ನುಡಿಸಿರಿಯನ್ನು ವಿರೋಧಿಸುವ ನೈತಿಕತೆ ಇಂದಿನ ಸಾಹಿತಿಗಳಿಗಿದೆಯೇ?
– ಸಂತೋಷ್ ಕುಮಾರ್ ಪಿ.ಕೆ
ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವಾದ ಆಳ್ವಾಸ್ ನುಡಿಸಿರಿ 2014 ನ್ನು ಅದ್ಧೂರಿಯಾಗಿ ಮತ್ತು ಅಚ್ಚುಕಟ್ಟಾಗಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನಡೆಸಲಾಯಿತು. ಕನ್ನಡ ಭಾಷೆ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಡಾ.ಮೋಹನ್ ಆಳ್ವರ ಶ್ರಮ ಶ್ಲಾಘನೀಯವಾದುದು. ನುಡಿಸಿರಿಯ ವೈಭವವು ಆಗಮಿಸಿದ ಎಲ್ಲಾ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರೇಮಿಗಳಿಗಳಿಗೆ ಮನತಣಿಸುವಷ್ಟು ವಿಷಯ, ಮನರಂಜನೆಗಳನ್ನು ನೀಡಿರುವುದು ಸುಳ್ಳಲ್ಲ. ಅತ್ಯದ್ಭುತ ಮೆರವಣಿಗೆಯ ಮೂಲಕ ಪ್ರಾರಂಭವಾಗುವ ನುಡಿಸಿರಿಯು ಪ್ರತಿಯೊಂದು ಹಂತದಲ್ಲಿಯೂ ಸಮಯ ಮತ್ತು ಶಿಸ್ತು ಪಾಲನೆಯ ಅಣತಿಯಂತೆ ಜರುಗುತ್ತಾ ಹೋಗುತ್ತದೆ.
ಕನ್ನಡವು ಕರ್ನಾಟಕದ ವ್ಯವಹಾರಿಕ ಮತ್ತು ಮುಖ್ಯವಾಹಿನಿಯ ಭಾಷೆಯಾಗಿದ್ದರೂ ಸಹ ಇತರ ಭಾಷೆಗಳಿರುವುದನ್ನು ಕಡೆಗಣಿಸಲು ಸಾಧ್ಯವಿಲ್ಲ. ಉದಾಹರಣೆಗೆ, ತುಳು, ಕೊಂಕಣಿ, ಬ್ಯಾರಿ, ಬಂಜಾರ, ಕೊಡವ ಇನ್ನೂ ಮುಂತಾದ ಭಾಷೆಗಳು ಅಸ್ತಿತ್ವದಲ್ಲಿವೆ. ಈ ಬಾರಿಯ ನುಡಿಸಿರಿಯಲ್ಲಿ ಇಂತಹ ಪ್ರಾದೇಶಿಕ ಭಾಷೆಗಳಿಗೂ ಸಹ ಮನ್ನಣೆ ನೀಡುವ ಮೂಲಕ ಅವುಗಳಿಗೆ ಸಂಬಂಧಿಸಿದ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಸಹ ಆಯೋಜಿಲಾಗಿತ್ತು. ಪ್ರತ್ಯೇಕವಾಗಿ ಒಂದೊಂದು ದಿನವೂ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷಾ ಸಮ್ಮೇಳನಗಳೂ ಪ್ರತಿದಿನ ಸಂಜೆ ಜರುಗಿದವು. ಹಾಗೂ ಕೃಷಿ ಸಲಕರಣೆಗಳ ಮೇಳ, ಆಹಾರ ತಿಂಡಿತಿನಿಸುಗಳ ಮೇಳ ಹಾಗೂ ಪುಸ್ತಕ ಮೇಳ ಇವೆಲ್ಲವೂ ನುಡಿಸಿರಿಯ ವಿಶೇಷ ರಂಗುಗಳು.
ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ವರ್ಷಂಪ್ರತಿ ನಡೆಯುವ ಸಾಹಿತ್ಯ ಸಮ್ಮೇಳನ ಹಾಗೂ ಆಳ್ವಾಸ್ ನುಡಿಸಿರಿಯನ್ನು ಹೋಲಿಸಿದರೆ ಅಜಗಜಾಂತರ ವ್ಯತ್ಯಾಸಗಳು ಕಾಣಸಿಗುತ್ತವೆ. ನುಡಿಸಿರಿಯು ತುಂಬಾ ಅಚ್ಚುಕಟ್ಟಾದ ಮತ್ತು ಎಲ್ಲವೂ ಸರಿಯಾದ ಕ್ರಮದಲ್ಲಿ ಪೂರ್ವಸಿದ್ಧತೆಯೊಂದಿಗೆ ನಡೆಯುತ್ತದೆ. ಯಾವ ಹಂತದಲ್ಲಿಯೂ ಒಂದು ಸಣ್ಣ ತೊಂದರೆ, ಗೊಂದಲ ಎಲ್ಲಿಯೂ ಕಾಣಸಿಗುವುದಿಲ್ಲ. ಹಾಗೆ ನೋಡಿದರೆ ಈ ಕಾರ್ಯಕ್ರಮಗಳನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬುದೇ ಪ್ರೇಕ್ಷಕರಿಗೆ ತಿಳಿಯುವುದಿಲ್ಲ, ಆ ಮಟ್ಟಿಗೆ ಸಂಯೋಜಕರುಗಳು ಸದ್ದಿಲ್ಲದೆ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತಾರೆ. ಎಲ್ಲಕ್ಕಿಂತ ವಿಶೇಷ ಯಾವುದೇ ಐಡಿಯಾಲಜಿಗಳಿಗೆ ಕಟ್ಟುಬೀಳದೆ ಆಳ್ವಾಸ್ ನುಡಿಸಿರಿ ಪ್ರಾಮಾಣಿಕವಾಗಿ ಕನ್ನಡ ಸಾಹಿತ್ಯಕ್ಕೆ ಬೆಲೆ ನೀಡುತ್ತದೆ.
ಇದುವರೆಗಿನ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ವೀಕ್ಷಿಸುತ್ತ ಮತ್ತು ಅವುಗಳಲ್ಲಿ ಸಾಮಾನ್ಯನಾಗಿ ಭಾಗವಹಿಸುತ್ತಾ ಬಂದಂತಹ ನನಗೆ ಅಥವಾ ನನ್ನಂತವರಿಗೆ ನುಡಿಸಿರಿಯು ಒಂದು ಸುಂದರ ಅನುಭವವನ್ನು ನೀಡುತ್ತದೆ. ಸಾಹಿತ್ಯ ಮತ್ತು ಸಮ್ಮೇಳನಗಳನ್ನು ಯಾವುದೋ ಒಂದು ವರ್ಗದ ಸ್ವತ್ತು ಎಂಬಂತೆ ನಡೆದುಕೊಂಡ ಬಂದ ದಾರಿಗೆ ವಿಭಿನ್ನವಾಗಿ ನಿಲ್ಲುವುದು ನುಡಿಸಿರಿಯ ವೈಶಿಷ್ಟ್ಯ. ಎಡಪಂಥೀಯ ಬಲಪಂಥೀಯ ಅಥವಾ ನಡುಪಂಥೀಯ ಎಂಬ ಯಾವುದೇ ಪೂರ್ವಾಗ್ರಹವಿಲ್ಲದೆ ಕೇವಲ ಸಾಹಿತ್ಯಾಸಕ್ತಿಯಿಂದ ಮಾತ್ರ ಇಡೀ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸಾಮಾನ್ಯವಾಗಿ ಸಾಹಿತ್ಯವು ಎಡಪಂಥೀಯರಿಗೆ ಮಾತ್ರ ಮೀಸಲಾಗಿದೆಯೇನೋ ಎನ್ನುವ ಮಟ್ಟಿಗೆ ಸರ್ಕಾರವು ಅದನ್ನು ಪ್ರೋತ್ಸಾಹಿಸುತ್ತದೆ. ಬಂಡಾಯ, ನವೋದಯ, ಸಮಾಜ ಸುಧಾರಣೆಯನ್ನು ಮಾಡುತ್ತೇವೆಂದು ಭ್ರಮ ಹುಟ್ಟಿಸುವ ಸಾಹಿತ್ಯ ಬರವಣಿಗೆಗಳಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಮಣೆಯನ್ನು ಇದುವರೆಗೂ ಹಾಕಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ.
ಒಬ್ಬ ಸಾಹಿತಿಯು ಬರೆಯುವ ಸಾಹಿತ್ಯದಲ್ಲಿ ಬಲಪಂಥದ ವಾಸನೆಯೇನಾದರೂ ಬರುತ್ತಿದೆ ಎಂದರೆ, ಅಥವಾ ಇವರ ಸಮಾಜ ಸುಧಾರಣೆಯ ಭಾಗವಾಗಿ ಸಾಹಿತ್ಯ ರೂಪುಗೊಂಡಿಲ್ಲವೆಂದಾದರೆ ಅಂತಹ ಸಾಹಿತಿಗಳನ್ನು ಅಂಚಿಗೆ ತಳ್ಳುವ ಎಲ್ಲಾ ಕಾರ್ಯಕ್ರಮಗಳು ಕೃಪಾಪೋಷಿತ ಸಾಹಿತಿಗಳಿಂದ ಪ್ರಾರಂಭವಾಗುತ್ತವೆ. ಇದಕ್ಕೆ ನಿಚ್ಚಳವಾಗಿ ಎಸ್.ಎಲ್ ಭೈರಪ್ಪನವರನ್ನು ಮತ್ತು ಅವರ ಸಾಹಿತ್ಯವನ್ನು ‘ವಿಮರ್ಶಕರು’ ನಗಣ್ಯ ಮಾಡಿರುವುದು ಸೂಕ್ತ ನಿದರ್ಶನವಾಗುತ್ತದೆ. ಆದ್ದರಿಂದ ಸಾಹಿತ್ಯದ ರೂಪುರೇಷೆಯನ್ನು ಯಾರು ನಿರ್ಧರಿಸಬೇಕು ಯಾವ ವಿಷಯಗಳು ನಿರ್ಧರಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇ ಆಗುತ್ತದೆ.
ಸಾಹಿತ್ಯ ಎಂದೊಡನೆ ಎಲ್ಲರಿಗೂ ಅದೊಂದು ಸೃಜನಶೀಲತೆಯ ಸಂಕೇತ ಎಂದು ಪರಿಭಾವಿಸುತ್ತಾರೆ, ಹಾಗೂ ಬಹುತೇಕ ಸಾಹಿತಿಗಳು ಹಾಗೆಯೇ ಕರೆದುಕೊಳ್ಳುತ್ತಾರೆ. ಸೃಜನಶೀಲ ಎಂಬುದರ ಅರ್ಥ ಹಲವಾರು ಇದ್ದರೂ ಸಾಮಾನ್ಯವಾಗಿ ಒಬ್ಬಾತ ತನ್ನ ಕ್ರಿಯೇಟಿವಿಟಿಯನ್ನು ಬಳಸಿಕೊಂಡು ಸಾಹಿತ್ಯವನ್ನು ಸೃಷ್ಟಿಮಾಡುವುದೇ ಆಗಿರುತ್ತದೆ. ಆದರೆ ನಮ್ಮ ಕನ್ನಡ ಸಾಹಿತ್ಯವಲಯವನ್ನು ಅದರಲ್ಲಿಯೂ ಮುಖ್ಯವಾಹಿನಿಯಲ್ಲಿದ್ದೇವೆಂದು ಬೀಗುವ ಸಾಹಿತಿಗಳನ್ನು ನೋಡಿದರೆ ಸಾಹಿತ್ಯದ ನೈಜ ಅರ್ಥ ಸೃಜನಶೀಲತೆಯಲ್ಲವೆನೋ ಅನ್ನುವ ಮಟ್ಟಿಗೆ ಅನುಮಾನವೊಂದು ನಮ್ಮನ್ನು ಕಾಡುತ್ತದೆ. ಒಂದೋ ಪ್ರಗತಿಪರರಾಗಿರಬೇಕು ಇಲ್ಲವೆ ಸಮಾಜಸುಧಾರಣೆಯ ಹೆಸರಿನಲ್ಲಿ ಒಂದು ಸಮುದಾಯದ ವಿರುದ್ಧ ಕತ್ತಿ ಮಸೆಯುವಂತಹ ವಿಫುಲ ಸಾಹಿತ್ಯವನ್ನು ಸೃಷ್ಟಿಸಬೇಕು ಹಾಗಾದರೆ ಮಾತ್ರ ಅದು ಸಾಹಿತ್ಯ ಎಂದು ಪರಿಗಣಿಸಲ್ಪಡುತ್ತದೆ.
ಒಬ್ಬ ಸಾಹಿತಿ ತಾನು ಏನು ಬರೆಯಬೇಕೆಂದು ತನ್ನ ಆಲೋಚನೆ ಹಾಗೂ ಅನುಭವದ ಹೊರತಾಗಿ ಕೆಲವು ಸಂಗತಿಗಳು ನಿರ್ಧರಿಸುತ್ತವೆ ಎಂದರೆ ಸೃಜನಶೀಲತೆಯ ಅರ್ಥವು ಇಲ್ಲಿ ಮುಖ್ಯವಾಗುವುದೇ ಇಲ್ಲ, ಅದನ್ನು ಇನ್ನೂ ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಸ್ತುತ ಮುಖ್ಯವಾಹಿತಿ ಸಾಹಿತ್ಯಕ್ಕೂ ಸೃಜನಶೀಲತೆಗೂ ಸಂಬಂಧವೇ ಇಲ್ಲ ಅಥವಾ ಸೃಜನಶೀಲೇತರವಾಗಿಯೂ ಸಾಹಿತ್ಯ ಇರಬಹುದು ಎಂಬುದಕ್ಕೆ ಪ್ರಗತಿಪರ ಸಾಹಿತ್ಯಗಳೇ ಸಾಕ್ಷಿ. ಇದು ನಮ್ಮ ಸಾಹಿತ್ಯ ಲೋಕದ ವಿಪರ್ಯಾಸವೆಂದರೂ ತಪ್ಪಾಗಲಾರದು. ಸಾಹಿತ್ಯಕ್ಕೆ ನೀಡುವ ಅರ್ಥಕ್ಕೆ ವಿರುದ್ಧವಾಗಿ ಸಾಹಿತ್ಯ ಸೃಷ್ಟಿಯಾಗುತ್ತಿದೆ ಎಂದಾದರೆ ಅದು ವಿಪರ್ಯಾಸವಲ್ಲದೆ ಬೇರೇನೂ ಅಲ್ಲ.
ಇಂತಹ ಸಮಸ್ಯೆಗಳ ಸುಳಿಯಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ, ಸರ್ಕಾರದ ಕೃಪಾಪೋಷಿತ ಸಾಹಿತಿಗಳು ತೊಳಲಾಡುತ್ತಿರುವಾಗ, ವಿಭಿನ್ನ ನೆಲೆಯಲ್ಲಿ ನಿಂತು ಕೇವಲ ಸಾಹಿತ್ಯಕ್ಕಷ್ಟೇ ಗೌರವವನ್ನು ನೀಡುವ ಮೂಲಕ ಎಲ್ಲಾ ಪಂಥದ ಸಾಹಿತಿಗಳನ್ನು ಒಂದೆಡೆ ಕಲೆಹಾಕಿ ಚಿಂಥನ ಮಂಥನ ನಡೆಸುವ ಮೂಲಕ ಉತ್ತಮ ಸಮ್ಮೇಳನವನ್ನು ಆಯೋಜಿಸಿದ ಕೀರ್ತಿ ಡಾ.ಮೋಹನ್ ಆಳ್ವರವರಿಗೆ ಸಲ್ಲುತ್ತದೆ. ಯಾವುದೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿಯನ್ನು ವಹಿಸುವ ಸಾಹಿತಿಗಳ ಭಾಷಣವನ್ನು ಕೇಳಿದರೆ ಒಂದೇ ರಾಗವನ್ನು ಬೇರೆ ಬೇರೆ ಟ್ಯೂನ್ ನಲ್ಲಿ ಹಾಡುತ್ತಿರುತ್ತಾರೆ, ಅದೆಂದರೆ ಸರ್ಕಾರವು ಕನ್ನಡದ ರಕ್ಷಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಯೋಜನೆಗಳನ್ನು ಶಾಲೆಗಳನ್ನು ಪ್ರಾರಂಭಿಸಿಬೇಕು ಎಂಬುದಾಗಿ ಭಾಷಣ ಬಿಗಿಯುತ್ತಾರೆ. ಹಾಗಾದರೆ ಕನ್ನಡದ ಬೆಳವಣಿಗೆಗೆ (ಹಿಂದಿನ ಸಾಹಿತಿಗಳನ್ನು ಹೊರತುಪಡಿಸಿ) ಇಂದಿನ ಸಾಹಿತಿಗಳ ಕೊಡುಗೆಗಳೇನು? ಎಲ್ಲವನ್ನೂ ಸರ್ಕಾರ ಮಾಡಬೇಕೆಂದಿದ್ದರೆ, ಸಾಹಿತಿಗಳಾಗಿ ಕನ್ನಡಕ್ಕೆ ಅವರ ಬದ್ಧತೆಯೇನು ಎಂಬ ಪ್ರಶ್ನೆ ಏಳುತ್ತವೆ. ಈ ಪ್ರಶ್ನೆಗಳಿಗೆ ಸ್ವತಃ ಸಾಹಿತಿಗಳ ಬಳಿಯೂ ಉತ್ತರವಿಲ್ಲ ಎಂಬುದು ನನ್ನ ಅನಿಸಿಕೆ.
ಕನ್ನಡಕ್ಕಾಗಿ ಏನೆಲ್ಲಾ ಮಾಡಬೇಕೆಂದು ಸುಖಾಸುಮ್ಮನೆ ಬೂಸಿ ಬಿಡುವ ಸರ್ಕಾರ ಮತ್ತು ಸಾಹಿತಿಗಳ ನಿಲುವುಗಳನ್ನು ಅಕ್ಷರಶಃ ಕಾರ್ಯರೂಪಕ್ಕೆ ತರುವ ಕಾರ್ಯವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಮಾಡುತ್ತಿದೆ. ಕನ್ನಡ ಶಾಲೆಗಳನ್ನು ಸಾಹಿತ್ಯ ಸಮ್ಮೇಳನಗಳನ್ನು, ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ನಾಡು ನುಡಿಯನ್ನು ಬೆಳೆಸುವಲ್ಲಿ ಈ ಶಿಕ್ಷಣ ಸಂಸ್ಥೆಯು ಕಟಿಬದ್ಧವಾಗಿ ನಿಂತಿದೆ.
ನಮೋ ಕೃಪಾಪೋಷಿತ ಸೈಬರ್ ಮಂಡಳಿಯಿಂದ ಸಾಹಿತಿಗಳ ದಮನ ಕಾರ್ಯ ಶುರುವಾಗಿದೆ. ಒಟ್ಟಿನಲ್ಲಿ ಪ್ರಗತಿಪರ ಧವನಿಗಳನ್ನು ಹತ್ತಿಕ್ಕಿ ಮನುಸಂಸ್ಕ್ರುತಿಯನ್ನು ಇನ್ನಷ್ಟು ಭದ್ರಪಡಿಸುವುದೇ ನಿಮ್ಮಗಳ ಉದ್ದೇಶವಾಗಿದೆ.
“ಮನು ಸಂಸ್ಕೃತಿ” ಅಂದ್ರೇನು ಸರ್?
ರಾಕೇಶ್ ಅವರೇ, ಮನು ಸಂಸ್ಕೃತಿ ಅಂದರೆ ಏನು ಅಂತ ಎಷ್ಟು ಮುಗ್ಧವಾಗಿ ಕೇಳಿದಿರಿ! ಭೇಷ್! ನೀನಾಸಂನಲ್ಲಿ ನಾಟಕದ ತಾಲೀಮು ನಡೆಸಿರಬೇಕು ನೀವು. 😛
ಮನುಸಂಸ್ಕ್ರುತಿಯ ಉದಾಹರಣೆ ಇಲ್ಲಿದೆ ನೋಡಿ: _http://www.vartamaana.com/wp-content/uploads/2014/11/caste-system2.jpg
ಶೆಟ್ಕರ್ ಸಾಹೇಬ್ರೇ ಮೊದಲು ನೆಟ್ಟಗೆ ಸಭ್ಯ ಹಾಸ್ಯ ಮಾಡುವುದನ್ನು ಕಲಿಯಿರಿ. ಆಮೇಲೆ ನೀನಾಸಂನಂಥ ಅಪೂರ್ವ ಸಂಘದ ಬಗ್ಗೆ ಮಾತಾಡುವಿರಂತೆ. ನೀನಾಸಂ ಕರ್ನಾಟಕದ ಮಹಾನ್ ಕಲಾ ಸಂಸ್ಥೆ. ಅದು ಸರ್ಕಾರಿ ಕೃಪಾಪೋಷಿತ ಮಂಡಳಿಯಲ್ಲ. ನೂರಾರು ಅದ್ಭುತ ಕಲಾವಿದರನ್ನು ಅದು ತಯಾರಿಸಿದೆ. ನಿಮ್ಮನ್ನು ಆ ರೀತಿ ಆಡಿಕೊಳ್ಳೋಣ ಅಂದರೆ ಟೀಕಿಸುವುದು ಬಿಟ್ಟು ಏನಾದರೊಂದು ರಚನಾತ್ಮಕ ಕೆಲಸ ಮಾಡಿದ್ದರೆ ತಾನೇ?
ಮಂದ ಬುದ್ಧಿಯ ಮುಂಗೋಪದ ಶ್ರೀಪಾದ ಭಟ್ಟರಿಗೆ ನಾನು ವ್ಯಂಗ್ಯ ಮಾಡಿದ್ದು ನೀನಾಸಂನಲ್ಲ ರಾಕೇಶ್ ಅವರನ್ನು ಅಂತ ಅರ್ಥವಾಗದೇ ಇದ್ದದ್ದು ಆಶ್ಚರ್ಯಕರ ಸಂಗತಿಯೇನಲ್ಲ.
ಭಟ್ಟರೇ, ನೀನಾಸಂ ವಿಮರ್ಶೆಗೆ ಹೊರತಾದ ಸಂಸ್ಥೆಯಲ್ಲ, ನೀನಾಸಂ ವ್ಯವಸ್ಥಾಪಕರು ದೈವಾಂಶಸಂಭೂತರೇನಲ್ಲ. ಅಕ್ಷರ ಅವರು ಕಟ್ಟಾ ಬಲಪಂಥೀಯರು ಎಂಬುದು ಮಡೆಸ್ನಾನ ಮೊದಲಾದ ಸಮಕಾಲೀನ ತಲ್ಲಣಗಳಿಗೆ ಅವರು ಪ್ರತಿಕ್ರಿಯಿಸಿರುವ ಮಾದರಿಯಿಂದಲೇ ಸಾಬೀತಾಗಿದೆ.
ಶೆಟ್ಕರ್ ಸಾಹೇಬರೇ,ತಾವು ವ್ಯಂಗ್ಯ ಮಾಡಿದ್ದು ಸಾಕು. ಪ್ರಶ್ನೆಯಿಂದ ಓಡಿ ಹೋಗದೆ ಉತ್ತರಿಸಿ. “ಮನು ಸಂಸ್ಕೃತಿ” ಎಂದರೇನು?
ಮನುಸಂಸ್ಕ್ರುತಿಯ ಉದಾಹರಣೆ ಇಲ್ಲಿದೆ ನೋಡಿ: http://www.vartamaana.com/wp-content/uploads/2014/11/caste-system2.jpg
ಗುರುಗಳೇ,
ಲಿಂಕ್ ಕಾಪಿ ಪೇಸ್ಟ್ ಬಿಟ್ಟು.ತಮ್ಮ ಮಾತುಗಳನ್ನು ಹೇಳಿ.ಮನುಸಂಸ್ಕೃತಿ ಎಂದರೇನು? ನೀವು ತೋರಿಸಿದ ಚಿತ್ರಕ್ಕೂ ಅದಕ್ಕೂ ಏನು ಸಂಬಂಧ?
ಅಸ್ಪೃಶ್ಯತೆಯ ಆಚರಣೆ, ಜಾತಿ ಆಧಾರಿತ ಮೇಲು-ಕೀಳು ಶ್ರೇಣೀಕರಣ, ಸ್ತ್ರೀ ಶೋಷಣೆ …
ಈ ಚಿತ್ರ ಸಮಾಜದ ದುಸ್ಥಿತಿಗೆ ಕನ್ನಡಿ ಹಿಡಿದಿದೆ.
ಶೇಟ್ಕರ್
ದಮನ ಕಾರ್ಯವನ್ನು ಪ್ರಗತಿಪರರು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ, ದಮನ ಮಾಡುವುದೇ ಅವರ ಜನ್ಮಜಾತವಾದ ಕಾರ್ಯವಾಗಿದೆ, ಅದೂ ಎಲ್ಲವನ್ನೂ ತಪ್ಪಾಗಿ ಅರ್ಥೈಸಿಕೊಂಡು. ಇನ್ನು ಮನುಸಂಸ್ಕೃತಿ ಎಂದರೆ ಏನು ಎಂಬುದು ತಮಗೂ ಪ್ರಾಯಶಃ ತಿಳಿದಿಲ್ಲ ಎಂದು ಭಾವಿಸುತ್ತೇನೆ, ನಿಮ್ಮ ಗುರು ದರ್ಗಾ ರವರನ್ನ ಕೇಳಿಕೊಂಡು ಬನ್ನಿ, ಇಡೀ ಒಂದು ಪೀಳಿಗೆಯನ್ನೇ ಹಾಳು ಮಾಡಿದ ಕೀರ್ತಿ ನಿಮ್ಮ ಪ್ರಗತಿಪರರಿಗೆ ಸಲ್ಲುತ್ತದೆ..
ಮನುಸಂಸ್ಕ್ರುತಿ: http://www.vartamaana.com/wp-content/uploads/2014/11/caste-system2.jpg
“ಮನುಸಂಸ್ಕೃತಿ” ಎಂಬುದು “ಪ್ರಗತಿಪರ” “ಜಾತ್ಯತೀತ” “ವೈಜ್ನಾನಿಕ” “ವೈಚಾರಿಕ” “ಕೋಮುವಾದಿ” ಇತ್ಯಾದಿ ಇತ್ಯಾದಿ ಮತ್ತೆ ಮತ್ತೆ ಬಳಸಿ ಹಳಸಲಾದ ಹಾಗೂ ಹಾಗೆಂದರೇನು ಎಂದು ವಿವರಣೆಯೇ ಇಲ್ಲದ ಸುಮ್ಮನೇ ಬಳಸಬೇಕಾದ ಪದಗಳಲ್ಲಿ ಒಂದು. ಬಳಸಿ-ಯಾವ ದೊಣ್ಣೆನಾಯಕನ ಅಪ್ಪಣೆ ಬೇಕು?
ಎಲ್ಲರೂ ಮಹರ್ಷಿ ಮಾರ್ಕ್ಸ್ ಸಂಸ್ಕೃತಿಗೆ ಶರಣು ಬನ್ನಿ
ಒಬ್ಬರು ವೀರಶೈವಕ್ಕೆ ಬನ್ನಿ ಅಂದರೆ ಮತ್ತೊಬ್ಬರು ಲಿಂಗಾಯತಕ್ಕೆ ಬನ್ನಿ ಅನ್ನುತ್ತಾರೆ, ಮಗದೊಬ್ಬರು ಮಾರ್ಕ್ಸ್ ಬಳಿ ಬನ್ನಿ ಅನ್ನುತ್ತಾರೆ, ಇನ್ನೊಬ್ಬರು ಅಲ್ಲಾ ಬಳಿ ಬನ್ನಿ ಅನ್ನುತ್ತಾರೆ-ಒಟ್ಟಿನಲ್ಲಿ ಅವರವರಿಗೆ ತಮ್ಮ ತಮ್ಮ ನೆಲೆಯೇ ಗ್ರೇಟ್! ಎಲ್ಲಾ ಒಕ್ಕಲು ಮಾಡಿಕೊಳ್ಳುವ ಬಯಕೆಯವರೇ ವಿನಾ ಜನತಂತ್ರ ವ್ಯವಸ್ಥೆಯಂತೆ ಎಲ್ಲವನ್ನೂ ಗೌರವಿಸುವ ಔದಾರ್ಯ ಮಾತ್ರ ಕಾಣೆ!!
ಹೂಂ..ಪ್ರತಿಯೊಬ್ಬ ಪರಗತಿಗೂ ತನ್ನದೊಂದು ಪ್ರತ್ಯೇಕ ಟೆಂಟ್ ಹಾಕಿ, ಇಲ್ಲಿ ಬನ್ನಿ..ಇಲ್ಲಿ ಬನ್ನಿ ಎಂದು ಕರೆದು ತಲೆ ಎಣಿಕೆ ಹೆಚ್ಚಿಸಿ.. ಹೆಚ್ಚಿನ ಗಂಜಿ ತನ್ನ ಡಬರಿಗೆ ಇಳಿಸಿಕೊಳ್ಳುವ ಚಿಂತೆ!
ಒಟ್ಟಿನಲ್ಲಿ ನಿಲುಮೆಯಲ್ಲಿ ಚಣಾಬಸವಣ್ಣನ ಜೊತೆ ಮಹರ್ಷಿ ಮಂಜಣ್ಣನ ಅಂಗಡಿ ಓಪನ್ ಆಗಿದೆ..ನಮಗೊಳ್ಳೆ ಮನರಂಜನೆ! 🙂
ಗಿರಾಕಿಗಳನ್ನು ಹುಡುಕಬೇಕಾದ ದುರ್ಗತಿ!
ಗಿರಾಕಿಗಳು ಸಿಕ್ಕರೆ ಪರಗತಿಪರರಿಗೆ ಸದ್ಗತಿ!! 🙂
🙂
I am really shocked to read someone’s statement regarding Sri Akshara’s commitments and idealogical stance. One can’t tie him down to yada, bala and such nonsense. As I know him he is one among a few really open, free, transparent thinkers. (Of course, he doesn’t need my certificate!) In all respects he is the true `heir-apparent’ to his illustrious father, Sri KV Subbanna. You can quote him and read him, but please do not drag him to your convenience while indulging in silly argument.