ವಿಷಯದ ವಿವರಗಳಿಗೆ ದಾಟಿರಿ

ಜನವರಿ 7, 2015

53

PK ಎಂಬ ರಾಂಗ್ ನಂಬರ್

‍ನಿಲುಮೆ ಮೂಲಕ

– ಸಂತೋಷ್ ಕುಮಾರ್ ಪಿ.ಕೆ

PKಅಮೀರ್ ಖಾನ್ ಎಂದರೆ ವಿಭಿನ್ನ ಶೈಲಿಯ ಚಿತ್ರಗಳನ್ನು ತೆರೆಗೆ ತರುವ ಸಾಮರ್ಥ್ಯ ಉಳ್ಳವರು ಎಂಬುದೇ ಬಹುತೇಕರ ಭಾವನೆ, ಅದು ಸತ್ಯ ಕೂಡ. ಈಗ ಬಂದಿರುವ ಪೀಕೆ ಚಿತ್ರ ಕೆಲವು ತಪ್ಪುಗ್ರಹಿಕೆಗಳ ಆಧಾರದ ಮೇಲೆ ಹೋಗುತ್ತದೆ ಎಂಬುದು ಬಿಟ್ಟರೆ ಅದನ್ನೊಂದು ಉತ್ತಮ ಲವ್ ಸ್ಟೋರಿ ಆಧಾರಿತ ಚಿತ್ರವನ್ನಾಗಿ ನಿರ್ದೇಶಕರು ಮಾಡಬಹುದಿತ್ತು ಎಂಬುದು ನನ್ನ ಅನಿಸಿಕೆ. ಹಾಗಾದರೆ ಆ ತಪ್ಪುಗ್ರಹಿಕೆಗಳು ಏನು?

1. ಭಾರತೀಯ ಸಂಪ್ರದಾಯ ಮತ್ತು ಸೆಮೆಟಿಕ್ ರಿಲಿಜನ್ ಗಳು ಭಗವಾನ್ ಮತ್ತು ಗಾಡ್ ಎಂದು ಮಾತನಾಡುವಾಗ ಇರುವ ವ್ಯತ್ಯಾಸವನ್ನು ಗುರುತಿಸಿಕೊಳ್ಳದಿರುವುದು. ನಮ್ಮಲ್ಲಿ ಸಾಮಾನ್ಯವಾಗಿ ದೇವರೇ ಕಾಪಾಡಬೇಕು, ದೇವರು ನಿನಗೆ ಕರುಣಿಸಲಿ, ಹೀಗೆ ಇತ್ಯಾದಿಗಳನ್ನು ದೇವರಿಗೆ ಆರೋಪಿಸುವಾಗ, ಅಕ್ಷರಶಃ ದೇವರನ್ನೇ ರೆಫರೆನ್ಸ್ ಪಾಯಿಂಟ್ ಆಗಿ ಇಟ್ಟುಕೊಂಡಿರುತ್ತೇವೆಯೆ? ಅದು ಹೇಳುವವರಿಗೂ ಸ್ಪಷ್ಟವಿರುವುದಿಲ್ಲ, ಕೇಳಿಸಿಕೊಳ್ಳುವವರಿಗೂ ತಿಳಿದಿರುವುದಿಲ್ಲ,. ಆಡುವ ಮಾತಿಗೂ ಕ್ರಿಯೆಗೂ ಕೆಲವು ಬಾರಿ ನಮ್ಮ ಸಂಸ್ಕೃತಿಯಲ್ಲಿ ಸಂಬಂಧವೇ ಇರುವುದಿಲ್ಲ, ದೇವರು ಇದ್ದಾನೆ ಎಂದರೆ ಇದ್ದಾನೆ ಎಂದಷ್ಟೇ..ಅವನು ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದು ನಮ್ಮ ಪ್ರಶ್ನೆಯೂ ಅಲ್ಲ ಆಸಕ್ತಿಯೂ ಅಲ್ಲ. ಆದರೆ ಇದನ್ನೇ ರಿಲಿಜನ್ ಸಮಾಜಗಳಲ್ಲಿ ಬಳಸಿದರೆ ಅದಕ್ಕೆ ನಿರ್ದಿಷ್ಟ ಅರ್ಥವೂ ಇದೆ, ಅದನ್ನು ಹುಡುಕಲು (ತೀರ ಸಿಗುವುದಿಲ್ಲ ಎಂದು ತಿಳಿದಿದ್ದರೂ) ಸಹಾಯ ಮಾಡುವ ಸಂಸ್ಥೆಗಳು ಹಾಗೂ ಗ್ರಂಥಗಳು ದೊರಕುತ್ತವೆ. ಇಲ್ಲಿ ಭಾಷೆಯ ಒಕ್ಕಣೆಯ ಆಧಾರದ ಮೇಲೆ ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳುವುದಕ್ಕಿಂತ ಏನನ್ನು ಹೇಳುತ್ತಿಲ್ಲ ಎಂಬುದು ಅರ್ಥೈಸಿಕೊಳ್ಳುವುದು ಸವಾಲಿನ ಕೆಲಸ. ಏಲಿಯನ್ ಮನುಷ್ಯನಿಗೆ ಭಾಷೆ ತಿಳಿದ ಮಾತ್ರಕ್ಕೆ ಸಂಸ್ಕೃತಿಯೇ ಅರ್ಥವಾಗಿಬಿಡುತ್ತದೆ ಎಂಬುದು ನಿರ್ದೇಶಕರ ತಪ್ಪುಗ್ರಹಿಕೆಗೆ ಒಂದು ನಿದರ್ಶನವಾಗಿದೆ.

2. ಎರಡು ತರಹದ ಭಗವಾನ್ ಗಳಿರುತ್ತಾರೆ, ಎಂದು ಸಂವಾದದಲ್ಲಿ ಅಮೀರ್ ಹೇಳುತ್ತಾರೆ. ಒಂದು ನಮ್ಮನ್ನು ಸೃಷ್ಟಿಸಿದವ ಮತ್ತೊಂದು ಕೆಲವು ಮನುಷ್ಯರೇ ಸೃಷ್ಟಿಮಾಡಿಕೊಂಡ ದೇವರು. ಇದರಲ್ಲಿ ಪಕ್ಕಾ ಸೆಮೆಟಿಕ್ ರಿಲಿಜನ್ ನ ದೃಷ್ಟಿಕೋನವೇ ಮೊದಲನೆಯ ತರಹದ ಭಗವಾನ್ ಆಗಿದೆ. ದೇವರ ಬಗ್ಗೆ ಅಷ್ಟೆಲ್ಲಾ ಸಮಸ್ಯೆ ಇಟ್ಟುಕೊಂಡಾತ ನಮ್ಮನ್ನು ಸೃಷ್ಟಿಸಿದ ಭಗವಂತನೊಬ್ಬನಿದ್ದಾನೆ ಎಂದು ಅವನಿಗೆ ಅನ್ನಿಸಲು ಹೇಗೆ ಸಾಧ್ಯ? ಇದು ನಿರ್ದೇಶಕರ ಸೆಮೆಟಿಕ್ ದೃಷ್ಟಿಕೋನವನ್ನು ಚಿತ್ರದಲ್ಲಿ ತೂರಿಸಿದ್ದಲ್ಲದೇ ಮತ್ತೇನೂ ಕಾಣುವುದಿಲ್ಲ. ಮೊದಲನೆಯ ಭಗವಂತ ಏಕೆ ರೈಟ್ ನಂಬರ್ ಎರಡನೇ ಭಗವಂತ ಏಕೆ ರಾಂಗ್ ನಂಬರ್ ಎಂದು ಅರ್ಥೈಸಿಕೊಳ್ಳುವಲ್ಲೇ ದೂರವಾಣಿ ಕರೆ ಕಟ್ ಆಗುತ್ತದೆ.

3. ಭಯದಿಂದಲೇ ರಿಲಿಜನ್ ಹುಟ್ಟುತ್ತದೆ ಎಂಬುದು ನಿರ್ದೇಶಕರು ಕಂಡುಕೊಂಡಿರುವ ಮತ್ತೊಂದು ದೊಡ್ಡ ಸತ್ಯ. ಇದೂ ಸಹ ಸೆಮೆಟಿಕ್ ರಿಲಿಜನ್ನಿನ ದೃಷ್ಟಿಕೋನ ಎಂಬುದು ಮಾತ್ರ ಪ್ರಾಯಶಃ ಅವರಿಗೆ ತಿಳಿದಿರಲಿಕ್ಕಿಲ್ಲ. ಪರೀಕ್ಷೆ ಭಯದಿಂದ ಜನರು ಕೈಮುಗಿಯುತ್ತಾರೆಂದು ಅರ್ಧಚಂದ್ರನನ್ನೋ ಅಥವಾ ಕ್ರೈಸ್ತನ ಮೂರ್ತಿಯನ್ನೋ ಮರದ ಕೆಳಗೆ ನಿಲ್ಲಿಸಿದ್ದರೆ ಅಥವಾ ಒಟ್ಟಿಗೆ ಎಲ್ಲವನ್ನೂ ಸಾಲಾಗಿ ನಿಲ್ಲಿಸಿದ್ದರೆ, ನಿರ್ದೇಶಕರಿಗೆ ಯಾವುದೇ ಪೂರ್ವಾಗ್ರಹ ಇಲ್ಲ ಎನ್ನಬಹುದಿತ್ತು. ಆದರೆ, ಒಂದು ಕಲ್ಲನ್ನು ಪ್ರತಿಷ್ಠಾಪಿಸಿ ಏನೋ ಮಹಾ ಘನಂಧಾರಿ ಸಂಗತಿಯನ್ನು ಕಂಡುಕೊಂಡೆವು ಎಂಬಂತೆ ನಟಿಸಿದ್ದು ಪ್ರಮಾದದ ಸಂಗತಿ. ಒಂದೊಮ್ಮೆ ಪರೀಕ್ಷೆ ಇಲ್ಲದಿದ್ದರೂ ವಿದ್ಯಾರ್ಥಿಗಳು ಆವರಣದಲ್ಲಿರುವ ಕಲ್ಲಿಗೆ ಕೈಮುಗಿಯುತ್ತಿರಲಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಒಂದೊಮ್ಮೆ ಯಾವುದೇ ಭಯ ಆತಂಕ ಇಲ್ಲದಿದ್ದರೂ ಕೈಮುಗಿದರೆ ಭಯವೇ ದೇವರ ಅಸ್ತಿತ್ವಕ್ಕೆ ಕಾರಣ ಎಂಬ ವಾದವೇ ಬಿದ್ದುಹೋಗುವುದಿಲ್ಲವೆ? ಇಲ್ಲಿಯೂ ನಮ್ಮ ದೇವರ ಕಲ್ಪನೆಗೂ ಸೆಮೆಟಿಕ್ ಗಾಡ್ ನ ಕಲ್ಪನೆಗೂ ವ್ಯತ್ಯಾಸ ತಿಳಿಯದೆ ಅಜ್ಞಾನವನ್ನು ಪ್ರದರ್ಶಿಸುವ ಕಾರ್ಯವನ್ನು ನಿರ್ದೇಶಕರು ಮಾಡಿದ್ದಾರೆ.

4. ಕೊನೆಯದಾಗಿ, ಇಡೀ ಚಿತ್ರವು ದೇವರ ಕುರಿತಂತೆ ಮಾತ್ರ ವಿಮರ್ಶೆಯನ್ನು ವ್ಯಕ್ತಪಡಿಸುವುದಿಲ್ಲ, ಬದಲಿಗೆ ಸೆಮಟಿಕ್ ರಿಲಿಜನ್ ಗೆ ಒಳಪಡದ ಸಂಸ್ಕೃತಿಗಳ ದೇವರುಗಳನ್ನು ಮಾತ್ರ ವಿಮರ್ಶೆಗೆ ಒಳಪಡಿಸುವುದು ಗೇಲಿ ಮಾಡುವುದು ಕಂಡುಬರುತ್ತದೆ. . ಇದು ಯಾವುದೋ ಒಂದು ಚಿತ್ರ ನಿರ್ದೇಶಕರ ಸಮಸ್ಯೆಯಲ್ಲ, ಬದಲಿಗೆ ನಮ್ಮ ಸಮಾಜದ ಕುರಿತು ಇರುವ ಜ್ಞಾನ ಮಿಮಾಂಸೆಯದ್ದೇ ಸಮಸ್ಯೆಯಾಗಿದೆ.

*** **** ***
ಷಣ್ಮುಖ ಆರ್ಮುಗಂ

‘ಸೃಷ್ಟಿಕರ್ತ ಗಾಡ್’ ಓರ್ವನೆ ‘ರೈಟ್ ನಂಬರ್’, ದೇವರ ಕುರಿತ ಉಳಿದೆಲ್ಲಾ ನಂಬಿಕೆಗಳು ‘ರಾಂಗ್ ನಂಬರ್’ ಎನ್ನುವುದು ಪಕ್ಕ ಸೆಮೆಟಿಕ್ ರಿಲಿಜನ್ನುಗಳ (ಕ್ರಿಶ್ಚಿಯಾನಿಟಿ, ಇಸ್ಲಾಂ ಮತ್ತು ಜುಡಾಯಿಸಂ) ಗ್ರಹಿಕೆಯ ಚೌಕಟ್ಟು. ಈ ಮಾನದಂಡದ ಮೂಲಕವೇ ಶತಶತಮಾನಗಳಿಂದ ಈ ರಿಲಿಜನ್ನುಗಳ ವಕ್ತಾರರು ತಾವು ಹೇಗೆ ‘ಸತ್ಯ’ ಮತ್ತು ಭಾರತೀಯ ಮತಸಂಪ್ರದಾಯಗಳು ಹಾಗೂ ಜಗತ್ತಿನ ವಿಭಿನ್ನ ಸ್ಥಳೀಯ ಪರಂಪರೆಗಳು ಹೇಗೆ ‘ಸುಳ್ಳು’ ಎಂದು ವಾದಿಸುತ್ತಲೇ ಬಂದಿವೆ. ಈ ಗ್ರಹಿಕೆಯ ಚೌಕಟ್ಟಿಗೆ PK ಚಿತ್ರವು ಧೃಶ್ಯವೈಭವವನ್ನು ನೀಡಿದೆಯಷ್ಟೆ!

ಅಂದಹಾಗೆ ಇದನ್ನು ನಿಷೇಧಿಸಿ ಎನ್ನುವ ಕೂಗು ಏನನ್ನೂ ಸಾಧಿಸದು, ಒಂದು ವೇಳೆ ಚಿತ್ರವನ್ನು ನಿಷೇಧಿಸಿದರೂ ಸಹ! ಈಗಾಗಲೇ ಇದೇ ಗ್ರಹಿಕೆಯ ಚೌಕಟ್ಟೇ ನಮ್ಮ ಸಮಾಜದ ಕುರಿತ ಗ್ರಹಿಕೆಯ ಮಾನದಂಡವಾಗಿ ಸಮಾಜವಿಜ್ಞಾನ ಮತ್ತು ಸಾಹಿತ್ಯದ ಪಠ್ಯಗಳಲ್ಲಿ ಶತಮಾನಗಳಿಂದ ರಾರಾಜಿಸುತ್ತಿರುವಾಗ ಈ ಚಿತ್ರವೊಂದರ ನಿಷೇಧದಿಂದ ಏನನ್ನು ಸಾಧಿಸಿದಂತಾಗುತ್ತದೆ? ಹೇಳಬೇಕೆಂದರೆ, ಈ ನಿಷೇಧದ ಬೇಡಿಕೆಯ ಹಿಂದೆಯೂ ಇದೇ ‘ಗ್ರಹಿಕೆಯ ಚೌಕಟ್ಟೇ’ ಇದೆ ಎನ್ನುವುದನ್ನು ಅರಿಯರಲಾರದಷ್ಟು ಅದು ನಮ್ಮಲ್ಲಿ (ಮುಖ್ಯವಾಗಿ ಆಧುನಿಕ ಶಿಕ್ಷಣ ಪಡೆದವರಲ್ಲಿ) ವ್ಯಾಪಿಸಿಕೊಂಡಿದೆ! ಹಾಗಾಗಿ, ಭಾರತೀಯ ಮತಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕೆನ್ನುವ ಕಾಳಜಿಯುಳ್ಳವರು ಇನ್ನಾದರೂ ಭಾರತೀಯ ಸಂಪ್ರದಾಯಗಳ ಕುರಿತ ಸೆಮೆಟಿಕ್ ರಿಲಿಜನ್ನುಗಳ ಕಥೆಯನ್ನೇ ವೈಚಾರಿಕ-ವೈಜ್ಞಾನಿಕವೆಂದು ಭೋದಿಸಿಕೊಂಡು ಬರುತ್ತಿರುವ ಇಂದಿನ ಬೌದ್ದಿಕ ಪರಂಪರೆ ಮತ್ತು ಶಿಕ್ಷಣ ಕ್ರಮದ ಕುರಿತು ಮೂಲಭೂತ ಪ್ರಶ್ನೆಗಳೆನ್ನೆತ್ತಲು ಆರಂಭಿಸಬೇಕಿದೆ. ಆ ಮೂಲಕ ಸೆಮೆಟಿಕ್ ರಿಲಿಜನ್ನುಗಳು ಮತ್ತು ಭಾರತೀಯ ಸಂಪ್ರದಾಯಗಳ ಕುರಿತ ವೈಜ್ಞಾನಿಕ ಜ್ಞಾನವನ್ನು ಬೆಳೆಸಿ ಆ ಜ್ಞಾನವೇ ನಮ್ಮೆಲ್ಲರ ಸಾಮಾನ್ಯ ಜ್ಞಾನವಾಗಿ ಹರಡಿದರೆ ಇಂತಹ ಇನ್ನೂ ನೂರು PK ಗಳು ಬಂದರೂ ಅವುಗಳನ್ನು ನಿಷೇಧಿಸಲು ಒತ್ತಾಯಿಸುವ ಪ್ರಸಂಗವೇ ಬರದು!

ಚಿತ್ರಕೃಪೆ :http://www.rediff.com

53 ಟಿಪ್ಪಣಿಗಳು Post a comment
 1. Nagshetty Shetkar
  ಜನ 7 2015

  ನೀವು ಇಲ್ಲಿ ಪಿಕೆ ಬಗ್ಗೆ ತರಲೆ ಮಾಡ್ತುತ್ತಿರಿ, ಅಲ್ಲಿ ವರ್ತಮಾನದಲ್ಲಿ ಸಲಾಂ ಬಾವ ಅವರು ನಿಮ್ಮಂತಹ ಮನುವಾದಿಗಳನ್ನು ಸರಿಯಾಗಿ ಗುಡಿಸಿ ಇಡುತ್ತಿದ್ದಾರೆ!! 😉

  ಉತ್ತರ
  • ರಂಜನಾ ರಾಮ್ ದುರ್ಗ
   ಜನ 8 2015

   ಸಲಾಂ ಬಾವ ಅವರು ಮೋದಿಯವರ ಅಭಿಮಾನಿಯಾಗಿರಬಹುದು ಎಂಬುದು ನಮ್ಮ ಅನುಮಾನವಾಗಿದೆ.ಆ ಕಾರಣದಿಂದಲೇ ಸ್ವಚ್ಚಭಾರತ ಅಭಿಯಾನಕ್ಕೆ ಬೆಂಬಲವಾಗಿ ಗುಡಿಸುತಿದ್ದಾರೇನು ಸಹೋದರರೇ?

   ಉತ್ತರ
   • Nagshetty Shetkar
    ಜನ 8 2015

    ಸಲಾಂ ಬಾವ ಅವರು ಮೋದಿಯ ಅಭಿಮಾನಿಯೋ ಲಾಡೆನ್ನನ ಅಭಿಮಾನಿಯೋ ಅವರನ್ನೇ ಕೇಳಿ. ಅವರ ಪರಿಚಯ ನನಗಿಲ್ಲ, ಕಾಮೆಂಟುಗಳನ್ನು ಮಾತ್ರ ನೋಡಿದ್ದೇನೆ. ಮನುವಾದಿಗಳ ಜ್ವರ ಬಿಡಿಸುವುದರಲ್ಲಿ ಅವರು ಪರಿಣಿತ.

    ಉತ್ತರ
    • aki
     ಜನ 8 2015

     ನಿಮ್ಮ ಭಾವ ನಾನು ಹೇಳಿದಂತೆಯೇ ಉತ್ತರಿಸಿದ್ದಾರೆ. ಯಾಕೆಂದರೆ ಅವೆಲ್ಲಾ ಎಡವಾದಿಗಳ ವರಸೆಯೇ ಆಗಿವೆ. ಉತ್ತರ ಇಲ್ಲ ಎಂದಾದಾಗ ಸಗಣಿ ಎರಚಾಟ ಇದ್ದೇ ಇರುತ್ತದೆ. ಅದೇ ಪ್ರಕಾರ ಉತ್ತರ ಹೇಳದೇ ಸಗಣಿ ಎರಚಾಡಲು ಶುರು ಹಚ್ಚಿಕೊಂಡಿದ್ದಾರೆ. ಪಾಪ!!!!! ಭಾವನ ಸಹಾಯಕ್ಕೆ ನೀವೇಕೆ ಹೋಗಿಲ್ಲಾ???

     ಉತ್ತರ
     • Nagshetty Shetkar
      ಜನ 8 2015

      ಅಪರಿಚಿತರ ನೆರವಿಗೆ ಹೋಗುವುದೂ ಅಪಾಯವನ್ನು ಹೆಗಲ ಮೇಲೆ ಹಾಕಿಕೊಳ್ಳುವುದೂ ಒಂದೇ ಅಂತ ಅಪ್ಪನವರು ಹೇಳುತ್ತಿದ್ದರು. ಮನುವಾದಿಗಳನ್ನು ಬಾವ ತರಾಟೆಗೆ ತೆಗೆದುಕೊಳ್ಳುವುದನ್ನು ದೂರ ಕುಳಿತು ನೋಡುವುದೇ ಚೆಂದ.

      ಉತ್ತರ
      • ವಿಜಯ್ ಪೈ
       ಜನ 10 2015

       [ಅಪರಿಚಿತರ ನೆರವಿಗೆ ಹೋಗುವುದೂ ಅಪಾಯವನ್ನು ಹೆಗಲ ಮೇಲೆ ಹಾಕಿಕೊಳ್ಳುವುದೂ ಒಂದೇ ಅಂತ ಅಪ್ಪನವರು ಹೇಳುತ್ತಿದ್ದರು. ]
       ಶರಣು ಶರಣಯ್ಯ!!
       [ಮನುವಾದಿಗಳನ್ನು ಬಾವ ತರಾಟೆಗೆ ತೆಗೆದುಕೊಳ್ಳುವುದನ್ನು ದೂರ ಕುಳಿತು ನೋಡುವುದೇ ಚೆಂದ.]
       ಗಂಜಿ ರೆಡಿಯಾದ ಮೇಲೆ ಹೋಗಿ ಉಣ್ಣುವುದೇ ಚೆಂದ! 🙂

       ಉತ್ತರ
 2. aki
  ಜನ 7 2015

  ವರ್ತಮಾನದಲ್ಲಿ ನಿಮ್ಮ ಸಲಾಂ ಬಾವಾಜೀ ಅವರು ಕ್ರಾಂತಿಕೇಶ್ವರ ಮತ್ತು ಹೆಸರಲ್ಲೆನಿದೆ ಅವರ ಪ್ರಶ್ನೆಗೆ ತಬ್ಬಿಬ್ಬಾಗಿ ಮೈ ಪರಚಿಕೊಂಡು ಏನೇನೋ ಉತ್ತರಿಸುತ್ತಿದ್ದಾರೆ. ಅವರಿಗೆ ಬಾವಾ ಅವರಿಗೆ ಉತ್ತರಿಸಲು ಕೆಲ ಪ್ರಶ್ನೆ ಕೇಳಲಾಗಿದೆ. ಅವರು ಇನ್ನೂ ಉತ್ತರಿಸಿಲ್ಲ. ಅವರ ಉತ್ತರ ಏನಿರುತ್ತದೆ ಎಂದರೆ ನಿಮ್ಮಂಥವರು ಏಕೆ ವರ್ತಮಾನಕ್ಕೆ ಬಂದಿರಿ? ನನಗೇಕೆ ಅಧಿಕಾರಯುತವಾಗಿ ಪ್ರಶ್ನೆ ಕೇಳುತ್ತಿದ್ದೀರಿ? ನಾನು ನಿಮ್ಮೊಂದಿಗೆ ವಾದಿಸುವದಿಲ್ಲ. ಮನುವಾದಿಗಳು , ಗಬ್ಬೆದ್ದು ನಾರುವ ಭಾರತ ಜಾತಿ, ವ್ಯವಸ್ಥೆ ಇವೇ ಹಳಸಲನ್ನು ಹೇಳುತ್ತಾರೆ ವಿನಃ ವಸ್ತು ನಿಷ್ಟವಾಗಿ ಉತ್ತರಿಸಲ್ಲ. ಆ ವಯ್ಯನೂ ನಿಮ್ಮಂತೇ. ಉತ್ತರ ಕೊಡಲು ಸಾಧ್ಯವಿಲ್ಲಾ ಎನ್ನಿಸಿದರೆ ಇನ್ನೊಬ್ಬರನ್ನು ಕೆಟ್ಟ ಮಾತುಗಳಿಂದ ನಿಂದಿಸುವದು ಅಥವಾ ಪಲಾಯನವಾದ. ಚನ್ನಾಗಿ ಮುಖ ನೋಡಿಕೊಳ್ಳಿ ಕನ್ನಡಿಯಲ್ಲಿ.

  ಉತ್ತರ
 3. ಜನ 8 2015
 4. Pramod
  ಜನ 8 2015

  ನಾಗಶೇಟ್ ರವರು ನಿಮ್ಮನೆಲ್ಲಾ ಎದುರು ಹಾಕಿ ಏಕಾಂಗ ವೀರನಾಗಿ ಮೆರಯುತ್ತಿದ್ದಾರೆ .ತಾವೋ ಹೆಸರೇ ಹಾಕದೇ ಪೀಕೆ ಕುರಿತಾಗಿ ವ್ಯಾಖ್ಯಾನ ಮಾಡುತ್ತೀರಿ . ಇಲ್ಲಿನ ವರೆಗೆ ಆದಾಯ ೩೦೦ ಕೋಟಿ ದಾಟಿದೆ ,ವಿದು ವಿನೋದ ರವರ ಖಜಾನೆ ತುಂಬಿ ಹರಿಯುತ್ತಿದೆ . ಎಲ್ಲಾ ಹಿಂದೂಗಳು ಪೀಕೆ ನೋಡಿ ಆಗಿದೆ ಎಂದು ನನಗೆ ಅನಿಸುತ್ತದೆ . ನಿಮ್ಮ ನಂಜು ಅಲ್ಲಿಗೆ ಟುಸ್ಸೇ ಆಯಿತು

  ಉತ್ತರ
  • Nagshetty Shetkar
   ಜನ 8 2015

   “ನಾಗಶೇಟ್ ರವರು ನಿಮ್ಮನೆಲ್ಲಾ ಎದುರು ಹಾಕಿ ಏಕಾಂಗ ವೀರನಾಗಿ ಮೆರಯುತ್ತಿದ್ದಾರೆ ”

   ಥ್ಯಾಂಕ್ಸ್ ಬಾವ ಭಾಯ್! ನಿಮ್ಮಂತಹವರು ನಿಲುಮೆಯ ಮನುವಾದಿಗಳ ಜ್ವರ ಬಿಡಿಸತಕ್ಕದ್ದು.

   ಉತ್ತರ
  • ವಿಜಯ್ ಪೈ
   ಜನ 10 2015

   [ನಾಗಶೇಟ್ ರವರು ನಿಮ್ಮನೆಲ್ಲಾ ಎದುರು ಹಾಕಿ ಏಕಾಂಗ ವೀರನಾಗಿ ಮೆರಯುತ್ತಿದ್ದಾರೆ]
   ಬಾವ ಭಾಯ್ ಅಲಿಯಾಸ್ ಪ್ರಮೋದ್..ನಾಗಶೇಟ್ ಅವರು ನೀವು ಹೇಳಿದಂತೆ ಈಗ ‘ಏಕಾಂಗ’ ವೀರನೇ ಆಗಿದ್ದಾರೆ. ಉಳಿದೆಲ್ಲವುಗಳನ್ನು ಕಟ್ ಮಾಡಲಾಗಿದೆ. ಅವರ ಪ್ರತಿಕ್ರಿಯೆಗಳನ್ನು ನೋಡಿದಾಗ ಯಾವ ಅಂಗ ಇನ್ನೂ ಉಳಿದಿರಬಹುದು ಎಂಬ ಅನುಮಾನ ನಿಮಗೆ ಖಂಡಿತ ಬರುವುದಿಲ್ಲ. 🙂
   [ಎಲ್ಲಾ ಹಿಂದೂಗಳು ಪೀಕೆ ನೋಡಿ ಆಗಿದೆ ಎಂದು ನನಗೆ ಅನಿಸುತ್ತದೆ .]
   ಅಂದ ಹಾಗೆ ಹಿಂದುಗಳು ಮಂಡರಲ್ಲ/ಮೊಂಡರಲ್ಲ ಎಂಬುದು ಕೂಡ ನಿಮಗೆ ಪ್ಯಾರಿಸ್ ಘಟನೆಯ ನಂತರ ಅನಿಸಿರಬಹುದು ಅಂದುಕೊಳ್ಳುತ್ತೇನೆ.

   ಉತ್ತರ
 5. aki
  ಜನ 8 2015

  ಸಲಾಂ ಬಾವಾರವರು ಪ್ರಮೋದ್ ಹೆಸರಿನಲ್ಲಿ ಬರೆಯುತ್ತಿದ್ದಾರಾ? ಯಾಕೆ ತಮ್ಮ ಓರಿಜಿನಲ್ ಹೆಸರಿನಲ್ಲಿ ಬರೆಯೋಕೆ ಹೆದರಿಕೆನಾ? ಪ್ರಮೋದ್ ಕಂ ಸಲಾಂ ಬಾಯ್?

  ಉತ್ತರ
  • ಜನ 9 2015

   “Fake Id” ಎಂದೆಲ್ಲಾ ಎಗರಾಡುವ ಶೇಟ್ಕರ್ ಅವರೇ ನಿಲುಮೆಯಲ್ಲಿ “Fake Id”ಯ ಜನಕರು.
   ಶೇಟ್ಕರ್ ಆಯ್ತು, ಕೃಷ್ಣಪ್ಪ ಆಯ್ತು, ಈಗ ಪ್ರಮೋದ್……
   +1 ಕೊಟ್ಕೊಂಡು ತಮ್ಮ ಬೆನ್ನಿಗೆ ತಾವೇ ತಟ್ಟಿಕೊಂಡದ್ದೂ ಆಯ್ತು! 😉
   ದರ್ಗಾ ಹೆಸರಿನ ಪ್ರಚಾರಕ್ಕೆ ಎಷ್ಟೆಲ್ಲಾ ಕಸರತ್ತು ನಡೆಯುತ್ತಿದೆ……!?

   ಕೇವಲ ಪ್ರಚಾರದಿಂದ ಏನು ಉಪಯೋಗ; ಒಳಗೆ ಸತ್ವ ಇರಬೇಕಲ್ಲ.
   ಅದಿಲ್ಲದೇ ಇದ್ದರೆ, ಕೇವಲ ಪ್ರಚಾರ ಎನ್ನುವುದು ನೀರೊಳಗಣ ಗುಳ್ಳೆಯಲ್ಲವೇ ಹರಹರಾ ಶ್ರೀಚನ್ನಸೋಮೇಶ್ವರಾ!

   ಉತ್ತರ
   • Nagshetty Shetkar
    ಜನ 9 2015

    Darga sir is great. True scholar. Very humble.

    ಉತ್ತರ
    • ಜನ 9 2015

     ಶೇಟ್ಕರ್ ಅವರ ಜೀವನವೇ ದರ್ಗಾ ಅವರ ಗುಣಗಾನಕ್ಕೆ ಮೀಸಲು 😉
     ಇತ್ತೀಚೆಗೆ ನಿಮ್ಮ ಕಾಮೆಂಟುಗಳಿಗೆ +1 ಕುಟ್ಟಿಕೊಳ್ಳುವುದನ್ನು ಮರೆತುಬಿಡುತ್ತಿದ್ದೀರಲ್ಲಾ!?
     ನಿಮ್ಮಂತ ಶರಣರಿಗೆ ಏಕಿಂತಹ ಮರೆವಿನ ಕಾಯಿಲೆಯನ್ನು ಶಿವ ನೀಡಿದ?
     ನಿಮ್ಮ ಎಂದಿನ ಪಾಪಕ್ಕೆ ಇಂದು ಇಂತಹ ಘೋರ ಶಿಕ್ಷೆ ಹರಹರಾ ಶ್ರೀ ಚನ್ನಸೋಮೇಶ್ವರಾ!

     ಉತ್ತರ
 6. ಜನ 11 2015

  ನಂಗ್ಯಾಕೋ ದರ್ಗಾನೇ ಈ ಶೆಟ್ಕರ್ ಎಂಬ ಹೆಸರಿನಲ್ಲಿ ಸ್ವಯಂಪ್ರಷ್ಠಲಾಲಯ ಮಾಡಿಕೊಳ್ತಾ ಇದ್ದಾರಾ ಅಂತಾ ಸಂದೇಹ!!

  ಉತ್ತರ
  • Nagshetty Shetkar
   ಜನ 11 2015

   Darga Sir is known as Channabasavanna of our times. Quietly doing Vachana service with out expecting any reward. True soldier of Basava.

   ಉತ್ತರ
   • ಜನ 11 2015

    So!!????? How does that answer my doubt?

    -2

    ಉತ್ತರ
   • shripad
    ಜನ 11 2015

    @ ಶೆಟ್ಕರ್- ನೀವು, ನಿಮ್ಮ ಪ್ರಗತಿಪರ ಎಂದುಕೊಳ್ಳುವ ಡಬ್ಬಾ ಸ್ವದೇಶ ಜನ ಜೀವನ ಘಾತುಕ ಚಿಂತನೆಗಳು, ಪಿಕೆಗಳು ಇತ್ಯಾದಿಗಳೆಲ್ಲ ನಮ್ಮ ಭಾರತೀಯ ಜೀವನ ಧರ್ಮದ ವ್ಯಾಪ್ತಿಯಲ್ಲಿ ಮಾತ್ರ ಜನಿಸಲು, ಜೀವಿಸಲು ಸಾಧ್ಯ. ಜಸ್ಟ್ ಒಂದು ಕಾರ್ಟೂನನ್ನು ಸಹಿಸಿಕೊಳ್ಳಲಾಗದ ರಿಲಿಜನ್ನಿನ ಜನ ಗ್ರೇಟ್ ಅಂತ ಪುಂಗಿ ಊದುತ್ತೀರಿ, ನಾಚಿಕೆಯಾಗಬೇಕು ನಿಮಗೆ. ಪಿಕೆಯನ್ನು ನಾನೂ ನೋಡಿದ್ದೇನೆ, ಎಂಜಾಯ್ ಮಾಡಿದ್ದೇನೆ. ಈ ಪಿಕೆಯೂ ಭಾರತೀಯ ಜೀವನ ಪ್ರವಾಹದಲ್ಲಿ ಒಂದು ಬಿಂದು ಅಷ್ಟೆ. ಇಂಥ ಇನ್ನೂ ನೂರು ಪಿಕೆಗಳಿಗೂ ಇಲ್ಲಿ ಜಾಗವಿದೆ. ನಮ್ಮ ತನವನ್ನು ಸ್ವಯಂ ಗೇಲಿ ಮಾಡಿಕೊಳ್ಳುವ ಹತ್ತಾರು ಲಾರಿ ಜನ ನಮ್ಮ ಸುತ್ತ ಇದ್ದಾರೆ. ಇಂಥ ದೊಡ್ಡ ಪರಂಪರೆಯೇ ನಮ್ಮಲ್ಲಿ ಮೊದಲಿನಿಂದಲೂ ಇದೆ. ಈ ಬಗೆಯ ಫ್ಲೆಕ್ಸಿಬಿಲಿಟಿ ಇರುವ ಕಾರಣಕ್ಕೇ ಭಾರತೀಯತೆ ಸಾವಿರಾರು ವರ್ಷದಿಂದ ಇರುವುದು, ಮುಂದೆಯೂ ಇರುತ್ತದೆ. ಪಿಕೆ ನಿಷೇಧಿಸಬೇಕು ಎಂದು ಕೂಗುವವರು ನಿಮ್ಮಂತೆ ಯಾವುದೋ ಸಿದ್ಧಾಂತಕ್ಕೆ ಮಾರಿಕೊಂಡ ಕರ್ಮಠರು. ಅಂಥವರಿಗೆ ಬೆಲೆ ಇಲ್ಲ. ಭಾರತೀಯ ಸಂಪ್ರದಾಯವನ್ನು ಅರ್ಥಮಾಡಿಕೊಳ್ಳಲಾಗದೇ ಒದ್ದಾಡುತ್ತ ಜಾತಿ, ವರ್ಗ, ಶ್ರೇಣಿ ಇತ್ಯಾದಿ ಸಿಂಬಳದಿ ನೊಣದಂತೆ ಸದಾ ಗೊಂದಲಗಳಲ್ಲೇ ತಿಣಕಾಡುವ ನಿಮಗೂ ನಿಮ್ಮ ಸೋಕಾಲ್ಡ್ ಶರಣ ಗುರುಗಳಿಗೂ ಭಾರತೀಯ ಜೀವನದ ಆಳ ಅಗಲ ಎಲ್ಲಿಂದ ಗೊತ್ತಾಗಬೇಕು?

    ಉತ್ತರ
   • shripad
    ಜನ 11 2015

    ನಿಮ್ಮ ಆಧುನಿಕ ಚೆನ್ನಬಸವಣ್ಣ ಮೂಲ ಚೆನ್ನಬಸವಣ್ಣನ ಇಂಥ ವಚನಗಳನ್ನು ಮನನ ಮಾಡಿಕೊಂಡಿದ್ದಾರೆಯೇ? “ಶ್ರೀಗುರುವಾದಾತನು ಸಕಲಾಗಮಂಗಳ ಹೃದಯವನರಿತು
    ತನ್ನ ತಾನರಿದು ಸರ್ವಾಚಾರ ತನ್ನಲ್ಲಿ ನೆಲೆಗೊಂಡು
    ಉಪದೇಶವ ಮಾಡುವ ಕ್ರಮವೆಂತೆಂದಡೆ:
    ಬ್ರಾಹ್ಮಣನ ಮೂರು ವರುಷ ನೋಡಬೇಕು,
    ಕ್ಷತ್ರಿಯನ ಆರು ವರುಷ ನೋಡಬೇಕು,
    ವೈಶ್ಯನ ಒಂಬತ್ತು ವರುಷ ನೋಡಬೇಕು,
    ಶೂದ್ರನ ಹನ್ನೆರಡು ವರುಷ ನೋಡಬೇಕು,
    ನೋಡಿದಲ್ಲದೆ ದೀಕ್ಷೆ ಕೊಡಬಾರದು _ ವೀರಾಗಮೇ.
    “ಬ್ರಾಹ್ಮಣಂ ತ್ರೀಣಿ ವರ್ಷಾಣಿ ಷಡಬ್ದಂ ಕ್ಷತ್ರಿಯಂ ತಥಾ
    ವೈಶ್ಯಂ ನವಾಬ್ದಮಾಖ್ಯಾತಂ ಶೂದ್ರಂ ದ್ವಾದಶವರ್ಷಕಂ
    ಈ ಕ್ರಮವನರಿಯದೆ,
    ಉಪಾಧಿವಿಡಿದು ಉಪದೇಶವ ಮಾಡುವಾತ ಗುರುವಲ್ಲ,
    ಉಪಾಧಿವಿಡಿದು ಉಪದೇಶವ ಮಾಡಿಸಿಕೊಂಬಾತ ಶಿಷ್ಯನಲ್ಲ.
    ಇವರಿಬ್ಬರ ನಿಲವು ಒಂದೆ ಠಕ್ಕನ ಮನೆಗೆ ಠಕ್ಕ ಬಿದ್ದಿನ ಬಂದಂತೆ
    ಈ ಗುರುಶಿಷ್ಯರಿಬ್ಬರನು ರೌರವನರಕದಲ್ಲಿಕ್ಕುವ
    ಕೂಡಲಚೆನ್ನಸಂಗಯ್ಯ”

    ಉತ್ತರ
    • Nagshetty Shetkar
     ಜನ 11 2015

     ವಚನಗಳ ಅಧ್ಯಯನ ಒಳ್ಳೆಯದು ಶ್ರೀಪಾದ್ ಅವರೇ! ಹೀಗೆ ವಚನಗಳನ್ನು ಓದುತ್ತಿರಿ – ಗುಡ್ ಫಾರ್ ಯೂ. ಅನುಮಾನ ಬಂದಾಗ ದರ್ಗಾ ಸರ್ ಅವರ ಸಾಹಿತ್ಯವನ್ನು ಓದಿ ಅನುಮಾನ ಪರಿಹರಿಸಿಕೊಳ್ಳಿ.

     ಉತ್ತರ
     • shripad
      ಜನ 12 2015

      @ ಶೆಟ್ಕರ್, ನಾನು ಅಷ್ಟೋ ಇಷ್ಟೋ ವಚನ ಓದುತ್ತಲೇ ಇರುತ್ತೇನೆ. ಅದು ಯಾರಪ್ಪನ ಆಸ್ತಿಯೂ ಅಲ್ಲ! ನನಗೆ ಇರುವುದು ಅನುಮಾನವಲ್ಲ, ವಚನ ಓದಿದ್ದೇನೆಂದು ಹೇಳಿಕೊಳ್ಳುವ ನಿಮ್ಮಂಥವರ ಬಗ್ಗೆ ಪ್ರಶ್ನೆ. ಇಂಥ ಪ್ರಶ್ನೆಗಳನ್ನು ಹಿಂದೆಯೂ ಕೇಳಿದ್ದೆ. ಕೆಲಸಕ್ಕೆ ಬಾರದ ಕಟ್ ಪೇಸ್ಟ್, ಸಲ್ಲದ ಸಬೂಬು ನೀಡುವುದು ಬಿಟ್ಟರೆ ಇನ್ನೇನಾದರೂ ಘನತೆವೆತ್ತ ತಾವು ಮಾಡಿದ್ದುಂಟೇ?

      ಉತ್ತರ
      • ಜನ 12 2015

       ಕಂಡಕಂಡಲ್ಲಿ ಕಾಲೆತ್ತುವ ಶೆಟ್ಕರ್ ಅಂತವರಿಗೆ ತಾವು ‘ಘನತೆವೆತ್ತ’ ಅಂತಾ ಎಕ್ಸ್ಟ್ರಾ ಮರ್ಯಾದೆ ಕೊಟ್ಟದ್ದು ನನಗೇಕೋ ಸಾಧುವಾಗಿ ಕಂಡುಬರಲಿಲ್ಲ.

       ಉತ್ತರ
       • shripad
        ಜನ 12 2015

        ಹೌದು ರಾಘವೇಂದ್ರ ಅವರೇ, ಅವರಿಗೆ ಘನತೆವೆತ್ತ ಅಷ್ಟು ಸೂಕ್ತವಲ್ಲ, ಸದಾ ಉಪದೇಶ ಮಾಡುವ ಕಾರಣದಿಂದ “ಹಿಸ್ ಹೋಲಿನೆಸ್” ಎಂದು ಸಂಬೋಧಿಸಬಹುದೇನೋ?!

        ಉತ್ತರ
        • Nagshetty Shetkar
         ಜನ 12 2015

         ವಚನಗಳು ಎಲ್ಲರ ಹೃದಯದ ಆಸ್ತಿ. ವೇದಗಳು ಹಾಗಲ್ಲ, ಅವು ಬ್ರಾಹ್ಮಣರ ಸ್ವತ್ತು. ಶೂದ್ರನು ಅಪ್ಪಿ ತಪ್ಪಿ ವೇದಗಳನ್ನು ಆಲಿಸಿದರೂ ಆತನ ಕಿವಿಗೆ ಸೀಸ ಇಡುತ್ತಿದ್ದರು ವೈದಿಕರು. ಶೂದ್ರರೆಂದರೆ ವೈದಿಕರ ದೃಷ್ಟಿಯಲ್ಲಿ ನಿತ್ಯನಾರಕಿಗಳು.

         ಉತ್ತರ
         • ಜನ 12 2015
         • aki
          ಜನ 13 2015

          ಶೇಟ್ಕರ್ ಸಾಬ್ರೆ..
          ಯಾರು ವೇದ ಓದಲಿಕ್ಕೆ ಪ್ರಯತ್ನಿಸಿದ್ದರು? ಯಾರ ಕಿವಿಗೆ ಸೀಸ ಹೊಯ್ದಿದ್ದರು? ಸ್ವಲ್ಪ ಹೇಳ್ತಿರಾ.. ಈ ಪ್ರಶ್ನೆಗೆ ಉತ್ತರಿಸಿರಿ. ಜೊತೆಗೆ ನನ್ನ ಪ್ರಶ್ನೆ ಏನಂದರೆ ಈಗ ಭಾರತ ಸ್ವತಂತ್ರವಾದ ನಂತರ ಎಲ್ಲರಿಗೂ ವಿದ್ಯೆ ಮುಕ್ತವಾಗಿದೆ. ಯಾರೂ ನಿಮ್ಮನ್ನು ಪ್ರಶ್ನಿಸುವದಿಲ್ಲ. ಈಗಲಾದರೂ ಎಷ್ಟು ಜನ ವೇದ ಓದಿದ್ದೀರಿ? ಶೂದ್ರ ದಲಿತರೆಷ್ಟು ಜನ ಓದಿದ್ದೀರಿ. ಸಂಸ್ಕೃತ ಕೇವಲ ಪರೀಕ್ಷೆಯ ಅಂಕ ಗಳಿಕೆಗೆ ಕಲಿತಿದ್ದಾರಾದರೂ ವೇದೋಪನಿಷತ್ತನ್ನು ಎಷ್ಟು ಜನ ಓದಿದ್ದೀರಿ? ಯಾಕೆ ಹಳೆಯ ಹಳವಂಡವನ್ನಿಡಿದು ಒಂದು ಜನಾಂಗವನ್ನು ಸದಾ ದ್ವೇಷಿಸುವದಲ್ಲದೇ ಅವರನ್ನು ಎತ್ತಿ ಕಟ್ಟಿ ಬಯ್ಯುತ್ತಾ ಹೋದರೆ ನಿಮಗಾಗಲೀ ದೇಶಕ್ಕಾಗಲೀ ಏನು ಲಾಭ? ಒಂದು ತಿಳಿಯಿರಿ. ಎಷ್ಟು ವೇಗವಾಗಿ ಚಂಡನ್ನು ಗೋಡೆಗೆ ಎಸೆಯುತ್ತೀರೋ ಅಷ್ಟೇ ವೆಗವಾಗಿ ನಿಮಗೆ ಹಿಂತಿರುಗಿ ಬಡಿಯುತ್ತದೆ. ಹಾಗೆ ಸ್ಪ್ರಿಂಗ್ ನ್ನು ಅದುಮಿದಷ್ಟೂ ಅದು ಪುಟಿಯುತ್ತದೆ. ನೆನಪಿರಲಿ.

          ಉತ್ತರ
          • Nagshetty Shetkar
           ಜನ 13 2015

           ಶೂದ್ರರು ಏತಕ್ಕೆ ನಿತ್ಯನಾರಕಿಗಳು? ಹೇಳಿ!

          • ಜನ 13 2015

           ಅದು ನಿಮ್ಮ ಭ್ರಮೆ. ಹಾಗೆಂದು ಎಲ್ಲಿಯೂ, ಎಂದೂ ಹೇಳಿಲ್ಲ.
           ಮತ್ತು ನೀವು ಅಂದುಕೊಂಡಂತೆ ಇಲ್ಲಿಯವರೆಗೂ ವೇದಗಳನ್ನು ಕಲಿತಿದ್ದಕ್ಕಾಗಿ ಯಾರ ಬಾಯಲ್ಲೂ ಸೀಸವನ್ನು ಸುರಿಯಲಾಗಿಲ್ಲ.
           ಆ ರೀತಿ ನಡೆದಿದ್ದರೆ, ಆ ಇತಿಹಾಸ ಗ್ರಂಥ-ಪುಟದ ಸಂಖ್ಯೆ, ರಚನೆಕಾರ, ಇತ್ಯಾದಿ ವಿವರಗಳನ್ನು ತಿಳಿಸಿ.
           ನೀವು ಈ ವಿವರ ನೀಡಲಾಗದಿದ್ದರೆ, ನಿಮ್ಮ ಮನಸ್ಸಿನಲ್ಲಿರುವ ಸುಳ್ಳು ಭ್ರಮೆಗಳನ್ನು ಹೊಡೆದೋಡಿಸಿ ಸತ್ಯದ ಇತಿಹಾಸವನ್ನು ತಿಳಿದುಕೊಳ್ಳಿ.

          • shripad
           ಜನ 14 2015

           @ ಶೆಟ್ಕರ್, ನಿಮ್ಮ ಪ್ರೀತಿಯ ಚೆನ್ನಬಸವಣ್ಣ ಹೇಳಿದ್ದಾನೆ ಕೇಳಿ:
           “ಹುಸಿಯಂಕರಿಸಿತ್ತು ಹೊಲೆಯನಲ್ಲಿ, ಹುಸಿ ಎರಡೆಲೆಯಾಯಿತ್ತು
           ಮಾದಿಗನಲ್ಲಿ,
           ಹುಸಿ ನಾಲ್ಕೆಲೆಯಾಯಿತ್ತು ಸಮ್ಮಗಾರನಲ್ಲಿ, ಹುಸಿ ಆರೆಲೆಯಾಯಿತ್ತು
           ಅಗಸನಲ್ಲಿ,
           ಹುಸಿ ಎಂಟೆಲೆಯಾಯಿತ್ತು ವ್ಯವಹಾರಿಯಲ್ಲಿ, ಹುಸಿ ಸಸಿಯಾಗಿತ್ತು ಹಾದರಿಗನಲ್ಲಿ,
           ಹುಸಿ ಗಿಡವಾಗಿತ್ತು ಮದ್ಯಪಾನಿಯಲ್ಲಿ, ಹುಸಿ ಮರವಾಯಿತ್ತು ಜೂಜುಗಾರನಲ್ಲಿ,
           ಹುಸಿ ಹೂವಾಯಿತ್ತು ಡೊಂಬನಲ್ಲಿ, ಹುಸಿ ಕಾಯಾಯಿತ್ತು ಅಕ್ಕಸಾಲಿಗನಲ್ಲಿ,
           ಹುಸಿ ಹಣ್ಣಾಯಿತ್ತು ಸೂಳೆಯಲ್ಲಿ,
           ಹುಸಿ ಹಣ್ಣಾಗಿ ತೊಟ್ಟು ಬಿಚ್ಚಿತ್ತು ಅರಸನಲ್ಲಿ.
           ಇಂತೀ ಹುಸಿಯ ನುಡಿವವರಿಗೆ
           ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ,
           ಪಾದೋದಕವಿಲ್ಲಾಗಿ ಮೋಕ್ಷವಿಲ್ಲ.
           ಕಾರಣ_ನಮ್ಮ ಕೂಡಲಚೆನ್ನಸಂಗಯ್ಯನ ಶರಣರು
           ಹುಸಿಯ ಬಿಟ್ಟುಕಳೆದು ನಿಜಲಿಂಗೈಕ್ಯರಾದರು”

          • Nagshetty Shetkar
           ಜನ 14 2015

           ಚನ್ನಬಸವಣ್ಣನವರ ವಚನದ ಅರ್ಥ ನಿಮಗೆ ದಕ್ಕಿಲ್ಲ. ತಕ್ಕ ಪರಿಶ್ರಮ ಪಡದಿದ್ದರೆ ವಚನ ತತ್ವ ಸುಧೆ ಸಿಗುವುದಿಲ್ಲ.

     • shripad
      ಜನ 12 2015

      @ ಶೆಟ್ಕರ್, ನಿಮ್ಮ ಚೆನ್ನಬಸವಣ್ಣನ ವಚನದ ಮತ್ತೊಂದು ಮಹಾನ್ ಸ್ಯಾಂಪಲ್, ಹೆಣ್ಣಿಗೆ ಕೊಟ್ಟ ದಿವ್ಯ ಸ್ಥಾನ ನೋಡಿ:
      “ಜಂಗಮಭಕ್ತನು ಸಜ್ಜನಸತಿಯಂತಿರಬೇಕು.
      ಹೊಯ್ದಡೆ ಬಯ್ದಡೆ ಜರಿದಡೆ ಕೋಪಿಸಿದಡೆ ನಿಂದಿಸಿದಡೆ
      ಅಳಲಿಸಿದಡೆ ಬಳಲಿಸಿದಡೆ ಹುರುಡಿಸಿದಡೆ_
      ಇಂತಿವು ಮೊದಲಾಗಿ ಏನೊಂದು ಮಾಡಿದಡೆಯೂ
      ಮನದಲ್ಲಿ ಮರುಗಿದಡೆ ಇದಿರುತ್ತರ ಕೊಟ್ಟಡೆ
      ಆ ಸಜ್ಜನಸತಿಯ ಗುಣಕ್ಕೆ ಕೊರತೆಯಹುದು.
      ಆ ಪುರುಷನೆ ದೈವವೆಂದರಿವುದು,
      ಅವನ ಗುಣವ ನೋಡದೆ, ತನ್ನ ಗುಣವ ಬಿಡದೆ ಇದ್ದಡೆ
      ಪತಿವ್ರತೆ ಎನಿಸುವಳು, ಮೇಲೆ ಮುಕ್ತಿಯಪ್ಪುದು.
      ಈ ಪತಿವ್ರತೆಯಂತೆ ಜಂಗಮದಾಸೋಹವ ಮಾಡುವ ಭಕ್ತರು
      ಜಂಗಮ ಮಾಡಿದಂತೆ ಮಾಡಿಸಿಕೊಂಬುದು, ನಿರುತ್ತರದಲ್ಲಿಪ್ಪುದು.
      ಹೀಂಗಿರದೆ, ಜಂಗಮಕ್ಕೆ ಇದಿರುತ್ತವ ಕೊಟ್ಟಡೆ,
      ಅವರಿಗೆ ಮಾಡುವ ಭಕ್ತಿಯ ಸಾಮಾನ್ಯವ ಮಾಡಿದಡೆ
      ತಾ ಹಿಂದೆ ಮಾಡಿದ ಭಕ್ತಿಯೆಲ್ಲ ಬೆಂದುಹೋಗಿ
      ಮುಂದೆ ನರಕಕ್ಕೆ ಗುರಿಯಹುದು ತಪ್ಪದು ಕಾಣಾ
      ಕೂಡಲಚೆನ್ನಸಂಗಮದೇವಾ”

      ಉತ್ತರ
      • Nagshetty Shetkar
       ಜನ 12 2015

       ಜಂಗಮ ಪದಕ್ಕೆ ಹಲವು ಅರ್ಥಗಳಿವೆ. ಈ ಎಲ್ಲಾ ಅರ್ಥಗಳ ಅನಾವರಣವನ್ನು ದರ್ಗಾ ಸರ್ ಮಾಡಿದ್ದಾರೆ. ಆದುದರಿಂದಲೇ ಅವರು ಇಂದು ನಂಬರ್ ೧ ವಚನ ವಿದ್ವಾಂಸ ಎಂದು ಹೆಸರುವಾಸಿ ಆಗಿದ್ದಾರೆ.

       ಉತ್ತರ
       • ಜನ 12 2015

        ಅದರಿಂದಲೇ ನಂ.೧ ಗಂಜಿಕೇಂದ್ರದ ನಂ.೧ ನಿರಾಶ್ರಿತರಾಗಿದ್ದಾರೆ.

        ಉತ್ತರ
 7. aki
  ಜನ 11 2015

  ಶರಣರು ಬ್ರಾಹ್ಮಣ್ಯದ ವಿರುದ್ಧವೇ ಹೋರಾಡಿದರೆಂದು ಹಗಲೂ ರಾತ್ರಿ ಬೊಗಳಿ ಬಿಡುವ ನಮ್ಮಶೆಟಕರ್ ಸಾಬರು ಈ ವಚನಕ್ಕೆ ಏನೇಳುತ್ತಾರೆ. ಓಡಿ ಹೋಗುತ್ತಾರೆ. ಏನೂ ಹೇಳಲ್ಲ. ಮತ್ತೊಂದು ಲೇಖನದಲ್ಲಿ ಜಂಪ್. 🙂 🙂 🙂 🙂

  ಉತ್ತರ
 8. ಜನ 12 2015

  ೧೮ನೆ ಶತಮಾನದ ಆದಿಯಲ್ಲಿ, ತಮಿಳುನಾಡಿನಲ್ಲಿ ಕೆಲಸ ಮಾಡಿದ ಮಿಷನರಿ Bartholomäus Ziegenbalg ಎಂಬಾತ ಹಿಂದೂ ದೇವತೆಗಳ ಕುರಿತು, ಧರ್ಮದ ಕುರಿತು ಬಹಳ ಅವಹೇಳನಕಾರಿ ವಿಚಾರಗಳನ್ನು ಬರೆದಿದ್ದಾನೆ. ಹಾಗೆ ತಾನು ಬರೆದ ಅಂಥ ಕೃತಿಯೊಂದನ್ನು (ಅದರ ತಮಿಳು ಹೆಸರು ‘ಅಜ್ಞಾನಮ್’/Akkiyanam) ಆತ ಹೋದ ಕಡೆಯೆಲ್ಲಾ ಹಂಚುತ್ತಿದ್ದನಂತೆ. ಹೀಗೆ ಹಂಚಿದ ಬಳಿಕ, ಓದಿದ ಸ್ಥಳೀಯ ಜನರಿಗೆ ತನ್ನ ಕೃತಿಯ ಕುರಿತು ಅವರಿಗೇನೆನಿಸಿತು ಎಂದೂ ಕೇಳುತ್ತಿದ್ದನಂತೆ. ಅಜ್ಞಾನಮ್ ಕೃತಿಯನ್ನು ಓದಿದ ಒಬ್ಬ ಶಾಲಾ ಮಾಸ್ತರ ಅದರ ಕುರಿತು ಏನು ಹೇಳಿದ ಎಂದು ಮುಂದೆ ಓದಿ: “When asked by the missionaries what he thought of Akkiyanam, one schoolmaster answered that he could only give it his approval, even where it condemned their gods and the worship of them. The tract was also in demand from those who had heard about it, and asked either that the schoolmaster come to read it to them, or that they be sent copies of it.” (ನೋಡಿ: http://www.otago.ac.nz/religion/staff/articles/akkiyanam.pdf ಪುಟ ೧೨೭೦)

  ಈ ಪ್ರತಿಕ್ರಿಯೆ ಎಲ್ಲೋ ಕೇಳಿದ ಹಾಗೆ ಅನಿಸುತ್ತಿದೆ ಆಲ್ವಾ? ನಾವು PK ಚಿತ್ರಕ್ಕೆ ಕೊಡುವ ಪ್ರತಿಕ್ರಿಯೆ ಕೂಡ ಇದೇ ತರಹದ್ದು. ಆಲ್ವಾ?

  ಉತ್ತರ
  • Nagshetty Shetkar
   ಜನ 14 2015

   “ಮುಸ್ಲಿಮರ ಒಗ್ಗಟ್ಟಿನ ಬಗ್ಗೆ ಹಿಂದುತ್ವದ ಉತ್ಸಾಹಿಗಳಿಗೆ ಒಂದು ಬಗೆಯ ಮತ್ಸರ ಇದೆ. ಪ್ರವಾದಿಯವರೊನ್ನೊಳಗೊಂಡು ಎಲ್ಲ ಮುಸ್ಲಿಮರು ಆಧ್ಯಾತ್ಮಿಕವಾಗಿ ಸಮಾನರು ಎಂದು ಇಸ್ಲಾಮ್ ಹೇಳುತ್ತದೆ. ಚಕ್ರವರ್ತಿಗಳು ಸುಲ್ತಾನರು ಇತರರ ಜೊತೆ ಅವರ ಸೇವಕರೂ ಸಮಾನವಾಗಿ ಸಾಲಿನಲ್ಲಿ ಕುಳಿತು ಊಟ ಮಾಡುತ್ತಿದ್ದರು. ಐಕ್ಯತೆ ಎಂಬುದು ಸಾಮಾಜಿಕ ಸಮಾನತೆಯ ಪರಿಣಾಮ. ಹಾಗಾಗಿ ಇಲ್ಲಿ ಐಕ್ಯತೆ ಬಗ್ಗೆ ಪ್ರತ್ಯೇಕ ಉಪದೇಶ ಅನಗತ್ಯ. ಇತರರನ್ನು ದೂರೀಕರಿಸಿ ಸ್ವಜಾತಿ ಶ್ರೇಷ್ಠತೆಯನ್ನು ರಕ್ಷಿಸಿಕೊಳ್ಳುವುದು ಹಿಂದೂ ಜಾಯಮಾನ. ಹೊಸದಾಗಿ ಮತಾಂತರಗೊಂಡು ಮುಸ್ಲಿಮರಾದವರೊಡನೆ ಬಾಂಧವ್ಯ ಬೆಳೆಸುವುದು ಮುಸ್ಲಿಮರಿಗೆ ಧರ್ಮ ಕಾರ್ಯ. ಐಕ್ಯತೆಗೆ ಬೇಕಾದ ಪದ್ಧತಿ ಪರಂಪರೆಗಳು ಇಸ್ಲಾಂ ಧರ್ಮದಲ್ಲಿ ಹಾಸುಕೊಕ್ಕಾಗಿದೆ.”

   ಉತ್ತರ
 9. Manohar Naik
  ಜನ 13 2015

  ಶೇಟ್ಕರ್ ಸಾಬ್ರೆ..

  ಯಾರು ವೇದ ಓದಲಿಕ್ಕೆ ಪ್ರಯತ್ನಿಸಿದ್ದರು? ಯಾರ ಕಿವಿಗೆ ಸೀಸ ಹೊಯ್ದಿದ್ದರು? ಸ್ವಲ್ಪ ಹೇಳ್ತಿರಾ..

  ಉತ್ತರ
  • Nagshetty Shetkar
   ಜನ 13 2015

   ಶೂದ್ರರೇಕೆ ನಿತ್ಯನಾರಕಿಗಳು? ಹೇಳಿ.

   ಉತ್ತರ
   • Manohar Naik
    ಜನ 14 2015

    ಶೇಟ್ಕರ್ ಸಾಹೇಬ್ರೆ

    ಕೇಳಿದ ಪ್ರಶ್ನೆಗೆ ಉತ್ತರ ಕೊಡಿ

    ಉತ್ತರ
    • Nagshetty Shetkar
     ಜನ 14 2015

     ಯಾರು ಯಾರ ಕಿವಿಗೆ ಸೀಸ ಹುಯುತ್ತಿದ್ದಾರೆ ಎಂಬುದನ್ನು ಈ ಲೇಖನ ಚೆನ್ನಾಗಿ ವರ್ಣಿಸಿದೆ:
     _http://ladaiprakashanabasu.blogspot.in/2015/01/blog-post_13.html

     ಉತ್ತರ
     • ani
      ಜನ 14 2015

      ನಾಗಶೆಟ್ಟರೆ ನೀವು ಕೊಟ್ಟ ಲಿಂಕಿಗೆ ಹೋಗಿ ಅರಳು ಮರಳು ಹಿಡಿದ ಮುದುಕರು ವಟವಟ ಅನ್ನುವಂತೆ ಸದಾ ಆರ್. ಎಸ್ .ಎಸ್ ಮೇಲೆ ಮೋದಿ ಮೇಲೆ ಗೂಬೆ ಕೂರಿಸುವ ಬೆಳಗಲಿ ಅವರ ಲೇಖನ ಓದಿದೆ. ಕೈಲಾಗದವ ಮೈಯೆಲ್ಲ ಪರಚಿಕೊಂಡಂತಿದೆ ಇವರ ಲೇಖನ. ಇರಲಿ ಆದರೆ ಸೀಸ ಸುರುವಿದ ಸಾಕ್ಷಿನೇ ಇಲ್ಲವಲ್ಲಲ್ಲರೀ ಸೀಸ ಸುರುವಿದ ಒಂದೇ ಒಂದು ಮಾತು ಆ ಲೇಖನದಲ್ಲಿ ಇಲ್ಲವೇ ಇಲ್ಲ. ನಾನು ಕಷ್ಟ ಪಟ್ಟು ನೀವು ಹಾಕಿದ ಕೊಂಡಿ ಹುಡುಕಿಕೊಂಡು ಹೋದರೆ ಅಲ್ಲಿರುವದು ಕೇವಲ ಮೋದಿ ಮತ್ತು ಸಂಘದ ನಿಂದನೆ. ಸುಮ್ಮನೆ ಏನೋ ಕೊಂಡಿ ಹಾಕುವ ಬದಲು ಲೇಖನ ಓದಿ ಆಮೇಲೆ ಕೊಂಡಿ ಕೊಡಿ. ಇಲ್ಲವಾದರೆ ನಗೆಪಾಟಲಾಗುತ್ತೀರಿ.

      ಉತ್ತರ
      • Nagshetty Shetkar
       ಜನ 14 2015

       ಘರ್ ವಾಪಸಿ ಭಯಂಕರ ಫೈಲ್ಯೂರ್ ಆಗಿದೆ ಅಂತ ವೇದನೆ ಆಗುತ್ತಿದೆಯಲ್ಲವೇ?
       _http://ladaiprakashanabasu.blogspot.in/2015/01/blog-post_22.html

       ಉತ್ತರ
       • Nagshetty Shetkar
        ಜನ 14 2015

        ” ಸುನ್ನಿ,ಶಿಯಾ,ಬೊಹ್ರಾ ಮುಂತಾದ ಪ್ರಭೇದಗಳು ಮುಸ್ಲಿಮರಲ್ಲಿದ್ದು, ರಾಜ್ಯಗಳ ಒಡೆತನ, ಸಿಂಹಾಸನ, ಆಸ್ತಿ, ಅಕಾರಗಳಿಗಾಗಿ ಪರಸ್ಪರ ಘರ್ಷಣೆಗಳಾಗಿವೆ. ಆದರೆ ಶ್ರೇಷ್ಠ – ನಿಕೃಷ್ಟ, ಉಚ್ಚ – ನೀಚ ಎಂಬ ಆಧಾರದ ಮೇಲೆ ಈ ಪಂಗಡಗಳು ಏರ್ಪಡಲೂ ಇಲ್ಲ. ಘರ್ಷಣೆಗಳೂ ಆಗಿಲ್ಲ. ಐತಿಹಾಸಿಕ ಘಟನೆಗಳಿಂದಾಗಿ, ತಾತ್ವಿಕ ಭಿನ್ನತೆಗಳಿಂದಾಗಿ ಉಂಟಾದ ಪಂಗಡಗಳಿವು. ಎಲ್ಲ ಮುಸ್ಲಿಮರೂ ಆಧ್ಯಾತ್ಮಿಕವಾಗಿ ಸಮಾನರು ಎಂದು ಹೇಳಿಕೊಳ್ಳುವುದರಲ್ಲಿ ಪ್ರತಿ ಮುಸ್ಲಿಮನಿಗೂ ಹೆಮ್ಮೆಯಿದೆ.”

        ಉತ್ತರ
        • Naani
         ಜನ 14 2015

         ಅಷ್ಟೂ ಗೊತ್ತಿಲ್ವೇ?! ಶೇಟ್ಕರ್ ಹೆಸರಿನ ದರ್ಗಾ ತನ್ನ ಮುಸ್ಲೀಂ ಕುಲಬಾದವರ ಗುಣಗಾನ ಮಾಡ್ತಿದ್ದಾರೆ! ಅದೂ ಸಂಬಂದವೇ ಇಲ್ಲದೆ ತಿಕ್ಕಲು ತಿಕ್ಕಲಾಗಿ! ಅಯ್ಯೋ ಪಾಪ!

         ಉತ್ತರ
         • ಜನ 15 2015

          ಈ ಶೆಟ್ಕರ್ ಎಂಬ ಪಾರ್ಟಿಗೆ ಯಾವುದೂ ಸಮತೋಲನದಲ್ಲಿಲ್ಲ ಎಂಬುದು ಈ ಮೊದಲೂ ವ್ಯಕ್ತವಾಗಿತ್ತು. ಈಗ ಇನ್ನೊಮ್ಮೆ ತಮ್ಮ ಮರ್ಯಾದೆಯನ್ನು ಹರಾಜಿಗಿಟ್ಟಿದ್ದಾರೆ. ಸ್ವಂತದಲ್ಲಿ ಮಾತನಾಡಲು ಒಂದು ಸಾಲು ಸಹ ಇಲ್ಲ. ಇರುವುದೆಲ್ಲಾ ಎರವಲು ಪಡೆದ ಹಳಸಲು.

          ಸುನ್ನಿ ಶಿಯಾ ಬೊಹ್ರಾಗಳಲ್ಲಿ ಮೇಲು ಕೀಳು ಎಂಬ ಭಾವನೆಯಿಲ್ಲ ಎಂದು ನೀನು ಹೇಳುವುದಾದರೆ ನಿನಗೆ ಇಸ್ಲಾಮಿನ ಮೂಲ ತತ್ವವೇ ಗೊತ್ತಿಲ್ಲ. ಅಥವಾ ಗೊತ್ತಿದ್ದರೂ ಕುರುಡನಂತೆ ವರ್ತಿಸುತ್ತಿದ್ದೀಯ ಅಷ್ಟೇ.

          ಸಂಕ್ರಾಂತಿಯ ಶುಭಾಷಯಗಳು ಹಳಸಲು ಶೆಟ್ಕರ್

          ಉತ್ತರ
         • Nagshetty Shetkar
          ಜನ 15 2015

          ಪೇಜಾವರ ಸ್ವಾಮಿಗಳು ದಲಿತರೂ ಬ್ರಾಹ್ಮಣರೂ ಸಮಾನರು ಅಂತ ಏಕೆ ಹೇಳುವುದಿಲ್ಲ ಸಂಕ್ರಾಂತಿಯ ದಿನದಂದೂ? ಉಡುಪಿ ಮಠಗಳಿಗೆ ದಲಿತರನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಪ್ರಗತಿಪರ ಕೆಲಸವನ್ನು ಪೇಜಾವರರು ಏಕೆ ಮಾಡುವುದಿಲ್ಲ? ಸುನ್ನಿ-ಶಿಯಾ ಬಗ್ಗೆ ತಕರಾರು ತೆಗೆಯುವ ನೀವುಗಳು ಏಕೆ ದಲಿತರನ್ನು ವೈದಿಕರು ಸಹಸ್ರಾರು ವರ್ಷಗಳಿಂದಲೂ ಶೋಷಣೆ ಮಾಡಿರುವುದರ ಬಗ್ಗೆ ತಕರಾರು ತೆಗೆಯುವುದಿಲ್ಲ? ದರ್ಗಾ ಸರ್ ಅವರು ಮುಸಲ್ಮಾನ ಎಂಬ ಏಕೈಕ ಕಾರಣಕ್ಕೆ ಅವರ ವಚನ ವಿದ್ವತ್ತನ್ನೇ ಲಘುವಾಗಿ ಕಾಣುತ್ತೀರಲ್ಲ ನಿಮಗೆ ಮುಸಲ್ಮಾನರ ಬಗ್ಗೆ ಮಾತನಾಡಲು ನೈತಿಕ ಹಕ್ಕಿದೆಯೇ?

          ಉತ್ತರ
          • ani
           ಜನ 15 2015

           ಸದಾ ಮುಸಲ್ಮಾನರನ್ನು ಕಾಂಗ್ರೆಸ್ಸಿಗರಂತೆ ಓಲೈಸುತ್ತೀರಲ್ಲಾ ನಿಮಗೆ ನೈತಿಕ ಹಕ್ಕು ಇದೆಯಾ? ನಿಮ್ಮ ಒಂದಾದರೂ ಲಿಂಗಾಯತರ ಮಠದಲ್ಲಿ ದಲಿತರನ್ನು ಮಠಾಧಿಪತಿಗಳನ್ನಾಗಿ ಮಾಡಿದ್ದೀರಾ? ದಲಿತರೊಂದಿಗೆ ಸಹಭೋಜನ ಮಾಡುವಿರಾ? ನೀವೇಕೆ ಪ್ರಗತಿಪರರು ಮಠಾಧೀಶರ ಮೆಲೆ ಒತ್ತಡ ಹೇರಿ ದಲಿತನೊಬ್ಬನನ್ನು ಲಿಂಗಾಯತರ ಧರ್ಮ ಗುರುವಾಗಿ ಮಾಡಬಾರದು. ಒಂದೇ ಒಂದು ದಿನವೂ ನೀವು ನಿಮ್ಮ ಮಠಗಳ ಮಠಾಧೀಶರ ಕೊಳಕು ಕುರಿತು ಮಾತನಾಡಿದ್ದು ನಾನು ನೋಡಿಲ್ಲ. ಅಂದ ಮೇಲೆ ನಿಮಗೆ ಉಡುಪಿ ಮಠಾಧೀಶರ ಬಗ್ಗ್ಗೆ ನಿಂದಿಸಲು ಅಧಿಕಾರ ಕೊಟ್ಟವರು ಯಾರು? ಮೊದಲು ನಿಮ್ಮ ಮನೆಯನ್ನು ಸ್ವಚ್ಛ ಮಾಡಿಕೊಳ್ಳಿ ಆಮೆಲೆ ರಸ್ತೆ ಗುಡಿಸುವಿರಂತೆ.

          • Nagshetty Shetkar
           ಜನ 15 2015

           ಬಹುತೇಕ ಲಿಂಗಾಯತರೂ ಲಿಂಗಾಯತ ಮಠಗಳ ಸ್ವಾಮಿಗಳೂ ಒಂದು ಕಾಲದಲ್ಲಿ ದಲಿತರಾಗಿದ್ದವರು ವಚನಕಾರರ ಕ್ರಾಂತಿಯಿಂದ ಶರಣರಾದವರು. ಬ್ರಾಹ್ಮಣರ ಬಗ್ಗೆ ಹೀಗೆ ಹೇಳಬಹುದೇ?

       • ani
        ಜನ 14 2015

        naagaShettare nimage kannada Odalu baruttaa? kelida prasne Enu nivu koduttiruva link enu. nimage shiya sunni bagge yaaru keliddaare ? shisa surida bagge sakshi kodi.
        ನಾಗಶೆಟ್ಟರೆ ನೀವು ಕೊಟ್ಟ ಲಿಂಕಿಗೆ ಹೋಗಿ ಅರಳು ಮರಳು ಹಿಡಿದ ಮುದುಕರು ವಟವಟ ಅನ್ನುವಂತೆ ಸದಾ ಆರ್. ಎಸ್ .ಎಸ್ ಮೇಲೆ ಮೋದಿ ಮೇಲೆ ಗೂಬೆ ಕೂರಿಸುವ ಬೆಳಗಲಿ ಅವರ ಲೇಖನ ಓದಿದೆ. ಕೈಲಾಗದವ ಮೈಯೆಲ್ಲ ಪರಚಿಕೊಂಡಂತಿದೆ ಇವರ ಲೇಖನ. ಇರಲಿ ಆದರೆ ಸೀಸ ಸುರುವಿದ ಸಾಕ್ಷಿನೇ ಇಲ್ಲವಲ್ಲಲ್ಲರೀ ಸೀಸ ಸುರುವಿದ ಒಂದೇ ಒಂದು ಮಾತು ಆ ಲೇಖನದಲ್ಲಿ ಇಲ್ಲವೇ ಇಲ್ಲ. ನಾನು ಕಷ್ಟ ಪಟ್ಟು ನೀವು ಹಾಕಿದ ಕೊಂಡಿ ಹುಡುಕಿಕೊಂಡು ಹೋದರೆ ಅಲ್ಲಿರುವದು ಕೇವಲ ಮೋದಿ ಮತ್ತು ಸಂಘದ ನಿಂದನೆ. ಸುಮ್ಮನೆ ಏನೋ ಕೊಂಡಿ ಹಾಕುವ ಬದಲು ಲೇಖನ ಓದಿ ಆಮೇಲೆ ಕೊಂಡಿ ಕೊಡಿ. ಇಲ್ಲವಾದರೆ ನಗೆಪಾಟಲಾಗುತ್ತೀರಿ.

        ಉತ್ತರ
        • ani
         ಜನ 15 2015

         ಹಳೆಯ ಹಳವಂಡವನ್ನು ಬಿಡಿ. ವಸಿಷ್ಠ ಗೋತ್ರದ ಬ್ರಾಹ್ಮಣರೆಲ್ಲಾ ಮಾದಿಗ ಮೂಲದವರು ಅಂದರೆ ಮಾದಿಗ ಹೆಣ್ಣಿನಿಂದ ಹುಟ್ಟಿದವರು. ಭಾರದ್ವಾಜ ಗೋತ್ರದವರೆಲ್ಲಾ ಕುಂಬಾರ ಹೆಣ್ಣಿನಿಂದಲೇ ಹುಟ್ತಿದವರು. ನಾನು ಕೇಳಿದ ಪ್ರಶ್ನೆಗೆ ಉತ್ತರಿಸಿ.ಬ್ರಾಹ್ಮಣ ಮಠಗಳ ಬಗ್ಗೆ ಟೀಕಿಸುವ ನೀವು ನಿಮ್ಮ ಲಿಂಗಾಯತರ ಮಠಕ್ಕೆ ಒಬ್ಬ ದಲಿತ ಸ್ವಾಮಿಯನ್ನು ನೇಮಿಸುವಂತೆ ಹೋರಾಡಬಹುದಲ್ಲ? ಎಂದು ಶುರು ಮಾಡುತ್ತೀರಿ ಹೋರಾಟ?

         ಉತ್ತರ
         • Nagshetty Shetkar
          ಜನ 15 2015

          ದಲಿತರನ್ನು ಬ್ರಾಹ್ಮಣರು ಸಮಾನರೆಂದು ಸ್ವೀಕರಿಸಲಿ, ಪುರುಷಸೂಕ್ತವನ್ನು ಧಿಕ್ಕರಿಸಲಿ.

          ಉತ್ತರ
         • Nagshetty Shetkar
          ಜನ 15 2015

          “ವಸಿಷ್ಠ ಗೋತ್ರದ ಬ್ರಾಹ್ಮಣರೆಲ್ಲಾ ಮಾದಿಗ ಮೂಲದವರು”

          ಇದು ಪುರಾಣಗಳ ಕಟ್ಟು ಕತೆ. ಚರಿತ್ರೆಯಲ್ಲಿ ಬ್ರಾಹ್ಮಣರು ತಾವು ಮಾದಿಗ ಮೂಲದವರು ಅಂತ ಎಲ್ಲಿ ಹೇಳಿಕೊಂಡಿದ್ದಾರೆ? ಮಾದಿಗರೊಂದಿಗೆ ಸಂಬಂಧವೆಲ್ಲಿ ಇಟ್ಟುಕೊಂಡಿದ್ದಾರೆ?

          ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments