ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 20, 2015

20

ನಮಗೆ ಪೋಲಿಸರ ಮೇಲೆ ನಂಬಿಕೆಯಿದೆ; ನಿಮ್ಮ ಸರ್ಕಾರದ ಮೇಲಿಲ್ಲ ಸಿ.ಎಂ.ಸಿದ್ಧರಾಮಯ್ಯನವರೇ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

DK Ravi N Siddaramayyaಸದನದಲ್ಲಿ ತನ್ನ ಹಟಮಾರಿ ಧೋರಣೆಯನ್ನು ಬಿಡದಿದ್ದ ಸರ್ಕಾರ,ನಿನ್ನೆಯ ಸಂಪುಟ ಸಭೆಯ ನಂತರವಾದರೂ ಬುದ್ಧಿ ಕಲಿತೀತು ಎಂಬ ಸಣ್ಣದೊಂದು ಆಸೆಯಿತ್ತು. ಆದರೆ,ಸಂಪುಟ ಸಭೆ ಮುಗಿದ ನಂತರ ಗೃಹ ಸಚಿವ ಜಾರ್ಜ್ ಸಾಹೇಬರು “ಸಿಬಿಐ ತನಿಖೆಯಿಲ್ಲ” ಎಂಬ ತಮ್ಮ ಹಳೇ ರಾಗವನ್ನೇ ಹಾಡಿದ್ದರು.ಇವತ್ತು ಸಂಜೆಯ ವೇಳೆಗೆ ಸಿಬಿಐ ತನಿಖೆಗೆ ಸೋಮವಾರ ಒಪ್ಪಿಸುತ್ತಾರೆ ಎಂಬ ಸುದ್ದಿಯೇನೋ ಹರಿದಾಡುತ್ತಿದೆ.ದಕ್ಷ ಯುವ ಅಧಿಕಾರಿಯ ಅಸಹಜ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಿ ಎಂಬುದು ಕೇವಲ ವಿರೋಧ ಪಕ್ಷಗಳ ಬೇಡಿಕೆಯಲ್ಲ ಮಿ.ಸಿ.ಎಂ ಸಿದ್ದರಾಮಯ್ಯನವರೇ. ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ಡಿ.ಕೆ ರವಿಯವರ ಬಗ್ಗೆ ತಿಳಿದುಕೊಂಡಿದ್ದ ಜನ ಸಾಮಾನ್ಯರು ಸಹ ಅದೇ ಬೇಡಿಕೆಯನ್ನಿಟ್ಟಿದ್ದರು. ಆದರೆ,ಇನ್ನು ಐದು ವರ್ಷ ಸರ್ಕಾರವನ್ನು ಯಾರೂ ಏನು ಮಾಡಲಾರರು ಎಂಬ ಧೋರಣೆಯಿರಬೇಕು ನಿಮ್ಮದು. ಪ್ರಜಾಪ್ರಭುತ್ವವೆಂದರೆ, ಪ್ರಭುಗಳು ಹೇಳಿದಂತೆ ಪ್ರಜೆಗಳು ಕೇಳಬೇಕು ಎಂಬುದು ಬಹುಷಃ ನಿಮ್ಮ ನಿಲುವಾಗಿರಬೇಕು.ಇಲ್ಲವಾಗಿದ್ದರೆ ನೀವು ಇಡೀ ರಾಜ್ಯದ ಜನತೆಯ ಬೇಡಿಕೆಯನ್ನು ಹೀಗೆ ಧಿಕ್ಕರಿಸುತ್ತಿರಲಿಲ್ಲ.ನಿಮಗೆ ಮತ್ತು ನಿಮ್ಮ ಪಕ್ಷಕ್ಕೇ ಮತ ನೀಡಿದ “ಪ್ರಜೆ” ಸೋತಿದ್ದಾನೆ ಸಿದ್ದರಾಮಯ್ಯನವರೇ.ಇನ್ನು ಮುಂದೆ ದಯವಿಟ್ಟು ಪ್ರಜಾಪ್ರಭುತ್ವದ ಬಗ್ಗೆ ನಮಗೆ ಲೆಕ್ಚರ್ ಮಾಡಲು ಬರಬೇಡಿ.

ಸಿಬಿಐ ತನಿಖೆಗೊಪ್ಪಿಸಿ ಎಂದ ತಕ್ಷಣವೇ,”ನಮ್ಮ ರಾಜ್ಯದ ಪೋಲಿಸರ ಶಕ್ತಿಯ ಬಗ್ಗೆ ಅನುಮಾನವೇ? ರಾಜ್ಯ ಪೋಲಿಸರ ಮೇಲೆ ನಂಬಿಕೆಯಿಡಿ” ಎಂದೆಲ್ಲಾ ಸಿನೆಮಾ ಡೈಲಾಗ್ ಹೇಳಬೇಡಿ ಮಿಸ್ಟರ್ ಸಿ.ಎಂ.ಸಿದ್ಧರಾಮಯ್ಯನವರೇ.ನಮಗೆ ಪೋಲಿಸರ ಮೇಲೆ ನಂಬಿಕೆಯಿದೆ; ನಿಮ್ಮ ಸರ್ಕಾರದ ಮೇಲೆ ನಂಬಿಕೆಯಿಲ್ಲ.ಅಷ್ಟಕ್ಕೂ ನಿಮ್ಮ ಮೇಲೆ ನಿಮ್ಮ ಸರ್ಕಾರದ ಮೇಲೆ ನಾವು ನಂಬಿಕೆಯಿಡುವುದಾದರೂ ಹೇಗೆ ಹೇಳಿ? ಡಿ.ಕೆ ರವಿಯಂತ ದಕ್ಷ ಅಧಿಕಾರಿಗಳಿಗೆ ಮಾತ್ರ ನಿಮ್ಮ ಘನ ಸರ್ಕಾರದಲ್ಲಿ ತೊಂದರೆಗಳಾಗಿಲ್ಲ.ಆ ಪಟ್ಟಿಗೆ ಸಾಲು ಸಾಲು ಅಧಿಕಾರಿಗಳು ಸೇರಿಕೊಳ್ಳುತ್ತಾರೆ.

ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದ ತುಳಸಿ ಮದ್ದಿನೇನಿಯವರು ನಿಮ್ಮ ಸಂಪುಟದ ಸಚಿವರ ಸಹೋದರನ ಅಕ್ರಮ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಿ,ವಿಚಾರಣೆಯನ್ನೂ ಮಾಡಿ ಸತ್ಯದ ಪರ ತೀರ್ಪು ನೀಡಿ,ಅದರಲ್ಲಿ ನಿಮ್ಮ ಸಚಿವರು ವ್ಯತಿರಿಕ್ತ ತೀರ್ಪು ನೀಡುವಂತೆ ಒತ್ತಡ ಹೇರಿದ್ದನ್ನು ದಾಖಲಿಸಿದ್ದರು.ಆ ದಿಟ್ಟ ಹೆಣ್ಣುಮಗಳಿಗೆ ನಿಮ್ಮ ಘನ ಸರ್ಕಾರ ನೀಡಿದ ಉಡುಗೊರೆ ಉ.ಕನ್ನಡ ಜಿ.ಪಂ ಸಿಇಓ ಆಗಿ ಹಿಂಬಡ್ತಿ ಮತ್ತು ವರ್ಗಾವಣೆಯ ಶಿಕ್ಷೆ.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ನಡೆದಿದ್ದ ನೂರಾರು ಕೋಟಿ ಅವ್ಯವಹಾರವನ್ನು ಬಯಲಿಗೆಳೆದ ದಿಟ್ಟ ಐಎಎಸ್ ಅಧಿಕಾರಿ ವಿ.ರಶ್ಮಿ ಮಹೇಶ್ ಅವರಿಗೆ ನಿಮ್ಮ ಸರ್ಕಾರದಿಂದ ಸಿಕ್ಕ ಬಹುಮಾನವೇನು? ಆ ಹೆಣ್ಣುಮಗಳ ಮೇಲೆ ಚಪ್ಪಲಿಯಲ್ಲಿ ಹೊಡೆದು,ಹಲ್ಲೆ ಮಾಡಿದರು ದುರುಳರು.ಯಾವ ಅಧಿಕಾರಿಣಿಯ ಪಾತ್ರ ಈ ಅವ್ಯವಹಾರದಲ್ಲಿ ಇದೇ ಎಂದು ರಶ್ಮಿಯವರು ವರದಿ ನೀಡಿದರೋ ಆ ಅಧಿಕಾರಿಣಿ ಈಗಲೂ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ.ಆದರೆ ಪತ್ರಿಕಾಗೋಷ್ಟಿ ನಡೆಸಿ ಸತ್ಯವನ್ನು ಜನರ ಮುಂದಿಟ್ಟ ರಶ್ಮಿಯವರಿಗೆ ನಿಮ್ಮ ಸರ್ಕಾರ ನೋಟಿಸ್ ನೀಡಿತ್ತು.ಮೈಸೂರಿಗೆ ಬರುವುದಕ್ಕೂ ಮೊದಲು ರಶ್ಮಿಯವರು ವೈದ್ಯ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ಅಲ್ಲಿ, ಡೀಮ್ಡ್ ಹಾಗೂ ಖಾಸಗಿ ಕಾಲೇಜುಗಳ ಅಕ್ರಮವನ್ನು ಬಯಲಿಗೆಳೆಯುತಿದ್ದಂತೆ ಅವರನ್ನು ರಜೆ ಮೇಲೆ ಕಳಿಸಲಾಗಿತ್ತು.ಅಕ್ರಮ ಮಾಡಿದವರು ಓಡಾಡಿಕೊಂಡಿದ್ದಾರೆ.ಬಯಲಿಗೆಳೆದವರು ವರ್ಗಾವಣೆಯ ಶಿಕ್ಷೆ ಅನುಭವಿಸುತ್ತಿರುತ್ತಾರೆ!

ತೀರಾ ಇತ್ತೀಚೆಗೆ,ನಿಮ್ಮದೇ ತವರು ಜಿಲ್ಲೆಯ ಉಪನೋಂದಣಾಧಿಕಾರಿಯಾಗಿದ್ದ ಎಚ್.ಎಸ್ ಚಲುವರಾಜು ಭ್ರಷ್ಟ ವ್ಯವಸ್ಥೆಗೆ ಬೇಸತ್ತು ರಾಜೀನಾಮೆ ನೀಡಿದ್ದು,ಕರ್ನಾಟಕ ಭವನದ ಕಚೇರಿ ಅಧೀಕ್ಷಕ ವೆಂಕಟೇಶ ಮೂರ್ತಿಯವರ ಎತ್ತಂಗಡಿ,ಬಿಬಿಎಂಪಿ ಕಡತ ಹಗರಣವನ್ನು ಬಯಲಿಗೆಳೆದ ಪ್ರಾಮಾಣಿಕ ಲೋಕಾಯುಕ್ತ ಅಧಿಕಾರ ಮಹೇಶ್ ಅವರ ವರ್ಗಾವಣೆ.ಉಫ್! ಬರೆಯುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ ಮಿಸ್ಟರ್ ಸಿ.ಎಂ.ಪ್ರಾಮಾಣಿಕ ಅಧಿಕಾರಿಗಳೊಂದಿಗೆ ನಿಮ್ಮ ಸರ್ಕಾರ ವರ್ತಿಸುತ್ತಿರುವ ರೀತಿಗೆ ಕೆಲವೇ ಕೆಲವು ಉದಾಹರಣೆಗಳಿವು.ಇಂತ ಸರ್ಕಾರದಿಂದ ಡಿ.ಕೆ ರವಿಯವರ ಅಸಹಜ ಸಾವಿನ ಸತ್ಯ ಹೊರ ಬರುತ್ತದೆ ಎಂಬುದನ್ನು ನಾವು ನಂಬಬೇಕೇ?

ಅಷ್ಟಕ್ಕೂ ಸಿಬಿಐ ತನಿಖೆಯೇ ಬೇಕು ಎಂಬುದು ಬಿಜೆಪಿ ಮತ್ತು ಜೆಡಿಎಸ್ ಅವರು ಮಾತ್ರ ಕೇಳುತ್ತಿಲ್ಲ.ಸಾರ್ವಜನಿಕರ ಮಾತೂ ಸಹ ಅದೇ ಆಗಿದೆ.ಖುದ್ದು ರವಿಯವರ ಹೆತ್ತವರು ಕೇಳುತಿದ್ದಾರೆ. ಮಗನ ಕಳೆದುಕೊಂಡ ಆ ತಾಯಿಯ ಕಣ್ಣೀರು ನಿಮ್ಮನ್ನು ಕರಗಿಸುತ್ತಿಲ್ಲವೇ ಸಿದ್ದರಾಮಯ್ಯನವರೇ? ಬಡವರ ಮಕ್ಕಳೆಂದರೆ ನಿಮಗೆ ಅಷ್ಟೊಂದು ತಾತ್ಸಾರವೇ? ನಿಮ್ಮ ಸರ್ಕಾರದ ಮೊಂಡುತನಕ್ಕೇ ಈಗಾಗಲೇ ಐದು ದಿನಗಳು ಕಳೆದು ಹೋಗಿವೆ.ಬಹುಷಃ ಇನ್ನೊಂದೆರಡು ದಿನಗಳು ಕಳೆದ ಮೇಲೆ  ರವಿಯವರ ಶರೀರದಲ್ಲಿ ಸಿಗುವ ರಾಸಾಯನಿಕಗಳ ಸಾಕ್ಷ್ಯ ಶಾಶ್ವತವಾಗಿ ನಾಶವಾಗಿಬಿಡಬಹುದು.ಆ ನಂತರ ನೀವು ಸಾರ್ವಜನಿಕರ ದನಿಗೆ “ಗೌರವ” ಎಂಬ ಸಬೂಬು ನೀಡಿಕೊಂಡು ಸಿಬಿಐ ತನಿಖೆಗೂ ಒಪ್ಪುತ್ತೀರಿ ಎಂಬ ಸುದ್ದಿಯೂ ಇದೆ.ಆದರೆ ಜನರೇನು ಮುಗ್ಧರಲ್ಲ.ಅವರಿಗೆ ಪರದೆಯ ಹಿಂದಿನ ಆಟಗಳೆಲ್ಲ ಅರ್ಥವಾಗುತ್ತವೆ.ಜನರ ನಂಬಿಕೆ ಕಳೆದುಕೊಂಡ ಸರ್ಕಾರವೊಂದು ನೈತಿಕ ನೆಲೆಯಲ್ಲಿ ಅಧಿಕಾರದಲ್ಲಿ ಮುಂದುವರೆಯಬಾರದು.ಹಾಂ! ಅಂದ ಹಾಗೆ ನೈತಿಕತೆ ಎನ್ನುವುದು ಎಲ್ಲರಲ್ಲೂ ಇರಬೇಕೆಂದೇನಿಲ್ಲವಾದ್ದರಿಂದ ನಿಮ್ಮ ಸರ್ಕಾರ ಮುಂದುವರೆಯುತ್ತದೆ ಎಂಬುದರಲ್ಲಿ ಅನುಮಾನವೇನೂ ಇಲ್ಲ ಬಿಡಿ.

ರಾಜಕಾರಣಿಗಳಿಗೆ ಅತಿಪ್ರಿಯವಾದ “Public memory is too Short” ಎಂಬ ಮಾತನ್ನು ನಂಬಿಕೊಂಡು ನಿಮ್ಮ ಸರ್ಕಾರ ಹೀಗೆಲ್ಲ ವರ್ತಿಸುತ್ತಿರಬೇಕು.ಆದರೆ ನೆನಪಿಟ್ಟುಕೊಳ್ಳಿ “Public memory is too Short but not always sweet!”.ಈ ಕ್ಷಣಕ್ಕೆ ಅವರವರ ಖಾಸಗಿ ಬದುಕಿನ ಅನಿವಾರ್ಯತೆಗೆ ಬಿದ್ದು ಜನ ಸುಮ್ಮನಾದರೂ,ಉತ್ತರಿಸಬೇಕಾದ ಸಮಯ ಬಂದಾಗ ಉತ್ತರಿಸಿಯೇ ಉತ್ತರಿಸುತ್ತಾರೆ.ಅಲ್ಲಿಯವರೆಗೂ ಕಾದು ನೋಡಿ

ಕಡೆಯದಾಗಿ,ಇನ್ನು ಮುಂದೆ ಸಮಾಜ,ಸತ್ಯ,ನ್ಯಾಯ ಅಂತೆಲ್ಲ ಪ್ರವಾಹದ ವಿರುದ್ಧ ಈಜುವವರು,ಘಟಾನುಘಟಿಗಳ ವಿರುದ್ಧ ತೊಡೆತಟ್ಟಿ ನಿಲ್ಲುವವರು ಸಾರ್ವಜನಿಕವಾಗಿ ಹೀಗೊಂದು ಡಿಕ್ಲೇರೇಷನ್ ಮಾಡಿಬಿಡುವುದು ಒಳ್ಳೆಯದು.

“ಒಂದು ವೇಳೆ ಮುಂದೆದಾರೂ ಒಂದು ದಿನ ನಾನು ಆತ್ಮಹತ್ಯೆ ಮಾಡಿಕೊಂಡೆ ಅಂತ ಯಾರಾದರೂ ಹೇಳಿದರೆ ನಂಬಬೇಡಿ.ಹಾಗೇನಾದರೂ ಆತ್ಮಹತ್ಯೆ ಮಾಡಿಕೊಳ್ಳುವುದಾದರೇ,ಅದಕ್ಕೆ ಪ್ರೇರೇಪಣೆ ನೀಡಿದ ಕಳ್ಳರ ಹಿಂಡಿನ ಬಗ್ಗೆಯೊಂದು ಡೆತ್-ನೋಟ್ ಬರೆದೂ ಸಾಧ್ಯವಾದರೆ ಅದನ್ನು ತಲುಪಿಸಬೇಕಾದವರಿಗೆಲ್ಲ ತಲುಪಿಸಿಯೇ ಸಾಯುತ್ತೇನೆ.ಇಲ್ಲವೆಂದಾದರೆ ಅದು ಆತ್ಮಹತ್ಯೆಯಲ್ಲ,ಕೊಲೆಯೆಂದುಕೊಳ್ಳಿ”

20 ಟಿಪ್ಪಣಿಗಳು Post a comment
  1. Purushottam Bhat
    ಮಾರ್ಚ್ 20 2015

    The culprits should be brought to justice.There should not be any excuse for the perpetrators.

    ಉತ್ತರ
  2. Nagshetty Shetkar
    ಮಾರ್ಚ್ 21 2015

    Our CM is champion of human equality and dignity. Karnataka people have full faith in him. Who cares about Rakesh Shetty’s biased criticism of the one and only Siddaramaiahji.

    ಉತ್ತರ
  3. ಮಲ್ಲಪ್ಪ
    ಮಾರ್ಚ್ 21 2015

    ಶಟ್ಕರ ಅವರು ಯಾವ ನೆಲದಲ್ಲಿದ್ದಾರೆ?. ಓ ಮರೆತಿದ್ದೆವೆ ಅವರಿಗೆ ಕಣ್ಣು ಕಾಣಲ್ಲ, ಕಂಡಿದ್ದರೆ ಅವರ ಮನೆಯಲ್ಲಿ ಟಿವಿ ಖರಿದಿಸಿಲ್ಲ. ಅವರ ಟಿವಿಯಿಂದ ಇಡೀ ಕರ್ನಾಟಕದ ಜನರ ಹೋಗಲಿ ರವಿಯ ತಂದೆ ತಾಯಿಯರು ಗೋಳಿಡುತ್ತಿರುವದು ಪ್ಪಸಾರ ಬರುತ್ತಿಲ್ಲ. ಏನು ಮಾಡಿದರೆ ಅವರಿಗೆ ವರ್ತಮಾನದಲ್ಲಿ ನಡೆಯುತ್ತಿರುವದು ಗೊತ್ತಾಗುತ್ತೆ? ಗೊತ್ತಾದವರು ದಯಮಾಡಿ ತಿಳಿಸಿ

    ಉತ್ತರ
    • ಮಾರ್ಚ್ 21 2015

      In english-just for Kucheshtekar (ಕುಚೇಷ್ಟಕರ)
      He is the epitome of the so-called bankrupt intellectuals. He is either blind for the just causes or has vested interests deep hidden. u utterly lowly attitude is deplorable and despicable.
      Everyone knows of the drama,mudslinging,character assassination ploys this administration has employed.
      ಅಪಾತ್ರರಿಗೆ ಅಧಿಕಾರ,ಅನ್ಯಾಯದ ಠೇಂಕಾರ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ.ಆದರೆ ಕಣ್ಣಿದ್ದೂ ಕುರುಡರಿಗೆ,ಕುರುಡರಂತೆ ಸೋಗು ಹಾಕುವವರಿಗೆ
      ಸೋಗಲಾಡಿಗಳು ಎನನ್ಬಹುದಷ್ಟೆ.
      ಹೊಟ್ಟೆಗೆ ಇವರೇನು ತಿನ್ನುತ್ತಾರೆ?ಅನ್ನ ತಿನ್ನುವ ಬಾಯಲ್ಲ ಇವರುಗಳದ್ದು

      ಉತ್ತರ
      • Nagshetty Shetkar
        ಮಾರ್ಚ್ 21 2015

        ನಿಮ್ಮ ಬಲಪಂಥೀಯ ಧೋರಣೆಗಳನ್ನು ಒಪ್ಪದವರ ಮೇಲೆ ನೀವು ಇಷ್ಟೆಲ್ಲಾ ಕಿಡಿ ನಂಜು ಕಾರುತ್ತಿರುವುದನ್ನು ನೋಡಿದರೆ ದಿಗಿಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಾದರೂ ಮೋದಿ ಸರಕಾರದ ಮೇಲೆ ಒತ್ತಡ ಹೇರಿ ಬಲಪಂಥೀಯರ ಹೆಡೆ ಮುರಿದು ಕಟ್ಟಬೇಕು. ಸೋನಿಯಾ ಗಾಂಧಿಯವರು ಭಾರತದ ಕ್ರಿಶ್ಚಿಯನ್ನರ ಭಯಗ್ರಸ್ಥ ಬದುಕಿನ ಬಗ್ಗೆ ಒಬಾಮ ಅವರಿಗೆ ವರದಿ ಒಪ್ಪಿಸಿದ್ದು ಈ ನಿಟ್ಟಿನಲ್ಲಿ ಉತ್ತಮ ಕ್ರಮವೇ ಆಗಿದೆ.

        ಉತ್ತರ
        • ವಿಜಯ್ ಪೈ
          ಮಾರ್ಚ್ 23 2015

          ಈಗ ನಿಮ್ಮ ಅಂದರೆ ಎಡಬಿಡಂಗಿಗಳ ಭಯಗ್ರಸ್ಥ ಬದುಕಿನ ಬಗ್ಗೆ ಯಾರಿಗೆ ದೂರು ಕೊಡುವುದು ಉತ್ತಮ? ಚೀನಾದ ಶಿ ಜಿನ್ ಪಿಂಗ್ ? ಕ್ಯೂಬಾದ ಫಿಡೆಲ್ ಕಾಸ್ಟ್ರೊ ಅಥವಾ ರೌಲ್ ಕಾಸ್ಟ್ರೊ?

          ಉತ್ತರ
  4. shripad
    ಮಾರ್ಚ್ 21 2015

    ಮಾನವೀಯತೆಯ ಒಣ ಚಿಂತನೆಗಳನ್ನು ಹೊತ್ತ ನಮ್ಮ ನಡುವಿನ ಮಹಾನ್ ಶರಣರಿಗೆ ರವಿಯವರ ತಾಯಿಯ ಕರಳು ಹಿಂಡುವ ಆಕ್ರಂದನ ಏನೇನೂ ಅನಿಸುತ್ತಿಲ್ಲ. ಎಲ್ಲವನ್ನೂ ಸಂಶಯದಿಂದ ಕಾಣುವ ರಾಜಕೀಯದ ಕಣ್ಣಲ್ಲೇ ತಮ್ಮ ಎಲ್ಲ ಚಿಂತನೆಗಳನ್ನೂ ಕಟ್ಟಿಕೊಂಡವರಿಗೆ ಇದು ಅತ್ಯಂತ ಸಹಜ.

    ಉತ್ತರ
    • Nagshetty Shetkar
      ಮಾರ್ಚ್ 22 2015

      ಅಗಲಿದ ಅಧಿಕಾರಿಯ ಮೃತ್ಯುವಿನ ಕುರಿತು ನಿಷ್ಪಕ್ಷಪಾತ ತನಿಖೆ ಆಗತಕ್ಕದ್ದು, ಸಿ ಓ ಡಿ ಆಗಲಿ ಸಿ ಬಿ ಐ ಆಗಲಿ. ಹಾಗೂ ತನಿಖೆಯಲ್ಲಿ ರಾಜಕಾರಣಿಗಳು ತಲೆ ಹಾಕಕೂಡದು, ಆಡಳಿತ ಪಕ್ಷದವರಾಗಲಿ ವಿರೋಧ ಪಕ್ಷದವರಾಗಲಿ. ವೈಯಕ್ತಿಕ ಜೀವನದ ಖಾಸಗಿ ವಿಷಯಗಳನ್ನು ಚರ್ಚೆ ಮಾಡಕೂಡದು, ಮಾಧ್ಯಮಗಳಾಗಲಿ ಬ್ಲಾಗುಗಳ ಓದುಗರಾಗಲಿ.

      ಉತ್ತರ
      • ವಿಜಯ್ ಪೈ
        ಮಾರ್ಚ್ 23 2015

        [ತನಿಖೆಯಲ್ಲಿ ರಾಜಕಾರಣಿಗಳು ತಲೆ ಹಾಕಕೂಡದು]
        ತಲೆಯಷ್ಟೇ ಅಲ್ಲ..ಇಡಿ ದೇಹವನ್ನೇ ತೂರಿಸಿದ್ದು..ಇನ್ನೂ ಹನ್ನೆರಡನೆಯ ಶತಮಾನದಲ್ಲಿಯೇ ಬೀಡು ಬಿಟ್ಟ ಈ ‘ಶರಣ’ರಿಗ ಕಂಡು ಬರುತ್ತಿಲ್ಲ..ಆದ್ದರಿಂದ ಇವರ ಮಿದುಳನ್ನು ಫಾರ್ಮ್ಯಾಟ್ ಮಾಡಿ..ಈ ದಶಕದ ಹೊಸ O.S ನ್ನು ಹಾಕತಕ್ಕದ್ದು!

        ಉತ್ತರ
  5. Nagshetty Shetkar
    ಮಾರ್ಚ್ 22 2015

    “ಮಗನ ಕಳೆದುಕೊಂಡ ಆ ತಾಯಿಯ ಕಣ್ಣೀರು ನಿಮ್ಮನ್ನು ಕರಗಿಸುತ್ತಿಲ್ಲವೇ ಸಿದ್ದರಾಮಯ್ಯನವರೇ?”

    ಈ ಮಾತನ್ನು ಅಫ್ಜಲ್ ಗುರುವಿನ ತಾಯಿ ಆತನ ಪಾರ್ಥಿವ ಶರೀರವನ್ನು ನೋಡಬಯಸಿದಾಗ ನೀವು ಏಕೆ ಹೇಳಲಿಲ್ಲ? ಆ ತಾಯಿಯ ಕಣ್ಣೀರು ನಿಮ್ಮನ್ನು ಕರಗಿಸಲಿಲ್ಲವೇ?

    ಉತ್ತರ
    • ವಿಜಯ್ ಪೈ
      ಮಾರ್ಚ್ 23 2015

      ವಾವ್ ..ಏನು ಹೋಲಿಕೆ! ಅಫ್ಜಲ್ ಗುರುವಿಗೂ..ರವಿಗೂ ವ್ಯತ್ಯಾಸ ಗೊತ್ತಾಗದಿರುವರ ಕೈಯಲ್ಲಿ ಪ್ರಜೆಗಳು ಸಿಕ್ಕಿ ಹಾಕಿಕೊಂಡಿರುವುದರಿಂದಲೇ ಈ ಎಲ್ಲ ಗೋಳು!

      ಉತ್ತರ
  6. shripad
    ಮಾರ್ಚ್ 22 2015

    ಆ ಗುರುವಿಗೂ ರವಿಗೂ ಇರುವ ವ್ಯತ್ಯಾಸವೇ ತಿಳಿಯದ ನಿಮಗೆ ಹೇಳುವುದೇನು? ಡಬ್ಬಕ್ಕೂ ಮೃದಂಗಕ್ಕೂ ವ್ಯತ್ಯಾಸವಿಲ್ಲ, ಎರಡೂ ಸದ್ದು ಮಾಡುತ್ತವೆ ಎನ್ನುವ ಪೈಕಿ ನೀವು!

    ಉತ್ತರ
    • Nagshetty Shetkar
      ಮಾರ್ಚ್ 23 2015

      ಬೆಪ್ಪುತಕ್ಕಡಿಗಳಾ, ಗುರುವಿಗೂ ರವಿಗೂ ವ್ಯತ್ಯಾಸವಿಲ್ಲ ಎಂದವರು ಯಾರು? ಅವರನ್ನು ಹೆತ್ತ ಅಮ್ಮಂದಿರ ಕರುಳ ಕಣ್ಣೀರಿನಲ್ಲಿ ಏನು ವ್ಯತ್ಯಾಸ ಇದೆ ಹೇಳಿ? ಇಷ್ಟು ಸರಳ ವಿಷಯವನ್ನೂ ಅರಿಯಲಾರದ ನೀವು ಸದ್ದು ಮಾಡುತ್ತಿರುವುದು ಎಲ್ಲಿಂದ ಅಂತ ಎಲ್ಲರಿಗೂ ಗೊತ್ತಿದೆ.

      ಉತ್ತರ
      • Shripad
        ಮಾರ್ಚ್ 23 2015

        ನಿಮ್ಮ ನಂಬಿಕೆಯ ವೈಜ್ನಾನಿಕ ರೀತಿಯಂತೆ ಪರೀಕ್ಷಿಸಿದರೆ ಈ ಇಬ್ಬರು ತಾಯಂದಿರ ಕಣ್ಣೀರಲ್ಲೂ ವ್ಯತ್ಯಾಸ ಇಲ್ಲದಿರಬಹುದು- ಆದರೆ ಇಬ್ಬರ ಕಣ್ಣೀರಿನ ಬೆಲೆ ಬೇರೆ ಬೇರೆ. ನಾಗರಿಕರಿಗೆ ಇದು ಅರ್ಥವಾಗುತ್ತದೆ ಬಿಡಿ. ನಿಮ್ಮ “ಚಾಂಪಿಯನ್ ಆಫ್ ಹ್ಯುಮನ್ ಈಕ್ವಾಲಿಟಿ ಆಂಡ್ ಡಿಗ್ನಿಟಿ”ಯ ಸಿಎಂ ಅವರಿಗೆ ಕೊನೆಗೂ ಅರ್ಥವಾಗಿದೆ! ನಿಮಗೆ ಬಿಡಿ-ಅರ್ಥವಾದರೆಷ್ಟು ಬಿಟ್ಟರೆಷ್ಟು?

        ಉತ್ತರ
        • Nagshetty Shetkar
          ಮಾರ್ಚ್ 24 2015

          “ಆದರೆ ಇಬ್ಬರ ಕಣ್ಣೀರಿನ ಬೆಲೆ ಬೇರೆ ಬೇರೆ.”

          Don’t insult mothers of India by your divisive comment. Understand mothers, don’t be a Manuvadi.

          ಉತ್ತರ
          • Shripad
            ಮಾರ್ಚ್ 24 2015

            ಇಂಥ ಆದರ್ಶವನ್ನು ತಾವೇ ಮಡಿಕಳಿ. ಹೂವಿನ ಗಿಡಕ್ಕೂ ಪಾರ್ಥೇನಿಯಂಗೂ ವ್ಯತ್ಯಾಸ “ವೈಜ್ನಾನಿಕ”ವಾಗಿಯೇ ಇದೆ. ಅಂದಹಾಗೆ ನಾನು ಇಂಗ್ಲಿಷ್ ಶಾಲೆಗೆ ಹೋದವನಲ್ಲ, ಹಳ್ಳಿಯವ, ಇತ್ಯಾದಿ ಅನುಕಂಪ ಬೇಡುವಾಗ ಮಾತ್ರ ತಮಗೆ ಕನ್ನಡ ನೆನಪಾಗುತ್ತದೆ! ಆಶ್ಚರ್ಯ!! ಉಳಿದಂತೆ ನಡೆಯಲ್ಲೂ ಚಿಂತನೆಯಲ್ಲೂ ವಸಾಹತುಶಾಹಿಯ ಪಳೆಯುಳಿಕೆಯೇ ಆಗಿದ್ದೀರಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದೀರಿ. ಧನ್ಯವಾದಗಳು.

            ಉತ್ತರ
  7. ಆನಿ
    ಮಾರ್ಚ್ 22 2015

    ಎಲ್ಲಿಯ ಅಫ್ಜಲ್ ಎಲ್ಲಿಯ ರವಿ? ರವಿ ಯಂಥ ಪರಮ ಪವಿತ್ರನನ್ನು ಪಾಪಿಯ ಜೊತೆ ಹೋಲಿಸುತ್ತೀರಲ್ಲಾ ಛೇ?? ಇಂಥವರೂ ಈ ಜಗದಲ್ಲಿ ಬದುಕಿದ್ದಾರಾ??

    ಉತ್ತರ
    • shripad
      ಮಾರ್ಚ್ 22 2015
    • ವಿಜಯ್ ಪೈ
      ಮಾರ್ಚ್ 23 2015

      [ಇಂಥವರೂ ಈ ಜಗದಲ್ಲಿ ಬದುಕಿದ್ದಾರಾ??]
      ನಮ್ಮನ್ನು ಆಳುತ್ತಿದ್ದಾರೆ ಕೂಡ!!

      ಉತ್ತರ
  8. Nagshetty Shetkar
    ಮಾರ್ಚ್ 23 2015

    Afzal Guru’s mother and Ravi’s mother are no different. both mothers and as mothers they have done no crime. But you support one and not the other. Isn’t that hypocrisy? At least be sensitive to the feeling of mothers.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments