ವಿಷಯದ ವಿವರಗಳಿಗೆ ದಾಟಿರಿ

ಜನವರಿ 5, 2015

23

ಪುಸ್ತಕ ಪರಿಚಯ : ಶಿಲಾಕುಲ ವಲಸೆ

‍ನಿಲುಮೆ ಮೂಲಕ

– ವಿದ್ಯಾ ಕುಲಕರ್ಣಿ

ಶಿಲಾಕುಲ ವಲಸೆಕಾದಂಬರಿ : – ಶಿಲಾಕುಲ ವಲಸೆ

ಲೇಖಕರು :- ಕೆ. ಎನ್ ಗಣೇಶಯ್ಯ

ಸಾರಾಂಶ :- ಆರ್ಯರು ಪಶ್ಚಿಮದಿಂದ ಭಾರತಕ್ಕೆವಲಸಿಗರಾಗಿ ಬರಲಿಲ್ಲ.ಪಶ್ಚಿಮಕ್ಕೆ ವಲಸೆ ಹೋದರು.

ನಾನು ಕಾದಂಬರಿಗಳನ್ನು ಓದಲು ಅಥವಾ ಓದುವ ಹುಚ್ಚು ರೂಢಿಸಿಕೊಂಡಿದ್ದು ಶ್ರೀ ತರಾಸು ಅವರ ಸಿಡಿಲ ಮೊಗ್ಗು ಕಾದಂಬರಿಯಿಂದ ಅಂತ ಹೇಳಬಹುದು.  ಆ ಕಾದಂಬರಿಯನ್ನು ನಮ್ಮಣ್ಣನ ತರಗತಿಗೆ ಪಠ್ಯ ಪುಸ್ತಕವಾಗಿ ಹಚ್ಚಿದ್ದರು. ಅವನು ನನಗೆ ಅದನ್ನು ಓದಲು ತಿಳಿಸಿದ್ದಲ್ಲದೇ ಅದರಲ್ಲಿನ ಕೆಲವಾರು ಅಂಶಗಳ ಕುರಿತು ಚರ್ಚಿಸಿ, ಅದನ್ನು ವಿವರಿಸಿ ಹೇಳಿದ್ದಲ್ಲದೇ ನಾನು ಸರಿಯಾಗಿ ತಿಳಿದಿರುವೆನೋ ಇಲ್ಲವೋ ಎಂದು ಪರೀಕ್ಷೆ ಸಹ ಮಾಡಿದ್ದ. ಹೀಗಾಗಿ ನಾನು ಸುಮಾರು 8 ನೇ ತರಗತಿಯಲ್ಲಿದ್ದಾಗಲೇ ಅದನ್ನು ಚನ್ನಾಗಿ ಓದಿ ಹಾಗೇನೇ ಓದುವ ಗೀಳು ಬೆಳೆಸಿಕೊಂಡಿದ್ದೆ. ಶ್ರೀಮತಿ ಗೀತಾ ನಾಗಭೂಷಣ ಅವರ ಕಥೆ ಹೂವ ತಂದವರು ಸಹ ನಮಗೆ ಪಠ್ಯಪುಸ್ತಕದಲ್ಲಿ ಪಾಠವಾಗಿತ್ತು. ಅದನ್ನು ನನ್ನಣ್ಣ ನನಗೆ ಚನ್ನಾಗಿ ವಿವರಿಸಿ ಓದಿಸಿ ಹೇಳಿದ್ದರಿಂದ ಓದುವ ಗೀಳನ್ನು ಬೆಳೆಸಿದ ಅವನಿಗೆ ನನ್ನ ಕೃತಜ್ಞತೆ ಮೊದಲು ಸಲ್ಲುತ್ತವೆ.

ನಂತರದ ದಿನಗಳಲ್ಲಿ ನಾನು ತ್ರಿವೇಣಿ , ಉಷಾ ನವರತ್ನರಾಂ , ರೇಖಾ ಕಾಖಂಡಕಿ ಎಚ್ . ಜಿ ರಾಧಾದೇವಿ. ಎಂ. ಕೆ ಇಂದಿರಾರ ಹಾಗೂ ಇನ್ನಿತರರ ಕಾದಂಬರಿಗಳನ್ನು ಹಾಗೆ ಕಾರಂತರ ಭೈರಪ್ಪರ ಕಾದಂಬರಿಗಳನ್ನು ಓದಿದೆ. ಆದರೆ ಈ ಎಲ್ಲಾ ಕಾದಂಬರಿಗಳಿಗಿಂತ ನನಗೆ ಅಚ್ಚು ಮೆಚ್ಚಾದದ್ದು ಶ್ರೀ ಎಂಡಮೂರಿ ಅವರ ಕಾದಂಬರಿಗಳು . ಅವುಗಳನ್ನು ಓದಲು ಆರಂಭಿಸಿದರೆ ಪುಸ್ತಕ ಕೆಳಗಿಡಲೇ ಆಗುವದಿಲ್ಲ. ಅಷ್ಟೊಂದು ಥ್ರಿಲ್ಲಿಂಗ್ ಇರುತ್ತವೆ. ಇಷ್ಟೊಂದು ಸುಂದರವಾಗಿ ಪುಸ್ತಕ ಕೆಳಗಿಡಲೇ ಆಗದಂತೆ ಕಾದಂಬರಿ ಬರೆಯುವವರು ಕನ್ನಡದಲ್ಲಿ ಇಲ್ಲವಲ್ಲಾ ಎಂದು ನಾನು ಕೊರಗುತ್ತಿದ್ದೆ. ಆ ಕೊರಗನ್ನು ತುಂಬಿದವರೇ ಶ್ರೀ ಕೆ. ಎನ್ ಗಣೇಶಯ್ಯನವರು.

ಶ್ರೀ ಗಣೇಶಯ್ಯನವರ ಕಾದಂಬರಿಗಳು ಯಾಕೆ ಇಷ್ಟವಾಗುತ್ತವೆಂದರೆ ಒಂದನೆಯದು ಬರವಣಿಗೆಯಲ್ಲಿನ ಥ್ರಿಲ್ಲಿಂಗ್. ಎರಡನೆಯದು ಆಧಾರ ಸಮೇತ ಇತಿಹಾಸದ ನಿರೂಪಣೆ.ಇತಿಹಾಸ ಪುಸ್ತಕವನ್ನು ಓದುವದೆಂದರೆ ತುಂಬಾ ಬೇಜಾರು ಮಾಡಿಕೊಳ್ಳುವವರಿಗಾಗಿ ಸುಂದರ ಚೌಕಟ್ಟಿನಲ್ಲಿ ಕಥಾ ರೂಪದಲ್ಲಿ ಇತಿಹಾಸ ತಿಳಿಸುವದು ಗಣೇಶಯ್ಯ ಕಾದಂಬರಿಯ ಉದ್ದೇಶಗಳೆನ್ನಬಹುದು. ಕೇವಲ ರೋಚಕತೆಗಾಗಿ ಏನೋ ಒಂದನ್ನು ಹೇಳದೇ ಅವರು ಐತಿಹಾಸಿಕ ಸಾಕ್ಷಿ ಪುರಾವೆಗಳ ಸಮೇತ ತಿಳಿಸುತ್ತಾರೆ. ಅವುಗಳನ್ನು ಯಾರೂ ಪರೀಕ್ಷೆ ಮಾಡಬಹುದಾಗಿದೆ.

ಎಫ್. ಬಿ ನಲ್ಲಿ (ಫೇಸ್ ಬುಕ್) ನಾನು ಚರ್ಚೆಯೊಂದರಲ್ಲಿ ಶ್ರೀ ಗಣೇಶಯ್ಯನವರ ಪುಸ್ತಕ ಉಲ್ಲೇಖಿಸಿದ್ದೆ. ಆಗ ಓದುಗರೊಬ್ಬರು

”ಕಾದಂಬರಿಯ ರೋಚಕ ಅಂಶಗಳು ಐತಿಹಾಸಿಕ ಸತ್ಯಗಳಾಗುತ್ತವೆಯೇ??” ಎಂದು ಪ್ರಶ್ನಿಸಿದ್ದರು.

ನಿಜ.ಕಾದಂಬರಿಯ ರೋಚಕ ಅಂಶಗಳು ಐತಿಹಾಸಿಕ ಸತ್ಯಗಳಲ್ಲ. ಆದರೆ ಇಲ್ಲಿ ಗಣೇಶಯ್ಯನವರ ಕಾದಂಬರಿಗಳಲ್ಲಿ ಅವರು ಕಾದಂಬರಿಯ ರೋಚಕ ಅಂಶಗಳನ್ನು ಬೇರೆಯಾಗಿಯೇ ಹೇಳುತ್ತಾರೆ. ಮತ್ತು ಇತಿಹಾಸವನ್ನು ಅದೇ ಪಾತ್ರಧಾರಿಗಳ ಮುಖಾಂತರ ಆಧಾರ ಸಮೇತ ವಿವರಿಸುತ್ತಾರೆ. ಇದು ಇತಿಹಾಸದ ಪಾಠಗಳನ್ನು ನಾವು ಕಾಲೇಜಿನಲ್ಲಿ ಕೇಳಿದಂತೆಯೇ ಇರುತ್ತದೆ. ಮತ್ತು ಸಾಕ್ಷಿ ಆಧಾರ ಸಮೇತ ವಿವರಣೆಗಳಿರುವದರಿಂದ ಅವು ಐತಿಹಾಸಿಕ ಸತ್ಯಗಳೇ ಆಗಿರುತ್ತವೆ.

ಪೀಠಿಕೆ ತುಂಬಾ ಉದ್ದವಾಯಿತೇನೋ. ಇರಲಿ ವಿಷಯಕ್ಕೆ ಬರುತ್ತೇನೆ. ಭಾರತದ ಎಲ್ಲಾ ಆಗು ಹೋಗುಗಳಲ್ಲಿ ವಿದೇಶೀ ಶಕ್ತಿಗಳು ಹೇಗೆ ಕೈಯಾಡಿಸಿವೆ. ಹೇಗೆ ಭಾರತೀಯರ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡಿವೆ, ಎಂಬ ಬಗ್ಗೆ ಈ ಕಾದಂಬರಿ ವಿಶದವಾಗಿ ವಿವರಿಸಿದೆ. ಹಾಗೇ ಭಾರತದಲ್ಲಿ ಬಹು ದಿನಗಳಿಂದಲೂ ಕಾಡುತ್ತಿರುವ ಆರ್ಯರ ಶೋಷಣೆ, ದ್ರಾವಿಡರ ಬವಣೆ ಇತ್ಯಾದಿಗಳೆಲ್ಲಾ ಹೇಗೆ ಹುಸಿಯಾದವುಗಳು, ಮತ್ತು ಆರ್ಯರ ಶೋಷಣೆಯನ್ನು ಎತ್ತಿ ಎತ್ತಿ , ಒತ್ತಿ ಒತ್ತಿ ತೋರುವದರಿಂದ ಯಾರಿಗೆ ಲಾಭ , ಹಾಗೂ ಯಾಕಾಗಿ ಅವರು ಈ ಇಲ್ಲದ ಸುಳ್ಳನ್ನು ಒತ್ತಿ ಒತ್ತಿ ಹೇಳುತ್ತಾರೆ ಎಂಬ ಬಗ್ಗೆ ಬಹಳ ಚನ್ನಾಗಿ ವಿವರಿಸಿದ್ದಾರೆ. ಅನೇಕ ಪುರಾವೆಗಳ ಮುಖಾಂತರ ವಿಶದೀಕರಿಸಿದ್ದಾರೆ.

ಮೊದಲು ನಾವು ಆರ್ಯರು ಭಾರತದವರಲ್ಲ. ಅವರು ಹೊರಗಿನಿಂದ ಬಂದವರೆಂದು ಯಾವ ಕಾರಣಕ್ಕೆ ಯುರೋಪಿನ ಇತಿಹಾಸಕಾರರು ಹೇಳುತ್ತಾರೆಂಬುದನ್ನು ಮತ್ತು ಅದಕ್ಕೆ ಅವರು ನೀಡುವ ಕಾರಣಗಳನ್ನು ಒಂದೊಂದಾಗಿ ಈಗ ನೋಡೋಣ.

1) ಸಂಸ್ಕೃತ ಮತ್ತು ಯುರೋಪಿನ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಬಹಳ ಸಾಮ್ಯತೆ ಇದೆ. ಉದಾ: ಪಿತೃ= father, ಮಾತೃ= mother ,ಅಶ್ವ= horse ಹೀಗೆ ಈ ಸಂಸ್ಕೃತ ಮತ್ತು ಗ್ರೀಕ ಲ್ಯಾಟಿನ್ ಭಾಷೆಗಳಿಗೆ ಒಂದು ಆದಿಮ ಭಾಷೆ ಇದೆ. ಇವು ಮೂರೂ ಭಾಷೆಗಳು ಒಂದೇ ಕರುಳಬಳ್ಳಿಯ ಭಾಷೆಗಳೆಂದು ಏಷ್ಯಾಟಿಕ್ ಸೊಸಾಯಿಟಿಯ ಅದ್ಯಕ್ಷೀಯ ಭಾಷಣದಲ್ಲಿ ಕ್ರಿ. ಶ 1784 ರಲ್ಲಿ ವಿಲಿಯಂ ಜೋನ್ಸ್ ಹೇಳುತ್ತಾನೆ. (ಪುಟ 113)

2) ವೇದಗಳಲ್ಲಿ ಹೇಳಲ್ಪಟ್ಟ ಆರ್ಯರ ಲಕ್ಷಣಗಳು ಹೆಚ್ಚು ಕಾಣಿಸಿಕೊಳ್ಳುವದು ಯುರೋಪಿಯನ್ ಜನರಲ್ಲಿ. ಸಂಸ್ಕೃತವನ್ನು ಅಧ್ಯಯನ ಮಾಡಿದ ಮ್ಯಾಕ್ಸ್ ಮುಲ್ಲರ್ ಹೀಗೆ ಹೇಳುತ್ತಾನೆ. ಆರ್ಯರು ತುಂಬಾ ಸುಸಂಸ್ಕೃತರಾಗಿದ್ದರು. ಸಂಸ್ಕೃತದಂಥ ಸುಂದರ ಭಾಷೆ ಮತ್ತು ವೇದಗಳಂಥ ಅಪಾರ ಜ್ಞಾನ ಹೊಂದಿದ ಉನ್ನತ ಕೃತಿ ರಚನಾ ಜ್ಞಾನ ಹೊಂದಿರಬೇಕಾದರೆ ಅದು ಯುರೋಪಿಯನ್ನರಿಂದ ಮಾತ್ರ ಸಾಧ್ಯ. ಆದ್ದರಿಂದ ಅವರು ಯುರೋಪಿನಿಂದ ಹೋದ ವಲಸಿಗರೇ ಆಗಿರಬೇಕು. ಇಲ್ಲವಾದಲ್ಲಿ ಇಂಥ ಅಪಾರ ಜ್ಞಾನ ಅವರಲ್ಲಿ ಬರಲು ಹೇಗೆ ಸಾಧ್ಯ??  (ಪುಟ 117)

3)  ಆರ್ಯರು ತಮ್ಮ ಜೊತೆ ಕುದುರೆ ರಥಗಳನ್ನು ತಂದರು. ಇದು ಆರ್ಯರ ಕೃತಿಗಳಲ್ಲಿ ನಾವು ಕಾಣುತ್ತೇವೆ. ಆದರೆ ಭಾರತದಲ್ಲಿ ಕುದುರೆಯ ಅವಿಷ್ಕಾರವಾಗಿಲ್ಲ. ಅದು ಬೇರೆ ಅಂದರೆ ಮದ್ಯ ಏಷ್ಯಾದ ಪ್ರಾಣಿ. ಅಷ್ಟೇ ಅಲ್ಲ ಸಿಂಧೂ ನೆಲೆಗಳ ಉತ್ಖನನದಲ್ಲಿ ಕುದುರೆಯ ಅವಶೇಷಗಳು ಸಿಕ್ಕಿಲ್ಲ.( ಮ್ಯಾಕ್ಸ್ ಮುಲ್ಲರ್)  (ಪುಟ 144)

4) ಆರ್ಯರು ಭಾರತದ ವಾಯುವ್ಯ ಭಾಗದಲ್ಲಿ ನೆಲೆಯಾಗಿದ್ದರು.ನಂತರ ಅವರು ಭಾರತದ ಉದ್ದಗಲಕ್ಕೂ ಹರಡಿಕೊಂಡರು. ಅವರು ಭಾರತೀಯರಾಗಿದ್ದರೆ ಎಲ್ಲೆಡೆ ಅವರ ನೆಲೆಗಳಿರಬೇಕಾಗಿತ್ತು.

5) ಕ್ರಿ. ಶ 1946 ರಲ್ಲಿ ಹರಪ್ಪಾ ನಾಗರೀಕತೆಯ ಉತ್ಖನನ ಮಾಡಿದ ಶ್ರೀ ಮಾರ್ಟಿಮರ್ ವ್ಹೀಲರ್ ಹೇಳುವದೇನಂದರೆ ಹರಪ್ಪಾದಲ್ಲಿ ಕೋಟೆಯ ರಚನೆ ಇದೆ. 37 ಅಸ್ಥಿ ಪಂಜರಗಳು ಇಲ್ಲಿ ದೊರಕಿವೆ. ಅತ್ಯಂತ ಶ್ರೇಷ್ಟವಾದ ನಾಗರೀಕತೆ ಇಲ್ಲಿತ್ತು. ಇದು 1900 ರಲ್ಲಿ ಹಠಾತ್ ಮಾಯವಾಗುತ್ತದೆ. ಇದಕ್ಕೆ ಕಾರಣಗಳೇನು? ಎಂದು ವಿಶ್ಲೇಷಿಸುತ್ತಾ ಕಾರಣವನ್ನೂ ನೀಡುತ್ತಾನೆ. ಆತನ ಪ್ರಕಾರ ಋಗ್ವೇದದಲ್ಲಿ ಇಂದ್ರನು 90 ಪುರಗಳನ್ನು ನಾಶ ಮಾಡಿದ ಉಲ್ಲೇಖವಿದೆ. ಆರ್ಯರು ಕೋಟೆ ಇರುವ ಊರನ್ನು ‘ಪುರ’ ಎನ್ನುತ್ತಿದ್ದರು. ಆ ಕಾರಣಕ್ಕೆ ಹರಪ್ಪಾ ಇದು ಒಂದು ‘ಪುರ’ ಆಗಿತ್ತು. ಆರ್ಯರು ಇದನ್ನು ನಾಶಗೊಳಿಸಿದರು . ನರಮೇಧ ನಡೆಸಿದರು. ಮತ್ತು ತಮ್ಮ ನೆಲೆಯನ್ನು ಇಲ್ಲಿ ಸ್ಥಾಪಿಸಿದರು. (ಪುಟ 124)

6)ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಸ್ಕೃತ ಪಂಡಿತರಾದ ಶ್ರೀ ವಿಟ್ಜಲ್ ಅವರು ‘ಬೌದ್ಧಯಾನ ಸ್ರೌತಸೂತ್ರ’ ದಲ್ಲಿನ ಒಂದು ಶ್ಲೋಕದ ಆಧಾರವನ್ನು ಕೊಟ್ಟು ಹೀಗೆ ಹೇಳುತ್ತಾರೆ.” ಆಯು ಪೂರ್ವದತ್ತ ಹೊರಟ. ಆತನ ಜನ ಕುರು, ಪಾಂಚಾಲ, ಕಾಶಿ,ವಿದೇಹ ಮತ್ತು ಗಾಂಧಾರ, ಮರುತ್ತ, ಪರಶು, ಹರತ್ತರು ಪಶ್ಚಿಮದಲ್ಲೇ ಉಳಿದರು.” ಹೀಗೆ ಆರ್ಯರು ಪಶ್ಚಿಮದಿಂದ ಪೂರ್ವಕ್ಕೆ ನೆಲೆಯಾದರು. ಎಂದು ತಿಳಿಸಿ ಆರ್ಯರು ಹೊರಗಿನವರೆಂದೂ ಹೇಳುತ್ತಾರೆ. (ಪುಟ 132)

7) ಅಫಘಾನಿಸ್ತಾನದ ನದಿಯೊಂದಕ್ಕೆ ‘ಹರಹ್ವತಿ’ ಎಂದು ಹೆಸರಿದೆ. ಇದು ಮರಳಿನಲ್ಲಿ ಮುಚ್ಚಿ ಹೋಗಿದೆ. ಇದು ಆರ್ಯರ ಋಗ್ವೇದದಲ್ಲಿ ಉಲ್ಲೇಖಿಸಲ್ಪಟ್ಟ ‘ಸರಸ್ವತಿ’ ನದಿಯಾಗಿದೆ. ಇದು ಅಫಘಾನಿಸ್ತಾನದಲ್ಲಿದ್ದುದರಿಂದ ಆರ್ಯರ ನೆಲೆ ಸಿಂಧೂ ನದಿಯ ತಟಾಕವಲ್ಲ. ಬದಲಿಗೆ ಅಫಘಾನಿಸ್ತಾನ. ಆದ್ದರಿಂದ ಪೂರ್ವ ಯುರೋಪ್ ಅಥವಾ ಮದ್ಯಏಷ್ಯಾದಿಂದ ಬಂದ ಆರ್ಯರು ಅಫಘಾನಿಸ್ತಾನದಲ್ಲಿ ನೆಲೆಯಾಗಿದ್ದರು. ಕಾರಣ ಹರಪ್ಪಾ ಮತ್ತು ಮೊಹೆಂಜೋದಾರೋ ನಾಗರೀಕತೆಗಳು ಆರ್ಯರ ನೆಲೆಗಳಲ್ಲ. ಅವು ದೇಶೀ ಭಾರತೀಯರ ನೆಲೆಗಳು. ಅಂದರೆ ದ್ರಾವಿಡ ಜನಾಂಗಗಳದ್ದು. ಅವರನ್ನು ದಕ್ಷಿಣಕ್ಕೆ ಓಡಿಸಿದ ಆರ್ಯರು ಅಲ್ಲಿ ನೆಲೆ ನಿಂತರು.(ಪುಟ 132)

8) ಆರ್ಯರು ವರ್ಣಾಶ್ರಮ ಪದ್ಧತಿ ಆರಂಭಿಸಿದರು. ಏಕೆಂದರೆ ತಮ್ಮ ರಕ್ತ ಭಾರತದ ದೇಶೀ ಜನರೊಂದಿಗೆ ಬೆರೆತು ಕೆಟ್ಟು ಹೋಗಬಾರದು. ಅದು ಶುದ್ಧವಾಗಿ ಉಳಿಯಬೇಕೆಂದು ಹಾಗೆ ಮಾಡಿದರು. ಮತ್ತು ದೇಶೀ ಜನರನ್ನು ಸೋಲಿಸಿ ಓಡಿಸಿದರು. ಅವರ ಸಂಸ್ಕೃತಿ ನಾಶಪಡಿಸಿದರು. ಅವರಿಗೆ ಸಂಸ್ಕೃತ ಕಲಿಸಲಿಲ್ಲ. ತಮ್ಮ ಜ್ಞಾನ ಹೇಳಿಕೊಡಲಿಲ್ಲ. ಮತ್ತು ವೇದಗಳಲ್ಲಿ ಅವರನ್ನು ದಶ್ಯುಗಳೆಂದು ಕರೆದಿದ್ದಾರೆ. ಅವರು ಕಪ್ಪು ಜನರು ಮತ್ತು ಕುರೂಪಿಗಳೆಂದು ಅವರನ್ನು ಹೀಯಾಳಿಸಿದ್ದಾರೆ. ಅವರನ್ನು ಅಸ್ಪೃಶ್ಯರಾಗಿ ಇಟ್ಟರು. ವೇದಗಳಲ್ಲಿ ಹೇಳುವಂತೆ ಅವರೊಡನೆ ಸದಾ ಯುದ್ಧ ಮಾಡಿ ,  ಅವರ ಜ್ಞಾನ ತಾವು ಕಸಿದುಕೊಂಡು ಅವರ ದೇವರುಗಳನ್ನು ತಾವು ಹೈಜಾಕ್ ಮಾಡಿ ಅವರಿಗೆ ಜ್ಞಾನವಿಲ್ಲದಂತೆ ಮಾಡಿದರು. ಇತ್ಯಾದಿ . ಹೀಗೇಕೆ ಮಾಡಿದರೆಂದರೆ ಅವರು ಹೊರಗಿನಿಂದ ಬಂದವರಾದ್ದರಿಂದ ದೇಶೀ ಜನರು ಅವರನ್ನು ದ್ವೇಷಿಸುತ್ತಿದ್ದರು. ಮತ್ತು ಅವರು ಹೊರಗಿನವರಾದ್ದರಿಂದ ಎಲ್ಲದರಲ್ಲೂ ವಿಶೇಷ ಜ್ಞಾನ ಪಡೆದವರಾಗಿದ್ದರು. (ಪುಟ  117)

ಈಗ ಆರ್ಯರು ಹೊರಗಿನವರಲ್ಲ ಎನ್ನುವದಕ್ಕೆ ಗಣೇಶಯ್ಯನವರು ಯಾವ ಸಾಕ್ಷಿಗಳನ್ನು ಕಲೆಹಾಕಿದ್ದಾರೆ?  ಮತ್ತು ಹೇಗೆ ನಿರೂಪಿಸಿದ್ದಾರೆ? ಆರ್ಯರ ವಲಸೆ ಒಂದು ಹುಸಿವಾದ ಎಂದು ಯಾವ ಆಧಾರಗಳ ಸಮೇತ ಒರೆಗೆ ಹಚ್ಚಿದ್ದಾರೆಂಬುದನ್ನು ಒಂದೊಂದಾಗಿ ನೋಡೋಣ.

1) ಭಾರತದಿಂದ ಆರ್ಯರು ಪಶ್ಚಿಮಕ್ಕೆ ವಲಸಿಗರಾಗಿ ಹೋದಾಗ ತಮ್ಮ ಜೊತೆಗೆ ತಮ್ಮ ಭಾಷೆಯನ್ನು ಒಯ್ದಿರುತ್ತಾರೆ. ಆದ್ದರಿಂದ ಅವರಲ್ಲಿ ಗ್ರೀಕ ಲ್ಯಾಟಿನ್ ಗಳಲ್ಲಿ ಭಾಷಾ ಸಾಮ್ಯತೆ ಕಂಡು ಬಂದಿದೆ.

2) ಆರ್ಯರ ಲಕ್ಷಣಗಳು ಯುರೋಪಿನ ಜನರಲ್ಲಿ ಕಂಡು ಬರುತ್ತವಾದರೂ ಅವರ ಡಿ. ಎನ್. ಏ ಗೂ ಭಾರತೀಯರ ಅದರಲ್ಲೂ ಆರ್ಯರೆನಿಸಿಕೊಂಡವರ ಡಿ. ಎನ್. ಎ ನಲ್ಲಿ   ಕ್ರಿ. ಶ. ಪೂ 4000 ದಲ್ಲಿ ಯಾವ ಸಾಮ್ಯತೆಗಳೂ ಕಂಡು ಬರುವದಿಲ್ಲ. ತೀರ ಇತ್ತೀಚೆಗೆ ಕೆಲವು ಸಾಮ್ಯತೆಗಳಿವೆ. ಅದಕ್ಕೆ ಕಾರಣ ಆರ್ಯರು ಪೂರ್ವಕ್ಕೆ ವಲಸೆ ಹೋಗಿದ್ದರಿಂದ.  ಪುಟ 248ರಿಂದ 273ರ ವರೆಗೆ ಮಹಾದೇವನ್ ಅವನಿಂದ ಆತ್ಮ ಕಥೆ ಹೇಳಿಸುತ್ತಾ ಈ ವಿಷಯ ವಿವರಿಸಿದ್ದಾರೆ. ಕ್ರಿ. ಶ 2013ರಲ್ಲಿ ಹೈದರಾಬಾದಿನ Centre for Cellular and Molecular Biology (CCMB) ಸಂಸ್ಥೆ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯ ಒಟ್ಟಿಗೆ ಕೈಗೊಂಡ ಒಂದು ಅಧ್ಯಯನದಲ್ಲಿ ಕಂಡು ಬಂದಿದ್ದೇನಂದರೆ ಕ್ರಿ. ಶ. ಪೂ 2200ರಿಂದ ಕ್ರಿ. ಶ 100 ರವರೆಗೆ ಭಾರತದ ಎಲ್ಲಾ ಜಾತಿಗಳ ಮಧ್ಯ ರಕ್ತ ಸಂಭಂಧ ಅವಿರತವಾಗಿ ನಡೆಯುತ್ತಲೇ ಇತ್ತು.

1900 ವರ್ಷಗಳ ಈಚೆಗೆ ಜಾತಿಗಳ ನಡುವೆ ನಿರ್ಭಂಧಗಳು ಕಂಡು ಬಂದಿವೆ. ಮೊದಲು ಇರಲಿಲ್ಲ. (ಪುಟ 264) ಹಾಗೇನೇ ದಕ್ಷಿಣ ಭಾರತದ ಮತ್ತು ಉತ್ತರ ಭಾರತದ ಜನರ ಕಲಬೆರಕೆ ಆಗುತ್ತಿತ್ತೆಂದು ಸಿ.ಸಿ. ಎಮ್ ಬಿ ಮುಖ್ಯಸ್ಥ ರಮೇಶ ತಮಂಗ್ ಹೇಳುತ್ತಾರೆ.ಅಲ್ಲದೇ ಉತ್ತರದ ಆರ್ಯರೆನಿಸಿಕೊಂಡವರ ಡಿ. ಎನ್. ಎ ಯುರೋಪಿಯನ್ನರಾಗಲೀ ಅಥವಾ ಮದ್ಯ ಏಷ್ಯನ್ನರಿಗಾಗಲೀ ಹೆಚ್ಚು ಹೋಲಿಕೆಯಾಗದೇ ದಕ್ಷಿಣದ ದ್ರಾವಿಡರೆಂದು ಕರೆಸಿಕೊಳ್ಳುವವರೊಂದಿಗೇನೇ ಹೊಂದುತ್ತವೆ. (ಕ್ರಿ. ಪೂ  2000ಕ್ಕೂ ಪೂರ್ವದ ಡಿ. ಎನ್. ಏ ಗಳು.) ಮತ್ತು ಉತ್ತರ ಭಾರತದ ಬ್ರಾಹ್ಮಣನ ಡಿ. ಎನ್. ಎ ಯು ಉತ್ತರದ ಶೂದ್ರನ ಡಿ. ಎನ್. ಎ ಜೊತೆ ಹೆಚ್ಚು ಹೋಲುತ್ತಿದ್ದರೆ ದಕ್ಷಿಣದ ಬ್ರಾಹ್ಮಣನ ಡಿ. ಎನ್. ಏ ಯು ದಕ್ಷಿಣದ ಶೂದ್ರರ ಡಿ. ಎನ್. ಏ ಜೊತೆ ಹೋಲುತ್ತದೆ. ಇದು ಏನನ್ನು ಸೂಚಿಸುತ್ತದೆಂದರೆ ಜಾತಿ ಪದ್ಧತಿ ಕಟ್ಟು ನಿಟ್ಟಿನಿಂದ ಮೊದಲು ಆಚರಿಸಲ್ಪಡುತ್ತಿರಲಿಲ್ಲ. ಅದು ನಂತರ ಬಂದದ್ದು.

3) ಇನ್ನು ಭಾರತದಲ್ಲಿ ಅದರಲ್ಲೂ ಸಿಂಧೂ ನಾಗರೀಕತೆಯಿರುವ ನೆಲೆಗಳಲ್ಲಿ ಕುದುರೆಯ ಅವಶೇಷ ಸಿಕ್ಕಿಲ್ಲವೆಂದು ಕೆಲವರು ಹೇಳಿದ್ದಾರೆ. ಆದರೆ ಕ್ರಿ. ಶ. 2013 ರಲ್ಲಿ ಸರ್ಕೋಟಡ (ಗುಜರಾತ್ ರಾಜ್ಯ) ಉತ್ಖನನದಲ್ಲಿ ಕುದುರೆಯ ಅವಶೇಷಗಳು ಸ್ಪಷ್ಟವಾಗಿ ಸಿಕ್ಕಿವೆ. ಹಾಗೇನೆ ಸಿಂಧೂ ನಾಗರೀಕತೆಯ ಅನೇಕ ಕಡೆ ಕುದುರೆಯ ಆಟಿಕೆ ಹಾಗೂ ರಥದ ಅವಶೇಷಗಳು ಸಿಕ್ಕಿವೆ( ಪುಟ 147)

ಕ್ರಿ.ಶ. 1971/72 ರಲ್ಲಿ ಎ. ಕೆ ಶರ್ಮ ಎನ್ನುವವರು ಕಚ್ ಮತ್ತು ಸಿಂಧೂ ಹಾಗೂ ಸರಸ್ವತಿ ಕೊಳ್ಳಗಳಲ್ಲಿನ ನಾಗರೀಕತೆ ಪ್ರದೇಶದಲ್ಲಿ ಕೆಲವು ವಿಶಿಷ್ಟ ಪ್ರಾಣಿಗಳ ಎಲುವು ದವಡೆ ಇತ್ಯಾದಿ ಕಂಡು ಹಿಡಿದು ಇವು ಕುದುರೆ ಮತ್ತು ಕತ್ತೆಗಳವು ಎಂದು ತಿಳಿಸಿದರು. ಅದನ್ನು ಸ್ಯಾಂಡೋರ್ ಬಕೋನಿ ಎಂಬ ಹಂಗೇರಿಯಾದ ಉತ್ಖನನಕಾರ 1993 ರಲ್ಲಿ ಅವು ನಿಜಕ್ಕೂ ಕುದುರೆಯ ಅವಶೇಷಗಳೇ ಎಂದು ತಿಳಿಸಿದ್ದಾನೆ. ಚರಿತ್ರೆಯ ಪೂರ್ವ ಕಾಲದಿಂದಲೂ ಭಾರತದ ಅನೇಕ ಕಡೆ ಕುದುರೆಯ ಅವಶೇಷಗಳು ಸಿಕ್ಕಿವೆ. ಅವು ಗುಲ್ಬರ್ಗದ ಕೊಡೆಕಲ್ಲು, ರೈಚೂರಿನ ಹಲ್ಲೂರಬಳಿ ಸರಸ್ವತಿಯ ಆಸುಪಾಸಿನಲ್ಲಿ ಕಾಲಿಬಂಗನ್ ದಲ್ಲಿ ರೋಪರ್, ಮಾಲ್ಟನ್ ಮತ್ತು ಲೋಥಾಲ್ ನಲ್ಲಿ ಕುದುರೆ ಅವಶೇಷ ಸಿಕ್ಕಿವೆ.ಮಧ್ಯ ಪ್ರದೇಶದ ಚಂಬಲ್ ಕಣಿವೆಯಲ್ಲಿ ಕೂಡ ಕುದುರೆ ಅವಶೇಷ ಸಿಕ್ಕಿದೆ (ಪುಟ 145ರಿಂದ 147 ವರೆಗೆ).ಕ್ರಿ. ಶ ಪೂ 4000 ದಲ್ಲಿ ಎಡಕಲ್ಲು ಗುಡ್ಡದ ಮೇಲೆ ಒಂದು ಗುಹೆಯಲ್ಲಿ ಕೆತ್ತಲಾದ ಚಿತ್ರವೊಂದರಲ್ಲೂ ರಥವಿದೆ.

ಕೇರಳದ ಪ್ರಾಚ್ಯಶಾಸ್ತ್ರಜ್ಞರು ಈ ಚಿತ್ರಕ್ಕೂ ಆರ್ಯರಿಗೂ ಸಂಬಂಧವಿರುವದೆಂದು ತಿಳಿಸಿದ್ದಾರೆ (ಪುಟ 181)ಇದರಿಂದ ನಾವು ಭಾರತದಲ್ಲಿ ಕುದುರೆ ಹುಟ್ಟಿದೆ. ಅದು ಭಾರತದ ಪ್ರಾಣಿ . ಕ್ರಿ. ಶ. 4000ದಲ್ಲೂ ಅದು ಇತ್ತು. ಮತ್ತು ಆರ್ಯರ ರಥವೂ ಇತ್ತು ಎಂದು ತಿಳಿದು ಬರುತ್ತದೆ.

4) ಆರ್ಯರ ನೆಲೆಗಳು ಕೇವಲ ವಾಯುವ್ಯ ಭಾಗಗಳಲ್ಲಿವೆ.  ಅಲ್ಲಿಯೇ ಹರಪ್ಪಾ ಜನರ ನಾಗರೀಕತೆ ಸಿಕ್ಕಿದ್ದರಿಂದ ಮೊದಲು ಹರಪ್ಪಾ ಜನ ( ದೇಶೀಯರು) ಇದ್ದರು. ನಂತರ ಬಂದ ಆರ್ಯರು ಅವರನ್ನು ಓಡಿಸಿ ಅಲ್ಲಿ ನೆಲೆ ನಿಂತರು ಇದು ಕಪೋಲ ಕಲ್ಪಿತ. ಹರಪ್ಪಾ ಕೇವಲ ದೇಶೀಯರ ನಾಗರೀಕತೆ ಅಲ್ಲ. ಅಲ್ಲಿ ಆರ್ಯರ ನಾಗರೀಕತೆಯೂ ಇತ್ತು. ಇಬ್ಬರೂ ಸಮಸಮವಾಗಿ ವಾಸಿಸುತ್ತಿರಬಹುದು. ಮತ್ತು ನದಿಗಳು ಬತ್ತಿದ್ದರಿಂದ ಇಬ್ಬರೂ ಆ ಪ್ರಾಂತಗಳನ್ನು ಬಿಟ್ಟು ಬೇರೆ ಬೇರೆ ಕಡೆ ಚದುರಿ ಹೋಗಿರಬಹುದು. ಸಿಂಧೂ ನಾಗರೀಕತೆಗಳಲ್ಲಿ ಆರ್ಯರ ಪವಿತ್ರ ಚಿಹ್ನೆ ಸ್ವಸ್ತೀಕ ಕುದುರೆಯ ಅವಶೇಷ ಇತ್ಯಾದಿಗಳು ಸಿಕ್ಕಿವೆ. ರಥದ ಅವಶೇಷಗಳೂ ಸಿಕ್ಕಿವೆ. ಅಂದ ಮೇಲೆ ಹರಪ್ಪಾ ನಾಗರೀಕತೆ ಆರ್ಯರದಲ್ಲಾ ಅನ್ನುವದು ಹೇಗೆ?

5)  ಕ್ರಿಶ ಪೂ 1900 ರಿಂದೀಚೆಗೆ ಹರಪ್ಪಾ ನಾಗರೀಕತೆ ನಾಶವಾಗಲು ಕಾರಣಗಳು ಈಗಿನ ವಿಜ್ಞಾನಿಗಳ ಪ್ರಕಾರ ಭೌಗೋಳಿಕ ಘಟನೆಗಳು, ವಾತಾವರಣದ ಬದಲಾವಣೆ, ಉಪನದಿಗಳ ಪಾತ್ರ ಬದಲಾವಣೆ, ಬೃಹತ್ ಭೂಕಂಪಗಳು ಇತ್ಯಾದಿಗಳೆಂದು ತಿಳಿಸಿದ್ದಾರೆ. 2010ರಲ್ಲಿ (The lost river on the trail of sarasvati (ಪುಟ 140 ) ವಿಟ್ಜಲ್ ಹೇಳುತ್ತಾನೆ: ಸಿಂಧೂ ನದಿ ನಾಗರೀಕತೆ ಕುಸಿದ ಮೇಲೆ ಬಹಳ ಜನ ಪೂರ್ವಕ್ಕೆ ವಲಸೆ ಹೋದರು. ಇದರಿಂದ ಸಿಂಧೂ ಪ್ರಸ್ತಭೂಮಿ ಆರ್ಯರ ಪಶು ಸಾಕಣೆಗೆ ಅನುಕೂಲವಾಯಿತು. ಎನ್ನುತ್ತಾನೆ. ತಾವೇ ಬದುಕಲು ಸಾಧ್ಯವಾಗದೇ ಹರಪ್ಪಾ ಜನರು ಓಡಿ ಹೋಗಿರಬೇಕಾದರೆ ಪಶುಪಾಲಕರಾದ ಆರ್ಯರಿಗೆ ಆ ಭೂಮಿ ಅದು ಹೇಗೆ ಬದುಕಲು ಸಾಧ್ಯತೆ ನೀಡಿತು? ಮೊದಲು ಆರ್ಯರೇ ಹರಪ್ಪಾದಿಗಳನ್ನು ಓಡಿಸಿದರೆನ್ನುವವರು ನಂತರ ಬದುಕಲು ಕಷ್ಟವಾಗಿ ತಾವೇ ಹೋದರೆನ್ನುತ್ತಾರೆ. ದ್ವಂದ್ವದ ಹೇಳಿಕೆಯಲ್ಲಿ ಸತ್ಯವೆಷ್ಟು? ಇನ್ನು ಆರ್ಯರ ದಾಳಿಯಿಂದ ಇವರ ನಾಗರೀಕತೆ ನಾಶವಾಯಿತೆನ್ನುವದಕ್ಕೆ 37 ಅಸ್ಥಿ ಪಂಜರಗಳನ್ನು ಶ್ರೀ ವ್ಹೀಲರ್ ತೋರಿಸಿದ್ದರಲ್ಲಾ ಆ ಅಸ್ಥಿ ಪಂಜರಗಳ ಮೇಲೆ ಗಾಯಗಳಿಲ್ಲ. ಯುದ್ಧಗಳಿಂದ ಗಾಯಗೊಂಡು ಸತ್ತಿರುವ ಸುಳಿವು ಒಂದರಲ್ಲೂ ಇಲ್ಲ. ಮಾರಕಾಸ್ತ್ರಗಳಿಂದಾದ ಗಾಯದ ಗುರುತಿಲ್ಲ. ಎಂದು ಡೇಲ್ಸ್ ಎಂಬ ಚರಿತ್ರೆಕಾರ ಹೇಳುತ್ತಾರೆ. (ಪುಟ 125)

6) ಬೌದ್ಧಯಾನ ಸ್ರೌತಸೂತ್ರದಲ್ಲಿನ ಶ್ಲೋಕವನ್ನು ಶ್ರೀ ಬಿ. ಬಿ. ಲಾಲ್ ಅವರು ಹೀಗೆ ವ್ಯಾಖ್ಯಾನಿಸಿದ್ದಾರೆ.” ಆಯು ಪೂರ್ವದತ್ತ ಹೊರಟ….. ಅಮಾವಸು ಪಶ್ವಿಮದತ್ತ ಹೊರಟ” ಎಂದು. ಅಂದರೆ ಆರ್ಯರ ಒಂದು ಪಂಗಡ ಪಶ್ಚಿಮಕ್ಕೆ ಹೋಯಿತೇ ವಿನಃ ಪಶ್ಚಿಮದಿಂದ ಬಂದ ಉಲ್ಲೇಖವಿಲ್ಲ. (ಪುಟ 133)

7) ಅಪಘಾನಿಸ್ತಾನದ ನದಿ ಹರಹ್ವತಿ ಕುರಿತು ಹೀಗೆ ಹೇಳಿದ್ದಾರೆ. ವೇದಗಳಲ್ಲಿ ವರ್ಣಿತವಾದ ಸರಸ್ವತಿ ಆಳ ಅಗಲ ವಿಸ್ತಾರ ವಿಶಾಲವಾದ ನದಿಯಾಗಿತ್ತು. ಮತ್ತು ಅದು ಸಮುದ್ರ ಸೇರುತ್ತಿತ್ತು. ಆದರೆ ಮುಂದೆ ಪ್ರಾಕೃತಿಕ ವಿಕೋಪಗಳಲ್ಲಿ ಆನದಿ ಮರಳಿನಲ್ಲಿ ಮುಚ್ಚಿ ಹೋಗಿದ್ದರಿಂದಲೇ ಅಲ್ಲಿಯ ನೆಲೆಗಳನ್ನು ಆರ್ಯರು ಬದಲಿಸುವಂತಾಯಿತು. ಹಾಗೆ ಅವರು ನೆಲೆ ಬದಲಿಸಿ ಪಶ್ಚಿಮಕ್ಕೆ ಹೋಗಿರಬಹುದು. ಅಲ್ಲಿ ಅವರಿಗೆ ತಮ್ಮ ಪೂರ್ವ ನದಿಯಂತೆ ಇರುವ ಹರಹ್ವತಿ ನದಿ ಸಿಕ್ಕಿರಬೇಕು. ಅದಕ್ಕೆ ಅವರು ತಮ್ಮೂರಿನ ನದಿಯ ಹೆಸರಿಟ್ಟಿರಬೇಕು. ಉಧಾಹರಣೆಗೆ ಅಮೇರಿಕೆಯಲ್ಲಿ ತಿರುಪತಿ ಇಲ್ಲವೆ? ಹಾಗೆ.

8) ಆರ್ಯರು ಹೊರಗಿನಿಂದ ಬಂದಿದ್ದರಿಂದಲೇ ಅವರು ದೇಶೀ ಜನರೊಂದಿಗೆ ರಕ್ತ ಸಂಬಂಧ ಬೆಳೆಸಲಿಲ್ಲ. ತಮ್ಮ ರಕ್ತ ಶುದ್ಧವಾಗಿರಬೇಕೆಂದು ಹಾಗೆ ಮಾಡಿದರೆಂದು ಹೇಳುವದೂ ಪೊಳ್ಳು ವಾದವೇ ಸರಿ. ಇದನ್ನು ಮೇಲೆ ವಿವರಿಸಿದೆ. ಹೈದರಾಬಾದಿನ ಸಿ. ಸಿ. ಎಂ ಬಿ ಸಂಸ್ಥೆಯ ಅಧ್ಯಯನದ ಪ್ರಕಾರ ಕ್ರಿ. ಶ. ಪೂ 1900 ವರೆಗೂ ಆರ್ಯರು ಮತ್ತು ದ್ರಾವಿಡ ರಕ್ತ ಸಂಬಂಧಗಳಿದ್ದುದಾಗಿ ತಿಳಿದು ಬಂದಿದೆ. ಮತ್ತು ಉತ್ತರದ ಶೂದ್ರ ದಕ್ಷಿಣದ ಶೂದ್ರನಿಗಿಂತ ಹೆಚ್ಚಾಗಿ ಉತ್ತರದ ಬ್ರಾಹ್ಮಣನ ಹೋಲಿಕೆ ಪಡೆದಿದ್ದಾನೆ. ಹಾಗೆ ದಕ್ಷಿಣದ ಬ್ರಾಹ್ಮಣ ಉತ್ತರದ ಬ್ರಾಹ್ಮಣನಿಗಿಂತ ಹೆಚ್ಚಾಗಿ ದಕ್ಷಿಣದ ಶೂದ್ರನನ್ನು ಹೋಲುತ್ತಾನೆ ಡಿ. ಎನ್. ಎ ದಲ್ಲಿ ಎಂದು ಸಂಶೋಧನೆ ಹೇಳುತ್ತದೆ.

ಇನ್ನು ದ್ರಾವಿಡರ ಜ್ಞಾನ ಕದ್ದು ಅವರ ಜ್ಞಾನ ಅವರು ತಿಳಿಯದಂತೆ ವಂಚಿಸಿದರು ಮತ್ತು ಸಂಸ್ಕೃತವನ್ನು ಹೇಳಿಕೊಡಲಿಲ್ಲ ಎನ್ನಲಾಗುತ್ತಿದೆ. ಆದರೆ ಅದಕ್ಕೆ ಗಣೇಶಯ್ಯನವರು ತಮ್ಮ ಪಾತ್ರವೊಂದರಿಂದ ಹೀಗೆ ಹೇಳಿಸುತ್ತಾರೆ. ಏನೆಂದರೆ ವಾಲ್ಮೀಕಿ ಯಾರು? ಬೇಡರವನು . ವ್ಯಾಸ ಬೆಸ್ತರವನು, ಕಾಳಿದಾಸ ಕುರುಬ.ಅಂದಮೇಲೆ ಇವರೆಲ್ಲ ದ್ರಾವಿಡರೆಂದಾಯಿತು. ಇವರೆಲ್ಲಾ ಸಂಸ್ಕೃತ ಹೇಗೆ ಕಲಿತರು? ಮಹಾ ಕಾವ್ಯ ಹೇಗೆ ಬರೆದರು? ಅವರು ದ್ರಾವಿಡರಾಗಿದ್ದರೂ ಅವರ ಕೃತಿಗಳನ್ನು ಆರ್ಯರಾದ ಬ್ರಾಹ್ಮಣರು ಏಕೆ ಆರಾಧಿಸುತ್ತಾರೆ? ಕಾರಣ ಇದು ಕಲ್ಪಿತ ಹಾಗೂ ಯುರೋಪಿನ ಇತಿಹಾಸಕಾರರು ನಮಗೆ ಹೇಳಿದ ಮಿಥ್ಯಪಾಠವೇ ವಿನಃ ಸತ್ಯವಲ್ಲ. ಎಂದು ಹೇಳುತ್ತಾರೆ.

ಇದಿಷ್ಟೇ ಅಲ್ಲದೇ ಶ್ರೀ ಸುಭಾಷ್ ಕಕ್ ಎನ್ನುವವರು ಆರ್ಯರ ಹಾಗೂ ಹರಪ್ಪ ಜನರಲ್ಲಿ ಜ್ಯೋತಿಷ್ಯ ಶಾಸ್ತ್ರ, ನಕ್ಷತ್ರಗಳ ಹಾಗೂ ಖಗೋಳ ಶಾಸ್ತ್ರ ಜ್ಞಾನವು ಅವಿಚ್ಚಿನ್ನವಾಗಿ ಬೆಳೆದಿತ್ತು ಎಂದು ತೋರಿಸಿ ಹಲವು ಆಧಾರಗಳ ಮೂಲಕ ವೇದಗಳನ್ನು ರಚಿಸಿದ ಜನ ಭಾರತದಲ್ಲಿ ಕ್ರಿ. ಪೂ. 4000 ದಲ್ಲಿಯೆ ಇದ್ದರು ಎಂದು ವಾದಿಸುತ್ತಾರೆ.

ಶ್ರೀಕಾಂತ್ ತಲಗೇರಿ ಅವರು ಋಗ್ವೇದದಲ್ಲಿ ನಡೆದ ಯುದ್ಧಗಳ ಕುರಿತು ಹೇಳುತ್ತಾ ಆರ್ಯರು ಮತ್ತು ಇರಾನಿನ ‘ಅನು’ ಗಳ ಮಧ್ಯ ಯುದ್ಧ ನಡೆದಿತ್ತು ಎಂದು ಹೇಳುತ್ತಾ ವೇದಗಳನ್ನು ಬರೆಯುವ ಕಾಲಕ್ಕೆ ಭಾರತದಲ್ಲಿ ಆರ್ಯರು ನೆಲೆಯಾಗಿದ್ದರೆಂದು ಹೇಳುತ್ತಾರೆ.

ಭಾರತದಲ್ಲಿ ನೆಲೆಸಿರುವ ಕೋನ್ರಾಡ ಎಲ್ಸ್ಟ್ ಅವರು ಕೂಡ ಆರ್ಯರ ವಲಸೆ ಅಲ್ಲಗಳೆದಿದ್ದಾರೆ. ಮತ್ತು ಅಮೇರಿಕಾದ ಜಿಮ್ ಶಾಫರ್ ಮತ್ತು ಡೈಯೇನ್ ಲಿಚೆನ್ ಸ್ಟೀನ್ ರವರು ಸಹ ಆರ್ಯರ ಬಗೆಗಿನ ಹಳೆಯ ವಾದಗಳು 18 ನೇ ಶತಮಾನದ ಯುರೋಪಿನ ಬಿಳಿ ಜನರ ಸ್ವಪ್ರತಿಷ್ಠೆಯಿಂದ ಪ್ರೇರಿತವಾದವುಗಳು ಎಂದು ವಾದಿಸುತ್ತಾರೆ. (ಪುಟ 136)

ಯುರೋಪಿನ ಇತಿಹಾಸಕಾರರು ಏತಕ್ಕಾಗಿ ಹೀಗೆ ಆರ್ಯರ ವಲಸೆ ಸುತ್ತ ಬೆನ್ನು ಬಿದ್ದಿದ್ದಾರೆ??  ಇದರಿಂದ ಅವರಿಗೇನು ಲಾಭ??

ಯುರೋಪಿನ ಇತಿಹಾಸಕಾರರ ಈ ತೆವಲಿನ ಹಿಂದಿನ ಕಾರಣ ಹಾಗೂ ಹುನ್ನಾರಗಳನ್ನು ಗಣೇಶಯ್ಯ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅವು ಕೆಳಗಿನಂತಿವೆ.

ಮೊದಲನೆಯದಾಗಿ ಹರಪ್ಪಾ ನಾಗರೀಕತೆ ಉತ್ಖನನಕ್ಕೂ ಮುಂಚೆ ಭಾರತದ ಸಂಸ್ಕೃತ ಭಾಷೆ, ವೇದಗಳ ಅಪಾರ ಜ್ಞಾನ ಇವುಗಳ ಬಗ್ಗೆ ಏಷ್ಯಾಟಿಕ್ ಸೊಸೈಟಿಯ ಅದ್ಯಕ್ಷ ವಿಲಿಯಂ ಜೋನ್ಸ್ ಹೇಳಿದಾಗ ಪಾಶ್ಚಾತ್ಯರಿಗೆ ಆಶ್ಚರ್ಯ. ಮತ್ತು ಜಗತ್ತಿನಲ್ಲಿ ತಾವೇ ಮುಂದುವರಿದವರು ಶ್ರೇಷ್ಟರೆಂಬ ಅಹಮಿಕೆಗೆ ಬಿದ್ದ ದೊಡ್ಡ ಪೆಟ್ಟು ಇದು. ಹಾಗಾಗಿ ಅವರ ಸಾಮಾಜಿಕ ಮನಸ್ಥಿತಿಯ ಪ್ರಕಾರ ಅವರು ತಮ್ಮಲ್ಲಿಂದಲೇ ಹೋದ ಪಂಗಡವಾಗಿರಬೇಕು ಎಂದು ವಾದಿಸಿದರು. ಇದಕ್ಕೆ ಕಾರಣ ಈಗಾಗಲೇ ಹೇಳಿದಂತೆ ಗ್ರೀಕ್, ಲ್ಯಾಟಿನ್, ಸಂಸ್ಕೃತ ಭಾಷೆಗಳ ನಡುವಿನ ಸಾಮ್ಯತೆ. ಆರ್ಯರು ತಮ್ಮ ಲಕ್ಷಣಗಳನ್ನು ವೇದದಲ್ಲಿ ಹೇಳಿದ್ದರಲ್ಲಾ ಅವೆಲ್ಲಾ ತಮ್ಮಲ್ಲೂ ಇವೆ. ಹೀಗಾಗಿ ಲಕ್ಷಣಗಳ ಹೋಲಿಕೆ, ಮತ್ತು ತಾವು ಕರಿಯರನ್ನು ತಿರಸ್ಕಾರ ಮಾಡಿ ನೋಡಿದಂತೆ ಸ್ಥಳೀಯ ದಶ್ಯುಗಳನ್ನು ಆರ್ಯರು ತುಳಿದಿದ್ದಾರೆ ಎಂಬ ಪೂರ್ವಾಗ್ರಹ ಮನಸ್ಥಿತಿ. ಇಡೀ ಯುರೋಪಿನ ಜನತೆಯ ಬೌದ್ಧಿಕ ಬೆಳವಣಿಗೆ ಮೂಲತಃ ಭಾರತೀಯರ ಕೊಡುಗೆ ಎಂದು ತಿಳಿದರೆ ಅವರ ಇಡೀ ನಾಗರೀಕತೆಗೆ ಅವಮಾನವಲ್ಲವೆ? ಅದಕ್ಕಾಗಿ ಆರ್ಯರ ವಲಸೆಯನ್ನು ಒತ್ತಿ ಒತ್ತಿ ಹೇಳಿದರು.

ಪ್ರತಿಯೊಂದು ಧರ್ಮದಲ್ಲೂ ಒಂದಿಲ್ಲೊಂದು ರೀತಿಯ ಶ್ರೇಣಿಗಳು ಮತ್ತು ವರ್ಗಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ. ಆ ಶ್ರೇಣಿಗಳ ಮಧ್ಯ ಸ್ವಾಭಾವಿಕವಾಗಿ ಅಂತರ್ವರ್ಗ ಕಲಹಗಳೂ ಪ್ರಾರಂಭವಾಗುತ್ತವೆ. ಒಂದು ಧರ್ಮದಲ್ಲಿ ಕಾಣುವ ಅಂಥ ಶ್ರೇಣಿಗಳ ಅಥವಾ ವರ್ಗಗಳ ನಡುವಿನ ಕಲಹವನ್ನು ಇತರ ಧರ್ಮದವರು ತಮ್ಮ ಆಸ್ತಿಯಾಗಿಸಿಕೊಂಡು ಇಂಥ ಶ್ರೇಣಿ ಸಮಾಜದ ಹಿತಕ್ಕೆ ಮಾರಕ ಎಂದು ಎತ್ತಿ ತೋರಿಸಿ ಕಪಟ ಕಣ್ಣೀರು ಸುರಿಸಿ ಒಂದು ಶೋಷಕ ವರ್ಗವನ್ನು ಸೃಷ್ಟಿ ಮಾಡುತ್ತವೆ. ಕಾಲಕ್ರಮೇಣ ಆ ಶೋಷಕ ವರ್ಗವನ್ನು ಉದ್ಧಾರ ಮಾಡುತ್ತೇನೆಂದು ಅಭಿನಯಿಸಿ ತಮ್ಮ ಧರ್ಮಗಳೆಡೆಗೆ ಎಳೆಯುವ ಪಿತೂರಿ ಮಾಡುತ್ತವೆ. ಈ ಪಿತೂರಿಯ ಭಾಗವೇ ಈ ಹೇಳಿಕೆಗಳಾಗಿವೆ. ಅವೆಂದರೆ ಆರ್ಯರು ಭಾರತೀಯರೇ ಅಲ್ಲ. ಎಲ್ಲಿಂದಲೋ ಬಂದ ಅವರು ಈ ದೇಶದ ಮೂಲ ನಿವಾಸಿಗಳಾದ ದ್ರಾವಿಡರನ್ನು ಶೋಷಣೆ ಮಾಡಿದರು. ಅವರ ದೇವರನ್ನು ಸಂಸ್ಕೃತಿಯನ್ನು ಜ್ಞಾನವನ್ನು ಕದ್ದರು. ಅವರಿಗೆ ಜ್ಞಾನವನ್ನು ಕೊಡದೇ ದಬ್ಬಾಳಿಕೆ ಮಾಡಿ ಶೋಷಣೆ ಮಾಡಿದರು ಇತ್ಯಾದಿ. ಈಗಾಗಲೇ ತಾವು ವಸಾಹತು ಸ್ಥಾಪಿಸಿದಲ್ಲೆಲ್ಲಾ ತಾವೂ ಅದನ್ನೆ ಮಾಡಿದ್ದರು. ಅವರ ಧರ್ಮದಲ್ಲೂ ಇಂಥ ಹುಳುಕುಗಳಿದ್ದರೂ ಅವನ್ನು ಮರೆಮಾಚಿದರು.(ಪುಟ 251)

ಅತ್ಯಂತ ಮಹತ್ವವಾದ ಇನ್ನೊಂದು ಕಾರಣವೆಂದರೆ ಭಾರತದ ಹೇರಳ ಸಂಪತ್ತು. ಅದಕ್ಕೆ ಭಾರತವನ್ನು “ಬ್ರಿಟೀಷ್ ಸಾಮ್ರಾಜ್ಯದ ಮುಕುಟ ಮಣಿ” ಎಂದು ಅವರು ಕರೆಯುತ್ತಿದ್ದರು. ಈ ದೇಶ ಬಿಟ್ಟು ಹೋಗಲು ಅವರ ಅಂತರಂಗ ಒಪ್ಪಿರಲಿಲ್ಲ. ಅದಕ್ಕಾಗಿ ಮುಂದೊಂದು ದಿನ ಪುನಃ ಈ ದೇಶಕ್ಕೆ ಬಂದು ಆಳುವ ಸಲುವಾಗಿ ಕೆಲವು ಹುನ್ನಾರ ಮಾಡಿದರು. ತಾವು ಪುನಃ ಬರಬೇಕೆಂದರೆ ಭಾರತ ಛಿದ್ರ ಛಿದ್ರ್ ವಾಗಬೇಕು. ಆಂತರಿಕವಾಗಿ ಅಭದ್ರವಾಗಬೇಕು. ಅದಕ್ಕಾಗಿ ಈ ಆರ್ಯ ದ್ರಾವಿಡ ಜಗಳ ಹಾಗೂ ಹಿಂದೂ ಮುಸ್ಲೀಂ ಜಗಳಗಳನ್ನು ನಮ್ಮ ತಲೆಯಲ್ಲಿ ತುರುಕಿದರು. ಇದರಿಂದ ಭಾರತ ಆಂತರಿಕವಾಗಿ ಅಭದ್ರವಾಗುತ್ತದೆ. ಆಗ ಸುಲಭವಾಗಿ ವಶಪಡಿಸಿಕೊಳ್ಳುವ ಹುನ್ನಾರ ಅವರದು. ಈಗಲೂ ಇದಕ್ಕಾಗಿ ವಿದೇಶದಿಂದ ಹಣದ ಹೊಳೆ ಹರಿಯುತ್ತದೆ. ಭಾರತದ ಯುವಕರ ಬ್ರೇನ್ ವಾಶ್ ಮಾಡಿ ಅವರಿಗೆ ಕೆಲವು ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿ ವಿದೇಶಕ್ಕೆ ಕರೆಸಿಕೊಂಡು ಅಲ್ಲಿ ಇನ್ನೂ ಬ್ರೈನ್ ವಾಶ್ ಮಾಡಿ ಭಾರತೀಯರ ಮನಸ್ಸು ಕೆಡಿಸಲು ಹಚ್ಚುತ್ತಾರೆ. ಅಲ್ಲದೇ ಆಯಕಟ್ಟಿನ ಜಾಗಗಳಲ್ಲಿ ತಮ್ಮವರು ಅಥವಾ ತಮಗೆ ಮಣೆ ಹಾಕುವವರಿರುವಂತೆ ನೋಡಿಕೊಳ್ಳುತ್ತಾರೆ. ಅವರಿಗೆ ಸಕಲ ಸೌಲಭ್ಯ ನೀಡಿ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಕೆಲವು ಸಲ ಭಾರತದ ರಾಜಕೀಯದ ಮೇಲೂ ಹಿಡಿತ ಸಾಧಿಸಿ ತಮ್ಮವರು ಅಥವಾ ತಮ್ಮ ಮನಸ್ಥಿತಿ ಇರುವವರನ್ನು ತರುತ್ತಾರೆ. ಅದಕ್ಕಾಗಿ ಹಣದ ಹೊಳೆ ಹರಿಸುತ್ತಾರೆ. ಮೊದಲು ಮತಾಂತರ ನಂತರ ದೇಶಾಂತರ. ಅದಕ್ಕಾಗಿ ಈ ಸುಳ್ಳುಗಳ ಸರಮಾಲೆಯ ಇತಿಹಾಸ. ಹೇಗಿದೆ?!

ಈ ಸುಳ್ಳಿನಿಂದಾಗಿ ಭಾರತದಲ್ಲಾದ ಹಾಗೂ ಯುರೋಪಿನಲ್ಲಾದ ಅನಾಹುತಗಳು.

ಭಾರತದ ಆರ್ಯರು ತಮ್ಮಲ್ಲಿಂದಲೆ ಹೋದವರೆಂದು ತಿಳಿಯುತ್ತಲೆ ತಾವೂ ಆರ್ಯ ಸಂತತಿಯವರೆಂದೂ ಅವರಂತೆ ತಾವೂ ಕೂಡ ತಮ್ಮ ರಕ್ತ ಕಲುಷಿತವಾಗಲು (ಕಲಬೆರಕೆ) ಬಿಡಬಾರದೆಂದೂ ಜರ್ಮನಿಯ ಹಿಟ್ಲರ್ ಯಹೂದಿಗಳ ಮಾರಣ ಹೋಮ ಮಾಡಿದ. ತಾವು ಆರ್ಯರೆಂದು ಹೇಳಿಕೊಳ್ಳುವ ತೆವಲು ಎಷ್ಟರ ಮಟ್ಟಿಗೆ ಇತ್ತೆಂದರೆ ತನ್ನ ತಂದೆ ಆರ್ಯೇತರನಾಗಿದ್ದರೆ ತಾನು ಆತನ ಮಗನಲ್ಲವೆಂದೂ ತನ್ನ ತಾಯಿ ಅನೈತಿಕ ಸಂಬಂಧದಿಂದ ತನ್ನನ್ನು ಹೆತ್ತಿರುವಳೆಂದೂ ಹೇಳಿಕೊಳ್ಳಲೂ ಇವರು ಹೇಸಲಿಲ್ಲ!!!  ಆರ್ಯರ ಚಿಹ್ನೆಯಾದ ಸ್ವಸ್ತಿಕವನ್ನು ಹಿಟ್ಲರ್ ತನ್ನ ಸೈನಿಕರಿಗೆ ಕೊಟ್ಟ. ಆಡಳಿತದ ಚಿಹ್ನೆಯಾಗಿ ಮಾಡಿದ.ಹೆನ್ರಿಕ್ ಹುಮ್ಲರ್ ಎಂಬಾತ ಸದಾಕಾಲ ಭಗವದ್ಗೀತೆ ತನ್ನೊಂದಿಗೆ ಇಟ್ಟುಕೊಳ್ಳುತ್ತಿದ್ದ. ಶತಾಯ ಗತಾಯ ತಾವೂ ಆರ್ಯರೆಂದು ಹೇಳಿಕೊಳ್ಳುವ ತೆವಲು ಯುರೋಪಿಯನ್ನರಿಗೆ ಹತ್ತಿತು.

ಜ್ಯೋತೀಬಾ ಫುಲೆಯವರು ತಮ್ಮ ಶೋಷಣೆಗೆ ಬ್ರಾಹ್ಮಣರೇ ಕಾರಣ ಅವರು ದ್ರಾವಿಡನಾದ ಬಲಿಯನ್ನು ಪಾತಾಳಕ್ಕೆ ತಳ್ಳಿದರು ಮತ್ತು ಬ್ರಾಹ್ಮಣನಾದ ವಾಮನನನ್ನು ವಿಷ್ಣುವಿನ ಅವತಾರವೆಂದು ಹೆಳಿದರೆನ್ನುತ್ತಾ ಹಾಗೇ ಮುಂದುವರಿದು ಪರಶುರಾಮನು ಕ್ಷತ್ರಿಯರನ್ನು ಕೊಂದ . ಆ ಕ್ಷತ್ರಿಯರೆಂದರೆ ಅವರು ದ್ರಾವಿಡರೇ ಅವರೆ ಮಹಾ ಅರಿ(ಮಹಾ ವೈರಿ) = ಮಹಾರಿ=  ಮಹಾರ್ ಹೀಗೆ ಈ ಬ್ರಾಹ್ಮಣರು ನಮ್ಮನ್ನು ಅಸ್ಪೃಶ್ಯರನ್ನಾಗಿಸಿ ಶೋಷಣೆ ಮಾಡಿದರು ಎನ್ನುತ್ತಾರೆ. ಇನ್ನು ರಾಮಾಯಣ ಸುಡುವದು,ಮನುಸ್ಮೃತಿ ಸುಡುವದು, ತಮಿಳುನಾಡಿನಲ್ಲಿ ದ್ರಾವಿಡ ರಾಜ್ಯ ಸ್ಥಾಪನೆ ಸಂಸ್ಕೃತ ವಿರೋಧ, ಬ್ರಾಹ್ಮಣ ವಿರೋಧ ಇವೆಲ್ಲ ತಿಳಿದೇ ಇದೆ. ಪೆರಿಯಾರರು ಬ್ರಾಹ್ಮಣ ಮತ್ತು ಹಾವು ಕಂಡರೆ ಮೊದಲು ಬ್ರಾಹ್ಮಣನನ್ನು ಕೊಲ್ಲು ಎಂದು ಅಪ್ಪಣೆ ಕೊಡುತ್ತಾರೆ. ಇವೆಲ್ಲ ಬ್ರಿಟೀಷರು ಹುಟ್ಟುಹಾಕಿ ಹೋದ ಮನಸ್ಥಿತಿಗಳು. ಮತ್ತು ಸುಳ್ಳಿನ ಅನಾಹುತಗಳು.

ಕೊನೆಯದಾಗಿ ಶ್ರೀ ಗಣೇಶಯ್ಯನವರ ಎಲ್ಲಾ ಆಶಯಗಳನ್ನು ತಿಳಿಸಲು ನನಗೆ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ಸಾಹಿತ್ಯಿಕವಾಗಿ ಕೃತಿಯನ್ನು ವಿಮರ್ಶಿಸಲೂ ಆಗಿಲ್ಲ. ವಿಮರ್ಶಿಸುವಷ್ಟು ದೊಡ್ಡವಳೂ ಅಲ್ಲ. ನನಗೆ ತೋಚಿದಷ್ಟನ್ನು ತಿಳಿಸಿದ್ದೇನೆ. ಇದು ಪಾಯಸ ತಪ್ಪಲೆಯಲ್ಲಿನ ಒಂದು ತುತ್ತು ಮಾತ್ರ. ಪೂರ್ತಿ ಪಾಯಸದ ಸವಿ ಬೇಕಾದರೆ ನೀವು ಪುಸ್ತಕವನ್ನೇ ಓದಬೇಕು.

23 ಟಿಪ್ಪಣಿಗಳು Post a comment
 1. ವಿದ್ಯಾ
  ಜನ 5 2015

  ಮೇಲಿನ ಲೇಖನದಲ್ಲಿ ಒಂದೆರಡು ತಪ್ಪುಗಳಾಗಿವೆ. ಅವೆಂದರೆ ಶ್ರೀಮತಿ ಗೀತಾ ನಾಗಭೂಷಣ ಅವರ ಹೂವ ತಂದವರು ಕಥೆ ಎಂದು ಹೇಳಿರುವೆ. ಅದು ‘ಕಲ್ಲರಳಿ ಹೂವಾಗಿ’ ಅನ್ನೋ ಕಥೆ. ಒಂದು ಕಡೆ ಪೂರ್ವಕ್ಕೆ ವಲಸೆ ಹೋದರು ಎಂದು ಹೇಳಿರುವೆ. [[ತೀರ ಇತ್ತೀಚೆಗೆ ಕೆಲವು ಸಾಮ್ಯತೆಗಳಿವೆ. ಅದಕ್ಕೆ ಕಾರಣ ಆರ್ಯರು ಪೂರ್ವಕ್ಕೆ ವಲಸೆ ಹೋಗಿದ್ದರಿಂದ.]] ಇಲ್ಲಿ ಪಶ್ಚಿಮಕ್ಕೆ ಎಂದು ಓದಿಕೊಳ್ಲಿ. [[ಕೇರಳದ ಪ್ರಾಚ್ಯಶಾಸ್ತ್ರಜ್ಞರು ಈ ಚಿತ್ರಕ್ಕೂ ಆರ್ಯರಿಗೂ ಸಂಬಂಧವಿರುವದೆಂದು ತಿಳಿಸಿದ್ದಾರೆ (ಪುಟ 181)ಇದರಿಂದ ನಾವು ಭಾರತದಲ್ಲಿ ಕುದುರೆ ಹುಟ್ಟಿದೆ. ಅದು ಭಾರತದ ಪ್ರಾಣಿ . ಕ್ರಿ. ಶ. 4000ದಲ್ಲೂ ಅದು ಇತ್ತು.]] ಇಲ್ಲಿ ಕ್ರಿ. ಶ ಪೂ 4000 ಎಂದು ಓದಿಕೊಳ್ಳಿ.

  ಉತ್ತರ
 2. Nagshetty Shetkar
  ಜನ 5 2015

  ಕೇರಳದ ಪ್ರಾಚ್ಯಶಾಸ್ತ್ರಜ್ಞರು ಈ ಚಿತ್ರಕ್ಕೂ ಆರ್ಯರಿಗೂ ಸಂಬಂಧವಿರುವದೆಂದು ತಿಳಿಸಿದ್ದಾರೆ (ಪುಟ 181)ಇದರಿಂದ ನಾವು ಭಾರತದಲ್ಲಿ ಕುದುರೆ ಹುಟ್ಟಿದೆ. ಅದು ಭಾರತದ ಪ್ರಾಣಿ . ಕ್ರಿ. ಶ. 4000ದಲ್ಲೂ ಅದು ಇತ್ತು. ಮತ್ತು ಆರ್ಯರ ರಥವೂ ಇತ್ತು ಎಂದು ತಿಳಿದು ಬರುತ್ತದೆ.

  Everything originated in India. Even caste system, Sati practice, untouchability, made snana, superstitious beliefs, crores of gods, manu smriti, greedy mutts and rapist swamis. Why disown these achievements of India?

  ಉತ್ತರ
  • ಗಿರೀಶ್
   ಜನ 6 2015

   ಅಯ್ಯ ನಾಗಶೆಟ್ಟಿ ಕನ್ನಡ ಉಪಯೋಗಿಸಲು ತಮಗೇನು ಧಾಡಿ? ತಾಣವೊಂದು ಕನ್ನಡ ಬಳಕೆಗೆ ಆದ್ಯತೆ ನೀಡಿದರೂ ತಾವು ಮಾತ್ರ ಇಂಗ್ಲೀಶ್ ಬಳಸುತ್ತಾ ಆ ತಾಣದ ನಿಯಮಗಳಿಗೆ ಗೌರವ ಕೊಡದೆ ಎಡಬಿಡಂಗಿಯಂತಾಡುವುದೇಕೆ?

   ಉತ್ತರ
   • Nagshetty Shetkar
    ಜನ 7 2015

    ಮೊಬೈಲ್ ಫೋನಿನಲ್ಲಿ ಕನ್ನಡ ತಂತ್ರಾಂಶ ಲಭ್ಯವಿಲ್ಲ.

    ಉತ್ತರ
    • ರಂಜನಾ ರಾಮ್ ದುರ್ಗ
     ಜನ 7 2015

     ನಮ್ಮ ಶರಣ ಸಹೋದರ ಶೆಟ್ಕರ್ ಅವರು ಹುಟ್ಟಿದ ನೆಲದಲ್ಲಿ ಎಲ್ಲವೂ ಹುಟ್ಟುವುದು ಅತಿಶಯೋಕ್ತಿಯೇನೂ ಅಲ್ಲ

     ಉತ್ತರ
  • aki
   ಜನ 10 2015

   ಇಡೀ ಲೇಖನದಲ್ಲಿ ನಾಗಶೆಟ್ಟರಿಗೆ ಕಾಣಿಸಿದ್ದು ಕೇವಲ ಕುದುರೆಯ ಕುರಿತಾದ ಒಂದೇ ವಾಕ್ಯ. ಅದೂ ವಿದ್ಯಾ ಅವರು ಅದನ್ನು ತಮ್ಮ ತಪ್ಪಿನ ಕುರಿತು ಹೇಳುವ ಲೇಖನದಲ್ಲಿ ತಿಳಿಸಿದ್ದಾರೆ. ನೀವು ಕೇವಲ ಆ ಕಮೆಂಟನ್ನಷ್ಟೇ ಓದಿದ ಹಾಗಿದೆ ಎಂದು ನಿಮ್ಮ ಕಮೆಂಟಿನಿಂದ ತಿಳಿಯುತ್ತದೆ. ನೀವು ಇಡೀ ಲೇಖನವನ್ನು ಓದಿಲ್ಲ. ಓದಿದ್ದರೆ ಈ ರೀತಿ ಕಮೆಂಟ್ ಬರೆಯುತ್ತಿರಲಿಲ್ಲ. ಹೋಗಲಿ ಆರ್ಯನ್ ಅನ್ನುವವರು ಕೇಳಿದ ಪ್ರಶ್ನೆಗೆ ಏಕೆ ಉತ್ತರಿಸಿಲ್ಲ. ಏಕೆ ಓಡಿ ಹೋಗಿದ್ದೀರಿ? ಬೇರೆ ಲೇಖನಕ್ಕೆ ಜಿಗಿದಿದ್ದೀರಿ. ಲೇಖನ ಓದದೇ ಕಮೆಂಟುಗಳನ್ನು ಮಾತ್ರ ನೋಡಿ ತೆಗಳುವದಕ್ಕಾಗಿ ಮಾತ್ರ ತೆಗಳಬೇಕು ಎಂಬ ನಿಲುವು ಎಲ್ಲಿಯದು?

   ಉತ್ತರ
   • Nagshetty Shetkar
    ಜನ 10 2015

    ಕುದುರೆ ಅರೇಬಿಯಾದಿಂದ ಭಾರತಕ್ಕೆ ಬಂದ ಪ್ರಾಣಿ.

    ಉತ್ತರ
    • aki
     ಜನ 10 2015

     ನಾನು ಹಿಡಿದ ಮೊಲಕ್ಕೆ 3 ಕಾಲು ಎನ್ನುವವರಿಗೆ ನಾನೇನು ಹೇಳಲಿ. ಶ್ರೀ ಗಣೇಶಯ್ಯನವರು ನಿಮಗಾಗಿ ನಿಮ್ಮಂಥ ಬುದ್ಧಿಜೀವಿಗಳಿಗಾಗಿನೇ ಪುಸ್ತಕ ಬರೆದಿದ್ದಾರೆ. ಅದನ್ನು ಓದಿಲ್ಲ. ಮತ್ತು ಓದುವದಿಲ್ಲ. ಹೋಗಲಿ ಅಂದರೆ ಶ್ರೀಮತಿ ವಿದ್ಯಾ ಅವರು ಪರಿಶ್ರಮದಿಂದ ಮುಖ್ಯಾಂಶ ಆರಿಸಿ ಬರೆದಿದ್ದಾರೆ. ಅದನ್ನಾದರೂ ಪೂರ್ತಿ ಓದಿ. ನಂತರ ಕಮೆಂಟಿಸಿ. ಕುದುರೆ ಬಗ್ಗೆನೇ ಅವರು ಸುಮಾರು ಎರಡು ಪ್ಯಾರಾ ಅಥವಾ ಒಂದು ಪುಟ ವಿವರಣೆ ನೀಡಿದ್ದಾರೆ ಓದಿ ನಂತರ ಕಮೆಂಟ್ ಮಾಡಿ.

     ಉತ್ತರ
     • aki
      ಜನ 11 2015

      ನಿಮ್ಮ ಕಮೆಂಟುಗಳಲ್ಲಿ ಒಂದಾದರೂ ವಿಷಯಕ್ಕೆ ಸಂಬಂಧಿಸಿದ್ದು ಇದೆಯಾ? ದರ್ಗಾ ಅವರ ಪ್ರಸ್ತಾಪವಿಲ್ಲದ ಒಂದು ಲೇಖನದ ಮೇಲಿನ ಕಮೆಂಟಾದರೂ ಇದೆಯಾ? ಒಮ್ಮೆಯಾದರೂ ವಿಷಯಕ್ಕೆ ಸಂಬಂಧಿಸಿದ ಚರ್ಚೆ ಇದೆಯಾ? ಛೇ ಛೇ ಇದೆಂಥ ಜನ್ಮಾರಿ???? ಕುದುರೆ ಬಗ್ಗೆ ಪ್ರಶ್ನೆ ಕೇಳಿದರೂ ದರ್ಗಾರನ್ನು ಪುರೋಹಿತ ಶಾಹಿ ಮನುಸ್ಮೃತಿ ಎಳೆದು ತರುತ್ತೀರಲ್ಲಾ? ಅಂದ ಹಾಗೆ ನಿಮ್ಮ ಭಾವ ಗೊತ್ತಾಗಲಿಲ್ಲವಾ? ನಿಮ್ಮ ಸಲಾಂ ಭಾವ ವರ್ತಮಾನದಲ್ಲಿ ಓಡಿ ಹೋಗಿದ್ದಾರೆ ಕ್ರಾಂತಿಕೇಶ್ವರರ ಪ್ರಶ್ನೆಗೆ ನೀಮು ಗುಡಿಸುತ್ತಾರೆ ರಂಗೋಲಿ ಹಾಕುತ್ತಾರೆ ಎಂದು ಹೇಳಿದಿರಿ. ಅವರನ್ನೇ ಗುಡಿಸಿದ್ದಾರೆ ಕ್ರಾಂತಿಕೇಶ್ವರ ಅವರು ಗೊತ್ತಾ???

      ಉತ್ತರ
      • Nagshetty Shetkar
       ಜನ 11 2015

       ಸಲಾಂ ಬಾವ ಅವರ ಪರಿಚಯ ನನಗಿಲ್ಲ. ಕಮೆಂಟು ಮೂಲಕ ಮಾತ್ರ ಗೊತ್ತು. ಮನುವಾದಿಗಳ ಜ್ವರ ಬಿಡಿಸುವುದರಲ್ಲಿ ಅವರು ಪರಿಣತರು. ಕ್ರಾಂತಿಕೇಶವ ಯಾರೋ ಗೊತ್ತಿಲ್ಲ, ಅವರೊಬ್ಬ ಮನುವಾದಿ ಅನ್ನುವುದು ಅವರ ಕಾಮೆಂಟುಗಳ ಮೂಲಕ ತಿಳಿದುಬರುತ್ತದೆ. ಬಾವ ಅವರು ಕ್ರಾಂತಿಕೇಶವರ ಅವರ ಪ್ರಶ್ನೆಗಳಿಗೆ ಹೆದರಿ ಓಡಿ ಹೋಗಿಲ್ಲ. ಮನುವಾದಿಗಳನ್ನು ಎಂಟರ್ ಟೈನ್ ಮಾಡುವುದು ಬೇಡ ಅಂತ ಸುಮ್ಮನಿದ್ದಾರೆ.

       ಉತ್ತರ
       • aki
        ಜನ 11 2015

        ಸರಿಯಾಗಿ ಹೇಳಿದಿರಿ ಶೆಟ್ಕರ್ ಅವರೆ ನಿಮ್ಮ ಭಾವನವರ ಕಮೆಂಟುಗಳು ಎಂಟರ್ ಟೈನ್ ಮೆಂಟೇ ಆಗಿರುತ್ತವೆ. ಅವುಗಳಲ್ಲಿ ಯಾವುದೇ ಹುರುಳಿರುವದಿಲ್ಲ ಎಂದು ನೀವೇ ಒಪ್ಪಿಕೊಂಡಿರಲ್ಲಾ ಸಾಕು.

        ಉತ್ತರ
        • Nagshetty Shetkar
         ಜನ 11 2015

         ಬಹುಪತ್ನಿತ್ವ ಬಗ್ಗೆ ಅಂಕಿ ಅಂಶ ಸಹಿತ ಬಾವ ಅವರು ಕ್ರಾಂತಿಕೇಶವ ಅವರ ವಾದವನ್ನು ಡಿಮಾಲಿಶ್ ಮಾಡಿದ್ದಾರೆ! ರಿಯಲಿ ಗುಡ್ ವರ್ಕ್ ಬಾವ ಭಾಯ್!

         ಉತ್ತರ
         • aki
          ಜನ 11 2015

          ಇಷ್ಟು ದಿನಗಳು ಅವರು ಗೂಗಲ್ ನಲ್ಲಿ ಈ ವಿಶಯ ಸರ್ಚ ಮಾಡಿದರೆಂದಾಯ್ತು. ಇರಲಿ ಈಗಲಾದರೂ ಏನಾದರೂ ತುಂಬಿ ತಂದು ಸುರಿದಿದ್ದಾರಲ್ಲಾ ಸರಿ.

          ಉತ್ತರ
         • aki
          ಜನ 11 2015

          ಕ್ರಾಂತಿಕೇಶ್ವರ says:
          January 11, 2015 at 7:26 pm
          ಪ್ರಿಯ ಸಲಾಂ ಬಾವ,
          ತಮಗೆ ಕನ್ನಡ ಓದಲು ಬರುತ್ತದೆಯೇ? ನಾನು ಕೇಳಿದ ಪ್ರಶ್ನೆ ಯಾವುದು ಹಾಗೂ ತಾವು ಅದಕ್ಕೆ ಕೊಟ್ಟ ಉತ್ತರ ಯಾವುದು? ನಾನು ೧೯೬೧ರ ಸೆನ್ಸಸ್ ಪ್ರಕಾರ ಭಾರತದ ವಿವಿಧ ಸಮುದಾಯಗಳಲ್ಲಿ ಶೇಕಡವಾರು ಬಹುಪತ್ನಿತ್ವ ಎಷ್ಟು ಅಂತ ತಮ್ಮನ್ನು ಕೇಳಲಿಲ್ಲ! ನನ್ನ ಪ್ರಶ್ನೆ ಇದಾಗಿತ್ತು: ಭಾರತದಲ್ಲಿ ಕಂಡುಬರುವ ಬಹುಪತ್ನಿತ್ವವನ್ನು ತಾವು ಸಾಮಾಜಿಕ ಅನಿಷ್ಟ ಎಂದು ಪರಿಗಣಿಸಿರುವಿರಾ ಇಲ್ಲವಾ ಅಂತ. ಈ ಪ್ರಶ್ನೆಗೆ ಉತ್ತರ ಕೊಡುವ ಬದಲು ಸುಬ್ರಹ್ಮಣ್ಯಸ್ವಾಮಿಯವರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದೀರಿ. ಇದು ಸರಿಯೇ?
          ಇನ್ನು ಮುಸಲ್ಮಾನರಲ್ಲಿ ಕಂಡು ಬರುವ ಬಹುಪತ್ನಿತ್ವದ ಬಗ್ಗೆ ಕೇರಳದ ಒಬ್ಬ ಸುನ್ನಿ ವಿದ್ವಾಂಸ ಏನಂತಾರೆ ಅಂತ ಇಲ್ಲಿ ಓದಿ:
          _http://www.dnaindia.com/india/report-kerala-muslim-cleric-vows-to-preserve-polygamy-1205615

          ಬಹುಪತ್ನಿತ್ವಕ್ಕೆ ಮುಸ್ಲಿಂ ಧಾರ್ಮಿಕ ವಿದ್ವಾಂಸರು ಕೊಡುವ ಸಮರ್ಥನೆ ಇದು: “women’s menstrual cycle prevented them from sexual contact for five-six days. Hence a second wife was justified.”

          ಹೆಂಡತಿ ಋತುಮತಿ ಆಗಿದ್ದ ಸಮಯದಲ್ಲಿ ಸಂಭೋಗ ನಡೆಸಲು ಎರಡನೇ ಹೆಂಡತಿ ಬೇಕು ಅನ್ನುವವರು ಹೆಂಡತಿಯನ್ನು ಏನು ಅಂತ ತಿಳಿದಿದ್ದಾರೆ? ಹೆಂಡತಿ ಅಂದರೆ ಏನು ವರ್ಷದ ೩೬೫ ದಿನವೂ ಸಂಭೋಗ ನಡೆಸುವ ಯಂತ್ರವೇ???

          Reply
          Salam Bava says:
          January 11, 2015 at 6:31 pm
          Dear Kranthikeswar- come on,move on with the article!

          Reply
          ಕ್ರಾಂತಿಕೇಶ್ವರ says:
          January 11, 2015 at 7:28 pm
          ಸಲಾಂ ಬಾವ ಅವರೇ, ತಾವು ಅರೇಬಿಯಾದ ಬಗ್ಗೆ ಹೇಳಿದ್ದು ಸುಳ್ಳು ಅಂತ ಒಪ್ಪಿಕೊಳ್ಳಿ, ಆಗ ನಾನು ನೀವು ನನ್ನ ಕುರಿತು ‘ಮನುವಾದಿ’ ಅಂತೆಲ್ಲ ಅಂದದ್ದನ್ನು ಮರೆತು ತಮ್ಮನ್ನು ಕ್ಷಮಿಸಿ ನನ್ನ ವಾದವನ್ನು ನಿಲ್ಲಿಸುತ್ತೇನೆ. ಆಗಬಹುದೇ? ಶೆಟ್ಕರ್ ಸಾಬರೆ ಓದಿದಿರಲ್ಲಾ? ಯಾರು ಹೇಗೆ ಝಾಡಿಸಿದ್ದಾರೆ ತಿಳಿಯಿತೇ? ನಿಮ್ಮ ಭಾವನವರು ಹೇಗೆ ರಾಜಿಗೆ ಬಂದರು? ನಿಮಗೆ ಅರ್ಥವಾಯ್ತಾ?

          ಉತ್ತರ
          • Nagshetty Shetkar
           ಜನ 11 2015

           ವೈದಿಕರನ್ನು ಕೇಳಿದ್ದರೆ ಅವರೂ ಬಹುಪತ್ನಿತ್ವಕ್ಕೆ ಇದೇ ಕಾರಣವನ್ನು ನೀಡುತ್ತಿದ್ದರು! ಬಹುಪತ್ನಿತ್ವ ಸಲ್ಲದು ಅಂತ ಹಿಂದೂ ಧರ್ಮಗ್ರಂಥಗಳು ಹೇಳಿಲ್ಲ.

          • aki
           ಜನ 11 2015

           ನಿಮ್ಮ ಭಾವ ಹೇಗೆ ಪರಾ(ಭಾ)ಭವ ಆಗಿದ್ದಾರೆ ಮೊದಲು ನೋಡಿ ನಂತರ ಕಮೆಂಟ ಮಾಡಿ. ನೀವು ಅಲ್ಲಿ ಸಲಾಂ ಭಾವ ನಿಮ್ಮನ್ನೆಲ್ಲ ಗುಡಿಸುತ್ತಿದ್ದಾರೆ ಮೋದಿ ಆಗಿದ್ದಾರೆ. ಹಿಂದೂಗಳ ಥರ ರಂಗೋಲಿ ಇಟ್ಟಿದ್ದಾರೆ ಹಾಗೆ ಹೀಗೆ ಅಂತೆಲ್ಲ ಕಾಮೆಂಟ ಮಾಡಿದ್ದೀರಲ್ಲಾ ಅದಕ್ಕೇನು ಹೇಳುತ್ತೀರಿ ಹೇಳಿ.

  • shripad
   ಜನ 10 2015

   “Everything originated in India. Even caste system, Sati practice, untouchability, made snana, superstitious beliefs, crores of gods, manu smriti, greedy mutts and rapist swamis…” and even N S Shatkar and his cranky thoughts too!!

   ಉತ್ತರ
   • Nagshetty Shetkar
    ಜನ 11 2015

    ಬಸವಣ್ಣ ಆದಿಯಾಗಿ ಶರಣರೆಲ್ಲರೂ ಭಾರತದಲ್ಲೇ ಜನಿಸಿದ್ದು. ಅಭಿನವ ಚನ್ನಬಸವಣ್ಣ ಎಂದೇ ಪ್ರಸಿದ್ಧರಾಗಿರುವ ದರ್ಗಾ ಸರ್ ಕೂಡ ಭಾರತದಲ್ಲೇ ಜನಿಸಿದ್ದು. ಆದರೂ ಕೆಲವರು ಸಂಘಿಗಳು ದರ್ಗಾ ಸರ್ ಅವರನ್ನು ತುರುಕ ಎಂದು ಕರೆಯುತ್ತಾರೆ.

    ಉತ್ತರ
 3. Aryan
  ಜನ 5 2015

  yes you are right! we have to accept it . even the black and white differentiability originated in India, “Exorcism” also originated in India. “Shehtan” word is also originated in in India. look how great India is ! We should teach our children, our future generation that, “we are fit to be ruled,Not to rule”. We should teach young India that We are fools absolutely right ! I think tomorrow a day may come saying that even the great epics of India ,”mahabharat” and “ramayana” is also written by western countries . Irony is is that even you guys believe that too.
  because u guys forgot who is your mother.:)

  ಉತ್ತರ
 4. ಜನ 6 2015

  ವಿದ್ಯಾ ಅವ್ರೆ,
  ನಿಮ್ಮ ಶಿಲಾಕುಲ ವಲಸೆ ಯ ಪುಸ್ತಕ ಪರಿಚಯ ಸಕಾಲಿಕವಾಗಿ ಮೂಡಿಬಂದಿದೆ. ಸಂಕೀರ್ಣವಾದ ವಿಚಾರಗಳನ್ನು ಒಳಗೊಂಡಿರುವ ಪುಸ್ತಕದ ವಿಷಯವನ್ನು ಬಹಳ ಚೆನ್ನಾಗಿ ,ಸಂಕ್ಷಿಪ್ತವಾಗಿ ನಿರೂಪಿಸಿದ್ದೀರಿ. ನಾನು ಈ ಪುಸ್ತಕ ಓದಿ ಸುಮಾರು ತಿಂಗಳೇ ಅಯ್ತು. ಅದರ ವಿಮರ್ಶೆ, ಪರಿಚಯ ಬರೆಯಲು ಪ್ರಯತ್ನಿಸಿ, ಸಮಾಧಾನವಾಗದೇ ಹಾಗೇ ಬಿಟ್ಟಿದ್ದೆ. ನೀವು ಅದರ ವಸ್ತು ವಿಷಯಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಸಮರ್ಥವಾಗಿಯೇ ಮಾಡಿದ್ದೀರಿ.
  ನಿಜ, ಗಣೇಶಯ್ಯನವರು ಕನ್ನಡ ,೨೧ನೇ ಶತಮಾನದಲ್ಲಿ ಕಂಡ ಅದ್ಭುತ ಲೇಖಕ. ಐತಿಹಾಸಿಕ ವಿಷಯಗಳನ್ನು ಕುರಿತು ತಮ್ಮ ಆಳವಾದ ಸಂಶೋಧನೆಯ ಜೊತೆ ಜೊತೆಗೆ ರೋಚಕ ಕಥಾಹಂದರವನ್ನು ಕಟ್ಟಿ ಸಾಹಿತ್ಯವನ್ನು ಓದುಗರಿಗೆ ಉಣಬ ಡಿಸುವುದು ಇವರ ವಿಧಾನ. ಅವರ ಸಣ್ಣ ಕಥೆಗಳಿರಬಹುದು, ಕಾದಂಬರಿಗಳಿರಬಹುದು, ಎಲ್ಲವೂ first class.
  ನನಗಂತೂ ಅವರ ಎಲ್ಲಾ ಪುಸ್ತಕಗಳು ಇಷ್ಟ.
  ಆರ್ಯ ದ್ರಾವಿಡ ಭೇದ, ಉತ್ತರ ದಕ್ಷಿಣ ಭೇದ , ಭಾಷೆ ಪಂಗಡಗಳ ಒಳ ಭೇದ ಇತ್ಯಾದಿಗಳು ಬ್ರಿಟಿಷರು, ಯೂರೋಪಿಯನ್ನರು ತಮ್ಮ ಸೀಮಿತ ಪ್ರಾಪಂಚಿಕ ದೃಷ್ಟಿಯಿಂದ ನೋಡಿ, ರಾಜಕೀಯ ಕಾರಣಗಳಿಗಾಗಿ ಹಾಗೂ ಅ ಸಂದರ್ಭದ ವೈಯಕ್ತಿಕ ಪ್ರ್ತಿಷ್ಟೆಗಾಗಿ ಹುಟ್ಟುಹಾಕಿದ ಕಪೋಲ ಕಲ್ಪಿತ ಚರಿತೆ ಹಾಗೂ ಸಾಮಾಜಿಕ ವಿಜ್ಞಾನ ಎಂಬುದು ನಮ್ಮಲ್ಲಿಯ ಜನಗಳಿಗೆ ತಿಳಿಯದೇ ಹೋದದ್ದು ಅಥವಾ ತಿಳಿದರೂ, ತಮ್ಮದೇ ಸ್ವಾರ್ಥಕ್ಕೆ ರಾಷ್ಟ್ರ ಹಿತವನ್ನು ಬಲಿಕೊಡುತ್ತಿರುವುದು ವಿಪರ್ಯಾಸಕರ ಬೆಳವಣಿಗೆ.
  ತಾವು ಹೋದಲ್ಲೆಲ್ಲಾ, ಅಲ್ಲಿನ ನಾಗರೀಕತೆಗಳನ್ನು ದಮನಗೊಳಿಸಿ, ಅವುಗಳಿಗೆ ಅನಾಗರಿಕರ ಪಟ್ಟಕಟ್ಟಿ ಅಲ್ಲಿನ ಸಂಪತ್ತು , ಭೂಮಿ ಯಾಲವನ್ನು ಕಬಳಿಸಿದ ಪುರಾವೆ ಇದ್ದರೂ ಅವರ ಮಾತುಗಳೇ ಸತ್ಯ ಎನ್ನ್ನುವ ನಮ್ಮವರ ಧೋರಣೆಯನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ಈ ಪುಸ್ತಕಕ್ಕೂ ವ್ಯಾಪಕ ಪ್ರಚಾರ ( ಎಲ್ಲಾ ಪುರಾವೆಗಳು ಇದ್ದರೂ) ಸಿಗದ ಹಾಗೆ ಪಟ್ಟ ಭದ್ರರು ನೋಡಿಕೊಂಡಿದ್ದನ್ನು ಗಮನಿಸಬೇಕು.
  ವಿಮರ್ಶೆಯನ್ನು ಒಂದು ಚಿಕ್ಕ ಲೇಖನದಲ್ಲಿ ಹಿಡಿದಿಡಲಾಗದೆಂಬ ನಿಮ್ಮ ವಿನೀತ ಹೇಳಿಕೆ ಸೂಕ್ತವೇ. ಆ ಪುಸ್ತಕವನ್ನು ಓದಿಯೇ ಅನಂದಿಸಬೇಕು.
  ನೀವು ಓದಿಲ್ಲದಿದ್ದರೆ
  Lies with long legs
  Breaking india
  Invading the sacred
  ಪುಸ್ತಕಗಳನ್ನು ಓದಿ. ಗಣೇಶಯ್ಯನವರೂ ‘’ಲೈಸ್ ವಿಥ್ ಲಾಂಗ್ ಲೆಗ್ಸ್ ‘’ ಪುಸ್ತಕ ಓದಿರಲಿಲ್ಲ. ಬಹಳ ಸಂತೋಶದಿಂದ ಅನುಮೋದಿಸಿದರು. ಯುರೋಪಿಯನ್ನರ ಅದರಲ್ಲೂ ಮ್ಯಾಕ್ಸ್ ಮುಲ್ಲರ್ ಹಾಗೂ ವಿಲಿಯಂ ಜೋನ್ಸ್ ಅವರ ಪಾಂಡಿತ್ಯದ ಪೂರ್ಣ ಪರಿಚಯವೂ, ಅವರು ಸೃಷ್ಟಿಸಿದ ಸುಳ್ಳುಗಳ ಸರಮಾಲೆಗೆ ಪ್ರಚಾರ ಸಿಕ್ಕಿದ್ದು, ಕ್ರೈಸ್ತ ಮಿಶನರಿಗಳು ಹೆಣೆದ, ಹೆಣೆಯುತ್ತಿರುವ ಹುನ್ನಾರಗಳೂ ಐತಿಹಾಸಿಕ ದಾಖಲೆಗಳ ಸಮೇತ ಬೆಳಕಿಗೆ ಬರುತ್ತದೆ,.

  ಹಾಗೇ ಸತ್ಯದ ಹುಡುಕಾಟ, ಮೌಲ್ಯಗಳ ತಡಕಾಟ , ಆತ್ಮಸಾಕ್ಷಾತ್ಕಾರಕ್ಕೂ ಬೆಳಕು ತೋರಿ, ಕತ್ತಲಿನಿಂದ ಬೆಳಕಿನೆಡೆಗೆ ಮುನ್ನಡೆಸುವುದರಲ್ಲಿ that will be a helping hand.
  ಒಟ್ಟಿನಲ್ಲಿ ಉತ್ತಮ ಬರಹ.

  ಉತ್ತರ
 5. ವಿದ್ಯಾ
  ಜನ 6 2015

  ಸುಧಾಕರ್ ಅವರೆ ಅಭಿನಂದನೆಗಳು. ಜೊತೆಗೆ ನೀವು ಈ ಹಿಂದೆ ತಿಳಿಸಿದ ಪುಸ್ತಕ ಓದಬೇಕೆಂದರೆ ನನ್ನ ಇಂಗ್ಲೀಷ ಜ್ಞಾನ ಅಷ್ಟಕ್ಕಷ್ಟೆ ಇದೆ. ಕಾರಣ ಪುಸ್ತಕದ ಮುಖ್ಯಾಂಶಗಳನ್ನು ತಾವು ಬರೆದರೆ ನನ್ನಂತೆ ಇಂಗ್ಲೀಷ ಜ್ಞಾನ ಚನ್ನಾಗಿಲ್ಲದವರಿಗೆ ಅನುಕೂಲ. ಜೊತೆಗೆ ಪುಸ್ತಕಕ್ಕೆ ಉತ್ತಮ ಪ್ರಚಾರವೂ ಸಿಗುತ್ತೆ. ನಿಮ್ಮ ಅನೇಕ ಕಾರ್ಯಗಳ ನಡುವೆ ನಿಮ್ಮ ಹವ್ಯಾಸಗಳಲ್ಲಿ ಈ ಕಾರ್ಯಕ್ಕೆ ಸಮಯ ಸಿಕ್ಕರೆ ನೀವು ಆ ಪುಸ್ತಕಗಳ ಸಾರಾಂಶ ತಿಳಿಸಿದರೆ ಉತ್ತಮವಾಗುತ್ತದೆಂದು ನನ್ನ ಅನಿಸಿಕೆ. ಸಮಯ ಸಿಕ್ಕರೆ ಆ ಕೆಲಸ (ಮುಖ್ಯಾಂಶ ತಿಳಿಸುವದು) ಮಾಡಿ ಎನ್ನುವದು ನನ್ನ ವಿನಮ್ರ ಪ್ರಾರ್ಥನೆ.

  ಉತ್ತರ
 6. Nagshetty Shetkar
  ಜನ 11 2015

  “ಆರ್ಯರ ಹಾಗೂ ಹರಪ್ಪ ಜನರಲ್ಲಿ ಜ್ಯೋತಿಷ್ಯ ಶಾಸ್ತ್ರ, ನಕ್ಷತ್ರಗಳ ಹಾಗೂ ಖಗೋಳ ಶಾಸ್ತ್ರ ಜ್ಞಾನವು ಅವಿಚ್ಚಿನ್ನವಾಗಿ ಬೆಳೆದಿತ್ತು”

  ಆದರೂ ಶ್ರೇಣೀಕೃತ ಸಮಾಜವನ್ನು ಆ ಕಾಲದ ವೈದಿಕರು ಕಟ್ಟದೇ ಬಿಡಲಿಲ್ಲ! ಏಕೆ?

  ಉತ್ತರ
  • Nagshetty Shetkar
   ಜನ 11 2015

   ಮತ್ತೆ ಮಾಡರೇಷನ್??? ಹೇಳುವುದು ಒಂದು ಮಾಡುವುದು ಮತ್ತೊಂದು. ಛೀ!

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments