ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 7, 2015

10

ಸಮ್ಮೇಳನದ ವೇದಿಕೆಯಲ್ಲಿ ಬರಹಗಾರರೋಬ್ಬರನ್ನು ನಿಂದಿಸುವುದು ಕನ್ನಡ ಮತ್ತು ಸಮ್ಮೇಳನದ ಅಪಮಾನವಲ್ಲವೆ ?

‍ನಿಲುಮೆ ಮೂಲಕ

– ಅನಿಲ್ ಚಳಗೇರಿ 

ಭೈರಪ್ಪ ಬೈಗುಳ ಗೋಷ್ಠಿಹೌದು, ಅದು ಪ್ರಸಕ್ತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮಹಿಳೆಯರ ಸಮಾನತೆ ಮತ್ತು ಸವಾಲು ಅನ್ನುವ ವಿಷಯದ ಕುರಿತು ಚರ್ಚೆ ನಡೆಯಬೇಕಿತ್ತು. ಆದರೆ ಅಲ್ಲಿ ನಡೆದಿದ್ದು ಮಾತ್ರ ಕರ್ನಾಟಕ ಕಂಡ ಅಧ್ಭುತ ಸಾಹಿತಿಗಳಲ್ಲಿ ಒಬ್ಬರಾದ  ಎಸ್ ಎಲ್ ಭೈರಪ್ಪನವರ ಬಗ್ಗೆ ಅಪಪ್ರಚಾರ , ಹಿಂದೂ ವಿರೋಧಿ ಹೇಳಿಕೆಗಳು, ಬ್ರಾಹ್ಮಣರ ಬಗ್ಗೆ ಕೆಳಮಟ್ಟದ ಆರೋಪ , ಪುರೋಹಿತಶಾಹಿಯ ಹೆಸರಿನಲ್ಲಿ ಈಡೀ ಜನಾಂಗವನ್ನೇ ದೂಷಿಸುವ ಪ್ರಯತ್ನ . ಈ ದೂಷಿಸುವ ಭರದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ, ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಮುಖ್ಯ ವಿಷಯಗಳ ಬಗ್ಗೆ ಚರ್ಚೆಯೇ ಆಗಲಿಲ್ಲ. ನೆರದಿದ್ದ ಅನೇಕ ಕವಿಯತ್ರಿಯರು ಭೈರಪ್ಪನವರನ್ನು ನೇರವಾಗಿ ವೈಯ್ಯಕ್ತಿಕವಾಗಿ ನಿಂದಿಸಿದರು. ಅಷ್ಟೇಯಲ್ಲದೇ ಇಂತಹ ಕೆಳ ಮಟ್ಟದ ಭಾಷಣಗಳು ಮತ್ತು ವ್ಯಕ್ತಿ ನಿಂದನೆಯನ್ನು ಕೇಕೆ, ಶಿಳ್ಳೆ ಮುಖಾಂತರ ಆನಂದಿಸುವ ಜನರು ಆ ಕಾರ್ಯಕ್ರಮಗಳಲ್ಲಿ ಉಪಸ್ತಿತರಿದ್ದರು. ಕನ್ನಡ ಹಿರಿಮೆ, ಕನ್ನಡ ಕಂಪು ಹಾಗು ಮಹಿಳೆಯರ ಪರ ಧ್ವನಿಎತ್ತಬೇಕಾದ ವೇದಿಕೆಯೊಂದರಲ್ಲಿ ಕನ್ನಡದ ಕಣ್ಮಣಿಯನ್ನು ನಿಂದಿಸುವದು ಸಾಹಿತ್ಯ ಸಮ್ಮೇಳನಕ್ಕೆ ಮತ್ತು ಕನ್ನಡಕ್ಕೆ ಮಾಡುವ ಅಪಮಾನವಲ್ಲವೆ??

ಭೈರಪ್ಪನವರ ನಿಂದನೆ ಮುಗಿಸಿ ಮುಂದುವರೆದ ಕವಿಯತ್ರಿಯರು ದೇವರ ಹೆಸರಲ್ಲಿ, ಪುರೋಹಿತಶಾಹಿಯ ಹೆಸರಲ್ಲಿ ಮೇಲ್ವರ್ಗದವರು ಬೇರೆಯವರನ್ನು ಲೂಟಿ ಮಾಡುತ್ತಾರೆಂದು ದೂಷಿಸಿದರು. ಈ ರೀತಿಯ ದೂಷಣೆಯಿಂದ ಮತ್ತು ಮೇಲ್ವರ್ಗದವರನ್ನು ಬಾಯಿಗೆ ಲಗಾಮಿಲ್ಲದೆ ಬಯ್ಯುವುದರಿಂದಲೇ ಕೆಲವರ ಮನೆ ನಡೆದರೆ ಇನ್ನು ಕೆಲವರಿಗೆ ಮಾಧ್ಯಮಗಳಲ್ಲಿ ಸ್ಥಳ ದೊರಕುವುದೆಂದು ಚೆನ್ನಾಗಿ ಅರಿತುಕೊಂಡಿದ್ದಾರೆ. ಬ್ರಾಹ್ಮಣ ವಿರೋಧಿ ಮನೋಭಾವವನ್ನು ಹೆಚ್ಚಿಸಲು ಬ್ರಾಹ್ಮಣ್ಯ ದೇಶಕ್ಕೆ ಅಂಟಿಕೊಂಡ ಒಂದು ದೊಡ್ಡ ಶಾಪ ಅನ್ನುವ ಅರ್ಥರಹಿತ ಮಾತುಗಳನ್ನಾಡಿ ಜೊತೆಗೆ ಬುದ್ಧ ಕೂಡ ಬ್ರಾಹ್ಮಣರಿಂದ ದೂರವಿರಬೇಕಂದು ಎಂದು ಕರೆ ನೀಡಿದ್ದರಂತೆ !.ಅದ್ಯಾವ ಕೃತಿಯಲ್ಲಿ ಬುದ್ದ ಹೀಗೆ ಹೇಳಿದ್ದೆನೆಂದು ಆ ಕವಿಯತ್ರಿಗಳೇ ಬಲ್ಲರು..

ಅಷ್ಟಕ್ಕೂ ಯಾನದಲ್ಲಿ ಬೈರಪ್ಪನವರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಬರೆದಿದ್ದಾರೆ ಎನ್ನುವವರು ಬಹುಶಃ ಅದನ್ನು ಸರಿಯಾಗಿ ಓದಲೇ ಇಲ್ಲ. ಕೃತಿಯ ಗಂಭೀರ ವಿಚಾರಗಳ ಬಗ್ಗೆ ಓದಿ ತಿಳಿದುಕೊಳ್ಳದವರು ಸಮ್ಮೇಳನದಲ್ಲಿ ಅನೇಕರಿದ್ದರು. ಇವರಿಗೇನಿದ್ದರು ಇನ್ನೊಬ್ಬರನ್ನು ಬೈದು ಆನಂದಪಡುವ ತವಕ.  ಭೈರಪ್ಪನವರ ಕೃತಿಗಳನ್ನು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲಿ ಅತ್ಯಂತ ಶ್ರದ್ಧೆಯಿಂದ ಓದುವಂತ ಓದುಗಾರರರಿದ್ದಾರೆ, ಹಾಗಿದ್ದಲ್ಲಿ ಇಂತಹ ಸ್ತ್ರೀ ವಿರೋಧಿ ಲೇಖಕನನ್ನು ಇಷ್ಟ ಪಡುವ ಅವರೆಲ್ಲರೂ ಸ್ತ್ರೀ ವಿರೋಧಿಗಳೇ?

ಅದೇ ಕಾರ್ಯಕ್ರಮದಲ್ಲಿ ಇನ್ನೂ ಕೆಲವರು ಇನ್ನೊಂದು ಹೆಜ್ಜೆ  ಮುಂದೆ ಹೋಗಿ  ” ತಮ್ಮ ಅಂಗಿಯ ಮೇಲೆ ತಮ್ಮದೆ  ಹೆಸರು ಬರೆದುಕೊಳ್ಳುವ ನಾಯಕರ ಬಗ್ಗೆ ಎಚ್ಚರ ವಹಿಸಬೇಕೆಂದರು “. ಅದೇನೋ ಗೊತ್ತಿಲ್ಲ, ನರೇಂದ್ರ ಮೋದಿಯವರಿಗೂ  ಪ್ರಸ್ತಾಪದಲ್ಲಿದ್ದ ಮಹಿಳಾ ಹೋರಾಟಕ್ಕೂ ಏನು ಸಂಬಂಧವೋ ?  ರಾಜ್ಯದಲ್ಲಿ ಹಾಡುಹಗಲೇ ಮಹಿಳೆಯೊಬ್ಬಳ ಮೇಲೆ ಎಟಿಏಮ್ ನಲ್ಲಿ ಹಲ್ಲೆಯಾದಾಗ, ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವಾದಾಗ ಇವರುಗಳು ಮಾತ್ರ ತುಟಿ ಬಿಚ್ಚದೆ ಸುಮ್ಮನೆ ಇರುತ್ತಾರೆ. ಈ ಹಿಂದೆ ಸಮಾಜಿಕ ತಾಣದಲ್ಲಿ ತಮ್ಮ ಮೇಲೆ ಯಾರೋ ಸಿಟ್ಟು ತೋರಿಸಿದಾಗ  ಸಮಾಜ ವಿಜ್ಞಾನಿಗಳೆಲ್ಲಾ ಒಂದುಗೂಡಿ ಟೌನ್ ಹಾಲ್ ಬಳಿಯ ಪ್ರತಿಭಟನೆಯಲ್ಲಿ ಈ ರೀತಿಯ ಅಶ್ಲೀಲ ಬೈಗುಳ ಒಬ್ಬ ಮಹಿಳೆಯ ಮೇಲಲ್ಲ , ಬದಲು ಈ ನಾಡಿನ ಮಹಿಳೆಯರೆಲ್ಲರ ಅವಮಾನ ! ಇದರ ಹಿಂದೆ ಭಯಂಕರ ಸಂಚಿದೆ ಎಂದು ಗುಲ್ಲೆಬ್ಬಿಸಿ ಮುಖ್ಯಮಂತ್ರಿಗಳ ಬಳಿ ಹೋಗಿ ತಮ್ಮ ನೋವು ತೋಡಿಕೊಂಡಿದ್ದರು. ಅದೇ ತರಹ ಇಂದು ಬಾಯಿಗೆ ಬಂದ ಹಾಗೆ ಬೈದಿದ್ದು  ಒಂದು ಬರಹಗಾರನಿಗಲ್ಲ ಈಡೀ  ಸಾಹಿತ್ಯ ಸಮುದಾಯಕ್ಕೆ ಎಂದು ಪ್ರತಿಪಾದಿಸಬಹುದಲ್ಲವೇ ??

ಕರ್ನಾಟಕದ ಹೆಮ್ಮೆಯ ಪುತ್ರ ಸರ್ ಎಂ. ವಿಶ್ವೇಶ್ವರಯ್ಯನವರನ್ನು ಆಯೋಜಕರು ಸಾಹಿತ್ಯ ಪರಿಷತ್ ನಲ್ಲಿ ನೆನೆಯಲ್ಲಿವೆಂಬುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭೈರಪ್ಪನವರಿಗೆ ಕೇವಲ ಬ್ರಾಹ್ಮಣರ ಬಗ್ಗೆ ಮಾತ್ರ ಕಾಳಜಿಯಿದೆ  ಅವರೊಬ್ಬ ಜಾತಿವಾದಿಯೆಂದು ಬಿಂಬಿಸಲಾಯಿತು. ಇನ್ನೊಬ್ಬರ ದೃಷ್ಟಿಕೋನ ಇಷ್ಟವಾಗದಲ್ಲಿ ಅದನ್ನು ವಿರೋಧಿಸುವ ಹಕ್ಕು ನಮ್ಮೆಲ್ಲರಿಗಿದೆ ನಿಜ ಆದರೆ ಅದು ಜವಾಬ್ದಾರಿಯುತ ನಿಂದನೆ ಮತ್ತು ಸರಿಯಾದ ಸ್ಥಳದಲ್ಲಿ ನಿಂದಿಸಬೇಕು. ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಬೀದಿ ಜಗಳದ ಪದಗಳನ್ನು ಉಪಯೋಗಿಸಿದ್ದು ನಿಜವಾಗಿಯೂ ವಿಷಾದನೀಯ. ಜನರ ತೆರಿಗೆ ಹಣವನ್ನು ಬಳಸಿ ಸದುದ್ದೇಶವನ್ನು ಹೊತ್ತಿ ನಡೆಸುವಂತಹ ಈ ರೀತಿಯ ಕಾರ್ಯಕ್ರಮಗಳಲ್ಲಿ ವೈಯಕ್ತಿಕ ನಂಜನ್ನು ಕಾರುವುದು ನಾಡಿನ ಜನತೆಗೆ ಮತ್ತು ಸರಕಾರಕ್ಕೆ ಅವಮಾನ ಮಾಡಿದ್ದಂತೆ.

ನಿಜ ಹೇಳಬೇಕೆಂದರೆ ಜನವರಿ  ಒಂದರಿಂದ ಕೇಂದ್ರ ಸರ್ಕಾರ ಭೈರಪ್ಪನವರಿಗೆ ರಾಷ್ಟೀಯ ಪ್ರಾಧ್ಯಾಪಕರಾಗಿ ನೇಮಿಸಿದ್ದು ಕೆಲವರಿಗೆ ಅರಗಿಸಿಕೊಳ್ಳಲಾಗಿಲ್ಲ, ಭೈರಪ್ಪನವರು ಕನ್ನಡದ ಒಬ್ಬ ಶ್ರೇಷ್ಠ ಬರಹಗಾರರು, ಅವರಿಗೆ ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗು ಕೇಂದ್ರ ಸಾಹಿತ್ಯ ಪ್ರಶಸ್ತಿ ದೊರಕಿದೆ, ಅವರ ೨೪ ಬರಹಗಳು ಅತೀ ಹೆಚ್ಚು ಮಾರಟವಾಗಿವೆ, ಅವರ ಎಲ್ಲ ಕಾದಂಬರಿಗಳು ಮರಾಠಿ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಅನುವಾದಗೊಂಡಿವೆ, ಭೈರಪ್ಪನವರು ಕಳೆದ ೨೫ ವರ್ಷಗಳಿಂದ ಕನ್ನಡದ ನೆಚ್ಚಿನ ಬರಹಗಾರರಾಗಿದ್ದರೆ, ಅನುವಾದಗೊಂಡ ಮರಾಠಿ ಪುಸ್ತಕ ಕಳೆದ ಎಂಟು ವರ್ಷಗಳಿಂದ ಮತ್ತು ಹಿಂದಿ ಅನುವಾದಗಳು ಕಳೆದ ೫ ವರ್ಷಗಳಿಂದ ಮೊದಲನೆಯ ಸ್ಥಾನದಲ್ಲಿವೆ, ಅಷ್ಟೇ ಯಾಕೆ ಈ ಸಾಹಿತ್ಯ ಸಮ್ಮೇಳನದಲ್ಲೂ ಭೈರಪ್ಪನವರ ಸಾಹಿತ್ಯಕ್ಕೆ ಎಲ್ಲಿಲ್ಲದ ಬೇಡಿಕೆಯಿತ್ತು. ಇವೆಲ್ಲ ಸತ್ಯಗಳು ಇವರುಗಳಿಗೂ ಗೊತ್ತಿದೆ. ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುವ ಇವರಿಗೆ ಕೊನೆ ಪಕ್ಷ ನೇರವಾಗಿ ನಿಲ್ಲುವುದಕ್ಕಾದರೂ ಆಲದ ಮರದ ಬಿಳಲಿನ ಅವಶ್ಯಕತೆ ಇರುವುದು ವಿಪರ್ಯಾಸ. ಮುಂದಿನ ಸಮ್ಮೇಳನದಿಂದಾರೂ ಈ ಉತ್ಸವಮೂರ್ತಿಗಳನ್ನು ಬದಿಯಲ್ಲಿಡುವ ಕುರಿತು ಭೌದ್ದಿಕ ವರ್ಗ ಚಿಂತಿಸಲಿ.

ಅಲ್ಲಿ ಹೊಸ ಮಹಿಳಾ ಪ್ರತಿಭೆಗಳನ್ನು ಸಾಹಿತ್ಯದೆಡೆಗೆ ಆಕರ್ಷಿಸಲು ಅನೇಕ ವಿಷಯಗಳ ಚರ್ಚೆಯಾಗಬೇಕಿತ್ತು, ಹಿಂದೆ ಕನ್ನಡ  ಮಹಿಳೆಯರ ಕೊಡುಗೆಯ ಬಗ್ಗೆ ನೆನಯಬೇಕಿತ್ತು, ಸಮಾಜದಲ್ಲಿ ಒಟ್ಟಾರೆ ಮಹಿಳೆಯರ ಸಮಸ್ಯಗಳನ್ನು ಕುರಿತು ಚರ್ಚೆ ಮಾಡಿ ಪರಿಹಾರವನ್ನು ಸೂಚಿಸಬಹುದಿತ್ತು. ಅದೆನ್ನಲ್ಲ ಬಿಟ್ಟು ಅಲ್ಲಿ ನಡೆದಿದ್ದು ಸಾಹಿತಿಯ ವೇಷದಲ್ಲಿ ವಿಷಕಾರುವದು, ಹೆಣ್ಣಿನ ಶೋಷಣೆಯ ಹೆಸರಿನಲ್ಲಿ ವ್ಯಕ್ತಿ ನಿಂದನೆ ಮಾಡುವದು, ಜ್ಯಾತಿಯತೆಯ ಹೆಸರಿನಲ್ಲಿ ಕೇವಲ ಬ್ರಾಹ್ಮಣರನ್ನು ದೂಶಿಸಿ ಖುಷಿ ಪಡುವದು ಮಾತ್ರ.   ಅಷ್ಟಕ್ಕೂ ಅಲ್ಲಿ ಇರಬೇಕಾದ ಏಕೈಕ ಅಜೆಂಡಾ ಸಾಹಿತ್ಯ ಮತ್ತು ಮಹಿಳಾ ಸಮಾನತೆ, ಆದರೆ ಇವುಗಳನ್ನು ಬಿಟ್ಟು ಬೇರೆಲ್ಲಾ ಚರ್ಚೆಯಾಯಿತು, ಅಷ್ಟಕ್ಕೂ ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡಲು ಇವರುಗಳ ಬಗ್ಗೆ ವಿಷಯವಿರಲಿಲ್ಲವೋ ಅಥವಾ ಮತ್ತೊಬ್ಬ ಸಾಹಿತಿಯ ಚಾರಿತ್ರ್ಯ ಹರಣ ಮಾಡುವ ದೃಷ್ಟಿಯಿಂದ ಈ ವೇದಿಕೆಯನ್ನು ಬಳಸಲಾಯಿತೋ?? ಕನ್ನಡ ಸಾಹಿತ್ಯ ಪರಿಷತ್ ಮತ್ತು ಆ ವೇದಿಕೆಗೆ ಇವರಿಂದ ಧಕ್ಕೆಯಾಗಿದೆಯೆಂದರೆ ಅತೀಶಯವೆನಿಸದು.

ಚಿತ್ರಕೃಪೆ : ಕನ್ನಡಪ್ರಭ

10 ಟಿಪ್ಪಣಿಗಳು Post a comment
 1. Pueushottam Bhat
  ಫೆಬ್ರ 7 2015

  The verbal atrocity on Shri S,L.Bhairappa should be strongly condemned.

  ಉತ್ತರ
  • simha sn
   ಫೆಬ್ರ 8 2015

   why should we condemn them? just ignore and enjoy their level of intellectualism !

   ಉತ್ತರ
 2. ಫೆಬ್ರ 7 2015

  These people at front end will be playing for others. What you can expect from these so called “chelas”?

  ಉತ್ತರ
 3. ಫೆಬ್ರ 8 2015

  ನಿಂದಿಸುವವರಿಗೆ ಸಾಮಾನ್ಯ ಜ್ಞಾನದ ಕೊರತೆಯಿರುವುದರಿಂದ ಅವರುಗಳಿಗೆ ಸಾಮಾನ್ಯ ಜ್ಞಾನದ ಬಗ್ಗೆ ಅರಿವು ಮೂಡಿಸುವ ಬಗ್ಗೆ ತರಗತಿಗಳನ್ನು ಪ್ರಾರಂಭಿಸುವ ಕೆಲಸವಾಗಬೇಕಾಗಿದೆ.

  ಉತ್ತರ
 4. yashavanth
  ಫೆಬ್ರ 8 2015

  Gangavathi Pranesh avara mathu
  “Kelavaru Bairappanavarannu Bayyalende huttutthare”

  ಉತ್ತರ
 5. Nagshetty Shetkar
  ಫೆಬ್ರ 8 2015

  ಭೈರಪ್ಪನವರನ್ನು ತಾತ್ವಿಕವಾಗಿ ವಿರೋಧಿಸುತ್ತೇನೆ. ಆದರೆ ಅವರ ಕವಲು, ವಂಶ ವೃಕ್ಷ ಮೊದಲಾದ ಸ್ತ್ರೀ ವಿರೋಧಿ ಕಾದಂಬರಿಗಳು ಕನ್ನಡದ ಮಹಿಳಾ ಓದುಗರಲ್ಲೂ ಬಹಳ ಜನಪ್ರಿಯವಾಗಿವೆ ಎಂಬ ಸತ್ಯವನ್ನು ನಿರಾಕರಿಸಲಾರೆ. ಮಹಿಳಾ ಸಾಹಿತಿಗಳು ವಿಮರ್ಶಕರು ಏನೇ ಹೇಳಲಿ ಕನ್ನಡದ ಮಹಿಳಾ ಓದುಗರಿಗೆ ಮಾತ್ರ ಭೈರಪ್ಪನವರ ಕಾದಂಬರಿಗಳು ಬಹಳ ಆಪ್ತವಾಗಿವೆ. ಕನ್ನಡದ ಓದುಗರ ಒಳಲಯವನ್ನು ಪ್ರಭಾವಿಸಲು ಭೈರಪ್ಪನವರಿಗೆ ಸಾಧ್ಯವಾದದ್ದು ಸಾಯಿಸುತೆ, ಟಿ ಕೆ ರಾಮರಾವ್, ಯಂಡಮೂರಿ ವೀರೇಂದ್ರನಾಥ್, ಬಿ ಎಲ್ ವೇಣು ಅವರಂತಹ ಜನಪ್ರಿಯ ಸಾಹಿತಿಗಳಿಗೇಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಯನ್ನು ಮಹಿಳಾ ಸಾಹಿತಿಗಳು ಎದುರಿಸಬೇಕಾಗಿದೆ. ಆದುದರಿಂದ ಸಾಹಿತ್ಯ ಸಮ್ಮೇಳನಗಳಲ್ಲಿ ಭೈರಪ್ಪನವರನ್ನು ಜೀವವಿರೋಧಿ ಸ್ತ್ರೀವಿರೋಧಿ ಎಂದು ಟೀಕಿಸುವುದರಿಂದ ಮಾತ್ರ ಭೈರಪ್ಪನವರು ಪ್ರತಿನಿಧಿರುವ ಯಜಮಾನ್ಯ ವ್ಯವಸ್ಥೆ ಹಾಗೂ ಬ್ರಾಹ್ಮಣ್ಯವನ್ನು ನ್ಯೂಟ್ರಲೈಸ್ ಮಾಡಲು ಸಾಧ್ಯವಿಲ್ಲ. ಭೈರಪ್ಪನವರ ಕಾದಂಬರಿಗಳು ಕನ್ನಡದ ಓದುಗರ ಪ್ರಜ್ಞಾಸ್ಥರದ ಮೇಲೆ ಮಾಡಿರುವ ಅನನ್ಯ ಪ್ರಭಾವಕ್ಕೆ ಕಾರಣವನ್ನು ಹುಡುಕಬೇಕಾಗಿದೆ. ಭೈರಪ್ಪನವರ ಯಶಸ್ಸಿನ ಸೀಕ್ರೆಟ್ ಸಾಸ್ ಏನು ಎಂದು ಪತ್ತೆ ಹಿಡಿದ ಮೇಲೆ ಅವರ ಅಪಾಯಕಾರಿ ಅಜೆಂಡಾವನ್ನು ಕೌಂಟರ್ ಮಾಡಲು ಸಾಧ್ಯ. ಸಾಹಿತ್ಯ ಸಮ್ಮೇಳನ ಮುಗಿದ ಮೇಲಾದರೂ ನಮ್ಮ ಪ್ರಗತಿಪರ ಮಹಿಳಾ ಸಾಹಿತಿಗಳು ಈ ಕೆಲಸ ಮಾಡತಕ್ಕದ್ದು.

  ಉತ್ತರ
 6. Shripad
  ಫೆಬ್ರ 9 2015

  ಭೈರಪ್ಪ ಸ್ತ್ರೀ ವಿರೋಧಿಯಂತೆ. ಏಕೆಂದರೆ ಅವರು ಕೆಲವು ಕಾದಂಬರಿ ಪಾತ್ರಗಳಲ್ಲಿ ಹಾಗೆ ಪಾತ್ರ ಚಿತ್ರಣ ಮಾಡಿದ್ದಾರಂತೆ-ಇದು ವಿಮರ್ಶಕರೆನಿಸಿಕೊಂಡವರ ಅಂಬೋಣ. ಹಾಗಾದರೆ ಈ ವಿಮರ್ಶಕರು ಕಾದಂಬರಿಯನ್ನೋ ಅಥವಾ ಸಾಹಿತ್ಯ ಕೃತಿಯೊಂದನ್ನು ಸಾಹಿತ್ಯ ಕೃತಿಯಾಗಿ ನೋಡುತ್ತಾರಾ? ವಾಸ್ತವ ಅಥವಾ ಸಮಾಜದ ಯಥಾವತ್ ವರದಿಯಾಗಿ ನೋಡುತ್ತಾರಾ? ಭೈರಪ್ಪನವರ ಕಾದಂಬರಿಗೆ ಈ ಮಹಾಶಯರು ಅನ್ವಯಿಸಿದ ಮಾತನ್ನು ಪಂಪನಾದಿಯಾಗಿ ಕನ್ನಡದ ಎಲ್ಲ ಕೃತಿಗಳಿಗೂ ಅನ್ವಯಿಸಿದರೆ? ಇದಕ್ಕೆ ಡಬ್ಬಾ ವಿಮರ್ಶಕರಲ್ಲಿ ಉತ್ತರವಿಲ್ಲ!

  ಉತ್ತರ
 7. ಪ್ರಕಾಶ್ ಕುಲಕರ್ಣಿ,
  ಫೆಬ್ರ 9 2015

  ಪ್ರಸಿದ್ದರನ್ನು ನಿಂದಿಸುವ ಮಂದಿ ಎಲ್ಲ ಕಾಲಕ್ಕೂ ಇರುತ್ತಾರೆ. ಶ್ರೀಕೃಷ್ಣನನ್ನು ನಿಂದಿಸಿದ ಜನರಿರಲಿಲ್ಲವೇ ದ್ವಾಪರದಲ್ಲಿ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments