ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 12, 2015

45

ದೆಹಲಿ ಚುನಾವಣೆಯ ಫಲಿತಾಂಶ ಕುರಿತು ಫೇಸ್ಬುಕ್ಕಿನಲ್ಲಿ …

‍ನಿಲುಮೆ ಮೂಲಕ

– ರಾಘವೇಂದ್ರ ಸುಬ್ರಹ್ಮಣ್ಯ

Bedi,Kejriwal,Makenನನ್ನ ಮಾತು ಬಹಳಷ್ಟು ಜನರಿಗೆ ಹಿಡಿಸಲಿಕ್ಕಿಲ್ಲ…ಆದರೂ ಹೇಳದೇ ವಿಧಿಯಿಲ್ಲ.

ಮೋದಿ ಎಲ್ಲಾದ್ರೂ ಹಿಂದುತ್ವದ ಬಗ್ಗೆ ಭಾಷಣ ಮಾಡಿದ್ದು ಕೇಳಿದ್ರಾ? ಮೋದಿ ‘ಘರ್ ವಾಪಸಿ ಮಾಡ್ಲೇಬೇಕು’ ಅಂತಾ ಅವಲತ್ತುಕೊಂಡಿದ್ದು ಒತ್ತು ಕೊಟ್ಟಿದ್ದು ನೋಡಿದ್ರಾ? ಮೋದಿ ಯಾವಾತ್ತಾದ್ರೂ ಇತ್ತೀಚೆಗೆ ‘ರಾಮ್ ಮಂದಿರ ಕಟ್ಟಿ ಮುಗಿಸ್ತೀನಿ’ ಅಂತಾ ಕೂಗಾಡಿದ್ದು ಕೇಳಿದ್ರಾ?

ಅವರು ತನ್ನ ಪಾಡಿಗೆ ಅಭಿವೃದ್ಧಿ, ಸ್ವಚ್ಚ ಭಾರತ, ರಸ್ತೆ ಸುರಕ್ಷತೆ, ಸಾಮರಸ್ಯ, ಮನ್ ಕಿ ಬಾತ್ ಅಂತಾ ದೇಶದ ಬೆಳವಣಿಗೆ ಬಗ್ಗೆ ಮಾತಾಡ್ತಾ ಇದ್ರೆ, ಉಳಿದವರು ಮರುಮತಾಂತರ, ಗೋಹತ್ಯಾ ನಿಷೇಧ, ರಾಮಮಂದಿರ, ಹತ್ತು ಮಕ್ಕಳನ್ನು ಹೆರೋದು ಇದ್ರಲ್ಲೇ ಮುಳುಗಿದ್ದಾರೆ. ಜನ ಅಲ್ಪಸಂಖ್ಯಾತರ ತುಷ್ಟೀಕರಣದ ವಿರುದ್ದ ಇದ್ದಾರೆ ಅಂದ್ರೆ ಅರ್ಥ ಹಿಂದುತ್ವದ ಅಜೆಂಡಾ ಪರ ಇದ್ದಾರೆ ಅಂತ ಅಲ್ಲ! ಬರ್ತಾ ಬರ್ತಾ ದೇಶ, ಅಭಿವೃದ್ಧಿ ಅನ್ನೋದೆಲ್ಲಾ ಮೋದಿಯೊಬ್ಬರ ಮಾತಷ್ಟೇ ಆಗಿ ಉಳೀತಿದೆ! ಉಳಿದವರೆಲ್ರೂ ಅದೇ ಹಳೇ ಹಿಂದುತ್ವಕ್ಕೆ ಹೊಸ ಟ್ಯೂನ್ ಹಾಕ್ಕೊಂಡು ಕುಣೀತೀದಾರೆ! ಜನ ತಮಗೆ ಯಾಕೆ ಓಟು ಹಾಕಿ ಗೆಲ್ಸಿದ್ದಾರೆ ಅನ್ನೋದನ್ನೂ ಅರ್ಥಮಾಡಿಕೊಳ್ಲದ ಇವರು ಬಹುಬೇಗ ತಮ್ಮ ಪತನವನ್ನು ತಾವೇ ಕಾಣ್ತಾರೆ ಅನ್ನೊಸೋಲ್ವಾ! ಮೋದಿ ಸರ್ಕಾರಕ್ಕೆ ಇವರೆಲ್ಲ ಬಗಲಮುಳ್ಳು.

ಕಾಂಗಿಗಳಿಂದ ಆದ ಸಿಕ್ಯುಲರ್ ಅನಾಹತುಗಳನ್ನು ತಪ್ಪಿಸ್ತಾರೆ ಅಂತ ಜನ ನಿರೀಕ್ಷಿಸ್ತಿದ್ದರೆ ಈ ಕೇಸರಿಪಡೆಗಳು ತಮ್ಮ ಆಟ ಶುರು ಮಾಡ್ಕೊಂಡು ಅನಾಹುತ ಎಬ್ಬಿಸುತ್ತಿವೆ! ಕೇವಲ ಒಂದು ವರ್ಷದಲ್ಲಿ ಇದು ಅನಾರೋಗ್ಯಕಾರಿ ಬೆಳವಣಿಗೆ! ‘ಅಯ್ಯೋ ನಮ್ಮನ್ನು ಘರ್ ವಾಪಸಿ ಮಾಡ್ತಿಲ್ಲ’, ‘ಅಯ್ಯಯ್ಯೋ ನಮಗೆ ಎರಡು ಮಕ್ಳು ಸಾಕಾಗೊಲ್ಲ’ ಅಂತ ಯಾವ ಜನ ಇವರತ್ರ ಹೋಗಿ ಅತ್ರಂತೆ! ಈ ಸಾಧ್ವಿಗಳು, ಮಹರಾಜ್ಗಳು, ಕೇಸರಿ ಘರ್ಜನೆ ವೀರರು ಇವರಿಷ್ಟೇ ಸಾಕು ಮೋದಿ ಮತ್ತು ಬಿಜೆಪಿನ ಮುಳಗಿಸಲಿಕ್ಕೆ! ಯಾವ ಅಲ್ಪಸಂಖ್ಯಾತ-ಸಿಕ್ಯುಲರ್- ಕಾಂಗಿ-ಆಪಿ-ಒವೈಸಿಗಳೂ ಬೇಡ!

ಕೇಸರಿಪಡೆಯ ಕೆಲಸ ತಪ್ಪು ಅಂತಾ ನಾನು ಹೇಳ್ತಿಲ್ಲ. ಆದರೆ, ನಿಮ್ಮ ಕೆಲಸಕ್ಕೆ ಸರ್ಕಾರವನ್ನು ಬಲಿಪಶು ಮಾಡ್ಬೇಡಿ. ನಿಮ್ಮ ಕೆಲಸ ಕಾನೂನಿನ ಚೌಕಟ್ಟಿನಲ್ಲಿದ್ರೆ ಅದನ್ನು ಮುಂದುವರೆಸಿ. ಅದು ಬಿಟ್ಟು ಮೋದಿ ಕಡೆ ನೋಡಬೇಡಿ. ಸರ್ಕಾರದಿಂದ ಅದಕ್ಕೆ ಯಾವ ಸಹಾಯವನ್ನೂ ನಿರೀಕ್ಷಿಸಬೇಡಿ. ಹಿಂದುತ್ವ, ರಾಮಮಂದಿರ ಮತ್ತೊಂದು ನನ್ನ ನಿಮ್ಮ ಚರ್ಚೆಯ ವಿಷಯಗಳು. ಸರ್ಕಾರದ್ದಲ್ಲ.

ಜನ ವೋಟು ಹಾಕಿರೋದು ಅಭಿವೃದ್ಧಿಗೆ, ರಿಲಿಜನ್ನಿಗಲ್ಲ. ದೇಶ ಮೊದಲು……ಯಾವತ್ತೂ ಅಷ್ಟೇ. ಕೊನೇಪಕ್ಷ ನನಗಂತೂ ಹೌದು.

ಕಮೆಂಟಿಸುವ ಮುನ್ನ ಎರಡು ಬಾರಿ ಓದಿ. ಆನಂತರವೂ ಸಿಟ್ಟಿದ್ರೆ ಚರ್ಚಿಸೋಣ ಬನ್ನಿ.

***  *** *** ***

ನಮಗೂ ಸೆಕ್ಯುಲರ್ ಗಳಿಗೂ ಇದೇ ವ್ಯತ್ಯಾಸ ನೋಡಿ:

ಆಪ್ ಗೆಲುವು – ನಮ್ಮ ಮಾತು:
ಜನ ಗೆಲ್ಲಿಸಿದ್ದಾರೆ. ಅಲ್ಲಿಗೆ ಮುಗೀತು. ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡಿ. ಅಭಿವೃದ್ಧಿ ಮುಖ್ಯ.

ಆಪ್ ಗೆಲುವು – ಸೆಕ್ಯುಲರ್ರುಗಳ ಮಾತು:
ಜನ ಧರ್ಮಾಂಧ ಪಕ್ಷವನ್ನ ಸೋಲಿಸಿದ್ದಾರೆ. ಬಿಜೆಪಿಗಿದು ಪಾಠ.

ಬಿಜೆಪಿ ಗೆಲುವು – ನಮ್ಮ ಮಾತು:
ಜನ ಗೆಲ್ಲಿಸಿದ್ದಾರೆ. ಅಲ್ಲಿಗೆ ಮುಗೀತು. ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡಿ. ಅಭಿವೃದ್ಧಿ ಮುಖ್ಯ.

ಬಿಜೆಪಿ ಗೆಲುವು – ಸೆಕ್ಯುಲರ್ರುಗಳ ಮಾತು:
ಜನರನ್ನು ಮರುಳುಮಾಡಲಾಗಿದೆ. ಗುಜರಾತಿನಲ್ಲಿ ಚೆಲ್ಲಿದ ಪ್ರತೀ ಹನಿ ರಕ್ತ ಇವತ್ತು ದೇಶದ ಎಲ್ಲಾ ಪ್ರಜೆಗಳ ಕೈಗಂಟಿದೆ. ಮತಯಂತ್ರಗಳನ್ನು ತಿರುಚಲಾಗಿದೆ. ಇದು ಸರ್ವಾಧಿಕಾರ. RIP India!!!

*** *** *** ***

– ಗುರುಮೂರ್ತಿ ಸಿ.ಎಂ

“ಸಾಯುತ್ತಿರುವವನಿಗೆ ಒಂದು ಹುಲ್ಲು ಕಡ್ಡಿಯೂ ಆಸರೆ ಆಗುತ್ತದೆ” ಅನ್ನುವ ಗಾದೆಯ ಅರ್ಥ ಇವಾಗ ಆಗ್ತಾ ಇದೆ.ಭಾರತದಲ್ಲಿ ಅವಸಾನದ ಅಂಚಿನಲ್ಲಿರುವ ಕೊನೆಯುಸಿರೆಳೆಯುತ್ತಿರುವ ಎಡಪಂಥೀಯ ಪಕ್ಷಗಳು,ಸೆಕ್ಯುಲರಿಸ್ಟರಿಗೆ ದೆಹಲಿಯಲ್ಲಿನ ಆಪ್ ಗೆಲುವು ಕೃತಕ ಉಸಿರಾಟ ಒದಗಿಸಿದೆ.

ನೆಹರು,ಕಾಂಗ್ರೆಸ್,ಕಮ್ಯೂನಿಷ್ಟ್,ಸೋಷಿಯಲಿಸ್ಟ್,ಜನತಾ ಪರಿವಾರ ಹೀಗೆ ಅಧಿಕಾರ ಸಿಕ್ಕವರಿಗೆ ಜೈಕಾರ ಹಾಕಿ ಪ್ರಗತಿಪರ-ಸೆಕ್ಯುಲರ್ ಸೋಗು ಹಾಕಿ ಹೊಟ್ಟೆ ತುಂಬಿಸಿಕೊಂಡವರಿಗೆ ಆಪ್ ಮತ್ತೊಂದು ಗಂಜಿಕೇಂದ್ರ.ಬಿಜೆಪಿಗೆ ಪರ್ಯಾಯವೊಂದನ್ನು ಕಟ್ಟಲಾಗದವರು ಇವರು. ಬಿಜೆಪಿ ವಿರುದ್ಧ ಗೆದ್ದವರನ್ನು ಹೊಗಳುವ,ಅಪ್ಪಿಕೊಳ್ಳಲು ಹೊರಡುವ ಬೌದ್ಧಿಕ ದಾರಿದ್ರ್ಯ ಇವರಿಗೆ ಹಿಂದಿನಿಂದಲೂ ಬಂದ ಬಳುವಳಿ.67 ವರ್ಷಗಳಿಂದ ಸಿದ್ಧಾಂತವೊಂದನ್ನು ಪ್ರತಿಪಾದಿಸಿ ತಪಸ್ಸಾಗಿ ಸ್ವೀಕರಿಸಿ ಅದನ್ನು ದೇಶದ ಜನರಿಗೆ ತಲುಪಿಸಿ ಬಹುಮತದ ಸರ್ಕಾರ ರಚಿಸಿದ ಪಕ್ಷದ ಮತದಾರ ನಾನು ಅನ್ನುವ ಹೆಮ್ಮೆಯಂತೂ ನನಗಿದೆ.ಚುನಾವಣಾ ರಾಜಕೀಯದಲ್ಲಿ ಸೋಲು ಗೆಲುವುಗಳು ಸಹಜ ಸೋಲಿನಿಂದ ಪಾಠ ಕಲಿಯಲಿ.

*** *** *** ***
– ಪ್ರಸನ್ನ ಬೆಂಗಳೂರು

* ವೈಜ್ಞಾನಿಕ ಸಮೀಕ್ಷೆ,, ಅತಿಹೆಚ್ಚು ಜನರ ಸಮೀಕ್ಷೆ, ಎಂದು ಬೊಗಳೆ ಬಿಟ್ಟ ಸಮೀಕ್ಷೆಗಳೆಲ್ಲಾ ಮಕಾಡೆ ಮಲಗಿವೆ. ಇವರ ಯಾವ ಸಮೀಕ್ಷೆಗಳೂ ಇದುವರೆಗೆ ನಿಜವಾಗಿಲ್ಲ. ಭವಿಷ್ಯ ಜ್ಯೋತಿಷ್ಯ ವಿರೋಧಿಸುವರು/ನಿಷೇಧಿಸುವವರು ಜೊತೆಗೆ ಇವರನ್ನೂ ಸೇರಿಸಿಕೊಳ್ರಪ್ಪ. ಅವರಿಗಿಂತ ಇವರು ಹೆಚ್ಚು ಹಣ ಮಾಡಿಕೊಳ್ಳುತ್ತಿದ್ದಾರೆ. ಪ್ರಭಾವ ಬೀರುತ್ತಿದ್ದಾರೆ. ಹಾನಿ ಮಾಡುತ್ತಿದ್ದಾರೆ.

* ಆಗಾಗ ಆಶ್ರಯ ಬದಲಾಯಿಸುವ ಸೆಕ್ಯುಲರುಗಳಿಗೆ AAP ನ ಗೆಲುವು ಖಂಡಿತ ಸಂತಸ ನೀಡಲೇ ಬೇಕು. ಸತತವಾಗಿ ಸೋಲನ್ನು ಅನುಭವಿಸುತ್ತಿರುವವರಿಗೆ ಹುಲ್ಲು ಕಡ್ಡಿಯೂ ಆಸರೆಯಾದೀತು.

* ಪ್ರಶ್ನೆ ಕೇಳುವುದರಿಂದಲೇ ಗೆದ್ದು ಬಿಡಬಹುದು ಎಂಬ ಭ್ರಮೆಯಲ್ಲಿದ್ದವರಿಗೆ ಈಗ ಎಲ್ಲವೂ ಪ್ರಶ್ನೆಗಳಾಗೇ ಕಾಡುತ್ತಿವೆ.

* ತನ್ನ ಭ್ರಷ್ಠಾಚಾರದ ವಿರುದ್ದ ಮತಗಳು ಬಿಜೆಪಿಗೆ ಲಾಭವಾಗದಂತೆ ಸೃಷ್ಠಿಸಿದ ಭಸ್ಮಾಸುರ ತನ್ನನ್ನೇ ಸುಟ್ಟ ಕಥೆ ಖಾನ್ಗ್ರೆಸಿನದು.

Read more from ಲೇಖನಗಳು
45 ಟಿಪ್ಪಣಿಗಳು Post a comment
 1. ಫೆಬ್ರ 12 2015

  ಅಸಂಖ್ಯಾತ ಧಾರ್ಮಿಕ ನಂಬಿಕೆಗಳಿಂದ ಕೂಡಿದ ಹಿಂದೂಗಳು ಮತ್ತು ಹಿಂದುತ್ವ ಉಳಿಯಬೇಕೆಂದರೆ ಸೆಕ್ಯುಲರಿಸಂನ ಅವಶ್ಯಕತೆ ತುಂಬಾ ಇದೆ. ಇಲ್ಲಿ ಸೆಕ್ಯೂಲರಿಸಂ ಎಂದರೆ ಯಾವುದೇ ಧಾರ್ಮಿಕ ನಂಬಿಕೆಯವನಾದರೂ ಸಮಾನ ಗೌರವದಿಂದ ಬದುಕುವ ಅವಕಾಶ. ಸೆಕ್ಯುಲರಿಸಂ ಮತ್ತು ಪ್ರಜಾಪ್ರಭುತ್ವ ಬಲವಾದಷ್ಟು ಅದು ಹಿಂದೂಗಳು ಮತ್ತು ಹಿಂದುತ್ವದ ಒಳಿತಿಗೆ ಕಾರಣವಾಗುತ್ತದೆ. ನಕಲಿ ಸೆಕ್ಯುಲರಿಸಂನ್ನು ವಿರೋಧಿಸುವ ಬದಲು , ಕೆಲವರು ಸೆಕ್ಯುಲರಿಸಂನ್ನೇ ವಿರೋಧಿಸಲು, ದ್ವೇಷಿಸಲು ಹೊರಟರೆ ಹಿಂದೂಗಳಿಗೆ ಅತಿದೊಡ್ಡ ಅಪಾಯ ಉಂಟುಮಾಡಬಹುದು.

  ಉತ್ತರ
 2. ಫೆಬ್ರ 12 2015

  ಅದು ಹುಸಿ ಸೆಕ್ಯುಲರ್ ವಾದಿಗಳು ಎಂದಾಗಬೇಕಿತ್ತು

  ಉತ್ತರ
 3. Nagshetty Shetkar
  ಫೆಬ್ರ 13 2015

  ದೆಹಲಿಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಆಮ್ ಆದಮೀ ಪಕ್ಷ ಬಂದಿರುವುದು ನಾಡಿನ ಶೋಷಿತರು, ಸ್ತ್ರೀಯರು, ಅಬಲರು, ಅವೈದಿಕರು, ಅಲ್ಪಸಂಖ್ಯಾತರು ಸಂಭ್ರಮ ಪಡುವಂತಹ ಬೆಳವಣಿಗೆ. ದೆಹಲಿ ಚುನಾವನೆಯಲ್ಲಾದ ಅಭೂತಪೂರ್ವ ಮುಖಭಂಗದ ಕಾರಣದಿಂದ ಇನ್ನಾದರೂ ನಮೋ ಸರಕಾರ ಜಾತ್ಯತೀತ ಸಮಾಜವಾದಿ ಮಾರ್ಗದಲ್ಲಿ ಸಾಗುತ್ತದೆ ಎಂಬ ವಿಶ್ವಾಸ ಇಟ್ಟುಕೊಳ್ಳಬಹುದು. ಅಧಿಕಾರದ ಮದದಿಂದ ಕೆನೆಯುತ್ತಿದ್ದವರು ಹೆವಳರಾಗುವ ಕಾಲ ಸನ್ನಿಹಿತವಾಗಿದೆ.

  ಆಮ್ ಆದಮೀ ಪಕ್ಷ ಜನಪರ ಆಡಳಿತ ಕೊಡುತ್ತದೆ ಎಂಬ ಭರವಸೆ ಇದೆ. ಆದರೆ ಉಪಮುಖ್ಯಮಂತ್ರಿಯ ಹುದ್ದೆಗೆ ಮೇಲ್ವರ್ಗದ ಮನೀಶ್ ಶಿಶೋಡಿಯಾ ಅವರ ಬದಲು ದಲಿತ ಅಥವಾ ಮುಸ್ಲಿಂ ಸಮುದಾಯದ ಎಂ ಎಲ್ ಎ ಒಬ್ಬರನ್ನು ನೇಮಿಸಿದ್ದರೆ ಆಮ್ ಆದಮೀ ಪಕ್ಷದ ವಿಜಯ ಈ ನಾಡಿನ ಎಲ್ಲ ಪ್ರಜ್ಞಾವಂತರ ವಿಜಯವಾಗುತ್ತಿತ್ತು. ದೆಹಲಿಯಲ್ಲಿ ಅರವಿಂದ್ ಕೆಜ್ರಿವಾಲ್ ನಂತರ ಪ್ರಥಮ ಬಾರಿಗೆ ದಲಿತ/ಮುಸ್ಲಿಂ ಮುಖ್ಯಮಂತ್ರಿ ಆಯ್ಕೆ ಆಗುವ ಮಹತ್ವದ ಸನ್ನಿವೇಶಕ್ಕೆ ನಾಂದಿಯಾಗುತ್ತಿತ್ತು. ಇಂತಹ ಅವಕಾಶವನ್ನು ಆಮ್ ಆದಮೀ ಪಕ್ಷ ಕಳೆದುಕೊಂಡಿದೆ ಎಂಬುದು ಬೇಸರದ ಸಂಗತಿ.

  ಉತ್ತರ
  • Nagshetty Shetkar
   ಫೆಬ್ರ 13 2015
  • ಶ್ಯಾಮ್
   ಫೆಬ್ರ 13 2015

   …..ಆಮ್ ಆದಮೀ ಪಕ್ಷ ಜನಪರ ಆಡಳಿತ ಕೊಡುತ್ತದೆ ಎಂಬ ಭರವಸೆ ಇದೆ. ……
   ಅದೇ ಭರವಸೆಯನ್ನು ಕೇಂದ್ರ ಸರಕಾರದ ಮೇಲೂ ಇಡಬಹುದಲ್ಲ . ಯಾಕೆ ಅವರ ಬಗ್ಗೆ ಅಪನಂಬಿಕೆ.
   ….ಆದರೆ ಉಪಮುಖ್ಯಮಂತ್ರಿಯ ಹುದ್ದೆಗೆ ಮೇಲ್ವರ್ಗದ ಮನೀಶ್ ಶಿಶೋಡಿಯಾ ಅವರ ಬದಲು ದಲಿತ ಅಥವಾ ಮುಸ್ಲಿಂ ಸಮುದಾಯದ ಎಂ ಎಲ್ ಎ…..
   ಮೇಲ್ವರ್ಗದ ಮನೀಶ್ ಶಿಶೋಡಿಯಾ
   ಹೌದೇ? ಅವರ ಜಾತಿ ಕುಲ ಗೊತ್ತಿರಲೇ ಇಲ್ಲ. ಇದು ಬಹಳ ಮುಖ್ಯ ವಿಚಾರ ತಿಳಿದುಕೊಳ್ಳಲಿಕ್ಕೆ!.

   ಉತ್ತರ
   • Nagshetty Shetkar
    ಫೆಬ್ರ 13 2015

    ಶಿಶೋಡಿಯಾ ಅವರು ಜಾತಿಯಿಂದ ರಾಜಪೂತ್ (ಕ್ಷತ್ರಿಯ) ಹಾಗೂ ಕೇಜ್ರಿವಾಲ್ ಅವರು ಅಗ್ರವಾಲ್ (ವೈಶ್ಯ). ಆದರೆ ಪಕ್ಷದ ಐಡಿಯಾಲಾಗ್ ಯೋಗೇಂದ್ರ ಯಾದವ್ ಅವರು ಶೂದ್ರರಾದುದರಿಂದ ಆಂ ಆದಮೀ ಪಕ್ಷದ ಜಾತ್ಯತೀತತೆ ಬಗ್ಗೆ ನಂಬಿಕೆ ಇಡಬಹುದಾಗಿದೆ. ಮುಸ್ಲಿಂ ಹಾಗೂ ದಲಿತರಿಗೆ ಮಹತ್ವದ ಸ್ಥಾನಮಾನ ಕೊಡತಕ್ಕದ್ದು. ಬ್ರಾಹ್ಮಣರು ಭಾಜಪದೊಂದಿಗೆ ಕಳಚಿಕೊಳ್ಳಲಾಗದ ನಂಟಸ್ಥಿಕೆ ಇಟ್ಟುಕೊಂಡಿರುವದರಿಂದ ಅವರಿಗೆ ಆಂ ಆದಮೀ ಪಕ್ಷ ರುಚಿಸದು.

    ನಮೋ ಸರಕಾರದ ಬಗ್ಗೆ ಬ್ರೈನ್ ಡೆಡ್ ಜನರು ಮಾತ್ರ ಭರವಸೆ ಇಡಲು ಸಾಧ್ಯ. ಪ್ರಗತಿಪರರಿಗೆ ಆಂ ಆದಮೀ ಪಕ್ಷವೇ ಸದ್ಯಕ್ಕೆ ಭರವಸೆಯ ಪಕ್ಷ.

    ಉತ್ತರ
    • shripad
     ಫೆಬ್ರ 14 2015

     “ಶಿಶೋಡಿಯಾ ಅವರು ಜಾತಿಯಿಂದ ರಾಜಪೂತ್ (ಕ್ಷತ್ರಿಯ) ಹಾಗೂ ಕೇಜ್ರಿವಾಲ್ ಅವರು ಅಗ್ರವಾಲ್ (ವೈಶ್ಯ). ಆದರೆ ಪಕ್ಷದ ಐಡಿಯಾಲಾಗ್ ಯೋಗೇಂದ್ರ ಯಾದವ್ ಅವರು ಶೂದ್ರರಾದುದರಿಂದ…” ಹಾಗೆಯೇ ಇವರನ್ನು ಬೆಂಬಲಿಸುವ ನೀವು ಇದು ಯಾವುದೂ ಅಲ್ಲದ ಜಾತಿಯಾದ್ದರಿಂದ, ನಾನು ನಿಮ್ಮಂಥವರು ಮೊದಲು ಗುರುತಿಸುವ ಮೇಲ್ಜಾತಿಯಾದ್ದರಿಂದ… ದೇಶದಲ್ಲಿ ಬೇಗನೇ ಜಾತ್ಯತೀತತೆಯನ್ನು(!) ಸಾಧಿಸಬಹುದು. ಯಾರನ್ನೇ ಆದರೂ ಮನುಷ್ಯನಾಗಿ(ಳಾಗಿ) ನೋಡುವ ಮುನ್ನ ಅವರವರ ಜಾತಿಯನ್ನು ತಿಳಿದುಕೊಳ್ಳುವುದು ಜಾತ್ಯತೀತ ಎನಿಸಿಕೊಳ್ಳಲು ಅತೀ ಅಗತ್ಯ!! ಇದಿಲ್ಲದೇ ಸಮಾನತೆ ಸಾಧಿಸಲಾಗದು!? ಹಾಗೆಯೇ ಯಾರು ಯಾವ ಜಾತಿ ಎಂದು ಹೆಚ್ಚು ತಿಳಿದಿರುತ್ತಾರೋ ಅವರು ಮಹಾನ್ ಪ್ರಗತಿಪರರಾಗಲು ಸಾಧ್ಯ.

     ಉತ್ತರ
     • Nagshetty Shetkar
      ಫೆಬ್ರ 16 2015

      We Sharanas and Sufis don’t have bondage of Jati, Kula and Varga. We are God’s servants and we’re here to serve God’s children. All are equal.

      ಉತ್ತರ
 4. ಫೆಬ್ರ 13 2015

  ಅರವಿಂದ ಕೇಜ್ರೀವಾಲರವರು ದಲಿತರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡುವದಿರಲಿ,ಈಗಾಗಲೇ ದಲಿತರಿಗೆ ಇರುವ ಮೀಸಲಾತಿಗಳನ್ನು ಕಿತ್ತುಕೊಳ್ಳಬಹುದೆಂಬ ಭಯವನ್ನು ಹಲವಾರು ದಲಿತ ನಾಯಕರು ವ್ಯಕ್ತಪಡಿಸಿದ್ದಾರೆ.

  ಉತ್ತರ
 5. ಫೆಬ್ರ 14 2015

  ತೀರಾ ಅಧಿಕಾರ ಹಂಚಿಕೆಯಲ್ಲೂ ಜಾತಿವಾರು ಮೀಸಲಾತಿಯೆ ?? ನನಗಂತೂ ಜಾತಿ, ಧರ್ಮ ಅಂತ ವಿಂಗಡಣೆ ಮಾಡದೆ, ಅವರವರ ಯೋಗ್ಯತೆಗೆ ತಕ್ಕಂತೆ ಅಧಿಕಾರ ಹಂಚಿಕೆ ಮಾಡೋ ಪಕ್ಷ ಇಷ್ಟವಾಗುತ್ತೆ…
  ವಿ ಸೂ : ನಾನು ಯಾವ ಪಕ್ಷದ ಕಾರ್ಯಕರ್ತನೂ ಅಲ್ಲ. ನನ್ನನ್ನು ಒಂದು ಪಕ್ಷಕ್ಕೆ, ಅಥವಾ, ವರ್ಗಕ್ಕೆ ಸೀಮಿತಗೊಳಿಸಿ, ಕಾಮೆಂಟಿಸಬೇಡಿ.

  ಉತ್ತರ
  • Nagshetty Shetkar
   ಫೆಬ್ರ 14 2015

   ಎಲ್ಲಾ ಜಾತಿಯಲ್ಲೂ ಯೋಗ್ಯತೆ ಇರುವವರು ಇದ್ದಾರೆ, ದಲಿತರಲ್ಲೂ ಮುಸಲ್ಮಾನರಲ್ಲೂ. ಯೋಗ್ಯತೆ ಎಂಬುದು ಕೇವಲ ದ್ವಿಜ ಜಾತಿಗಳ ಸ್ವತ್ತಲ್ಲ.

   ಉತ್ತರ
   • shripad
    ಫೆಬ್ರ 14 2015

    ಹೌದು, ಹೌದು, ಹೌದು. ಅದಕ್ಕಾಗಿಯೇ ಪ್ರಗತಿಪರರು ಶೈವ ಪ್ರತಿಭೆ, ಶೂದ್ರ ಪ್ರತಿಭೆ, ಮುಸ್ಲಿಂ ಪ್ರತಿಭೆ ಎಂದೆಲ್ಲ ಜಾತ್ಯತೀತವಾಗಿ ಪ್ರತಿಭೆಯನ್ನೂ ಯೋಗ್ಯತೆಯನ್ನೂ ಗುರುತಿಸುವುದು.

    ಉತ್ತರ
    • Nagshetty Shetkar
     ಫೆಬ್ರ 14 2015

     ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿ ಬೆಳೆಸಿ ಅದರ ಲಾಭವನ್ನು ಪಡೆದದ್ದು ವೈದಿಕರು. ಸಹಸ್ರಾರು ವರ್ಷಗಳ ಕಾಲದಿಂದ ಶೋಷಣೆಗೆ ಒಳಗಾದ ಅವೈದಿಕ ಸಮುದಾಯಗಳ ಜನರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ತಪ್ಪೇನಲ್ಲ.

     ಉತ್ತರ
     • ಫೆಬ್ರ 15 2015

      ನಾಗಶೆಟ್ಟಿ ಶೆಟ್ಕರ್ ರವರೇ, ಮುಸ್ಲಿಮರು ಜಾತಿವ್ಯವಸ್ಥೆಯಿಂದ ಹೊರಗಿದ್ದವರು. ಭಾರತವನ್ನು ಸಾವಿರ ವರ್ಷಗಳ ಕಾಲ ಮುಸ್ಲಿಮರು ಆಳಿದವರು. ಮುಸ್ಲಿಮರನ್ನು ಮತ್ತು ದಲಿತರನ್ನು ಒಂದೇ ಸಾಲಿಗೆ ಸೇರಿಸಿ, ದಲಿತರ ಹಕ್ಕನ್ನು ಕಸಿಯಬೇಡಿ.

      ಉತ್ತರ
      • Nagshetty Shetkar
       ಫೆಬ್ರ 15 2015

       ಆಡಳಿತದಲ್ಲಿದ್ದ ಮುಸಲ್ಮಾನರು ಮಧ್ಯಪ್ರಾಚ್ಯ ಆಕ್ರಮಣಕಾರರ ಸಂತತಿ. ಅವರ ಸಂಖ್ಯೆ ತೀರಾ ಕಡಿಮೆ. ಬಹುಸಂಖ್ಯಾತ ಮುಸಲ್ಮಾನರು ಆಡಳಿತ ವರ್ಗಕ್ಕೆ ಸೇರಿರಲಿಲ್ಲ, ಅವರೆಲ್ಲ ಒಂದು ಕಾಲದಲ್ಲಿ ದಲಿತರಾಗಿದ್ದವರು ಶ್ರೇಣೀಕೃತ ಸಮಾಜದ ವಿರುದ್ಧ ಬಂಡೆದ್ದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದವರು. ಅವರಿಗೆ ಇಸ್ಲಾಂ ಸಾಮಾಜಿಕ ನ್ಯಾಯವನ್ನೇನೋ ಕೊಟ್ಟಿದೆ, ಆದರೆ ಆರ್ಥಿಕ ಹಾಗೂ ರಾಜಕೀಯ ನ್ಯಾಯ ಇನ್ನೂ ಮರೀಚಿಕೆಯೇ ಆಗಿದೆ.

       ಉತ್ತರ
       • ಫೆಬ್ರ 15 2015

        ನಾಗಶೆಟ್ಟಿ ಶೆಟ್ಕರ್ ರವರೇ, ಹಾಗಾದರೆ ಕೇಜ್ರೀವಾಲ್ ರವರು ತಮ್ಮ ಆಡಳಿತದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಕೊಡಬೇಕಾದರೆ ದಲಿತ ಮುಸ್ಲಿಮರನ್ನು ಗುರುತಿಸಿ ಅವರಿಗೆ ಸ್ಥಾನಮಾನ ಕೊಡುವುದು ಅಗತ್ಯ. ಇಲ್ಲದಿದ್ದರೆ ಮಧ್ಯ ಪ್ರಾಚ್ಯದ ಆಕ್ರಮಣಕಾರರ ಸಂತತಿಯವರಾದ ಕೆಲವೇ ಕೆಲವು ಬಲಿತ ಮುಸ್ಲಿಮರು ಮುಸ್ಲಿಮರಿಗಾಗಿ ಇರುವ ಎಲ್ಲಾ ಸವಲತ್ತುಗಳ ಬಹುಪಾಲನ್ನು ಹೊಡೆದುಕೊಂಡು ಹೋಗುತ್ತಾರೆ ಅಷ್ಟೆ.

        ಉತ್ತರ
       • ಫೆಬ್ರ 16 2015

        “ಬಹುಸಂಖ್ಯಾತ ಮುಸಲ್ಮಾನರು ಆಡಳಿತ ವರ್ಗಕ್ಕೆ ಸೇರಿರಲಿಲ್ಲ, ಅವರೆಲ್ಲ ಒಂದು ಕಾಲದಲ್ಲಿ ದಲಿತರಾಗಿದ್ದವರು ಶ್ರೇಣೀಕೃತ ಸಮಾಜದ ವಿರುದ್ಧ ಬಂಡೆದ್ದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದವರು.”

        ಇಂತಹದ್ದೊಂದು ಅಂತ್ರೋಪಾಲಜಿಕಲ್ ಸಂಶೋಧನೆಯನ್ನು ಮಾಡಿದ ಶೆಟ್ಕರ್ ಅವರಿಗೆ ಇನ್ನೂ ‘ಒವೈಸಿ ಪ್ರಶಸ್ತಿ’ ಕೊಡದಿರುವುದು ಅನ್ಯಾಯ. ಕೋಮುವಾದಿ ಸರ್ಕಾರ ಈಗಲೇ ಇದನ್ನು ಪರಿಗಣಿಸಿ, ಇವರಿಗೆ ಇದೀಗಲೇ ಸುನ್ನತ್ ಮಾಡಿಸಿ ಈ ಪ್ರಶಸ್ತಿಯನ್ನು ಕೊಡಿಸಬೇಕಾಗಿ ನಾನು ಒತ್ತಾಯಿಸುತ್ತೇನೆ.

        ಉತ್ತರ
        • Nagshetty Shetkar
         ಫೆಬ್ರ 16 2015

         Owaisi is a good parliamentarian. He was awarded Sansad Ratna recently. How many BJP MPs are good parliamentarians please tell us. What has Yeddyurappa done in the parliament so far? Still you trash Owaisi and praise Yeddyurappa! Ask why?

         ಉತ್ತರ
     • shripad
      ಫೆಬ್ರ 15 2015

      @ ಶೆಟ್ಕರ್-“ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿ ಬೆಳೆಸಿ ಅದರ ಲಾಭವನ್ನು ಪಡೆದದ್ದು ವೈದಿಕರು” ಇದು ಜನಪ್ರಿಯ ಹೇಳಿಕೆಯೋ ಸಂಶೋಧನೆಯೋ? ಸಂಶೋಧನೆಯಾಗಿದ್ದರೆ ಅದರ ವಿವರ ಕೊಡಿ. ನಾನೂ ತಿಳಿಯಬೇಕಿದೆ. ಜನಪ್ರಿಯ ಹೇಳಿಕೆಯಾಗಿದ್ದರೆ ನಿಮ್ಮಷ್ಟಕ್ಕೆ ನೀವೇ ಬಡಬಡಿಸಿಕೊಳ್ಳಿ-ಪರವಾಗಿಲ್ಲ!

      ಉತ್ತರ
      • Nagshetty Shetkar
       ಫೆಬ್ರ 15 2015

       ಸತ್ಯ ಅಲ್ಲ ಅಂತ ನೀವು ಪ್ರೂವ್ ಮಾಡಿ ನೋಡೋಣ.

       ಉತ್ತರ
       • shripad
        ಫೆಬ್ರ 15 2015

        ಸತ್ಯ ಅಲ್ಲ- ಇದು ಪ್ರೂವ್ ಆಗಿದೆ. ಹಾಗಾಗಿಯೇ ಇಂಥ ಡಬ್ಬಾ ಹೇಳಿಕೆಗೆ ಎಲ್ಲೂ ಆಧಾರವೇ ಇಲ್ಲ!

        ಉತ್ತರ
        • ಫೆಬ್ರ 16 2015

         When you make a statement, the burden of proof lies on you Mr. Shetkar, not us. ನೀವಾಡಿದ ಅಪದ್ಧ ಸತ್ಯ ಅಂತ ಪ್ರೂವ್ ಮಾಡಬೇಕಾಗಿರುವುದು ನೀವು, ಬೇರೆಯವರಲ್ಲ.

         ಉತ್ತರ
         • Nagshetty Shetkar
          ಫೆಬ್ರ 16 2015

          angai hunnige kannade beke?

          ಉತ್ತರ
          • shripad
           ಫೆಬ್ರ 16 2015

           ಇದು ಕಣ್ಣು ಸರಿ ಇರುವವರಿಗೆ ಹೇಳಿದ ಗಾದೆ. ಕಣ್ಣು ನೆಟ್ಟಗಿಲ್ಲದವರಿಗೆ ಕನ್ನಡಿಯಲ್ಲ, ಕನ್ನಡಕ ಕೊಟ್ಟರೂ ಪ್ರಯೋಜನವಿಲ್ಲ.

 6. ani
  ಫೆಬ್ರ 16 2015

  [[ಸಹಸ್ರಾರು ವರ್ಷಗಳ ಕಾಲದಿಂದ ಶೋಷಣೆಗೆ ಒಳಗಾದ ಅವೈದಿಕ ಸಮುದಾಯಗಳ ಜನರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ತಪ್ಪೇನಲ್ಲ.]]
  ಸಹಸ್ರಾರು ವರ್ಷ ಕಳೆದರೆ ಚಿಂಪಾಂಜಿ ಗೋರಿಲ್ಲಾ ಮಂಗಗಳ ಮೆದುಳೂ ವಿಕಾಸವಾಗುತ್ತಂತೆ ವಿಜ್ಞಾನದ ಪ್ರಕಾರ. ಆದರೆ ಭಾರತದಲ್ಲಿನ ಅವೈದಿಕರ ಮೆದಳು ಮಾತ್ರ ಸಹಸ್ರಾರು ವರ್ಷಗಳಾದರೂ ವಿಕಾಸವಾಗಲೇ ಇಲ್ಲ!!!! ಯಾಕೆ ಅವರು ಮಂಗ ಚಿಂಪಾಂಜಿಗಳಿಗಿಂತ ಕಡೆಯೇ??!!! ಅವರ ಮೆದುಳು ವಿಕಾಸವನ್ನು ಮರೆತೇ ಬಿಟ್ಟಿದೆಯೇ??!! ಇದು ನಿಜಕ್ಕೂ ವಿಜ್ಞಾನದ ವಿಸ್ಮಯವೇ ಸರಿ!!!!! ಹೀಗೆ ಭಾರತದ ಅವೈದಿಕರ ಮೆದುಳಿನ ವಿಕಾಸವನ್ನೇ ತಡೆಹಿಡಿದ ಬ್ರಾಹ್ಮಣನ ಮೆದುಳಿನ ವಿಕಾಸವೆಷ್ಟಿರಬೇಕು??!! ನಿಜಕ್ಕೂ ಆತ ಮನುಷ್ಯನಲ್ಲ. ಭೂಸರನೇ ಸರಿ . ಅಥವಾ ಅವರೆಲ್ಲಾ ಭೂಮಿಯ ಮೇಲಿನ ದೇವತೆಗಳಲ್ಲಾ ಅವರುಗಳೇ ದೇವರೆಂದರೆ ನಿಜಕ್ಕೂ ತಪ್ಪಾಗದು. ಯಾಕೆಂದರೆ ಇಂಥ ಅತಿ ಮಾನುಷ ಕಾರ್ಯವನ್ನು ಅವರು ಮಾಡುತ್ತಾರೆಂದರೆ ಅವರು ದೇವರಲ್ಲದೇ ಇನ್ನೇನು?? ಭಾರತದಲ್ಲಿ ಅವರು ಇರುವದೇ 3% . ಅಂಥವರು 97% ಜನರನ್ನು ಹತ್ತಿಪ್ಪತ್ತಲ್ಲಾ ಬರೋಬ್ಬರಿ ಸಹಸ್ರಾರು ವರ್ಷ ಮರಳು ಮಾಡಿ ತಾವು ಹೇಳಿದಂತೆ ಕೇಳಿಕೊಂಡಿರುವಂತೆ ಶೋಷಣೆ ಮಾಡಿದ್ದಾರೆಂದರೆ ಅಬ್ಬಾ!! ನಿಜಕ್ಕೂ ಅವರು ದೇವರೇ ಸರಿ. ಇಲ್ಲವೆಂದರೆ ವೈದಿಕೇತರರ ತಲೆಯಲ್ಲಿ ಕುರಿಯ ಮೆದುಳು ಇರಬೇಕಷ್ಟೇ. ನಿಜವಾಗಿಯೂ ಬ್ರಾಹ್ಮಣನ ಮೆದುಳನ್ನು ಮತ್ತು ವಿಜ್ಞಾನದ ಈ ಸೋಜಿಗವನ್ನು ಪರೀಕ್ಷೆಗೆ ಒಳಪಡಿಸಲೇ ಬೇಕು. ಇನ್ನು ವೈದಿಕೇತರರಿಗೆ ಮೂರು ದಾರಿಗಳಿವೆ. ಒಂದು ಬ್ರಾಹ್ಮಣರನ್ನು ದೇವರೆಂದು ತಿಳಿದು ಅವರನ್ನು ಆರಾಧಿಸಿ(ಇಂಥ ಅದ್ಭುತ ಕಾರ್ಯಕ್ಕಾಗಿ) ಇಲ್ಲವಾದರೆ ಬ್ರಾಹ್ಮಣ ಶೋಷಣೆಯ ಮಿಥ್ಯಾವಾದಕ್ಕೆ ಸಮಾಧಿ ಮಾಡಿ. ಅಥವಾ ನಾವು ಮಂಗ ಚಿಂಪಾಂಜಿಗಿಂತಲೂ ಹಿಂದುಳಿದಿದ್ದೇವೆ ಎಂದು ಒಪ್ಪಿಕೊಳ್ಳಿ. ಚಂಡು ನಿಮ್ಮ ಅಂಗಳದಲ್ಲಿದೆ ಯಾವುದನ್ನು ಆಯ್ದುಕೊಳ್ಳುತ್ತೀರೋ ನಿಮFollಗೆ ಬಿಟ್ಟಿದ್ದು.

  ಉತ್ತರ
  • simha s n
   ಫೆಬ್ರ 16 2015
  • Nagshetty Shetkar
   ಫೆಬ್ರ 16 2015

   Brahmin == Brahmanya is not my position. I’m against Brahmanya which is seen not only in Brahmins but these days in privileged Dalits too. Brahmin associations world wide will worry about welfare of Brahmins, it’s not my concern.

   ಉತ್ತರ
   • shripad
    ಫೆಬ್ರ 16 2015

    “I’m against Brahmanya which is seen not only in Brahmins but these days in privileged Dalits too” Good Shetkar. Than Dare to name such one Dalit Brahmin!

    ಉತ್ತರ
    • Nagshetty Shetkar
     ಫೆಬ್ರ 16 2015

     ಹೆಸರು ಮುಖ್ಯವಲ್ಲ. ಮೀಸಲಾತಿಯ ಲಾಭ ಪಡೆದು ಮೇಲ್ಬಂದ ಅನೇಕ ದಲಿತರು ನವಬ್ರಾಹ್ಮಣರಾಗಿ ತಮ್ಮ ಮೂಲ ನೆಲೆಯನ್ನೇ ಮರೆತು ನಗರದ ಜೀವನದಲ್ಲಿ ವ್ಯಸ್ತರಾಗಿ ಸ್ವಹಿತಾಸಕ್ತಿ ಕಾಪಾಡಿಕೊಳ್ಳುವುದರಲ್ಲೇ ನಿರತರಾಗಿದ್ದಾರೆ. ದಲಿತರಿಗೆ ದಲಿತರು ಆಸರೆ ಆಗದಿದ್ದರೆ ಬ್ರಾಹ್ಮಣರನ್ನು ದೂರಿ ಏನು ಪ್ರಯೋಜನ ಅಂತ ನಾವೆಲ್ಲಾ ಅನೇಕ ಬಾರಿ ಮಾತಾಡಿಕೊಂಡಿದ್ದು ಇದೆ.

     ಉತ್ತರ
     • shripad
      ಫೆಬ್ರ 16 2015

      “ದಲಿತರಿಗೆ ದಲಿತರು ಆಸರೆ ಆಗದಿದ್ದರೆ ಬ್ರಾಹ್ಮಣರನ್ನು ದೂರಿ ಏನು ಪ್ರಯೋಜನ ಅಂತ ನಾವೆಲ್ಲಾ ಅನೇಕ ಬಾರಿ ಮಾತಾಡಿಕೊಂಡಿದ್ದು ಇದೆ” – ಗುಟ್ಟಾಗಿ ಮಾತಾಡಿ ಪ್ಲೀಸ್, ಯಾರಾದರೂ ಕೇಳಿಸಿಕೊಂಡುಬಿಟ್ಟಾರು! ಈ ಕಾಲದಲ್ಲಿ ಹಾಗೆಲ್ಲ ಸತ್ಯವನ್ನು ಅಷ್ಟು ದೊಡ್ಡದಾಗಿ ಹೇಳಬಾರದು!

      ಉತ್ತರ
 7. ವಿಜಯ್ ಪೈ
  ಫೆಬ್ರ 16 2015

  ಸ್ವಘೋಶಿತ ಜಾತ್ಯತೀತ ಶರಣ ಮಹಾಶಯರಿಗೆ..ಸೀಸೋಡಿಯ ಜಾತಿ ಕೂಡ ಗೊತ್ತು!. “ಕೊಡತಕ್ಕದ್ದು, ಮಾಡತಕ್ಕದ್ದು” ಎಂದು ಅಪ್ಪಣೆ ಕೊಡಿಸಿದ್ದಾರೆ ಕೂಡ!!..ಅಕಸ್ಮಾತ ಇದು ಕೇಜ್ರಿವಾಲ್ ಕಿವಿಗೆ ಮೊದಲೇ ಬಿದ್ದಿದ್ದರೆ, ಮೇದಾ ಪಾಟ್ಕರ್ ಮತ್ತು ತಮ್ಮ ಸಲುವಾಗಿ ಹೋದ ಲೋಕಸಭಾ ಚುನಾವಣೆಯಲ್ಲಿ ಇವರು ಮಾಡಿದ ಪ್ರಚಾರ ನೆನೆಸಿಕೊಂಡು/ಇವರ ಮಹಿಮೆಗೆ ಬೆಲೆ ಕೊಟ್ಟು..ಕೂಡಲೇ ಇವರು ಹೇಳಿದ್ದನ್ನು ಜಾರಿಗೆ ತರುತ್ತಿದ್ದರು.

  ಅಂದ ಹಾಗೆ ಶರಣ ಮಹಾಶಯರೆ..ಲದ್ದಿ ಬ್ಲಾಗ್ ನಲ್ಲಿ ಆಗಾಗ ಬರೆಯುವ ಒಬ್ಬರು, ಆಮ್ ಆದ್ಮಿಯವರು ದೆಹಲಿ ದಲಿತರನ್ನು ದುರುಪಯೋಗ ಮಾಡಿಕೊಂಡಿದ್ದಾರೆ, ಕಸಬರಿಗೆ ಚಿಹ್ನೆ ನೋಡಿ ದಲಿತರು ಅವರಿಗೆ ಮೂರ್ಖರಂತೆ ಮತ ಒತ್ತಿದ್ದಾರೆ. ಕೇಜ್ರಿವಾಲ್ ಮೀಸಲಾತಿ ವಿರೋಧಿ..ಇನ್ನು ಮುಂದೆ ಆಮ್ ಆದ್ಮಿಯವರು ನಿಮ್ಮ ಮುಂದೆ ಬಂದರೆ, ಅದೇ ಕಸಬರಿಗೆ ತೆಗೆದುಕೊಂಡು ಹೊಡೆಯಿರಿ. ಬ.ಸ.ಪ ಬೆಳೆಸಿ ಎಂದೆಲ್ಲ ಬೊಂಬಡ ಬಜಾಯಿಸುತ್ತಿದ್ದಾರೆ. ಒಸಿ..ಅವರಿಗೂ ಸ್ವಲ್ಪ “ಪೇಶನ್ಸು, ಪೇಶನ್ಸು” ಅಂತ ಬುದ್ಧಿ ಹೇಳಿ..ಸುಮ್ಮನೆ ಕೂಡತಕ್ಕದ್ದು ಅಂತ ಅಪ್ಪಣೆ ಮಾಡಿದ್ದರೆ ಒಳ್ಳೆಯದಿತ್ತು.

  ಉತ್ತರ
  • shripad
   ಫೆಬ್ರ 16 2015

   @ ಅನಿ ಮತ್ತು ಪೈ: ನೀವು ನಿಮ್ಮ ಅಥವಾ ಯಾರ ಬಗ್ಗೆ ಹೇಳುತ್ತೀರೋ ಅವರ ಜಾತಿಯನ್ನು ಮೊದಲು ಪ್ರಸ್ತಾಪಿಸತಕ್ಕದ್ದು (ಸಂಬಂಧ ಇರಲಿ ಬಿಡಲಿ), ಇಲ್ಲದಿದ್ದಲ್ಲಿ ನಿಮ್ಮನ್ನು ಪ್ರಗತಿಪರರು ಎನ್ನಲಾಗದು. ಹೀಗೆ ಮಾಡದಿದ್ದಲ್ಲಿ ನೀವು ಮನುವಾದಿಗಳು, ವೈದಿಕರು, ಪ್ರತಿಗಾಮಿಗಳು, ಇನ್ನೂ ಏನೇನೋ ಆಗುತ್ತೀರಿ-ನೆನಪಿರಲಿ. ಜಾತಿ ಗೊತ್ತಾಗದೇ ನಾವು ಜಾತ್ಯತೀತತೆಯನ್ನೂ ಪ್ರಗತಿಯನ್ನೂ ಸಾಧಿಸಲಾಗದು!

   ಉತ್ತರ
  • Nagshetty Shetkar
   ಫೆಬ್ರ 16 2015

   ಲಡಾಯಿ ಬ್ಲಾಗ್: ” (ಆಮ್ ಆದ್ಮಿ ಪಕ್ಷ) ಅದೊಂದು ಜಾತ್ಯತೀತ ಪಕ್ಷವಾಗಿ ಎಲ್ಲ ಜನರ ಪಕ್ಷವಾಗಿ ಹೊಮ್ಮಿರುವುದು ವಾಸ್ತವ ಸತ್ಯ. ಜಾತ್ಯತೀತ ಭಾರತದ ಉಳಿವಿನಲ್ಲಿ ಅಂದರೆ ಹಿಂದೂರಾಷ್ಟ್ರದ ಹುನ್ನಾರದ ವಿರುದ್ಧ ಹೋರಾಟದಲ್ಲಿ ಆಪ್ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ತಳ್ಳಿ ಹಾಕಲಾಗುವುದಿಲ್ಲ.”

   ಉತ್ತರ
 8. shripad
  ಫೆಬ್ರ 16 2015

  ಅಂದ ಹಾಗೆ ನಾವು ಶರಣರು, ಜಾತ್ಯತೀತರು (ಹಾಗೆ ನೋಡಿದರೆ ವಾದ, ಸಿದ್ಧಾಂತ ಇತ್ಯಾದಿ ಎಲ್ಲದರಿಂದಲೂ). ಆದರೆ ಬೇರೆಯವರ ಜಾತಿ ನೋಡಿ ಮಣೆಹಾಕುವುದು ನಮ್ಮ ಸ್ವಭಾವ. ಯಾಕೆಂದರೆ ಪ್ರಗತಿ ಸಾಧಿಸಬೇಕು ನೋಡಿ… ಅದಕ್ಕೇ. ನಮ್ಮ ದೃಷ್ಟಿಯಲ್ಲಿ ಪ್ರಗತಿಸಾಧಿಸಲು ಎಲ್ಲರಿಗೂ ಸಮಾನ ಶಿಕ್ಷಣ, ಆರೋಗ್ಯ, ಉದ್ಯೋಗ ನೀಡುವುದಕ್ಕಿಂತಲೂ ಅವರವರ ಜಾತಿ ತಿಳಿಯಬೇಕಾದುದು ಬಹಳ ಮುಖ್ಯ.ಬೇರೆ ಮಾರ್ಗವೇ ಇಲ್ಲ!

  ಉತ್ತರ
  • ವಿಜಯ್ ಪೈ
   ಫೆಬ್ರ 17 2015

   ನಮ್ಮ ಶೆಟ್ಕರ ಶರಣರು/ಅವರ ಗುರುಗಳಾದ ಹಿರಿ ಶರಣರು ಅಧಿಕಾರ ಹಂಚಿಕೆ ಮಾಡಲು ಏನೆಲ್ಲ ಮಾನದಂಡ, ಸೂತ್ರ ಅನುಸರಿಸಬೇಕು ,,ಏನನ್ನು ಮಾಡತಕ್ಕದ್ದು/ಮಾಡದಿರತಕ್ಕದ್ದು ಎಂಬ ಮಾರ್ಗದರ್ಶಿ ಸೂತ್ರ ರಚಿಸಿಕೊಟ್ಟು ಸಹಸ್ರ-ಸಹಸ್ರ ವರುಷಗಳಿಂದ ಹಿಂದುಳಿದಿರುವ ಈ ದೇಶದ ಉದ್ಧಾರಕ್ಕೆ ಕಾರಣಿಭೂತರಾಗಬೇಕು ಎಂದು ನಮೃ ವಿನಂತಿ!

   ಅಂದ ಹಾಗೆ, ನಮ್ಮ ತಿಳುವಳಿಕೆ ಹೆಚ್ಚಿಸಲು, ಮುಂದಿನ ದಿನಗಳಲ್ಲಿ “ಇವರೆಂದರೆ ಅವರು” ಎಂದು ಗುರುತಿಸಲು ಅನುಕೂಲವಾಗುವಂತೆ ಒಂದು ನಾಲ್ಕು ಬ್ರಾಹ್ಮಣ ದಲಿತರ ಹೆಸರನ್ನು ಉಲ್ಲೇಖಿಸಬೇಕು.

   ಉತ್ತರ
   • Shripad
    ಫೆಬ್ರ 18 2015

    ಇದೊಳ್ಳೆ ಚೆನ್ನಾಯ್ತಲ್ಲ! ಸರ್ಕಾರಿ ಲಾಭಪಡೆದ ದಲಿತರೆಲ್ಲ ಬ್ರಾಹ್ಮಣರಾಗಿದ್ದಾರೆ ಎಂದು ಮಾನ್ಯ ಅಭಿನವ ಚೆನ್ನಬಸವಣ್ಣನವರು ಅಲವತ್ತುಕೊಂಡಿದ್ದಾಯ್ತಲ್ಲ. ಈ ಲೆಕ್ಕ ಕೊಡಲು ಸಾಧ್ಯವಿಲ್ಲ. ಏಕೆಂದರೆ ಎಲ್ಲೂ ಆ ಲೆಕ್ಕವಿಲ್ಲ. ಇನ್ನು ಅವರೆಲ್ಲ ನವಬ್ರಾಹ್ಮಣರಾದರೆಂದು ನಮ್ಮ ಶರಣಮೂರ್ತಿಗಳಿಗೆ ವಿಷಾದವಿದೆ. ಅವರೆಲ್ಲ ಅಭಿನವ ಚೆನ್ನಬಸವಣ್ಣನವರು ಅಪ್ಪಣೆಕೊಡಿಸುವಂತೆ ಅಷ್ಟೇನೂ ಭೇದವಿಲ್ಲದ ಇಸ್ಲಾಂ ಆಗಿಯೋ ವೀರಶೈವರಾಗಿಯೋ ಬದಲಾದುದು ಕಂಡಿದ್ದರೆ ವ್ಯಥೆಗೆ ಕಾರಣವೇ ಇರುತ್ತಿರಲಿಲ್ಲವೇನೋ?

    ಉತ್ತರ
 9. ಎಂ ಎ ಶ್ರೀರಂಗ
  ಫೆಬ್ರ 18 2015

  ಶೆಟ್ಕರ್ ಅವರಿಗೆ–ನೀವು ಮಾತಾಡಿಕೊಂಡಿದ್ದು ಸರಿ. ತಮ್ಮ ವ್ಯಾಕುಲ, ಚಿಂತೆ ಅರ್ಥವಾಗುತ್ತದೆ. ಆದರೆ ಸ್ವತಂತ್ರ ಭಾರತದ ಪ್ರಜೆಗಳು ನಮ್ಮ ಸಾಂವಿಧಾನಿಕ ಕಾನೂನಿನ ಪರಿಧಿಯೊಳಗೆ ಅವರಿಗೆ ಇಷ್ಟವಾದ ಜೀವನ ಶೈಲಿಯಲ್ಲಿ ಜೀವಿಸಬಹುದಲ್ಲವೇ? “ಅದು ಸರಿಯಲ್ಲ; ನಾವು ಹೇಳಿದಂತೆ ನೀವು ಜೀವಿಸಬೇಕು” ಎಂದು ಜನಗಳನ್ನು ಬಲವಂತಪಡಿಸುವುದು ಫ್ಯಾಸಿಸಂ ಆಗುತ್ತದಲ್ಲ? ಈ ತೊಡಕನ್ನು ನಿವಾರಿಸುವುದು ಹೇಗೆ?

  ಉತ್ತರ
  • Nagshetty Shetkar
   ಫೆಬ್ರ 19 2015

   “ಶೆಟ್ಕರ್ ಅವರಿಗೆ–ನೀವು ಮಾತಾಡಿಕೊಂಡಿದ್ದು ಸರಿ. ತಮ್ಮ ವ್ಯಾಕುಲ, ಚಿಂತೆ ಅರ್ಥವಾಗುತ್ತದೆ.”

   +1

   ಉತ್ತರ
   • Shripad
    ಫೆಬ್ರ 19 2015

    @ ಶೆಟ್ಕರ್: ಒಂದು ತಾಂತ್ರಿಕ ಸಮಸ್ಯೆ ಅಭಿನವ ಚೆನ್ನಬಸವಣ್ಣನವರೇ-ನಾವೇ ನಮ್ಮ ಬಗ್ಗೆ ಕಮೆಂಟ್ ಬರೆದುಕೊಂಡು, ಅದಕ್ಕೆ ನಾವೇ ಮತ್ತೆ +೧ ಒತ್ತಿಕೊಳ್ಳುವುದು ಹೇಗೆ?

    ಉತ್ತರ
 10. ಎಂ ಎ ಶ್ರೀರಂಗ
  ಫೆಬ್ರ 20 2015

  ಶೆಟ್ಕರ್ ಅವರಿಗೆ–ನನ್ನ ಪ್ರತಿಕ್ರಿಯೆಯಲ್ಲಿ ತಮಗೆ ಬೇಕಾದ ಒಂದು ಸಾಲನ್ನು ಮಾತ್ರ (‘ನೀವು ಮಾತಾಡಿಕೊಂಡಿದ್ದು …………… ಅರ್ಥವಾಗುತ್ತದೆ’) ತಾವು ಉಲ್ಲೇಖಿಸಿ ಅದಕ್ಕೆ ತಮ್ಮ ಒಪ್ಪಿಗೆಯ ಮುದ್ರೆ ಹಾಕಿಬಿಟ್ಟರೆ ಹೇಗೆ? ನನ್ನ ಪೂರ್ತಿ ಪ್ರತಿಕ್ರಿಯೆಗೆ ಉತ್ತರಿಸಿದರೆ ಉತ್ತಮವಲ್ಲವೇ? ಪಠ್ಯವನ್ನು (text) ಸಂದರ್ಭದಿಂದ (context) ಬೇರ್ಪಡಿಸಿ ಮಾತಾಡುವುದು ತಮ್ಮಂತ ಜ್ಞಾನಿಗಳಿಗೆ ಶೋಭಿಸುವುದಿಲ್ಲ.

  ಉತ್ತರ
 11. ashok shettar
  ಫೆಬ್ರ 20 2015

  ನಾಗಶೆಟ್ಟಿ ಶೆಟ್ಕರ್ ಅವರೇ, ಅಪಾರ ಸಮಯ ವಿನಿಯೋಗಿಸಿ ಇಂದು ಈ ಡಾಟ್ ನೆಟ್ ಜಾಲಾಡಿದೆ. ವೀರ ಅಭಿಮನ್ಯುವಿನಂತೆ ತಾವು ಈ ತಾಣದಲ್ಲಿ ಸಿಗೆಬಿದ್ದು ಸೆಣಸುತ್ತಿರುವಿರಿ ಎಂಬುದು ತಿಳಿಯಿತು. ತಮಗೆ ನನ್ನ ಅಭಿನಂದನೆಗಳು ಮತ್ತು ಸಂತಾಪಗಳು. ತಮಗೆ ತಾವೇ ಪ್ಲಸ್ ಒನ್ ಕೊಟ್ಟುಕೊಳ್ಳಬೇಕಾದ ಅಗತ್ಯವಿಲ್ಲ…ಜೈ ಭಾರತ್

  ಉತ್ತರ

Trackbacks & Pingbacks

 1. ದೆಹಲಿ ಚುನಾವಣೆಯ ಫಲಿತಾಂಶ ಕುರಿತು ಫೇಸ್ಬುಕ್ಕಿನಲ್ಲಿ … | Its a beautiful life

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments