದ್ದರೇನೋ ಎಂಬಂತೆ ವಿವರಿಸುತ್ತಾರೆ. ಇಷ್ಟೊಂದು ‘ನಿಖರ’ವಾಗಿ ಹೇಳುವವರು ಮೇಲಿನ ಪ್ರಶ್ನೆಗಳಿಗೆ ಉತ್ತರಿಸಲೇಬೇಕಲ್ಲವೇ..?

  ಉತ್ತರ
  • Nagshetty Shetkar
   ಸೆಪ್ಟೆಂ 22 2014

   ದರ್ಗಾ ಸರ್ ಅವರು ಸರಿಯಾಗಿಯೇ ಬರೆದಿದ್ದಾರೆ. ಬಸವಣ್ಣನವರು ಬ್ರಾಹ್ಮಣ್ಯವನ್ನು ಧಿಕ್ಕರಿಸಿ ಮನುವಾದಿಗಳ ಮೇಲೆ ದೊಡ್ಡ ಸಮರವನ್ನೇ ಸಾರಿದರು. ಮನುವಾದ ಮುಕ್ತ ಭಾರತ ಬಸವಣ್ಣನವರ ಕನಸಾಗಿತ್ತು. ಅದನ್ನು ಸಹಿಸದ ಮನುವಾದಿಗಳು ಶರಣ ಕಗ್ಗೊಲೆ ನಡೆಸಿ ಕ್ರಾಂತಿಯನ್ನು ಹತ್ತಿಕ್ಕಿದರು. ಭಾರತವನ್ನು ಮನುವಾದದಿಂದ ಮುಕ್ತಗೊಳಿಸುವುದು ದರ್ಗಾ ಸರ್ ಆದಿಯಾಗಿ ನಾವು ಪ್ರಜ್ಞಾವಂತರೆಲ್ಲರ ಗುರಿ ಆಗಿದೆ. ಆಧುನಿಕ ಭಾರತಕ್ಕೆ ಬಾಬ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆದು ಕೊಟ್ಟಿದ್ದಾರೆ. ಅಂಬೇಡ್ಕರ್ ಪ್ರಣೀತ ಸಂವಿಧಾನಕ್ಕೆ ನಾವೆಲ್ಲರೂ ಬದ್ಧರಾದರೆ ಮನು ಸಂವಿಧಾನಕ್ಕೆ ಸೋಲಾಗುವುದು ಖಚಿತ. ಆದುದರಿಂದ ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುವುದನ್ನು ಮೋದಿ ಸರಕಾರ ಮೊದಲು ನಿಲ್ಲಿಸಬೇಕಾಗಿದೆ.

   ಉತ್ತರ
   • ಸೆಪ್ಟೆಂ 22 2014

    ಶೆಟ್ಕರ್ ಅವರೇ,

    ನಿಮ್ಮ ದರ್ಗಾ ಸರ್ ಅವರು ಮೇಲಿನ ಲೇಖನದಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಉತ್ತರಿಸಬಲ್ಲರೇ? ಅಷ್ಟು ಹೇಳಿ.ಆ ನಂತರ ಮುಂದಿನ ಚರ್ಚೆ ನಡೆಸುವ

    ಉತ್ತರ
    • Nagshetty Shetkar
     ಸೆಪ್ಟೆಂ 22 2014

     ರಾಕೇಶ್, ನಿಮ್ಮ ಪ್ರಯಾರಿಟಿ ಏನು? ಮನುವಾದ ಮುಕ್ತ ಭಾರತದ ನಿರ್ಮಾಣವೋ ಅಥವಾ ಮನುವಾದವನ್ನು ನಿರ್ದೋಷಿ ಎಂದು ಸಾಧಿಸುವುದೋ? ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದರೆ ಈ ನಾಡಿಗೆ ಮನುವಾದದಿಂದ ಮುಕ್ತಿ ಸಿಗುತ್ತದೆಯೇ? ದರ್ಗಾ ಸರ್ ಅವರು ನಿಮ್ಮ ಕೆಲಸಕ್ಕೆ ಬಾರದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಕುಳಿತರೆ, ಮನುವಾದಿಗಳ ವಿರುದ್ಧದ ಸಮರವನ್ನು ಮುಂದುವರೆಸುವುದು ಹೇಗೆ? ಇಂತಹ ಪ್ರಶ್ನಾವಳಿ ರಚಿಸುವುದರಲ್ಲೇ ನಿಮ್ಮ ಎಲ್ಲಾ ಪ್ರತಿಭೆಯನ್ನು ವ್ಯಯಿಸುವ ಬದಲು ರಚನಾತ್ಮಕವಾಗಿ ಪ್ರೋಗ್ರೆಸಿವ್ ಸಮಾಜ ನಿರ್ಮಾಣದಲ್ಲಿ ಭಾಗವಹಿಸಿ.

     ಉತ್ತರ
     • M A Sriranga
      ಸೆಪ್ಟೆಂ 23 2014

      ಶೆಟ್ಕರ್ ಅವರೇ —>>>’ಮನುವಾದಿಗಳ ವಿರುದ್ಧ ಸಮರವನ್ನು ಮುಂದುವರಿಸುವುದು ಹೇಗೆ?’>>> ತಾವು ಮತ್ತು ತಮ್ಮ ಮಿತ್ರರು ಕೇವಲ ಪತ್ರಿಕೆಗಳು, ಪುಸ್ತಕಗಳ ಮೂಲಕ ಸಮರ ಮಾಡುತ್ತಾ ಹೋದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಬದಲಾವಣೆ ತರುವುದಕ್ಕೆ ಅಧಿಕಾರ ಬೇಕು. ನೀವು ಮತ್ತು ನಿಮ್ಮಂತಹ ಸಮಾನ ಮನಸ್ಕರು ಒಂದು ರಾಜಕೀಯ ಪಕ್ಷ ರಚಿಸಿ. ಕೊನೆಯ ಪಕ್ಷ ನಿಮಗೆ ಅನುಕೂಲವಾದ ಒಂದು ಪಟ್ಟಣದಲ್ಲೋ/ ನಗರದಲ್ಲೋ ಅಲ್ಲಿನ ಪುರಸಭೆ/ನಗರಸಭೆಯಲ್ಲಿ ಮೊದಲು ಅಧಿಕಾರ ಹಿಡಿಯಿರಿ. ಅಲ್ಲಿಂದ ತಮ್ಮ ಯಾತ್ರೆ ಶುರುವಾಗಲಿ. ಅದನ್ನು ಬಿಟ್ಟು ನೀವು ಕೇವಲ ಬೌದ್ಧಿಕವಾಗಿ ನೂರಾರು ಸಭೆ,ಸಮ್ಮೇಳನ, ವಿಚಾರಸಂಕಿರಣ ನಡೆಸಿದರೂ ಚುನಾವಣೆಯಲ್ಲಿ ಜನರು established ಪಕ್ಷಗಳಿಗೇ ಮತ ಹಾಕಿ ಅವರನ್ನೇ ಅಧಿಕಾರಕ್ಕೆ ತರುತ್ತಿರುತ್ತಾರೆ. ಕೇವಲ ಕಾಯುವುದಷ್ಟೇ ನಿಮ್ಮ ಕಾಯಕವಾದರೆ ಏನೂ ಪ್ರಯೋಜನವಿಲ್ಲ. ಬದಲಾವಣೆ ಬೇಕೆನ್ನುವವರು ಸಮರವನ್ನು ಮಾಡಲು ಯುದ್ಧ ಭೂಮಿಗೆ ಇಳಿಯಬೇಕು. ಯುದ್ಧವನ್ನು ಹೇಗೆ ಮಾಡಬೇಕು ಎಂದು ಪ್ರವಚನ ಕೊಡುತ್ತಾಕೂರಬಾರದು.

      ಉತ್ತರ
      • k govinda bhat
       ಸೆಪ್ಟೆಂ 23 2014

       ಯುದ್ಧಕ್ಕೆ ಸೇನಾನಾಯಕನಾಗಿ ನಮ್ಮ ಮು ಮಂ ಸಿದ್ದರಾಮಯ್ಯನವರಿದ್ದಾರಲ್ಲ ?? ಆದರೆ ಒಂದು ನೆನಪಿಟ್ಟುಕೊಳ್ಳಿ ಅವರು ಕೂಡಾ ಅಧಿಕಾರ ಸಿಕ್ಕಿದ ಕೂಡಲೇ ಓಡಿದ್ದು ಚಾಮುಂಡಿ ಬೆಟ್ಟಕ್ಕೆ .”ಜುಟ್ಟಿನವರು” ಮಾಡುವ ಚಾಮುಂಡಿ ಪೂಜೆಗೆ. ಅಲ್ಲದೆ ದಸರಾದಲ್ಲೂ ಆನೆಗಳಿಗೆ “ಜುಟ್ಟಿದ್ದವರೊಬ್ಬರು” ಆರತಿ ಮಾಡುವುದನ್ನು ದೂ ದ ಲ್ಲಿ ನೋಡಿದೆ. ಅಲ್ಲದೆ ದಸರಾ ಉದ್ಘಾಟನೆ ಮಾಡುವುದು ಯಾರೋ “ನಾಸ್ತಿಕ” “ಜುಟ್ಟಿನ” ಕಾರಂತರಂತೆ ….”ಎಲ್ಲರು ಮಾಡುವುದು ಹೊಟ್ಟೆಗಾಗು ಗೇಣು ಬಟ್ಟೆಗಾಗಿ” ಹೇಳುವುದೊಂದು ಮಾಡುವುದು ಇನ್ನೊಂದು ” ಹೇಳುವುದು ಶಾಸ್ತ್ರ ಇಕ್ಕುವುದು ಗಾಳ”

       ಉತ್ತರ
     • ಸೆಪ್ಟೆಂ 23 2014

      ಶೆಟ್ಕರ್ ಅವರೇ,

      “ಮನುವಾದ ಮುಕ್ತ ಭಾರತದ ನಿರ್ಮಾಣ” ಮಾಡಲಿಕ್ಕೆ ಮೊದಲು ನೀವು “ಮನು,ಮನುಸ್ಮೃತಿ”ಯ ಅಸ್ತಿತ್ವವನ್ನು ಸಾಬೀತುಪಡಿಸಬೇಕಾಗುತ್ತದೆ.ಒಂದು ವೇಳೆ “ಮನು/ಮನುಸ್ಮೃತಿ”ಗೆ ಅಸ್ತಿತ್ವ ಇಲ್ಲವೆಂದಾದರೆ,ನೀವು ಹೇಳುತ್ತಿರುವ “ಮನುವಾದ” ಎನ್ನುವುದಕ್ಕೆ ತಲೆ-ಬುಡವೇ ಇರುವುದಿಲ್ಲ. ಇಲ್ಲದ್ದರಿಂದ “ಮುಕ್ತಿ” ಕೊಡಿಸುತ್ತೇವೆ ಎಂದು ಜನರನ್ನು ನಂಬಿಸುವುದು “ವಂಚನೆ”ಯಲ್ಲವೇ?

      ಉತ್ತರ
 8. bhaskara
  ಸೆಪ್ಟೆಂ 22 2014

  “ಮನುಸ್ಮೃತಿಯು ಭಾರತದ ಅನ್ ಅಫಿಶಿಯಲ್ ಸಂವಿಧಾನವೇ ಆಗಿದೆ. ಅನಾದಿ ಕಾಲದಿಂದ ಮನುಸ್ಮೃತಿಯು ಭಾರತದ ಜನಜೀವನವನ್ನು ನಿರ್ದೆಶಿಸುತ್ತಲೇ ಬಂದಿದೆ.” ಸ್ವಲ್ಪ ಹೇಗೆ ವಿವರಿಸುತ್ತೀರ? ಧರ್ಮಕ್ಕೊಂದು ಕಾನೂನನ್ನ ಮನುಸ್ಮೃತಿ ಲಿ ಹೇಳಿದ್ಯಾ? ತಲಾಕ್ ಎಂದು ೩ ಬಾರಿ ಹೇಳಿ ವಿಚ್ಚೇದನ ಪದೆಯುವುದನ್ನ ಎಲ್ಲಿ ಬರೆದಿದೆ? ಸ್ವಲ್ಪ ವಿವರಿಸಿ

  ಉತ್ತರ
 9. Umesh
  ಸೆಪ್ಟೆಂ 22 2014

  ಲೇಖಕರು ಬರೆದಿರುವುದು ಅಕ್ಷರಶಹ ಸತ್ಯ. ಇಲ್ಲದ “ಮನುವಾದ” ಕೇವಲ ಹುಸಿ ಪ್ರಗತಿಪರರು ಹೊಟ್ಟೆ ಹೊರೆದುಕೊಳ್ಳಲು ಬಳಸುವ ಒಂದು ತಂತ್ರವೇ ಆಗಿದೆ.

  ಉತ್ತರ
 10. sathya
  ಸೆಪ್ಟೆಂ 22 2014

  IDAKKE SHETKAR AVARINDA PRATIKRIYE BANDILLA YAKE ENDU TILIYUTHILLA

  ಉತ್ತರ
 11. k govinda bhat
  ಸೆಪ್ಟೆಂ 23 2014

  “ಮನು” ಎನ್ನುವವನು ಯಾರು? ಯಾರಿಗಾದರೂ ಗೊತ್ತಿದೆಯೆ? ಮನುಷ್ಯ (ಮಾನವ) ಕುಲದ ಮೂಲಪುರುಷ, ಆತನ ಸ್ಮೃತಿಯ ಮೂಲ ಪ್ರತಿಯನ್ನು ಕಂಡವರಾರು? ಇದರ ಬಗ್ಯೆ ನಿಮಗೆ ಜಾಗ್ರತಿ ಮೂಡಿಸಿದವರಾರು?

  ಉತ್ತರ
 12. vasudeva
  ಸೆಪ್ಟೆಂ 23 2014

  ಮಾನ್ಯ ರಾಕೇಶ್ ಶೆಟ್ಟಿಯವರೆ,
  ಯಾವುದೋ ಒಂದು ಕೃತಿಯನ್ನು ಭೌತಶಾಸ್ತ್ರದ ಅಥವಾ ಅರ್ಥಶಾಸ್ತ್ರದ ‘ಬೈಬಲ್’ ಎಂದೋ ಅಥವಾ ಯಾರದ್ದಾದರೂ ಮಾತುಗಳನ್ನು ‘ವೇದವಾಕ್ಯ’ ಎಂದೋ ವರ್ಣಿಸಿದರೆ ಅದನ್ನು ವಾಚ್ಯಾರ್ಥದಲ್ಲಿ ಯಾರಾದರೂ ತೆಗೆದುಕೊಳ್ಳುವರೇ? ಎಲ್ಲ ಪ್ರಗತಿಪರರೂ ಯೋಗ್ಯ ಚಿಂತಕರಲ್ಲ ನಿಜ. ಆದರೆ ನಾನು ಪ್ರಗತಿಪರರ ಹಲವು ಉತ್ತಮ ಲೇಖನಗಳನ್ನು ಓದಿ ಬಲ್ಲೆ. ಅವರು ಉಲ್ಲೇಖಿಸುವ ‘ಮನುಸ್ಮೃತಿ’ ಎಂಬ ಪದವನ್ನು ನೀವು ವಾಚ್ಯಾರ್ಥದಲ್ಲಿ ತೆಗೆದುಕೊಂಡು ವಿವರಿಸಿರುವಂತೆ ಕಾಣಿಸುತ್ತದೆ.
  ಇಂದು ಆಚರಣೆಯಲ್ಲಿರುವ ಜಾತಿಪದ್ಧತಿ, ಕಂದಾಚಾರಗಳನ್ನು ಇಡಿಯಾಗಿ ಪ್ರತಿನಿಧಿಸಬಲ್ಲ ಒಂದು ಶಾಸ್ತ್ರಪ್ರಮಾಣವನ್ನು ಗುರುತಿಸಲು ಪ್ರಗತಿಪರರು ಮನುಸ್ಮೃತಿಯನ್ನು ರೂಪಕದಂತೆ ಬಳಸಿರುವರು. ಆ ಕೃತಿಯ ಬಗ್ಗೆ ನಿಮಗಾಗಲಿ ಅವರಿಗಾಗಲಿ ವಿಶೇಷ ಪ್ರೇಮವೇನೂ ಇಲ್ಲದ ಕಾರಣ ಅದರ ಉಲ್ಲೇಖದಿಂದ ಯಾರ ಭಾವನೆಗೂ ಧಕ್ಕೆ ಉಂಟಾಗುವುದಿಲ್ಲವಲ್ಲ!
  ನಿಮ್ಮ ಮಾತುಗಳು ನಿಜ. ಭಾರತದ ಒಂದೊಂದು ಪ್ರಾಂತದ ಬ್ರಾಹ್ಮಣರ ಆಚರಣೆಗಳು ಒಂದೊಂದು ತರಹ ಇರುತ್ತವೆ, ಒಂದೇ ಪ್ರಾಂತದ ಒಂದು ಪಂಗಡದ ಬ್ರಾಹ್ಮಣರ ಆಚರಣೆ ಮತ್ತೊಬ್ಬರಿಗಿಂತ ಭಿನ್ನವಿರುತ್ತದೆ. ಆದರೆ ಅಸ್ಪೃಶ್ಯತೆ, ಸಜಾತೀಯ ವಿವಾಹ, ಮೇಲರಿಮೆ ಇತ್ಯಾದಿ ಕೆಲವು ಮೌಢ್ಯಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಎಲ್ಲ ಬ್ರಾಹ್ಮಣರಲ್ಲೂ ಇಂದಿಗೂ ಸಮಾನವಾಗಿ ಆಚರಿಸಲಾಗುತ್ತಿದೆ. ಈ ಕೆಲವು ಪಿಡುಗುಗಳ ವಿಷಯಗಳಲ್ಲಿ ಮಾತ್ರ ಏಕೆ ಎಲ್ಲ ಬ್ರಾಹ್ಮಣರೂ ಸರ್ವಾನುಮತ ಹೊಂದಿರುವರು?
  ಪ್ರತಿ ಹಂತದಲ್ಲೂ ಬ್ರಿಟಿಷರ ಕಾನೂನು, ಸಂಶೋಧನಾ ವಿಧಿವಿಧಾನ ಮತ್ತು ಲೋಕದೃಷ್ಟಿಗಳನ್ನು ಟೀಕಿಸುವ ನಿಮ್ಮಂಥ ಲೇಖಕರು ತಮ್ಮ ವಾದಸರಣಿಯನ್ನು ಮಾತ್ರ ಚಾಣಾಕ್ಷನಾದ ಬ್ರಿಟೀಷ್ ಸಂಶೋಧಕನ ಧಾಟಿಯನ್ನು ಅನುಸರಿಸಿ (ಕಾಲದೇಶಗಳ ನಿರ್ದಿಷ್ಟತೆ, ಸಾಕ್ಷ್ಯ, ಪುರಾವೆ, ನಿದರ್ಶನ, ಒಟ್ಟು ಜನಸಂಖ್ಯೆಯಲ್ಲಿ ಸಂಸ್ಕೃತ ಜ್ಞಾನದ ಅನುಪಾತ ಇತ್ಯಾದಿ) ಮಂಡಿಸುವ ಕ್ರಮ ನಿಜಕ್ಕೂ ಸೋಜಿಗವೆನಿಸುತ್ತದೆ.
  ಭಾರತೀಯರು ಬ್ರಿಟಿಷರು ಹಾಕಿಕೊಟ್ಟ ಹಾದಿಯಲ್ಲಿ ವಿವೇಚನೆ, ಸಂಶೋಧನೆಗಳನ್ನು ಮಾಡುವುದಿಲ್ಲ ಎಂಬುದು ನಿಮಗೆ ಗೊತ್ತೇ ಇದೆ. ನಮ್ಮ ಹೆಣ್ಣುಮಕ್ಕಳು ರಾಮಾಯಣ ಓದಿರದಿದ್ದರೂ ಸೀತೆ, ಅರುಂಧತಿಯರ ಆದರ್ಶಗಳನ್ನು ಪಾಲಿಸಬಲ್ಲರು, ನಮ್ಮ ಜನ ಕಾವ್ಯಗಳನ್ನು ಓದಿರದಿದ್ದರೂ ರಾಮಲಕ್ಷ್ಮಣ, ದುರ್ಯೋಧನ ಕರ್ಣ ಮೊದಲಾದವರ ಭ್ರಾತೃಪ್ರೇಮ, ಮಿತ್ರಪ್ರೇಮ ಇತ್ಯಾದಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬಲ್ಲರು (ಇದು ಲೋಹಿಯಾರ ಮಾತುಗಳು, ನನ್ನವಲ್ಲ). ಅದೇ ರೀತಿ ಇಲ್ಲಿನ ಜಾತಿಗಳಿಗೆ ಮನುಸ್ಮೃತಿಯ ಪಾಠ ಆಗಿರದಿದ್ದರೂ ಅದರಲ್ಲಿನ ತತ್ವಗಳನ್ನು ಕರಾರುವಾಕ್ಕಾಗಿ ಪರಿಪಾಲಿಸಬಲ್ಲರು. ನಾನೂ ಕೂಡ ನಿಮ್ಮಂತೆಯೇ ಕಾಲೇಜು ಮೆಟ್ಟಿಲು ಹತ್ತುವವರೆಗೂ ಮನುಸ್ಮೃತಿಯ ಹೆಸರನ್ನು ಕೇಳಿದವನಲ್ಲ. ನಮ್ಮ ಮನೆಯಲ್ಲಿರುವ ಮನುಸ್ಮೃತಿ ಪುಸ್ತಕದ ಮೇಲೂ ಒಂದಿಂಚು ಧೂಳು ಕೂತಿದೆ. ಆದರೆ ಅವೆಲ್ಲ ಭಾರತೀಯರಿಗೆ ಮುಖ್ಯವಲ್ಲ ಎನಿಸುತ್ತದೆ.
  ಮೊನ್ನೆ ತಾನೆ ಕೋಲಾರದ ಕೆಲವು ದಲಿತ ಕುಟುಂಬಗಳನ್ನು ಊರಿನಿಂದ ಬಹಿಷ್ಕರಿಸಿದ ಘಟನೆ ಪತ್ರಿಕೆಗಳಲ್ಲಿ ವರದಿಯಾಗಿಲ್ಲವೇ? ಉತ್ತರ ಪ್ರದೇಶದಲ್ಲಿ ದಲಿತರೆಂಬ ಕಾರಣಕ್ಕೆ ಆ ಹೆಣ್ಣುಮಕ್ಕಳನ್ನು ಕೆಡಿಸಿ ಕೊಂದು ನೇತುಹಾಕಲಿಲ್ಲವೇ?
  ಇಲ್ಲಿ ನಾನು ಯಾವ ನಿರ್ದಿಷ್ಟ ಜಾತಿಯನ್ನೂ ದೂಷಿಸುತ್ತಿಲ್ಲ. ಹಾಗೆಯೇ ಬ್ರಾಹ್ಮಣರು ನಿರಪರಾಧಿಗಳು ಎಂಬ ತರಹದ ಸ್ವಸಮರ್ಥನೆ ಅಥವಾ ಸ್ವಯಂರಕ್ಷಣೆಯೂ ಇಲ್ಲಿ ಮುಖ್ಯವಲ್ಲ.
  ಕೆಳಜಾತಿಯವರ ವಿಷಯ ಹಾಗಿರಲಿ. ಸಮಾಜದ ಕೆನೆಪದರದ ಕೆಲವು ಬುದ್ಧಿಜೀವಿಗಳಿಗೂ ಇವೆಲ್ಲ ಎಷ್ಟೊಂದು ಗೌಣವಾಗಿಬಿಟ್ಟಿವೆಯಲ್ಲ! ಇನ್ನೊಂದು ಕಡೆ ಉಲ್ಲೇಖಿಸಿದ್ದ ಬಾಲು ಅವರ ಮಾತುಗಳನ್ನೇ ಮತ್ತೆ ಕಟ್ ಅಂಡ್ ಪೇಸ್ಟ್ ಮಾಡುತ್ತಿದ್ದೇನೆ:
  “ಎಲ್ಲರೂ ಬ್ರಾಹ್ಮಣರು ಜಾತಿಯಲ್ಲಿ ಮೇಲೆ ಅನ್ನುತ್ತಾರೆ, ಸಾಂಪ್ರದಾಯಿಕ ಬ್ರಾಹ್ಮಣರು ಅನ್ಯ ಜಾತಿಯವರನ್ನು ಮನೆಯೊಳಗೆ ಸೇರಿಸಿಕೊಳ್ಳುವುದಿಲ್ಲ, ಸಹಪಂಕ್ತಿ ಭೋಜನವನ್ನು ಮಾಡುವುದಿಲ್ಲ, ಇತರ ಜಾತಿಯವರ ಜೊತೆಗೆ ವಿವಾಹ ಸಂಬಂಧವನ್ನು ನಿರಾಕರಿಸುತ್ತಾರೆ, ಇತರ ಜಾತಿಯವರು ಅವರನ್ನು ಬಹುವಚನದಲ್ಲಿ ಸಂಬೋಧಿಸಬೇಕು, ಆದರೆ ಬ್ರಾಹ್ಮಣರ ಮಕ್ಕಳೂ ಕೂಡ ಇತರ ಜಾತಿಯವರನ್ನು ಏಕವಚನದಲ್ಲೇ ಕರೆಯುತ್ತವೆ, ಇಷ್ಟನ್ನೇ ಇಟ್ಟುಕೊಂಡು ಪುರೋಹಿತರಿಗೆ ಹಾಗೂ ಆ ಮೂಲಕ ಬ್ರಾಹ್ಮಣರಿಗೆ ಉಳಿದ ಸಮಸ್ತ ಜನರ ಜೀವನದ ಮೇಲೆ ನಿಯಂತ್ರಣ ಬಂದು ಆಳ್ವಿಕೆ ನಡೆಯಿತು ಎಂದರೆ ನಂಬಬಹುದೆ?”
  ಈ ಪ್ಯಾರಾವನ್ನು ಒಳಗೊಂಡಿರುವ ಲೇಖನದ ಆಶಯ ಜಾತೀಯತೆಯ ಚಿಂತನೆ ಅಲ್ಲದಿರಬಹುದು. ಆದರೆ ಒಬ್ಬ ಸಂವೇದನಾಶೀಲ ಸಂಶೋಧಕನಿಗೆ ತನ್ನ ಸಿದ್ಧಾಂತದ ಪ್ರತಿಪಾದನೆಗಿಂತ ಇಂಥ ದುರಾಚಾರಗಳನ್ನು ಉಲ್ಲೇಖಿಸುವಾಗ ಸ್ವಲ್ಪವಾದರೂ ವಿಷಾದಭಾವ ಹುಟ್ಟಬೇಕು ಎಂಬುದು ನಮ್ಮಂತಹ ಪ್ರಗತಿಪರರ ಕಳಕಳಿ. ಅಂತಹ ಸಂಶೋಧಕ ತನ್ನಿಂದ ಏನನ್ನೂ ಮಾಡಲಾಗದಿದ್ದರೂ ತನ್ನ ಸಿದ್ಧಾಂತ ಪ್ರತಿಪಾದನೆಯನ್ನು ಕ್ಷಣಕಾಲ ಪಕ್ಕಕ್ಕಿಟ್ಟು ಇಂತಹ ಪಿಡುಗನ್ನು ಕುರಿತು ಅರೆನಿಮಿಷವಾದರೂ ತಲೆಕೆಡಿಸಿಕೊಳ್ಳದಿರುವುದಿಲ್ಲ. ಇದು ನೀಚತನದ ಪರಮಾವಧಿ ಎಂಬ ಒಂದೇ ಒಂದು ಸೊಲ್ಲನ್ನೂ ನುಡಿಯದೆ, ಮಗುಮ್ಮಾಗಿ ಇಂತಹ ಸಾಲುಗಳನ್ನು ಉಲ್ಲೇಖಿಸಿ, ನಿರ್ಮಮ ಭಾವದಿಂದ ತಮ್ಮ ಸಿದ್ಧಾಂತದ ಪ್ರತಿಪಾದನೆಯನ್ನು ಮುಂದುವರಿಸುವ ಬಾಲು ಅವರ ಹಾದಿ ಆದ್ದರಿಂದಲೇ ಬಹುತೇಕ ಪ್ರಗತಿಪರರಿಗೆ ಪಥ್ಯವೆನಿಸುತ್ತಿಲ್ಲ.

  ಉತ್ತರ
  • Nagshetty Shetkar
   ಸೆಪ್ಟೆಂ 23 2014
  • ಸೆಪ್ಟೆಂ 23 2014

   ವಸುದೇವರವರೆ, ನಿಮ್ಮ ಪ್ರಕಾರ ಮೇಲರಿಮೆ ಕೀಳರಿಮೆಯನ್ನು ಆಚರಿಸಿದಾಕ್ಷಣ ಬೇರೆಯವರ ಮೇಲೆ ಆಳ್ವಿಕೆಯನ್ನು ನಿಯಂತ್ರಿಸಬಹುದೇ? ಹಾಗಿದ್ದರೆ ಒಬ್ಬರು ಇನ್ನೊಬ್ಬರನ್ನು ಆಳುವದು ಸುಲಭವಾಗುತ್ತಿತ್ತು. ಯಾವುದೇ ರಕ್ತಪಾತ, ಯುದ್ಧ, ಯೋಧರ ಪಡೆ ಇಲ್ಲದೆಯೇ ಕೇವಲ ಮಡಿ ಮೈಲಿಗೆ ಆಚರಿಸಿ ಇನ್ನೊಬ್ಬರನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು ಎಂದು ನಿಮ್ಮ ವಾದ ಹೇಳುತ್ತಿದೆ. ಇದು ಸಾಧ್ಯವೇ?

   ಉತ್ತರ
   • Nagshetty Shetkar
    ಸೆಪ್ಟೆಂ 23 2014

    ಬ್ರಾಹ್ಮಣರು ಈ ನಾಡನ್ನು ಆಳಿದರು ಅಂತ ಪ್ರಗತಿಪರರು ಎಲ್ಲಿಯೂ ಹೇಳಿಲ್ಲ. ಆದುದರಿಂದ “ನಿಮ್ಮ ಪ್ರಕಾರ ಮೇಲರಿಮೆ ಕೀಳರಿಮೆಯನ್ನು ಆಚರಿಸಿದಾಕ್ಷಣ ಬೇರೆಯವರ ಮೇಲೆ ಆಳ್ವಿಕೆಯನ್ನು ನಿಯಂತ್ರಿಸಬಹುದೇ?” ಎಂಬ ಪ್ರಶ್ನೆಯೇ ಅರ್ಥಹೀನ. ಸಾಮಾಜಿಕ ಜೀವನವನ್ನು ಬ್ರಾಹ್ಮಣ್ಯ ನಿರ್ದೆಶಿಸುತ್ತಿದೆ ಎಂಬ ಸತ್ಯವನ್ನು ಸ್ವಲ್ಪ ಕಣ್ಣು ಅಗಲಿಸಿದರೆ ನೀವೇ ಕಾಣಬಹುದು. ಬ್ರಾಹ್ಮಣರು ಅಸ್ಪೃಶ್ಯತೆಯನ್ನು ಎಂದೂ ಆಚರಿಸಿಲ್ಲವೇ? ಬ್ರಾಹ್ಮಣರಿಗೆ ಪೌರೋಹಿತ್ಯದ ಕಾರಣದಿಂದ ಸಮಾಜದಲ್ಲಿ ಹಿರಿಯ ಸ್ಥಾನಮಾನಗಲಿರಲಿಲ್ಲವೇ? ಬ್ರಾಹ್ಮಣರು ಇತರ ಜಾತಿಯವರನ್ನು ತಿರಸ್ಕಾರ ಭಾವದಿಂದ ನೋಡುತ್ತಿರಲಿಲ್ಲವೆ? ಬ್ರಾಹ್ಮಣರು ಜಮೀನನ್ನು ಗೇಣಿಗೆ ಕೊಟ್ಟು ಶ್ರಮ ಪಡದೆ ಧನಾರ್ಜನೆ ಮಾಡುತ್ತಿರಲಿಲ್ಲವೇ?

    ಉತ್ತರ
  • ಸೆಪ್ಟೆಂ 24 2014

   ವಸುದೇವರವರೆ,

   ಮನುಸ್ಮೃತಿಯನ್ನು ಓದದೆಯೇ ಅದು ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎಂದರೆ ಅದು ಯಾವುದೋ ಮಾಯಾವಿ ಪುಸ್ತಕವೇ ಇದ್ದಿರಬೇಕು.
   ‘ಮನುಸ್ಮೃತಿ’ಯನ್ನು ಕೇವಲ ವಾಚ್ಯಾರ್ಥದಲ್ಲಿ ಬಳಸಲಾಗುತ್ತಿದೆ ಎನ್ನುವ ನಿಮ್ಮ ವಿಚಿತ್ರವೆನಿಸುತ್ತದೆ ವಾಸುದೇವ ಅವರೇ.ಯಾಕೆಂದರೆ ಮನುಸ್ಮೃತಿ ಹಿಂದೂಗಳ ಕಾನೂನು ಗ್ರಂಥವಾಗಿತ್ತು,ಅದರಿಂದಲೇ ಜನರನ್ನು ತುಳಿದರು ಎನ್ನುವ ಮಾತು ಕೇಳಿರುತ್ತೀರಿ.ಇದು ವಾಚ್ಯಾರ್ಥದ ಬಳಕೆ ಎನಿಸುತ್ತದೆಯೇ?, ನೀವು ಹೇಳುತ್ತಿರುವ ಕಂದಾಚಾರ ಇತ್ಯಾದಿಗಳಿಗೆಲ್ಲ “ಮನುಸ್ಮೃತಿ”ಯ ಮೇಲೆ ಹೊರೆಹೊರಿಸಿ ಅದನ್ನು ಬಯ್ಯುತ್ತ ನಮ್ಮ ಜವಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಹೊಣೆಗೇಡಿತನವಲ್ಲವೇ? ಮನುಸ್ಮೃತಿಯನ್ನು ಇಷ್ಟು ದಿನ ಬಯ್ದಿದ್ದರಿಂದ ಇಲ್ಲಿ ಏನೂ ಬದಲಾವಣೆ ಆಗಿಲ್ಲವೆಂದರೆ,ಸಮಸ್ಯೆಯನ್ನು ನಾವು ಸರಿಯಾಗಿ ಅರ್ಥೈಸಿಲ್ಲ ಎಂದರ್ಥವಲ್ಲವೇ?

   ಅಸ್ಪೃಶ್ಯತೆ, ಸಜಾತೀಯ ವಿವಾಹ, ಮೇಲರಿಮೆ ಇತ್ಯಾದಿ ಕೆಲವು ಮೌಢ್ಯಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಎಲ್ಲ ಬ್ರಾಹ್ಮಣರಲ್ಲೂ ಇಂದಿಗೂ ಸಮಾನವಾಗಿ ಆಚರಿಸಲಾಗುತ್ತಿದೆ.ಈ ಕೆಲವು ಪಿಡುಗುಗಳ ವಿಷಯಗಳಲ್ಲಿ ಮಾತ್ರ ಏಕೆ ಎಲ್ಲ ಬ್ರಾಹ್ಮಣರೂ ಸರ್ವಾನುಮತ ಹೊಂದಿರುವರು?

   ಎಂದಿದ್ದೀರಿ. ಬ್ರಾಹ್ಮಣರನ್ನು ಸಮರ್ಥಿಸಿಕೊಳ್ಳುವ ಯಾವ ಇರಾದೆಯೂ ನನಗಿಲ್ಲ ಎಂದು ಸ್ಪಷ್ಟಪಡಿಸಿ ಮುಂದುವರೆಯುತ್ತೇನೆ.
   ನೀವು ಮೇಲೆ ಪಟ್ಟಿಮಾಡಿದವುಗಳು ಕೇವಲ ಬ್ರಾಹ್ಮಣರಿಂದ ಮಾತ್ರ ಆಚರಿಸಲ್ಪಡುತ್ತಿವೆಯೇ? ಬ್ರಾಹ್ಮಣರ ಒಳಪಂಗಡಗಳಲ್ಲೇ ಈ ಆಚರಣೆಗಳಿಲ್ಲವೇ? ಅದೇ ರೀತಿ ಉಳಿದ ಜಾತಿಗಳು ಮತ್ತು ಅವರ ಒಳಪಂಗಡಗಳ ನಡುವೆಯೂ ಈ ಆಚರಣೆಗಳಿವೆ.ಅಂದರೆ ಅಸ್ಪೃಷ್ಯತೆ ಎನ್ನುವುದು ಕೇವಲ ಒಂದು ಜಾತಿಗೆ ಮಾತ್ರ ಸಂಬಂಧಿಸಿದ್ದು ಎಂದು ಮಾತ್ರ ಏಕೆ ಇಲ್ಲಿಯವರೆಗೆ ಹೇಳಿಕೊಂಡು ಬರಲಾಗುತ್ತಿದೆ?

   ಮೊನ್ನೆ ತಾನೆ ಕೋಲಾರದ ಕೆಲವು ದಲಿತ ಕುಟುಂಬಗಳನ್ನು ಊರಿನಿಂದ ಬಹಿಷ್ಕರಿಸಿದ ಘಟನೆ ಪತ್ರಿಕೆಗಳಲ್ಲಿ ವರದಿಯಾಗಿಲ್ಲವೇ? ಉತ್ತರ ಪ್ರದೇಶದಲ್ಲಿ ದಲಿತರೆಂಬ ಕಾರಣಕ್ಕೆ ಆ ಹೆಣ್ಣುಮಕ್ಕಳನ್ನು ಕೆಡಿಸಿ ಕೊಂದು ನೇತುಹಾಕಲಿಲ್ಲವೇ?>>

   ನಮ್ಮ ಕಾನೂನುಗಳು ಸರಿಯಿದ್ದರೆ ಇವೆಲ್ಲವೂ ಘಟಿಸುತಿದ್ದವೇ? ಎಲ್ಲಕ್ಕೂ ಜಾತಿಯ ಕಾರಣವೊಡ್ಡುವುದು ಪ್ರಗತಿಪರರ ಫ್ಯಾಷನ್ ಅಷ್ಟೇ.ಏನೂ ಮಾಡಿದರೂ ಕಾನುನಿಂದ ಪಾರಾಗಿ ದಕ್ಕಿಸಿಕೊಳ್ಳಬಹುದು ಎಂಬುದು ಉಳ್ಳವರ ನಂಬಿಕೆ (ಈ “ಉಳ್ಳವರು” ಎನ್ನುವಲ್ಲಿ ಎಲ್ಲಾ ಜಾತಿಯ ಹನ,ಅಂತಸ್ತು,ರಾಜಕೀಯ ಸಂಬಂಧವಿರುವ ಬಲಿಷ್ಟರು ಸೇರುತ್ತಾರೆ).ಬಡವನಾದವ ಯಾವ ಜಾತಿಗೆ ಸೇರಿದ್ದರೂ ಪ್ರಸ್ತುತ ವ್ಯವಸ್ಥೆ ಅವನನ್ನು ಕಾಲು ಕಸದಂತೆಯೇ ನಡೆಸಿಕೊಳ್ಳುತ್ತಿದೆ.ಹಾಗಿದ್ದ ಮೇಲೆ ದೂರಬೇಕಾದದ್ದು “ಜಾತಿ”ಯನ್ನೇ?

   ಬಾಲು ಅವರ ಸಾಲುಗಳನ್ನು quote ಮಾಡಿ “ಒಬ್ಬ ಸಂವೇದನಾಶೀಲ ಸಂಶೋಧಕನಿಗೆ ತನ್ನ ಸಿದ್ಧಾಂತದ ಪ್ರತಿಪಾದನೆಗಿಂತ ಇಂಥ ದುರಾಚಾರಗಳನ್ನು ಉಲ್ಲೇಖಿಸುವಾಗ ಸ್ವಲ್ಪವಾದರೂ ವಿಷಾದಭಾವ ಹುಟ್ಟಬೇಕು ಎಂಬುದು ನಮ್ಮಂತಹ ಪ್ರಗತಿಪರರ ಕಳಕಳಿ” ಎಂದಿರಿ. ಆ ಸಾಲುಗಳಲ್ಲಿ ಅವರು ಬ್ರಾಹ್ಮಣರನ್ನು ಬೆಂಬಲಿಸುತಿದ್ದಾರೆ ಎಂದು ನನಗನ್ನಿಸುತ್ತಿಲ್ಲ.ಅಷ್ಟೂ ಕಾರಣಗಳನ್ನು ನೀಡಿ ಬ್ರಾಹ್ಮಣರ ಕೈಯಲ್ಲಿ ಇಲ್ಲಿನವರ ಜುಟ್ಟಿತ್ತು ಎಂದು ಹೇಗೆ ಸಾಬೀತುಪಡಿಸುವುದು ಎನ್ನುತ್ತಿದ್ದಾರೆ ಎಂದರ್ಥಮಾಡಿಕೊಂಡಿದ್ದೇನೆ.ಸಂಶೋಧಕರಾದ ಬಾಲು ಅವರು ಸಂಶೋಧನೆ ಮಾಡುವಾಗ ನಮ್ಮ ಸಾಹಿತಿಗಳಲ್ಲಿ ಯಥೇಚ್ಚವಾಗಿರುವ “ಸಂವೇದನೆ”ಇಲ್ಲದಿದ್ದರೆ ಒಳ್ಳೆಯದು.ಭಾವನೆ,ಸಂವೇದನೆಗಳೇ ತುಂಬಿಕೊಂಡರೆ ವಾಸ್ತವವನ್ನು ಅರಿಯುವುದು ಬಿಟ್ತು ಮತ್ತದೇ ಹಳೇ ಸ್ಟೀರಿಯೋ ಟೈಪ್ ವಾದಗಳಿಗೆ ಬಿದ್ದು ಅವರು ಸಹ Biased ಆಗಿಬಿಡಬಹುದು.

   ನೀವು ಹೇಳಿರುವ ಪಿಡುಗುಗಳ ಬಗ್ಗೆ ಪ್ರಗತಿಪರರು ಇತ್ಯಾದಿಗಳು ಸ್ವಾತಂತ್ರ್ಯ ಬಂದಾಗಿನಿಂದ ಖಂಡಿಸುತ್ತಲೇ ಬಂದಿರಲ್ಲ.ಏನು ಪ್ರಯೋಜನವಾಯಿತು? ನಿಮ್ಮ ಸೆಕ್ಯುಲರಿಸಂ ಎಷ್ಟು ಉಗ್ರವಾಗುತ್ತ ಹೋಯಿತೋ ಅಷ್ಟೇ ಉಗ್ರವಾಗಿ ಸಂಪ್ರದಾಯವಾದಿಗಳು ಬೆಳೆದು ನಿಂತರಷ್ಟೇ.ಸೆಕ್ಯುಲರಿಸಂನಿಂದ ಈ ದೇಶಕ್ಕೆ ಏನಾದರೂ ಕೊಡುಗೆ ಸಿಕ್ಕಿದ್ದರೆ ಅದು ಕಟ್ಟರ್ ಸಂಪ್ರದಾಯವಾದಿಗಳನ್ನು ಸೃಷ್ಟಿಸಿದ್ದಷ್ಟೇ.ಅಂದರೆ ಪ್ರಗತಿಪರರು/ಸೆಕ್ಯುಲರ್/ಬುದ್ಧಿಜೀವಿಗಳು “ಸಂವೇದನಾಶೀಲ”ವಾಗಿ ನೋಡಿ ನಮ್ಮ ಸಮಾಜಕ್ಕೆ ಅಂತ ಉಪಯೋಗವೇನು ಆದಂತಿಲ್ಲ. ಈಗ ಬಾಲು ಮತ್ತವರ ತಂಡದವರು ಹೊಸ ರೀತಿಯಲ್ಲಿ ಇಲ್ಲಿನ ಸಮಾಜದ ಚಿತ್ರಣವನ್ನು ಕಟ್ಟಿಕೊಡುತಿದ್ದಾರೆ.ಆ ತಂಡದೊಂದಿಗೆ ಆರೋಗ್ಯಕರ ಚರ್ಚೆ,ವಾದ,ಸಂವಾದದಗಳಲ್ಲಿ ತೊಡಗಿಕೊಳ್ಳುವುದು “ಪ್ರಗತಿಪರ”ತೆಯಾದರೇ, ಅವರ ಕೇಂದ್ರವನ್ನು ಮುಚ್ಚಿಸುವುದು “ಫ್ಯಾಸಿಸಂ” ಆಗುತ್ತದೆ. ದುರಾದೃಷ್ಟವಷಾತ್ ನನ್ನ ರಾಜ್ಯದ ಪ್ರಗತಿಪರರು ಫ್ಯಾಸಿಸ್ಟ್ ಧೋರಣೆಯವರಾಗಿದ್ದಾರೆ!

   ಉತ್ತರ
  • ಷಣ್ಮುಖ
   ಸೆಪ್ಟೆಂ 24 2014

   ವಾಸುದೇವರು ಏನು ಹೇಳುತ್ತಿದ್ದಾರೆಂದರೆ “ಅಸ್ಪೃಶ್ಯತೆ”ಯು ಅಮಾನವೀಯ ಅಂತ ಆರ್ದ್ರಾ ಭಾವದಿಂದ ವಿಷಾಧಿಸಿ ನಿಟ್ಟುಸರು ಕಣ್ಣೀರುಗಳನ್ನು ಸುರಿಸಿ ಈ ಅಮಾನವೀಯ ಪೈಶಾಚಿಕತೆಗೆ ಮನುಸ್ಮೃತಿಯಂತವು ‘ಸೂಚ್ಯ’ವಾಗಿ (ನೇರವಾಗಲ್ಲ ಅಂತ ರಾಕೇಶರ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿಲ್ಲದರಿಂದ ಒಪ್ಪಿಕೊಂಡಿದ್ದಾರಂತೆ) ಹೇಗೆ ಹರಡಿವೆ ಅಂತ “ರೂಪಕ”ವಾಗಿ ವಿಡಂಬಿಸಿ ಪ್ರಗತಿಪರ ಚಿಂತಕ ಅಂತ ಹಣೆಪಟ್ಟಿ ಹಚ್ಗಚಿಕೊಂಡು ಯಾವುದಾದರೂ ಅಕೆಡೆಮಿ, ಪೀಠ, ಶ್ರೀ ಗಳನ್ನು ಪಡಕ್ಕೊಳ್ಳಿ, ಸಾಕು. ಆದರೆ ಆ ಸಮಸ್ಯೆಯ ನಿಜವಾದ ಸ್ವರೂಪ ಏನೆಂದು ಸಾಮಾಜಿಕ ಸಂಶೋದನೆ ಏನಾದರೂ ಮಾಡಿ ಅದನ್ನು ಶಾಶ್ವತವಾಗಿ ಪರಿಹರಿಸುವ ದಾರಿಯನ್ನೇನಾದರೂ ಕಂಡುಹಿಡಿದೀರಿ, ಜೋಕೆ! ಅಂತಹ ಯಾವುದೇ ಪ್ರಯತ್ನಗಳು ತಮ್ಮ ಇದುವರಗಿನ ಎಲ್ಲಾ ಸ್ಥಾನಮಾನಗಳಿಗೂ ಕುತ್ತು ಮತ್ತು ಜೊತೆಗೇ ಆ ಸಮಸ್ಯೆಯೇ ಇಲ್ಲದೇ ಹೋದರೆ ಮುಂದೆ ಯಾವುದರ ಬಗ್ಗೆ ವಿಷಾಧಗಳನ್ನು ಸೂಸಿ ಮಾನವೀಯತೆಯನ್ನು ಮೆರೆಯೋದು?! ಪ್ರಗತಿಪರ ಸಾಹಿತಿ, ಚಿಂತಕ ಅನಿಸಿಕೊಳ್ಳೋದು! ? ಹಾಗಾಗಿ ಅಸ್ಪೃಶ್ಯತೆಯ ಬಗ್ಗೆ ವಿಷಾದದಮಳೆಗರೆದು ನಮ್ಮೊಂದಿಗೆ ಸೇರಿ ಮಾನವೀಯತೆಯ ತುತ್ತೂರಿ ಊದುವುದನ್ನು ಬಿಟ್ಟು ಇತಹ ಪ್ರಮಾಧಕ್ಕೆ ಕಾರಣವಾಗುತ್ತಿರುವ ಬಾಲುರ ಸಂಶೋಧನಾ ಗುಂಪು ಯಾವುದೇ ಮಾನ್ಯತೆಗೆ ಅರ್ಹವೇ?

   ಈ ಮೊಸಳೆ ಕಣ್ಣೀರು ಸುರಿಸುವ ಗೋಸುಂಬೆಗಳನ್ನು ಇನ್ನೆಷ್ಟುದಿನ ನಂಬಿಕೊಂಡು ಕೂರುವುದು? ವಾಚ್ಯಾರ್ಥ, ಸೂಚ್ಯಾರ್ಥ, ರೂಪಕಗಳನ್ನು ನಿಮ್ಮ ಸಾಹಿತ್ಯದೊಳಗೆ ಭದ್ರವಾಗಿಟ್ಟುಕೊಳ್ಳಿ ಸಾಕು. ಅದನ್ನು ಸಮಾಜವಿಜ್ಞಾನ ವಲಯಕ್ಕೂ ತಂದು ಇಂತಹ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕ್ಲೀಷೆಯ ಮಾತುಗಳನ್ನಾಡಿ ಸಮಸ್ಯೆಯನ್ನು ಜೀವಂತ ಇಟ್ಟು ನಿಮ್ಮ ಬೇಳೆಬೇಯಿಸಿಕೊಳ್ಳುವ ಅಮಾನವೀಯ ರಾಕ್ಷಸತ್ವ ವನ್ನು ಬಿಡಿ. ಇದೊಂದು ರೀತಿಯಲ್ಲಿ ಯಾರದೋ ಮಗುವನ್ನು ಕದ್ದು ತಂದು ಅಳಿಸಿ ಸರ್ಕಲ್ಲು ಬಸ್ಟ್ಯಾಂಡು ರೈಲುಗಳಲ್ಲಿ ಅದರಿಂದ ಹೊಟ್ಟೆಹೊರೆಯುವ ಕಳ್ಳಿಯರಿಗಿಂತಲೂ ಅಮಾನವೀಯತೆ ಇದು. ಹೀಗಾಗಿ ಇಂತಹ ಸಮಸ್ಯೆಗಳ ಬಗ್ಗೆ ಸಾಹಿತ್ಯಿಕ ಪದಪುಂಜಗಳ ಆಟ ಆಡದೆ ವೈಜ್ಞಾನಿಕವಾಗಿ ಚರ್ಚಿಸಿ, ಚಿಂತಿಸಿ . ಅದು ನಿಮ್ಮಿಂದ ಸಾಧ್ಯವಿಲ್ಲದಿದ್ದರೆ ಸಮಾಜವಿಜ್ಞಾನಿಗಳಿಗೆ ಬಿಡಿ.ಇಷ್ಟುದಿನ ಅದರ ಹೆಸರಲ್ಲಿ ಹೊಡಕೊಂಡಿರೋದೇ ಸಾಕು.

   ಉತ್ತರ
   • Nagshetty Shetkar
    ಸೆಪ್ಟೆಂ 24 2014

    “ಪ್ರಗತಿಪರ ಚಿಂತಕ ಅಂತ ಹಣೆಪಟ್ಟಿ ಹಚ್ಗಚಿಕೊಂಡು ಯಾವುದಾದರೂ ಅಕೆಡೆಮಿ, ಪೀಠ, ಶ್ರೀ ಗಳನ್ನು ಪಡಕ್ಕೊಳ್ಳಿ, ”

    ದರ್ಗಾ ಸರ್ ಅವರಿಗೆ ಬಸವಶ್ರೀ ಪ್ರಶಸ್ತಿ ಬಂದದ್ದು ಷಣ್ಮುಖ ಅವರಿಗೆ ಸಹಿಸಲಾರದಷ್ಟು ವೇದನೆಯನ್ನುಂಟು ಮಾಡಿದೆ ಅಂತ ಕಾಣಿಸುತ್ತದೆ, ಆದುದರಿಂದಲೇ ಹೀಗೆ ಹೊಟ್ಟೆಕಿಚ್ಚಿನ ಮಾತುಗಳನ್ನಾದಿದ್ದಾರೆ. ದರ್ಗಾ ಸರ್ ಅವರಿಗೆ ಪ್ರಶಸ್ತಿ ಬಂದದ್ದು ಅವರ ವಚನ ವಿದ್ವತ್ತಿಗೆ. ಆದರೆ ದುರುಳರಿಗೆ ದರ್ಗಾ ಸರ್ ಅವರು ವೈಯಕ್ತಿಕ ಲಾಭಕ್ಕೆ ಇಸ್ಲಾಂ ಬಿಟ್ಟು ಲಿಂಗಾಯತದ ಹಿಂದೆ ಬಿದ್ದಿದ್ದಾರೆ ಅಂತ ಅನ್ನಿಸುತ್ತದೆ. ಕಾಸು ಮಾಡುವ ಉದ್ದೇಶವಿದ್ದರೆ ದರ್ಗಾ ಸರ್ ಕಾಂಗ್ರೆಸ್ ಪಕ್ಷದ ವತಿಯಿಂದ ಶಾಸಕರೋ ಎಂಪಿಯೋ ಎಂದೋ ಆಗಬಹುದಿತ್ತು. ಜನಪ್ರಿಯತೆಯ ಆಕಾಂಕ್ಷೆ ಇದ್ದಿದ್ದರೆ ಸಿನೆಮಾಗಳಿಗೆ ಕಾಯ್ಕಿಣಿ ತರಹ ಹಾಡುಗಳನ್ನು ಎಂದೋ ಬರೆದು ಬಿಗ್ ಬಾಸ್ ತರಹದ ರಿಯಾಲಿಟಿ ಷೋಗಳಲ್ಲಿ ಮಜಾ ಮಾಡಬಹುದಿತ್ತು. ಮನ್ನಣೆಯ ಹಪಾಹಪಿ ಇದ್ದಿದ್ದರೆ ಎಂದೋ ನವ್ಯ ಕಾವ್ಯ ಬರೆದು ಕಾರ್ಪೋರೆಟ್ ವಿಮರ್ಶಕರಿಂದಲೂ ಬೆನ್ನು ತಟ್ಟಿಸಿಕೊಳ್ಳಬಹುದಿತ್ತು. ಜಂಗಮ ಜೋಗಿಯೇ ಆಗಿರುವ ದರ್ಗಾ ಸರ್ ಅವರಿಗೆ ಪ್ರಶಸ್ತಿಗಳಿಂದ ಬರುವ ಸಂಭಾವನಾ ಧನ ಹಾಗೂ ಮನ್ನಣೆಯಿಂದ ಏನೂ ಆಗಬೇಕಾಗಿಲ್ಲ. ಅವರು ಬಸವಾದ್ವೈತದ ಪ್ರಸಾರ ಮಾಡುತ್ತಿರುವುದು ಬಸವತತ್ವಗಳ ಅಳವಡಿಕೆಯಿಂದ ಲೋಕ ಕಲ್ಯಾಣವಾಗುತ್ತದೆ ಎಂಬ ಸದಾಶಯದಿಂದ.

    “ಸಮಸ್ಯೆಗಳ ಬಗ್ಗೆ ಸಾಹಿತ್ಯಿಕ ಪದಪುಂಜಗಳ ಆಟ ಆಡದೆ ವೈಜ್ಞಾನಿಕವಾಗಿ ಚರ್ಚಿಸಿ, ಚಿಂತಿಸಿ . ”

    ವಿಜ್ಞಾನವೇನು ಸಿ ಎಸ ಎಲ್ ಸಿ ಗುಂಪಿನ ಸ್ವತ್ತೆ? ಅವರು ಬರೆದದ್ದೆಲ್ಲವೂ ವಿಜ್ಞಾನ ನಾವು ಬರೆದದ್ದು ಸಾಹಿತ್ಯಕ ಪದಪುಂಜ! ಇಲ್ಲೇ ಕಾಣುತ್ತದೆಯಲ್ಲ ಬ್ರಾಹ್ಮಣ್ಯದ ಸೊಕ್ಕು!!

    ಉತ್ತರ
    • ಸೆಪ್ಟೆಂ 24 2014

     ಶೆಟ್ಕರ್ ಗುರುಗಳೇ,
     ಸುಮ್ಮನೇ ಕಥೆ ಹೇಳಿಕೊಂಡು ವಿಷಯಾಂತರ ಮಾಡುವುದು ಬಿಡಿ.ಇಲ್ಯಾರು ನಿಮ್ಮ ದರ್ಗಾ ಅವರಿಗೆ ಸಿಕ್ಕ ಪ್ರಶಸ್ತಿಯ ಬಗ್ಗೆ ಮಾತನಾಡಿಲ್ಲ.ನೀವೇಕೆ ಸುಖಾ ಸುಮ್ಮನೆ ಹೆಗಲು ಮುಟ್ಟಿಕೊಳ್ಳುತ್ತೀರಿ.

     ಉತ್ತರ
    • ಷಣ್ಮುಖ
     ಸೆಪ್ಟೆಂ 24 2014

     ನಾಗಶೆಟ್ಟಿ ಶೆಟ್ಕರರೆೇ, ಪುನಃ ನಾನು ವಾಸುದೇವರಿಗೆ ಹೇಳಿದ್ದನ್ನು ತಮಗೇ/ದರ್ಗಾರಿಗೇ ಹೇಳಿದ್ದು ಅಂತ ತಪ್ಪು ಭಾವಿಸುತ್ತಿದ್ದಿೀರಿ! ತಮ್ಮ ಪ್ರಖಾಂಡ ಪಾಂಡಿತ್ಯ ನಮಗೆ ಗೊತ್ತೇ ಇದೆ. ತಮಗೆ ಹೇಳುವಷ್ಟು ಉದ್ದಟತನವೆಂದೂ ನಾವು ಮಾಡುವುದಿಲ್ಲ! 🙂

     ಉತ್ತರ
 13. sathya
  ಸೆಪ್ಟೆಂ 23 2014

  shetkar avare nivu yava kaladalli badukkuthidira endu tiliyuthilla,ega yava brahamanaru jaminannu genige kottu badukalu avara baliye jaminillada parisththi ide nivu summane brahamanarannu eledu tandu yalla vishayakku gantu hakuvudu nimmntha vicharavadigalige sari honduvudilla

  ಉತ್ತರ
 14. Rajaram Hegde
  ಸೆಪ್ಟೆಂ 24 2014

  1. ಭಾರತದಾದ್ಯಂತ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಅಂದರೆ ಕೆಲವರನ್ನು ಕೆಲವರು ಮುಟ್ಟುವುದು ನಿಷಿದ್ಧ. 2. ಜಮೀನ್ದಾರಿ ಹಾಗೂ ಗೇಣಿ ಪದ್ಧತಿ ಜಾರಿಯಲ್ಲಿದೆ. 3. ಒಬ್ಬರು ಮತ್ತೊಬ್ಬರಿಂದ ತಮ್ಮ ಕೆಲಸ ಮಾಡಿಸುತ್ತಾರೆ, ಬಿಟ್ಟಿಸೇವೆ ಮಾಡಿಸುತ್ತಾರೆ. 4.ಕೆಲವರು ಕೆಲವರನ್ನು ಬಹುವಚನದಲ್ಲಿ ಕರೆಯುತ್ತಾರೆ. 5.ಒಂದು ಜಾತಿ ಮತ್ತೊಂದು ಜಾತಿಯ ಜೊತೆಗೆ ವಿವಾಹ ಸಂಬಂಧವನ್ನು ನಿರಾಕರಿಸುತ್ತದೆ (ತ್ತಿತ್ತು-ಈಗ ಇಲ್ಲ). 6. ಕೆಲವು ಗುಂಪುಗಳಲ್ಲಿ ಹಾಗೂ ಕೆಲವು ಜಾಗಗಳಲ್ಲಿ ಕೆಲವರಿಗೆ ಪ್ರವೇಶ ಇಲ್ಲ.
  ಇವೆಲ್ಲ ನೀಚತನದ ಪರಮಾವಧಿಯ ಲಕ್ಷಣಗಳು ಅಂತ ಇಟ್ಟುಕೊಳ್ಳೋಣ. ಆದರೆ ಈ ಎಲ್ಲಾ ಆಚರಣೆಗಳೂ ಬ್ರಾಹ್ಮಣರಿಗೆ ಮಾತ್ರ ವಿಶಿಷ್ಠವೆ? ಒಂದೊಮ್ಮೆ ಎಲ್ಲಾ ಜಾತಿ ಹಾಗೂ ಸಮಾಜಗಳಲ್ಲೂ (ಮುಸ್ಲಿಮರಲ್ಲಿ, ಕ್ರೈಸ್ತರಲ್ಲಿ ಇವು ಇಲ್ಲವೆ? )ಇಂಥ ಆಚರಣೆಗಳು ಇರುತ್ತವೆ ಅಂತಾದಲ್ಲಿ ಅವುಗಳಿಗೆ ಬ್ರಾಹ್ಮಣರು ಮಾತ್ರ ಕಾರಣ ಎಂದು ಹೇಗೆ ವಾದಿಸುತ್ತೀರಿ? ಈ ಆಚರಣೆಗಳನ್ನೆಲ್ಲ ಬ್ರಾಹ್ಮಣರೇ ಉಳಿದವರಿಂದ ರೂಢಿಸಿಕೊಂಡಿದ್ದಾರೆ ಎಂದೇಕೆ ವಾದಿಸಬಾರದು? ಈ ಆಚರಣೆಗಳನ್ನೆಲ್ಲ ಒಂದು ಜಾತಿಯ ದುರ್ಗುಣ ಎಂಬಂತೇ ಖಂಡಿಸುವವರು ತಮ್ಮ ಹೊಟ್ಟೆ ಹೊರೆದುಕೊಳ್ಳಲಿಕ್ಕಾಗಿ ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಈ ಮೇಲಿನ ಯಾವ ಯಾವ ಆಚರಣೆಗಳನ್ನು ಒಪ್ಪಿಕೊಂಡಿದ್ದಾರೆ ಎಂಬುದನ್ನು ಸ್ವಲ್ಪ ನೋಡಿಕೊಳ್ಳಲಿ.

  ಮಾನವೀಯತೆಯ ಕುರಿತು ಭಾಷಣ ಮಾಡುವವರು ಇವೆಲ್ಲ ಮನುಷ್ಯ ದೌರ್ಬಲ್ಯಗಳು ಎನ್ನದೇ ಒಂದು ಜಾತಿಗೇ ಮೀಸಲಾದ ದೌರ್ಬಲ್ಯ ಎಂದು ಜಾತೀಯತೆಯ ಪರಿಭಾಷೆಯಲ್ಲಿ ಮಾತನಾಡುತ್ತಿದ್ದಾರಲ್ಲಾ ? ಅವರು ಹೇಳಿದ ಹಾಗೇ ಅವರಿಗೆ ಈ ಆಚರಣೆಗಳು ಅಮಾನವೀಯ , ಶೋಚನೀಯ ಎನ್ನಿಸುತ್ತವೆ ಎಂಬುದನ್ನು ನಂಬೋಣ. ಆದರೆ ಅವರದೇ ಅಮಾನವೀಯ ಮುಖವನ್ನು ಒಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಬೇಕಾಗಿ ವಿನಂತಿ. ಒಂದು ದೇಶದ ಎಲ್ಲ ಜಾತಿ ಮತದವರೂ ಕೆಲವು ಅಮಾನವೀಯ ಆಚರಣೆಯನ್ನು ಯಾವುದೇ ಎಗ್ಗಿಲ್ಲದೇ, ಲಜ್ಜೆಯಿಲ್ಲದೇ ಮಾಡಿಕೊಂಡು ಯಾವುದೋ ಒಂದು ಜಾತಿಯನ್ನು ನೇಣತ್ತುವುದು ಮಾನವೀಯತೆಯ ಲಕ್ಷಣವೆ? ಅಷ್ಟೇ ಅಲ್ಲ ಕಳೆದ ಒಂದು ಶತಮಾನದಿಂದ ಮನುಸ್ಮೃತಿಯಂಥ ಗ್ರಂಥಗಳನ್ನು ನೆಪಮಾಡಿ ವ್ಯವಸ್ಥಿತವಾಗಿ ಈ ಜಾತಿಯನ್ನು ಅಪರಾಧಿ ಸ್ಥಾನದಲ್ಲಿಟ್ಟು, ಸಾರ್ವಜನಿಕವಾಗಿ ಅವಹೇಳನ ಮಾಡುತ್ತ, ಎಲ್ಲ ಅಧಿಕಾರಗಳನ್ನೂ ಗಿಟ್ಟಿಸಿಕೊಂಡು ಆ ವಿಷಯವನ್ನು ಅವರ ಗಮನಕ್ಕೆ ತಂದರೂ ಕೂಡ ನಿರ್ಲಜ್ಜವಾಗಿ ಹಾಗೂ ಉದ್ದೇಶಪೂರ್ವಕವಾಗಿ ಮುಚ್ಚಿಡುವುದು ನೀಚತನದ ಪರಮಾವಧಿಯಲ್ಲವೆ?

  ಮನುಷ್ಯನ ದುಷ್ಕೃತ್ಯಗಳನ್ನು ನಾವು ಯಾರೂ ಸಮರ್ಥಿಸುವುದಿಲ್ಲ. ಆದರೆ ಕಳೆದ ಶತಮಾನದಲ್ಲಿ ಭಾರತದಲ್ಲಿ ಈ ದುಷ್ಕೃತ್ಯಗಳ ಹೆಸರು ಹೇಳಿಕೊಂಡು ನಡೆಸುತ್ತಿರುವ ದುಷ್ಕೃತ್ಯಗಳು ಅವುಗಳಿಗಿಂತಲೂ ಹೇಯವಾದದ್ದು. ಬಾಲಗಂಗಾಧರ ಹಾಗೂ ಅವರ ವಾದವನ್ನು ಒಪ್ಪಿಕೊಂಡವರ ಕುರಿತು ಕನ್ನಡದ ಕೆಲವು ಬುದ್ಧಿಜೀವಿಗಳು ತೋರಿಸುತ್ತಿರುವ ಪ್ರತಿಕ್ರಿಯೆ, ಅವರ ಭಾಷೆ ಹೇಸಿಗೆ ಹುಟ್ಟಿಸುವಂತಿದೆ. ಸಮಾಜ ಶಾಸ್ತ್ರಜ್ಞರು ಈ ಎಲ್ಲರ ಗ್ರಹಿಕೆಗಳಲ್ಲಿರಬಹುದಾಗ ತಪ್ಪುಗಳ ಕುರಿತು ಗಮನಸೆಳೆದಾಗ ಅವರನ್ನು ಓದುವ ಕನಿಷ್ಠ ಸೌಜನ್ಯವನ್ನೂ ತೋರಿಸದೇ ಅವರ ಕಾಳಜಿಗಳ ಕುರಿತು, ನೈತಿಕತೆಯ ಕುರಿತು ತೇಜೋವಧೆಯ ಮಾತುಗಳನ್ನಾಡುತ್ತಾರೆ. ಇಂಥವರು ದುರಹಂಕಾರಿಗಳಲ್ಲವಂತೆ, ವಾದವನ್ನು ಮಂಡಿಸಿದವರೇ ದುರಹಂಕಾರಿಗಳು ಎನ್ನುತ್ತಾರೆ.. ಈ ಸಮಾಜದ ಕುರಿತು ಸ್ವತಃ ಸಮಾಜಶಾಸ್ತ್ರಜ್ಞರೇ ಮಾತನಾಡಬಾರದು,” ನಾವು (ಬಹುತೇಕವಾಗಿ ಸಾಹಿತಿಗಳು) ನಂಬಿಕೊಂಡದ್ದನ್ನು ಪ್ರಶ್ನಿಸುವವರು ಅಮಾನವೀಯ ಹಾಗೂ ಅನೈತಿಕ ಜನರು. ಅವರನ್ನುಅವಾಚ್ಯವಾಗಿ ಬೈದು ಕರ್ನಾಟಕದಿಂದ ಓಡಿಸಿ” ಎನ್ನುವವರನ್ನು ಮಾನವೀಯತೆಯ ಕಾಳಜಿ ಉಳ್ಳವರು ಅನ್ನುತ್ತೀರೋ, ಮುಗ್ಧ ಅಮಾಯಕರು ಎನ್ನುತ್ತೀರೋ, ಅವಿವೇಕಿಗಳು ಎನ್ನುತ್ತೀರೋ, ಧೂರ್ತರು ಎನ್ನುತ್ತೀರೋ? ನನಗೊಂದೂ ತಿಳಿಯದಾಗಿದೆ.

  ಉತ್ತರ
 15. M A Sriranga
  ಸೆಪ್ಟೆಂ 24 2014

  ವಾಸುದೇವ ಅವರಿಗೆ– ತಮಗೆ ನಮ್ಮ pseudo ಪ್ರಗತಿಪರರಂತೆ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಆಚರಣೆಗಳ ಬಗ್ಗೆ ಸ್ವಲ್ಪ ಗೊಂದಲವಿದೆ. ನಮ್ಮ ಸಮಾಜದಲ್ಲಿ ಕೆಟ್ಟ ಕೆಲಸವನ್ನು ಯಾರೇ ಮಾಡಿರಲಿ ಒಂದೋ ಅವರು ಬ್ರಾಹ್ಮಣರಾಗಿರಬೇಕು ಇಲ್ಲವೇ ಅದು ಮನುವಾದಿ,ಮನುಸಂಸ್ಕೃತಿಯ trade mark ಆದ ಬ್ರಾಹ್ಮಣ್ಯವಾಗಿರಲೇಬೇಕು. ಅದು ಬಿಟ್ಟು ಇನ್ನೇನು ಆಗಿರಲಿಕ್ಕೆ ಸಾಧ್ಯವಿಲ್ಲ ಎಂದು ಗಟ್ಟಿಯಾಗಿ ಮನಸ್ಸಿನಲ್ಲಿ ಬೇರೂರಿದೆ. ಇರಲಿ. ಇಂತಂಹ ಯೋಚನಾಲಹರಿಗಳೇ ಇಂದು ನಮ್ಮ ಸಮಾಜದಲ್ಲಿ ಮುಖ್ಯಧಾರೆಯಾಗಿ ಎಲ್ಲಡೆ ಹರಿದಾಡುತ್ತಿರುವಾಗ ಇದು ತಮ್ಮ ಮೇಲೂ ಸಹಜವಾಗಿ ಸಾಕಷ್ಟು ಪರಿಣಾಮಬೀರಿರುತ್ತವೆ. ಕರ್ನಾಟಕದಲ್ಲಿ (ಈ ಹಿಂದಿನ ಮೈಸೂರು ಸಂಸ್ಥಾನ) ಈ ಬ್ರಾಹ್ಮಣ-ಅಬ್ರಾಹ್ಮಣ (B and NB) ಚಳುವಳಿಗೆ ಒಂದು ನೂರು ವರ್ಷಗಳಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಅರವತ್ತೇಳು ವರ್ಷಗಳಾದವು. ಸುಮಾರು ಆರು ದಶಕಗಳ ಕಾಲವಂತೂ ದೀನ ದಲಿತರ ಉದ್ಧಾರವೇ ನಮ್ಮ ಗುರಿ ಎಂದು ಸಾರಿ ಸಾರಿ ಹೇಳುತ್ತಾ ಬಂದಿರುವ ರಾಜಕೀಯ ಪಕ್ಷವೇ ಆಡಳಿತ ನಡೆಸಿದೆ. ಹಿಂದುಳಿದವರ ಏಳಿಗೆಗಾಗಿ ಸಾಕಷ್ಟು ಯೋಜನೆಗಳು,ಭಾಗ್ಯಗಳು,ರಿಯಾಯ್ತಿಗಳು ಹಣದ ಯೋಜನೆಗಳು, ವಿದ್ಯೆ,ಕೆಲಸಕ್ಕೆ ಸಾಕಷ್ಟು ಅನುಕೂಲತೆಗಳು ಜಾರಿಗೆ ಬಂದಿವೆ ಮತ್ತು ಜಾರಿಯಲ್ಲಿವೆ. ಇದರ ಪ್ರಯೋಜನ ಪಡೆದ ಆ ಜಾತಿಗಳ ಬಡವರ ಜತೆಗೇ ಆ ಜಾತಿಗಳ ಕೆನೆಪದರದ ಪೀಳಿಗೆಗಳಿಗೂ ಸಹ ಆ ಎಲ್ಲಾ ಸವಲತ್ತುಗಳು ವಂಶಪಾರಂಪರ್ಯವಾಗಿ ಸಿಗುತ್ತಲೇ ಇದೆ. ಜತೆಗೆ ಕಾನೂನಿನ ಶ್ರೀ ರಕ್ಷೆ ಸಹ ಇದೆ. ಇಷ್ಟಾದರೂ ಸಹ ಅವರುಗಳು ತಾವು ಹಿಂದುಳಿದಿರುವುದಕ್ಕೆ ಕಾರಣ ಬ್ರಾಹ್ಮಣ-ಬ್ರಾಹ್ಮಣ್ಯ-ಮನುವಾದಿ-ಮನುಸಂಸ್ಕೃತಿ ಎಂದು ಸಮಯ ಸಿಕ್ಕಾಗೆಲ್ಲಾ ಟೀಕಿಸುತ್ತಾ ಕೂರುವುದರಲ್ಲಿ ಏನು ಅರ್ಥವಿದೆ? ಇಂದು ಕಡು ಬಡವರಾಗಿದ್ದರೂ ಸಹ ಜಾತಿಯೊಂದರ ಕಾರಣದಿಂದ ಸರ್ಕಾರದ ಯಾವುದೇ ನೆರವಿಲ್ಲದೆ ಇದ್ದರೂ ಬ್ರಾಹ್ಮಣರು ತಮ್ಮ ಅನ್ನವನ್ನು ತಾವು ಸಂಪಾದಿಸಿಕೊಳ್ಳುತ್ತಿರುವುದೂ ದಲಿತ ವಿರೋಧಿ ಎಂಬ ಭಾವನೆ ಬಿತ್ತುವ ಪ್ರಗತಿಪರ ಎಂಬ ಬ್ಯಾನರ್ ಕೆಳಗೆ ಆಶ್ರಯ ಪಡೆದಿರುವ ದಲಿತ ಚಳುವಳಿಯ ನಾಯಕರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು. ಆಗಲೂ ಸಮಾಧಾನವಾಗದಿದ್ದರೆ ಈ ಲೇಖನಕ್ಕೆ ಬಂದ ಪ್ರತಿಕ್ರಿಯೆಯೊಂದಕ್ಕೆ ಉತ್ತರಿಸುವಾಗ ನಾನು ಹೇಳಿದಂತೆ ಪ್ರಗತಿಪರರು ಒಂದು ರಾಜಕೀಯ ಪಕ್ಷ ಕಟ್ಟಿ ಸರ್ಕಾರದ ಮೇಲೆ ಇನ್ನೂ ಒತ್ತಡ ಹೇರುವ ಕೆಲಸ ಮಾಡಬಹುದು.

  ಉತ್ತರ
 16. vasudeva
  ಸೆಪ್ಟೆಂ 24 2014

  ಶ್ರೀಸಾಮಾನ್ಯರಿಗೆ ವಿದ್ವಾಂಸರ ಮತ್ತು ಪ್ರಗತಿಪರರ ಚಿಂತನೆಗಳಲ್ಲಿ ಆಸಕ್ತಿಯಿರುತ್ತದೆಯೇ ವಿನಹ ಚಿಂತಕರ ವಲಯದ ಹುನ್ನಾರಗಳು ಮತ್ತು ಸಣ್ಣತನಗಳ ಪರಿಚಯ ಇರುವುದಿಲ್ಲ. ಅಂತಹ ಹುನ್ನಾರ, ಕ್ಷುಲ್ಲಕತನಗಳನ್ನು ಪ್ರದರ್ಶಿಸುವ ಚಿಂತಕರನ್ನು ಮತ್ತು ಪ್ರಗತಿಪರರನ್ನು ಸಾಮಾನ್ಯವರ್ಗವು ಎಂದಿಗೂ ಧಿಕ್ಕರಿಸುತ್ತದೆ. (ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವವರು ಸಿಎಸ್‌ಎಲ್‌ಸಿಯನ್ನು ಮುಚ್ಚಿಸಿದ್ದು ಶುದ್ಧ ಹೆಂಬೇಡಿತನವೆಂದು ಇದೇ ನಿಲುಮೆಯ ಹಿಂದಿನ ಒಂದು ಲೇಖನದಲ್ಲಿ ಪ್ರತಿಕ್ರಿಯಿಸಿದ್ದೇನೆ)
  ನನ್ನ ಪ್ರತಿಕ್ರಿಯೆಗಳಲ್ಲಿ ನಾನು ಕಂಡ ಬ್ರಾಹ್ಮಣ್ಯದ ಕೆಲವು ಲಕ್ಷಣಗಳು ನಿರೂಪಿತವಾಗಿರುವುದೇ ವಿನಃ (ಅದು ಪ್ರಗತಿಪರ ಚಿಂತಕರಿಂದ ಪ್ರೇರಿತವಾಗಿದೆ ಎಂಬ ಆಕ್ಷೇಪಣೆಗೆ ನನ್ನ ಬಳಿ ಉತ್ತರವಿಲ್ಲ) ಯಾವುದೇ ಜಾತಿನಿಂದನೆಯ ಉದ್ದೇಶವಿಲ್ಲ ಅಥವಾ ಕೆಲವು ಪಿಡುಗುಗಳಿಗೆ ಯಾವ ನಿರ್ದಿಷ್ಟ ಜಾತಿಯನ್ನೂ ಹೊಣೆಯಾಗಿಸುತ್ತಿಲ್ಲ. ಅದನ್ನು ಪ್ರತಿಕ್ರಿಯೆಯಲ್ಲಿ ಸ್ಪಷ್ಟವಾಗಿಯೇ ತಿಳಿಸಿರುವೆನು.
  ಕೆಲವು ಚಿಂತನೆಗಳು ಸಾರ್ವಜನಿಕ ವಲಯವನ್ನು ಪ್ರವೇಶಿಸುತ್ತಲೇ ಭ್ರಷ್ಟಗೊಳ್ಳುತ್ತದೆ (ಅಂದರೆ ಚರ್ಚೆಯ ಹಾದಿ ತಪ್ಪುತ್ತದೆ) ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಗಾಂಧೀ ಚಿಂತನೆಗಳು ಇಂದು ಓಲೈಕೆಯ ರಾಜಕಾರಣವಾಗಿರುವಂತೆ, ಪ್ರಗತಿಪರ ಚಿಂತನೆಗಳು ವ್ಯಕ್ತಿನಿಂದನೆಯಲ್ಲಿ ತೊಡಗಿರುವಂತೆ,.. ಅಷ್ಟೇಕೆ ನಿಲುಮೆಯ ಪ್ರತಿಯೊಂದು ಬರೆಹವೂ ಜಾತೀಯ ವಾಗ್ವಾದಗಳ ಕಡೆಗೆ ತಿರುಗಿಕೊಳ್ಳುತ್ತಿಲ್ಲವೇ? ಇದು ಸಾರ್ವಜನಿಕರ ತಪ್ಪಲ್ಲ. ಸಾರ್ವಜನಿಕನೆನಿಸಿಕೊಂಡವನು ಎಂದೂ ಪೂರ್ವಗ್ರಹ ಮುಕ್ತನಾಗಿ ಯೋಚಿಸುವ ಸಾಮರ್ಥ್ಯ ಪಡೆದಿರುವುದಿಲ್ಲ. ಅವರನ್ನು ಇಂತಹ ಪೂರ್ವಗ್ರಹಗಳಿಂದ ವಿಮೋಚನೆಗೊಳಿಸುವುದೇ ನಿಮ್ಮ ಸಮಸ್ತ ಸಂಶೋಧನೆಯ ಮುಖ್ಯ ಉದ್ದೇಶವಲ್ಲವೇ? ಹಾಗೆ ವಿಮೋಚಿಸಲು ಹೊರಟಿರುವ ಯಾರಾದರೂ ಅವನ ಮೇಲೆ ಸಿಡಿಮಿಡಿಗೊಳ್ಳುವರೇ?
  “ಅದು ನಿಮ್ಮಿಂದ ಸಾಧ್ಯವಿಲ್ಲದಿದ್ದರೆ ಸಮಾಜವಿಜ್ಞಾನಿಗಳಿಗೆ ಬಿಡಿ”
  ಆ ಬದಲಾವಣೆ ನಿಮ್ಮಿಂದ ಸಾಧ್ಯವಾದಲ್ಲಿ ಆರೋಗ್ಯಕರ ಸಮಾಜಕ್ಕಾಗಿ ಹಂಬಲಿಸುವ ಪ್ರತಿಯೊಬ್ಬರೂ ನಿಮ್ಮ ಕೊಡುಗೆಗಳನ್ನು ಆಶೆಯ ಕಣ್ಣುಗಳಿಂದ ನಿರೀಕ್ಷಿಸುವರು ಮತ್ತು ಅದಕ್ಕಾಗಿ ಕೃತಜ್ಞರಾಗಿರುವರು. ಆದರೆ ಕೇವಲ ಪ್ರಗತಿಪರರಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲವೆಂಬುದು ಈ ಅರವತ್ತು-ಎಪ್ಪತ್ತು ವರ್ಷಗಳ ಅವಧಿಯಲ್ಲಿ ಸಾಬೀತಾಗಿದೆ. ಹಾಗೆಯೇ ಸಾಹಿತಿಗಳನ್ನು ಮತ್ತು ಪ್ರಗತಿಪರರನ್ನು ನಿರ್ಲಕ್ಷಿಸುವ ಹ್ಯುಮಾನಿಟೀಸ್ ವಿಷಯಗಳೂ ನಿಸ್ಸಂಶಯವಾಗಿ ವೈಕಲ್ಯಗೊಳ್ಳುತ್ತದೆ. ಸಾಹಿತ್ಯ, ಸಂಸ್ಕೃತಿ, ನಂಬಿಕೆ, ನಾಗರಿಕತೆ ಇತ್ಯಾದಿಗಳು ಸಮಾಜ ವಿಜ್ಞಾನದ ವಿಷಯ ವಸ್ತುಗಳಾಗಿವೆ ಎಂದು ನಿಮಗೆ ಗೊತ್ತೇ ಇದೆ. ಇಂದು ತುಮಕೂರಿನ ಭಾಷಣದಲ್ಲಿ “ನಾವು ಬೇರೆ ಬೇರೆ ಪಕ್ಷಗಳ ಹಿನ್ನೆಲೆಯವರಾದರೂ ದುಡಿಯುತ್ತಿರುವುದು ಒಂದೇ ರಾಷ್ಟ್ರಕ್ಕಾಗಿ ಅಲ್ಲವೇ?” ಎಂದು ನಮ್ಮ ಪ್ರಧಾನಿಯವರು ಸಿದ್ಧರಾಮಯ್ಯನವರಿಗೆ ಪರೋಕ್ಷವಾಗಿ ಸೂಚಿಸಿದ್ದು ಇಲ್ಲಿಗೂ ಅನ್ವಯಿಸುತ್ತದಲ್ಲವೇ?

  ಉತ್ತರ
  • ಸೆಪ್ಟೆಂ 25 2014

   ವಸುದೇವ ಅವರೇ,
   ನಿಲುಮೆಯಲ್ಲಿ ಇಂತದ್ದೇ ಲೇಖನಗಳು ಬರಬೇಕು ಎನ್ನುವ ಕಟ್ಟು-ನಿಟ್ಟು ಇಲ್ಲ.ಇಲ್ಲಿ ಯಾರೂ ಬೇಕಿದ್ದರೂ ಬರೆಯಬಹುದು.ಎಡ-ಬಲ ಅಥವಾ ಅದ್ಯಾವುದೋ ಗೊತ್ತಿಲ್ಲದವರೂ ಸಹ ಬರೆಯಬಹುದು.

   “ಅವರನ್ನು ಇಂತಹ ಪೂರ್ವಗ್ರಹಗಳಿಂದ ವಿಮೋಚನೆಗೊಳಿಸುವುದೇ ನಿಮ್ಮ ಸಮಸ್ತ ಸಂಶೋಧನೆಯ ಮುಖ್ಯ ಉದ್ದೇಶವಲ್ಲವೇ? ಹಾಗೆ ವಿಮೋಚಿಸಲು ಹೊರಟಿರುವ ಯಾರಾದರೂ ಅವನ ಮೇಲೆ ಸಿಡಿಮಿಡಿಗೊಳ್ಳುವರೇ?” ಎಂದು ಸಿ.ಎಸ್.ಎಲ್.ಸಿಯವರಿಗೆ ಹೇಳುತಿದ್ದೀರಿ.ಆದರೆ,ಅವರು ಪ್ರಚಲಿತದಲ್ಲಿರುವ ಪ್ರಗತಿಪರರ ಮತ್ತು ಸಂಪ್ರದಾಯವಾದಿಗಳ ವಾದಗಳ ಪೂರ್ವಾಗ್ರಹದಾಚೆಗೆ ನಿಂತು ಮಾತನಾಡುತಿದ್ದಾರೆ ಎಂದು ನನಗನ್ನಿಸುತ್ತಿದೆ.

   “ಅವರ ಸಂಶೋಧನೆಯೇ ಬ್ರಾಹ್ಮಣರನ್ನು ಕಟಕಟೆಯಿಂದ ಇಳಿಸಿ ಬ್ರಾಹ್ಮಣ್ಯದ ಸ್ಥಾಪನೆ” ಎಂದು ತಿಪ್ಪೆಸಾರಿಸಿ ಹೊಣೆಗೇಡಿತನ ತೋರಿಸುತ್ತಿರುವ ಪ್ರಗತಿಪರರಂತಾಗದೇ,ನೀವೆ ಒಮ್ಮೆ ಈ ಬಗ್ಗೆ ಯೋಚಿಸಿನೋಡಿ.

   ಅಂತಿಮವಾಗಿ, ಆರೋಗ್ಯಕರ ಸಮಾಜ ನಿರ್ಮಾಣವೇ ಎಲ್ಲರ ಆಶಯ ಅಲ್ಲವೇ?

   ಉತ್ತರ
  • ಷಣ್ಮುಖ
   ಸೆಪ್ಟೆಂ 28 2014

   ವಾಸುದೆವರೆೇ,

   1. “ಬ್ರಾಹ್ಮಣ್ಯದ ಕೆಲವು ಲಕ್ಷಣಗಳು” ಅಂತ ನೀವು ಯಾವುದನ್ನು ಹೇಳುತ್ತೀರೋ ಅವು ಬ್ರಾಹ್ಮಣ್ಯದ್ದೇ ಲಕ್ಷಣಗಳು ಅಂತ ತೀರ್ಮಾನಿಸೊಕೆ ಹೇಗೆ ಸಾಧ್ಯ ಅಂತನೇ ನೀವು ಉಲ್ಲೇಖಿಸಿದ ಬಾಲುರವರ ಲೇಖನ ಸಾಲುಗಳು ಪ್ರಶ್ನಿಸುತ್ತಿರುವುದು. ಆದರೆ ಅದೇ ಸಾಲುಗಳನ್ನೆತ್ತಿಕೊಂಡು ಹೆಚ್ಚುವರಿಯಾಗಿ ಯಾವ ತಾರ್ಕಿಕ ವಾದಗಳನ್ನು ಮಾಡದೆ ಇವರದ್ದು ಅನೈತಿಕ ಅಜೆಂಡಾ ಅಂತ ತೀರ್ಮಾನ ಮಾಡ್ತೀರಿ!

   2. ನಿಮ್ಮ ಬಹುಮುಖ್ಯ ಗುಮಾನಿ ಎಂದರೆ (ಆರಂಭದಲ್ಲಿ ಇದು ನನ್ನದೂ ಆಗಿತ್ತು) ಈ ತಂಡದ ಬಹುಮುಖ್ಯ ಅಜೆಂಡಾನೆ ಬ್ರಾಹ್ಮಣರನ್ನು ನಿರಪರಾಧಿಗಳೆಂದು ಬಿಂಬಿಸುವುದು ಆ ಮೂಲಕ ಅಸ್ಪೃಶ್ಯತೆಯಂತಹ ಆಚರಣೆಗಳು ಇಲ್ಲವೇ ಇಲ್ಲ ಅಂತ ಅನ್ನಿಸಿಬಿಡೋದು. ಇವರಿಗೆ ಈ ಬಗ್ಗೆ ಸ್ವಲ್ಪವೂ ವಿಷಾಧವಿಲ್ಲ ಎನ್ನುವಾಗ ನಿಮ್ಮ ಕಾಳಜಿ ಇದೇ ಆಗಿದೆ ಅಂದ್ಕೊಂಡಿದ್ದೇನೆ. ಆದರೆ ಈ ನಿಲುವಿನ ದುರಂತ ನೋಡಿ. ಅಸ್ಪೃಷ್ಯತೆಗೆ ಬ್ರಾಹ್ಮಣರೇ ಅವರ ಮನುಸ್ಮೃತಿಯಂತಹ ಗ್ರಂಥಗಳೆೇ ಮೂಲಕಾರಣ ಅಂತ ತೀರ್ಮಾನಿಸಿರೊ ಇದುವರಗಿನ ಬೌದ್ದಿಕ ತೀರ್ಮಾನಗಳಿಗೆ ವೈಜ್ಞಾನಿಕ ಆಧಾರವಿಲ್ಲ ಅಂತಂದ್ರೆ ಆ ಸಮಸ್ಯೆ ಇಲ್ಲ ಎಂದಲ್ಲಾ ಅರ್ಥ! ಈ ಸಮಸ್ಯೆ ಇದೆ, ಆದರೆ ಈ ಸಮಸ್ಯೆಗೆ ಕಂಡುಕೊಂಡಿರುವ ಕಾರಣ ಸರಿ ಇಲ್ಲ, ಇದರಿಂದ ಸಮಸ್ಯೆಯನ್ನು ಪರಿಹರಿಸಲು ತಗೋಂಡ ಕ್ರಮಗಳು ತಪ್ಪು ಗ್ರಹಿಕೆಯಿಂದಾಗಿ ಸಮಸ್ಯೆಯನ್ನು ಪರಿಹರಿಸೋಲ್ಲ ಅಂತ ಅಷ್ಟೆ ಅರ್ಥ. ಕಳೆದ ಹಲವು ದಶಕಗಳಿಂದ ತಗೋಂಡ ಕ್ರಮಗಳ ಪರಿಣಾಮಗಳೆ ಇದನ್ನು ಧೃಷ್ಟಾಂತಪಡಿಸುತ್ತವೆ.

   3. ಅದರರ್ಥ ಈ ಸಮಸ್ಯೆ ಪರಿಹಾರ ಆಗಬೆೇಕೆಂದರೆ ಅದರ ಸರಿಯಾದ ಕಾರಣ ಹುಡುಕೋದು. ಅದರ ಮೊದಲ ಹೆಜ್ಜೆ ಈಗ ಅದರ ಕಾರಣ ಅಂತ ಗುರ್ತಿಸಿರೋದರಲ್ಲಿರುವ ಸಮಸ್ಯೆ ಏನುೂ ಅಂತ ಗುರ್ತಿಸೋದು! ಇದರ ಭಾಗವಾಗಿಯೆೇ ಮನುಸ್ಮೃತಿ, ಬ್ರಾಹ್ಮಣ್ಯ, ಪುರೋಹಿತಶಾಹಿಗಳೆನ್ನುವ ಕಾರಣಗಳು ಸಮಸ್ಯೆಯ ಪರಿಹಾರಕ್ಕೆ ಯಾವ ಸಹಾಯವೂ ಮಾಡಲಿಲ್ಲ ಅನ್ನೋದು. ಹೀಗೆ ಹೇಳಿದಾಕ್ಷಣ ನಿರಪರಾಧಿಗಳೆಂದು ಸಾಧಿಸುವ ಹುನ್ನಾರ ಅಂದ್ರೇನು! ಅಪರಾಧಿಯೇ ನಿಜ ಆದ್ರುೂ ನಿರಪರಾಧಿಯಾಗಿಸಲಾಗುತ್ತಿದೆ ಎಂದು ತಾನೆ! ಆದರೆ ನಿಮ್ಮ ಈ ತೀರ್ಮಾನ ಅವರ ಅಪರಾಧ ಸಾಭಿತುಗೊಳಿಸುವ ಸಾಕ್ಷಿಪುರಾವೆಗಳ ಸಹಿತದ ವಾದದಿಂದ ಬಂದಿದ್ದಲ್ಲ! ಬದಲಿಗೆ ಆ ಸಮಸ್ಯೆಯ ಅಸ್ತಿತ್ವವೇ ಸ್ವಯಂ ಸಾಕ್ಷವಾಗಿ ಗ್ರಹಿಸಿಕೊಂಡಿದ್ದು! ಇದು ಹೇಗೆಂದರೆ ಓರ್ವ ಇನ್ನೋರ್ವನನ್ನು ಕೊಲೆ ಮಾಡಿಲ್ಲ ಅದಕ್ಕೆ ಸಾಕ್ಷಿ ಇಲ್ಲ ಮಾಡಿರೋದು ಸುಳ್ಳು ಆರೋಪ ಅಂದ್ರೆ, ಹಾಗೆ ಹೇಳೋಧು ಹುನ್ನಾರ! ಕೊಲೆ ಆಗಿಯೆೇ ಇಲ್ಲಾ ಅಂತಿದ್ದಾರೆ ಕೊಲೆಗಾರನನ್ನ ನಿರಪರಾಧಿ ಅಂತಿದ್ದಾರೆ ಅಂದ್ರೆ ಹೇಗೆ? ಕೊಲೆಯಾಗಿದೆ, ಹಾಗಾಗಿ ಕೊಲೆಗಾರನಿದ್ದಾನೆ!! ಆದರೆ ಈತನೆೇ ಕೊಲೆಗಾರನೆನ್ನಲು ಆಧಾರ ಬೇಕು. ಇದಂಗಲ್ಲಾ! ನಾ ಕೈ ತೋರಿಸಿದವನೇ ಕೊಲೆಗಾರ ನೀವೇನದರೂ ಅದಕ್ಕೆ ಸಾಕ್ಷಿ-ಆಧಾರ ಇಲ್ಲಾ ಅಂದ್ರೆ ನಿಮ್ಮದು ಕೊಲೆಯನ್ನು ಸಮರ್ಥಿಸುವ ಕೊಲೆಗಡುಕ ಮನಸ್ಸು ಮಾನವೀಯತೆ ಮರೆತ ಮೃಗಗಳೆಂದರೆ ಏನರ್ಥ?

   ಉತ್ತರ
   • Nagshetty Shetkar
    ಸೆಪ್ಟೆಂ 28 2014

    ಗೋಜಲು ಚಿಂತನೆ. ಇದರಿಂದ ಮನುವಾದಿಗಳಲ್ಲದೆ ಶೋಷಿತರಿಗೆ ಏನೂ ಪ್ರಯೋಜನವಿಲ್ಲ. ಷಣ್ಮುಖ ಅವರು ಸ್ವತಹ ಶೋಷಿತ ವರ್ಗದಿಂದ ಬಂದವರು ಹೀಗೆ ನಮ್ಮನ್ನು ಗೋಜಲು ಮಾತುಗಳಿಂದ ಮೋಸ ಮಾಡುವುದು ಸರಿಯಲ್ಲ.

    ಉತ್ತರ
   • valavi
    ಸೆಪ್ಟೆಂ 28 2014

    ಷಣ್ಮುಖ ಅವರೆ ಈ ಜಾತಿ ಪದ್ಧತಿ ಯಾರಿಂದ ಭಾರತದಲ್ಲಿ ಬೇರೂರಿತು? ವೇದಕಾಲದಲ್ಲಿ ಇರಲಾರದ ಜಾತಿ ಯಾವ ಕಾಲದಲ್ಲಿ ಭಾರತದಲ್ಲಿ ಬಳಕೆಗೆ ಬಂತು? ಮತ್ತು ಅಸ್ಪೃಶ್ಯತೆ ಆಚರಣೆ ಯಾವಾಗ ಶುರುವಾಯಿತು? ಕಾರಣಗಳೇನು ವಿವರಿಸುವಿರಾ? ಈಗ ಸಧ್ಯಕ್ಕೆ ನೀವು ತಿಳಿದ ಮಟ್ಟಿಗಾದರೂ ಇವುಗಳ ಬಗ್ಗೆ ಬೆಳಕು ಚಲ್ಲಿದರೆ ಸಂತೋಷವಾಗುತ್ತದೆ.

    ಉತ್ತರ
    • Nagshetty Shetkar
     ಸೆಪ್ಟೆಂ 28 2014

     ವಾಳವಿ ಅವರೇ, ನಿಮ್ಮ ಬಗ್ಗೆ ನನಗೆ ಅಪಾರವಾದ ಗೌರವವಿದೆ. ನಿಮ್ಮಲ್ಲೂ ಒಬ್ಬ ಅಕ್ಕ ಮಹಾದೇವಿಯನ್ನೇ ನಾನು ನೋಡುತ್ತಿದ್ದೇನೆ. ಆದರೆ ನಿಮಗೆ ಸಂಬಂಧ ಪಡದ ವಿಷಯಗಳ ಬಗ್ಗೆ ನೀವು ತೋರುವ ಕೆಟ್ಟ ಆಸಕ್ತಿಗೆ ನನ್ನ ತಕರಾರಿದೆ. ಅದು ಬಿಟ್ಟರೆ ಜಾತಿ ವ್ಯವಸ್ಥೆ ಬಗ್ಗೆ ನಿಮಗಿರುವ ಕುತೂಹಲ ಮೆಚ್ಚುವಂಥದ್ದೆ. ದರ್ಗಾ ಸರ್ ಅವರು ಜಾತಿ ವ್ಯವಸ್ಥೆ ಬಗ್ಗೆ ಬರೆದಿರುವ ಲೇಖನಗಳನ್ನು ದಯವಿಟ್ಟು ಓದಿ. ನಿಮಗೆ ಒಳ್ಳೆಯದಾಗಲಿ. ಹಾಗೂ ನಿಮ್ಮ ಮೇಲಿನ ಪ್ರಶ್ನೆಗಳಿಗೆ ಷಣ್ಮುಖ ಅವರು ಪ್ರಾಮಾಣಿಕ ಉತ್ತರಗಳನ್ನು ಕೊಡಲಿ.

     ಉತ್ತರ
    • Nagshetty Shetkar
     ಸೆಪ್ಟೆಂ 28 2014

     @Shanmukha: answer Valavi madam’s questions. Don’t run away now.

     ಉತ್ತರ
    • ಷಣ್ಮುಖ
     ಸೆಪ್ಟೆಂ 29 2014

     [ಈ ಜಾತಿ ಪದ್ಧತಿ ಯಾರಿಂದ ಭಾರತದಲ್ಲಿ ಬೇರೂರಿತು? ವೇದಕಾಲದಲ್ಲಿ ಇರಲಾರದ ಜಾತಿ ಯಾವ ಕಾಲದಲ್ಲಿ ಭಾರತದಲ್ಲಿ ಬಳಕೆಗೆ ಬಂತು? ಮತ್ತು ಅಸ್ಪೃಶ್ಯತೆ ಆಚರಣೆ ಯಾವಾಗ ಶುರುವಾಯಿತು? ಕಾರಣಗಳೇನು ವಿವರಿಸುವಿರಾ? ]

     ಮಾನ್ಯ Valavi ಯವರೇ, ಬಹಳವೇ ದೊಡ್ಡ ದೊಡ್ಡ ಪ್ರಶ್ನೆಗಳನ್ನು ಕೇಳ್ತಿದ್ದೀರಿ. ಆದರೆ ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿನ ಸಮಸ್ಯೆಗಳನ್ನು ಮಾತ್ರ ಸಂಕ್ಷಿಪ್ತವಾಗಿ ಹೇಳ್ತೇನೆ ಆಗ ಈ ಪ್ರಶ್ನೆಗಳ ಸಮಸ್ಯೆಯನ್ನೋ ಅಥವಾ ಇಂತಹ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರದ ಸಾಧ್ಯತೆಯನ್ನೋ ಪರಿಶೀಲಿಸಿಕೊಳ್ಳಲಾದರೂ ನೆರವಾಗಬಹುದು.

     ಮೊದಲಿಗೆ ಆರಂಭದ ಎರಡು ಪ್ರಶ್ನೆಗಳಿಗೆ ಉತ್ತರಿಸಲು ಒಂದೇ ರೀತಿಯ ಸಮಸ್ಯೆ ಇದೆ. ಈ ಪ್ರಶ್ನೆಯಲ್ಲಿ ನಿಮ್ಮ ಕುತೂಹಲವೆಂದರೆ ವೇದಗಳ ಕಾಲದಲ್ಲಿ ಜಾತಿಪದ್ದತಿ ಇರಲಿಲ್ಲ ನಂತರ ಇದು ಹುಟ್ಟಿ ಭಾರತದಾದ್ಯಂತ (ಹೊರಗೂ) ಹರಡಡಿಕೊಂಡಿದ್ದು ಹೇಗೆ? ಎನ್ನುವುದು. ಈ ತೀರ್ಮಾನಕ್ಕೆ ಎಲ್ಲರಂತೆಯೇ ನೀವು ಅಂದಿನ “ಪಠ್ಯಾಧಾರಗಳನ್ನು” ಅವಲಂಬಿಸಿ ವೇದಗಳ ಕಾಲದಲ್ಲಿ “ಇಲ್ಲದ್ದು” (ಏಕೆಂದರೆ ವೇದಗಳಲ್ಲಿ ಇವುಗಳ ಉಲ್ಲೇಖ ಇಲ್ಲ) ನಂತರ ಹೇಗೆ “ಹುಟ್ಟಿತು” (ಏಕೆಂದರೆ ನಂತರದ ಪಠ್ಯಗಳಲ್ಲಿ ಇವುಗಳ ಉಲ್ಲೇಖ ಇದೆ) ಎನ್ನುವ ಪ್ರಶ್ನೆಯನ್ನು ಮಾಡ್ತೀರಿ. ನಿಮ್ಮ ಈ ನಿಲುವು ಒಂದು ಊಹೆಯನ್ನಾದರಿಸಿದೆ (ಇದು ಎಲ್ಲಾ ಚಿಂತಕ/ಇತಿಹಾಸಕಾರರ ಸಹಜವಾದ ಧೋರಣೆಯಂತೆಯೇ ಇದೆ) ಅದು ಒಂದು ಕಾಲದ “ಸಮಾಜ” ಆ ಕಾಲದ “ಪಠ್ಯ”ಗಳಿಂದ ತಿಳಿಯುತ್ತದೆ ಎನ್ನುವುದು! ಸಮಾಜ ಮತ್ತು ಪಠ್ಯಗಳ ನಡುವಣ ಈ ಸಂಬಂದವನ್ನು ಒಪ್ಪಬೇಕಾದರೆ ಈ ಕೆಳಗಿನ ಎರಡು ಸಾಧ್ಯತೆಗಳಲ್ಲಿ ಒಂದನ್ನಾದರೂ ನಾವು ಸಾಬೀತು ಮಾಡಲು ಸಾಧ್ಯವಾಗಬೇಕು.

     1. ಈ “ಪಠ್ಯ”ಗಳು ಸಮಾಜಶಾಸ್ತ್ರೀಯ ಪಠ್ಯಗಳು ಆಗಿರಬೇಕು: ಅಂದರೆ ಸಮಾಜವನ್ನು ಅಧ್ಯಯನಕ್ಕೆ ಒಳಪಡಿಸಿ ಸಮಾಜದಲ್ಲಿ ಏನಿದೆಯೋ ಅದನ್ನೇ ಪಠ್ಯಗಳಲ್ಲಿ ನಮೂದಿಸಿದ್ದಾರೆ. 2. ಪಠ್ಯಗಳಲ್ಲಿರುವಂತೆ ಬದುಕುವ ಸಂಸ್ಕೃತಿಗೆ ಈ ಜನರು ಸೇರಿದ್ದಾರೆ. ಅಂದರೆ ಪಠ್ಯಗಳು ಜನರು ಸಮಾಜದಲ್ಲಿ ಬದುಕುವ ಜನರ ಬದುಕುವ ಮಾರ್ಗದರ್ಶಿ ಸೂತ್ರಗಳಾಗಿವೆ. ಜನರು ಪಠ್ಯಗಳಂತೆಯೇ ಜನರು ಬದುಕಬೇಕು ಮತ್ತು ಬದುಕಿರುತ್ತಾರೆ. ಹಾಗಾಗಿ ಪಠ್ದಯಗಳನ್ನು ನೋಡಿದರೆ ಅಂದಿನ ಜನರ ಬದುಕಿದ ಸಮಾಜದ ಬಗ್ಗೆ ಸ್ಪಷ್ಟವಾಗಿ ಹೇಳಿಬಿಡಬಹುದು.

     1. ಮೊದಲನೆಯ ಸಾಧ್ಯತೆಯನ್ನು ಪರಿಶೀಲಿಸುವ. ವೇದಗಳಿಂದ ಹಿಡಿದು ಧರ್ಮಶಾಸ್ತ್ರಗಳಾದಿಯಾಗಿ ಸಮಾಜಶಾಸ್ತ್ರೀಯ ಪಠ್ಯಗಳೇ? ಅಂದರೆ ಇವು ಸಮಾಜವನ್ನು ಅಧ್ಯಯನ ಮಾಡಿ ಬರೆದ ಪಠ್ಯಗಳೇ? ಅಷ್ಟಕ್ಕೂ ಅಂದಿನವರಿಗೆ ಸಮಾಜವನ್ನು ಅಧ್ಯಯನ ಮಾಡಿ ಸಮಾಜದಲ್ಲಿರುವುದನ್ನೆ ಇದ್ದ ಹಾಗೆ, ನಡೆದಿದ್ದನ್ನೇ ನಡೆದ ಹಾಗೆ ಪಠ್ಯಗಳಲ್ಲಿ ನಮೂದಿಸುವ ಉದ್ದೇಶ ಮತ್ತು ಧೋರಣೆ ಎರಡು ಇದ್ದಿರಬೇಕು, ಅಲ್ವೇ? ಈ ಧೊರಣೆ ಮತ್ತು ಉದ್ದೇಶಗಳು ಭಾರತೀಯ ಪಂಡಿತರುಗಳ ಗ್ರಹಿಕೆಗೇ ಮೀರಿದ್ದು ಅನ್ನುವುದು ಕೇವಲ ನೂರು ವರ್ಷಗಳ ಹಿಂದೆ (1905) ದೇವಚಂದ್ರ “ರಾಜಾವಳಿ ಕಥೆ” ಬರೆಯಲ್ಪಟ್ಟ ರೀತಿ ಧೃಷ್ಟಾಂತ ಪಡಿಸುತ್ತದೆ. ಕರ್ನಲ್ ಮೆಕೆಂಜಿ ಮೈಸೂರು ಅರಸರ ಹಿಸ್ಟರಿ (ಅದು ನಿಜ ಹಿಸ್ಟರಿ ಅಂತ ಒತ್ತಿ ಹೇಳಿರುತ್ತಾನೆ) ಬರೆದು ಕೊಡವಂತೆ ದೇಶೀ ಪಂಡಿತ ದೇವಚಂದ್ರನಲ್ಲಿ ಕೇಳಿದಾಗ ಆತ ಜೈನಪುರಾಣದಂತೆ ‘ರಾಜಾವಳಿ ಕಥೆ’ಬರೆದು ಮೆಕೆಂಜಿಗೆ ನೀಡುತ್ತಾನೆ. ಮೆಕೆಂಜಿಗೆ ಈ ಪಂಡಿತರುಗಳಿಗೆ ಇದ್ದದ್ದನ್ನು ಇದ್ದ ಹಾಗೆ ಬರೆಯುವ ಗಂಧವೇ ಇಲ್ಲ ಎಂದು ಅದನ್ನು ತಿರಸ್ಕರಿಸುತ್ತಾನೆ. (ರಾಜಾರಾಮ ಹೆಗಡೆಯವರ ಗತಕಥನದಲ್ಲಿ ಅದರ ವಿವರಗಳಿವೆ) 19ನೇ ಶತಮಾನದ ಕೊನೆಯಲ್ಲಿಯೇ ಇದ್ದ ಹಾಗೆ ಬರಯಬೇಕು ಎಂದು ಒತ್ತಿ ಹೇಳಿದರೂ ನಮ್ಮ ಪಂಡಿತರುಗಳು ಬರೆಯೋದು ಕಲ್ಪಿತ ಪುರಾಣವನ್ನು ಹೀಗಿರಬೇಕಾದರೆ ಪ್ರಾಚೀನ ಕಾಲದ ಬರವಣಿಗೆಗಳ ಬಗ್ಗೆ ಹೇಳುವುದೇ ಬೇಡ. ಅದರಲ್ಲೂ ನಾವು ಈ ಪಠ್ಯಗಳಿಂದ ಮಾಡುವ ತೀರ್ಮಾನದ ವ್ಯಾಪ್ತಿ ವಿಶಾಲವಾದುದು. ಇಡೀ ಅಖಂಡ ಭಾರತದಲ್ಲಿದ್ದಿರಬಹುದಾದ ಸಾಮಾಜಿಕ ರಚನೆಯ ಬಗ್ಗೆ ಮಾತನಾಡುತ್ತಿದ್ದೇವೆ. ಈ ವ್ಯಾಪ್ತಿಯಲ್ಲಿ ಇದ್ದ ಸಮಾಜದ ಬಗ್ಗೆ ಆ ಪಠ್ಯಗಳನ್ನು ಬರೆಯಲಾಗಿದೆ ಎನ್ನುವುದನ್ನು ಊಹಿಸುವುದೂ ಅಸಾಧ್ಯ!

     ಇನ್ನೂ 21ನೇ ಶತಮಾನದ ಇಂದು ಇಷ್ಟೆಲ್ಲಾ ಸಮಾಜವಿಜ್ಞಾನದ ಶಾಖೆಗಳನ್ನು ಬೆಳಸಿಕೊಂಡು ವೈಜ್ಞಾನಿಕ ಸಾಮಾಜಿಕ ಸಂಶೋಧನೆಗಳ ವೈಧಾನಿಕತೆಗಳನ್ನು ಬೆಳಸಿಕೊಂಡು ಸಮಾಜವನ್ನು ವಿವರಿಸಬೇಕು ಅನ್ನುವ ಉದ್ದೇಶ/ಧೋರಣೆ ಎರಡನ್ನು ಇಟ್ಟುಕೊಂಡು ಬರೆದಿರುವ ನಮ್ಮ ಸಮಾಜಶಾಸ್ತ್ರೀಯ ಪಠ್ಯಗಳೇ ಇಂದು ನಮ್ಮ ನಡುವೆ ಭಾರತದಾದ್ಯಂತ ಅಸ್ತಿತ್ವದಲ್ಲಿರುವ ಸಾಮಾಜಿಕ ಗುಂಪುಗಳ ಸ್ವರೂಪಗಳೇನು ಎನ್ನುವ ಕುರಿತು ವೈಜ್ಞಾನಿಕ ಜ್ಞಾನ ಕೊಡುವಲ್ಲಿ ದಯನೀಯ ವಿಫಲತೆಯನ್ನು ಕಂಡಿವೆ. ಇಡೀ ಭಾರತದಲ್ಲಿರುವ ಎಲ್ಲಾ ಸಮುದಾಯಗಳನ್ನು ‘ಜಾತಿ’ (caste) ಎನ್ನುವ ಒಂದು ವರ್ಗೀಕರಣದಲ್ಲಿ ಗುರಿತಿಸಬಹುದೇ ಎನ್ನುವ ವಿಚಾರವನ್ನೇ ಇಂದಿನ ಸಮಾಜಶಾಸ್ತ್ರಜ್ಞರು ಎತ್ನೋಗ್ರಾಫ್ ಅಧ್ಯಯನಕಾರರು ಒಪ್ಪುವುದಿಲ್ಲ. ಇದುವರೆಗಿನ ಅಧ್ಯಯನಗಳು ಭಾರತೀಯ ಸಮಾಜದ ಕುರಿತು ಯಾವ ವೈಜ್ಞಾನಿಕ ಜ್ಞಾನವನ್ನೂ ಕೊಡುವುದಿಲ್ಲ ಬದಲಿಗೆ ಓರಿಯಂಟಲಿಸ್ಟ್/ವಸಾಹತುಶಾಹಿ ಅನುಭವಗಳ ವಿಕ್ಷಿಪ್ತ ರೂಪಗಳಷ್ಟೇ ಎನ್ನುವುದು ನಮ್ಮ ತಂಡದ ವಾದವೂ ಆಗಿದೆ. ಹೀಗೆ ಇಂದಿನ ಸಮಾಸಶಾಸ್ತ್ರೀಯ ಪಠ್ಯಗಳನ್ನೇ ವೈಜ್ಞಾನಿಕ ಸಮಾಜಶಾಸ್ತ್ರೀಯ ಪಠ್ಯಗಳೆಂದು ಒಪ್ಪಲು ಸಾಧ್ಯವಿಲ್ಲದಿರುವಾಗ ಈ ಧೋರಣೆ. ಉದ್ದೇಶ ಎರಡೂ ಇಲ್ಲದೆ ಬರೆದ ಪಠ್ಯಗಳನ್ನು ಓದಿ ಅಂದಿನ ಸಮಾಜದ ರಚನೆಗಳ ಬಗ್ಗೆ “ಜಾತಿಪದ್ದತಿ” ಇರಲಿಲ್ಲ ಅಥವಾ ಇತ್ತು ಅನ್ನುವ ತೀರ್ಮಾನ ಮಾಡಲು ಸಾಧ್ಯವೇ?

     2. ಇನ್ನೂ ಈ ಎರಡನೇ ಪ್ರಶ್ನೆ ನೇರವಾಗಿ ಇಲ್ಲಿ ಮನುಸ್ಮೃತಿಯನ್ನಿಟ್ಟುಕೊಂಡು ಚರ್ಚಿಸುತ್ತಿರುವ ವಿಚಾರಕ್ಕೇ ಸಂಬಂದಿಸಿದ್ದು. ಅಂದಿನ ಕಾಲದ ಜನರ ಸಾಮಾಜಿಕ ಜೀವನ ಹೇಗಿತ್ತು ಎನ್ನುವುದನ್ನು ಪಠ್ಯದ ಆಧಾರದಿಂದ ತಿಳಿಯಲು ಸಾಧ್ಯವಿಲ್ಲ ಎಂದು ಮೇಲಿನ ತೀರ್ಮಾನವಾಗಿದೆ. ಹಾಗಿದ್ದರೆ ಪಠ್ಯದ ಮಾರ್ಗಸೂಚಿಗಳಂತೆಯೇ ಜನರು ಅಂದು ಬದುಕಿದ್ದರೇ ಇಲ್ಲವೇ ಎನ್ನುವುದನ್ನು ತಿಳಿಯುವ ಬಗೆ ಹೇಗೆ? ಈ ವಿಚಾರ ಮೇಲ್ನೋಟಕ್ಕೆ ಹೇಗೆ ಬದುಕಿದ್ದರು ಎನ್ನುವ ಸಾಮಾಜಿಕ ಸ್ಥಿತಿಯ ಬಗ್ಗೆ ಇದೆ ಅನಿಸಿದರೂ ಮೂಲತಃ ಇದು ಬದುಕುವ ಕ್ರಮಕ್ಕೆ ಸಂಬಂದಿಸಿದ್ದು ಎಂದು ಹೇಳಬಹುದು. ಜಗತ್ತಿನಲ್ಲಿ ವ್ಯವಹರಿಸುವ ಜೀವನದ ಸ್ವರೂಪವನ್ನು ಇದು ಸೂಚಿಸುತ್ತದೆ. ಹಾಗಾಗಿ ಇಂದಿನ ಭಾರತೀಯರ ಜೀವನದ ಸ್ವರೂಪವನ್ನೇ ಸೂಚಕವಾಗಿ (Hueristic) ತೆಗೆದು ಕೊಂಡು ಇದೇ ರೀತಿಯ ಬದುಕುವ ಕ್ರಮವೇ ಅಂದಿನಿಂದ ಇದ್ದಿರಬೇಕು ಅನ್ನುವ ಊಹೆ (ಇದು ಸರಿಯಾದ ಊಹೆಯೇ ಎನ್ನುವು ಮುಂದೆ ತೀರ್ಮಾನವಾಗವುದು) ಯೊಂದಿಗೆ ಮುಂದೆ ಹೋಗುವ (ಅಷ್ಟಕ್ಕೂ ಪ್ರಾಚೀನ ಕಾಲದಿಂದ ಇಂದಿನ ಕಾಲದ ವರಗೆ ಭಾರತದ ಬಗ್ಗೆ ಚಿತ್ರಿಸುವ ಎಲ್ಲಾ ಚಿಂತಕರ ಒಂದು ಸಾಮಾನ್ಯ ಸಂಗತಿ ಎಂದರೆ ಸಾವಿರಾರು ವರ್ಷಗಳಿಂದ ಭಾರತೀಯ ಸಮಾಜ ಚಲನೆಯೇ ಇಲ್ಲದ ಸ್ಥಗಿತ ಸಮಾಜವಾಗಿತ್ತು ಎನ್ನುವುದು, ಇದನ್ನು ಓರಿಯಂಟಲಿಸ್ಟ್, ಸೋಸಿಯಲಿಸ್ಟ್, ಮಾರ್ಕ್ಸ್ ಸಿಸ್ಟ್, ಫೆಮನಿಸ್ಟ್ ಎಲ್ಲರೂ ಹೇಳುತ್ತಾರೆ 🙂 ) ಇಲ್ಲಿ ಮನುಸ್ಮೃತಿಯ ಚರ್ಚೆಯಲ್ಲಿ ನಮ್ಮ ವಾದವೆಂದರೆ ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಪಠ್ಯಗಳನ್ನು ಪವಿತ್ರಗ್ರಂಥಗಳು (ಬೈಬಲ್ ಖುರಾನ್) ಎಂಬಂತೆ ಭಾವಿಸಿ ಅದರಲ್ಲಿರುವಂತೆಯೇ ಸಾಮಾಜಿಕ ಜೀವನದಲ್ಲಿ ತೊಡಗಿಕೊಳ್ಳುವ ಕ್ರಮ ಇಲ್ಲ ಎನ್ನುವುದು. ಹಾಗಾಗಿಯೇ ಮನುಸ್ಮೃತಿಯಲ್ಲಿ ಏನಾದರೂ ಬರೆದಿರಲಿ ಅದು ಸಾಮಾಜಿಕ ಕಟ್ಟುಕಟ್ಟಳೆಯ ನಿಯಮದರೀತಿಯಲ್ಲಿ ಕೆಲಸಮಾಡಿತ್ತು ಎನ್ನುವುದು ಆಧಾರ ರಹಿತ ವಾದವಾಗಿದೆ.

     ಹಾಗಿದ್ದರೆ ‘ಪಠ್ಯ’ದಲ್ಲಿ ಇದ್ದಹಾಗೆ ಮತ್ತು’ ಸಮಾಜ’ ಇರುತ್ತದೆ ಎನ್ನುವ ಸಾಮಾನ್ಯ ತಿಳುವಳಿಕೆಯೊಂದಿಗೆ ನಮ್ಮ ಬೌದ್ದಿಕ ವಲಯ ಏಕೆ ಎಲ್ಲಾ ಚಿಂತನೆಗಳನ್ನೂ ಇದುವರೆಗೂ ಸಮಾಜವಿಜ್ಞಾನವಲಯದಲ್ಲಿ ಮಾಡಿಕೊಂಡು ಬರಲಾಗುತ್ತಿದೆ ಎನ್ನುವುದಕ್ಕೆ ಭಾರತೀಯ ಸಮಾಜ ವಿಜ್ಞಾನದ ಮೂಲವಾದ “ಓರಿಯಂಟಲಿಸಂ” ಮೂಲವಾದ ಪಶ್ಚಿಮ ಸಂಸ್ಕೃತಿಯನ್ನು ಅರ್ಥ ಮಾಢಿಕೊಳ್ಳಬೇಕಾಗುತ್ತದೆ. ಇಲ್ಲಿ ಬಾಲು ವಾದವನ್ನು ಸರಳವಾಗಿಸುವುದಾದರೆ, ಪಶ್ಚಿಮ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ಕ್ರಿಶ್ಚಿಯಾನಿಟಿಯ ಪ್ರಭಾವದಡಿಯಲ್ಲಿ ರೂಪುಗೊಂಡದೆ. ಸ್ಥೂಲವಾಘಿ ಕ್ರಿಶ್ಚಿಯಾನಿಟಿಯ ಪ್ರಕಾರ ಜನರು ಈ ಜಗತ್ತಲ್ಲಿ ಗಾಡ್ ಇಚ್ಚೆಯಂತೆ/ವಾಣಿಯಂತೆ ಅಂದರೆ ಆತ ಹೇಗೆ ಬದುಕಬೇಕೆಂದು ಹೇಳಿದ್ದಾನೋ ಹಾಗೆ ಬದುಕಿದರೆ ಮಾತ್ರ ಅವರಿಗೆ ಸಾಲ್ವೇಶನ್ ಸಿಗುತ್ತದೆ.
     ಗಾಡ್ ನ ವಾಣಿಯಂತೆ ಬದುಕುವುದು ಹೇಗೆ?
     ಗಾಡ್ ನ ವಾಣಿ ಅವರ ಪ್ರಕಾರ ಎಲ್ಲಿದೆ?
     ಗಾಡ್ ನ ವಾಣಿ ಬೈಬಲ್ಲಿನಲ್ಲಿದೆ. ಅಂದರೆ ಬೈಬಲ್ಲಿನ ಪ್ರಕಾರ ಬದುಕಿದರೆ ಗಾಡ್ ನ ಸಾಲ್ವೇಶನ್ ಪ್ರಾಪ್ತಿಯಾಗುತ್ತದೆ. ಹಾಗಾಗಿ ಬೈಬಲ್ ಅನ್ನುವ “ಪಠ್ಯ” ಕ್ರಿಶ್ಚಿಯನ್ನರ ಜೀವನದ “ಮಾರ್ಗದರ್ಶಿ” ಸೂತ್ರವಾಗುತ್ತದೆ. ಹೀಗೆ ‘ಪಠ್ಯ’ದಂತೆ ‘ಸಮಾಜ’ ಎನ್ನುವುದು ಯೂರೋಪಿಯನ್ ಸಂಸ್ಕೃತಿಯಲ್ಲಿ ಸಹಜ ತಿಳುವಳಿಕೆ. ಈ ನೆಲೆಯಲ್ಲಿಯೇ ಭಾರತೀಯರನ್ನು ಅರ್ಥೈಸಲು ಇಲ್ಲಿಯ ಮಾರ್ಗದರ್ಶಿ ಪಠ್ಯಗಳನ್ನು ಅವರು ಹುಡುಕಿಹೊರತೆಗೆದರು. ‘ಮನುಸ್ಮೃತಿ’ಅದರೊಲ್ಲೊಂದು!

     ಈಗ ಭಾರತೀಯರೂ ಯೂರೋಪಿಯನ್ನರಂತೆ ಪಠ್ಯಗಳನ್ನು ತಮ್ಮ ಜೀವನದ ಮಾರ್ಗದರ್ಶಿ ಸೂತ್ರಗಳಂತೆ ಭಾರತೀಯ ಸಂಸ್ಕೃತಿಯವರು ಪಠ್ಯಗಳಲ್ಲಿರುವ ಸೂತ್ರಗಳಂತೆ ಬಳಸುವ ಸಂಸ್ಕೃತಿಯವರೇ ಆಗಿದ್ದ ಪಕ್ಷದಲ್ಲಿ ಈ ಪಠ್ಯಗಳು “ಸಮಾಜಶಾಸ್ತ್ರೀಯ” ಪಠ್ಯಗಳಂತೆ ಭಾರತವನ್ನೆಲ್ಲಾ ಅಧ್ಯಯನ ಮಾಡಿ ಬರೆಯದೇ ಇದ್ದರೂ ಅವು ಅಂದಿನ ಸಮಾಜವನ್ನೆ ವಿವರಿಸುತ್ತವೆ ಎನ್ನುವ ತೀರ್ಮಾನಕ್ಕೆ ಬಂದು ಅಂದಿನ “ಸಮಾಜ” ಅಂದಿನ ಪಠ್ಯದಂತೆ ಇದೆ ಅಥವಾ ಇರಬಹುದು ಎನ್ನುವ ತೀರ್ಮಾನಕ್ಕೆ ಬರುಬಹುದಿತ್ತು! ಆದರೆ ಇದು ವಾಸ್ತವಕ್ಕೆ ದೂರ.

     ಹೀಗಾಗಿ ಜಾತಿಪದ್ದತಿಯ ಬಗ್ಗೆ ವೇದಗಳ ಕಾಲದಲ್ಲಿ ಇದ್ದ ಬಗ್ಗೆ ನಂತರ ಹುಟ್ಟಿದ ಬಗ್ಗೆ ನಿಮ್ಮ ಪ್ರಶ್ನೆಗೆ ಉತ್ತರವಾಗಿ ಬರೀ speculation ಗಳನ್ನು ಮಾಡುವುದನ್ನು ಬಿಟ್ಟು ವೈಜ್ಞಾನಿಕವಾಗಿ ಕಂಡುಕೊಳ್ಳುವ ಸಾಧ್ಯತೆ ಇದೆಯೇ?

     ಇನ್ನೂ ಈ ಪ್ರಶ್ನೆಗಳು ಏಕೆ ಅಷ್ಟು ಮುಖ್ಯ? ಅಂದರೆ ಈ ಪ್ರಶ್ನೆಗಳಿಗೆ ಉತ್ತರಿಸದೆ ಭಾರತೀಯ ಸಮಾಜ,ಸಂಸ್ಕೃತಿ, ಜಾತಿ, ಅಸ್ಪೃಶ್ಯತೆಯ ಆಚರಣೆಗಳ ಬಗ್ಗೆ ವೈಜ್ಞಾನಿಕ ವಿವರಣೆ ಬೆಳೆಸಲು ಸಾಧ್ಯವಿಲ್ಲ ಎಂದಾದರೆ ಮಾತ್ರ ಇದರ ಬಗ್ಗೆ ಬಹಳ ತಲೆಕೆಡಿಸಿಕೊಳ್ಳಲೇ ಬೇಕಾಗುತ್ತದೆ. ನಮ್ಮ ಪ್ರಕಾರ ಇಂದು ನಮ್ಮ ಸಮಾಜ ಮತ್ತು ಈ ಜಾತಿಗಳು ಇರುವ ರೀತಿಯನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಅವು ಹೇಗೆ ಹುಟ್ಟಿತು (ಎಂದು ಕಂಡುಹಿಡಿಯಲು ಸಾಧ್ಯವೇ ಇಲ್ಲದ) ಪ್ರಶ್ನೆ ಅಷ್ಟು ಮುಖ್ಯವೇ ಇಲ್ಲ!

     ಉತ್ತರ
     • valavi
      ಸೆಪ್ಟೆಂ 29 2014

      ಬಹಳ ವಿವರವಾಗಿ ವಿವರಿಸಿದ್ದಕ್ಕೆ ತುಂಬಾ ಅಭಿನಂದನೆಗಳು ಷಣ್ಮುಖ ಅವರೆ. ನಿಮ್ಮ ತಲೆಯನ್ನು ಇನ್ನೂ ಸ್ವಲ್ಪ ತಿನ್ನುತ್ತಿದ್ದೇನೆ. ಬೇಸರಿಸಬೇಡಿ. ವೇದಕಾಲದಲ್ಲಿ ಜಾತಿಯ ಕಟ್ಟು ಪಾಡುಗಳು ಇರಲಿಲ್ಲ ಎಂದು ಪಠ್ಯಗಳನ್ನಾಧರಿಸಿ ಹೇಳಿದ್ದೀರಿ. ಆದರೆ ಭಾರತೀಯ ಸಮಾಜ ಆ ಪಠ್ಯಗಳನ್ನಾಧರಿಸಿ ನಿತ್ಯ ಜೀವನ ಮಾಡುತ್ತಿರಲಿಲ್ಲ. ಎಂದಿರುವಿರಿ. ಆದರೆ ವಸಿಷ್ಟರು ಮಾದಿಗ ಹೆಣ್ಣನ್ನು ಮದುವೆಯಾಗಿದ್ದು, ದ್ರೋಣರ ಅಪ್ಪ ಬಭಾರದ್ವಾಜರು ಕುಂಬಾರ ಹೆಣ್ಣಿನಲ್ಲಿ ಜನಿಸಿದ್ದು, ಕೃಪ ಮತ್ತು ಕೃಪಿಯರು ಬೇಡರ ಹೆಣ್ಣಿನಲ್ಲಿ ಜನಿಸಿದ್ದು, ಪಾಂಡವರ ಕೌರವರ ಮೂಲಪುರುಷರು ಮೀನುಗಾರಳಾದ ಸತ್ಯವತಿಯಲ್ಲಿ ಜನಿಸಿದ್ದು, ವ್ಯಾಸರೂ ಆಕೆಯಲ್ಲಿ ಹುಟ್ಟಿದ್ದು ಇವೆಲ್ಲ ಏನನ್ನು ತೋರಿಸುತ್ತವೆ? ಪ್ರಾಚೀನ ಭಾರತದಲ್ಲಿ ಜಾತಿ ಪದ್ಧತಿಯ ಆಚರಣೆಗಳು ಕಟ್ಟು ನಿಟ್ಟಾಗಿ ಆಚರಿಸಲ್ಪಡುತ್ತಿರಲಿಲ್ಲಾ ಎಂದೇ ಅಲ್ಲವೆ? ಇವೇನು ಪಠ್ಯಗಳಲ್ಲಿ ಹೇಳಿದ ಅಂಶಗಳಲ್ಲ. ನಿರ್ದೇಶಿತ ಅಂಶಗಳೂ ಅಲ್ಲವಲ್ಲಾ? ಇದರ ಅರ್ಥವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ? ಹೀಗೆ ಅನ್ಯ ಜಾತಿಯವರನ್ನು ಮದುವೆಯಾದರೂ ಇವರೆಲ್ಲರ ಬಗ್ಗೆ ಯಾರಿಗೂ ಕೆಟ್ಟ ಭಾವನೆಗಳೂ ಇಲ್ಲ. ಇಂಥ ಎಷ್ಟೋ ಉದಾಹರಣೆಗಳಿವೆ. ಪುಲಸ್ತ್ಯರ ಮಗ ರಾವಣನ ಅಪ್ಪ ರಾಕ್ಷಸ ಕನ್ನೆಯನ್ನು ಮದುವೆಯಾಗಿದ್ದ. ಇರಲಿ ಅಂದಮೇಲೆ ಪ್ರಾಚೀನ ಕಾಲದಲ್ಲಿ ಜಾತಿ ಕಟ್ಟು ಪಾಡುಗಳು ಸಡಿಲವಾಗಿದ್ದವು ಎಂಬ ನನ್ನ ಮಾತು ಹೇಗೆ ತಪ್ಪೆನ್ನುವಿರಿ?

      ಉತ್ತರ
      • ಷಣ್ಮುಖ
       ಸೆಪ್ಟೆಂ 29 2014

       1.ನೀವು ಪುರಾಣ ಪುರುಷರನ್ನು ಚಾರಿತ್ರಿಕ ವ್ಯಕ್ತಿಗಳನ್ನಾಗಿಸುವ ಫುಲೆಯಂತವರ ತಪ್ಪನ್ನೇ ಮಾಡುವಿರಿ. ಕಥೆ /ಪುರಾಣಗಳು ಸತ್ಯವೂ ಅಲ್ಲದ ಸುಳ್ಳೂ ಅಲ್ಲದ ಸಂಗತಿಗಳು. ಅಂದರೆ ಆ ಘಟನೆಗಳು ಹೀಗೆಯೇ ನಡೆದವು ಎಂದಲ್ಲ! ಬದಲಿಗೆ ಮಾನವ ಸಂಬಂದಗಳನ್ನು ಅವರು ಹೇಗೆಲ್ಲಾ ನೋಡುವ ಸಾದ್ಯೆತೆಯನ್ನು ಮುಂದಿಟ್ಟಿದ್ದರು ಎನ್ನುವುದಷ್ಟೆ ಆ ಕಥೆ/ಪುರಾಣಗಳಿಂದ ತಿಳಿಯುವುದು! ಸಾಮಾಜಿಕ ವಾಸ್ತವ.ೆ ಘಟನಗಳನ್ನಲ್ಲ! ವಾಸ್ತವ ವ್ಯತಿರಿಕ್ತವಾಗಿಯೂ ಇದ್ದಿರಬಹುದು ಇದೇನೇ ಇದ್ದರೂ ಇರಬಹುದು ಇಲ್ಲದೆಯೂ ಇರಬಹುದು ಎನ್ನುವ speculation ಗಳನ್ನು ಮಾಡಬಹುದೇ ವಿನಃ ಅವರ ಜಗತ್ತು ಹಾಗೆಯೇ ಇದ್ದಿರಬೇಕು ಎಂದು ಖಚಿತವಾಗಿ ಹೇಳಲಾಗದು. ಸೋ ವೈಜ್ಞಾನಿಕ ವಾಗಿ ಏನನ್ನುೂ ಹೇಳಲಾಗದು.

       2. ವೇದಗಳಕಾಲದಲ್ಲಿ ಜಾತಿಯ ಕಟ್ಟುಪಾಡುಗಳಲ್ಲಿ ಇರಲಿಲ್ಲ ಎನ್ನಲಿಕ್ಕೆ ಮೇಲಿನಂತೆ ಪುರಾಣಗಳನನ್ನು ಗ್ರಹಿಸುವ ತಪ್ಪು ಒಂದೆಡೆಯಾದರೆ ಎರಡನೆಯದು ಈ ರೀತಿಯ ತಪ್ಪೆಂದರೆ ವಿಭಿನ್ನ ಜಾತಿಗಳ ನಡುವೆ ಮಧುವೆ ಆಗಿನ ಪುರಾಣಗಳಲ್ಲಿ ನಡೆದವು ಎನ್ನುವುದನ್ನು ಆಧಾರವಾಗಿ ತೆಗೆದುಕೊಳ್ಳುವಾಗ ಆ ಕಾಲದ ನಂತರ ಈ ರೀತಿಯ ಮಧುವೆಗಳಿಗೆ ಅವಕಾಶವಿರಲಿಲ್ಲ ಎನ್ನುವ ಕಲ್ಪನೆಯನ್ನೂ ಮಾಡುತ್ತದೆ. ಇದನ್ನು ಧೃಷ್ಟಾಂತಪಡಿಸದೆ ಈ ಹೇಳಿಕೆಗೆ ಮಹತ್ವವಿಲ್ಲ. ವಾಸ್ತವದಲ್ಲಿ ಎಲ್ಲಾ ಕಾಲದಲ್ಲೂ ವಿಭಿನ್ನ ಜಾತಿಗಳ ನಡುವೆ ಮಧುವೆಯಾಗಿರುವ ಕಥೆ,ಪುರಾಣ, ಕಾವ್ಯಗಳಂತೂ ಲಭ್ಯವಿದ್ದೇ ಇದೆ. (ವಚನಕ್ರಾಂತಿಯ ಮಧುವೆಯ ಕಥೆ ಈ ವಾಸ್ತವವನ್ನು ನಗಣ್ಯವಾಗಿಸುತ್ತದೆ ಅಷ್ಟೆ) ಇಂದಿಗೂ ಅದು ನಡೆದೇ ಇದೆ. ವೆದಕಾಲದಲ್ಲಿ ಮಾತ್ರ ಈ ಅವಕಾಶವಿತ್ತು, ಉಳಿದ ಕಾಲಘಟ್ಟದಲ್ಲಿ ಹೀಗೆ ಇರಲಿಲ್ಲ ಎನ್ನುವ ಕಥೆ ಅದೇ “ವೈಧಿಕ true religion ನಂತರ ಕರಪ್ಟ್ ಆಗಿ ಬ್ರಾಹ್ಮಣಶಾಹಿ ಜಾತಿವ್ಯವಸ್ಥೆ ಹುಟ್ಟಿನ” ಕುರಿತ ಕಲೋನಿಯಲ್ ಸ್ಟಿರಿಯೋಟೈಪ್ ಗ್ರಹಿಕೆಯ ಭಾಗವಾಗಿ ಅಷ್ಟೆ ಅರ್ಥಪಡೆಯುತ್ತದೆ. ಭಾರತ ಸಂಪ್ರದಾಯದ ಕುರಿತ ನಮ್ಮ ವಾದಗಳು ಸರಿಯಾಗಿದ್ದ ಪಕ್ಷದಲ್ಲಿ ಭಾರತದ ಜಾತಿ/ಸಮುದಾಯಗಳು ಸ್ವಲ್ಪವೂ ಚಲನೆಯಿಲ್ಲದ ರಿಜಿಡ್ ರಚನೆ ಆಗಿರಲು ಸಾಧ್ಯವಿಲ್ಲ. ಈ ರಿಜಿಡಿಟ್ ರಿಲಿಜನ್ನುಗಳಿಗೆ ವಿಶಿಷ್ಟವಾದುದೇ ವಿನಃ ಸಂಪ್ರದಾಯಗಳಿಗಲ್ಲ flexible ಆಗಿರುವುದೆೇ ಸಂಪ್ರದಾಯಗಳ ಸ್ವಭಾವ! ಸೋ ವಿಭಿನ್ನ ಜಾತಿಗಳ ನಡುವಣ ಮಧುವೆ ಎಂದಿಗೂ ಇದ್ದೇ ಇತ್ತು. ಅಂದು ಹೆಚ್ಚಿತ್ತು ಇಂದು ಕಡಿಮೆಯಾಗಿದೆ ಅನ್ನುವದನ್ನು ತೋರಿಸಲು (ಅಂದು ಎಷ್ಟರ ಪ್ರಮಾಣದಲ್ಲಿ ನಡೆದಿರಬಹುದು ಎನ್ನುವ ಅಂಕಿಸಂಖ್ಯೆಯ ಅನುಪಸ್ತಿತಿಯಲ್ಲಿ ) ಸಾಧ್ಯವೇ ಇಲ್ಲ. ಸೋ ಇದೂ ಊಹೆಯಷ್ಟೆ!

       ಉತ್ತರ
       • ಬಸವವೇ ಸತ್ಯ ಬಸವವೇ ನಿತ್ಯ
        ಸೆಪ್ಟೆಂ 29 2014

        ಷಣ್ಮುಖ ಅವರೇ, ನಿಮ್ಮ ವಾದದ ಪ್ರಕಾರ ಚರಿತ್ರೆಯ ಯಾವುದೇ ಘಟ್ಟದ ಸಾಮಾಜಿಕ ಪರಿಸ್ಥಿತಿ ಬಗ್ಗೆ ಆ ಘಟ್ಟದ ಸಾಹಿತ್ಯ ಕೃತಿಗಳಿಂದ ಏನನ್ನೂ ಖಚಿತವಾಗಿ ಹೇಳಲಾಗುವುದಿಲ್ಲ. ಅಂದ ಮೇಲೆ ಭೈರಪ್ಪನವರ ಕಾದಂಬರಿಗಳ ಆಧಾರದ ಮೇಲೆ ನಮ್ಮ ಕಾಲದ ಸಾಮಾಜಿಕತೆಯ ಬಗ್ಗೆ ಏನನ್ನೂ ಹೇಳಲು ಆಗದು. ಅರ್ಥಾತ್ ಭೈರಪ್ಪನವರ ಕೃತಿಗಳಿಗೆ ಇರುವ ಮೌಲ್ಯ ಕೇವಲ ತತ್ ಕ್ಷಣದ ರಂಜನೀಯತೆ.

        ಉತ್ತರ
       • ಷಣ್ಮುಖ
        ಸೆಪ್ಟೆಂ 29 2014

        ಅಂದ ಹಾಗೆ ” ವೇದಗಳ ಕಾಲದಲ್ಲಿ ಜಾತಿಯ ಕಟ್ಚುಪಾಡುಗಳು ಇರಲಿಲ್ಲ” ಎಂದು ನಾನು ಹೇಳಿಲ್ಲ. ಬದಲಿಗೆ, ಕಟ್ಟುಪಾಡುಗಳ ಇತ್ತೇ ಇಲ್ಲವೇ ಎಂದು ತೀರ್ಮಾನವಾಗಿ ಹೇಳಲು ಅಂದಿನ ಪಠ್ಯಗಳನ್ನು ಆದರಿಸಿ ಹೇಳಲು ಸಾಧ್ಯವಿಲ್ಲ.

        ಮತ್ತೊಂದು ಮಾತು. ನಮ್ಮ ಪ್ರಾಚೀನ ಪಠ್ಯಗಳು ಹೆಚ್ಚು ಕಡಿಮೆ 18-19ನೆೇ ಶತಮಾನದ ವರೆಗೂ ನಿರಂತರವಾಗಿ ಬರೆಯಲ್ಪಡುತ್ತಾ/ಸೇರಿಸಲ್ಪಡುತ್ತಲೇ ಇತ್ತು. ಹಾಗಾಗಿ ಯಾವ ಭಾಗ ಯಾವಾಗ ಸೇರಿಸಲ್ಪಟ್ಟಿತು ಎನ್ನುವುದು ಯಾರಿಗೂ ಗೊತ್ತಿಲ್ಲ! ಮತ್ತು ಪುರಾಣ ಪ್ರಜ್ಞೆಯ ಸ್ವರೂಪವೇ ಅಂತದ್ದು. ಅದು ಸಂಪೂರ್ಣವಾಗಿ ಆಯಾ ಕಾಲದ ವರ್ತಮಾನಕ್ಕೆ ಸಂಬಂದಿಸಿರದ ಯಾವುದೋ ಹಿಂದಿನ ಕಾಲದ ಚರಿತ್ರೆಯಂತಲ್ಲಾ ಅದು! ಪ್ರತಿಯೊಂದು ಕಾಲದಲ್ಲೂ ಹೊಸಹೊಸ ರೂಪಗಳನ್ನು ಪಡೆಯುತ್ತಾ ರೂಪಾಂತರವಾಗುತ್ತಾ ಆಯಾಕಾಲದ ವರ್ತಮಾನದ ಭಾಗವೆೇೆಿ ಆಗರುತ್ತದ. ಅಂದಿನ ದುೂರದರ್ಸನದ ಮಹಾಭಾರತಕ್ಕೂ ಇಂದಿನ ಸ್ಟಾರ್ ಟಿವಿಯ ಇದಿನ ಟಿವಿಯ ಮಹಾಭಾರತಕ್ಕೂ ಇರುವ ವ್ಯತ್ಯಾಸವನ್ನೇ ನೋಡಿ 🙂

        ಉತ್ತರ
        • ಬಸವವೇ ಸತ್ಯ ಬಸವವೇ ನಿತ್ಯ
         ಸೆಪ್ಟೆಂ 30 2014

         “ಕಟ್ಟುಪಾಡುಗಳ ಇತ್ತೇ ಇಲ್ಲವೇ ಎಂದು ತೀರ್ಮಾನವಾಗಿ ಹೇಳಲು ಅಂದಿನ ಪಠ್ಯಗಳನ್ನು ಆದರಿಸಿ ಹೇಳಲು ಸಾಧ್ಯವಿಲ್ಲ.”

         ಇದು ನಿಮ್ಮ ಗುಂಪಿನ ಸಂಶೋಧಕರ ಅಭಿಪ್ರಾಯ. ಆದರೆ ಎಲ್ಲಾ ಸಂಶೋಧಕರೂ ಇದೇ ಅಭಿಪ್ರಾಯವನ್ನು ಹೊಂದಿಲ್ಲ. ಪಶ್ಚಿಮದಲ್ಲಿ ಮಿಥಾಲಾಜಿ ಎಂಬ ದೊಡ್ಡ ಅಧ್ಯಯನ ಕ್ಷೇತ್ರವೇ ಇದೆ. ಪೌರಾಣಿಕ ಕೃತಿಗಳಿಂದ ಇತಿಹಾಸವನ್ನು ಕಟ್ಟುವ ವೈಜ್ಞಾನಿಕ ಕೆಲಸವನ್ನು ಮಿಥಾಲಾಜಿ ಮಾಡುತ್ತಿದೆ. ಭಾರತದ ಮಟ್ಟಿಗೆ ಮಿಥ್ ಗಳೆಂದರೆ ವೆದಪುರಾಣಗಳು. ಅವುಗಳಲ್ಲಿ ಭಾರತದ ಜನಸಂಸ್ಕ್ರುತಿಯ ಚಿತ್ರಣವಿದೆ. ಮೆಜಿಕಲ್ ರಿಯಾಲಿಸಂ ತರಹದ ಚಿತ್ರಣ. ಆದರೆ ಅದರಿಂದ ವಾಸ್ತವಾಂಶವನ್ನ ವೈಜ್ಞಾನಿಕವಾಗಿ ಕಂಡು ಹಿಡಿಯಬಹುದು.

         ಅನನ್ಯ ಸಂಸ್ಕೃತಿ ಚಿಂತಕಿ ವಸು ಮಳಲಿ ಅವರು ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರೆದ ಅಂಕಣ ಲೇಖನದಲ್ಲಿ ಏನು ಹೇಳಿದ್ದಾರೆ ನೋಡಿ:

         “ನಮ್ಮ ನಾಡಿನ ಚರಿತ್ರೆ ಪುರಾಣಗಳಲ್ಲಿ ಹುದು­ಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಡಿ.ಡಿ. ಕೊಸಾಂಬಿ, ರೊಮಿಲಾ ಥಾಪರ್, ದೇವಿಪ್ರಸಾದ್ ಚಟ್ಟೋ­ಪಾ­ಧ್ಯಾಯ, ವಾಶ್‌ ಎಡ್ವರ್ಡ್‌ ಹೇಲ್ ಮುಂತಾದ ವಿದ್ವಾಂಸರು ಅವುಗಳನ್ನು ಅರ್ಥ­ಮಾಡಿ­ಕೊಡುವ ವಿಧಾನ­ಗ­ಳನ್ನು ಕಂಡು­ಕೊಂಡಿ­ದ್ದಾರೆ. ಪುರಾಣಗಳ ಸಂಕೇತ­ಗಳನ್ನು ಅರ್ಥಮಾಡಿ­ಕೊಳ್ಳುತ್ತಾ ಸಮು­ದಾ­ಯ­ಗಳ ಅಳಿವು ಉಳಿವನ್ನು ಬಿಡಿಸಿ ನೋಡುವ ಪ್ರಯತ್ನ ಮಾಡುತ್ತಾ ಬಂದಿ-­ದ್ದಾರೆ. ವೇದಗಳು, ಮಹಾಭಾರತ, ರಾಮಾ­ಯಣ, ಪುರಾಣಗಳು ಇವೆಲ್ಲಾ ಸಮುದಾಯದ ನೆನಪುಗಳಾಗಿ ಉಳಿದು ಬಂದಿವೆ.

         ವೇದಗಳ ಕಾಲಕ್ಕೆ ವೈದಿಕ ಹಿನ್ನೆಲೆಯ ಬುಡಕಟ್ಟುಗಳಲ್ಲದೆ ಹಲವಾರು ಇತರ ಬುಡ­ಕಟ್ಟು­­ಗಳ ಹೆಸರುಗಳೂ ವೇದ ಸಾಹಿತ್ಯದಲ್ಲಿ ಕಂಡು­ಬರುತ್ತವೆ. ಅವುಗಳಲ್ಲಿ ರಾಕ್ಷಸ, ಅಸುರ, ಪಾಣಿ, ನಿಷಾದ, ಕಿರಾತ, ಪಿಶಾಚ, ದಾನವ, ದೈತ್ಯ, ನಾಗ ಹೀಗೆ ದೀರ್ಘ­ವಾದ ಪಟ್ಟಿಯೇ ನಮಗೆ ಸಿಗುತ್ತದೆ. ಇವರೆಲ್ಲಾ ದುಷ್ಟರೂ, ಕ್ರೂರಿ­ಗಳೂ, ಕುರೂಪಿಗಳೂ, ಶತ್ರು­ಗಳೂ ಆಗಿ ಚಿತ್ರಿತ­ರಾಗಿದ್ದಾರೆ. ಅದರಲ್ಲೂ ದೇವರು ಇವರನ್ನು ಸಂಹರಿಸಿ ಋಷಿಗಳು ಯಜ್ಞ, ಯಾಗಾದಿಗಳನ್ನು ಮಾಡಲು ರಕ್ಷಣೆ ನೀಡು­ತ್ತಾರೆ. ಆ ದೇವರು­ಗ­ಳನ್ನು ಒಲಿಸಿಕೊಳ್ಳುವುದು ಅವರ ನಿತ್ಯ ಪ್ರಯತ್ನ­ವಾ­ಗಿರುತ್ತದೆ. ಹೇಲ್ ಎಂಬ ವಿದ್ವಾಂಸನ ಇತ್ತೀ­ಚಿನ ಸಂಶೋಧನೆಯಿಂದ ತಿಳಿಯುವುದೇನೆಂದರೆ ದೇವರು ಎಂಬುವರೂ ಸಹ ಶಕ್ತಿಶಾಲಿಗಳಾದ ಒಂದು ಬುಡಕಟ್ಟೇ ಆಗಿ­ರ­ಬೇಕು. ವೈದಿಕರೊಂದಿಗೆ ಹೊಂದಿಕೊಂಡ ಕೆಲವು ಬುಡ­ಕಟ್ಟುಗಳೆಂದರೆ ಗಂಧರ್ವ, ಕಿನ್ನರ, ಕಿಂ ಪುರುಷ, ವಸು, ಯಕ್ಷ, ರುದ್ರ, ಮಾರುತ ಇತ್ಯಾದಿ.”

         ಜಾತಿ ಕತ್ತುಪಾಡುಗಳಿಂದಲೇ ಮಾರಮ್ಮ ಪೂಜೆ ಶುರುವಾಗಿದ್ದು:

         “ಮಾರಮ್ಮ ಬ್ರಾಹ್ಮಣ ಸಮು­ದಾಯದ ಸುಂದರ ಕನ್ಯೆ. ಅವಳನ್ನು ಬಯಸಿ ತನ್ನ ಹುಟ್ಟಿನ ಮೂಲವನ್ನು ಮುಚ್ಚಿಟ್ಟ ತಳಸಮುದಾ­ಯದ ಹುಡುಗ, ಸುಂದರವಾದ ಸಂಸಾರ ನಡೆ­ಸು­ತ್ತಿದ್ದ. ಮಗನನ್ನು ನೋಡಲು ಬಂದ ತಾಯಿ ಬಾಯಿತಪ್ಪಿ ಆಡಿದ ಮಾತಿನಿಂದ ಅವನ ಕುಲ­ಮೂಲ ತಿಳಿದು ಮಾರಮ್ಮ ಅವನನ್ನು ಕೊಲ್ಲಲು ಹೋದಾಗ ಅವನು ಕೋಣನ ದೇಹವನ್ನು ಹೊಕ್ಕು­ಬಿಡುತ್ತಾನೆ. ವ್ಯಗ್ರಳಾದ ಮಾರಮ್ಮ ಕೋಣ­ವನ್ನು ಬಲಿತೆಗೆದುಕೊಳ್ಳುತ್ತಾಳೆ. ಆ ಬಲಿ­ಯನ್ನು ಕೊಟ್ಟನಂತರ ಕೋಣನ ಕಾಲನ್ನು ಅದರ ಬಾಯಿಗೆ ಸಿಕ್ಕಿಸಿ ಅದರ ತಲೆಯ ಮೇಲೆ ಅದರ ದೇಹದಿಂದ ತೆಗೆದ ತುಪ್ಪದಲ್ಲಿ ದೀಪಹಚ್ಚ­ಲಾಗು­ತ್ತದೆ. ಇದು ವರ್ಣಸಂಕರಕ್ಕೆ ನೀಡುವ ಎಚ್ಚರ­ವಾ­ಗಿದೆ. ಅವಳಿಗೆ ಹುಟ್ಟಿದ ಮಕ್ಕಳಲ್ಲಿ ಒಬ್ಬ ತನ್ನ ಕಥೆ­ಯನ್ನು ಹೇಳಿಕೊಂಡು ಬದುಕಲು ಬಿಡುತ್ತಾಳೆ. ಮುಂದೆ ಅವನ ವಂಶ ಬೆಳೆದು ಅವರು ಅಸಾದಿ­ಗ­ಳಾಗುತ್ತಾರೆ.”

         ಉತ್ತರ
        • ಷಣ್ಮುಖ
         ಸೆಪ್ಟೆಂ 30 2014

         “ವಸುಮಳಲಿ”ಯವರ ಇಂದಿನ ಪ್ರಜಾವಾಣಿಯಲ್ಲಿನ ಲೇಖನವನ್ನು ಓದಿದಾಗ ಬಾಲಗಂಗಾಧರರು “ಭಾರತೀಯರಿಗೆ ಏನು ಬೇಕು? ಚರಿತ್ರೆಯೋ? ಗತಕಾಲವೋ” ಲೇಖನದ (ಪೂರ್ವಾಲೋಕನ ಕೃತಿಯಲ್ಲಿದೆ) ಕೊನೆಗೆ ಹೇಳಿದ್ದು ಎಷ್ಟು ಸತ್ಯ ಎನಿಸಿತು. ಅವರ ಲೇಖನದ ಕೊನೆಗೆ ಬರುವ ಈ ಮಾತುಗಳು ಮನಮುಟ್ಟುವಂತವು. ಅವು ಹೀಗಿದೆ:

         “ಈ ಕಥೆಗಳ ಸತ್ಯಾಸತ್ಯತೆಯ ಕುರಿತು ನಮ್ಮ ಧೋರಣೆಯು ಏನೇ ಇರಲಿ, ಅವು ನಮ್ಮ ಕಥೆಗಳು ಹಾಗೂ ಅವು ‘ನಮ್ಮ ಸಾಮುದಾಯಿಕ ಗತಕಾಲಗಳು’ ಎಂದು ಒಪ್ಪಿಕೊಳ್ಳುವುದಕ್ಕೂ ಆ ಧೋರಣೆಗೂ ಸಂಬಂಧವಿಲ್ಲ. ಯಾವುದೋ ಕಥೆಯು ಈ ಭೂಮಿಯ ಮೇಲೆ ನಡೆಯಿತೋ ಇಲ್ಲವೋ, ಇಂಥ ಕಥೆಗಳನ್ನು ಒಪ್ಪಿಕೊಳ್ಳಲಿಕ್ಕೆ ಅಂಥದೊಂದು ‘ಸತ್ಯ’ವು ಅಗತ್ಯವೇ ಇಲ್ಲ. ಅಂಥ ಕಥೆಗಳನ್ನು ಒಪ್ಪಿಕೊಳ್ಳಲಿಕ್ಕೆ ಅವುಗಳಿಗೆ ‘ಚಾರಿತ್ರಿಕ ಸತ್ಯ’ದ ಆಧಾರವೇ ಇರಬೇಕೆಂಬ ವಿಚಾರವನ್ನು ಇಟ್ಟುಕೊಂಡು ಬೆಳೆಯದಿದ್ದರೆ ಇಂಥ ಧೋರಣೆಯು ಇರಲಿಕ್ಕೆ ಸಾಧ್ಯ.

         ಜನರು ‘ರಾಮಸೇತು’ವು ಅಸ್ತಿತ್ವದಲ್ಲಿದೆ, ಅಯೋಧ್ಯೆಯು ಉತ್ತರಭಾರತದಲ್ಲೆಲ್ಲೊ ಇದೆ ಎಂದೆಲ್ಲ ಪ್ರತಿಪಾದಿಸಿದಾಗ ಏನಾಗುತ್ತದೆ? ಅಂಥ ‘ಚಾರಿತ್ರಿಕ’ ಪ್ರತಿಪಾದನೆಗಳು ಜನರ ತಲೆಯೊಳಗೆ ಇಳಿಯತೊಡಗಿದಾಗ ಏನಾಗುತ್ತದೆ?
         ಪ್ರಾರಂಭಿಕ ಹಂತದಲ್ಲಿ ಸಂತೋಷ ಹಾಗೂ ಉತ್ಸಾಹವಿರುತ್ತದೆ. ‘ರಾಮಾಯಣದಲ್ಲಿರುವುದೆಲ್ಲವೂ ಸತ್ಯ’ ಎಂದು ಈಗ ಹೇಳಬಹುದು ಎಂಬ ಕಾರಣಕ್ಕಲ್ಲ, ಬದಲಾಗಿ ಗತಕಾಲದೊಡನೆ ನಮಗಿರುವ ಸಂಬಂಧಕ್ಕೆ ಸ್ವಲ್ಪವಾದರೂ ಸ್ಪಷ್ಟವಾದ ಆಧಾರವು ಇದೆಯಲ್ಲ ಎಂಬ ಕಾರಣಕ್ಕಾಗಿ. ದ್ವಾರಕೆ, ಬೃಂದಾವನ, ಕುರುಕ್ಷೇತ್ರ, ಅಯೋಧ್ಯೆ…. ಇವೆಲ್ಲ ನಮ್ಮ ನಗರಗಳು ಹಾಗೂ ನಮ್ಮ ಗತಕಾಲ, ಇವೆಲ್ಲವೂ ನಮಗೆ ಚಿರಪರಿಚಿತವಾಗಿರುವುದರಿಂದ ಇವೆಲ್ಲ ಪ್ರತ್ಯಕ್ಷ ಪ್ರಮಾಣಗಳೆಂಬುದಾಗಿ ನಾವು ಗುರುತಿಸಿದ್ದೇವೆ ಎಂದುಕೊಳ್ಳುತ್ತೇವೆ. ಕುರುಕ್ಷೇತ್ರಕ್ಕೆ ಕೆಲವೇ ದಿನಗಳ ಪ್ರಯಾಣವೆಂಬುದು ಥಟ್ಟನೆ ಹೊಳೆದು ಉತ್ಸಾಹವು ಮೂಡುತ್ತದೆ. ಆದರೆ ಇದು ಕೇವಲ ಮೊದಲನೆಯ ಹಂತ. ಈ ಪ್ರತಿಪಾದನೆಯನ್ನು ಇನ್ನೂ ಮುಂದುವರಿಸಿದರೆ ನಂತರ ಏನಾಗುತ್ತದೆ ಎಂಬುದು ಕೂಡಾ ಸ್ಪಷ್ಟ.

         ಈ ಮುಂದಿನ ಚಿತ್ರವನ್ನು ಕಲ್ಪಿಸಿಕೊಳ್ಳಿ. ಕೌರವರು ಮತ್ತು ಪಾಂಡವರದು ಬುಡಕಟ್ಟುಗಳ ಯುದ್ಧವಾಗಿತ್ತು, ಉತ್ತರಭಾರತದಲ್ಲೆಲ್ಲೊ ಅದು ಮೂರು ಸಾವಿರ ವರ್ಷಗಳ ಹಿಂದೆ ನಡೆಯಿತು, ಎಂಬುದು ಸಾಮಾನ್ಯ ‘ಜ್ಞಾನ’ವಾಗುತ್ತದೆ. ‘ರಾಕ್ಷಸ’ರು, ‘ವಾನರರು’ ಇತ್ಯಾದಿಯೆಲ್ಲ ಒಂದಿಲ್ಲೊಂದು ಬುಡಕಟ್ಟುಗಳಾಗಿವೆ. ಕೃಷ್ಣನು ಯಾವುದೋ ಬುಡಕಟ್ಟಿನ ಕಪ್ಪುತೊಗಲಿನ ನಾಯಕನಾಗಿದ್ದನು, ರಾಮನು ಉತ್ತರದಲ್ಲೆಲ್ಲೊ ರಾಜನಾಗಿದ್ದನು, ದ್ರೌಪದಿಯು ಮತ್ತೊಂದು ಬುಡಕಟ್ಟಿನ ಮಗಳಾಗಿದ್ದಳು, ಇತ್ಯಾದಿ, ಇತ್ಯಾದಿ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನಮ್ಮ ಮಹಾಕಾವ್ಯಗಳು ಹಾಗೂ ಪುರಾಣಗಳೆಲ್ಲ ನನ್ನ ನಿಮ್ಮಂಥ ಸಾಮಾನ್ಯರ ವೃತ್ತಾಂತಗಳಾಗಿದ್ದು ತೀರಾ ಕೆಟ್ಟದಾಗಿ ಬರೆದ ಚರಿತ್ರೆಲೇಖನಗಳು ಎಂಬುದನ್ನು ಕಂಡುಹಿಡಿಯುತ್ತೇವೆ. ಹಾಗೂ ಮರದಿಂದ ಮರಕ್ಕೆ ಹಾರುವ ಮಂಗಗಳು ಭಾರತ ಮತ್ತು ಶ್ರೀಲಂಕೆಯ ನಡುವೆ ಸೇತುವೆಯನ್ನು ಕಟ್ಟಲು ಸಾಧ್ಯವಿಲ್ಲವೆಂಬ ಸುಪರಿಚಿತವಾದ ವಿಷಯವನ್ನೇ ನಾವು ಮತ್ತೆ ಕಂಡುಹಿಡಿಯುತ್ತೇವೆ.

         ಅಷ್ಟುಹೊತ್ತಿಗೆ ‘ದಲಿತ’ ಮತ್ತು ‘ಪ್ರಗತಿಪರ’ ಬುದ್ದಿಜೀವಿಗಳು ಪ್ರವೇಶಿಸುತ್ತಾರೆ. ರಾಮನೆಂಬ ಮನುಷ್ಯರಾಜನ ‘ಗುಲಾಮರು’ ಮಾಡಿದ ಕೆಲಸವನ್ನು ‘ಮಂಗಳಿಗಳ ಕೆಲಸವೆಂಬುದಾಗಿ ಯಾವುದೋ ಒಬ್ಬ ಲಿಬ್ರಾಹ್ಮಣೀಕೃತ’ ಕವಿಯು ವರ್ಣಿಸಿದ್ದಾನೆ. ಈ ಗುಲಾಮರನ್ನೆಲ್ಲ ‘ಮಂಗಗಳು’ ಎಂದು ಕರೆಯುವುದರ ಮೂಲಕ ಮೇಲ್ಜಾತಿಯವರು ‘ದಲಿತ’ರ ಕುರಿತ ದ್ವೇಷ ಹಾಗೂ ಜಿಗುಪ್ಸೆಯನ್ನು ತೋರಿಸಿದ್ದಾರೆ ಹಾಗೂ ಇದು ‘ದಲಿತ’ರ ಶೋಷಣೆಗೆ ಮತ್ತೊಂದು ಪುರಾವೆಯಾಗಿದೆ ಎಂಬುದಾಗಿ ಅವರು ಆರೋಪಿಸುತ್ತಾರೆ. ಬ್ರಾಹ್ಮಣ ಪ್ರೀಸ್ಟ್ಗಳು ‘ಆರ್ಯ’ರಾಗಿದ್ದುದರಿಂದ ಅಂಥ ‘ಗುಲಾಮರನ್ನು’ ಮನುಷ್ಯರೆಂದು ಕೂಡಾ ಪರಿಗಣಿಸಿರಲಿಲ್ಲ. ದಾನವರು ಹಾಗೂ ರಾಕ್ಷಸರ ಕುರಿತೂ ಇದೇ ವಾದವು ಅನ್ವಯವಾಗುತ್ತದೆ: ‘ದ್ರಾವಿಡ’ರೇ ನಮ್ಮ ಕಾವ್ಯಗಳಲ್ಲಿನ ರಾಕ್ಷಸರು ಹಾಗೂ ದಾನವರೆಂಬುದನ್ನು ನಾವು ಕಂಡುಹಿಡಿಳಿಯುತ್ತೇವೆ.

         ಇಲ್ಲಿ ನಾನು ಹೇಳುತ್ತಿರುವುದನ್ನು ಅಪಾರ್ಥಮಾಡಿಕೊಳ್ಳಬೇಡಿ. ಈ ಪ್ರತಿಪಾದನೆಗಳ ಸಮರ್ಥನೆಗಾಗಿ ನೀಡಲಾಗುವ ಯಾವುದೇ ನಿಜಾಂಶವೂ ಅವುಗಳಿಗೆ ‘ಸತ್ಯ’ದ ಸ್ಥಾನಮಾನಗಳನ್ನು ನೀಡಲಾರದು. ಅವು ಕೇವಲ ಊಹಾಪೋಹಗಳು. ಆದರೆ ಅವು ‘ವೈಜ್ಞಾನಿಕ’ ಹಾಗೂ ‘ಚಾರಿತ್ರಿಕ’ ಊಹಾಸಿದ್ದಾಂತಗಳ ರೂಪದಲ್ಲಿ ಬಹುಬೇಗನೆ ಭಾರತೀಯರ ಗತಕಾಲದ ಕುರಿತ ಲಿನಿಜಳಿಗಳಾಗಿ ಬದಲಾಗುತ್ತವೆ. ಇಂದು ‘ಇಂಡಾಲಜಿ’ಯ ಸತ್ಯಗಳಿಗೆ ಇರುವ ಸ್ಥಾನಮಾನವೇ ಅವುಗಳಿಗೂ ಸಲ್ಲುತ್ತದೆ. ಉದಾಹರಣೆಗೆ, ‘ಬುದ್ದಿಸಂ’ ಎಂಬುದು ‘ಬ್ರಾಹ್ಮನಿಸಂ’ ವಿರುದ್ಧ ಹೋರಾಡಿತೆಂಬುದನ್ನು ಜಗತ್ತಿನ ಯಾವ ಬುದ್ದಿಜೀವಿಯು ಇಂದು ಪ್ರಶ್ನಿಸಬಲ್ಲ? ಯಾರೂ ಇಲ್ಲವೆಂದರೇ ತಪ್ಪಾಗಲಾರದು. ಈ ‘ಊಹಾಪೋಹ’ವನ್ನು ಅಥವಾ ಹೇಳಿಕೆಯನ್ನು ಸಮರ್ಥಿಸಲಿಕ್ಕೆ ಎಷ್ಟೊಂದು ಕ್ರೈಸ್ತ ಥಿಯಾಲಜಿಯ ಹತಾರುಗಳು ಬೇಕೆಂಬುದು ಎಷ್ಟು ಜನರಿಗೆ ಗೊತ್ತಿದೆ? ಅಂಥವರನ್ನು ಕಾಣುವುದೇ ಅಪರೂಪ.

         ಇದೇ ನಿಟ್ಟಿನಿಂದ ನೋಡಿದಾಗ, ಈ ಮೇಲಿನ ನಿರೂಪಣೆಗಳನ್ನು ಕೇಳಿಕೊಂಡು ಬೆಳೆದ ಹೊಸ ತಲೆಮಾರಿನವರಲ್ಲಿ ಯಾರು ರಾಮ, ಕೃಷ್ಣ ಅಥವಾ ಆಂಜನೇಯನ ಭಕ್ತರಾಗಬಯಸುತ್ತಾರೆ? ಎಷ್ಟು ಮಂದಿ ಅವರ ದೇವಾಲಯಗಳಿಗೆ ಹೋಗುತ್ತಾರೆ ಅಥವಾ ಅವುಗಳನ್ನು ಕಟ್ಟುತ್ತಾರೆ? ಕುರುಕ್ಷೇತ್ರವು ಉತ್ತರಭಾರತದಲ್ಲಿರುವ ಒಂದು ಸ್ಥಳವಾಗಿದ್ದು ಅಲ್ಲಿ ಕ್ರಿಸ್ತಾಬ್ದಪೂರ್ವ 500 ರಲ್ಲಿ ಕೆಲವು ಸ್ಥಾನಿಕ ಬುಡಕಟ್ಟುಗಳು ಕಾದಾಡಿದವು; ಭಾರತದಲ್ಲೆಲ್ಲೌ ಇರುವ ಲಿನಾಗಳಿ ಎಂಬ ಬುಡಕಟ್ಟು ಅಮೇರಿಕಾದ ಯಾವುದೋ ಮುದ್ರಣಾಲಯದಲ್ಲಿ ಅಚ್ಚಾದ ಯಾವುದೋ ಕಾವ್ಯದ ವಿಮರ್ಶಾತ್ಮಕ ಸಂಪಾದನೆಯಲ್ಲಿ ಕಾಣಿಸಿಕೊಳ್ಳುತ್ತದೆ; ಯಾವುದೋ ನಗರದಲ್ಲಿ (ಬಿಕಾನೇರ್, ಅಯೋಧ್ಯ…) ನಡೆದ ಸ್ಥಾನಿಕ ಘಟನೆಗಳು ಲಿಭಾರತೀಯ ಚರಿತ್ರೆಳಿ ಯ ರೂಪದಲ್ಲಿ ನಮ್ಮ ಪೂರ್ವಜರಿಗೆ ಸಂಬಂಧಪಡುತ್ತವೆ. ಇಂಥ ತಿಳುವಳಿಕೆಯಲ್ಲೇ ಬೆಳೆಯಲಿರುವ ಮುಂದಿನ ತಲೆಮಾರಿಗೂ ನಾವು ಇಂದು ಗತಕಾಲವೆಂದುಕೊಂಡಿರುವುದಕ್ಕೂ ಯಾವ ಸಂಬಂಧವಿರಲು ಸಾಧ್ಯ?

         ಬಹುಶಃ ಅವರಿಗೆ ತಮ್ಮ ಗತಕಾಲದ ಕುರಿತು ಹಾಗೂ ಗತಕಾಲದ ಕಥೆಗಳ ಕುರಿತು ನಾಚಿಕೆಯೂ ಹುಟ್ಟಬಹುದು: ಅಂಥ ಕಥೆಗಳು ಜಗತ್ತು ಭಾರತದ ಕುರಿತು ಹೇಳಬಹುದಾದ ಅತ್ಯಂತ ಹೀನಾಯವಾದ ಸಂಗತಿಗಳಾಗಬಹುದು. ಭಾರತೀಯ ಸಂಸ್ಕ್ಕತಿ ಹಾಗೂ ‘ರಿಲಿಜನ್’ ಗಳು ತಮ್ಮ ಸಹೋದರರ ಮೇಲೆ ಅನ್ಯಾಯವನ್ನು ನಡೆಸುವ ಸಲುವಾಗಿ ಹುಟ್ಟಿಕೊಂಡಿವೆ. ‘ಹಿಂದೂಯಿಸಂ’ ಮುಖ್ಯ ಅಪರಾಧಿಯಾಗುವುದರಲ್ಲಂತೂ ಸಂಶಯವಿಲ್ಲ.

         ಈ ಬೆಳವಣಿಗೆಯ ಮೊದಲನೆಯ ಹಂತವು ಬಹುತೇಕ ಮುಗಿದಿದೆ. ಸಂಘಪರಿವಾರದ ವಕ್ತಾರರು ಮುಂದಿನ ಹಂತಕ್ಕೆ ಚಾಲನೆ ನೀಡುತ್ತಿದ್ದಾರೆ. ‘ಚಾರಿತ್ರಿಕ ಸತ್ಯ’ದ ಸ್ವರೂಪವನ್ನೇ ಪ್ರಶ್ನಿಸುವುದಕ್ಕೆ ಬದಲಾಗಿ; ಅಂಥ ಪ್ರಶ್ನೆಗಳನ್ನು ಹುಟ್ಟಿಸುವ ಸಂಸ್ಕ್ಕತಿಯನ್ನು ಅಭ್ಯಸಿಸುವ ಬದಲಾಗಿ; ಗತಕಾಲದ ಕುರಿತ ಕಥೆಗಳಿಗೂ ಮನುಷ್ಯ ಸಮುದಾಯಗಳಿಗೂ ಇರಬಹುದಾದ ಸಂಬಂಧವನ್ನು ಅರ್ಥಮಾಡುಕೊಳ್ಳುವುದರ ಬದಲಾಗಿ ಸಂಘಪರಿವಾರದ ವಕ್ತಾರರು ಮಾಡುತ್ತಿರುವುದೆಂದರೆ ನಮ್ಮ ಮಹಾಕಾವ್ಯಗಳ ‘ಚಾರಿತ್ರಿಕ ನಿಜ’ಗಳನ್ನು ಸಮರ್ಥಿವುದು. ಈ ರೀತಿಯಲ್ಲಿ ಕ್ರೈಸ್ತರ ಕಾರ್ಯಕ್ರಮಕ್ಕೆ ಮಹತ್ವವನ್ನು ನೀಡುವುದರ ಮೂಲಕ ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂ ಗಳು ಯಾವಾಗಲೂ ಮಾಡಬಯಸಿದ್ದನ್ನೇ ಸಂಘ ಪರಿವಾರದ ವಕ್ತಾರರೂ ಸಾಧಿಸಲಿದ್ದಾರೆ: ಆ ಕೆಲಸವೆಂದರೆ ಭಾರತದ ಲಿಪೇಗನ್ಳಿ ಅಥವಾ ‘ಹೀದನ್’ ಸಂಸ್ಕ್ಕತಿಗಳನ್ನು ನಾಶಮಾಡುವುದು. ಮುಸ್ಲಿಂ ರಾಜರು ಹಾಗೂ ಕ್ರೈಸ್ತ ಮಿಶನರಿಗಳಿಗೆ ನೂರಾರು ವರ್ಷದಿಂದ ಸಾಧಿಸಲಿಕ್ಕಾಗದಿದ್ದುದನ್ನು ಸಂಘ ಪರಿವಾರದ ವಕ್ತಾರರು ಕೆಲವೇ ದಶಕಗಳಲ್ಲಿ ನೆರವೇರಿಸಲಿದ್ದಾರೆ.

         ‘ಜನಸಮುದಾಯಗಳ ಗತಕಾಲವನ್ನು ನಾಶಮಾಡಬೇಕಿದ್ದರೆ ಅವರ ಕೈಗೆ ಚರಿತ್ರೆಯನ್ನು ನೀಡಿದರೆ ಸಾಕು’. ಇಂದು ನಾವು ‘ಚರಿತ್ರೆ’ಯೆಂದು ಏನನ್ನು ಕರೆಯುತ್ತೇವೆಯೋ ಅದು ಕ್ರೈಸ್ತ ರಿಲಿಜನ್ನಿನ ಸೆಕ್ಯುಲರೀಕೃತ ರೂಪವಾಗಿದೆ. ಕ್ರಿಶ್ಚಿಯಾನಿಟಿಯು (ಇಸ್ಲಾಂ, ಜ್ಯೂಡಾಯಿಸಂಗಳೂ ಕೂಡಾ) ತನ್ನಿಂದ ಬೇರೆಯಾಗಿರುವ ಪೇಗನ್ ಅಥವಾ ಹೀದನ್ ಸಂಸ್ಕ್ಕತಿಗಳನ್ನು ಸಹಿಸುವುದಿಲ್ಲ. ಈ ಅಸಹನೆಯು ಅದರ ಸೆಕ್ಯುಲರೀಕೃತ ರೂಪದಲ್ಲೂ ಕಾಣಿಸಿಕೊಳ್ಳುತ್ತದೆ. ರಾಜಕೀಯ ಅಧಿಕಾರವನ್ನು ವಶಮಾಡಿಕೊಳ್ಳುವ ಆತುರದಲ್ಲಿರುವ ಸಂಘಪರಿವಾರದ ವಕ್ತಾರರು ಪಾಶ್ಚಾತ್ಯ ಸಂಸ್ಕ್ಕತಿಯ ಕುರಿತ ತಮ್ಮ ದಿವ್ಯಅಜ್ಞಾನದಿಂದಾಗಿ ಕ್ರೈಸ್ತ ರಿಲಿಜನ್ನಿನ ಕಾರ್ಯಕ್ರಮವನ್ನು ಭಾರತದಲ್ಲಿ ಮುಂದೊತ್ತುತ್ತಿದ್ದಾರೆ. ಇದನ್ನು ನಾವು ವಿರೋಧಿಸದಿದ್ದರೆ, ಭಾರತದ ಮೇಲೆ ಮುಸ್ಲಿಂ ಹಾಗೂ ಕ್ರೈಸ್ತರ ಪ್ರತ್ಯಕ್ಷವಾದ ದಾಳಿಗಳು ಎಲ್ಲಿ ಎಡವಿದವೋ ಅಲ್ಲೇ ಈ ಪರೋಕ್ಷವಾದ ದಾಳಿಯು ಸಫಲವಾಗಲಿದೆ. ಅತ್ಯಂತ ವಿಷಾದದ ಸಂಗತಿಯೆಂದರೆ ಇದು: ಭಾರತೀಯ ಸಂಸ್ಕ್ಕತಿಯ ಉಳಿವಿಗಾಗಿ ತಾನು ನಿಜವಾದ ಕಳಕಳಿಯನ್ನು ತೋರಿಸುತ್ತಿದ್ದೇನೆಂಬುದಾಗಿ ಸಂಘಪರಿವಾರವು ನಂಬಿದೆ. ಆದರೆ ಅದು ಭಾರತೀಯ ಸಂಸ್ಕ್ಕತಿಯನ್ನು ನಾಶಮಾಡಹೊರಟಿದೆ.

         ಹಾಗಾಗಿ ನಮ್ಮ ಮುಂದಿರುವ ಪ್ರಶ್ನೆಗಳು ಹೀಗಿವೆ: ನಮಗೆ ಕ್ರಿಶ್ಚಿಯಾನಿಟಿಯ ಚರಿತ್ರೆಯು ಬೇಕೆ ಅಥವಾ ನಮಗೆ ನಮ್ಮ ಗತಕಾಲವನ್ನು ಉಳಿಸಿಕೊಳ್ಳಬೇಕೆ? ಭಾರತೀಯರಿಗೆ ಇವೆರಡರಲ್ಲಿ ಯಾವುದು ಬೇಕು?”

         ಉತ್ತರ
         • ಬಸವವೇ ಸತ್ಯ ಬಸವವೇ ನಿತ್ಯ
          ಸೆಪ್ಟೆಂ 30 2014

          ನೀವು ಗತವನ್ನು ಚರಿತ್ರೆಯಿಂದ ಪ್ರತ್ಯೇಕಿಸಿ ನೋಡುವ ವಿಧಾನವೇ ಪ್ರಶ್ನಾರ್ಹವಾಗಿದೆ. ಚರಿತ್ರೆಯನ್ನು ವೈಜ್ಞಾನಿಕವಾಗಿ ಗತದ ಪುರಾಣಗಳಿಂದ ಕಟ್ಟಲು ಸಾಧ್ಯವೇ ಇಲ್ಲ ಅಂತ ಹೇಗೆ ಹೇಳುತ್ತೀರಿ ನೀವು? ಭಾರತೀಯ ಸಂಸ್ಕೃತಿಯ ಪ್ರಬಲ ಸಮರ್ಥಕರಿಗೆ ಅದರ ಚರಿತ್ರೆ ಬಗ್ಗೆ ಏಕೆ ಅಸಹನೆ? ಚರಿತ್ರೆಯಿಂದ ಸಂಸ್ಕೃತಿ ನಾಶವಾಗುತ್ತದೆ ಎಂಬುದಕ್ಕೆ ಏನು ಆಧಾರವಿದೆ? ಚಾರಿತ್ರಿಕ ಸತ್ಯದ ಬೆಳಕಿನಲ್ಲಿ ಸಂಸ್ಕೃತಿ ಶೋಧನೆ ನಡೆದರೆ ಸಂಸ್ಕೃತಿಯ ನ್ಯೂನ್ಯತೆಗಳನ್ನು ತಿದ್ದುವ ಅವಕಾಶವಿದೆ.

          ಉತ್ತರ
          • ಷಣ್ಮುಖ
           ಸೆಪ್ಟೆಂ 30 2014

           ಹಾಗಿದ್ದರೆ ಇನ್ನೇಕೆ ತಡ, ರಾಕೇಶ್ ಶೆಟ್ಟಿಯವರ ಪ್ರಶ್ನೆಗಳಿಗೆ ಪುರಾವೆ ಸಹಿತ ಉತ್ತರಿಸುವ ಮೂಲಕ ಮನುಸ್ಮೃತಿಯ ಬಗ್ಗೆ ನೀವ ಕುಂಡುಹಿಡಿದಿರುವ “ಚಾರತಿತ್ರಿಕ ಸತ್ಯ”ವನ್ನು ಸಾಬೀತು ಮಾಡಿ ಮತ್ತೆ!

   • vasudeva
    ಸೆಪ್ಟೆಂ 28 2014

    ಷಣ್ಮುಖ ಅವರೆ,
    ನಾನು ಬ್ರಾಹ್ಮಣರನ್ನು ಅಥವಾ ಯಾವುದೇ ಜಾತಿಯನ್ನು ಅನೈತಿಕ ಎಂದು ನಿಂದಿಸಿಲ್ಲ ಅಥವಾ ಯಾವುದೇ ಜಾತಿಯನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿಲ್ಲ ಎಂಬ ಮಾತನ್ನು ಪುನರುಚ್ಚರಿಸುತ್ತೇನೆ.
    “ಅದರರ್ಥ ಈ ಸಮಸ್ಯೆ ಪರಿಹಾರ ಆಗಬೇಕೆಂದರೆ ಅದರ ಸರಿಯಾದ ಕಾರಣ ಹುಡುಕೋದು. ಅದರ ಮೊದಲ ಹೆಜ್ಜೆ ಈಗ ಅದರ ಕಾರಣ ಅಂತ ಗುರ್ತಿಸಿರೋದರಲ್ಲಿರುವ ಸಮಸ್ಯೆ ಏನು? ಅಂತ ಗುರ್ತಿಸೋದು! ಇದರ ಭಾಗವಾಗಿಯೆ? ಮನುಸ್ಮೃತಿ, ಬ್ರಾಹ್ಮಣ್ಯ, ಪುರೋಹಿತಶಾಹಿಗಳೆನ್ನುವ ಕಾರಣಗಳು ಸಮಸ್ಯೆಯ ಪರಿಹಾರಕ್ಕೆ ಯಾವ ಸಹಾಯವೂ ಮಾಡಲಿಲ್ಲ ಅನ್ನೋದು”
    ನನ್ನಂತಹ ಕೋಟ್ಯಂತರ ಶ್ರೀಸಾಮಾನ್ಯರಿಗೆ ಸಮಸ್ಯೆ ಪರಿಹರಿಸಲು ಹೊರಟಿರುವ ಬುದ್ಧಿಜೀವಿಗಳ ಪ್ರಯತ್ನದಲ್ಲಿ ಕುತೂಹಲ ಮತ್ತು ಕಳಕಳಿ ಇರುತ್ತದೆಯೇ ಸಮಸ್ಯೆಯ ಪರಿಹಾರದ ದಾರಿಗಳು ಹುಲುಮಾನವರಾದ ನಮಗೆ ತಿಳಿದಿರುವುದಿಲ್ಲ. ಹುಲುಮಾನವರು ಬುದ್ಧನನ್ನೋ, ಗಾಂಧಿಯನ್ನೋ, ಅಥವಾ ಷೆಟ್ಕರ್‌ರಂತೆ ಬಸವಣ್ಣನನ್ನೋ ನಂಬಿ ಅಥವಾ ಕಲ್ಪಿಸಿಕೊಂಡು ಈ ಕೊಳೆತ ಸಮಾಜದ ನಡುವೆ ಒಂದು ಭ್ರಮಾಲೋಕದಲ್ಲಿ ಜೀವನ ನಡೆಸುತ್ತಿರುತ್ತಾರೆ. ಕಳೆದ ಅರವತ್ತು ವರ್ಷಗಳಿಂದ ಪ್ರಗತಿಪರರ ಪ್ರಯತ್ನಗಳು ಕೈಗೂಡಲಿಲ್ಲ ಎಂಬ ವಿಷಾದ ನಮಗಿದೆ. ಹಾಗಾಗಿ ನಿಮ್ಮ ಸಂಶೋಧನೆಗಳ ಫಲಶ್ರುತಿಯಾಗಿ ಪರಿಹಾರವೇನಾದರೂ ಹೊರಹೊಮ್ಮಿದಲ್ಲಿ ನಾವು ನಿಮಗೆ ಋಣಿಗಳಾಗಿರುತ್ತೇವೆ ಎಂಬ ಮಾತುಗಳನ್ನೂ ಮತ್ತೆ ಪುನರುಚ್ಚರಿಸುತ್ತೇನೆ.

    ಉತ್ತರ
 17. ಷಣ್ಮುಖ
  ಸೆಪ್ಟೆಂ 24 2014

  ಹಾಗಿದ್ದರೆ ರಾಕೇಶರ ತಾರ್ಕಿಕ ಪ್ರಶ್ನೆಗಳಿಗೆ ರೂಪಕ, ವಾಚ್ಯ ಸೂಚ್ಯಗಳೆಂಬ ಸಗಣಿ ಸಾರಿಸದೆ ತರ್ಕಬದ್ದವಾಗಿಯೆೇ ಚರ್ಚಿಸಿ. ಹಾಗೆಯೆೇ ಇಲ್ಲಿಯ ಚರ್ಚೆಗೆ ಬಾಲು ಅಥವಾ ಸಿಎಸ್ ಎಲ್ ಸಿಯ ಪ್ರಸ್ತಾಪ ಮಾಡಲೇ ಬೇಕೆಂಬ ಹಠ ಏಕೆ? ನೇರವಾಗಿ ವಿಚಾರದ ಬಗ್ಗೆ ಚರ್ಚಿಸಬಹುದಲ್ಲಾ! ಶೆಟ್ಕರರು ಎಲ್ಲದಕ್ಕೂ ದರ್ಗಾರನ್ನು ಎಳತರುವಂತೆ ನಿಮಗೆ ಬಾಲು ಗುಂಪನ್ನು ಎಳತರುವ ಹವ್ಯಾಸವೇ?

  ಉತ್ತರ
  • Nagshetty Shetkar
   ಸೆಪ್ಟೆಂ 25 2014

   ಸಿ ಎಸ ಎಲ್ ಸಿ ಯ ಅವಸಾನಕ್ಕೆ ಸಂಶೋಧಕರ ಜ್ಞಾನಪಿತ್ತವೇ ಕಾರಣ. ಮಾನವೀಯ ಕಾಳಜಿಗಳನ್ನು ಒತ್ತೆ ಇಟ್ಟು ಬ್ರಾಹ್ಮಣ್ಯದ ಮದದಿಂದ ಕೆನೆದದ್ದೇ ಕಾರಣ ಬಿದ್ದದ್ದಕ್ಕೆ. ಮಡೆಸ್ನಾನವನ್ನು ವಿರೋಧಿಸುವ ಬದಲು ಅದನ್ನು ವಿರೋಧಿಸುವವರೇ ತಪ್ಪು ಮಾಡಿದ್ದಾರೆ ಅಂತ ವಾದ ಮಾಡಿದ್ದು ಮರೆತು ಹೋಯಿತೇ? ವಚನಕಾರರ ಮಾನವೀಯ ಕಾಳಜಿಗಿಂತ ಜಾತಿ ಕುಲ ಪದಗಳನ್ನು ಎಣಿಸುವುದೇ ಮುಖ್ಯ ಅಂತ ಕೆಟ್ಟ ಹಠ ಮಾಡಿದ್ದು ನೆನಪಿನಲ್ಲಿಲವೇ? ಅನಂತಮೂರ್ತಿ ಅಂತಹ ಅಪ್ಪಟ ಸಂತನ ಬಗ್ಗೆ ವಸಾಹತು ಪ್ರಜ್ಞೆಯಿಂದ ಬಳಲುತ್ತಿರುವವನೆಂದೂ ಹಾಸ್ಯ ಮಾಡಿದ್ದು ನೆನಪಿಸಬೇಕೆ? ದರ್ಗಾ ಸರ್ ಅವರಂತಹ ನಿಜ ಯೋಗಿಯ ಬಗ್ಗೆ ಕೀಳು ಮಾತುಗಳನ್ನು ಅವಧಿಯಲ್ಲಿ ನಿಳುಮೆಯಲ್ಲಿ ಆಡಿದ್ದು ಯಾರು ಅಂತ ಹೇಳಬೇಕೇ? ನಿಮ್ಮ ಕಲೀಗ್ ಆದ ರಾಜೇಂದರ್ ಚೆನ್ನಿ ಸರ್ ಅವರು ಭ್ರಷ್ಟಾಚಾರದ ಅಪರಾವತಾರವೇನೋ ಎಂಬಂತೆ ಚೀಪಾಗಿ ಮಾತನಾಡಿದ್ದು ನೀವಲ್ಲವೇ? ಚೆನ್ನಿ ಸರ್ ಅವರು obscene ಅಂತ ಬಾಲು ಅವರ ಬಗ್ಗೆ ಬರೆದುದ್ದನ್ನು ಖಂಡಿಸಿದ್ದು ಇದೆ ಹೆಗಡೆಯಲ್ಲವೇ?

   ಮಾಡಿದ್ದುಣ್ಣೋ ಮಾರಾಯ!

   ಉತ್ತರ
   • ಸೆಪ್ಟೆಂ 25 2014

    ಬಹಳ ಸರಿಯಾಗಿ ಹೇಳಿದಿರಿ ಶೆಟ್ಕರ್.ಫ್ಯಾಸಿಸ್ಟ್ ಮನಸ್ಸುಗಳು ಹೀಗೆ ಅಲ್ಲವೇ ಮಾಡುವುದು.ತಾವು ನಂಬಿರುವುದೇ ಪರಮ ಸತ್ಯ,ಅದನ್ನು ವಿರೋಧಿಸುವವರ ಬಾಯಿ ಮುಚ್ಚಿಸಬೇಕು.ಮುಚ್ಚಿಸಿದ ಮೇಲೆ ಅವರು ದನಿಯೆತ್ತಿದರೆ ದೊಡ್ಡ ಮಟ್ಟದಲ್ಲಿ ಬೊಬ್ಬೆ ಹಾಕಿ, ದಮನಿತರದೇ ತಪ್ಪು ಎಂದು ವಾದಿಸಬೇಕು …
    ಗುಡ್ ಗೋಯಿಂಗ್… ಕಿಪ್ ಇಟ್ ಅಪ್…

    (ಸರಿ.ಇದೆಲ್ಲ ಕತೆ ಸಾಕು.ಲೇಖನದ ಬಗ್ಗೆ ಏನಾದರೂ ಬರೆಯುವುದಿದ್ದರೆ ಬರೆಯಿರಿ.ಇಲ್ಲ ಸುಮ್ಮನಿರಿ.ಸಿ.ಎಸ್.ಎಲ್.ಸಿ ಬಗ್ಗೆ ನಿಮಗೆ ವಿಶೇಷ ಪ್ರೀತಿಯಿದ್ದರೆ ಅದಕ್ಕೆ ಒಂದು ಲೇಖನ ಬರೆಯಿರಿ.ಅಲ್ಲಿ ಈ ಕುರಿತು ಚರ್ಚಿಸೋಣ)

    ಉತ್ತರ
    • Nagshetty Shetkar
     ಸೆಪ್ಟೆಂ 25 2014

     ದರ್ಗಾ ಸರ್ ಅವರನ್ನು ಫ್ಯಾಸಿಸ್ಟ್ ಅಂತ ಕರೆಯುವವರು ತಾವು ಏನು ಅಂತ ಮೊದಲು ಅಂತರಂಗ ಶೋಧನೆ ಮಾಡಿಕೊಂಡು ಬಹಿರಂಗ ಪಡಿಸಲಿ.

     ಉತ್ತರ
     • ಷಣ್ಮುಖ
      ಸೆಪ್ಟೆಂ 25 2014

      ನಾಗಶೆಟ್ಟಿ ಶೆಟ್ಕರ್ ಸಾಹೇಬ್ರೇ ತಮ್ಮ ಪ್ರಖಾಂಡ ಪಾಂಡಿತ್ಯದ ಮುಂದೆ ನಮ್ಮದೇನು ನಡೆಯುತ್ತೆ ಬಿಡಿ. ತಮ್ಮಂತಹ ಮೇಧಾವಿಗಳ ಕೆಂಗಣ್ಣಿಗೆ ಬಿದ್ದು ಥರಥರ ನಡುಗುತ್ತಾ ನಾವು ಇಂದು ಒಂದು ಅಕ್ಷರ ಬರೆಯುವುದನ್ನೂ ನಿಲ್ಲಿಸಿಬಿಟ್ಟಿದ್ದೇವೆ 🙂
      ತಮ್ಮ ಪಾಂಡಿತ್ಯವನ್ನು ಕಾಮಿಡಿ ಮಾಡುವುದಲ್ಲೂ ಸೂಪರ್ ಆಗಿ ತೋರಿಸ್ತೀರಿ ಬಿಡಿ. ತಮ್ಮಂತವರ ಬಗ್ಗೆ ಮಾತನಾಡುವ ಉದ್ದಟತನವನ್ನು ನಾವೆಂದೂ ತೋರಿಸುವುದಿಲ್ಲ! 🙂

      ಉತ್ತರ
      • Nagshetty Shetkar
       ಸೆಪ್ಟೆಂ 25 2014

       “ನಮ್ಮದೇನು ನಡೆಯುತ್ತೆ ಬಿಡಿ”

       ಸಹಸ್ರಾರು ವರ್ಷಗಳ ಕಾಲ ನಿರಂತರವಾಗಿ ನಾಡಿನ ದಲಿತರ, ಶೂದ್ರರ, ಮಹಿಳೆಯರ ಶೋಷಣೆ ಮಾಡಿದವರು ಇಂದು ನಮ್ಮದೇನು ನಡೆಯುತ್ತದೆ ಎಂದು ಕೇಳಿದರೆ ಏನನ್ನುವುದು?! ನಿಮ್ಮದೇನೂ ನಡೆಯುವುದು ಬೇಡ ಭೂಸುರರೆ! ಇನ್ನಷ್ಟು ಕಾಲ ನಿಮ್ಮದು ನಡೆದರೆ ಈ ಭೂಮಿ ಪೂರ್ತಿ ಬರಡಾಗಿ ಬಿಡುತ್ತದೆ.

       ಉತ್ತರ
       • ಷಣ್ಮುಖ
        ಸೆಪ್ಟೆಂ 25 2014

        ನಿಮ್ಮದನ್ನು ಮೊದಲು ಹತ್ತಾರು ಜಾತಿಗಳನ್ನಿಟ್ಟುಕೊಂಡಿರುವ ಲಿಂಗಾಯತ ಸಮುದಾಯಲ್ಲಿ ನಡೆಯುವಂತೆ ನೋಡಿಕೊಳ್ಲಿ. ಆಮೇಲೆ ಬಡಾಯಿಕೊಚ್ಚಿಕೊಳ್ಳುವಿರಂತೆ! 🙂 ಕಾಮಿಡಿಯಲ್ಲೂ ತಮ್ಮದು ಪ್ರಖಾಂಡ ಪಾಂಡಿತ್ಯವೇ! ನಿಮ್ಮ ಕಾಮಿಡಿ ಮುಂದೆ ನಮ್ಮದೇನೂ ನಡೆಯಲ್ಲ. ಬಿಡಿ 🙂

        ಉತ್ತರ
        • Nagshetty Shetkar
         ಸೆಪ್ಟೆಂ 26 2014

         “ಮೊದಲು ಹತ್ತಾರು ಜಾತಿಗಳನ್ನಿಟ್ಟುಕೊಂಡಿರುವ ಲಿಂಗಾಯತ ಸಮುದಾಯಲ್ಲಿ ನಡೆಯುವಂತೆ ನೋಡಿಕೊಳ್ಲಿ”

         ಹೌದು ವೀರಶೈವ ಸಮುದಾಯದಲ್ಲಿ ಅನೇಕ ಜಾತಿಗಳಿವೆ. ವೀರಶೈವ ಸಮುದಾಯ ವೈದಿಕ ಸಂಸ್ಕೃತಿಯ ಬಹುತೇಕ ಅಂಶಗಳನ್ನು ಅಳವಡಿಸಿಕೊಂಡು ವಚನಕಾರರ ಧ್ಯೇಯೋದ್ದೇಶಗಳಿಂದ ದೂರವಾಗಿದೆ. ವೀರಶೈವ ಸಮುದಾಯದಲ್ಲಿ ತಾಂಡವವಾಡುತ್ತಿರುವ ಬ್ರಾಹ್ಮಣ್ಯವನ್ನು ಕಂಡರೆ ದಿಗಿಲಾಗುತ್ತದೆ. ರಂಭಾಪುರಿ ಶ್ರೀಗಳು ಸಿಂಹಾಸನ ಆರೋಹಣ ಮಾಡುವುದಲ್ಲದೆ ಮಾನವ ಪಲ್ಲಕ್ಕಿಯಲ್ಲಿ ದಿಗ್ವಿಜಯ ಯಾತ್ರೆ ಕೂಡ ನಡೆಸುತ್ತಾರೆ ದಸರೆಯ ಸಂದರ್ಭದಲ್ಲಿ. ಯಾವ ವೈದಿಕ ಸಂಸ್ಕೃತಿಯನ್ನು ಧಿಕ್ಕರಿಸಿ ಸಮಾನತೆಯನ್ನು ಎತ್ತಿ ಹಿಡಿಯಲು ಹುಟ್ಟಿಕೊಂಡ ವೀರಶೈವ ಸಂಸ್ಕೃತಿ ಅದೇ ವೈದಿಕ ಸಂಸ್ಕೃತಿಯ ಇನ್ನೊಂದು ಮುಖವಾಗಿ ಪರಿವರ್ತನೆಗೊಂಡಿದೆ. ಆದುದರಿಂದಲೇ ನಾವುಗಳು ಬ್ರಾಹ್ಮಣ್ಯ = ಬ್ರಾಹ್ಮಣ ಎಂಬ ಸರಳ ಸಮೀಕರಣವನ್ನು ಒಪ್ಪುವುದಿಲ್ಲ. ಬ್ರಾಹ್ಮಣ್ಯವು ಬ್ರಾಹ್ಮಣರಲ್ಲಿ ಅಷ್ಟೇ ಅಲ್ಲ ಮಿಕ್ಕ ಸಮುದಾಯಗಲಲ್ಲೂ ನೆಲೆಯೂರಿದೆ. ಪುರೋಹಿತಶಾಹಿಯು ವೀರಶೈವರಲ್ಲೂ ಪ್ರಬಲವಾಗಿದೆ. ವಚನಕಾರರು ನಾಂದಿ ಇಟ್ಟ ಸಾಮಾಜಿಕ ಕ್ರಾಂತಿಯನ್ನು ವರ್ತಮಾನದ ಈ ತಲ್ಲಣಮಯ ಪರಿಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಪ್ರಗತಿಪರ ಚಿನತಕರ ಮೇಲೆ ಇದೆ. ದರ್ಗಾ ಸರ್ ಅವರು ಬ್ರಾಹ್ಮಣ್ಯದ ವಿರುದ್ಧ ಜನಸಾಮಾನ್ಯರಿಗೆ ಎಚ್ಚರವನ್ನು ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಲಿಂಗಾಯತ ಹಾಗೂ ವೀರಶೈವ ನಡುವಿನ ವ್ಯತ್ಯಾಸಗಳನ್ನು ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಬರೆದಿದ್ದಾರೆ. ಮತ್ತು ವೈದಿಕತೆಯಿಂದ ಪಾರಾಗಿ ಲಿಂಗಾಯತಕ್ಕೆ ಶರಣಾಗುವಂತೆ ವೀರಶೈವರಿಗೆ ಮನವರಿಕೆ ಮಾಡುತ್ತಿದ್ದಾರೆ. ಹೀಗಾಗಿ ಅವರು ಶ್ಲಾಘನೀಯರಾಗಿದ್ದಾರೆ.

         ಉತ್ತರ
         • shripad
          ಸೆಪ್ಟೆಂ 26 2014

          “ಆದುದರಿಂದಲೇ ನಾವುಗಳು ಬ್ರಾಹ್ಮಣ್ಯ = ಬ್ರಾಹ್ಮಣ ಎಂಬ ಸರಳ ಸಮೀಕರಣವನ್ನು ಒಪ್ಪುವುದಿಲ್ಲ. ಬ್ರಾಹ್ಮಣ್ಯವು ಬ್ರಾಹ್ಮಣರಲ್ಲಿ ಅಷ್ಟೇ ಅಲ್ಲ ಮಿಕ್ಕ ಸಮುದಾಯಗಲಲ್ಲೂ ನೆಲೆಯೂರಿದೆ. ಪುರೋಹಿತಶಾಹಿಯು ವೀರಶೈವರಲ್ಲೂ ಪ್ರಬಲವಾಗಿದೆ”
          ಮಾನ್ಯ ಶೆಟ್ಕರ್ ಸಾಹೇಬ್ರೇ,
          ಹಾಗಾದರೆ ಅದನ್ನು ವೀರಶೈವಶಾಹಿ ಅನ್ನಿ, ಮಿಕ್ಕವುಗಳಲ್ಲಿ ಬ್ರಾಹ್ಮಣ್ಯ ಇದ್ದರೆ ಅದನ್ನು ಆಯಾ ಹೆಸರಿನಿಂದಲೇ ಗುರುತಿಸಿ. ಬ್ರಾಹ್ಮಣ್ಯ=ಬ್ರಾಹ್ಮಣ ಎಂಬ ಸರಳ ಸಮೀಕರಣವನ್ನು ನಿಮ್ಮಂಥ ಮಹಾ ತಿಳಿವಳಿಕಸ್ಥರು ಒಪ್ಪದಿರಬಹುದು. ಆದರೆ ಸಾಮಾನ್ಯರೆಲ್ಲ ಹಾಗೇ ತಿಳಿಯುವುದು. ನಿಮ್ಮ ಮಾತಿನ ಒಳಮರ್ಮ ಎಲ್ಲರಿಗೂ ಅರ್ಥವಾಗುವುದಿಲ್ಲ. ಇದೇ ಸಮಸ್ಯೆ.

          ಉತ್ತರ
          • Nagshetty Shetkar
           ಸೆಪ್ಟೆಂ 26 2014

           “ಹಾಗಾದರೆ ಅದನ್ನು ವೀರಶೈವಶಾಹಿ ಅನ್ನಿ”

           ಮೂಲತಃ ಅದು ಎಲ್ಲಿ ಹುಟ್ಟಿ ಪ್ರವರ್ಧಮಾನಕ್ಕೆ ಬಂದು ಮಿಕ್ಕ ಸಮುದಾಯಗಳಿಗೂ ಹರಡಿತೋ ಆ ಸಮುದಾಯದ ಗೌರವಾರ್ಥ ಅದನ್ನು ಹಾಗೆ ಕರೆಯುವ ಪದ್ಧತಿ.

         • ಷಣ್ಮುಖ
          ಸೆಪ್ಟೆಂ 26 2014

          ಹಾಗಿದ್ದರೆ ನಿವು/ದರ್ಗಾರು ಹೇಳುತ್ತಿರುವ ಲಿಂಗಾಯತ ಧರ್ಮ ಎಲ್ಲಿ ಯಾವ ಸಮುದಾಯದಲ್ಲಿ ಜೀವಂತ ಇದೆ? ಅಂತಹ ಸಮುದಾಯಗಳು ಭೂಮಿಮೇಲೆ ಎಲ್ಲಾದರೂ ಬದುಕಿವೆಯೋ? ಇದ್ದರೆ ಅವು ಎಲ್ಲೆಲ್ಲಿವೆ? ಅಂದರೆ ನೀವು ಹೇಳುತ್ತಿರುವುದು ಎಲ್ಲಿ ನಡೆಯುತ್ತಿದೆ? 🙂

          ಉತ್ತರ
          • Nagshetty Shetkar
           ಸೆಪ್ಟೆಂ 26 2014

           ವೀರಶೈವರು ಪಂಚಾಚಾರ್ಯ ಸಂಪ್ರದಾಯವನ್ನು ಬಿಟ್ಟು ಬಸವಣ್ಣನವರೇ ಧರ್ಮಗುರು ಮತ್ತು ವಚನಗಳೇ ಧರ್ಮಗ್ರಂಥ ಎಂದು ಒಪ್ಪಿಕೊಂಡಾಗ ಮಾತ್ರ ಲಿಂಗಾಯತ ಸಮಾಜ ಒಂದಾಗಬಲ್ಲುದು. ಅವೈದಿಕ ಲಿಂಗಾಯತ ಮತ್ತು ವೈದಿಕ ವೀರಶೈವತದ್ವಿರುದ್ಧ ಸಿದ್ಧಾಂತಗಳ ಮೇಲೆ ನಿಂತಿರುವುದರಿಂದ ಒಂದಾಗಲು ಬೇರೆ ಮಾರ್ಗವೇ ಇಲ್ಲ. ಇರುವುದೊಂದೇ ಮಾರ್ಗ; ಬಸವಮಾರ್ಗ.

          • ಷಣ್ಮುಖ
           ಸೆಪ್ಟೆಂ 26 2014

           🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂

          • ಷಣ್ಮುಖ
           ಸೆಪ್ಟೆಂ 26 2014

           ವಿಚಾರ ಬಿಟ್ಟು ಅದೇ ಪುಂಗಿ ಊದುತ್ತಾನೇ ಇರಿ. ಅದಕ್ಕೇ ಹೇಳಿದ್ದು ಈ ಪುಂಗಿ ಊದೋ ವಿಷಯದಲ್ಲಿ ನಿಮ್ಮದು ಪ್ರಖಾಂಡ ಪಾಂಡಿತ್ಯ ನಿಮಗೆ ಹೇಳುವ ಉದ್ದಟತನ ನಮಗೆ ಖಂಡಿತಾ ಇಲ್ಲ. ಮುಂದುವರಿಸಿ. ನಮಸ್ಕಾರ ! 🙂 🙂

          • ಷಣ್ಮುಖ
           ಸೆಪ್ಟೆಂ 26 2014

           ಮಾಡರೇಟರ್ ರಾಕೆಶ್ ಶೆಟ್ಟಿಯವರೇ, ನಿಮಗೆ ನಿಲುಮೆಯಲ್ಲಿ ನಿರ್ಧಿಷ್ಟ ವಿಚಾರಕ್ಕೆ ಸಂಬಂದಿಸಿದಂತೆ ಅರ್ಥಪೂರ್ಣ ಚರ್ಚೆಯಾಗಬೇಕು ಅನ್ನುವ ಇಚ್ಚೆ ಇದೆಯೇ? ಹಾಗಿದ್ದರೆ ಲೇಖನದ ವಿಷಯ ಏನೇ ಇದ್ದರೂ ಅದಕ್ಕೆ ಸಂಬಂದವೇ ಇಲ್ಲದ ದರ್ಗಾರ ಬಗೆಗೋ ಇಲ್ಲವೇ ಬ್ರಾಹ್ಮದ್ವೇಷದ ಹೇಳಿಕೆಗಳನ್ನು ಮಾತ್ರವೇ ಪದೇಪದೇ ಹೇಳ್ತಾ ಚರ್ಚೆಯ ವಿಷಯವನ್ನೇ ಹೈಜಾಕ್ ಮಾಡಿಕೊಂಡು ಕಿರಿಕಿರಿ ಮಾಡುತ್ತಿರುವ ಈ ನಾಗಶೆಟ್ಟಿ ಶೆಟ್ಕರರನ್ನು ಬ್ಲಾಕ್ ಮಾಡಿ. ಇಲ್ಲವೇ ಚರ್ಚೆಯ ವಿಷಯಕ್ಕೆ ಸಂಬಂದವಿಲ್ಲದ ಶೆಟ್ಕರರ ಪೋಸ್ಟುಗಳನ್ನು ಮಾಡರೇಟ್ ಮಾಡುವ ಕೆಲಸವನ್ನಾದರೂ ಮಾಡದಿದ್ದರೆ ಇಲ್ಲಿ ಇವರ ಕಿರಿಕಿರಿಯಿಂದ ಯಾರೂ ಅರ್ಥಪೂರ್ಣ ಚರ್ಚೆ ಮಾಡಲಾಗದು. ಈ ಮನುಷ್ಯ ಅಥವಾ ಇವರ ಹೆಸರಿನಲ್ಲಿ ಬರೆಯುತ್ತಿರುವ ಹುನ್ನಾರವೇ ಇಲ್ಲಿಯ ಚರ್ಚೆಗಳಿಗೆ ಮಣ್ಣು ಹಾಕುವುದಾಗಿದೆ. ದಯವಿಟ್ಟು ಇವರ ಹುಚ್ಚಾಟಗಳನ್ನು ನಿಯಂತ್ರಿಸಿ. ಇಲ್ಲವಾದರೆ ಯಾವುದೇ ಚರ್ಚೆಯಾಗುವ ನಿರೀಕ್ಷೆಯನ್ನಾದರೂ ಬಿಟ್ಟುಬಿಡಿ.

       • ವಿಜಯ್ ಪೈ
        ಸೆಪ್ಟೆಂ 26 2014

        ಪಾಪ..ಒಬ್ರು ಈ ನಾಗಶೆಟ್ಟಿ ಶೆಟ್ಕರ್ ಹೆಸರಿನ ಮಡಕೆಯನ್ನು ತಲೆಮೇಲೆ ಹಾಕಿಕೊಂಡು ಪಡುತ್ತಿರುವ ಪಾಡು ನೋಡಲು ಆಗುತ್ತಿಲ್ಲ! :), ಸ್ವಪ್ರಚಾರಕ್ಕೆ ಇಷ್ಟೊಂದು ಕಷ್ಟ ಪಡಬೇಕೆ..ಛೆ :(. ನಾನು ಮತ್ತೆ ಕಮೆಂಟ್ ಮಾಡಲ್ಲ….ಆಮೇಲೆ ಅವರು ಚರ್ಚೆ ಎತ್ತೆತ್ತಲೋ ಒಯ್ದು ಓಡಿ ಹೋಗಿಬಿಡ್ತಾರೆ!

        ಉತ್ತರ
        • Nagshetty Shetkar
         ಸೆಪ್ಟೆಂ 26 2014

         “ಸ್ವಪ್ರಚಾರಕ್ಕೆ ಇಷ್ಟೊಂದು ಕಷ್ಟ ಪಡಬೇಕೆ..ಛೆ ”

         what is this non-sense mr. vijay? ಸಮಾನತೆಯ ನೆಲೆಯಲ್ಲಿ ಹೊಸ ಸಮಾಜವನ್ನು ಕಟ್ಟಬೇಕೆಂಬ ವಚನಕಾರರ ಕನಸನ್ನು ನನಸು ಮಾಡಲು ತಾನೆ ಮನುವಾದಿಗಳ ವಿರುದ್ಧ ಹೋರಾಟ ನಡೆಸುತ್ತಿರುವುದು? ನಿಸ್ಸ್ವಾರ್ಥವಾಗಿ ಬಸವಧರ್ಮ ಪ್ರಚಾರವನ್ನು ಮಾಡುತ್ತಿದ್ದರೆ ನೀವು ಅದನ್ನು ಸ್ವಪ್ರಚಾರ ಎಂದು ಅಪಪ್ರಚಾರ ಮಾಡುತ್ತೀರಲ್ಲ ನೀವು! ಭಂಡತನದ ಪರಮಾವಧಿ ಅಲ್ಲವೇ ಇದು!

         ಉತ್ತರ
        • ಶೆಟ್ಟಿನಾಗ ಶೇ.
         ನವೆಂ 26 2016

         “ಕಿರಿಕಿರಿ ಮಾಡುತ್ತಿರುವ ಈ ನಾಗಶೆಟ್ಟಿ ಶೆಟ್ಕರರನ್ನು ಬ್ಲಾಕ್ ಮಾಡಿ. ಇಲ್ಲವೇ ಚರ್ಚೆಯ ವಿಷಯಕ್ಕೆ ಸಂಬಂದವಿಲ್ಲದ ಶೆಟ್ಕರರ ಪೋಸ್ಟುಗಳನ್ನು ಮಾಡರೇಟ್ ಮಾಡುವ ಕೆಲಸವನ್ನಾದರೂ ಮಾಡದಿದ್ದರೆ ಇಲ್ಲಿ ಇವರ ಕಿರಿಕಿರಿಯಿಂದ ಯಾರೂ ಅರ್ಥಪೂರ್ಣ ಚರ್ಚೆ ಮಾಡಲಾಗದು. ಈ ಮನುಷ್ಯ ಅಥವಾ ಇವರ ಹೆಸರಿನಲ್ಲಿ ಬರೆಯುತ್ತಿರುವ ಹುನ್ನಾರವೇ ಇಲ್ಲಿಯ ಚರ್ಚೆಗಳಿಗೆ ಮಣ್ಣು ಹಾಕುವುದಾಗಿದೆ.”

         Now I know who Witian is! This must be one of his six faces.

         ಉತ್ತರ
 18. M A Sriranga
  ಸೆಪ್ಟೆಂ 24 2014

  ಶೆಟ್ಕರ್ ಅವರೇ — ತಾವು ಸಾಮಾನ್ಯವಾಗಿ ಯಾವುದೇ ಒಂದು ಲೇಖನದ ಚರ್ಚೆಯ ಭಾಗವಾಗಿ ವಚನ ಸಾಹಿತ್ಯದ ಪಾರಮ್ಯವನ್ನು ಹೇಳುತ್ತಿರುತ್ತೀರಿ. . ಈ ಲೇಖನದಲ್ಲೂ ಆ ರೀತಿ ಮಾಡುತ್ತೀದ್ದೀರಿ. ಹೀಗಾಗಿ ಅನಿವಾರ್ಯವಾಗಿ ನಾನು ಪ್ರೊ. ನಾಗರಾಜಪ್ಪನವರ ‘ಮರುಚಿಂತನೆ ‘ಎಂಬ ಕೃತಿಯಲ್ಲಿನ ‘ಶರಣರು–ಏಕ ಮುಖ ಚಿಂತಕರು’ ಲೇಖನದ ಈ ಒಂದು ಪ್ಯಾರವನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ. (ಪ್ರಿಯರಾದ ರಾಕೇಶ್ ಅವರಲ್ಲಿ ಕ್ಷಮೆ ಕೇಳಿ–. ಏಕೆಂದರೆ ಚರ್ಚೆ ಬೇರೆ ದಿಕ್ಕಿಗೆ ಹೊರಳಲು ನಾನು ಆಸ್ಪದ ಮಾಡಿದಂತಾಗುತ್ತದೆ ಎಂದು).
  ‘ಹಚ್ಚಿದ ಸಿಡಿಮದ್ದನ್ನು ಮಡಿಲಲ್ಲಿ ಕಟ್ಟಿಕೊಂಡೇ ಮತ್ತೊಂದು ಗುಡಾರಕ್ಕೆ ಸಿಡಿಮದ್ದು ಹಚ್ಚುವ ಸಾಹಸವೇ ಶರಣರ ಚಳವಳಿ. ಶಿವಭಕ್ತರ ಕುಲ ಒಂದೇ ಎಂದು ಸಾರಿದ್ದರೂ ಸಮಾನತೆಯ ಮೇಲೆ ವೀರಶೈವ ಸಮಾಜ ರೂಪುಗೊಳ್ಳಲ್ಲಿಲ್ಲ. ಆತ್ಮದ ವಿಷಯದಲ್ಲಿ ಸಮಾನತೆಯನ್ನು ಸಾರಿತೇ ಹೊರತು ಸಾಮಾಜಿಕ ಸಮಾನತೆಗೆ ಎಂದೂ ಹೋರಾಡಲಿಲ್ಲ. ಕೆಳವರ್ಗದವರ ಸಂಸ್ಕೃತಿಯನ್ನು ನಾಶಮಾಡುವುದಕ್ಕಾಗಿಯೇ, ಅನ್ಯದೇವರನ್ನು ಅನೈತಿಕ, ( ಈ ಪದದ ಗ್ರಾಮ್ಯ ಸ್ವರೂಪ ಆ ಲೇಖನದಲ್ಲಿದೆ) ಪರಿವಾರ ದೇವತೆ ಎಂದು ಕರೆದು, ಏಕದೇವತೊಪಾಸನೆಯನ್ನು ಸಾಮಾನ್ಯರಿಗೆ ಬೋಧಿಸಿತು. ಇದು ರಾಜಕೀಯವಾಗಿ ಒಬ್ಬ ಸರ್ವಾಧಿಕಾರಿಯನ್ನು ನಾಯಕನನ್ನಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸುವ ತತ್ವಕ್ಕಿಂತ ಭಿನ್ನವಾದುದಲ್ಲ. ಜಾತ್ಯಾತೀತ ಸಂಘಟನೆಯ ಹೆಸರಿನಲ್ಲಿ ಜಾತಿಜಾತಿಗಳನ್ನು ಒಡೆದು ದುರ್ಬಲಗೊಳಿಸಿ ಮುಂದೆಂದೂ ಕೆಳವರ್ಗದವರು ತಲೆ ಎತ್ತದಂತೆ ಮಾಡಿ, ಪುರೋಹಿತ ರಹಿತ ಕೆಳವರ್ಗದ ಸಮಾಜವನ್ನು ಜಂಗಮ ಪುರೋಹಿತ ಸರ್ವಾಧಿಕಾರದ ಒಡೆತನಕ್ಕೆ ಒಳಗುಮಾಡಿತು’.

  ಉತ್ತರ
  • Nagshetty Shetkar
   ಸೆಪ್ಟೆಂ 25 2014

   ಪ್ರೊ. ನಾಗರಾಜಪ್ಪನವರಿಗೆ ಉಡುಪಿಯ ಮಠಾಧೀಶರೊಬ್ಬರು ಆಶೀರ್ವಾದ ಹಾಗೂ ಕಾಣಿಕೆಗಳೊಂದಿಗೆ ‘ಮರುಚಿಂತನೆ ‘ಎಂಬ ಕೃತಿಯನ್ನು ಬರೆಯಲು ಆಜ್ಞೆ ಇತ್ತರು ಅಂತ ಪ್ರಜ್ಞಾವಂತರಿಗೆ ತಿಳಿದೇ ಇರುವ ವಿಚಾರ. ಸಹಜವಾಗಿಯೇ ನಾಗರಾಜಪ್ಪನವರು ವೈದಿಕ ಮತದ ಪರವಾಗಿ ಲಿನ್ಗಾಯತದ ವಿರುದ್ಧವಾಗಿ ಬರೆದಿದ್ದಾರೆ, ಆಶ್ಚರ್ಯ ಪದುವಂಥದ್ದು ಏನಿದೆ?!

   ಶ್ರೀರಂಗ ಅವರೇ, ನಿಮಗೆ ವಚನ ಚಳುವಳಿಯ ಬಗ್ಗೆ ನಿಜವಾಗಿಯೂ ಆಸಕ್ತಿ ಇದ್ದರೆ ದರ್ಗಾ ಸರ್ ಅವರ ಕೃತಿಗಳನ್ನು ಓದಿ; ನಿಮ್ಮ ಜ್ಞಾನ ಚಕ್ಶುಗಳು ಅಗಲವಾಗುತ್ತವೆ.

   ಉತ್ತರ
   • M A Sriranga
    ಸೆಪ್ಟೆಂ 25 2014

    ಪಿ ವಿ ನಾರಾಯಣ (ಧರ್ಮಕಾರಣ), ಎಚ್ ಎಸ್ ಶಿವಪ್ರಕಾಶ್ (ಮಹಾ ಚೈತ್ರ) ಮತ್ತು ಬಂಜಗೆರೆ ಜಯಪ್ರಕಾಶ್ (ಅನುದೇವ ಹೊರಗಣವನು) ಇವರಿಗೆಲ್ಲಾ ಯಾವ ಮಠದವರು ಹಣಕೊಟ್ಟು ಬರೆಸಿದರು? ‘ಧರ್ಮಕಾರಣ’ವನ್ನು ಸ್ಥಾಪಿತ ಹಿತಾಶಕ್ತಿಗಳೇ ಸೇರಿಕೊಂಡು ಮುಟ್ಟುಗೋಲು ಹಾಕಿಸಿದ್ದು ಹಳೆಯ ಕಥೆ. ನನಗೆ ಕೇವಲ ಒಬ್ಬರ ಸಾಹಿತ್ಯ ಓದಿ ನನ್ನ ಜ್ಞಾನ ಹೆಚ್ಚಿಸಿಕೊಳ್ಳುವ ದರ್ದು ಇಲ್ಲ.

    ಉತ್ತರ
    • shripad
     ಸೆಪ್ಟೆಂ 26 2014

     ಸರಿಯಾಗಿ ಹೇಳಿದ್ದೀರಿ ಶ್ರೀರಂಗರೇ. ಯಾವುದೇ ಒಬ್ಬರ ಚಿಂತನೆ, ಒಂದು ವಾದ, ಒಂದು ಸಿದ್ಧಾಂತಕ್ಕೆ ಅಂಟಿಕೊಂಡು ಮೊಂಡುವಾದ ಹೂಡುವ (ಉದಾ:ಶೆಟ್ಕರ್ ತರಹದವರು) ಜನರೊಂದಿಗೆ ಏನು ವಾಗ್ವಾದ ಮಾಡ್ತೀರಿ? ಇಂಥವರು ನಕ್ಸಲರಂತೆ ಅಥವಾ ಯಾವುದಾದರೂ ಸಿದ್ಧಾಂತಕ್ಕೆ ಬದ್ಧತೆ ತೋರಿಸುತ್ತ ಸ್ವಂತಿಕೆ ಮರೆತವರು ಅಥವಾ ಅದರಲ್ಲೇ ಸ್ವಂತಿಕೆ ಕಂಡವರು. ಇಂಥವರು ರಾಜಕೀಯ ಪಕ್ಷಗಳ ಕಟ್ಟಾ ಕಾರ್ಯಕರ್ತರೋ ನಟೀಮಣಿಗೆ ದೇವಾಲಯ ಕಟ್ಟುವಂಥ ಅಂಧಾಭಿಮಾನಿಗಳೋ ಆಗಬಹುದೇ ವಿನಾ ಸಾಹಿತ್ಯ ಸಂಸ್ಕೃತಿಯ ವಿದ್ಯಾರ್ಥಿಯಾಗಲು ಸಾಧ್ಯವೇ ಇಲ್ಲ ಬಿಡಿ.

     ಉತ್ತರ
     • Nagshetty Shetkar
      ಸೆಪ್ಟೆಂ 26 2014

      ಇದು ವೈಯಕ್ತಿಕ ನಿಂದನೆ ಅಲ್ಲವೇ? ಇದು ಸರಿಯೇ?

      @ಮಾಡರೆಟರ ಶೆಟ್ಟಿ: ಏನ್ರೀ ಇದು ವೈಯಕ್ತಿಕ ನಿಂದನೆಗಳನ್ನು ಎನ್ಕರೇಜ್ ಮಾಡ್ತೀರಲ್ಲ ಏನು ಕಲ್ಚರ್ ನಿಮ್ಮದು??

      ಉತ್ತರ
      • shripad
       ಸೆಪ್ಟೆಂ 26 2014

       ಇದು ವೈಯಕ್ತಿಕ ನಿಂದನೆ ಅಲ್ಲವೇ?
       -ಅಲ್ಲ!
       ಇದು ಸರಿಯೇ?
       ಸರಿ!

       ಉತ್ತರ
      • valavi
       ಸೆಪ್ಟೆಂ 26 2014

       ನಾಗಶೆಟ್ಟರೆ ನಿಮಗೀಗ ವೈಯುಕ್ತಿಕ ನಿಂದನೆಯ ನೆನಪು ಬಂದಿದೆ ಅಲ್ಲವೆ? ಹಿಂದೆ ನೀವು ನನಗೆ ನಿಂದನಾ ವಾಕ್ಯಗಳನ್ನು ಬರೆದಾಗ ನಿಮಗೇನೂ ಅನಿಸಿರಲಿಲ್ಲ. ನನಗೆ ಜಗಳಗಂಟಿ ಬಿರುದು ನೀಡಿದ್ದೀರಿ. ಹಾಗೆ ಆನಂದ್ ಅನ್ನುವವರಿಗೆ ನೀವು ಹಿಟ್ಲರನಿಗೆ ಹುಟ್ಟಿದ್ದೀರಾ? ಎಂದು ಕೇಳಿದ್ದೀರಿ. ಆವಾಗೆಲ್ಲಾ ಅದು ನಿಂದನೆ ಆಗಲಿಲ್ಲ. ಈಗ ಮಾತ್ರ ನಿಮಗೆ ನೆನಪು ಬಂದಿದೆಯಾ? ಇದುವೇನಾ ನೀವು ಶರಣರೆ ಂದು ಕರೆದು ಕೊಳ್ಳುವ ಸಂಸ್ಕೃತಿ? ಇದಕ್ಕೆ ನಿಮ್ಮ ಉತ್ತರ ನನಗೆ ಗೊತ್ತಿದೆ. ನಾನು ಹಾಗೆಲ್ಲೂ ಹೇಳೇ ಇಲ್ಲ ಎಂದು ತಿಪ್ಪೆ ಸಾರಿಸುವಿರಿ. ನಾನು ಆ ಕಮೆಂಟುಗಳ ಆಧಾರಗಳನ್ನೆಲ್ಲಾ ಬರೆದರೆ ಅದಕ್ಕೆ ಉತ್ತರಿಸದೇ ಬೇರೊಂದು ಲೇಖನಕ್ಕೆ ಜಿಗಿಯುತ್ತೀರಿ. ಮತ್ತೆ ಅಲ್ಲಿ ಅದೇ ಹಳೇ ಚಾಳಿ. ನೀವು ಕಾರಣವಿಲ್ಲದೇ ಎಲ್ಲಾ ಕಡೆ ದರ್ಗಾ ಅವರನ್ನು ತರುತ್ತೀರಿ. ನಾವು ಮಾತ್ರ ಅವರ ಹೆಸರನ್ನು ಎತ್ತ್ಲೇ ಬಾರದು ಅನ್ನುತ್ತೀರಿ. ದರ್ಗಾ ಅವರನ್ನು ಗುತ್ತಿಗೆ ಹಿಡಿದಂತೆ ಮಾತನಾಡುತ್ತೀರಿ. ಮತ್ತೆ ಚಿಕ್ಕ ಮಕ್ಕಳಂತೆ ಶೆಟ್ಟಿ ಅವರ ಹತ್ತಿರ ದೂರು ಹೇಳುತ್ತೀರಿ. ಬೇರೆಯವರಿಗೂ ನಿಮ್ಮ ಹಾಗೆ ಮನಸ್ಸು ಇದೇ ಅನ್ನುವ ವಿಚ್ಚಾರ ಮೊದಲು ತಿಳಿಯಿರಿ. ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಎಂಬುದನ್ನು ನಿಮ್ಮವರೇ ಹೇಳಿದ್ದು ನೀವು ಆಚರಿಸುತ್ತಿಲ್ಲ. ಬೇರೆಯವರಿಗೆ ಬೋಧನೆ ಮಾತ್ರ ಮಾಡುತ್ತೀರಿ.

       ಉತ್ತರ
       • Nagshetty Shetkar
        ಸೆಪ್ಟೆಂ 26 2014

        ವಾಳವಿ ಅವರೇ, ಇದು ನನ್ನ ಹಾಗೂ ಶ್ರೀಪಾದರ ನಡುವಿನ ತಗಾದೆ. ನಿಮಗೆ ಸಂಬಂಧಪಟ್ಟಿದ್ದಲ್ಲ. ಆದುದರಿಂದ ನೀವು ಪಕ್ಕದ ಮನೆಯ ಖಾಸಗಿ ವಿಷಯಗಳಿಗೆ ತಲೆ ಹಾಕುವ ಕೆಟ್ಟ ಚಾಳಿಯ ಗೃಹಸ್ಥೆ ತರಹ ವರ್ತಿಸುವುದನ್ನು ನಿಲ್ಲಿಸಿ. ಅದರಿಂದ ನಿಮಗೇ ಕ್ಷೇಮ.

        ಉತ್ತರ
        • ಕಾಂಚನ
         ಸೆಪ್ಟೆಂ 27 2014

         “ನೀವು ಪಕ್ಕದ ಮನೆಯ ಖಾಸಗಿ ವಿಷಯಗಳಿಗೆ ತಲೆ ಹಾಕುವ ಕೆಟ್ಟ ಚಾಳಿಯ ಗೃಹಸ್ಥೆ ತರಹ ವರ್ತಿಸುವುದನ್ನು ನಿಲ್ಲಿಸಿ. ಅದರಿಂದ ನಿಮಗೇ ಕ್ಷೇಮ.”

         ಸಹೋದರ ಶೆಟ್ಕರ್,

         ನಿಮ್ಮ ಈ ಮಾತುಗಳು ಸ್ತ್ರೀವಿರೋಧಿಯಾಗಿವೆ.ಮನುವ್ಯಾಧಿ ನಿಮಗೂ ತಗುಲಿತೆ.ಧಿಕ್ಕಾರ ನಿಮಗೆ

         ಉತ್ತರ
         • Nagshetty Shetkar
          ಸೆಪ್ಟೆಂ 27 2014

          ಸ್ತ್ರೀಯರೆಲ್ಲ ವಾಳವಿ ಅವರ ಹಾಗೆ ತಮ್ಮದಲ್ಲದ ವಿಚಾರಗಳ ಬಗ್ಗೆ ಅನಗತ್ಯ ಆಸಕ್ತಿ ತಾಳುತ್ತಾರೆ ಅಂತ ನಾನು ಹೇಳಿಯೂ ಇಲ್ಲ ಭಾವಿಸಿಯೂ ಇಲ್ಲ. ಆದುದರಿಂದ ಸ್ತ್ರೀವಿರೋಧಿ ಎಂಬ ಆಪಾದನೆಗೆ ಹುರುಳೇ ಇಲ್ಲ. ನೀವು ದಯವಿಟ್ಟು ನಿಮ್ಮ ಅಸಲಿ ಹೆಸರಿನಲ್ಲಿ ಕಮೆಂಟು ಮಾಡಿ.

          ಉತ್ತರ
          • ganesh
           ಸೆಪ್ಟೆಂ 28 2014

           ಅಯ್ಯಾ ಶೆಟ್ಕರ ಎಂಬ ಮಹಾನುಭಾವ ಮೊದಲು ನಿಲುಮೆಯಲ್ಲಿ ವಿಷಯಕ್ಕೆ ಸಂಬಂಧಿಸಿದ ವಾದ ಮಾಡುವದನ್ನು ರೂಢಿಸಿಕೋ. ಎಲ್ಲರಿಗೂ ನೀನು ಸಹನಾನಾ? ಎಂದು ಕೇಳುವದನ್ನು ನಿಲ್ಲಿಸು. ಮೆಲೆ ಕಾಂಚನಾ ಅವರಿಗೆ ನಿಮ್ಮ ಹೆಸರಿನಿಂದ ಕಮೆಂಟ್ ಮಾಡಿ ಎಂದೆಲ್ಲ ಸಲಹೆ ಕೊಟ್ಟಿರುವಿ. ಮೊದಲು ನೀನು ನಿನ್ನ ಹೆಸರಿನಲ್ಲಿ ಕಮೆಂಟ್ ಮಾಡುವದನ್ನು ಕಲಿ. ನಿಲುಮೆಯ ಎಲ್ಲಾ ಸದಸ್ಯರೂ ನಿತ್ಯ ನಿನಗೆ ಚಿ ಥೂ ಎಂದು ಉಗಿಯುತ್ತಾರೆ. ಮುಖವನ್ನಾದರೂ ಒರೆಸಿಕೋ. ಬೇರೆಯವರಿಗೆ ವಿಷಯಕ್ಕೆ ಸಂಬಂಧವೇ ಇಲ್ಲದಂತೆ ಕಮೆಂಟ ಮಾಡುವದನ್ನು ನಿಲ್ಲಿಸು. ಏಕೆಂದರೆ ನಿನ್ನ ಸಮಯ ಅಮೂಲ್ಯ ಎಂದು ಹೆಳಿರುವಿ. ಆ ಸಮಯವನ್ನು ಕಾಪಿ ಪೇಶ್ಟ ಮಾಡಲು ಉಪಯೋಗಿಸೋದನ್ನು ನಿಲ್ಲಿಸು. ನಿನ್ನಿಂದ ಇಡೀ ಚರ್ಚೆ ಹಳ್ಳ ಹಿಡಿಯುತ್ತಿದೆ. ನೀನೋ ನಿನ್ನ ಬಸವ ದರ್ಗಾ ಪುಂಗಿ ಊದೇ ಊದುತ್ತೀ. ವಿಷ್ಯದ ನಿಷ್ಟನಾಗಿ ಮಾತನಾಡುವದನ್ನು ರೂಡಢಿಸಿಕೋ. ಹಾಗೇನೇ ಹೆಣ್ಣು ಮಕ್ಕಳಿಗೆ ಬಾಯಿ ಬಂದ ಹಾಗೆ ಮಾತನಾಡಿ ಧಮಕಿ ಹಾಕಿದರೆ ಭಟ್ಟನ ಗತಿ ನಿನಗು ಬರುತ್ತದೆ. ಹುಷಾರು. ಬಾಯಿ ತೊಳೆದುಕೊಂಡು ಮಾತನಾಡು. ಶರಣರಿಗೆ ನಿನ್ನಂಥವರಿಂದ ಅವಮಾನ ಆಗುವದನ್ನು ನಿಲ್ಲಿಸಯ್ಯಾ ಅಭಿನವ ದರ್ಗಾ ಸಾಬ.

          • Nagshetty Shetkar
           ಸೆಪ್ಟೆಂ 28 2014

           “ಹಾಗೇನೇ ಹೆಣ್ಣು ಮಕ್ಕಳಿಗೆ ಬಾಯಿ ಬಂದ ಹಾಗೆ ಮಾತನಾಡಿ ಧಮಕಿ ಹಾಕಿದರೆ ಭಟ್ಟನ ಗತಿ ನಿನಗು ಬರುತ್ತದೆ. ಹುಷಾರು.”

           ಹೆಂಗಸರನ್ನು ಮುಂದು ಮಾಡಿಕೊಂಡು ಎಡಪಂಥೀಯ ಚಿಂತಕರ ಮೇಲೆ ವ್ಯವಸ್ಥಿತವಾಗಿ ಅಟಾಕ್ ಮಾಡುವ ಮಾಸ್ತರ್ ಪ್ಲಾನ್ ನಿಲುಮೆಯಲ್ಲಿ ಸಿದ್ಧವಾಗಿದೆ ಅಂತ ಕಾಣುತ್ತದೆ. ಆದರೆ ದರ್ಗಾ ಸರ್ ಇದಕ್ಕೆಲ್ಲ ಹೆದರುವವರಲ್ಲ, ಏಕೆಂದರೆ ಅವರು ಸದಾ ಹೆಣ್ಣು ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನೇ ಬಯಸಿದ್ದಾರೆ. ಹುಟ್ಟಿನಿಂದ ಗಂಡು ಆಗಿದ್ದರೂ ಸಂವೇದನೆಯಿಂದ ದರ್ಗಾ ಸರ್ ಒಬ್ಬ ಹೆಣ್ಣೇ ಆಗಿದ್ದಾರೆ. ಮನುವಾದಿಗಳ ಅಟ್ಟಹಾಸದಲ್ಲಿ ಬೆಂದ ಹೆಣ್ಣಿನ ನೋವನ್ನು ದರ್ಗಾ ಸರ್ ಅಂತರ್ಗತವಾಗಿಸಿಕೊಂಡಿದ್ದಾರೆ. ಪ್ರತಿಯೊಂದು ಹೆಣ್ಣಿನಲ್ಲೂ ಅವರು ಅಕ್ಕ ಮಹಾದೇವಿಯನ್ನೇ ಕಂಡಿದ್ದಾರೆ.

        • valavi
         ಸೆಪ್ಟೆಂ 27 2014

         ಇದು ಸಾರ್ವಜನಿಕ ಬ್ಲಾಗ ನಾನು ಹಿಂದೆನೂ ಇದನ್ನೇ ಹೇಳಿದ್ದೇನೆ. ನಾನು ಅವರಿಗೆ ಹೇಳಿದ್ದೇನೆ. ಇವರಿಗೆ ಹೇಳಿದ್ದೇನೆ ಎನ್ನಲು ನೀವು ನಡುವೆ ಬರಬೇಡಿ ಎನ್ನಲು ಇದು ನಿಮ್ಮ ವಾಲ್ ಅಲ್ಲ. ಇದು ಸಾರ್ವಜನಿಕ ವೇದಿಕೆ. ನೀವು ಹಿಟ್ಲರ್ ತರಹ ವರ್ತನೆ ಮಾಡುವದು ನಿಮಗೂ ಕ್ಷೇಮವಲ್ಲ ತಿಳಿದುಕೊಳ್ಳಿ. ಇನ್ನು ಸಿಂಹ ಅವರೆ ನೀವು ಹೇಳಿದ್ದು ಸರಿ . ಇಂಥವರ ಜೊತೆ ವಾದಿಸುವದು ಗಾಳಿ ಗುದ್ದಿ ಮೈ ನೋಯಿಸಿಕೊಂಡಂತೆ.

         ಉತ್ತರ
         • Nagshetty Shetkar
          ಸೆಪ್ಟೆಂ 27 2014

          ವಾಳವಿ ಅವರೇ, ಕಾಲು ಕೆರೆದುಕೊಂಡು ಜಗಳಕ್ಕೆ ಬರಬೇಡಿ. ನನಗೆ ಸಮಯವು ಅತ್ಯಮೂಲ್ಯವಾದ ವಸ್ತು. ಕೋಮುವಾದಿಗಳ ವಿರುದ್ಧ ನಿತ್ಯ ಹೋರಾಟ ಮಾಡುವ ಶ್ರದ್ಧಾವಂತವನು ನಾನು. ಬಸವದ್ವೈತಕ್ಕೆ ನನ್ನ ಮಿಕ್ಕ ಸಮಯ ಮೀಸಲು. ನನ್ನೊಡನೆ ವೈಚಾರಿಕ ಚರ್ಚೆ ಮಾಡುವುದಿದ್ದರೆ ನಿಮಗೂ ಸಮಯವನ್ನು ಕೊಡಬಲ್ಲೆ. ಜಗಳಗಂಟರಿಗೆ ಕೊಡಲು ನನಗೆ ಸಮಯವಿಲ್ಲ.

          ಉತ್ತರ
          • valavi
           ಸೆಪ್ಟೆಂ 28 2014

           ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳಿ ಯಾರು ಕಾಲು ಕೆರೆದು ಜಗಳಕ್ಕೆ ಬರುತ್ತಾರೆಂದು? ನನಗೆ ಸಮಯ ಅಮೂಲ್ಯವೆಂದಿದ್ದೀರಲ್ಲಾ? ಕೋಮುವಾದಿಗಳ ಜೊತೆ ಜಗಳವಾಡಲು ಸರಿ. ಅದಕ್ಕೆ ನಿಮ್ಮ ಸಮಯ ಮೀಸಲು ಬಿಡಿ.

        • shripad
         ಸೆಪ್ಟೆಂ 27 2014

         ಶೆಟ್ಕರ್ ಸಾಹೇಬ್ರೇ ವಲವಿಯವರು ಹೇಳಿದ ಮಾತನ್ನೇ ನಾನು ಪುರಸ್ಕರಿಸುತ್ತೇನೆ. ಅವರು ಹೇಳಿದ್ದು ಯಥೋಚಿತವಾಗಿದೆ. ಅವರ ಮಾತನ್ನು ಒಪ್ಪಿದರೆ ನಿಮ್ಮ ಚೆನ್ನಬಸವಣ್ಣ ಹೇಳಿದಂತೆ “ಹೆಣ್ಣಿಂಗೆರಗಿದೆಡೆ ಲಿಂಗದ್ರೋಹಿ” ಆಗಿಬಿಡುತ್ತೇನೋ ಎಂಬ ಭಯವೇ?

         ಉತ್ತರ
       • ಸೆಪ್ಟೆಂ 26 2014

        ಅಲ್ರೀ ವಾಳವಿ, ಈ ಹುಚ್ಚು ಮುಂಡೇದರೊಂದಿಗೆ ಯಾಕೆ ವೃಥಾ ವಾದ ಮಾಡ್ತಿದೀರಿ? ಅದನ್ನು ಒಪ್ಪಿಸಿ ಏನು ಸಾಧಿಸಬೇಕಿದೆ? just ignore this fool.

        ಉತ್ತರ
        • Nagshetty Shetkar
         ಸೆಪ್ಟೆಂ 27 2014

         call a dog mad and kill it. classic fascist technique to suppress dissent.

         ಉತ್ತರ
    • Nagshetty Shetkar
     ಸೆಪ್ಟೆಂ 26 2014

     “ಇವರಿಗೆಲ್ಲಾ ಯಾವ ಮಠದವರು ಹಣಕೊಟ್ಟು ಬರೆಸಿದರು?”

     ಹಣ ಕೊಟ್ಟು ಬರೆಸಿಲ್ಲ ಅನ್ನುವುದಕ್ಕೆ ನಿಮ್ಮ ಬಳಿ ಯಾವ ಪುರಾವೆಗಳಿವೆ? ಮಾನವಕುಲದ ಒಳಿತಿಗಾಗಿಯೇ ಹುಟ್ಟಿದ ವಚನ ಸಂಸ್ಕೃತಿಯ ಬಗ್ಗೆ ಸುಳ್ಳನ್ನು ಬರೆಯುವವರು ವಚನ ಸಂಸ್ಕೃತಿಯನ್ನು ವಿರೋಧಿಸುವವರು ಮಾನವ ಸಂಕುಲದ ವೈರಿಗಳಲ್ಲದೇ ಮತ್ತೇನು?

     ಉತ್ತರ
 19. shripad
  ಸೆಪ್ಟೆಂ 25 2014

  ನಮ್ಮ ದೇಶದಲ್ಲಿ ಮನುಸ್ಮೃತಿ ಇರುವಂತೆಯೇ ಪರಾಶರ, ನಾರದ ಇತ್ಯಾದಿ ಅನೇಕ ಸ್ಮೃತಿಗಳಿವೆ. ಎಲ್ಲರೂ ಮಾತನಾಡುವ ಕಾರಣಕ್ಕೆ ಬಹುಶಃ ಮನುಸ್ಮೃತಿ ಹೆಚ್ಚು ಚಾಲ್ತಿಯಲ್ಲಿದೆ. ಮನುಸ್ಮೃತಿಯನ್ನು ಯಾರು ಯಾವಾಗ ಬರೆದರೋ ಅದನ್ನು ಯಾರು ಪಾಲಿಸಿದರೋ ಸ್ಪಷ್ಟವಿಲ್ಲ. ಅದು ಯಾವುದೋ ಕಾಲಘಟ್ಟದ ನಿಯಮ ಕೃತಿ ಎಂದು ಇಟ್ಟುಕೊಳ್ಳಬಹುದಷ್ಟೆ. ಅದರಲ್ಲಿ ಉತ್ತಮ ಅಂಶವಿದ್ದರೆ ಸ್ವೀಕರಿಸಿ, ಇಲ್ಲವಾದರೆ ಬಿಡಿ. ಯಾವುದೋ ಕಾಲದ ಕೃತಿಯನ್ನು ಈಗ ಮುಂದಿಟ್ಟುಕೊಂಡು ಅದರಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲ ಅನ್ನುವುದೇ ಸರಿ ಇಲ್ಲ. ನಮ್ಮ ಸಂವಿಧಾನವನ್ನೇ ನೋಡಿ: ೧೯೫೦ರಿಂದ ೨೦೧೩ರ ಕೇವಲ ೬೩ ವರ್ಷಗಳ ಅವಧಿಯಲ್ಲಿ ಅದು ೧೨೦ ಬಾರಿ ತಿದ್ದುಪಡಿಯಾಗಿದೆ! ೧೯೫೦ರ ಸಂವಿಧಾನವೇ ಈಗಲೂ ಇದ್ದರೆ ಅದು ಕೂಡ ಮನುಸ್ಮೃತಿಯಂತೆಯೇ ಅಪ್ರಸ್ತುತವಾಗುತ್ತಿತ್ತು. ಏನು ಮಾಡುವುದು? ಮನುಸ್ಮೃತಿಗೆ ಕಾಲಕಾಲಕ್ಕೆ ತಿದ್ದುಪಡಿ ಆಗಲಿಲ್ಲ.
  ಇನ್ನು ಜಾತಿ, ಸ್ಪೃಶ್ಯ, ಅಸ್ಪೃಶ್ಯ ಇತ್ಯಾದಿ ಪರಕಲ್ಪನೆಗಳು ಕೇವಲ ಬ್ರಾಹ್ಮಣರಲ್ಲಿ ಮಾತ್ರವೇ ಇವೆ ಎಂಬುದೂ ಸರಿಯಲ್ಲ, ಎಲ್ಲ ಜಾತಿ ಸಂಬಂಧಿ ವ್ಯವಸ್ಥೆ ಬ್ರಾಹ್ಮಣರಿಂದಲೇ ಸೃಷ್ಟಿಯಾಯಿತು ಎಂಬುದೂ ಸರಿಯಲ್ಲ. ಡಾ. ಅಂಬೇಡ್ಕರ್ ಅವರೂ ಇದನ್ನು ಒಪ್ಪುವುದಿಲ್ಲ (ಓದಿ-ಜಾತಿ ವಿನಾಶ). ಎಲ್ಲರೂ ಬ್ರಾಹ್ಮಣರ ಬಗ್ಗೆ ಮಾತನಾಡಬಹುದಾದ್ದರಿಂದ, ತಮ್ಮ ತಮ್ಮ ಜಾತಿ ವ್ಯವಸ್ಥೆಯನ್ನು ಅವಲೋಕಿಸಿ ನೋಡಿಕೊಳ್ಳದೇ ಭಾಷಣಕ್ಕೇ ಇಳಿಯುವುದರಿಂದ ಹೀಗಾಗಬಹುದೇನೋ. ಹೀಗೆ ಮಾತನಾಡುವವರು ಖಂಡಿತ ವಿವಿಧ ಭಿನ್ನ ಸಮುದಾಯಗಳ ಜೊತೆ ಬೆರೆತು ಕ್ಷೇತ್ರಕಾರ್ಯ ಮಾಡದವರು ಅಥವಾ ಸೈದ್ಧಾಂತಿಕ ಚರ್ಚೆಯನ್ನು ಕೇವಲ ಪುಸ್ತಕಗಳಲ್ಲಿ ಓದಿದವರು. ಕ್ಷೇತ್ರದ ನೈಜ ಅನುಭವವೇ ಬೇರೆ.
  ೧೯೯೬ರಿಂದ ಕರಾವಳಿ, ಮಲೆನಾಡು, ತಮಿಳುನಾಡು, ಕೇರಳ ಮೊದಲಾದ ಕಡೆ ಸಿದ್ದಿ, ಗೊಂಡ, ಹಾಲಕ್ಕಿ, ಸೋಲಿಗ, ಕಾಡುಗೊಲ್ಲ, ತೋಡ, ಕಣಿಯ ಮೊದಲಾದ ೨೫ಕ್ಕೂ ಹೆಚ್ಚು ಆದಿವಾಸಿ, ಬುಡಕಟ್ಟುಗಳ ನೆಲೆಗಳಲ್ಲಿ ಕ್ಷೇತ್ರಕಾರ್ಯ ನಡೆಸಿದಾಗಿನ ನನ್ನ ಅನುಭವ ವೈವಿಧ್ಯವಾಗಿದೆ. ಒಂದೆಡೆಯಂತೂ ಸಮುದಾಯವೊಂದು ನಾನು ಅವರ ಗುಡಿಸಿಲೊಳಗೆ ಪ್ರವೇಶಿಸಿದ ಕಾರಣ ಇಡೀ ಗುಡಿಸಿಲನ್ನು (ಅಡಿಕೆ ಸೋಗೆ ಹಾಗೂ ಮಣ್ಣಿನ ನೆಲದ ಸಣ್ಣ ಹಟ್ಟಿ ಅದಾಗಿತ್ತು) ಅಕ್ಷರಶಃ ತೊಳೆದರು! ಅನಂತರ ಬೇರೇನೂ ಮಾಹಿತಿ ಕೊಡದೇ ಕಳುಹಿಸಿದ್ದೂ ಇದೆ. ಅವರೇನೂ ಬ್ರಾಹ್ಮಣರಲ್ಲ. ಅವರ ಸಂಪರ್ಕವೂ ಇಲ್ಲ.
  ಮನುಸ್ಮೃತಿ ಇರಲಿ, ಬ್ರಾಹ್ಮಣರನ್ನು ಸಂಪೂರ್ಣ ನಿಷೇಧಿಸುವ ಕಾಡುಗೊಲ್ಲರಲ್ಲಿ ಇರುವ ಶಾಸ್ತ್ರ, ನಿಷೇಧಗಳು, ಅವರದೇ ಬೆಡಗು (ಭಿನ್ನ ಕುಲ)ಗಳ ನಡುವಿನ ನಿಷೇಧಗಳನ್ನು ಗಮನಿಸಿದರೂ ಮಾತೆತ್ತಿದರೆ ಇದಕ್ಕೆಲ್ಲ ಬ್ರಾಹ್ಮಣರೇ ಕಾರಣ ಎನ್ನುವವರು ಇಂಥ ಯಾವ ಕ್ಷೇತ್ರಾನುಭವವೂ ಇಲ್ಲದವರು ಎಂಬುದು ಅರಿವಾಗುತ್ತದೆ. ಪುಸ್ತಕದ ಬದನೆಕಾಯಿ ಓದಿ ಮಾತನಾಡುವುದಕ್ಕೇನು ಅಡ್ಡಿ?

  ಉತ್ತರ
 20. valavi
  ಸೆಪ್ಟೆಂ 25 2014

  uttama vimarShe ShrIpadare.

  ಉತ್ತರ
 21. k govinda bhat
  ಸೆಪ್ಟೆಂ 26 2014

  ಮನು ಕುಲದ (ಮಾನವನ) ಮೂಲ ಪುರುಷನೇ ಮನು. ಆದ್ದರಿಂದ ನಾವೆಲ್ಲ ಮನುಷ್ಯರು . ಇಷ್ಟು ನನ್ನ ಸಣ್ಣ ತಲೆಗೆ ಗೊತ್ತು. ಇದು ಸರಿಯೋ ತಪ್ಪೋ ದೊಡ್ಡ ತಲೆಯವರು ಹೇಳ ಬೇಕು. ಕೆಲವರು eve ಮತ್ತು adam ನಿಂದ ಅನ್ನುತ್ತಾರೆ. ಅಂತೂ ನಾವು ಮನುಷ್ಯರಾಗಿ ಹುಟ್ಟಿದ್ದಂತೂ ನಿಜ ಮನುಷ್ಯರಾಗೇ ಸಾಯೋಣ.

  ಉತ್ತರ
 22. Nagshetty Shetkar
  ಸೆಪ್ಟೆಂ 26 2014

  “ಈ ನಾಗಶೆಟ್ಟಿ ಶೆಟ್ಕರರನ್ನು ಬ್ಲಾಕ್ ಮಾಡಿ.”

  ನಿನ್ನೆಯವರೆಗೆ ಸಿ ಎಸ ಎಲ್ ಸಿ ಮುಚ್ಚಿಸಿದ್ದನ್ನು ಉಗ್ರವಾಗಿ ಪ್ರತಿಭಟಿಸುತ್ತಿದ್ದ ವೀರ ಈಗ ಶೆಟ್ಕರ್ ಅನ್ನು ಬ್ಲಾಕ್ ಮಾಡಿ ಅಂತ ರಾಕೇಶ್ ಅವರ ಮೇಲೆ ಒತ್ತಾಯ ಹೂಡುತ್ತಿದ್ದಾರೆ! ಇದೇನಾ ನಿಮ್ಮ ನೈತಿಕತೆ? ಛೆ!

  ಉತ್ತರ
 23. Nagshetty Shetkar
  ಸೆಪ್ಟೆಂ 26 2014

  “ಅದೇ ಪುಂಗಿ ಊದುತ್ತಾನೇ ಇರಿ. ”

  ಬಾಲು ಅವರ ಪುಂಗಿ ಓದುತ್ತಾ ಅನ್ನ ಸಂಪಾದನೆ ಮಾಡುತ್ತಿರುವವರು ನೀವು.

  ಉತ್ತರ
  • shripad
   ಸೆಪ್ಟೆಂ 27 2014

   ದರ್ಗಾ ಪುಂಗಿಯನ್ನು ನೀವು ಊದುವಂತೆ!

   ಉತ್ತರ
   • Nagshetty Shetkar
    ಸೆಪ್ಟೆಂ 27 2014

    ಸಮಾನತೆಯ ರಣ ಕಹಳೆಯನ್ನು ಊದುತ್ತಿರುವೆವು ನಾವು ಪ್ರಜ್ಞಾವಂತರು. ಲೋಕಕಲ್ಯಾಣವೇ ನಮ್ಮ ಗುರಿ. ದರ್ಗಾ ಸರ್ ಅವರು ನಮ್ಮ ನಡುವಿನ ಚನ್ನಬಸವಣ್ಣ,

    ಉತ್ತರ
    • shripad
     ಸೆಪ್ಟೆಂ 29 2014

     ಬಸವಾದ್ವೈತ ಪ್ರವೀಣ ಎಂದುಕೊಳ್ಳುವ ಶೆಟ್ಕರ್ ಸಾಹೇಬ್ರೇ ಸೆಪ್ಟೆಂಬರ್ ೨೫ ಮತ್ತು ೨೭ರ ನನ್ನ ಕಮೆಂಟುಗಳಿಗೆ ನಿಮ್ಮಿಂದ ಪ್ರತಿಕ್ರಿಯೆ ಬರಲು ಸಾಧ್ಯವೇ ಇಲ್ಲ ಎಂದು ನಂಬಿದ್ದೆ. ಅದು ಕೇವಲ ನಂಬಿಕೆಯಾದ್ದರಿಂದ ಈಡೇರುವವರೆಗೂ ಮೌಢ್ಯವಾಗಿತ್ತು, ಈಗ ನಿಜವೇ ಆಗಿದೆ! ಜಾತಿ ಕುರಿತ ನೇರ ಹಾಗೂ ನೈಜ ಅನುಭವಗಳ ಟಿಪ್ಪಣಿಗಳಿಗೆ ನಿಮ್ಮಲ್ಲಿ ಯಾವ ಉತ್ತರವೂ ಇರಲು ಶಕ್ಯವಿಲ್ಲ. ಯಾಕೆಂದರೆ ದರ್ಗಾ ಇತ್ಯಾದಿಗಳು ಹೇಳಿದ್ದರೆ ಅದು ಅವರ ಅನುಭವ. ನಿಮ್ಮದಲ್ಲವಲ್ಲ! ಅದಕ್ಕೆ. ನಿಮ್ಮ ಟೀಕೆ ತೇಲು ಹೇಳಿಕೆಗಳಿಗಷ್ಟೇ ಸೀಮಿತವಾಯಿತಲ್ಲಾ?

     ಉತ್ತರ
     • ಬಸವವೇ ಸತ್ಯ ಬಸವವೇ ನಿತ್ಯ
      ಸೆಪ್ಟೆಂ 29 2014

      ಶ್ರೀಪಾದ ಅವರೇ, ಹೌದು ಗಿರಿಜನರಲ್ಲೂ ಮಡಿ ಮೈಲಿಗೆ ಕಂಡು ಬರುತ್ತದೆ. ಗಿರಿಜನರು ಮಡಿ ಮೈಲಿಗೆ ಆಚರಿಸುತ್ತಾರೆ ಆದರೆ ಅವರಿಗೆ ತಮ್ಮ ಜಾತಿಯೇ ಶ್ರೇಷ್ಠ ಮಿಕ್ಕ ಜಾತಿಗಳು ಕನಿಷ್ಠ ಎಂಬ ಭಾವನೆ ಇಲ್ಲ. ಬ್ರಾಹ್ಮಣ್ಯವು ಮಡಿ ಮೈಲಿಗೆಯನ್ನು
      ಜಾತಿಯ ಶ್ರೇಷ್ಠತೆಯೊಂದಿಗೆ ಬೆಸೆದು ಬಿಟ್ಟಿದೆ. ನಿಮ್ಮ ಮನೆಯಲ್ಲಿ ನೀವು ಮಡಿ ಮೈಲಿಗೆ ಮಾಡಿ ನನ್ನ ತಕರಾರು ಇಲ್ಲ. ಆದರೆ ದೇವಾಲಯಗಳಲ್ಲಿ, ಶಾಲೆಗಳಲ್ಲಿ, ಹೊಟೇಲುಗಳಲ್ಲಿ, ಬಾವಿಗಳಲ್ಲಿ ಜಾತಿಯ ಆಧಾರದ ಮೇಲೆ ಮಡಿ ಮೈಲಿಗೆ ಆಚರಿಸುವುದನ್ನು ವಿರೋಧಿಸುತ್ತೇನೆ.

      ಉತ್ತರ
 24. ಬಸವವೇ ಸತ್ಯ ಬಸವವೇ ನಿತ್ಯ
  ಸೆಪ್ಟೆಂ 29 2014

  “ಹುಲುಮಾನವರು ಬುದ್ಧನನ್ನೋ, ಗಾಂಧಿಯನ್ನೋ, ಅಥವಾ ಷೆಟ್ಕರ್‌ರಂತೆ ಬಸವಣ್ಣನನ್ನೋ ನಂಬಿ ಅಥವಾ ಕಲ್ಪಿಸಿಕೊಂಡು ಈ ಕೊಳೆತ ಸಮಾಜದ ನಡುವೆ ಒಂದು ಭ್ರಮಾಲೋಕದಲ್ಲಿ ಜೀವನ ನಡೆಸುತ್ತಿರುತ್ತಾರೆ.”

  ವಾಸುದೇವ ಅವರೇ, ತಮಗೆ ನಾವು ಪ್ರಗತಿಪರರ ಬಗ್ಗೆ ತಪ್ಪು ಕಲ್ಪನೆಗಳಿವೆ. ನಾವು ಪ್ರಗತಿಪರರು ವಾಸ್ತವದ ತಲ್ಲಣಮಯ ಲೋಕದಲ್ಲಿ ಜೀವನ ನಡೆಸುತ್ತಿದ್ದೇವೆ, ಭ್ರಮಾಲೋಕದಲ್ಲಿ ಅಲ್ಲ. ನಮ್ಮ ಬಗ್ಗೆ ಅಪಪ್ರಚಾರ ಮಾಡಬೇಡಿ. ಈ ಕೆಳಗಿನ ಲೇಖನ ನೋಡಿ ನಿಮ್ಮ ತಪ್ಪು ಕಲ್ಪನೆಗಳನ್ನು ಸರಿಪಡಿಸಿಕೊಳ್ಳಿ.
  _http://ladaiprakashanabasu.blogspot.in/2014/09/blog-post_36.html
  “ಮನುಷ್ಯನಲ್ಲಿ ಹೊಸ ಕನಸುಗಳನ್ನು ಬಿತ್ತುವ ಪ್ರಯೋಗಗಳು ಯಾಕೆ ಹೀಗೆ ವಿಫಲಗೊಳ್ಳುತ್ತವೆ? ಸಹಜೀವಿಗಳೊಂದಿಗೆ ಸೌಹಾರ್ದದ ಬದುಕು ಯಾಕೆ ಸಾಧ್ಯವಾಗುವುದಿಲ್ಲ? ಮನುಷ್ಯನಲ್ಲಿರುವ ಸ್ವಾರ್ಥ, ದ್ವೇಷ ತೊಲಗಿ ಪ್ರೀತಿಯ ಬಳ್ಳಿ ಏಕೆ ಅರಳುವುದಿಲ್ಲ? ಈ ಪ್ರಶ್ನೆಗೆ ಸಂತರು, ಅನುಭವಿಗಳು, ಅವಧೂತರು, ಕ್ರಾಂತಿಕಾರಿಗಳು ಉತ್ತರ ಹುಡುಕಲು ಶತಮಾನದಿಂದ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಉತ್ತರವಿನ್ನು ದೊರಕಿಲ್ಲ. ಐದು ಸಾವಿರ ವರ್ಷದಿಂದ ಮನುಷ್ಯ ಹೀಗೇ ಇದ್ದಾನೆ ಎಂಬುದು ಮಾತ್ರ ಸತ್ಯ. ಮನುಷ್ಯನನ್ನು ಸರಿದಾರಿಗೆ ತರಲು, ಸಂತರು, ಪ್ರವಾದಿಗಳು, ಶರಣರು, ಕ್ರಾಂತಿಕಾರಿಗಳು ಎಷ್ಟೇ ಪ್ರಯಾಸ ಪಟ್ಟರೂ ಪ್ರಯೋಜನವಾಗುವುದಿಲ್ಲ. ಅಂತಲೇ ಮನುಷ್ಯ ತನ್ನ ಚಾಳಿ ಬಿಡುವುದಿಲ್ಲ ಎಂದು ಅನೇಕ ಬಾರಿ ಅನಿಸುತ್ತದೆ. ಆದರೆ, ಹಾಗೆಂದು ಕಂದಾಚಾರವನ್ನು, ಶೋಷಣೆಯನ್ನು ಕೋಮುವಾದವನ್ನು ಒಪ್ಪಿಕೊಳ್ಳಬೇಕೇ? ಸಾಧ್ಯವೇ ಇಲ್ಲ. ಈ ವ್ಯಾಧಿಗಳ ವಿರುದ್ಧ ಹೋರಾಡಿ ಮದ್ದು ನೀಡುತ್ತಲೇ ಇರಬೇಕು; ಎಂದಿಗೂ ಮೈಮರೆಯಬಾರದು. ಯಾವುದೇ ವ್ಯವಸ್ಥೆ ಬರಲಿ ಅಧಿಕಾರದಲ್ಲಿರುವವರಿಗೆ ಮದ ಏರುವುದು ಸಹಜ. ಈ ಅಧಿಕಾರ ಮದಕ್ಕೆ ತಿವಿಯಲು ಜನ ಸದಾ ಅಂಕುಶವಾಗಿ ನಿಲ್ಲುವದೊಂದೇ ಉಳಿದ ದಾರಿ.”

  ಉತ್ತರ
  • shripad
   ಸೆಪ್ಟೆಂ 30 2014

   ಇದ್ಯಾವುದು-ಬಸವವೇ ಸತ್ಯ, ನಿತ್ಯ? ಏಸುದೇವನಂತೆ ಬಸವನೂ ನಿತ್ಯನೂ ಸತ್ಯನೂ ಆಗಿದ್ದಾನೆ! ಶೆಟ್ಕರ್ ಸಾಹೇಬ್ರ (ಅಸಲಿ/ನಕಲಿ?) ಹೊಸ ಅವತಾರವೇ? ಮಜವಾಗಿದೆ.

   ಉತ್ತರ
   • Naani
    ಸೆಪ್ಟೆಂ 30 2014

    ‘ದರ್ಗಾ’ ಶಕ್ತಿಯ ದಶಾವತಾರಗಳಲ್ಲಿ ಇದೂ ಒಂದು ಶ್ರೀಪಾದರೇ 🙂

    ಉತ್ತರ
    • ಬಸವವೇ ಸತ್ಯ ಬಸವವೇ ನಿತ್ಯ
     ಸೆಪ್ಟೆಂ 30 2014

     ನಿಮ್ಮ ನೆಚ್ಚಿನ ಮಾಡರೆಟರ್ ರಾಕೇಶ್ ಶೆಟ್ಟರು ಷಣ್ಮುಖ ಅವರ ಸಲಹೆಯ ಮೇರೆಗೆ ನನ್ನ ಕಾಮೆಂಟುಗಳನ್ನು ಪ್ರಕಟಿಸುತ್ತಿಲ್ಲ. ನಾನು ನನ್ನ ಮೂಲ ಅವತಾರದಲ್ಲಿ ಪ್ರಕಟಿಸಿದ ಕಾಮೆಂಟುಗಳನ್ನು ಶೆಟ್ಟರು waiting for morderation ಅಂತ ರೆಜೆಕ್ಟ್ ಮಾಡಿದ್ದಾರೆ. ಆದುದರಿಂದ ಹೊಸ ಅವತಾರ ತಾಳಬೇಕಾಗಿ ಬಂತು. ಸಂಭವಾಮಿ ಯುಗೇ ಯುಗೇ! ಸತ್ಯವನ್ನು ಹತ್ತಿಕ್ಕುವ ಶೆಟ್ಟರ ಹುನ್ನಾರಕ್ಕೆ ಧಿಕ್ಕಾರ.

     ಉತ್ತರ
     • Naani
      ಸೆಪ್ಟೆಂ 30 2014

      ರಾಕೇಶ್ ಶೆಟ್ರ ಪ್ರಶ್ನೆಗಳಿಗೆ ಉತ್ತರಿಸಿ ಚಾರಿತ್ರಿಕ ಸತ್ಯವನ್ನು ಸಾಬೀತು ಮಾಡಿ ಅಂತ ಮೇಲೆ ಹೇಳಿದ್ದಕ್ಕೆ ಇಲ್ಲದ ಆಸಕ್ತಿ ದರ್ಗಾವತಾರದ ಕುರಿರು ಪ್ರತಿಕ್ರಿಯಿಸಲಿಕ್ಕೆ ಮಾತ್ರ ಹೇಗೆ ಬಂತು? ಇದು ದರ್ಗಾವತಾರವೇ ಎಂದು ಮುಧ್ರೆ ಒತ್ತಲೆಂದೇ? ಇಲ್ಲ ರಾಕೇಶ್ ಶೆಟ್ರಿಗೆ ಧಿಕ್ಕಾರ ಕೂಗಲೆಂದೇ? ರಾಕೇಶ್ ಶೆಟ್ರು ಕೇಳಿದ ಪ್ರಶ್ನೆಗಳಿಗೆ ಒಂದಾದರೂ ಉತ್ತರ ಕೊಡುವ ಪ್ರಯತ್ನ ಮಾಡದೆ ಸ್ವರತಿಯಲ್ಲಿ ತೊಡಗಿ ಇಲ್ಲಿಯ ಚರ್ಚೆಗೆ ಮಣ್ಣು ಹಾಕುವ ನಿಮ್ಮ ಕಾಯಕ ಸತ್ಯವನ್ನು ಮುಚ್ಚಿಹಾಕುವ ಹುನ್ನಾರವಲ್ಲವೇ?

      ಉತ್ತರ
      • Nagshetty Shetkar
       ಸೆಪ್ಟೆಂ 30 2014

       ರಾಕೇಶ್ ಶೆಟ್ಟಿ ಅವರು ಇಲ್ಲಿ ಹೊಸದೇನನ್ನೂ ಹೇಳಿಲ್ಲ. ಬಾಲಗಂಗಾಧರ ಅವರು ಈಗಾಗಲೇ ಅನೇಕ ಕಡೆ ಹೇಳಿರುವ ವಿಚಾರಗಳನ್ನೇ ಕಾಪಿ ಮಾಡಿ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಸ್ವಂತಿಕೆ ಇರಲಿ ಸ್ವಾಭಿಮಾನವೂ ಇಲ್ಲ ರಾಕೇಶ್ ಅವರಿಗೆ. ಇನ್ನಾದರೂ ಸ್ವಂತ ಚಿಂತನೆ ನಡೆಸುವುದು ಉತ್ತಮ.

       ಬಾಲಗಂಗಾಧರ ಅವರಿಗೆ ಪ್ರಶ್ನೆಗಳ ಉತ್ತರ ಬೇಕಿದ್ದರೆ ನೇರವಾಗಿ ಅವರು ತಮ್ಮ ಹೆಸರಿನಲ್ಲೇ ಪ್ರಗತಿಪರರನ್ನು ಉದ್ದೇಶಿಸಿ ಬರೆಯಲಿ. ಆಗ ಅವರಿಗೆ ತಕ್ಕ ಉತ್ತರ ಕೊಡುವ. ಬಾಲಂಗೋಚಿಗಳನ್ನು ಮುಂದು ಮಾಡಿ ಪ್ರಶ್ನೆ ಕೇಳುವ ಚಾಳಿ ಬಿಡಲಿ.

       ಉತ್ತರ
       • ಆಕ್ಟೋ 1 2014

        ಶೆಟ್ಕರ್ ಮಹಾಶಯರೇ,
        ಎದುರಾಳಿಯನ್ನು “ಕೆಣಕುವುದು”, ಅವನು ತಿರುಗಿಬಿದ್ದು ಬಯ್ದರೇ, ನಿಮ್ಮಂತವರೊಂದಿಗೆ ನಾವು ಚರ್ಚಿಸುವುದಿಲ್ಲ ಎಂದು “ಓಡಿ ಹೋಗುವುದು” ಇವೆಲ್ಲಾ “ಪುರಾತನ ಸೆಕ್ಯುಲರ್ ತಂತ್ರ”ಗಳು.ಇದನ್ನು ಯಾವುದಾದರೂ ಹಳೆತಲೆಗಳ ಬಳಿಯಿಟ್ಟುಕೊಳ್ಳಿ. ನಿಮ್ಮ ಅವ್ವಯ್ಯ ಆಟಗಳು ನಮಗೆ ಚೆನ್ನಾಗಿ ತಿಳಿದಿವೆ.
        ವಿಷಯಕ್ಕೆ ಸಂಬಂಧಿಸಿ ಏನಾದರೂ ಹೇಳುವುದಿದ್ದರೆ ಹೇಳಿ.ಇಲ್ಲ ತೆಪ್ಪಗಿರಿ

        ಉತ್ತರ
        • ಬಸವವೇ ಸತ್ಯ ಬಸವವೇ ನಿತ್ಯ
         ಆಕ್ಟೋ 1 2014

         ನಾನೊಬ್ಬ ಸಾಮಾನ್ಯ ಮನುಷ್ಯ. ನನ್ನ ಮಾತುಗಳಿಗೆ ನೀವು ಬೆಲೆ ಕೊಡದಿದ್ದರೆ ಚಿಂತೆ ಇಲ್ಲ. ಆದರೆ ಚಾರಿತ್ರಿಕ ‘ಕಾಗೋಡು ರೈತ ಚಳವಳಿ’ಯ ಮುಂದಾಳತ್ವ ವಹಿಸಿದ್ದವರು ಹಿರಿಯ ಗಾಂಧೀವಾದಿ ಡಾ.ಎಚ್. ಗಣಪತಿಯಪ್ಪನವರು ಏನಂತಾರೆ ನೋಡಿ:

         “ಇಂದು ಮನುಸ್ಮೃತಿಯೇ ನಮ್ಮ ಧಾರ್ಮಿಕ ಕಾನೂನಾಗಿದೆ. ಅಧಿಕಾರಕ್ಕೆ ಹೋದವರೂ ಅದರ ಆಧಾರದಲ್ಲಿಯೇ ಕಾನೂನು ರಚಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ನಮ್ಮ ಸಂಧಾನದಲ್ಲಿರುವ ಜಾತ್ಯಾತೀತ ಪರಿಕಲ್ಪನೆಗಳಿಗೆ ತಕ್ಕಂತೆ ಕಾನೂನು ರಚಿಸುತ್ತಲೇ ಇಲ್ಲ.”

         “ಈ ಕಾಲದಲ್ಲೂ ಜನರು ಜಾತಿ ಪದ್ಧತಿಯ ಅಡಿಗೇ ನರಳುತ್ತಿದ್ದಾರೆ. ಇದರಲ್ಲಿ ಚಾತುರ್ವರ್ಣ ವ್ಯವಸ್ಥೆ ಎನ್ನುವುದು ಗಡ್ಡೆ ರೂಪದಲ್ಲಿ ಕೆಲಸ ಮಾಡುತ್ತಾ ಬಂದಿದೆ. ಮೇಲಿನ ಎಲ್ಲದನ್ನೂ ಅದೇ ನಿರ್ಧಾರ ಮಾಡುತ್ತೆ. ಏನೂ ಬರದಿರುವ ದಡ್ಡನನ್ನು ಕೂಡಾ ಜನಿವಾರ ಹಾಕಿ ಅವನನ್ನು ಮುಂದಾಳಾಗಿ ಮಾಡಿಬಿಟ್ಟರು ದೇಶದಲ್ಲಿ. ಇದನ್ನು ಹೋಗಲಾಡಿಸೋಕೇ ಆಗಿಲ್ಲ. ಎಂತೆಂಥವರೋ ಪ್ರಯತ್ನಿಸದರಾದರೂ ಆ ಕೆಲಸ ಇನ್ನೂ ಆಗಿಲ್ಲ. ದೇಶವನ್ನು ಆಳಿದ ಪ್ರತಿಯೊಬ್ಬ ರಾಜ, ಮಹಾರಾಜನೂ ಈ ಚಾತುರ್ವರ್ಣದಿಂದಲೇ ತಮಗೆ ಲಾಭ ಇರುವುದನ್ನು ಕಂಡುಕೊಂಡು ಅದರ ಪ್ರಕಾರವೇ ಆಳ್ವಿಕೆ ನಡೆಸಿದಾರೆ. ಇವತ್ತಿಗೂ ಶಾಸನಗಳನ್ನು ರಚಿಸುತ್ತಿರುವುದು ಜಾತಿಯಿಂದ ಮೇಲಿರುವ ಬುದ್ಧಿಜೀವಿಗಳೇ.”

         ಗಣಪತಿಯಪ್ಪನವರು ಗ್ರಾಸ್ ರೂಟ್ಸ್ ಮನುಷ್ಯ, ಜನನಾಡಿ ಏನು ಅಂತ ಅರಿತವರು. ಅವರು ಹೇಳುವ ಮಾತಿನಲ್ಲಿ ಸತ್ಯವಿಲ್ಲ ಎಂದರೆ ನಂಬುವುದು ಹೇಗೆ? ಅವರೇಕೆ ಸುಳ್ಳು ಹೇಳುತ್ತಾರೆ???

         ಉತ್ತರ
         • shripad
          ಆಕ್ಟೋ 1 2014

          ಸಾಹೇಬ್ರೇ ಗಣಪತಿಯಪ್ಪನವರು ಕಾಗೋಡು ಸಮಸ್ಯೆಯ ಪಂಡಿತರಿರಬಹುದು. ಅವರು ಭಾರತದ ಶೃತಿ-ಸ್ಮೃತಿಗಳ ಪಂಡಿತರೇ? ಎಲ್ಲ ಸಮಾಜವಾದಿಗಳು, ಹಾಗಂತ ಕರೆದುಕೊಂಡಿರುವವರು, ನಿಮ್ಮಂಥವರು ಮನುಸ್ಮೃತಿಯ ಬಗ್ಗೆ ಏನು ಹೇಳಬಲ್ಲಿರೋ ಅದನ್ನೇ ಅವರೂ ಹೇಳಿದ್ದಾರೆ. ಇದರಲ್ಲಿ ಹೊಸದೇನಿದೆ? ಇನ್ನೂ ಬೇಕೆಂದರೆ ನ್ಯಾಯಮೂರ್ತಿ ರಾಮಾಜೋಯಿಸರು ಮನುಸ್ಮೃತಿಯ ಬಗ್ಗೆ ವಿಸ್ತೃತವಾಗಿ ಬರೆದು ಕೃತಿಯನ್ನೇ ರಚಿಸಿದ್ದಾರೆ. ಓದಿಕೊಳ್ಳಿ.

          ಉತ್ತರ
          • Nagshetty Shetkar
           ಆಕ್ಟೋ 1 2014

           ನಾನು ಮೊದಲೇ ಹೇಳಿದ ಹಾಗೆ ಗಣಪತಿಯಪ್ಪನವರು ಗ್ರಾಸ್ ರೂಟ್ಸ್ ಮನುಷ್ಯ. ಮಾರ್ಕ್ಸ್ ವಾದದ ಥಿಯರಿ ಪಾಸು ಮಾಡಿ ಪ್ರಗತಿಪರರಾದವರಲ್ಲ, ಜನಪರ ಹೋರಾಟಗಳನ್ನು ನಡೆಸುತ್ತಾ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪ್ರಗತಿಪರರಾದವರು. ಅಂತಹ ದೊಡ್ಡ ಮನುಷ್ಯ ತನ್ನ ಅನುಭವದಲ್ಲಿ ಬಾರದ ವಿಷಯದ ಬಗ್ಗೆ ಏಕೆ ಟಿಪ್ಪಣಿ ಮಾಡುತ್ತಾರೆ ಹೇಳಿ? ಗಣಪತಿಯಪ್ಪ ತುಂಬಾ ಹತ್ತಿರದಿಂದ ಮನುವಾದವನ್ನು ನೋಡಿರುವುದರಿಂದಲೇ ಅದರ ಬಗ್ಗೆ ಟೀಕೆ ಮಾಡಿದ್ದಾರೆ ಅಂತ ನನಗೆ ಅನ್ನಿಸುತ್ತದೆ. ರಾಮಾ ಜೋಯಿಸ್ ಅವರು ಆರ್ ಎಸ ಎಸ ಹಿನ್ನೆಲೆ ಇರುವಂತಹ ವ್ಯಕ್ತಿ. ಅವರು ಮನು ಸ್ಮೃತಿಯನ್ನು ಡಿಫೆಂಡ್ ಮಾಡಿರುತ್ತಾರೆ ಬಿಡಿ, ಅದರಲ್ಲಿ ಹೊಸದೇನಿದೆ?

     • shripad
      ಸೆಪ್ಟೆಂ 30 2014

      ಹಾ!! ದುರ್ವಿಧಿಯೇ!

      ಉತ್ತರ
     • ಆಕ್ಟೋ 1 2014

      @ನಾಗಶೆಟ್ಟಿ ಶೆಟ್ಕರ್
      ನೀವು ಇನ್ನಾದರೂ ಗಂಭೀರವಾಗಿ, ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುತ್ತೀರೆಂದು ನಂಬಿ, ನಿಮ್ಮ ಪ್ರತಿಕ್ರಿಯೆಗಳಿಗೆ ಹಾಕಿದ್ದ “ಮಾಡರೇಷನ್” ಅನ್ನು ತೆಗೆದು ಹಾಕಲಾಗಿದೆ. ನೀವು ನಿಮ್ಮ ಮೊದಲಿನ ಈ-ಮೇಲ್ ಮತ್ತು ಹೆಸರನ್ನು ಬಳಸಬಹುದು. ಧನ್ಯವಾದ.

      ಉತ್ತರ
      • Nagshetty Shetkar
       ಆಕ್ಟೋ 2 2014

       ನಾನು ಗಂಭೀರವಾಗಿಯೇ ಚರ್ಚೆ ಮಾಡುವುದು. ಆದರೆ ನಿಮ್ಮ ಕೆಲ ಜನರು ಬೇಕಂತಲೇ ನನ್ನ, ದರ್ಗಾ ಸರ್ ಅವರ, ಪ್ರಗತಿಪರ ಚಿಂತಕರ ಮೂದಲಿಕೆಯನ್ನು ಮಾಡುತ್ತಾ ಬಂದಿದ್ದಾರೆ. ಅದನ್ನು ಮೊದಲು ನಿಲ್ಲಿಸಿ.

       ಉತ್ತರ
 25. Shripad
  ಆಕ್ಟೋ 2 2014

  “ರಾಮಾ ಜೋಯಿಸ್ ಅವರು ಆರ್ ಎಸ ಎಸ ಹಿನ್ನೆಲೆ ಇರುವಂತಹ ವ್ಯಕ್ತಿ. ಅವರು ಮನು ಸ್ಮೃತಿಯನ್ನು ಡಿಫೆಂಡ್ ಮಾಡಿರುತ್ತಾರೆ ಬಿಡಿ, ಅದರಲ್ಲಿ ಹೊಸದೇನಿದೆ?”
  -ಇದಕ್ಕೇ ಅನ್ನುವುದು ಪೂರ್ವಗ್ರಹಪೀಡಿತ ಮನಸ್ಸು ನಿಮ್ಮದು ಅಂತ. ಅವರು ಆರ್ ಎಸ್ ಎಸ್ಸೋ ಮತ್ತೊಂದೋ. ಅದನ್ನು ಕಟ್ಟಿಕೊಂಡು ಏನಾಗಬೇಕು? ನಿಮಗೆ ತಿಳಿವಳಿಕೆ ಬೇಕಿರುವುದು ಮನುಸ್ಮೃತಿ ಬಗ್ಗೆ. ಅದು ಗಣಪತಿಯಪ್ಪರ ಟೀಕೆಯಲ್ಲಿ ಇಲ್ಲ. ಅದೊಂದು ಸಾಧಾರಣ ಟೀಕೆ. ಮೂಲ ಮನುಸ್ಮೃತಿ ಪಠ್ಯ ಅದಲ್ಲ, ಅದರ ಟಿಪ್ಪಣಿಯೂ ಅಲ್ಲ. ಮೂಲ ಓದದೇ ದರ್ಗಾ ಹೇಳಿದ್ದು ದಿವ್ಯವಾಗಿದೆ; ಗಣಪತಿಯಪ್ಪ ಹೇಳಿದ್ದು ಗಂಭೀರವಾಗಿದೆ; ಚೆನ್ನಿ ಹೇಳಿದ್ದು ಚೆನ್ನಾಗಿದೆ ಎನ್ನುತ್ತಲೇ ಎಷ್ಟುಕಾಲ ಕಳೀತೀರಿ?
  ದುರಂತ ಎಂದರೆ ಕನ್ನಡ ಸಾಹಿತ್ಯದ ಕಥೆಯೂ ಹೀಗೆಯೇ ಆಗಿದೆ. ಭೈರಪ್ಪನವರ ಕೃತಿ ಎಂದಿಟ್ಟುಕೊಳ್ಳಿ. ಅದನ್ನು ಓದದೇ ಅವರಿವರ (ತಮಗೆ ಒಪ್ಪುವ ಸೋ ಕಾಲ್ಡ್ ವಿಮರ್ಶಕರ) ಟೀಕೆ ಓದಿ ಅವರ ಕೃತಿ ಹಾಗಿದೆ ಹೀಗಿದೆ ಅನ್ನುವ ಗುಂಪು ಧಾರಾಳವಾಗಿದೆ. ಇದೊಂದು ಎಲ್ಲೆಡೆ ವ್ಯಾಪಿಸುತ್ತಿರುವ ಕೆಟ್ಟ ಟ್ರೆಂಡ್.
  ಮೂಲ ಓದಿ. ನಿಮಗೆ ನಿಮ್ಮದೇ ಆದ ಗ್ರಹಿಕೆ ಮೂಡಬಹುದು. ಅನ್ಯರ ಬೆನ್ನು ಕೆರೆಯುತ್ತ ಕಾಲಕಳೆಯುವುದರಲ್ಲಿ ಅರ್ಥವಿಲ್ಲ ಅಲ್ಲವೇ?

  ಉತ್ತರ
  • Nagshetty Shetkar
   ಆಕ್ಟೋ 2 2014

   ರಾಮಾ ಜೋಯಿಸ್ ಅವರ ಕೃತಿಯ ಸಂಗ್ರಹವನ್ನು ನಿಳುಮೆಯಲ್ಲಿ ಪ್ರಕಟಿಸಿ, ಆಗ ಓದುತ್ತೇನೆ.

   ಉತ್ತರ
   • Shripad
    ಆಕ್ಟೋ 3 2014

    ಓಹೋ. ಘನತೆವೆತ್ತವರ ಕಂಡೀಶನ್ನುಗಳು ಮತ್ತೇನೇನೇನಿವೆಯೋ? ಚಾಕೊಲೇಟ್ ಕೊಡಿಸಿ ಓದ್ತೇನೆ, ಪುಗ್ಗಿ ಕೊಡಿಸಿ ಓದ್ತೇನೆ, ಜಾಣ ಅನ್ನಿ ಓದ್ತೇನೆ ಇತ್ಯಾದಿ ಇತ್ಯಾದಿ…!!

    ಉತ್ತರ
 26. Santosh
  ನವೆಂ 25 2016

  ಹಿಂದೂ ಧರ್ಮದಲ್ಲಿರುವ ರಾಮ ಸೀತೆ ಲಕ್ಷ್ಮಣ ಶ್ರೀಕೃಷ್ಣ ಹೀಗೆ ಪ್ರತಿಯೊಬ್ಬ ದೇವರುಗಳು ಯಾವಾಗ ಹುಟ್ಟಿದರು.? ಎಲ್ಲಿ ಹುಟ್ಟಿದ್ದರು.? ಈಗ ಅವರೇಲ್ಲ ಎಲ್ಲಿ ಇದ್ದಾರೆ.?
  ಹಿಂದೂಧರ್ಮದ ಧರ್ಮ ಸಂಸ್ಥಾಪಕರು ಯಾರು.?
  ಹಿಂದೂಧರ್ಮದ ಧರ್ಮ ಗುರು ಯಾರು.?
  ಹಿಂದೂಧರ್ಮ ಯಾವಗ ಹುಟ್ಟಿದ್ದು.?
  ಹಿಂದೂಧರ್ಮದ ಧರ್ಮಗ್ರಂಥ ಯಾವದು.?
  ಹಿಂದೂಧರ್ಮದ ಧರ್ಮಗ್ರಂಥ ಈಗ ಎಲ್ಲಿದೇ.?
  ಹಿಂದೂಧರ್ಮದ ಧರ್ಮಗ್ರಂಥ ರಚನೆಯಾದ ಕಾಲ ಯಾವದು.?
  ಭಾರತ ಸ್ವಾತಂತ್ರ್ಯ ಕಾಲದಲ್ಲಿ ದೇವರುಗಳು ಯಾಕೆ ಹೋರಾಟದಲ್ಲಿ ಭಾಗವಹಿಸಲಿಲ್ಲ.?
  ಇದಕ್ಕೆ ಮೋದಲು ಉತ್ತರಿಸಿ…..!
  ನಾನು ಮನುಸ್ಮೃತಿ ಬಗ್ಗೆ ಉತ್ತರಿಸುವೇ…

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments