ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 18, 2014

35

ಆಳ್ವಾಸ್ ’ನುಡಿಸಿರಿ’ ಮತ್ತು ಪ್ರಗತಿಪರರ ’ಕಿರಿಕಿರಿ’

‍ನಿಲುಮೆ ಮೂಲಕ

– ಹರಿಶ್ಚಂದ್ರ ಶೆಟ್ಟಿ

Alvas Nudisiri1ಮೋಹನ ಆಳ್ವರ ನಾಡು ನುಡಿಯ ಕಂಪಿನ ಕನ್ನಡ ನುಡಿಸಿರಿ ಅದ್ದೂರಿಯ ಮುಕ್ತಾಯ ಕಂಡಿದೆ.ಒಬ್ಬ ವ್ಯಕ್ತಿ ತನ್ನ ಇಚ್ಛಾಶಕ್ತಿಯಿಂದ ಇಂತಹದೊಂದು ಕಾರ್ಯ ನಡೆಸುವುದು ಸಾಧ್ಯವೇ ಎನ್ನುವ ಸಾರ್ವಜನಿಕರ ಆಶ್ಚರ್ಯದ ನಡುವೆ ಕೆಲವು ಹುಳುಕಿನ ಮನಸ್ಸುಗಳು ತಮ್ಮ ವಿತಂಡ ವಾದವನ್ನು ಆಳ್ವರತ್ತ ಹರಿಸಿ ಬಿಟ್ಟಿವೆ.ಕಳೆದ ವರ್ಷ ಮೋಹನ ಆಳ್ವರಿಂದ ಸನ್ಮಾನ ಮಾಡಿಸಿಕೊಂಡು,ಶಾಲು ಹೊದಿಸಿಕೊಂಡು,ಒಟ್ಟಿಗೆ ನೋಟಿನ ದಪ್ಪ ಕಟ್ಟನ್ನು ಕಿಸೆಗೇರಿಸಿಕೊಂಡು ಹೋದ ಸಾರಸ್ವತ ಲೋಕದ ಮಹಾಶಯರೊಬ್ಬರು ನಂತರ ತಮ್ಮ ಅಸಲಿ ಬುದ್ಧಿಯ ” ಜಾತಿ” ವಾದವನ್ನು ಸಾಬೀತು ಪಡಿಸಿದ್ದರು…ಅಂತಹ ಸಾಹಿತಿಗೆ,” ಓತಿಕ್ಯಾತನಿಗೆ ಬೇಲಿ ಸಾಕ್ಷಿ ” ಎನ್ನುವಂತೆ,ಕಳೆದ ಹಲವಾರು ವರ್ಷಗಳಿಂದ ನುಡಿಸಿರಿಯ ಹೆಸರಿನಲ್ಲಿ ಕುತ್ತಿಗೆ ಮಟ್ಟ ತಿಂದು ತೇಗಿದ ಬುದ್ಧಿಜೀವಿಗಳು ಸಹಕಾರ ವಾಣಿಯನ್ನು ಒದಗಿಸಿದ್ದವು.ಈ ಸಲವೂ ಇವರುಗಳಿಗೆ ಏನೋ ಒಡಕು ಕಂಡಿದೆಯಂತೆ.ಆಳ್ವರ ಕನ್ನಡ ಮನಸ್ಸು ಪ್ರಿಯವಾಗುವ ಬದಲು ,ಅವುಗಳಿಗೆ ಎಲ್ಲೋ ಬಿದ್ದಿದ್ದ ಕೊಳಚೆ ಆಪ್ಯಾಯಮಾನವಾಗಿ ಕಂಡಿದೆ.ಜನಪದ ನೃತ್ಯಗಳೂ ಜಾತಿ ಪದ್ಧತಿಯ ಓಣಿಯಲ್ಲಿಯೇ ಸಾಗಬೇಕೆಂಬ ಇವುಗಳು ಮಾತ್ರ ಜಾತಿ ಪದ್ದತಿ ನಿವಾರಣೆಗೆ ತಾವೇನು ಘನ ಕಾರ್ಯ ಮಾಡಿದ್ದೇವೆ ಎಂದು ಹೇಳುವುದಿಲ್ಲ.ಇವರುಗಳ ಕೆಲಸ ಏನಿದ್ದರೂ ಬರವಣಿಗೆ ಮೂಲಕ ಘರ್ಷಣೆಯ ಕಿಡಿ ಹೊತ್ತಿಸುವುದು ಮತ್ತು ಆ ಮೂಲಕ ಉದರ ಪೋಷಣೆ ಮಾಡಿಕೊಳ್ಳುವುದು….

ಕಳೆದ 11 ವರ್ಷಗಳಿಂದ ರಾಜ್ಯ ಸರಕಾರ ಮಾಡಲು ಸಾಧ್ಯವಿಲ್ಲದ ಕೆಲಸವೊಂದನ್ನು ಕೇವಲ ಆಳ್ವರೊಬ್ಬರೇ ಮಾಡಿ ತೋರಿಸುತ್ತಿದ್ದಾರೆ.ಪ್ರತಿ ವರ್ಷವೂ ಕನ್ನಡ ಸಮ್ಮೇಳನ ನಡೆಸಿ, ಅದನ್ನು ಅವ್ಯವಸ್ಥಿತವಾಗಿ ಸಂಘಟಿಸಿ ಸಾರ್ವಜನಿಕರ ಹಣ ಪೋಲು ಮಾಡುವ ಸರಕಾರಿ ಅಧಿಕಾರಿಗಳು ಒಮ್ಮೆ ಆಳ್ವರ ನುಡಿಸಿರಿಯ ಅಚ್ಚುಕಟ್ಟುತನವನ್ನು ನೋಡಿ ಕಲಿಯಬೇಕು.ಏಕ ಕಾಲಕ್ಕೆ ಐದಾರು ಕಡೆ ವೇದಿಕೆ ನಿರ್ಮಿಸಿ ನಾನಾ ರೀತಿಯ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಎಲ್ಲಿಯೂ ಆಳ್ವರು ಕಾಣಿಸುವುದಿಲ್ಲ.ಕಾರ್ಯಕ್ರಮ ಕ್ಲಪ್ತ ಸಮಯಕ್ಕೆ ಆರಂಭಗೊಂಡು ನಿಗದಿತ ವೇಳೆಯಲ್ಲಿ ಮುಕ್ತಾಯಗೊಳ್ಳುತ್ತದೆ.ಸಮಯದ ಶಿಸ್ತು ಪಾಲನೆಯ ವಿಚಾರದಲ್ಲಿ ಅವರು ಯಾವುದೇ ವಂಧಿ ಮಾಗಧ ದೊರೆಗಳಿಗೆ ಕಾಯುವುದಿಲ್ಲ. ಅಲ್ಲಿ ಯಾವುದೇ ಹಿಂಬಾಲಕ ವರ್ಗದ ವಶೀಲಿ ಭಾಜಿಗೆ ಅವಕಾಶ ಇಲ್ಲ.ಯಾಂತ್ರಿಕೃತವಾಗಿ ನಿರ್ವಹಣೆ ಮಾಡುವ ಕಾರ್ಯಕ್ರಮದಂತೆ ಎಲ್ಲವೂ ಶಿಸ್ತು ಬದ್ಧ.

ಪ್ರತಿ ವರ್ಷವೂ ವೈವಿಧ್ಯಮಯ ಕಾರ್ಯಕ್ರಮ ಸಂಘಟಿಸಿದರೂ ಎಲ್ಲಿಯೂ ಸಂಸ್ಕೃತಿಯ ಅವಹೇಳನೆ ನಡೆಯುವುದಿಲ್ಲ.ಮೋಹನ ಆಳ್ವರ ನುಡಿಸಿರಿಯಲ್ಲಿ ನಡೆಯುವುದು ಕನ್ನಡ ಮನಸ್ಸಿನ ಜ್ಞಾನ ಯಜ್ಞ.ದೀನ ದಲಿತ,ಶ್ರೀಮಂತ ಎಂಬ ಭೇಧ ಭಾವವನ್ನು ಭಾಷೆ ಮತ್ತು ಕಲೆಯಲ್ಲಿ ಅವೆರೆಲ್ಲೂ ತೋರಿಸಿಲ್ಲ.ಬುಡಬುಡಿಕೆಯವರು,ಸುಡುಗಾಡು ಸಿದ್ಧರು,ಮಲೆಕುಡಿಯರು,ಹಾಲಕ್ಕಿಗಳು,ಹರಿಜನ ಗಿರಿಜನ ಆದಿಯಾಗಿ ಎಲ್ಲ ವರ್ಗಗಳಲ್ಲಿರುವ ಸಾಂಸ್ಕೃತಿಕವಾಗಿ ಮತ್ತು ಜಾನಪದೀಯವಾಗಿ ಒಳ್ಳೆಯದೆಂದು ಕಂಡ ಎಲ್ಲವನ್ನೂ ತಮ್ಮ ನುಡಿಸಿರಿಯಲ್ಲಿ ಆಳ್ವರು ಅಳವಡಿಸಿಕೊಂಡರು.
ಅವರ ಕನ್ನಡ ಸಮ್ಮೇಳನದಲ್ಲಿ ಬಲಪಂಥೀಯರು,ಎಡಪಂಥೀಯರು,ಬಂಡಾಯ ಸಾಹಿತಿಗಳು ಮತ್ತು ಬುದ್ಧಿಜೀವಿ ಸಾರಸ್ವತರ ಆದಿಯಾಗಿ ಎಲ್ಲರೂ ಒಮ್ಮೊಮ್ಮೆ ಅಧ್ಯಕ್ಷರಾಗಿ ಮೆರೆದವರೇ.ಮೂರು ದಿನದ ಉತ್ಸವಕ್ಕೆ ಬರುವ ಅಷ್ಟೂ ಜನಸಾಗರಕ್ಕೆ ಹೊಟ್ಟೆ ತುಂಬಾ ಅತ್ಯುತ್ತಮವಾದ ಊಟ ಉಪಚಾರ ನೀಡಿ ಸತ್ಕರಿಸುವ ಆಳ್ವರು ಸಹಾಯಕ್ಕಾಗಿ ಯಾರಲ್ಲೂ ಕೈ ಚಾಚಿದವರಲ್ಲ.ತುಳು ಭಾಷಿಗರ ಕನ್ನಡವನ್ನು ಅವಹೇಳನಕಾರಿಯಾಗಿ ಮತ್ತು ಅಪಹಾಸ್ಯವಾಗಿ ಕಂಡ ಇನ್ನಿತರ ಕನ್ನಡಿಗರು ನಿಬ್ಬೆರಗಾಗುವ ಮಟ್ಟಿಗೆ ಕನ್ನಡ ಬೆಳೆಸಿದ ಕೀರ್ತಿ ಮೋಹನ ಆಳ್ವರದ್ದು.ಇಂದು ರಂಗ ಸಜ್ಜಿಕೆಗೆ ಮತ್ತು ಪ್ರಾದೇಶಿಕ ಸಂಸ್ಕೃತಿಯನ್ನು ಮೇಳೈಸಿಕೊಂಡ ವೇದಿಕೆ ನಿರ್ಮಾಣಕ್ಕೆ ದೇಶದಲ್ಲೇ ಒಂದು ಹೊಸ ಆಯಾಮ ನೀಡಿದ ಶ್ರೇಷ್ಟತೆಯ ಹೆಸರೂ ಇವರಿಗೆ ಸಲ್ಲಬೇಕು…

‘ಆಳ್ವಾಸ್ ವಿರಾಸತ್’ ಎಂಬ ಅವರ ಕಾರ್ಯಕ್ರಮ ಮೂಡಬಿದರೆಯಂತ ಊರಿನಲ್ಲಿ ದೇಶದ ಎಲ್ಲಾ ಅತ್ಯುತ್ತಮ ಕಲಾವಿದರನ್ನು ಕರೆಸಿ ಕಲೆಯ ರಸದೌತಣವನ್ನು ಜನತೆಗೆ ನೀಡಿದೆ.ಇಂದು ಕರಾವಳಿ ಕಡೆಯ ಸಾಮಾನ್ಯ ಜನರು, ಕೊನ್ನುಕುಡಿ ವೈದ್ಯನಾಥನ್,ಯೇಸುದಾಸ್,ಜ಼ಾಕಿರ್ ಹುಸ್ಸೈನ್, ಅಮ್ಜದ್ ಆಲಿ ಖಾನ್, ಬಾಲ ಮುರಳಿ ಕೃಷ್ಣನ್ ,ಎಸ್ ರಮಣಿ ,ಪ್ರವೀಣ್ ಗೋಡ್ಕಿಂಡಿ ಮುಂತಾದ ಕಲಾವಿದರ ಕಾರ್ಯಕ್ರಮಗಳನ್ನು ಅಸ್ವಾದಿಸಿದ್ದರೆ ಅದು ಆಳ್ವರ ಕಲಾ ಪ್ರೇಮದ ನಿಸ್ವಾರ್ಥ ಕಾರಣದಿಂದ…

ಎಡಬಿಡಂಗಿ ಬುದ್ಧಿಜೀವಿಗಳ ಈ ರೀತಿಯ ಚೀರಾಟ,ಆಳ್ವರ ಕನ್ನಡ ಪ್ರೇಮಕ್ಕೆ ಮತ್ತು ಸಾಂಸ್ಕೃತಿಕ ಕಲಾ ಪ್ರೇಮಕ್ಕೆ ಯಾವ ತೊಡಕನ್ನೂ ಮಾಡುವುದಿಲ್ಲ.
’ಆನೆ ಕುಳಿತರೂ ಆಡಿಗಿಂತ ಎತ್ತರವ” ಎಂಬ ಮಾತಿನಂತೆ,ಮೋಹನ ಆಳ್ವರ ಎತ್ತರವನ್ನು ಯಾರಿಗೂ ಏರಲು ಸಾಧ್ಯವಿಲ್ಲ.ಬಹುಶಃ ಆಳ್ವರಿಗೆ, ಆಳ್ವರೆ ಸಾಟಿ.ಅವರನ್ನು ಮೀರಿಸುವ ಇನ್ನೊಂದು ವ್ಯಕ್ತಿತ್ವನ್ನು ಕಲ್ಪಿಸಿಕೊಳ್ಳುವ ಮುಂಚೆ ಎಲ್ಲರೂ ಒಮ್ಮೆ ಅವರ ನುಡಿಸಿರಿಯ ಮತ್ತು ವಿರಾಸತ್ ನ ಸೊಗಸನ್ನು ನೋಡಿ ಸವಿಯಬೇಕು.ಬುದ್ಧಿಜೀವಿ ಸಾರಸ್ವತರು ಮತ್ತು ಅವರುಗಳ ಹಿಂಬಾಲಕ ಪೀಡೆಗಳು ತಮ್ಮ ಮನಸ್ಸಿನಲ್ಲಿ ಅಂಟಿ ಕುಳಿತಿರುವ ಕಪ್ಪಿನ ಕೊಳೆಯನ್ನು,ನುಡಿಸಿರಿಯ ಶುಭ್ರತೆಯ ಬಟ್ಟೆಯಲ್ಲೊಮ್ಮೆ ಒರೆಸಿ ನೋಡಿದರೆ,ಆಳ್ವರ ಅನನ್ಯತೆಯ ಬಿಳುಪು ಅವರಿಗೂ ಕಾಣಿಸಿತು.ಇಲ್ಲದಿದ್ದರೆ ಕೇವಲ ತಮ್ಮ ಹೊಟ್ಟೆ ಹೊರೆಯುವ ಉದ್ದೇಶಕ್ಕೆ ಎಲ್ಲವನ್ನೂ ವಿರೋಧಿಸುವ ಇಂತಹ ಬುದ್ಧಿ ಜೀವಿಗಳು ಕನ್ನಡ ನಾಡು ನುಡಿ ಮತ್ತು ನೆಲದ ಸಂಸ್ಕೃತಿಗೆ ಅಪಾಯ ಒಡ್ಡುವ ಭಯೋತ್ಪಾದಕರು ಎನ್ನದೇ ಬೇರೆ ದಾರಿಯಿಲ್ಲ…

ಆಳ್ವರು ನಿಜಾರ್ಥದಲ್ಲಿ “ಕರ್ನಾಟಕ ಮಾತೆಯ ತನು ಜಾತರು”…ಸಿರಿಗನ್ನಡಂ ಗೆಲ್ಗೆ…

35 ಟಿಪ್ಪಣಿಗಳು Post a comment
 1. ನವೆಂ 18 2014

  ಹಲವು ಪ್ರತಿಪಾದನೆಗಳು ಇಲ್ಲಿವೆ. ವಿರಾಸತ್ ಬಗ್ಗೆ ಮಾತಾಡಿಲ್ಲ. ನುಡಿಸಿರಿಯ ಬಗ್ಗೆ ತಕರಾರು. ಕನ್ನಡ ನುಡಿಸಿರಿಯಲ್ಲಿ ಕರ್ನಾಟಕದ ವ್ಯವಸ್ಥೆ-ಅವಸ್ಥೆಗಳ ಎಲ್ಲ ಪರಾಮರ್ಶೆ ಮಾತ್ರ ಆಗಲಿ. ನಾಲ್ಕು ಜನರ ಹೆಗಲ ಮೇಲೇರಿ ಹೋಗುವುದು ಅಂತ್ಯ ಕಾಲದಲ್ಲಾಗಲಿ. ಜಾತೀಯ ಮುಗ್ದತೆಯ ಕುಣಿತ ಪ್ರದರ್ಶನದ್ದಾಗದಿರಲಿ. ಈ ಲೇಖನದಲ್ಲಿರುವಂತಹ ಭಟ್ಟಂಗಿತನ ಇಲ್ಲದಿರಲಿ. ಊಟಕ್ಕಾಗಿ ಹೊಗಳಿಕೆ ಬಾರದಿರಲಿ. ತಿನ್ನುವುದಕ್ಕೆ ಹುಟ್ಟಿರುವಂತಹ ಪರಿಸ್ತಿತಿ ತಪ್ಪಲಿ. ಸಂಘಟನಾ ಶಕ್ತಿ ಹಣ ಹೆಣೆಯುವ ಶಕ್ತಿಯಾಗದಿರಲಿ. ಆಡಂಬರಕ್ಕೆ ಕಡಿವಾಣ ಬೀಳಲಿ. ಜಾತ್ರೆಯ ಸುಖಕ್ಕಾಗಿ ಓಲೈಸುವುದು ನಿಲ್ಲಲಿ. ಕಟ್ಟು ಕಟ್ಟು ಹಣ ಬೇರೆ ಕಡೆಯಿಂದ ಹೊಡೆದುಕೊಂಡು ಹಂಚಿದ್ದು, ಸ್ವಂತದಲ್ಲ ಎಂಬುದು ಗೊತ್ತಾಗಲಿ. ನಂರ್ಬಕೆಗಳನ್ನು ಮಾರಾಟ ಮಾಡದೇ ಗೌರವಿಸುವುದಾಗಲಿ. ದೈವ ನೇಮ ಕೋಲಗಳು ಅಂತರಂಗದಲ್ಲಿ ಅದಮ್ಯತೆಯನ್ನು ಅನನ್ಯತೆಯನ್ನು ಶಾಶ್ವತಗೊಳಿಸಲಿ. ನೆಲೆಯಾಗುವಲ್ಲಿ ನೆರಳಿರಲಿ. ವ್ಯಕ್ತಿ ವೈಭವೀಕರಣ ಕೊನೆಯಾಗಲಿ. ಆಳ್ವಾಸ್ ಎಂಬ ಆಂಗ್ಲ ಸಮೀಕರಣ ಕನ್ನಡವಾಗಲಿ. ಆಳ್ವ ಎಂಬಲ್ಲಿ ಅಹಂಕಾರ ಬರದಿರಲಿ ಎಂಬುದಷ್ಟೆ ಬಯಕೆ. ಇದೆಲ್ಲಾ ಬರಿಯ ಚರ್ಚೆಗೆ ಸೀಮಿತ. ಅನುಷ್ಠಾನಕ್ಕಲ್ಲ. ಆದರೆ ಹಾಗಾದಿರಲಿ.

  ಉತ್ತರ
  • Nagshetty Shetkar
   ನವೆಂ 18 2014

   ಬರಗೂರು ಹಾಗೂ ಸಿದ್ದಲಿಂಗಯ್ಯ ಒಳ್ಳೆಯ ಬರಹಗಾರರು ಆದರೆ ಉತ್ತಮ ವಾಗ್ಮಿಗಳಲ್ಲ. ಆದುದರಿಂದ ನುಡಿಸಿರಿಯಲ್ಲಿ ಬ್ರಾಹ್ಮಣ್ಯದ ವಿರುದ್ಧ ಪರಿಣಾಮಕಾರಿಯಾಗಿ ವಾಗ್ವಾದ ಮಾಡಲು ವಿಫಲರಾಗಿದ್ದಾರೆ. ಮುಂದಿನ ವರ್ಷವಾದರೂ ದರ್ಗಾ ಸರ್ ಅವರನ್ನು ನುಡಿಸಿರಿಯ ಮುಖ್ಯ ಸನ್ಮಾನಿತ ಅತಿಥಿಯಾಗಿ ಆಹ್ವಾನಿಸುತ್ತಾರೆ ಎಂದು ಹಾರೈಸೋಣ. ದರ್ಗಾ ಸರ್ ಅವರು ತಮ್ಮ ಪ್ರಖರ ಪಾಂಡಿತ್ಯದಿಂದಷ್ಟೇ ಅಲ್ಲ ಉತ್ತಮ ವಾಗ್ಮಿತ್ವದಿಂದಲೂ ಸಭಿಕರನ್ನು ಬ್ರಾಹ್ಮಣ್ಯದ ವಿರುದ್ಧ ಹೋರಾಡುವಂತೆ ಪ್ರೇರೇಪಿಸುತ್ತಾರೆ ಎಂಬುದು ನಿಸ್ಸಂಶಯ.

   ಉತ್ತರ
   • Nagshetty Shetkar
    ನವೆಂ 18 2014

    “ಮನುಸ್ಮೃತಿಮುಕ್ತ ಕರಾವಳಿ” ಇದು ಮುಂದಿನ ವರ್ಷದ ನುಡಿಸಿರಿಯ ಘೋಷವಾಕ್ಯವಾಗತಕ್ಕದ್ದು.

    ಉತ್ತರ
    • shripad
     ನವೆಂ 18 2014

     ಅವರಿವರು ಮಾಡುವ ಕಾರ್ಯಕ್ರಮಕ್ಕೆ ಇಲ್ಲ ಸಲ್ಲದ ಹೆಸರೇಕೆ ಸೂಚಿಸುವಿರಿ ಸಾಹೇಬ್ರೇ? ಈ ವರ್ಷದಿಂದಲೇ “ದರ್ಗಾ ನುಡಿಸಿರಿ” ಆರಂಭಿಸಿ, ತಾವೇ ಸಂಚಾಲಕರಾಗಿರತಕ್ಕದ್ದು! ವರ್ಷಕ್ಕೊಮ್ಮೆ ಏಕೆ? ನಿತ್ಯವೂ ಮನುಸ್ಮೃತಿಮುಕ್ತ ಭಾಷಣವನ್ನು ಎಲ್ಲ ಊರು ಬಾಗಿಲಲ್ಲೂ ಬಿಗಿಯುತ್ತ ನಿಲ್ಲಿ.

     ಉತ್ತರ
     • Nagshetty Shetkar
      ನವೆಂ 18 2014

      ದರ್ಗಾ ಸರ್ ಅವರ ಸರ್ವಾಧ್ಯಕ್ಷತೆಯಲ್ಲಿ “ವಚನ ಸಿರಿ” ಎಂಬ ರಾಷ್ಟ್ರ ಮಟ್ಟದ ಬಂಡಾಯ ಸಾಹಿತ್ಯ ಘೋಷ್ಟಿ ಮಾಡಬೇಕು ಎಂಬ ಆಸೆ ನನಗೆ ಇದೆ. ಆದರೆ ಅಂತಹದೊಂದು ಕನಸನ್ನು ನನಸು ಮಾಡಲು ಬೇಕಾಗುವ ಧನಸಂಪತ್ತು ನನ್ನ ಬಳಿ ಇಲ್ಲ. ನಿಲುಮೆಯ ಸಿರಿವಂತ ಮಿತ್ರರು ನನ್ನ ಬೆಂಬಲಕ್ಕೆ ನಿಂತು ಧನಸಹಾಯ ಮಾಡಿದರೆ ನನ್ನ ಕನಸು ನನಸಾಗುವ ಸಾಧ್ಯತೆ ಖಂಡಿತ ಇದೆ.

      ಉತ್ತರ
      • shripad
       ನವೆಂ 18 2014

       ನಾನಂತೂ ಇಂದೇ ಎಂಟಾಣೆ ಕಳುಹಿಸುತ್ತೇನೆ. ಅಕೌಂಟ್ ನಂಬರ್ ಕೊಡಿ!

       ಉತ್ತರ
       • Nagshetty Shetkar
        ನವೆಂ 18 2014

        ನಿಮ್ಮ ಯೋಗ್ಯತೆ ಎಂಟಾಣೆಯಷ್ಟೇ ಅಂತ ಸಾಬೀತು ಮಾಡಿದ್ದೀರಿ! ಹೇ ಹೇ!

        ಉತ್ತರ
        • shripad
         ನವೆಂ 18 2014

         ನಿಮ್ಮ ಯೋಗ್ಯತೆ ಅಷ್ಟೂ ಇಲ್ಲದೇ ಬೇಡುವುದು ಎಂಬುದು ಸಾಬೀತಾದ ಮೇಲೆ ಹೋಗ್ಲಿಬಿಡು ಅಂತ…ನಾನೇನ ಮಾಡಲಿ ಬಡವನಯ್ಯ. ಲಕ್ಷ ಲಕ್ಷ ರೂ. ಕೊಡುವವರು ಮಾತ್ರ ಯೋಗ್ಯರು ಎಂಬ ಧೋರಣೆಯ ನೀವು ಸಮಾನತೆಯ, ಬಡವ ಬಲ್ಲಿದ ಭೇದ ಮಾಡುವುದರ ವಿರುದ್ಧ ದೊಡ್ಡ ದೊಡ್ಡ ಮಾತು ಬರೆಯುವುದ ಓದಿ ಅಳುವುದೋ ನಗುವುದೋ ತಿಳಿಯುತ್ತಿಲ್ಲ. ನಿಮ್ಮಂಥ ಸೋಗಲಾಡಿ ಸೋ ಕಾಲ್ಡ್ ಪ್ರಗತಿಪರರ ದ್ವಂದ್ವ ಇದೇ. ಬಡತನವನ್ನು ಗೇಲಿ ಮಾಡ್ತಿದ್ದೀರಿ ಛೀ ನಿಮ್ಮ ಯೋಗ್ಯತೆಗೆ.

         ಉತ್ತರ
         • Nagshetty Shetkar
          ನವೆಂ 18 2014

          ಬಡತನವನ್ನು ಗೇಲಿ ಮಾಡುತ್ತಿರುವವರು ಯಾರು? ನೀವಲ್ಲವೇ! ಐವತ್ತು ಸಾವಿರ ರೂಪಾಯಿ ಕೊಡುವ ತಾಕತ್ತು ಇದ್ದರೂ ಎಂಟಾಣೆ ಮಾತ್ರ ಕೊಡಲು ಮುಂದಾಗುವ ನಿಮ್ಮ ಯೋಗ್ಯತೆ ಏನು ಅಂತ ತಮಾಷೆ ಮಾಡಿದೆ.

          ಉತ್ತರ
          • shripad
           ನವೆಂ 18 2014

           ನನಗೆ ೫೦ ಸಾವಿರ ಕೊಡುವ ತಾಕತ್ತು ಇದೆಯೋ ಇಲ್ಲವೋ ಆದರೆ ಬಸವ ತತ್ತ್ವ ಅನುಸರಿಸುತ್ತೇನೆಂದು ಬಡ್ಡಿಬಡಿಸುವ ತಾವು ನಾನು ಎಂಟಾಣೆ ಬದಲು ನಾಲ್ಕಾಣೆ ಕೊಟ್ಟರೂ ಪಡೆಯುವ ಔದಾರ್ಯ ತೋರಬೇಕು ಶರಣರೇ. ನೀವು ಭಿಕ್ಷೆ ಬೇಡಲು ನಿಂತಿದ್ದೀರಿ. ನಿಮ್ಮ ಯೋಗ್ಯತೆ ಎಂಟಾಣೆ ಹೆ ಹೆ ಎನ್ನುವ ಹಕ್ಕು ನಿಮಗಿಲ್ಲ.

      • Manohar Naik
       ನವೆಂ 25 2014

       ರಾಷ್ಟ್ರಮಟ್ಟದ ವಚನಸಿರಿಯೆಂಬ ಬಂಡಾಯ ಸಮ್ಮೇಳನವನ್ನು ನಿಮ್ಮಂತಹ ಭಂಡರು ಮತ್ತು ಭಂಡ ಸಾಹಿತಿಗಳೇ ಸೇರಿ ಮಾಡಬೇಕು. ಸರ್ಕಾರಕ್ಕೆ ಅರ್ಜಿಯನ್ನು ಹಾಕಿ, ಹೇಗೂ ಅದಕ್ಕೆ ಎಂದೆ ರಾಮಯ್ಯ ಪಣತೊಟ್ಟು ನಿಂತಿದ್ದಾರೆ, ಭಂಡ ಸಾಹಿತಿಗಳ ಒಕ್ಕೂಟ ಮಾಡಿಕೊಂಡು ಸಾಹಿತ್ಯವನ್ನ ಸಮಾಜವನ್ನು ಕುಲಗೆಡಿಸಿ ಇಡುವವರೆಗೂ ಸಮಾಧಾನವಿಲ್ಲ. ಅದರಲ್ಲೂ ನಿಮ್ಮ ರಂಜಾನ್ ಗೆ ಅಧ್ಯಕ್ಷಗಿರಿ ಸಿಕ್ಕರೆ ಮುಗೀತು ಬಿಡಿ, ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಹಾಗೆ ಆಗುತ್ತೆ..

       ಉತ್ತರ
       • Nagshetty Shetkar
        ನವೆಂ 25 2014

        ದರ್ಗಾ ಸರ್ ಅವರನ್ನು ಮಂಗ ಎಂದು ಕರೆಯುವಷ್ಟು ಸೊಕ್ಕೇ ನಿಮಗೆ? ದರ್ಗಾ ಸರ್ ಅವರು ತೆಗಳಿಕೆಗೆ ಕುಗ್ಗುವವರಲ್ಲ ಹೊಗಳಿಕೆಗೆ ಹಿಗ್ಗುವವರಲ್ಲ. ನಿರ್ಲಿಪ್ತರಾಗಿ ಕರ್ತವ್ಯಪ್ರಜ್ಞೆಯಿಂದ ತಮ್ಮ ಕೆಲಸ ಮಾಡುತ್ತಲೇ ಇರುತ್ತಾರೆ. ಕಾಯಕಯೋಗದ ಶಿಖರ ಸೂರ್ಯ ಅವರು.

        ಉತ್ತರ
   • ashalatha
    ನವೆಂ 21 2014

    Well said. Your observation is correct

    ಉತ್ತರ
    • Nagshetty Shetkar
     ನವೆಂ 22 2014

     [‘ಜಾತಿವ್ಯವಸ್ಥೆಯ ಸಂಕೀರ್ಣ ರೂಪಗಳು’, ಲೇ: ಎಸ್ ಬಿ ಜೋಗುರ
     _http://www.vartamaana.com/2014/11/22/%e0%b2%9c%e0%b2%be%e0%b2%a4%e0%b2%bf%e0%b2%b5%e0%b3%8d%e0%b2%af%e0%b2%b5%e0%b2%b8%e0%b3%8d%e0%b2%a5%e0%b3%86%e0%b2%af-%e0%b2%b8%e0%b2%82%e0%b2%95%e0%b3%80%e0%b2%b0%e0%b3%8d%e0%b2%a3-%e0%b2%b0%e0%b3%82/]
     “ಜಾತಿ ಮತ್ತು ಅಸ್ಪೃಶ್ಯತೆಯನ್ನು ಅಧ್ಯಯನ ಮಾಡುವವರು ಅತಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳನ್ನು ಹೆಚ್ಚೆಚ್ಚು ಗಮನಿಸಬೇಕಾಗುತ್ತದೆ. ಯಾಕೆಂದರೆ ನಗರ ಪ್ರದೇಶದ ಹೊರ ಬದುಕನ್ನು ಗಮನಿಸಿ, ಈಗ ಜಾತಿ ಪದ್ಧತಿ ಅಷ್ಟಾಗಿ ಇಲ್ಲ ಬದಲಾಗಿದೆ ಎನ್ನುವ ಶರಾ ಎಳೆಯುವ ಅಪಾಯಗಳಿವೆ. ನಗರ ಬದುಕಿನ ಸಂಕೀರ್ಣತೆ ಜಾತಿಯ ಉಪಸ್ಥಿತಿಯನ್ನು ವ್ಯವಹಾರಿಕವಾದ ಕಾರಣಗಳಿಗಾಗಿ ನಗಣ್ಯವಾಗಿಸಿಕೊಂಡಿದೆ.”

     ಉತ್ತರ
  • shripad
   ನವೆಂ 18 2014

   ಮಾನ್ಯ ಉದಯ ಅವರೇ, ತಮ್ಮ ಆಶಯಗಳೆಲ್ಲ ಸರ್ಕಾರಿ ಪ್ರಾಯೋಜಿತ ಸಾಹಿತ್ಯ ಸಮ್ಮೇಳನಗಳಲ್ಲಿ ಇರುವಂತೆ ಮಾಡುವ ಕಾರಣದಿಂದಲೇ ಅವು ಅಷ್ಟು ಅದ್ಭುತವಾಗಿರುತ್ತವೆ!

   ಉತ್ತರ
  • naani
   ನವೆಂ 20 2014

   ವರ್ತಮಾನ ಬ್ಲಾಗಿನಲ್ಲಿ ಪ್ರಕಟವಾದ ಆಳ್ವಾರ ನುಡಿಸಿರಿಯ ಕುರಿತ ಲೇಖನವೊಂದಕ್ಕೆ ಒಂದು ಪ್ರತಿಕ್ರಿಯೆ ಬಹಳ ಚನ್ನಾಗಿ ಬಂದಿದೆ. ಕಾರಣ ಇಲ್ಲಿ ಹಾಕಿದ್ದೇನೆ.
   ಅನಿತಾ says:
   November 17, 2014 at 9:28 pm
   ನಾನು 2004 ರ ನುಡಿಸಿರಿಯಲ್ಲಿ ಭಾಗವಹಿಸಿ ಕೆಲವು ಭಾಷಣ ಕೇಳಿದ್ದೇನೆ. ನಟರಾಜ ಹುಳಿಯಾರ್, ಪುಂಡಿಕಾಯಿ ಗಣಪಯ್ಯ, ಸಿ. ಎನ್. ರಾಮಚಂದ್ರನ್, ವೈ ಎಸ್ ವಿ ದತ್ತ ಮೊದಲಾದ ಅನೇಕರು ಬಂಡವಾಳಶಾಹಿ -ಕೋಮುವಾದ-ಜಾಗತೀಕರಣದ ಆತಂಕಗಳ ಬಗ್ಗೆ ಖಾರವಾಗಿ ಮಾರ್ಮಿಕವಾಗಿ ಮಾತನಾಡಿದರು. ಸಂಘಪರಿವಾರ, ಬಿ.ಜೆ.ಪಿ, ಬಂಡವಾಳಶಾಹಿ ಪರ ಯಾರೂ ಮಾತಾಡಲಿಲ್ಲ. ಇದೇ ಸಾಕ್ಷಿ ನೀವು ಬಂಡವಾಳಶಾಹಿ, ದುಷ್ಟ ಎಂದು ಚಿತ್ರಿಸುವ ಆಳ್ವರ ನುಡಿಸಿರಿ ಎಷ್ಟು ಪ್ರಜಾಪ್ರಭುತ್ವಪರ, ಪಂಥಾತೀತ ಸಹಿಷ್ಣುತೆ ಹೊಂದಿದೆ ಎಂಬುದಕ್ಕೆ. ಎಡಪಂಥೀಯ ವಿಚಾರವಾದಿಗಳ ಸಭೆಗಳಲ್ಲೂ ನಾನು ಪ್ರೇಕ್ಷಕನಾಗಿ ಭಾಗವಹಿಸಿದ್ದಿದೆ. ಅಲ್ಲಿ ಎಡವಿರೋಧ ಅಭಿಪ್ರಾಯ ಮಂಡಿಸುವವರಿಗೆ ಆಹ್ವಾನವೇ ಇರೋದಿಲ್ಲ. ಯಾರಾದರೂ ಪ್ರೇಕ್ಷಕರು ಭಿನ್ನ ವಿಚಾರ ಪ್ರಶ್ನೆ ಎತ್ತಿದರೆ ಅವನನ್ನೊಬ್ಬ ದಡ್ಡನಂತೆ ಹುಳದಂತೆ ಕಾಣಲಾಗುತ್ತದೆ. ಎಡವಿರೋಧ ವಿಚಾರಗಳು, ಅಂತಹ ಲೇಖಕರೆಲ್ಲ ಜೀವವಿರೋಧಿಗಳು ಪ್ರತಿಗಾಮಿಗಳು ಎಂದು ತೀರ್ಮಾನಿಸುವವರು ಎಡರಾಜಕಾರಣಿಗಳ ಹಿಂಸೆ, ಫ್ಯಾಸಿಸ್ಟ್ ಧೋರಣೆಗಳನ್ನಾಗಲೀ ಇಸ್ಲಾಂ ಹೆಸರಿನಲ್ಲಿ ನಡೆಯುವ ಹಿಂಸೆ, ಭಯೋತ್ಪಾದನೆಯನ್ನಾಗಲೀ ಕಂಡೂ ಕಾಣದಂತೆ ನಟಿಸುತ್ತಾರೆ. ಲೇಖಕ ಬುದ್ಧಿಜೀವಿ ವಲಯದಲ್ಲಿ ತುಂಬಿರುವ ತಮ್ಮ ತಾಳಕ್ಕೆ ತಕ್ಕಂತೆ ಮಾತಾಡದವರನ್ನು, ಬರೆಯದವರನ್ನು ದಮನಿಸುವ ಸಾಹಿತ್ಯಕ ಅಸ್ಪೃಶ್ಯತೆ ನುಡಿಸಿರಿಯಲ್ಲಿ ಇಲ್ಲ. ನುಡಿಸಿರಿಯ ಯಶಸ್ಸು ನಿಮಗೆಲ್ಲ ಹೊಟ್ಟೆಕಿಚ್ಚು ತರುತ್ತದೆ ಗೊತ್ತು. ಅಂತಹ ಸಮ್ಮೇಳನದ ಹಿಂದಿನ ಶ್ರಮ, ದುಡಿಮೆ ಬಗ್ಗೆ ಯೋಚಿಸಿ. ದುಡ್ಡಿನಿಂದ ಡುಡ್ಡಿದ್ದವರು ಎಲ್ಲವನ್ನೂ ಸುಲಭವಾಗಿ ಮಾಡಬಹುದು ಎಂದಿದ್ದರೆ ಇಂತಹ ಶಿಕ್ಷಣಸಂಸ್ಥೆಗಳನ್ನು ಕಟ್ಟಿ ಹಣಮಾಡುವ ಬೇರೆಯವರು ಕರ್ನಾಟಕದಲ್ಲಿಲ್ಲವೆ? ಅವರಿಂದ ಯಾಕೆ ಸಾಧ್ಯವಾಗುತ್ತಿಲ್ಲ? ಕರ್ನಾಟಕದ ಬಂಡವಾಳಶಾಹಿಗಳಲ್ಲಿ ಎಷ್ಟುಮಂದಿ ಕಲೆ ಸಾಹಿತ್ಯ ಭಾಷೆಗಳ ಪೋಷಕರಾಗಿದ್ದಾರೆ? ನುಡಿಸಿರಿಯ ಮುಖಾಂತರವೇ ನಟರಾಜರಂತಹ ಉಗ್ರ ಎಡಪಂಥೀಯರ ವಿಚಾರಗಳು ಕನಿಷ್ಟ ಸಾವಿರ ಹೊಸ ಮಂದಿಗಳ( ಅಲ್ಲಿ ಲಕ್ಷಮಂದಿ ನೆರೆದಿದ್ದರೂ ನಾನು ಸರಿಯಾಗಿ ಭಾಷಣ ಕೇಳಿಸಿಕೊಂಡವರು ಕನಿಷ್ಠ ಸಾವಿರಮಂದಿಯಾದರೂ ಇದ್ದಾರು ಎಂದು ಕನಿಷ್ಠಸಂಖ್ಯೆ ಹೇಳುತ್ತಿದ್ದೇನೆ)ಕಿವಿಗೆ ಬಿದ್ದವು. ಕಳೆದಬಾರಿ ಇದಕ್ಕೆ (ನುಡಿಸಿರಿಗೆ)ಪ್ರತಿಯಾಗಿ ಸಭೆನಡೆಸಿ ಬಾಡೂಟ ಹಾಕಿಸಿದರೂ ಬಂದವರು ಎಷ್ಟುಮಂದಿ? ಅವರಲ್ಲಿ ನೂರಕ್ಕೆ ತೊಂಭತ್ತುಮಂದಿಯೂ ಅಲ್ಲಿ ಹೇಳುವ ವಿಚಾರಗಳನ್ನು ಮೊದಲೇ ತಿಳಿದವರೇ ಅಲ್ಲವೆ? ನನಗೆನಿಸುತ್ತದೆ ತನ್ನನ್ನು ಜರೆಯುವವರನ್ನು ಕರೆಸಿ ಆತಿಥ್ಯ ನೀಡಿ ಅವರ ಮಾತುಗಳನ್ನು (ವಿಚಾರಗಳನ್ನ) ಜನರಿಗೆ ಕೇಳಿಸುವ ಆಳ್ವ ನಿಜಕ್ಕೂ ಗ್ರೇಟ್. ಅವರಂತಹ ಸನ್ಮನಸ್ಸು ಎಡಪಂಥೀಯರಿಗೆ ಇದ್ದರೆ ಭೈರಪ್ಪನವರನ್ನು ಅಧ್ಯಕ್ಷರನ್ನಾಗಿ ಮಾಡಿ ಒಂದು ಸಮ್ಮೇಳನ ಮಾಡಿ ಮುಕ್ತ ಚರ್ಚೆಗೆ ಅವಕಾಶನೀಡಿ ಫ್ಯಾಸಿಸ್ಟ್ ಗಳಲ್ಲ ಎಂದು ತೋರಿಸಲಿ.

   ಉತ್ತರ
 2. ನಾವಿಕ
  ನವೆಂ 18 2014

  Reblogged this on ದೂರತೀರ and commented:
  ಕನ್ನಡ ತಾಯಿಯ ಸೇವೆಯಲ್ಲಿ, ಆಳ್ವರು ಸದಾ ಮಗ್ನ.
  ಬಹುಶಃ, ಆಳ್ವರಿಗೆ ಆಳ್ವರೇ ಸಾಟಿ!

  ಉತ್ತರ
 3. simha sn
  ನವೆಂ 20 2014

  who is that darga? i am eagerly looking for his words.

  ಉತ್ತರ
  • shripad
   ನವೆಂ 20 2014

   ಅವರ ಮಾತುಗಳು ಇಷ್ಟರಲ್ಲೇ ಕಟ್ ಆಂಡ್ ಪೇಸ್ಟ್ ಆಗಿ ನಿಮ್ಮ ಬಳಿ ಬರುತ್ತವೆ! ಅವರೊಬ್ಬ ಅಸಾಮಾನ್ಯ ಅಲ್ಲಾವಾದಿ ಶರಣರು. ಅವರು ಮಹಾತ್ಮರು, ಸಮಾಜವಾದಿ, ವಿಜ್ನಾನಿ, ಪ್ರವಾದಿ, ಅಣುತಜ್ನ, ಪತ್ರಕರ್ತ, ರೈತ, ಉದ್ಯಮಿ, ಭಾಷಣಕಾರ ಇತ್ಯಾದಿ ಇತ್ಯಾದಿ ಸರ್ವವೂ ಆಗಿದ್ದಾರೆ. ನಿಮಗಿನ್ನೂ ಗೊತ್ತಿಲ್ಲವೇ? ಛೇ.

   ಉತ್ತರ
   • ರಂಜನಾ ರಾಮ್ ದುರ್ಗಾ
    ನವೆಂ 20 2014

    ನಿಮ್ಮ ವರ್ಣನೆ ಕೇಳಿದರೆ,ಆ ಮಹನೀಯರು “ಸಾಹಿತ್ಯ ಲೋಕದ ರಜನೀಕಾಂತ್” ಇರಬೇಕು ಎಂದುಕೊಳ್ಳುತ್ತೇನೆ.

    ಉತ್ತರ
    • shripad
     ನವೆಂ 21 2014

     ರಜನೀಕಾಂತ್ ಕ್ಷೇತ್ರ ಬರೀ ಸಿನಿಮಾ. ಆದರೆ ದರ್ಗಾ ಹಾಗಲ್ಲ. ಇವರು ವರ್ಲ್ಡ್ ಫೇಮಸ್!! ಇವರು ಖ್ಯಾತ ನಟರೂ ನಿರ್ದೇಶಕರೂ ಹೌದು. ಅವರು ನಟಸಾರ್ವಭೌಮರು.

     ಉತ್ತರ
   • Nagshetty Shetkar
    ನವೆಂ 20 2014

    Darga Sir is world famous for Vachana studies. He exposed fatal flaws in Balagangadhara team’s thesis on Vachanas.Read his series of articles on Avadhi.

    ಉತ್ತರ
    • ರಂಜನಾ ರಾಮ್ ದುರ್ಗಾ
     ನವೆಂ 20 2014

     ಓಹೋ,ಅಲ್ಲಿ ದಂಡಿಯಾಗಿ ಬಿದ್ದಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಓಡಿ ಹೋದವರು ಇವರೇ ಏನು? :O

     ಉತ್ತರ
     • Nagshetty Shetkar
      ನವೆಂ 22 2014

      “ಒಮ್ಮೆ ಗೆಳೆಯ ರಮಝಾನ್ ದರ್ಗಾ ಮತ್ತು ನಾನು ಯಾವುದೋ ಒಂದು ಮಹತ್ವ ಪೂರ್ಣ ವಿಷಯ ಚರ್ಚಿಸಲು ರಾಮಕೃಷ್ಣ ಹೆಗ್ಗಡೆಯವರನ್ನು ಭೇಟಿಯಾಗಿದ್ದೆವು, ಅಂದು ನಮ್ಮ ಜೊತೆಯಲ್ಲಿ ಪ್ರೊ.ಜಿ.ಕೆ. ಗೋವಿಂದರಾವ್ ಅವರೂ ಬರಬೇಕಾಗಿತ್ತು. ಆಕಸ್ಮಿಕವಾಗಿ ಅವರು ಬರಲಾಗಲಿಲ್ಲ. ಆದರೆ ಹೆಗ್ಗಡೆಯವರು ಅತ್ಯಂತ ತೀವ್ರವಾಗಿ ಬೆನ್ನು ನೋವಿನಿಂದ ನರಳುತ್ತಿದ್ದರೂ; ಸುಮಾರು ಒಂದುವರೆ ಗಂಟೆಗೂ ಮೇಲ್ಪಟ್ಟು ಮನೆಯ ಕಂಬದ ಆಶ್ರಯ ಪಡೆದು ನಿಂತೇ ನಮ್ಮಲ್ಲಿ ನಾನಾ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದರು. ”

      [‘ಪ್ರಶಸ್ತಿಯ ನೆಪದಲ್ಲಿ ಒಂದಷ್ಟು ಖಾಸಗಿ ಮಾತು’, ಲೇ: ಶೂದ್ರ ಶ್ರೀನಿವಾಸ, ಲಡಾಯಿ ಬ್ಲಾಗ್]

      ಉತ್ತರ
      • shripad
       ನವೆಂ 22 2014

       ಓಹೋ. ಅದ್ಭುತ. ಅದಕ್ಕೇನು ಮಾಡುವುದು ಈಗ? ಮಾನ್ಯ ರಾಮಕೃಷ್ಣ ಹೆಗಡೆಯವರಲ್ಲಿ ಪುರೋಹಿತಶಾಹಿ ಲಕ್ಷಣಗಳು ಆಮೇಲೆ ಕಂಡಿರಬೇಕು?

       ಉತ್ತರ
       • Nagshetty Shetkar
        ನವೆಂ 22 2014

        Darg Sir is well-respected. This is just one of many incidents.

        ಉತ್ತರ
        • Shripad
         ನವೆಂ 23 2014

         who/what is darga? Is that what we see so many and various dargs on the footpaths in any cities, towns and villages?

         ಉತ್ತರ
         • Nagshetty Shetkar
          ನವೆಂ 23 2014

          Sorry, spelling mistake. It should be “Darga Sir is well-respected.”

          ಉತ್ತರ
     • Nagshetty Shetkar
      ನವೆಂ 22 2014

      ನಿಮ್ಮ ಎಲ್ಲ ಕಠಿಣ ಪ್ರಶ್ನೆಗಳನ್ನು ಒಂದು ಓಪನ್ ಲೆಟರ್ ರೂಪದಲ್ಲಿ ದರ್ಗಾ ಸರ್ ಅವರಿಗೆ ಬರೆಯಿರಿ. ಅವರು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಯಾವುದೇ ಹಿಂಜರಿಕೆ ಇಲ್ಲದೆ ಸಮಾಧಾನಕರ ಉತ್ತರ ನೀಡುತ್ತಾರೆ. ಅನುಮಾನವೇ ಬೇಡ.

      ಉತ್ತರ
 4. Harischandra Shetty
  ನವೆಂ 22 2014

  ಜನರ ಆರ್ಥಿಕ ಬಡತನವನ್ನು ನಿವಾರಿಸಬಹುದು…ಹೇಗೂ ಸರಕಾರವೇ ಆ ಕಾರ್ಯದಲ್ಲಿ ಮಗ್ನವಾಗಿದೆ. ಅಲ್ಲದೆ ಈಗಿನ ನಮ್ಮ ದೇಶದ ಸಾಮಾಜಿಕ ವ್ಯವಸ್ಥೆ ಶ್ರಮವರಿತು ದುಡಿಯುವವನಿಗೆ ಕೈತುಂಬ ಹಣ ಗಳಿಸಲು ಅವಕಾಶ ನೀಡಿದೆ…ಆದರೆ ಬಡತನ ,ದಬ್ಬಾಳಿಕೆ,ಅಸ್ಪ್ರಶ್ಯತೆ ಮತ್ತು ಪುರೋಹಿತಶಾಹಿ ಎಂಬ ಪದ ಪ್ರಯೋಗಗಳ ಗಂಟನ್ನು ಹೊತ್ತುಕೊಂಡೇ ಹೊಟ್ಟೆ ತುಂಬಿಸಲು ಹೆಣಗಾಡುವ ಮಂದಿಯಲ್ಲಿ ಇರುವುದು ಭೌದ್ಧಿಕ ಬಡತನ….ಬಹುಶಃ ಅದನ್ನು ನಿವಾರಿಸಲು ಯಾರಿಂದಲೂ ಸಾಧ್ಯವಿಲ್ಲ…ಅವರೆಲ್ಲ ಹಾಗೆಯೇ ಇದ್ದರೆ ಚೆನ್ನ….ಅಂದ ಹಾಗೆ ರಾಮಕೃಷ್ಣಾ ಹೆಗ್ಗಡೆಯವರು ಈ ಹೊತ್ತು ಬದುಕಿದ್ದರೆ ಪುರೋಹಿತ ಶಾಹಿಯ ವಿಚಾರ ಪ್ರಹಾರಕ್ಕೆ ಸಿಲುಕಿಯೇ ಮೋಕ್ಷ ಪಡೆಯಬಹುದಿತ್ತೇನೋ….ಆಳ್ವರು ನಡೆಸುವ ನುಡಿಸಿರಿ ಕಾರ್ಯಕ್ರಮಕ್ಕೆ ಎಲ್ಲೋ ಇರುವ ದೊಣ್ಣೆ ನಾಯಕರ ನಿರ್ದೇಶನಗಳನ್ನು ಪಡೆಯುವ ಅವಶ್ಯಕತೆ ಅವರಿಗಂತೂ ಖಂಡಿತಾ ಇರಲಾರದು….ಮಾತ್ರವಲ್ಲ ಅವಕಾಶ ಸಿಕ್ಕರೆ ಎಲ್ಲರೂ ದೋಚಿಯೇ ಸಾಧಿಸುವಷ್ಟು ಬುದ್ಧಿವಂತರು ಕೂಡ….ಆದುದರಿಂದ ತಮ್ಮ ಉದ್ಧೇಶವೆ ಇನ್ನೊಬ್ಬರದೂ ಆಗಿರಬಹುದೇ ಎನ್ನುವ ಅನುಮಾನ ಸಹಜ….ಆಳ್ವರು ಯಾರನ್ನೆಲ್ಲ ದೋಚಿದ್ದಾರೆ ಎಂದು ತಿಳಿಸಿದ್ದರೆ ಪ್ರತಿಕ್ರೀಯೆ ಅರ್ಥಪೂರ್ಣವಾಗಿರುತ್ತಿತ್ತು….ಭಟ್ಟಂಗೀತನವಾದರೂ ಆದೀತು ಆದರೆ ಭಂಡತನವಲ್ಲ…..ನಾನು ಯಾವುದೇ ಜಾತಿಯಲ್ಲಿ ಹುಟ್ಟಿದ್ದರೆ ಅದು ಆಕಸ್ಮಿಕ ಮತ್ತು ವಿಧಿ ನಿಯಮಿತ…ಆದರೆ ಹುಟ್ಟಿದ ನಂತರ ನಾನೇನು ಸಾಧಿಸಿದೆ ಎನ್ನುವುದು ತಾನು ಹುಟ್ಟಿದ ಜಾತಿಗೆ ಆದರ್ಶವಾಗಿದ್ದರೆ ಅಲ್ಲೊಂದು ಇತಿಹಾಸ ಬರೆಯಲ್ಪಡುತ್ತದೆ….ಆಳ್ವರು ಏನಿದ್ದರೂ ತಾವೊಂದು ಇತಿಹಾಸ ನಿರ್ಮಾಣ ಮಾಡುವತ್ತ ಸಾಗುತ್ತಿದ್ದಾರೆ….ಪ್ರಗತಿಪರರೂ ಕೂಡ ಅದೇ ಹಾದಿಯಲ್ಲಿ ಏನಾದರೂ ರಚನಾತ್ಮಕ ವಸ್ತುವನ್ನು ಸಾಧಿಸಿ ತೋರಿಸಿದರೆ ಶ್ಲಾಘನೆ ಮಾಡುವ ಜನರು ಕೋಟ್ಯಂತರ ಮಂದಿ ಇದ್ದಾರೆ….ಆದರೆ ಬೆರಳೆಣಿಕೆಯ ಬುದ್ಧಿಜೀವಿ ವರ್ಗ ಒದರಾಟಕ್ಕೆ ಆರಂಭಿಸಿದರೆ ಅಲ್ಲೊಂದು ದುರುದ್ದೇಶ ಜಗ ಜಾಹೀರುಗೊಳ್ಳುತ್ತದೆ…..ಈಗ ಆಳ್ವರ ಬಗ್ಗೆಯೂ ಅದೇ ವರ್ಗ ಹರಿ ಹಾಯುತ್ತಿದೆ….

  ಉತ್ತರ
  • Nagshetty Shetkar
   ನವೆಂ 22 2014

   ಹರೀಶ್ಚಂದ್ರ ಅವರೇ, ನುಡಿಸಿರಿಯ ಆಳ್ವ ನಿಮ್ಮ ಜಾತಿಯವರು ಎಂಬ ಕಾರಣಕ್ಕೆ ಈ ಪರಿಯಾಗಿ ವಿಚಾರಶೂನ್ಯರಾಗಿ ಆಳ್ವ ರನ್ನೂ ನುಡಿಸಿರಿಯನ್ನೂ ಹೊಗಳಬೇಕೇ! ಛೆ!

   ಉತ್ತರ
 5. Arun.V.Bhat
  ನವೆಂ 29 2014

  Harishchandra and Mr.Alva are of same caste !!…yes..They are Human beings.! May God save the ones who speak about “CASTE”. Can any one of the so called “intellectual” and “modern thinkers” define the term “Caste” in Human beings? Please define and help save the young siblings of us from such meaningless jinx.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments