ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 16, 2015

ಸರ್ಕಾರ ನಡೆಸುವಾಗ ನಾವೆಲ್ಲರೂ ಒಂದೇ…!!!

‍ನಿಲುಮೆ ಮೂಲಕ

– ಲೋಹಿತ್ ಚಳಗೇರಿ

Khemkaಭ್ರಷ್ಟಚಾರ ವಿರೋಧದ ಕ್ರಮದಲ್ಲಿ ಪಕ್ಷಾತೀತವಾಗಿ ನಾವೆಲ್ಲರೂ ಒಂದೇ ಎಂದು ಬಿ.ಜೆ.ಪಿ. ಮತ್ತೊಂದು ಬಾರಿ ತೋರಿಸಿಕೊಟ್ಟಿದೆ. ಭ್ರಷ್ಟಚಾರ ವಿರುದ್ಧದ ಕ್ರಮ ಕೇವಲ ಒಂದು ’ಪೊಲಿಟಿಕಲ್ ಕಾರ್ಡ್’ ಮಾತ್ರ ಎಂಬುದನ್ನು ಮತ್ತೊಂದು ಬಾರಿ ಸಾಬೀತು ಮಾಡುವಲ್ಲಿ ಆ ಪಕ್ಷ ಯಶಸ್ವಿಗೊಂಡಿದೆ.

“ಖೇಮ್ಕಾ ಒಬ್ಬ ಪ್ರಾಮಾಣಿಕ ಅಧಿಕಾರಿ,ಅವರನ್ನು ಸರ್ಕಾರ ಯಾವ ಇಲಾಖೆಗೆ ಬೇಕಾದರೂ, ವರ್ಗ ಮಾಡಬಹುದು. ಇದು ಸರ್ಕಾರದ ನಿರ್ಧಾರ” ಎಂದು ಮುಖ್ಯ ಮಂತ್ರಿ ಎಮ್.ಎಲ್. ಖಟ್ಟರ್ ಹೇಳುತ್ತ ಬಿ.ಜೆ.ಪಿ.ಯ ನಿಜ ಮುಖ ಬಯಲು ಮಾಡಿದರು. ಅವರ ಈ ಹೇಳಿಕೆ ಹಿಂದೆ ಮೋದಿಜೀ ಒಂದು ಸಂದರ್ಶನದಲ್ಲಿ ನೀಡಿದ “Law will take it’s own course on Vadra” ಎಂಬ ಹೇಳಿಕೆಗೆ ಇಂಬು ಕೊಡುವಂತಿತ್ತು. ಅಲ್ಲ, ಮೋದಿಜೀ, ನನ್ನದೊಂದು ಪ್ರಶ್ನೆ ಹಿಂದೆ ಕಾಂಗ್ರೆಸ್ ಇದ್ದಾಗಲೂ “Law had taken it’s own course” ಅದಕ್ಕೆ ನಿಮ್ಮ ಸರ್ಕಾರವೇ ಆಗಬೇಕಿತ್ತೇ???

ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ವಾದ್ರಾ ಮತ್ತು ಭಾರತದ ಮೊದಲನೆ ಕುಟುಂಬದ ವಿರುದ್ಧ ದಾಮಾದ್ ಶ್ರೀ-ದಾಮಾದ್ ಶ್ರೀಯೆಂದು ಹರಿಹಾಯ್ದ ಬಿ.ಜೆ.ಪಿ ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸಿತು.ಅಷ್ಟೇ ಅಲ್ಲದೆ, ಇತ್ತೀಚಿಗೆ ನಡೆದ ಹರ್ಯಾಣ ಚುನಾವಣೆಯಲ್ಲೂ ಈ ವಿಷಯದಿಂದಲೇ ಗೆಲುವು ಸಾಧಿಸಿ ತನ್ನ ಬೇಳೆ ಬೇಯಿಸಿಕೊಂಡಿತ್ತು. ಆದರೇ, ಇಲ್ಲಿ ಅತ್ಯಂತ ಮುಖ್ಯ ವಿಷಯವೇನೆಂದರೇ, ಖೇಮ್ಕಾ ಮೇಲೆ ಒಟ್ಟು ಎರಡು ಚಾರ್ಜ್ ಶೀಟ್ ಗಳಿವೆ, ಅದರಲ್ಲಿ

1) ವಾದ್ರಾ ಭೂಚಕ್ರ ಬಯಲಿಗೆಳೆದ ನಂತರ, ಅವರ ಮೇಲೆ “ವಾದ್ರಾ ಮಾನಹಾನಿ ಮತ್ತು ಕಾನೂನುಬಾಹಿರ ಕ್ರಮಕ್ಕೆ” ಮೊದಲನೆ ಚಾರ್ಜ್ ಶೀಟ್ ದಾಖಲಾಗಿತ್ತು. ಮತ್ತು

2) ಎಚ್.ಎಸ್.ಡಿ.ಸಿ.(ಹರ್ಯಾಣ ಸಿಡ್ಸ್ ಡಿವಲಪ್ ಮೆಂಟ್ ಕಾರ್ಪೊರೆಶನ್)ನಲ್ಲಿನ ಗೋಧಿ ಬಿತ್ತನೆ ಬೀಜದ ಲೇವಾದೇವಿಯಲ್ಲಿ ನಡೆದ ಅವ್ಯವಹಾರದ ಕುರಿತು ಅವರು ಸರ್ಕಾರಕ್ಕೆ C.B.I. ತನಿಖೆಗೆ ಶಿಫಾರಸ್ಸು ಮಾಡಿದರು. ಇದರಿಂದ ಕೆರಳಿದ ಹೂಡಾ ಸರ್ಕಾರ ಅವರ ಮೇಲೆ “ಎಚ್.ಎಸ್.ಡಿ.ಸಿ.ಯಲ್ಲಿನ ಕರ್ತವ್ಯ ಲೋಪಕ್ಕಾಗಿ”, ಎರಡನೇ ಚಾರ್ಜ್ ಶೀಟ್ ದಾಖಲಿಸಿತ್ತು.

ಆದರೇ, ಬಿ.ಜೆ.ಪಿ. ಪ್ರತಿಪಕ್ಷದಲ್ಲಿದ್ದಾಗ, ಈ ಎರಡು ಚಾರ್ಜ್ ಶೀಟ್ ಗಳನ್ನು ಸುಖಾಸುಮ್ಮನೆ ಕಾಂಗ್ರೆಸ್ ಅವರ ಮೇಲೆ ಜಡಿದಿದೆ ಮತ್ತು ಇದೆಲ್ಲ ಸುಳ್ಳು ಎನ್ನುತ್ತಿತ್ತು. ಈಗ ಆ ಪಕ್ಷ ಅಧಿಕಾರದಲ್ಲಿದೆ, ಈ ಎಲ್ಲ ಚಾರ್ಜ್ ಶೀಟ್ ಗಳನ್ನು ಮೊಟಕುಗೊಳಿಸಲಿ. “ಪ್ರಾಮಾಣಿಕರಾದ್ ಖೇಮ್ಕಾ ತರಹದವರು ಕೇಂದ್ರಮಟ್ಟದ ಸರ್ಕಾರದ ಸೇವೆಯಲ್ಲಿರಬೇಕು”, ಎಂಬ ಮೋದಿಜೀ ಆಸೆಗೆ ಅವರೇ ಬುನಾದಿ ಹಾಕಿದಂತಾಗಲಿ. ತಮಾಷೆಯೆಂದರೆ ಇಲ್ಲಿಯವರೆಗೂ ಅವರ ಮೇಲಿನ ಒಂದೇ-ಒಂದು ಚಾರ್ಜ್ ಶೀಟ್ ಕೂಡಾ ರದ್ದು ಮಾಡಿಲ್ಲಾ. (ಚಾರ್ಜ್ ಶೀಟೆಡ್ I.A.S. ಅಧಿಕಾರಿಗಳಿಗೆ ಹುದ್ದೆಯಲ್ಲಿ ಬಡ್ತಿ ಸಿಗುವದಿಲ್ಲಾ.) ಅಷ್ಟೇ ಅಲ್ಲದೇ, ಖೇಮ್ಕಾರನ್ನು ವರ್ಗ ಮಾಡಿದ ಬಿ.ಜೆ.ಪಿ. “Transfer is a routine” ಎಂದಿತ್ತು. ಇದು ರಾಜೀವ ಅರೋರಾರಂಥ 7-8 ವರ್ಷ ಒಂದೆ ಇಲಾಖೆಯಲ್ಲಿರುವವರಿಗೆ ಏಕೆ ಅನ್ವಯಿಸುವದಿಲ್ಲ? ಮತ್ತೆ ಬಿ.ಜೆ.ಪಿ.ಯ ಶಾನ್ ವಾಜ್ ಹುಸೇನ್ ಹೇಳ್ತಾರೆ,”service is a service.archaeology is also an important work”, ಹಾಗಿದ್ದರೆ ಹುಸೇನರೇ, ಮೋದಿಜೀಗೆ ಇದೇ archaeology ಇಲಾಖೆ ಒಂದನ್ನೇ ಕೊಟ್ಟು, ಪ್ರಧಾನ ಮಂತ್ರಿ ಹುದ್ದೆ ಅಡ್ವಾಣಿಜೀಗೆ ಕೊಡಲಿ. ಇಲ್ಲೂ ನಿಮ್ಮ logic ಅನ್ವಯಿಸಲಿ, service ia a service ಅಲ್ಲವೇ??

ಕೇವಲ ಖೇಮ್ಕಾ ಒಬ್ಬರೇ ಅಲ್ಲ, ಇನ್ನೂ ಹಲವಾರು I.A.S. ಅಧಿಕಾರಿಗಳು ತಮ್ಮ ಪ್ರಾಮಾಣಿಕತೆ ಮೆರೆದು, ಅದರಿಂದ ಬಂದ ಹಾಲಾಹಲದ ಪ್ರತಿಫಲವನ್ನು ಅನುಭವಿಸುತ್ತಾ, ಪಕ್ಷಾತೀತವಾಗಿ ಪ್ರತಿಪಕ್ಷಗಳ ’ಪೊಲಿಟಿಕಲ್ ಕಾರ್ಡ’ಗಳಾಗಿದ್ದಾರೆ. ಅವರಲ್ಲಿ ಪ್ರಮುಖರು: 1) ದುರ್ಗಾಶಕ್ತಿ- ಕಾನೂನುಬಾಹಿರ ಮರಳು ಮಾಫಿಯಾವನ್ನು ಉತ್ತರ ಪ್ರದೇಶದಲ್ಲಿ ಬಯಲಿಗೆಳೆದರು, 2)ಅರುಣ್ ಭಾಟಿಯಾ- ಭ್ರಷ್ಟಚಾರದ 107 ಕೇಸುಗಳನ್ನು ಖುಲಾಸೆಗೊಳಿಸಿದರು. 3) ಜಿ. ಆರ್. ಖೈರನಾರ್- ಭೂಮಾಫಿಯಾ ಮತ್ತು ಸಾರ್ವಜನಿಕ ಭೂಮಿಯ ಒತ್ತುವರಿ ವಿರುದ್ಧ ಹೋರಾಟ ನಡೆಸಿದರು, 4) ಕೆ.ಜೆ. ಅಫ್ಲೊಂಸ್- 10,000 ಕೋಟಿ ಬೆಲೆಬಾಳುವ ಸರ್ವಜನಿಕ ಆಸ್ತಿಯನ್ನು ಭೂಹಿಡುವಳಿದಾರರಿಂದ ಸರ್ಕಾರಕ್ಕೆ ಹಿಂದಿರುಗಿಸಿದರು.

ಇಂತಹ ಪ್ರಾಮಾಣಿಕರು ಹೇಗೆ ರಾಜಕೀಯ ದಾಳಗಳಾಗುತ್ತಾರೆ, ಎಂಬುದಕ್ಕೆ ಡಿ.ಕೆ.ರವಿಯವರ ಕೇಸು ಅತ್ಯಂತ ತಾಜಾ ಉದಹರಣೆಯಗಿದೆ. ಕಾಂಗ್ರೆಸ್ ಆ ಕೇಸನ್ನು C.I.D.ಗೆ ವರ್ಗಾಯಿಸಿತ್ತು, ಆಗ ಬಿ.ಜೆ.ಪಿ., ಇಲ್ಲ ಅದನ್ನು C.B.I.ಗೆ ಹಸ್ತಾಂತರಿಸಬೇಕೇಂದು ರಸ್ತೆಗಳಿದಿತ್ತು.ಆದರೇ,ಹಿಂದೆ ಅವರದೇ ಸರ್ಕಾರವಿದ್ದಾಗ ನಡೆದ ಅರಣ್ಯಾಧಿಕಾರಿ ಮದನ ನಾಯಕ ಅವರ ಕೊಲೆ ಕೇಸನ್ನು ಅವರೇಕೇ ಆಗ C.B.I.ಗೆ ವರ್ಗಾಯಿಸಲಿಲ್ಲ?

ಹೀಗೆ ಮಹಾನ್-ಮಹಾನ್ ಪಕ್ಷಗಳು ಪ್ರಾಮಾಣಿಕ ಅಧಿಕಾರಿಗಳನ್ನು ರಾಜಕೀಯ ದೃಷ್ಟಿಯಿಂದ ನೋಡಿದರೇ, ಬಹುತೇಕ ಚಾನೆಲ್ ಗಳು ಟಿ.ಆರ್.ಪಿ. ದೃಷ್ಟಿಯಿಂದ ನೋಡುತ್ತವೆ. ಆದರೇ, ಇಂಥಹ ಮಹಾನ್ ಸಾಧನೆ ಮಾಡಿದ ಈ ಪ್ರಾಮಾಣಿಕರಿಗೆ ಬೆಂಬಲ ಸೂಚಿಸುವುದೇ ಮತ್ತು ಇಂತವರು ಜನಜನಿತವಾಗ ಬೇಕೇಂಬುದೇ ಈ ಲೇಖನದ ಒಟ್ಟು ಆಶಯ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments