ಅಂದು “ಕೈ” ಗೆ ಜೈ ಎಂದ ಬುದ್ಧಿಜೀವಿಗಳು ಎಲ್ಲಿ ಅಡಗಿದ್ದಾರೆ?
– ರಾಕೇಶ್ ಶೆಟ್ಟಿ
“ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಸಂಪೂರ್ಣ ಬೆಂಬಲವಿದೆ.ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳವಿದೆ.ಆದರೆ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನಕ್ಕೆ ಬದ್ಧವಾಗಿ ಆಡಳಿತ ನಡೆಸುವ ಹಿನ್ನೆಲೆ ಆ ಪಕ್ಷಕ್ಕಿದೆ. ಇಂತಹ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯ.ಬಿಜೆಪಿಯ ದುರಾಡಳಿತ ಹಾಗೂ ನೈಸರ್ಗಿಕ ಸಂಪನ್ಮೂಲ ಲೂಟಿಗೆ ಬ್ರೇಕ್ ಹಾಕಿ ಕೋಮುವಾದಿ ಶಕ್ತಿಗಳ ನಿರ್ಮೂಲನೆಗೆ ಪರ್ಯಾಯವಾಗಿ ಉಳಿದಿರುವ ಶಕ್ತಿ ಕಾಂಗ್ರೆಸ್ ಮಾತ್ರ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಒಕ್ಕೊರಲ ನಿರ್ಧಾರ ಕೈಗೊಂಡಿದ್ದೇವೆ … “ ಎಂಬಂತಹ ಸಾಲುಗಳಿದ್ದ ಪತ್ರವೊಂದನ್ನು ಕಳೆದ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯ ಸಮಯದಲ್ಲಿ ಬರೆದು ದಿ.ಯು.ಆರ್. ಅನಂತ ಮೂರ್ತಿ, ಕೆ.ಮರುಳಸಿದ್ದಪ್ಪ ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್,ಮಾವಳ್ಳಿಶಂಕರ್,ಪ್ರೊ.ರವಿವರ್ಮಕುಮಾರ್ ಮುಂತಾದ ಕೆಲ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದ್ದವರು.’ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಯು.ಆರ್.ಅನಂತಮೂರ್ತಿ ಸೇರಿದಂತೆ ಕೆಲ ಸಾಹಿತಿಗಳು ಕಾಂಗ್ರೆಸ್ ಬೆಂಬಲಿಸಿದ್ದಾರೆ.ಇದಕ್ಕೆನನ್ನ ಸಹಮತವಿದೆ’ ಎಂದು ಹಿರಿಯ ಸಾಹಿತಿ ಚಂಪಾ ಅವರೂ ಹೇಳಿದ್ದರು.
ಆ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಂದು,ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರು.ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ನಂತರ,ಅಂದು ಬೆಂಬಲ ಪತ್ರದಲ್ಲಿ ಹೇಳಿದ್ದಂತೆ “ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನಕ್ಕೆ ಬದ್ಧವಾಗಿ ಆಡಳಿತವನ್ನು ಕಾಂಗ್ರೆಸ್ಸ್ ಸರ್ಕಾರ ನಡೆಸಿದೆಯಾ ಮಾನ್ಯ ಸಾಹಿತಿಗಳೇ-ಬುದ್ಧಿಜೀವಿಗಳೇ? ಬಹಳಷ್ಟು ಹಿಂದೆಯೇನು ಹೋಗುವುದು ಬೇಡ.ರಾಜ್ಯದಲ್ಲಿ ಸದ್ಯಕ್ಕೆ ನಡೆಯುತ್ತಿರು ವಿದ್ಯಾಮಾನವನ್ನೇ ತೆಗೆದುಕೊಳ್ಳೋಣ.
ದಕ್ಷ ಅಧಿಕಾರಿ ಡಿ.ಕೆ ರವಿಯವರು ಸಂಶಯಾಸ್ಪದ ರೀತಿಯಲ್ಲಿ ಸಾವನಪ್ಪಿ ಒಂದು ವಾರ ಕಳೆದಿದೆ.ಪ್ರಕರಣ ಬೆಳಕಿಗೆ ಬಂದ ತಕ್ಷಣದಿಂದಲೇ ರಾಜ್ಯಾದ್ಯಾಂತ ಪ್ರಕರಣವನ್ನು ಸಿಬಿಐಗೆವಹಿಸಬೇಕು ಎಂಬ ಆಗ್ರಹ ಕೇಳಿ ಬರಲಾರಂಭಿಸಿತು.ಆದರೆ,”ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹಾಗೂ ಸಂವಿಧಾನಕ್ಕೆ ಬದ್ಧವಾಗಿ ಆಡಳಿತ ನಡೆಸುತ್ತದೆ” ಎಂದು ನೀವು ಹೇಳಿದ ಕಾಂಗ್ರೆಸ್ಸ್ ನಡೆದುಕೊಂಡ ರೀತಿ ಎಂತದ್ದು ಬುದ್ಧಿಜೀವಿಗಳೇ? ಅವರೇನೋ ರಾಜಕಾರಣಿಗಳು ಅವರಿಗೆ ರಾಜಕೀಯವೇ ಮೊದಲು ಎಂದುಕೊಳ್ಳೋಣ.ಆದರೆ ನಿಮಗೆಲ್ಲ ಏನಾಗಿದೆ? ಉಳಿದ ಪ್ರಕರಣಗಳಲ್ಲಿ ಊರಿಗೆ ಮುಂಚೆ ಪತ್ರಿಕಾಗೋಷ್ಟಿಯನ್ನೋ ಅಥವಾ ಇನ್ಯಾವುದೋ ರೀತಿಯಲ್ಲಿ ದನಿ ಎತ್ತುತ್ತಿದ್ದ ನೀವುಗಳ ಈ ಪ್ರಕರಣದಲ್ಲಿ ಮೌನವಾಗಿರಲು ಕಾರಣವೇನು? ನೀವುಗಳು ಸಾಹಿತಿ/ಬುದ್ಧಿಜೀವಿಗಳ ವೇಷ ತೊಟ್ಟಿರುವ ರಾಜಕಾರಣಿಗಳೇ?
ಓಹೋ! ಬಹುಷಃ ನೀವು ಇದು “ಜೆಡಿಎಸ್,ಬಿಜೆಪಿ”ಯ ರಾಜಕೀಯವೆಂದೋ ಅಥವಾ ಯಾವಾಗಲೂ ನಿಮ್ಮ ಬಾಯಿಯಿಂದ ಕೇಳಿಬರುವ ನೆಚ್ಚಿನ Conspiracy Theoryಯಾದ “ಸಂಘಪರಿವಾರದ ಕೈವಾಡ” ಅಂತ ಹೇಳಿ ಸುಮ್ಮನಾಗುತ್ತಿರೇನೋ.ಆದರೆ,ಸಿಬಿಐ ತನಿಖೆಯೇ ಬೇಕು ಎಂಬುದು ಬಿಜೆಪಿ ಮತ್ತು ಜೆಡಿಎಸ್ ಅವರು ಮಾತ್ರ ಕೇಳಿರಲಿಲ್ಲ.ಸಾರ್ವಜನಿಕರ ಮಾತೂ ಸಹ ಅದೇ ಆಗಿತ್ತು.ಖುದ್ದು ರವಿಯವರ ಹೆತ್ತವರು ಕೇಳಿದ್ದರು.ಬಡತನದಲ್ಲಿಯೇ ಬೆಳೆದು ಐ.ಎ.ಎಸ್ ಅಧಿಕಾರಿಯಾದ ಹಳ್ಳಿಗಾಡಿನ ಹುಡುಗ ಡಿ.ಕೆ ರವಿ,ಮತ್ತು ಬಡತನದಲ್ಲಿಯೂ ಮಗನನ್ನು ಅಷ್ಟರ ಮಟ್ಟಿಗೆ ಓದಿಸಿ ಈಗ ಪುತ್ರನ ಅಕಾಲಿಕ ಶವದ ಎದುರು ಆ ತಾಯಿಯ ಕಣ್ಣೀರು ನಿಮ್ಮ ಸೋ-ಕಾಲ್ಡ್ ಸಂವೇದನಾಶೀಲ ಮನಸ್ಸುಗಳನ್ನು ತಟ್ಟಲಿಲ್ಲವೇ ಸಾಹಿತಿಗಳೇ? ಅದೆಂತದ್ದೋ “ಜೀವಪರ,ಮಾನವಪರ,ಸಂವೇದನಾಶೀಲ” ಇತ್ಯಾದಿ ಪದ ಬಳಸುತ್ತಿರಲ್ಲ.ಅವೆಲ್ಲ ಮೂಲೆ ಸೇರಿದವೇ?
ಬಾಯಿ ತೆಗೆದರೆ “ಪ್ರಜಾಪ್ರಭುತ್ವ,ಮೌಲ್ಯಗಳು,ಸಂವಿಧಾನ,ಬಡಜನರ ಉದ್ಧಾರ,ಭ್ರಷ್ಟಚಾರ ವಿರೋಧ” ಇತ್ಯಾದಿಗಳ ಬಗ್ಗೆ ಪುಂಖಾನುಪುಂಖವಾಗಿ ಭಾಷಣ,ಬರಹಗಳನ್ನು ತೇಲಿಬಿಡುವ ನಿಮಗೆ ಈಗ ಬಡವರ ಮಕ್ಕಳೆಂದರೆ ಅಷ್ಟೊಂದು ತಾತ್ಸಾರವೇ? ಈ ಹಿಂದೆ ಬಹುತೇಕ ಜನರು ಊಹಿಸಿದಂತೆ ಒಂದು ವಾರಗಳನ್ನು ದೂಡಿ ಇಂದು ಸದನದಲ್ಲಿ ಈ ಸರ್ಕಾರ, ಸಾರ್ವಜನಿಕರ ದನಿಗೆ “ಗೌರವ” ಎಂಬ ಸಬೂಬು ನೀಡಿಕೊಂಡು ಸಿಬಿಐ ತನಿಖೆಗೆ ಒಪ್ಪಿದೆ.ಬಹುಷಃ ಈಗ ನೀವುಗಳು ನಿಮ್ಮ ಅಡಗುತಾಣಗಳಿಂದ ಹೊರಬಂದು,ಸರ್ಕಾರ ಈ ನಿರ್ಣಯವನ್ನು ಸ್ವಾಗತಿಸಿ “ಪ್ರಜಾಪ್ರಭುತ್ವಕ್ಕೆ ಜಯವಾಗಲಿ” ಎಂದು ಘೋಷಿಸುತ್ತಿರೇನೋ! ಆದರೆ,ರಾಜಕಾರಣಿಗಳನ್ನೂ ನಾಚಿಸುವಂತ ನಿಮ್ಮ ಈ ನಡೆಗಳು ನಮ್ಮ ಜನರಿಗೆ ಅದರಲ್ಲೂ ಯುವಜನರಿಗೆ ಅರ್ಥವಾಗುವುದಿಲ್ಲ ಎಂದುಕೊಂಡಿದ್ದೀರಾ?
ಬುದ್ದಿಜೀವಿಗಳೂ ಜ್ಞಾನಿಗಳೂ ಆದ ನೀವು ಒಂದೊಮ್ಮೆ ಸಿಬಿಐ ತನಿಖೆ ಕೋಮುವಾದಿಗಳ ನಿಯಂತ್ರಣದಲ್ಲಿ ನಡೆಯುತ್ತದೆ ಎನ್ನುವ ಭೀತಿಯಲ್ಲಿದ್ದಿರಬಹುದು! ಆದರೆ ನಿಮ್ಮ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯುವ ಘನ ಸರ್ಕಾರದ ಮು.ಮ. ಮತ್ತು ಗೃಹಸಚಿವರು ತನೆಖೆಗೆ ಮೊದಲೇ ಆಧಾರಗಳಿಲ್ಲದೆ ತನಿಖೆಯ ಮೇಲೆ ಪ್ರಭಾವ ಭೀರುವಂತಹ ಹೇಳಿಕೆಗಳನ್ನು ನೀಡಿದ್ದನ್ನು ಹೇಗೆ ಸಮರ್ಥಿಸುತ್ತೀರಿ? ಮಾಧ್ಯಮಗಳಿಗೆ ಮುಖ್ಯಮಂತ್ರಿಗಳೇ ತನಿಖಾ ಹಂತದ ಮಾಹಿತಿಗಳನ್ನು ಸೋರಿಕೆ ಮಾಡಿದ್ದನ್ನು ಮತ್ತು ಹೆಣ್ಣುಮಗಳೊಬ್ಬಳನ್ನು ಪದೇ ಪದೇ ಗಂಟುಹಾಕಿ ಅದೇ ಸತ್ಯವೆಂದು ಎಲ್ಲರೂ ನಂಬುವಂತೆ ತನಿಖಾಧಿಕಾರಿಗಳ ಕೆಲಸವನ್ನು ತಾವೇ ತೀರ್ಮಾನಿಸಿದ್ದನ್ನು ಯಾವ ನೈತಿಕ ಮತ್ತು ನ್ಯಾಯಬದ್ದ ಮಾರ್ಗವೆಂದು ನೀವು ಸಮರ್ಥಿಸುತ್ತೀರಿ?
ಸರ್ಕಾರವೇನೋ ಈಗಾಗಲೇ ಜನರ ನಂಬಿಕೆ ಕಳೆದುಕೊಂಡಿದೆ.ಹಾಗೆಯೇ ಈ ರೀತಿ ಅವಕಾಶವಾದ ಮಾಡುವ ಕೆಲವು ಸಾಹಿತಿಗಳು/ಬುದ್ಧಿಜೀವಿಗಳ ಮೇಲೂ ಜನರಿಗೆ ನಂಬಿಕೆ ಉಳಿದಿಲ್ಲ.ಜನರ ನಂಬಿಕೆ ಕಳೆದುಕೊಂಡ ಸರ್ಕಾರವೊಂದು ನೈತಿಕ ನೆಲೆಯಲ್ಲಿ ಅಧಿಕಾರದಲ್ಲಿ ಮುಂದುವರೆಯಬಾರದು.ಹಾಂ! ಅಂದ ಹಾಗೆ ನೈತಿಕತೆ ಎನ್ನುವುದು ಎಲ್ಲರಲ್ಲೂ ಇರಬೇಕೆಂದೇನಿಲ್ಲವಾದ್ದರಿಂದ ಸರ್ಕಾರ ಮುಂದುವರೆಯುತ್ತದೆ ಹಾಗೂ ನೀವುಗಳೂ ಸಹ ಅದೇ ಹಾದಿ ಹಿಡೀಯುತ್ತೀರಿ ಎಂಬುದರಲ್ಲಿ ಅನುಮಾನವೇನೂ ಇಲ್ಲ ಬಿಡಿ.
ಕಳೆದ ವಿಧಾನಸಭೆಯ ಚುನಾವಣ ಪ್ರಚಾರವೊಂದರಲ್ಲಿ “ಬಿಜೆಪಿ ಸರಕಾರ ಭ್ರಷ್ಟಚಾರದ ಪಾಪದ ಕೂಪವನ್ನು ತುಂಬಿಸಿದೆ. ಯಡಿಯೂರಪ್ಪನಿಂದ ಹಿಡಿದು ಜಗದೀಶ್ ಶೆಟ್ಟರ್ ತನಕ ಅಧಿಕಾರ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗಳು ಸ್ಥಾನ ದುರುಪಯೋಗಪಡಿಸಿಕೊಂಡರು. ಆದ್ದರಿಂದ ಈಗ ರಾಜ್ಯಕ್ಕೆ ಬೇಕಿರುವುದು ಭ್ರಷ್ಟಚಾರ ರಹಿತ, ಸ್ಥಿರ, ಸುಭದ್ರ ಹಾಗೂ ಪ್ರಾಮಾಣಿಕ ನಾಯಕತ್ವ ನೀಡುವಂತ ಪಕ್ಷ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ರಾಜ್ಯದ ಜನತೆ ತೀರ್ಮಾನಿಸಿದ್ದಾರೆ” ಎಂದು ನುಡಿದಿದ್ದ ಸಿದ್ದರಾಮಯ್ಯನವರ ಸರ್ಕಾರದ ಪಾಪದ ಕೊಡವೇನೂ ತೂತಾಗಿದೆಯೇ? ಅಥವಾ ಐಡಿಯಾಲಜಿಯೆಂದ ಧೃತರಾಷ್ಟ್ರ ಪೇಮದಿಂದ ನಿಮ್ಮ ಕಣ್ಣುಗಳಿಗೆ ಮಂಕು ಕವಿದಿದೆಯೇ ಬುದ್ಧಿಜೀವಿಗಳೇ?
ಇನ್ನಾದರೂ ಬಾಯಿ ತೆರೆಯಿರಿ ಮಾನ್ಯ ಸಾಹಿತಿಗಳೇ/ಬುದ್ಧಿಜೀವಿಗಳೇ.ಇಲ್ಲವಾದರೆ ಜನರು ಇನ್ಮುಂದೆ ರಾಜಕಾರಣಿಗಳನ್ನಾದರೂ ನಂಬಬಲ್ಲರು.ಆದರೆ ನಿಮ್ಮನ್ನೂ ನಂಬುವುದೂ ಇಲ್ಲ,ಕ್ಷಮಿಸುವುದೂ ಇಲ್ಲ.
ಮತ್ತೆ ಅದೇ ರಾಗ. ‘ಬುದ್ದಿ ಜೀವಿಗಳು’ ಏನು ಮಾಡ್ಲಿಲ್ಲ, ಏನೋ ಮಾಡ್ಲಿಲ್ಲ,… ಈ ವ್ಯರ್ಥ ಪ್ರಲಾಪವನ್ನು ಬಿಟ್ಟು ಮಾಡಲು ಒಂದಷ್ಟು ಸಕಾರಾತ್ಮಕ ಕೆಲಸಗಳನ್ನು ಹುಡುಕಿಕೊಳ್ಳುವುದು ಎಲ್ಲರಿಗೂ ಒಳಿತು. ಬೆರಳುಗಳನ್ನು ನಿಮ್ಮ ಮೇಲೂ ಎತ್ತಬಹುದು ಎನ್ನುವುದನ್ನು ಮರೆಯಬಾರದು: ಫೇಸ್ಬುಕ್ ನಲ್ಲಿ ಬುದ್ದಿ ಜೀವಿಗಳಲ್ಲದ ನೀವು ಅಷ್ಟೆಲ್ಲಾ ಕೂಗಾಡಿ ಕಡೆಗೆ ಸಾಧಿಸಿದ್ದು ಏನು? ಒಂದಷ್ಟು ಜನರಿಗೆ ಅವರ ವಯುಕ್ತಿಕ ವಿಚಾರಗಳನ್ನು ತೆಗೆದು ಕೊಂಡು ಬಯಿದಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ.
ನಿಮ್ಮ ಸಮಸ್ಯೆಯೇನು? ಬುದ್ಧಿಜೀವಿಗಳನ್ನು ಯಾರೂ ಪ್ರಶ್ನೆ ಮಾಡಬಾರದು ಎಂಬುದೇ? ಅಥವಾ ನಾನು ಪ್ರಶ್ನೆ ಮಾಡಬಾರದು ಎಂಬುದೇ?
ನಾವೆಲ್ಲೂ ನಮ್ಮನ್ನು ಪ್ರಶ್ನಾತೀತರು ಅಂತ ಹೇಳಿಕೊಂಡಿದ್ದೇವೇನ್ರಿ? ಪ್ರಶ್ನೆ ಮಾಡುವವರು ಮಾಡಲಿ ಬೇಡ ಎಂದಿದ್ದು ಯಾರು? ಇನ್ನು ಫೇಸ್ಬುಕ್ಕಿನಲ್ಲಿ ಕೂಗಾಡುವವರು ಏನೇನು ಕಡೆದು ಕಟ್ಟೆ ಹಾಕಿದ್ದಾರೆ ಎನ್ನುವುದು ಬಲ್ಲವರಿಗಷ್ಟೇ ಗೊತ್ತು.ನಮ್ಮ ಫೇಸ್ಬುಕ್ ಜನರು ಐಡಿಯಾಲಜಿಗಳನ್ನು ವ್ಯಾಪಾರ ಮಾಡಿಕೊಂಡು ಬದುಕುವ ಪೈಕಿಯಲ್ಲ.
Supreme court order says it all.
ಯಾವಾಗ ನೋಡಿದರೂ ಪ್ರಗತಿಪರರನ್ನು ಲೇವಡಿ ಮಾಡುವುದು, ನಿಂದಿಸುವುದು ಇದನ್ನೇ ಮಾಡುತ್ತಾ ಬಂದಿರುವವರು ಈಗ ಬುದ್ಧಿಜೀವಿಗಳ ಬಗ್ಗೆ ತಕರಾರು ತೆಗೆದರೆ ಅದಕ್ಕೇನು ಬೆಲೆ ಇದೆ? ಪ್ರಗತಿಪರರು ಏನು ಮಾಡಬೇಕು ಅಂತ ಬೋಧನೆ ಮಾಡಲು ನೀವು ಯಾರು? ಪ್ರಗತಿಪರ ತತ್ವಗಳಿಗೆ ಬದ್ಧರಾಗಿ, ಆಮೇಲೆ ತಕರಾರು ಎತ್ತಿ.
“ಪ್ರಗತಿಪರ ತತ್ವಗಳು” ಅಂದರೆ ಯಾವುದು ಶೆಟ್ಕರ್ ಅವರೇ? ವಿವರಿಸಿ
Read Darga Sir’s writings. I don’t have to write again what is progressive means.
ಸುಮ್ಮನೇ ಲೆಕ್ಚರ್ ಕೊಡಬೇಡಿ.ಅದೇನದು “ಪ್ರಗತಿಪರ ತತ್ವ” ಅದನ್ನು ವಿವರಿಸಿ
ರಾಕೇಶ್ ಶೆಟ್ಟಿ ಅವರೇ,
ಪ್ರಗತಿಪರರು ಎಂದರೆ
1. ಬ್ರಾಹ್ಮಣರ ಶ್ರೇಷ್ಠತೆಯನ್ನು ನಿರಾಕರಿಸುವವರು.
2. ಬ್ರಾಹ್ಮಣ ಅಥವಾ ಹಿಂದೂ ಗುರುಗಳಿಂದ ಮಂತ್ರ ಸ್ವೀಕರಿಸದವರು.
3. ವೇದಗಳ ಶ್ರೇಷ್ಠತೆಯನ್ನು ನಿರಾಕರಿಸುವವರು.
4. ಪ್ರಮುಖ ಹಿಂದೂ ದೇವತೆಗಳನ್ನು ಪೂಜೆ ಮಾಡದವರು.
5. ಕಟ್ಟಾ ಬ್ರಾಹ್ಮಣರಿಂದ ಸೇವೆ ಪಡೆಯದವರು.
6. ಬ್ರಾಹ್ಮಣ ಪೂಜಾರಿಗಳನ್ನೇ ಹೊಂದದವರು.
7. ವೈದಿಕ ದೇವಾಲಯಕ್ಕೆ ಪ್ರವೇಶ ಮಾಡದವರು.
8. ಕೇವಲ ಸ್ಪರ್ಶದಿಂದ ಮಾಲಿನ್ಯ ಆಗುತ್ತದೆ ಎಂಬ ನಂಬಿಕೆ ಇಲ್ಲದವರು.
9. ಸತ್ತವರನ್ನು ಹೂಳುವವರು.
10. ಗೋವನ್ನು ಪೂಜಿಸದವರು ಮತ್ತು ಗೋಮಾಂಸ ತಿನ್ನುವವರು.
ಇಷ್ಟು ಸಾಕಲ್ಲವೇ?
೧. ಬ್ರಾಹ್ಮಣರ ಶ್ರೇಷ್ಠತೆಯನ್ನು ನಿರಾಕರಿಸುವವರು: ಆದರೆ ಶ್ರೇಷ್ಠತೆ ಎಂದರೆ ಏನು? (ಇದುವರೆಗೂ ತಾವು ಮಾಡಿರುವ ಕಮೆಂಟ್ ಗಳ ಆಧಾರದ ಮೇಲೆ ನನಗನ್ನಿಸುವುದು ತಮಗೆ ದೊರಕಿರುವ ಜ್ಞಾನದ ಮಿತಿಯನ್ನು ಮೀರಿದ ವಿಷಯ ಇದು..ತಾವು ಚರ್ಚೆ ಮಾಡದಿರುವುದು ಉತ್ತಮ ಎಂದು ನನ್ನ ಭಾವನೆ) ತಮ್ಮ ತಮ್ಮ ಆಯ್ಕೆಯ ವಿಷಯದಲ್ಲಿ ಶ್ರೇಷ್ಠರಾದ ಬ್ರಾಹ್ಮಣರು ಇಲ್ಲ ಎಂದು ನಾಶೆಶೇ ಅಭಿಪ್ರಾಯವೇ?
೨. ಗುರು ಯಾವಜಾತಿಯವನು ಎನ್ನುವುದನ್ನು ಮಂತ್ರ ಸ್ವೀಕರಿಸುವವನು ನೋಡುವುದಿಲ್ಲ. ಬದಲಿಗೆ ಆ ಮಂತ್ರದಿಂದ ತನಗೆ ಮುಕ್ತಿ ದೊರಕುವುದೇ ಎಂದು ನೋಡುತ್ತಾನೆ. ಬ್ರಾಹ್ಮಣ ಅಥವಾ ಹಿಂದೂ ಜಾತಿಯಲ್ಲಿ ಗುರುವಾಗುವ ಯೋಗ್ಯತೆ ಇರುವವನು ಇಲ್ಲ ಎನ್ನುವುದು ಕೂಡಾ ಕೇವಲ ಪೂರ್ವಾಗ್ರಹ ಪೀಡಿತ ಮನಸ್ಸಿನ ಲಕ್ಷಣ.
೩. ವೇದಗಳ ಶ್ರೇಷ್ಠತೆಯನ್ನು ನಿರಾಕರಿಸಲು ಅದರಲ್ಲೇನಿದೆ ಎನ್ನುವ ಜ್ಞಾನ ಇರಬೇಕು. ಇಲ್ಲದಿದ್ದರೆ ಅದು ಕೇವಲ ಟೊಳ್ಳುವಾದವಾಗುತ್ತದೆ.
೪. ಪ್ರಮುಖ ಹಿಂದೂ ದೇವತೆಗಳನ್ನು ಪೂಜಿಸದಿರಲು ಅನುಭವಮಂಟಪದ, ಬಸವಣ್ಣನವರ ಕಾಲದ ಶರಣರಿಗೆ ಹೇಳಬೇಕಿತ್ತು! ಪಾಪ ಶಿವನನ್ನು ಪೂಜಿಸಿಬಿಟ್ಟರಲ್ಲ ಅವರು!
೫. ಕಟ್ಟಾ ಬ್ರಾಹ್ಮಣರಿಂದ ಏನು ಸೇವೆ ನಿಮಗೆ ಬೇಕಿದೆ?
೬. ಬ್ರಾಹ್ಮಣ ಪೂಜಾರಿಗಳನ್ನು ಹೊಂದದೆ ಇರಲು ಅವರು ಮಾಡುವ ಎಲ್ಲ ಕೆಲಸಗಳನ್ನೂ ನೀವು ಮಾಡಬೇಕಲ್ಲ! ನಿಮಗೆ ಬರುವುದಿಲ್ಲವಾದ್ದರಿಂದ ಬ್ರಾಹ್ಮಣ ಪೂಜಾರಿಗಳನ್ನು ಅವಲಂಬಿಸುತ್ತೀರಿ!
೭. ವೈದಿಕ ದೇವಾಲಯಕ್ಕೆ ಪ್ರವೇಶ ಮಾಡದಿದ್ದರೆ, ದೇವರು ಅಲ್ಲಿ ಮಾತ್ರ ಇರುವುದು ಎನ್ನುವ ನಂಬಿಕೆಗೆ ನೀವು ಬದ್ಧರಾಗುತ್ತೀರಿ.
೮. ಕೇವಲ ಸ್ಪರ್ಶದಿಂದ ಮಾಲಿನ್ಯ ಆಗುತ್ತದೆ ಎಂಬ ನಂಬಿಕೆ ಇಲ್ಲದಿದ್ದರೆ ಸಂತೋಷ! ಆಸ್ಪತ್ರೆಯಲ್ಲಿ ಡಾಕ್ಟರುಗಳಿಗೆ ಕೈಗವಸು ಹಾಕಿಕೊಳ್ಳದೆ ಪರೀಕ್ಷೆ ಮಾಡಲು ಹೇಳಿ ನೋಡಿ!
೯. ಸತ್ತವರನ್ನು ಹೂಳುತ್ತಾ ಹೋದರೆ ಒಂದು ದಿನ ಇಡೀ ಜಗತ್ತು ಸ್ಮಶಾನವಾಗುತ್ತದೆ.
೧೦. ಗೋವನ್ನು ಪೂಜಿಸದಿದ್ದರೆ ಸಂತೋಷ! ಆದರೆ ಪೂಜಿಸುವವರಿಂದ ಆ ಹಕ್ಕನ್ನು ಕಿತ್ತುಕೊಳ್ಳುವ ಕೆತ್ತೇಬಜೆ ಅಧಿಕಾರವನ್ನು ನಿಮಗೆ ಕೊಟ್ಟವರ್ಯಾರು? ಗೋಮಾಂಸ ತಿನ್ನುವುದಾದರೆ ತಿನ್ನಿ..ಅಡ್ಡಿಯಿಲ್ಲ. ಆದರೆ ಗೋವುಗಳನ್ನು ಆಹಾರಕ್ಕಾಗಿ ತಿನ್ನುತ್ತಾ ಹೋದರೆ ಒಂದು ದಿನ ಅದರ ಸಂತತಿಯೇ ದೇಶದಿಂದ ಕಣ್ಮರೆಯಾದೀತು! ನೆನಪಿರಲಿ!
+1
“ವೇದಗಳ ಶ್ರೇಷ್ಠತೆಯನ್ನು ನಿರಾಕರಿಸಲು ಅದರಲ್ಲೇನಿದೆ ಎನ್ನುವ ಜ್ಞಾನ ಇರಬೇಕು.”
Then by same argument you accept supremacy of Qur’an?
1911 ರ ಜನಗಣತಿ ಸಂದರ್ಭದಲ್ಲಿ ಬ್ರಿಟೀಷರು ಅಸ್ಪೃಶ್ಯರೆಂದರೆ ಯಾರು ಎಂದು ಗುರುತಿಸೋಕೆ ಈ ಹತ್ತು ಮಾನದಂಡಗಳನ್ನು ಗುರುತಿಸುತ್ತಾರೆ ಅಂತ ಅಂಬೇಡ್ಕರರೇ ತಮ್ಮ ಬರವಣಿಗೆಯಲ್ಲಿ ಉಲ್ಲೇಖಿಸುತ್ತಾರೆ:
1. ಬ್ರಾಹ್ಮಣರ ಶ್ರೇಷ್ಠತೆಯನ್ನು ನಿರಾಕರಿಸುವವರು. 2. ಬ್ರಾಹ್ಮಣ ಅಥವಾ ಹಿಂದೂ ಗುರುಗಳಿಂದ ಮಂತ್ರ ಸ್ವೀಕರಿಸದವರು. 3. ವೇದಗಳ ಪ್ರಾಮಣ್ಯವನ್ನು ನಿರಾಕರಿಸುವವರು. 4. ಹಿಂದೂ ದೇವತೆಗಳನ್ನು ಪೂಜೆ ಮಾಡದವರು. 5. ಕಟ್ಟಾ ಬ್ರಾಹ್ಮಣರಿಂದ ಸೇವೆ ಪಡೆಯದಿದ್ದವರು. 6. ಬ್ರಾಹ್ಮಣ ಪೂಜಾರಿಗಳನ್ನೇ ಹೊಂದದಿದ್ದವರು 7. ಸಾಮಾನ್ಯ ಹಿಂದೂ ದೇವಾಲಯಕ್ಕೆ ಪ್ರವೇಶ ಇಲ್ಲದವರು. 8. ಮಾಲಿನ್ಯ ಉಂಟುಮಾಡುವವರು. 9. ಸತ್ತವರನ್ನು ಹೂಳುವವರು. 10. ಗೋವನ್ನು ಪೂಜಿಸದವರು ಮತ್ತು ಗೋಮಾಂಸ ತಿನ್ನುವವರು. (ಅಂಬೇಡ್ಕರ್, ಸಂ 5. 2010: ಪು.8)
ಅಂದ್ರೆ ಬ್ರಿಟಿಷರು ಅಸ್ಪೃಶ್ಯರನ್ನು ಗುರುತಿಸಲು ಬಳಸಿದ ಮಾನದಂಡಗಳನ್ನು,ಪ್ರಗತಿಪರರನ್ನು ಗುರುತಿಸುವ ಮಾನದಂಡಗಳೆಂದು ಹೇಳ್ತಿದೀರಾ ಶೆಟ್ಕರ್ ಸಾಹೇಬರೆ? 1911ರ ನಂತರದ ಈ 114 ವರ್ಷಗಳಲ್ಲಿ ಪ್ರಗತಿಪರರ ಚಿಂತನಾವಿಧಾನ ಯಾವ “ಪ್ರಗತಿ”ಯನ್ನೂ ಕಾಣಲಿಲ್ಲವೇ? ನಿಮ್ಮ ವಾದದ ಪ್ರಕಾರ “ಪ್ರಗತಿಪರರು=ಅಸ್ಪೃಶ್ಯರು” ಅಂತಾಗುತ್ತದಲ್ಲವೇ?
ಹಿಂದೂ ಧರ್ಮವು ಯಾವ ಸಮುದಾಯವನ್ನು ‘ಅಸ್ಪೃಶ್ಯ’ ಎಂದು ತೀರ್ಮಾನಿಸಿ ಅವರ ಶೋಷಣೆ ನಡೆಸಿತ್ತೋ, ಆ ಸಮುದಾಯವು ನಿಜವಾದ ಅರ್ಥದಲ್ಲಿ ಪ್ರಗತಿಪರ ಸಮುದಾಯವೇ ಆಗಿದೆ. ಹಿಂದೂಗಳಿಗಿಂತ ‘ಅಸ್ಪೃಶ್ಯ’ರು ಯಾವ ಯಾವ ರೀತಿಗಳಲ್ಲಿ ಭಿನ್ನ ಅಂತ ಆಂಗ್ಲರು ಗುರುತಿಸಿದರೋ, ಆ ಅಂಶಗಳೇ ಪ್ರಗತಿಪರತೆಯ ಸಾರವನ್ನು ಹಿಡಿದಿವೆ.
ನಮ್ಮಂತ ಸಾಮಾನ್ಯರಿಗೂ ಅರ್ಥವಾಗುವಂತೆ ಮಾತನಾಡಿ ಶೆಟ್ಕರ್ ಸಾಹೇಬರೆ.ಈಗ ನೀವು ಹೇಳುತ್ತಿರುವುದೇನು? ಪ್ರಗತಿಪರರ ಇನ್ನೊಂದು ಹೆಸರು ಅಸ್ಪೃಶ್ಯರು ಅಂತಲೇ?
ನಾಟಕ ನಿಲ್ಲಸಿ ರಾಕೇಶ್, ಇದು ಟೀವಿ ನ್ಯೂಸ್ ಚಾನಲ್ ಅಲ್ಲ, ಮುಗ್ಧತೆಯ ನಾಟಕ ನಡೆಯೋಲ್ಲ ಇಲ್ಲ.
ಉತ್ತರ ಕೊಡಲಾಗದ ಪ್ರಶ್ನೆ ಕೇಳಿದರೆ ಸಿಟ್ಟು ಸಹಜವಾದದ್ದೇ ಬಿಡಿ ಶೆಟ್ಕರ್
ರಾಕೇಶ್..
ಬೇಸಿಗೆ ಕಾಲ. ಪಾಪ..ಬಿಸಿ ಮಾಡಬೇಡಿ. ಉ,ಕ ನಲ್ಲಿ ಸೆಖೆ ಜಾಸ್ತಿ. ನನಗೆ ಆಶ್ಚರ್ಯ ಏನೆಂದರೆ, ಸಾಹೇಬರು ತಮ್ಮ 10 commandments ಲ್ಲಿ ಏಕದೇವೋಪಾಸನೆ ಯನ್ನು ಏಕೆ ಸೇರಿಸಲಿಲ್ಲ ಅಂತ. ಮರೆತು ಬಿಟ್ಟರೊ ಹೇಗೆ? ಅಥವಾ ಎಂದಿನ ಕಾಪಿ-ಪೇಸ್ಟ್ ಅಭ್ಯಾಸದಿಂದ ಹೀಗಾಯಿತೊ?
ಹಿಂದೂಗಳಿಗಿಂತ ‘ಅಸ್ಪೃಶ್ಯ’ರು ಯಾವ ಯಾವ ರೀತಿಗಳಲ್ಲಿ ಭಿನ್ನ ಅಂತ ಆಂಗ್ಲರು ಗುರುತಿಸಿದರೋ, ಆ ಅಂಶಗಳೇ ಪ್ರಗತಿಪರತೆಯ ಸಾರವನ್ನು ಹಿಡಿದಿವೆ.
ಶೆಟ್ಕರ್ ಅವರೇ,
ಹಿಂದೂಗಳಿಗಿಂತ ‘ಅಸ್ಪೃಶ್ಯ’ರು ಭಿನ್ನವಾಗುವುದು ಅಂದರೇನರ್ಥ?? “ಹಿಂದೂ”ಗಳು ಅಂತ ಬೇರೆ ಇದ್ದಾರೋ? ಅಷ್ಟಕ್ಕೂ,ನಿಮ್ಮ ಪ್ರಕಾರ “ಹಿಂದೂ” ಎಂದರೇನು?
ಶೆಟ್ಕರ್ ಸಾಹೇಬ್ರೇ ನೀವು ಪ್ರಗತಿಪರರೋ ಶರಣರೋ?
ನಾವು ಯಾರು? ಎಂದರೆ ತರ್ಕಬದ್ಧವಾಗಿ ಪ್ರಶ್ನೆಗಳನ್ನು ಕೇಳುವವರು. ಮಾತಿಗೂ,ಕೃತಿಗೂ ಆದಷ್ಟು ಚ್ಯುತಿ ಬರದಂತೆ ನಡೆಯುವ ಸಂಕಲ್ಪ ಇರುವವರು.
ಹಾಗೆ ನಡೆಯದೆ ಬಾಲಬಡುಕರಾದವರ ಕಿವಿ ಕುಯ್ಯುವವರು. ಸ್ವಾರ್ಥಪರತೆ ಇದ್ದರೂ ಜೀವಪರತೆ ಎನ್ನುವ ಮುಖವಾಡ ಧರಿಸಿದ ಗೋಮುಖವ್ಾಘ್ರ ಗಳ ಬಣ್ಣ ಬಯಲಿಗೆಳೆಯುವವರು.
ಮಟ್ಟ್ುವಿನ ಮುಖಕ್ಕೆ ಅವನೇ ಮಸಿ ಬಳಿದುಕೊಳ್ಳುವ ಥರ ಮಾಡುವವರು
ಕರ್ನಾಟಕವನ್ನು ಲಂಕೆಯ ರೀತಿ ಮಾಡುತ್ತ ಬೇಳೆ ಬೇಸಿಕೊಳ್ಳುವ ರಾವಣ ಸಂತತಿಯ ಪಾಪಕರ್ಮಗಳನ್ನು ಅನಾವರಣ ಮಾಡುವವರು.
ಕುಚೇಷ್ಟಗೆ,ವಿತಂಡವಾದಕ್ಕೆ ಸರಿಯಾಗಿ, “ಚಂಡಾಲ ದೇವರಿಗೆ ಚ…ಲಿ ಪೂಜೆಯೇ” ಸರಿ ಎಂಬ ತತ್ವದಲ್ಲಿ ಅಚಲ ನಂಬಿಕೆ ಇಟ್ಟವರು.
ಕಚೇಷ್ಟಕರ್ ಅವರೇ, ಈಗ ತಿಳಿಯಿತೇ?
ತಿಳಿದಿದದ್ದರೆ ಉರಿದುಕೊಳ್ಳಿ,ಇಲ್ಲದಿದ್ದರೆ ತಲೆ ಕೆರೆದುಕೊಳ್ಳಿ.
ಚಂಡಾಲ ದೇವರಿಗೆ ಚ…ಲಿ ಪೂಜೆಯೇ
This shows your neo-brahministic ultra-casteist mentality and how much respect you have for non-vaidik traditions. Totally disgusting!
Chandalas are also humans and they have constitutional rights to worship their God. Come to India and say the same thing if you have guts.
ಯೋ.. ಸುಮ್ಮನೆ ಸ್ವಲ್ಪಮಟ್ಟಿಗಾದರೂ ಬರುವ ಕನ್ನಡದಲ್ಲಿ ಬರೆಯಯ್ಯ..ಮಾತೆತ್ತಿದರೆ, ಹೊಲಸಾಗಿರೋ ಇಂಗ್ಲಿಷ್ ನಲ್ಲಿ ಬರೆಯಬೇಡ! ಕರ್ನಾಟಕದಲ್ಲೇ ಇದ್ದೀನಿ.. ಅದೇನು ಮಾಡ್ಕತ್ತಿಯೋ ಮಾಡ್ಕ..ನಾನೂ ನೋಡಿಬಿಡ್ತೀನಿ!
ಲಂಕೆಯು ರಾವಣನ ಆಡಳಿತದಲ್ಲಿ ಶಾಂತಿ ಸಮೃದ್ಧಿ ಸಹಬಾಳ್ವೆಗೆ ಹೆಸರುವಾಸಿ ಆಗಿತ್ತು. ಲಂಕೆಯಲ್ಲಿ ನಾಗರಿಕ ಸಮಾಜವು ಉತ್ತುಂಗದಲ್ಲಿತ್ತು. ಆರ್ಯರ ವೈದಿಕ ಸಂಸ್ಕೃತಿಯ ಯಾಜಮಾನ್ಯವನ್ನು ಲಂಕೆಯ ದ್ರಾವಿಡರು ಒಪ್ಪಲಿಲ್ಲ, ಆದುದರಿಂದ ರಾಮಾಯಣ ಯುದ್ಧ ನಡೆಯಿತು. ಸೀತಾಪಹರಣ ಒಂದು ನೆಪವಷ್ಟೇ.
ಹೀಗೊಂದು ವಾದ ,ರಾವಣ ಅಷ್ಟು ಒಳ್ಳೆಯವನಾಗುವುದಕ್ಕೆ ಕಾರಣ ಆತ ಪುಲಸ್ತ್ಯ ಋಷಿಯ ಮೊಮ್ಮಗ,ಹಾಗೂ ಆತನ ತಂದೆ ಒಬ್ಬ ಬ್ರಾಹ್ಮಣ ಹಾಗಾಗಿ ರಾಮ ಆತನನ್ನು ಮಹಾ ಬ್ರಾಹ್ಮಣ ಎಂದು ಕರೆದದ್ದು. ಆದರೆ ಆತನ ಒಂದು ಕೆಟ್ಟ ಕೆಲಸ,ಅಹಂಕಾರ ಇಡೀ ಲಂಕೆಯನ್ನು ಹಾಳು ಮಾಡಿತು. ಅದು ಕಲಿಯಬೇಕಾಗಿರುವ ಪಾಠ.ಆರ್ಯರೋ ದ್ರಾವಿಡರೋ ,ತಪ್ಪು ಮಾಡಿದಾಗ ಅದನ್ನು ಸಮರ್ಥಿಸಿಕೊಳ್ಳುವುದು ತರವಲ್ಲ
ರಾಕೇಶ್ ಶೆಟ್ಟಿ ಅವರೇ, ನಿಲುಮೆಯಲ್ಲಿ ಅನಾಗರಿಕ ಭಾಷೆಯಲ್ಲಿ ಕಮೆಂಟು ಮಾಡುವ WITIAN ಎಂಬ ವ್ಯಕ್ತಿಯಿಂದ ನೀವು ದೊಡ್ಡ ತೊಂದರೆಗೆ ಸಿಲುಕುತ್ತೀರಿ. ಈತನಿಗೆ ನಾಗರಿಕ ಪ್ರಜ್ಞೆಯೇ ಇಲ್ಲ. ಔಚಿತ್ಯ ಪ್ರಜ್ಞೆಯೂ ಇಲ್ಲ. ನಾನು ಸುದರ್ಶನ್ ಅವರಿಗೆ ಬರೆದ ಕಾಮೆಂಟಿಗೆ ಪ್ರತಿಯಾಗಿ “ಅದೇನು ಮಾಡ್ಕತ್ತಿಯೋ ಮಾಡ್ಕ..ನಾನೂ ನೋಡಿಬಿಡ್ತೀನಿ!” ಅಂತ ಬೆದರಿಕೆ ಹೂಡಿದ್ದಾನೆ! ಈತನ ವರಸೆ ನೋಡಿದರೆ ಈತನೊಬ್ಬ ದೊಡ್ಡ ಗೂಂಡ ಅಂತ ಅನ್ನಿಸುತ್ತದೆ. ಇಂತಹವರಿಗೆ ನೀವು ಪ್ರೋತ್ಸಾಹ ಕೊಟ್ಟರೆ ಅದರ ಪರಿಣಾಮವನ್ನೂ ಅನುಭವಿಸುತ್ತೀರಿ.
‘ತಾನು ಕಂಡಿದ್ದೇ ಸತ್ಯ..ಅದನ್ನು ಮೀರಿದ ದರ್ಶನವೇ ಇಲ್ಲ.ಇದಕ್ಕೆ ಆಕ್ಷೇಪಣೆಯನ್ನು ಯಾರೂ ಹೇಳಬಾರದು…’ಎಂಬಂತೆ ಎಲ್ಲ ಚರ್ಚೆಗೂ ‘ಜೀವಪರತೆ’, ‘ಎಡಪಂಥ’ದ ವಿಚಾರಧಾರೆಯನ್ನು ತರುವುದು ದಬ್ಬಾಳಿಕೆ ಅಲ್ಲದೆ ನಾಗರಿಕರ ಲಕ್ಷಣವೇ? ಅಡಿಗರ ಕಾವ್ಯದ ಚರ್ಚೆಯ ನಡುವೆ ಹೂಸುಬಿಟ್ಟ ಹಾಗೆ ತನ್ನ ಹಳಸು ಚಿಂತನೆಗಳನ್ನು ಹೇಳುವುದು ಈ ಮನುಷ್ಯನ ‘ಔಚಿತ್ಯಪ್ರಜ್ಞೆ’! ಮತ್ತೊಬ್ಬ ಓದುಗ ಸುದರ್ಶನ ರಾವ್ ಅವರು ಹೇಳಿದಂತೆ ‘ಚಂಡಾಲ ದೇವರಿ’ಗೆ ಚಪ್ಪಲಿ ಪೂಜೆಯೇ ಸಮಂಜಸವಾದದ್ದು..ಇನ್ನು ಇಂಗ್ಲಿಷಿನಲ್ಲಿ ‘come to India and say the same thing if you have guts’ ಎಂದು ತಾನು ಧಮ್ಕಿ ಹಾಕಿದ್ದು ಗೂಂಡಾಗಿರಿ ಅಲ್ಲ, ಅದಕ್ಕೆ ಪ್ರತ್ಯುತ್ತರ ಕೊಟ್ಟವರು ಗೂಂಡಾ ಆಗಿಬಿಡುತ್ತಾರೆ! ವಾಹ್!
ಸಮೃದ್ಧವಾಗಿದ್ದ ಲಂಕೆಗೆ ಬೆಂಕಿ ಇಟ್ಟದ್ದು ಯಾರೆಂದು ತಮಗೆ ಗೊತ್ತಿದ್ದಂತೆ ಕಾಣುತ್ತಿಲ್ಲ. ಸರಿಯಾಗಿ ಒಮ್ಮೆ ರಾಮಾಯಣ ಓದಿಕೊಳ್ಳಿ, ಆ ನಂತರ ಬೇಕಾದರೆ ನಾಲಿಗೆ ಸಡಿಲ ಬಿಡುವಿರಂತೆ…
ಸಮೃದ್ಧವಾದ ಲಂಕೆಯನ್ನು ಆಳುತ್ತಿದ್ದ ‘ಲಂಕೇಶ’ನ ಗರ್ವವನ್ನು ಒಂದು ಕಪಿ ಮಾಡಿತು ಎನ್ನುವ ಅರಿವು ನಮಗಿದೆ ಸ್ವಾಮಿ.. ಆ ಕಪಿಯನ್ನೂ ನಾವು ಪೂಜಿಸುತ್ತೇವೆ, ತಮಗೆ ತಿಳಿದಿಲ್ಲವೇನೋ.. ಪಾಪ
ತಿದ್ದುಪಡಿ: ಗರ್ವಭಂಗವನ್ನು
ತಾವು ’ಕಪಿಚೇಷ್ಟೆ’ಯ ಆರಾಧಕರು ಎಂಬ ಸುಳಿವು ಬಿಟ್ಟುಕೊಟ್ಟಿದ್ದಕ್ಕೆ ಧನ್ಯವಾದಗಳು.
ತಾವು ರಾವಣನಂತಹ ‘ಕಾಮಚೇಷ್ಟಿ’ಗಳ ಆರಾಧಕರು ಎನ್ನುವ ಸುಳಿವು ಕೊಟ್ಟಿದ್ದಕ್ಕೆ ತಮಗೂ ಧನ್ಯವಾದಗಳು!
ತಿರುಗೇಟು ಕೊಡಬೇಕಾದರೆ ತಕ್ಕ ಸಾಕ್ಷಗಳಿರಬೇಕು.
ನಾನು ’ಲಂಕೇಶ’ನನ್ನಾಗಲೀ, ಅವನ ಹಿಂ’ಬಾಲ’ಕರನ್ನಾಗಲೀ ಪೂಜಿಸುತ್ತೇನೆ ಅಂತ ಅಂದಿಲ್ಲವಲ್ಲ. ಸೀತೆಯನ್ನು ಅಪಹರಿಸಿದ ರಾವಣವೆಂಬ ’ರಾಕ್ಷಸ’ನಿಗೆ ಆಕೆಯ ಮೇಲೆ ಬಲಾತ್ಕಾರ, ಅಥವಾ ಅತ್ಯಾಚಾರ ಮಾಡುವುದು ದೊಡ್ಡ ವಿಷಯವೇನೂ ಆಗಿರಲಿಲ್ಲ, ಆದರೆ ಆತ ಹಾಗೆ ಮಾಡಲಿಲ್ಲ. ವಿನಾ ಕಾರಣ ತನ್ನ ಪತ್ನಿಯನ್ನು ಸಂಶಯಿಸಿ ಅಗ್ನಿ ಪರೀಕ್ಷೆಗೊಡ್ಡಿದ ಶ್ರೀರಾಮ ನಮಗೆ ಪುರುಷೋತ್ತಮನಂತಾಗಲೀ, ಪೂಜನೀಯನಂತಾಗಲಿ ಕಾಣುವುದಿಲ್ಲ ಅಷ್ಟೆ.
ಕೃಷ್ಣಪ್ಪ ಸರ್, ನಾನೂ ಇದನ್ನೇ ಹೇಳಬೇಕು ಅಂತಿದ್ದೆ, ಅಷ್ಟರಲ್ಲಿ ನೀವೇ ನಿಮ್ಮ ಎಂದಿನ ಚುರುಕು ಶೈಲಿಯಲ್ಲಿ ಹೇಳಿದಿರಿ! 🙂
ಹಿಂ’ಬಾಲಕ’ ಎಂಬುದು ಹಿಂಬಾಲುಕ (ಹಿಂದುತ್ವವಾದಿ ಬಾಲುರಾವ್ ಕಪಿಸೇನೆ) ಅಂತಿದ್ದರೆ ಇನ್ನೂ ಚುರುಕು ಇರುತ್ತಿತ್ತು.
ವಂದನೆಗಳು Nagshetty Shetkar,
ಪುರಾತನ ಪಿಂಡಗಳ ವಿರುದ್ಧದ ನಿಮ್ಮ ಸಾತ್ವಿಕ ಸಿಟ್ಟು ಮತ್ತು ಪ್ರತಿಭಟನೆ ಹೀಗೆಯೇ ಮುಂದುವರಿಯಲಿ.
ಬುದ್ಧಿಜೀವಿಗಳಾದರೇನು ಸಾಮಾನ್ಯ ನಾಗರೀಕರದರೇನು? ಪ್ರಪಂಚದಲ್ಲಿ ನಕಾರಾತ್ಮಕ ಚಿಂತನೆಗಳನ್ನ ಹರಿಬಿಡುವವರ ಬಗ್ಗೆ ಪ್ರಶ್ನೆ ಎತ್ತುವುದು ಸಕಾರಾತ್ಮಕ ಕೆಲಸವಲ್ಲದೆ ಇನ್ನೇನು? ಇಂದಿನ ಪರಿಸ್ಥಿತಿಯಲ್ಲಿ ಅತೀ ದುರುಪಯೋಗಗೊಂಡಿರುವಂತಹ ಪದಗಳೆಂದರೆ ಪ್ರಗತಿಪರ ಹಾಗೂ ಬುದ್ಧಿಜೀವಿ ಅನ್ನೋವು!!
ಈ ಸಾಹಿತಿಗಳನ್ನು ಬುದ್ಧಿಜೀವಿಗಳು ಅಂತ ಕರೆಯುವುದೇ ತಪ್ಪು. ಬೇಕಾದರೆ “ಸ್ವಯಂಗೋಷಿತ” ಬುದ್ಧಿಜೀವಿಗಳು ಅಂತ ಹೇಳಬಹುದು.
For decades, titles such as “Budhi Gevigalu” and “Pragatipara Chintakaru” are given by the “minority community controlled” governments to certain individuals. The main job of these individuals is, attack Hinduism at every opportunity, and for their rants, governments used to give them generous publicity and benefits thus used to consolidate vote bank. Many of them have Hindu religious background and they openly do such immoral/dirty works to help such governments. Rest of few non-Hindu title holders usually clever/cunning enough to slip away whenever their own religious contentious issues comes up for debates…………
In my opinion, they are comparable to Vijaya Malya, “born rich but ended with bankruptcy” due to their own making (due their sheer stupid confidence that their government rules for life time)…………
“ಅಂದು “ಕೈ” ಗೆ ಜೈ ಎಂದ ಬುದ್ಧಿಜೀವಿಗಳು ಎಲ್ಲಿ ಅಡಗಿದ್ದಾರೆ?” anno questionge “avara paristiti Vijaya Malyara egina paristiti yantagide” annode correct answer!!
ಯಾರಿಗೆ ’ಬುದ್ಧಿಜೀವಿಗಳು’ ಎಂದು ಹಣೆಪಟ್ಟಿ ಕಟ್ಟಿ ಚರ್ಚಾ ಕಣಕ್ಕೆ ಎಳೆತರುತ್ತೀರೋ, ಅವರೆಂದೂ ತಾವು ಬುದ್ದಿಜೀವಿಗಳು ಎಂದು ಎಲ್ಲೂ, ಯಾವತ್ತೂ ಹೇಳಿಕೊಂಡಿಲ್ಲ. ಬುದ್ಧಿಜೀವಿಗಳು ಎಂದು ಅವರನ್ನು ಹೆಸರಿಸುವವರೂ, ಹೀಯಾಳಿಸುವವರೂ ಕೂಡ ಒಂದೇ ಮನಸ್ಥಿತಿಯ ಜನ. ನಾನು ಕಂಡಂತೆ ಕಂದಾಚಾರದ ಹಂದರದೊಳಕ್ಕೆ ತಲೆಹಾಕದವರನ್ನೆಲ್ಲಾ ಬುದ್ಧಿಜೀವಿಗಳು ಎಂದು ಹೆಸರಿಸಲಾಗುತ್ತಿದೆ. ನಿಜ, ಅವರು ಬುದ್ಧಿಜೀವಿಗಳೇ; ಲದ್ದಿಜೀವಿಗಳಂತೂ ಅಲ್ಲ. ಆಗಿನ ಸಂದರ್ಭದ ಸನ್ನಿವೇಶದಲ್ಲಿ ಒಂದು ಪರ್ಯಾಯ ಆಯ್ಕೆ ಅಂತ ಇದ್ದರೆ ಕಾಂಗ್ರೆಸ್ ಮಾತ್ರವಾಗಿತ್ತು. ಇದರ ಹೊರತಾಗಿ ಬಿಜೆಪಿ ಅಥವಾ ಜೆಡಿಎಸ್ ತಮ್ಮ ಮುಖಕ್ಕೆ ಅವತ್ತು ಏನನ್ನ ಮೆತ್ತಿಕೊಂಡಿತ್ತು ಎಂಬುದು ನಿಮಗೆ ಗೊತ್ತಿಲ್ಲವೆ ರಾಕೇಶ್ ಜೀ. ಹೋಗಲಿ, ಈ ’ಬುದ್ದಿಜೀವಿಗಳು’ ಕಾಂಗ್ರೆಸ್ಸಿನ ಪರ ತುತ್ತೂರಿ ಊದಿದ ಆಗ ಸುಮ್ಮನೆ ಇದ್ದು ಈಗೇಕೆ ಜೋಳಿಗೆ ಬಿಚ್ಚಿದ್ದೀರಿ?
-ಟಿ.ಎಂ.ಕೃಷ್ಣ
ಕೃಷ್ಣಪ್ಪ ಸರ್ ಅವರು ರಾಕೇಶ್ ಶೆಟ್ಟರ ಹಿಪಾಕ್ರಸಿ ಅನ್ನು ಸರಿಯಾಗಿ ಜಾಡಿಸಿದ್ದಾರೆ.
ಕನ್ನಡ ಅಂತರ್ಜಾಲದಲ್ಲಿ ಕೆಲವು ಕೃಷ್ಣ ಸರ್ಪಗಳಿವೆ. ಅವು ಪ್ರಗತಿಪರರನ್ನು ಹಣಿಯುವುದನ್ನೇ ಸಿದ್ಧಿ ಎಂದು ತಿಳಿದಿವೆ. ಜೀವಪರತೆಯನ್ನು ಗೇಲಿ ಮಾಡುತ್ತಾ ಎಡಪಂಥೀಯ ಚಿಂತನೆಯನ್ನು ನಿಕೃಷ್ಟವಾಗಿಸುತ್ತಾ ವಿಷ ಕಾರುತ್ತಿರುತ್ತವೆ. ಈ ಕೃಷ್ಣ ಸರ್ಪಗಳಿಗೆ ಕಳೆದ ಕೆಲವು ಸಮಯದಿಂದ ಒಂದು ಹುತ್ತವನ್ನು ಕಟ್ಟಿಕೊಟ್ಟು ಆಶ್ರಯ ನೀಡಿ ಸಾಕುವ ಕೆಲಸ ವ್ಯವಸ್ಥಿತವಾಗಿಯೇ ನಡೆದಿದೆ. ಪ್ರಗತಿಪರರು ಇದನ್ನು ಪ್ರತಿರೋಧಿಸುತ್ತಿದ್ದಾರೆ.
ಕನ್ನಡ ಅಂತರ್ಜಾಲದಲ್ಲಿ ಕೆಲವು ಕೃಷ್ಣಸರ್ಪಗಳಿವೆ..ಹಾಗೇ ಕೆಲವು ಎಮ್ಮೆ/ ಕೋಣಗಳನ್ನು, ಬೀಡಾಡಿ ನಾಯಿಗಳನ್ನು, ಹಂದಿಗಳನ್ನು ಹೋಲುವ ಜೀವಿಗಳೂ ಇವೆ, ಸಿಕ್ಕ ಸಿಕ್ಕಲ್ಲಿ ಗಲೀಜು ಮಾಡಿ ತಾವೇನೋ ಉಪಕಾರ ಮಾಡುತ್ತಿದ್ದೇವೆ ಎಂದು ಬೀಗುತ್ತ ಇರುತ್ತವೆ (ಆಹಾ… ಕನ್ನಡ ಅಂತರ್ಜಾಲ ಜೀವಪರವಾಯಿತು!). ಕೆಟ್ಟುಹೋದ ರೆಕಾರ್ಡಿನಂತೆ ಹೇಳಿದ್ದನ್ನೇ ಹೇಳುತ್ತಿರುತ್ತವೆ. ಜೀವಪರತೆ (ಇದುವರೆಗೂ ಒಮ್ಮೆಯೂ ಹಾಗೆಂದರೇನು ಅಂತ ಹೇಳುವ ಧೈರ್ಯ ಮಾಡಿಲ್ಲ, ಬಹುಶಃ ದರ್ಗಾ ಸರ್ ಇನ್ನೂ ಹೇಳಿಕೊಟ್ಟಿಲ್ಲ ಅಂತ ಕಾಣುತ್ತದೆ), ಎಡಪಂಥೀಯತೆ ಅಂತ ಬೊಂಬಡಾ ಹೊಡೆಯುತ್ತ ಇರುತ್ತವೆ. ಈ ಜೀವಿಗಳಿಗೆ ಆಶ್ರಯವೇ ಬೇಕಿಲ್ಲ, ಯಾವುದಾದರೂ ವೆಬ್ ಸೈಟ್ ಇವರನ್ನು ತಡೆದರೆ ಮತ್ತೊಂದು ಹೆಸರಿನಿಂದ ಬರೆಯಲು ಪ್ರಾರಂಭಿಸುತ್ತವೆ. ಇಂತಹ ವಿಚಿತ್ರಪ್ರಾಣಿಗಳ ಅಪಲಾಪವನ್ನು ಓದಿ ಸಹಿಸಿಕೊಳ್ಳಬೇಕಾದ ಕರ್ಮ ನಮ್ಮದು
“ಸಾಹೇಬರು ತಮ್ಮ 10 commandments ಲ್ಲಿ ಏಕದೇವೋಪಾಸನೆ ಯನ್ನು ಏಕೆ ಸೇರಿಸಲಿಲ್ಲ”
There is only one God. Ekam sat bahudhaa vadanti. Sabh Allah ke bandhe hain.
ನೀವು ಸುಮ್ಮ-ಸುಮ್ಮನೆ ಪರಗತಿಪರ ವೇಷ ಹಾಕಿಕೊಂಡು ನಮ್ಮ ಮುಂದೆ ನಿಮ್ಮ ತಲೆ-ಬುಡವಿಲ್ಲದ ವಾದಗಳನ್ನು ಇಡುವುದಕ್ಕಿಂತ..ಹೀಗೆ ನೇರವಾಗಿ ಮುಲ್ಲಾನ ತರಹ ಹೇಳುವುದು ನಿಜವಾಗಿಯೂ ಸಂತೋಷಕೊಡುತ್ತದೆ. “Ekam sat bahudhaa vadanti” ಬಿಟ್ಟುಹಾಕಿ..ಅದು ವೈದಿಕ ವಾಣಿ!
No, vaidikvani is “ekam sadvipraaha bahudhaa vadanti”. Note the emphasis on the middle men – vipra aka priestly class purohitshahi.
ವೈದಿಕ ವಾಣಿಯನ್ನು ಎಷ್ಟು ಬೇಕೋ ಹೇಗೆ ಬೇಕೋ ಅಷ್ಟು ಕದ್ದು ತಮಗೆ ಬೇಕಾದಂತೆ ಬದಲಿಸಿಕೊಳ್ಳುವುದೂ ಪ್ರಗತಿಪರರ ಲಕ್ಷಣಗಳಲ್ಲಿ ಒಂದು ಎಂಬುದನ್ನು ಸೋಕಾಲ್ಡ್ ಶರಣ-ಅಲ್ಲಾ-ಪ್ರಗತಿಪರ ಉರುಫ್ ಬುದ್ಧಿಜೀವಿ ಆಕಾ ಎಡಬಿಡಂಗಿ ಎಡಪಂಥೀಯರೊಬ್ಬರು ಈ ಮೂಲಕ ತೋರಿಸಿದ್ದಾರೆ.
Ha Ha Nimma charche Gambhira mishrita hasyavagittu….