ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 3, 2015

14

ಟಾರ್ಗೆಟ್ ನಿಲುಮೆ : ಪರದೆಯ ಹಿಂದಿನ ಕತೆ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

freedomofspeechಸುವರ್ಣ ಸುದ್ದಿ ವಾಹಿನಿಯಲ್ಲಿ ನಡೆದ “ನಿಲುಮೆಯ ಮೇಲಿನ ದೌರ್ಜನ್ಯ” ಕುರಿತ ಚರ್ಚೆಯಲ್ಲಿ,ನಾನು ಕೊಂಚ ಆಕ್ರಮಣಕಾರಿಯಾಗಬೇಕಿತ್ತು ಎನ್ನುವುದು ನನ್ನ ಕೆಲ ಗೆಳೆಯರ ಅನಿಸಿಕೆಯಾಗಿತ್ತು.ಚರ್ಚೆಯನ್ನು ಮತ್ತೊಮ್ಮೆ ನಾನೇ ನೋಡಿದಾಗ ಕೆಲವೊಂದು ಕಡೆ ನಾನು ಆಕ್ರಮಣಕಾರಿಯಾಗಿದ್ದರೆ ಚೆನ್ನಾಗಿತ್ತು ಅಂತಲೇ ಅನಿಸಿತು.ಆದರೇನು ಮಾಡುವುದು,ಮಧ್ಯೆ ಬಾಯಿ ಹಾಕಿ ಮಾತನಾಡುವುದು ಮತ್ತು ಜೋರು ದನಿಯಲ್ಲಿ ಮಾತನಾಡುವುದೆಲ್ಲ “ಚರ್ಚೆ”ಯಲ್ಲ ಎನ್ನುವುದು ನಾನು ಬೆಳೆದು ಬಂದ ಹಾದಿ ಮತ್ತು ರೀತಿ ನನಗೆ ಕಲಿಸಿದೆ.ಹ್ಮ್ ಅದೆಲ್ಲ ಇರಲಿ.ಆವತ್ತು ಚರ್ಚೆಯ ಗದ್ದಲದಲ್ಲಿ ನಾನು ಹೇಳದೇ ಉಳಿದ ಬಹುಮುಖ್ಯ ವಿಷಯಗಳನ್ನು ದಾಖಲಿಸಬೇಕಿದೆ.ಆ ಕಾರಣಕ್ಕಾಗಿ ಈ ಲೇಖನ…

ಚರ್ಚೆಯ ನಡುವೆ,ದಿನೇಶ್  ಅಮೀನ್ ಮಟ್ಟು ಅವರು “ನಿಲುಮೆ ಗುಂಪನ್ನು ಮುಚ್ಚಬೇಕು” ಎಂದಿದ್ದನ್ನು ನೀವೆಲ್ಲರೂ ಕೇಳಿದ್ದೀರಿ.ಮಾತು ತೆಗೆದರೆ ಮುಚ್ಚಿಸಬೇಕು ಎನ್ನುವ ಈ ಪ್ರಗತಿಪರ ಚಿಂತನೆಯ ಹಿಂದಿನ ಕತೆಯೇನು? ಇವರಿಗೇಕೆ ನಿಲುಮೆಯನ್ನು ಮುಚ್ಚಿಸಲೇಬೇಕೆಂಬ ಹಟ?ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ನಾವು ೨೦೧೩ರ ಮಾರ್ಚ್ ನಲ್ಲಿ  ರಾಜ್ಯದ ಪ್ರತಿಷ್ಟಿತ ಪತ್ರಿಕೆಯೊಂದರಲ್ಲಿ ಶುರುವಾದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ” ಕುರಿತ ಚರ್ಚೆಯತ್ತ ನೋಡಬೇಕು.ಈ ಚರ್ಚೆ ಆರಂಭವಾಗಿದ್ದು  CSLC ಎಂಬ  ಸಮಾಜ ವಿಜ್ಞಾನ ಸಂಶೋಧನಾ ತಂಡದವರ “ವಚನ ಸಾಹಿತ್ಯವು ಜಾತಿವ್ಯವಸ್ಥೆಯ ವಿರುದ್ಧ ಮಾತನಾಡುತ್ತದೆಯೆ?” ಎಂಬ ಸಂಶೋಧನಾ ಪ್ರಬಂಧದೊಂದಿಗೆ.ಆ ಪತ್ರಿಕೆಯಲ್ಲಿ ಶುರುವಾದ ಚರ್ಚೆಯಲ್ಲಿ ಕೇವಲ ಒಂದು ಕಡೆಯವರ ವಾದಗಳಿಗೆ ಮಾತ್ರ ವೇದಿಕೆಯೊದಗಿಸಿ, CSLC ತಂಡದವರಿಗೆ ವಾದಕ್ಕೂ ಜಾಗ ಕೊಡದಿದ್ದಾಗ ಅವರಿಗೆ ಜೊತೆಯಾಗಿ ನಿಂತಿದ್ದು ನಿಲುಮೆ.ನಿಲುಮೆಯಲ್ಲಿ ಸಿ.ಎಸ್.ಎಲ್.ಸಿ  ತಂಡದವರ ಲೇಖನಗಳು ಪ್ರಕಟವಾಗಿ ಅದು ಫೇಸ್ಬುಕ್ಕಿನಲ್ಲೂ ವ್ಯಾಪಕ ಚರ್ಚೆಗೆ ಒಳಪಟ್ಟಿತು.ಕಡೆಗೆ ಒತ್ತಡಕ್ಕೆ ಬಿದ್ದವರು ಅನಿವಾರ್ಯವಾಗಿ ಸಿ.ಎಸ್.ಎಲ್.ಸಿಯವರ ಒಂದೆರಡು ಲೇಖನಗಳನ್ನು ಪ್ರಕಟಿಸಿ,ಆ ಚರ್ಚೆಗೆ ಅಂತ್ಯ ಹಾಡಿಸಿದರು.ಆದರೆ,ಅಷ್ಟಕ್ಕೆ ನಮ್ಮ ಪ್ರಗತಿಪರರ ಸಿಟ್ಟು ಕಮ್ಮಿಯಾದೀತೇ? ಅವರು ತಮ್ಮ ಅಧಿಕಾರದ ಜೊತೆಗಿನ ಸ್ನೇಹ(ಪುರೋಹಿತಶಾಹಿ!?) ವನ್ನು ಬಳಸಿಕೊಂಡು ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಇದ್ದ CSLC ಸಂಶೋಧನಾ ಕೇಂದ್ರವನ್ನೇ ಮುಚ್ಚಿಸಿಬಿಟ್ಟರು! ಆಗಲಾದರೂ ನಾವು ಇವರಿಗೆ ಬೆದರಿಕೊಂಡು ಸುಮ್ಮನಾಗಬಾರದೇ? ಊಹೂಂ! ಸುಮ್ಮನಿರಲಿಲ್ಲ.ಈ ಫ್ಯಾಸಿಸ್ಟ್ ಧೋರಣೆಯ ಬಗ್ಗೆ ನಿಲುಮೆಯ ವೇದಿಕೆಯಲ್ಲಿ ಬರೆಯಲಾಯಿತು.ನಾನು ಈ ಬಗ್ಗೆ ನಿಲುಮೆಯಲ್ಲಿ,ಅಸೀಮಾ ಮಾಸಿಕದಲ್ಲಿ ಮತ್ತು ಕನ್ನಡ ಪ್ರಭ ಪತ್ರಿಕೆಯಲ್ಲಿ ಮಾನ್ಯ ಅನಂತ ಮೂರ್ತಿಯವರಿಗೆ ಬರೆದ ಬಹಿರಂಗ ಪತ್ರದಲ್ಲೂ ಪ್ರಗತಿಪರರ ಫ್ಯಾಸಿಸ್ಟ್ ಧೋರಣೆಯನ್ನು ಪ್ರಶ್ನಿಸಿದೆ.ನಿಲುಮೆಯ ಮೇಲೆ ಫ್ಯಾಸಿಸಂನ ಕರಾಳ ಛಾಯೆ ಆವರಿಸುತ್ತಲೇ ಹೋಯಿತು.

ಈ ನಡುವೆ ಲೋಕಸಭಾ ಚುನಾವಣೆ ಘೋಷಣೆಯಾಗಿತ್ತು.ನಮ್ಮ  ಫೇಸ್ಬುಕ್ಕ್ ಗುಂಪಿನಲ್ಲೂ ಮೋದಿ ಪರ/ವಿರೋಧ ಚರ್ಚೆಗಳು ನಡೆಯುತ್ತಲೇ ಇದ್ದವು.ನಮ್ಮ ಗುಂಪಿನಲ್ಲಿ ಮೋದಿ ಅಭಿಮಾನಿಗಳೇ ಹೆಚ್ಚು ಇರುವ ಕಾರಣಕ್ಕೋ ಏನೋ ಮೋದಿ ವಿರೋಧಿಗಳ ಕಣ್ಣು ಕುಕ್ಕಲಾರಂಭಿಸಿತು.ಆದರೆ,ನಿರ್ವಾಹಕರಾಗಿ ನಾವು ನಮ್ಮ ವೈಯುಕ್ತಿಕ ಧೋರಣೆಗಳಾಚೆಗೂ ಮೋದಿಯನ್ನು ವಿರೋಧಿಸುವವರ ಅಭಿಪ್ರಾಯ ಸ್ವಾತಂತ್ರ್ಯವನ್ನು ಗೌರವಿಸಿದ್ದೆವೆ ಮತ್ತು ಅವಕ್ಕೆ ಜಾಗವನ್ನು ಕೊಟ್ಟಿದ್ದೇವೆ. ಯಾವಾಗ ಫ್ಯಾಸಿಸ್ಟರ ಹಿಡಿತಕ್ಕೆ ನಿಲುಮೆ ಸಿಗಲಾರದು ಎನಿಸಿತೋ ನಮ್ಮ  ಮೇಲೆ ಅವಾಚ್ಯ ಸ್ಟೇಟಸ್ಸುಗಳು,ಪ್ರಚೋದನಕಾರಿ ಕಮೆಂಟುಗಳು ಶುರುವಾದವು.ನಾವು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ನಮ್ಮ ಕೆಲಸವನ್ನಷ್ಟೇ ಮಾಡುತಿದ್ದೆವು.

ಇವೆಲ್ಲದರ ನಡುವೆಯೇ ನಿಲುಮೆ,ಸಿದ್ದರಾಮಯ್ಯ ಸರ್ಕಾರದ “ಮೂಢ ನಂಬಿಕೆ ವಿರೋಧಿ ಕಾಯ್ದೆ,ಅನ ಭಾಗ್ಯ” ಇತ್ಯಾದಿಗಳ ಕುರಿತು ರಚನಾತ್ಮಕ ಟೀಕೆ ಮತ್ತು ಚರ್ಚೆಗೆ ವೇದಿಕೆಯಾಗಿತ್ತು.ಪುರೋಹಿತಶಾಹಿಯ ಕುರಿತು ಇತ್ತೀಚೆಗೆ ಫೇಸ್ಬುಕ್ಕಿನ ಪ್ರಕರಣವೊಂದು ರಾಜ್ಯಾದ್ಯಂತ ಸುದ್ದಿಯಾದಾಗ, ಈ ಪುರೋಹಿತಶಾಹಿಯ ಕುರಿತು ಬುದ್ಧಿಜೀವಿಗಳನ್ನು ಬಹಿರಂಗ ಬೌದ್ಧಿಕ ಚರ್ಚೆಗೆ ಆಹ್ವಾನಿಸಿದ್ದು ನಿಲುಮೆ ಬಳಗದ ಗೆಳೆಯರು.ಅದಾದ ನಂತರ ಮನುಸ್ಮೃತಿಯ ಕುರಿತು ನಿಲುಮೆಯಲ್ಲಿ ಪ್ರಕಟವಾದ ಬರಹಗಳು,ತರ್ಕಬದ್ಧ ಪ್ರಶ್ನೆಗಳಿಗೆ ಉತ್ತರಿಸಲಾಗದವರಿಗೆ ನಮ್ಮ ಮೇಲಿನ ಕಣ್ಣು ಬಲವಾಗುತ್ತಲೇ ಹೋಯಿತು.ಯಾವಾಗ ನಾವು “ನಿಲುಮೆ ಪ್ರಕಾಶನ”ವನ್ನು ಶುರುಮಾಡಲಿದ್ದೇವೆ ಎಂದು ಘೋಷಣೆ ಮಾಡಿದೆವೆಯೋ ಆಗ ಈ ಮಂದಿ ದಿಗಿಲಿಗೆ ಬಿದ್ದರು.ಫೇಸ್ಬುಕಿನಲ್ಲಿ ಬಹಿರಂಗವಾಗಿಯೇ ನಿಲುಮೆಗೆ ಖೆಡ್ಡಾ ತೋಡುತಿದ್ದೇವೆ ಎಂದು ಹೇಳಿಕೊಳ್ಳಲಾರಂಭಿಸಿದರು.ಆ ಸಮಯಕ್ಕೆ ಸರಿಯಾಗಿ ೧೯ ಸಾವಿರಕ್ಕೂ ಹೆಚ್ಚು ಜನರಿರುವ ಮತ್ತು ನಿಲುಮೆಯ ನಿಲುವಿನಂತೆ “ಮುಕ್ತ ವೇದಿಕೆ”ಯಾಗಿರುವ ನಮ್ಮ ಫೇಸ್ಬುಕ್ಕ್ ಗುಂಪಿನಲ್ಲಿ ಅಮೀನ್ ಮಟ್ಟು ಅವರ ಕುರಿತು ಅಸಭ್ಯ ಕಮೆಂಟುಗಳು ಬಂದಿದ್ದು ಒಂದು ಕಾರಣವಾಯಿತು.

ಈಗ ಅದನ್ನೇ ಮುಂದಿಟ್ಟುಕೊಂಡು ಈ ಮಂದಿ “ನಿಲುಮೆ”ಯನ್ನೇ ಮುಚ್ಚಿಸಲು ಹೊರಟಿದ್ದಾರೆ.ವಾಸ್ತವವಾಗಿ ಇವರು ಮುಗಿಸಲು ಹೊರಟಿರುವುದು “ಬೌದ್ಧಿಕ ಚಳುವಳಿ”ಯೊಂದನ್ನು.ಅದರಲ್ಲಿ ಅವರು ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎನ್ನುವುದನ್ನು ಕಾಲವೇ ನಿರ್ಧರಿಸಲಿದೆ.ಈ ವಿಷಯದ ಕುರಿತು ಇನ್ನೂ ಸುದೀರ್ಘವಾಗಿ ಬರೆಯಲಿಕ್ಕಿದೆ ನನಗೆ.ಅದನ್ನು ಮತ್ತೊಮ್ಮೆ ಮಾಡುತ್ತೇನೆ.ಸದ್ಯ ನನ್ನ ಕೆಲಸದ ಒತ್ತಡದಲ್ಲಿ ಹೇಳದೇ ಉಳಿದ ಇಷ್ಟು ಮಾತುಗಳನ್ನು ನಿಮ್ಮೊಂದಿಗೆ ಇಷ್ಟು ಹೇಳಿಕೊಳ್ಳಬೇಕೆನಿಸಿತು.

ಸತ್ಯಮೇವ ಜಯತೇ

14 ಟಿಪ್ಪಣಿಗಳು Post a comment
 1. ಫೆಬ್ರ 3 2015

  ರಾಕೇಶ್ ಅವರೇ,
  ಇದು ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಮಟ್ಟು ತಾನಾಗಿ ಕೈಕೊಟ್ಟು ಹಗ್ಗ ಕಟ್ಟಿಸಿಕೊಳುವುದರಲ್ಲಿ ಂದೇಹವಿಲ್ಲ.
  ನಿರ್ವಾಹಕರಾಗಿ ಈವು ನಿಮ ಕೆಲಸ ಮಾಡಿದ ಮೇಲೆ ಅಲ್ಲಿ ಯಾವ ಕರ್ತ್ಅವ್ಯ ವಿಮುಖತೆ ಋಜುವಾತಾಗುವುದಿಲ್ಲದ ಕಾರಣ ನ್ಯಾಯಾಲಯ ದಿನೇಶ ಅವರ ಬೆವರಿಳಿಸುವುದರಲ್ಲಿ ಸಂದೇಹವಿಲ್ಲ.
  ಷಂಡ ಅನ್ನ ಬಹುದಂತೆ ಆದರೆ ಮುಟ್ಥಾಳ ಅನ್ನಬಾರದಂತೆ!!

  ಪ್ರಗತಿ ಪರ ಎಂದು ಬಿಂಬಿಸಿಕೊಳ್ಳುವ ಹಾಗೂ ಅವರೊಗೆ ಪ್ರೋತ್ಸಾಹಕೊಡುವ ಮಾಧ್ಯಮಗಳು, ಸಂಸ್ಥೆಗಳು, ಅದರ ರೂವಾರಿಗಳಿಗೆ ಎಲ್ಲೆಲ್ಲಿಂದ ಹೇಗೆ ಒಳಹರಿವುಗಳು ಇವೆ ಎಂಬುದು ಇಷ್ಟರಲ್ಲೇ ಜಗಜ್ಜಾಹೀರು ಆಗಲಿದೆ.– ಕನ್ನಡದಲ್ಲಿ-
  ವಿಚ್ಛಿದ್ರ ಭಾರತ ಎಂಬ ಪುಸ್ತಕ ಇಂಗ್ಲೀಷಿನಿಂದ ತರ್ಜುಮೆಯಾಗಿ ಬರಲಿದೆ.
  ಅದನ್ನು ಬರೆದ ಶ್ರೀ ರಾಜೀವ್ ಮಲ್ಹೋತ್ರಾ ಈ ಗೋಸುಂಬೆಗಳ ಬಣ್ಣ ಬಯಲು ಮಾಡಲಿದ್ದಾರೆ.

  ಸತ್ಯಮೇವ ಜತಯತೇ

  ಉತ್ತರ
  • Nagshetty Shetkar
   ಫೆಬ್ರ 5 2015

   ರಾಜೀವ್ ಮಲ್ಹೋತ್ರ ಅವರ ಬಗ್ಗೆ ಬಾಲು ರಾವ್ ಅವರಿಗೆ ಸದಭಿಪ್ರಾಯವಿಲ್ಲ. ಏಕೆ ಡಂಕಿನ್?

   ಉತ್ತರ
   • aaki
    ಫೆಬ್ರ 5 2015

    ಪ್ರೀಯ ಶೆಟ್ಕಾರರೆ ರಾಜೀವರ ಹೆಸರು ತಂದಿದ್ದು ಮತ್ತು ನೀವು ರಿಪ್ಲೈ ಮಾಡ್ತಾ ಇರೋದು ಸುದರ್ಶನ ಅವರಿಗೆ ನೀವೇಕೆ ಡಂಕಿನ್ ಅವರಿಗೆ ಪ್ರಶ್ನೆ ಕೇಳುತ್ತಿದ್ದೀರಿ ? ಡಂಕಿನ್ ಮಲ್ಹೋತ್ರಾರ ಬಗ್ಗೆ ಹೇಳೇ ಇಲ್ಲವಲ್ಲಾ??

    ಉತ್ತರ
    • Naani
     ಫೆಬ್ರ 5 2015

     ಸ್ವಲ್ಪ ಬೆಂಕಿ ಕಾಯಿಸಿಕೊಳ್ಳುವ ಚಟ 😀

     ಉತ್ತರ
 2. ಫೆಬ್ರ 3 2015

  ಒಟ್ಟಿನಲ್ಲಿ ಈ ಪ್ರಕರಣದಿಂದ ತಥಾಕಥಿತ ಪ್ರಗತಿಪರರ ಮುಖವಾಡ ಕಳಚಿದೆ.
  ‘ಪ್ರಗತಿಪರ’ ಎಂದು ತಮಗೆ ತಾವೇ ಬೆನ್ನು ತಟ್ಟಿಕೊಂಡು ಬಿಟ್ಟರೆ ಪ್ರಗತಿಪರರಾಗುವುದಿಲ್ಲ.
  ವಿರೋಧಿಗಳ ವಾದವನ್ನು ಕೇಳುವ ತಾಳ್ಮೆ ಇವರಿಗಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ.
  ವಿರೋಧಿಗಳ ವಾದವನ್ನು ಬೌದ್ಧಿಕ/ವೈಚಾರಿಕವಾಗಿ ಸೋಲಿಸುವ ಬದಲು, ವಿರೋಧಿಗಳನ್ನೇ ಇಲ್ಲವಾಗಿಸಿಬಿಡುವುದು ಕಮ್ಯುನಿಸ್ಟರ, ಸ್ಟಾಲಿನಿಸ್ಟರ, ಮಾವೋಗಳ ದಾರಿ.
  ‘ಪ್ರಗತಿಪರ’ ಮುಖವಾಡದ ಹಿಂದಿರುವುದು ಅದೇ ಮಾನವವಿರೋಧಿ ಜನಗಳೇೆ ಎನ್ನುವುದು ಖಚಿತವಾಗುತ್ತಿದೆ.

  ಉತ್ತರ
 3. kavinagaraj
  ಫೆಬ್ರ 4 2015

  ಸತ್ಯಮೇವ ಜಯತೇ!! ಮುಂದುವರೆಯಿರಿ. ಸತ್ಯ ಹತ್ತಿಕ್ಕಲು ಸಾಧ್ಯವಿಲ್ಲ. ಬೇಕಾದರೆ ಅದನ್ನು ಬಗ್ಗಿಸಬಹುದು, ತಿರುಚಬಹುದು,, ದುರುಪಯೋಗಪಡಿಸಿಕೊಳ್ಳಬಹುದು. ಆದರೆ ಸತ್ಯವನ್ನು ದೇವರೂ ಬದಲಾಯಿಸಲಾರ!

  ಉತ್ತರ
 4. Chitra M N
  ಫೆಬ್ರ 4 2015

  ರಾಕೇಶ್ ಅವರೆ, ಆ ದಿನ ನಿಮಗೆ ನಿಮ್ಮ ವಿಚಾರಗಳನ್ನು ಮಂಡಿಸಲು ಸಮಯವಾಗದೆ ಇದ್ದಾಗ ನಾನು ಬೇಸರಗೊಂಡಿದ್ದೆ. ಇಲ್ಲಿ ನಿಮ್ಮ ಮಾತುಗಳನ್ನು ಪೂರ್ಣಗೊಳಿಸಿದ್ದೀರಿ. ಸಂತೋಷವಾಯಿತು. ಧನ್ಯವಾದಗಳು. ನನ್ನದೊಂದು ಸಲಹೆ ಏನೆಂದರೆ, ನಿಮ್ಮ ವಿಚಾರಗಳಿಗೆ ಟಿವಿಯಲ್ಲಿ ಅವಕಾಶ ಸಮಯಾವಕಾಶ ದೊರಕದಿದ್ದರೆ ಏನಾಯಿತು? ಅದನ್ನೇ ನೀವು ವಿಡಿಯೊ ಮಾಡಿ ಎಲ್ಲರೊಂದಿಗೆ ಹಂಚಿಕೊಳ್ಳಲೂಬಹುದಲ್ಲವೇ?

  ಉತ್ತರ
 5. Nagshetty Shetkar
  ಫೆಬ್ರ 4 2015

  ರಾಕೇಶ್ ಶೆಟ್ಟಿ ಅವರೇ, ಅಮೀನ್ ಮಟ್ಟು ಅವರ ಕಂಪ್ಲೈಂಟ್ ಕೊಟ್ಟರು ಅಂತ ಇಷ್ಟೆಲ್ಲಾ ಯಾಕೆ ಹೆದರಿ ಅಳುತ್ತಿದ್ದೀರಿ? ಮುಖ್ಯಮಂತ್ರಿಗೆ ಮುಟ್ಟಾಳ ಅನ್ನುವಾಗ ಇದ್ದ ಧೈರ್ಯ ಕಂಪ್ಲೈಂಟ್ ಎದುರಿಸುವಾಗ ಕೂಡ ಇರಬೇಕು. ಕೇಸನ್ನು ಧೈರ್ಯವಾಗಿ ನ್ಯಾಯಾಲಯದಲ್ಲಿ ಎದುರಿಸಿ. ನಿಮ್ಮ ಪರ ವಾದ ಮಾಡಲು ಸುಬ್ರಹ್ಮಣ್ಯ ಸ್ವಾಮಿ ಅವರನ್ನು ನಿಯುಕ್ತಗೊಳಿಸಿ, ಹಾಗೂ ಕಾನೂನು ಸಲಹೆಯನ್ನು ಜಸ್ಟೀಸ್ ರಾಮಾ ಜೋಯಿಸ್ ಅವರಿಂದ ಪಡೆಯಿರಿ.

  ಉತ್ತರ
  • ಫೆಬ್ರ 4 2015

   ಸ್ವಾಮಿ ಶೆಟ್ಕರ್ ಸಾಹೇಬರೇ,

   ಹೆದರುವ ಪೈಕಿಯಾಗಿದ್ದರೆ ಇಷ್ಟೊತ್ತಿಗೆ ನಿಮ್ಮ ಪ್ರಗತಿಪರರ ಪಾದಾರವಿಂದಗಳಿಗೆ ಅಡ್ಡಬಿದ್ದು ನಿಲುಮೆಯನ್ನು ಮುಚ್ಚಿ,ಸೆಕ್ಯುಲರಿಸಂಗೆ ಜಯವಾಗಲಿ ಎಂದು ಕೂಗಿಕೊಂಡು ಸೇಫ್ ಆಗಿರುತಿದ್ದೆ.

   ನಿಮ್ಮ ಬಿಟ್ಟಿ ಸಲಹೆಗಳನ್ನು ಮತ್ತು ವ್ಯಂಗ್ಯವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ.ಈ ಪ್ರಕರಣದಲ್ಲಿ ಏನು ಮಾಡಬೇಕು,ಏನು ಮಾಡಬಾರದು ಎನ್ನುವುದು ನನಗೇ ಸ್ಪಷ್ಟವಾಗಿ ತಿಳಿದಿದೆ.ತಮಗೇ ಪ್ರಗತಿಪರರ ಬಣ್ನ ಬಯಲು ಮಾಡುವ ಲೇಖನಗಳು ಅಷ್ಟೊಂದು ಹಿಂಸೆಯಾದರೇ, ಅದನ್ನು ಓದಬೇಡಿ ಬಿಡಿ.ನಿಮ್ಮ ಸಂತಾಪವನ್ನು ಶೇಖರಿಸಿಟ್ಟುಕೊಳ್ಳಿ.ಮುಂದೆ ಉಪಯೋಗಕ್ಕೆ ಬರಬಹುದು

   ನಮಸ್ಕಾರ

   ಉತ್ತರ
 6. ganesh
  ಫೆಬ್ರ 4 2015

  ಪ್ರಿಯ ರಾಕೆಶಣ್ಣ ನೀವು ಮಾದ್ಯಮದಲ್ಲಿ ಸಂಯಮದಿಂದ ಕುಳಿತು ಆಲಿಸಿ ನಂತರ ಮಾತನಾಡಿದ್ದೆ ನಿಮ್ಮ ಭೌದ್ದಿಕ ಮಟ್ಟವನ್ನು ತೋರಿಸಿತು ಇನ್ನು ಒಂದಷ್ಟು ವಿಷಯಗಳು ಅಲ್ಲಿ ಪ್ರಸ್ತಾಪ ಆಗಬೇಕಿತ್ತು ಎದುರಿಗಿನವರ ಹತಾಶೆ, ಆಕ್ರೋಶ , ಕಿರುಚಾಟಗಳು ಅದನ್ನು ತಡೆಯುವಲ್ಲಿ ಸಫಲ ಆದವು ಅಷ್ಟೇ …ಏನು ಕೇಳದೆಯೂ ಅವರು ನಿಲುಮೆ ಮುಚ್ಚಿಬಿಡಿ ಅಂದದ್ದು ಅವರ ದುರುದ್ದೇಶ ನಾಡಿನ ಜನತೆಯ ಮುಂದೆ ಸ್ವಯಂ ಅನಾವರಣ ಆಯಿತು

  ಉತ್ತರ
 7. ಫೆಬ್ರ 4 2015

  Dear Rakesh, I had watched your interview on TV. What you did is absolutely right. If you also start shouting because someone else is doing, then what’s the difference? your stand on the topics and behavior is well appreciated.

  ಉತ್ತರ
 8. ಪ್ರಸನ್ನ ಕುಮಾರ್ ಸಿ.ಆರ್
  ಫೆಬ್ರ 4 2015

  ರಾಕೇಶ್ ಶೆಟ್ರೇ….ಸಲಹೆ ಬೇಕಿದ್ದರೇ, ದರ್ಗಾರವರ ಸಾಹಿತ್ಯವನ್ನು ಓದಿ,ನಿಮಗೆ ಜ್ನಾನೋದಯವಾದೀತು…!!

  ಉತ್ತರ
  • Nagshetty Shetkar
   ಫೆಬ್ರ 5 2015

   ದರ್ಗಾ ಸರ್ ಅವರ ಸಾಹಿತ್ಯವನ್ನು ಓದಿ ಎಂಬುದು ಉತ್ತಮ ಸಲಹೆ. ವರ್ತಮಾನದ ತವಕ ತಲ್ಲಣಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ದರ್ಗಾ ಸರ್ ಅವರ ವಿಚಾರಧಾರೆ ಹಾಗೂ ಅನುಭಾವಾಮೃತ ಬಹಳ ಸಹಕಾರಿ ಆಗಿದೆ. ಶ್ರೇಷ್ಠ ಚಿಂತನೆ, ಅನನ್ಯ ಪರಿಶ್ರಮ, ಅದಮ್ಯ ಮಾನವೀಯತೆ ದರ್ಗಾ ಸರ್ ಅವರ ಸಾಹಿತ್ಯವನ್ನು ಬೆಳಗಿದೆ.

   ಉತ್ತರ
 9. anwar
  ಫೆಬ್ರ 5 2015

  ರೀ ಶೆಟ್ಕರ್, ಸಂಬಂಧ ಇಲ್ಲದೆ ಇರುವವರನ್ನ ಯಾಕ್ರೀ ಎಳೆದು ತರ್ತೀರ. ದರ್ಗಾ ಅವರಿಗೂ ಹಾಗು “ಪರದೆಯ ಹಿಂದಿನ ಕತೆ” ಗೂ ಎಲ್ಲಿಯ ಸಂಬಂಧ?

  ಯಾರಿಗಾದ್ರೂ ಗೊತ್ತಾಗುತ್ತೆ, ಶೆಟ್ಕರ್ ಅವರೇ ದರ್ಗಾ ಆಂತ. ದಯವಿಟ್ಟು ಸಂಬಂಧ ಇಲ್ಲದಿರುವ ಕಡೆ ತಾವು ಬರದೇ ಇದ್ದರೆ ನಿಮಗೂ ಮತ್ತು ಎಲ್ಲರಿಗೂ ಒಳಿತು. ನಾಚಿಕೆ, ಮಾನ, ಮರ್ಯಾದೆ ಇಲ್ಲದೆ ಸಾರ್ವಜನಿಕವಾಗಿ ಈ ರೀತಿ ಸ್ವಕುಚ ಮರ್ದನ ಮಾಡಿಕೊಳ್ಳುವುದು ಒಳಿತಲ್ಲ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments