ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 12, 2014

5

ಶರಿಯತ್ ಕಾನೂನಿನಡಿ ಮ್ಯುಚುಯಲ್ ಫಂಡ್ ಪ್ರಾರಂಭಿಸುವ ದರ್ದೇಕೆ?

‍ನಿಲುಮೆ ಮೂಲಕ

– ಶ್ರೀನಿವಾಸ್ ರಾವ್

ಮ್ಯುಚುಯಲ್ ಫಂಡ್ಈ ದೇಶದಲ್ಲಿ ಸಂವಿಧಾನಕ್ಕೆ ಪರ್ಯಾಯವಾದ ಮತ್ತೊಂದು ಕಾನೂನು ಚಾಲ್ತಿಯಲ್ಲಿದ್ದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ದೇಶದ ಭದ್ರತೆಗೇ ಅಪಾಯವೊಡ್ಡುವ ಸ್ಥಿತಿ ಎದುರಾದಾಗ ಮಾತ್ರ ಅದರ ಬಗ್ಗೆ ಎಚ್ಚೆತ್ತುಕೊಳ್ಳುತ್ತೇವೆ. ಇಲ್ಲದಿದ್ದರೆ ಪರ್ಯಾಯ ಕಾನೂನಿನ ಪ್ರಕಾರ ಏನು ನಡೆದರೂ ಪಿಳಿಪಿಳಿ ನೋಡುತ್ತಾ ಕುಳಿತುಬಿಡುತ್ತೇವೆ. ಈ ಮಾತನ್ನು ಈಗೇಕೆ ಹೇಳಬೇಕಾಗಿದೆ ಎಂದರೆ ಅಲ್ಪಸಂಖ್ಯಾತರಿಗೆ,ಎಸ್.ಬಿ.ಐ ಶರಿಯಾ ಕಾನೂನಿನ ಪ್ರಕಾರ ಮ್ಯುಚುಯಲ್ ಫಂಡ್ ಪ್ರಾರಂಭಿಸಲು ಹೊರಟಿರುವದರಿಂದ.

ಒಂದಷ್ಟು ಜನರು ಗುಂಪಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಪ್ರಕ್ರಿಯೆಯೇ ಮ್ಯುಚುಯಲ್ ಫಂಡಿಂಗ್. ಇದಕ್ಕಾಗಿಯೇ ಹೆಚ್.ಡಿ.ಎಫ್.ಸಿ ಸೇರಿದಂತೆ ಹಲವು ಕಂಪನಿಗಳಿರುತ್ತವೆ.ಹೂಡಿಕೆ ಮಾಡಿರುವವರ ಹಣವನ್ನು ಸರಿಯಾದ ರೀತಿಯಲ್ಲಿ ಷೇರುಪೇಟೆಯಲ್ಲಿ ತೊಡಗಿಸಿ ಲಾಭ ಗಳಿಸಿಕೊಡಲೆಂದೇ ಆ ಕಂಪನಿಗೋರ್ವ ಫಂಡಿಂಗ್ ಮ್ಯಾನೇಜರ್ ಇರುತ್ತಾನೆ. ಯಾವ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಿದರೆ ಎಷ್ಟು ಲಾಭ, ಎಷ್ಟು ಹೂಡಿಕೆ ಮಾಡಬೇಕು ಇತ್ಯಾದಿಗಳ ಪಕ್ಕಾ ಲೆಕ್ಕಾಚಾರದ ಕಸುಬು. ಗಮನಿಸಬೇಕಾದ ಮುಖ್ಯ ಅಂಶವೆಂದರೆ ಯಾವುದೇ ಮ್ಯುಚುಯಲ್ ಫಂಡಿಂಗ್ ಕಂಪನಿ ಇರಲಿ ಅದು ದೇಶದ  ಸಂವಿಧಾನಕ್ಕೆ, ಕಾನೂನಿಗೆ ಬದ್ಧವಾಗಿಯೇ ಕಾರ್ಯನಿರ್ವಹಿಸಬೇಕಾಗುತ್ತದೆ. ಆರ್.ಬಿ.ಐ, ಸೆಬಿ,(ಸೆಕ್ಯುರಿಟಿ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ)ನಿಂದ ಅನುಮತಿ ಪಡೆದು ನಿಬಂಧನೆಗಳಿಗೆ ಬದ್ಧವಾಗಿರಬೇಕಾಗುತ್ತದೆ. ವಿದೇಶಗಳಲ್ಲಿ ಹೂಡಿಕೆ ಮಾಡಿದ ಎನ್.ಆರ್.ಐ ಗಳು ಒಂದು ವರ್ಷದೊಳಗೆ ಮ್ಯುಚುಯಲ್ ಫಂಡ್ ಗಳನ್ನು ಮಾರಾಟ ಮಾಡಬೇಕು, ವಿದೇಶಗಳಲ್ಲಿ ಹೂಡಿಕೆ, ಹಿಂತೆಗೆತ ಸೇರಿದಂತೆ ಪ್ರತಿಯೊಂದಕ್ಕೂ ಸರಿಯಾದ ಲೆಕ್ಕ ಕೊಡಬೇಕು(ಭಾರತದಲ್ಲಿ ಹೂಡಿಕೆ ಮಾಡಿದರೆ ಲೆಕ್ಕ ಕೊಡಬೇಕಿಲ್ಲ ಎಂದಲ್ಲ, ವಿದೇಶದಲ್ಲಿ ಹೂಡಿದರೆ ವಿಶೇಷ ಎಚ್ಚರಿಕೆ ವಹಿಸಲಾಗುತ್ತದೆ ಅಷ್ಟೆ). ಹೀಗೆ ಹತ್ತು ಹಲವು ಷರತ್ತುಗಳು ವಿಧಿಸಲಾಗಿದೆ.

ಆದರೆ ಹೆಸರೇ ಹೇಳುವಂತೆ ದೇಶದ ಕಾನೂನಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುವ ಪ್ರತ್ಯೇಕ ಶರಿಯಾ ಕಾನೂನಿಗೆ ಅನುಗುಣವಾಗಿ ಒಂದು ಮ್ಯುಚುಯಲ್ ಫಂಡಿಂಗ್ ಪ್ರಾರಂಭಿಸಿದರೆ,ಶರಿಯಾ ಕಾನೂನು ಹೇಳುವವರದ್ದೇ ದರ್ಬಾರು! ಇನ್ನು  ಮೇಲಿನ ಸಾಮಾನ್ಯ ಕಾನೂನು ಅನ್ವಯಿಸಲು ಹೇಗೆ ಸಾಧ್ಯ? ಅವರಿಗಾಗಿಯೇ ಪ್ರತ್ಯೇಕ ವಿವಾಹ ಕಾಯ್ದೆ, ಅವರಿಗಾಗಿಯೇ ಪ್ರತ್ಯೇಕ ಅಪರಾಧ ಕಾಯ್ದೆ, ಅವರಿಗಾಗಿಯೇ ಪ್ರತ್ಯೇಕ ಬ್ಯಾಂಕ್,ಅವರಿಗಾಗಿಯೇ ಪ್ರತ್ಯೇಕ ಪಕ್ಷ ಹೀಗೆ ಎಣಿಸುತ್ತಿದ್ದರೆ ಪ್ರತ್ಯೇಕತೆಯ ಪಟ್ಟಿ ಇನ್ನೂ ಬೆಳೆಯುತ್ತಲೇ ಹೋಗುತ್ತದೆ. ಪ್ರತಿಯೊಂದರಲ್ಲೂ ಪ್ರತ್ಯೇಕತೆ ಬಯಸುವವರು ಈಗ ಮ್ಯುಚುಯಲ್ ಫಂಡ್ ಗೆ ಬಂದಿದ್ದಾರೆ. ಅದೂ ಶರಿಯತ್ ಪ್ರಕಾರ ಮಾಡಬೇಕಂತೆ! ಅವರೇನು ಕೇಳಿಲ್ಲ ಆದರೆ ಅವರನ್ನು ಮೆಚ್ಚಿಸಲು ನಮ್ಮದೇ ಎಸ್.ಬಿ.ಐ ಹಮ್ಮಿಕೊಂಡಿರುವ ಹೊಸ ಯೋಜನೆ!

ಇಸ್ಲಾಮಿಕ್ ಬ್ಯಾಂಕಿಂಗ್ ಅಥವಾ ಧಾರ್ಮಿಕ ಕಾನೂನುಗಳ ಚೌಕಟ್ಟಿನಲ್ಲಿ ಅಥವಾ ದೇಶದ ಕಾನೂನು ವ್ಯವಸ್ಥೆಗೆ ಪರ್ಯಾಯವಾದ ಕಾನೂನು ವ್ಯವಸ್ಥೆಗೆ ಅನುಗುಣವಾಗಿ ರೂಪುಗೊಳ್ಳುವ ಯೋಜನೆಗಳ ವಿಷಯದಲ್ಲಿ ಕೇರಳ ಹೈಕೋರ್ಟ್ ನ ತೀರ್ಪನ್ನು ಇಲ್ಲಿ ಹೇಳಲೇಬೇಕು. 2009ರಲ್ಲೂ ಕೇರಳ ಸರ್ಕಾರ, ಇಸ್ಲಾಮಿಕ್ ಬ್ಯಾಂಕ್ ಪ್ರಾರಂಭಿಸಲು ಮುಂದಾಗುತ್ತದೆ. ಆದರೆ ಸರ್ಕಾರದ ವಿರುದ್ಧ ಅಂದಿನ ಜನತಾ ಪಕ್ಷದ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಸುಬ್ರಹ್ಮಣಿಯನ್ ಸ್ವಾಮಿ ಅರ್ಜಿಯನ್ನು ಪುರಸ್ಕಿರಿಸಿದ ಕೇರಳ ಹೈಕೋರ್ಟ್  ಮಧ್ಯಂತರ ತಡೆ ನೀಡುತ್ತದೆ. ಕೊನೆಗೆ ಅಂದಿನ ಆರ್.ಬಿ.ಐ ಗೌರ್ನರ್ ಡಾ.ವೈ.ವಿ ರೆಡ್ಡಿಅವರೂ ಸಹ ಭಾರತದ ಜಾತ್ಯಾತೀತ ಕಾನೂನು ಹಾಗೂ ರಿಸರ್ವ್ ಬ್ಯಾಂಕ್ ಕಾನೂನಿನಲ್ಲಿ ಶರಿಯಾ ಕಾನೂನಿಗೆ ಅನುಗುಣವಾದ ಯೋಜನೆಗಳಿಗೆ ಅನುಮತಿ ಇಲ್ಲ ಎಂದು ಸ್ಪಷ್ಟನೆ ನೀಡಿ ಪ್ರಮಾಣಪತ್ರ ಸಲ್ಲಿಸಿದ್ದಾರೆ!

ಇಷ್ಟೇಲ್ಲಾ ನಡೆದಿದ್ದರೂ ಇವತ್ತಿಗೂ ಎಚ್ಚೆತ್ತುಕೊಂಡಿಲ್ಲ ಎಂದರೆ ಈ ದೇಶದಲ್ಲಿ ಏನಾಗುತ್ತಿದೆ? ಇಂತಹದ್ದೊಂದು ಪ್ರಶ್ನೆ ಕೇಳಲೇಬೇಕಿದೆ. ಏಕೆಂದರೆ, ಕೇರಳ ಕೋರ್ಟ್ ತಿರ್ಪನ್ನು ಬದಿಗಿಟ್ಟರೂ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಶರಿಯತ್ ಕೋರ್ಟ್ ಗಳ ಕುರಿತು ಮಹತ್ವದ ತೀರ್ಪನ್ನು ನೀಡಿತ್ತು. ಶರಿಯತ್ ’ಕೋರ್ಟ್’ ಗಳಿಗೆ ಕಾನೂನಿನ ಅಡಿಯಲ್ಲಿ ಮಾನ್ಯತೆಯೇ ಇಲ್ಲವೆಂಬುದು ಆ ತೀರ್ಪಿನ ಸಾರಾಂಶ. ಅದು ಫತ್ವಾಗೆ ಮಾತ್ರ ಸೀಮಿತವಾಗಿದ್ದರೆ ಈಗಿನ ವಿಷಯಕ್ಕೆ ಸಮಸ್ಯೆ ಇರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಹೇಳಿರುವುದು ಶರಿಯತ್ ಕೋರ್ಟ್ ಗಳು ಹೊರಡಿಸುವ ಫತ್ವಾಗಳಿಗಲ್ಲ ಸಂಪೂರ್ಣ ಶರಿಯತ್ ಕೋರ್ಟ್ ಗಳಿಗೆ ಎಂಬುದು ಗಮನಾರ್ಹ ವಿಷಯ. ಶರಿಯತ್ ಕೋರ್ಟ್ ಗಳಿಗೆ ಕಾನೂನು ಮಾನ್ಯತೆ ಇಲ್ಲ ಎಂದಾದ ಮೇಲೂ ಅದಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸುವುದಾದರೆ ಇತ್ತೀಚೆಗಷ್ಟೇ ಹೆಣ್ಣುಮಕ್ಕಳು ಮೊಬೈಲ್ ಬಳಸುವುದು, ಜೀನ್ಸ್ ಧರಿಸುವುದನ್ನು ನಿಷೇಧಿಸಿದ್ದ  ಸ್ಥಳೀಯ ಪಂಚಾಯತ್ ಗಳು ಹೊರಡಿಸುವ ಕಾನೂನೂ ಸಹ ಅಧಿಕೃತವಾಗಿ ಜಾರಿಗೆ ತರಲು ಸಾಧ್ಯವೋ?

ಮ್ಯುಚುಯಲ್ ಫಂಡ್ ಎನ್ನುವುದು ದೇಶದ ಆರ್ಥಿಕತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯ. ಒಂದೆಡೆ ಕೇಂದ್ರ ಸರ್ಕಾರ ದಾವೂದ್ ಇಬ್ರಾಹಿಂ, ಯಾಸೀನ್ ಭಟ್ಕಳ್ ಅವರಂತಹ ಭಯೋತ್ಪಾದಕ ಕೃತ್ಯ ಎಸಗುವವರ ಆರ್ಥಿಕ ಮೂಲಕ್ಕೆ ಕತ್ತರಿ ಹಾಕಬೇಕೆಂಬ ಕಠಿಣ ನಿರ್ಧಾರ ಕೈಗೊಂಡಿದೆ. ಉಗ್ರರಿಗೆ ಹರಿದುಬರುತ್ತಿರುವ ಹಣದ ಸಂಪನ್ಮೂಲಗಳನ್ನು ಸ್ಥಬ್ಧಗೊಳಿಸಲು ಹರಸಾಹಸ ಪಡುತ್ತಿದೆ. ಇಂತಹ ಸಂದರ್ಭದಲ್ಲಿ ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಶರಿಯತ್ ಕಾನೂನಿನಡಿ ಮ್ಯುಚುಯಲ್ ಫಂಡ್ ಜಾರಿಗೆ ತಂದರೆ ಪರಿಸ್ಥಿತಿ ಏನಾಗಬೇಡ? ಎಸ್.ಬಿ.ಐ ಪ್ರಾರಂಭಿಸಿರುವ ಶರಿಯತ್ ಮ್ಯುಚುಯಲ್ ಫಂಡ್ ಯೋಜನೆ ಹೆಸರೇ ಹೇಳುವಂತೆ ಶರಿಯತ್ ಸಲಹಾ ಮಂಡಳಿಯ ಅಧೀನಕ್ಕೆ ಒಳಪಟ್ಟಿರುತ್ತದೆ. ಅದರ ನಿರ್ವಹಣೆ ಶರಿಯತ್ ಕೋರ್ಟ್ ಗಳಲ್ಲಿರುವವರ ಅಣತಿಯಂತೆಯೇ ನಡೆಯಲಿದೆ. ಶರಿಯತ್ ಕೋರ್ಟ್ ಗಳು ಅಥವಾ ಧಾರ್ಮಿಕ ಮುಖಂಡರು ಅನುಮತಿ ನೀಡುವ ಕಂಪನಿಗಳಲ್ಲಿ ಮಾತ್ರ ಹೂಡಿಕೆ ಮಾಡಲು ಅವಕಾಶವಿರುತ್ತದೆ. ಹೂಡಿಕೆ ಮಾಡಿದ ನಂತರವೂ ಅದನ್ನು ಬಳಸುವುದಕ್ಕೂ ನಿಬಂಧನೆಗಳೂ ಇಲ್ಲದೇ ಇರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮ್ಯುಚುಯಲ್ ಫಂಡ್ ನ ಹಣ ಯಾವುದಕ್ಕೂ ಬಳಕೆಯಾಗುವ ಸಾಧ್ಯತೆ ಇದೆ ಅಲ್ಲವೇ? ಇಸ್ಲಾಂ ನಲ್ಲಿ ಬಡ್ಡಿ ತೆಗೆದುಕೊಳ್ಳುವುದು, ಮದ್ಯ ವ್ಯಾಪಾರಕ್ಕೆ ಸಂಬಂಧಿಸಿದ್ದೇ ಮೊದಲಾದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಇಂತಹ ಕೆಲವೊಂದು ವಿಷಯಗಳು ಮೇಲ್ನೋಟಕ್ಕೆ ಸಮಾಜಕ್ಕೆ ಒಳಿತೆಂದೇ ಕಂಡರೂ, ಸರ್ಕಾರಿ ಸ್ವಾಮ್ಯದ ಇಡಿಯ ಒಂದು ಯೋಜನೆಯನ್ನು ಶರಿಯತ್ ಕಾನೂನಿನ ಆಧಾರದಲ್ಲಿ ರೂಪಿಸುವುದು ಪಾನ್ ಇಸ್ಲಾಂ ಅಥವಾ ಇಸ್ಲಾಂ ಬ್ರದರ್ ಹುಡ್ ಹೆಸರಿನಲ್ಲಿ ನಡೆಯುವ ಅದೆಷ್ಟೋ ವಿಚಾರಗಳ ದೃಷ್ಠಿಯಿಂದ ಭಾರತದ ಸಂವಿಧಾನಕ್ಕೆ ವಿರೋಧಿಯಾಗುವುದಿಲ್ಲ ಎಂಬುದಕ್ಕೆ ಖಾತ್ರಿ ಏನು? ಧಾರ್ಮಿಕ ಸಂಘರ್ಷದಲ್ಲಿ ಇಸ್ಲಾಂ ನ ತೀವ್ರತೆಯನ್ನು ನೆನಪಿಸುವ ಇರಾಕ್ ನ ಐ.ಎಸ್.ಐ.ಎಸ್ ಸಂಘಟನೆಯ ಕ್ರೌರ್ಯ ಕಣ್ಣಮುಂದೆಯೇ ಇದೆ. ಇರಾಕ್ ನಲ್ಲಿರುವ ಇಸೀಸ್ ಉಗ್ರರು ತಮ್ಮದೇ ಕರೆನ್ಸಿ ಜಾರಿಗೆ ತರುವ ಮಟ್ಟಿಗೆ  ವ್ಯವಸ್ಥೆಗೆ ಸೆಡ್ಡು ಹೊಡೆದು ಸದ್ದಿಲ್ಲದೇ ಹೇಗೆ ಪರ್ಯಾಯ ವ್ಯವಸ್ಥೆ ರೂಪಿಸುತ್ತಾರೆ ಎಂಬುದೂ ನಮಗೆ ಚೆನ್ನಾಗಿ ತಿಳಿದಿದೆ. ಇಸ್ಲಾಮ್ ಬ್ರದರ್ ಹುಡ್  ನ್ನು ವ್ಯಾಖ್ಯಾನಿಸಲು ಇರಾಕ್ ನ ಐ.ಎಸ್.ಐ.ಎಸ್ ನಿಂದ ಭಾರತಕ್ಕೆ ವಾಪಸ್ಸಾದ ಮುಂಬೈ  ಯುವಕನ ಪ್ರಕರಣ, ಜಮ್ಮು-ಕಾಶ್ಮೀರದಲ್ಲಿ ಐ.ಎಸ್.ಐ.ಎಸ್ ಧ್ವಜ ಹಾರಿಸಿದ್ದು, ತಮಿಳುನಾಡಿನಲ್ಲಿ ಟೀ ಶರ್ಟ್ ಗಳ ಮೇಲೆ ಧ್ವಜ ಇಸೀಸ್ ಧ್ವಜ ರಾರಾಜಿಸಿದ್ದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ.

ಒಂದು ವೇಳೆ ಶರಿಯತ್ ಕೋರ್ಟ್ ನ ನಾನೂನು ಪ್ರಕಾರ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಒಂದು ಯೋಜನೆಯೇ ಜಾರಿಗೆ ಬರುತ್ತದೆ ಎಂದಾರೆ ಅದೇ ಶರಿಯತ್ ಕೋರ್ಟ್ ಧರ್ಮದ ನೆಲೆಗಟ್ಟಿನಲ್ಲಿ ಒಪ್ಪುವ ಒಂದಕ್ಕಿಂತ ಹೆಚ್ಚು ಮದುವೆಯಂತಹ ವಿಷಯಗಳನ್ನೂ ಕಾನೂನು ಬದ್ಧ ಮಾಡಬೇಕಾಗುತ್ತದೆ. ಹಾಗೆ ಮಾಡಲು ಸಾಧ್ಯವೇ? ಅದು ಸಾಧ್ಯವಿಲ್ಲ ಎಂದರೆ ಶರಿಯತ್ ಕಾನೂನಿನ ಪ್ರಕಾರ ಮ್ಯುಚುಯಲ್ ಫಂಡ್ ಪ್ರಾರಂಭಿಸಲು ಹೇಗೆ ಸಾಧ್ಯ?ಭಾರತೀಯ ಮುಸ್ಲಿಮರು ಶರಿಯತ್ ನ್ನು ಒಪ್ಪುವುದಿಲ್ಲ ಎಂದು ಮಾತ್ರ ಹೇಳಲು ಸಾಧ್ಯವಿಲ್ಲವಲ್ಲ. ಶರಿಯತ್ ಕಾನೂನಿನಲ್ಲಿ ನಿಷೇಧಿಸುವ ಅಂಶಗಳನ್ನು ಹೊರತುಪಡಿಸಿ ಹಾಗೆಯೂ ಓರ್ವ ವ್ಯಕ್ತಿ ಹೂಡಿಕೆ ಮಾಡಬಹುದು. ಅದಕ್ಕೆ ಪ್ರತ್ಯೇಕ ಕಾನೂನು ಇರುವ ಮ್ಯೂಚುಯಲ್ ಫಂಡ್ ಅಗತ್ಯವೇನು?

ಒಂದು ಸರ್ವೇ ಪ್ರಕಾರ, ಜಾಗತಿಕ ಮಟ್ಟದಲ್ಲಿ ಇಸ್ಲಾಮಿಕ್ ಬ್ಯಾಂಕ್ ಗಳ ಆಸ್ತಿ ಒಟ್ಟು 1.8ಟ್ರಿಲಿಯನ್ ಡಾಲರ್ ನಷ್ಟಿದೆ. ಅಂದರೆ ಬರೊಬ್ಬರಿ  112 ಲಕ್ಷ ಕೋಟಿಯಷ್ಟಿದೆ. ಒಂದು ವೇಳೆ ವಿದೇಶಿ ಮುಸ್ಲಿಮರ ಸೋಗಿನಲ್ಲಿರುವ ಭಯೋತ್ಪಾದಕರು ಮ್ಯುಚುಯಲ್ ಫಂಡ್ ಗೆ ಹಣ ನೀಡಿ ಸದ್ದಿಲ್ಲದೇ ಆಡಳಿತ, ಆರ್ಥಿಕತೆಯ ಮೇಲೆ ಹಿಡಿದ ಸಾಧಿಸುವ ಹುನ್ನಾರವಿದ್ದರೆ ಈ ಶರಿಯತ್ ಕಾನೂನಿನ ಅಡಿ ಪ್ರಾರಂಭವಾಗುವ ಮ್ಯುಚುಯಲ್ ಫಂಡ್ ನಿಂದ ದೇಶದ ಭದ್ರತೆಗೇ ಅಪಾಯ ಎಂಬುದು ನಮಗೇಕೆ ಅರ್ಥವಾಗುತ್ತಿಲ್ಲ.ಸರಿ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತದೆ ಎಂದುಕೊಳ್ಳೋಣ. ಒಂದು ವೇಳೆ ಶರಿಯತ್ ಕಾನೂನಿಗೆ ವಿರುದ್ಧವಾಗಿ ಹೂಡಿಕೆ ಮಾಡಿದಲ್ಲಿ ಆತನ ವಿರುದ್ಧ ಫತ್ವಾ ಹೊರಡಿಸಲಾಗುತ್ತದೆ ಎಂಬ ಅಂಶವೂ ಇದೆ. ಹಾಗಾದಲ್ಲಿ ಫತ್ವಾ ಹೊರಡಿಸುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಬೆಲೆ ಏನಾಯಿತು?

ಶರಿಯತ್ ಕಾನೂನಿನಡಿಯಲ್ಲಿ ಮ್ಯುಚುಯಲ್ ಫಂಡ್ ಪ್ರಾರಂಭಿಸುವಂತಹ ಘನ ಕಾರ್ಯ ಮಾಡಲು ಹೊರಟಿರುವ ಎಸ್.ಬಿ.ಐ ನೀಡುರುವ ಸ್ಪಷ್ಟನೆಯಾದರೂ ಏನು? ” ಭಾರತದ ಮುಸ್ಲಿಂ ಜನಸಂಖ್ಯೆಯಲ್ಲಿ ಬಹುತೇಕರು ಬ್ಯಾಂಕಿಂಗ್ ವ್ಯವಸ್ಥೆಯಿಂದ ದೂರ ಉಳಿದಿದ್ದಾರೆ” ಏಕೆಂದರೆ ಇಸ್ಲಾಂನ ಕಾನೂನು ಬಡ್ಡಿ ತೆಗೆದುಕೊಳ್ಳುವುದನ್ನು ನಿಷೇಧಿಸಿದೆ. ಆದ್ದರಿಂದ ಶರಿಯತ್ ಕೋರ್ಟ್ ಕಾನೂನಿನ ಪ್ರಕಾರವೇ ಮ್ಯುಚುಯಲ್ ಫಂಡ್ ನ ನಿಯಮಗಳನ್ನೇ ಬದಲಿಸಿಬಿಟ್ಟರೆ? ಭಾರತದ ಮುಸ್ಲಿಂ ಜನಸಂಖ್ಯೆಯಲ್ಲಿ ಬ್ಯಾಂಕಿಂಗ್ ನಿಂದ ದೂರ ಉಳಿದವರನ್ನು ಬ್ಯಾಂಕ್ ವ್ಯವಸ್ಥೆಯೊಂದಿಗೆ ಜೋಡಿಸಲು ಇರುವುದು ಇದೊಂದೇ ಮಾರ್ಗವೇ? ಹಾಗಿದ್ದರೆ ಪ್ರಧಾನಿ ಇತ್ತೀಚೆಗಷ್ಟೇ ಚಾಲನೆ ನೀಡಿದ್ದ ಜನ್ ಧನ್ ಯೋಜನೆ ಯಾವ ಪುರುಷಾರ್ಥಕ್ಕೆ? ಜನ್-ಧನ್ ಯೋಜನೆಗೂ ಕೂಡ ಮುಸ್ಲಿಂ ಸಮುದಾಯದವರನ್ನು ಬ್ಯಾಂಕ್ ನೊಂದಿಗೆ ಜೋಡಿಸಲು ಸಾಧ್ಯವಾಗಿಲ್ಲ ಎಂದರೆ ಮುಸ್ಲಿಮರು ಭಾರತ ಸರ್ಕಾರದ ಯೋಜನೆಗಳನ್ನು ಧಿಕ್ಕರಿಸುತ್ತಿರಬೇಕು.ಇಲ್ಲ ಆ ಯೋಜನೆಗಳಿಗೆ ಮುಸ್ಲಿಂ ಸಮುದಾಯದವರನ್ನು ತಲುಪಲು ಸಾಧ್ಯವಾಗದೇ ಇರಬೇಕು. ಇದರಲ್ಲಿ ಯಾವುದು ಸತ್ಯ? ಅಚ್ಚರಿಯ ವಿಷಯ ಗೊತ್ತೆ? ಈ ವರೆಗೂ ಜನ್-ಧನ್ ಯೋಜನೆಯಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಬ್ಯಾಂಕ್ ವ್ಯವಸ್ಥೆಯೊಂದಿಗೆ ಜೋಡಣೆಯಾಗಿರುವವರು ಇದೇ ಸಮುದಾಯದವರು!

ಎಲ್ಲರಿಗೂ ಒಂದೇ ಕಾನೂನು,  ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂದು ಇಡೀ ದೇಶವೇ ಒಂದಾಗಿರಲು ಬಯಸುತ್ತಿದ್ದರೆ ಶರಿಯತ್ ಕಾನೂನು, ಫತ್ವಾ ಗಳಿಗೆ ಅನುಗುಣವಾಗಿ ಯೋಜನೆ, ಕಾರ್ಯಕ್ರಮ, ಮ್ಯುಚುಯಲ್ ಫಂಡ್ ಇತ್ಯಾದಿಗಳನ್ನು ಪ್ರಾರಂಭಿಸುವ ಭಯಂಕರ ಆಲೋಚನೆ ಮೂಡಿದರೆ ಭಾರತ ಶ್ರೇಷ್ಠವಾಗಬಹುದೇನೋ ಗೊತ್ತಿಲ್ಲ. ಆದರೆ ಏಕ್ ಭಾರತ್ ಶ್ರೇಷ್ಠ್ ಭಾರತ್ ಆಗುವುದಕ್ಕಂತೂ ಸಾಧ್ಯವಿಲ್ಲ. ಹಾಗೂ ಒಂದೇ ಭಾರತ ಎಂದು ಹೇಳುವ ಯಾವ ಅವಕಾಶವೂ ಉಳಿಯುವುದಿಲ್ಲ! ಎಚ್ಚರ

ಚಿತ್ರಕೃಪೆ :http://www.financialexpress.com

5 ಟಿಪ್ಪಣಿಗಳು Post a comment
 1. Nagshetty Shetkar
  ಡಿಸೆ 13 2014

  ಭಗವದ್ಗೀತೆಯನ್ನು ಸೆಕ್ಯೂಲರ್ ರಾಷ್ಟ್ರದ ಮೇಲೆ ಹೇರಲು ಹೊರಟಿರುವ ಸುಷ್ಮಾ ರಾಜ್ ಅನ್ನು ಮೌನವಾಗಿ ಒಪ್ಪಿಕೊಳ್ಳುವ ಲೇಖಕರು ಏರು ಕಂಠದಲ್ಲಿ ಇಸ್ಲಾಮಿಕ್ ಬ್ಯಾಂಕ್ ಅನ್ನು ಸೆಕ್ಯೂಲರಿಸಂ ಹೆಸರಿನಲ್ಲಿ ವಿರೋಧಿಸುತ್ತಿರುವುದು ಏತಕ್ಕೆ? ಹಿಪಾಕ್ರಸಿ.

  ಉತ್ತರ
  • Nagshetty Shetkar
   ಡಿಸೆ 13 2014

   ಭಾರತದ ಜನಸಂಖ್ಯೆಯ ಗಣನೀಯ ಪಾಲು ಆಗಿರುವ ಮುಸಲ್ಮಾನರು ಬ್ಯಾಂಕಿಂಗ್ ವ್ಯವಸ್ಥೆಗೆ ವಿಮುಖರಾಗಿದ್ದಾರೆ. ಆದುದರಿಂದ ಮುಸಲ್ಮಾನರ ಬಳಿ ಇರುವ ಧನ ಕನಕ ಬ್ಯಾಂಕ್ ಪಾಲಾಗದೇ ಇದೆ. ಸರಕಾರ ಕೇವಲ ಮುಸಲ್ಮಾನರ ಬಗ್ಗೆ ಪ್ರೀತಿಯಿಂದ ಇಸ್ಲಾಮಿಕ್ ಬ್ಯಾಂಕ್ ತೆರೆಯುತ್ತಿಲ್ಲ, ಮುಸಲ್ಮಾನರ ಧನ ಕನಕವನ್ನು ತನ್ನ ವಶದಲ್ಲಿ ಇಡಲು ಬ್ಯಾಂಕ್ ತೆರೆಯುತ್ತಿದೆ. ಇಸ್ಲಾಮಿಕ್ ಬ್ಯಾಂಕ್ ನಿಂದ ಸರಕಾರಕ್ಕೆ ಲಾಭವೇ ಆಗುತ್ತದೆ. ಅಲ್ಲದೆ ಮುಸಲ್ಮಾನರ ಎಲ್ಲಾ ಆರ್ಥಿಕ ವ್ಯವಹಾರಗಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ. ಇದರಿಂದ ಇಸ್ಲಾಮಿಕ್ ಮೂಲಭೂತವಾದದ ನಿಗ್ರಹವೂ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಅಂಡರ್ ವರ್ಲ್ಡ್ ಮೇಲೂ ನಿಯಂತ್ರಣ ಸಾಧ್ಯವಾಗುತ್ತದೆ. ಹವಾಲ ಚಟುವಟಿಕೆಗಳ ಮೇಲೂ ಕಡಿವಾಣ ಬೀಳುತ್ತದೆ. ಇಷ್ಟೆಲ್ಲಾ ಫಾಯಿದೆ ಇರುವುದರಿಂದಲೇ ಸರಕಾರ ಇಸ್ಲಾಮಿಕ್ ಬ್ಯಾಂಕ್ ತೆರೆಯಲು ಮುಂದಾಗಿದೆ.

   ಉತ್ತರ
   • ಡಿಸೆ 17 2014

    @Nagshetty Shetkar
    ಮೊದಲನೆಯದ್ದಾಗಿ ಹಿಪಾಕ್ರಸಿ ಬಗ್ಗೆ ಸ್ಪಷ್ಟನೆ ಕೊಟ್ಟುಬಿಡುತ್ತೇನೆ, ಆನಂತರ ಇಸ್ಲಾಮಿಕ್ ಬ್ಯಾಂಕಿಂಗ್ ವಿಚಾರಕ್ಕೆ ಬರೋಣ.

    ಸೆಕ್ಯೂಲರ್ ರಾಷ್ಟ್ರ ಎಂಬ ಕಾರಣಕ್ಕೆ ನಿರ್ದಿಷ್ಟ ಧರ್ಮದ ಭಾಗವಾಗಿರುವ ಭಗವದ್ಗೀತೆಯನ್ನು ಹೇರಬಾರದು ಎನ್ನುತ್ತೀರಿ ಆದರೆ ಅದೇ ಸೆಕ್ಯುಲರ್ ರಾಷ್ಟ್ರದಲ್ಲಿ ನಿರ್ದಿಷ್ಟ ಧರ್ಮದ(ಇಸ್ಲಾಂ) ಕಾನೂನಿಗೆ ಅನುಗುಣವಾಗಿ ಮ್ಯುಚುಯಲ್ ಫಂಡ್ ಯೋಜನೆ ಜಾರಿಗೆ ತಂದರೆ ಸರಿ ಎನ್ನುತ್ತೀರಿ ಹಿಪಾಕ್ರೆಟ್ ಯಾರು ನಾನೋ ಅಥವಾ ನೀವೋ?

    ಇನ್ನು ಇಸ್ಲಾಮಿಕ್ ಬ್ಯಾಂಕಿಂಗ್ ವಿಚಾರ, ಸಾಮಾನ್ಯ ಜನತೆಗೆ ತೆರೆದಿರುವ ಬ್ಯಾಂಕ್ ಗಳೇನು ಅಲ್ಪಸಂಖ್ಯಾತರಿಗೆ ವರ್ಜ್ಯವೇ? ಅಥವಾ ಅಲ್ಪಸಂಖ್ಯಾತರನ್ನು ಅಸ್ಪೃಷ್ಯರಂತೆ ನಡೆಸಿಕೊಳ್ಳುತ್ತಿದೆಯೇ? ಇಲ್ಲವಲ್ಲ, ಇಡೀ ದೇಶದ ಜನರೆಲ್ಲಾ ಒಂದೇ ಕಾನೂನಿನಡಿ ಹೂಡಿಕೆ, ವ್ಯಾಪಾರ ವಹಿವಾಟು(money transaction) ಮಾಡುತ್ತಿದ್ದರೆ ಒಂದು ನಿರ್ದಿಷ್ಟ ವರ್ಗಕ್ಕೆ ಪ್ರತ್ಯೇಕ ಕಾನೂನು ಏಕೆ? ಅದು ಇಸ್ಲಾಂ ಆಗಿರಬಹುದು ಇನ್ಯಾವುದೇ ಆಗಿರಬಹುದು ಪ್ರತ್ಯೇಕ ಕಾನೂನಿನ ಅಡಿಯಲ್ಲಿ ಮ್ಯುಚುಯಲ್ ಫಂಡ್ ಏಕೆ ಎಂಬುದು ನನ್ನ ಪ್ರಶ್ನೆ ಸಾಧ್ಯವಾದರೆ ಸೂಕ್ತ ಕಾರಣ ಕೊಟ್ಟು ಸಮರ್ಥಿಸಿಕೊಳ್ಳಿ. ಸೆಕ್ಯುಲರ್, ಕೋಮುವಾದ ಎಂಬ ಹಳೆಯ ಪುಂಗಿ ಊದಬೇಡಿ. ಕೇಳಿ ಕೇಳಿ ಸಾಕಾಗಿದೆ…..

    ಉತ್ತರ
 2. ಡಿಸೆ 17 2014

  @Nagshetty Shetkar
  ಮೊದಲನೆಯದ್ದಾಗಿ ಹಿಪಾಕ್ರಸಿ ಬಗ್ಗೆ ಸ್ಪಷ್ಟನೆ ಕೊಟ್ಟುಬಿಡುತ್ತೇನೆ, ಆನಂತರ ಇಸ್ಲಾಮಿಕ್ ಬ್ಯಾಂಕಿಂಗ್ ವಿಚಾರಕ್ಕೆ ಬರೋಣ.

  ಸೆಕ್ಯೂಲರ್ ರಾಷ್ಟ್ರ ಎಂಬ ಕಾರಣಕ್ಕೆ ನಿರ್ದಿಷ್ಟ ಧರ್ಮದ ಭಾಗವಾಗಿರುವ ಭಗವದ್ಗೀತೆಯನ್ನು ಹೇರಬಾರದು ಎನ್ನುತ್ತೀರಿ ಆದರೆ ಅದೇ ಸೆಕ್ಯುಲರ್ ರಾಷ್ಟ್ರದಲ್ಲಿ ನಿರ್ದಿಷ್ಟ ಧರ್ಮದ(ಇಸ್ಲಾಂ) ಕಾನೂನಿಗೆ ಅನುಗುಣವಾಗಿ ಮ್ಯುಚುಯಲ್ ಫಂಡ್ ಯೋಜನೆ ಜಾರಿಗೆ ತಂದರೆ ಸರಿ ಎನ್ನುತ್ತೀರಿ ಹಿಪಾಕ್ರೆಟ್ ಯಾರು ನಾನೋ ಅಥವಾ ನೀವೋ?

  ಇನ್ನು ಇಸ್ಲಾಮಿಕ್ ಬ್ಯಾಂಕಿಂಗ್ ವಿಚಾರ, ಸಾಮಾನ್ಯ ಜನತೆಗೆ ತೆರೆದಿರುವ ಬ್ಯಾಂಕ್ ಗಳೇನು ಅಲ್ಪಸಂಖ್ಯಾತರಿಗೆ ವರ್ಜ್ಯವೇ? ಅಥವಾ ಅಲ್ಪಸಂಖ್ಯಾತರನ್ನು ಅಸ್ಪೃಷ್ಯರಂತೆ ನಡೆಸಿಕೊಳ್ಳುತ್ತಿದೆಯೇ? ಇಲ್ಲವಲ್ಲ, ಇಡೀ ದೇಶದ ಜನರೆಲ್ಲಾ ಒಂದೇ ಕಾನೂನಿನಡಿ ಹೂಡಿಕೆ, ವ್ಯಾಪಾರ ವಹಿವಾಟು(money transaction) ಮಾಡುತ್ತಿದ್ದರೆ ಒಂದು ನಿರ್ದಿಷ್ಟ ವರ್ಗಕ್ಕೆ ಪ್ರತ್ಯೇಕ ಕಾನೂನು ಏಕೆ? ಅದು ಇಸ್ಲಾಂ ಆಗಿರಬಹುದು ಇನ್ಯಾವುದೇ ಆಗಿರಬಹುದು ಪ್ರತ್ಯೇಕ ಕಾನೂನಿನ ಅಡಿಯಲ್ಲಿ ಮ್ಯುಚುಯಲ್ ಫಂಡ್ ಏಕೆ ಎಂಬುದು ನನ್ನ ಪ್ರಶ್ನೆ ಸಾಧ್ಯವಾದರೆ ಸೂಕ್ತ ಕಾರಣ ಕೊಟ್ಟು ಸಮರ್ಥಿಸಿಕೊಳ್ಳಿ. ಸೆಕ್ಯುಲರ್, ಕೋಮುವಾದ ಎಂಬ ಹಳೆಯ ಪುಂಗಿ ಊದಬೇಡಿ. ಕೇಳಿ ಕೇಳಿ ಸಾಕಾಗಿದೆ…..

  ಉತ್ತರ
  • Narendra
   ಆಗಸ್ಟ್ 17 2016

   @ Srinivas Rao -Thumba Chennagi helidri Sir ..

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments