ಒಂದಿಡಿ ಜನಾಂಗಕ್ಕೆ ಕಂಟಕವಾದವರನ್ನು ವೈಭವೀಕರಿಸುವುದೇಕೆ?
– ಡ್ಯಾನಿ ಪಿರೇರಾ,ಹಳ್ಳಿಮೈಸೂರು
ನ.16 ರ ಕನ್ನಡಪ್ರಭ ದಿನಪತ್ರಿಕೆಯಲ್ಲಿ ‘ಫ್ರಾನ್ಸಿಸ್ ಕ್ಸೇವಿಯರ್ ಪಾರ್ಥಿವ ಶರೀರ ಪ್ರದರ್ಶನಕ್ಕೆ ಅಪಸ್ವರ’ ಎಂಬ ಶೀರ್ಷಿಕೆ ಅಡಿಯಲ್ಲಿ ಸಂತನೆಂದು ಹೇಳಲಾಗುವ ಪ್ರಾನ್ಸಿಸ್ ಕ್ಸೇವಿಯರ್ರ ಬಗ್ಗೆ ವರದಿಯಾಗಿತ್ತು. ಆತನ ಪಾರ್ಥಿವ ಶರೀರ ನ.22 ರಿಂದ ಜ.4 ರ ವರೆಗೆ ಸಾರ್ವಜನಿಕ ದರ್ಶನಕ್ಕಿಡಲಾಗುತ್ತಿದೆ.
ಈ ನಡುವೆ ಈ ವಿವಾದಿತ ಸಂತನ ವಿಚಾರದಲ್ಲಿ ಆತನು ನಡೆಸಿದ ಮತಾಂತರದ ಕ್ರೌರ್ಯ ಹಾಗೂ ಮಾರಣಹೋಮ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದೂ ಈತ ಒಬ್ಬ ಮಹಾನ್ ಸಂತ ಎಂದು ಆತನನ್ನು ವೈಭವೀಕರಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಭಾರತದ ಸಂತ ಪರಂಪರೆಗೂ ಪಾಶ್ಚತ್ಯ ಸಂತ ಪರಂಪರೆಗೂ ಅಜಗಜಾಂತರ ವ್ಯತ್ಯಾಸವಿದೆ. ಒಬ್ಬ ವ್ಯಕ್ತಿ ಆತ ಯಾವುದೇ ಜಾತಿಗೆ ಸೇರಿರಲಿ ಆತ ಮಾಡಿದ ಮಾನವತೆಯ ಸೇವೆಯನ್ನು ಅತ್ಯಂತ ಕೃತಜ್ಞತೆಯನ್ನು ಸ್ಮರಿಸಿ, ಆತನಿಗೆ ಸಂತ ಪದವಿ ನೀಡುವುದು ಈ ನೆಲದ ಪರಂಪರೆ. ಆದರೆ ಪಾಶ್ಚತ್ಯ ಜಗತ್ತಿನ ಸಂತ ಪದವಿಯನ್ನೇರಲು ಇಂಥಹ ಮಾನದಂಡವೇನಿಲ್ಲ ಎನಿಸುತ್ತದೆ! ಒಬ್ಬ ವ್ಯಕ್ತಿ ತನ್ನ ಮತದ ಹಿತಕ್ಕೆ ಪೂರಕವಾಗಿ ನಡೆದು, ಇತರ ಮತಗಳ ಅವಹೇಳನ ಗೈದು ಇತರ ಮತೀಯರ ಮೇಲೆ ಮರಣ ಮೃದಂಗ ಬಾರಿಸಿದರೆ ಆತ ಶ್ರೇಷ್ಠನೆಂದು ಪರಿಗಣಿತವಾಗುತ್ತದೆ ಎನ್ನುವುದಕ್ಕೆ ಕ್ಸೇವಿಯರ್ ಸಂತ ಪದವಿ ಅಲಂಕರಿಸಿದ್ದೇ ಸಾಕ್ಷಿ ಎನ್ನಬೇಕಾಗುತ್ತದೆ. ಇನ್ನೊಂದು ಮತದ ನಂಬಿಕೆಗಳ ವಿರುದ್ಧ ನಡೆದುಕೊಂಡಾಗಲೂ ಅವನನ್ನು ಆರಾಧಿಸುವ ಮನಸ್ಥಿತಿ ಏರ್ಪಟ್ಟರೆ ಅತನನ್ನು ಯಾವ ಅರ್ಥದಲ್ಲಿ ಸಂತ ಎನ್ನ ಬಹುದು ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಈ ಹಿನ್ನೆಲೆಯಲ್ಲಿ ಕ್ಸೇವಿಯರ್ ಒಬ್ಬ ಸಂತನೆಂದು ಕ್ರೈಸ್ತ ಸಮಾಜ ಒಪ್ಪಿಕೊಂಡರೂ ಮಾನವತೆಯ ನೆಲೆಗಟ್ಟಿನಲ್ಲಿ ಯೋಚಿಸುವ ಯಾವುದೇ ಜನಾಂಗ ಇದನ್ನು ಒಪ್ಪಲು ಸಾಧ್ಯವಾಗುವುದಿಲ್ಲ.
ಇಷ್ಟೆಲ್ಲ ಹೇಳಿದ ಮೇಲೆ ಸಂತ ಎಂದು ಹೇಳಲಾಗುವ ಕ್ಸೇವಿಯರ್ ಕ್ರೈಸ್ತ ದಬ್ಬಾಳಿಕೆಯ ಸ್ಫೂರ್ತಿಯಾಗಿದ್ದನೆಂದು ಗೋವಾದ ಇತಿಹಾಸವೇ ಹೇಳುತ್ತದೆ. ಈತನು ನಡೆಸಿದ ಕ್ರೌರ್ಯಕ್ಕೆ ಎಣೆಯಿಲ್ಲ. ಈತನದು ಮತಾಂಧ ರಕ್ತ. ಗೋವಾದ ಬೆಸ್ತರನ್ನು ಪೋರ್ಚುಗೀಸ್ ನೌಕೆಗಳಿಂದ ಸುತ್ತುವರಿಸಿ, ಅವರ ದೋಣಿಗಳಿಗೆ ಬೆಂಕಿಯಿಡುವ ಬೆದರಿಕೆಯೊಡ್ಡಿ ಅವರನ್ನು ಮತಾಂತರಿಸಿದ ಕುಖ್ಯಾತಿ ಈತನದು. ‘ರಾಜನ ಧರ್ಮವೇ ಪ್ರಜೆಗಳದ್ದು’ ಎನ್ನುವ ಘೊಷಣೆಯೊಂದಿಗೆ ಗೋವಕ್ಕೆ ಬಂದಿಳಿದ ಪೋರ್ಚುಗೀಸರು ಅನ್ಯಾಯದ ಮತ್ತು ಅಕ್ರಮದ ಮತಾಂತರಕ್ಕೆ ಇಳಿದವರು. ಇಲ್ಲಿನ ಹಿಂದುಗಳು ಇವರ ದಬ್ಬಾಳಿಕೆಯನ್ನು ಎದುರಿಸಿ ತಮ್ಮ ಧರ್ಮವನ್ನು ಉಳಿಸಿಕೊಂಡಿದ್ದೇ ದೊಡ್ಡ ಸಾಧನೆ. ಆದರೆ ಛಲ ಬಿಡದೆ ತಮ್ಮ ಶಾಸನಗಳನ್ನು ಹೇರಿ ‘ಇಂಕ್ವಿಸಿಷನ್’ ಕಾನೂನುಗಳಿಂದ ಹಿಂದುಗಳನ್ನು ಹಿಂಸಿಸಲಾಯಿತು. ‘ಇಂಕ್ವಿಸಿಷನ್’ಎಂಬುದು ಮೂಲತಃ ಕ್ರೈಸ್ತ ಮಾರ್ಗಚ್ಯುತರರನ್ನು ಉದ್ದೇಶಿಸಿ ಈ ಶಾಸನವನ್ನು ರೂಪಿಸಿದ್ದರೂ ಅದನ್ನು ಪೋರ್ಚುಗೀಸ್ ಸರ್ವಾಧಿಕಾರಿಗಳು ಕ್ರೈಸ್ತೇತರರಿಗೂ ವಿಸ್ತರಿಸಿದ್ದರು. ಗೋವಾದಲ್ಲಿ ಈ ‘ಇಂಕ್ವಿಸಿಷನ್’ನ ಹಿಂದಿದ್ದ ದೊಡ್ಡ ಕೈ ಪ್ರಾನ್ಸಿಸ್ ಕ್ಸೇವಿಯರನದ್ದು!. ಗೋವಾದ ಈ ಇಂಕ್ವಿಸಿಷನ್ನ ಕರಾಳ ಕತೆಗೆ ಬಲಿಯಾದವರು ಹದಿನಾರು ಸಾವಿರಕ್ಕೂ ಹೆಚ್ಚು ಜನ. ಇದರಲ್ಲಿ ಮಹಿಳೆಯರದ್ದು ನಾಲ್ಕು ಸಾವಿರಕ್ಕೂ ಹೆಚ್ಚು. 1563ರಲ್ಲಿ ಗೋವಾದ ವೈದ್ಯನೊಬ್ಬನಿಗೆ ಈ ಇಂಕ್ವಿಸಿಷನ್ ಟ್ರೈಬ್ಯುನಲ್ ವಿಚಾರಣೆಗೆ ಒಳಪಡಿಸಿ, ಅಲ್ಲಿನ ಬಿಷಪ್ಪನು ಗವರ್ನರನ ಮೂಲಕ ಆ ವೈದ್ಯನಿಗೆ ಮರಣ ದಂಡನೆ ವಿಧಿಸಿದ. ಆದರೆ ಕ್ರೈಸ್ತ ಕಾನೂನು ತುಂಬಾ ದಯಾಳು ಆತನ ರಕ್ತ ಹರಿಸಿ ಸಾಹಿಸಲು ನಮ್ಮ ಕಾನೂನು ಸಹಿಸುವುದಿಲ್ಲ, ಅದಕ್ಕಾಗಿ ಆತನನ್ನು ಜೀವಂತ ಸುಡಬೇಕು. ಒಂದೊಮ್ಮೆ ಅಪರಾಧಿ ತಪ್ಪೊಪ್ಪಿ ಕ್ರೈಸ್ತ ಮತಕ್ಕೆ ಮತಾಂತರನಾದರೇ ಅವನ ಕತ್ತು ಹಿಸುಕಿ ಸಾಯಿಸಬಹುದೆಂದು ಹೇಳಿದ್ದನಂತೆ.
ಈ ಹಿಂದೆ ಗೋವಾದಲ್ಲಿ ಇಂತಹ ಇಂಕ್ವಿಸಿಷನ್ ಟ್ರೈಬ್ಯುನಲ್ಗೆ ಒತ್ತಾಯ ತಂದಿದ್ದು ಪಾದ್ರಿ ಫ್ರಾನ್ಸಿಸ್ ಕ್ಸೇವಿಯರ್. ಈತ ಪೋರ್ಚುಗಲ್ ರಾಜನಿಗೆ ಪತ್ರ ಬರೆದು ‘ಇಂತಹ ವಿಚಾರಣೆ ಗೋವಾದಲ್ಲಿ ಅತ್ಯವಶ್ಯಕ’ಎಂದು ಒತ್ತಾಯಿಸಿದ್ದಾನೆಂದು ಇತಿಹಾಸ ಹೇಳುತ್ತದೆ.
ಸ್ವಾಮಿ ವಿವೇಕಾನಂದರು ಯುರೋಪ್ ದೇಶಗಳ ಪ್ರವಾಸದಲ್ಲಿದ್ದಾಗ ಅಲ್ಲಿನ ಹೆಣ್ಣು ಮಗಳೊಬ್ಬಳು ತನ್ನ ಪೂರ್ವಜರ ಬಗ್ಗೆ ಹೆಮ್ಮೆ ಪಡುತ್ತ ಹೇಳಿದ್ದಳಂತೆ- “ನಮ್ಮ ಪೂರ್ವಜರು ಎಂಥಾ ಪರಾಕ್ರಮಿಗಳು ಎಂದರೆ, ಜಗತ್ತಿನ ಅನೇಕ ಜನಾಂಗಗಳ ಕತ್ತು ಕತ್ತರಿಸಿ, ನೆತ್ತರು ಹರಿಸಿ ಸಾಮ್ರಾಜ್ಯ ಕಟ್ಟದ್ದಾರೆ, ಹೇಳಿ ಸ್ವಾಮೀಜಿ ನಿಮ್ಮವರು ಇಂತಹ ಸಾಧನೆ ಮಾಡಿದ್ದಾರೆಯೇ?” ಎಂದು. ಸ್ವಾಮೀಜಿ ಭಾರತಕ್ಕೆ ಬಂದಾಗ ಈ ಮಾತನ್ನು ಪ್ರಸ್ತಾಪ ಮಾಡುತ್ತ ಹೇಳುತ್ತಾರೆ. ಆ ಹೆಣ್ಣುಮಗಳು ತನ್ನ ಪೂರ್ವಜರು ಮಾಡಿದ ಪಾಪ ಕಾರ್ಯವನ್ನು ಸಮರ್ಥಿಸಿ ಅದೊಂದು ಮಹಾನ್ ಸಾಧನೆಯೆಂದು ಬಣ್ಣಿಸುವ ಆ ದೇಶದ ಜನಾಂಗಗಳ ಮಾನಸಿಕತೆ ಕೂಡ ಅದೇ ತೆರನಾಗಿರುತ್ತದೆ ಎಂದು. ಈ ನಿಟ್ಟಿನಲ್ಲಿ ನಾವು ವಿಶ್ಲೇಷಣೆ ಮಾಡುವುದಾದರೇ ಪ್ರಾನ್ಸಿಸ್ ಕ್ಸೇವಿಯರರ ಪಾರ್ಥಿವ ಶರೀರವನ್ನಿಟ್ಟು ಆರಾಧಿಸುವುದು ಆತನಿಂದ ಪೀಡನೆಗೊಳಗಾದವರಿಗೆ ಮಾತ್ರವಲ್ಲ, ಇಡೀ ಮಾನವ ಕುಲಕ್ಕೆ ಮಾಡುವ ಅಪಮಾನ ಎನ್ನಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆ ಈಗಿಲ್ಲ. ಕ್ಸೇವಿಯರನ ಪಾರ್ಥೀವ ಶರೀರ ಶವವನ್ನು ಗೋವದಲ್ಲಿಟ್ಟಿರುವುದು, ದೇಶದ ಸ್ವಾಭಿಮಾನಕ್ಕೆ ಧಕ್ಕೆ ತರುವಂತದ್ದು ಹಾಗಾಗಿ ಆತನ ಶರೀರವನ್ನು ಫ್ರಾನ್ಸ್ಗೆ ಕಳಿಸಬೇಕೆಂದು ಹೇಳುವ ಮಂಗಳೂರಿನ ಪ್ರಾನ್ಸಿಸ್ ಕ್ಸೇವಿಯರ್ ಸಂತ್ರಸ್ತರ ಹೋರಾಟ ಸಮಿತಿಯ ರೋಬರ್ಟ್ ರೊಸಾರಿಯೊರವರ ಅಪೇಕ್ಷೆ ಸರಿಯಾಗಿಯೇ ಇದೆ. ಒಂದು ಸಾಮ್ರಾಜ್ಯಶಾಹಿ ನೀತಿಯುಳ್ಳ ರಾಷ್ಟ್ರದ ಪ್ರತಿನಿಧಿಗಳು ಇನ್ನೊಂದು ನೆಲದ ನಂಬಿಕೆ ಶ್ರದ್ಧೆಗಳನ್ನು ಅವಹೇಳನ ಮಾಡಿ, ರಕ್ತದ ಕೋಡಿ ಹರಿಸಿ, ಧರ್ಮ ಸ್ಥಾಪನೆ ಮಾಡುವುದರಿಂದ ಮುಂದೆ ಆತ ಅದೇ ದೇಶದಲ್ಲಿ ದೊಡ್ಡ ಸಂತನೆಂಬ ಗೌರವಕ್ಕೆ ಪಾತ್ರನಾಗುತ್ತಾನೆಂದರೆ, ಆ ನೆಲದ ಮಣ್ಣಿನ ಮಕ್ಕಳಲ್ಲಿ ರಾಷ್ಟ್ರೀಯ ಸ್ವಾಭಿಮಾನ ಗೋಚರಿಸುತ್ತಿಲ್ಲ ಎನ್ನಬೇಕಾಗುತ್ತದೆ. ಹೀಗಾಗಿ ಕ್ಸೇವಿಯರನ ಪಾರ್ಥಿವ ಶರೀರ ಯಾವ ದೇಶದ ನಂಬಿಕೆ-ಪರಂಪರೆಗೆ ಪೂರಕವಾಗಿದೆಯೋ ಆ ವ್ಯಕ್ತಿ ಅ ಪ್ರದೇಶದಲ್ಲೇ ಆತನ ಶರೀರ ಇಡಬೇಕೆಂಬ ರೋಸಾರಿಯೋರವರ ಬೇಡಿಕೆ ಅಪೇಕ್ಷಣೀಯ. ಉದಾಹರಣೆಗೆ ಹೇಳುವುದಾದರೆ ಒಸಮಾ ಬಿನ್ ಲಾಡನ್ ಅಮೇರಿಕಾದ ವಾಣಿಜ್ಯ ಕಟ್ಟಡವನ್ನು ವಿಮಾನದಿಂದ ಅಪ್ಪಳಿಸಿ ಧರೆಗುರುಳಿಸಿ, ಸಾವಿರಾರು ಅಮಾಯಕರ ಸಾವಿಗೆ ಕಾರಣನಾದ. ಅಂತಹ ದುರುಳನ ಹೆಸರಿನಲ್ಲಿ ಅಮೇರಿಕಾದಲ್ಲೇ ಸ್ಮಾರಕವೊಂದು ನಿರ್ಮಿಸಿ, ಆತನೊಬ್ಬ ಸಂತನೆಂದು ಘೋಷಣೆ ಮಾಡಿದರೆ, ಅಮೇರಿಕನ್ನರಿಗೆ ಯಾವ ಸಂದೇಶವನ್ನು ನೀಡಿದಂತಾಗುತ್ತದೆ? ಇದೇ ವಿಚಾರ ಎಲ್ಲ ರಾಷ್ಟ್ರ ಹಾಗೂ ಜನಾಂಗಗಳಿಗೂ ಅನ್ವಯವಾಗುತ್ತದೆ. ದುರಾದೃಷ್ಟ ಭಾರತೀಯರಲ್ಲಿ ಈ ರೀತಿಯ ಸ್ವಾಭಿಮಾನ ಕೊರತೆ ಎದ್ದು ಕಾಣುತ್ತಿರುವುದು ಸ್ವಾತಂತ್ರ್ಯ ಭಾರತದಲ್ಲಿ ಎಲ್ಲೆಡೆ ಗೋಚರವಾಗುತ್ತದೆ.
ಒಂದು ಜನಾಂಗದ ಮಾನಬಿಂದುಗಳನ್ನು ಅವಮಾನಿಸಿ, ಅವರನ್ನು ಮತಾಂತರಿಸಿದ ವ್ಯಕ್ತಿಗಳಿಗೆ ಯಾವ ಅರ್ಥದಲ್ಲಿ ಸಂತರೆನ್ನಬೇಕು?! ಒಂದೊಮ್ಮೆ ಆತ ಶ್ರೇಷ್ಟ ವ್ಯಕ್ತಿಯೇ ಆಗಿದ್ದರೆ ಅದು ಕೇವಲ ಫ್ರಾನ್ಸ್, ಪೋರ್ಚುಗೀಸ್ ಮತ್ತು ವಸಹತು ನೀತಿಯ ಜನಾಂಗಳಿಗೆ ಮಾತ್ರವೇ ಹೊರತು ಭಾರತೀಯರಿಗಲ್ಲ! ಇದು ಖಂಡಿತ ಭಾರತೀಯರಿಗೆ ಅಪಮಾನವೆನಿಸುವ ಸಂಗತಿಯಾಗುತ್ತದೆ!
ಮಂಗಳೂರಿನ ಕ್ರೈಸ್ತ ಧರ್ಮಪ್ರಾಂತ್ಯದ ವಕ್ತಾರ ಫಾ. ವಿಲಿಯಂ ಮಿನೇಜಸ್ರವರು ಹೇಳುತ್ತಾರೆ – ‘ಸಂತ ಫ್ರಾನ್ಸಿಸ್ ಕ್ಸೇವಿಯರ್ ಪವಾಡ ಪುರುಷ, ಆತನಿಂದ ಕ್ರೈಸ್ತರಿಗೆ ಒಳ್ಳೆಯದಾಗಿದೆ’ ಎಂದು. ಹಾಗಾದರೆ ಆತ ಇಲ್ಲಿನ ಹಿಂದುಗಳನ್ನು ಮತಾಂತರಿಸಲು ನಡೆಸಿದ ಎಲ್ಲ ಅನೈತಿಕ ಮಾರ್ಗಗಳು ನ್ಯಾಯ ಸಮ್ಮತವೇ?
ತನ್ನ ಜನಾಂಗದ ಸಂಖ್ಯಾವೃದ್ಧಿಗಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಹತ್ಯೆಯ ಪಾಪದ ಪಾಲನ್ನು ಅವರ ಕುಕೃತ್ಯಗಳ ಸಮರ್ಥಕರು ಹೊತ್ತುಕೊಳ್ಳುತ್ತಾರೆಯೇ? ಇನ್ನು ಪಾರ್ಥಿವ ಶರೀರದ ದರ್ಶನಕ್ಕೆ ಸರ್ಕಾರ ನೆರವು ನೀಡುತ್ತದೆ ಎನ್ನುವ ಅವರ ಹೇಳಿಕೆ, ಅದು ಸರ್ಕಾರಗಳ ಜಾತ್ಯತೀತ ಸೋಗಿನ, ಒಂದು ಜನಾಂಗ ಓಲೈಕೆಯ ಭಾಗವೇ ಹೊರತು ಮತ್ತೇನಲ್ಲ, ಇಂತಹ ದೊಂಬರಾಟಗಳನ್ನು ಸ್ವತಂತ್ರ್ಯ ಭಾರತದ ಎಲ್ಲ ಸರ್ಕಾರಗಳು ಮಾಡುತ್ತಲೇ ಬರುತ್ತಿವೆ, ಅದರಲ್ಲಿ ವಿಶೇಷವೇನಿಲ್ಲ!
ಒಂದು ಮಾತು ಇಲ್ಲಿ ಸ್ಪಷ್ಟಪಡಿಸಬೇಕಾಗುತ್ತದೆ. ಯಾವ ಮತ-ಪಂಥಗಳ ನಂಬಿಕೆ ಎಲ್ಲಿಂದಲೇ ಬರಲಿ ಒಳ್ಳೆಯ ವಿಚಾರಗಳನ್ನು ಸ್ವಾಗತಿಸುವುದು ಸರಿಯಾದ ಕ್ರಮವಾಗುತ್ತದೆ. ಹಾಗೆಂದು ಮಾನವ ಜನಾಂಗಕ್ಕೆ ಕಂಟಕವಾದವರನ್ನು ತಮ್ಮ ಮತದ ಪ್ರತಿಪಾದಕ ಎನ್ನುವ ಕಾರಣಕ್ಕಾಗಿ ಇಂತಹ ದುರುಳರನ್ನು ವೈಭವೀಕರಿಸುವ ಪರಿಪಾಠ ಒಳ್ಳೆಯ ಲಕ್ಷಣ ಎನಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಮಾನ್ಯ ರೋಬರ್ಟ್ ರೊಸರಿಯೋರಂತೆ ಇಲ್ಲಿನ ಪಾಶ್ಚತ್ಯ ಪ್ರಭಾವದ ಕ್ರೈಸ್ತ ಮನಸ್ಸುಗಳು ಭಾರತೀಕರಣಗೊಳ್ಳಬೇಕಿದೆ.
ಕ್ರಿಶ್ಚಿಯಾನಿಟಿ, ಇಸ್ಲಾಂ ಮುಂತಾದ ರಿಲಿಜನ್ನುಗಳು ತಾವೇ ಸತ್ಯವಾದ ಮಾರ್ಗಗಳು ಎಂದು ನಂಬಿಕೊಂಡಿದ್ದರಿಂದ ಉಳಿದ ಸುಳ್ಳು ಮಾರ್ಗಗಳಲ್ಲಿ ಸಾಗುವವರನ್ನು ಬಲಾತ್ಕಾರವಾಗಿ ಅಥವಾ ಆಮಿಷವನ್ನು ತೋರಿಸಿಯಾದರೂ ಪರಿವರ್ತನೆ ಮಾಡುವುದು ಪವಿತ್ರವಾದ ಕರ್ತವ್ಯ ಎಂದು ಭಾವಿಸುತ್ತವೆ. ಸುಳ್ಳು ರಿಲಿಜನ್ನುಗಳನ್ನು ನಂಬುವವರ ಕುರಿತು ಅವಕ್ಕೊಂದು ಕಥೆಯಿದೆ. ಅದರ ಪ್ರಕಾರ ಡೆವಿಲ್ ಅಥವಾ ಶೈತಾನನೆಂಬವನು ಜನರನ್ನು ಸುಳ್ಳು ರಿಲಿಜನ್ನಿಗೆ ಎಳೆದು ದಾರಿ ತಪ್ಪಿಸುತ್ತಾನೆ. ಹಾಗಾಗಿ ಇಂಥ ಜನರನ್ನು ಡೆವಿಲ್ ಅಮರಿಕೊಂಡಿರುತ್ತಾನೆ. ಈ ನಂಬಿಕೆಯಿಂದಲೇ ಕ್ಸೇವಿಯರರಂಥ ಕೆಲವು ಮಿಶನರಿಗಳು ಅಂಥವರು ಪರಿವರ್ತನೆಯಾಗಲು ನಿರಾಕರಿಸಿದರೆ ಅವರನ್ನು ಕೊಲ್ಲುವುದೇ ಪವಿತ್ರ ಕಾರ್ಯ ಎಂದು ಭಾವಿಸಿದರೆ ಆಶ್ಚರ್ಯವೇನಿಲ್ಲ. ಇದೇ ಕಥೆಯನ್ನು ನಂಬಿಯೇ ಮಧ್ಯಕಾಲದಲ್ಲಿ ಕ್ರಿಶ್ಚಿಯಾನಿಟಿಯು ಮಾಟಗಾತಿಯರೆಂದು ಆರೋಪಿಸಿ ಸಹಸ್ರಾರು ಸ್ತ್ರೀಯರನ್ನು ಹಿಂಸಿಸಿ ಹತ್ಯೆಗೈದಿತ್ತು. ಆದರೆ ಕ್ರೈಸ್ತರಲ್ಲೇ ಕೆಲವರು ಇದನ್ನು ವಿರೋಧಿಸಿ ಬರೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಬರೆದವರಿಗೆ ಅಭಿನಂದನೆಗಳು.
ಇದು ರಿಲಿಜನ್ನುಗಳೊಂದೇ ಅಲ್ಲ, ಆಧುನಿಕ ಚಿಂತನೆಯನ್ನೇ ಸತ್ಯವೆಂದು ಒಪ್ಪಿಕೊಂಡ ಪ್ರಗತಿಪರರೂ ಆತ್ಮಾವಲೋಕನ ನಡೆಸಿಕೊಳ್ಳುವುದಕ್ಕೆ ಸೂಕ್ತ ಸಂದರ್ಭ. ಜರ್ಮನಿಯಲ್ಲಿ ನಾಝಿಸಂ ಹೆಸರಿನಲ್ಲಿ, ರಷಿಯಾದಲ್ಲಿ ಕಮ್ಯುನಿಸಂ ಹೆಸರಿನಲ್ಲಿ, ಅಮೇರಿಕಾದಲ್ಲಿ ವಸಾಹತುಶಾಹಿಯ ಹೆಸರಿನಲ್ಲಿ ನಡೆದ ನರಮೇಧಗಳ ಸಂದರ್ಭ ಬೇರೆ, ಆದರೆ ಧೋರಣೆ ಹಾಗೂ ವಿಧಾನಗಳು ಒಂದೇ. ಅಲ್ಲಿ ಸತ್ಯವಾದ ರಿಲಿಜನ್ನಿಲ್ಲ, ಆದರೆ ಸತ್ಯವಾದ ಐಡಿಯಾಲಜಿಯಿದೆ. ಇಂಥ ಹಿಂಸಾಕಾಂಡಗಳು ಪೂರ್ವದೇಶಗಳಲ್ಲಿ ಏಕೆ ನಡೆದಿಲ್ಲ ಎನ್ನುವುದಕ್ಕೂ ಡೆವಿಲ್ಲ ಹಾಗೂ ಸತ್ಯ ರಿಲಿಜನ್ನಿನ ಕಥೆಗೂ ನೇರ ಸಂಬಂಧವಿದೆ. ಆಧುನಿಕ ಪ್ರಗತಿಪರ ಚಿಂತನೆಗಳು ಪಾಶ್ಚಾತ್ಯ ಐಡಿಯಾಲಜಿಗಳಿಂದ ಹುಟ್ಟಿಕೊಂಡಂಥವು ಎಂಬುದನ್ನು ಅರಿತರೆ ಅನ್ಯ ಮಾರ್ಗಗಳ ಕುರಿತು ಅವುಗಳ ಧೋರಣೆ ಏಕೆ ಹೀಗಿದೆ ಎಂಬುದು ಸ್ಪಷ್ಟವಾಗುತ್ತದೆ. ಕಲ್ಪಿತ ವೈರಿಗಳನ್ನು ಸೃಷ್ಟಿಸಿಕೊಂಡು ಅವರು ಡೆವಿಲ್ಲ ಅಥವಾ ಈವಿಲ್ ಎಂದು ಚಿತ್ರಿಸಿ ಅವರು ನಾಶವಾಗುವವರೆಗೂ ಮನುಕುಲಕ್ಕೆ ಉದ್ಧಾರವಿಲ್ಲ ಎಂದು ನಂಬುವ ಪೃವೃತ್ತಿ ಹುಟ್ಟಿಕೊಳ್ಳುವುದು ಈ ಹಿನ್ನೆಲೆಯಿಂದ. ಆಧುನಿಕ ಚಿಂತನೆಯಲ್ಲಿ ಈ ಪೃವೃತ್ತಿ ಇದೆ ಎಂಬುದರ ಕುರಿತು ಜಾಗ್ರತರಾಗುವ ಅಗತ್ಯ ಇಂದಿನ ಎಲ್ಲಾ ಚಳವಳಿಗಳಿಗೂ ಇದೆ.
“ಒಸಮಾ ಬಿನ್ ಲಾಡನ್ ಅಮೇರಿಕಾದ ವಾಣಿಜ್ಯ ಕಟ್ಟಡವನ್ನು ವಿಮಾನದಿಂದ ಅಪ್ಪಳಿಸಿ ಧರೆಗುರುಳಿಸಿ, ಸಾವಿರಾರು ಅಮಾಯಕರ ಸಾವಿಗೆ ಕಾರಣನಾದ. ಅಂತಹ ದುರುಳನ ಹೆಸರಿನಲ್ಲಿ ಅಮೇರಿಕಾದಲ್ಲೇ ಸ್ಮಾರಕವೊಂದು ನಿರ್ಮಿಸಿ, ಆತನೊಬ್ಬ ಸಂತನೆಂದು ಘೋಷಣೆ ಮಾಡಿದರೆ, ಅಮೇರಿಕನ್ನರಿಗೆ ಯಾವ ಸಂದೇಶವನ್ನು ನೀಡಿದಂತಾಗುತ್ತದೆ? ಇದೇ ವಿಚಾರ ಎಲ್ಲ ರಾಷ್ಟ್ರ ಹಾಗೂ ಜನಾಂಗಗಳಿಗೂ ಅನ್ವಯವಾಗುತ್ತದೆ. ದುರಾದೃಷ್ಟ ಭಾರತೀಯರಲ್ಲಿ ಈ ರೀತಿಯ ಸ್ವಾಭಿಮಾನ ಕೊರತೆ ಎದ್ದು ಕಾಣುತ್ತಿರುವುದು ಸ್ವಾತಂತ್ರ್ಯ ಭಾರತದಲ್ಲಿ ಎಲ್ಲೆಡೆ ಗೋಚರವಾಗುತ್ತದೆ.” ಸತ್ಯವಾದ ಮಾತು….ಧನ್ಯವಾದಗಳು ಪಿರೇರ ಅವರಿಗೆ.
ಡ್ಯಾನಿ ಪಿರೇರಾ ಅವರೆ, ನೀರು ಶಂಖದಿಂದ ಬಂದರೆ ಮಾತ್ರ ತೀರ್ಥ. ವಿಷಯ ತಿಳಿದಿರುವಂತಹುದೆ. ಕ್ರೈಸ್ತ ಧರ್ಮೀಯರಾದ ತಮ್ಮಿಂದ ಉಚ್ಚಾರವಾದರೆ ಅದಕ್ಕೆ ವಿಶೇಷ ಮಹತ್ವ ಬರುತ್ತದೆ. ರಾಜರಾಮ ಹೆಗ್ಡೆ ಅವರು ತಿಳಿಸಿದಂತೆ ಮಾಟಗಾತಿಯರು ಎಂದು ಅರೋಪಿಸಿ, ಕ್ರೈಸ್ತರಲ್ಲದ ಹಳ್ಳಿ ವೈದ್ಯರುಗಳನ್ನು ಯುರೋಪಿನ ಉದ್ದಗಲಕ್ಕೂ ಹುಡುಕಿ ಹುಡುಕಿ ಜೀವಂತವಾಗಿ ಸುಟ್ಟದಲ್ಲದೆ, ಆ ಮಹಾನ್ ಕಾರ್ಯವನ್ನು ಅಲ್ಲಲ್ಲಿ ಕೆತ್ತಿ ಪ್ರದರ್ಶಿಸಿದ್ದಾರೆ, ಇಲ್ಲಿ, ಇಟಲಿಯಲ್ಲಿ. ಹೆಚ್ಚಿನವರಿಗೆ ಆ ಬಗ್ಗೆ ಖೇದವಿದ್ದರೂ, ದುಷ್ಟ, ಮೋಸಗಾರ್ತಿ ಎಂಬ ಪದದ ಬದಲು, ಮಾಟಗಾತಿ (strega) ಪದವೇ ಹೆಚ್ಚು ಬಳಕೆಯಲ್ಲಿದೆ ಇಂದೂ.