ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 11, 2015

23

ಹಿಂದುಳಿದವರನ್ನು ತುಳಿಯುತ್ತಿರುವವರು ಯಾರು?

‍ನಿಲುಮೆ ಮೂಲಕ

– ರಾಜಕುಮಾರ.ವ್ಹಿ.ಕುಲಕರ್ಣಿ,

ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

Reservation Policy India Reservation Policy India Reservation Policy India Reservation Policy India Reservation Policy India Reservation Policy India Reservation Policy India Reservation2012-13 ನೇ ಸಾಲಿನಿಂದ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸುವ ವಿಧಾನವನ್ನು ಜಾರಿಗೆ ತಂದಿದೆ. ಈ ಮೊದಲು ಮುದ್ರಿತ ಅರ್ಜಿಯನ್ನು ಸಲ್ಲಿಸುವ ಪದ್ಧತಿ ಬಳಕೆಯಲ್ಲಿದ್ದುದ್ದರಿಂದ ಹೊಸ ವಿಧಾನದ ಪರಿಣಾಮ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ವಿಳಂಬವಾಗುವುದರ ಜೊತೆಗೆ ತೊಂದರೆ ಸಹ ಆಗುತ್ತಿದೆ. ಅದೆಷ್ಟೋ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ಹೇಗೆ ಸಲ್ಲಿಸಬೇಕೆಂದು ತಿಳಿಯದೆ ನನ್ನನ್ನು ಸಂಪರ್ಕಿಸಿದ್ದುಂಟು. ಕಳೆದ ವರ್ಷ ಸುಮಾರು ಇಪ್ಪತ್ತಕ್ಕಿಂತ ಹೆಚ್ಚಿನ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸುವಾಗ ನನ್ನನ್ನು ಅಚ್ಚರಿಗೊಳಿಸಿದ ಸಂಗತಿ ಎಂದರೆ ಆ ಯಾವೊಬ್ಬ ವಿದ್ಯಾರ್ಥಿಯೂ ಬಡತನದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಎಂಟರಿಂದ ಹತ್ತು ಲಕ್ಷ ರೂಪಾಯಿಗಳನ್ನು ಮೀರುತ್ತಿತ್ತು.ಆ ಎಲ್ಲ ವಿದ್ಯಾರ್ಥಿಗಳ ಪಾಲಕರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಸಂಗತಿ ನನ್ನನ್ನು ಇನ್ನಷ್ಟು ಅಚ್ಚರಿಗೊಳಿಸಿತು. ವಿದ್ಯಾರ್ಥಿಗಳ ಪಾಲಕರು ತಮ್ಮ ಕೆಲಸಕ್ಕೆ ಒಂದೆರಡು ದಿನಗಳ ರಜೆ ಪಡೆದು ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಬಂದಿದ್ದರು. ಸರ್ಕಾರಿ ಕೆಲಸ, ಉನ್ನತ ಹುದ್ದೆ, ಕೈತುಂಬ ಸಂಬಳ ಹೀಗಿದ್ದೂ ಅವರುಗಳು ಸರ್ಕಾರದಿಂದ ವಿದ್ಯಾರ್ಥಿ ವೇತನ ಪಡೆಯಲು ಪಡುತ್ತಿದ್ದ ಪರಿಪಾಟಲು ನೋಡಿ ನಿಜಕ್ಕೂ ಹಿಂದುಳಿದ ವರ್ಗದವರನ್ನು ಕೈಹಿಡಿದೆತ್ತಿ ಮುಖ್ಯವಾಹಿನಿಗೆ ತಂದು ನಿಲ್ಲಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನ ಅದರ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎನ್ನುವ ಪ್ರಶ್ನೆ ಆ ಕ್ಷಣ ನನ್ನಲ್ಲಿ ಮೂಡಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೆ ತಂದ ಈ ಮೀಸಲಾತಿ ಎನ್ನುವ ಯೋಜನೆ ಅದು ಹೇಗೆ ದುರ್ಬಳಕೆಯಾಗುತ್ತಿದೆ ಎನ್ನುವುದನ್ನು ಒಂದು ಉದಾಹರಣೆಯೊಂದಿಗೆ ಹೀಗೆ ವಿವರಿಸಬಹುದು. ನನ್ನೂರಿನ ಮೋಹನ ಮತ್ತು ಶ್ರೀನಿವಾಸ ಇವರಿಬ್ಬರೂ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು. ಮೋಹನನ ತಂದೆ ಮತ್ತು ತಾಯಿ ಇಬ್ಬರೂ ಸರ್ಕಾರಿ ಇಲಾಖೆಯಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದು ಸಾಕಷ್ಟು ಸ್ಥಿತಿವಂತರೂ ಹೌದು. ಆದರೆ ಶ್ರೀನಿವಾಸನ ಪರಿಸ್ಥಿತಿ ಮೋಹನನಿಗಿಂತ ಭಿನ್ನವಾಗಿದೆ. ಆತನ ತಂದೆ ಊರಿನ ಸ್ಥಿತಿವಂತರ ಹೊಲಗಳಲ್ಲಿ ದಿನಗೂಲಿಯಾಗಿ ದುಡಿಯುತ್ತಿದ್ದು ದಿನದ ದುಡಿಮೆಯೇ ಅವನ ಕುಟುಂಬಕ್ಕೆ ಆಧಾರ. ಪರಿಸ್ಥಿತಿ ಹೀಗಿರುವಾಗ ಮೋಹನ ಮತ್ತು ಶ್ರೀನಿವಾಸ ಇವರಿಬ್ಬರೂ ವೈದ್ಯಕೀಯ ವಿಜ್ಞಾನದ ಪ್ರವೇಶ ಪರೀಕ್ಷೆಗೆ ಕುಳಿತು ಕ್ರಮವಾಗಿ 6710 ಮತ್ತು 6712 rankನಲ್ಲಿ ತೇರ್ಗಡೆಯಾದರು. ವಿಪರ್ಯಾಸವೆಂದರೆ ಆ ವರ್ಷ ಪರಿಶಿಷ್ಟ ಜಾತಿಯ ಕೋಟಾದಡಿ ವೈದ್ಯಕೀಯ ಕೋರ್ಸಿನ ಪ್ರವೇಶ 6710 rankಗೆ ಸೀಮಿತಗೊಂಡಿತು. ಆರ್ಥಿಕವಾಗಿ ಸ್ಥಿತಿವಂತನಾದರೂ ಮೋಹನ ಪರಿಶಿಷ್ಟ ವರ್ಗದಡಿ ಅರ್ಜಿ ಸಲ್ಲಿಸಿದ್ದರಿಂದ ಸಹಜವಾಗಿಯೇ ಆತನಿಗೆ ರಾಜ್ಯ ಸರ್ಕಾರದ ಸಿಇಟಿ ಮೂಲಕ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರೆಯಿತು. ಕೇವಲ ಎರಡು rank ಹಿಂದೆ ಇದ್ದ ಶ್ರೀನಿವಾಸ ಅಂಥದ್ದೊಂದು ಅವಕಾಶದಿಂದ ವಂಚಿತನಾದ. ಶ್ರೀನಿವಾಸ ಪರಿಶಿಷ್ಟ ಜಾತಿಗೆ ಸೇರಿದ್ದು, ಆರ್ಥಿಕವಾಗಿ ಹಿಂದುಳಿದವನಾಗಿದ್ದು ಮತ್ತು ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಕೂಡ ಆತನಿಗೆ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಮೋಹನನ ಪೋಷಕರು ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಆರ್ಥಿಕವಾಗಿ ಸ್ಥಿವಂತರಾಗಿದ್ದಾಗೂ ಪರಿಶಿಷ್ಟ ಜಾತಿ ಎನ್ನುವ ಕಾರಣಕ್ಕೆ ಆತನಿಗೆ ಸುಲಭವಾಗಿ ಪ್ರವೇಶ ದೊರೆಯಿತು. ಮೋಹನ ಮತ್ತು ಶ್ರೀನಿವಾಸ ಈ ಇಬ್ಬರೂ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಇಲ್ಲಿ ಯಾವ ವಿದ್ಯಾರ್ಥಿಗೆ ಮೀಸಲಾತಿಯಡಿ ಪ್ರವೇಶ ದೊರೆಯಬೇಕಿತ್ತು ಎನ್ನುವ ತರ್ಕ ಎದುರಾಗುತ್ತದೆ. ಆರ್ಥಿಕವಾಗಿ ಸ್ಥಿತಿವಂತನಾದ ಮೋಹನ ಹಿಂದುಳಿದ ಜಾತಿ ಎನ್ನುವ ಒಂದೇ ಕಾರಣದಿಂದ ತನ್ನದೇ ಜಾತಿಯ ಇನ್ನೊಬ್ಬ ಅರ್ಹ ವಿದ್ಯಾರ್ಥಿಯ ಅವಕಾಶವನ್ನು ಕಸಿದುಕೊಳ್ಳುವುದು ನ್ಯಾಯವೇ?. ಮೀಸಲಾತಿಯಡಿ ಸೌಲಭ್ಯಗಳನ್ನು ಕಲ್ಪಿಸುವಾಗ ವಿದ್ಯಾರ್ಥಿಯ ಆರ್ಥಿಕ ಸ್ಥಿತಿಯನ್ನೂ ಪರಿಗಣಿಸುವ ನಿಯಮಗಳು ಜಾರಿಗೆ ಬಂದಲ್ಲಿ ಮೀಸಲಾತಿಗೆ ಅರ್ಹರಾದವರು ಅವಕಾಶ ಪಡೆಯುವ ಸಾಧ್ಯತೆ ಹೆಚ್ಚುತ್ತದೆ.

ಹಿಂದುಳಿದ ವರ್ಗದವರ ಮೀಸಲಾತಿ ವಿಷಯದಲ್ಲಿ ಈ ಮೇಲೆ ಹೇಳಿದಂಥ ಅಸಂಗತ ಘಟನೆಗಳು ಪುನರಾವರ್ತನೆಯಾಗುತ್ತಲೇ ಇವೆ. ಆರ್ಥಿಕವಾಗಿ ಸ್ಥಿತಿವಂತರಾಗಿರುವ ಹಿಂದುಳಿದ ವರ್ಗದವರು ಮೀಸಲಾತಿ ವಿಷಯವಾಗಿ ತಮ್ಮ ಹಕ್ಕನ್ನು ಚಲಾಯಿಸುತ್ತಿರುವುದು ಹಾಗೂ ಸರ್ಕಾರ ಯಾವುದೇ ಪ್ರತಿರೋಧ ತೋರದೆ ತನ್ನ ಅಂಗೀಕಾರದ ಮುದ್ರೆ ಒತ್ತುತ್ತಿರುವುದು ದುರದೃಷ್ಟಕರ ಸಂಗತಿ. ಈ ಸಂದರ್ಭದಲ್ಲಿ ನಾಡಿನ ಹಿರಿಯ ಸಾಹಿತಿ ಡಾ.ಚೆನ್ನಣ್ಣ ವಾಲಿಕಾರ ಅವರು ಹೇಳಿದ ಮಾತು ಪ್ರಸ್ತುತ ವ್ಯವಸ್ಥೆಯ ದುರಂತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತ ಹೀಗೆ ಹೇಳಿರುವರು ‘ಇವತ್ತು ಅಸ್ಪೃಶ್ಯರೆಂದು ಕರೆಯುವ ಹಿಂದುಳಿದ ವರ್ಗದವರು ಯಾವ ಮೇಲ್ವರ್ಗದವರೊಂದಿಗೂ ಹೋರಾಟ ಮಾಡಬೇಕಾಗಿಲ್ಲ. ಅವರು ನಿಜವಾಗಿಯೂ ಹೋರಾಟ ಮಾಡಬೇಕಾಗಿರುವುದು ತಮ್ಮದೇ ವರ್ಗದ ಸ್ಥಿತಿವಂತರೊಂದಿಗೆ’.

ಭಾರತದ ಸಂವಿಧಾನದ 15 (4) ನೇ ವಿಧಿಯಲ್ಲಿ ಮೀಸಲಾತಿ ಕುರಿತು ಹೀಗೆ ಉಲ್ಲೇಖಿಸಲಾಗಿದೆ ‘’The state shall promote with special care the educational and economic interests of the weaker sections of society and shall protect them from social injustice and all forms of exploitation’. ಮೀಸಲಾತಿ ಕಾಯ್ದೆಯಡಿ ನಿಜವಾಗಿಯೂ ಅವಕಾಶ ಪಡೆಯಬೇಕಾದವರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು. ಆ ಮೂಲಕ ಸಾಮಾಜಿಕ ಅಸಮಾನತೆ ಎನ್ನುವ ತಾರತಮ್ಯ ಹೋಗಲಾಡಬೇಕು. ಪ್ರಸ್ತುತ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರೆದ ಆದರೆ ಜಾತಿಯಲ್ಲಿ ಹಿಂದುಳಿದ ವರ್ಗದವರು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವುದು ನ್ಯಾಯ ಸಮ್ಮತವಲ್ಲ.

ಅಸ್ಪೃಶ್ಯತಾ ವಿರೋಧಿ ಹೋರಾಟದಲ್ಲಿ ಸದಾ ಕಾಲ ಮೂಂಚೂಣಿಯಲ್ಲಿ ಕಾಣಿಸಿಕೊಳ್ಳುವ ನಮ್ಮ ಹಿಂದುಳಿದ ವರ್ಗದ ಸಾಹಿತಿಗಳು, ಹೋರಾಟಗಾರರು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಪ್ರಭೃತಿಗಳು ಈ ಮೀಸಲಾತಿ ವಿಷಯದಲ್ಲಿ ಆಗುತ್ತಿರುವ ಅನ್ಯಾಯವನ್ನು ನೋಡಿಯೂ ಕಣ್ಮುಚ್ಚಿ ಕುಳಿತುಕೊಂಡಿರುವುದು ಅಸ್ಪೃಶ್ಯತಾ ನಿರ್ಮೂಲನಾ ಹೋರಾಟದ ಬಹುದೊಡ್ಡ ಸೋಲು. ಜೊತೆಗೆ ಅವರೆಲ್ಲ ಅಂಥದ್ದೊಂದು ಯೋಜನೆಯ ಫಲಾನುಭವಿಗಳಾಗಿರುವುದರಿಂದ ವಿರೋಧಿಸುವ ನೈತಿಕ ತಾಕತ್ತು ಅವರಲ್ಲಿಲ್ಲ. ಹೊಡಿ, ಬಡಿ ಎಂದು ಬರೆದು ಹೋರಾಟದ ಕಿಚ್ಚನ್ನು ಹಚ್ಚುವ ಬಂಡಾಯ ಮನೋಭಾವದ ನಮ್ಮ ಹಿಂದುಳಿದ ವರ್ಗದ ಅತ್ಯಂತ ಸುಶಿಕ್ಷಿತ ನಾಯಕರುಗಳು ತಮ್ಮದೇ ವರ್ಗದ ಆರ್ಥಿಕ ದುರ್ಬಲರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಅವರೆಂದೂ ಧ್ವನಿ ಎತ್ತಲಾರರು. ಹೀಗೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಎಲ್ಲರನ್ನೂ ಸಮಾಜದ ಮುಖ್ಯವಾಹಿನಿಗೆ ತಂದಲ್ಲಿ ಸಾಮಾಜಿಕ ಅಸಮಾನತೆ ತೊಲಗಿ ಮೀಸಲಾತಿ ಎನ್ನುವ ಹಾಲುಕೊಡುವ ಕಾಮಧೇನು ಮಾಯವಾಗಬಹುದೆನ್ನುವ ಆತಂಕ ಅವರುಗಳನ್ನು ಕಾಡುತ್ತಿರಲೂಬಹುದು.

ಇನ್ನು ಈ ಮೀಸಲಾತಿ ವಿಷಯವಾಗಿ ಚರ್ಚಿಸುವಾಗ ಈ ಯೋಜನೆಯ ಉದ್ದೇಶ ಏನು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಂಥದ್ದೊಂದು ವ್ಯವಸ್ಥೆಯನ್ನು ಜಾರಿಗೆ ತಂದಿರುವುದರ ಹಿಂದೆ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಬೇಕೆನ್ನುವ ಪ್ರಾಮಾಣಿಕ ಪ್ರಯತ್ನವಿದೆ. ನಿಜಕ್ಕೂ ಅಂಥದ್ದೊಂದು ಪ್ರಯತ್ನ ಸ್ವಾಗತಾರ್ಹ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದುಳಿದ ವರ್ಗದವರಿಗೆ ಸೌಲಭ್ಯವನ್ನೊದಗಿಸಿದಲ್ಲಿ ಆರ್ಥಿಕವಾಗಿ ಸಬಲರಾಗಿ ಅವರು ಸಮಾಜದ ಮುಖ್ಯವಾಹಿನಿಗೆ ಬರುವುದರಿಂದ ಈ ಸಾಮಾಜಿಕ ಅಸಮಾನತೆ ಎನ್ನುವ ತಾರತಮ್ಯವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ. ಇವತ್ತು ಆರ್ಥಿಕವಾಗಿ ಸಬಲರಾದ ಹಿಂದುಳಿದ ಸಮುದಾಯದವರೊಂದಿಗೆ ವ್ಯವಹರಿಸುವಾಗ ಮೇಲುವರ್ಗಕ್ಕೆ ಸೇರಿದ ಜನ ಹಿಂದಿನಂತೆ ಅಸ್ಪೃಶ್ಯರು ಎನ್ನುವ ಭಾವನೆಯಿಂದ ಕಾಣುತ್ತಿಲ್ಲ ಎನ್ನುವುದನ್ನು ನಾವು ತಾತ್ವಿಕವಾಗಿ ಒಪ್ಪಿಕೊಳ್ಳಲೇ ಬೇಕು. ಇಂಥದ್ದೊಂದು ಬದಲಾದ ಮನಸ್ಥಿತಿಯನ್ನು ಗ್ರಾಮ ಮತ್ತು ನಗರ ಪ್ರದೇಶಗಳೆರಡರಲ್ಲೂ ಕಾಣಬಹುದು. ಇಂಥದ್ದೊಂದು ಸಾಮಾಜಿಕ ಪರಿವರ್ತನೆಗೆ ಮುಖ್ಯ ಕಾರಣ ಬದಲಾದ ಆರ್ಥಿಕ ಸ್ಥಿತಿಗತಿ. ಹೀಗೆ ಆರ್ಥಿಕವಾಗಿ ಸಬಲರನ್ನಾಗಿಸಲು ಮೀಸಲಾತಿ ಸೌಲಭ್ಯದ ಅಗತ್ಯವಿದೆ ಎನ್ನುವುದು ವಾಸ್ತವವಾದರೆ ಈ ಸೌಲಭ್ಯ ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ದೊರೆಯಬೇಕೆನ್ನುವ ಮಾತಿನಲ್ಲಿ ಹುರುಳಿದೆ ಎಂದರ್ಥ. ಆರ್ಥಿಕವಾಗಿ ಹಿಂದುಳಿದವರನ್ನು ನಾವು ಎಲ್ಲ ಜಾತಿ ವರ್ಗಗಳಲ್ಲಿ ಕಾಣಬಹುದು. ಆದ್ದರಿಂದ ಈ ಮೀಸಲಾತಿ ಸೌಲಭ್ಯ ಕೇವಲ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಅದು ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯಗಳ ವಿದ್ಯಾರ್ಥಿಗಳಿಗೆ ದೊರೆಯಬೇಕು.

ಆಗಬೇಕಾದದ್ದೇನು
1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಆರ್ಥಿಕವಾಗಿ ಸಬಲರನ್ನು ಗುರುತಿಸುವ ಕೆಲಸಕ್ಕೆ ಸರ್ಕಾರದಿಂದ ಚಾಲನೆ ದೊರೆಯಬೇಕು.
2. ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ಪಾಲಕರು ಸರ್ಕಾರಿ ನೌಕರರಾಗಿದ್ದಲ್ಲಿ ಅವರ ಮಕ್ಕಳಿಗೆ ಮೀಸಲಾತಿಯಡಿ ಯಾವುದೇ ಸೌಲಭ್ಯಗಳು ದೊರೆಯಕೂಡದು.ಈ ನಿಯಮ ಸರ್ಕಾರಿ ನೌಕರರಾಗದೆಯೂ ಆರ್ಥಿಕವಾಗಿ ಸ್ಥಿತಿವಂತರಾಗಿರುವ ಪಾಲಕರ ಮಕ್ಕಳಿಗೂ ಅನ್ವಯಿಸಬೇಕು.
3. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಎನ್ನುವುದು ಕುಟುಂಬವೊಂದರ ಪರಂಪರಾಗತವಾದ ಆಸ್ತಿಯಾಗಕೂಡದು. ಪ್ರತಿ ಹಿಂದುಳಿದ ವರ್ಗದ ಕುಟುಂಬಕ್ಕೆ ಈ ಮೀಸಲಾತಿ ಸೌಲಭ್ಯ ಒಂದು ನಿರ್ಧಿಷ್ಟ ಕಾಲಮಿತಿಯವರೆಗೆ ಸೀಮಿತವಾಗಿರಬೇಕು.
4. ಕೆಲವೊಮ್ಮೆ ವಿದ್ಯಾರ್ಥಿಗಳು ಈ ಮೀಸಲಾತಿ ಸೌಲಭ್ಯವನ್ನು ಹೊಂದಿಯೂ ಶೈಕ್ಷಣಿಕ ಪ್ರಗತಿಯನ್ನು ಸಾಧಿಸದೆಯೂ ಹೋಗಬಹುದು. ಅಂಥ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕೊಡಮಾಡುತ್ತಿರುವ ಮೀಸಲಾತಿ ಸೌಲಭ್ಯಗಳನ್ನು ಸ್ಥಗಿತಗೊಳಿಸಬೇಕು.
5. ರಾಜಕೀಯ ಕ್ಷೇತ್ರದಲ್ಲೂ ಮೀಸಲಾತಿಯನ್ನು ಜಾರಿಗೆ ತಂದಿದ್ದು ಅದು ಈಗ ಹೇಗೆ ಬಳಕೆಯಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ದರಿಂದ ಮೀಸಲಾತಿಯಡಿ ಸ್ಪರ್ಧಿಸ ಬಯಸುವ ಅಭ್ಯರ್ಥಿ ಆ ಸೌಲಭ್ಯದಡಿ ಒಂದಕ್ಕಿಂತ ಹೆಚ್ಚುಬಾರಿ ಸ್ಪರ್ಧಿಸುವ ಅವಕಾಶ ಇರಕೂಡದು. ಜೊತೆಗೆ ಈ ಮತಕ್ಷೇತ್ರದ ಮೀಸಲಾತಿ ಎನ್ನುವುದು ಅಪ್ಪನಿಂದ ಮಕ್ಕಳಿಗೆ ವರ್ಗಾವಣೆಯಾಗಬಾರದು.
6. ಮೀಸಲು ಮತಕ್ಷೇತ್ರಗಳನ್ನು ಶಾಶ್ವತವಾಗಿ ಮೀಸಲಾಗಿಡುವ ಸಂಪ್ರದಾಯ ಕೊನೆಗೊಳ್ಳಬೇಕು. ಈ ನಿಯಮ ಸಾಮಾನ್ಯ ಮತಕ್ಷೇತ್ರಗಳಿಗೂ ಅನ್ವಯಿಸಬೇಕು. ಕಾಲಕಾಲಕ್ಕೆ ಸಾಮಾನ್ಯ ಮತಕ್ಷೇತ್ರಗಳು ಮೀಸಲಾಗಿಯೂ ಮತ್ತು ಮೀಸಲು ಮತಕ್ಷೇತ್ರಗಳು ಸಾಮಾನ್ಯವಾಗಿಯೂ ಬದಲಾಗಬೇಕು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗದವರನ್ನು ರಾಜಕೀಯದ ಮುಖ್ಯವಾಹಿನಿಗೆ ಕರೆತರಲು ಸಾಧ್ಯವಾಗುವುದು.
7. ಜಾತಿ ಆಧಾರಿತ ಮೀಸಲಾತಿಗಿಂತ ಆರ್ಥಿಕವಾಗಿ ಹಿಂದುಳಿದವರಿಗೆ ಈ ಮೀಸಲಾತಿ ಸೌಲಭ್ಯವನ್ನು ಒದಗಿಸುವುದು ಉತ್ತಮ ಕಾರ್ಯ. ಏಕೆಂದರೆ ಆರ್ಥಿಕವಾಗಿ ಹಿಂದುಳಿಯುವಿಕೆಯು ಯಾವುದೇ ಒಂದು ನಿರ್ಧಿಷ್ಟ ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯ ಜಾತಿಗಳಲ್ಲಿ ನಾವು ಆರ್ಥಿಕವಾಗಿ ಹಿಂದುಳಿದವರನ್ನು ಕಾಣುತ್ತೇವೆ. ಆದ್ದರಿಂದ ಶಿಕ್ಷಣ ಮತ್ತು ಉದ್ಯೋಗದ ಈ ಮೀಸಲಾತಿ ಸೌಲಭ್ಯವನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಒದಗಿಸುವುದು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಂತೆ.

ಕೊನೆಯ ಮಾತು
ನಮ್ಮ ರಾಜಕಾರಣಿಗಳದು ಈ ಸಾಮಾಜಿಕ ಅಸಮಾನತೆ ಸದಾಕಾಲ ಜೀವಂತವಾಗಿರಲಿ ಎನ್ನುವ ವಾಂಛೆ. ಈ ಅಸಮಾನತೆ ನಿರ್ಮೂಲನೆಯಾದಲ್ಲಿ ಜಾತಿ ಆಧಾರಿತ ‘ವೋಟ್ ಬ್ಯಾಂಕ್’ನ್ನು ಸೃಷ್ಟಿಸಿಕೊಳ್ಳುವ ಸುವರ್ಣ ಅವಕಾಶವೊಂದು ಕೈತಪ್ಪಿ ಹೋಗಬಹುದೆನ್ನುವ ಭೀತಿ ಅವರದು. ಅದಕ್ಕೆಂದೇ ಕೇವಲ ಹತ್ತು ವರ್ಷಗಳ ಕಾಲ ಹಿಂದುಳಿದ ವರ್ಗದವರಿಗೆ ಮೀಸಲಾತಿ ಸೌಲಭ್ಯ ಒದಗಿಸಿ ಅವರನ್ನು ಮುಖ್ಯವಾಹಿನಿಗೆ ತಂದು ನಿಲ್ಲಿಸಿ ಎಂದು ಹೇಳಿದ್ದ ಡಾ.ಅಂಬೇಡ್ಕರ್ ಅವರ ಮಾತನ್ನು ಕಳೆದ ಆರು ದಶಕಗಳಿಂದ ಅತ್ಯಂತ ಪ್ರಜ್ಞಾಪೂರ್ವಕವಾಗಿ ಅನುಸರಿಸಿಕೊಂಡು ಬರುತ್ತಿರುವರು. ಆರು ದಶಕಗಳಾದರೂ ಈ ಮೀಸಲಾತಿ ಯೋಜನೆಯಡಿ ಹಿಂದುಳಿದ ವರ್ಗದವರನ್ನು ಸಂಪೂರ್ಣವಾಗಿ ಕೈಹಿಡಿದೆತ್ತುವ ಪ್ರಯತ್ನ ಯಶ ಕಾಣದೆ ಇರಲು ಕಾರಣಗಳಾದರೂ ಏನು? ಹುಡುಕುತ್ತ ಹೊರಟರೆ ನನ್ನೂರಿನ ಮೋಹನ ಮತ್ತು ಶ್ರೀನಿವಾಸರ ಕಥೆ ಪ್ರತಿ ಊರಿನಲ್ಲೂ ತೆರೆದುಕೊಳ್ಳುತ್ತ ಹೋಗುತ್ತದೆ.

23 ಟಿಪ್ಪಣಿಗಳು Post a comment
  1. Nagshetty Shetkar
    ಏಪ್ರಿಲ್ 11 2015

    U leave this issue to Government and Dalit activists. Brahmins mind their own business and not interfere in Dalit issues. When will you admit Dalit as heirs to Udupi Maths?

    ಉತ್ತರ
    • ಚಂದ್ರಶೇಖರ್ ಹೆಚ್ ಕುಳಗಟ್ಟೆ
      ಸೆಪ್ಟೆಂ 22 2016

      ಸಾಧ್ಯವಾದರೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಿಮ್ಮ ನೆಗೆಟಿವ್ ಮನಃಸ್ಥಿತಿ ತೋರಿಸಲು ಇದು face book comments ಬಾಕ್ಸ್ ಅಲ್ಲ.
      ಇಲ್ಲಿ ಲೇಖಕರು ಯಾವುದೇ ವೆಕ್ತಿ ಅಥವ ಜಾತಿಯ ಗುರಿಯಾಗಿಸಿಲ್ಲ ಅವರು ಕೇವಲ ಅವರ ಆಶಯ ವ್ಯಕ್ತಪಡಿಸಿದ್ದಾರೆ ಅಷ್ಟೇ …

      ಉತ್ತರ
  2. Ravi Kashikar
    ಏಪ್ರಿಲ್ 11 2015

    Dear Shetkar you also leave that issue to Udupi maths ,Author has not write any bad comments on dalits,as a student i also came across such situations in my academic life

    ಉತ್ತರ
  3. WITIAN
    ಏಪ್ರಿಲ್ 11 2015

    ಅಯ್ಯಾ ಶೇತ್ಕರ, ಒಬ್ಬ ಬಡಬ್ರಾಹ್ಮಣ ಬರೆದ ಮಾತ್ರಕ್ಕೆ ಸದ್ಯಕ್ಕಿರುವ ಮೀಸಲಾತಿಯಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಉಡುಪಿಯ ಮಠವೊಂದರ ಪೀಠ ಏರಬೇಕಾದರೆ ವೇದ, ಆಗಮ, ಉಪನಿಷತ್ ಮತ್ತು ಪುರಾಣ, ಇವುಗಳ ಅಧ್ಯಯನ ಮಾಡಿ ಬೋಧನೆ ಮಾಡುವಷ್ಟು ತಿಳಿದುಕೊಳ್ಳಬೇಕಾಗುತ್ತದೆ. ಇದರ ಅಧ್ಯಯನವನ್ನು ಶ್ರದ್ಧೆಯಿಂದ ಮಾಡಲು ಯಾರಾದರೂ ತಥಾಕಥಿತ ದಲಿತ ಬಾಲಕ ಮುಂದೆ ಬರಲಿದ್ದಾನೆಯೇ? ಸ್ವಲ್ಪ ತಿಳಿಸು. ಅದಿರಲಿ, ಯಾವ ಲಿಂಗಾಯತ ಮಠ ತನ್ನ ಪೀಠಕ್ಕೆ ದಲಿತನೊಬ್ಬನನ್ನು ಕೂರಿಸಿದೆ ಹೇಳಬಲ್ಲೆಯಾ?

    ಉತ್ತರ
    • Nagshetty Shetkar
      ಏಪ್ರಿಲ್ 11 2015

      “ಉಡುಪಿಯ ಮಠವೊಂದರ ಪೀಠ ಏರಬೇಕಾದರೆ ವೇದ, ಆಗಮ, ಉಪನಿಷತ್ ಮತ್ತು ಪುರಾಣ, ಇವುಗಳ ಅಧ್ಯಯನ ಮಾಡಿ ಬೋಧನೆ ಮಾಡುವಷ್ಟು ತಿಳಿದುಕೊಳ್ಳಬೇಕಾಗುತ್ತದೆ.”

      ಭಾರತದ ಸಂವಿಧಾನವನ್ನು ಅಧ್ಯಯನ ಮಾಡಿರುವ ದಲಿತನನ್ನು ಉಡುಪಿ ಮಠದ ಅಧಿಪತಿ ಮಾಡತಕ್ಕದ್ದು. ಅಂವ ವೈದಿಕರಿಗೆ ಸಂವಿಧಾನದ ಬೋಧನೆ ಮಾಡುತ್ತಾನೆ, ಸಮಾನತೆಯ ಸಂದೇಶ ಹರಡುತ್ತಾನೆ. ಅದಲ್ಲವೇ ನಿಜವಾದ ಅಧ್ಯಾತ್ಮ?

      ಉತ್ತರ
      • ಭೀಮಗುಳಿ ಶ್ಯಾಮ್
        ಏಪ್ರಿಲ್ 11 2015

        ಎಲ್ಲದಕ್ಕೂ ನಮ್ಮ ಸಂವಿಧಾನವನ್ನೇ ಹೋಲಿಕೆ ಕೊಡುತ್ತೀರಿ .ಕೇವಲ ೬೦-೬೫ ವರ್ಷಗಳಲ್ಲೇ ಎಷ್ಟೊಂದು ತಿದ್ದುಪಡಿ ಬಂದಿದೆ ಅದರಲ್ಲಿ. ಅದಕ್ಕೂ ಮೊದಲು ಜನರೆಲ್ಲಾ ಯಾವುದನ್ನು ಆಧಾರವಾಗಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು?
        ​ಇಲ್ಲಿಪ್ರಶ್ನೆ ಇರುವುದು ​ಹಿಂದುಳಿದವರನ್ನು ತುಳಿಯುತ್ತಿರುವವರು ಯಾರು​. ಅಲ್ಲಿ ಉಡುಪಿ ಮಠವೂ ಇಲ್ಲ ಲಿಂಗಾಯತ ಮಠವೂ ಇಲ್ಲ . ಅಲ್ಲಿ ಇರುವುದು ತಮ್ಮ ಸಹೋದರರನ್ನು ಮೇಲೇರಲು ಬಿಡದ ಸ್ವಾರ್ಥ ಜನರು ಅಷ್ಟೇ . ಅವರಿಗೆ ಬುದ್ದಿ ಹೇಳಿ . ಅವರು ನಿಮ್ಮ ಜನರು ಆದರೆ ನಿಮ್ಮ ಮಾತು ಕೇಳುತ್ತಾರೆ . ಹೇಳಿ ನೋಡಿ . ​

        ಉತ್ತರ
      • ಏಪ್ರಿಲ್ 11 2015

        ಮಠಗಳು ಸರಕಾರಿ ಕಛೇರಿಗಳಲ್ಲಎಂದು ಕುಚೇಷ್ಟಕರು ತಿಳಿಯತಕ್ಕದ್ದು.
        ಅವು ಪರಂಪರೆ, ಸಂಸ್ಕೃತಿ, ಹಾಗೂ ನಮ್ಮ ಭವ್ಯ ಜ್ಞಾನ ವಾಹಿನಿಯನ್ನು ಜೀವಂತವಾಗಿ ಇಡುವ ಧಾರ್ಮಿಕ ಸಂಸ್ಥೆಗಳು ಎಂಬ ಮೂಲಭೂತ ಮಾಹಿತಿಯನ್ನು ಮನಗಾಣತಕ್ಕದ್ದು. ಲೇಖನದ ಮೂಲ ಆಶಯವನ್ನು ಅರಿಯತಕ್ಕದ್ದು, ವಿರೋಧಿಸುವದೇ ತಮ್ಮ ಧ್ಯೇಯ ಎಂಬ ಹುಂಬತನ ಬಿಡತಕ್ಕದ್ದು.
        ಬಿಡಲಾಗದಿದ್ದರೆ ಎಗರಾಡತಕ್ಕದ್ದು

        ಉತ್ತರ
      • shripad
        ಏಪ್ರಿಲ್ 11 2015

        ಶರಣರು ಏಕಕಾಲಕ್ಕೆ ದರ್ಗಾರಾಧಕರೂ ಪ್ರಗತಿಪರರೂ ಬುದ್ಧಿಜೀವಿಗಳೂ ದಲಿತರೂ ಇತ್ಯಾದಿ ಇತ್ಯಾದಿ ಏಕಪಾತ್ರಾಭಿನಯ ಹೇಗೆ ಮಾಡಲು ಸಾಧ್ಯ ಎಂಬುದನ್ನು ಹೇಳತಕ್ಕದ್ದು.

        ಉತ್ತರ
      • WITIAN
        ಏಪ್ರಿಲ್ 11 2015

        “ಭಾರತದ ಸಂವಿಧಾನವನ್ನು ಅಧ್ಯಯನ ಮಾಡಿರುವ ದಲಿತನನ್ನು ಉಡುಪಿ ಮಠದ ಅಧಿಪತಿ ಮಾಡತಕ್ಕದ್ದು. ಅಂವ ವೈದಿಕರಿಗೆ ಸಂವಿಧಾನದ ಬೋಧನೆ ಮಾಡುತ್ತಾನೆ, ಸಮಾನತೆಯ ಸಂದೇಶ ಹರಡುತ್ತಾನೆ. ಅದಲ್ಲವೇ ನಿಜವಾದ ಅಧ್ಯಾತ್ಮ?”

        ತಲೆ/ ಬುದ್ಧಿ ಎಲ್ಲವನ್ನೂ ದರ್ಗಾ ಸರ್ ಅವರ ಮದರಸಾದಲ್ಲಿ ಅಡ ಇಟ್ಟು ಬಂದ ಮೂರ್ಖಾ, ಕೇಳಿದ ಪ್ರಶ್ನೆಗೆ ಉತ್ತರ ಕೊಡು. ಯಾವ ದಲಿತ ವೇದ,ಶಾಸ್ತ್ರ, ಆಗಮ, ಪುರಾಣಗಳನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿ ಬೋಧನೆ ಮಾಡುವಷ್ಟು ಜ್ಞಾನ ಪಡೆಯಲು ತಯಾರಿದ್ದಾನೆ? ನಿನ್ನ ಉತ್ತರ ಹೇಗಿದೆಯೆಂದರೆ, ಇಂಗ್ಲಿಷ್ ಎಂಎ ಮಾಡಿದ ಮನುಷ್ಯ ‘ಪಿಎಚ್ ಡಿ ಮಾಡಿದ್ದೇನೆ, ನನಗೆ ಇಸ್ರೋ ದಲ್ಲಿ ರಾಕೆಟ್ ತಯಾರಿಕೆಯ ಗ್ರೂಪಿಗೆ ಮುಖ್ಯಸ್ಥನ ಹುದ್ದೆ ಬೇಕು’ ಎಂದು ಕೇಳಿದಂತೆ!

        ಉತ್ತರ
        • Nagshetty Shetkar
          ಏಪ್ರಿಲ್ 11 2015

          WITIAN ಅವರೇ, ಕ್ಷಮಿಸಿ ಸಭ್ಯತೆಯೇ ಇರದವರೊಡನೆ ನನಗೆ ಚರ್ಚೆ ಮಾಡಲು ಇಷ್ಟವಿಲ್ಲ. ಮೊದಲು ಸಭ್ಯತೆಯ ಪಾಠ ಕಲಿತು ಬನ್ನಿ, ಆಮೇಲೆ ನಿಮ್ಮೊಡನೆ ಸಂವಾದ.

          ಉತ್ತರ
      • WITIAN
        ಏಪ್ರಿಲ್ 11 2015

        ವಿಷಯಾಂತರ ಮಾಡಬೇಡ! ಲಿಂಗಾಯತರ ಮಠಗಳಲ್ಲಿ ಯಾವುದಾದರೂ ಒಂದು ಮಠ ದಲಿತನೊಬ್ಬನನ್ನು ಪೀಠಾಧಿಪತಿಯನ್ನಾಗಿ ಮಾಡಿದೆ ಎನ್ನುವ ಪ್ರಶ್ನೆಗೆ ನಿನ್ನುತ್ತರ ಏನು?

        ಉತ್ತರ
    • Nagshetty Shetkar
      ಏಪ್ರಿಲ್ 11 2015

      ಬಸವ ಚಳುವಳಿಯಿಂದ ಪ್ರೇರಿತವಾಗಿದ್ದರೂ ವೀರಶೈವ ಸಂಪ್ರಾದಯವು ವೈದಿಕರಂತೆ ನೂರಾರು ದೇವರುಗಳನ್ನು ಪೂಜಿಸುತ್ತಾ ಬಂದಿವೆ. ವೀರಶೈವ ಮಠಗಳೂ ವೈದಿಕರ ಮಠಗಳ ಹಾಗೆ ಕಂದಾಚಾರದಲ್ಲಿ ಮುಳುಗಿ ಹೋಗಿವೆ. ಕರ್ಮಸಿದ್ಧಾಂತಕ್ಕೆ ಜೋತು ಬಿದ್ದಿವೆ. ವೀರಶೈವ ಸಂಪ್ರದಾಯವೇ ಬೇರೆ ಲಿಂಗಾಯತ ಧರ್ಮವೇ ಬೇರೆ ಅಂತ ದರ್ಗಾ ಸರ್ ಅವರು ವೈಚಾರಿಕವಾಗಿ ಸ್ಪಷ್ಟೀಕರಣ ನೀಡಿದ್ದಾರೆ. ವೀರಶೈವ ಮಠಗಳೂ ದಲಿತರನ್ನು ಪೀಠಾಧಿಪತಿಯನ್ನಾಗಿ ಮಾಡಬೇಕು ಎಂಬುದು ಪ್ರಗತಿಪರ ನಿಲವು ಆಗಿದೆ. ಆದರೆ ದಲಿತ ಕೇರಿಗಳಿಗೆ ಹೋಗಿ ವಿಷ್ಣು ದೀಕ್ಷೆ ಕೊಡುವ ನಾಟಕವಾಡುವ ಪೇಜಾವರ ಪೀಠಾಧಿಪತಿಗಳು ದಲಿತರನ್ನು ಉಡುಪಿ ಮಠಗಳ ಉತ್ತಾರಾಧಿಕಾರಿಯಾಗಿಸತಕ್ಕದ್ದು ಎಂದು ಆಗ್ರಹಿಸುವುದು ಸದ್ಯದ ಸಂದರ್ಭದಲ್ಲಿ ಅಗತ್ಯವಾಗಿದೆ.

      ಉತ್ತರ
      • shripad
        ಏಪ್ರಿಲ್ 11 2015

        “ವೀರಶೈವ ಸಂಪ್ರದಾಯವೇ ಬೇರೆ ಲಿಂಗಾಯತ ಧರ್ಮವೇ ಬೇರೆ ಅಂತ ದರ್ಗಾ ಸರ್ ಅವರು ವೈಚಾರಿಕವಾಗಿ ಸ್ಪಷ್ಟೀಕರಣ ನೀಡಿದ್ದಾರೆ” ಹೀಗೆಲ್ಲ ಸ್ಪಷ್ಟೀಕರಣಕೊಡುವವರು ಯಾಕಿನ್ನೂ ಇಸ್ಲಾಂ ತೊರೆದು ಲಿಂಗಾಯತಕ್ಕೆ ಶರಣಾಗಿಲ್ಲ ಎಂದು ತಿಳಿಸತಕ್ಕದ್ದು. ಬರೀ ಮಾತಿಗೆ ಸೀಮಿತರಾದವರಿಗೆ ಯಾವ ಬೆಲೆಯೂ ಇಲ್ಲ ಎಂಬುದನ್ನು ತಿಳಿಯತಕ್ಕದ್ದು.

        ಉತ್ತರ
        • WITIAN
          ಏಪ್ರಿಲ್ 11 2015

          ‘ಅಥವಾ ಕಾರ್ಲ್ ಮಾರ್ಕ್ಸ್ ಪ್ರಣೀತ ಮಾರ್ಕ್ಸ್ ವಾದವನ್ನು ಬಿಟ್ಟು… ‘

          ಉತ್ತರ
        • Nagshetty Shetkar
          ಏಪ್ರಿಲ್ 12 2015

          “ದರ್ಗಾ ಸರ್ ಅವರು ಯಾಕಿನ್ನೂ ಇಸ್ಲಾಂ ತೊರೆದು ಲಿಂಗಾಯತಕ್ಕೆ ಶರಣಾಗಿಲ್ಲ ಎಂದು ತಿಳಿಸತಕ್ಕದ್ದು”

          ದರ್ಗಾ ಸರ್ ಅವರು ಏನು ಮಾಡತಕ್ಕದ್ದು ಅಂತ ಹೇಳಲು ನೀವು ಯಾರು? ನಿಮಗೆ ನೈತಿಕ ತಾಕತ್ತಿದ್ದರೆ ಪೇಜಾವರ ಅಧೀಶರಿಗೆ ಹೇಳಿ ದಲಿತರನ್ನು ಉಡುಪಿ ಮಠಗಳ ಉತ್ತರಾಧಿಕಾರಿಯಾಗಿ ನಿಯುಕ್ತ ಮಾಡಿ ಅಂತ.

          ಉತ್ತರ
          • shripad
            ಏಪ್ರಿಲ್ 12 2015

            ಪೇಜಾವರರು ಏನು ಮಾಡಬೇಕು ಎಂದು ತಾವು ಅಪ್ಪಣೆ ಕೊಡಿಸುವಷ್ಟೇ ಅಧಿಕಾರ ಇದನ್ನು ಹೇಳಲು ನನಗೂ ಇರುವುದು!

            ಉತ್ತರ
  4. aki
    ಏಪ್ರಿಲ್ 11 2015

    ಶೆಟ್ಕರ್ ಅವರೆ ನಿಮಗೆ ನಿಮ್ಮ ಲಿಂಗಾಯತ ಧರ್ಮದ ಮಠಗಳು ಅವರ ಕಂದಾಚಾರಗಳು , ಅವರ ಢೋಂಗೀತನ ಇವೆಲ್ಲಾ ಕಣ್ಣಿಗೆ ಕಾಣುವದಿಲ್ಲವಲ್ಲಾ?? ಅವರ ಭೋಗಗಳ ಬಗ್ಗೆ ಅಡ್ಡ ಪಲ್ಲಕ್ಕಿ , ಹೇಳುವದು ಬಸವ ಧರ್ಮ ಮಾಡುವದು ಬೇರೊಂದು ಇವೆಲ್ಲಾ ಕಣ್ಣಿಗೆ ಕಾಣದೇ ಕೇವಲ ಉಡುಪಿ ಮಠ ಮಾತ್ರ ಕಣ್ಣಿಗೆ ಕಾಣುತ್ತದಲ್ಲಾ ಯಾಕೆ? ಮೊದಲು ನಿಮ್ಮ ಮಠಗಳನ್ನು ಸರಿಪಡಿಸಿಕೊಳ್ಳಿ ನಂತರ ಬೇರೆಯವರ ಉಸಾಬರಿಗೆ ಬನ್ನಿ. ಇನ್ನು WITIAN ಅವರಿಗೆ ಸಭ್ಯತೆ ಇಲ್ಲದವರೊಂದಿಗೆ ಚರ್ಚಿಸುವದಿಲ್ಲಾ ಎಂದಿರುವಿರಲ್ಲಾ?? ” ಹಿಂದಿನ ಕೆಲವು ಕಮೆಂಟಿನಲ್ಲಿ ನೀವು ನನಗೆ ಹಿಟ್ಲರಿಗೆ ಹುಟ್ಟಿದ್ದೀಯಾ? ಎಂದು ಕೇಳಿದ್ದಿರಿ. ಇದು ಸಭ್ಯತೆಯಾ? ಮೊದಲು ಮನೆ ಗೆದ್ದು ಮಾರು ಗೆಲ್ಲಿ. ಸಭ್ಯತೆ ಮೊದಲು ರೂಢಿಸಿಕೊಂಡು ಬೇರೆಯವರಿಗೆ ಪಾಠ ಹೇಳಿ. ಎಷ್ಟೋ ಜನಕ್ಕೆ ಇದೇ ರೀತಿ ಕಮೆಂಟಿಸಿದ್ದನ್ನು ನಾನೇ ಬರೆದು ತೋರಿಸಿದ್ದೆ. ಪುನಃ ನೆನಪಿಸುವಂತೆ ಮಾಡಿದ್ದೀರಿ. ಅದೇ ಕಮೆಂಟನ್ನು ಇನ್ನೊಮ್ಮೆ ಹಾಕಲೇ ನೀವು ಯಾರ್ಯಾರಿಗೆ ಎಷ್ಟು ಸಭ್ಯತೆಯಿಂದ ಮಾತನಾಡಿ ಕಮೆಂಟಿಸಿದ್ದೀರೆಂದು ನೋಡುತ್ತೀರಾ?

    ಉತ್ತರ
    • shripad
      ಏಪ್ರಿಲ್ 11 2015

      +1111111111111

      ಉತ್ತರ
    • shripad
      ಏಪ್ರಿಲ್ 12 2015

      “…we are concerned about your actions” and…caste, to be frank! This is inevitable to create so called “secular society”. Purohitashahi created castes, but we are counting it.

      ಉತ್ತರ
  5. ಏಪ್ರಿಲ್ 12 2015

    ಇಲ್ಲಿದ್ದ ಒಂದಷ್ಟು ಕಮೆಂಟುಗಳನ್ನು ಡಿಲಿಟ್ ಮಾಡಿದ್ದೇನೆ.

    ಸ್ವಾಮಿ ಶೆಟ್ಕರ್ ಸಾಹೇಬರೆ,ವಿಷಾಯಾಂತರ ಮಾಡುವ ತಮ್ಮ ಕೆಟ್ಟ ಅಭ್ಯಾಸವನ್ನು ತಾವು ಮುಂದುವರಿಸಿರುವ ಕಾರಣ,ನಿಮ್ಮ ಕಮೆಂಟುಗಳನ್ನು ಮಾಡರೇಟ್ ಮಾಡುತಿದ್ದೇವೆ.ಕೊಟ್ಟ ಸ್ವಾತಂತ್ರ್ಯವನ್ನು ಸ್ವೇಚ್ಚೇಯಾಗಿ ಬಳಸಿಕೊಳ್ಳುವವರನ್ನು ತಡೆಯಲೇಬೇಕಲ್ಲ! ಇನ್ನೂ ಹೀಗೆಯೇ ಮುಂದುವರೆದರೆ ನಿಮ್ಮನ್ನು ಕಮೆಂಟಿಸುವುದರಿಂದಲೇ ಬ್ಲಾಕ್ ಮಾಡಲಾಗುವುದು.

    @ಉಳಿದವರಿಗೆ : ನೀವುಗಳು ಶೆಟ್ಕರ್ ಅವರ ಲೆವೆಲ್ಲಿಗೆ ಇಳಿಯದಿರಿ.ಎಲ್ಲರೂ ಹೀಗೆ ವರ್ತಿಸಿದರೆ ನಾವು ಎಲ್ಲರ ಕಮೆಂಟುಗಳನ್ನು ಮಾಡಬೇಕಾದೀತು.ಅದು ನಮಗೆ ಇಷ್ಟವಿಲ್ಲದ ಕೆಲಸ

    ಉತ್ತರ
    • WITIAN
      ಏಪ್ರಿಲ್ 12 2015

      ರಾಕೇಶ್ ಶೆಟ್ಟರೆ,

      ಕಡೆಗೂ ರಂಗಕ್ಕೆ ಇಳಿದು ತಮ್ಮ ಮಾಡರೇಷನ್ ಆಯುಧವನ್ನು ಝಳಪಿಸಿದಿರಿ! ಸಂತೋಷ.

      ನಾಗಶೆಟ್ಟಿ ಶೇತ್ಕರ್ ಎಂಬ ಈ ಓದುಗ ಇದುವರೆಗೆ ಬರೆದ ಎಲ್ಲ ಪ್ರತಿಕ್ರಿಯೆಗಳನ್ನು ಸ್ವಲ್ಪ ಗಮನಿಸಿ ನೋಡಿ. ಅತಾರ್ಕಿಕವಾಗಿ, ಲೇಖನಕ್ಕೆ ಕೊಂಚವೂ ಸಂಬಂಧವಿಲ್ಲದಂತೆ ಅಷ್ಟೆ ಅಲ್ಲ, ಕಮೆಂಟು ಮಾಡುವ ಅರ್ಹತೆಯೇ ಇಲ್ಲದಿದ್ದರೂ ಲೇಖನ ಬರೆದವರ ವಿದ್ವತ್ತನ್ನೇ ಪ್ರಶ್ನಿಸುವಂತೆ ಬರೆಯುತ್ತಿದ್ದ ಕಮೆಂಟುಗಳನ್ನು ನೋಡಿ ಈತನ ರೀತಿಯಲ್ಲೇ ಉತ್ತರ ಕೊಟ್ಟೆ. ಹಾಗೆ ಉತ್ತರ ಕೊಟ್ಟ ನಂತರವೂ ಈ absurdity ಮುಂದುವರಿದಿತ್ತು. ನೀವು ನನ್ನ ಪ್ರತಿಕ್ರಿಯೆಗಳನ್ನು ತೆಗೆದು ಹಾಕಿದ್ದು ನನಗೆ ಬೇಸರ ಇಲ್ಲ. ಇಂಥ ಪ್ರತಿಕ್ರಿಯೆ ಬರೆಯುವುದು ಸಂತೋಷದ ವಿಷಯವೇನಲ್ಲ. ಆದರೆ ಮನೆ ಗುಡಿಸುವಾಗ ಮೈ, ಕೈ ಧೂಳಾಗುತ್ತದೆ ಎಂದು ಸುಮ್ಮನೆ ಕೂರಲು ಸಾಧ್ಯವಿಲ್ಲವಲ್ಲ. ಮೇಲಾಗಿ ಇದು ಸಾರ್ವಜನಿಕ ವೇದಿಕೆ, ಇಲ್ಲಿ ಹೊಲಸು ಮಾಡಿದವರನ್ನು ಬೈಯುವ ಅಧಿಕಾರವೂ ಇಲ್ಲವೆ ನಮಗೆ! ಇನ್ನಾದರೂ ಈ ಪ್ರಭೃತಿ ಬುದ್ಧಿ ಕಲಿಯುತ್ತದೆ ಎಂದು ಭಾವಿಸುತ್ತೇನೆ.

      ತಮ್ಮ ವಿಶ್ವಾಸಿ

      WITIAN

      ಉತ್ತರ
      • ಏಪ್ರಿಲ್ 12 2015

        ನಿಜ,
        ಚಂಡಾಲ ದೇವರಿಗೆ ಚಪ್ಪಲಿ ಪೂಜೆಯೇ ಎಂಬ ಗಾದೆಯೇ ಇದೆಯಲ್ಲಾ!

        ಉತ್ತರ
  6. hemapathy
    ಏಪ್ರಿಲ್ 14 2015

    ಹಿಂದುಳಿದವರನ್ನೂ ಸೇರಿಸಿ ಎಲ್ಲರನ್ನೂ ತುಳಿಯುತ್ತಿರುವವರು ರಾಜಕಾರಣಿಗಳು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments