ವಿಷಯದ ವಿವರಗಳಿಗೆ ದಾಟಿರಿ

ಮೇ 15, 2015

ಹ್ಯಾಮ್ ರೇಡಿಯೋ

‍ನಿಲುಮೆ ಮೂಲಕ

– ಭರತೇಶ ಅಲಸಂಡೆಮಜಲು

Radioಜೀವನವೆಷ್ಟೇ ಸುಖ ನೆಮ್ಮದಿಯಿಂದಿದ್ದರೂ ಜೀವನದ ಸೃಜನಾತ್ಮಕತೆಗೆ ಗೊಬ್ಬರವ ನೀಡಿ ಸಮಯದ ಸದುಪಯೋಗದ ಜೊತೆಗೆ ಮನೋಚೈತನ್ಯ, ಮನೋವಿಕಾಸಕ್ಕೆ ದ್ರವ್ಯವಾಗಿ ಪೋಷಿಸುವುದು ನಮ್ಮ ಹವ್ಯಾಸಗಳು. ಹೌದು ವೈಜ್ಞಾನಿಕ ಹವ್ಯಾಸಗಳಲ್ಲಿ ಹ್ಯಾಮ್ ರೇಡಿಯೋವು ಒಂದು. ಇದು ರೇಡಿಯೋ ಸಾಧನದ ಮೂಲಕ ವಿಶ್ವ ಗೆಳೆತನವನ್ನು ಸಾಧಿಸುವುದು, ಭಾಷೆ, ದೇಶ, ಲಿಂಗ, ಧರ್ಮ,ಅಂತಸ್ತು ಮೀರಿ ಸಭಿರುಚಿಯ ಅಪರಿಚಿತರನ್ನು ಸ್ನೇಹಿತರನ್ನಾಗಿಸುವುದು. ವ್ಯಕ್ತಿಗತ, ಸಮೂಹ ಅಥವಾ ಸಂಸ್ಥೆಯೊಂದು ತನ್ನ ಸ್ವಂತ ಸ್ಥಾಪಿತ ರೇಡಿಯೋ ನೆಲೆಯಿಂದ ಮತ್ತೊಂದು ರೇಡಿಯೋ ಹವ್ಯಾಸಿಯೊಂದಿಗೆ ಸಂಪರ್ಕ ಸಾಧಿಸಿ ಸ್ನೇಹ ಬಯಸುವ ಹವ್ಯಾಸಿಗಳ ಬಳಗ ಅಂದರೆ ನಮ್ಮ ರೇಡಿಯೋದಿಂದ ಗೆಳೆಯನ ರೇಡಿಯೋಗೆ ಕರೆ ಮಾಡುವುದು.
ಇದು ದ್ವಿಮುಖಿ ಸಂವಹನ ಮಾಧ್ಯಮ ಇದರಲ್ಲಿ ಒಂದು ಪ್ರಸರಕವಾದರೆ(Transmitter) ಮತ್ತೊಂದು ಪಡೆಯಕ(Receiver) ಪ್ರತಿಯೊಬ್ಬ ಹವ್ಯಾಸಿಯು ತನ್ನದೇ ಅದ ಕರೆ ಗುರುತು ಸಂಖ್ಯೆ ಹೊಂದಿರುತ್ತಾನೆ.  ಇದು ವ್ಯಕ್ತಿಗತ ಮನರಂಜನೆ, ಹಾಸ್ಯ, ವಾಣಿಜ್ಯೇತರ ಸಂದೇಶ, ನಿಸ್ತಂತು ಪ್ರಯೋಗ, ನಿಶ್ಚಿತವರದಿಗಾರಿಕೆ, ಹವಾಮಾನ, ವಾಹನ ಒತ್ತಡ, ತುರ್ತು ಸಂದೇಶ ರವಾನೆ, ಸ್ವತರಬೇತಿ, ಚರ್ಚೆ, ಸಂವಾದ ಮೂಲಕ ಸ್ವಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ಹವ್ಯಾಸಗಳಲ್ಲೊಂದು. ಇತರ ಎಲ್ಲಾ ದೂರ ಸಂಪರ್ಕ ಮಾಧ್ಯಮಗಳು ನಿಷ್ಕ್ರಿಯಗೊಂಡಾಗ ಅತ್ಯುಪಯೋಗವಾಗುವ ಎಕೈಕ ಸಂಪರ್ಕ ಸಾಧನವೆಂಬ ಹೆಗ್ಗಳಿಕೆಯು ಇದಕ್ಕಿದೆ.

ಭೂಪಂಕ, ಸುನಾಮಿ, ಚಂಡಮಾರುತ, ಪ್ರವಾಹ ಮೊದಲಾದ ನೈಸರ್ಗಿಕ ಅವಗಘಗಳ ಸಂದರ್ಭದಲ್ಲಿ ಎಲ್ಲ ಸಂಪರ್ಕ ಸಾಧನಗಳು ನೆಲಕಚ್ಚಿದಾಗ ಯಾವುದೇ ಮಾಧ್ಯಮಗಳ ಹಂಗಿಲ್ಲದೇ ಪೋಲಿಸ್, ಮಿಲಿಟರಿ ವ್ಯವಸ್ಥೆಗಳ ಜೊತೆ ಕೈಜೋಡಿಸಿ ಮಾಹಿತಿ ಕಲೆಹಾಕಿ ಸಾಮಾನ್ಯರ ಪಾಲಿನ ಬಂಧುವಾಗಿ ಸಹಾಯ ಮಾಡಬಲ್ಲುದು.

ಹ್ಯಾಮ್ ಪದಕ್ಕೆ ಅಧಿಕೃತ ಹಿನ್ನೆಲೆ ಇಲ್ಲದಿದ್ದರೂ ರೇಡಿಯೋ ಸಾಧನದ ಕಂಡುಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಡ್ಸ್, ಅರ್ಮಸ್ಟ್ರಾಂಗ್, ಮಾರ್ಕೋನಿಯವರ ಮೊದಲ ಅಕ್ಷರದಿಂದಲ್ಲೂ ಅಗಿರಬಹುದು ಎಂಬ ಊಹೆಯು ಇದೆ ಅದರಂತೆ Help All Mankind  ರಿಂದಲೂ ಅಗಿರಬಹುದು.

ಹ್ಯಾಮ್ ರೇಡಿಯೋ ಸರ್ವೀಸ್ (ಅಮೆಚ್ಯುರ್ ಸರ್ವೀಸ್ ಮತ್ತು ಅಮೆಚ್ಯುರ್ ಸ್ಯಾಟಲೈಟ್ ಸರ್ವೀಸ್) ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟವೆಂಬ ಸ್ವಯತ್ತ ಸಂಸ್ಥೆಯಿಂದ ಸ್ಥಾಪಿತವಾಗಿದೆ ಈ ಸಂಸ್ಥೆಯು ಅಂತರಾಷ್ಟ್ರೀಯ ದೂರಸಂಪರ್ಕ ತಾಂತ್ರಿಕ  ಮತ್ತು ಕಾನೂನಾತ್ಮಕ ನಿಯಮವನ್ನು ವಿಧಿಸಿದೆ.   ಪ್ರತಿ ರಾಷ್ಟ್ರವೂ ತನ್ನದೇ ಪ್ರತ್ಯೇಕವಾದ ರೀತಿ ರಿವಾಜು ಕಟ್ಟಲೆಗಳನ್ನು ಹಾಕಿಕೊಳ್ಳಬಹುದು.

ಹ್ಯಾಮ್ ರೇಡಿಯೋ ಉತ್ತರಾಖಂಡ್‍ನ ಪ್ರವಾಹದಲ್ಲಿ ನಾಪತ್ತೆಯಾದವರನ್ನು ಪತ್ತೆ ಹಚ್ಚುವ ಹಾಗೂ ಬಂಧುಗಳನ್ನ ಒಂದುಗೂಡಿಸುವ  ಮಹತ್ಕಾರ್ಯದಲ್ಲಿ  ಪ್ರಮುಖ ಪಾತ್ರವಹಿಸಿತ್ತು. ಇತ್ತೀಚೆಗೆ ಈಜಿಪ್ಟ್ ಸರಕಾರದ ವಿರುದ್ಧ ನಡೆದ ದಂಗೆಯ ಸಂದರ್ಭದಲ್ಲಿ ಇಂರ್ಟನೆಟ್, ಮೊಬೈಲ್ ಸ್ಥಗಿತಗೊಂಡ ಸಂದರ್ಭದಲ್ಲಿ ಹ್ಯಾಮ್ ರೇಡಿಯೋ ಮೂಲಕ ರವಾನೆಯಾದ ಸಂದೇಶದ ಬಗೆಗೆ ಅಲ್ಲಿನ ಗುಪ್ತಚರ ಇಲಾಖೆಗೆ ಅಧೀಕೃತ  ಮಾಹಿತಿ ಲಭಿಸಿದೆಯಂತೆ. ಬಾಹ್ಯಕಾಶ ಸಂಜಾತೆ ಸುನೀತಾರೊಂದಿಗೆ ಭಾರತೀಯ ವಿದ್ಯಾರ್ಥಿಗಳು ಸಂವಹನ ಮಾಡಿದ ಉದಾಹರಣೆಯು ಇದೆ.
ಹ್ಯಾಮ್ ರೇಡಿಯೋದ ವ್ಯಯಕ್ತಿಕ ಕರೆ ಸಂಖ್ಯೆಯು ಅತನ ಹೆಮ್ಮೆಯ ಗುರುತಿಸುವಿಕೆ ಜೊತೆಗೆ ಅತನ ದೇಶದ ಗುರುತಿಸುವಿಕೆಯು ಆಗಿದೆ. VU3NNV  ಇದ್ದರೆ ಮೊದಲಿನ ಭಾಗ VU3 ದೇಶವನ್ನು ಪ್ರತಿನಿಧಿಸಿದರೆ ಉಳಿದದ್ದು ಸ್ವಗುರುತಿಸಿಕೊಳ್ಳುವಿಕೆ.

ಹ್ಯಾಮ್ ರೇಡಿಯೋ ಅಂದರೆ,
1.ಸ್ವಂತ ರೇಡಿಯೋ ಸ್ಟೇಷನ್ ನ್ನು ನಮ್ಮ ಮನೆ, ಕೆಲಸದ ಜಾಗ, ವಾಹನ, ಹಡಗುಗಳಲ್ಲಿ ಸ್ಥಾಪಿಸುವುದು.
2.ವಿಶ್ವದ ಯಾವುದೇ ಭಾಗದ ಹವ್ಯಾಸಿ ಹ್ಯಾಮ್‍ನೊಂದಿಗೆ ಸಂಪರ್ಕ ಸಾಧಿಸುವುದು.
3.ಭಾಷೆಯ ಹಂಗಿಲ್ಲದೇ ಗೋಲದ ೨೦೦+ ಹೆಚ್ಚು ದೇಶದ ಜನರೊಂದಿಗೆ ವ್ಯವಹರಿಸಬಹುದು.
4.ಮೋಟರ್ ರ್ಯಾಲಿ, ಪ್ರಸಿದ್ಧ ಕ್ರೀಡಾಕೂಟ, ಕುಂಭಮೇಳದಂತಹ ಉತ್ಸವಗಳ ನೇರ ಮಾಹಿತಿ ಹಂಚಿಕೊಳ್ಳುವುದು.
5.ಭೂಪಂಕ, ಸುನಾಮಿ, ಚಂಡಮಾರುತ, ಪ್ರವಾಹ ಮೊದಲಾದ ನೈಸರ್ಗಿಕ ಅವಗಘಗಳ ಸಂದರ್ಭಗಳಲ್ಲಿ ಮಾಹಿತಿ ಕೊಂಡಿಯಾಗಿ ಸಹಕಾರಿಸುತ್ತದೆ.
6.ಸಾಹಸಿ ರೇಡಿಯೋ ಅಟಗಳಲ್ಲಿ ಭಾಗವಹಿಸಬಹುದು(ರೇಡಿಯೋ ಡೈರೆಕ್ಷನ್ ಪೈಂಡಿಂಗ್  )
7.ರಾಷ್ಟ್ರೀಯ ಅಂತಾರಾಷ್ಟ್ರೀಯ ರೇಡಿಯೋ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.

ಯಾಕಾಗಿ ಹ್ಯಾಮ್ ಆಗಬೇಕು?
1.ಮನರಂಜನೆಗಾಗಿ,
2.ರೇಡಿಯೋ ಸುಲಭ ಸಾಧನ,
3.ಸಮಾಜದ ಸೇವೆ ಮಾಡಬಹುದು.
4.ಉಚಿತವಾಗಿ ವಿಶ್ವದ ಅಪರಿಚಿತರೊಂದಿಗೆ ಹೆಮ್ಮೆಯಿಂದ ಮಾತಾನಾಡಬಹುದು.
5.ಸಮಾನ ಮನಸ್ಕ ಗೆಳೆಯರ ಬಳಗವನ್ನು ಪಡೆಯಬಹುದು.

ದೂರವಾಣಿ, ಚರವಾಣಿಗಳಿಗಿಂತ ಹೇಗೆ ಬಿನ್ನ?
1.ದೂರವಾಣಿ ನಿಮಿಷ ಲೆಕ್ಕದಲ್ಲಿ ದುಡ್ಡು ಖರ್ಚಾಗುತ್ತದೆ.
2.ತುರ್ತು ಸಂದರ್ಭಗಳಲ್ಲಿ ದೂರವಾಣಿಗಳು ಕಾರ್ಯ ಸ್ಥಗಿತಗೊಳ್ಳುತ್ತವೆ.
3.ಊರಂಚುಗಳಲ್ಲಿ ಚರವಾಣಿ, ದೂರವಾಣಿ ಸಂಪರ್ಕ ಕಷ್ಟ ಸಾಧ್ಯ.

ಅಂತರ್ಜಾಲಕ್ಕಿಂತ ಹೇಗೆ  ಬೇರೆ?
1.ಗಣಕಯಂತ್ರದ ಅವಶ್ಯವಿಲ್ಲ.
2.ತಿಂಗಳ ಕೊನೆಗೆ ಕಟ್ಟುವ ಬಿಲ್ಲಿನ ಕಿರಿಕಿರಿಯಿಲ್ಲ.
3.ಪರ್ವತರೋಹಣ, ಸಮುದ್ರ ಪಯಣದ ಸಂದರ್ಭದಲ್ಲೂ ಬಳಸಬಹುದು.
4.ಮೋರ್ಸ್ ಕೋಡ್ ಇದು ಅಂತರಾಷ್ಟ್ರೀಯ ಭಾಷೆ.

ವಿದ್ಯಾರ್ಹತೆ:
12 ವರ್ಷ ತುಂಬಿದ ಭಾರತದ ನಾಗರಿಕರಾಗಿರಬೇಕು ಹಾಗೂ ದೂರಸಂಪರ್ಕ ಮತ್ತು ವಿದ್ಯುನ್ಮಾನ ಸಚಿವಾಲಯ ಭಾರತ ಸರಕಾರ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫ್ರೌಡಶಾಲಾ ಹಂತದ ವಿಜ್ಞಾನ ವಿಷಯ(ಮೂಲ ವಿದ್ಯುತ್ ಮತ್ತು ದೂರ ಸಂಪರ್ಕ ), ರೇಡಿಯೋ ಬಳಸುವ ಮೂಲ ಜ್ಞಾನ , ರೇಡಿಯೋ ನಿಯಮಗಳು ಮತ್ತು ಕಾನೂನು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ.

1.http://www.wpc.dot.gov.in/Static/amateur.asp
2.http://www.indianhams.com/home.asp
3.http://www.hamradio.in/
4.http://www.arsi.info/
5.http://www.barc.in/
6.http://www.livecbradio.com/radio-phonetic-alphabet.htm
7.http://www.qrz.com

ಹ್ಯಾಮ್ ರೇಡಿಯೋ ಖರೀದಿಗಾಗಿ .
1.http://www.409shop.com/
2.http://www.hamradio.com/
3.http://www.aesham.com/
4.https://www.hamcity.com/store/pc/home.asp

ಗಣಕ ಮತ್ತು ಮೊಬೈಲ್ಗಳಿಗಾಗಿ .
1.http://www.echolink.org/
2.http://www.hamsphere.com/
3.http://hflink.com/software/

ಚಿತ್ರಕೃಪೆ :hemingways.org

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments