ನಾಡು-ನುಡಿ ಮರುಚಿಂತನೆ : ಹಿಂದೂ ಧರ್ಮ ಇಲ್ಲದಿದ್ದರೆ ಬಹುಸಂಖ್ಯಾತರು ಯಾರು?
– ರಾಜಾರಾಮ ಹೆಗಡೆ
ಇತ್ತೀಚೆಗೆ ಲಿಂಗಾಯತ ಮಠಾಧೀಶರೊಬ್ಬರು ‘ಹಿಂದೂ ಧರ್ಮ ಇಲ್ಲ ಏಕೆಂದರೆ ಹಿಂದೂಗಳು ಸಾವಿರಾರು ದೇವತೆಗಳನ್ನು ಪೂಜಿಸುತ್ತಾರೆ, ಹಾಗಾಗಿ ವೀರಶೈವರು ಹಿಂದೂಗಳಲ್ಲ, ವೀರಶೈವರು ಒಬ್ಬನೇ ದೇವತೆಯನ್ನು ಪೂಜಿಸುತ್ತಾರೆ ಹಾಗಾಗಿ ಅವರದು ಪ್ರತ್ಯೇಕ ಧರ್ಮ’ ಎಂಬ ಹೇಳಿಕೆಯನ್ನು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈಷ್ಣವ ಮಠಾಧೀಶರೊಬ್ಬರು ‘ಹಿಂದೂಗಳು ಪೂಜಿಸುವ ಶಿವ ಹಾಗೂ ಲಿಂಗಾಯತರ ಶಿವ ಒಂದೇ ಆಗಿರುವುದರಿಂದ ಅವರೂ ಹಿಂದೂ ಧರ್ಮಕ್ಕೆ ಸೇರಿದ್ದಾರೆ’ ಎಂದರು. ಇವರೆಲ್ಲ ದೇವತೆಗಳನ್ನು ಹಾಗೂ ಧರ್ಮವನ್ನು ಸಮೀಕರಿಸುತ್ತ ತಮ್ಮ ವಾದವನ್ನು ಮಂಡಿಸುತ್ತಿರುವುದು ಕುತೂಹಲಕಾರಿಯಾಗಿದೆ. ನಮ್ಮ ಇತಿಹಾಸ ಪುರಾಣಾದಿಗಳಲ್ಲಿ ಧರ್ಮದ ಕುರಿತು ಎಷ್ಟೊಂದು ಜಿಜ್ಞಾಸೆಗಳಿವೆಯಾದರೂ ಅದರ ನಿರ್ಣಯಕ್ಕೆ ದೇವತೆಗಳನ್ನು ಯಾರೂ ಕರೆದು ತಂದಿಲ್ಲ. ಹಾಗಾದರೆ ನಮ್ಮ ಮಠಾಧೀಶರುಗಳೆಲ್ಲ ನಡೆಸುತ್ತಿರುವ ಚರ್ಚೆ ಏನು?
ನಾವು ಧರ್ಮ ಎಂಬ ಶಬ್ದವನ್ನು ಇಂಗ್ಲೀಷಿನ ರಿಲಿಜನ್ ಎಂಬ ಶಬ್ದದ ಭಾಷಾಂತರವಾಗಿ ಬಳಸುತ್ತೇವೆ. ಜ್ಯೂಡಾಯಿಸಂ, ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂಗಳು ಮಾತ್ರವೇ ರಿಲಿಜನ್ನುಗಳು. ಅವರಿಗೆ ಈ ಪ್ರಪಂಚವನ್ನು ಹಾಗೂ ಮನುಷ್ಯರನ್ನು ಸೃಷ್ಟಿಸಿದ ತಂತಮ್ಮ ದೇವನು ಒಬ್ಬನೇ ಸತ್ಯ. ಅವನ ಆಜ್ಞೆಯನ್ನು ಉಲ್ಲಂಘಿಸಿದ ಪಾಪಕ್ಕಾಗಿ ಅವನಿಂದ ಅಭಿಶಪ್ತರಾಗಿ ಮನುಷ್ಯರೆಲ್ಲ ಅವನ ಲೋಕದಿಂದ ಭೂಮಿಗೆ ಬಿದ್ದರು, ಇಂಥ ಮನುಷ್ಯರು ತಮ್ಮ ಪಾಪವನ್ನು ಕಳೆದುಕೊಂಡು ಮರಳಿ ದೇವನ ಲೋಕವನ್ನು ಸೇರುವ ಮಾರ್ಗವೇ ರಿಲಿಜನ್ನು. ಈ ಸಂಗತಿಯನ್ನು ಸತ್ಯದೇವನು ಸ್ವತಃ ಆಯಾ ರಿಲಿಜನ್ನಿನ ಒಬ್ಬ ಪ್ರವಾದಿಗೆ ತಿಳಿಸಿದ್ದಾನೆ ಹಾಗೂ ಅದನ್ನಾಧರಿಸಿ ಅವರ ಪವಿತ್ರ ಗ್ರಂಥ ರೂಪುಗೊಂಡಿದೆ. ಈ ಗ್ರಂಥಗಳ ವಾಕ್ಯಗಳು ಆಯಾ ರಿಲಿಜನ್ನಿನ ಅನುಯಾಯಿಗಳ ಕ್ರಿಯೆಗಳಿಗೆ ಆಧಾರವಾಗಿರುತ್ತವೆ.
ಭಾರತಿಯರ ವಿಧಿಆಚರಣೆಗಳನ್ನು, ಪುರಾಣಗಳನ್ನು ನೋಡಿದ ಪಾಶ್ಚಾತ್ಯರು ಇವೆಲ್ಲ ಹಿಂದೂ ರಿಲಿಜನ್ನು ಎಂಬುದಾಗಿ ಕರೆದರು. ಆದರೆ ಇವರಿಗೆ ಸತ್ಯದೇವ, ಪ್ರವಾದಿ, ದೇವವಾಣಿ, ಪವಿತ್ರ ಗ್ರಂಥ, ಇತ್ಯಾದಿ ಕಲ್ಪನೆಗಳೇ ಇಲ್ಲ ಎಂಬುದನ್ನೂ ಕಂಡುಕೊಂಡರು. ಹಾಗಾಗಿ ಈ ರಿಲಿಜನ್ನು ಭ್ರಷ್ಟಗೊಂಡಿದೆ ಎಂದು ತೀರ್ಮಾನಿಸಿ ಇದು ಸುಧಾರಣೆಗೊಳಪಡತಕ್ಕದ್ದು ಎಂದು ನಿರ್ಣಯಿಸಿದರು. ಆದರೆ ರಿಲಿಜನ್ನನ್ನು ಮನಸ್ಸಿನಲ್ಲಿಟ್ಟುಕೊಂಡು ಹಿಂದೂ ಧರ್ಮವನ್ನು ತೋರಿಸಲು ಎಷ್ಟೇ ಕಸರತ್ತು ಮಾಡಿದರೂ ನಾವು ಸುಳ್ಳುಗಳನ್ನು ಹೇಳುತ್ತಲೇ ಇರಬೇಕಾಗುತ್ತದೆ. ಹಾಗೂ ಅದು ಈಗ ಭ್ರಷ್ಟವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ಈ ಎಲ್ಲ ಗೊಂದಲಗಳಿಗೆ ಕಳಶವಿಟ್ಟ ಹಾಗೆ ರಿಲಿಜನ್ ಎಂಬ ಶಬ್ದವನ್ನು ಅದಕ್ಕೆ ಅರ್ಥಾರ್ಥ ಸಂಬಂಧವಿಲ್ಲದ ಧರ್ಮ ಎಂಬ ಶಬ್ದದಿಂದ ಭಾಷಾಂತರಿಸಿಕೊಂಡಿದ್ದೇವೆ.ನಮ್ಮ ಮಠಾಧೀಶರುಗಳೆಲ್ಲ ಧರ್ಮ ಎಂದು ಯಾವುದರ ಕುರಿತು ಚರ್ಚೆ ನಡೆಸಿದ್ದಾರೋ ಅದು ರಿಲಿಜನ್ನಿನ ಕನ್ನಡ ಭಾಷಾಂತರವೇ ಹೊರತೂ ಭಾರತೀಯ ಅರ್ಥದಲ್ಲಿ ಧರ್ಮವಲ್ಲ. ಹಾಗಾಗೇ ಅವರು ದೇವತೆಗಳ ಕುರಿತು ಜಿಜ್ಞಾಸೆ ನಡೆಸಿದ್ದಾರೆ. ರಿಲಿಜನ್ನಿಗೆ ಏಕದೇವನು ನಿರ್ಣಾಯಕ. ಅಂದರೆ ಎರಡು ಸತ್ಯದೇವರನ್ನು ಇಟ್ಟುಕೊಂಡು ಒಂದೇ ರಿಲಿಜನ್ನು ಇರಲು ಹೇಗೆ ಸಾಧ್ಯವೇ ಇಲ್ಲವೊ, ಹಾಗೇ ಒಂದೇ ದೇವನನ್ನು ಇಟ್ಟುಕೊಂಡು ಎರಡು ಸತ್ಯವಾದ ರಿಲಿಜನ್ನುಗಳು ಇರಲೂ ಸಾಧ್ಯವೇ ಇಲ್ಲ. ಈ ಮಜಕೂರುಗಳೆಲ್ಲ ಹಿಂದೂಗಳಿಗೆ ಅರ್ಥವಾಗುವುದಂತೂ ದೂರದ ಮಾತು. ಒಂದೇ ಶಿವನನ್ನೇ ಪೂಜಿಸುವವರು ನಾವು ಬೇರೆ ರಿಲಿಜನ್ನು, ಅವರು ಬೇರೆ ರಿಲಿಜನ್ನು ಎನ್ನುವುದು ಸಾಧ್ಯವಿಲ್ಲ. ಹೋಗಲಿ, ಶಿವನನ್ನು ಪೂಜಿಸುವವರೆಲ್ಲರೂ ಒಂದೇ ರಿಲಿಜನ್ನಿಗೆ ಸೇರಿದ್ದಾರೆ ಎಂದಾದರೂ ಹೇಳಬಹುದೆ? ಶಿವವಾಣಿಯನ್ನು ಪಡೆದ ಶೈವರ ಏಕಮೇವ ಪ್ರವಾದಿಯನ್ನು ಯಾರಾದರೂ ಹೆಸರಿಸಬಲ್ಲರೆ? ಅವರ ಏಕಮೇವ ಪವಿತ್ರಗ್ರಂಥ ಯಾವುದು? ಸಮಸ್ತ ಶೈವರಿಗೆ ಏಕರೂಪದಲ್ಲಿ ಅನ್ವಯವಾಗಬಲ್ಲ ನೀತಿ ನಿರ್ದೇಶನಗಳಿವೆಯೆ? ಶೈವರೆಲ್ಲ ಪಾಪ ಮಾಡಿ ಶಿವಲೋಕದಿಂದ ಭೂಮಿಗೆ ಬಿದ್ದಿದ್ದಾರೆ ಹಾಗೂ ಮತ್ತೆ ಶಿವನನ್ನು ಸೇರುವ ಮಾರ್ಗವೇ ಶೈವಧರ್ಮ ಎಂಬುದಾಗಿ ಇವರಲ್ಲಿ ಯಾರಾದರೂ ಪ್ರತಿಪಾದನೆ ಮಾಡಲು ಸಾಧ್ಯವೆ?
ನಮ್ಮ ಮಠಾಧೀಶರುಗಳಿಗೇ ತಮ್ಮ ಸಂಪ್ರದಾಯಗಳನ್ನು ರಿಲಿಜನ್ ಎಂದು ಕರೆದುಕೊಂಡರೆ ಏನರ್ಥ ಹೊರಡುತ್ತದೆ ಎಂಬುದು ಗೊತ್ತಾಗದ ಮೇಲೆ ಸಾಮಾನ್ಯರ ಪಾಡನ್ನು ಊಹಿಸಿಕೊಳ್ಳಿ. ಏಕೆ ಧರ್ಮ ಜಿಜ್ಞಾಸೆಗೆ ಬದಲಾಗಿ ರಿಲಿಜನ್ನಿನ ಜಿಜ್ಞಾಸೆ ನಮ್ಮ ಪರಂಪರೆಗಳಿಗೆ ಮುಖ್ಯವೆನ್ನಿಸಿದೆ? ಇದಕ್ಕೆ ಒಂದೇ ಉತ್ತರವೆಂದರೆ ಧರ್ಮ ಜಿಜ್ಞಾಸೆಗಿಂತ ಈ ಜಿಜ್ಞಾಸೆಯು ನಮ್ಮ ಆಧುನಿಕ ಸೆಕ್ಯುಲರ್ ಪ್ರಭುತ್ವದೊಳಗೆ ಪ್ರಯೋಜನಕಾರಿಯಾಗಿದೆ. ಸೆಕ್ಯುಲರ್ ಪ್ರಭುತ್ವವು ಭಾರತದ ತುಂಬೆಲ್ಲ ಹಿಂದೂ, ಕ್ರೈಸ್ತ, ಇಸ್ಲಾಂ, ಬೌದ್ಧ, ಜೈನ, ಸಿಖ್ ಎಂಬಿತ್ಯಾದಿ ಬೇರೆ ಬೇರೆ ರಿಲಿಜನ್ನುಗಳಿವೆ, ಅವುಗಳು ಒಂದನ್ನೊಂದು ಕಬಳಿಸಲು ನೋಡುತ್ತಿವೆ, ಅವುಗಳೊಳಗೆ ಹಿಂದೂಗಳು ಆಘಾತಕಾರಿಯಗುವಷ್ಟು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ, ಹಾಗಾಗಿ ಅವರು ಉಳಿದ ರಿಲಿಜನ್ನುಗಳಿಗೆ ಅಪಾಯಕಾರಿಯಗಬಹುದು ಎಂಬ ತಿಳುವಳಿಕೆಯನ್ನಾಧರಿಸಿ ರೂಪುಗೊಂಡಿದೆ. ಈ ಅಪಾಯದಿಂದ ಅಲ್ಪ ಸಂಖ್ಯಾತ ರಿಲಿಜನ್ನುಗಳ ಹಿತವನ್ನು ಕಾಯುವ ಸಲುವಾಗಿ ಅವರುಗಳಿಗೆ ಅಲ್ಪ ಸಂಖ್ಯಾತ ಸ್ಥಾನ ಮಾನವನ್ನು ನೀಡಿ ಪ್ರಭುತ್ವದ ವಿಶೇಷ ಸವಲತ್ತುಗಳನ್ನು ನೀಡುತ್ತಿದೆ. ಇದರ ಪರಿಣಾಮವಾಗಿ ಅಲ್ಪ ಸಂಖ್ಯಾತರಾಗಲು ಪೈಪೋಟಿ ನಡೆದಿದೆ.
ಭಾರತದಲ್ಲಿ ಹಿಂದೂಯಿಸಂ ಎನ್ನುವುದಿಲ್ಲ ಆದರೆ ಇತರೆ ದೇಶೀ ರಿಲಿಜನ್ನುಗಳಿವೆ ಎಂದುಕೊಂಡು ಸರ್ಕಾರೀ ನೀತಿಗಳನ್ನು ರೂಪಿಸಲು ಎಷ್ಟೇ ಕಸರತ್ತು ಮಾಡಿದರೂ ಕೂಡ ಕೊನೆಯಿರದ ವಿವಾದಗಳೇ ಸೃಷ್ಟಿಯಾಗುತ್ತವೆ. ಅದನ್ನು ಬಿಟ್ಟು ಹಿಂದೂಗಳು ಎಂದು ಕರೆಯುವ ಜನರ ಸಂಸ್ಕೃತಿಯ ಸ್ವರೂಪ ಹಾಗೂ ಮಹತ್ವವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಬೇರೆ ಮಾರ್ಗಗಳನ್ನು ಕಂಡುಹಿಡಿಯುವುದು ನಾವೀಗ ಮಾಡಬೇಕಾಗಿರುವ ಕೆಲಸ.ಇದಕ್ಕೆ ಸಂಬಂಧಿಸಿ ಬಾಲಗಂಗಾಧರ ಎಂಬ ವಿದ್ವಾಂಸರು ಹೇಳುವುದೇನೆಂದರೆ ಭಾರತೀಯ ಸಂಸ್ಕೃತಿಯಲ್ಲಿ ಹಿಂದೂಯಿಸಂ ಒಂದೇ ಅಲ್ಲ ಶೈವಿಸಂ, ಜೈನಿಸಂ, ಬುದ್ಧಿಸಂ ಇತ್ಯಾದಿ ರಿಲಿಜನ್ನುಗಳೂ ಇಲ್ಲ. ಎಕೆಂದರೆ ಈ ಶೈವಿಸಂ, ಜೈನಿಸಂ ಇತ್ಯಾದಿಗಳು ಕೂಡ ರಿಲಿಜನ್ನಿನ ಲಕ್ಷಣಗಳನ್ನು ಹೊಂದಿಲ್ಲ. ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಗಳನ್ನು ಬಿಟ್ಟು ಭಾರತದಲ್ಲಿ ಬೇರೆ ರಿಲಿಜನ್ನುಗಳಿಲ್ಲ. ಮೇಲಿನವೆಲ್ಲ ಬೇರೆ ಬೇರೆ ಸಂಪ್ರದಾಯಗಳು. ಹಾಗಂತ ಅವುಗಳನ್ನು ಪರಸ್ಪರ ಪ್ರತ್ಯೇಕಿಸಲಾಗದು. ಅವು ಒಂದೇ ಪಾರಮಾರ್ಥಿಕ ಸತ್ಯವನ್ನು ಹುಡುಕಾಡುತ್ತಿರುವ ಹಲವು ಮಾರ್ಗಗಳು ಎಂಬುದಾಗಿ ತಮ್ಮನ್ನು ಗುರುತಿಸಿಕೊಂಡಿವೆ. ಅವುಗಳಿಗೆಲ್ಲ ಅಧ್ಯಾತ್ಮದ ಸಾಮಾನ್ಯ ತಳಪಾಯವಿದೆ ಹಾಗೂ ಸಾಮಾನ್ಯ ಉಪಾಸನೆಯ ವಿಧಾನಗಳು ಹಾಗೂ ದೇವತೆಗಳು ಕೂಡ ಇವೆ. ಹಾಗಾಗಿ ಹಿಂದೂ ರಿಲಿಜನ್ನು ಇಲ್ಲದಿದ್ದರೂ ಹಿಂದೂ ಸಂಸ್ಕೃತಿಯೆಂಬುದೊಂದನ್ನು ಗುರುತಿಸಲು ಸಾಧ್ಯ. ಯಾವುದಾದರೂ ಸಂಪ್ರದಾಯಗಳ ವಕ್ತಾರರು ತಾವು ಈ ಸಂಸ್ಕೃತಿಗೆ ಸೇರಿಲ್ಲ ಎಂದು ಪ್ರತಿಪಾದಿಸಿದರೆ ಅವರು ತಮ್ಮ ಪರಂಪರೆಯನ್ನೇ ನಿರಾಕರಿಸಿದಂತೇ.
ರಿಲಿಜನ್ನನ್ನು ಮನಸ್ಸಿನಲ್ಲಿಟ್ಟುಕೊಂಡು ಒಂದೆಡೆ ಹಿಂದೂ ಧರ್ಮ ಇಲ್ಲ ಎನ್ನುತ್ತ ಮತ್ತೊಂದೆಡೆ ಲಿಂಗಾಯತವು ಅಲ್ಪಸಂಖ್ಯಾತ ಧರ್ಮ ಎಂದು ಕರೆದುಕೊಳ್ಳುವುದು ತಾರ್ಕಿಕವಾಗಿ ಸಾಧ್ಯವಿಲ್ಲ: ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತ ಧರ್ಮ ಎಂಬುದಾಗಿ ನಂಬಿರುವುದರಿಂದ ಅಲ್ಪ ಸಂಖ್ಯಾತರ ರಕ್ಷಣೆಯ ನೀತಿ ಅಸ್ತಿತ್ವಕ್ಕೆ ಬಂದಿದೆ. ಭಾರತದಲ್ಲಿ ಬಹುಸಂಖ್ಯಾತರೇ ಇಲ್ಲ ಎಂದಮೇಲೆ ಅಲ್ಪ ಸಂಖ್ಯಾತರು ಯಾರು? ಹಿಂದೂಗಳಲ್ಲಿರುವ ಪ್ರತೀ ಸಂಪ್ರದಾಯಗಳೂ ಕೂಡ ತಾವೂ ಪ್ರತ್ಯೇಕ ರಿಲಿಜನ್ನುಗಳು ಎಂದು ಪ್ರತಿಪಾದಿಸಲು ತೊಡಗಿದಲ್ಲಿ ಅದು ಸೆಕ್ಯುಲರ್ ಪ್ರಭುತ್ವಕ್ಕೆ ಹೊಸ ತಲೆನೋವುಗಳನ್ನು ಸೃಷ್ಟಿಸುತ್ತದೆ. ಏಕೆಂದರೆ ಇವನ್ನೆಲ್ಲ ಅಲ್ಪಸಂಖ್ಯಾತರು ಎಂದು ಮಾನ್ಯ ಮಾಡುತ್ತ ಹೋದಲ್ಲಿ ಕೊನೆಗೆ ಮುಸ್ಲಿಮರೇ ಭಾರತದಲ್ಲಿ ಬಹುಸಂಖ್ಯಾತರು ಎಂಬ ಸತ್ಯವನ್ನು ಕಂಡುಕೊಳ್ಳುವ ದಿನಗಳೂ ಬರಬಹುದು. ನಮ್ಮ ಪ್ರಭುತ್ವಕ್ಕೆ ಇಂಥ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಕೋ ಇಲ್ಲ, ಸಮುದಾಯಗಳ ನಡುವೆ ಪೈಪೋಟಿ ಹಾಗೂ ವೈರತ್ವಕ್ಕೆ ಕಾರಣವಾಗಬಲ್ಲ ಈ ಸೆಕ್ಯುಲರ್ ನೀತಿಯಿಂದಲೇ ಕಳಚಿಕೊಳ್ಳುವುದು ಬೇಕೋ?
ರಾಜಾರಾಂ ಹೆಗಡೆ ಸರ್,
ನಿಮ್ಮ ಎಲ್ಲಾ ಲೇಖನಗಳನ್ನು ಓದಿದ್ದೇನೆ. ಈ ನಿಮ್ಮ ಲೇಖನ ದಲ್ಲಿ ಕೊನೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಯಾರು ಕೊಡಬೇಕು? ಭಾರತದ ಪ್ರಭುತ್ವದಲ್ಲಿ ಪ್ರಭುಗಳಾಗುವವರಿಗೆ ಬೇಕಿರುವುದು ಒಟ್ಟು ಬ್ಯಾಂಕು. ಅದಕ್ಕೆ ಒಳಗಡೆ ಏನೇ ಇರಲಿ ಹೊರಗೆ ಒಗ್ಗಟ್ಟು ಆಗುವ (ಅದು ಆಯಾ ಧರ್ಮಗುರುವಿನ ಆಜ್ಞೆಯಂತೇಯೆ ಇರಲಿ) ಜನ ಸಮುದಾಯವನ್ನು ಅಲ್ಪ ಸಂಖ್ಯಾತರು ಎಂದು ವಿಷೇಶ ಸವಲತ್ತುಗಳನ್ನು ಕೊಟ್ಟ ಸಾಕುತ್ತಿರುವದು. ಪ್ರಭುಗಳಿಗೆ ಈಗಿರುವ ವ್ಯವಸ್ಥೆಯು ಸರಿಯಾಗಿದೆ. ಹೇಗಿದ್ದರೂ ಉಳಿದ ಎಲ್ಲರೂ ತಾವು ಅಲ್ಪಸಂಖ್ಯಾತರಾಗಿ ಸರಕಾರದ ಸೌಲಭ್ಯಗಳನ್ನು ಗಿಟ್ಟಿಸಿಕೊಳ್ಳಲು ಬಡಿದಾಡುತಿದ್ದಾಗ, ಅವರೆಲ್ಲರೂ ಒಟ್ಟಾಗಿ “ಈಗಿನ ವ್ಯವಸ್ಥೆಯನ್ನು ಬದಲಾಯಿಸಿ ” ಎಂದು ಹೇಳುವವರು ಯಾರು?
ಒಂದು ವಿನಂತಿ : ನಮ್ಮದೇ ಖರ್ಚಿನಲ್ಲಿ ನಿಮ್ಮ ವಿಚಾರಗಳನ್ನು ಈಗ ಅಲ್ಪಸಂಖ್ಯಾತ ರಲ್ಲದವರನ್ನೆಲ್ಲ ಸೇರಿಸಿ, ಅವರಿಗೆ ತಿಳಿಹೇಳಿ ಆಗಲಾದರೂ ಅವರೆಲ್ಲರೂ ತಮ್ಮ ತಮ್ಮಲ್ಲಿಯ ಭಿನ್ನಾಭಿಪ್ರಾಯಗಳನ್ನು ಬಿಟ್ಟು “ಭಾರತದಲ್ಲಿ ಯಾರೋ ಎಲ್ಲೋ ಪ್ರಯೋಗ ಮಾಡಿದ ಚೌ ಚೌ ಭಾತ ಕಾನೂನು ಕಟ್ಟಳೆಗಳು ಬೇಡ ನಮ್ಮಲ್ಲಿಯೇ ನಮ್ಮ ಹಿರಿಯರು ತಲೆತಲಾಂತರದಿಂದ ನಡೆಸಿಕೊಂಡು ಬಂದ ಆಡಳಿತವನ್ನು ಇಂದಿನ ವಸ್ತು ಸ್ಥಿತಿಗೆ ಹೊಂದಿಸಿ ಮಾಡಿ” ಎಂದು ಒತ್ತಡ ತರಬೇಕು. ಎನನ್ನುತ್ತಿರಿ?
ಹೆಗಡೆಜಿ, ಭಾರತದಲ್ಲಿ ಸೆಮೆಟಿಕ್ ಮಾದರಿಯ ಮತಧರ್ಮಗಳು ಇಲ್ಲದೇ ಇರಬಹುದು, ಆದರೆ ಸನಾತನ ಧರ್ಮ ಎಂಬುದು ಇದೆ. ಅದು ವೈದಿಕತೆಯ ನೆಲೆಯ ಮೇಲೆ ಬೆಳೆದ ಮತಧರ್ಮ. ಅದರ ಟಿಸಿಲುಗಳೇ ಅಸಂಖ್ಯ ಜಾತಿ-ಉಪಜಾತಿಗಳು. ಯಾವ ಯಾವ ಜಾತಿಗಳು ಸನಾತನ ಧರ್ಮವನ್ನು ಮಾನ್ಯ ಮಾಡುತ್ತವೆಯೋ ಅವೆಲ್ಲವೂ ಸೇರಿ ಬಹುಸಂಖ್ಯಾತ ಸಮುದಾಯವೆನಿಸಿದೆ.
ಹ ಹ ಹ ಅಲ್ಪಸಂಖ್ಯಾತ ಸ್ಥಾನ ಇನ್ನೇನು ಕೈಬಿಡಲಿದೆ ಎಂದು ಮುಖವಾಡ ಹೊತ್ತ ಹಿಂದಿನಮುಖದಲ್ಲಿ ಬೆವರಿಳಿಯುತ್ತಿದೆ! ಅದೇ ಅಳಿಯ ಅಲ್ಲ ಮಗಳ ಗಂಡ ಅನ್ನೋ ಹಳೆಯವಾದದ ಮೂಲಕ ಮುಖವಾಡವು ಆ ಬೆವರನ್ನು ಹೊರೆಸಿಕೊಳ್ಳಲೆತ್ನಿಸುತ್ತಿದೆ!!!! 🙂 🙂
ಹಾಗಾದರೆ ಸನಾತನ ಧರ್ಮ ಇಲ್ಲ ಅಂತೀರಾ? ಜಾತಿ ವ್ಯವಸ್ಥೆಯು ಸನಾತನ ಧರ್ಮದ ಟಿಸಿಲು ಅಲ್ಲ ಅಂತೀರಾ?
ಹಿಂದೂ ರಿಲಿಜನ್ನೇ ಇಲ್ಲಾ ಅಂದಮೇಲೆ ‘ಧರ್ಮ’ ಅನ್ನೋದನ್ನು ಸಮುದಾಯಗಳಿಗೆ ಆರೋಪಿಸಿ ಮಾತೋಡೋದೆ ಅಜ್ಞಾನ! ಅದು ಗುಣ, ದಾನ, ಒಳ್ಳೆದು-ಕೆಟ್ಟದ್ದು, ಸರಿ-ತಪ್ಪು, ನ್ಯಾಯ ಅನ್ಯಾಯ ಇತ್ಯಾಧಿಯಂತೆ ಬಳಸುವ ಶಬ್ದ! ಇಲ್ಲಿ ಸಾವಿರಾರು ಸಂಪ್ರದಾಯಗಳನ್ನು ಪಾಲಿಸುತ್ತಿರುವ ಸಾವಿರಾರು ಸಮುದಾಗಳಿವೆ! ಅವೆಲ್ಲಾ ಭಾರತೀಯ ಸಂಪ್ರದಾಯಗಳು (ಇಲ್ಲೇ ಹುಟ್ಟಿ ಬೆಳೆಯುತ್ತಿರುವ ಎಂಬ ಅರ್ಥದಲ್ಲಷ್ಟೇ) ಏನೇ ಆಗಲಿ ಮುಸ್ಲೀಮರಿಗಿಂತ ಹೆಚ್ಚು ಜನಸಂಖ್ಯೆಯುಳ್ಳ ಯಾವ ಸಮುದಾಯವೂ ಭಾರತದಲ್ಲಿ ಇಲ್ಲ!! ಇರಲಿಕ್ಕೆ ಸಾಧ್ಯವೂ ಇಲ್ಲ! ಈ ಲೇಖನದ ತಾತ್ಪರ್ಯವೂ ಅದೇ ಆಗುತ್ತದೆ! ಹೀಗಿರುವಾಗ ನಿಮ್ಮ ಧಾವಂತ ಅರ್ಥಾವಾಗತ್ತೆ !!! 🙂
ಭಾರತದ ಮುಸಲ್ಮಾನರಿಗಾಗಲಿ ಕ್ರಿಶ್ಚಿಯನ್ನರಿಗಾಗಲಿ ಅಲ್ಪಸಂಖ್ಯಾತ ಹಣೆಪಟ್ಟಿಯಿಂದ ಲಾಭಕ್ಕಿಂತ ನಷ್ಟವೇ ಆಗಿದೆ. ಅಲ್ಪಸಂಖ್ಯಾತರ ಓಲೈಕೆ ನಡೆಯುತ್ತಿದೆ ಎಂದು ಹಿಂದುತ್ವವಾದಿ ಪಕ್ಷಗಳು ಪ್ರಾಪಗಾಂಡ ನಡೆಸಿ ನಡೆಸಿ ದೇಶದಾದ್ಯಂತ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ದ್ವೇಷ ಹೆಚ್ಚಾಗಿದೆ. ಬೆಂಗಳೂರಿನಂತಹ ವಿದ್ಯಾವಂತ ಮೇಲ್ಮಧ್ಯಮವರ್ಗದವರೇ ಹೆಚ್ಚು ಇರುವ ನಗರದಲ್ಲಿ ಸುಸಂಸ್ಕೃತ ಮುಸಲ್ಮಾನರಿಗೆ ಮನೆ ಬಾಡಿಗೆಗೆ ಸಿಗುವುದೂ ದುಸ್ತರವಾಗಿದೆ. ಮುಸ್ಲಿಂ ಅಸ್ಮಿತೆಯನ್ನು ಎತ್ತಿ ಹಿಡಿಯುವ ಮುಸಲ್ಮಾನ ಯುವ ಜನತೆಯನ್ನು ವಿದ್ಯಾವಂತ ಮೇಲ್ಮಧ್ಯಮವರ್ಗದವರು ಅನುಮಾನದಿಂದ ನೋಡುತ್ತಾರೆ. ಮುಸ್ಲಿಂ ಬಾಹುಳ್ಯವಿರದ ಕ್ಷೇತ್ರಗಳಲ್ಲಿ ಮುಸಲ್ಮಾನ ಅಭ್ಯರ್ಥಿ ಚುನಾವಣೆ ಗೆಲ್ಲುವುದು ಮರೀಚಿಕೆಯಾಗಿದೆ ಶಿಕ್ಷಕ ಪದವೀಧರರ ಕ್ಷೇತ್ರಗಳಲ್ಲೂ! ಯಾರಿಗೆ ಬೇಕಾಗಿದೆ ಅಲ್ಪಸಂಖ್ಯಾತ ಹಣೆಪಟ್ಟಿ?!
ನಿಮ್ಮ ನೋವು ನನಗೆ ಅರ್ಥವಾಗುತ್ತಿದೆ ಸಹೋದರರೇ.ಹೇಗಿದ್ದರೂ ನಿಮ್ಮವರ ಸರ್ಕಾರವಿದೆಯಲ್ಲವೇನು.ಅವರಿಗೆ ಹೇಳಿ ಈ ಅಲ್ಪಸಂಖ್ಯಾತವನ್ನು ತೆಗೆಸಿಬಿಡಿ.ಆಗಬಹುದಲ್ಲವೇ ಸಹೋದರರೇ
ಸರಕಾರ ಮುಸಲ್ಮಾನರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವುದನ್ನು ನಿಲ್ಲಿಸಿದರೆ ಮಲ್ಲೇಶ್ವರ ಹಾಗೂ ಬಸವನಗುಡಿಯ ಬ್ರಾಹ್ಮಣರು ಮುಸಲ್ಮಾನರಿಗೆ ಬಾಡಿಗೆಗೆ ಮನೆ ಕೊಡುತ್ತಾರೇನು??
ಸಹೋದರರು ಮಟಮಟ ಮಧ್ಯಾಹ್ನ ಮದ್ಯಪಾನ ಮಾಡಿ ಉಲ್ಟಾ ಪಲ್ಟಾ ಉತ್ತರಿಸಿರುವಂತೆ ಗೋಚರಿಸುತ್ತಿದೆ
You must be talking about yourself.
ನೋಡಿದ್ರಾ ಈ ಮುಖವಾಡದ ಹಿಂದಿನ ವ್ಯಕ್ತಿ ತಮ್ಮ ಬಾಂದರ ಪರವಾಗಿ ಬ್ಯಾಟಿಂಗ್ ಮಾಡ್ತಿದಾರೆ! ಅದೇ ಅಲ್ಲಿ ದಲಿತರಿಗೆ ಬಾಡಿಗೆಗೆ ಮನೆ ಕೊಡ್ತಾರೇನು? ಅಂತ ಕೇಳಬಹದಿತ್ತಲ್ಲಾ! ಇದು ಬಸವ ಸಹೋದರನ ಮುಖವಾಡದಲ್ಲಿರುವ ರಂ.ದ. ಅಂದರೆ ಬುರ್ಗಾ!! 🙂 ಎಲ್ಲೆಲ್ಲಿ ಲಿಂಗಾಯತ ಜಾತಿಗಳವರು ನಿಮ್ಮ ಬಾಂದವರಿಗೆ (ಮುಸ್ಲೀಂ) ಮನೆ ಬಾಡಿಗೆ ಕೊಟ್ಟದ್ದಾರೆ ಅಂತಾನೂ ಒಸಿ ಹೇಳಿ 🙂
ಹಾಗೇನೆ ಮುಸ್ಲೀಂರು ದಾರಾಳವಾಗಿ ಬೇರೆ ಸಮುದಾಯದವರಿಗೆ (ದಲಿತ, ಹಿಂದುಳಿದ ಮತ್ತು ಲಿಂಗಾಯತರನ್ನೂ ಸೇರಿಸಿ) ಎಷ್ಟು ಮನೆಗಳನ್ನು ಬಾಡಿಗೆ ಕೊಟ್ಟಿದ್ದಾರೆ ಅನ್ನೋದನ್ನೂ ಹೇಳಿ ಮೌಲ್ವಿಗಳೇ!
ಅಂದಹಾಗೆ, ಮನೆ ಬಾಡಿಗೆ ಕೊಡುವುದಕ್ಕೂ ಇಲ್ಲವೇ ಕೊಡದೇ ಇರೋದಕ್ಕೂ ಅಲ್ಪಸಂಖ್ಯಾತ ಸ್ಥಾನಮಾನಕ್ಕೂ ಎತ್ತಣಿಂದೆತ್ತ ಸಂಬಂದ !! ?? ಚರ್ಚೆಯ ವಿಚಾರವನ್ನೇ ಹೈಜಾಕ್ ಮಾಡಿ ಅಸಂಬದ್ದ ಪ್ರಲಾಪಗಳನ್ನು ಮಾಡೋದಂದ್ರೆ ಇದೇ ಅಲ್ವಾ ಮೌಲ್ವಿಗಳೇ
ದಲಿತರು ಬಾಡಿಗೆ ಮನೆ ವಿಷಯದಲ್ಲಿ ಅನುಭವಿಸುತ್ತಿರುವ ಜಾತಿ ತಾರತಮ್ಯವನ್ನು ಈಗಗಾಲೇ ಕವಿ ಸಿದ್ದಲಿಂಗಯ್ಯ ಹಾಗೂ ದಾರ್ಶನಿಕ ಹೋರಾಟಗಾರ ಮಹಾದೇವ ಅವರು ಟಿಪ್ಪಣಿ ಮಾಡಿದ್ದಾರೆ. ನಾನು ಮತ್ತೆ ಅದನ್ನು ನಿಮಗೆ ಹೇಳುವ ಅಗತ್ಯವಿಲ್ಲ. ಅಲ್ಪಸಂಖ್ಯಾತ ಹಣೆ ಪಟ್ಟಿ ತೊಟ್ಟ ಮುಸಲ್ಮಾನರ ಬಗ್ಗೆ ಸಾಂದರ್ಭಿಕವಾಗಿ ಪ್ರಸ್ತಾಪ ಮಾಡಿದೆ, ವಿಷಯಾಂತರದ ಉದ್ದೇಶದಿಂದಲ್ಲ. ಅಂದ ಹಾಗೆ ಬ್ರಾಹ್ಮಣರು ಬಾಡಿಗೆ ಬರಲು ರೆಡಿ ಇದ್ದರೆ ಮನೆಯನ್ನಷ್ಟೇ ಅಲ್ಲ ಮನೆಯಲ್ಲೇ ತಯ್ಯಾರಿಸಿದ ಬಿಸಿ ಬಿಸಿ ಬಿರಿಯಾನಿ ಕೂಡ ಕೊಡಲು ರೆಡಿ ಇದ್ದೇವೆ.
ಹ ಹ ಹ ಮುಖವಾಡದ ಹಿಂದೆ ಇರೋರು ತಾವೇ ಎಂದು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು ಮೌಲ್ವಿಗಳೇ,!! ಮೊದಲು ಲಿಂಗಾಯತ ಸಹೋದರರಿಗೆ ವಚನಗಳ ಹೆಸರಲ್ಲಿ ನಿಮ್ಮ ಬಿಲ್ ಬಿರಿಯಾನಿಯನ್ನು ಉಣಬಡಿಸುತ್ತಿರುವುದು ಮುಂದುವರಿಯಲಿ! !! 🙂 🙂 🙂
ತಿದ್ದುಪಡಿ: ಲಿಂಗಾಯತ ಸಹೋದರರಿಗೆ ವಚನಗಳ ಹೆಸರಲ್ಲಿ ನಿಮ್ಮ “ಬೀಫ್ ಬಿರಿಯಾನಿ”ಯನ್ನು ಉಣಬಡಿಸುತ್ತಿರುವ ಕಾಯಕ ಮುಂದುವರಿಯಲಿ! !! 🙂 🙂 🙂
ನೋಡಿ ನೀವು ಬುರ್ಗಾ ಮುಖವಾಡ ಅಂತೆಲ್ಲ ಬಡಬಡಿಸಿ ವಾದವನ್ನು ಹಳ್ಳಕ್ಕೆ ದೂಡಬೇಡಿ. ಮುಸಲ್ಮಾನರಿಗೆ ಅಲ್ಪಸಂಖ್ಯಾತ ಪಟ್ಟದಿಂದ ಲಾಭಕ್ಕಿಂತ ನಷ್ಟವೇ ಆಗಿದೆ ಅಂತ ಮೊದಲು ಒಪ್ಪಿಕೊಳ್ಳಿ ಆಮೇಲೆ ಲಿಂಗಾಯತರಿಗೆ ಏನನ್ನು ಉಣಿಸತಕ್ಕದ್ದು ಅಂತ ನನಗೆ ಬೋಧನೆ ಮಾಡಿ.
ನಷ್ಟವೇ ಆಗಿದ್ರೆ ನಿಮ್ ಮುಖದಲ್ಲಿ ಬೆವರಿಳಿಯಬೇಕಿರಲಿಲ್ಲ! ಮತ್ತು ಅಳಿಯ ಅಲ್ಲ ಮಗಳ ಗಂಡ ಅಂತ ವಿತಂಡವಾದ ಮಾಡಿ ‘ಸನಾತನ ಹಿಂದೂ ಮತಧರ್ಮವಿದೆ’ ಅಂತ ಬಡಬಡಿಸಬೇಕಿರಲಿಲ್ಲ ಅಂತ ಎಳೆಮಗೂಗೆ ಕೂಡ ಅರ್ಥ ಆಗತ್ತೆ ಬುಲ್ ಬಿರಿಯಾನಿ ಪ್ರಿಯರೇ! ಹಾಗಾಗಿ ತಮ್ಮ ಲಿಂಗಾಯತ ಸಹೋದರರಿಗೆ ಬುಲ್ ಬಿರಿಯಾನಿ ತಿನಿಸುವ ಕಾಯಕ ಮುಂದುವರಿಸಿ 🙂
ನೋಡಿ ನೀವು ಅವಧಿಯಲ್ಲೂ ಇದೇ ರೀತಿ ಮಂಗಚೇಷ್ಟೆ ಮಾಡಿ ಚರ್ಚೆಯ ಹಳಿ ತಪ್ಪಿಸಿದಿರಿ. ಇಲ್ಲೂ ಅದನ್ನೇ ಮುಂದುವರೆಸುತ್ತಿದ್ದೀರಿ. ಅಲ್ಪಸಂಖ್ಯಾತರಾದರೇನು ಮುಸಲ್ಮಾನರೂ ಮನುಷ್ಯರಲ್ಲವೇ? ಬೆಂಗಳೂರಿನಂತಹ ಮಹಾನಗರಗಳಲ್ಲಿ ಬಾಡಿಗೆಗೆ ಮನೆ ಕೂಡ ಸಿಗದೆ ನಿತ್ಯ ಶೋಷಣೆಗೆ ಸಿಲುಕಿದ್ದಾರೆ. ಮುಸಲ್ಮಾನರ ಬವಣೆಗಳಿಗೆ ಸ್ಪಂದಿಸುವುದಿರಲಿ ಅವರ ಸಮಸ್ಯೆಗಳು ಸಮಸ್ಯೆಗಳೇ ಅಲ್ಲ ಅಂತ ವಾದ ಮಾಡುವ ನಿಮ್ಮಂತಹ ಭಂಡರಿಂದ ಹಳಿ ತಪ್ಪಿಸುವ ಕಮೆಂಟುಗಳಲ್ಲದೇ ಮತ್ತೇನನ್ನೂ ನಿರೀಕ್ಷಿಸುವುದು ತಪ್ಪು.
ಮುಸಲ್ಮಾನರು ಮಾಂಸಾಹಾರಿಗಳು. ಅವರಿಗೆ ಬಿರಿಯಾನಿ ತಿನ್ನುವುದು ಬ್ರಾಹ್ಮಣರಿಗೆ ಬಿಸಿಬೇಳೆಭಾತ್ ತಿನ್ನುವಷ್ಟೇ ಸಹಜ ಕ್ರಿಯೆ. ಅದು ಅವರ ಹಕ್ಕೂ ಕೂಡ. ಬ್ರಾಹ್ಮಣರ ಫಂಕ್ಷನ್ನುಗಳಲ್ಲಿ ಮುಸಲ್ಮಾನರೂ ಸೇರಿದಂತೆ ಅತಿಥಿಗಳೆಲ್ಲ ಬಿಸಿಬೇಳೆಭಾತ್ ತಿನ್ನುತ್ತಾರೆ, ಹಾಗೆ ಮುಸಲ್ಮಾನರ ಫಂಕ್ಷನ್ನುಗಳಲ್ಲಿ ಅತಿಥಿಗಳು ಬಿರಿಯಾನಿ ತಿನ್ನಬೇಕು. ಹೋದಲೆಲ್ಲ ಬ್ರಾಹ್ಮಣ್ಯವೇ ಮೆರೆಯುತ್ತೇನೆ ಎಂಬ ಧೋರಣೆ ಸರಿಯಲ್ಲ.
ನಿಮಗೆ (ಮುಸಲ್ಮಾನರಿಗೆ) ಸಹಜ ಎನಿಸಿದ್ದನೇ ಲೋಕವೆಲ್ಲಾ ಸಹಜ ಅಂತ ಸ್ವೀಕರಿಸಬೇಕಾ ಮೌಲ್ವಿಗಳೇ!?
ಎಷ್ಟು ಜನ ಮುಸಲ್ಮಾನರು ಇತರ ಶೋಷಿತ ಜಾತಿಗಳವರಿಗೆ ಮನೆ ನೀಡಿದ್ದಾರೆ ಸ್ವಲ್ಪ ಅದನ್ನು ಮತ್ತು ಎಷ್ಟು ಜನ ನಿಮ್ಮ ಲಿಂಗಾಯತ ಸಹೋದರರು ಮುಸ್ಲೀಮರಿಗೆ ಮತ್ತು ದಲಿತರಿಗೆ ಮನೆ ನೀಡಿದ್ದಾರೆ ಎಂದು ಅದರ ಅಂಕಿಅಂಶಗಳನ್ನು ಕೊಡಿ ಗುರುವೇ! ಏನೂ ಈ ಲೋಕ ಎಲ್ಲಾ ಬ್ರಾಹ್ಮಣರೇ ಮನೆಗಳನ್ನು ಕಟ್ಟಿಕೊಂಡು ಉಳಿದವರಗಾರಿಗೂ ಮನೆ ಕೊಡಲ್ಲಾ ಅಂತ ಹೇಳ್ತಿದಾರ!? ಅವರೇ ಎಲ್ಲಾ ಕಡೆ ತುಂಬ್ಕೊಂಡಿದಾರ! ? ಮುಸ್ಲಿಮರ ಜನಸಂಖ್ಯೆಯಲ್ಲಿ ಶೇಕಡ ಒಂದೆರಡರಷ್ಷೂ ಬ್ರಾಹ್ಮಣರಿರಲಿಕ್ಕಿಲ್ಲ ಬೆಂಗಳೂರಿನಂತಹ ಮಹಾನಗರಗಳಲ್ಲಿ! ಹೀಗಿರುವಾಗ ಏನು ಅಡುಗೋಲಜ್ಜಿ ಕಥೆ ಹಿಡಿಯಿರಿ!? ಶಿವಾಜಿನಗರ, ಟ್ಯಾನರಿ ರೋಡ್ ಗಳ ಮುಸ್ಲೀಮರಿರುವ ಏರಿಯಾಗಲ್ಲಿ ದಲತರಿಗೆ ಇಲ್ಲ ಇನ್ಯಾವುದೇ ಜಾತಿಯವರಿಗೆ ಎಷ್ಟು ಮನೆ ಬಾಡಿಗೆ ನೀಡಿದಾರೆ ಅಂತ ಒಸಿ ಕಣ್ಬಿಟ್ಟು ನೋಡಿ ಅಂಕಿಅಂಶಗಳ ಕೊಡಿ! ನಂತರ ಯಾರ ಶೋಷಣೆ ಮಾಡ್ತಿದಾರೆ ಅಂತ ಎಲ್ರಿಗೂ ಗೊತ್ತಾಗತ್ತೆ!
ಬುಲ್ಬಿರಿಯಾನಿ ಪ್ರಿಯ ಟೌನ್ಹಾಲ್ ಓರಾಟಗಾರರ ಮುಂದೆ ನಿಮ್ ಕಥೆ ಹೊಡೀರಿ! ಸ್ವಲ್ಪ ನಿಮ್ ಬಿರಿಯಾನಿಯಾದ್ರೂ ಖರ್ಚಾಗತ್ತೆ!
ಯಾವ ಯಾವ ಸಮುದಾಯದವರು ಅನ್ಯ ಸಮುದಾಯದವರಿಗೆ ಮನೆ ಬಾಡಿಗೆಗೆ ಕೊಟ್ಟಿದ್ದಾರೆ ಎಂಬುದರ ವಿವರ ಸದ್ಯದಲ್ಲೇ ತಿಳಿದು ಬರಲಿದೆ. ಹಿಂದುಳಿದ ವರ್ಗದವರ ಆಯೋಗ ನಡೆಸಿದ ಜಾತಿ ಗಣತಿಯ ವರದಿ ಬರುವ ವರೆಗೆ ತಾಳ್ಮೆಯಿಂದಿರಿ.
ಮತ್ತೆ ತಾವೂ ಅದನ್ನೇ ಕಾಯ್ಕೊಂಡು ಇರೋದು ಬಿಟ್ಟು ಯಾಕೆ ರೀಲ್ ಕಥೆ ಸುತ್ತುತ್ತಿರೋದು! ?
“ವಾಜಿನಗರ, ಟ್ಯಾನರಿ ರೋಡ್ ಗಳ ಮುಸ್ಲೀಮರಿರುವ ಏರಿಯಾಗಲ್ಲಿ ದಲತರಿಗೆ ಇಲ್ಲ ಇನ್ಯಾವುದೇ ಜಾತಿಯವರಿಗೆ ಎಷ್ಟು ಮನೆ ಬಾಡಿಗೆ ನೀಡಿದಾರೆ ”
ಯಾವ ಲಿಂಗಾಯತನೂ ದಲಿತನೂ ತನಗೆ ಮುಸಲ್ಮಾನರು ಬಾಡಿಗೆಗೆ ಮನೆ ಕೊಡುತ್ತಿಲ್ಲ ಅಂತ ಎಲ್ಲಿಯೂ ಅವಲತ್ತುಕೊಂಡಿಲ್ಲ. ಆದರೆ ಬ್ರಾಹ್ಮಣರು ಬ್ರಾಹ್ಮಣೇತರರಿಗೆ ಬಾಡಿಗೆಗೆ ಮನೆ ಕೊಡಲು ಹಿಂದೇಟು ಹಾಕುವುದು ಜನಜನಿತವಾಗಿದೆ.
ಬಸವ ಸಹೋದರನೆಂಬ ಮುಖವಾಡಹೊತ್ತು ವಚನಗಳ ಹೆಸರಲ್ಲಿ ಇಸ್ಲಾಂ ನ ವಿಚಾರಗಳನ್ನು ಬೋದಿಸುತ್ತಿರುವ ನಿಮ್ಮಂತವರ ತಲೆ ಮತ್ತು ಬಾಯಿಗಳಲ್ಲಿ ಇದು ‘ಜನಜನಿತ’ವಾಗಿರೋದು ನಿಜ!
ಇಸ್ಲಾಂ ಕೂಡ ಬಸವಧರ್ಮದ ಹಾಗೆ ಜೀವಪರ ಧರ್ಮವೇ ಆಗಿದೆ. ಆದುದರಿಂದ ಸಾಂದರ್ಭಿಕವಾಗಿ ಇಸ್ಲಾಂ ತತ್ವಗಳನ್ನು ಬಸವಾದ್ವೈತದ ಜೊತೆಗೆ ಸಮರಸವಾಗಿ ಬೋಧನೆ ಮಾಡುವುದು ತಪ್ಪೇನಲ್ಲ. ಇರುವುದೊಂದೇ ಮತ – ಮಾನವೀಯತೆ. ಸಬ್ ಅಲ್ಲಾ ಕಿ ಬಂಧೆ ಹೈ.
ಹೆಗಡೆಜಿ, ಭಾರತದಲ್ಲಿ ಸೆಮೆಟಿಕ್ ಮಾದರಿಯ ಮತಧರ್ಮಗಳು ಇಲ್ಲದೇ ಇರಬಹುದು, ಆದರೆ ಸನಾತನ ಧರ್ಮ ಎಂಬುದು ಇದೆ. ಅದು ವೈದಿಕತೆಯ ನೆಲೆಯ ಮೇಲೆ ಬೆಳೆದ ಮತಧರ್ಮ. ಅದರ ಟಿಸಿಲುಗಳೇ ಅಸಂಖ್ಯ ಜಾತಿ-ಉಪಜಾತಿಗಳು. ಯಾವ ಯಾವ ಜಾತಿಗಳು ಸನಾತನ ಧರ್ಮವನ್ನು ಮಾನ್ಯ ಮಾಡುತ್ತವೆಯೋ ಅವೆಲ್ಲವೂ ಸೇರಿ ಬಹುಸಂಖ್ಯಾತ ಸಮುದಾಯವೆನಿಸಿದೆ. ಲಿಂಗಾಯತರು ವೈದಿಕತೆಯನ್ನು ಪುರಸ್ಕರಿಸುವುದಿಲ್ಲ, ಆದುದರಿಂದ ಅವರು ಈ ಬಹುಸಂಖ್ಯಾತ ಸಮುದಾಯಕ್ಕೆ ಸೇರುವುದಿಲ್ಲ.
ಸಹೋದರ ಬಸವ ರವರೇ, ತಮ್ಮ ಈ “ಬ್ರಾಹ್ಮಣರ ಫಂಕ್ಷನ್ನುಗಳಲ್ಲಿ ಮುಸಲ್ಮಾನರೂ ಸೇರಿದಂತೆ ಅತಿಥಿಗಳೆಲ್ಲ ಬಿಸಿಬೇಳೆಭಾತ್ ತಿನ್ನುತ್ತಾರೆ, ಹಾಗೆ ಮುಸಲ್ಮಾನರ ಫಂಕ್ಷನ್ನುಗಳಲ್ಲಿ ಅತಿಥಿಗಳು ಬಿರಿಯಾನಿ ತಿನ್ನಬೇಕು” ಮಾತುಗಳನ್ನು ಕೇಳಿದ ಮೇಲೆ ನನಗೂ ತಮಗೊಂದು ಪ್ರಶ್ನೆ ಕೇಳಬೇಕೆಂದೆನಿಸಿದೆ. ನನಗೆ ಹಾಗು ನನ್ನ ಗೆಳೆಯರಿಗೆ ಹಂದಿಬಾಡೂಟವೆಂದರೆ ಬಹಳ ಇಷ್ಟ. ಹಾಗೆಂದು ನಾವೆಲ್ಲಾ ಸೇರಿ ಒಂದು ಫಂಕ್ಷನ್ನು ಮಾಡಿ ಬಂದ ಮುಸಲ್ಮಾನ ಬಾಂಧವರೆಲ್ಲರೂ ನಮ್ಮಿಷ್ಟದ ಊಟ ಮಾಡಿರೆಂದು ಕೇಳಿದರೆ ಹೇಗಿರುತ್ತದೆ?
ಮುಸಲ್ಮಾನರು ಹಂದಿ ಮಾಂಸ ತಿನ್ನದಿರಲು ಕಾರಣಗಳಿವೆ. ಮುಖ್ಯವಾಗಿ ಖುರಾನ್ ಪವಿತ್ರ ಗ್ರಂಥವು ಹಂದಿ ಮಾಂಸ ಸೇವನೆಯನ್ನು ನಿಷೇಧಿಸಿದೆ. ಆದರೆ ಬ್ರಾಹ್ಮಣರು ವೇದಕಾಲದಲ್ಲಿ ಮಾಂಸವನ್ನು ಭಕ್ಷಿಸುತ್ತಿದ್ದರು ಅಂತ ವೇದಗಳೇ ಹೇಳಿವೆ. ಮಾಂಸ ಸೇವನೆಗೆ ವೇದಗಳೇ ಪರವಾನಗಿ ಕೊಟ್ಟ ಮೇಲೆ ಬಿರಿಯಾನಿ ತಿನ್ನುವುದಕ್ಕೆ ಅಡ್ಡಿ ಏನು?
ಪುರಾತನರ ಗೋಮಾಂಸ ಭಕ್ಷಣೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೋಡಿ: http://www.vicharamantapa.net/content/node/60
“ಆದರೆ ಬ್ರಾಹ್ಮಣರು ವೇದಕಾಲದಲ್ಲಿ ಮಾಂಸವನ್ನು ಭಕ್ಷಿಸುತ್ತಿದ್ದರು ಅಂತ ವೇದಗಳೇ ಹೇಳಿವೆ.” ಸಹೋದರ ಬಸವರವರೇ, ಈ ಮಾತು ಖಂಡಿತವಾಗಿಯೂ ಬಹು ದೊಡ್ಡ ಸುಳ್ಳು. ವೇದಗಳ ಬಗ್ಗೆ ಅರ್ಧಜ್ಞಾನ ಹೊಂದಿರುವವರು ಹಾಗೂ ವಿದೇಶಿ ಭಾಷಾಂತರರು ಮಾಡಿರುವ ಆಧಾರವಿಲ್ಲದ ಆರೋಪಗಳಷ್ಟೆ. ವೇದಗಳು, ಬಹಳ ಸ್ಪಷ್ಟವಾಗಿ “ಪ್ರಾಣಿಹಿಂಸೆ ಮಾಡುವುದನ್ನು ನಿಷೇಧಿಸಲಾಗಿದೆ” ಎಂದು ಹೇಳಿವೆ. ಇದನ್ನು ತಿಳಿಯಲು ಈ ಕೆಳಗಿನ ಕೊಂಡಿಯನ್ನು ನೋಡುವುದು. ನಂತರ ತಮ್ಮ ವಾದವನ್ನು ಮುಂದುವರೆಸಿ.
“http://blog.vedasudhe.com/2012/07/you-are-here-home-other-languages.html”
“ಹಿಂದೂಗಳು, ಹಿಂದೆಂದೂ ಹಸುವಿನ ಮಾಂಸ ತಿನ್ನುತ್ತಿರಲಿಲ್ಲವೆ? ಎಂಬ ಪ್ರಶ್ನೆಗೆ ಬ್ರಾಹ್ಮಣನಿರಲಿ, ಬ್ರಾಹ್ಮಣೇತರನಿರಲಿ, ಪ್ರತಿಯೊಬ್ಬ ಸವರ್ಣೀಯ ಹಿಂದುವೂ ’ಇಲ್ಲ, ಎಂದೂ ಇಲ್ಲ’ ಎಂದು ಉತ್ತರಿಸುತ್ತಾನೆ. ಒಂದು ದೃಷ್ಟಿಯಿಂದ ಅವನು ಸರಿ. ಬಹುಕಾಲದಿಂದ ಹಿಂದೂಗಳು ಹಸುವಿನ ಮಾಂಸ ತಿಂದಿಲ್ಲ. ಸವರ್ಣೀಯ ಹಿಂದೂ, ಈ ಅಭಿಪ್ರಾಯ ಹೊಂದಿದ್ದರೆ ಆ ಬಗ್ಗೆ ಜಗಳ ಬೇಕಿಲ್ಲ. ಆದರೆ ಬ್ರಾಹ್ಮಣ ಪಂಡಿತರು, ಹಿಂದೂಗಳು ಎಂದೆಂದೂ ಗೋಮಾಂಸ ಸೇವಿಸಿಲ್ಲವಷ್ಟೇ ಅಲ್ಲ, ಅವರು ಸದಾ ಹಸುವನ್ನು ಪವಿತ್ರವೆಂದು ಭಾವಿಸಿದ್ದರು ಮತ್ತು ಗೋಹತ್ಯೆಯನ್ನು ಸದಾ ವಿರೋಧಿಸಿದ್ದರು ಎಂದಾಗ ಮಾತ್ರ ಅವರ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ.
ಹಿಂದೂಗಳು ಎಂದೆಂದೂ ಗೋಮಾಂಸ ಸೇವಿಸಿಲ್ಲ ಮತ್ತು ಗೋಹತ್ಯೆಗೆ ವಿರೋಧಿಗಳಾಗಿದ್ದರು ಎಂಬುದಕ್ಕೆ ಸಾಂಪ್ರದಾಯಕ ಪಂಡಿತರು ಕೊಡುವ ಆಧಾರ ಗಳೇನು?
ಋಗ್ವೇದದಲ್ಲಿ ಎರಡು ಆಧಾರಗಳಿವೆ; ಒಂದರಲ್ಲಿ ಹಸುವನ್ನು ’ಅಘ್ನ್ಯ’ ಎಂದರೆ ’ಕೊಲೆಗೆ ಅರ್ಹವಲ್ಲದ್ದು’ ಎಂದು ಕರೆಯಲಾಗಿದೆ (1 – 164 27;iv-1,6; v-82;8 vii-69, 71; x-87) ಇನ್ನೊಂದು ಉದಾಹರಣೆಯಲ್ಲಿ ಗೋವನ್ನರುದ್ರಮಾತೆ, ವಸು ಪುತ್ರಿ, ಆದಿತ್ಯರ ಸಹೋದರಿ ಮತ್ತು ಅಮೃತಕೇಂದ್ರ ಎನ್ನಲಾಗಿದೆ. (viii-101,15; viii-101,16)
ಪ್ರಾಣಿವಧೆ ಮತ್ತು ಗೋಮಾಂಸ ಸೇವನೆ ಸಂಬಂಧವಾಗಿ ಶತಪಥ ಬ್ರಾಹ್ಮಣದಲ್ಲಿ ಹೀಗಿದೆ. ( iii-1.2.21)
“ಆತ ಹಸು ಅಥವಾ ಎತ್ತನ್ನು ತಿನ್ನದಿರಲಿ. ಈ ಪೃಥ್ವಿಯ ಎಲ್ಲಕ್ಕೂ ಹಸು ಮತ್ತು ಎತ್ತು ಆಧಾರ… ಆತ ಈ ಕಾರಣದಿಂದ ಹಸು ಮತ್ತು ಎತ್ತಿನ ಮಾಂಸ ತಿನ್ನಲಾಗದು.”
ಆಪಸ್ತಂಭ ಗೃಹ್ಯಸೂತ್ರದಲ್ಲೂ ಇಂತಹ ಕೆಲವು ಶ್ಲೋಕಗಳಿವೆ.
ಹಿಂದೂಗಳು ಗೋಮಾಂಸ ತಿನ್ನುತ್ತಿರಲಿಲ್ಲ ಎಂಬ ಬಗ್ಗೆ ಇವು ಆಧಾರ. ಈ ಆಧಾರಗಳಿಂದ ಯಾವ ತೀರ್ಮಾನಕ್ಕೆ ಬರಬಹುದು?
ಋಗ್ವೇದದ ಆಧಾರದ ವಿಚಾರದಲ್ಲಂತೂ ಅದನ್ನು ತಪ್ಪಾಗಿ ಓದಿ ಅಪಾರ್ಥ ಮಾಡಿಕೊಳ್ಳುವುದರ ಮೂಲಕ ತಪ್ಪು ತೀರ್ಮಾನಕ್ಕೆ ಬರಲಾಗಿದೆ. ಋಗ್ವೇದದದಲ್ಲಿ ಗೋವನ್ನು ’ಅಘ್ನ್ಯ’ ಎಂದು ಕರೆಯಲಾಗಿದೆ. ಈ ಗುಣ ವಾಚಕವು ಹಾಲು ಕೊಡುವ ಹಸುವಿಗೆ ಸಂಬಂಧಿಸಿದೆ. ಅಂಥ ಹಸುವನ್ನು ಕೊಲ್ಲಬಾರದೆಂದಿದೆ. ಋಗ್ವೇದವು ಹಸುವನ್ನು ಗೌರವದಿಂದ ಕಂಡಿದೆ ಎಂಬುದು ನಿಜ. ಕೃಷಿಕರಾದ ’ಇಂಡೋ-ಆರ್‍ಯನ’ರ ಸಮಾಜದಲ್ಲಿ ಹಸುವಿನ ಬಗ್ಗೆ ಇಂಥ ಗೌರವ ಇರಬೇಕಾದುದು ಸಹಜ. ಈ ಪ್ರಯೋಜನ ಹಸುವನ್ನು ಆಹಾರಕ್ಕಾಗಿ ಕೊಲ್ಲಲು ಆರ್‍ಯರಿಗೆ ಅಡ್ಡಿಯಾಗಲಿಲ್ಲ. ವಾಸ್ತವವಾಗಿ ಗೋವು ಪವಿತ್ರವಾದುದರಿಂದಲೇ ಅದನ್ನು ಕೊಲ್ಲಲಾಗುತ್ತಿತ್ತು. ಧರ್ಮ ಶಾಸ್ತ್ರಗಳ ಇತಿಹಾಸಕಾರ ಪಿ.ವಿ. ಕಾಣೆ ಹೇಳುತ್ತಾರೆ:
“ವೇದ ಕಾಲದಲ್ಲಿ ಗೋವು ಪವಿತ್ರವಾಗಿರಲಿಲ್ಲವೆಂದೇನೂ ಅಲ್ಲ. ಬದಲಾಗಿ ಅದು ಪವಿತ್ರವೆನಿಸಿದ್ದರಿಂದಲೇ ಗೋಮಾಂಸ ಸೇವಿಸಬೇಕೆಂದು ವಾಜಸನೇಯಿ ಸಂಹಿತದಲ್ಲಿ ಸಾರಿದೆ.” (ಧರ್ಮ ಶಾಸ್ತ್ರ ವಿಚಾರ (ಮರಾಠಿ) ಪುಟ-೧೮೦)
ಋಗ್ವೇದ ಕಾಲದಲ್ಲಿ ಆರ್‍ಯರು ಆಹಾರಕ್ಕಾಗಿ ಗೋವನ್ನು ಕೊಂದು ಗೋಮಾಂಸವನ್ನು ಭಕ್ಷಿಸುತ್ತಿದ್ದರು ಎಂಬುದು ಸುಸ್ಪಷ್ಟವಾಗಿದೆ. ಋಗ್ವೇದ (x-86.14)ದಲ್ಲಿ ಇಂದ್ರ ಹೇಳುತ್ತಾನೆ: “ಅವರು ಹದಿನೈದು ಮತ್ತು ಇಪ್ಪತ್ತು ಎತ್ತುಗಳನ್ನು ಅಡುಗೆ ಮಾಡುತ್ತಾರೆ.” ಅಗ್ನಿಗೆ ಕುದುರೆಗಳು, ಎತ್ತುಗಳು, ಕೋಣಗಳು, ಗೊಡ್ಡುಹಸುಗಳು ಮತ್ತು ಟಗರುಗಳನ್ನು ಆಹುತಿ ಕೊಡುತ್ತಾರೆ. (x-91.14) ಗೋವುಗಳನ್ನು ಕತ್ತಿ ಅಥವಾ ಕೊಡಲಿಯಿಂದ ಕಡಿಯುತ್ತಾರೆಂದು ತಿಳಿದು ಬರುತ್ತದೆ (x-72.6)
ತೈತ್ತಿರೀಯ ಬ್ರಾಹ್ಮಣದಲ್ಲಿ ಹೇಳಲಾದ ಕಾಮ್ಯೇಷ್ಟಿಗಳಲ್ಲಿ ಹಸು ಮತ್ತು ಎತ್ತುಗಳ ಬಲಿಯನ್ನಷ್ಟೇ ಅಲ್ಲ, ಯಾವ ದೇವತೆಗಳಿಗೆ ಈ ಗೋವು ಮತ್ತು ಎತ್ತುಗಳನ್ನು ಹೇಗೆ ಬಲಿಕೊಡುತ್ತಿದ್ದರು ಎಂಬ ಬಗ್ಗೆಯೂ ವಿವರಿಸಲಾಗಿದೆ. ವಿಷ್ಣುವಿಗೆ ಕುಳ್ಳಎತ್ತನ್ನು ಬಲಿಕೊಡಬೇಕು. ಬಾಗಿದ ಕೋಡುಗಳ ಹಾಗೂ ಹಣೆಯ ಮೇಲೆ ಮಚ್ಚೆ ಇರುವ ಎತ್ತನ್ನು ಇಂದ್ರನಿಗೆ, ಕಪ್ಪು ಹಸುವನ್ನು ಪೂಷಾನನಿಗೆ, ಕಂಪು ಹಸುವನ್ನು ರುದ್ರನಿಗೆ ಬಲಿಕೊಡ ಬೇಕು. ತೈತ್ತಿರೀಯ ಬ್ರಾಹ್ಮಣವು ’ಪಂಚ ಶರದೀಯ ಸೇವಾ’ ಎಂಬ ಇನ್ನೊಂದು ಬಲಿಯ ಬಗ್ಗೆ ತಿಳಿಸಿದೆ. ಅದರಲ್ಲಿ ಮುಖ್ಯ ಅಂಶವೇನೆಂದರೆ; ಐದು ವರ್ಷ ವಯಸ್ಸಿನ ಕುಳ್ಳಗಿರುವ ೧೭ ಹೋರಿಗಳ ಮತ್ತು ಮೂರು ವರ್ಷ ವಯಸ್ಸಿನ ಅನೇಕ ಕುಳ್ಳ ಕರುಗಳ ಬಲಿ.
ಆಪಸ್ತಂಭ ಧರ್ಮಸೂತ್ರದಲ್ಲಿ “ಹಸು ಮತ್ತು ಎತ್ತುಗಳು ಪವಿತ್ರವಾದವು. ಆದುದರಿಂದ ಅವುಗಳನ್ನು ತಿನ್ನಬಹುದು. (೧,೫,೧೪,೨೯) ಎಂದಿದೆ.”
ಗೃಹ್ಯ ಸೂತ್ರಗಳಲ್ಲಿ ಮಧುಪರ್ಕದ ಬಗೆಗೆ ವಿಸ್ತಾರವಾಗಿ ಹೇಳಲಾಗಿದೆ. ಆರ್‍ಯರಲ್ಲಿ ಗಣ್ಯ ಅತಿಥಿಗಳನ್ನು ಸತ್ಕರಿಸುವ ಸಮಾರಂಭ ಒಂದು ಪದ್ಧತಿಯಾಗಿ ಪರಿಣಮಿಸಿತ್ತು. ಈ ಸತ್ಕಾರದಲ್ಲಿ ಅತಿ ಮುಖ್ಯವಾದುದು ಮಧುಪರ್ಕ ಅರ್ಪಣೆ. ವಿವಿಧ ಗೃಹ್ಯಸೂತ್ರಗಳಲ್ಲಿ ಮಧುಪರ್ಕದಲ್ಲಿ ಸೇರಿಸುವ ವಸ್ತುಗಳ ಬಗ್ಗೆ ವಿವರಗಳು ಕಂಡುಬರುತ್ತವೆ. ಹೆಚ್ಚಿನ ಗೃಹ್ಯಸೂತ್ರಗಳ ಪ್ರಕಾರ ಮಧುಪರ್ಕ ಸ್ವೀಕರಿಸಲು ಅರ್ಹರಾದವರು ಆರು ಮಂದಿ: ೧) ಋತ್ವಿಜ ಅಂದರೆ ಯಜ್ಞಕ್ಕಾಗಿ ಆಹ್ವಾನಿತನಾದ ಬ್ರಾಹ್ಮಣ. ೨) ಆಚಾರ್ಯ ಅಂದರೆ ಗುರು; ೩) ವರ, ೪) ರಾಜ, ೫) ಸ್ನಾತಕ ಅಂದರೆ ಆಗತಾನೆ ಗುರುಕುಲದಲ್ಲಿ ವಿದ್ಯಾಭ್ಯಾಸ ಮುಗಿಸಿದವನು ಮತ್ತು ೬) ಅತಿಥೇಯನಿಗೆ ಪ್ರಿಯನಾದವನು. ಋತ್ವಿಜ, ರಾಜ ಮತ್ತು ಆಚಾರ್ಯ ಇವರಿಗೆ, ಆಗಮಿಸಿದಾಗಲೆಲ್ಲಾ ಮಧುಪರ್ಕ ಅರ್ಪಿಸಬೇಕು. ಉಳಿದವರಿಗೆ ವರ್ಷಕ್ಕೊಮ್ಮೆ ಅರ್ಪಿಸಿದರೆ ಸಾಕು!
ಮಧುಪರ್ಕವನ್ನು ಯಾವ ಯಾವ ವಸ್ತುಗಳಿಂದ ತಯಾರಿಸುತ್ತಾರೆ ? ಆ ವಸ್ತುಗಳ ಬಗೆಗೆ ಭಿನ್ನಾಭಿಪ್ರಾಯವಿದೆ. ಅಶ್ವಲಾಯನ ಮತ್ತು ಆಪಸ್ತಂಭ ಗೃಹ್ಯ ಸೂತ್ರಗಳು ಜೇನು, ಮೊಸರು, ಅಥವಾ ತುಪ್ಪ ಮೊಸರು ಮಿಶ್ರಣಗಳನ್ನು ಸೂಚಿಸಿದೆ. ಪರಾಶರ ಗೃಹ್ಯಸೂತ್ರ ಮೊಸರು, ಜೇನು ಮತ್ತು ತುಪ್ಪಗಳನ್ನು ಸೂಚಿಸಿದೆ. ಕೌಶಿಕವು ಒಂಭತ್ತು ಬಗೆಯ ವಸ್ತುಗಳನ್ನು ಸೂಚಿಸಿದೆ.
ಮಧುಪರ್ಕದಲ್ಲಿ ಮಾಂಸವಿಲ್ಲದಿರಬಾರದು ಎಂದು ವೇದವು ಸಾರಿದೆಯಾಗಿ, ಹಸುವನ್ನು ಹಗ್ಗ ಕಳಚಿ ಹಟ್ಟಿಯಿಂದ ಹೊರಗೆ ಬಿಟ್ಟಿದ್ದರೆ ಆಡಿನ ಮಾಂಸ ಅಥವಾ ಪಾಯಸ ಅರ್ಪಿಸಬೇಕೆಂದು ಮಾಧವ ಗೃಹ್ಯ ಸೂತ್ರ (೧,೯,೨.೨) ಹೇಳುತ್ತದೆ. ಹಸುವನ್ನು ಕೈಬಿಟ್ಟಿದ್ದಲ್ಲಿ ಆಡು ಅಥವಾ ಟಗರಿನ ಮಾಂಸವನ್ನಾಗಲಿ, ಜಿಂಕ ಇತ್ಯಾದಿ ಕಾಡು ಪ್ರಾಣಿಗಳ ಮಾಂಸವನ್ನಾಗಲಿ ಅರ್ಪಿಸಬಹುದೆಂದು ಬೋಧಾಯನ ಗೃಹ್ಯಸೂತ್ರ (೧,೨,೫೧-೫೪) ತಿಳಿಸಿ ಮಾಂಸವಿಲ್ಲದೆ ಮಧುಪರ್ಕವೇ ಇಲ್ಲ ಅಥವಾ ಮಾಂಸ ನೀಡಲು ಅಸಾಧ್ಯವಾದರೆ ಬೀಸಿದ ಧಾನ್ಯದ ಅಡುಗೆ ಅರ್ಪಿಸಬಹುದು ಎಂದಿದೆ.
ಮಧುಪರ್ಕದ ಮುಖ್ಯಭಾಗ ಮಾಂಸ, ಅದರಲ್ಲೂ ಗೋಮಾಂಸ ಎಂಬುದು ವಿಶದವಾಯಿತು.
ಅತಿಥಿಗಾಗಿ ಗೋಹತ್ಯೆ ಮಾಡುವ ಪದ್ಧತಿ ಅದೆಷ್ಟು ರೂಢಿಯಲ್ಲಿತ್ತೆಂದರೆ ಅತಿಥಿಯನ್ನು ’ಗೋ-ಘ್ನ’ ಎಂದರೆ ಗೋಹಂತಕ ಎಂದು ಕರೆಯಲಾಗುತ್ತಿತ್ತು. ಗೋಹತ್ಯೆಯನ್ನು ತಡೆಯಲು ಅಶ್ವಲಾಯನ ಗೃಹ್ಯಸೂತ್ರವು ಅತಿಥಿಯು ಮನೆಗೆ ಬಂದಾಗ ಹಸುವನ್ನು ಹಟ್ಟಿಯಿಂದ ಹೊರಗೆ ಅಟ್ಟಬೇಕೆಂದು ಸೂಚಿಸಿದೆ. ಅಂದರೆ ಆಗ ಅತಿಥಿ ಸತ್ಕಾರದ ನಿಯಮದಿಂದ ಹೊರತಾಗಬಹುದು.
ಅಶ್ವಲಾಯನ ಗೃಹ್ಯಸೂತ್ರವು ಹೇಳುವ ಶವಸಂಸ್ಕಾರದ ಪದ್ಧತಿಯನ್ನು ಪರಿಶೀಲಿಸೋಣ.
“ಚಮಚ, ಕತ್ತಿ, ಅರೆಯುವ ಕಲ್ಲು, ಪಾತ್ರೆ, ಉರಿಯುವ ಕೊಳ್ಳಿ ಮತ್ತು ಕುಳಿ ಇರುವ ಸಾಧನಗಳಲ್ಲಿ ಬೆಣ್ಣೆ ಇತ್ಯಾದಿಗಳನ್ನು ಮೃತನ ದೇಹದ ಒಂದೊಂದು ಭಾಗದಲ್ಲಿ ಇಡಬೇಕು.
ಅನಂತರ ಹೆಣ್ಣು ಪ್ರಾಣಿಯ ಜಠರದ ವಪೆಯನ್ನು ತೆಗೆದು ಅದರಿಂದ ಮೃತನ ತಲೆ ಮತ್ತು ಬಾಯಿಗಳನ್ನು ಮುಚ್ಚುತ್ತಾ “ಅಗ್ನಿಯಿಂದ ನಿನ್ನನ್ನು ರಕ್ಷಿಸುವ ಅಸ್ತ್ರವಿದು, ಗೋವಿನಿಂದ ದೊರೆತಿದೆ” ಎಂಬ ಋಗ್ವೇದ (x-16.7)ದ ಮಂತ್ರವನ್ನು ಉಚ್ಚರಿಸಬೇಕು. ಪ್ರಾಣಿಯ ಪಿತ್ತಕೋಶವನ್ನು ತೆಗೆದು ಅದನ್ನು ಮೃತನ ಕೈಗಳ ಮೇಲೆ, ಪ್ರಾಣಿಯ ಹೃದಯವನ್ನು ಮೃತನ ಹೃದಯದ ಮೇಲೆ ಇಡಬೇಕು. ಇಡೀ ಪ್ರಾಣಿಯ ಪ್ರತಿಯೊಂದು ಅಂಗವನ್ನು ಮೃತನ ಭಿನ್ನ ಅಂಗಗಳ ಮೇಲೆ ಇರಿಸಿ, ಚರ್ಮದಿಂದ ಅದನ್ನು ಮುಚ್ಚಿ ’ಅಗ್ನಿ ಈ ಪಾತ್ರೆಯನ್ನು ಉರುಳಿಸಬೇಡ’ ಎಂಬ ಋಗ್ವೇದ (x-16.8) ಮಂತ್ರವನ್ನು ಹೇಳಬೇಕು. ದಕ್ಷಿಣ ಭಾಗದ ಅಗ್ನಿಗೆ ’ಓಂ ಅಗ್ನೇ ಸ್ವಾಹಾ’ ಎಂಬ ಮಂತ್ರ ಹೇಳುತ್ತಾ ಮೃತನ ಎದೆಯನ್ನು ಮುಟ್ಟಿ “ಇದರಿಂದ ನೀನು ಜನಿಸಿದ್ದೀಯ ನಿನ್ನಿಂದ ಈತ ಜನಿಸುವಂತಾಗಲಿ ಸ್ವರ್ಗದ ಕಡೆಗೆ ನಡೆಯಲಿ” ಎನ್ನುತ್ತಾನೆ.
ಮೇಲೆ ಉದ್ಧರಿಸಲಾದ ಮಂತ್ರಗಳಿಂದ ಪ್ರಾಚೀನ ಇಂಡೋ ಆರ್ಯನರಲ್ಲಿ ಯಾವೊಬ್ಬನು ಮೃತನಾದಾಗ ಒಂದು ಪ್ರಾಣಿಯನ್ನು ಕೊಂದು ಅದರ ದೇಹದ ವಿವಿಧ ಭಾಗಗಳನ್ನು ಮೃತನ ದೇಹದ ವಿವಿಧ ಭಾಗಗಳ ಮೇಲಿರಿಸಿ ಅನಂತರ ಶವ ದಹನ ನಡೆಸುತ್ತಿದ್ದರೆಂಬುದು ವೇದ್ಯ ವಾಗುತ್ತದೆ.
ಗೋಮಾಂಸ ಭಕ್ಷಣೆ ಮತ್ತು ಗೋಹತ್ಯೆಗಳಿಗೆ ಇವು ಆಧಾರಗಳಾಗಿವೆ. ಪ್ರಾರಂಭದಲ್ಲ ಹೇಳಿದ ಕೆಲವು ಆಧಾರಗಳು, ಗೋವು ಕೊಲ್ಲಲು ಅರ್ಹವಾದುದಲ್ಲ ಎಂದು ಹೇಳಿದರೆ ಅನಂತರದ ಅನೇಕ ಆಧಾರಗಳು ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಗೆ ಆಧಾರಗಳಾಗಿವೆ. ಹಾಗಿದ್ದರೆ ಇವುಗಳಲ್ಲಿ ಯಾವುದು ನಿಜ? ಹಿಂದೂಗಳು ಗೋಹತ್ಯೆ ಮತ್ತು ಗೋಮಾಂಸ ಸೇವನೆಗೆ ವಿರೋಧಿಗಳಾಗಿದ್ದರು ಎಂಬ ಬಗೆಗೆ ಶತಪಥ ಬ್ರಾಹ್ಮಣ ಮತ್ತು ಆಪಸ್ತಂಬ ಗೃಹ್ಯಸೂತ್ರಗಳನ್ನು ಉದಾಹರಿಸುತ್ತಾರೆ.
ಆದರೆ ಅಲ್ಲಿ ಮಿತಿ ಇಲ್ಲದ ಗೋಹತ್ಯೆ ಕೂಡದೆಂಬ ಬಗೆಗೆ ಮಾತ್ರ ಸೂಚನೆ ಇರುವಂತಿದೆ. ಅಷ್ಟೇ ಅಲ್ಲ, ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯು ಸಾಮಾನ್ಯ ನೀತಿಯಾಗಿತ್ತೆಂದು ಮೇಲಿನ ಗ್ರಂಥಗಳಿಂದ ತಿಳಿದುಬರುತ್ತದೆ. ಮಿತಿ ಇಲ್ಲದ ಗೋಹತ್ಯೆಯ ವಿರುದ್ಧ ಮಾಡಿದ ಉಪದೇಶಗಳು ಹೆಚ್ಚು ಸಂದರ್ಭದಲ್ಲಿ ಯಾರ ಕಿವಿಗೂ ಬೀಳಲಿಲ್ಲ ಎಂಬುದು ಮಹಾಋಷಿ ಯಾಜ್ಞವಲ್ಕ್ಯನ ನಡತೆಯಿಂದ ತಿಳಿದು ಬರುತ್ತದೆ. ಮೇಲೆ ಉದಾಹರಿಸಲಾದ ಶತಪಥ ಬ್ರಾಹ್ಮಣದ ಮೊದಲ ಮಂತ್ರ ವಾಸ್ತವವಾಗಿ ಯಾಜ್ಞವಲ್ಕ್ಯನನ್ನು ಸಂಬೋಧಿಸಿ ಹೇಳಿದ್ದಾಗಿದೆ. ಈ ಉಪದೇಶಕ್ಕೆ ಯಾಜ್ಞವಲ್ಕ್ಯನ ಪ್ರತಿಕ್ರಿಯೆ ಏನು? ಉಪದೇಶ ಕೇಳಿದ ಬಳಿಕ ಆತ ಹೇಳಿದ; “ನಾನಂತೂ ಎಳೆಯ ದಾಗಿದ್ದರೆ ತಿನ್ನುವವನೇ”.
ಒಂದು ಕಾಲದಲ್ಲಿ ಹಿಂದೂಗಳು ಅಪಾರವಾಗಿ ಗೋವುಗಳನ್ನು ಕೊಂದು ಗೋಮಾಂಸ ಭಕ್ಷಿಸುತ್ತಿದ್ದರು ಎಂಬುದಕ್ಕೆ ವೇದಗಳು ಮತ್ತು ಬ್ರಾಹ್ಮಣಗಳ ನಂತರ ಬೌದ್ಧ ಸೂತ್ರಗಳಲ್ಲಿ ಬರುವ ಯಜ್ಞದ ವರ್ಣನೆಗಳು ವಿವರವಾದ ಆಧಾರಗಳನ್ನು ಒದಗಿಸುತ್ತದೆ. ಧರ್ಮದ ಹೆಸರಿನಲ್ಲಿ ಬ್ರಾಹ್ಮಣರು ಕೊಲೆ ಮಾಡುತ್ತಿದ್ದ ಪ್ರಾಣಿಗಳ ಸಂಖ್ಯೆ ಅಪಾರವಾಗಿತ್ತು. ಉದಾಹರಣೆಗೆ ’ಕುಟದಂತ ಸುತ್ತ’ ನೋಡಬಹುದು. ಕುಟದಂತನೆಂಬ ಬ್ರಾಹ್ಮಣನು ತನ್ನನ್ನು ಪರಿವರ್ತಿಸಿದ ಬುದ್ಧನನ್ನು ವಂದಿಸುತ್ತಾ ಅಂಥ ಯಜ್ಞಗಳಲ್ಲಿ ಆಗುತ್ತಿದ್ದ ಅಪಾರ ಪ್ರಾಣಿಹತ್ಯೆಗಳ ಬಗೆಗೆ ಸೂಚ್ಯವಾಗಿ ಹೇಳುತ್ತಾನೆ.
ನಾನು, ನಾನು ಸಹ, ಪೂಜ್ಯನಾದ ಗೌತಮನನ್ನು ನನ್ನ ಮಾರ್ಗ ದರ್ಶಕ ನನ್ನಾಗಿ ಸ್ವೀಕರಿಸಿ ಅವನ ತತ್ತ್ವ ಮತ್ತು ಧರ್ಮಗಳನ್ನು ಅನುಸರಿ ಸುತ್ತೇನೆ. ಪೂಜ್ಯನು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲಿ, ಇಂದಿನಿಂದ ನನ್ನ ಜೀವನಪರ್‍ಯಂತ ಆತನನ್ನು ನನ್ನ ಮಾರ್ಗದರ್ಶಕನನ್ನಾಗಿ ಸ್ವೀಕರಿಸುವೆ. ನಾನು ಸಹ, ಪೂಜ್ಯ ಗೌತಮ, ನನ್ನಲ್ಲಿನ ೭೦೦ ಹೋರಿಗಳು, ೭೦೦ ಎತ್ತುಗಳು, ೭೦೦ ಎಳೆಯ ಹಸುಗಳು, ೭೦೦ ಮೇಕೆಗಳು ಮತ್ತು ೭೦೦ ಟಗರುಗಳನ್ನು ಬಿಡುಗಡೆ ಮಾಡಿದ್ದೇನೆ. ಅವುಗಳಿಗೆ ನಾನು ಜೀವದಾನ ಮಾಡಿದ್ದೇನೆ. ಅವು ಹುಲ್ಲುತಿಂದು ತಿಳಿಯಾದ ನೀರು ಕುಡಿದು ಪ್ರಶಾಂತ ವಾತಾವರಣದಲ್ಲಿ ಸ್ವೇಚ್ಛೆಯಿಂದ ತಿರುಗಾಡಲಿ.”
ಕೋಸಲದ ಅರಸನಾದ ’ಪ್ರಸೇನಜಿತ್’ ಎಂಬುವನು ನಡೆಸಿದ ಯಜ್ಞದ ವಿಸ್ತಾರ ವರ್ಣನೆಯನ್ನು ನಾವು ’ಸಂಯುಕ್ತ ನಿಕಾಲಯದಲ್ಲಿ’ ಕಾಣ ಬಹುದು. ೫೦೦ ಹೋರಿಗಳು, ೫೦೦ ಕರುಗಳು ಅನೇಕ ಎತ್ತುಗಳು ಮತ್ತು ಟಗರುಗಳನ್ನು ವಧಾಸ್ತಂಭದಲ್ಲಿ ಕೊಲೆಮಾಡಲಾಯಿತೆಂದು ಹೇಳಲಾಗಿದೆ.
ಈ ಆಧಾರಗಳಿಂದ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು ಒಂದು ಕಾಲದಲ್ಲಿ ಮಾಂಸವನ್ನಷ್ಟೇ ಅಲ್ಲ, ಗೋಮಾಂಸ ಭಕ್ಷಿಸುತ್ತಿದ್ದರೆಂದು ನಾವು ತಿಳಿಯಬಹುದು.”
http://www.vicharamantapa.net/content/node/60 ನೋಡಿ.