ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 1, 2014

67

ಚರಿತ್ರೆ ಮತ್ತು ಗತಕಾಲ

‍ನಿಲುಮೆ ಮೂಲಕ

ಭಗವದ್ಗೀತೆ“ಮನುಸ್ಮೃತಿ”ಯ ಕುರಿತ ಲೇಖನದಲ್ಲಿ ವಲವಿ,ಷಣ್ಮುಖ ಮತ್ತು ಶೆಟ್ಕರ್ ಅವರ ನಡುವೆ ನಡೆದ ಪ್ರತಿಕ್ರಿಯೆಗಳು ಹೆಚ್ಚು ಜನರಿಗೆ ತಲುಪಲಿ ಎಂದು ಅವುಗಳನ್ನು ಲೇಖನವಾಗಿ ಪ್ರಕಟಿಸುತಿದ್ದೇವೆ – ನಿಲುಮೆ ನಿರ್ವಾಹಕರು.

ವಲವಿ: ಷಣ್ಮುಖ ಅವರೆ,“ಈ ಜಾತಿ ಪದ್ಧತಿ ಯಾರಿಂದ ಭಾರತದಲ್ಲಿ ಬೇರೂರಿತು? ವೇದಕಾಲದಲ್ಲಿ ಇರಲಾರದ ಜಾತಿ ಯಾವ ಕಾಲದಲ್ಲಿ ಭಾರತದಲ್ಲಿ ಬಳಕೆಗೆ ಬಂತು? ಮತ್ತು ಅಸ್ಪೃಶ್ಯತೆ ಆಚರಣೆ ಯಾವಾಗ ಶುರುವಾಯಿತು? ಕಾರಣಗಳೇನು ವಿವರಿಸುವಿರಾ? ಈಗ ಸಧ್ಯಕ್ಕೆ ನೀವು ತಿಳಿದ ಮಟ್ಟಿಗಾದರೂ ಇವುಗಳ ಬಗ್ಗೆ ಬೆಳಕು ಚಲ್ಲಿದರೆ ಸಂತೋಷವಾಗುತ್ತದೆ.”

ಷಣ್ಮುಖ : ಮಾನ್ಯ ವಲವಿ ಯವರೇ, ಬಹಳವೇ ದೊಡ್ಡ ದೊಡ್ಡ ಪ್ರಶ್ನೆಗಳನ್ನು ಕೇಳ್ತಿದ್ದೀರಿ. ಆದರೆ ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿನ ಸಮಸ್ಯೆಗಳನ್ನು ಮಾತ್ರ ಸಂಕ್ಷಿಪ್ತವಾಗಿ ಹೇಳ್ತೇನೆ ಆಗ ಈ ಪ್ರಶ್ನೆಗಳ ಸಮಸ್ಯೆಯನ್ನೋ ಅಥವಾ ಇಂತಹ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರದ ಸಾಧ್ಯತೆಯನ್ನೋ ಪರಿಶೀಲಿಸಿಕೊಳ್ಳಲಾದರೂ ನೆರವಾಗಬಹುದು.

ಮೊದಲಿಗೆ ಆರಂಭದ ಎರಡು ಪ್ರಶ್ನೆಗಳಿಗೆ ಉತ್ತರಿಸಲು ಒಂದೇ ರೀತಿಯ ಸಮಸ್ಯೆ ಇದೆ. ಈ ಪ್ರಶ್ನೆಯಲ್ಲಿ ನಿಮ್ಮ ಕುತೂಹಲವೆಂದರೆ ವೇದಗಳ ಕಾಲದಲ್ಲಿ ಜಾತಿಪದ್ದತಿ ಇರಲಿಲ್ಲ ನಂತರ ಇದು ಹುಟ್ಟಿ ಭಾರತದಾದ್ಯಂತ (ಹೊರಗೂ) ಹರಡಡಿಕೊಂಡಿದ್ದು ಹೇಗೆ? ಎನ್ನುವುದು. ಈ ತೀರ್ಮಾನಕ್ಕೆ ಎಲ್ಲರಂತೆಯೇ ನೀವು ಅಂದಿನ “ಪಠ್ಯಾಧಾರಗಳನ್ನು” ಅವಲಂಬಿಸಿ ವೇದಗಳ ಕಾಲದಲ್ಲಿ “ಇಲ್ಲದ್ದು” (ಏಕೆಂದರೆ ವೇದಗಳಲ್ಲಿ ಇವುಗಳ ಉಲ್ಲೇಖ ಇಲ್ಲ) ನಂತರ ಹೇಗೆ “ಹುಟ್ಟಿತು” (ಏಕೆಂದರೆ ನಂತರದ ಪಠ್ಯಗಳಲ್ಲಿ ಇವುಗಳ ಉಲ್ಲೇಖ ಇದೆ) ಎನ್ನುವ ಪ್ರಶ್ನೆಯನ್ನು ಮಾಡ್ತೀರಿ. ನಿಮ್ಮ ಈ ನಿಲುವು ಒಂದು ಊಹೆಯನ್ನಾದರಿಸಿದೆ (ಇದು ಎಲ್ಲಾ ಚಿಂತಕ/ಇತಿಹಾಸಕಾರರ ಸಹಜವಾದ ಧೋರಣೆಯಂತೆಯೇ ಇದೆ) ಅದು ಒಂದು ಕಾಲದ “ಸಮಾಜ” ಆ ಕಾಲದ “ಪಠ್ಯ”ಗಳಿಂದ ತಿಳಿಯುತ್ತದೆ ಎನ್ನುವುದು! ಸಮಾಜ ಮತ್ತು ಪಠ್ಯಗಳ ನಡುವಣ ಈ ಸಂಬಂದವನ್ನು ಒಪ್ಪಬೇಕಾದರೆ ಈ ಕೆಳಗಿನ ಎರಡು ಸಾಧ್ಯತೆಗಳಲ್ಲಿ ಒಂದನ್ನಾದರೂ ನಾವು ಸಾಬೀತು ಮಾಡಲು ಸಾಧ್ಯವಾಗಬೇಕು.

1. ಈ “ಪಠ್ಯ”ಗಳು ಸಮಾಜಶಾಸ್ತ್ರೀಯ ಪಠ್ಯಗಳು ಆಗಿರಬೇಕು: ಅಂದರೆ ಸಮಾಜವನ್ನು ಅಧ್ಯಯನಕ್ಕೆ ಒಳಪಡಿಸಿ ಸಮಾಜದಲ್ಲಿ ಏನಿದೆಯೋ ಅದನ್ನೇ ಪಠ್ಯಗಳಲ್ಲಿ ನಮೂದಿಸಿದ್ದಾಗಿರಬೇಕು.

  1. ಪಠ್ಯಗಳಲ್ಲಿರುವಂತೆ ಬದುಕುವ ಸಂಸ್ಕೃತಿಗೆ ಈ ಜನರು ಸೇರಿದ್ದಿರಬೇಕು. ಅಂದರೆ ಪಠ್ಯಗಳು ಜನರು ಸಮಾಜದಲ್ಲಿ ಬದುಕುವ ಜನರ ಬದುಕುವ ಮಾರ್ಗದರ್ಶಿ ಸೂತ್ರಗಳಾಗಿವೆ. ಜನರು ಪಠ್ಯಗಳಂತೆಯೇ ಜನರು ಬದುಕಬೇಕು ಮತ್ತು ಬದುಕಿರುತ್ತಾರೆ. ಹಾಗಾಗಿ ಪಠ್ಯಗಳನ್ನು ನೋಡಿದರೆ ಅಂದಿನ ಜನರು ಬದುಕಿದ ಸಮಾಜದ ಬಗ್ಗೆ ಸ್ಪಷ್ಟವಾಗಿ ಹೇಳಿಬಿಡಬಹುದು.
  2. ಮೊದಲನೆಯ ಸಾಧ್ಯತೆಯನ್ನು ಪರಿಶೀಲಿಸುವ. ವೇದಗಳಿಂದ ಹಿಡಿದು ಧರ್ಮಶಾಸ್ತ್ರಗಳಾದಿಯಾಗಿ ಸಮಾಜಶಾಸ್ತ್ರೀಯ ಪಠ್ಯಗಳೇ? ಅಂದರೆ, ಇವು ಸಮಾಜವನ್ನು ಅಧ್ಯಯನ ಮಾಡಿ ಬರೆದ ಪಠ್ಯಗಳೇ? ಅಷ್ಟಕ್ಕೂ ಅಂದಿನವರಿಗೆ ಸಮಾಜವನ್ನು ಅಧ್ಯಯನ ಮಾಡಿ ಸಮಾಜದಲ್ಲಿರುವುದನ್ನೆ ಇದ್ದ ಹಾಗೆ, ನಡೆದಿದ್ದನ್ನೇ ನಡೆದ ಹಾಗೆ ಪಠ್ಯಗಳಲ್ಲಿ ನಮೂದಿಸುವ ಉದ್ದೇಶ ಮತ್ತು ಧೋರಣೆ ಎರಡು ಇದ್ದಿರಬೇಕು, ಅಲ್ವೇ? ಈ ಧೊರಣೆ ಮತ್ತು ಉದ್ದೇಶಗಳು ಭಾರತೀಯ ಪಂಡಿತರುಗಳ ಗ್ರಹಿಕೆಗೇ ಮೀರಿದ್ದು ಅನ್ನುವುದು ಕೇವಲ ನೂರು ವರ್ಷಗಳ ಹಿಂದೆ (1905) ದೇವಚಂದ್ರನಿಂದ “ರಾಜಾವಳಿ ಕಥೆ” ಬರೆಯಲ್ಪಟ್ಟ ರೀತಿಯೇ ಧೃಷ್ಟಾಂತ ಪಡಿಸುತ್ತದೆ. ಕರ್ನಲ್ ಮೆಕೆಂಜಿ ಮೈಸೂರು ಅರಸರ ಹಿಸ್ಟರಿ (ಅದು ನಿಜ ಹಿಸ್ಟರಿಯೇ ಆಗಿರಬೇಕು ಅಂತ ಒತ್ತಿ ಹೇಳಿರುತ್ತಾನೆ) ಬರೆದು ಕೊಡವಂತೆ ದೇಶೀ ಪಂಡಿತ ದೇವಚಂದ್ರನಲ್ಲಿ ಕೇಳಿದಾಗ ಆತ ಜೈನಪುರಾಣದಂತೆ ‘ರಾಜಾವಳಿ ಕಥೆ’ಬರೆದು ಮೆಕೆಂಜಿಗೆ ನೀಡುತ್ತಾನೆ. ಮೆಕೆಂಜಿಗೆ ಈ ಭಾರತೀಯ ಪಂಡಿತರುಗಳಿಗೆ ಇದ್ದದ್ದನ್ನು ಇದ್ದ ಹಾಗೆ ಬರೆಯುವ ಗಂಧವೇ ಇಲ್ಲ ಎಂದು ಅದನ್ನು ತಿರಸ್ಕರಿಸುತ್ತಾನೆ. (ರಾಜಾರಾಮ ಹೆಗಡೆಯವರ ಗತಕಥನದಲ್ಲಿ ಅದರ ವಿವರಗಳಿವೆ) 19ನೇ ಶತಮಾನದ ಕೊನೆಯಲ್ಲಿಯೇ ಇದ್ದ ಹಾಗೆ ಬರಯಬೇಕು ಎಂದು ಒತ್ತಿ ಹೇಳಿದರೂ ನಮ್ಮ ಪಂಡಿತರುಗಳು ಬರೆಯೋದು ಕಲ್ಪಿತ ಪುರಾಣವನ್ನು! ಹೀಗಿರಬೇಕಾದರೆ, ಪ್ರಾಚೀನ ಕಾಲದ ಬರವಣಿಗೆಗಳ ಬಗ್ಗೆ ಹೇಳುವುದೇ ಬೇಡ. ಅದರಲ್ಲೂ ನಾವು ಈ ಪಠ್ಯಗಳಿಂದ ಮಾಡುವ ತೀರ್ಮಾನದ ವ್ಯಾಪ್ತಿ ವಿಶಾಲವಾದುದು. ಇಡೀ ಅಖಂಡ ಭಾರತದಲ್ಲಿ ಇದ್ದಿರಬಹುದಾದ ಸಾಮಾಜಿಕ ರಚನೆಯ ಬಗ್ಗೆ ಮಾತನಾಡುತ್ತಿದ್ದೇವೆ. ಈ ವ್ಯಾಪ್ತಿಯಲ್ಲಿ ಇದ್ದ ಸಮಾಜದ ಬಗ್ಗೆ ಆ ಪಠ್ಯಗಳನ್ನು ಬರೆಯಲಾಗಿದೆ ಎನ್ನುವುದನ್ನು ಊಹಿಸುವುದೂ ಅಸಾಧ್ಯ!

ಇನ್ನೂ 21ನೇ ಶತಮಾನದ ಇಂದು ಇಷ್ಟೆಲ್ಲಾ ಸಮಾಜವಿಜ್ಞಾನದ ಶಾಖೆಗಳನ್ನು ಸೃಷ್ಟಿಸಿಕೊಂಡು ವೈಜ್ಞಾನಿಕ ಸಾಮಾಜಿಕ ಸಂಶೋಧನೆಗಳ ವೈಧಾನಿಕತೆಗಳನ್ನು ಬೆಳಸಲಾಗಿದೆ. ಇವುಗಳ ಮೂಲಕ ಸಮಾಜವನ್ನು ವಿವರಿಸಬೇಕು ಅನ್ನುವ ಉದ್ದೇಶ/ಧೋರಣೆ ಎರಡನ್ನು ಇಟ್ಟುಕೊಂಡು ಇಂದು ಬರೆದಿರುವ ನಮ್ಮ ಸಮಾಜಶಾಸ್ತ್ರೀಯ ಪಠ್ಯಗಳೇ ನಮ್ಮ ನಡುವೆ ಭಾರತದಾದ್ಯಂತ ಅಸ್ತಿತ್ವದಲ್ಲಿರುವ ಸಾಮಾಜಿಕ ಗುಂಪುಗಳ ಸ್ವರೂಪಗಳೇನು ಎನ್ನುವ ಕುರಿತು ವೈಜ್ಞಾನಿಕ ಜ್ಞಾನ ಕೊಡುವಲ್ಲಿ ದಯನೀಯ ವಿಫಲತೆಯನ್ನು ಕಂಡಿವೆ. ಇಡೀ ಭಾರತದಲ್ಲಿರುವ ಎಲ್ಲಾ ಸಮುದಾಯಗಳನ್ನು ‘ಜಾತಿ’ (caste) ಎನ್ನುವ ಒಂದು ವರ್ಗೀಕರಣದಲ್ಲಿ ಗುರಿತಿಸಬಹುದೇ ಎನ್ನುವ ವಿಚಾರವನ್ನೇ ಇಂದಿನ ಮಾನವಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಎತ್ನೋಗ್ರಾಫ್ ಅಧ್ಯಯನಕಾರರು ಒಪ್ಪುವುದಿಲ್ಲ. ಇದುವರೆಗಿನ ಅಧ್ಯಯನಗಳು ಭಾರತೀಯ ಸಮಾಜದ ಕುರಿತು ಯಾವ ವೈಜ್ಞಾನಿಕ ಜ್ಞಾನವನ್ನೂ ಕೊಡುವುದಿಲ್ಲ ಬದಲಿಗೆ ಓರಿಯಂಟಲಿಸ್ಟ್/ವಸಾಹತುಶಾಹಿ ಅನುಭವಗಳ ವಿಕ್ಷಿಪ್ತ ರೂಪಗಳಷ್ಟೇ ಎನ್ನುವುದು ನಮ್ಮ ತಂಡದ ವಾದವೂ ಆಗಿದೆ. ಹೀಗೆ ಇಂದಿನ ಸಮಾಸಶಾಸ್ತ್ರೀಯ ಪಠ್ಯಗಳನ್ನೇ ವೈಜ್ಞಾನಿಕ ಸಮಾಜಶಾಸ್ತ್ರೀಯ ಪಠ್ಯಗಳೆಂದು ಒಪ್ಪಲು ಸಾಧ್ಯವಿಲ್ಲದಿರುವಾಗ, ಈ ಧೋರಣೆ ಮತ್ತು ಉದ್ದೇಶ ಎರಡೂ ಇಲ್ಲದೆ ಬರೆದ ಪಠ್ಯಗಳನ್ನು ಓದಿ ಅಂದಿನ ಸಮಾಜದ ರಚನೆಗಳ ಬಗ್ಗೆ “ಜಾತಿಪದ್ದತಿ” ಇರಲಿಲ್ಲ ಅಥವಾ ಇತ್ತು ಅನ್ನುವ ತೀರ್ಮಾನ ಮಾಡಲು ಸಾಧ್ಯವೇ?

  1. ಇನ್ನೂ ಈ ಎರಡನೇ ಪ್ರಶ್ನೆ ನೇರವಾಗಿ ಇಲ್ಲಿ ಮನುಸ್ಮೃತಿಯನ್ನಿಟ್ಟುಕೊಂಡು ಚರ್ಚಿಸುತ್ತಿರುವ ವಿಚಾರಕ್ಕೇ ಸಂಬಂದಿಸಿದ್ದು. ಅಂದಿನ ಕಾಲದ ಜನರ ಸಾಮಾಜಿಕ ಜೀವನ ಹೇಗಿತ್ತು ಎನ್ನುವುದನ್ನು ಪಠ್ಯದ ಆಧಾರದಿಂದ ತಿಳಿಯಲು ಸಾಧ್ಯವಿಲ್ಲ ಎಂದು ಮೇಲಿನ ತೀರ್ಮಾನವಾಗಿದೆ. ಹಾಗಿದ್ದರೆ ಪಠ್ಯದ ಮಾರ್ಗಸೂಚಿಗಳಂತೆಯೇ ಜನರು ಅಂದು ಬದುಕಿದ್ದರೇ ಇಲ್ಲವೇ ಎನ್ನುವುದನ್ನು ತಿಳಿಯುವ ಬಗೆ ಹೇಗೆ? ಈ ವಿಚಾರ ಮೇಲ್ನೋಟಕ್ಕೆ ಹೇಗೆ ಬದುಕಿದ್ದರು ಎನ್ನುವ ಸಾಮಾಜಿಕ ಸ್ಥಿತಿಯ ಬಗ್ಗೆ ಇದೆ ಅನಿಸಿದರೂ ಮೂಲತಃ ಇದು ಬದುಕುವ ಕ್ರಮಕ್ಕೆ ಸಂಬಂದಿಸಿದ್ದು ಎಂದು ಹೇಳಬಹುದು. ಜಗತ್ತಿನಲ್ಲಿ ವ್ಯವಹರಿಸುವ ಜನರ ಜೀವನದ ಸ್ವರೂಪವನ್ನು ಇದು ಸೂಚಿಸುತ್ತದೆ. ಹಾಗಾಗಿ ಇಂದಿನ ಭಾರತೀಯರ ಜೀವನದ ಸ್ವರೂಪವನ್ನೇ ಸೂಚಕವಾಗಿ (Hueristic) ತೆಗೆದು ಕೊಂಡು ಇದೇ ರೀತಿಯ ಬದುಕುವ ಕ್ರಮವೇ ಅಂದಿನಿಂದ ಇದ್ದಿರಬೇಕು ಅನ್ನುವ ಊಹೆ (ಇದು ಸರಿಯಾದ ಊಹೆಯೇ ಎನ್ನುವು ಮುಂದೆ ತೀರ್ಮಾನವಾಗವುದು) ಯೊಂದಿಗೆ ಮುಂದೆ ಹೋಗುವ (ಅಷ್ಟಕ್ಕೂ ಪ್ರಾಚೀನ ಕಾಲದಿಂದ ಇಂದಿನ ಕಾಲದ ವರಗೆ ಭಾರತದ ಬಗ್ಗೆ ಚಿತ್ರಿಸುವ ಎಲ್ಲಾ ಚಿಂತಕರ ಒಂದು ಸಾಮಾನ್ಯ ವಿಚಾರ ಎಂದರೆ ಸಾವಿರಾರು ವರ್ಷಗಳಿಂದ ಭಾರತೀಯ ಸಮಾಜ ಚಲನೆಯೇ ಇಲ್ಲದ ಸ್ಥಗಿತ ಸಮಾಜವಾಗಿತ್ತು ಎನ್ನುವುದು. ಇದನ್ನು ಓರಿಯಂಟಲಿಸ್ಟ್, ಸೋಸಿಯಲಿಸ್ಟ್, ಮಾರ್ಕ್ಸ್ ಸಿಸ್ಟ್, ಫೆಮನಿಸ್ಟ್ ರಾದಿಯಾಗಿ ಎಲ್ಲರೂ ಹೇಳುತ್ತಲೇ ಬಂದಿದ್ದಾರೆ:-)) ಇಲ್ಲಿ ಮನುಸ್ಮೃತಿಯ ಚರ್ಚೆಯಲ್ಲಿ ನಮ್ಮ ವಾದವೆಂದರೆ ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಪಠ್ಯಗಳನ್ನು ಪವಿತ್ರಗ್ರಂಥಗಳು (ಬೈಬಲ್ ಖುರಾನ್) ಎಂಬಂತೆ ಭಾವಿಸಿ ಅದರಲ್ಲಿರುವಂತೆಯೇ ಸಾಮಾಜಿಕ ಜೀವನದಲ್ಲಿ ತೊಡಗಿಕೊಳ್ಳುವ ಕ್ರಮ ಇಲ್ಲ ಎನ್ನುವುದು. ಹಾಗಾಗಿಯೇ ಮನುಸ್ಮೃತಿಯಲ್ಲಿ ಏನಾದರೂ ಬರೆದಿರಲಿ ಅದು ಸಾಮಾಜಿಕ ಕಟ್ಟುಕಟ್ಟಳೆಯ ನಿಯಮದ ರೀತಿಯಲ್ಲಿ ಕೆಲಸಮಾಡಿತ್ತು ಎನ್ನುವುದು ಆಧಾರ ರಹಿತ ವಾದವಾಗಿದೆ.

ಹಾಗಿದ್ದರೆ ‘ಪಠ್ಯ’ದಲ್ಲಿ ಇದ್ದಹಾಗೆ ‘ಸಮಾಜ’ ಇರುತ್ತದೆ ಎನ್ನುವ ಸಾಮಾನ್ಯ ತಿಳುವಳಿಕೆಯೊಂದಿಗೆ ನಮ್ಮ ಬೌದ್ದಿಕ ವಲಯ ಏಕೆ ಎಲ್ಲಾ ಚಿಂತನೆಗಳನ್ನೂ ಇದುವರೆಗೂ ಸಮಾಜವಿಜ್ಞಾನವಲಯದಲ್ಲಿ ಮಾಡಿಕೊಂಡು ಬರಲಾಗುತ್ತಿದೆ? ಈ ಪ್ರಶ್ನೆಗೆ ಉತ್ತರವಾಗಿ ಭಾರತೀಯ ಸಮಾಜ ವಿಜ್ಞಾನದ ಹುಟ್ಟಿನ ಮೂಲವಾದ “ಓರಿಯಂಟಲಿಸಂ” ಚಿಂತನೆ ಬೆಳೆದ ಪಶ್ಚಿಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಬಾಲಗಂಗಾಧರರ ವಾದವನ್ನು ಸರಳವಾಗಿಸುವುದಾದರೆ, ಪಶ್ಚಿಮ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ಕ್ರಿಶ್ಚಿಯಾನಿಟಿಯ ಪ್ರಭಾವದಡಿಯಲ್ಲಿ ರೂಪುಗೊಂಡಿದೆ. ಸ್ಥೂಲವಾಗಿ ಹೇಳುವುದಾದರೆ, ಕ್ರಿಶ್ಚಿಯಾನಿಟಿಯ ಪ್ರಕಾರ ಜನರು ಈ ಜಗತ್ತಲ್ಲಿ ಗಾಡ್ ಇಚ್ಚೆಯಂತೆ/ವಾಣಿಯಂತೆ ಅಂದರೆ ಆತ ಹೇಗೆ ಬದುಕಬೇಕೆಂದು ಹೇಳಿದ್ದಾನೋ ಹಾಗೆ ಬದುಕಿದರೆ ಮಾತ್ರ ಅವರಿಗೆ ಸಾಲ್ವೇಶನ್ ಸಿಗುತ್ತದೆ.

ಗಾಡ್ ನ ವಾಣಿಯಂತೆ ಬದುಕುವುದು ಹೇಗೆ? ಗಾಡ್ ನ ವಾಣಿ ಎಲ್ಲಿದೆ ತಿಳಿದುಕೊಂಡು ಅದರಂತೆ ಬದುಕುವುದು.
ಗಾಡ್ ನ ವಾಣಿ ಎಲ್ಲಿದೆ? ಅವರ ಪ್ರಕಾರ ಗಾಡ್ ನ ವಾಣಿ ಬೈಬಲ್ಲಿನಲ್ಲಿದೆ.

ಅಂದರೆ ಬೈಬಲ್ಲಿನ ಪ್ರಕಾರ ಬದುಕಿದರೆ ಗಾಡ್ ನ ಸಾಲ್ವೇಶನ್ ಪ್ರಾಪ್ತಿಯಾಗುತ್ತದೆ. ಹಾಗಾಗಿ ಬೈಬಲ್ ಅನ್ನುವ “ಪಠ್ಯ” ಕ್ರಿಶ್ಚಿಯನ್ನರ ಜೀವನದ “ಮಾರ್ಗದರ್ಶಿ” ಸೂತ್ರವಾಗುತ್ತದೆ. ಹೀಗೆ ‘ಪಠ್ಯ’ದಂತೆ ‘ಸಮಾಜ’ ಎನ್ನುವುದು ಯೂರೋಪಿಯನ್ ಸಂಸ್ಕೃತಿಯಲ್ಲಿ ಸಹಜ ತಿಳುವಳಿಕೆ. ಈ ನೆಲೆಯಲ್ಲಿಯೇ ಭಾರತೀಯರನ್ನು ಅರ್ಥೈಸಲು ಇಲ್ಲಿಯ ಮಾರ್ಗದರ್ಶಿ ಪಠ್ಯಗಳನ್ನು ಅವರು ಹುಡುಕಿಹೊರತೆಗೆದರು. ‘ಮನುಸ್ಮೃತಿ’ ಅದರೊಲ್ಲೊಂದು!

ಈಗ ಯೂರೋಪಿಯನ್ನರು ಪಠ್ಯಗಳನ್ನು ತಮ್ಮ ಜೀವನದ ಮಾರ್ಗದರ್ಶಿ ಸೂತ್ರಗಳಂದು ತಿಳಿದು ಬದುಕುತ್ತಿರುವಂತೆ ಭಾರತೀಯರೂ ಸಹ ‘ಪಠ್ಯ’ಗಳನ್ನು ತಮ್ಮ ಜೀವನದ ‘ಮಾರ್ಗದರ್ಶಿ ಸೂತ್ರ’ಗಳಂತೆ ಬಳಸುವ ಸಂಸ್ಕೃತಿಯವರೇ ಆಗಿದ್ದ ಪಕ್ಷದಲ್ಲಿ, ಈ ಪಠ್ಯಗಳು “ಸಮಾಜಶಾಸ್ತ್ರೀಯ” ಪಠ್ಯಗಳಂತೆ ಭಾರತವನ್ನೆಲ್ಲಾ ಅಧ್ಯಯನ ಮಾಡಿ ಬರೆಯದೇ ಇದ್ದರೂ, ಅವು ಅಂದಿನ ಸಮಾಜವನ್ನೆ ವಿವರಿಸುತ್ತವೆ ಎನ್ನುವ ತೀರ್ಮಾನಕ್ಕೆ ಬರಬಹುದು. ಈ ನೆಲೆಯಲ್ಲಿ ಅಂದಿನ “ಸಮಾಜ” ಅಂದಿನ ಪಠ್ಯದಂತೆ ಇದೆ ಅಥವಾ ಇರಬಹುದು ಎನ್ನುವ ತೀರ್ಮಾನಕ್ಕೆ ಬರುವುದು ಸೂಕ್ತವೇ ಆಗಿರುತ್ತಿತ್ತು! ಆದರೆ ಇದು ವಾಸ್ತವಕ್ಕೆ ದೂರ.

ಹೀಗಾಗಿ ಜಾತಿಪದ್ದತಿಯ ಬಗ್ಗೆ ವೇದಗಳ ಕಾಲದಲ್ಲಿ ‘ಇರದಿದ್ದ ಬಗ್ಗೆ’ ಮತ್ತು ನಂತರ ಕಾಲದಲ್ಲಿ ಅದು ‘ಹುಟ್ಟಿದ ಬಗ್ಗೆ’ ನಿಮ್ಮ ಪ್ರಶ್ನೆಗೆ ಉತ್ತರವಾಗಿ ಬರೀ speculation ಗಳನ್ನು ಮಾಡುವುದನ್ನು ಬಿಟ್ಟು ವೈಜ್ಞಾನಿಕವಾಗಿ ಸಾಬೀತು ಮಾಡುವ ಸಾಧ್ಯತೆ ಇದೆಯೇ?

ಇನ್ನೂ ಈ ಪ್ರಶ್ನೆಗಳು ಏಕೆ ಅಷ್ಟು ಮುಖ್ಯ? ಅಂದರೆ ಈ ಪ್ರಶ್ನೆಗಳಿಗೆ ಉತ್ತರಿಸದೆ ಭಾರತೀಯ ಸಮಾಜ,ಸಂಸ್ಕೃತಿ, ಜಾತಿ, ಅಸ್ಪೃಶ್ಯತೆಯ ಆಚರಣೆಗಳ ಬಗ್ಗೆ ವೈಜ್ಞಾನಿಕ ವಿವರಣೆ ಬೆಳೆಸಲು ಸಾಧ್ಯವಿಲ್ಲವೇ? ಸಾಧ್ಯವಿಲ್ಲ ಎಂದಾದರೆ ಮಾತ್ರ ಇದರ ಬಗ್ಗೆ ಬಹಳ ತಲೆಕೆಡಿಸಿಕೊಳ್ಳಲೇ ಬೇಕಾಗುತ್ತದೆ. ನಮ್ಮ ಪ್ರಕಾರ ಇಂದು ನಮ್ಮ ಸಮಾಜ ಮತ್ತು ಈ ಜಾತಿಗಳು ಇಂದು ಇರುವ ರೀತಿಯನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಅವು ಹಿಂದೆ ಹೇಗೆ ಹುಟ್ಟಿತು (ಎಂದು ಕಂಡುಹಿಡಿಯಲು ಸಾಧ್ಯವೇ ಇಲ್ಲದ) ಎನ್ನುವ ಪ್ರಶ್ನೆ ಅಷ್ಟು ಮುಖ್ಯವೇ ಇಲ್ಲ!

ವಲವಿ: ಬಹಳ ವಿವರವಾಗಿ ವಿವರಿಸಿದ್ದಕ್ಕೆ ತುಂಬಾ ಅಭಿನಂದನೆಗಳು ಷಣ್ಮುಖ ಅವರೆ. ನಿಮ್ಮ ತಲೆಯನ್ನು ಇನ್ನೂ ಸ್ವಲ್ಪ ತಿನ್ನುತ್ತಿದ್ದೇನೆ. ಬೇಸರಿಸಬೇಡಿ. ವೇದಕಾಲದಲ್ಲಿ ಜಾತಿಯ ಕಟ್ಟು ಪಾಡುಗಳು ಇರಲಿಲ್ಲ ಎಂದು ಪಠ್ಯಗಳನ್ನಾಧರಿಸಿ ಹೇಳಿದ್ದೀರಿ. ಆದರೆ ಭಾರತೀಯ ಸಮಾಜ ಆ ಪಠ್ಯಗಳನ್ನಾಧರಿಸಿ ನಿತ್ಯ ಜೀವನ ಮಾಡುತ್ತಿರಲಿಲ್ಲ. ಎಂದಿರುವಿರಿ. ಆದರೆ ವಸಿಷ್ಟರು ಮಾದಿಗ ಹೆಣ್ಣನ್ನು ಮದುವೆಯಾಗಿದ್ದು, ದ್ರೋಣರ ಅಪ್ಪ ಬಭಾರದ್ವಾಜರು ಕುಂಬಾರ ಹೆಣ್ಣಿನಲ್ಲಿ ಜನಿಸಿದ್ದು, ಕೃಪ ಮತ್ತು ಕೃಪಿಯರು ಬೇಡರ ಹೆಣ್ಣಿನಲ್ಲಿ ಜನಿಸಿದ್ದು, ಪಾಂಡವರ ಕೌರವರ ಮೂಲಪುರುಷರು ಮೀನುಗಾರಳಾದ ಸತ್ಯವತಿಯಲ್ಲಿ ಜನಿಸಿದ್ದು, ವ್ಯಾಸರೂ ಆಕೆಯಲ್ಲಿ ಹುಟ್ಟಿದ್ದು ಇವೆಲ್ಲ ಏನನ್ನು ತೋರಿಸುತ್ತವೆ? ಪ್ರಾಚೀನ ಭಾರತದಲ್ಲಿ ಜಾತಿ ಪದ್ಧತಿಯ ಆಚರಣೆಗಳು ಕಟ್ಟು ನಿಟ್ಟಾಗಿ ಆಚರಿಸಲ್ಪಡುತ್ತಿರಲಿಲ್ಲಾ ಎಂದೇ ಅಲ್ಲವೆ? ಇವೇನು ಪಠ್ಯಗಳಲ್ಲಿ ಹೇಳಿದ ಅಂಶಗಳಲ್ಲ. ನಿರ್ದೇಶಿತ ಅಂಶಗಳೂ ಅಲ್ಲವಲ್ಲಾ? ಇದರ ಅರ್ಥವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ? ಹೀಗೆ ಅನ್ಯ ಜಾತಿಯವರನ್ನು ಮದುವೆಯಾದರೂ ಇವರೆಲ್ಲರ ಬಗ್ಗೆ ಯಾರಿಗೂ ಕೆಟ್ಟ ಭಾವನೆಗಳೂ ಇಲ್ಲ. ಇಂಥ ಎಷ್ಟೋ ಉದಾಹರಣೆಗಳಿವೆ. ಪುಲಸ್ತ್ಯರ ಮಗ ರಾವಣನ ಅಪ್ಪ ರಾಕ್ಷಸ ಕನ್ನೆಯನ್ನು ಮದುವೆಯಾಗಿದ್ದ. ಇರಲಿ ಅಂದಮೇಲೆ ಪ್ರಾಚೀನ ಕಾಲದಲ್ಲಿ ಜಾತಿ ಕಟ್ಟು ಪಾಡುಗಳು ಸಡಿಲವಾಗಿದ್ದವು ಎಂಬ ನನ್ನ ಮಾತು ಹೇಗೆ ತಪ್ಪೆನ್ನುವಿರಿ?

ಷಣ್ಮುಖ: 1.ನೀವು ಪುರಾಣ ಪುರುಷರನ್ನು ಚಾರಿತ್ರಿಕ ವ್ಯಕ್ತಿಗಳನ್ನಾಗಿಸುವ ಫುಲೆಯಂತವರ ತಪ್ಪನ್ನೇ ಮಾಡುವಿರಿ. ಕಥೆ /ಪುರಾಣಗಳು ಸತ್ಯವೂ ಅಲ್ಲದ ಸುಳ್ಳೂ ಅಲ್ಲದ ಸಂಗತಿಗಳು. ಅಂದರೆ ಆ ಘಟನೆಗಳು ಹೀಗೆಯೇ ನಡೆದವು ಎಂದಲ್ಲ! ಬದಲಿಗೆ ಮಾನವ ಸಂಬಂದಗಳನ್ನು ಅವರು ಹೇಗೆಲ್ಲಾ ನೋಡುವ ಸಾದ್ಯೆತೆಯನ್ನು ಮುಂದಿಟ್ಟಿದ್ದರು ಎನ್ನುವುದಷ್ಟೆ ಆ ಕಥೆ/ಪುರಾಣಗಳಿಂದ ತಿಳಿಯುವುದು! ಸಾಮಾಜಿಕ ವಾಸ್ತವದ ಘಟನಗಳನ್ನಲ್ಲ! ವಾಸ್ತವ ವ್ಯತಿರಿಕ್ತವಾಗಿಯೂ ಇದ್ದಿರಬಹುದು. ಇದೇನೇ ಇದ್ದರೂ ಈ ಪುರಾಣಕಥೆಗಳನ್ನು ಇಟ್ಟುಕೊಂಡು ‘ಇರಬಹುದು; ಇಲ್ಲದೆಯೂ ಇರಬಹುದು’ ಎನ್ನುವ speculation ಗಳನ್ನು ಮಾಡಬಹುದೇ ವಿನಃ ಅವರ ಜಗತ್ತು ಹಾಗೆಯೇ ಇದ್ದಿರಬೇಕು ಎಂದು ಖಚಿತವಾಗಿ ಹೇಳಲಾಗದು. ಸೋ ವೈಜ್ಞಾನಿಕ ವಾಗಿ ಏನನ್ನೂ ಹೇಳಲಾಗದು.

  1. ವೇದಗಳಕಾಲದಲ್ಲಿ ಜಾತಿಯ ಕಟ್ಟುಪಾಡುಗಳು ಇರಲಿಲ್ಲ ಎನ್ನಲಿಕ್ಕೆ ಮೇಲಿನಂತೆ ಪುರಾಣಗಳನನ್ನು ಗ್ರಹಿಸುವ ತಪ್ಪು ಒಂದು ರೀತಿಯದು. ಇನ್ನೂ ಎರಡನೆಯ ರೀತಿಯ ತಪ್ಪೆಂದರೆ “ವಿಭಿನ್ನ ಜಾತಿಗಳ ನಡುವೆ ಮಧುವೆ ಆಗಿನ ಪುರಾಣಗಳಲ್ಲಿ ನಡೆದವು” ಎನ್ನುವುದನ್ನು ಆಧಾರವಾಗಿ ತೆಗೆದುಕೊಳ್ಳುವಾಗ ಆ ಕಾಲದ ನಂತರ ಈ ರೀತಿಯ ಮಧುವೆಗಳಿಗೆ ಅವಕಾಶವಿರಲಿಲ್ಲ ಎನ್ನುವ )ತಪ್ಪು) ಕಲ್ಪನೆಯನ್ನೂ ಮಾಡಲಾಗುತ್ತಿದೆ. ಇದನ್ನು ಅಂದರೆ, ಆ ಕಾಲದ ನಂತರ ಈ ರೀತಿಯ ಮಧುವೆಗಳಿಗೇ ಅವಕಾಶವಿರಲಿಲ್ಲ ಎನ್ನುವುದನ್ನು ಧೃಷ್ಟಾಂತಪಡಿಸದೆ ಈ ಹೇಳಿಕೆಗೆ ಮಹತ್ವವಿಲ್ಲ. ವಾಸ್ತವದಲ್ಲಿ ಎಲ್ಲಾ ಕಾಲದಲ್ಲೂ ವಿಭಿನ್ನ ಜಾತಿಗಳ ನಡುವೆ ಮಧುವೆಯಾಗಿರುವ ಕಥೆ, ಪುರಾಣ, ಕಾವ್ಯಗಳಂತೂ ಲಭ್ಯವಿದ್ದೇ ಇದೆ. (ವಚನಕ್ರಾಂತಿಯ ಮಧುವೆಯ ಕಥೆ ಈ ವಾಸ್ತವವನ್ನು ನಗಣ್ಯವಾಗಿಸುತ್ತದೆ ಅಷ್ಟೆ) ಇಂದಿಗೂ ಅದು ನಡೆದೇ ಇದೆ. ವೆದಕಾಲದಲ್ಲಿ ಮಾತ್ರ ಈ ಅವಕಾಶವಿತ್ತು, ಉಳಿದ ಕಾಲಘಟ್ಟದಲ್ಲಿ ಹೀಗೆ ಇರಲಿಲ್ಲ ಎನ್ನುವ ಕಥೆ ಅದೇ “ವೈಧಿಕ true religion ನಂತರ ಕರಪ್ಟ್ ಆಗಿ ಬ್ರಾಹ್ಮಣಶಾಹಿ ಜಾತಿವ್ಯವಸ್ಥೆ ಹುಟ್ಟಿನ” ಕುರಿತ ಕಲೋನಿಯಲ್ ಸ್ಟಿರಿಯೋಟೈಪ್ ಗ್ರಹಿಕೆಯ ಭಾಗವಾಗಿ ಅಷ್ಟೆ ಅರ್ಥಪಡೆಯುತ್ತದೆ. ಭಾರತ ಸಂಪ್ರದಾಯದ ಕುರಿತ ನಮ್ಮ ವಾದಗಳು ಸರಿಯಾಗಿದ್ದ ಪಕ್ಷದಲ್ಲಿ ಭಾರತದ ಜಾತಿ/ಸಮುದಾಯಗಳು ಸ್ವಲ್ಪವೂ ಚಲನೆಯಿಲ್ಲದ ರಿಜಿಡ್ ರಚನೆ ಆಗಿರಲು ಸಾಧ್ಯವಿಲ್ಲ. ಈ ರಿಜಿಡಿಟಿ ರಿಲಿಜನ್ನುಗಳಿಗೆ ವಿಶಿಷ್ಟವಾದ ಗುಣವೇ ವಿನಃ ಸಂಪ್ರದಾಯಗಳಿಗಲ್ಲ. flexible ಆಗಿರುವುದೇ ಸಂಪ್ರದಾಯಗಳ ಸ್ವಭಾವ! ಅಂದರೆ, ವಿಭಿನ್ನ ಜಾತಿಗಳ ನಡುವಣ ಮಧುವೆ ಎಂದಿಗೂ ಇದ್ದೇ ಇತ್ತು. ಅಂದು ಹೆಚ್ಚಿತ್ತು ಇಂದು ಕಡಿಮೆಯಾಗಿದೆ ಎನ್ನುವದನ್ನು ತೋರಿಸಲು (ಅಂದು ಎಷ್ಟರ ಪ್ರಮಾಣದಲ್ಲಿ ನಡೆದಿರಬಹುದು ಎನ್ನುವ ಅಂಕಿಸಂಖ್ಯೆಯ ಅನುಪಸ್ತಿತಿಯಲ್ಲಿ ) ಸಾಧ್ಯವೇ ಇಲ್ಲ. ಹಾಗಾಗಿ, ಇದೂ ಊಹೆಯಷ್ಟೆ!

ಬಸವವೇ ಸತ್ಯ ಬಸವವೇ ನಿತ್ಯ: ಷಣ್ಮುಖ ಅವರೇ, ನಿಮ್ಮ ವಾದದ ಪ್ರಕಾರ ಚರಿತ್ರೆಯ ಯಾವುದೇ ಘಟ್ಟದ ಸಾಮಾಜಿಕ ಪರಿಸ್ಥಿತಿ ಬಗ್ಗೆ ಆ ಘಟ್ಟದ ಸಾಹಿತ್ಯ ಕೃತಿಗಳಿಂದ ಏನನ್ನೂ ಖಚಿತವಾಗಿ ಹೇಳಲಾಗುವುದಿಲ್ಲ. ಅಂದ ಮೇಲೆ ಭೈರಪ್ಪನವರ ಕಾದಂಬರಿಗಳ ಆಧಾರದ ಮೇಲೆ ನಮ್ಮ ಕಾಲದ ಸಾಮಾಜಿಕತೆಯ ಬಗ್ಗೆ ಏನನ್ನೂ ಹೇಳಲು ಆಗದು. ಅರ್ಥಾತ್ ಭೈರಪ್ಪನವರ ಕೃತಿಗಳಿಗೆ ಇರುವ ಮೌಲ್ಯ ಕೇವಲ ತತ್ ಕ್ಷಣದ ರಂಜನೀಯತೆ.

ಷಣ್ಮುಖ : ಅಂದ ಹಾಗೆ ” ವೇದಗಳ ಕಾಲದಲ್ಲಿ ಜಾತಿಯ ಕಟ್ಚುಪಾಡುಗಳು ಇರಲಿಲ್ಲ” ಎಂದು ನಾನು ಹೇಳಿಲ್ಲ. ಬದಲಿಗೆ, ಕಟ್ಟುಪಾಡುಗಳ ಇತ್ತೇ ಇಲ್ಲವೇ ಎಂದು ತೀರ್ಮಾನವಾಗಿ ಹೇಳಲು ಅಂದಿನ ಪಠ್ಯಗಳನ್ನು ಆದರಿಸಿ ಹೇಳಲು ಸಾಧ್ಯವಿಲ್ಲ, ಎಂದಷ್ಟೇ ಹೇಳಿದ್ದೇನೆ. ಮತ್ತೊಂದು ಮಾತು. ನಮ್ಮ ಪ್ರಾಚೀನ ಪಠ್ಯಗಳು ಹೆಚ್ಚು ಕಡಿಮೆ 18-19ನೇ ಶತಮಾನದವರೆಗೂ ನಿರಂತರವಾಗಿ ಬರೆಯಲ್ಪಡುತ್ತಾ/ಸೇರಿಸಲ್ಪಡುತ್ತಲೇ ಇತ್ತು. ಹಾಗಾಗಿ ಯಾವ ಭಾಗ ಯಾವಾಗ ಸೇರಿಸಲ್ಪಟ್ಟಿತು ಎನ್ನುವುದು ಯಾರಿಗೂ ಗೊತ್ತಿಲ್ಲ! ಮತ್ತು ಪುರಾಣ ಪ್ರಜ್ಞೆಯ ಸ್ವರೂಪವೇ ಅಂತದ್ದು. ಪುರಾಣಕಥೆಗಳೆಂದರೆ ಸಂಪೂರ್ಣವಾಗಿ ಆಯಾ ಕಾಲದ ವರ್ತಮಾನಕ್ಕೆ ಸಂಬಂದಿಸಿರದ ಯಾವುದೋ ಹಿಂದಿನ ಕಾಲದ ಚರಿತ್ರೆಯಂತಲ್ಲಾ ಅವು! ಪ್ರತಿಯೊಂದು ಕಾಲದಲ್ಲೂ ಹೊಸಹೊಸ ರೂಪಗಳನ್ನು ಪಡೆಯುತ್ತಾ ರೂಪಾಂತರವಾಗುತ್ತಾ ಆಯಾಕಾಲದ ವರ್ತಮಾನದ ಭಾಗವೇ ಆಗಿರುತ್ತವೆ. ಅಂದಿನ ದೂರದರ್ಶನದ “ಮಹಾಭಾರತ”ಕ್ಕೂ ಇಂದಿನ ಸ್ಟಾರ್ ಟಿವಿಯ “ಮಹಾಭಾರತ”ಕ್ಕೂ ಇರುವ ವ್ಯತ್ಯಾಸವನ್ನೇ ನೋಡಿ J

 

ಬಸವವೇ ಸತ್ಯ ಬಸವವೇ ನಿತ್ಯ : ನೀವು ಗತವನ್ನು ಚರಿತ್ರೆಯಿಂದ ಪ್ರತ್ಯೇಕಿಸಿ ನೋಡುವ ವಿಧಾನವೇ ಪ್ರಶ್ನಾರ್ಹವಾಗಿದೆ. ಚರಿತ್ರೆಯನ್ನು ವೈಜ್ಞಾನಿಕವಾಗಿ ಗತದ ಪುರಾಣಗಳಿಂದ ಕಟ್ಟಲು ಸಾಧ್ಯವೇ ಇಲ್ಲ ಅಂತ ಹೇಗೆ ಹೇಳುತ್ತೀರಿ ನೀವು? ಭಾರತೀಯ ಸಂಸ್ಕೃತಿಯ ಪ್ರಬಲ ಸಮರ್ಥಕರಿಗೆ ಅದರ ಚರಿತ್ರೆ ಬಗ್ಗೆ ಏಕೆ ಅಸಹನೆ? ಚರಿತ್ರೆಯಿಂದ ಸಂಸ್ಕೃತಿ ನಾಶವಾಗುತ್ತದೆ ಎಂಬುದಕ್ಕೆ ಏನು ಆಧಾರವಿದೆ? ಚಾರಿತ್ರಿಕ ಸತ್ಯದ ಬೆಳಕಿನಲ್ಲಿ ಸಂಸ್ಕೃತಿ ಶೋಧನೆ ನಡೆದರೆ ಸಂಸ್ಕೃತಿಯ ನ್ಯೂನ್ಯತೆಗಳನ್ನು ತಿದ್ದುವ ಅವಕಾಶವಿದೆ.

ಷಣ್ಮುಖ : ಹಾಗಿದ್ದರೆ ಇನ್ನೇಕೆ ತಡ, ರಾಕೇಶ್ ಶೆಟ್ಟಿಯವರ ಪ್ರಶ್ನೆಗಳಿಗೆ ಪುರಾವೆ ಸಹಿತ ಉತ್ತರಿಸುವ ಮೂಲಕ ಮನುಸ್ಮೃತಿಯ ಬಗ್ಗೆ ನೀವು ಕುಂಡುಹಿಡಿದಿರುವ “ಚಾರಿತ್ರಿಕ ಸತ್ಯ”ವನ್ನು ಸಾಬೀತು ಮಾಡಿ, ಮತ್ತೆ!

 

Read more from ಲೇಖನಗಳು
67 ಟಿಪ್ಪಣಿಗಳು Post a comment
  1. vasudeva
    ಆಕ್ಟೋ 1 2014

    ಬಾಲಗಂಗಾಧರರು ತಮ್ಮ ಸಾಂಸ್ಕೃತಿಕ ವಿಚಾರಗಳು ’ಪ್ರಾಕ್ಕಲ್ಪನೆ’ (ಹೈಪೋಥೀಸಿಸ್ ಎಂಬರ್ಥವೇ?) ಎಂದು ಸ್ಪಷ್ಟವಾಗಿ ಹೇಳಿರುವುದರ ಜೊತೆಗೆ ಈವರೆಗಿನ ಬ್ರಿಟೀಷ್ ಸಂಶೋಧನೆಗಳ ನ್ಯೂನತೆಗಳನ್ನು ವ್ಯಾಪಕವಾಗಿ ಪರಿಶೀಲಿಸಿದ್ದಾರೆ. ಅಂದ ಮೇಲೆ ಅವರ ಪ್ರಾಕ್ಕಲ್ಪನೆಗಳನ್ನು ಅನುಮೋದಿಸುವ ಇತಿಹಾಸಜ್ಞರು ಅವರು ತೋರಿಸಿದ ಹಾದಿಯಲ್ಲಿ ಸಂಶೋಧನೆಗಳನ್ನು ನಡೆಸಿ ಒಂದು ಪರ್ಯಾಯವೆನಿಕೊಳ್ಳಬಲ್ಲ ಇತಿಹಾಸ ರಚನೆಗೆ ತೊಡಗುವುದು ಸೂಕ್ತ. ಇದು ಹಲವು ವಿದ್ವಾಂಸರುಗಳ ಸಾಮೂಹಿಕ ಪ್ರಯತ್ನದಿಂದ ಒಂದು ವಿಶ್ವವಿದ್ಯಾಲಯದಿಂದ ಮಾತ್ರ ಸಾಧ್ಯವಾಗುವ ಕೆಲಸವಾಗಿದೆ. ಅಂಥದೊಂದು ಮಹತ್ವದ ಕೆಲಸ ಮೊದಲು ನಡೆಯಲಿ. ಬಳಿಕವಷ್ಟೇ ಇಂತಹ ಗಂಭೀರವಾದ ಚರ್ಚೆ ವಾಗ್ವಾದಗಳು ಅರ್ಥಪೂರ್ಣವೆನಿಸಬಲ್ಲದು. ಹಾಗಲ್ಲದೆ ಏಕಾಏಕಿ ಚರ್ಚೆಗೆ ಶುರುವಿಟ್ಟುಕೊಂಡರೆ ವಿಚಾರ ವಿನಿಮಯವನ್ನು ಬಿಟ್ಟು ಪ್ರತಿಯೊಬ್ಬರೂ ತಮ್ಮದೇ ನಿಲುವನ್ನು ಸಮರ್ಥಿಸಿಕೊಳ್ಳುವ ಹಾದಿಯನ್ನು ಹುಡುಕಿಕೊಳ್ಳತೊಡಗುವರು.
    ಉದಾಹರಣೆಗೆ, ರಾಕೇಶ್ ಶೆಟ್ಟರು ಕೇಳಿರುವ ಪ್ರಶ್ನೆಗಳು.
    ಅವರು ಪಟ್ಟಿ ಮಾಡಿರುವ ಪ್ರಶ್ನೆಗಳು ಮನುಸ್ಮೃತಿಯನ್ನು ನಿರಪರಾಧಿಯನ್ನಾಗಿ ಸಾಬೀತು ಮಾಡಲು ಸನ್ನದ್ಧನಾಗಿರುವ ಪೈಲ್ವಾನನ ವರಸೆಗಳನ್ನು ತೋರಿಸುತ್ತಿವೆ. ಅಂದರೆ “ಈ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗದ ಹೊರತು ಅನ್ಯ ಪ್ರಶ್ನೆಗಳಿಗೆ ಆಸ್ಪದವೇ ಇಲ್ಲ” ಎಂಬ ಧೋರಣೆ ಅವರ ಪ್ರಶ್ನೆಗಳಲ್ಲಿ ಕಾಣಿಸುತ್ತಿವೆ. (ಮನುಸ್ಮೃತಿಯನ್ನು ಕಾಪಾಡುವುದು ಅವರ ಉದ್ದೇಶ ಅದಲ್ಲದಿರಬಹುದು). ಆದ್ದರಿಂದಲೇ “ನೀವು ಗತವನ್ನು ಚರಿತ್ರೆಯಿಂದ ಪ್ರತ್ಯೇಕಿಸಿ ನೋಡುವ ವಿಧಾನವೇ ಪ್ರಶ್ನಾರ್ಹವಾಗಿದೆ. ಚರಿತ್ರೆಯನ್ನು ವೈಜ್ಞಾನಿಕವಾಗಿ ಗತದ ಪುರಾಣಗಳಿಂದ ಕಟ್ಟಲು ಸಾಧ್ಯವೇ ಇಲ್ಲ ಅಂತ ಹೇಗೆ ಹೇಳುತ್ತೀರಿ ನೀವು? ಭಾರತೀಯ ಸಂಸ್ಕೃತಿಯ ಪ್ರಬಲ ಸಮರ್ಥಕರಿಗೆ ಅದರ ಚರಿತ್ರೆ ಬಗ್ಗೆ ಏಕೆ ಅಸಹನೆ? ಚರಿತ್ರೆಯಿಂದ ಸಂಸ್ಕೃತಿ ನಾಶವಾಗುತ್ತದೆ ಎಂಬುದಕ್ಕೆ ಏನು ಆಧಾರವಿದೆ? ಚಾರಿತ್ರಿಕ ಸತ್ಯದ ಬೆಳಕಿನಲ್ಲಿ ಸಂಸ್ಕೃತಿ ಶೋಧನೆ ನಡೆದರೆ ಸಂಸ್ಕೃತಿಯ ನ್ಯೂನ್ಯತೆಗಳನ್ನು ತಿದ್ದುವ ಅವಕಾಶವಿದೆ” ಎಂಬ ಷೆಟ್ಕರ್ ಅವರ ಪ್ರಶ್ನೆಗಳು ನಿರ್ಲಕ್ಷಿತವಾಗಿರುವುದು.
    ಈ ಒಟ್ಟು ಚರ್ಚೆಯಲ್ಲಿ ಷೆಟ್ಕರ್ ವಿಚಾರಗಳನ್ನು ಯಾರೂ ಎಲ್ಲೂ ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಅಂದ ಮೇಲೆ ಶೀರ್ಷಿಕೆಯಲ್ಲಿ ಅವರ ಹೆಸರಿನ ಉಲ್ಲೇಖ ಅನಪೇಕ್ಷಣೀಯ. ಅವರ ಹೆಸರಿನ ಸೇರ್ಪಡೆಯಲ್ಲಿ ಪೂರ್ವಪಕ್ಷದ ಒಂದು ದುರ್ಬಲ ರೂಪವನ್ನು ಹೆಕ್ಕಿಕೊಂಡು ಪೂರ್ವಪಕ್ಷವನ್ನು ಹೊಡೆದೋಡಿಸುವ ಹುನ್ನಾರವಿದೆಯೇ?

    ಉತ್ತರ
    • ಆಕ್ಟೋ 2 2014

      ವಸುದೇವ ಅವರೇ,
      ಮೊದಲಿಗೆ ನಮ್ಮ ಪ್ರಗತಿಪರರ ಮತ್ತು ಬಲಪಂಥೀಯರ ಹಾಗೇ ಪ್ರತಿಯೊಂದರಲ್ಲೂ, ಸಾಕ್ಷಿ,ಪುರಾವೆಗಳಿಲ್ಲದೆ “ಹುನ್ನಾರ,ಹುನ್ನಾರ” ಎನ್ನುವುದನ್ನು ಬಿಡಿ.ನಿಲುಮೆಯನ್ನು ನೀವು ಎಷ್ಟು ದಿನದಿಂದ ಓದುತಿದ್ದಿರೋ ನನಗೆ ಗೊತ್ತಿಲ್ಲ.ಮೊದಲಿನಿಂದ ಓದಿಕೊಂಡರೆ ನಿಮಗೆ,ನಿಲುಮೆಯು ತನ್ನ ನಿಲುವಿಗೆ ಬದ್ಧವಾಗಿರುವುದು ತಿಳಿಯುತ್ತದೆ.ಸುಮ್ಮನೇ ಈ ರೀತಿ ಹುನ್ನಾರದ ಕಲ್ಪನೆಯನ್ನು ಬಿಟ್ಟು,ಆರೋಗ್ಯಕರ ಚರ್ಚೆಯನ್ನು ನಡೆಸೋಣವೇ?

      ಉತ್ತರ
  2. ಷಣ್ಮುಖ
    ಆಕ್ಟೋ 1 2014

    ವಾಸುದೇವರೇ, ಇಲ್ಲಿ ಹುನ್ನಾರದ ಪ್ರಶ್ನೆ ಏನು ಬಂತು? ಮನುಸ್ಮೃತಿಯ ಕುರಿತ ರಾಕೇಶ್ ಶೆಟ್ಟರ ಪ್ರಶ್ನೆಗಳಿಗೆ ಈ ರೀತಿಯ “ಚಾರಿತ್ರಿಕ ಸತ್ಯ”ದ ಆಧಾರದ ಪ್ರತಿಪಾದಕರು ಉತ್ತರಿಸುವ ಮೂಲಕ “ಗತವನ್ನು ಚರಿತ್ರೆಯಿಂದ” ಪ್ರತ್ಯಕಿಸುವುದು ಅವೈಜ್ಞಾನಿಕ ಎಂದು ತೋರಿಸಬಹುದಲ್ಲ? ಆ ಮೂಲಕ ನಮ್ಮ ವಾದವನ್ನು ತಪ್ಪೆಂದು ತೋರಿಸಿ “ಚರಿತ್ರೆ”ಯ ವೈಜ್ಞಾನಿಕ ಅಗತ್ಯತೆಯನ್ನು ಎತ್ತಿಹಿಡಿಯಬಹುದಲ್ಲ! ಈ ರೀತಿಯ ಪ್ರಶ್ನೆಗಳು ಬಂದಾಗೆಲ್ಲಾ ಹುನ್ನಾರದ ಮೊರೆ ಹೋಗುವ ನಿಮ್ಮ ಹುನ್ನಾರ ನಮಗಂತು ಅರಿಯದಾಗಿದೆ. ಆದರೆ ನಿಮ್ಮ ಹುನ್ನಾರ(ವೇ ಆಗಿದ್ದರೂ) ವೇನಾದರೂ ಆಗಿರಲಿ ನಾವು ತಲೆಕೆಡಿಸಿಕೊಳ್ಳುವುದಿಲ್ಲ! ಆದರೆ, ರಾಕೇಶರ ಪ್ರಶ್ನೆಗಳು ಚಾರಿತ್ರಿಕ ಸತ್ಯವೆಂದು ಕೊಂಡದ್ದರ ಕುರಿತ ಪ್ರಶ್ನೆ ಹೌದೇ, ಅಲ್ಲವೇ? ಇಲ್ಲವಾದರೆ ಅದನ್ನು ತೋರಿಸಿ. ಹೌದೆಂದಾರೆ, ಅವರ ಪ್ರಶ್ನೆಗಳಿಗಾದರೂ ಉತ್ತರಿಸಿ. ಅದನ್ನು ಬಿಟ್ಟು ದುರದ್ದೇಶ,ಹುನ್ನಾರದ ಆರೋಪಗಳನ್ನು ನಾವೂ ನಿಮ್ಮ ಬಗ್ಗೆ ಸಾಕಷ್ಟು ಮಾಡಬಹುದು! ಆದರೆ ಚರ್ಚೆಯಲ್ಲಿ ಅದು ದೌರ್ಬಲ್ಯದ ಸಂಕೇತ ಅಷ್ಟೇ! ಚರ್ಚೆಯ ವಿಚಾರದ ಮೂಲಕವೇ “ಚಾರಿತ್ರಿಕ ಸತ್ಯ”ದ ಅಗತ್ಯವನ್ನು ಮತ್ತು ಅದನ್ನು ಸಾಧಿಸುವ ಮಾರ್ಗವನ್ನು ಸೂಚಿಸಿ. ನಮ್ಮ ವಾದ ಬಿದ್ದು ಹೋಗುತ್ತದೆ.

    ಉತ್ತರ
  3. ಷಣ್ಮುಖ
    ಆಕ್ಟೋ 1 2014

    ಭಾರತೀಯ ಸಂಧರ್ಭದಲ್ಲಿ ಗತಕಾಲದ ಸಮಾಜವನ್ನು ಅಂದಿನ ಪಠ್ಯಗಳನ್ನು ಇಟ್ಟುಕೊಂಡು ಅಂದಿನ ಸಮಾಜ ಹೀಗೆಯೇ ಇತ್ತು, ಅಂದು ಹೀಗೆಯೇ ನಡೆಯಿತು ಎಂದು “ಚರಿತ್ರೆ”ಯ ರೂಪದಲ್ಲಿ ವಿವರಿಸುವುದರಲ್ಲಿನ ತಾರ್ಕಿಕ ಸಮಸ್ಯೆಗಳನ್ನೇ ನನ್ನ ಸುಧೀರ್ಘ ವಿವರಣೆಯಲ್ಲಿ ಹೇಳಿದ್ದೇನೆ. ಅಷ್ಟು ಹೇಳಿದ ಮೇಲೆ :

    “ನೀವು ಗತವನ್ನು ಚರಿತ್ರೆಯಿಂದ ಪ್ರತ್ಯೇಕಿಸಿ ನೋಡುವ ವಿಧಾನವೇ ಪ್ರಶ್ನಾರ್ಹವಾಗಿದೆ. ಚರಿತ್ರೆಯನ್ನು ವೈಜ್ಞಾನಿಕವಾಗಿ ಗತದ ಪುರಾಣಗಳಿಂದ ಕಟ್ಟಲು ಸಾಧ್ಯವೇ ಇಲ್ಲ ಅಂತ ಹೇಗೆ ಹೇಳುತ್ತೀರಿ ನೀವು? ಭಾರತೀಯ ಸಂಸ್ಕೃತಿಯ ಪ್ರಬಲ ಸಮರ್ಥಕರಿಗೆ ಅದರ ಚರಿತ್ರೆ ಬಗ್ಗೆ ಏಕೆ ಅಸಹನೆ? ಚರಿತ್ರೆಯಿಂದ ಸಂಸ್ಕೃತಿ ನಾಶವಾಗುತ್ತದೆ ಎಂಬುದಕ್ಕೆ ಏನು ಆಧಾರವಿದೆ? ”
    ಎಂದಷ್ಟ ಕೇಳಿದರೆ ಏನು ಹೇಳುವುದು ಮೇಲಿಂದ ಏನು ಹೇಳಿರುವೆನೋ ಅದನ್ನೇ ಪುನಃ ಪುನಃ ಓದಿ ಎಂದಷ್ಟೇ ಹೇಳಬಹುದು. ಅದರ ಬದಲಿಗೆ:
    1 ಗತವನ್ನು ಚರಿತ್ರೆಯಿಂದ ಪ್ರತ್ಯೇಕಿಸಿ ನೋಡುವ ವಿಧಾನವೇ ಏಕೆ ಪ್ರಶ್ನಾರ್ಹ ಎಂದು ತರ್ಕಬದ್ದವಾಗಿ ವಾದವನ್ನಿಡಲಿ.

    2. ಪುರಾಣಗಳಿಂದ speculations (ಹೀಗಿದ್ದಿರಬಹುದು ಆಗಿದ್ದಿರಬಹುದು; ಇದ್ರೂ ಇರಬಹುದು ಇಲ್ಲದೆಯೂ ಇರಬಹುದು) ಗಳನ್ನು ಮಾಡಬಹುದೇ ವಿನಃ ಚರಿತ್ರೆಯನ್ನು ಕಟ್ಟಲು ಸಾಧ್ಯವೇ ಇಲ್ಲವೆಂದು ಮೇಲೆ ತಾರ್ಕಿಕವಾಗಿ ತೋರಿಸಿದ್ದೇನೆ. ಅದನ್ನು ಓದಿಯೂ ಪುನಃ “ಗತದ ಪುರಾಣಗಳಿಂದ ವೈಜ್ಞಾನಿಕ ಚರಿತ್ರೆಯನ್ನು ಕಟ್ಟಲಾಗುವುದಿಲ್ಲ ಎಂದು ಹೇಗೆ ಹೇಳುವಿರಿ” ಎಂದರೆ ಏನರ್ಥ? ಮೇಲೆ ಹೇಳಿದ್ದು ಅರ್ಥವೇ ಆಗಿಲ್ಲ ಎಂದಷ್ಟೇ ಅರ್ಥ! ಇದನ್ನು ನೀವು ಗಂಭಿರವಾಗಿ ಪರಿಗಣಿಸಿಲ್ಲ ಅಂದರೇನು? ಅದರ ಬದಲಿಗೆ ಆ ಮಹಾಶಯರು ಪುರಾಣಗಳಿಂದ ವೈಜ್ಞಾನಿಕ ಚರಿತ್ರೆಯನ್ನು ಹೇಗೆ ಕಟ್ಟಬಹುದು ಎಂದು ಆಧಾರ ಸಹಿತ ತೋರಿಸಿದರೆ ನಮ್ಮ ವಾದ ಬಿದ್ದುಹೋಗುತ್ತದೆ ಅಲ್ಲವೇ? ಅದನ್ನು ಮಾಡುವ ಅವಕಾಶ ಇರುವಾಗ ನಮ್ಮ ಮೇಲೆ ಇಲ್ಲದ ಹುನ್ನಾರದ ಆರೋಪವೇಕೆ? ಅದನ್ನೂ ನಾವೇ ಮಾಡಬೇಕೆಂದೆ?

    3. ಚರಿತ್ರೆಯಿಂದ ಸಂಸ್ಕೃತಿ ನಾಶವಾಗುತ್ತದೆ ಅನ್ನುವುದಕ್ಕೆ ಏನು ಆಧಾರವಿದೆ. ಯೂರೋಪಿಯನಿಲ್ಲಿದ್ದ ಗ್ರೀಕ್ ಮತ್ತು ರೋಮನ್ನರ ಪೇಗನ್ ಸಂಸ್ಕೃತಿ ನಾಶವಾಗಿದ್ದು ಕ್ರಿಶ್ಚಿಯನ್ನರು ಅವರ ಸಂಸ್ಕೃತಿ, ದೇವತೆ, ಸಂಪ್ರದಾಯ, ರೂಢಿಗಳ ಬಗ್ಗೆ ಎತ್ತಿದ ಚಾರಿತ್ರಿಕ ಪ್ರಶ್ನೆಗಳಿಂದಲೇ (ನಿಮ್ಮ ದೇವರು ನಿಜವೇ, ಯಾವುದೋ ಕಾಲ ದೇಶದಲ್ಲಿ ನಡೆದ ಸತ್ಯಗಳೇ ಅವು ಎನ್ನುವಂತಹ ಪ್ರಶ್ನೆಗಳನ್ನಿಟ್ಟು ಅವುಗಳು ಹೇಗೆ ಚಾರಿತ್ರಿಕವಾಗಿ ಅವಾಸ್ತವಿಕ ಸುಳ್ಳು ಮುಂತಾಗಿ ಹೇಳಿ) ಎನ್ನುವುದು ಯೂರೋಪಿನವರ ಚರಿತ್ರೆಯೇ ಹೇಳುತ್ತದೆಯಲ್ಲ!

    ಈಗ ನಿಮ್ಮ ವಾದವನ್ನು ,ವಾಸುದೇವ/ದರ್ಗಾ/ಶೆಟ್ಕರ್ ಯಾರಾದರೂ ಸರಿ, ತಾರ್ಕಿಕವಾಗಿ ಮುಂದಿಡಿ ಚರ್ಚಿಸುವು. ಸುಮ್ಮನೆ ಹುನ್ನಾರದ ಗುಮಾನಿಗಳಿಂದ, ನಿಂತಲ್ಲೇ ಗಿರಕಿ ಹೊಡೆಯುವ ಹೇಳಿಕೆಗಳಿಂದ, ಹೀಗಾಗಲೇ ಉತ್ತರಿಸಿಸರುವ ಪ್ರಶ್ನೆಗಳನ್ನೇ ಪುನಃಪುನಃ ಕೇಳುವುದರಿಂದ ಚರ್ಚೆ ಮುಂದೆ ಹೋಗದು

    ಉತ್ತರ
  4. valavi
    ಆಕ್ಟೋ 1 2014

    ನನ್ನ ಪ್ರಶ್ನೆ ಷಣ್ಮುಖ ಅವರಿಗೆ. ಮಾನ್ಯರೆ ನೀವು ಪುರಾಣಗಳು ಭಾರತೀಯ ಚರಿತ್ರೆಗೆ ವೈಜ್ಞಾನಿಕ ಆಧಾರ ಒದಗಿಸುವದಿಲ್ಲ. ಅವು ರೋಚಕತೆಯಿಂದ ಕೂಡಿದವುಗಳು. ಎನ್ನುತ್ತೀರಿ. ಇದನ್ನು ಒಪ್ಪೋಣ. ಹಾಗೇನೇ ಮುಸಲ್ಮಾನ ಆಳರಸರ ಚರಿತ್ರೆಯನ್ನು ಅವರ ಇತಿಹಾಸಕಾರರೂ ರೋಚಕತೆಯಿಂದ ಬರೆದಿರಬಹುದಲ್ಲ? ತಮ್ಮ ಆಳರಸರನ್ನು ಹೊಗಳಲು ಅವರಿಂದ ದತ್ತಿ ದಾನ ಪಡೆಯಲು ಕೆಲವು ಇಲ್ಲದ ನಡೆಯದ ಸಂಗತಿಗಳನ್ನು ಹೇಳಿರಬಹುದಲ್ಲವೆ? ಅಂದ ಮೇಲೆ ಅವು ಹೇಗೆ ಸತ್ಯವಾಗುತ್ತವೆ? ಅವುಗಳನ್ನು ಆಧರಿಸಿ ಬರೆದ ಶ್ರೀ ಭೈರಪ್ಪನವರ ಆವರಣ ಹಾಗೇನೇ ಅರುಣ ಶೌರಿಯವರ ಮಹಾನ್ ಇತಿಹಾಸಕಾರರು ಇತ್ಯಾದಿಗಳು ಕೂಡ ಸುಳ್ಳುಗಳು ಮತ್ತು ಒಂದು ಜನಾಂಗವನ್ನು ಪ್ರಚೋದಿಸುವಂಥವು ಎನ್ನಬಹುದಲ್ಲವೆ?

    ಉತ್ತರ
  5. ಷಣ್ಮುಖ
    ಆಕ್ಟೋ 1 2014

    “ಚರಿತ್ರೆ”ಯ ಕುರಿತು ನಮ್ಮ ನಿಲುವು ಇದೇ. ಇದರಲ್ಲಿ ಬಲಪಂಥಿಯರು ಮತ್ತು ಎಡಪಂಥೀಯರು ಸಮಭಾಗಿಗಳು ವಾಲವಿಯವರೇ. ಆದರೆ ಅದೇ ಪುರಾಣಗಳನ್ನು ಚರಿತ್ರೆಯಾಗಿಸುವುದರಲ್ಲಿ ಅತಿ ಉತ್ಸಾಹ ಇರುವುದು ಎಡಪಂಥೀಯರಿಗಿಂತ ಬಲಪಂಥೀಯರಿಗೇ ಹೆಚ್ಚು ಮತ್ತು ಅದು ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎನ್ನುವುದು ನನ್ನ ತಿಳುವಳಿಕೆ. ಅರುಣ್ ಶೌರಿಯವರ ಬರವಣಿಗೆಗೂ ಅದು ಖಂಡಿತಾ ಅನ್ವಯವ ವಾಗುತ್ತದೆ. ಹಾಗೆಯೇ ಭೈರಪ್ಪನವರ “ಓರಿಯಂಟಲಿಸ್ಟ್” ಧೋರಣೆಯ ಬಗ್ಗೆ ಈಗಾಗಲೇ ನಿಲುಮೆಯ ನನ್ನ ಪ್ರತಿಕ್ರಿಯೆಯಲ್ಲಿ ಬರೆದಿದ್ದೇನೆ. ಅದರಲ್ಲೂ ಆವರಣದ ಕಾದಂಬರಿಯ ಕೊನೆಯಲ್ಲಿ ಕೊಡುವ ಬಹುತೇಕ ಎಲ್ಲಾ ಉಲ್ಲೇಖಗಳೂ ಅದೇ ಪಾಶ್ಚಿಮಾತ್ಯ “ಓರಿಯಂಟಲಿಸ್ಟ್” ಚರಿತ್ರಕಾರರ ಕೃತಿಗಳನ್ನು ಮತ್ತು ಅವರ ಬರವಣಿಗೆಗಳನ್ನೇ ಆಕರವಾಗಿಸಿಕೊಂಡು ಬರೆದಿರುವ “ರಾಷ್ಟ್ರೀಯವಾದಿ’ ಚರಿತ್ರಕಾರರ ಕೃತಿಗಳೇ ಆಗಿವೆ! ಹೀಗಾಗಿ ಚರಿತ್ರೆಯ ಕುರಿತ ಬಲಪಂಥೀಯರ ಧೋರಣೆಯೂ ಅಷ್ಟೇ ಅಪಾಯಕಾರಿ ರೀತಿಯಲ್ಲಿದೆ ಎನ್ನುವುದೇ ನಮ್ಮ ನಿಲುವೂ ಕೂಡ.

    ಉತ್ತರ
  6. ಷಣ್ಮುಖ
    ಆಕ್ಟೋ 1 2014

    ಪುರಾಣಗಳನ್ನು ಚರಿತ್ರೆಯನ್ನು ಬರೆಯಲು “ವೈಜ್ಞಾನಿಕ ಆಧಾರಗಳು” ಅಲ್ಲ ಎಂದಿರುವೆ. ಅವು ರೋಚಕತೆಯಿಂದ ಕೂಡಿವೆ ಎನ್ನುವ ಕಾರಣಕ್ಕಲ್ಲ. ಬದಲಿಗೆ ಅವು ಈ ಸಮಾಜದ ಕುರಿತ ವಾಸ್ತವ ನಿರೂಪಣೆಗಳ ಧೂರಣೆ ಮತ್ತು ಉದ್ದೇಶ ಎರಡೂ ಅವುಗಳ ಅಸ್ತಿತ್ವದ ಹಿಂದೆ ಇಲ್ಲ. ಜೊತೆಗೆ ಸಮಾಜದ ಜೀವನ ಮಾರ್ಗದರ್ಶಿಸೂತ್ರಗಳಾಗಿಯೂ ಅವು ಅಸ್ತಿತ್ವದಲ್ಲಿಲ್ಲ ಎನ್ನುವ ಕಾರಣಕ್ಕೆ.

    ಆದರೆ ಅವು ಯಾವುದೇ ರೀತಿಯ ಜ್ಞಾನ ರೂಪಣೆಗೂ “ವೈಜ್ಞಾನಿಕ ಆಧಾರಗಳೇ’ ಅಲ್ಲ ಎನ್ನಲಾಗುವುದಿಲ್ಲ. ಭಾರತದ ಸಂಸ್ಕತಿಯಲ್ಲಿ ಜೀವನದಲ್ಲಿ ಮಾನವ ಸಂಬಂದಗಳು, ಆತ್ಮಪರಮಾತ್ಮದ ಸಂಬಂದ, ಧರ್ಮ-ಅಧರ್ಮ, ಕರ್ಮ, ನೀತಿ-ಅನೀತಿ ಮುಂತಾದವುಗಳ ಕುರಿತ ಜಿಜ್ಞಾಸೆಯ ಸ್ವರೂಪ, ಅವುಗಳ ಬಳಕೆಯ ಕಾಂಟೆಕ್ಸ್ಟ್ ಗಳನ್ನು ಅರ್ಥಮಾಡಿಕೊಳ್ಳಲಿಕ್ಕೆ ಅವು ವೈಜ್ಞಾನಿಕ ಆಕರಗಳೇ ಆಗಿವೆ.

    ಹೀಗಾಗಿ “ಚರಿತ್ರೆ ರೂಪಣೆಗೆ” ಪುರಾವೆಯಾಗುವ ಪಠ್ಯಗಳ ಲಕ್ಷಣ ನಮ್ಮ ‘ಪುರಾಣ’ ಮತ್ತು ಇತರೆ ಪಠ್ಯಗಳಿಗಿಲ್ಲ ಎಂದಷ್ಟೇ ನಮ್ಮ ವಾದ.

    ಉತ್ತರ
  7. ಷಣ್ಮುಖ
    ಆಕ್ಟೋ 1 2014

    ಭೈರಪ್ಪನವರು “ಚರಿತ್ರೆ”ಯ ಘಟನೆಗಳನ್ನು ಚಿತ್ರೀಕರಿಸುವಾಘ “ಓರಿಯಂಟಲಿಸ್ಟ್” ಚರಿತ್ರಕಾರರ ಬಲೆಯೊಳಗೆ ಸಿಲುಕಿಕೊಳ್ಳುತ್ತಾರೆ ನಿಜ. ಆದರೆ ಅದೇ ಸಂಧರ್ಭದಲ್ಲಿ ಸಮಕಾಲೀನ ಎಡಪಂಥಿಯ ಪ್ರಗತಿಪರ ಬುದ್ದಿಜೀವಿಗಳು ಭಾರತೀಯ ಸಂಪ್ರದಾಯಗಳ ಕುರಿತು ತೋರುವ ಕೀಳರಿಮೆ, ಅವಜ್ಞೆ, ಮತ್ತು ಆಷಾಡಭೂತಿತನವನ್ನು ಚೆನ್ನಾಗಿಯೇ ಕಟ್ಟಿಕೊಡುತ್ತಾರೆ. ಜೊತೆಗೆ ಸೆಕ್ಯುಲರ್ ಚಿಂತಕರ ಸೆಮೆಟಿಕ್ ರಿಲಿಜನ್ನಿನ ಪಕ್ಷಪಾತಿ ಧೋರಣೆಗಳನ್ನು ಸರಿಯಾಗಿ ಗ್ರಹಿಸಿ ವಿವರಿಸುವಲ್ಲಿ ಸಫಲವಾಗಿದ್ದಾರೆ ಎನ್ನುವುದನ್ನೂ ಗುರುತಿಸಬಹುದು.

    ಬೈರಪ್ಪನಂತವರು ಏನೇ ಬರೆದರೂ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಇಂದಿಗೂ ಪ್ರಭಾವಿಯಾಗಿರುವುದು ಮತ್ತು ಎಲ್ಲೆಡೆ ಚರಿತ್ರೆಯ ಪಠ್ಯವಾಗಿ ಭೋದಿಸುತ್ತಿರುವುದು ಹಿಂದೂ ಸಂಪ್ರದಾಯಗಳನ್ನು “ಕಪಟ/ಸುಳ್ಳು ರಿಲಿಜನ್ನಿನಿಂದ ಕೂಡಿದ ಕೆಟ್ಟಅನಾಗರೀಕ ಮೂಢಾಚಾರಣೆ ಮತ್ತು ನಿರಂತರ ಶೋಷಣೆಗಳನ್ನು ಮಾಡಿಕೊಂಡು ಬರುತ್ತಿರುವ ಅನಾಗರೀಕ ಸಂಸ್ಕೃತಿಯಾಗಿಯೇ” ಲಕ್ಷಣೀಕರಿಸುವ ಎಡಪಂಥಿಯ ಸೆಕ್ಯುಲರ್ ಚರಿತ್ರೆ ತಾನ!. ಇದನ್ನೇ ಬಾಲು ವಾಸ್ತವದಲ್ಲಿ “ಚರಿತ್ರೆ” ಎನ್ನುವುದೇ ಸೆಕ್ಯುಲರೀಕೃತ” ಕ್ರಿಶ್ಚಿಯನ್ ಥಿಯಾಲಜಿ ಎನ್ನುತ್ತಾರೆ. ಭಾರತೀಯ ಸಂಪ್ರದಾಯಗಳನ್ನು ತುಚ್ಚೀಕರಿಸುವ ಈ ಚರಿತ್ರೆಗೆ ಪ್ರತಿಕ್ರಿಯಯಾಗಿ ಭೈರಪ್ಪನಂತ ಲೇಖಕರು ಅತ್ಯಗ್ರವಾಗಿ ಅದೇ ಚರಿತ್ರೆಯ ಆಯುಧವನ್ನು ತಿರುಗಿಸಿ ಜಳಪಿಸುತ್ತಾರೆ. ಇದಕ್ಕೆ ಕಾರಣ ಇದು “ನಡೆದದ್ದೇ ಹೀಗೆ” ಎಂದು ನಿಖರವಾಗಿ ಹೇಳುವಂತಹ ಲಕ್ಷಣದ ಪಠ್ಯಗಳ ಪುರಾವೆ ಅನುಪಸ್ತಿತಿಯಲ್ಲಿ ಒಂದೇ ಪಠ್ಯವನ್ನಿಟ್ಟುಕೊಂಡು “ಹೀಗೂ ನಡೆಯಿತು ಹಾಗೂ ನಡೆಯಿತು” ಎನ್ನುವಂತಹ speculation ಗಳನ್ನು ಮಾಡುವ ಸಾಧ್ಯತೆ ಇರುವುದು ತಾನೆ! ಇದರಿಂದಾಗಿಯೇ ಭೈರಪ್ಪನಂತವರು ಸೆಕ್ಯುಲರ್ ಚರಿತ್ರಕಾರರ ವಿರುದ್ದ ದಿಕ್ಕಿಗೆ ಅದೇ ಚರಿತ್ರೆಯ ಆಯುಧವನ್ನು ಜಳಪಿಸಿದರು. ಅವರು “ಚರಿತ್ರೆ”ಯೇ ಸಮಸ್ಯೆಯಾಗಿ ಗ್ರಹಿಸಬೇಕಿತ್ತು. ದುರಧೃಷ್ಟವಷಾತ್ ಅದೇ ಸಮಸ್ಯೆ (ರೋಗ)ವನ್ನೇ ತಮ್ಮ ಸಂಪ್ರದಾಯ/ಸಂಸ್ಕೃತಿಯ ರಕ್ಷಣೆಯ ಸಾಧನವೆಂದು ಅವರೂ ಸೇರಿದಂತೆ ಬಹುತೇಕ ಬಲಪಂಥೀಯರು ಭಾವಿಸಿದ್ದಾರೆ.

    ಉತ್ತರ
    • Nagshetty Shetkar
      ಆಕ್ಟೋ 1 2014

      ಷಣ್ಮುಖ ಅವರೇ, ಭೈರಪ್ಪನವರ ಪ್ರಸ್ತಾಪವನ್ನು ನೀವು ಮಾಡಿರುವುದರಿಂದ ತಮಗೆ ಈ ಪ್ರಶ್ನೆಗಳು. ಪ್ರಜಾವಾಣಿಯಲ್ಲಿ ನಾವೆಲ್ಲ ಬಾಲು ಅವರ ವಿಚಾರಗಳನ್ನು ವಿರೋಧಿಸುತ್ತಿದ್ದಾಗ ಭೈರಪ್ಪನವರು ಬಾಲು ಅವರ ಪರ ಬರೆಯಲಿಲ್ಲ. ವಚನಗಳ ಮೇಲಿನ ಚರ್ಚೆಯಲ್ಲಿ ಅವರು ಪಾಲ್ಗೊಳ್ಳಲೇ ಇಲ್ಲ. ಆದುದರಿಂದ ಬಾಲು ಅವರ ಚಿಂತನೆಯ ಪರಿಚಯ ಭೈರಪ್ಪನವರಿಗಿದೆಯ? ಮತ್ತು ನೀವು ಭೈರಪ್ಪನವರದ್ದು ಓರಿಯೆಂಟಲಿಸ್ಟ್ ಅಪ್ರೋಚ್ ಅಂತ ಟೀಕೆ ಮಾಡಿರುವುದು ಅವರಿಗೆ ಗೊತ್ತಿದೆಯೇ? ಅವರ ಪ್ರತಿಕ್ರಿಯೆ ಏನು?

      ಉತ್ತರ
  8. Rajaram Hegde
    ಆಕ್ಟೋ 1 2014

    ‘ಭಾರತೀಯ ಸಂಸ್ಕೃತಿಯ ಪ್ರಬಲ ಸಮರ್ಥಕರಿಗೆ ಅದರ ಚರಿತ್ರೆ ಬಗ್ಗೆ ಏಕೆ ಅಸಹನೆ?’
    ಒಂದೋ, ಇಂಥ ಹೇಳಿಕೆಗಳನ್ನು ಎದುರಾಳಿಗಳ ಮೇಲೆ ಮಾತಿನ ವರಸೆಯಾಗಿ ಬಳಸಲಾಗುತ್ತಿದೆ, ಇಲ್ಲ, ಇದರ ಹಿಂದೆ ಒಂದು ಹುನ್ನಾರವನ್ನು ಊಹಿಸಲಾಗುತ್ತಿದೆ. ಷಣ್ಮುಖ, ರಾಕೇಶ್ ಅವರೆ, ಈ ಚರ್ಚೆಯ ಹಿಂದೆ ನಿಮಗೊಂದು ಸದುದ್ದೇಶವಿರಬಹುದು ಎಂಬುದನ್ನು ಒಪ್ಪಿಕೊಳ್ಳಲಿಕ್ಕೇ ಇವರು ತಯಾರಿಲ್ಲವಲ್ಲ? ಇವರನ್ನು ಒಪ್ಪಿಸಬೇಕೆಂದರೆ ನೀವು ತರ್ಕಬದ್ಧ ವಾದಗಳನ್ನಿಟ್ಟು ಪ್ರಯೋಜನವಿದೆ ಎಂದು ನನಗನಿಸುವುದಿಲ್ಲ. ಕನ್ನಡದ ಇಂಥ ಅನೇಕರಿಗೆ ಒಂದು ಜಿಜ್ಞಾಸೆಯನ್ನು ಬೆಳೆಸುವ ಕುರಿತು ಆಸ್ಥೆ ಇದೆ ಎಂದು ನನಗನಿಸುವುದಿಲ್ಲ. ನಿಮ್ಮ ಉದ್ದೇಶವನ್ನೇ ಸಂದೇಹಿಸುವವರ ಸಂದೇಹಗಳನ್ನು ಚರ್ಚೆ ಪರಿಹರಿಸಲಾರದು. ನಿಮ್ಮನ್ನು ನಂಬದೇ ಹೋದರೂ ಕೂಡ ಅವರೇಕೆ ಚರ್ಚೆ ಮುಂದುವರಿಸುತ್ತಿದ್ದಾರೆ ಎಂಬುದರ ಕುರಿತು ಯೋಚಿಸುವ ಅಗತ್ಯವಿದೆ.

    ಉತ್ತರ
  9. Naani
    ಆಕ್ಟೋ 2 2014

    ಲಿಂಗಾಯಿತ ಹೆಸರಿನಲ್ಲಿ ಇಸ್ಲಾಂನ ವಿಚಾರಗಳನ್ನೇ ಹೇಳುತ್ತಿದ್ದಾರೆ ಎನ್ನುವುದನ್ನು ಪುರಾವೆ ಮತ್ತು ತರ್ಕಬದ್ದವಾಗಿಯೇ ವಾದಿಸಿದ್ದಾರೆ ಶೆಟ್ಕರ್ ಅದನ್ನ ಲೇವಡಿ ಎಂದು ಬದಿಗೆ ಸರಿಸಬೇಡಿ ಅದಕ್ಕೆ ಇಸ್ಲಾಂ ಕೂಡ ಮಾನವಧರ್ಮವೇ ಅದ್ದರಿಂದ ಅದಕ್ಕೂ ಲಿಂಗಾಯತಕ್ಕೂ ಸಾಮ್ಯತೆ ಇರೋದು ಸಹಜವೆನ್ನುವ ರೀತಿಯಲ್ಲಿ ನೀವುಗಳೇ ತರ್ಕಿಸಿದ್ದೀರಿ. ಹೀಗ ಅದನ್ನು ಲೇವಡಿ ಅದರೆ ನೀವೇ ಇಸ್ಲಾಮೂ ಸಮಾನತೆ ಹರಿಕಾರ ಔರಂಗಜೇಬ್, ಭಾಬರ್ ಗಳೆಲ್ಲ ಮಾನವತಾವಾದಿಗಳು ಅಂತ ಪ್ರತಿಪಾದಿಸ್ಕೊಂಡಿದ್ರಲ್ಲಾ ಇನ್ನೇನು? ಅದೆಲ್ಲಾ ಇರಲಿ ಚರ್ಚೆಯ ವಿಚಾರ ಏನೇ ಇದ್ರೂ ದರ್ಗಾರನ್ನು ಎಳೆತರುವ, ಚರ್ಚೆಯನ್ನು ವಿಷಯಾಂತರ ಮಾಡಿ ಚರ್ಚೆಗೆ ಮಣ್ಣು ಹಾಕುವ, ವೈಯುಕ್ತಿಕ ನಿಂದನೆ ಮತ್ತು ಆತ್ಮರತಿಯಲ್ಲಿ ಮಾನಸಿಕ ಸುಖ ಕಾಣುವ ನಿಮ್ಮ “ಕಾಯಕ”ವನ್ನು ನಿಲ್ಲಿಸುವವರೆಗೂ ಮತ್ತು ನಿಮ್ಮ ಈ ಚಾಳಿ ಬಿಡದಹೊರತು ನಿಲುಮೆ ಇಲ್ಲಿಯ ಚರ್ಚೆಗಳಿಗೆ ಮಣ್ಣುಹಾಕಲು ನಿಮಗೆ ಅವಕಾಶ ಕೊಡಬಾರದಿತ್ತು. ನಿಮ್ಮದು ಇದು ಹುಟ್ಟಗುಣ ಎನಿಸುತ್ತದೆ. ನೀವು ಮನುಷ್ಯರಾಗಿದ್ದೆ ಉಳಿದವರೂ ನಿಮಗೆ ಮನುಷ್ಯರಾಗಿಯೇ ಕಾಣುತ್ತಾರೆ ಎನ್ನುವ ಸಾಮನ್ಯಗ್ರಹಿಕೆ ಇಲ್ಲದ ನಿಮ್ಮಂತವರ ಬಾಯಲ್ಲಿ ಶರಣ ಶಬ್ದಬರೋದು ಅಸಹ್ಯವೆನಿಸುತ್ತೆ.

    ಉತ್ತರ
    • Nagshetty Shetkar
      ಆಕ್ಟೋ 2 2014

      ೧. ಇಸ್ಲಾಂಗೂ ಲಿಂಗಾಯತಕ್ಕೂ ಇರುವ ಸಾಮ್ಯತೆ ಇದು – ಇವೆರಡೂ ಮೂಲಭೂತವಾಗಿ ಜೀವಪರವಾದ ಮತಧರ್ಮಗಳು. ಸಮಾನತೆಯ ಆಧಾರದ ಮೇಲೆ ನಿಂತಿವೆ. ಜಾತಿ ಕುಲ ಲಿಂಗ ತಾರತಮ್ಯವನ್ನು ಒಪ್ಪುವುದಿಲ್ಲ. ಪುರೋಹಿತಶಾಹಿಯನ್ನು ಒಪ್ಪುವುದುಇಲ್ಲ. ಶ್ರೇಣೀಕೃತ ಸಮಾಜವನ್ನು ಒಪ್ಪುವುದಿಲ್ಲ. ಎಲ್ಲಾ ಜೀವಿಗಳ ಅಭ್ಯುದಯವನ್ನೇ ಬಯಸಿವೆ.

      ೨. ಬಾಬರ್ ಒಬ್ಬ ಸಂವೇದನಾಶೀಲ ಆಡಳಿತಗಾರನಾಗಿದ್ದ. ಅವನ ಬಾಬರ್ ನಾಮಾ ಓದಿ ನಿಮಗೆ ಅರ್ಥವಾಗುತ್ತದೆ. ಬಾಬರ್ ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ನೀವು ಅವನನ್ನು ದ್ವೇಷಿಸುತ್ತಿದ್ದೀರಿ.

      ೩. ದರ್ಗಾ ಸರ್ ಅವರನ್ನು ಎಲೆ ತರಲು ಅವರು ಎತ್ತೋ ಹೋರಿಯೋ??? ದರ್ಗಾ ಸರ್ ಬಗ್ಗೆ ಹೀಗೆಲ್ಲ ಅಗೌರವದಿಂದ ಮಾತನಾಡುವುದು ಸರಿಯಲ್ಲ.

      ೪. ಪ್ರಗತಿಪರರ ವಕ್ತಾರನಾಗಿ ಕೋಮುವಾದಿಗಳಿಗೆ ಮನುವಾದಿಗಳಿಗೆ ತಕ್ಕ ಪ್ರತ್ಯುತ್ತರ ಕೊಡುವುದು ನನ್ನ ಕರ್ತವ್ಯ. ಅದನ್ನು ನಿಭಾಯಿಸಿದ್ದೇನೆ.

      ಉತ್ತರ
  10. Naani
    ಆಕ್ಟೋ 2 2014

    ಅದನ್ನೇ ನಾವೂ ಹೇಳಿದ್ದು ಶೆಟ್ಕರ್ ಹೆಸರಲ್ಲಿರುವ ದರ್ಗಾರೇ! 🙂 ಹ್ಹ ಹ್ಹ ಹ್ಹ! ಜಾಣತನದಿಂದ ಸಾಮ್ಯತೆ ಇದೆ ಅಂತ ಸಾರಿಸಿಕೊಂಡು ಆಮೆೇಲೆ ಲಿಂಗಾಯತದ ಹೆಸರಿನಲ್ಲಿ ತನ್ನ ಇಸ್ಲಾಂ ರಿಲಿಜನ್ನಿನ ವಿಚಾರಗಳನ್ನೇ ಹೇಳೋದು! ಲಿಂಗಾಯತದ ಹೆಸರಲ್ಲಿ ಇದೇನ್ರೀ ಇಸ್ಲಾಂ ಪ್ರಚಾರ ಮಾಡ್ತಿದ್ದೀರಿ ಅಂತ ಕೇಳಿದ್ರೆ ಎರಡಕ್ಕೂ ಸಾಮ್ಯ ಇದೆ ಅಂತ ನಾಟಕ ಮಾಡಿ ಬಾಬರ್ ಸಂತ ಅನ್ನೋ ತನ್ನ ಪೂರ್ವಜನ ಜಪ ಮಾಡೋದು! ಲಿಂಗಾಯತವನ್ನು ಇಸ್ಲಾಂನ ಶಾಖೆಯಾಗಿ ಪರಿವರ್ತಿಸಿ ಶರಣಸಂಪ್ರದಾಯಕ್ಕೆ ಘೋರಿ ಕಟ್ಟೋ ದಿನ ದೂರ ಇಲ್ಲ! ಹ್ಹ ಹ್ಹ ಹ್ಹ ಪಾಪ ಲಿಂಗಾಯತರು! ಸ್ವಲ್ಪ. ನಿಲುಮೆಗೆ ಬಂದು ನಿಮ್ಮ ಪ್ರತಿಕ್ರಿಯೆ ನೋಡಿದ್ರೆ ಸಾಕು. ನಿಮ್ಮ ಮುಖವಾಡ ತಿಳಕೋತ್ತಾರೆ!

    ಜಾತಿ ಒಪ್ದೆ ಇರೊ ಮುಸ್ಲೀಂರಲ್ಲಿ ಕರ್ನಾಟಕದಲ್ಲೇ 57 ಜಾತಿಗಳಿವೆ ಅಂತ ಹಿಂದುಳಿದ ವರ್ಗದ ಆಯೋಗವೇ ಗುರ್ತಿಸಿದೆಯಲ್ಲಾ! ?

    ಉತ್ತರ
  11. M A Sriranga
    ಆಕ್ಟೋ 2 2014

    ನಮ್ಮ ಪುರಾಣಗಳು, ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣ ಜತೆಗೆ ಇನ್ನಿತರೇ ಸಾಹಿತ್ಯದ ಆಧಾರದ ಮೇಲೆ ಗತ ಕಾಲ ‘ಹೀಗೇ ಇತ್ತು’ ಎಂದು ನಿರ್ಧಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಮೂರು ಉದಾಹರಣೆಗಳ ಮೂಲಕ ಇದನ್ನು ನನ್ನ ಅರಿವಿನ ಮಟ್ಟದಲ್ಲಿ ಸ್ಪಷ್ಟಪಡಿಸಲು ಪ್ರಯತ್ನಿಸುತ್ತೇನೆ. .
    ೧. ‘ಎ ಕೆ ರಾಮಾನುಜನ್ ಅವರ ಆಯ್ದ ಬರಹಗಳು’ ಎಂಬ ಕೃತಿಯಲ್ಲಿನ ಒಂದು ಲೇಖನದಲ್ಲಿ (ಅಕ್ಷರ ಪ್ರಕಾಶನ ಹೆಗ್ಗೋಡು ೨೦೦೯, ಪುಟ ೩೩–೬೮) ನಮ್ಮಲ್ಲಿ ಒಟ್ಟು ಮುನ್ನೂರು ರಾಮಾಯಾಣಗಳಿವೆ ಎಂದು ಸೋದಾಹರಣವಾಗಿ ವಿವರಿಸಿದ್ದಾರೆ. ಇದರಲ್ಲಿ ಯಾವುದನ್ನು authoritative ಎಂದು ತೆಗೆದುಕೊಳ್ಳಬಹುದು? ಭಾರತದ ನಾನಾ ಭಾಗಗಳಲ್ಲಿ ನಾನಾ ರೀತಿಯ ರಾಮಾಯಣಗಳ ಆವೃತ್ತಿ ಇದೆ. ವಾಲ್ಮೀಕಿ ರಾಮಾಯಣವೇ authority ಎಂದು ಯಾವ ಆಧಾರದ ಮೇಲೆ ಹೇಳಲು ಸಾಧ್ಯ? ‘ರಾತ್ರಿಯಿಡೀ ರಾಮಾಯಣ ನೋಡಿದರೂ (ಅಥವಾ ಕೇಳಿದರೂ) ರಾಮನಿಗೂ ಸೀತೆಗೂ ಏನು ಸಂಬಂಧ ಎಂದು ಕೇಳಿದ ಹಾಗೆ’ ಎಂಬ ಕನ್ನಡದ ಗಾದೆಯನ್ನು ನಾವು ಬಹಳ ಸಾರಿ ಒಬ್ಬರ ದಡ್ಡತನವನ್ನು ಹೇಳಲು ಉಪಯೋಗಿಸುತ್ತೇವೆ. ಆದರೆ ರಾಮಾಯಣದ ಕಥೆ ಕೇಳಿದ ಮೇಲೆ/ನೋಡಿದ ಮೇಲೆ ಈ ಅನುಮಾನ ಬರದೇ ಇರಲು ಸಾಧ್ಯವಿಲ್ಲ. ಕಾರಣ ಈ ನಾನಾ ರೀತಿಯ ರಾಮಾಯಣದ ಕಥೆಗಳಿರುವುದು ಎಂದು ಅನಿಸುತ್ತದೆ. ಪಾತ್ರಗಳ ಹೆಸರು ಒಂದೇ ಆದರೂ ಕತೆ ಬೇರೆ ಬೇರೆ. ಪೋಲಂಕಿ ರಾಮಮೂರ್ತಿ ಅವರ ‘ಸೀತಾಯಣ’ ತನ್ನೆಲ್ಲಾ ಮಿತಿಗಳು,,ಸಾಂಪ್ರದಾಯಿಕ ಓದುಗರ ಆಕ್ರೋಶ ಇತ್ಯಾದಿಗಳ ನಡುವೆಯೂ ಸಹ ಗಮನಿಸಬೇಕಾದ ಕೃತಿ. ಅದೇ ರೀತಿ ತೆಲುಗಿನ ನಾರ್ಲಾ ವೆಂಕಟೇಶ್ವರರಾವ್ ಅವರ ‘ಸೀತೆಯ ಭವಿಷ್ಯ’ (ಕನ್ನಡ ಅನುವಾದ– ಡಾ. ಎಚ್ ಎಸ್ ಸುಜಾತ) ಕೃತಿಯನ್ನೂ ಆಸಕ್ತರು ಗಮನಿಸಬಹುದು. ಷಣ್ಮುಖ ಅವರು ಹೇಳಿದಹಾಗೆ ‘ಪ್ರಕ್ಷಿಪ್ತ’ಗಳ ಅವಾಂತರವೂ ನಮ್ಮ ಪ್ರಾಚೀನ ಸಾಹಿತ್ಯಗಳಲ್ಲಿ ಸಾಕಷ್ಟಿದೆ.ಆದ್ದರಿಂದ ಅವುಗಳನ್ನು ‘ಕೇವಲ ಸಾಹಿತ್ಯ’ ಎಂದು ಓದಬೇಕೇ ಹೊರತು ನಮ್ಮ ಚರಿತ್ರೆಯ ರಚನೆಗೆ/ಪುನರಚನೆಗೆ ಅಕರ ಗ್ರಂಥಗಳನ್ನಾಗಿ ಉಪಯೋಗಿಸಲು ಹೋಗಬಾರದು.
    ೨. ಮಹಾಭಾರತದ ಬಗ್ಗೆ ಸಹ ಇಂತಹುದೇ ಸಮಸ್ಯೆಗಳಿವೆ. ರಾಮಾಯಣವನ್ನು ಪುರಾಣ ಎಂದೂ ಮಹಾಭಾರತವನ್ನು ಚರಿತ್ರೆ ಎಂದೂ ಗುರುತಿಸುತ್ತಾರೆ ಎಂದು ಬಹಳ ಹಿಂದೆ ಎಲ್ಲೋ ಓದಿದ ನೆನಪು. ಬಹುಷಃ ಮಹಾಭಾರತಕ್ಕೆ ನಮ್ಮಲ್ಲಿ ಸಿಗುವಷ್ಟು ‘ಆಧಾರಗಳು’ ರಾಮಾಯಣಕ್ಕೆ ಸಿಗಲಾರದೇನೋ? ಇದರ ಬಗ್ಗೆ ಯಾರಾದರು ಪ್ರಾಜ್ಞರಾದ ಓದುಗರು ತಿಳಿಸಬೇಕು. ಆ ‘ಆಧಾರಗಳ’ ಸತ್ಯ-ಅಸತ್ಯಗಳದ್ದು ಇನ್ನೊಂದು ದೊಡ್ಡ ರಗಳೆಯೇ ಆಗಬಹುದು. ಅದನ್ನು ಸದ್ಯಕ್ಕೆ ಪಕ್ಕಕ್ಕೆ ಇಡೋಣ. ನಮ್ಮ ಚರಿತ್ರೆಗೆ ಆಧಾರವಾಗಿ ವ್ಯಾಸ ಭಾರತ/ಪಂಪ ಭಾರತ/ಕುಮಾರವ್ಯಾಸ ಭಾರತ ಇವುಗಳ ಜತೆಗೆ ಮಹಾಭಾರತದ ಯಾವುದೋ ಒಂದು ಪ್ರಸಂಗವನ್ನು ಕುರಿತ ಕಾವ್ಯಗಳು ಹೀಗೆ ಅಗಾಧವಾಗಿ ಇರುವ ಸಾಹಿತ್ಯದಲ್ಲಿ ‘ಇದೇ ನಿಜವಾದ ಮಹಾಭಾರತ ಕಾಲದ ಚರಿತ್ರೆ’ ಎಂದು ಯಾವುದನ್ನು ಆಧಾರ ಎಂದು ಪರಿಗಣಿಸಲಿಕ್ಕೆ ಆಗುತ್ತದೆ? ಇರಾವತಿ ಕರ್ವೆ ಅವರ ‘ಯುಗಾಂತ’ ಕೃತಿಯಲ್ಲಿ (ಇದು ಕನ್ನಡಕ್ಕೂ ಅನುವಾದವಾಗಿದೆ. ಪ್ರಕಾಶಕರು:- ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ, ಅನುವಾದಕರು -ಸರಸ್ವತಿ ಗಜಾನನ ರಿಬಸೂಡ) ಮಹಾಭಾರತವನ್ನು anthropology ದೃಷ್ಟಿಯ ಮುಖಾಂತರ ಸಂಶೋಧನೆ ನಡೆಸಿ ಆ ಕಾಲದ ಬಗ್ಗೆ, ಮಹಾಭಾರತದ ಕೆಲವು ಪ್ರಸಂಗಗಳು,ವ್ಯಕ್ತಿಗಳ ಬಗ್ಗೆ (ಕೃಷ್ಣ,ದ್ರೌಪದಿ,ಕುಂತಿ ಇತ್ಯಾದಿ) ಅವರನ್ನು ನಮ್ಮೆಲ್ಲರಂತೆ ಸಾಮಾನ್ಯ ಮನುಷ್ಯರು ಎಂಬ ರೀತಿಯಲ್ಲಿ ಚಿತ್ರಣ ಕೊಟ್ಟಿದ್ದಾರೆ. (ಮಿಥ್ ಗಳು ,ಅತಿಮಾನವ ಶಕ್ತಿಗಳಿಂದ ಬೇರ್ಪಡಿಸಿ). ಮಹಾಭಾರತದ ಬಗ್ಗೆ ಪ್ರಮುಖವಾಗಿ ಗೋರಖಪುರ ಮತ್ತು ಪುಣೆಯ ಭಂಡಾರ್ಕರ್ ಸಂಸ್ಥೆಯವರು ಬೇರೆ ಬೇರೆ ರೀತಿಯಲ್ಲಿ ಸಂಶೋಧನೆ ನಡೆಸಿ ತಮ್ಮ ತಮ್ಮ ಆವೃತ್ತಿಗಳನ್ನು ಹೊರತಂದಿದ್ದಾರೆ. ಇದರಲ್ಲಿ ಯಾವುದೇ ಒಂದನ್ನು ‘ಆಧಾರ’ ಎಂದು ಪರಿಗಣಿಸಿದರೂ ಸಹಜವಾಗಿ ಇನ್ನೊಂದು ಪಕ್ಷದವರು ಅದು ಸರಿಯಲ್ಲ; ನಮ್ಮದೇ ನಿಜ ಎನ್ನುತ್ತಾರೆ. ಭೈರಪ್ಪನವರು ಮಹಾಭಾರತವನ್ನು ಆಧರಿಸಿ ‘ಪರ್ವ’ ಕಾದಂಬರಿ ಬರೆದಾಗ ‘ಮಿಥ್’ಗಳನ್ನು ಬಿಟ್ಟಿದ್ದು ಸರಿಯಲ್ಲ ಎಂದು ಕೆಲವರು ಹೇಳಿದ್ದೂ ಉಂಟು. ಪುರಾಣ ಸದೃಶ ಪಾತ್ರಗಳನ್ನು ಸಾಮಾನ್ಯ ಮನುಷ್ಯರ ಮಟ್ಟಕ್ಕೆ ಇಳಿಸಿದ್ದು ಸರಿಯೇ? ಎಂಬ ಪ್ರಶ್ನೆಯೂ ಬಂತು. (ವಿವರಗಳಿಗೆ ನೋಡಿ -‘ಪರ್ವ ಒಂದು ಸಮೀಕ್ಷೆ’ ಸಂಪಾದಕರು -ವಿಜಯ ಪ್ರ: ಇಳಾ ಪ್ರಕಾಶನ ಬೆಂಗಳೂರು ೧೮ ಮತ್ತು ‘ನಾನೇಕೆ ಬರೆಯುತ್ತೇನೆ’ ಎಂಬ ಭೈರಪ್ಪನವರ ಕೃತಿಯಲ್ಲಿನ ‘ಪರ್ವ ಬರೆದಿದ್ದು’ ಎಂಬ ದೀರ್ಘ ಲೇಖನ). ‘ಆವರಣ’ ತೀವ್ರವಾದ ವಾದ-ವಿವಾದಕ್ಕೆ ಈಡಾಗಿದ್ದಕ್ಕೆ ಪ್ರಮುಖ ಕಾರಣ ಅದಕ್ಕೆ ಆಧಾರವಾಗಿದ್ದು ಬಲಪಂಥೀಯ ಇತಿಹಾಸದ ಕೃತಿಗಳು ಎಂದು. ಈಗ ಅದಕ್ಕೆ ಪ್ರತಿಯಾಗಿ ಎಡಪಂಥೀಯ ಇತಿಹಾಸ ಕೃತಿಗಳನ್ನು ಆಧರಿಸಿ ‘ಪ್ರತಿ ಆವರಣ’ ಎಂಬ ಕಾದಂಬರಿಯನ್ನು ಯಾರಾದರೂ ಬರೆದರೆ ಅದೂ ವಿವಾದಕ್ಕೆ ಈಡಾಗುತ್ತದೆ. ಈ ಎಲ್ಲಾ ವಿವಾದಗಳ ನಂತರ ಒಂದು ಸಭೆಯಲ್ಲಿ ಭೈರಪ್ಪನವರೇ ‘ನಾನು ಬರೆದಿದ್ದು ಮಧ್ಯಯುಗೀನ ಕಾಲದ ಇತಿಹಾಸದ text book ಅಲ್ಲ. ‘ಆವರಣ’ ಒಂದು ಕಾದಂಬರಿ ಅಷ್ಟೇ’ ಎಂದು ಹೇಳಿದರು. ಹೀಗಾಗಿ ಸಾಹಿತ್ಯ ಕೃತಿಗಳನ್ನು ನಮ್ಮ ‘ಚರಿತ್ರೆಯ ರಚನೆಗೆ ಆಧಾರ’ ಎಂದು ಭಾವಿಸುವುದು ಇನ್ನಷ್ಟು ಪ್ರಮಾದಗಳಿಗೆ ಕಾರಣವಾಗಬಹುದು.
    ೩. ನಾವು ಕಾಣದ,ಕೇಳದ ‘ಗತ’ಕ್ಕೆ ಇಷ್ಟು ಸಮಸ್ಯೆಯಾದರೆ ಸಾಕಷ್ಟು audio visual ,ಮುದ್ರಿತ ಪುಸ್ತಕಗಳು,ಪತ್ರಿಕೆಗಳ ಸಂಗ್ರಹ ಜತೆಗೆ ಅದನ್ನು ದೂರದಿಂದಲಾದರೂ ನೋಡಿರುವ ನಮ್ಮ ಸದ್ಯದ ಪರಿಸ್ಥಿತಿಯ ಚರಿತ್ರೆಯನ್ನು ಹೇಗೆ ಎರಡು ಭಿನ್ನ ದೃಷ್ಟಿಯಿಂದ ನೋಡಬಹುದು ಎಂಬುದಕ್ಕೆ ಒಂದು ಉದಾಹರಣೆ ಕೊಟ್ಟು ಈ ನನ್ನ ಅತಿ ದೀರ್ಘವಾದ ಪ್ರತಿಕ್ರಿಯೆಯನ್ನು ಮುಗಿಸುತ್ತೇನೆ. ೧೯೭೫-೭೭ರ ತನಕ ನಮ್ಮ ಪ್ರಧಾನಿಗಳಾಗಿದ್ದ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಘೋಷಿಸಿದ್ದು ನಮಗೆ ತಿಳಿದಿದೆ. ಈಗ ಸುಮಾರು ಐವತ್ತರಿಂದ ಅರವತ್ತು ವರ್ಷಗಳಾಗಿರುವ ನಮ್ಮಂತಹವರಿಗೆ ಆ ಕಾಲದ ಪರಿಸ್ಥಿತಿ ತಿಳಿದಿದೆ. ಇಂದಿರಾಗಾಂಧಿಯವರು ಆ ಸಮಯದ ಚುನಾವಣೆಯೊಂದರಲ್ಲಿ ಆಯ್ಕೆಆಗಿದ್ದು ‘ಅಸಿಂಧು’ ಎಂದು ಅಲಹಾಬಾದಿನ ನ್ಯಾಯಾಲಯ ಅವರನ್ನು ಅನರ್ಹಗೊಳಿಸಿತ್ತು. ಆ ಸಮಯಕ್ಕೆ ಮುಂಚೆ ಜಯಪ್ರಕಾಶನಾರಾಯಣ(ಜೆ ಪಿ ) ಅವರು ‘ಸಂಪೂರ್ಣ ಕ್ರಾಂತಿ’ಗೆ ಕರೆಕೊಟ್ಟಿದ್ದರು. ಅದು ತುಂಬಾ ವ್ಯಾಪಕವಾಗಿ ವಿರೋಧ ಪಕ್ಷಗಳು, ವಿಧ್ಯಾರ್ಥಿಗಳು,ಕಾರ್ಮಿಕರು,ಜನಗಳು ಜೆ ಪಿ ಅವರ ಜತೆಗೂಡಿದರು. ಆಗ ಮುಖ್ಯವಾಗಿ ಉತ್ತರ ಭಾರತದಲ್ಲಿ ಬಿಗುವಿನ ವಾತಾವರಣವಿದ್ದು ಇಂದಿರಾಗಾಂಧಿಯವರಿಗೆ ನಿತ್ಯದ ತಲೆ ನೋವಾಗಿತ್ತು. ಅದೇ ಸಮಯಕ್ಕೆ ನ್ಯಾಯಾಲಯದ ತೀರ್ಪು ಬಂತು. ಆ ತೀರ್ಪಿನಿಂದ ಸದ್ಯಕ್ಕೆ ಬಚಾವ್ ಆದ ಹಾಗೂ ಆಯಿತು;ಜೆ ಪಿ ಅವರ ಚಳುವಳಿಯ ಬಿಸಿ ತಪ್ಪಿಸಿದ ಹಾಗೂ ಆಯಿತು ಎಂದು ತುರ್ತು ಪರಿಸ್ಥಿತಿ ಘೋಷಿಸಿ ಜೆ ಪಿ ಅವರ ಸಹಿತ ವಿರೋಧ ಪಕ್ಷದ ನಾಯಕರನ್ನು ಬಂಧಿಸಿ ಜೈಲಿನಲ್ಲಿ ಇಟ್ಟರು. ಪತ್ರಿಕೆಗಳಿಗೆ ಸೆನ್ಸಾರ್ ಷಿಪ್ ಜಾರಿಯಾಯಿತು. ಒಟ್ಟಿನಲ್ಲಿ ಇಂದಿರಾಗಾಂಧಿಯವರಿಗೆ ಎದುರಾಡಿದರೆ ಉಳಿಗಾಲವಿಲ್ಲ ಎಂಬ ಪರಿಸ್ಥಿತಿ ಉಂಟಾಯಿತು. ಇಂದಿರಾಗಾಂಧಿ ಅವರ ಈ ನಿರ್ಧಾರದ ಪರ ವಿರೋಧದ ಸಾಹಿತ್ಯ ರಾಶಿಯೇ ಇದೆ. ಮುಂದಿನ ಪೀಳಿಗೆ ಸಹ ಎರಡು ಕವಲಾಗಿ ನಮ್ಮ ಕಾಲದ ಚರಿತ್ರೆಯನ್ನು ಪುನರಚಿಸಬಹುದು. ಇದನ್ನು ಗಮನಿಸಿದರೆ ‘ಗತ’ದ ಚರಿತ್ರೆ’ ಎಂದರೆ ನಮ್ಮದೇ ಸರಿ; ಉಳಿದವರದ್ದಲ್ಲ ;; ಇದೇ authentic ಎಂಬ ನಿರ್ಧಾರಕ್ಕೆ ಬರುವುದು ಸರಿಯಲ್ಲವೇನೋ?.

    ಉತ್ತರ
    • Naani
      ಆಕ್ಟೋ 2 2014

      ಶ್ರೀರಂಗರಿಗೆ ಧನ್ಯವಾದಗಳು ನಿಮ್ಮ ಉದಾಹರಣೆಗಳು ಔಚಿತ್ಯಪೂರ್ಣವಾಗಿವೆ.

      ಸಾಮಾನ್ಯವಾಗಿ ಐಡಿಯಾಲಜಿಗಳ ಚೌಕಟ್ಟಿನೊಳಗೆ ಯಾವುದೆ ಜಗತ್ತಿನ ಜೀವನಕ್ರಮಗಳು ಇರುವುದಿಲ್ಲ. ನಮ್ಮ ಇಂದಿನ ಸಹಜ ಬದುಕಿನಂತೆ ಐಡಿಯಾಲಜಿಗೆ ಸಂಬಂದವಿಲ್ಲದೆಯೇ ಜಗತ್ತು ನಡೆಯುತ್ತಿರುತ್ತದೆ. ಹೇಳಬೇಕೆಂದರೆ, ಜೀವನಪೂರ್ತಿ ಯಾವುದೋ ಐಡಿಯಾಲಜಿಗೆ ಜೋತುಬಿದ್ದವರೂ ಅವರೇ ತಮ್ಮ ದೈನಂದಿನ ಜೀವನದಲ್ಲಿ ಆ ಐಡಿಯಾಲಜಿಗೆ ಹೊರತಾಗಿ/ವಿರುದ್ದವಾಗಿ ಬದುಕಿರುತ್ತಾರೆ. ಬಲವಂತವಾಗಿ ಐಡಿಯಾಲಜಿಯಂತೆ ಬದುಕಬೇಕೆಂದರೂ ಸಾಧ್ಯವಾಗುವುದಿಲ್ಲ. ಅದರಲ್ಲೂ ಅತಿಯಾದ ಐಡಿಯಾಲಜಿ ನಿಷ್ಠ ಓರ್ವವ್ಯಕ್ತಿಗೇ ಹಾಗೆ ಬದುಕೋದು ದುಸ್ಯಾಧ್ಯವಾಗುವುದನ್ನು ನಾವು ನೋಡುತ್ತಿದ್ದೇವೆ. ಆದರೆ ವಿಪರ್ಯಾಸವೆಂದರೆ ಚರಿತ್ರೆಯ ಹೆಸರಿನಲ್ಲಿ ಒಂದಿಡೀ ಸಮಾಜ, ಸಂಸ್ಕೃತಿ, ಕೆಲವೊಮ್ಮೆ ಇಡೀ ಜಗತ್ತು ಯಾವುದೋ ಐಡಿಯಾಲಜಿಯ ಸತ್ಯದ ಘಟನೆಗಳ ರೂಪಗಳಾಗಿ ಚಿತ್ರಿತವಾಗಿರುತ್ತವೆ. ಒಂದಲ್ಲಾ ಒಂದು ಐಡಿಯಾಲಜಿಗಳೇ ಚರಿತ್ರೆಯಾಗಿ ಬರೆಯಲ್ಪಡುವುದರಿಂದ ಯಾವ ಕಾಲದಲ್ಲೂ ವಾಸ್ತವ ಬದುಕಾಗಿರಲು ಸಾಧ್ಯವಿಲ್ಲದ ಐಡಿಯಲಜಗಳು ಚರಿತ್ರೆಯ ರೂಪದಲ್ಲಿ ಎಲ್ಲಾ ಕಾಲದ ವಾಸ್ತವ ಸತ್ಯಗಳಾಗಿ ಬಿಂಬಿಸಲ್ಪಡುತ್ತವೆ.

      ಹಾಗಾಗಿ, ವಾಸ್ತವ ಜಗತ್ತು ಎಡಪಂಥೀಯವೂ ಅಲ್ಲ; ಬಲಪಂಥೀಯವೂ ಅಲ್ಲ! ಅಂದಮೇಲೆ ಒಂದಲ್ಲಾ ಒಂದು ಐಡಿಯಾಲಜಿಯಂತೆಯೇ ಬರೆಯಲಾಗಿರುವ ಚರಿತ್ರೆಯಲ್ಲಿ ಚಿತ್ರಿತವಾಗಿರುವುದು ಯಾವ ಜಗತ್ತು?

      ಉತ್ತರ
      • ಷಣ್ಮುಖ
        ಆಕ್ಟೋ 2 2014

        ಶ್ರೀರಂಗರ ಉದಾಹರಣೆಗಳು ಚೆನ್ನಾಗಿವೆ. ಮತ್ತು ನಾಣಿಯವರ ಪ್ರಶ್ನೆಯೂ ಅಷ್ಟೇ ಚಿಂತನ ಯೋಗ್ಯವಾಗಿವೆ! ಅಂದರೆ ಚರಿತ್ರೆಯ ರೂಪದ ಸೂಡೋ ಫ್ಯಾಕ್ಟ್ ಗಳ ಮೂಲಕ ಈ ಐಡಿಯಾಲಜಿಗಳು ತಮ್ಮ ಅಸ್ತಿತ್ವದ ಮುಂದುವರಿಕೆಗೆ ದಾರಿಮಾಡಿಕೊಳ್ಳುತ್ತಿವೆಯೇ ಎನ್ನುವ ಸೈದ್ದಾಂತಿಕ ಪ್ರಶ್ನೆಯೂ ಎದುರಾಗುತ್ತದೆ. ಚಿಂತಿಸಬೇಕಾದ ವಿಚಾರ! ಧನ್ಯವಾದಗಳು.

        ಉತ್ತರ
        • Nagshetty Shetkar
          ಆಕ್ಟೋ 3 2014

          ನಿಮ್ಮ ಸಂಶೋಧನೆ ಕೂಡ ನಿಮ್ಮ ಅಸ್ತಿತ್ವದ ಮುಂದುವರೆಕೆಗೆ ಮಾರ್ಗವಾಗಿಬಿಟ್ಟಿದೆ ಅಲ್ಲವೇ ಷಣ್ಮುಖ ಅವರೇ? ನಿಮ್ಮ ಸಂಶೋಧನೆಯಿಂದ ತಳವರ್ಗದವರಿಗೆ ಶೋಷಿತರಿಗೆ ದಮನಿತರಿಗೆ ಸ್ತ್ರೀಯರಿಗೆ ಯಾವ ಪ್ರಯೋಜನವಾಗಿದೆ?

          ಉತ್ತರ
  12. valavi
    ಆಕ್ಟೋ 2 2014

    ಚರಿತ್ರೆಯಲ್ಲಿ ಕಾರಣಾಂತರಗಳಿಂದ ಸುಳ್ಳುಗಳೇ ವಿಜೃಂಭಿಸುತ್ತಿರುವಾಗ ನಮಗೆ ಚರಿತ್ರೆಯ ಅಧ್ಯಯನವಾದರೂ ಏತಕ್ಕಾಗಿ ಬೇಕು. ? ಶ್ರೀರಂಗರು ಹೇಳಿದಂತೆ ಒಂದು ಘಟನೆಯನ್ನು ತಮಗೆ ತಿಳಿದಂತೆ ವ್ಯಕ್ತಿಗಳು ವಿಮರ್ಶಿರುತ್ತಾರೆ. ಅಂದರೆ ನಿಜ ಕೇವಲ 10% ಕೂಡ ಇಲ್ಲದ ಚರಿತ್ರೆಯ ಅಧ್ಯಯನದಿಂದ ನಾವು ಸಾಧಿಸಬೇಕಾದದ್ದಾದರೂ ಏನು? ಯಾಕಾಗಿ ಈ ಸುಳ್ಳುಗಳ ಸರಮಾಲೆಯ ಚರಿತ್ರೆ ನಮ್ಮ ಮಕ್ಕಳು ಓದಿ ಸಮಯ ಹಾಳು ಮಾಡಿಕೊಳ್ಳಬೇಕೆಂದು ನಿಮಗೆ ಅನಿಸುವದಿಲ್ಲವೆ?

    ಉತ್ತರ
    • ಷಣ್ಮುಖ
      ಆಕ್ಟೋ 2 2014

      Valavi ಯವರೇ, ಹೌದು! ಇದುವರಗಿನ ಸಮಾಜವಿಜ್ಞಾನದ ವಿವರಣೆಗಳಲ್ಲೂ ಇದೇರೀತಿಯ ಧೋಷಗಳಿದ್ದರೂ ಆ ಧೋಷಗಳನ್ನು ವೈಜ್ಞಾನಿಕ ಸಿದ್ದಾಂತಗಳನ್ನು ಬೆಳಸುವ ಮೂಲಕ ಮೀರುವ ಸಾಧ್ಯತೆಯಾದರೂ ಇದೆ. ಆದರೆ ಚರಿತ್ರೆಯ ಧ್ರಷ್ಟಿಕೋನವೇ ಸೆಕ್ಯುಲರೀಕೃತ ಕ್ರಿಶ್ಚಿಯನ್ ಥಿಯಾಲಜಿಯಾಗಿರುವುದರಿಂದ ಅದನ್ನು ರಿಲಿಜಿಯನ್ನುಗಳಿಗೇ ಬಿಟ್ಟು ನಮ್ಮ ಗತದ ಕುರಿತು ನಮ್ಮದೇ ಪರ್ಯಾಯ ಜ್ಞಾನಕ್ರಮದ ಬಗ್ಗೆ ಯೋಚಿಸಬೇಕಿದೆ.

      ಉತ್ತರ
      • Nagshetty Shetkar
        ಆಕ್ಟೋ 3 2014

        ಚರಿತ್ರೆಯಿಂದ ಅನೇಕ ಪ್ರಯೋಜನಗಳಿವೆ. ಚರಿತ್ರೆಯಿಂದ ಕಲಿಯಬಹುದಾದ ಪಾಠಗಳೂ ಇವೆ. ಭಾರತದ ಮಟ್ಟಿಗೆ ಹೇಳುವುದಾದರೆ, ತಳವರ್ಗದ ಜನರ ಆತ್ಮಾಭಿಮಾನವನ್ನು ವರ್ಧಿಸಲು ಹಾಗೂ ಶೋಷಿತರಿಗೆ ಸಾಮಾಜಿಕ, ರಾಜಕೀಯ ಹಾಗೂ ಅರ್ಥಿಕ ನ್ಯಾಯ ಕೊಡಲು ಚರಿತ್ರೆ ಅತ್ಯಗತ್ಯ. ಅಷ್ಟೇ ಅಲ್ಲ ಸಮಾನತೆಯ ಆಧಾರದ ಮೇಲೆ ಹೊಸ ಸಮಾಜ ಕಟ್ಟಲು ಕೂಡ ವಚನಕಾರರ ಕಾಲದಲ್ಲಿ ಜರುಗಿದ ಘಟನೆಗಳ, ವೈದಿಕ ವರ್ಗದ ಪಿತೂರಿಯ ಪೂರ್ಣ ಅರಿವು ಬೇಕಾಗಿದೆ.

        ಉತ್ತರ
        • ಷಣ್ಮುಖ
          ಆಕ್ಟೋ 3 2014

          ಶೋಷಿತರೆನಿಸಿಕೊಂಡವರ ಸಮಸ್ಯೆಯ ಸ್ವರೂಪವನ್ನು ವೈಜ್ಞಾನಿಕವಾಗಿ ಗ್ರಹಿಸದೆ ಇರುವುದರಿಂದಲೇ ಅವರ ಸಮಸ್ಯೆಗಳನ್ನು ಇಷ್ಟುವರ್ಷಗಳಾದರೂ ನಿವಾರಿಸಲಾಗಿಲ್ಲ ಎನ್ನುವುದೇ ನಮ್ಮ ವಾದ. ವೈಜ್ಞಾನಿಕವಾದ ಅಧ್ಯಯನ ನಡೆಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಬದಲಿಗೆ ಇರುವ ಗಾಯವನ್ನು ಹೆಚ್ಚಿಸಿ ಅವರು ಇನ್ನೂ ಹೆಚ್ಚು ನೋವಿನಿಂದ ಚೀರುವುದನ್ನೂ ಚಿತ್ರಹಿಡಿದು ಪ್ರಕಟಿಸಿ ತಮ್ಮ ಸ್ಥಾನಮಾನ ಪೀಠ, ಶ್ರಿೀಗಳನ್ನು ಅಂಟಿಸಿಒಕೊಳ್ಳುವಲ್ಲೆೇ ನಿಮ್ಮಂತಹ ಬೌದ್ದಿಕ ವಲಯದ ಹಿತ ಅಡಗಿದೆ. ಇಲ್ಲ ಅಂದ್ರೆ ನಿಮ್ಮವಾದಗಳಲ್ಲಿನ ಸಮಸ್ಯೆಗಳನ್ನು ಆಧಾರಸಹಿತ ತರ್ಕಬದ್ದವಾಗಿ ತೋರಿಸುತ್ತಿದ್ದರೂ ನಿಮ್ಮ ಚರಿತ್ರೆಯ ಕುರಿತ ಸಮರ್ಥನೆಗೆ ಅದೇ ಸ್ವೀಪಿಂಗ್ ಹೇಳಿಕೆಗಳಿಗಿಂತ ಇನ್ನೂ ಹೆಚ್ಚಿನ ವೈಜ್ಞಾನಿಕ ಆಧಾರಸಹಿತವಾದ ತರ್ಕಬದ್ದ ವಾದದ ಅಗತ್ಯವಿರುವುದನ್ನೂ ಗಣನೆಗೆ ತೆಗೆದುಕೊಳ್ಳದೆ “ಓ ಇರೋದೆ ಸರಿ ಇದೆ, ಸರಿ ಇಲ್ಲಾ ಅಂದ್ರೆ ನೀನೇ ಶೋಶಕ” ಅನ್ನೋ ರೀತಿಯ ಹೇಳಿಕೆಗಳ ಅರ್ಥ ಬೇರೆಯೇ ಆಗುತ್ತದೆ. ಹಾಗಾಗಿ, ನಿಮ್ಮ ಟೈಂ ಪಾಸ್ ಹೇಳಿಕೆಗಳನ್ನು ಬದಿಗಿಟ್ಟು ಶೋಷಿತರ ಕುರಿತ ನಿಮ್ಮ ಕಾಳಜಿಯನ್ನು ವೈಜ್ಞಾನಿಕ ಚರ್ಚೆಯ ಮೂಲಕ ತೋರಿಸಿ. ಈಗಾಗಲೇ ಮೇಲೆ ಕೇಳಲಾಗಿರುವ ಈ ಮುಂದಿನ ಪ್ರಶ್ನೆಗಳಿಗೆ ಆಧಾರಸಮೇತ ಉತ್ಥರಿಸಿ:

          1 ಗತವನ್ನು ಚರಿತ್ರೆಯಿಂದ ಪ್ರತ್ಯೇಕಿಸಿ ನೋಡುವ ವಿಧಾನವೇ ಏಕೆ ಪ್ರಶ್ನಾರ್ಹ ಎಂದು ತರ್ಕಬದ್ದವಾಗಿ ವಾದವನ್ನಿಡಲಿ.

          2. ಪುರಾಣಗಳಿಂದ speculations (ಹೀಗಿದ್ದಿರಬಹುದು ಆಗಿದ್ದಿರಬಹುದು; ಇದ್ರೂ ಇರಬಹುದು ಇಲ್ಲದೆಯೂ ಇರಬಹುದು) ಗಳನ್ನು ಮಾಡಬಹುದೇ ವಿನಃ ಚರಿತ್ರೆಯನ್ನು ಕಟ್ಟಲು ಸಾಧ್ಯವೇ ಇಲ್ಲವೆಂದು ಮೇಲೆ ತಾರ್ಕಿಕವಾಗಿ ತೋರಿಸಿದ್ದೇನೆ. ಅದನ್ನು ಓದಿಯೂ ಪುನಃ “ಗತದ ಪುರಾಣಗಳಿಂದ ವೈಜ್ಞಾನಿಕ ಚರಿತ್ರೆಯನ್ನು ಕಟ್ಟಲಾಗುವುದಿಲ್ಲ ಎಂದು ಹೇಗೆ ಹೇಳುವಿರಿ” ಎಂದರೆ ಏನರ್ಥ? ಮೇಲೆ ಹೇಳಿದ್ದು ಅರ್ಥವೇ ಆಗಿಲ್ಲ ಎಂದಷ್ಟೇ ಅರ್ಥ! ಇದನ್ನು ನೀವು ಗಂಭಿರವಾಗಿ ಪರಿಗಣಿಸಿಲ್ಲ ಅಂದರೇನು? ಅದರ ಬದಲಿಗೆ ಆ ಮಹಾಶಯರು ಪುರಾಣಗಳಿಂದ ವೈಜ್ಞಾನಿಕ ಚರಿತ್ರೆಯನ್ನು ಹೇಗೆ ಕಟ್ಟಬಹುದು ಎಂದು ಆಧಾರ ಸಹಿತ ತೋರಿಸಿದರೆ ನಮ್ಮ ವಾದ ಬಿದ್ದುಹೋಗುತ್ತದೆ ಅಲ್ಲವೇ? ಅದನ್ನು ಮಾಡುವ ಅವಕಾಶ ಇರುವಾಗ ನಮ್ಮ ಮೇಲೆ ಇಲ್ಲದ ಹುನ್ನಾರದ ಆರೋಪವೇಕೆ? ಅದನ್ನೂ ನಾವೇ ಮಾಡಬೇಕೆಂದೆ?

          3. ಚರಿತ್ರೆಯಿಂದ ಸಂಸ್ಕೃತಿ ನಾಶವಾಗುತ್ತದೆ ಅನ್ನುವುದಕ್ಕೆ ಏನು ಆಧಾರವಿದೆ. ಯೂರೋಪಿಯನಿಲ್ಲಿದ್ದ ಗ್ರೀಕ್ ಮತ್ತು ರೋಮನ್ನರ ಪೇಗನ್ ಸಂಸ್ಕೃತಿ ನಾಶವಾಗಿದ್ದು ಕ್ರಿಶ್ಚಿಯನ್ನರು ಅವರ ಸಂಸ್ಕೃತಿ, ದೇವತೆ, ಸಂಪ್ರದಾಯ, ರೂಢಿಗಳ ಬಗ್ಗೆ ಎತ್ತಿದ ಚಾರಿತ್ರಿಕ ಪ್ರಶ್ನೆಗಳಿಂದಲೇ (ನಿಮ್ಮ ದೇವರು ನಿಜವೇ, ಯಾವುದೋ ಕಾಲ ದೇಶದಲ್ಲಿ ನಡೆದ ಸತ್ಯಗಳೇ ಅವು ಎನ್ನುವಂತಹ ಪ್ರಶ್ನೆಗಳನ್ನಿಟ್ಟು ಅವುಗಳು ಹೇಗೆ ಚಾರಿತ್ರಿಕವಾಗಿ ಅವಾಸ್ತವಿಕ ಸುಳ್ಳು ಮುಂತಾಗಿ ಹೇಳಿ) ಎನ್ನುವುದು ಯೂರೋಪಿನವರ ಚರಿತ್ರೆಯೇ ಹೇಳುತ್ತದೆಯಲ್ಲ!

          4. ಮನುಸ್ಮೃತಿಯ ಕುರಿತ ರಾಕೇಶ್ ಶೆಟ್ಟರ ಪ್ರಶ್ನೆಗಳಿಗೆ ಈ ರೀತಿಯ “ಚಾರಿತ್ರಿಕ ಸತ್ಯ”ದ ಆಧಾರದ ಪ್ರತಿಪಾದಕರು ಉತ್ತರಿಸುವ ಮೂಲಕ “ಗತವನ್ನು ಚರಿತ್ರೆಯಿಂದ” ಪ್ರತ್ಯಕಿಸುವುದು ಅವೈಜ್ಞಾನಿಕ ಎಂದು ತೋರಿಸಬಹುದಲ್ಲ? ಆ ಮೂಲಕ ನಮ್ಮ ವಾದವನ್ನು ತಪ್ಪೆಂದು ತೋರಿಸಿ “ಚರಿತ್ರೆ”ಯ ವೈಜ್ಞಾನಿಕ ಅಗತ್ಯತೆಯನ್ನು ಎತ್ತಿಹಿಡಿಯಿರಿ!

          5. ರಾಕೇಶರ ಪ್ರಶ್ನೆಗಳು ಚಾರಿತ್ರಿಕ ಸತ್ಯವೆಂದು ಕೊಂಡದ್ದರ ಕುರಿತ ಪ್ರಶ್ನೆ ಹೌದೇ, ಅಲ್ಲವೇ? ಇಲ್ಲವಾದರೆ ಅದನ್ನು ತೋರಿಸಿ. ಹೌದೆಂದಾರೆ, ಅವರ ಪ್ರಶ್ನೆಗಳಿಗಾದರೂ ಉತ್ತರಿಸಿ. ಚರ್ಚೆಯ ವಿಚಾರದ ಮೂಲಕವೇ “ಚಾರಿತ್ರಿಕ ಸತ್ಯ”ದ ಅಗತ್ಯವನ್ನು ಮತ್ತು ಅದನ್ನು ಸಾಧಿಸುವ ಮಾರ್ಗವನ್ನು ಸೂಚಿಸಿ. ಆಗ ತಾನಾಗಿಯೇ ನಮ್ಮ ವಾದ ಬಿದ್ದು ಹೋಗುತ್ತದೆ.

          ಈಗ ನಿಮ್ಮ ವಾದವನ್ನು ತಾರ್ಕಿಕವಾಗಿ ಮುಂದಿಡಿ ಚರ್ಚಿಸುವ! ಬರೀ “ಶೋಷಿತರಿಗಾಗಿ ಚರಿತ್ರೆ ಅಗತ್ಯ” ಅನ್ನೋ ರೀತಿಯ ‘ಮೊಸಳೆ ಕಣ್ಣೀರಿನ ಹೇಳಿಕೆಗಳಿಂದ ನಿಮ್ಮತ್ರ ಯಾವ ವೈಜ್ಞಾನಿಕ ಸಮರ್ಥನೆಗಳೂ ಇಲ್ಲ ಎನ್ನುವದಷ್ಟೆ ಸಾಬೀತಾಗುತ್ತದೆ.

          ಉತ್ತರ
  13. Rajaram Hegde
    ಆಕ್ಟೋ 3 2014

    ಹಿಸ್ಟರಿ ಎನ್ನುವುದು ನಮ್ಮಿಂದ ಪ್ರತ್ಯೇಕವಾದ ಒಂದು ಗತಕಾಲ ಇದೆ ಹಾಗೂ ಅದು ನಿಜವಾಗಿಯೂ ಹೇಗೆ ಇತ್ತು ಎನ್ನುವುದನ್ನು ಹೇಳುವುದು ಸಾಧ್ಯ ಎಂಬ ಆಧಾರ ವಾಕ್ಯದ ಮೇಲೆ ನಿಂತಿದೆ. ಹಿಸ್ಟರಿಯ ನಿಜ ಎಂದರೆ ಘಟನೆಗಳ ಭೌತಿಕ ವಿವರ ಹಾಗೂ ಅದನ್ನಾಧರಿಸಿದ ರೀಸನಿಂಗ್ (ವಿವೇಚನೆ) ಹಾಗೂ ವಿವರಣೆಗಳನ್ನಾಧರಿಸಿದೆ. ಈ ನಿಜಗಳು ನಮಗೇಕೆ ಬೇಕು? ಎಂಬ ಪ್ರಶ್ನೆ ಇಲ್ಲಿ ಎರಡನೆಯ ಸ್ಥಾನ ಪಡೆಯುತ್ತದೆ. ಯುರೋಪಿಯನ್ನ ಚರಿತ್ರೆಕಾರರು ಇಂಥ ಚಾರಿತ್ರಿಕ ನಿಜಗಳಿಗೆ ತಮ್ಮದೇ ಪವಿತ್ರತೆ ಇದೆ, ಅದನ್ನು ಹಾಳುಮಾಡಬಾರದು ಎಂಬ ವ್ರತವನ್ನೇನೋ ಹಿಡಿದರು, ಆದರೆ ಇದುವರೆಗೂ ಅವರು ಗತಕಾಲದ ನಿಜಗಳ ಕುರಿತು ಜಿಜ್ಞಾಸೆಯನ್ನೇ ನಡೆಸುತ್ತಿದ್ದಾರೆಯೇ ಹೊರತೂ ಅವರಿಗೆ ಅವು ಸಿಕ್ಕ ಹಾಗಿಲ್ಲ. ಹಾಗಾಗಿ ಸಿದ್ಧಾಂತಗಳನ್ನು ಕಟ್ಟಿಕೊಳ್ಳುತ್ತಾರೆ.ಈ ಫಜೀತಿ ಏಕೆಂದರೆ, ಮೂಲತಃ ಬೈಬಲ್ಲಿನಲ್ಲಿ ಹೇಳಿದ ಕ್ರೈಸ್ತರ ಚರಿತ್ರೆಯೇ ನಿಜ, ಬೈಬಲ್ಲೊಂದೇ ಸತ್ಯ ಚರಿತ್ರೆ ಎಂಬುದಾಗಿ ಚರ್ಚು ನಂಬಿಕೊಂಡಿತ್ತು. ಅದನ್ನು ಯಾವ ಕ್ರೈಸ್ತನೂ ಪ್ರಶ್ನಿಸಿರಲಿಲ್ಲ. ಹಾಗಾಗಿ ಗತಕಾಲದಲ್ಲಿ ನಡೆದ ಸತ್ಯ ಘಟನೆಗಳನ್ನು ತಿಳಿಯಬಹುದು ಎಂಬ ಒಂದು ಕುರುಡು ನಂಬಿಕೆಯನ್ನು ಐರೋಪ್ಯರು ಪೋಷಿಸಿಕೊಂಡಿದ್ದರು. ಚರ್ಚಿನ ಚರಿತ್ರೆಯನ್ನು ತಿರಸ್ಕರಿಸಿ ವೈಜ್ಞಾನಿಕವಾಗಿ ಗತದ ನಿಜಗಳನ್ನು ತಿಳಿಯುವ ಕೆಲಸಕ್ಕೆ ಸೆಕ್ಯುಲರ್ ಚರಿತ್ರೆ ಕೈ ಹಾಕಿತು. ಈ ಕೆಲಸವನ್ನು ಫೇತ್ನ ತಳಹದಿಯಿಂದ ಕಿತ್ತು ವಿಜ್ಞಾನದ ತಳಹದಿಗೆ ವರ್ಗಾಯಿಸಿದಾಗ ಚರಿತ್ರೆಯ ನಿಜವು ಗಾಳಿಪಟದಂತೆ ಎಳೆದ ಕಡೆ ಬರತೊಡಗಿತು.
    ಇಂದು ಯಾವ ಪಾಶ್ಚಾತ್ಯ ಚರಿತ್ರೆಕಾರನೂ ಕೂಡ ತಾನು ಅಂತಿಮ ಸತ್ಯವನ್ನು ಹೇಳುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಇಲ್ಲ. ಚರಿತ್ರೆಯೆಂಬುದು ಇಂದು ಒಂದು ಜಿಜ್ಞಾಸೆಯಾಗಿದೆ ಅಷ್ಟೆ. ಪಾಶ್ಚಾತ್ಯರನ್ನನುಸರಿಸಿ ಭಾರತೀಯ ಚರಿತ್ರೆಕಾರರೂ ಕೂಡ ಈ ನಿಜಗಳಿಗಾಗಿ ಹುಡುಕಾಡಿದ್ದಾರೆ. ಅವು ಇಂದು ವಿದ್ಯಾವಂತರ ಸಾಮಾನ್ಯ ಜ್ಞಾನವಾಗಿವೆ. ನೂರು ವರ್ಷದ ಹಿಂದೆ ಕಟ್ಟಿದ ಚರಿತ್ರೆಯನ್ನೇ ಅಂತಿಮ ಸತ್ಯ ಎಂಬಂತೇ ಈ ವಿದ್ಯಾವಂತರು ನಂಬಿಕೊಂಡಿದ್ದಾರೆ. ಆದರೆ ಇಂದು ಚರಿತ್ರೆಕಾರರು ಇಂಥ ನಿಜಗಳ ಕುರಿತು ಜಿಜ್ಞಾಸೆ ನಡೆಸುತ್ತಿದ್ದಾರೆಯೇ ಹೊರತೂ ಯಾವನೇ ತಲೆ ಇರುವವನು ಅವನ್ನು ಅಂತಿಮ ಸತ್ಯ ಎಂಬುದಾಗಿ
    ಹೇಳುವ ದಾರ್ಷ್ಟ್ಯ ತೋರಿಸುವದಿಲ್ಲ.
    ಚರಿತ್ರೆಕಾರರು ಗತದ ನಿಜಗಳ ಕುರಿತು ನೂರು ವರ್ಷಗಳ ಹಿಂದೆ ಯಾವ ಭರವಸೆಯನ್ನು ನೀಡಿ ಸಂಶೋಧನೆಗಳನ್ನು ಮಾಡಿದರೋ ಅವನ್ನು ಆ ರೀತಿ ಈಡೇರಿಸುವುದು ಸಾಧ್ಯವಿಲ್ಲ ಎಂದು ಇಂದು ಮನಗಂಡಿದ್ದಾರೆ. ಆದರೆ ಖಂಡಿತವಾಗಿಯೂ ಇದು ಸಾಮಾನ್ಯರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಈ ಚರಿತ್ರೆ ಮತ್ತೊಂದು ಎಡವಟ್ಟನ್ನೂ ಮಾಡಿದೆ. ಅದೆಂದರೆ, ವರ್ತಮಾನದ ನಮ್ಮ ವಿವೇಕವು ಈ ನಿಜಗಳನ್ನಾಧರಿಸಿಯೇ ಇರಬೇಕು, ಆಗ ಮಾತ್ರ ಅದೊಂದು ನಾಗರಿಕ ಸಮಾಜ ಎಂದೆನಿಸಿಕೊಳ್ಳುತ್ತದೆ ಎಂದು ಕೂಡ ಐರೋಪ್ಯರು ನಂಬಿದ್ದರು. ಹಾಗಾಗಿಯೇ ನಮ್ಮ ಕಥೆಗಳು, ಇತಿಹಾಸ ಪುರಾಣಗಳೆಲ್ಲ ನಿಜಗಳಲ್ಲ, ಅವುಗಳನ್ನು ನಂಬಿಕೊಂಡರೆ ಭಾರತೀಯಸಮಾಜವು ಹಾಳಾಗಿ ಹೋಗುತ್ತದೆ ಎಂದು ವಿದ್ಯಾವಂತರಿಗೆ ಮನದಟ್ಟು ಮಾಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದರು. ನಮ್ಮ ಚರಿತ್ರೆಯನ್ನು ನಿಜಘಟನೆಗಳನ್ನಾಧರಿಸಿ ಕಟ್ಟಿಕೊಟ್ಟರು. ಅದನ್ನನುಸರಿಸಿ, ಇಂಥ ಚರಿತ್ರೆಯ ನಿಜಗಳನ್ನು ಪವಿತ್ರ ಎಂದು ಪರಿಗಣಿಸಿದ ನಾವೂ ಕೂಡ ಅವುಗಳಿಂದ ಪಡೆದ ವಿವೇಕವನ್ನು ಆಧರಿಸಿ ಅನೇಕ ಸುಧಾರಣಾ ಚಳವಳಿಗಳನ್ನು ಹಮ್ಮಿಕೊಂಡೆವು. ಆಧುನಿಕ ಪ್ರಭುತ್ವದ ನೀತಿಗಳು ಹಾಗೂ ಅದರ ಅಧಿಕಾರ ರಚನೆ ಈ ಹೊಸ ಚರಿತ್ರೆಯ ಜ್ಞಾನದ ಮೇಲೆ ರೂಪುಗೊಂಡಿತು.

    ಭಾರತೀಯ ಚರಿತ್ರೆಯ ಘಟನೆಗಳು ಚರಿತ್ರೆಕಾರರಿಗೆ ಉದ್ದಕ್ಕೂ ಜಿಜ್ಞಾಸೆಯ ವಿಷಯಗಳೇ ಆಗಿವೆ. ಆದರೆ ಅವನ್ನು ನಾವು ಸ್ಕೂಲುಗಳಲ್ಲಿ ಕಲಿಸುವ ರೀತಿ ಹಾಗೂ ಚಳವಳಿಗಳಲ್ಲಿ ಅವನ್ನು ಪುನರುತ್ಪಾದಿಸುವ ರೀತಿಗಳು ಅವನ್ನು ಇಂಥ ಜಿಜ್ಞಾಸೆಗಳಿಂದ ಹೊರಗಿಟ್ಟಿವೆ. ನಮ್ಮ ಚರಿತ್ರೆ ಪುಸ್ತಕಗಳಲ್ಲಿ ಬರುವ ವಿಷಯವು ನೂರು ವರ್ಷಗಳಿಗೂ ಹಿಂದಿನದು. ಅವು ಇಂದಿಗೂ ಹಾಗೇ ಉಳಿದುಕೊಂಡು ಬಂದಿರುವುದು ನಾವು ಅಳವಡಿಸಿಕೊಂಡ ಶಿಕ್ಷಣ ವ್ಯವಸ್ಥೆಯ ವಿಫಲತೆಯನ್ನು ತೋರಿಸುತ್ತದೆ.

    ಇಂದು ಚರಿತ್ರೆಯ ನಿಜಗಳು ಅಂತಿಮ ಸತ್ಯಗಳಲ್ಲ ಎಂಬ ಮಾತನ್ನು ನಾವು ಚರಿತ್ರೆಕಾರರೇ ಹೇಳಿದರೂ ಕೂಡ ಅವುಗಳನ್ನಾಧರಿಸಿ ಚಳವಳಿಗಳನ್ನು ಕಟ್ಟಿಕೊಂಡು ಬಂದವರಿಗೆ ಹುನ್ನಾರವಾಗಿ ಕಾಣಿಸುತ್ತವೆ. ಆದರೆ ಒಂದು ಕಾಲದಲ್ಲಿ ಇಂಥ ಚರಿತ್ರೆಕಾರರು ಬರೆದ ವಾಕ್ಯಗಳನ್ನೇ ಆಧಾರ ವಾಕ್ಯಗಳಂತೇ ತಾವು ಬಳಸಿಕೊಳ್ಳುತ್ತಿದ್ದೇವೆ ಎಂಬುದೂ ಅವರಿಗೆ ಹೊಳೆಯುವುದಿಲ್ಲ. ಅಂದರೆ ಈಗ ಮಾತ್ರ ಅವರು ಹೇಳುವುದು ತಮಗೆ ಅನುಕೂಲವಲ್ಲ ಎಂದು ತಿಳಿದು ಈ ಚರಿತ್ರೆಕಾರರೇ ಸರಿ ಇಲ್ಲ ಎನ್ನುತ್ತಾರೆ. ಇಂದು ಹಳೆಯ ವಿಷಯವನ್ನೇ ಸತ್ಯ ಎಂಬಂತೇ ಪುನರುಚ್ಛರಿಸುವ ಚರಿತ್ರೆಕಾರರೂ ಇದ್ದರೆ ನೂರಾರು ವರ್ಷಗಳ ವರೆಗೆ ನಡೆದ ಸಂಶೋಧನೆಯ ಚಲನಶೀಲತೆಯ ಪರಿಚಯವೇ ಅವರಿಗಿಲ್ಲ ಎನ್ನಬೇಕಾಗುತ್ತದೆ.

    ನಾವು ಪ್ರಾಚೀನ ಭಾರತದಲ್ಲಿ ಜಾತಿ ಶೋಷಣೆ ಇರಲಿಲ್ಲ, ಪುರೋಹಿತ ಶಾಹಿ ಇರಲಿಲ್ಲ ಎಂಬುದನ್ನು ಸಿದ್ಧಪಡಿಸಲಿಕ್ಕಾಗಿ ಚರಿತ್ರೆಯ ನಿಜಗಳೇ ಪ್ರಶ್ನಾರ್ಹ ಎನ್ನುತ್ತಿದ್ದೇವೆ ಎಂಬ ಆರೋಪ ಇಂಥವರಿಂದ ಸಹಜವಾಗಿಯೇ ಬಂದಿದೆ. ನಿಜವಾಗಿಯೂ ನಮಗೆ ಆ ಉದ್ದೇಶಗಳಿದ್ದಲ್ಲಿ ನಾವು ಇಂಥ ಮೂರ್ಖ ಹೆಜ್ಜೆ ಇಡುತ್ತಿರಲಿಲ್ಲ. ಏಕೆಂದರೆ ಭಾರತೀಯ ಚರಿತ್ರೆಯಲ್ಲಿ ಇಂದಿನ ಎಲ್ಲಾ ಚಳವಳಿಗಳಿಗೂ ಬೇಕಾದ ಸರಕು ಇದೆ. ಶೋಷಿತರಂತೇ, ಶೋಷಣೆ ಮಾಡುವವರಿಗೂ ಅದರಲ್ಲಿ ಸರಕುಂಟು. ಈ ಚಳವಳಿಗಳೆಲ್ಲಾ ಈ ಚರಿತ್ರೆ ಪ್ರಜ್ಞೆಯಿಂದಲೇ ಹುಟ್ಟಿಕೊಂಡಿವೆ ತಾನೆ? ನಮಗೆ ಈ ಚರಿತ್ರೆಯನ್ನು ಆಧರಿಸಿ ನಮಗೆ ಬೇಕಾದ ಹಾಗೆ ಕಲ್ಪಿತ ನಿರೂಪಣೆ ಮಾಡಿಕೊಳ್ಳುವ ಸಾಧ್ಯತೆ ಇರುವಾಗ ( ವಸು ಮಳಲಿಯವರು ಮಹಿಷಾಸುರನ ಕುರಿತು ಮಾಡಿಕೊಂಡಿಲ್ಲವೆ? ನಮ್ಮ ಬುದ್ಧಿಮತ್ತೆಯ ಕುರಿತು ಅಷ್ಟೊಂದು ನಿರಾಶೆ ಬೇಡ, ) ನಾವ್ಯಾಕೆ ಬಂಗಾರದ ಮೊಟ್ಟೆಯನ್ನು ಇಡುವ ಕೋಳಿಯನ್ನು ಕ್ಷಣಿಕ ಆಸೆಗಾಗಿ ಕುಯ್ದು ತಿನ್ನುವ ಹೆಡ್ಡತನ ಮಾಡುತ್ತೇವೆ? ಹಾಗೂ ನಮ್ಮ ನಿಲುವು ಎಲ್ಲಾ ಚಳವಳಿಗಳಿಗೂ ಹೊಡೆತ ನೀಡುತ್ತವೆ, ಉದಾಹರಣೆಗೆ ಇಂದಿನ ಕೋಮುವಾದೀ ಚರಿತ್ರೆಗೂ ಕೂಡ. ನಾನು ನನ್ನ ಸೆಕ್ಯುಲರ ದಿನಗಳಲ್ಲಿ ಅನೇಕ ಲೇಖನಗಳಲ್ಲಿ ಈ ವಿಷಯವನ್ನು ಕುರಿತು ವಿಶ್ಲೇಷಿಸಿದ್ದೇನೆ. ಆಧುನಿಕ ಚರಿತ್ರೆಯ ನಿಜಗಳು ಹಾಗೂ ಧೋರಣೆಗಳಲ್ಲದಿದ್ದಲ್ಲಿ ಸಾವಿರಾರು ವರ್ಷ ಒಟ್ಟಿಗೇ ಬಾಳಿದ ಸಮುದಾಯಗಳು ಇಷ್ಟು ಭೀಕರವಾಗಿ ಕಚ್ಚಾಡುತ್ತಿರಲಿಲ್ಲ ಹಾಗೂ ದೇಶ ವಿಭಜನೆಯಂಥ ದುರಂತ ಭಾರತಕ್ಕೆ ಆಗುತ್ತಿರಲಿಲ್ಲ ಎಂಬುದು ಇಂದಿಗೂ ನನ್ನ ನಿರ್ಣಯ. ಅದೇ ರೀತಿಯಲ್ಲಿ ಜಾತಿಯ ಹೆಸರಿನಲ್ಲಿ ಇಂದು ನಡೆಯುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಚರಿತ್ರೆಯ ಹೆಸರಿನಲ್ಲಿ ಜಾತಿ ಜಾತಿಗಳನ್ನು ಎತ್ತಿಕಟ್ಟುವ ಕೆಲಸವೇ ದೊಡ್ಡ ತೊಡಕು ಎಂಬುದೂ ನನಗನಿಸಿದೆ. ಚರಿತ್ರೆಯ ನಿಜಗಳ ಹೆಸರಿನಲ್ಲಿ ದ್ವೇಷವನ್ನು ಬಿತ್ತಿಯೇ ವರ್ತಮಾನದ ಅನ್ಯಾಯವನ್ನು ಸರಿಪಡಿಸುವ ಜರೂರಿದೆಯೆ? ಇದು ನಾನು ಎಲ್ಲಾ ಚಳವಳಿಕಾರರಿಗೂ ಕೇಳುವ ಪ್ರಶ್ನೆ. ಅದು ಹಿಂದುತ್ವವಾದಿಗಳಿರಬಹುದು, ಪ್ರಗತಿವಾದಿಗಳಿರಬಹುದು. ಬಹುಶಃ ಚರಿತ್ರೆಯ ಸತ್ಯಗಳನ್ನು ಇಟ್ಟುಕೊಂಡು ವರ್ತಮಾನದ ಸಮಸ್ಯೆಗಳನ್ನು ಅರ್ಥೈಸಲು ಪ್ರಯತ್ನಿಸುವುದು ಹಾಗೂ ಪರಿಹರಿಸಲು ಪ್ರಯತ್ನಿಸುವುದು ಹೊಸ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತೇ ಅಷ್ಟೆ.

    ನಮಗೆ ಸಾಮಾಜಿಕ ಕಳಕಳಿ ಇಲ್ಲ ಎಂಬುದಾಗಿ ಭಾವಿಸುವ ಅಗತ್ಯ ಇಲ್ಲ. ನಮ್ಮ ಸಮಾಜದಲ್ಲಿ ಸಮಸ್ಯೆಗಳೇ ಇಲ್ಲ, ಅನ್ಯಾಯವೇ ಇಲ್ಲ, ಶೋಷಣೆಯೇ ಇಲ್ಲ, ಅಮಾನವೀಯತೆಯೇ ಇಲ್ಲ, ಎಂದೂ ನಾವು ಹೇಳುತ್ತಿಲ್ಲ, ಅವುಗಳು ಸಾಧ್ಯವಾದಷ್ಟೂ ನಿವಾರಣೆಯಾಗಬೇಕು ಎಂಬುದು ನಮ್ಮ ಕಳಕಳಿ ಕೂಡ. ನಾವು ಹೇಳುವುದೆಂದರೆ, ಇಂದು ನಮ್ಮ ಸಮಾಜದ ಅಂಗೈಮೇಲೆ ಇರುವ ಹುಣ್ಣನ್ನು ನೋಡಲಿಕ್ಕೆ ಚರಿತ್ರೆ ಎಂಬ ಕನ್ನಡಿ ಬೇಡ. ಅದರಲ್ಲೂ ಚರಿತ್ರೆಯೆಂಬ ಮಾಯಾ ಕನ್ನಡಿಯಲ್ಲಿ ನೋಡಿದರೆ ನಿಜ ಕಾಣುವುದಿಲ್ಲ ಎಂದು ಅದನ್ನು ಸೃಷ್ಟಿಸಿದ ಕಂಪೆನಿಯೇ ನಿವೇದನೆ ಮಾಡಿಕೊಂಡಾಗಿದೆ. ಚರಿತ್ರೆಯ ಕನ್ನಡಿಯು ಆ ಹುಣ್ಣಿನ ಸ್ವರೂಪವನ್ನು ತಿರುಚಬಹುದು. ಅಂಗೈ ಮೇಲಿನ ಹುಣ್ಣನ್ನು ನೇರವಾಗಿ ನೋಡಬಹುದು. ಅದಕ್ಕೆ ಚಿಕಿತ್ಸೆಯನ್ನು ಕೂಡ ನೇರವಾಗಿ ನೋಡಿಕೊಂಡೇ ಮಾಡಬೇಕೆ ಹೊರತೂ ಇಂಥ ಕನ್ನಡಿಗಳನ್ನು ಹಿಡಿದುಕೊಂಡು ಮಾಡುವುದು ಬೇಡ ಎನ್ನಲಿಕ್ಕೆ ಬಹಳ ತರ್ಕವೇನೂ ಬೇಡ.

    ಉತ್ತರ
    • Nagshetty Shetkar
      ಆಕ್ಟೋ 3 2014

      ನಾನು ಒಬ್ಬ ಇತಿಹಾಸಕಾರನಲ್ಲ. ಆದುದರಿಂದ ನಿಮ್ಮ ವಾದಕ್ಕೆ ಪ್ರತಿವಾದ ಹೂಡಲು ಹೋಗುವುದಿಲ್ಲ. ಚಿಕಾಗೋ ವಿಶ್ವವಿದ್ಯಾನಿಲಯದ ಇತಿಹಾಸ ತಜ್ಞರೊಬ್ಬರು ಇತಿಹಾಸ ಏಕೆ ಬೇಕು ಎಂದು ಬಹಳ ಚೆನ್ನಾಗಿ ವಿವರಿಸಿದ್ದಾರೆ. ದಯವಿಟ್ಟು ನೋಡಿ:

      _http://www.historians.org/about-aha-and-membership/aha-history-and-archives/archives/why-study-history-(1985)

      “ignorance of history-that is, absent or defective collective memory-does deprive us of the best available guide for public action, especially in encounters with outsiders, whether the outsiders are another nation, another civilization, or some special group within national borders.”

      “the changing perspectives of historical understanding are the very best introduction we can have to the practical problems of real life.”

      “Memory, indeed, makes us human. History, our collective memory, carefully codified and critically revised, makes us social, sharing ideas and ideals with others so as to form all sorts of different human groups. Each such group acts as it does largely because of shared ideas and beliefs about the past and about what the past, as understood and interpreted by the group in question, tells about the present and probable future.”

      “Historical memory is the key to self-identity, to seeing one’s place in the stream of time, and one’s connectedness with all of humankind. We are part of an ancient chain, and the long hand of the past is upon us—for good or ill—just as our hands will rest on our descendants for years to come. Denied knowledge of one’s roots and of one’s place in the great stream of human history, the individual is deprived of the fullest sense of self and of that sense of shared community on which one’s fullest personal development as well as responsible citizenship depends.

      In short, world history helps us think about what it means to be human and about the characteristics that all humans have in common.”

      ಉತ್ತರ
      • ಷಣ್ಮುಖ
        ಆಕ್ಟೋ 3 2014

        ನಿಮ್ಮ ಕಾಪಿಪೇಸ್ಟ್ ಕಾಯಕ ಸದ್ಯಕ್ಕೆ ಏನೂ ಫಲಕೊಡುವುದಿಲ್ಲ 🙂 ☺ ನೀವು ಕಾಪಿಪೇಸ್ಟ್ ಮಾಡಿರುವ ಚರಿತ್ರೆಯ ಕುರಿತ ಈ ಧೊರಣೆಗಳನ್ನೇ ಸೆಕ್ಯುಲರೀಕೃತ ಕ್ರಿಶ್ಚಿಯನ್ ಥಿಯಾಲಜಿ ಎಂದು ಅದರ ವಿರುದ್ದ ಇಷ್ಟೊಂದು ಚರ್ಚೆ ಮಾಡುತ್ತಿರುವುದು.. ಅದೇ ಹಳೆ ರಾಗಗಳು ಪ್ರಯೋಜನ ಇಲ್ಲ. ನಿಮ್ಮ ಮುಂದೆ ನಿರ್ಧಿಷ್ಟ ಪ್ರಶ್ನೆಗಳಿವೆ. ಅವುಗಳನ್ನಿಟ್ಟುಕೊಂಡು ಚರ್ಚೆಮಾಡುವುದಿದ್ದರೆ ಮಾಡಿ.

        ಉತ್ತರ
        • Nagshetty Shetkar
          ಆಕ್ಟೋ 3 2014

          “what it means to be human and about the characteristics that all humans have in common.”

          this is exactly what we Sharanas have attempted through Vachanas. History is another humanist approach. All humanist approaches should join hands to counter forces that deny universal human hood.

          ಉತ್ತರ
          • ಷಣ್ಮುಖ
            ಆಕ್ಟೋ 3 2014

            ಮಾನವೀಯ! ಮಾನವೀಯ! ಮಾನವೀಯ! ಅಂತ ಹಿಮಾಲಯ ತುದಿಯಲ್ಲಿ ನಿಂತು ಜಗತ್ತಿಗೆಲ್ಲಾ ಕೂಗಿಕೊಂಡರೂ ಚರಿತ್ರೆಯ ಸಂಸ್ಕೃತಿ ನಾಶದ ಸೆಮೆಟಿಕ್ ಧೋರಣೆಯನ್ನು ಮರೆಮಾಚಿದಂತಾಗುವುದಿಲ್ಲ. ಸುಮ್ನೆ slogan ಗಳನ್ನು ಬಿಟ್ಟು ಬೌದ್ದಿಕ ಚರ್ಚೆಮಾಡಿ, ನೀವು ಚರಿತ್ರಕಾರರಲ್ಲ ಚರಿತ್ರೆಯ ಬಗ್ಗೆ ಅಧ್ಯಯನ ಮಾಡಿಲ್ಲವೆಂದರೆ ಇಲ್ಲಿಯ ಚರ್ಚೆಯಲ್ಲಿ ಬಿಟ್ಟಿ ಸ್ಲೋಗನ್ನುಗಳನ್ನು ಉದುರಿಸಿ ಕಾಲಹರಣ ಮಾಡುವುದನ್ನಾದರೂ ಬಿಡಿ.

            ಉತ್ತರ
        • Nagshetty Shetkar
          ಆಕ್ಟೋ 3 2014

          ಓ ಬಿಡಿ ನೀವು ವಿಶ್ವ ಇದುವರೆಗೆ ಕಂಡಿರದ ಮಹಾನ್ ಚಿಂತಕರು. ಚಿಕಾಗೋ ವಿಶ್ವವಿದ್ಯಾನಿಲಯದ ಹಿಸ್ಟರಿ ತಜ್ಞರೆಲ್ಲ ನಿಮ್ಮ ಮುಂದೆ ಬಚ್ಚಾಗಳು. ಪಾಪ ಅವರಿಗಿನ್ನೂ ಅರಿವಾಗಿಲ್ಲ ಅವರದ್ದು ಸೆಕ್ಯುಲರೀಕೃತ ಕ್ರಿಶ್ಚಿಯನ್ ಥಿಯಾಲಜಿ! ನಿಮ್ಮಿಂದ ಮನೆ ಪಾಠ ಹೇಳಿಸಿಕೊಂಡು ನೀವು ಕೊಡುವ ಪರೀಕ್ಷೆ ಪಾಸು ಮಾಡಬೇಕು ಅವರಿನ್ನೂ! ನಿಮ್ಮ ಅಪ್ರತಿಮ ಚಿಂತನೆಯ ಮುಂದೆ ನಮ್ಮದೇನು ಬಿಡಿ!

          ಉತ್ತರ
          • ಷಣ್ಮುಖ
            ಆಕ್ಟೋ 3 2014

            ರೀ ಸ್ವಾಮಿ ಅವರುಗಳು ದೇವಮಾನವರೆೇಿಿ ಆಗಿರಲಿ. ಇಲ್ಲಿ ಚರ್ಚೆಗೆ ಪ್ರಶ್ನೆಗಳಿವೆ! ಅವುಗಳ ಬಗ್ಗೆ ಚರ್ಚೆಮಾಡಿ! ಸುಮ್ಮನೇ blamegame tactics ಬೇಡ!

            ಉತ್ತರ
  14. Rajaram Hegde
    ಆಕ್ಟೋ 3 2014

    ಶೇಟ್ಕರ ಅವರೆ ನಿಮ್ಮ ಕೊಟೇಶನ್ ಏನೋ ಸರಿ. ಆದರೆ ಹಿಟ್ಲರನನ್ನು ಮುಸೋಲಿನಿಯನ್ನು ಹುಟ್ಟಿಸಿದ್ದೂ ಈ ಚಿಕಾಗೋ ಇತಿಹಾಸಕಾರನ ಪರಿಕಲ್ಪನೆಯ ಹಿಸ್ಟರಿಯೇ. ಸೆಲ್ಫ ಎಂಬುದನ್ನು ಈ ಮೇಲಿನ ನಿರರ್ದಿಷ್ಟ ರೀತಿಯಲ್ಲಿ ಕಟ್ಟಿಕೊಂಡು ಜೀವಿಸುವುದು ಪಾಶ್ಚಾತ್ಯ ಸಂಸ್ಕೃತಿಯ ವೈಶಿಷ್ಟ್ಯತೆ. ಅದು ಸಾರ್ವತ್ರಿಕ ಸತ್ಯವಲ್ಲ. ಈ ಇತಿಹಾಸಕಾರರಿಗೆ ಇತರ ಸಂಸ್ಕೃತಿಗಳ ಜನರಲ್ಲಿ ಸೆಲ್ಫ ಕಲ್ಪನೆಯೇ ಇರುವುದಿಲ್ಲ ಎಂಬುದು ಗಮನಕ್ಕೆ ಬಂದಂತಿಲ್ಲ. ಹೆಗ್ಗೋಡಿನ ಅಕ್ಷರ ಪ್ರಕಾಶನವು ಪ್ರಕಟಿಸಿದ ಬಾಲಗಂಗಾಧರರ ‘ಹುಡುಕಾಟವನ್ನು ನಿಲ್ಲಿಸದಿರೋಣ’ ಓದಿ. ಭಾರತದಲ್ಲಿ ಈ ಹಿಸ್ಟರಿ ಹಾಗೂ ಸೆಲ್ಫ ಕಲ್ಪನೆ ಬಂದಮೇಲೇ ಇಲ್ಲಿನ ಜನಾಂಗ ವಾದಗಳೆಲ್ಲ ಹುಟ್ಟರುವುದು.

    ಉತ್ತರ
    • Nagshetty Shetkar
      ಆಕ್ಟೋ 4 2014

      ನೀವೇನೋ ಸೆಲ್ಫ್ ಎಂಬುದು ಪಾಶ್ಚಿಮಾತ್ಯ ಪರಿಕಲ್ಪನೆ ಅಂತೀರಿ. ಆದರೆ ಆತ್ಮ ಎಂಬ ಪರಿಕಲ್ಪನೆಯ ಆಧಾರದ ಮೇಲೇ ವೈದಿಕರದ್ದೂ ಸೇರಿ ಬಹುತೇಕ ಎಲ್ಲಾ ಭಾರತೀಯ ಆಧ್ಯಾತ್ಮಿಕ ಚಿಂತನೆ ನಿಂತಿದೆ. ಆತ್ಮ ಜ್ಞಾನ (ಸೆಲ್ಫ್ ಅವೆರ್ನೆಸ್ಸ್) ವೇ ಆಧ್ಯಾತ್ಮದ ಬಂಡವಾಳ. ಆತ್ಮಜ್ಞಾನದಿಂದ ಆತ್ಮವನ್ನು ತೆಗೆದುಬಿಟ್ಟರೆ ಆಧ್ಯಾತ್ಮವೇ ಕುಸಿದು ಬೀಳುತ್ತದೆ.

      ಉತ್ತರ
      • ಷಣ್ಮುಖ
        ಆಕ್ಟೋ 4 2014

        “ಸೆಲ್ಫ್ ಎಂಬುದನ್ನು ನಿರ್ಧಿಷ್ಟ ರೀತಿಯಲ್ಲಿ ಕಟ್ಟಿಕೊಂಡು ಜೀವಿಸುವುದು ಪಾಶ್ಚಿಮಾತ್ಯ ಸಂಸ್ಕೃತಿಯ ವೈಶಿಷ್ಟತೆ” ಅಥವಾ “ಸೆಲ್ಫ್ ಎನ್ನುವುದು ಪಾಶ್ಚಿಮಾತ್ಯ ಕಲ್ಪನೆ” ಅಂದರೆ ಭಾರತೀಯ ಸಂಸ್ಕೃತಿಯಲ್ಲಿ ಈ ಆತ್ಮ- ಆತ್ಮಜ್ಞಾನ ಎನ್ನುವುದು ಪಶ್ಚಿಮದವರ ಸೆಲ್ಫಗಿಂತ ಭಿನ್ನವಾದ ಬೇರೆಯೇ ಏನನ್ನೋ ಸೂಚಿಸುತ್ತದೆ ಎಂದರ್ಥ. ಅದೇನೆಂದು ತಿಳಿಯಲು ಮೇಲೆ ಸೂಚಿಸಿದ ಪುಸ್ತಕ ಓದಿ. ಆಗ ಆತ್ಮಜ್ಞಾನ ಅಂದ್ರೆ self-awareness ಎಂದು ಭಾಷಾಂತರಿಸುವುದರ ಪ್ರಮಾದಗಳು ಅರಿವಾಗುತ್ತದೆ. ಬಹುಷಃ ಲಿಂಗಾಯತವನ್ನು ನೀವುಗಳು ಇಸ್ಲಾಂನ ಚಿಂತನೆಯಂತೆ ಅರ್ಥೈಸುವುದಕ್ಕೂ ಇದೇ ರೀತಿಯಲ್ಲಿ ಲಿಂಗಾಯತವನ್ನು ತಪ್ಪು ಅರ್ಥೈಸುವಿಕೆಯೂ ಕಾರಣವಿರಬೇಕು! ಭಾರತೀಯ ಪರಂಪರೆಗಳ ಆತ್ಮ ಮತ್ತು ಪಶ್ಚಿಮದ soul ಕಲ್ಪನೆಗಳ ವ್ಯತ್ಯಾಸವನ್ನು ಸರಳವಾಗಿ ತಿಳಿಯಲು ಈ ಲೇಖನ ಓದಿ:

        ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

        ವಿಸ್ತೃತ ಚಿಂತನೆಗೆ ಹೆಗಡೆಯವರು ಹೇಳಿದ ಆ ಪುಸ್ತಕ ಓದಿ.

        ಉತ್ತರ
  15. Nagshetty Shetkar
    ಆಕ್ಟೋ 4 2014

    ನಿಲುಮೆಯ ಎಲ್ಲಾ ಓದುಗರಿಗೂ ಬಕ್ರೀದ್ ಹಬ್ಬದ ಪ್ರಯುಕ್ತ ಶುಭ ಹಾರೈಕೆಗಳು. ಹಜ್ ಯಾತ್ರೆ ಪೂರೈಸಿ ತಾಯ್ನಾಡಿಗೆ ಮರಳುತ್ತಿರುವ ಯಾತ್ರಾರ್ಥಿಗಳಿಗೆ ಶುಭವಾಗಲಿ. ಬಕ್ರೀದ್ ಹಬ್ಬವು ಸತ್ಯನಿಷ್ಠೆಯ ಸಾಂಕೇತಿಕ ಆಚರಣೆಯಾಗಿದ್ದು ಸತ್ಯಪರತೆಯನ್ನು ಸಾರುತ್ತದೆ. ಅಷ್ಟೇ ಅಲ್ಲ ನೆರೆಹೊರೆಯವರೊಡನೆ ಸಾಮರಸ್ಯ, ಬಡವರ ಬಗ್ಗೆ ಕಾಳಜಿ, ಹಂಚಿ ಕೊಂಡು ತಿನ್ನುವುದು – ಇವೇ ಮೊದಲಾದ ಜೀವಪರ ತತ್ವಗಳನ್ನು ಅಳವಡಿಸಿಕೊಂಡು ಬದುಕಲು ಜನರಿಗೆ ಪ್ರೇರಣೆ ನೀಡುತ್ತದೆ. ನಿಲುಮೆಯ ಓದುಗರೆಲ್ಲರೂ ಬಕ್ರೀದ್ ಹಬ್ಬದ ಪ್ರಯುಕ್ತ ತಮ್ಮ ಅಕ್ಕ ತಂಗಿಯರಿಗೆ ಈದಿ ಇನಾಂ ಅನ್ನು ಕೊಟ್ಟು ಸಂತೋಷ ಪಡಿಸಬೇಕು ಅಂತ ವಿನಂತಿ.

    ಉತ್ತರ
  16. Rajaram Hegde
    ಆಕ್ಟೋ 4 2014

    ಶೆಟ್ಕರ್ ಅವರೆ, ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದ. ನಿಮಗೂ ಶುಭ ಹಾರೈಕೆಗಳು

    ಉತ್ತರ
  17. Umesh
    ಆಕ್ಟೋ 5 2014

    ಶ್ರೀ ರಾಜಾರಾಮ ಹೆಗಡೆಯವರೆ, ಈ ನಾಡಿನ ಪ್ರಖರ ಚಿಂತಕರಾದ (ಅವರ ಕೆಲವೇ ಬರಹಗಳನ್ನು ಓದಿ ಅನ್ನಿಸಿದ್ದು) ಶ್ರೀ ಬಾಲಗಂಗಾಧರ ಅವರ ಅಮೂಲಾಗ್ರ ವಿಚಾರ ಚಿಂತನೆ ಏನು ಎಂಬುದನ್ನು ಸರಣಿ ಲೇಖನದ ಮೂಲಕ ನಿಲುಮೆಯಲ್ಲಿ ತಿಳಿಸಿಕೊಟ್ಟರೆ ಬಹಳ ಉಪಯುಕ್ತ ಅಂತ ನನ್ನ ಅನಿಸಿಕೆ.

    ಉತ್ತರ
  18. Rajaram Hegde
    ಆಕ್ಟೋ 6 2014

    ಉಮೇಶ ಅವರೆ ನಾನು ಪ್ರತೀ ವಾರ ಒಂದೊಂದು ಅಂಕಣದಂತೇ cslcku,wordpress.com ನಲ್ಲಿ ಕಳೆದ ಅನೇಕ ವಾರಗಳಿಂದ ಬಾಲಗಂಗಾಧರ ಅವರ ವಿಚಾರಗಳ ಕುರಿತು ಬರೆಯುತ್ತಿದ್ದೇನೆ. ಅದನ್ನು ಸರಳಗೊಳಿಸಲು ಬಾಲು ಅವರದೇ ಉದಾಹರಣೆಗಳನ್ನು ಆದಷ್ಟೀ ಬಳಸಿದ್ದೇನೆ. ಆದರೆ ಅವು ಸಾಕಾಗುವುದಿಲ್ಲ ಎನ್ನಿಸಿದಾಗ ಅವರ ವಿಚಾರಗಳನ್ನು ನನ್ನದೇ ಉದಾಹರಣೆಗಳಿಂದ, ನಿರೂಪಣೆಗಳಿಂದ ಆದಷ್ಟೂ ಸರಳಗೊಳಿಸಲು ಪ್ರಯತ್ನಿಸಿದ್ದೇನೆ. ಪರಿಣಾಮವಾಗಿ ಮೂಲ ವಿಚಾರಗಳು ತಮ್ಮ ಚಹರೆಯನ್ನು ಅಲ್ಪಸ್ವಲ್ಪ ಕಳೆದುಕೊಂಡಿರಲೂ ಬಹುದು. ಆದರೆ ಅವು ಅವರ ವಿಚಾರಗಳ ಸ್ಥೂಲ ಪರಿಚಯ ಮಾಡಿಕೊಡುತ್ತವೆ. ಕುತೂಹಲ ಹುಟ್ಟಿದವರು ಇನ್ನೂ ಖಚಿತವಾದ ಹಾಗೂ ವಿಸ್ತ್ರತವಾಗಿ ಅದನ್ನು ತಿಳಿದುಕೊಳ್ಳಬೇಕಾದರೆ ಅವರ ಕೃತಿಗಳ ಭಾಷಾಂತರವನ್ನೇ ಓದುವುದು ಸೂಕ್ತ. ಭಾಷಾಂತರಗಳನ್ನು ನೇರವಾಗಿ ಓದಿದರೆ ವಿಷಯಕ್ಕೆ ಪ್ರವೇಶ ಸಿಗುವುದು ಕಷ್ಟ ಎಂಬುದನ್ನು ಮನಗಂಡು ಈ ಅಂಕಣಗಳನ್ನು ಬರೆಯುತ್ತಿದ್ದೇನೆ.

    ಉತ್ತರ
    • Nagshetty Shetkar
      ಆಕ್ಟೋ 6 2014

      ಹೆಗಡೆ ಅವರೇ, ಬಾಲು ಅವರ ಚಿಂತನೆಯನ್ನು ಮರುಪ್ರಸಾರ ಮಾಡುವುದನ್ನು ನಿಲ್ಲಿಸಿ, ನಿಮ್ಮದೇ ಆದ ನಿಮ್ಮ ಮಸ್ತಕದಲ್ಲಿ ಹುಟ್ಟಿ ಬೆಳೆದ ಚಿಂತನೆಯ ಬಗ್ಗೆ ಬರೆಯಿರಿ, ಓದುತ್ತೇನೆ. ಬಾಲು ಅವರ ಗುಂಪು ಸೇರಿದ ನಂತರ ನಿಮ್ಮ ಸ್ವಂತ ಚಿಂತನೆ ಮರೆಯಾಗಿ ಬಾಲು ಗೀತೆ ಹಾಡುವುದಕ್ಕೆ ನಿಮ್ಮ ಪ್ರತಿಭೆ ವ್ಯಯವಾಗುತ್ತಿದೆ. ಇದನ್ನು ನೋಡಿ ನನಗೆ ದುಃಖವಾಗಿದೆ.

      ಉತ್ತರ
      • Shripad
        ಆಕ್ಟೋ 7 2014

        ತಾವು ಮಾತ್ರ “ಹಾಡಿದ್ದೇ ಹಾಡು…” ಎಂಬಂತೆ ದರ್ಗಾ ಗೀತೆ ಹಾಡುತ್ತಲೇ ಇರಬಹುದು.

        ಉತ್ತರ
        • Naani
          ಆಕ್ಟೋ 7 2014

          ‘ದರ್ಗಾಗೀತೆ’ ಕೂಡ ಒರಿಜನಲ್ಲು ಅಲ್ಲಾ ಮಾರ್ರೆ!! ಅದು ಕಳೆದ 150 ವರ್ಷಗಳಿಂದ ಪಾಶ್ಚಿಮಾತ್ಯರ ಸವಕಲು ಕಥೆಗಳನ್ನು ಎರ್ರಾಬಿರ್ರಿ ಕಿತ್ತು “ವಿಭಿನ್ನ” ನೆಲೆಗಳಲ್ಲಿ “ಬಹುಮುಖಿ” ಆಯಾಮಗಳಲ್ಲಿ ಸೃಷ್ಟಿಗೊಳ್ಳತ್ತಾ ಬಂದಿರುವುದೇ! ದರ್ಗಾದ್ದು ಅದರ ಒಂದು ರೂಪ ಅಷ್ಟೇ! ಆದರೆ ಈ ಹಾಡನ್ನು ಎಷ್ಟೇ ಕರ್ಕಶವಾಗಿ ಹಾಡಿದ್ರೂ ಹಾಡೋರ ಕಿರೀಟಿಳಿಗೆ ಗರಿಗಳು ಸೇರುವುದರಿಂದ ತಾಮುಂದು ನಾಮುಂದು ಎಂದು ಪೈಪೋಟಿಗಿಳಿದು ಹಾಡುತ್ತಿದ್ದಾರಷ್ಟೇ! ಇವರುಗಳು ಇದನ್ನೇ ಎಷ್ಟು ಸಾರಿ ಹಾಡಿದರೂ ಹಾರ-ತುರಾಯಿ, ಪ್ರಶಸ್ತಿ, ಪೀಠ, ಶ್ರೀಗಳು ನವನವೀನ!! ಆದ್ದರಿಂದ ಈ ಹಾಡು ಇವರುಗಳ ಪಾಲಿಗೆ ಕಲ್ಪವೃಕ್ಷ, ಸಂಜೀವಿನಿ, ಅಮೃತ ಎಲ್ಲವೂ 🙂

          ಉತ್ತರ
  19. Godbole
    ಆಕ್ಟೋ 11 2014

    Why study history?
    _http://www.smbc-comics.com/?id=2401#comic

    ಉತ್ತರ
  20. Nagshetty Shetkar
    ಆಕ್ಟೋ 21 2014

    ಕುರುಕ್ಷೇತ್ರ ಯುದ್ಧದ ಅಸಲಿಯತ್:
    _http://ladaiprakashanabasu.blogspot.in/2014/10/blog-post_64.html

    ಉತ್ತರ
  21. Nagshetty Shetkar
    ಡಿಸೆ 8 2014

    ನಿಲುಮೆಯ ರಾಜಗುರು ಬಾಲು ರಾವ್ ಅವರ ಪರಾಜಯ ಹಾಗೂ ಪಗತಿಪರರ ವಿಜಯ:

    Click to access A_Blindness_about_India.pdf

    ಉತ್ತರ
    • ಷಣ್ಮುಖ
      ಡಿಸೆ 8 2014

      ಹ್ಹ ಹ್ಹ ಹ್ಹ ಇದನ್ನು ಓದಿದ ಮೇಲೆ ನಿಮ್ಮವಿಜಯದ ಭ್ರಮೆ ಕಳಚದಿರಲಿ https://groups.yahoo.com/neo/groups/TheHeathenInHisBlindness/conversations/messages/7050

      ಉತ್ತರ
      • Nagshetty Shetkar
        ಡಿಸೆ 8 2014

        ಇದೆಲ್ಲಾ ಬಾಲಂಗೋಚಿಗಳ ಮರಣ ಆಕ್ರಂದನ. ತಾಕತ್ತಿದ್ದರೆ EPWನಲ್ಲಿ ರಾಜನ್ ಸರ್ ಅವರನ್ನು ಎದುರಿಸಿ.

        ಉತ್ತರ
        • ಷಣ್ಮುಖ
          ಡಿಸೆ 8 2014

          ಕರ್ಕೊಂಡ್ಬನ್ನಿ ಎದುರಿಸುವ! ನನ್ನ ಈ ಸಣ್ಣ ಪ್ರತಿಕ್ರಿಯೆಗೆ ಸಾಧ್ಯವಿದ್ರೆ (ನೀವು ನಿಮ್ಮ ಪರಗತಿಪರ ಗುರು ಯಾರಾದ್ರೂ ಸರಿ) ಸಮರ್ಥನೆಗಳನ್ನು ನೀಡಲಿ! 🙂

          Is it possible that so called ‘Profound” intellectual can think alike criminals in order to crucify the opponent in an intellectual debate? I thought so after reading this passage in Gurkkul’s article which appeared in EPW

          “Caste, sati, and dowry are allegedly constructs by historians with a western consciousness, who distort the Hindu past. This alleged distortion, according to him, speaks “more about the western civilisation than the native Indian civilisation”. It appears that jāti, sati and similar other institutions of Hinduism, exposed by historians and social scientists to be atrocious, are for him intrinsic human values of Indian culture.”

          This is how criminals develop false allegations to demoralize oppositions!

          I am trying to figure out what could be theotional ontology” that Gurukkul is threatened with! Because, I could not hold my nerves after reading his confused and choppy observations about Balu’s claims:

          – He thinks Balu dismisses Indian Social Sciences (just) because they are western/colonial product! (Really!!??)
          – He childishly claims that Balu says the “native Indian” knows no Indian view of India (which is not new and it is already said by colonial thinkers), but in the same paragraph he mentions ” He (Balu) asserts that this Indian view is articulated in the epics and Puranas,…” If Epics and Puran’s (and their native view) are not with the ‘Native Indians’, then who else has it?
          Is it just an exhibition of Colonial Consciousness? I could smell some more added flavour with that!

          Shanmukha

          ಉತ್ತರ
          • Nagshetty Shetkar
            ಡಿಸೆ 8 2014

            ವಚನ ಚರ್ಚೆಯಲ್ಲಿ ದರ್ಗಾ ಸರ್ ಮೋದಲಾದವರೊಂದಿಗೆ ವಾದ ಮಾಡಿ ಹಣ್ಣುಗಾಯಿ ನೀರುಗಾಯಿ ಆದ ಬಾಲು ಮತ್ತು ಬಾಲಂಗೋಚಿಗಳು ಈಗ ಚರಿತ್ರೆಯ ಬಗ್ಗೆ ಸೋಗಲಾಡಿತನ ತೋರಿಸಲು ಹೋಗಿ ರಾಜನ್ ಸರ್ ಅವರಿಂದ ಮರ್ಮಾಘಾತಕ್ಕೆ ಒಳಗಾಗಿದ್ದಾರೆ. ಇನ್ನು ಮುಗಿಯಿತು ಇವರ ಆಟ.

            ಉತ್ತರ
            • Naani
              ಡಿಸೆ 8 2014

              ನೀವು ಸಕತ್ತಾಗಿ ಜೋಕ್ ಮಾಡ್ತಿರಿ ಬುಡ್ರಿ!!! ನಿಮಗೆ ಇಂಗ್ಲೀಷ್ ಓದಕ್ಕೆ ಬರಲ್ಲಾಂದ್ರೆ ಲೊಕದಲ್ಲಿ ಯಾರಿಗೂ ಬರೋಲ್ಲ ಅನ್ನೋಷ್ಟು ಅಜ್ಞಾನವೇ ನೆಟ್ಟಗೆ ಆ ಲೇಖನ ಮತ್ತು ಇತರ ಲಿಂಕುಗಳಲ್ಲಿ ಆ ನಿಮ್ಮ ರಾಜನ್ ಗುರುಕ್ಕುಲ್ನ ಅಜ್ಞಾನದ ಪರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರೋದನ್ನು ಸರಿಯಾಗಿ ಯಾರತ್ರಾದ್ರೂ ಓದಿಸಿ ಅರ್ಥಮಾಡ್ಕೊಂಡು ಆಮೇಲೆ ಯಾರಕಥೆ ಮುಗೀತಿದೆ ನೋಡು ಸರಿಯಾಗಿ!!!

              ಉತ್ತರ
              • Nagshetty Shetkar
                ಡಿಸೆ 8 2014

                “ರಾಜನ್ ಗುರುಕ್ಕುಲ್ನ ಅಜ್ಞಾನದ ಪರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರೋದನ್ನು ಸರಿಯಾಗಿ ಓದಿ ಅರ್ಥಮಾಡ್ಕೊ”

                ಓ! ಹೌದೋ? EPWನಲ್ಲಿ ಬರಲಿ ಇದು, ಆಗ ಓದುತ್ತೇನೆ.

                ಉತ್ತರ
                • Naani
                  ಡಿಸೆ 9 2014

                  “ಹೌದೋ? EPWನಲ್ಲಿ ಬರಲಿ ಇದು, ಆಗ ಓದುತ್ತೇನೆ.”
                  ಹಾಗಿದ್ರೆ ತಾವು ಅಲ್ಲೇ ಬರೇರಿ ಇಲ್ಲಿಗೆ ಬಂದು ಏನು ಕಿಸೀತಿದೀರಿ ಮತ್ತೆ!?

                  ಉತ್ತರ
                  • Nagshetty Shetkar
                    ಡಿಸೆ 9 2014

                    ಇದನ್ನು ನನಗೆ ಹೇಳಲು ನೀವು ಯಾರು ಮಿ. ನಾಣಿ? ಫೇಕ್ ಐಡಿ ಬಿಟ್ಟು ನಿಮ್ಮ ಅಸಲಿ ರೂಪದ ದರ್ಶನ ನೀಡಿ ತಾಕತ್ತಿದ್ದರೆ.

                    ಉತ್ತರ
                    • Naani
                      ಡಿಸೆ 9 2014

                      ನಿನ್ನ ಐಡಿನ ಒಬ್ನೆ ಬಳಸು ನಂತ್ರ ಉಳಿದೋರಿಗೆ ಉಪದೇಶ ಕೊಡುವಿಯಂತೆ! 🙂
                      ” EPWನಲ್ಲಿ ಬರಲಿ ಇದು, ಆಗ ಓದುತ್ತೇನೆ” ಅಂತ ಹೇಳಿದ್ದಕ್ಕೆ ಸರಿಯಾದ ಪ್ರತಿಕ್ರಿಯೆ ತಾವೂ ಕೂಡ ಅಲ್ಲೇ ಬರೇರಿ ಅಂತ!!! ಹಾಗಾಗಿ ಹೋಗಿ ಅಲ್ಲೇ ಬರೆದು ಹೀಗೆ “ನೀನ್ಯಾರೂ….” ಅಂತ ಕೇಳಿ ನಾನೂ EPW ನಲ್ಲೇ ಬರೆದು ಉತ್ತರಿಸುತ್ತೇನೆ ಆಯ್ತಾ!! 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂 🙂

                    • Nagshetty Shetkar
                      ಡಿಸೆ 9 2014

                      ಇನ್ನೆಷ್ಟು ದಿನ ನಿಮ್ಮ ಆಟ ನಡೆಯುತ್ತದೆ ಅಂತ ನೋಡಿಯೇ ಬಿಡೋಣ. ದರ್ಗಾ ಸರ್ ಅವರಿಂದ ಅಂತರ್ಜಾಲದಲ್ಲಿ ಸೋಲು ಕಂಡರೂ ನಿಮಗೆ ಬುದ್ಧಿ ಬರಲಿಲ್ಲ. ರಾಜನ್ ಸರ್ ಅವರು ನಿಮ್ಮನ್ನು ಅಕಾಡೆಮಿಕ್ ಲೋಕದಲ್ಲಿ ಮೂರಾಬಟ್ಟೆ ಮಾಡಿದ ಮೇಲಾದರೂ ಬುದ್ಧಿ ಬರಬಹುದೇನೋ!

                    • ಷಣ್ಮುಖ
                      ಡಿಸೆ 9 2014

                      Just to expose the glaring inconsistency of Rajan Gurukul’s understanding of Balagangadhara, see these sentences quoted from his EPW article:

                      “Caste, sati , and dowry are allegedly constructs by historians with a western consciousness, who distort the Hindu past. This alleged distortion, according to him, speaks “more about the western civilisation than the native Indian civilisation ”. It appears that jāti, sati and similar other institutions of Hinduism, exposed by historians and social scientists to be atrocious, are for him intrinsic human values of Indian culture.”

                      Either Balu says “Caste, sati , and dowry are allegedly constructs by historians with a western consciousness, who distort the Hindu past.” Or he says “that jāti, sati and similar other institutions of Hinduism…… are intrinsic human values of Indian culture.” Which one of them are true? Because, both cannot be true at the same time!!! Prof . Gurukkul himself has to answer this. But, the funny part of the story is Balu say neither of them! !!! 🙂

                      Shanmukha

                    • ಷಣ್ಮುಖ
                      ಡಿಸೆ 9 2014

                      ಪ್ರೊ.ರಾಜಾರಾಮ ಹೆಗಡೆಯವರ ಅಧ್ಬುತವಾದ ಪ್ರತಿಕ್ರಿಯೆ: https://groups.yahoo.com/neo/groups/TheHeathenInHisBlindness/conversations/messages/7095

    • ಷಣ್ಮುಖ
      ಡಿಸೆ 8 2014

      ನಿಮಗೆ ರಾಜನ್ ಗುರಕ್ಕುಲ್ ರ ವಿಮರ್ಶೆ/ಟೀಕೆಗಳೇನು ಎನ್ನುವುದು ಅರ್ಥವಾಗಿದ್ದರೆ ಅದನ್ನು ಇಲ್ಲಿ ಮಂಡಿಸಿ ಚರ್ಚಿಸಿ ವಿಜಯ ಪತಾಕೆ ಇಲ್ಲೂ ಹಾರಲಿ! 🙂

      ಉತ್ತರ
      • Nagshetty Shetkar
        ಡಿಸೆ 9 2014

        ಏನು ಅದ್ಭುತವೋ! ಬಾಲಂಗೋಚಿಗಳ ಸಂಭ್ರಮ ನೋಡಿದರೆ ರಾಜನ ಹೊಸ ಬಟ್ಟೆ ಕತೆ ನೆನಪಿಗೆ ಬರುತ್ತದೆ.

        ಉತ್ತರ
        • ಷಣ್ಮುಖ
          ಡಿಸೆ 9 2014

          ನೆನಪಿಸಿಕೊಂಡು ನೀವೂ ಆನಂದಿಸುವಿರಂತೆ, ಅದಕ್ಕೆ ಮೊದಲು ನಾನು ಮೇಲೆ ಗುರುಕ್ಕುಲ್ ನ ಲೇಖನದ ಸಾಲಿನಲ್ಲಿರುವ ಬಾಲಿಶವಾದ ಅನರ್ಥಕಾರಿ ತೀರ್ಮಾನಗಳ ಅಸಂಬದ್ದತೆಯನ್ನು ತೋರಿಸುರವೆನಲ್ಲಾ!!! ಅದನ್ನು ನೀವಾದರೂ ಬಿಡಿಸಿ ಅವರಿಗೆ ಸಹಾಯ ಮಾಡ್ತೀರಾ??

          ಉತ್ತರ
          • Nagshetty Shetkar
            ಡಿಸೆ 9 2014

            ಕ್ಷಮಿಸಿ ನೀವು ಆಂಗ್ಲ ಭಾಷೆಯಲ್ಲಿ ಬರೆದುದ್ದನ್ನು ನಾನು ಓದುವ ಗೋಜಿಗೇ ಹೋಗಲಿಲ್ಲ! ಕನ್ನಡದಲ್ಲಿ ಬರೆಯಿರಿ.

            ಉತ್ತರ
            • ಷಣ್ಮುಖ
              ಡಿಸೆ 9 2014

              ರಾಜನ್ ಗುರುಕ್ಕುಲ್ ಕನ್ನಡದಲ್ಲಿ ಬರೆದಿದ್ರಾ!!??

              ಉತ್ತರ
              • Nagshetty Shetkar
                ಡಿಸೆ 9 2014

                ರಾಜನ್ ಸರ್ ಅವರು ಬರೆದಿರುವುದು EPWನಲ್ಲಿ. ನೀವು ಬರೆದಿರುವುದು ನಿಲುಮೆಯಲ್ಲಿ. ಆದುದರಿಂದ ಕನ್ನಡಲ್ಲೇ ಬರೆಯಿರಿ. ಆಂಗ್ಲ ಭಾಷೆಯಲ್ಲಿ ಬರೆಯುವುದಿದ್ದರೆ EPWನಲ್ಲಿ ಬರೆಯಿರಿ ನೋಡೋಣ.

                ಉತ್ತರ
                • ಷಣ್ಮುಖ
                  ಡಿಸೆ 9 2014

                  EPW ನಲ್ಲಿ ಆಂಗ್ಲಭಾಷೆಲಿ ಬರೆದ್ರೆ ನಿಮಗೆ ಅರ್ಥವಾಗುತ್ತೆ! ನಿಲುಮೆಲಿ ಬರೆದ್ರೆ ಅರ್ಥವಾಗೋಲ್ವಾ!! ನಾನು ಕೋಟ್ ಮಾಡಿರೋ ಅವರ ಸಾಲುಗಳು ಇರೋದು ಆಂಗ್ಲ ಭಾಷೆಯಲ್ಲಿಯೇ!! ಅದರ ಧೋಷವನ್ನು ಅದೇ ಭಾಷೆಯಲ್ಲಿ ತೋರಿಸೋದೆ ಸರಿ ಮತ್ತು ಸಮಂಜಸ! (ನಿಮಗರ್ಥವಾಗಲಿಲ್ಲವೆಂದರೆ ಯಾರದ್ದಾದರೂ ಸಹಾಯ ಪಡಕ್ಕೊಳ್ಳಿ! 🙂 )

                  ಉತ್ತರ
                  • Nagshetty Shetkar
                    ಡಿಸೆ 9 2014

                    ನಿಲುಮೆಯಲ್ಲಿ ಕನ್ನಡದಲ್ಲೇ ಸಂವಾದ ನಡೀತಕ್ಕದ್ದು ಅಂತ ಮಾಡರೆಟರ್ ಅವರು ಈ ಹಿಂದೆ ಆಜ್ಞೆ ನೀಡಿದ್ದಾರೆ ಗುರುಗಳೇ! ಅವರು ನಿಮ್ಮವರೇ. ಆದರೂ ನಿಮಗೆ ಕನ್ನಡದಲ್ಲಿ ಬರೆಯಲು ಸೋಮಾರಿತನ.

                    ಉತ್ತರ
                    • ಷಣ್ಮುಖ
                      ಡಿಸೆ 9 2014

                      🙂

                    • Nagshetty Shetkar
                      ಡಿಸೆ 9 2014

                      ಹೀಗೇ ನಗುತ್ತಾ ಇರಿ! ನಮ್ಮ ನಿಮ್ಮ ನಡುವೆ ದ್ವೇಷ ಮತ್ಸರವಿಲ್ಲ, ಅಭಿಪ್ರಾಯಭೇದವಷ್ಟೇ! ಮುಂದೊಂದು ದಿನ ನೀವೂ ಕಾಯಕವೇ ಕೈಲಾಸ ಎಂದು ನಂಬಿ ಶರಣಾಗಬಹುದು ಎಂಬ ವಿಶ್ವಾಸ ನನಗಿದೆ. 🙂

Leave a reply to ರಾಕೇಶ್ ಶೆಟ್ಟಿ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments