ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 3, 2014

33

ಪೌರಕಾರ್ಮಿಕರ ಸಮಸ್ಯೆಗಳು ಮತ್ತು ಶ್ರೇಣಿಕೃತ ಜಾತಿವ್ಯವಸ್ಥೆಯೆಂಬ ಮಿಥ್

by ರಾಕೇಶ್ ಶೆಟ್ಟಿ

– ರಾಕೇಶ್ ಶೆಟ್ಟಿ

Mala Horuvudu‘ವಿಜಯವಾಣಿ’ ಪತ್ರಿಕೆಯಲ್ಲಿ ಅಕ್ಟೋಬರ್ ೧೪ನೇ ತಾರೀಖು ಪ್ರಕಟವಾದ, ಮಾಜಿ ಸಚಿವ ಬಿ.ಸೋಮಶೇಖರ್ ಅವರ “ಸ್ವಚ್ಚ ಮನಸ್ಸುಗಳಿಂದ ಸ್ವಚ್ಚ ಭಾರತ ನಿರ್ಮಾಣ” ಲೇಖನಕ್ಕೆ ನನ್ನ ಪ್ರತಿಕ್ರಿಯೆ.

ಸೋಮಶೇಖರ್ ಅವರು ಲೇಖನದಲ್ಲಿ ‘ಸ್ವಚ್ಚ ಭಾರತ ಅಭಿಯಾನ’ದ ಬಗ್ಗೆ ಮಾತನಾಡುತ್ತ ಮುಖ್ಯವಾಗಿ ಎರಡು ಅಂಶಗಳನ್ನು ದಾಖಲಿಸಿದ್ದಾರೆ.ಅದರಲ್ಲಿ ಮೊದಲನೆಯ ಅಂಶದಲ್ಲಿ, ಸರ್ವೇ ಸಾಧಾರಣವಾಗಿ ಭಾರತದ ಯಾವುದೇ ಬುದ್ಧಿಜೀವಿಯೋ ಅಥವಾ ರಾಜಕಾರಣಿಯೋ ಹೇಳುವಂತಹ “ಭಾರತೀಯ ಸಮಾಜ ಜಾತಿ ಆಧಾರಿತ,ಶ್ರೇಣಿಕೃತ” ಇತ್ಯಾದಿ.ಹಾಗೇ,ಸ್ವಚ್ಚಗೊಳಿಸುವ ಕೆಲಸಕ್ಕಾಗಿ ಇಲ್ಲಿ ಒಂದೇ ಜಾತಿ,ವರ್ಗವನ್ನು ಸೃಷ್ಟಿಸಲಾಯಿತು ಮತ್ತು ಅದಕ್ಕೆ ಧರ್ಮ-ಶಾಸ್ತ್ರಗಳ ಮೂಲಕ ಅಧಿಕೃತವನ್ನಾಗಿಸಲಾಯಿತು ಅಂತೆಲ್ಲ ಬರೆದುಕೊಂಡಿದ್ದಾರೆ. ಎರಡನೆಯ ಅಂಶ ಪೌರ ಕಾರ್ಮಿಕರ ಸಮಸ್ಯೆಗಳು,ಸ್ವಚ್ಚ ಭಾರತ ಅಭಿಯಾನದ ಅನುಷ್ಟಾನದ ಬಗ್ಗೆಯಾಗಿದೆ.

ಅವರ ಲೇಖನದ ಮೊದಲನೇ ಅಂಶದಲ್ಲಿ ಬರುವ ಶ್ರೇಣಿಕೃತ ಜಾತಿ ವ್ಯವಸ್ಥೆ,ಧರ್ಮ-ಶಾಸ್ತ್ರಗಳು ಇತ್ಯಾದಿ ವಾದಗಳಿಗೆ ಯಾವುದೇ ವೈಜ್ನಾನಿಕ ಆಧಾರಗಳು ಇಲ್ಲ.ಈ ವಾದಗಳು “ಅಡಗೂಲಜ್ಜಿ ಕತೆ”ಗಳಂತೆ ಹಳೆ ಕಾಲದಿಂದ ಕೇಳಿಸುತ್ತಲೇ ಬರುತ್ತಿವೆ.ಇತ್ತೀಚಿನ ಸಮಾಜ ವಿಜ್ನಾನದ ವಾದಗಳು ಭಾರತದಲ್ಲಿ ‘ಶ್ರೇಣಿಕೃತ ಜಾತಿ ವ್ಯವಸ್ಥೆ’ ಇಲ್ಲವೆಂದು ಹೇಳುತ್ತಿವೆ.

ಅಷ್ಟಕ್ಕೂ “ಶ್ರೇಣಿಕೃತ (Hierarchy)ವ್ಯವಸ್ಥೆ” ಎಂದರೇನು?

ಉದಾಹರಣೆಗೆ,ನಮಗೊಂದು ರಾಜ್ಯ ಸರ್ಕಾರವಿದೆ.ಅದಕ್ಕೊಬ್ಬರು ಮುಖ್ಯಮಂತ್ರಿ,ಅವರ ಕೆಳಗೆ ಮಂತ್ರಿಗಳು, ಶಾಸಕರು,ಮುಖ್ಯ ಕಾರ್ಯದರ್ಶಿಗಳು,ಅಧಿಕಾರಿಗಳು,ಜಿಲ್ಲಾಧಿಕಾರಿಗಳು,ತಹಶೀಲ್ದಾರರು ಹೀಗೆ ಒಂದು ವ್ಯವಸ್ಥೆ (System/Structure)ಇದೆ.ಇದೇ ರೀತಿಯ ವ್ಯವಸ್ಥೆಯೇನಾದರೂ ನಮ್ಮ ಸಮಾಜದಲ್ಲಿ ಕಾಣಬರುವ ಜಾತಿಗಳಲ್ಲಿ ಇವೆಯೇ?

ಅಂದರೇ, ಯಾವುದೋ ‘ಒಂದು ಜಾತಿ’ ಈ ವ್ಯವಸ್ಥೆಯ ಮೇಲೆ (ಅಂದರೆ ಮುಖ್ಯಮಂತ್ರಿಯ ತರಹದ ಸ್ಥಾನ ಅಂದುಕೊಳ್ಳೋಣ) ಇದ್ದು ಉಳಿದ ಜಾತಿಗಳನ್ನು ನಿರ್ದೇಶಿಸುತ್ತಿದೆಯೇ ಎನ್ನುವುದನ್ನು ನಮ್ಮ ದೈನಂದಿನ ಅನುಭವದ ಆಧಾರದ ಮೇಲೆ ನೋಡಿದರೆ,ನಮಗೆ ಏನು ಉತ್ತರ ಸಿಗುತ್ತದೆ? ನನ್ನ ಜೀವನವನ್ನು ನಾನು ಮತ್ತು ನನ್ನ ಕುಟುಂಬ ನಿರ್ದೇಶಿಸುತ್ತದೆಯೇ ಹೊರತು ಯಾವುದೋ ಇನ್ನೊಂದು ಜಾತಿಯಲ್ಲ ಎಂದು ನನ್ನ ಅನುಭವಕ್ಕೆ ಬರುತ್ತದೆ. ಹಾಗಾಗಿ,ಸೋಮಶೇಖರ್ ಅವರು ಉಳಿದ ಆರೋಪಗಳನ್ನು ಹೊರಿಸುವ ಮೊದಲಿಗೆ,ಶ್ರೇಣಿಕೃತ ವ್ಯವಸ್ಥೆ ಎಲ್ಲಿದೆ ಎಂದು ಹೇಳಬೇಕಾಗುತ್ತದೆ.ಹಾಗೊಂದು ವೇಳೆ ಅಂತ ವ್ಯವಸ್ಥೆಯೇ ಇಲ್ಲವೆನ್ನುವುದಾದರೆ,ಅವರು ಸಮಸ್ಯೆಯ ಮೂಲವನ್ನು ಸರಿಯಾಗಿ ಗುರುತಿಸುತ್ತಿಲ್ಲವೆಂದಾಗುತ್ತದೆ.ಈ ವಾದಕ್ಕೆ ಇನ್ನೊಂದು ಪ್ರತ್ಯೇಕ ಲೇಖನ ಬರೆಯಬೇಕಾಗಬಹುದು (ಅದನ್ನೂ ಬರೆಯುತ್ತೇನೆ).

ಅದರ ಬದಲಿಗೆ ನಾನು,ಅವರು ಲೇಖನದಲ್ಲಿ ಉಲ್ಲೇಖಿಸಿರುವ ಎರಡನೇ ಅಂಶವಾದ,”ಕಾರ್ಮಿಕರ ಸಮಸ್ಯೆ,ಸ್ವಚ್ಚ ಭಾರತ ಅಭಿಯಾನದ ಅನುಷ್ಥಾನ” ಇತ್ಯಾದಿಗಳ ಬಗ್ಗೆ ಮಾತನಾಡಬಯಸುತ್ತೇನೆ.

ಲೇಖನದಲ್ಲಿ “ಮಲ ಹೊರುವಂತ” ಅನಿಷ್ಟ ಪದ್ಧತಿಯ ಬಗ್ಗೆ ಮಾತನಾಡುತ್ತ ಮಾಜಿ ಸಚಿವರು,ಈಗಲೂ ಅದು ಉತ್ತರ ಭಾರತದಲ್ಲಿ ಅಸ್ತಿತ್ವದಲ್ಲಿದೆ ಎಂದಿದ್ದಾರೆ.ಬಹುಷಃ ಅವರಿಗೆ ನೆನಪಿರಲಿಕ್ಕಿಲ್ಲ.ಈ ಅನಿಷ್ಟ ಪದ್ಧತಿ “ಕರ್ನಾಟಕ”ದಲ್ಲಿಯೇ ಅಸ್ತಿತ್ವದಲ್ಲಿರುವುದನ್ನು “ವಿಜಯವಾಣಿ” ಪತ್ರಿಕೆ ೨೦೧೪ರ ಜನವರಿ ೨೯ರಂದು ಮತ್ತೆ ಫೆಬ್ರವರಿ ೫ರಂದು ವರದಿ ಮಾಡಿತ್ತು.

ಭಾರತದಲ್ಲೇ ಮೊದಲ ಬಾರಿಗೆ ೧೯೬೮ರಲ್ಲಿ,ಈ ಮಲಹೊರುವ ಅನಾಗರೀಕ ಕಾರ್ಯವನ್ನು ನಿಷೇಧಿಸಿದ್ದು ಉಡುಪಿ ನಗರಸಭೆ.ಬಿಜೆಪಿ ದಿವಂಗತ ಡಾ||ವಿ.ಎಸ್ ಆಚಾರ್ಯರ ನೇತೃತ್ವದಲ್ಲಿ.ಆ ನಂತರ ೧೯೭೩ರಲ್ಲಿ ದೇವರಾಜ್ ಅರಸು ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಬಸಲಿಂಗಯ್ಯನವರು ಸುತ್ತೋಲೆಯೊಂದನ್ನು ಹೊರಡಿಸುವುದರ ಮೂಲಕ ನಿಷೇಧಿಸಿದರೂ,ಅದಕ್ಕೆ ಕಾನೂನು ರೂಪುಗೊಂದಿದ್ದು ೧೯೯೩ರಲ್ಲಿ…! ಬರೋಬ್ಬರಿ ೨೦ ವರ್ಷಗಳ ಬಳಿಕ…!

ಕರ್ನಾಟಕದ ಸರ್ಕಾರದ ಸುತ್ತೋಲೆಯನ್ನೇ ಪರಿಗಣಿಸಿ ಕೇಂದ್ರವೂ ೧೯೯೩ರಲ್ಲಿ ಮಸೂದೆಯನ್ನು ಮಂಡಿಸಿ,೨೦೧೩ರಲ್ಲಿ ಆ ಕಾನೂನನ್ನು ಬಿಗಿಗೊಳಿಸಿತ್ತು.ಇನ್ನು ಮುಂದೆ ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಒಳಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಮತ್ತು ಶೌಚಾಲಯಕ್ಕೆ ಗುಂಡಿಗಳ ಬದಲು ದೊಡ್ಡ ಪೈಪುಗಳನ್ನು ಅಳವಡಿಸುವಂತೆ ಸೂಚಿಸಿತ್ತು.ರಾಜ್ಯದಲ್ಲಿ ಮಲಹೊರುವ ಕಾರ್ಯ ನಿಷೇಧವಾಗಿದ್ದು ೧೯೭೩ರಲ್ಲಿ.ಆದರೆ,೨೦೧೪ ರ ವರ್ಷದಲ್ಲೂ ನಾವೂ ಮತ್ತದೇ “ಮಲ ಹೊರುವ” ಸುದ್ದಿಗಳನ್ನು ಓದುತ್ತಲೇ ಇದ್ದೇವೆ.ಅಂದರೆ ನಿಷೇಧವಾಗಿ ೪೧ ವರ್ಷಗಳಾದ ಮೇಲೆ …! ಕಾರಣ ಯಾರು?

ವಿಜಯವಾಣಿಯಲ್ಲಿ ಈ ಪ್ರಕರಣ ವರದಿಯಾದ ಮೇಲೆ ಸರ್ಕಾರ ಎಚ್ಚೆತ್ತುಕೊಂಡು,’ಮಲಹೊರುವಂತೆ ಪ್ರೇರೆಪಿಸಿದ’ ಮತ್ತು ‘ಜಾತಿನಿಂದನೆ’ಯ (ಇದರಲ್ಲಿ ಜಾತಿ ನಿಂದನೆಯಾಗಿದ್ದು ಹೇಗೆ?)ಆರೋಪದ ಮೇಲೆ ಒಬ್ಬರನ್ನು ಬಂಧಿಸಿದ ಫಾಲೋ-ಅಪ್ ಸುದ್ದಿಯೂ ಪತ್ರಿಕೆಯಲ್ಲಿ ಬಂದಿತ್ತು. ಆದರೆ,ಸರಿಯಾದ ಒಳಚರಂಡಿ ವ್ಯವಸ್ಥೆಯನ್ನು ರೂಪಿಸದ ಮತ್ತು ಅಗತ್ಯ ಯಂತ್ರೋಪಕರಣಗಳ್ಳು ಸ್ವಚ್ಚಗೊಳಿಸಲು ಒದಗಿಸದ ಸರ್ಕಾರ ಇಂತ ಪ್ರಕರಣದಲ್ಲಿ ಮೊದಲ ಆರೋಪಿಯಾಗಬೇಕೆ ಅಥವಾ ವ್ಯವಸ್ಥೆಯ ನಿರ್ಲಕ್ಷ್ಯದ ಅನಿವಾರ್ಯತೆಗೆ ಬಿದ್ದು,ಕಾರ್ಮಿಕರಿಂದ ಮಲಹೊರಿಸುವ ಸ್ಥಿತಿಗೆ ಬಂದು ನಿಲ್ಲುವವರು ಆರೋಪಿಗಳಾಗಬೇಕೆ?ಅತ್ಯಾಧುನಿಕ ಉಪಕರಣಗಳು ಆಯಾ ಪಾಲಿಕೆ/ನಗರಸಭೆ/ಪುರಸಭೆ/ಗ್ರಾಮಪಂಚಾಯಿತಿ ಗಳಲ್ಲಿ ಲಭ್ಯವಿದ್ದೂ ಮತ್ತು ಅವುಗಳನ್ನು ಬಳಸುವ ಬಗ್ಗೆ ಜನರಿಗೆ ಅರಿವು ಮೂಡಿಸಿ,ಅವು ಸುಲಭವಾಗಿ ದಕ್ಕುವಂತೆ ಸರ್ಕಾರ ಮಾಡಿದ್ದರೆ,ಒಬ್ಬರು ಜೈಲಿಗೆ ಹೋಗುವುದನ್ನು ತಪ್ಪಿಸಬಹುದಿತ್ತಲ್ಲವೇ?

ಬದುಕಿನ ಅನಿವಾರ್ಯತೆ,ಹಸಿವು ಎಂತ ಕೆಲಸವನ್ನಾದರೂ ಮಾಡಿಸುತ್ತದೆ.ವಿಜಯವಾಣಿಯಲ್ಲಿ ವರದಿಯಾಗಿದ್ದ ಆನೇಕಲ್ ಮಲಹೊರುವ ಪ್ರಕರಣದ ಸಂತ್ರಸ್ತರಿಗೆ ಅವರ ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಕುಟುಂಬಸ್ಥರ ಹೊಟ್ಟೆ-ಬಟ್ಟೆ ನೋಡಿಕೊಳ್ಳಬೇಕಾದ ಅನಿವಾರ್ಯತೆಯಿರುತ್ತದೆ.ಅಂತವರ ಅನಿವಾರ್ಯತೆಯನ್ನು/ವಸ್ತುಸ್ಥಿತಿಯನ್ನು,ಸರ್ಕಾರ/ವ್ಯವಸ್ಥೆ ಅರ್ಥಮಾಡಿಕೊಂಡು ಶಾಶ್ವತ ಪರಿಹಾರ ರೂಪಿಸುವ ಕಾರ್ಯಕ್ರಮ ಕೈಗೊಳ್ಳದೇ,ಶಿಕ್ಷೆಯ ಭಯ ಬೀಳಿಸುತ್ತದೆ ಸರ್ಕಾರ.

ಮಲಗುಂಡಿ ಸ್ವಚ್ಛಗೊಳಿಸುವ ಮತ್ತು ಬರಿಗೈಯಲ್ಲಿ ಚರಂಡಿ ಸ್ವಚ್ಚಗೊಳಿಸುವ ಕೆಲಸಕ್ಕೆ ಮುಂದಾದರೆ,ಮೊದಲನೇ ಬಾರಿ ೧ ವರ್ಷ ಶಿಕ್ಷೆ,೫೦ ಸಾವಿರ ದಂಡ,ಮತ್ತಿದು ಪುನಾರವರ್ತನೆಯಾದರೆ ೫ ವರ್ಷ ಜೈಲು,೫ ಲಕ್ಷ ದಂಡವಂತೆ! ತುತ್ತು ಕೂಳಿಗಾಗಿ,ಪುಡಿಗಾಸಿಗಾಗಿ ಇಂತ ಕೆಲಸ ಮಾಡುವವರಿಗೆ ೫೦ ಸಾವಿರದಿಂದ ೫ ಲಕ್ಷ ದಂಡವಂತೆ!

ಹೇಗಿದೆ ಸರ್ಕಾರದ/ಕಾನೂನು/ವ್ಯವಸ್ಥೆಯ ವರಸೆ? ಶೀತವಾದರೆ ಚುಚ್ಚುಮದ್ದು/ಮಾತ್ರೆ ತೆಗೆದುಕೊಳ್ಳುವುದರ ಬದಲು ಮೂಗನ್ನೇ ಕತ್ತರಿಸಿಕೊಳ್ಳಿ ಅನ್ನುವ ಕಾನೂನು…!

ಸರ್ಕಾರಗಳು ಕಾನೂನಿನ ಮೂಲಕ ನಿಷೇಧ ಹೇರುವಲ್ಲಿ ತೋರುವ ಉತ್ಸಾಹವನ್ನು ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಕೆಲಸ ಮಾಡುವಲ್ಲಿ ಸೋಲುತ್ತಿವೆಯೇ? ಒಂದು ಕಾನೂನು ರಚನೆಯಾಗಿ ೪೧ ವರ್ಷವಾದ ಮೇಲೂ ಅದರ ಉಲ್ಲಂಘನೆಯಾದ ವರದಿಗಳು ಬರುತ್ತಿವೆಯೆಂದರೆ,ಸರ್ಕಾರಗಳ ಕಾನೂನುಗಳೇ ವಿಫಲವಾಗಿವೆ ಅಂತಲೇ ಅರ್ಥವಲ್ಲವೇ? ಮಾನವನ ಬದಲಿಗೆ ಬೇಕಾಗುವ ಅಗತ್ಯ ಸಲಕರಣೆಗಳು,ಯಂತ್ರೋಪಕರಣಗಳು,ಒಳಚರಂಡಿ ವ್ಯವಸ್ಥೆಗಳಿದ್ದರೆ ಈ ಕಾನೂನಿ ಅಗತ್ಯ ಬೀಳುತ್ತದೆಯೇ?

ವಿಜಯವಾಣಿಯಲ್ಲಿಯೇ,ಶಿರಸಿ ತಾಲೂಕಿನ ೨೭ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಕೇಂದ್ರ ಸರ್ಕಾರದ ಗ್ರಾಮೀಣ ಮಂತ್ರಾಲಯ’ ದ ಮನೆಗೊಂದು ಶೌಚಾಲಯ ಕಾರ್ಯಕ್ರಮದಡಿ ಕಟ್ಟಿಸಲ್ಪಟ್ಟ ಶೌಚಾಲಯಗಳಲ್ಲಿ ಸೆಪ್ಟಿಕ್ ಟ್ಯಾಂಕ್ ಅಳವಡಿಸಿದ್ದು,ಅವು ತುಂಬಿಕೊಂಡು ಬಳಸಲಾರದ ಮಟ್ಟಿನ ಸಮಸ್ಯೆ ಕಾಡಿದ್ದು,ಕಡೆಗೆ ಶಿರಸಿ ನಗರಸಭೆಯಲ್ಲಿ ಸಕ್ಕಿಂಗ್ ಯಂತ್ರ ಬಳಸಲು ಎರಡೂವರೆ ಸಾವಿರದಷ್ಟು ದುಬಾರಿ ಹಣ ತೆರಲು ಶಕ್ತರಲ್ಲದ ಬಡ ಜನ ತಾವೇ ಖುದ್ದು ಸ್ವಚ್ಚಗೊಳಿಸಲು ಮುಂದಾಗಿದ್ದಾಗ,ಪರಿಸ್ಥಿತಿಯ ಗಂಭೀರತೆ ಅರಿತ ಉಪ ವಿಭಾಗಧಿಕಾರಿ ರಾಜು ಮೊಗವೀರ ಅವರು ನಗರಸಭೆಯ ಮನವೊಲಿಸಿ ಕಡಿಮೆ ದರದಲ್ಲಿ ಈ ಕಾರ್ಯವಾಗುವಂತೆ ಮಾಡಿದ್ದೂ ವರದಿಯಾಗಿತ್ತು.ಎಲ್ಲ ಕಡೆಯೂ ರಾಜು ಮೊಗವೀರರಂತ ಅಧಿಕಾರಿಗಳಿದ್ದರೆ ಪರವಾಗಿಲ್ಲ. ಆದರೆ,ಹಾಗಿರುವುದಿಲ್ಲವಲ್ಲ!

ಅದಕ್ಕೂ ಮುಖ್ಯವಾಗಿ ಇಂತ ಯೋಜನೆಗಳನ್ನು ಹಾಕಿಕೊಂಡಾಗ ದೂರಗಾಮಿ ಪರಿಣಾಮಗಳ ಬಗ್ಗೆ ಚಿಂತಿಸದಷ್ಟು ಮೂಢರೇನು ನಮ್ಮ ಯೋಜನಾ ಪಂಡಿತರು ಮತ್ತು ಸರ್ಕಾರಗಳು? ವಸ್ತುಸ್ಥಿತಿ ಹೀಗಿರುವಾಗ ಅಮಾಯಕರ ಮೇಲೆ ಕೇಸು ಹಾಕುವ ನೈತಿಕ ಹಕ್ಕು ಈ ಸರ್ಕಾರಗಳಿಗೆ ಇದೆಯೇ? ಇವತ್ತು ಸ್ವಚ್ಚ ಭಾರತ ಅಭಿಯಾನದಲ್ಲಿ “ಬಯಲು ಶೌಚಾಲಯ” ನಿರ್ಮೂಲನೆಗೆ ಹೊರಟು ನಿಂತವರು ಈ ಬಗ್ಗೆ ಯೋಚಿಸಬೇಕಾದದು ಅತ್ಯಂತ ಮುಖ್ಯವಾಗುತ್ತದೆ.

ನಮ್ಮ ಆರೋಗ್ಯ ರಕ್ಷಿಸುವವರ ಆರೋಗ್ಯದ “ರಕ್ಷಣೆ ಯಾರ ಹೊಣೆ”? :

ಇಂದಿಗೂ ಬೆಂಗಳೂರಿನ ಮುಖ್ಯ ರಸ್ತೆಗಳಲ್ಲೇ ಯಾವುದೇ ಆರೋಗ್ಯ ರಕ್ಷಣಾ ಸಲಕರಣೆಗಳನ್ನು ಧರಿಸದೇ ತಲೆಯ ಮೇಲೊಂದು ಬಟ್ಟೆ ಕಟ್ಟಿಕೊಂಡು ಕಸಗುಡಿಸುವ ಹೆಂಗಸರು ಮತ್ತು ಮನೆ ಮನೆಗೆ ಹೋಗಿ ತ್ಯಾಜ್ಯ ಸಂಗ್ರಹಿಸುವ ಮತ್ತು ಆ ತ್ಯಾಜ್ಯವನ್ನು ಲಾರಿ/ಟ್ರ್ಯಾಕ್ಟರ್ ಗಳಿಗೆ ತುಂಬಿಕೊಳ್ಳುವವರು,ಚರಂಡಿಗಳನ್ನು ಸ್ವಚ್ಚಗೊಳಿಸುವವರು ಯಾವುದೇ ರೀತಿಯ ಆರೋಗ್ಯ ರಕ್ಷಣಾ ಸಲಕರೆಣೆಗಳನ್ನು ಹಾಕಿಕೊಂಡಿರುವುದಿಲ್ಲ. ರಸ್ತೆಯಲ್ಲಿ ಒಂದು ಚೂರು ಕಸಬಿದ್ದಿದ್ದರೆ ನಾವು ಮೂಗು ಮುಚ್ಛಿಕೊಂದು ಓಡಾಡುತ್ತೇವೆ.ಪಾಪ ಆ ಬಡಪಾಯಿಗಳು ಅದೇ ಕಸದಲ್ಲೂ ಹಾಗೆಯೇ ಕೆಲಸ ಮಾಡುತ್ತಿರುತ್ತಾರೆ.

ಸತ್ಯವೇನೆಂದರೆ,ಇದು ನಮ್ಮೆಲ್ಲರ ಗಮನಕ್ಕೂ ಬಂದಿರುತ್ತದೆ.ಸರ್ಕಾರದಲ್ಲಿರುವ ದೊಡ್ಡ ಜನರ ಕಣ್ಣಿಗೂ ಬಿದ್ದಿರುತ್ತದೆ.ಆದರೆ,ಅವರ ಮನಸ್ಸಿಗೆ ಇವೆಲ್ಲ ಕಾಣುವುದಿಲ್ಲ.ಕೇವಲ ಕಾನೂನಗಳನ್ನು ಮಾಡುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿದ್ದರೆ,ಇಂತ ಸುದ್ದಿಗಳು ಮತ್ತೆ ಮತ್ತೆ ವರದಿಯಾಗುತ್ತಲೂ ಇರುತ್ತಲಿರಲಿಲ್ಲ ಅಲ್ಲವೇ?

ಹಾಗಾಗಿ ಈ ಸಮಸ್ಯೆಯನ್ನು “ಜಾತಿ” ಆಧಾರದ ಮೇಲಾಗಲಿ ನೋಡುತ್ತ ಕುಳಿತರೆ ಅದು ಒಂದು ಜಾತಿಯನ್ನೋ ಅಥವಾ ಜನರ ಬಳಕೆಯಲ್ಲಿರದ ಧರ್ಮಶಾಸ್ತ್ರಗಳನ್ನು ಬಯ್ಯುವಲ್ಲಿಗೆ ಕೊನೆಯಾಗಬಹುದೇ ಹೊರತು ಸಮಸ್ಯೆಗೆ ಪರಿಹಾರವಾಗುವುದಿಲ್ಲ.

ಈ ಸಮಸ್ಯೆಗೆ ಪರಿಹಾರವಿರುವುದು, ಪೌರ ಕಾರ್ಮಿಕರಿಗೆ ಆರೋಗ್ಯ ಸಲಕರಣೆಗಳು,ಒಳ್ಳೆಯ ಸಂಬಳ,ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ,ಅಗತ್ಯವಾದ ಒಳಚರಂಡಿ ವ್ಯವಸ್ಥೆ,ಯಂತ್ರೋಪಕರಣಗಳನ್ನು ಒದಗಿಸಿದಾಗಲಷ್ಟೇ.ಮೊದಲಿಗೆ ಚರ್ಚೆಯಾಗಬೇಕಿರುವುದು ಈ ಬಗ್ಗೆ.ಆನಂತರ ಬೇಕಿದ್ದರೆ “ಶ್ರೇಣಿಕೃತ ಜಾತಿ ವ್ಯವಸ್ಥೆ” ಇತ್ಯಾದಿಗಳ ಬಗ್ಗೆ ಆರಾಮವಾಗಿ ಚರ್ಚಿಸಬಹುದು.

ಸ್ವಚ್ಚ ಭಾರತದ ನಿರ್ಮಾಣವಾಗಲಿಕ್ಕೆ “ಸ್ವಚ್ಚ ಮನಸ್ಸು”ಗಳೊಂದಿಗೆ “ಸ್ವಚ್ಚ ಇಚ್ಚಾಶಕ್ತಿ”ಯ ಸರ್ಕಾರವೂ ಬೇಕಾಗುತ್ತದೆ.

Advertisements
Read more from ಲೇಖನಗಳು
33 ಟಿಪ್ಪಣಿಗಳು Post a comment
 1. ನವೆಂ 4 2014

  ಉತ್ತಮ ಲೇಖನ.

  ಉತ್ತರ
 2. ಗಿರೀಶ್
  ನವೆಂ 5 2014

  ಇತ್ತೀಚೆಗೆ ಕುಣಿಗಲ್ ಸಮೀಪದ ಗೊಲ್ಲರಹಟ್ಟಿಯಲ್ಲಿನ ಅಮಾನವೀಯ ಬಾಣಂತಿ ಮತ್ತು ಋತುಮತಿಯಾದವರನ್ನು ಮನೆಯಿಂದ ಹೊರಗಿರಿಸುವ ಪದ್ದತಿಯ ಬಗ್ಗೆ ಪತ್ರಿಕೆಗಳು ವರದಿ ಮಾಡಿದ್ದವು. ತಮ್ಮ ಜಾತಿಗಳಲ್ಲಿಲ್ಲದ ಆಚರಣೆಗಳನ್ನು ಮೇಲ್ವರ್ಗ ಏಂದು ಕರೆಯುವರು ಹೇಗೆ ಆಚರಣೆಗೆ ತಂದರು? ಕ್ಷಮಿಸಿ ವಿಷಯಾಂತರ ನನ್ನ ಉದ್ದೇಶವಲ್ಲ ಸಾಮ್ಯತೆಯಿರುವುದರಿಂದ ಗಮನ ಸೆಳೆದೆ. ವಿಷಯಾಂತರ ಎನಿಸಿದರೆ. ಇದನ್ನು ಡಿಲೀಟ್ ಮಾಡಿ.

  ಉತ್ತರ
 3. Nagshetty Shetkar
  ನವೆಂ 5 2014

  “ಭಾರತೀಯ ಸಮಾಜ ಅನೇಕ ಬಗೆಯ ಪರಿವರ್ತನೆಗಳೊಂದಿಗೆ ಸಾಮಾಜಿಕ ರಚನೆಯಲ್ಲಿ ಸ್ಥಿತ್ಯಂತರಗಳನ್ನು ಕಂಡುಕೊಂಡು ಮುಂದೆ ಸಾಗಿ ಬಂದಿದೆಯಾದರೂ ಸಾಂಪ್ರದಾಯಿಕ ಸಂಸ್ಥೆಗಳ ವಿಷಯದಲ್ಲಿ ಮಾತ್ರ ಇಂದಿಗೂ ಅದೊಂದು ಮುಚ್ಚಿದ ವ್ಯವಸ್ಥೆಯಾಗಿಯೇ ಉಳಿದಿದೆ. ಜಾತಿಯ ವಿಷಯವಾಗಿ ಉಂಟಾಗಿವೆ ಎನ್ನಲಾಗುವ ಪರಿವರ್ತನೆಗಳು ಕೇವಲ ನಮ್ಮ ಬಾಹ್ಯ ಜೀವನಕ್ಕೆ ಮಾತ್ರ ಸಂಬಂಧಿಸಿವೆ. ಕೆಲ ಬಾರಿ ಅದು ನಮ್ಮ ಬಾಹ್ಯ ಜೀವನವನ್ನೂ ನಿರ್ಬಂಧಿಸುವ ಮೂಲಕ ಬಾಧಿಸಿರುವುದಿದೆ. ಆಂತರಿಕ ಜೀವನದ ವಿಷಯದಲ್ಲಂತೂ ಅದು ಇನ್ನಷ್ಟು ಜಟಿಲಗೊಳ್ಳುತ್ತ ನಡೆದದ್ದು ವಾಸ್ತವ. ಹೊರನೋಟಕ್ಕೆ ಅದು ಸಡಿಲು ಗೊಂಡಂತೆ ಬಿಂಬಿತವಾದರೂ ಅದರ ಸಾಮಾಜಿಕ ಸ್ಥಾನಮಾನಗಳಲ್ಲಿ ಮಾತ್ರ ಲಂಬರೂಪದ ಚಲನೆಗಳಾಗಿರುವುದಿಲ್ಲ.”,
  ಜಾತಿಪದ್ಧತಿ, ಪರಿವರ್ತನೆ ಮತ್ತು ಪ್ರತಿಗಾಮಿತನ [ಲೇ: ಡಾ. ಎಸ್. ಬಿ. ಜೋಗುರ, ಕೊಂಡಿ: _http://bit.ly/1wwAfs5]

  ಉತ್ತರ
  • shripad
   ನವೆಂ 5 2014

   ಲಂಬರೂಪದ ಚಲನೆ? ಸಾಹೇಬ್ರೇ ಈ ಕಟ್ ಆಂಡ್ ಪೇಸ್ಟ್ ಏನೇನೂ ಅರ್ಥವಾಗುತ್ತಿಲ್ಲ. ಇದನ್ನು ಸರಳ ಕನ್ನಡಕ್ಕೆ ಅನುವಾದಿಸಿಯಾದರೂ ಕೊಡಿ.

   ಉತ್ತರ
   • Nagshetty Shetkar
    ನವೆಂ 6 2014

    Vertical move ment.

    ಉತ್ತರ
    • shripad
     ನವೆಂ 6 2014

     ಸ್ವಾಮಿ ನಾನು ಇಂಗ್ಲಿಷ್ ಸಂವಾದಿ ಪದ ಕೇಳ್ತಿಲ್ಲ, ಸರಳ ಕನ್ನಡದಲ್ಲಿ ನಿಮ್ಮ ಕಟ್ ಆಂಡ್ ಪೇಸ್ಟ್ ಅನುವಾದಿಸಿಕೊಡಿ, ದಪ್ಪ ದಪ್ಪ ಪದಗಳು ಅರ್ಥವಾಗ್ತಿಲ್ಲ. ನಾವು ವಿಚಾರವಾದಿಗಳೂ ಅಲ್ಲ, ಮಹಾನ್ ಚಿಂತಕರೂ ಅಲ್ಲ, ಅಲ್ಪ ಸ್ವಲ್ಪ ಕನ್ನಡ ಓದಿಕೊಂಡವರು.

     ಉತ್ತರ
     • Nagshetty Shetkar
      ನವೆಂ 7 2014

      ಲಂಬರೂಪದ ಚಲನೆ ಅಂದರೆ ಸರಳವಾಗಿ ಹೇಳುವುದಾದರೆ ಒಂದು ಶ್ರೇಣಿಯಿಂದ ಮತ್ತೊಂದು ಶ್ರೇಣಿಗೆ ಚಲಿಸುವುದು.

      ಉತ್ತರ
      • shripad
       ನವೆಂ 7 2014

       ಅಂದರೆ ಯಾವ ಶ್ರೇಣಿ? ಜಾತಿಯದೇ? ಹೇಗಿದೆ ಸ್ವಲ್ಪ ಬಿಡಿಸಿ ಹೇಳಿ.

       ಉತ್ತರ
       • ಬಿಡಿಸಿ ಹೇಳಲಿಕ್ಕೆ ಅದನ್ನು ಬರೆದಿರುವ ಜೋಗುರ ಅವರಿಗೂ ಸಾಧ್ಯವಿಲ್ಲವೇನೋ ಬಹುಷಃ 🙂

        ಉತ್ತರ
        • Nagshetty Shetkar
         ನವೆಂ 17 2014

         “ಮರು ಮತಾಂತರಗೊಂಡವರನ್ನೆಲ್ಲ ಬ್ರಾಹ್ಮಣರನ್ನಾಗಿ ಸ್ವೀಕರಿಸಿ ಸಮಾನ ಸ್ಥಾನಮಾನ ನೀಡಲು ಬ್ರಾಹ್ಮಣ ಮಠಾಧೀಶರು ತಯಾರಿದ್ದಾರೆಯೆ?

         ಈ ಪ್ರಶ್ನೆಗೆ ಉತ್ತರ ಬೇಕಾಗಿದೆ. ಈ ಪ್ರಶ್ನೆಗೆ ಸಂಘಪರಿವಾರದ ಬಳಿ ಉತ್ತರವಿಲ್ಲ. ಬ್ರಾಹ್ಮಣ್ಯದ ರಕ್ಷಣೆಗಾಗಿ ದಲಿತರು ಹಿಂದೂ ಧರ್ಮದಲ್ಲೇ ಉಸಿರುಗಟ್ಟಿ ಸಾಯಬೇಕೆಂದು ಈ ಧರ್ಮರಕ್ಷಕರ ಹುನ್ನಾರವಾಗಿದೆ. ”

         [“ಮತಾಂತರ ಮತ್ತು ಮಠಾಧೀಶರು”, ಲೇ: ಸನತಕುಮಾರ ಬೆಳಗಲಿ]

         ಉತ್ತರ
         • shripad
          ನವೆಂ 17 2014

          ಈ ಹಿಂದೂ ಧರ್ಮ ಅಂದರೆ ಯಾವುದು ಹೇಳಿ?

          ಉತ್ತರ
          • Nagshetty Shetkar
           ನವೆಂ 17 2014

           ಈ ಪ್ರಶ್ನೆಯನ್ನು ನೀವು ಆ ನಿಮ್ಮ ಪೇಜಾವರ ಮಠಾಧೀಶರಿಗೆ ಹಾಗೂ ರಾಘವೇಶ್ವರ ಭಾರತಿ ಅವರಿಗೆ ಕೇಳಿ.

         • “ಮರು ಮತಾಂತರಗೊಂಡವರನ್ನೆಲ್ಲ ಬ್ರಾಹ್ಮಣರನ್ನಾಗಿ ಸ್ವೀಕರಿಸಿ ಸಮಾನ ಸ್ಥಾನಮಾನ ನೀಡಲು ಬ್ರಾಹ್ಮಣ ಮಠಾಧೀಶರು ತಯಾರಿದ್ದಾರೆಯೆ?” >>

          ಯಾಕೆ ಬ್ರಾಹ್ಮಣರಾಗಿಯೇ ಮತಾಂತರವಾಗಬೇಕು? ಲಿಂಗಾಯಿತರೋ,ಒಕ್ಕಲಿಗರೋ,ಶೆಟ್ಟರೋ ಅಥವಾ ಇನ್ಯಾವುದೋ ಯಾಕೆ ಆಗಬಾರದು ಶೆಟ್ಕರ್?
          ಅಷ್ಟಕ್ಕೂ ಈ “ಮತಾಂತರ”ದ ಪ್ರಕ್ರಿಯೆ ಏನು?ಅದನ್ನು ಎಲ್ಲಿ ಡಿಫೈನ್ ಮಾಡಿದ್ದಾರೆ?

          ಉತ್ತರ
          • Nagshetty Shetkar
           ನವೆಂ 18 2014

           ಮರುಮತಾಂತರ ಎಂಬುದು ಚಡ್ಡಿಗಳ ಅವಾಂತರ.

          • ನವೆಂ 18 2014

           ಮತಾಂತರ ಆಗಬಹುದು. ಆದರೆ, ಮರುಮತಾಂತರ ಮಾಡುವಂತಿಲ್ಲ!
           ಬಸವ ಮತದ ಹೊದಿಕೆಯ ಒಳಗೆ ಅಡಗಿರುವ ಹೇತ್ಕರರ ‘ಸತ್ಯ’ ಅದೆಷ್ಟು ಚೆನ್ನಾಗಿ ಹೊರಬರುತ್ತಿದೆ ನೋಡಿ!!

           ಹೋಗಲಿ, ಮುಸಲ್ಮಾನರಾಗಿ ಮತಾಂತರಗೊಂಡವರು ಸುನ್ನಿ ಜಾತಿಗೆ ಸೇರುತ್ತಾರೋ, ಶಿಯಾ ಜಾತಿಗೆ ಸೇರುತ್ತಾರೋ, ಅಹ್ಮದೀಯಾ ಜಾತಿಗೆ ಸೇರುತ್ತಾರೋ, ವಹಾಬಿ ಜಾತಿಗೆ ಸೇರುತ್ತಾರೋ, ಜಿಕ್ರಿ ಜಾತಿಗೆ ಸೇರುತ್ತಾರೋ, ಸೂಫಿ ಜಾತಿಗೆ ಸೇರುತ್ತಾರೋ, ಖಾದೀಮ್ ಜಾತಿಗೆ ಸೇರುತ್ತಾರೋ, ಮಿರ್ಜಾಯಿ ಜಾತಿಗೆ ಸೇರುತ್ತಾರೋ, ಲಾಹೋರಿ ಜಾತಿಗೆ ಸೇರುತ್ತಾರೋ, ಇಬಾದಿ ಜಾತಿಗೆ ಸೇರುತ್ತಾರೋ, ದರ್ಜಿ ಜಾತಿಗೆ ಸೇರುತ್ತಾರೋ, ನಿಜಾರಿ ಜಾತಿಗೆ ಸೇರುತ್ತಾರೋ, ತುರುಕ್ಕ ಜಾತಿಗೆ ಸೇರುತ್ತಾರೋ, ಪಠಾಣ ಜಾತಿಗೆ ಸೇರುತ್ತಾರೋ, ಅಲೇವಿ ಜಾತಿಗೆ ಸೇರುತ್ತಾರೋ, ಬೋಹ್ರಾ ಜಾತಿಗೆ ಸೇರುತ್ತಾರೋ, ಜ್ಯಾದಿ ಜಾತಿಗೆ ಸೇರುತ್ತಾರೋ, ಜಿಕ್ರಿ ಜಾತಿಗೆ ಸೇರುತ್ತಾರೋ, ಮುತಾಜಿಲಿ ಜಾತಿಗೆ ಸೇರುತ್ತಾರೋ, ಸಲಾಫಿ ಜಾತಿಗೆ ಸೇರುತ್ತಾರೋ, ಅಥಾರೀ ಜಾತಿಗೆ ಸೇರುತ್ತಾರೋ, ಅಹುಲ್-ಅಥಾರ್ ಜಾತಿಗೆ ಸೇರುತ್ತಾರೋ, ಉಸುಲಿ ಜಾತಿಗೆ ಸೇರುತ್ತಾರೋ, ಅಕಬರಿ ಜಾತಿಗೆ ಸೇರುತ್ತಾರೋ, ಖಿಸಿಬಾ-ತರೀಕಾಹ್ ಜಾತಿಗೆ ಸೇರುತ್ತಾರೋ, ಇಸ್ಮಾಯಿಲ್ ಜಾತಿಗೆ ಸೇರುತ್ತಾರೋ, ನುಬಾಕ್ಶಿಯಾ ಜಾತಿಗೆ ಸೇರುತ್ತಾರೋ, ಇಬಾದಿ ಜಾತಿಗೆ ಸೇರುತ್ತಾರೋ, ಜಿಕ್ರಿ ಜಾತಿಗೆ ಸೇರುತ್ತಾರೋ, ಮೋಪ್ಳಾ ಜಾತಿಗೆ ಸೇರುತ್ತಾರೋ, ಅಶ್ರಾಫ್ ಜಾತಿಗೆ ಸೇರುತ್ತಾರೋ, ಅಜ್ಲಾಫ್ ಜಾತಿಗೆ ಸೇರುತ್ತಾರೋ, ಜಜ್ಮಾನ್ ಜಾತಿಗೆ ಸೇರುತ್ತಾರೋ, ಕಮೀನ್ ಜಾತಿಗೆ ಸೇರುತ್ತಾರೋ, ಖುರೇಶಿ ಜಾತಿಗೆ ಸೇರುತ್ತಾರೋ, ಶೇಖ್ ಅನ್ಸಾರಿ ಜಾತಿಗೆ ಸೇರುತ್ತಾರೋ, ಸಯ್ಯದ್ ಜಾತಿಗೆ ಸೇರುತ್ತಾರೋ, ಮಾಲಿಕ್ ಜಾತಿಗೆ ಸೇರುತ್ತಾರೋ……..?

           ಮುಸಲ್ಮಾನರಾಗಿ ಮತಾಂತರಗೊಂಡವರನ್ನೆಲ್ಲಾ “ಮೇಲ್ವರ್ಗದ ಜಾತಿ”ಗಳಾದ ಅನ್ಸಾರಿ, ಸಯ್ಯದ್, ಖುರೇಶಿ, ತುರುಕ್, ಪಠಾಣ್ ಅಥವಾ ಮಾಲಿಕ್ ಜಾತಿಗೇ ಸೇರಿಸಿಕೊಳ್ಳುವುದಿಲ್ಲ?

           ಮುಸಲ್ಮಾನರಾಗಿ ಮತಾಂತರಗೊಂಡವರು ಹಿಂದುಗಳಾಗಿ ಮರಳಿ ಮಾತೃಧರ್ಮಕ್ಕೆ ಬರುತ್ತಿದ್ದಾರೆಂದರೆ, ಅವರಿಗೆ ಮುಸಲ್ಮಾನ ಜಾತಿಯಲ್ಲಿ ಭ್ರಮನಿರಸನವಾಗಿದೆ ಎಂದೇ ಅರ್ಥವಲ್ಲವೇ?
           ಮುಸಲ್ಮಾನ ಜಾತಿಯಲ್ಲಿರುವ ಮೇಲು-ಕೀಳು, ವಾಕ್-ಸ್ವಾತಂತ್ರ್ಯ ಇಲ್ಲದಿರುವಿಕೆ, ಮಹಿಳೆಯರನ್ನು ಕೀಳಾಗಿ ಕಾಣುವುದು, ಸುನ್ನಿ-ಶಿಯಾ ಮುಂತಾದ ಉಪ-ಜಾತಿಗಳ ನಡುವೆ ನಡೆಯುತ್ತಿರುವ ಅಸಹ್ಯಕರ ಹೊಡೆದಾಟ, ತಲಾಕ್-ನಂತಹ ಅಪಮಾನಕರ ಹಾಗೂ ಶಿಲಾಯುಗೀನ ಸಂಪ್ರದಾಯಗಳ ಆಚರಣೆ, ಸುಧಾರಣೆಗೆ ಒಂದಿನಿತೂ ಒಪ್ಪದೆ ಮಧ್ಯಯುಗೀನ ಬರ್ಬರ ನಂಬಿಕೆಗಳಿಗೇ ತಗಲಿಹಾಕಿಕೊಂಡಿರುವುದರಿಂದ, ಮತಾಂತರಗೊಂಡು ಹೋದ ಹಿಂದುಗಳು ಭ್ರಮ ನಿರಸನರಾಗಿ, ಬಹಳ ದೊಡ್ಡ ಸಂಖ್ಯೆಯಲ್ಲಿ ವಾಪಸ್ ಹಿಂದುಗಳಾಗುತ್ತಿದ್ದಾರೆ.
           ಆ ರೀತಿ ಬರುವವರನ್ನು ಸ್ವಾಗತಿಸುವುದರಲ್ಲಿ ತಪ್ಪೇನಿದೆ.
           ಆ ರೀತಿ ಮರುಮತಾಂತರಗೊಂಡು ತಮ್ಮ ಪೂರ್ವಜರ ಧರ್ಮ ಮತ್ತು ಜಾತಿಗಳಿಗೆ ಅವರು ಮರಳುತ್ತಿರುವುದು ಆ ಜನರಿಗೆ ಮುಕ್ತಿ ದೊರೆದಂತಾಗುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.

           ಸ್ವಾಮಿ ಹೇತ್ಕರರೇ, ನಿಮಗೂ ಮತ್ತು ನಿಮ್ಮ ದರ್ಗಾ ಅವರಿಗೂ ಹಿಂದು ಧರ್ಮಕ್ಕೆ ಮತಾಂತರಗೊಳ್ಳಲು ಸ್ವಾಗತ.

          • Nagshetty Shetkar
           ನವೆಂ 18 2014

           SSNK ಅವರೇ, ನಿಮ್ಮ ಈ ಕಮೆಂಟು ನಿಮಗೆ ಮುಸಲ್ಮಾನರ ಬಗ್ಗೆ ಇರುವ ನಂಜನ್ನು ಮತ್ತೆ ಕಾರಿದೆ! ನಿಮ್ಮ ನಂಜು ಬರಿದಾಗಿ ನಿಮ್ಮ ದೃಷ್ಟಿಕೋಣ ಬದಲಾಗುವ ವರೆಗೆ ನಿಮ್ಮೊಡನೆ ಸಂವಾದ ನಡೆಸಲು ನಾನು ಇಷ್ಟ ಪಡುವುದಿಲ್ಲ, ಕ್ಷಮಿಸಿ. ಮತಾಂಧತೆಯಿಂದ ನಾಶವಾಗಬೇಡಿ. ಈಗಲಾದರೂ ಸುಧಾರಿಸಿ.

          • Naani
           ನವೆಂ 18 2014

           ‘ಮುಸಲ್ಮಾನರಾಗಿ ಮತಾಂತರಗೊಂಡವರು ಸುನ್ನಿ ಜಾತಿಗೆ ಸೇರುತ್ತಾರೋ, ಶಿಯಾ ಜಾತಿಗೆ ಸೇರುತ್ತಾರೋ, ಅಹ್ಮದೀಯಾ ಜಾತಿಗೆ ಸೇರುತ್ತಾರೋ, ವಹಾಬಿ ಜಾತಿಗೆ ಸೇರುತ್ತಾರೋ, ಜಿಕ್ರಿ ಜಾತಿಗೆ ಸೇರುತ್ತಾರೋ, ಸೂಫಿ ಜಾತಿಗೆ ಸೇರುತ್ತಾರೋ, ಖಾದೀಮ್ ಜಾತಿಗೆ ಸೇರುತ್ತಾರೋ, ಮಿರ್ಜಾಯಿ ಜಾತಿಗೆ ಸೇರುತ್ತಾರೋ, ಲಾಹೋರಿ ಜಾತಿಗೆ ಸೇರುತ್ತಾರೋ, ಇಬಾದಿ ಜಾತಿಗೆ ಸೇರುತ್ತಾರೋ, ದರ್ಜಿ ಜಾತಿಗೆ ಸೇರುತ್ತಾರೋ, ನಿಜಾರಿ ಜಾತಿಗೆ ಸೇರುತ್ತಾರೋ, ತುರುಕ್ಕ ಜಾತಿಗೆ ಸೇರುತ್ತಾರೋ, ಪಠಾಣ ಜಾತಿಗೆ ಸೇರುತ್ತಾರೋ, ಅಲೇವಿ ಜಾತಿಗೆ ಸೇರುತ್ತಾರೋ, ಬೋಹ್ರಾ ಜಾತಿಗೆ ಸೇರುತ್ತಾರೋ, ಜ್ಯಾದಿ ಜಾತಿಗೆ ಸೇರುತ್ತಾರೋ, ಜಿಕ್ರಿ ಜಾತಿಗೆ ಸೇರುತ್ತಾರೋ, ಮುತಾಜಿಲಿ ಜಾತಿಗೆ ಸೇರುತ್ತಾರೋ, ಸಲಾಫಿ ಜಾತಿಗೆ ಸೇರುತ್ತಾರೋ, ಅಥಾರೀ ಜಾತಿಗೆ ಸೇರುತ್ತಾರೋ, ಅಹುಲ್-ಅಥಾರ್ ಜಾತಿಗೆ ಸೇರುತ್ತಾರೋ, ಉಸುಲಿ ಜಾತಿಗೆ ಸೇರುತ್ತಾರೋ, ಅಕಬರಿ ಜಾತಿಗೆ ಸೇರುತ್ತಾರೋ, ಖಿಸಿಬಾ-ತರೀಕಾಹ್ ಜಾತಿಗೆ ಸೇರುತ್ತಾರೋ, ಇಸ್ಮಾಯಿಲ್ ಜಾತಿಗೆ ಸೇರುತ್ತಾರೋ, ನುಬಾಕ್ಶಿಯಾ ಜಾತಿಗೆ ಸೇರುತ್ತಾರೋ, ಇಬಾದಿ ಜಾತಿಗೆ ಸೇರುತ್ತಾರೋ, ಜಿಕ್ರಿ ಜಾತಿಗೆ ಸೇರುತ್ತಾರೋ, ಮೋಪ್ಳಾ ಜಾತಿಗೆ ಸೇರುತ್ತಾರೋ, ಅಶ್ರಾಫ್ ಜಾತಿಗೆ ಸೇರುತ್ತಾರೋ, ಅಜ್ಲಾಫ್ ಜಾತಿಗೆ ಸೇರುತ್ತಾರೋ, ಜಜ್ಮಾನ್ ಜಾತಿಗೆ ಸೇರುತ್ತಾರೋ, ಕಮೀನ್ ಜಾತಿಗೆ ಸೇರುತ್ತಾರೋ, ಖುರೇಶಿ ಜಾತಿಗೆ ಸೇರುತ್ತಾರೋ, ಶೇಖ್ ಅನ್ಸಾರಿ ಜಾತಿಗೆ ಸೇರುತ್ತಾರೋ, ಸಯ್ಯದ್ ಜಾತಿಗೆ ಸೇರುತ್ತಾರೋ, ಮಾಲಿಕ್ ಜಾತಿಗೆ ಸೇರುತ್ತಾರೋ……..?”

           +100000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000

 4. ನವೆಂ 18 2014

  [[SSNK ಅವರೇ, ನಿಮ್ಮ ಈ ಕಮೆಂಟು ನಿಮಗೆ ಮುಸಲ್ಮಾನರ ಬಗ್ಗೆ ಇರುವ ನಂಜನ್ನು ಮತ್ತೆ ಕಾರಿದೆ! ]]

  ಹೇತ್ಕರರೇ,

  ನೀವು ‘ಬ್ರಾಹ್ಮಣ್ಯ’, ‘ಪುರೋಹಿತಶಾಹಿ’ ಇತ್ಯಾದಿ ನಾಮಪದಗಳಿಗೆ ಮಸಿಬಳಿಯಬಹುದು, ‘ವೈದಿಕ ವೈರಸ್’ ಎಂದು ಕರೆದು ಹಿಂದುಗಳನ್ನು ಅಪಮಾನಿಸಬಹುದು, ನಿಮ್ಮನ್ನು ಪ್ರಶ್ನಿಸುವವರನ್ನೆಲ್ಲಾ ಮೋದಿ ಹಿಂಬಾಲಕರೆಂದು ಜರೆಯಬಹುದು – ಹಿಂದುಗಳ ಕುರಿತಾಗಿ ನೀವು ಇಲ್ಲಿಯವರೆಗೆ ಕಾರಿಕೊಂಡಿರುವ ನಂಜಿಗೆ ಎಣೆ ಇದೆಯೇ!?
  ಮತ್ತು ಚರ್ಚೆಗೆ ಸಂಬಂಧಿಸದ ವಿಷಯಗಳನ್ನೇ ನೀವು ಮಾತನಾಡುತ್ತಿರಬಹುದು.
  ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ ಬಂದುಬಿಟ್ಟರೆ, “ದರ್ಗಾ ಅವರ ಕುರಿತಾಗಿ ನಿಮಗೇಕೆ ಕೋಪ” ಎಂದು ಸಂಬಂಧವಿರದ ದರ್ಗಾ ಹೆಸರನ್ನು ಎಳೆದು ತರಬಹುದು.
  ಆಗಾಗ, ನಿಮ್ಮ ಕಾಮೆಂಟಿಗೆ ನೀವೇ “+೧” ಹಾಕಿಕೊಳ್ಳುತ್ತಿರಬಹುದು.
  ನಿಮ್ಮೆಲ್ಲಾ ವಾದಗಳೂ ಸೋತುಹೋದಾಗ, ನಿಮ್ಮ ಮಾತಿಗೆ ಕಾಸಿನ ಕಿಮ್ಮತ್ತೂ ಸಿಗದಿದ್ದಾಗ, “ನಿಲುಮೆ”ಯಂತಹ ವೇದಿಕೆಯನ್ನೇ ನೀವು ಜರೆದು ನಂಜು ಕಾರಬಹುದು.

  ಹೀಗಿದ್ದೂ, ನಿಮ್ಮ ಮಾತನ್ನು ನಾವು ಕೇಳಿಸಿಕೊಳ್ಳಬೇಕು ಮತ್ತು ನಿಮ್ಮ ಅಸಂಬದ್ಧ ಪ್ರಲಾಪಗಳನ್ನೆಲ್ಲಾ ತಾಳಿಕೊಳ್ಳಬೇಕು, ಅಲ್ಲವೇ!?

  ನೀವು ನಿಮ್ಮ ಬುದ್ಧಿಯನ್ನು ಹರಾಜು ಹಾಕಿಕೊಂಡಿಲ್ಲದಿದ್ದರೆ, ಸ್ವಂತದ ಬುದ್ಧಿ ಕಿಂಚಿತ್ತಾದರೂ ಇದ್ದರೆ, ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇದ್ದರೆ, ವೈಚಾರಿಕತೆ ಇದ್ದರೆ, ನನ್ನ ಪ್ರಶ್ನೆಗಳಿಗೆ ಉತ್ತರಿಸಿ.

  ಮತಾಂತರ ಹೊಂದಿದ ಹಿಂದುಗಳನ್ನು ಮುಸಲ್ಮಾನರು ಯಾವ ಜಾತಿಗೆ ಸೇರಿಸಿಕೊಳ್ಳುತ್ತಾರೆ?
  ಮತಾಂತರ ಹೊಂದಿದ ಹಿಂದುಗಳನ್ನು ಮೇಲ್ವರ್ಗದ ಜಾತಿಗೆ ಏಕೆ ಮುಸಲ್ಮಾನರು ಸೇರಿಸಿಕೊಳ್ಳುವುದಿಲ್ಲ?

  ಉತ್ತರ
  • Nagshetty Shetkar
   ನವೆಂ 18 2014

   ಪ್ರಗತಿಪರ ಧರ್ಮವೇ ಆಗಿರುವ ಇಸ್ಲಾಮಿನಲ್ಲಿ ಜಾತಿಗಳಿಗೆ ಪ್ರಾಶಸ್ತ್ಯವಿಲ್ಲ. ಜಾತಿವ್ಯವಸ್ಥೆಯನ್ನು ಇಸ್ಲಾಂ ಮಾನ್ಯ ಮಾಡುವುದಿಲ್ಲ. ಎಲ್ಲರಿಗೂ ಒಬ್ಬನೇ ದೇವ – ಅಲ್ಲಾ. ಅಲ್ಲಾನ ಕುಟುಂಬವು ಈ ವಿಶ್ವ. ಅಂದರೆ ಮಾನವರೆಲ್ಲ ಒಂದೇ ಕುಟುಂಬದವರು. ಇಸ್ಲಾಮಿನಲ್ಲಿ ಮನುಸ್ಮ್ರುತಿಯು ಇಲ್ಲ.

   ಉತ್ತರ
   • ನವೆಂ 18 2014

    ಶಿಯಾಗಳು ಸುನ್ನಿಗಳನ್ನು ಮದುವೆಯಾಗುವುದಿಲ್ಲ.
    ಸುನ್ನಿಗಳು ಶಿಯಾಗಳನ್ನು ಕೊಲ್ಲುತ್ತಾರೆ.
    ಅಹ್ಮದೀಯಾಗಳು ಪಠಾಣರು ಮದುವೆ ಮುಂತಾದ ಸಂಬಂಧ ಇಟ್ಟುಕೊಂಡಿಲ್ಲ.
    ನಾನು ನನ್ನ ಕಾಮೆಂಟಿನಲ್ಲಿ ತಿಳಿಸಿದ್ದಷ್ಟೇ ಅಲ್ಲದೇ, ಇನ್ನೂ ನೂರಾರು ಜಾತಿಗಳು, ಉಪಜಾತಿಗಳು ಭಾರತೀಯ ಮುಸಲ್ಮಾನರಲ್ಲಿದೆ.
    ಅವರಾರೂ ಸಂಬಂಧ ಬೆಳೆಸಿಕೊಳ್ಳುವುದಿಲ್ಲ.
    ಇನ್ನು ಮುಸಲ್ಮಾನರಲ್ಲೂ ಮೇಲು ಜಾತಿಗಳಿವೆ – ಇದಕ್ಕೆ ಪುರಾವೆ ಬೇಕಾದರೆ, ಭಟ್ಕಳಕ್ಕೆ ಹೋಗಿ ನೋಡಿ – ಶ್ರೀಮಂತ ಮುಸಲ್ಮಾನರು ಬಡವ ಮೀನುಗಾರ ಮುಸಲ್ಮಾನರನ್ನು ಹೇಗೆ ದೂರವಿಟ್ಟಿದ್ದಾರೆನ್ನುವುದು ತಿಳಿಯುತ್ತದೆ.

    ಶಿಯಾ-ಸುನ್ನಿಗಳ ವೈರತ್ವ, ಇರಾನ್-ಇರಾಕ್ ನಡುವೆ ದಶಕಗಳ ಕಾಲ ನಡೆದ ಯುದ್ಧ, ಒಂದು ಪಂಗಡದ ಮುಸಲ್ಮಾನರನ್ನು ಮತ್ತೊಂದು ಪಂಗಡದವರು ಕೊಲ್ಲುವುದು……ಇದಾವುದೂ ಹೊಸತಲ್ಲ.
    ಇದರಿಂದ ಜಗತ್ತಿನಲ್ಲಿ ರಕ್ತದ ಹೊಳೆಯೇ ಹರಿದಿದೆ, ಹರಿಯುತ್ತಿದೆ!

    ಉತ್ತರ
    • Nagshetty Shetkar
     ನವೆಂ 18 2014

     ಜಾತಿಗಳು ಇಸ್ಲಾಮಿನ ಮಾನ್ಯತೆ ಪಡೆದಿಲ್ಲ. ಜಾತಿ ವ್ಯವಸ್ಥೆಯು ಅ-ಇಸ್ಲಾಮಿಕ.

     ಉತ್ತರ
     • ನವೆಂ 18 2014

      ಮೊದಲು ನಿಮ್ಮ ದರ್ಗಾ ಅವರಲ್ಲಿ, “ಸುನ್ನಿಗಳು ನಿಜವಾದ ಮುಸಲ್ಮಾನರೋ, ಶಿಯಾಗಳೋ, ಇಲ್ಲವೇ ಪಠಾಣರು ನಿಜವಾದ ಮುಸಲ್ಮಾನರೋ” ಎನ್ನುವುದನ್ನು ಕೇಳಿಕೊಳ್ಳಿ. ಮತ್ತು ಸಯ್ಯದ್, ಖುರೇಶಿಗಳು ಹೇಗೆ ಮೇಲ್ವರ್ಗದವರಾದರು, ದರ್ಜಿ, ಕಮೀನ್ ಗಳು ಏಕೆ ಕೀಳು ವರ್ಗದವರೆಂದು ಮುಸಲ್ಮಾನರು ಕಾಣುತ್ತಾರೆ ಎನ್ನುವುದನ್ನೂ ಕೇಳಿ ತಿಳಿಯಿರಿ.
      ನಿಮ್ಮ ದರ್ಗಾ ಅವರಿಗೆ ಈ ವಿಷಯದ ಕುರಿತಾಗಿ ತಿಳುವಳಿಕೆ ಇಲ್ಲದಿದ್ದರೆ, ನಿಮ್ಮ ಸಮೀಪದ ಮಸೀದಿಯಲ್ಲಿರುವ ಮೌಲ್ವಿಯವರ ಬಳಿ ವಿಚಾರಿಸಿ ತಿಳಿದುಕೊಳ್ಳಿ.
      ನೀವೇನಾದರೂ ದೆಹಲಿಯ ಜುಮ್ಮಾ ಮಸೀದಿಯ ಅಹ್ಮದ್ ಬುಕಾರಿಗಳ ಬಳಿ ಹೋದರೆ, ಬುಕಾರಿ ಜಾತಿಗೆ ಸೇರಿದವರೇ ಎಲ್ಲರಿಗಿಂತ ಶುದ್ಧವಾದ ಮತ್ತು ಮೇಲ್ವರ್ಗದ ಮುಸಲ್ಮಾನರು ಎಂದು ತಿಳಿಸುತ್ತಾರೆ. ಅದಕ್ಕೇ ಅಲ್ಲವೇ, ದೆಹಲಿಯ ಜುಮ್ಮಾ ಮಸೀದಿಗೆ ಬೇರೆ ಯಾವ ಜಾತಿಯ ಮುಸಲ್ಮಾನರೂ ಮೌಲ್ವಿಗಳಾಗಲು ಸಾಧ್ಯವಿಲ್ಲ!?

      ಉತ್ತರ
      • Nagshetty Shetkar
       ನವೆಂ 18 2014

       ದೆಹಲಿಯ ಜಾಮಾ ಮಸೀದಿಗೆ ನಿಮ್ಮನ್ನೇ ಮೌಲ್ವಿಯಾಗಿ ನೇಮಕ ಮಾಡುವಂತೆ ಇಮಾಂ ಬುಖಾರಿಯವರಿಗೆ ಪತ್ರ ಬರೆದು ವಿನಂತಿಸಿಕೊಳ್ಳುತ್ತೇನೆ. ಆದರೆ ಮೊದಲು ನಿಮಗೆ ಸುನ್ನತಿ ಆಗಬೇಕಾಗಿದೆ. ನಿಮ್ಮ ನೆರೆಹೊರೆಯ ಮಸೀದಿಗೆ ಭೇಟಿ ನೀಡಿ ಸುನ್ನತಿ ಮಾಡಿಸಿಕೊಲ್ಲಿ ಆದಷ್ಟು ಬೇಗ.

       ಉತ್ತರ
       • Nagshetty Shetkar
        ನವೆಂ 19 2014
       • Naani
        ನವೆಂ 19 2014

        ಮಿ. ಶೆಟ್ಕರ್ … ಹಿಂದೂ ಗಳಲ್ಲಿನ ಜಾತಿಗಳ ಬಗ್ಗೆ ಕೇಳುವ ನಿನಗೆ ಮುಸ್ಲೀಮರಲ್ಲಿರುವ ಜಾತಿಗಳ ಬಗ್ಗೆ ಕೇಳಿದಾಗ ಉತ್ತರಿಸಲು ಯೋಗ್ಯತೆ ಇಲ್ಲದ ಮೇಲೆ ಬಾಯಿ ಮತ್ತೆಲ್ಲಾ ರಂದ್ರಗಳನ್ನು ಮುಚ್ಕೊಂಡು ಕೂರು!! ಹೀಗೆ ಅಂತರ್ಜಾಲ ತಾಣಗಳಲ್ಲಿ ಲೂಸು ಲೂಸಾಗಿ ಬಾಯಿಬಂದಂಗೆ ಯಾಕೆ ಬಡಬಡಿಸ್ತಿದ್ದೀಯಾ? ಹೀಗೆ ಕಂಡಕಂಡವರಿಗೆಲ್ಲಾ ಸುನ್ನತಿ ಮಾಡಿಸಿ ಮುಸ್ಲೀಮರಾಗಿ ಎನ್ನುವ ನಿನ್ನ ಈ ನಡವಳಿಕೆಯೇ ಶರಣರ/ವಚನಕಾರರ ಹೆಸರುಗಳನ್ನು ಹೈಜಾಕ್ ಮಾಡ್ಕೊಂಡು ನೀನು/ದರ್ಗಾ ಹೇಗೆ ಇಡೀ ಲಿಂಗಾಯತರನ್ನು ಸುನ್ನತಿ ಮಾಡಿಸಿ ಮತಾಂತಿರಿಸುವ ಹುನ್ನಾರ ಮಾಡ್ತಿದ್ದೀರಿ ಎನ್ನುವುದನ್ನು ಸಾಬೀತು ಮಾಡಿಸಿದೆ!! ನೀ ಶರಣಾನಾಗಿದ್ದ ಪಕ್ಷದಲ್ಲಿ ಲಿಂಗಧೀಕ್ಷೆಗೆ ಕರೆಕೊಡ್ತಿದ್ದೆ ಎನ್ನುವುದನ್ನು ಅರ್ಥಮಾಢಿಕೊಳ್ಳಲಾಗದಷ್ಟು ದಡ್ಡರೇ ಲಿಂಗಾಯತ ಸಮುದಾಯದವರು!!!!

        ಉತ್ತರ
        • Nagshetty Shetkar
         ನವೆಂ 20 2014

         ಎಸ್ ಎಸ್ ಏನ್ ಕೆ ಅವರು ಸ್ವ ಇಚ್ಛೆಯಿಂದ ಜುಮ್ಮಾ ಮಸೀದಿಯ ಮೌಲ್ವಿಯಾಗಬಯಸಿದ್ದಾರೆ. ಮೌಲ್ವಿಯಾಗುವುದಕ್ಕೆ ಪೂರ್ವಭಾವಿಯಾಗಿ ಸುನ್ನತಿ ಮಾಡಿಸಿಕೊಳ್ಳಬೇಡವೇ?

         ಉತ್ತರ
        • Nagshetty Shetkar
         ನವೆಂ 20 2014

         “ನೀನು/ದರ್ಗಾ ಹೇಗೆ ಇಡೀ ಲಿಂಗಾಯತರನ್ನು ಸುನ್ನತಿ ಮಾಡಿಸಿ ಮತಾಂತಿರಿಸುವ ಹುನ್ನಾರ ಮಾಡ್ತಿದ್ದೀರಿ”

         ಲಿಂಗಾಯತರು ಸುನ್ನತಿ ಮಾಡಿಸಿಕೊಳ್ಳತಕ್ಕದ್ದು ಅಂತ ದರ್ಗಾ ಸರ್ ಎಲ್ಲಿ ಹೇಳಿದ್ದಾರೆ? ಅನಗತ್ಯವಾಗಿ ದರ್ಗಾ ಸರ್ ಅವರನ್ನೇಕೆ ಜುಮ್ಮಾ ಮಸೀದಿ ಮೌಲ್ವಿ ವಿಷಯದ ಮೇಲಿನ ಚರ್ಚೆಗೆ ಎಳೆಯುತ್ತಿದ್ದೀರಿ ನೀವುಗಳು?

         ಉತ್ತರ
         • Naani
          ನವೆಂ 20 2014

          “ಹೀಗೆ ಕಂಡಕಂಡವರಿಗೆಲ್ಲಾ ಸುನ್ನತಿ ಮಾಡಿಸಿ ಮುಸ್ಲೀಮರಾಗಿ ಎನ್ನುವ ನಿನ್ನ ಈ ನಡವಳಿಕೆಯೇ ಶರಣರ/ವಚನಕಾರರ ಹೆಸರುಗಳನ್ನು ಹೈಜಾಕ್ ಮಾಡ್ಕೊಂಡು ನೀನು/ದರ್ಗಾ ಹೇಗೆ ಇಡೀ ಲಿಂಗಾಯತರನ್ನು ಸುನ್ನತಿ ಮಾಡಿಸಿ ಮತಾಂತಿರಿಸುವ ಹುನ್ನಾರ ಮಾಡ್ತಿದ್ದೀರಿ ಎನ್ನುವುದನ್ನು ಸಾಬೀತು ಮಾಡಿಸಿದೆ!! ನೀ ಶರಣಾನಾಗಿದ್ದ ಪಕ್ಷದಲ್ಲಿ ಲಿಂಗಧೀಕ್ಷೆಗೆ ಕರೆಕೊಡ್ತಿದ್ದೆ ಎನ್ನುವುದನ್ನು ಅರ್ಥಮಾಢಿಕೊಳ್ಳಲಾಗದಷ್ಟು ದಡ್ಡರೇ ಲಿಂಗಾಯತ ಸಮುದಾಯದವರು!!!!”

          ಉತ್ತರ
   • shripad
    ನವೆಂ 18 2014

    ಹೌದು ಹೌದು ಹೌದು. ಇಸ್ಲಾಂ ಪ್ರಗತಿಪರ ಧರ್ಮ! ಶಿಯಾ ಸುನ್ನಿಗಳು, ವಹಾಬಿ ಪಠಾಣರು ಹೊಡೆದಾಡುವುದು ಜಾತಿಗಾಗಿ ಅಲ್ಲ, ಮೇಲಾಟಕ್ಕಾಗಿ ಅಷ್ಟೇ. ಭಯೋತ್ಪಾದನೆ ನಡೆಸುವುದು ಎಲ್ಲರೂ ಪ್ರಗತಿಪರ ಧರ್ಮವನ್ನೇ ಅನುಸರಿಸಲಿ, ಇದನ್ನು ಅನುಸರಿಸದವರು ಪ್ರಗತಿಪರರಲ್ಲ, ಅವರ ನಾಶ ಅನಿವಾರ್ಯ ಎಂಬ ಕಾರಣಕ್ಕೆ. ಇನ್ನು ಜಿಹಾದ್ ಮಾಡುವುದು ಪ್ರಗತಿಪರತೆಯ ದ್ಯೋತಕ. ಸಾಹೇಬರು ಹೇಳುವ ದರ್ಗಾದ್ವೈತ, ಅಲ್ಲಾದ್ವೈತಗಳಲ್ಲಿ ಅಥವಾ ಬಸವಾದ್ವೈತಗಳಲ್ಲಿ ಎಲ್ಲರೂ ಒಂದೇ. ಈ ಪ್ರಗತಿಪರತೆಯ ಪರವಿಲ್ಲದವರು ಮಾತ್ರ ಬೇರೆ.

    ಉತ್ತರ
    • Nagshetty Shetkar
     ನವೆಂ 18 2014

     ಮುಸಲ್ಮಾನರಲ್ಲಿ ಪಂಗಡಗಳು ಕಿತ್ತಾಟವಾಡುತ್ತಿವೆ ನಿಜ. ಆದರೆ ಸಹೋದರರ ನಡುವೆ ದ್ವೇಷದ ಬೆಂಕಿ ಬಿಟ್ಟಿದ್ದು ಅಮೇರಿಕಾ ಹಾಗೂ ಅದರ ಕೈಗೊಂಬೆ ಆಗಿರುವ ಯೂರೋಪ್. ಬಂಡವಾಳಶಾಹಿಗಳಿಗೆ ಮಧ್ಯಪ್ರಾಚ್ಯ ದೇಶಗಳ ತೈಲ ಸಂಪತ್ತು ಬೇಕಾಗಿದೆ. ಆದುದರಿಂದ ಅವರು ಮುಸಲ್ಮಾನರ ನಡುವೆ ಬಿರುಕು ಉಂಟು ಮಾಡಿ ತಮ್ಮ ಸ್ವಾರ್ಥ ಸಾಧನೆ ಮಾಡುತ್ತಿದ್ದಾರೆ. ಇಸ್ರೇಲ್ ಕೂಡ ಇದರಲ್ಲಿ ಭಾಗಿ ಆಗಿದೆ.

     ಉತ್ತರ
     • shripad
      ನವೆಂ 18 2014

      ಮಹಾನ್ ಪ್ರಗತಿಪರರಾದ ನಿಮ್ಮ ತುರುಕರಿಗೆ ಇದು ಅರ್ಥವಾಗಲಿಲ್ಲವೇ ಸಾಹೇಬ್ರೇ? ನಿಮ್ಮ ಡಬ್ಬಾ ವಾದ ಯಾರಿಗೆ ತಿಳಿಯುವುದಿಲ್ಲ ಹೇಳಿ?

      ಉತ್ತರ
 5. ನವೆಂ 19 2014

  [[ಮೊದಲು ನಿಮಗೆ ಸುನ್ನತಿ ಆಗಬೇಕಾಗಿದೆ.]]
  [[ನಿಮ್ಮ ನೆರೆಹೊರೆಯ ಮಸೀದಿಗೆ ಭೇಟಿ ನೀಡಿ ಸುನ್ನತಿ ಮಾಡಿಸಿಕೊಲ್ಲಿ ಆದಷ್ಟು ಬೇಗ.]]
  ಮುಸಲ್ಮಾನರೇ ಏಕೆ ಮೌಲ್ವಿಗಳಾಗಬೇಕು?
  ಬೇರೆಯವರು ಏಕೆ ಮೌಲ್ವಿಗಳಾಗಬಾರದು?
  ಮುಸಲ್ಮಾನರು, ಮುಸಲ್ಮಾನರಲ್ಲದವರು, ಸುನ್ನತಿ ಮಾಡಿಸಿಕೊಂಡವರು, ಸನ್ನತಿ ಮಾಡಿಸಿಕೊಳ್ಳದವರು ಎಂದು ಮನುಷ್ಯರಲ್ಲಿ ಭೇಧಭಾವ ಮಾಡುವ ಕೀಳು ಬುದ್ಧಿ ಏಕೆ?

  ನಾನು ಸುನ್ನತಿ ಮಾಡಿಸಿಕಂಡು ಜುಮ್ಮಾ ಮಸೀದಿಗೆ ಅರ್ಜಿ ಹಾಕುವುದಿರಲಿ, ಮುಸಲ್ಮಾನರೇ ಆಗಿರುವ ನೀವು ಅಥವಾ ನಿಮ್ಮ ಗುರು ದರ್ಗಾ ಅವರೂ ಸಹ ಜುಮ್ಮಾ ಮಸೀದಿಗೆ ಮೌಲ್ವಿಯಾಗುವ ಕನಸು ಕಾಣಲೂ ಸಾಧ್ಯವಿಲ್ಲ. ಏಕೆಂದರೆ, ನೀವು ಬುಕಾರಿ ಜಾತಿಗೆ ಸೇರಿಲ್ಲವಲ್ಲ!!

  ಉತ್ತರ
 6. ನವೆಂ 19 2014

  [[ಅವರು ಮುಸಲ್ಮಾನರ ನಡುವೆ ಬಿರುಕು ಉಂಟು ಮಾಡಿ ತಮ್ಮ ಸ್ವಾರ್ಥ ಸಾಧನೆ ಮಾಡುತ್ತಿದ್ದಾರೆ. ಇಸ್ರೇಲ್ ಕೂಡ ಇದರಲ್ಲಿ ಭಾಗಿ ಆಗಿದೆ.]]

  ಹೌದೇ!? ಅಯ್ಯೋ ಪಾಪ, ಮುಸಲ್ಮಾನರು ಅದೆಷ್ಟು ಮುಗ್ದ ಸ್ವಭಾವದವರು!?

  ಘಜನಿ, ಘೋರಿಗಳು, ತುರುಕ್ಕರು, ಖಿಲ್ಜಿಗಳು ನಮ್ಮ ದೇಶದ ಮೇಲೆ ಧಾಳಿ ಮಾಡಿ, ಲಕ್ಷಾಂತರ ಜನರನ್ನು ಕೊಂದದ್ದೂ ಅಮೆರಿಕದ ಸ್ವಾರ್ಥಕ್ಕಾಗಿಯೇ ಇರಬೇಕಲ್ಲವೇ!?
  ಬಾಬರ್ ಅಯೋಧ್ಯೆಯ ರಾಮಮಂದಿರ ಧ್ವಂಸ ಮಾಡಿಸಿದ್ದು, ಔರಂಗಜೇಬನು ಸೋಮನಾಥ, ಕಾಶಿ, ಮುಂತಾದ ಸುಪ್ರಸಿದ್ಧ ದೇವಸ್ಥಾನಗಳನ್ನು ಕೆಡವಿಸಿ ಮಸೀದಿ ಕಟ್ಟಿಸಿದ್ದೂ ಯೂರೋಪಿನ ಮೋಸದಿಂದಲೇ ಇರಬೇಕಲ್ಲವೇ!?
  ಹೈದರಾಲಿ, ಟಿಪ್ಪು ಸುಲ್ತಾನರು ಕೊಡಗಿನಲ್ಲಿ, ಮಲಬಾರಿನಲ್ಲಿ ಹಿಂದುಗಳ ಮಾರಣ ಹೋಮ ಮಾಡಿದ್ದೂ, ಬ್ರಿಟಿಷರ ಮೇಲಿನ ಕೋಪಕ್ಕೇ ಇರಬೇಕಲ್ಲವೇ!?
  ಇವರುಗಳು ಮತದ ಹೆಸರಿನಲ್ಲಿ, ಮತಾಂತರಗೊಳ್ಳದವರನ್ನು ಕೊಲ್ಲಿಸಿದ ಸಂಖ್ಯೆಯನ್ನು ಗಮನಿಸಿದರೆ, ಹಿಟ್ಲರನು ನಡೆಸಿದ ಹಿಂಸಾಚಾರವೂ ಬಹಳ ಸಣ್ಣದಾಗಿ ಬಿಡುತ್ತದೆ!!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments