ಸರಳ ಯೋಚನೆ ಕಾಲದ ಅನಿವಾರ್ಯ
– ಡಾ.ಕಿರಣ್.ಎಂ ಗಾಜನೂರು
ಗೌರವಾನ್ವಿತ ಮು.ಅ ಶ್ರೀರಂಗ ಅವರೆ ತಾವು ನನ್ನ ಲೇಖನಕ್ಕೆ ನೀಡಿದ ಸಹಸ್ಪಂದನಕ್ಕೆ ಧನ್ಯವಾದಗಳು.ನೀವು ಎತ್ತಿರುವ ಪ್ರಶ್ನೆಗಳು ನಿಮ್ಮೊಬ್ಬರವೆ ಅಲ್ಲ ಜಗತ್ತಿನ ಬಹಳಷ್ಟು ಜನ ಇದೆ ಮಾದರಿಯ ಪ್ರಶ್ನೆಗಳನ್ನು ಹೊಂದಿದ್ದಾರೆ.ಆದರೆ,ಉತ್ತರ ಮತ್ತು ಪರಿಹಾರದ ಪ್ರಯತ್ನಗಳಿಂದ ದೂರ ಉಳಿದಿದ್ದಾರೆ.ನಮ್ಮ ನಡುವೆಯೇ ಇರುವ ಪ್ರಸನ್ನ ಅವರಂತಹ ಕೆಲವರಿಂದ ನಮ್ಮ ಆಧುನಿಕತೆಯ ವ್ಯಸನಗಳಿಗೆ ಪರಿಹಾರದ ಪ್ರಯತ್ನಗಳು ನಡೆದಾಗ ಅದನ್ನು ನೈತಿಕವಾಗಿ ಸಮರ್ಥಿಸುವುದು ನನ್ನ ನೈತಿಕತೆ ಎಂಬುದು ನನ್ನ ನಿಲುವು.ಇನ್ನು ನಾನು ನಿಮಗೆ ಎರಡು ಉದಾಹರಣೆಗಳ ಮೂಲಕ ಸುಸ್ಥಿರ ಬದುಕನ್ನು ವಿವರಿಸುವ ಪ್ರಯತ್ನ ಮಾಡುತ್ತೇನೆ.
೧) ಒಂದು ಜಗತ್ತಿನ ಶ್ರೇಷ್ಟ ನಟ ಚಾರ್ಲಿ ಚಾಂಪ್ಲೀನ್ ನ ಒಂದು ಸಿನಿಮಾ ಇದೆ ಮಾಡ್ರನ್ ಟೈಮ್ಸ್ ಅಂತ.ಅದರಲ್ಲಿ ಆತನೊಂದು ಕಾರ್ಖಾನೆಯ ನೌಕರ, ಆ ಉದ್ದಿಮೆಯ ಮಾಲಿಕನಿಗೆ ತನ್ನ ನೌಕರರು ಊಟ ಮಾಡುವ ಸಮಯದಲ್ಲಿ ಕೆಲಸ ನಿಲ್ಲಿಸುತ್ತಿದ್ದಾರೆ ಇದರಿಂದ ನಷ್ಟವಾಗುತ್ತಿದೆ ಅನ್ನಿಸುತ್ತದೆ ಆದ್ದರಿಂದ ಊಟ ಮಾಡುತ್ತಲೇ ಕೆಲಸ ಮಾಡುವ ಒಂದು ಯಂತ್ರವನ್ನು ರೂಪಿಸುವ, ಅಳವಡಿಸುವ ಪ್ರಯತ್ನ ಮಾಡುತ್ತಾನೆ ಮತ್ತು ಪರೀಕ್ಷಾರ್ಥವಾಗಿ ಅದನ್ನು ಚಾರ್ಲಿಯ ಮೇಲೆ ಪ್ರಯೋಗಿಸಲಾಗುತ್ತದೆ ಮುಂದಿನದು ಹಾಸ್ಯದ ಮೂಲಕವೇ ತನ್ನ ಕಾಲದ ಉದ್ಯಮಿಗಳ ಆಸೆಬುರುಕ ತನವನ್ನು ವಿಡಂಬನೆ ಮಾಡುವ ಚಿತ್ರ ಆಧುನಿಕತೆಯ ಪ್ರಭಾವಕ್ಕೆ ಒಳಗಾದ ಮನುಷ್ಯ ಹೇಗೆ ತನ್ನ ಸಹಜೀವಿಯಾದ ಇನ್ನೂಬ್ಬ ಮನುಷ್ಯನನ್ನು ನೌಕರ, ಕಾರ್ಮಿಕ, ಕೂಲಿ ಇತ್ಯಾದಿ ಚೌಕಟ್ಟುಗಳಲ್ಲಿ ನೋಡುತ್ತಾನೆ ಮತ್ತು ಲಾಭದ ಕಾರಣಕ್ಕೆ ಮಾನವೀಯತೆಯನ್ನು, ವ್ಯಕ್ತಿ ಗೌರವವನ್ನು ನಗಣ್ಯಗೊಳಿಸುತ್ತಾನೆ ಎಂಬುದನ್ನು ಚಿತ್ರ ಅಚ್ಚುಕಟ್ಟಾಗಿ ಕಟ್ಟಿಕೊಡುತ್ತದೆ.
೨) ತಮ್ಮ ತಂದೆಯ ಗಾಂಧಿ ವಾದದ ಕುರಿತು ಬರೆಯುವಾಗ ಒಬ್ಬ ಶ್ರೇಷ್ಟ ಚಿಂತಕ ಬರೆಯುತ್ತಾನೆ,ನಾನು ನನ್ನ ತಂದೆ ಒಮ್ಮೆ ವಾಯುವಿಹಾರಕ್ಕೆ ಹೋಗುತ್ತಿದ್ದೇವು ದಾರಿಯಲ್ಲಿ ಒಂದು ಪರ್ಸ್ ಬಿದ್ದಿತ್ತು ಅದರಿಂದ ನಾಲ್ಕಾರು ನೋಟುಗಳು ಇಚೆಗೆ ಕಾಣುತ್ತಿದ್ದವು ನಾನು ನನ್ನ ತಂದೆಗೆ ಅಪ್ಪ ನಾವು ಅದನ್ನು ತೆಗೆದುಕೊಳ್ಳಬಹುದೆ! ಎಂದು ಕೇಳಿದೆ ಅದಕ್ಕೆ ತಂದೆಯವರು ಒಂದು ಕ್ಷಣ ಯೋಚಿಸಿ ಇಲ್ಲ ತೆಗೆದುಕೊಳ್ಳಬಾರದು ಎಂದರು! ನಾನು ಏಕೆ? ಎಂದು ಕೇಳಿದೆ ಅದಕ್ಕೆ ಅವರು ಅದನ್ನು ನಾವು ತೆಗೆದುಕೊಳ್ಳದಿದ್ದರೆ ಬೇರೆ ಯಾರು ತೆಗೆದುಕೊಳ್ಳುವುದಿಲ್ಲ.ಆಗ ಅದನ್ನು ಕಳೆದುಕೊಂಡವನೆ ಬಂದು ಇದನ್ನು ತೆಗೆದುಕೊಳ್ಳುತ್ತಾನೆ ಮಗುವೆ ಎಂದು ಉತ್ತರಿಸಿದರು! ಜಗತ್ತಿನ ಹಲವು ಒತ್ತಡಗಳ ನಡುವೆಯೂ ನಾವು ನಾಗರೀಕವಾಗಿ ವರ್ತಿಸಬಹದು ಮತ್ತು ಇಡಿ ಸಮಾಜವನ್ನು ನಮ್ಮ ಹಾಗೆಯೆ ಊಹಿಸಿಕೊಂಡು ಬದುಕಬಹುದು ಎಂಬುದನ್ನು ನಮ್ಮ ತಂದೆ ನನಗೆ ಕಲಿಸಿಕೊಟ್ಟಿದ್ದರು ಅಂದು ನಿಜ ಅರ್ಥದಲ್ಲಿ ಗಾಂಧಿ ನನಗೆ ಅರ್ಥವಾಗಿದ್ದರು ಎಂದು ಬರೆಯುತ್ತಾರೆ.
ಮೇಲಿನ ಎರಡೂ ಉದಾಹರಣೆಗಳು ಆಧುನಿಕ ಕಾಲದಲ್ಲಿಯೆ ನಡೆದಿರುವುದು ಆದರೆ ವರ್ತನೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ.ಒಂದು ಕಡೆ ಮನುಷ್ಯನನ್ನು ತನ್ನ ಸಹಜೀವಿ ಎಂದು ಒಪ್ಪಿಕೊಳ್ಳಲು ನಿರಾಕರಿಸುವ ಯಂತ್ರ ಮಾನವನಿದ್ದರೆ ಮತ್ತೊಂದು ಕಡೆ ನಾನು ಯೋಚಿಸಿದಂತೆ ಸಮಾಜವೂ ಯೋಚಿಸುತ್ತದೆ ಎಂಬುದನ್ನು ಸಾರುವ ಕಥನವಿದೆ.ಆಧುನಿಕರಾದ ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಮ್ಮ ತಿರ್ಮಾನಕ್ಕೆ ಬಿಟ್ಟ ವಿಷಯ.ಮೇಲಾಗಿ ಆಧುನಿಕತೆಯನ್ನು ಅದು ಉಂಟುಮಾಡಿರುವ ವ್ಯಸನಗಳನ್ನು ದೂರಮಾಡಿಕೊಳ್ಳಿ ಎಂಬ ಮಾತನ್ನು ಬಹಳಷ್ಟು ಜನ ಸಂಕುಚಿತವಾಗಿ ಆಧುನಿಕ ಸವಲತ್ತುಗಳ ವಿರೋಧವಾಗಿಯೇ ಗ್ರಹಿಸುತ್ತಾರೆ.ಆದರೆ ವಾಸ್ತವದಲ್ಲಿ ಅದು ಹಾಗಲ್ಲ ಆಧುನಿಕ ಸವಲತ್ತುಗಳು ಮೂಲತಹ ಮನುಷ್ಯನ ಸಹ ಜೀವನಕ್ಕೆ ಪೂರಕವಾಗಿರುವಂತೆ ರೂಪಿಸಿಕೊಳ್ಳಬೇಕು ಎಂಬುದಷ್ಟೆ ಆ ವಾದದ ಉದ್ದೇಶ.ಇಂದು ನಾವು ಆಧುನಿಕ ಸವಲತ್ತುಗಳ ಭಾಗವಾಗಿ ಎಲ್ಲವನ್ನು ರೂಪಿಸಿಕೊಂಡಿದ್ದೇವೆ ಎಂಬ ಭ್ರಮೆಯನ್ನು ಬೆಳೆಸಿಕೊಳ್ಳುತ್ತಿದ್ದೇವೆ.ಆದರೆ ವಾಸ್ತವದಲ್ಲಿ ಈ ಸವಲತ್ತುಗಳು ಮನುಷ್ಯನ ಜೀವಿತಾವಧಿಯನ್ನು ೧೦೦ ರಿಂದ ೬೦ ಕ್ಕೆ ಇಳಿಸಿರುವ ಸಂಗತಿಯನ್ನೆ ಮರೆತು ಬಿಡುತ್ತೇವೆ.ನಾವು ತಿನ್ನುವ ಊಟದಲ್ಲಿಯೂ ರಾಸಾಯನಿಕ ಬೆರೆಸುತ್ತಿರುವ ಕ್ರೂರತೆ ನಮಗೆ ಕಾಣುವುದಿಲ್ಲ.ಮೇಲಾಗಿ ಮನುಷ್ಯನ ಸಹ ಜೀವನಕ್ಕೆ ನೆರವಾಗದ ಯಾವುದೆ ವಸ್ಥು ಮತ್ತು ತಂತ್ರಜ್ಞಾನ ಪ್ರಯೋಜನಕ್ಕೆ ಬರುವುದಿಲ್ಲ ಎಂಬುದು ನನ್ನ ನಿಲುವು.ಸ್ಮಾರ್ಟ್ ನಗರಗಳ ಕನಸಿನಲ್ಲಿ ಸ್ಮಾರ್ಟ್ ಮನುಷ್ಯರಾಗುವುದನ್ನೆ ಮರೆಯುತ್ತಿರುವ ಈ ಶತಮಾನದ ವಿಸ್ರೃತಿಯಿಂದ ನಾವು ಹೋರಬರಬೇಕಿದೆ ಸರಳವಾಗಿ ನಾವು ನಾಗರೀಕರಾಗಬೇಕಿದೆ, ಆಧುನಿಕರಲ್ಲ ನಾಗರೀಕತೆ ಹುಟ್ಟಿದ್ದೆ ಒಬ್ಬರನ್ನೂಬ್ಬರು ಸಹಕರಿಸುವ ಸಮುದಾಯಗಳನ್ನು ಕಟ್ಟಿಕೊಳ್ಳುವ ಮೂಲಕ.ಆದರೆ ಆಧುನಿಕತೆ ಆ ಸತ್ವವನ್ನು ಒಡೆಯುತ್ತಿದೆ.ನಮ್ಮ ಎದುರಿಗಿರುವ ಮನುಷ್ಯನನ್ನು ಕೊಲ್ಲಲು, ಹಿಂಸಿಸಲು, ದ್ವೇಷಿಸಲು ಕಲಿಸುತ್ತಿರುವ ಆಧುನಿಕ ನಾಗರೀಕತೆಗೆ ಮನುಷ್ಯನ ನೋವು ಒಂದು ಬಂಡವಾಳವೆ ಎಂಬ ಸತ್ಯ ನಮಗೆ ಅರ್ಥವಾಗಬೇಕಿದೆ.ಅಂತಿಮವಾಗಿ ನಾವು ನಮ್ಮನ್ನು ನಮ್ಮಲ್ಲಿರುವ ವಸ್ಥುಗಳ ಆಧಾರದಲ್ಲಿ ವಿವರಿಸಿಕೊಳ್ಳುವ ಸ್ಥಿತಿ ಬಾರದಿರಲಿ ಎಂಬುದಷ್ಟೆ ಸುಸ್ಥಿರ ಬದುಕು.ಆ ಕುರಿತು ನಾವು ಯೋಚಿಸಬೇಕಿದೆ ಏಕೆಂದರೆ ನಮ್ಮ ಮುಂದಿನ ಪೀಳಿಗೆಯೂ ನಮ್ಮಂತೆ ಬದುಕಬೇಕಲ್ಲವೆ. . . . ನಾನು ನಿಮಗೆ ವಿಷಯವನ್ನು ಎಷ್ಟು ದಾಟಿಸಿದ್ದೇನೂ ಗೊತ್ತಿಲ್ಲ.ಏಕೆಂದರೆ ಚರ್ಚೆಯಿಂದ ಪರಿಹರಿಸಬಹುದಾದ ಸಂಗತಿಯು ಇದಲ್ಲ. ಆದರೆ ಮತ್ತೂಮ್ಮೆ ಇಷ್ಟು ಯೋಚಿಸಲು ಅನುವು ಮಾಡಿಕೊಟ್ಟ ನಿಮ್ಮ ಸ್ಪಂದನೆಗೆ ಧನ್ಯವಾದಗಳು. . .
@ ಶ್ರೀ ಕಿರಣ ಗಾಜನೂರ್
ಕೆಲವು ಸರಳ ಪ್ರಶ್ನೆಗಳು ಸಂವಾದ ಮುಂದುವರೆಸುವ ನಿಟ್ಟಿನಲ್ಲಿ…
೧) ಶ್ರಮಜೀವಿ ಯಾರು? ತಮ್ಮ ದೃಷ್ಟಿಕೋಣದ ಪ್ರಕಾರ ಇದನ್ನು ತಿಳಿದುಕೊಂಡರೆ ಮುಂದಿನ ಸಂವಾದ ಸುಲಭವಾಗುತ್ತದೆ.
೨) ಕಲೆ, ನಾಟಕಗಳು ಪ್ರಸನ್ನ ಅವರು ಪ್ರತಿಪಾದಿಸುವಂತಹ ಶ್ರಮ ಜೀವನದಲ್ಲಿ ಬರುತ್ತವೆಯೆ? ತಿಳಿದುಕೊಳ್ಳುವ ಆಸಕ್ತಿಯಿದೆ.
೩) ಆಧುನಿಕ ಅವಿಶ್ಕಾರಗಳನ್ನು ಬಳಸಿಕೊಂಡರೂ, ಸರಳತೆಯನ್ನು ಅಳವಡಿಸಿಕೊಳ್ಳುವುದು ಅಂದರೆ ಏನು? ಅದು ಉದಾಹರಣೆಗೆ, ನನಗೆ ಮೊಬಾಯಿಲ್ ನಿಜವಾಗಿಯೂ ಅವಶ್ಯಕತೆಯಿದೆಯೆ? ಒಂದು ವೇಳೆ ಅವಶ್ಯಕತೆಯಿದ್ದರೂ ಸ್ಮಾರ್ಟ್ ಫೋನ ಅವಶ್ಯಕತೆಯಿದೆಯೆ ಎಂದು ಪ್ರಶ್ನಿಸಿಕೊಳ್ಳುವಂತದ್ದೊ?, ನಾನು ಏಕೆ ಪ್ಯಾಂಟ್, ಶರ್ಟ್, ಬೂಟ್ ಹಾಕಿಕೊಳ್ಳಬೇಕು..ಕೈಮಗ್ಗದ ನೇಕಾರರಿಗೆ, ಚರ್ಮಕಾರರಿಗೆ ಸಹಾಯ ಮಾಡಬಾರದು ಅಂತ ಪ್ರಶ್ನಿಸಿಕೊಳ್ಳುವುದೊ? ಅಥವಾ..
೪) [ನಮ್ಮ ಆಧುನಿಕತೆಯ ವ್ಯಸನಗಳಿಗೆ ಪರಿಹಾರದ ಪ್ರಯತ್ನಗಳು ನಡೆದಾಗ ಅದನ್ನು ನೈತಿಕವಾಗಿ ಸಮರ್ಥಿಸುವುದು ನನ್ನ ನೈತಿಕತೆ ಎಂಬುದು ನನ್ನ ನಿಲುವು.] ಸಮರ್ಥಿಸಿದರಷ್ಟೇ ಸಾಕೆ? ಅದು ನೈತಿಕವಾಗುತ್ತದೆಯೆ? ತಾವು ತಮ್ಮ ನಿಲುವನ್ನು ಕಾರ್ಯರೂಪಕ್ಕೆ ತರುವಲ್ಲಿ ಹಾಕಿಕೊಂಡ ಯೋಜನೆಗಳೇನು?
ಶ್ರಮಜೀವಿ ಅಂದರೆ ತನ್ನ ಅನ್ನ ಸಂಪಾದನೆಗೆ ಮೈ ಬಗ್ಗಿಸಿ ಬೆವರು ಸುರಿಸಿ ಕೆಲಸ ಮಾಡುವವ ಅರ್ಥಾತ್ ಕಾಯಕ ಯೋಗಿ. ಭೂಸುರರು ಬೆವರು ಸುರಿಸುವುದಿಲ್ಲ, ಅವರು ಸುಗಂಧ ದ್ರವ್ಯಗಳನ್ನು ಪೂಸಿಕೊಂಡು ದೇವಾಲಯಗಳ ತಂಪು ವಾತವರಣದಲ್ಲಿ ಭಕ್ತರ ದಕ್ಷಿಣೆ ದುಡ್ಡನ್ನು ಹೊಡೆಯುತ್ತಾರೆ.
ನೀವು ಮತ್ತು ನಿಮ್ಮ ಅಭಿನವ ಚನ್ನಬಸವಣ್ಣ ಹೋದಲ್ಲೆಲ್ಲ ಮೈಬಗ್ಗಿಸಿ, ಕೈಕಾಲು ಆಡಿಸಿ, ಬೆವರು ಸುರಿಸಿ ನಿಮ್ಮ ‘ತತ್ವ’ ಪ್ರಚಾರ ಮಾಡುತ್ತಿರಾ? ವಾಸನೆ ಇರಲಿ, ಶ್ರಮಜೀವಿಗಳು ಅಂತ ತಿಳಿಯಲಿ ಅಂತ ಸ್ನಾನ ಮಾಡದೇ ಇರುತ್ತೀರ?
Understanding kaayaka principle and put it in to practice. You will understand mine better then.
ನಿಮ್ಮ ಕಾಯಕದ ಬಗ್ಗೆ ಉತ್ತರವಿಲ್ಲ..ಉಳಿದವರ ಕಾಯಕದ ಬಗ್ಗೆ ಉನ್ನತ ಅಧ್ಯಯನ!
“ತಾವು ತಮ್ಮ ನಿಲುವನ್ನು ಕಾರ್ಯರೂಪಕ್ಕೆ ತರುವಲ್ಲಿ ಹಾಕಿಕೊಂಡ ಯೋಜನೆಗಳೇನು?”
Good question. My opinion we follow principles of Vachanakaras in everything we do. No need reinventing the wheel.