ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 27, 2015

5

ರೈತರ ಆತ್ಮಹತ್ಯೆ, ಹೀಗೊಂದು ಚಿಂತನೆ

‍ನಿಲುಮೆ ಮೂಲಕ

– ಭರತ್ ಎನ್ ಶಾಸ್ತ್ರಿ

ರೈತಆತ್ಮಹತ್ಯೆಗಳು ಘೋರನಿರ್ಧಾರಗಳು ಎನ್ನುವುದರಲ್ಲಿ ಸಂಶಯವಿಲ್ಲ. ಯಾವುದೇ ಸಾವು ತರುವ ಶೂನ್ಯತೆ, ಮತ್ತು ಬಂಧುಮಿತ್ರರಿಗೆ ಅಥವಾ ಪ್ರೀತಿಪಾತ್ರರಿಗೆ ತರುವ ಯಾತನೆ ಅನುಭವಿಸಿದವರಿಗೇ ಗೊತ್ತು. ಅದರಲ್ಲೂ ಆತ್ಮಹತ್ಯೆ ತರುವ ಸಂಕಟ ಮಾತ್ರ ಹಲವು ಆಯಾಮಗಳದ್ದು.

ಆದರೆ, ಭಾರತದಲ್ಲಿ ರೈತರ ಆತ್ಮಹತ್ಯೆಗಳು ವಿಚಿತ್ರಕಾರಣಗಳಿಂದ ಮಾಧ್ಯಮಗಳ ದೊಡ್ಡಗಂಟಲಿನಿಂದ ಜನರ ಗಮನ ಸೆಳೆಯುತ್ತವೆ. ರೈತರ ಆತ್ಮಹತ್ಯೆಗಳಿಗೆ ಕಾರಣ ಹುಡುಕಲು ನಡೆಸಿದ ವೈಜ್ಞಾನಿಕ ಮತ್ತು ಭಾವೋದ್ವೇಗರಹಿತ ಅಧ್ಯಯನಗಳು ಒಂದೋ ಅವಗಣಿಸಲ್ಪಟ್ಟಿವೆ, ಅಥವಾ ರಾಜಕೀಯ ಕಾರಣಗಳಿಂದ ಆಳುವವರ ಮತ್ತು ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿವೆ.

ಹೆಚ್ಚುತ್ತಿರುವ ಜನಸಂಖ್ಯೆ, ದುಡಿಯುವ ಯುವಜನತೆಯ ಕೈಗೆ ಉದ್ಯೋಗಗಳ ಅಭಾವ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ಕುಸಿಯುತ್ತಿರುವ ಮಹಾನಗರ/ ನಗರಗಳು ಇವೆಲ್ಲ ಸಮಸ್ಯೆಯ ಜತೆ ಸಕ್ಷಮವಲ್ಲದ ಕೃಷಿಕ್ಷೇತ್ರ ಕೂಡ ಭಾರತದ ಹಿಂದುಳಿಕೆಯ ಕಾರಣವಾಗಿದೆ.

ಆತ್ಮಹತ್ಯೆಗಳ ಬಗ್ಗೆ ಭಾರತದ ಒಟ್ಟೂ ಪರಿಸ್ಥಿತಿಯನ್ನು ಅವಲೋಕಿಸುವುದಾದರೆ, ಮೂರುದಶಕಗಳ ಹಿಂದೆ ಸುಮಾರು ೪೦,೦೦೦(ಒಂದು ವರ್ಷಕ್ಕೆ) ದಷ್ಟಿದ್ದ ಆತ್ಮಹತ್ಯೆಗಳ ಸಂಖ್ಯೆ ೨೦೦೯ ಕ್ಕೆ ೧೨೭,೧೫೧ ಕ್ಕೆ ಏರಿತು. ಅದೇ ೨೦೧೩ ರಲ್ಲಿ ಒಟ್ಟು ಆತ್ಮಹತ್ಯೆಗಳ ಸಂಖ್ಯೆ ೧,೩೪,೭೯೯! ಈ ಐದು ವರ್ಷಗಳಲ್ಲಿ ಕರ್ನಾಟಕದ ಕೊಡುಗೆ ಹತ್ತಿರ ಹತ್ತಿರ ೮.೪%. ಕರ್ನಾಟಕದಲ್ಲಿ ೨೦೦೯ ರ ವರ್ಷದಲ್ಲಿ ಸಂಭವಿಸಿದ ಆತ್ಮಹತ್ಯೆಗಳು ಸುಮಾರು ೧೦,೬೮೦. ಇದರಲ್ಲಿ ರೈತರ ಸಂಖ್ಯೆ ೩೩೭, ಎಂದರೆ ೩.೧೫%. ಇದರ ಅರ್ಥ ಪ್ರತಿ ೩೦ ಆತ್ಮಹತ್ಯೆಗಳಲ್ಲಿ ಒಬ್ಬ ರೈತನ ಜೀವನಷ್ಟವಾಗಿದೆ. ಇನ್ನುಳಿದವರ ವೃತ್ತಿ ಏನಿತ್ತು? ಸೋಜಿಗವೆಂದರೆ ರೈತರ ಆತ್ಮಹತ್ಯೆಯ ಬಗ್ಗೆ ಅಂತರ್ಜಾಲದಲ್ಲಿ ಸುಲಭವಾಗಿ ಸಿಕ್ಕುವ ಮಾಹಿತಿ ಮಿಕ್ಕ ವೃತ್ತಿಯಲ್ಲಿರುವವರ ಬಗ್ಗೆ ಸಿಗುವುದಿಲ್ಲ. ಬೆಂಗಳೂರನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಸಾಫ್ಟ್ ವೇರ್ ಉದ್ಯಮದಲ್ಲಿ ಮಿತಿಮೀರಿದ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಎಷ್ಟು ಎಂದು ನೀವು ಹುಡುಕಾಡಿದರೆ ಅಂಕಿ-ಅಂಶಗಳನ್ನು ಪಡೆಯಲು ಕಷ್ಟ ಪಡಬೇಕಾಗುತ್ತದೆ!

ಇಂತಹ ಕಷ್ಟಪಟ್ಟೂ ದೊರಕಿದ ಅಂಕಿ-ಅಂಶ ವೆಂದರೆ ಬೆಂಗಳೂರಿನಲ್ಲಿ ಪ್ರತಿ ೧೦೦,೦೦೦ ಜನರಲ್ಲಿ ೩೫ ಜನ ಆತ್ಮಹತ್ಯೆಗೆ ಶರಣಾಗುತ್ತಾರೆ. ಇದರಲ್ಲಿ ಸಾಫ್ಟ್ ವೇರಿಗರ ಸಂಖ್ಯೆ – ಅಸ್ಪಷ್ಟ.ಅದೇಕೆ ರೈತರ ಆತ್ಮಹತ್ಯೆಗೆ ಇಷ್ಟೊಂದು ಭಾವೋದ್ರೇಕದ ಬಣ್ಣವನ್ನು ಬಳಿಯಲಾಗುತ್ತದೆ? ನಿಜ, ಏರುತ್ತಿರುವ ಸಾಲ-ಬಡ್ಡಿ, ಬರ, ಕೃಷಿಯ ಹೆಚ್ಚುತ್ತಿರುವ ಖರ್ಚುವೆಚ್ಚಗಳು, ಬೆಳೆನಷ್ಟ, ಇವೆಲ್ಲವೂ ಮುಖ್ಯಕಾರಣಗಳೇ. ಆದರೆ ದುಡಿಯುವ ಎಲ್ಲ ಕೈಗಳಿಗೆ ಕೆಲಸ ದೊರಕಿಸಿಕೊಡುವಷ್ಟು ಉದ್ಯೋಗಾವಕಾಶ ಕೃಷಿಕ್ಷೇತ್ರದಲ್ಲಿಲ್ಲ ಎನ್ನುವುದನ್ನೂ ಗಮನದಲ್ಲಿಡಬೇಕು. ಅಸಮರ್ಪಕ ತರಬೇತಿಯಿಂದ ಕೃಷಿಯ ಉತ್ಪನ್ನದಲ್ಲಿ ಕ್ಷಮತೆಯ ಕೊರತೆ ಉಂಟಾಗುತ್ತದೆ.

ಅಕ್ಕಿ, ಗೋಧಿ ಮತ್ತು ಮೆಕ್ಕೆ ಜೋಳದ ವಾರ್ಷಿಕ ಉತ್ಪಾದನೆಯ ಕೆಲವು ಅಂಕಿ-ಅಂಶಗಳನ್ನು ಈ ಕೆಳಗೆ ಕೊಡುತ್ತಿದ್ದೇನೆ:

Rice Data 1

 

Godhi

MekkeJolaಈ ಮೇಲ್ಕಂಡ ಎಲ್ಲ ಮುಖ್ಯ ಧಾನ್ಯ ಪ್ರಕಾರಗಳಲ್ಲಿ ಭಾರತದ ಕ್ಷಮತೆ ಹೇಳಿಕೊಳ್ಳುವಷ್ಟೇನೂ ಇಲ್ಲ. ಕಾರಣ ಸುಸ್ಪಷ್ಟ..ತರಬೇತಿಯ ಕೊರತೆ. ಈಗ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳ ಅಲಭ್ಯತೆ, ಸಾಂಪ್ರದಾಯಿಕ ಪದ್ಧತಿಗಳಿಗೇ ಜೋತುಬೀಳುವ ಕ್ರಮ, ನೀರಾವರಿಯ ಕೊರತೆ ಇವೆಲ್ಲ ಕಾರಣ/ನೆಪಗಳನ್ನೂ ಮುಂದಿಡುವ ಮೊದಲು ಕೃಷಿಕರ ಅಸಮರ್ಪಕ ತರಬೇತಿಯ ಬಗ್ಗೆ ಕೂಡ ಕೆಲವು ಕಟುಶಬ್ದಗಳನ್ನು ಹೇಳಬೇಕಾಗುತ್ತದೆ. ರಾಜಕಾರಣಿಗಳಿಗೆ, ವಕೀಲರಿಗೆ, ವೈದ್ಯರಿಗೆ, ಶಿಕ್ಷಕರಿಗೆ ಮತ್ತೇಕೆ, ಪತ್ರಕರ್ತರಿಗೂ ಕನಿಷ್ಠ ವಿದ್ಯಾರ್ಹತೆಯನ್ನು ಒತ್ತಾಯಿಸುವ ಇಂದಿನ ಕಾಲದಲ್ಲಿ ಕೃಷಿಕರಿಗೆ ಏಕೆ ಕನಿಷ್ಠ ವಿದ್ಯಾರ್ಹತೆಯನ್ನು ಒತ್ತಾಯಿಸುವುದಿಲ್ಲ? ತರಬೇತಿಯೆಂದರೆ ತುಟ್ಟಿಯಾದ Agricultural university ಗಳ ಬಿ ಎಸ್ಸಿ (agri) ಅಲ್ಲ! ಬದಲಿಗೆ ಮೆಟ್ರಿಕ್ಯುಲೇಷನ್ ಮಟ್ಟದಲ್ಲಿ ವಿವಿಧ ಬೆಳೆಗಳು,ಇಂಥ ತರಬೇತಿಯೊಂದರ ಅಗತ್ಯವನ್ನೇ ನಮ್ಮ ಯೋಜನಾತಜ್ಞರು, ರಾಜಕಾರಣಿಗಳು, ಅರ್ಥಶಾಸ್ತ್ರ ಅಥವಾ ಸಾಮಾಜಿಕ ಶಾಸ್ತ್ರಜ್ಞರು ಕಾಣಲಿಲ್ಲ. ಅದರ ಪರಿಣಾಮವನ್ನು ಈಗ ಎದುರಿಸುತ್ತಿದ್ದೇವೆ.

ಔದ್ಯೋಗಿಕ ಕ್ರಾಂತಿಯ ಮುಂಚೂಣಿಯಲ್ಲಿದ್ದ ದೇಶಗಳು ತಮ್ಮ ತಮ್ಮ ಸಾಂಪ್ರದಾಯಿಕ ಪ್ರಾಥಮಿಕ ವಲಯದ ಮಾನವ ಸಂಪನ್ಮೂಲವನ್ನು ಕ್ರಮೇಣ ದ್ವಿತೀಯ ಹಾಗೂ ತೃತೀಯವಲಯಗಳಿಗೆ ಯಶಸ್ವಿಯಾಗಿ ಬದಲಾಯಿಸಿ ಅಭಿವೃದ್ಧಿ ಹೊಂದಿದವು. ತನ್ಮೂಲಕ ತಮ್ಮ ದೇಶಗಳ ಕೃಷಿವಲಯದ ಉತ್ಪಾದನೆಯ ಕ್ಷಮತೆ ಹೆಚ್ಚಿಸಿದವು. ಇದು ನಮಗೆ ಪಾಠವಾಗಬೇಕಿತ್ತು. ಆದರೆ, ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಯ ತನಕ ಮಾತ್ರ ಇರುವ ಸೀಮಿತ ದೃಷ್ಟಿಕೋನ ಹೊಂದಿದ ನಾಯಕತ್ವದ ನಮ್ಮ ರಾಜಕೀಯ ಪಕ್ಷಗಳಿಂದ ಇಂತಹ ಒಂದು ದೂರದೃಷ್ಟಿಯ ಯೋಜನೆಯ ಅಪೇಕ್ಷೆ ಇಟ್ಟುಕೊಳ್ಳುವುದೂ ತಪ್ಪೆನ್ನಿಸುತ್ತದೆ.

ಆತ್ಮಹತ್ಯೆ ಯಾರೇ ಮಾಡಿಕೊಂಡರೂ ಅದು ಒಟ್ಟೂ ಸಮಾಜದ ವೈಫಲ್ಯದಂತೆ ಕಾಣುತ್ತದೆ. ಆದ್ದರಿಂದ ರೈತರ, ವಿದ್ಯಾರ್ಥಿಗಳ, ಸಾಫ್ಟ್ ವೇರಿಗರ, ಅಥವಾ ವ್ಯಾಪಾರಿಗಳ ಆತ್ಮಹತ್ಯೆ ಎಂದು ವಿಂಗಡಿಸುವುದು ಸಮಂಜಸವಾಗಿ ಕಾಣುವುದಿಲ್ಲ.ಲ್ಯವರ್ಧನೆ, ಪಾರಂಪರಿಕ ಕೃಷಿಯಲ್ಲಿಯ ಒಳ್ಳೆಯ ಅಂಶಗಳು, ನೀರಾವರಿಯ ವಿವಿಧ ಬಳಕೆಗಳು, ನೀರಿನ ಯುಕ್ತ ಬಳಕೆ, ಕೃಷಿಯ ಮೇಲೆ ಅವಲಂಬಿತವಾದ ವಾಣಿಜ್ಯ, ಇವೇ ಮೊದಲಾದ, ಮತ್ತು ಇಂದಿಗೆ ಅತ್ಯಂತ ಸಂಗತ ವಿಷಯವಾದ ಸಾವಯವ ಕೃಷಿ, ಇಂತಹ ವಿಷಯಗಳ ಬಗ್ಗೆ ಸಂಕ್ಷಿಪ್ತರೂಪದಲ್ಲಿಯಾದರೂ ಇಡೀ ದೇಶಕ್ಕೆ ಅನ್ವಯವಾಗುವ, ಆಯಾ ರಾಜ್ಯದ ಭೌಗೋಳಿಕ ಅಗತ್ಯಗಳಿಗೆ ತಕ್ಕಂತಹ ಬದಲಾವಣೆಗಳನ್ನು ಒಳಗೊಂಡ ನಮ್ಮ “ಕೃಷಿ ಪ್ರಧಾನ” ದೇಶದಲ್ಲಿ ಯಾರಾದರೂ ಯೋಜಿಸಿದ್ದಾರೆಯೆ?

5 ಟಿಪ್ಪಣಿಗಳು Post a comment
  1. Shripad
    ಮೇ 2 2015

    Very balanced view and good factual analysis. Good article, Bharath. congrats.

    ಉತ್ತರ
    • BNS
      ಮೇ 2 2015

      ಧನ್ಯವಾದಗಳು, ಸರ್.

      ಉತ್ತರ
  2. S babu
    ಜೂನ್ 11 2015

    ರೈತರ ಸಮಸ್ಯೆಗಳ ಮೂಲ ಕಾರಣಗಳನ್ನು ನಿಮ್ಮಂತೆ ವಿಶ್ಲೇಷಿಸಿ ಅದನ್ನು ಪರಿಹರಿಸಲು ಇದುವರೆಗೂ ನಮ್ಮನ್ನಾಳಿದ ಯಾವ ಸರಕಾರಗಳೂ ಪ್ರಯತ್ನ ಪಟ್ಟಿಲ್ಲ.ಇದು ಈನಾಡಿನ ಬಹುದೊಡ್ಡ ದುರಂತ.ಇದರ ಬಗ್ಗೆ ರಾಜಕಾರಣಿಗಳಿಗೆ,IAS ಅಧಿಕಾರಿಗಳಿಗೆ ಅರಿವು ಇಲ್ಲವೇ? ಇದೆ ಆದರೆ ………

    ಉತ್ತರ
  3. ರೈತರ ಆತ್ಮಹತ್ಯೆಯ ಬಗ್ಗೆ ಉತ್ತಮ ವಿವರಣೆ
    ಕೃಷಿಗೆ ಸಂಬಂಧಿಸಿದಂತೆ ವಿವರಗಳು ಚೆನ್ನಾಗಿದೆ.

    ಉತ್ತರ
  4. ಆಕ್ಟೋ 11 2017

    ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಮಕ್ಕಳು ಡಾಕ್ಟರ್ ಇಂಜಿನಿಯರ್ ಅಧಿಕಾರಿಗಳು ಆಗಬೇಕೆಂದು ಬಯಸುತ್ತಾರೆ . ಆದರೆ ಯಾರಾದರೂ ತಮ್ಮ ಮಕ್ಕಳು ಒಬ್ಬ ರೈತನಾಗಬೇಕೆಂಬ ಬಯಕೆ ಇರುತ್ತಾ.
    ದೇಶದ ಬೆನ್ನೆಲುಬು ರೈತ ಎಂಬುದನ್ನು ಎಂದಿಗೂ ಮರೆಯಬೇಡಿ.
    ಇಂತಿ ರಾಜ…..ಕನ್ನಡಿಗ
    ರೈತನ ಮಗ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments