ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 29, 2014

34

ಮತಾಂತರ ಸರಿಯಾದರೇ ,ಮರುಮತಾಂತರವೇಕೆ ತಪ್ಪು?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

Conversionಹೀಗೆ ಹತ್ತು ದಿನಗಳ ಹಿಂದೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಹತ್ತಿರ ಒಂದು ಜಾಹೀರಾತು ಓದಿದ್ದೆ.”೧೫ ಕಥೆಗಳು ನಿಮ್ಮ ಜೀವನವನ್ನೇ ಬದಲಾಯಿಸುವವು” ಅಂತ ಬರೆದಿತ್ತು.ಇದ್ಯಾವುದೋ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಜಾಹೀರಾತು ಎಂದುಕೊಂಡೆ.ಆದರೆ,ಇತ್ತೀಚೆಗೆ ದಿನ ಪತ್ರಿಕೆಗಳ ಮುಖಪುಟದಲ್ಲೂ ದೊಡ್ಡದಾಗಿ ಇದೇ ಜಾಹೀರಾತು “ಅನುಭವಿಸಿ ಬದಲಾಯಿಸುವ ಶಕ್ತಿ – ೧೫ ಕಥೆಗಳು ನಿಮ್ಮ ಜೀವನವನ್ನು ಬದಲಾಯಿಸುವುದು” ಎಂದು ಕಾಣಿಸಲಾರಂಭಿಸಿತು. ಪ್ರತಿದಿನ ಜಾಹೀರಾತು ಕೊಡುವಂತದ್ದು ಈ ಪುಸ್ತಕದಲ್ಲಿ ಅಂತದ್ದೇನಿದೆ ಎಂದು ಓದುವ ಕೂತುಹಲವಾಗಿ ಓದಿದೆ.ಮೂರ್ನಾಲ್ಕು ಪುಟ ಓದಿದಂತೆ ಪುಸ್ತಕದ ಮುಂದಿನ ಪುಟಗಳಲ್ಲಿ ಏನಿರಬಹುದು ಮತ್ತು ಈ ಪುಸ್ತಕ ಓದಿದವರು ಏನಾಗಿ ಬದಲಾಗಬೇಕು ಎಂಬ ಉದ್ದೇಶವಿದೆಯೆಂದು ಖುದ್ದು ಅನುಭವಿಸಿದೆ!

ಆ ಪುಸ್ತಕದಲ್ಲಿ ಬಾಲಿವುಡ್ ನಟ ಜಾನಿಲಿವರ್,ನಟಿ ನಗ್ಮಾ ಇನ್ನೂ ಹಲವರು ತಮ್ಮ ತಮ್ಮ ಕತೆಗಳನ್ನು ಹೇಳಿ ಕೊಂಡಿದ್ದಾರೆ.ಈ ಪುಸ್ತಕದ ಸರಳ ಸಾರಾಂಶವೇನೆಂದರೆ,”ಬೈಬಲ್ ಮತ್ತು ಜೀಸಸ್” ಮಾತ್ರ ಸತ್ಯ ಮತ್ತು ಅವು ಮಾತ್ರವೇ “ಪಾಪಿ”ಗಳಾದ ಮನುಷ್ಯ ಬದುಕಿನ ಬಿಡುಗಡೆಯ ಹಾದಿ ಎಂಬುದು!.ಅದೊಂದೇ ಮಾತ್ರ ಸತ್ಯವೆಂದಾದರೆ,ಉಳಿದ ರಿಲಿಜನ್ನುಗಳು, ಸಂಪ್ರದಾಯಗಳು ಮತ್ತು ಭಿನ್ನ ಹಾದಿಗಳೆಲ್ಲವೂ ಸುಳ್ಳು ಅಂತಾಯಿತಲ್ಲ! ಈ ಪುಸ್ತಕದ ಉದ್ದೇಶವನ್ನು ಇನ್ನೂ ಸರಳ ಮಾಡುವುದಾದರೆ ಅಥವಾ ಸಾಮಾನ್ಯಜನರ ಭಾಷೆಯಲ್ಲಿ ಹೇಳುವುದಾದರೆ,ಜನರನ್ನು ಕ್ರಿಸ್ತ ಮತಕ್ಕೆ ಬನ್ನಿ ಎಂದು ಕರೆಯುವ ಮತಾಂತರದ ಹೊಸ ತಂತ್ರವಷ್ಟೇ.ಈ ಬಗ್ಗೆ ಯಾವ ಮೀಡಿಯಾಗಳು,ಯಾವ ಸೆಕ್ಯುಲರ್ ನಾಯಕನೂ ಅಬ್ಬರಿಸಿ ಬೊಬ್ಬಿರಿಯಲಿಲ್ಲ,ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ಮೊಸಳೆ ಕಣ್ಣೀರೂ ಸುರಿಸಲಿಲ್ಲ.

ಆದರೆ,ಉ.ಪ್ರದೇಶದ ಆಗ್ರಾದಲ್ಲಿ ೫೭ ಮುಸ್ಲಿಂ ಕುಟುಂಬಗಳು “ಧರ್ಮ ಜಾಗರಣಾ ಮಂಚ” ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ಮರಳಿದ ಸುದ್ದಿ ಮಾತ್ರ ಈಗ ಸೆಕ್ಯುಲರ್ ಪಕ್ಷಗಳ ನಿದ್ದೆಕೆಡಿಸಿದೆ.ಈ ಬಗ್ಗೆ ಸದನದಲ್ಲಿ ಗದ್ದಲವೂ ಆಗಿದೆ.ಸದನದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು “ಮತಾಂತರ ನಿಷೇಧ ಕಾಯ್ದೆ”ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ. “ಧಾರ್ಮಿಕ ಸ್ವಾತಂತ್ರ್ಯ”ದ ನೆಪದಲ್ಲಿ ಇಷ್ಟು ದಿನ ಭಾರತೀಯ ಸಂಪ್ರದಾಯಗಳ ಮೇಲೆ “ಮತಾಂತರ”ದ ಹೆಸರಿನ ಭ್ರಮೆಯ ಹುಚ್ಚುಕುದುರೆಯೇರಿ ಸವಾರಿ ಮಾಡುತಿದ್ದ ಸೆಮೆಟಿಕ್ ರಿಲಿಜನ್ನುಗಳಿಗೆ ಹೆಗಲು ಕೊಡುತಿದ್ದ ಸೆಕ್ಯುಲರ್ ಪಕ್ಷಗಳು ಈಗ ಪಜೀತಿಗೆ ಬಿದ್ದಿವೆ.ಅಷ್ಟಕ್ಕೂ “ಮರುಮತಾಂತರ” ತಪ್ಪು ಎನ್ನುವುದಾದರೇ “ಮತಾಂತರ” ಸರಿ ಎನ್ನಲಿಕ್ಕೆ ಇವರಿಗೆ ಬಾಯಾದರೂ ಹೇಗೆ ಬರಬೇಕು ಹೇಳಿ?

ಆದರೆ,ಈ ಕಾಯ್ದೆಯ ಕುರಿತು ಖಂಡಿತವಾಗಿಯೂ ಸೆಕ್ಯುಲರ್ ಪಕ್ಷಗಳು “ಇದು ಸಂವಿಧಾನ ವಿರೋಧಿ” ಕ್ರಮ ಎಂದು ಗಿಳಿಪಾಠ ಒಪ್ಪಿಸಲಿವೆ ಕಾದು ನೋಡಿ.”ಧಾರ್ಮಿಕ ಸ್ವಾತಂತ್ರ್ಯ”ದ ನೆಪದಲ್ಲಿ ಒಂದು ರಿಲಿಜನ್ ಅನ್ನು,ಯಾವುದೇ ರಿಲಿಜನ್ನಿನ ಹಂಗಿಲ್ಲದೇ ಬದುಕುತ್ತಿರುವ ಭಾರತೀಯರ ಮೇಲೆ ಹೇರುವುದು “ವ್ಯಕ್ತಿ ಸ್ವಾತಂತ್ರ್ಯ”ದ ಮೇಲಿನ ದಬ್ಬಾಳಿಕೆಯಲ್ಲವೇ? ಹಾಗಿದ್ದರೆ,ಈ ಸಮಸ್ಯೆಯ ಮೂಲ ಕಾರಣವೇನು? ನಾವು ಅಳವಡಿಸಿಕೊಂಡಿರುವ ಪಾಶ್ಚಾತ್ಯ ಲಿಬರಲ್ ಸಂವಿಧಾನವೇ ಈ ಸಮಸ್ಯೆಯ ಮೂಲ ಕಾರಣ.ತಮ್ಮ ರಿಲಿಜನ್ನು ಮಾತ್ರವೇ ಏಕಮೇವ ಸತ್ಯವೆಂದು ಪ್ರತಿಪಾದಿಸುತ್ತ ಪರಸ್ಪರ ಸ್ಪರ್ಧಿಗಳಾಗುವ ಸೆಮೆಟಿಕ್ ರಿಲಿಜನ್ನುಗಳೇ ಇರುವ ದೇಶದಲ್ಲಿ ಪ್ರಭುತ್ವವು ರಿಲಿಜನ್ನಿನ ವಿಷಯದಲ್ಲಿ ತಟಸ್ಥ ಧೋರಣೆ ಅನುಸರಿಸಬೇಕು ಎನ್ನುವ ಧೋರಣೆಯ ಈ ಪಾಶ್ಚಾತ್ಯ ಸಂವಿಧಾನದಿಂದ ಸಮಸ್ಯೆಯಾಗುವುದಿಲ್ಲ.ಆದರೆ ಭಾರತದಂತಹ “ರಿಲಿಜನ್ ಇಲ್ಲ”ದೆಯೇ ಎಲ್ಲವನ್ನೂ ಗೌರವಿಸುವ ಮತ್ತು ತಮ್ಮ ಪಾಡಿಗೆ ತಾವಿರಲು ಬಯಸುವ ಬಹು ಸಂಪ್ರದಾಯಗಳ ಜನರಿರುವ ದೇಶದಲ್ಲಿ ಈ ಪಾಶ್ಚಾತ್ಯ ಸಮಾಜ ಆಧಾರಿತ ಲಿಬರಲ್ ಸಂವಿಧಾನ ನಮ್ಮ ಸಮಾಜಕ್ಕೆ ಹೊಂದಿಕೆಯಾಗುವುದಿಲ್ಲ.ಈ ಸತ್ಯವನ್ನು ನಮ್ಮ ಸೆಕ್ಯುಲರ್ ಮಹಾಶಯರು ಅರಿತುಕೊಳ್ಳುತ್ತಾರೆಯೇ?

ಆಗ್ರಾದಲ್ಲಿ ಘರ್ ವಾಪಸಿ(ಮರಳಿ ಮನೆಗೆ) ಆಗಿರುವ ೫೭ ಮುಸ್ಲಿಮ್ ಕುಟುಂಬಗಳ ಬಡತನವನ್ನು ಬಳಸಿಕೊಂಡು ಅವರಿಗೆ ಆಮಿಷವೊಡ್ಡಿ ಮರುಮತಾಂತರಿಸಲಾಗಿದೆ ಎನ್ನುವುದು ಸೆಕ್ಯುಲರ್ಗಳ ಅಳಲಾಗಿದೆ.ಹಾಗಿದ್ದರೆ ಇಷ್ಟು ದಿನ ಧಾರ್ಮಿಕ ಸ್ವಾತಂತ್ರ್ಯದ ಸೋಗಿನಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಆಮಿಷವೊಡ್ಡಿ ಮತಾಂತರ ಮಾಡಿಲ್ಲವೇ? ಮಾಡುತ್ತಿಲ್ಲವೇ? ಮತಾಂತರಕ್ಕೆಂದೇ ಯುರೋಪು,ಅಮೇರಿಕಾಗಳಿಂದ ಕ್ರಿಶ್ಚಿಯನ್ ಮಿಷನರಿಗಳಿಗೆ ಮತ್ತು ಅರಬ್ ದೇಶಗಳಿಂದ ಮುಸ್ಲಿಮರಿಗೆ ಹರಿಯುವ ಹಣದ ಹೊಳೆಯ ಬಗ್ಗೆ, ಮಿಷನರಿ ನೆಟ್ವರ್ಕ್ಗಳು ಕೆಲಸ ಮಾಡುವ ವಿಧಾನದ ಬಗ್ಗೆ ಬರೆಯುತ್ತ ಕುಳಿತರೇ ಒಂದು ಪುಸ್ತಕವೇ ಆದೀತು! ಕ್ರಿಶ್ಚಿಯನ್ನರು,ಮುಸ್ಲಿಮರು ಮಾಡುವ ಮತಾಂತರ ತಪ್ಪಲ್ಲ ಎನ್ನುವುದಾದರೆ ಧರ್ಮಜಾಗರಣ ಮಂಚದವರು ಮಾಡಿರುವ ಮರುಮತಾಂತರವೇಕೆ ತಪ್ಪಾಗುತ್ತದೆ?

೧೯೩೫ರಲ್ಲಿ ಕ್ರಿಶ್ಚಿಯನ್ ಮಿಷನರಿಯೊಬ್ಬಳಿಗೆ ನೀಡಿದ ಸಂದರ್ಶನದಲ್ಲಿ “ನನ್ನ ಕೈಯಲ್ಲಿ ಅಧಿಕಾರವಿದ್ದಿದ್ದರೆ ಮತಾಂತರವನ್ನು ನಿಷೇಧಿಸುತ್ತಿದ್ದೆ.ಇದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ” ಎಂದಿದ್ದರು ಗಾಂಧೀಜಿ.

ಭಾರತೀಯ ಸಂಪ್ರದಾಯಗಳ ಪಾಲಿಗೆ ಇಸ್ಲಾಂ,ಕ್ರಿಶ್ಚಿಯಾನಿಟಿ ಇತ್ಯಾದಿಗಳು ದೇವರೆಡೆಗೆ ಸಾಗುವ ಭಿನ್ನ ಹಾದಿಗಳು ಅಷ್ಟೇ.ತಮ್ಮ ಪಾಡಿಗೆ ತಾವಿದ್ದರೆ ಸಂಪ್ರದಾಯವಾದಿಗಳಿಗೇನು ಸಮಸ್ಯೆಯಾಗುವುದಿಲ್ಲ.ಆದರೆ ರಿಲಿಜನ್ನುಗಳು ತಮ್ಮ ರಿಲಿಜನ್ನಿನ ಪ್ರಚಾರಕ್ಕೆ,ಮತಾಂತರಕ್ಕೆ ಮೂಗು ತೂರಿಸಿದರೆ ಗಾಂಧೀಜಿ ಹೇಳಿದಂತೆ ಸಮಾಜದಲ್ಲಿ ಈ ರೀತಿಯ ಅಶಾಂತಿಯ ಅಲೆ ಎದ್ದೇ ಏಳುತ್ತದೆ.

“ಮಿಷನರಿಗಳು ಆಫ್ರೀಕಾ ದೇಶಕ್ಕೆ ಬಂದಾಗ ಅವರ ಕೈಯಲ್ಲಿ ‘ಬೈಬಲ್’ ಇತ್ತು ನಮ್ಮ ಕೈಯಲ್ಲಿ ‘ಭೂಮಿ’ ಯಿತ್ತು.ಅವರು ಜೊತೆಯಲ್ಲಿ ಪ್ರಾರ್ಥನೆ ಮಾಡೋಣವೆಂದರು.ನಾವು ಪ್ರಾರ್ಥನೆಗೆಂದು ಕಣ್ಣುಮುಚ್ಚಿ ತೆರೆದಾಗ,ಅವರ ಕೈಯಲ್ಲಿ ನಮ್ಮ ‘ಭೂಮಿ’ಯಿತ್ತು, ನಮ್ಮ ಕೈಯಲ್ಲಿ ಅವರ ‘ಬೈಬಲ್’ ಇತ್ತು” ಎಂದಿದ್ದರು ಆಫ್ರೀಕಾದ ಡೆಸ್ಮಂಡ್ ಟುಟು.ಮತಾಂತರವೆಂದರೆ ಅದು ಕೇವಲ ನಮ್ಮ ದೇವರುಗಳ ಬದಲಾವಣೆಯಲ್ಲ ಅದರಾಚೆಗೆ ನಮ್ಮ ಸಂಸ್ಕೃತಿ,ನಮ್ಮ ಬದುಕು,ನಮ್ಮ ಪರಿಸರವನ್ನು ಅದು ಬದಲಾಯಿಸುತ್ತದೆ.

ಭಾರತ ಸಹಸ್ರಾರು ವರ್ಷಗಳಿಂದ ಈ ಸೆಮೆಟಿಕ್ ರಿಲಿಜನ್ನುಗಳ ಮತಾಂತರ ದಾಳಿಗೆ ಗುರಿಯಾಗಿದೆ ಮತ್ತು ಗುರಿಯಾಗುತ್ತಲೇ ಇದೆ.ಈ ದಾಳಿ ನಿಲ್ಲಬೇಕಾದರೇ,ಪ್ರಬಲವಾದ “ಮತಾಂತ ನಿಷೇಧ ಕಾಯ್ದೆ” ಅತ್ಯಗತ್ಯವಾಗಿದೆ.ಆಗಷ್ಟೇ ಈ ಮತಾಂತರ-ಮರುಮತಾಂತರ ಜಿದ್ದಾಜಿದ್ದು ನಿಲ್ಲಬಹುದು ಇಲ್ಲದಿದ್ದರೆ ಸಾಧ್ಯವಿಲ್ಲ.ಏಕೆಂದರೆ “ಮತಾಂತರ”ವೆನ್ನುವುದು ಸೆಮೆಟಿಕ್ ರಿಲಿಜನ್ನುಗಳ ಪಾಲಿಗೆ ಪುಣ್ಯಕಾರ್ಯ.ಅವರ ಪ್ರಕಾರ, ಅವರ ರಿಲಿಜನ್ನುಗಳ ಮಾತ್ರವೇ ಮಾನವಕುಲಕ್ಕೆ ಸತ್ಯದೇವನ ಇಚ್ಛೆಯನ್ನು ತಿಳಿಸುವ ನಿಜವಾದ ವಾಣಿಯಾಗಿದೆ ಹಾಗೂ ಅವರ ಡಾಕ್ಟ್ರಿನ್ನುಗಳಲ್ಲಿ ಸರಿಯಾದ ನಂಬಿಕೆಯನ್ನಿಟ್ಟು ಈ ದೈವೀ ಇಚ್ಚೆಗೆ ಸಂಪೂರ್ಣ ಶರಣಾಗತರಾಗುವ ಮೂಲಕ ಮಾತ್ರವೇ ಮಾನವ ಜೀವಿಗಳು ಮೋಕ್ಷವನ್ನು ಪಡೆಯಬಹುದು.

“ತನ್ನದು ಮಾತ್ರ ಸತ್ಯ,ಉಳಿದದ್ದೆಲ್ಲಾ ಸುಳ್ಳು” ಎನ್ನುವುದು ಎಲ್ಲಾ ಸೆಮೆಟಿಕ್ ರಿಲಿಜನ್ನುಗಳ ಮೂಲಲಕ್ಷಣ.ಹಾಗಾಗಿಯೇ ಅವರು “ಸುಳ್ಳು” ರಿಲಿಜನ್ನಿನಿಂದ ಹಾದಿಯಿಂದ “ಸತ್ಯ”ವಾದ ರಿಲಿಜನ್ನಿಗೆ ಜನರನ್ನು ಕರೆತರುವ ಪುಣ್ಯಕಾರ್ಯದ ಭ್ರಮೆಯಲ್ಲಿ “ಮತಾಂತರ”ವನ್ನು ಮಾಡುತಿದ್ದಾರೆ ಮತ್ತು ಮಾಡುತ್ತಲೇ ಇರುತ್ತಾರೆ.

ಕಟು ವಾಸ್ತವವೇನೆಂದರೆ,ರಿಲಿಜನ್ನುಗಳಿಗೆ ಮತಾಂತರವು ಪುಣ್ಯಕಾರ್ಯವೆಂಬ “ಭ್ರಮೆ” ಕಳಚಲಾರದು.ಹಾಗಾಗಿ ಅವರ ಭ್ರಮೆಯಿಂದ ಭಾರತವನ್ನು ರಕ್ಷಿಸಲು ಪ್ರಬಲ “ಮತಾಂತರ ನಿಷೇಧ ಕಾಯ್ದೆ” ಜಾರಿಗೆ ಬರಲೇಬೇಕು. ಆ ಮೂಲಕ ಮಹಾತ್ಮ ಗಾಂಧೀಜಿಯವರ ಆಶಯವೂ ಈಡೇರಿದಂತಾಗುತ್ತದೆ.ಅದು ಬಾಪೂಜಿಗೆ ನಾವು ಕೊಡುವ ನಿಜವಾದ ಗೌರವವೂ ಹೌದು.ಈ ಬಗ್ಗೆ ಚರ್ಚೆಯಾಗಲಿ.

34 ಟಿಪ್ಪಣಿಗಳು Post a comment
 1. ಡಿಸೆ 29 2014

  ಒಪ್ಪುವಂತ ಮಾತು.

  ಉತ್ತರ
 2. ಡಿಸೆ 29 2014
 3. ashok kumar valaduir
  ಡಿಸೆ 29 2014

  nice article.

  ಉತ್ತರ
 4. Nagshetty Shetkar
  ಡಿಸೆ 29 2014

  Till Hindu society gets rid of casteism and social inequalities, conversion to Christianity and Islam is a right of the socially backward sections of the society. Proper implementation of social justice will make conversion and reconversion both equally useless.

  ಉತ್ತರ
  • Nagshetty Shetkar
   ಡಿಸೆ 29 2014

   +1

   well said.

   ಉತ್ತರ
   • ರಂಜನಾ ರಾಮ್ ದುರ್ಗ
    ಡಿಸೆ 29 2014

    ಸಹೋದರರೇ,
    ನಿಮ್ಮ ಗುರುಗಳು ಲಿಂಗ ದೀಕ್ಷೆಯ ಮೂಲಕ ಮತಾಂತರ,ಘರ್ ವಾಪಸಿ ಕಾರ್ಯಕ್ರಮಗಳನ್ನು ನಿಯಂತ್ರಿಸಿ ಲೋಕೋದ್ಧಾರ ಮಾಡಬಹುದಾಗಿದೆ.

    ಉತ್ತರ
    • Nagshetty Shetkar
     ಡಿಸೆ 29 2014

     Darga Sir will not reconvert to Hinduism. What has it to offer him? Even if you make him a Brahmin, he’ll not come as he is opposed to Brahmanism.

     ಉತ್ತರ
     • ಡಿಸೆ 29 2014

      [[Darga Sir will not reconvert to Hinduism]]
      Yes, Even if he wants to, Shetkar will not allow that to happen!

      ಉತ್ತರ
      • ರಂಜನಾ ರಾಮ್ ದುರ್ಗ
       ಡಿಸೆ 29 2014

       ಸಹೋದರರೇ,ನಾನು ಹೇಳಿದ್ದು ಶರಣರಾದ ಅವರು ಲಿಂಗದೀಕ್ಷೆಯನ್ನು ಪಡೆಯಲಿ ಎಂದು.ಹಿಂದೂವಾಗಿ ಎಂದಲ್ಲ.ತಾವೇಕೆ ಅಪಾರ್ಥಮಾಡಿಕೊಳ್ಳುತ್ತಿರುವಿರಿ.

       ಉತ್ತರ
     • shripad
      ಡಿಸೆ 29 2014

      ಇದೊಂದು ಒಳ್ಳೆ ದರ್ಗಾ ಉಲ್ಲೇಖಿಸುವ ಪಾರ್ಟಿಯಲ್ಲಪ್ಪಾ! ಮಾತೆತ್ತಿದ್ದರೆ ದರ್ಗಾ ಅನ್ನುತ್ತದೆ. ನಿಲುಮೆ ಬಿಟ್ಟರೆ ಬೇರೆ ಬ್ಲಾಗುಗಳಲ್ಲೂ ಈ ಶೆಟ್ಕರ್ ಪಾರ್ಟಿ ಏನೇನೋ ಕಮೆಂಟು ಎಸೆಯುತ್ತಿರುತ್ತದೆ. ಆದರೆ ಅಲ್ಲೆಲ್ಲೂ ದರ್ಗಾ ಉವಾಚಗಳಿರುವುದಿಲ್ಲ. ಶೆಟ್ಕರೋ ಮತ್ಯಾರೋ ತನ್ನ ಹೆಸರನ್ನು ಸರಿಯೋ ತಪ್ಪೋ ಕಾರಣಕ್ಕೆ ವೃಥಾ ಪದೇ ಪದೇ ಬಳಸಿಕೊಳ್ಳುತ್ತಿದ್ದರೆ ಅಂಥ ವ್ಯಕ್ತಿ ಏನಾದರೂ ಸಮಜಾಯಿಶಿ ಕೊಡಬೇಕಲ್ಲ? ಸರ್ವಜ್ನರೇ ಆದ ಆ ದರ್ಗಾರಿಗೆ ಈ ಬೆಳವಣಿಗೆ ಅರಿವಾಗಿ ನನ್ನ ಹೆಸರು ಎಳೆದು ತರಬೇಡಿ ಎಂದು ಶೆಟ್ಕರ್ ಮಹಾಶಯರಿಗೆ ಹೇಳಬೇಕೋ ಬೇಡವೋ? ಇಲ್ಲ. ಬಹುಶಃ ಎಲ್ಲವನ್ನೂ ಬಿಟ್ಟು ಮೂಲ ಧರ್ಮಕ್ಕೆ ಮಾತ್ರ ಅಂಟಿಕೊಂಡು ಸೋ ಕಾಲ್ಡ್ ಜಂಗಮರಾದ ದರ್ಗಾ ಅವರೇ ಖುದ್ದು ತಮ್ಮ ಬಗೆಗಿನ ಇಂಥ ಅಸಂಬದ್ಧ ಉಲ್ಲೇಖಗಳನ್ನು ಆತ್ಮರತಿಯಂತೆ ಆನಂದಿಸುತ್ತಿರಬಹುದು.

      ಉತ್ತರ
      • ಡಿಸೆ 29 2014

       ದರ್ಗಾ ಅವರೇ ಶೇಟ್ಕರ್ ಹೆಸರಿನಲ್ಲಿ ಬರೆದುಕೊಳ್ಳುತ್ತಿಲ್ಲವೆಂದು ಖಾತರಿ ಪಡಿಸಿಕೊಂಡಿರೇನು?
       ಇಲ್ಲದಿದ್ದರೆ ತಮಗೆ ತಾವೇ +1…..ಆತ್ಮರತಿಯಲ್ಲಿ ಮೈಮರೆಯುತ್ತಿದ್ದರೇ!?

       ಈ ವಯ್ಯ ಎರಡು Id ಇಟ್ಟುಕೊಂಡಿದ್ದಾರೆ. ಮೊದಲು ತನ್ನ ಹೆಸರಿನಲ್ಲಿ ಕಾಮೆಂಟು ಬರೆಯುವುದು. ನಂತರ ಮತ್ತೊಂದು ಹೆಸರಿನಲ್ಲಿ +1 ಒತ್ತಿಕೊಳ್ಳುವುದು. ಅದನ್ನು ಎರಡನೇ Id ಇಂದ ಮಾಡಬೇಕೆಂದು ಯೋಚನೆ. ಆದರೆ, ಆತುರದಲ್ಲಿ ತಿಳಿಯುತ್ತಿಲ್ಲ…..ಮೊದಲ Idಯಲ್ಲೇ ಒತ್ತಿ ಬಿಟ್ಟು ಅವಾಂತರ ಮಾಡಿಕೊಂಡಿದ್ದಾರೆ ಅಷ್ಟೇ!

       ಹಿಂದೆ, ಇದೇ ವಯ್ಯ, ಕೃಷ್ಣಪ್ಪ ಎನ್ನುವವರ ಹೆಸರಿನಲ್ಲಿ ಕಾಮೆಂಟು ಮಾಡಿಕೊಂಡು, ತಮಗೆ ತಾವೇ ಬೆನ್ನು ತಟ್ಟಿಕೊಂಡು ಕುಣಿದಾಡುತ್ತಿದ್ದರು. ಅದೇ ಇವರ ಎರಡನೇ Id! 😉

       ಮತ್ತು ತನ್ನನ್ನು ಯಾರಾದರೂ ಪ್ರಶ್ನಿಸಿದರೆ, ಉತ್ತರಿಸುವ ಬದಲು, ನಿಮ್ಮದು fake Id ಎಂದೂ ಈ ವಯ್ಯ ಕೂಗಾಡುತ್ತಿದ್ದ, ನೆನಪಿದೆಯೇ!?
       ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎನ್ನುವಂತೆ, ತನ್ನಂತೆಯೇ ಇತರರೂ Fake Id ಮಾಡಿಕೊಂಡಿರುವರೆಂದು ಆತ ಊಹಿಸುತ್ತಿದ್ದ!
       ಇಲ್ಲದಿದ್ದರೆ, ಮತ್ಯಾರಿಗೂ ಇಲ್ಲದ Fake Id ಚಿಂತೆ ಈ ವಯ್ಯನಿಗೆ ಮಾತ್ರ ಏಕೆ!?
       ಚರ್ಚೆಯಲ್ಲಿ ಉತ್ತರಿಸುವ ಗೋಜಿಗೇ ಹೋಗುವುದಿಲ್ಲ. ಬಾಯಿಗೆ ಬಂದಂತೆ ಮಾತನಾಡುವುದು, ‘ದರ್ಗಾ’ ಜಪ ಮಾಡುವುದು, Fake Id ಎನ್ನುವುದು, ಬ್ರಾಹ್ಮಣ್ಯ ಎನ್ನುವುದು, ಆತನನ್ನು ಪ್ರಶ್ನಿಸುವವರನ್ನೆಲ್ಲಾ ಮೋದಿ ಅನುಯಾಯಿಗಳೆನ್ನುವುದು ……ಇದನ್ನು ಬಿಟ್ಟು ಈತ ಬೇರೇನು ಮಾತನಾಡಿದ್ದಾನೆ ಹೇಳಿ ನೋಡುವಾ!?

       ನನಗೇನೋ, ದರ್ಗಾ ಅವರೇ ಶೇಟ್ಕರ್ ಎನ್ನುವ Fake Id ಮಾಡಿಕೊಂಡು ಬರೆಯುತ್ತಿದ್ದಾರೆ. ಮತ್ತು ತಮ್ಮ ಹೆಸರು ಜನರಿಗೆ ತಿಳಿಯಲೆಂದೇ, ಇದ್ದಕ್ಕಿದ್ದಂತೆ ‘ದರ್ಗಾ’ ಹೆಸರನ್ನು ಹಾಕಿಬಿಡುತ್ತಾರೆ! ಚರ್ಚೆಗೆ ಏನೇನೂ ಸಂಬಂಧವಿರದ ವ್ಯಕ್ತಿಯ ಹೆಸರು ಇಲ್ಲಿ ಮತ್ಯಾಕೆ ಪ್ರಸ್ತಾಪವಾಗುತ್ತೆ ಹೇಳಿ?
       ಅಥವಾ
       ದರ್ಗಾ ಅವರು ಶೇಟ್ಕರ್^ಗೆ ಹಣ ನೀಡಿ, ತಮ್ಮ ಹೆಸರನ್ನು ಪ್ರಚಾರ ಮಾಡಿಸಿಕೊಳ್ಳುತ್ತಿದ್ದಾರೆ!

       ಈ ರೀತಿಯ ಪ್ರಚಾರದಿಂದ ‘ದರ್ಗಾ’ ಹೆಸರಿಗೆ ಕಿಮ್ಮತ್ತಿನ ಬೆಲೆಯೂ ಸಿಗುವುದಿಲ್ಲ ಎನ್ನುವುದು ಇವರಿಗೆ ತಿಳಿದಿಲ್ಲ ಅನ್ನಿಸುತ್ತದೆ! 😀

       ಉತ್ತರ
     • ಗಿರೀಶ್
      ಜನ 24 2015

      ಇಸ್ಲಾಮಿನಲ್ಲಿ ಮತಾಂತರವಾದವರಿಗೆ ಏನು ಶಿಕ್ಷೆ ಎಂಬುದು ದರ್ಗಾ ಅವರಿಗೆ ಗೊತ್ತಿರುತ್ತದೆ. ಅವರು ಮತಾಂತರವಾಗುವುದು ಸಾಧ್ಯವೇ ಇಲ್ಲ.

      ಉತ್ತರ
      • Nagshetty Shetkar
       ಜನ 25 2015

       ಇಸ್ಲಾಂ ಬಗ್ಗೆ ತಮಗೆ ನಿಲುಮೆಯ ಇತರ ಸದಸ್ಯರ ಹಾಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಇಸ್ಲಾಂ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ದರ್ಗಾ ಸರ್ ವಚನಗಳ ಬಗ್ಗೆ ಬರೆದ ಲೇಖನ ಮಾಲೆಯ ಹಾಗೆ ಒಂದು ಲೇಖನ ಮಾಲೆ ಬರೆದರೆ ಚೆನ್ನು. ನಿಲುಮೆಯ ಸಂಪಾದಕರು ದರ್ಗಾ ಸರ್ ಅವರಿಗೆ (ಹಾಗೂ ಫಕೀರ್ ಕಟ್ಪಾಡಿಯವರು) ಕೋರಿಕೆ ಸಲ್ಲಿಸಿ ಲೇಖನ ಮಾಲೆ ಬರೆಸತಕ್ಕದ್ದು.

       ಉತ್ತರ
   • ಡಿಸೆ 29 2014

    He gives “+1” to himself and also tells “Well Said”…..self patting,…..self appreciation!!
    Biggest joker in this forum!! 😉

    ಉತ್ತರ
    • Nagshetty Shetkar
     ಡಿಸೆ 29 2014

     Stop attacking me and address my points if you have guts. Fools like you are found in dozens in all internet forums.

     ಉತ್ತರ
     • ಡಿಸೆ 29 2014

      Mr Shetkar,

      Please tell me, why you gave “+1” for yourself and also praised yourself as “well said”!?
      By doing this, you not showing to the world that you are a fool!!
      If you really think, what you did is right, please give proper explanation.

      Do you know, what is the self praising is called!?
      ಸ್ವರತಿ!
      Looks like you are expert in that, because this is not the first time you are doing that 😉

      You owe an answer to everybody in this forum or get condemned as a FOOL 😀

      ಉತ್ತರ
 5. ವಾಸು.
  ಡಿಸೆ 29 2014

  ಗಾಂಧೀಜಿಯವರು ಮತಾಂತರವನ್ನು ವಿರೋಧಿಸಿದರು ನಿಜ. ಆದರೆ ಅದನ್ನು ತಡೆಯಲು ಮುಂದೆಬರಲಿಲ್ಲ. ಸ್ವಾಮಿಶ್ರದ್ಧಾನಂದರ ನೇತೃತ್ವದಲ್ಲಿ ಆರ್ಯಸಮಾಜವು ವಿಮತೀಯರನ್ನು ಆರ್ಯ ಧರ್ಮಕ್ಕೆ ವಾಪಸು ತರುವ “ಶುದ್ಧಿ” ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಅದನ್ನು ವಿರೋದಿಸಿದ್ದು ಗಾಂಧೀಜಿಯವರೇ. ಸ್ವಾಮಿ ಶ್ರದ್ಧಾನಂರರಿಗೆ ಈ ಶುದ್ಧಿ ಕಾರ್ಯವನ್ನು ಕೈಬಿಡಬೇಕೆಂದು ಒತ್ತಾಯಿಸಿದಾಗ ಻ಅವರು ಹೇಳಿದ್ದೇನೆಂದರೆ ಮುಸ್ಲಿಂರು ಮತ್ತು ಕ್ರಿಶ್ಚಿಯನ್ನರು ತಮ್ಮ ಮತಾಂತರ ಕ್ರಿಯೆಗಳನ್ನು ನಿಲ್ಲಿಸಿದಲ್ಲಿ ತಾವೂ ಸಹ ಈ ಶುದ್ಧೀ ಆಂದೋಳನವನ್ನು ನಿಲ್ಲಿಸುತ್ತೇನೆಂದು ಹೇಳಿದರು. ಗಾಂಧೀಜಿ ಮತ್ತು ಅವರ ಭಕ್ತರಿಗೆ ಈ ಕುರಿತು ಮುಸ್ಲಿಂ ಮತ್ತು ಕ್ರಿಶ್ಚಿಯನ್ನಿರಿಗೆ ಬುದ್ಧಿ ಮಾತು ಹೇಳುವ ದೈರ್ಯ ತೋರಲಿಲ್ಲ. ಕೇವಲ ನಾಮ್ಕೆವಾಸ್ತೇ ಮುಸ್ಲಿಂರಾಗಿದ್ದು ಎಲ್ಲ ವಿಧದಲ್ಲಿ ಹಿಂದೂಗಳಾಗಿದ್ದ ಮಲ್ಕಾನ ರಜಪೂತರನ್ನು ಸ್ವಾಮಿ ಶ್ರದ್ಧಾನಂದರು ಶುದ್ಧೀ ಕ್ರಿಯೆ ಮೂಲಕ ಅವರನ್ನು ಆರ್ಯಧರ್ಮಕ್ಕೆ ವಾಪಸುತಂದರು. ಇದರಲ್ಲಿ ಯಾವುದೇ ಪ್ರಲೋಭನೆ, ಒತ್ತಾಯಗಳಿರಲಿಲ್ಲ. ಆದರೂ ಇದರಿಂದ ಕುಪಿತಗೊಂಡ ಮುಸ್ಲಿಂರು ಒಬ್ಬ ಬಾಡಿಗೆ ಹಂತಕನನ್ನು ಗೊತ್ತು ಮಾಡಿ ದಿನಾಂಕ 23.12.2014 ರಂದು ಶ್ರದ್ಧಾನಂದರು ಹಾಸಿಗೆ ಯ ಮೇಲೆ ವಿಶ್ರಮಿಸುತ್ತಿರುವ ಸಂದರ್ಭದಲ್ಲಿ ಗುಂಡಿಟ್ಟು ಕೊಂದರು. ತದನಂದರ ಹಂತಕನಿಗೆ ಗಲ್ಲು ಶಿಕ್ಷೆಯಾಯಿತು. ಅವನನ್ನು ಮುಸ್ಲಿಂರು ಗಾಜಿಯೆಂದು ಕರೆದರು. ಗಾಂಧೀಜಿಯವರು ಶ್ರದ್ಧಾನಂದರ ಕೊಲೆಯನ್ನು ಖಂಡಿಸಿದಾದರೂ ಈ ಹಂತಕ ಮತ್ತು ಇವನ ಹಿಂದೆ ಇದ್ದ ಸಮಾಜವನ್ನು ಮತ್ತು ಅವರ ಮತಾಂಧತೆಯನ್ನು ಖಂಡಿಸಿಲಿಲ್ಲ. ಭೋದನೆ ಕೇವಲ ಹಿಂದೂಗಳಿಗೆ ಮೀಸಲು ಎಂಬ ದೋರಣೆಯನ್ನು ಗಾಂಧೀಜಿಯವರು ಅನುಸರಿಸುತ್ತಿದ್ದರು ಅಪ್ಪಿತಪ್ಪಿಯೂ ಅನ್ಯ ಮತೀಯರ ತಪ್ಪುಗಳನ್ನು ವಿಮರ್ಶೆ ಮಾಡುತ್ತಿರಲಿಲ್ಲ. ಇಂದಿನ ಜಾತ್ಯಾತೀತ ಗುಂಪು ಗಾಂಧೀಜಿಯವರ ನೀತಿಯನ್ನೇ ಅನುಸರಿಸುತ್ತಿದೆ. ಮತಾಂತರ ನಡೆಯಲಿ ಏಕೆಂದರೆ ಅದು ಸೆಕ್ಯುಲರ್. ಆದರೆ ಸ್ವ ಇಚ್ಛೆಯಿಂದ ಮರು ಮತಾಂತರ ವಾದರೆ ಅದು ಕೋಮುವಾದಿಯಾಗುತ್ತದೆ.
  ನಿಜವಾಗಿ ಹೇಳುವುದಾದರೆ ಮತ-ಮತಾಂತರಗಳೆಲ್ಲವೂ ತಪ್ಪು. ಹಿಂದೂಗಳು ಸಹ ತಮ್ಮ ಮತಗಳನ್ನು ತೊರೆದು ಧರ್ಮದ ಪ್ರತೀಕವಾದ ವೇದ ದರ್ಮಕ್ಕೆ ಮರು ವಾಪಸಾಗಬೇಕು. ಅಂತೆಯೇ ಅನ್ಯ ಮತೀಯರು ಸಹ ತಮ್ಮ ತಮ್ಮ ಮತಗಳನ್ನು ತೊರೆದು ವೇದ ದರ್ಮಕ್ಕೆ ವಾಪಸಾಗಬೇಕು. ಇದೊಂದೆ ಈ ಸಮಸ್ಯೆಗೆ ಪರಿಹಾರ.

  ಉತ್ತರ
  • Nagshetty Shetkar
   ಡಿಸೆ 29 2014

   So everyone should accept the tyranny of Vedic religion and resign to fate???

   ಉತ್ತರ
 6. hemapathy
  ಡಿಸೆ 29 2014

  ನನ್ನ ಪ್ರಕಾರ ಮತ, ಧರ್ಮ, ಜಾತಿಗಳೆನ್ನುವುದೇ ಒಂದು ಅರ್ಥವಿಲ್ಲದ ಕಲ್ಪನೆಗಳು, ಮತಾಂತರವೆನ್ನುವುದೊಂದು ಗೊಡ್ಡು ಪ್ರತಿಪಾದನೆ. ಮಾನವರಿಗೆ ಬೇಕಾಗಿರುವುದು ಬೆಳಗಿನ ಒಂದು ಉಪಾಹಾರ, ಎರಡು ಹೊತ್ತು ಊಟ, ಉಡಲು ಬಟ್ಟೆ, ಮಲಗಲು ತಲೆಯ ಮೇಲೆ ಒಂದು ಸೂರು. ಇನ್ನು ಮಿಕ್ಕಿದ್ದೆಲ್ಲ ಗೌಣ. ನಮ್ಮ ದೇಶ ಹಾಳಾಗಿರುವುದೇ ಅಸಹ್ಯಕರ ಜಾತಿ ಪದ್ಧತಿಗಳಿಂದ. ಜಾತಿ ಮತಗಳನ್ನು ನಿಷೇಧಿಸಿ, ನಿರ್ಲಕ್ಷಿಸಿ ಎಲ್ಲರೂ ಮಾನವರಂತೆ ಬದುಕಿದರೆ ಸಾಕು. ಜಾತಿ ಮತಗಳು ಸೃಷ್ಟಿಯಾಗಿರುವುದೇ ಅವಿವೇಕಿ, ಸ್ವಾರ್ಥೀ ಮಾನವನಿಂದ.

  ಉತ್ತರ
 7. Nagshetty Shetkar
  ಡಿಸೆ 29 2014

  ದರ್ಗಾ ಸರ್ ಅವರನ್ನು ಹಣಿಯುವ ಉದ್ದೇಶವುಳ್ಳ ಕೆಲವರು ಇಲ್ಲಿ ದರ್ಗಾ ಸರ್ ಅವರ ಬಗ್ಗೆ ಅಲ್ಲಸಲ್ಲದ್ದನ್ನು ಬರೆದು ಚರ್ಚೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಮಾನ್ಯ ರಾಕೇಶ್ ಶೆಟ್ಟಿ ಹಾಗೂ ನಮ್ಮ ದಲಿತವರ್ಗದವರೇ ಆದ ಷಣ್ಮುಖ ಅವರೇ, ರಾಮಾಯಣ ಹಾಗೂ ಮಹಾಭಾರತದ ಬಗ್ಗೆ ನನ್ನೀ ಪ್ರಶ್ನೆಗೆ ಸಮರ್ಪಕ ಉತ್ತರ ನೀಡುವ ಮೂಲಕ ಚರ್ಚೆಯನ್ನು ಸರಿ ಹಾದಿಗೆ ತನ್ನಿ:

  “ಮಾನವ ಜೀವನದ ಜಂಜಾಟಗಳ ಕುರಿತು ಜಿಜ್ಞಾಸೆ ಮಾಡುತ್ತವೆ. ಆ ಮೂಲಕ ಪರೋಕ್ಷವಾಗಿ ನಮ್ಮ ಜನರ ಜೀವನದಲ್ಲಿ ಸಮಸ್ಯೆಗಳೆದುರಾದಾಗ ಈ ರೀತಿಯ (ಗೀತೆಯಲ್ಲಿರುವಂತಹ) ‘ಜಿಜ್ಞಾಸೆಗಳು’ ಪರಿಹಾರ ಇಲ್ಲವೇ ಸಮಾಧಾನ ಕಂಡುಕೊಳ್ಳುವ ‘ಮಾದರಿ’ಯನ್ನು ನೀಡುತ್ತವೆ.” ಅಂತ ಷಣ್ಮುಖ ಅಭಿಪ್ರಾಯ ಪಟ್ಟಿದ್ದಾರೆ. ಅವರು ಹೇಳಿದ್ದು ನಿಜವೇ ಆಗಿದ್ದಲ್ಲಿ, ದಲಿತರು ಮಹಾಭಾರತ ಹಾಗೂ ರಾಮಾಯಣಗಳ ಸಹಾಯದಿಂದ ತಮ್ಮ ಯಾವ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ ಎಂಬುದನ್ನು ಕನಿಷ್ಠ ಒಂದು ನಿದರ್ಶನದ ಮೂಲಕವಾದರೂ ವಿವರಿಸಿ. ಅಷ್ಟೇ ಅಲ್ಲ, ಮಹಾಭಾರತ ಹಾಗೂ ರಾಮಾಯಣ ಕಾವ್ಯಗಳು ದಲಿತರ ಯಾವ ಸಮಸ್ಯೆಗಳ ಜಿಜ್ಞಾಸೆ ನಡೆಸಿವೆ ಎಂಬುದನ್ನೂ ದಯವಿಟ್ಟು ತಿಳಿಸಿ.

  ಉತ್ತರ
  • ಡಿಸೆ 29 2014

   [[ ನಮ್ಮ ದಲಿತವರ್ಗದವರೇ ಆದ ಷಣ್ಮುಖ ಅವರೇ]]
   ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದನ್ನು ಮೊದಲು ಕಲಿಯಿರಿ.
   ಜಾತಿಯ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಮತ ಪಡೆಯುವಂತೆ, ಶೇಟ್ಕರರು ಇಲ್ಲಿ ಜಾತಿ ಹೇಳಿಕೊಂಡು ತಮಗೆ ಬೆಂಬಲ ಸೂಚಿಸುವಂತೆ ಗೋಗರೆಯುತ್ತಿರುವುದನ್ನು ಕಂಡು ನಗೆಯು ಬರುತಿದೆ! 😉
   ಹೆಸರು ಹೇಳಿದ ತಕ್ಷಣ ಜಾತಿ ಗುರುತಿಸುವುದು, ಕೆಲವು ಜಾತಿಗಳನ್ನು ಮಾತ್ರ “ನಮ್ಮ” ಎಂದು ಹೇಳಿ, ಉಳಿದವರನ್ನೆಲ್ಲಾ “ಇತರರು” ಎಂದು ಹೇಳುವ ಹೀನಗುಣವನ್ನು ಪ್ರದರ್ಶಿಸಿ ನಿಮ್ಮ ‘ಎತ್ತರ’ವನ್ನು ಎಷ್ಟು ಚೆನ್ನಾಗಿ ಪ್ರದರ್ಶಿಸುತ್ತಿರುವಿರಿ ನೋಡಿ!
   ತಮಗೆ ತಾವೇ +1 ಕುಟ್ಟಿಕೊಂಡು ಕುಣಿಯುವ ‘ಪ್ರಗತಿಪರರು’ ಜಾತಿವಾದಿಗಳೆನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ!?

   [[ರಾಮಾಯಣ ಹಾಗೂ ಮಹಾಭಾರತದ ಬಗ್ಗೆ ನನ್ನೀ ಪ್ರಶ್ನೆಗೆ]]
   ಇಲ್ಲಿ ಚರ್ಚೆ ನಡೆಯುತ್ತಿರುವುದು ರಾಮಾಯಣ-ಮಹಾಭಾರತದ ಕುರಿತಾಗಿ ಅಲ್ಲ. 😉
   ಮೊದಲು ಲೇಖನವನ್ನು ಸರಿಯಾಗಿ ಓದಿಕೊಂಡು, ನಂತರ ಏನು ಹೇಳಬೇಕು ಎನ್ನುವುದನ್ನು ನಿರ್ಧರಿಸಿ.

   ಉತ್ತರ
   • Nagshetty Shetkar
    ಡಿಸೆ 29 2014

    ನಿಮ್ಮೊಡನೆ ಸಂವಾದ ನಡೆಸುವುದಿಲ್ಲ ಅಂತ ಈ ಹಿಂದೆಯೇ ಹೇಳಿದ್ದೇನೆ. ನನ್ನ ಕಮೆಂಟು ರಾಕೇಶ್ ಶೆಟ್ಟಿ ಹಾಗೂ ಷಣ್ಮುಖ ಅವರ ಜಿಜ್ಞಾಸೆಗೆ ಮೀಸಲು, ಅಯೋಗ್ಯ ಗಿಂಡಿಮಾಣಿಗಳ ಭಂಡಾಟಕ್ಕಲ್ಲ.

    ಉತ್ತರ
    • ಡಿಸೆ 29 2014

     [[ಪುರೋಹಿತಶಾಹಿ ಪುಂಡರ ಭಂಡಾಟಕ್ಕಲ್ಲ]]
     ಜಾತೀಯತೆಯ ವಿಷ ನಿಮ್ಮನ್ನು ಹೇಗೆ ಆವರಿಸಿದೆ ಒಮ್ಮೆ ನೋಡಿಕೊಳ್ಳಿ!
     ನಿಮ್ಮನ್ನು ವಿರೋಧಿಸುವವರೆಲ್ಲಾ ಪುರೋಹಿತಶಾಹಿಗಳು, ಭಂಡರು…..!

     [[ನನ್ನ ಕಮೆಂಟು ರಾಕೇಶ್ ಶೆಟ್ಟಿ ಹಾಗೂ ಷಣ್ಮುಖ ಅವರ ಜಿಜ್ಞಾಸೆಗೆ ಮೀಸಲು]]
     ಯಾವ ವಿಷಯದ ಕುರಿತಾದ ಲೇಖನ ಎಂಬ ಪ್ರಾಥಮಿಕ ಜ್ಞಾನವೇ ಇಲ್ಲದ ನಿಮಗೆ ಜಿಜ್ಞಾಸೆಯ ಅರ್ಥವಾದರೂ ತಿಳಿದಿದೆಯೇ!?
     ಈ ಲೇಖನದ ವಿಷಯದ ಕುರಿತಾಗಿ ಇಲ್ಲಿ ಚರ್ಚಿಸಿ. ಬೇರಾವುದೋ ಲೇಖನ/ಸಂವಾದವನ್ನು ಇಲ್ಲಿ ಚರ್ಚಿಸುವ ಆವಶ್ಯಕತೆಯಿಲ್ಲ.

     ‘ನಿಲುಮೆ’ ಎನ್ನುವುದು ಮುಕ್ತ ವೇದಿಕೆ – ನಿಮ್ಮಂತಹ ‘ಪ್ರಗತಿಪರ’ರು ಕಟ್ಟಿಕೊಂಡಿರುವಂತ “ಸರ್ವಾಧಿಕಾರಿ” ಪ್ರವೃತ್ತಿಯ ವೇದಿಕೆಯಲ್ಲ. “ನಾನು ಹೇಳಿದ್ದು ಮಾತ್ರ ಸರಿ; ಉಳಿದವರೆಲ್ಲಾ ಭಂಡರು, ಉಳಿದ ಚರ್ಚೆ/ಪ್ರಶ್ನೆಗಳಿಗೆ ಸ್ಥಾನವಿಲ್ಲ” ಎಂಬ ‘ಪ್ರಗತಿಪರ’ರ ಮನೋಭಾವ ಇಲ್ಲಿಲ್ಲ. 😉
     ಲೇಖನ ರಾಕೇಶ್ ಶೆಟ್ಟಿಯವರದ್ದಾದರೂ, ಯಾರು ಬೇಕಾದರೂ ಇಲ್ಲಿ ಚರ್ಚೆಯಲ್ಲಿ ಭಾಗವಹಿಸಬಹುದು. ನಿಮಗೆ ‘ಸ್ವಂತ’ ಬುದ್ಧಿಯಿದ್ದರೆ ಚರ್ಚೆಯಲ್ಲಿ ಭಾಗವಹಿಸಿ. “ಕೇವಲ ಒಬ್ಬರೊಡನೆ ಮಾತ್ರ ಮಾತನಾಡುತ್ತೇನೆ, ನನ್ನ ವಾದವನ್ನು ಒಪ್ಪಿಕೊಂಡರೆ ಮಾತ್ರ ಚರ್ಚೆ” ಎನ್ನುವುದಾದರೆ ನಿಮ್ಮ ‘ಲದ್ದಿ’ ಬ್ಲಾಗಿನಲ್ಲೇ ನಿಮ್ಮ ವಿಷವನ್ನು ಬೇಕಾದರೂ ಕಾರಿಕೊಳ್ಳಿ, ಏನು ಬೇಕಾದರೂ ಕಕ್ಕಿಕೊಳ್ಳಿ.

     ಉತ್ತರ
  • Nagshetty Shetkar
   ಡಿಸೆ 29 2014

   Any answer for my question from Shanmukha and Rakesh? Or you accept plain fact that Ramayana and Mahabharata are Brahminical?

   ಉತ್ತರ
 8. Nagshetty Shetkar
  ಡಿಸೆ 29 2014

  ರಾಕೇಶ್ ಶೆಟ್ಟಿ ಅವರೇ, ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಜಯಪ್ರಕಾಶ್ ಶೆಟ್ಟಿ ಅವರು ಸಮರ್ಪಕ ಉತ್ತರ ಕೊಟ್ಟಿದ್ದಾರೆ ಇಲ್ಲಿ: http://www.vartamaana.com/2014/12/29/%E0%B2%98%E0%B2%B0%E0%B3%8D-%E0%B2%B5%E0%B2%BE%E0%B2%AA%E0%B2%B8%E0%B2%BF-%E0%B2%AE%E0%B2%A4%E0%B2%BE%E0%B2%82%E0%B2%A4%E0%B2%B0-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AA%E0%B2%82/

  ಉತ್ತರ
  • ಡಿಸೆ 29 2014

   [[ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಜಯಪ್ರಕಾಶ್ ಶೆಟ್ಟಿ ಅವರು ಸಮರ್ಪಕ ಉತ್ತರ ಕೊಟ್ಟಿದ್ದಾರೆ]]
   ಅವರು ಅಲ್ಲಿ ಉತ್ತರ ಕೊಟ್ಟಿದ್ದಾರಲ್ಲ, ನಿಮಗೇನು ಕೆಲಸ ಹೇಳಿ?

   ಉತ್ತರ
   • Nagshetty Shetkar
    ಡಿಸೆ 29 2014

    ನಿಮ್ಮೊಡನೆ ಸಂವಾದ ನಡೆಸುವುದಿಲ್ಲ ಅಂತ ಈ ಹಿಂದೆಯೇ ಹೇಳಿದ್ದೇನೆ. ನನ್ನ ಕಮೆಂಟು ರಾಕೇಶ್ ಶೆಟ್ಟಿ ಅವರ ಗಮನಕ್ಕೆ ಜಿಜ್ಞಾಸೆಗೆ ಮೀಸಲು, ಪುರೋಹಿತಶಾಹಿ ಪುಂಡರ ಭಂಡಾಟಕ್ಕಲ್ಲ.

    ಉತ್ತರ
 9. pramod
  ಜನ 1 2015

  ನನಗೆ ಕಾಣುತ್ತದೆ -ಬಿಜೆಪಿ ಅಧಿಕಾರಕ್ಕೆ ಬಂದಂದ್ದಿನಿಂದ ಈ ಸಂಘಿ ಗಳಿಗೆ ,ಕೋತಿಗೆ ಮದ್ಯ ಕುಡಿಸಿ ರಸ್ತೆಯಲ್ಲಿ ಬಿಟ್ಟಅಂತಾಗಿದೆ . ದೇಶದಲ್ಲಿ ,ಹಿಂದೂ ಧರ್ಮದಲ್ಲಿ ಎಂತದೆಲ್ಲಾ
  ಸುಡುವ ಇಶ್ಯೂ ಗಳು ಇರುವಾಗ ,ಅದಕ್ಕೆ ಸ್ಪಂದಿಸದೇ ಈ ಕೋತಿಯಾಟ ಆಡುತ್ತಾರೆ . ಒಂದು ಹೊತ್ತಿನ ತುತ್ತು ,ತಲೆಗೊಂದು ಸೂರು ಇಲ್ಲದೇ ಕೋಟ್ಯಾಂತರ ಬಡ ಹಿಂದುಗಳು ಹೀನಾಯವಾಗಿ ಬಾಳುತ್ತಿರುವಾಗ ,ಈ ಮನುವಾದಿಗಳು ಶಿಲಾ ಯುಗಕ್ಕೆ ದೇಶವನ್ನು ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅದಕ್ಕೆ ಉಪಯೋಗಿಸುವುದು ಸಹಾ ಬಡ ಶೂದ್ರರನ್ನೆ . ಈ ಕುಟಿಲ ಬುದ್ದಿಯವರಿಂದ ಯಾವಾಗ ಭಾರತಕ್ಕೆ ಮೋಕ್ಷ ಸಿಕ್ಕಿತೋ !

  ಉತ್ತರ
  • Nagshetty Shetkar
   ಜನ 1 2015
  • ಮನೋಹರ ನಾಯ್ಕ
   ಜನ 1 2015

   ಇಷ್ಟು ದಿನ ಕಣ್ಣಿದ್ದೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿದ್ದ, ಈಗ ಒಮ್ಮೆಗೆ ಎಚ್ಚರಗೊಂಡಿರುವ ಗಾಂಧಾರಿ ವಂಶಜರಿಂದ ತಮ್ಮ ಯೋಗ್ಯತೆಗೆ ತಕ್ಕುದಾದ ಪ್ರತಿಕ್ರಿಯೆ!. ಅದಕ್ಕೆ ಒಬ್ಬ ಎಡಬಿಡಂಗಿ ಶರಣ ಆಸಾಮಿಯಿಂದ ಬೆನ್ನು ತಟ್ಟುವಿಕೆ!! ಸರಿಯಾಗಿದೆ.

   ಉತ್ತರ
   • ಜನ 3 2015

    ಅಯ್ಯೋ! ನೀವಂದುಕೊಂಡಂತೆ ಏನೂ ನಡೆದಿಲ್ಲ.
    ಶೇಟ್ಕರರು, ತಮ್ಮ ಹೆಸರಿಗೆ ತಾವೇ +1 ಕುಟ್ಟಿಕೊಂಡು, ಅವರ ತಿಕ್ಕಲುತನ ಬೆತ್ತಲಾದ ನಂತರ, ಕಾಮೆಂಟು ಬರೆಯುವುದು ಒಂದು Idಯಿಂದ ಮತ್ತು ಅದಕ್ಕೆ +1 ಬರೆಯುವುದು ಮತ್ತೊಂದು Idಹಿಂದ.
    ಇದರ ಹಿಂದಿರೋ ಮರ್ಮ ಇಷ್ಟೇ!
    ಎರಡೂ ಒಂದೇ Email Idಯಿಂದ ಬರೋದು ಅಂದ್ರೆ ಮತ್ತೇನು ಅರ್ಥ!? 😉

    ಉತ್ತರ
 10. pramod
  ಜನ 4 2015

  ಶೆಟ್ತ್ರೆರವರು ತಮ್ಮ ಹೆಸರನ್ನು ಯಾವುದೇ ಹೆದರಿಕೆ ಇಲ್ಲದೇ ಹಾಕುತ್ತಾರೆ ,ಮತ್ತೆ ತಮ್ಮಂತ ಕ್ರೂರರ ಇದುರು ಒಬ್ಭಂಟಿಗನಾಗಿ ಸೆಣಸುತಾರಲ್ಲ !ಅವರ ದ್ಯೆರ್ಯಕ್ಕ್ ಭೇಶ್ ,ಆದರೆ ನಿಮಗೆ ಸ್ವಂಥ ಹೆಸರು ಹಾಕಲು ಯಾಕೆ ,ನಿಮ್ಮದ್ದೆ ಅಖಾಡದಲ್ಲಿ ಹೆದರಿಕೆ ! ಒಂದು ತರಹ ನಮ್ಮಲಿ ಬಸ್ಸಿಗೆ ಇಡುವ ಹೆಸರಿನ ಹಾಗೆ ಇದೆ ನಿಮ್ಮ ಇನಿಸಿಯಿಲ್ !! ssnk

  ಉತ್ತರ
  • ಜನ 5 2015

   SSNK – S.S.ನರೇಂದ್ರ ಕುಮಾರ್.
   ನನ್ನ ಹೆಸರನ್ನು ನಾನೆಂದೂ ಮುಚ್ಚಿಟ್ಟಿಲ್ಲ, ಅದರ ಆವಶ್ಯಕತೆಯೂ ನನಗಿಲ್ಲ.
   ನನ್ನ ಹೆಸರಿನ ಮೇಲಿರುವ ಚಿತ್ರದ ಮೇಲೆ ಕ್ಲಿಕ್ಕಿಸಿದರೆ ನನ್ನ Profile ಗೆ ಹೋಗಬಹುದು (http://gravatar.com/ssnkumar).
   ನನ್ನ ಹೆಸರಿನ (SSNK) ಮೇಲೆ ಕ್ಲಿಕ್ಕಿಸಿದರೆ ನನ್ನ ಬ್ಲಾಗಿಗೆ ಹೋಗಬಹುದು (http://ssnarendrakumar.blogspot.com).

   ಶೇಟ್ಕರರೇ, ‘Pramod’ ಹೆಸರಿನಲ್ಲಿ ಬರೆಯುತ್ತಿರೋದು ನೀವೇ ಅನ್ನೊದಕ್ಕೆ ಹೆಚ್ಚಿನ ಕಷ್ಟವೇನೂ ಇಲ್ಲ. ನಿಮ್ಮ ಬರಹದ ಭಾಷೆಯೇ ನಿಮ್ಮನ್ನು ಬಿಟ್ಟುಕೊಟ್ಟುಬಿಡುತ್ತದೆ! 😉

   [[ಶೆಟ್ತ್ರೆರವರು ತಮ್ಮ ಹೆಸರನ್ನು ಯಾವುದೇ ಹೆದರಿಕೆ ಇಲ್ಲದೇ ಹಾಕುತ್ತಾರೆ]]
   ಹೌದೇ!? ಹಾಗಿದ್ದರೆ, ಹೆಸರಿನ ಜೊತೆಗೆ Profile ಕೊಂಡಿ ಮತ್ತು ಬ್ಲಾಗಿನ ಕೊಂಡಿ ಏಕೆ ನೀಡಿಲ್ಲ!?
   ಧೈರ್ಯವಿದ್ದರೆ, ಆದನ್ನೆಲ್ಲಾ ನೀಡಬೇಕಪ್ಪ.

   [[ತಮ್ಮಂತ ಕ್ರೂರರ ಇದುರು ]]
   ಪ್ರಾಯಶಃ ನಿಮಗೆ ‘ಕ್ರೂರ’ ಪದದ ಅರ್ಥ ತಿಳಿದಿಲ್ಲ ಅನ್ನಿಸುತ್ತೆ.
   ನಾನು ಯಾವ ರೀತಿಯ ಕ್ರೂರ ಕೃತ್ಯ ಮಾಡಿದೆ ಎನ್ನುವುದನ್ನು ತಿಳಿಸಿದರೆ, ನಿಮ್ಮ ಮಾತಿಗೆ ಬೆಲೆ ಬರುತ್ತದೆ. 😀

   ಉತ್ತರ
 11. ಜನ 22 2015

  mathantharada bagge bayi holidukondu iruva buddijeevigalu eega chelu kachidanthe arachuvudu tamasheyagide

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments