ಏಕ್ ಥಾ ಟೈಗರ್!
– ರೋಹಿತ್ ಚಕ್ರತೀರ್ಥ
“ಹ್ಞೂ ಅಂತಿಯೋ ಊಹ್ಞೂ ಅಂತಿಯೋ?”
“ಏನೇ ಹೇಳುವ ಮೊದಲು ನನಗೆ ಸ್ವಲ್ಪ ಮಾಹಿತಿಯಾದರೂ ಇರಬೇಕು ತಾನೆ? ನನ್ನ ಕೆಲಸ ಏನು ಅಂತಾದ್ರೂ ಹೇಳಿ!”
“ನೀನು ಮೊನ್ನೆ ಕಾಲೇಜಲ್ಲಿ ಸ್ಟೇಜ್ ಮೇಲೆ ಏನು ಮಾಡಿದಿಯೋ ಅದೇ.”
“ಅಂದ್ರೆ??”
“ನಾಟಕ ಆಡೋದು”
“ನೀವೇನು ನಾಟಕ ಕಂಪೆನಿಯವರಾ? ನಾನಿಲ್ಲಿ ಬಿಕಾಂ ಮಾಡ್ತಿದೇನೆ. ಡಿಗ್ರಿ ಮುಗಿಸಿ ನಾಟಕ ಮಂಡಳಿ ಸೇರಿದೆ ಅಂತ ಹೇಳಿದರೆ ನನ್ನಪ್ಪ ಸಿಗಿದು ತೋರಣ ಕಟ್ತಾರೆ ಅಷ್ಟೆ.ಅಲ್ಲದೆ, ನಟನಾಗಿ ಹೆಸರು ಮಾಡೋ ಆಸೆ ಅಷ್ಟೇನೂ ಇಲ್ಲ ನನಗೆ”
“ನಮ್ಮಲ್ಲಿ ನಾಟಕಕ್ಕೆ ಸೇರಿದರೆ ನಿನ್ನ ಕಟೌಟನ್ನು ಎಲ್ಲೂ ನಿಲ್ಲಿಸೋಲ್ಲ. ಇನ್ನು ನಿನ್ನ ಕೆಲಸದ ಬಗ್ಗೆ ಹೊರಗೆಲ್ಲೂ ಹೇಳುವ ಹಾಗೂ ಇಲ್ಲ. ನಿನ್ನ ಜೀವನಪೂರ್ತಿ ಅದೊಂದು ರಹಸ್ಯವಾಗಿರುತ್ತೆ. ಆದರೆ ನೀನು ಆ ಉದ್ಯೋಗ ಮಾಡೋದು ನಿನಗಾಗಿ ಅಥವಾ ಕುಟುಂಬಕ್ಕಾಗಿ ಅಲ್ಲ; ಬದಲು ದೇಶಕ್ಕಾಗಿ. ಅದೊಂದು ಮಹೋನ್ನತ ಉದ್ಯೋಗ.”
“ಯಾ..ಯಾರು ನೀವು?”
“ರಾ ಅಧಿಕಾರಿಗಳು. ದೇಶದ ಹಿತ ಕಾಯುವ ಬೇಹುಗಾರರು.”
ರವೀಂದ್ರ ಕೌಶಿಕ್ ಬೆಚ್ಚಿಬಿದ್ದ. ಹಣೆಯ ನೆರಿಗೆಯ ಮೇಲೆ ಬೆವರಿನ ತೋರಣ ಕಟ್ಟಿತು. ಇವರು ನನ್ನನ್ನು ಯಾಕೆ ಟಾರ್ಗೆಟ್ ಮಾಡಿದ್ದಾರೆ? ಎರಡು-ಮೂರು ಸಾವಿರ ವಿದ್ಯಾರ್ಥಿಗಳಿರುವ ಕಾಲೇಜಿನ ಕ್ಯಾಂಪಸ್ಸಿನಲ್ಲಿ ನಾನೊಬ್ಬ ಗುಂಪಿನಲ್ಲಿ ಗೋವಿಂದನಾಗಿರುವ ಸಾಮಾನ್ಯ ಯುವಕ. ಕಾಮರ್ಸ್ ಪದವಿ ಮಾಡುತ್ತಿದ್ದೇನೆ. ಆಗೀಗ ಕಾಲೇಜಿನ ಟ್ಯಾಲೆಂಟ್ ಶೋಗಳಲ್ಲಿ ಸಣ್ಣಪುಟ್ಟ ಪ್ರಹಸನ ಮಾಡಿದ್ದುಂಟು. ಮೂರುದಿನದ ಹಿಂದೆ ಒಂದು ಕಾರ್ಯಕ್ರಮದಲ್ಲಿ, ಚೀನಾದ ಸೈನಿಕರಿಗೆ ಸಿಕ್ಕಿಯೂ ರಹಸ್ಯಗಳನ್ನು ಬಿಟ್ಟುಕೊಡದ ಭಾರತೀಯ ಸೈನಿಕನ ಪಾತ್ರ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ್ದೆ. ಅಷ್ಟೆ! ಅಷ್ಟು ಮಾಡಿದ್ದು ಬಿಟ್ಟರೆ ನನಗೆ ಈ ಸೇನೆ, ರಕ್ಷಣೆ, ಬೇಹುಗಾರಿಕೆ ಇವೆಲ್ಲ ಏನೇನೂ ಗೊತ್ತಿಲ್ಲ. ನನ್ನಲ್ಲಿ ಯಾವ ಮಹಾಗುಣ ನೋಡಿ ಈ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ? RK ಚಿಂತೆಗೆ ಬಿದ್ದ.
ಈ ಮಾತುಕತೆಗಳು ನಡೆದು ಆರು ತಿಂಗಳಾಗುವ ಹೊತ್ತಿಗೆ ಅದೇ ಹುಡುಗ ದೆಹಲಿಯಲ್ಲಿದ್ದ. ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್ ಎಂಬ, ದೇಶದ ಮಹೋನ್ನತ ಬೇಹುಸಂಸ್ಥೆಯ ತರಬೇತಿಯಲ್ಲಿ ರವೀಂದ್ರ ಕೌಶಿಕ್ ಪಾಲ್ಗೊಂಡಿದ್ದ. ಅವನನ್ನು ಒಲಿಸಿಕೊಳ್ಳುವುದರಲ್ಲಿ ರಾ ಅಧಿಕಾರಿಗಳು ಯಶಸ್ವಿಯಾಗಿದ್ದರು. ಕಾಲೇಜಿನ ಕಾರ್ಯಕ್ರಮದಲ್ಲಿ ಅವನು ತೋರಿಸಿದ ಪ್ರತಿಭಾಪ್ರದರ್ಶನಕ್ಕೆ ಪ್ರೇಕ್ಷಕರ ನಡುವೆ ಕೂತಿದ್ದ ಒಬ್ಬ ಅಧಿಕಾರಿ ಫಿದಾ ಆಗಿದ್ದರು. ಈ ಹುಡುಗನಿಗೆ ನಟನೆ ಗೊತ್ತು, ದೇಶಭಕ್ತಿಯೂ ಧಾರಾಳವಾಗಿ ಇರುವ ಹಾಗಿದೆ, ಸ್ವಲ್ಪ ಸುಧಾರಣೆ ತಂದರೆ ನಮ್ಮ ಸಂಸ್ಥೆಗೊಂದು ಅಮೂಲ್ಯ ರತ್ನ ಸೇರಿದಂತಾಗುತ್ತದೆ ಎಂದು ಅಂದೇ ಅದೇ ಕ್ಷಣದಲ್ಲಿ ಅವರು ನಿರ್ಧರಿಸಿಯಾಗಿತ್ತು. ಅದಾಗಿ ಮೂರುದಿನಗಳಲ್ಲಿ ರವೀಂದ್ರನನ್ನು ರಾ ಅಧಿಕಾರಿಗಳು ಗುಟ್ಟಾಗಿ ಸಂಪರ್ಕಿಸಿದ್ದರು. ತಮ್ಮ ಭೇಟಿಯನ್ನು ಎಲ್ಲೂ ಚರ್ಚಿಸಬಾರದು ಎಂಬ ಪೀಠಿಕೆ ಇಟ್ಟುಕೊಂಡೇ ಮಾತು ಶುರುಮಾಡಿದ ಅವರು ಅವನ ಮನಸ್ಸಿನಲ್ಲಿ ಬೇಹುಗಾರಿಕೆಯ ಕೆಲಸದ ಬಗ್ಗೆ ಅಸ್ಪಷ್ಟವಾದ ಒಂದು ಮೊಟ್ಟೆ ಇಟ್ಟು ಹೋಗಿದ್ದರು. ರವೀಂದ್ರ ಹಗಲಿರುಳು ಯೋಚಿಸಿದ. ದೇಶಸೇವೆಯೇನೋ ಸರಿ. ಆದರೆ ನನ್ನ ಉದ್ಯೋಗದ ಬಗ್ಗೆ ಜೀವಮಾನದಲ್ಲೇ ಯಾವತ್ತೂ ಹೇಳಿಕೊಳ್ಳುವ ಹಾಗಿಲ್ಲವಲ್ಲ. ಸುಳ್ಳು ಹೇಳುತ್ತ ಜೀವನ ಸಾಗಿಸಬೇಕು. ಸುಳ್ಳುಗಳ ಮಂಟಪದಲ್ಲೇ ಮದುವೆಯಾಗಬೇಕು. ಗೆಳೆಯರು, ಸಂಬಂಧಿಕರು, ಮನೆಯವರು, ಹೆಂಡತಿಮಕ್ಕಳು – ಎಲ್ಲರಿಗೂ ಪರಕೀಯನಾಗಿ ಅಜ್ಞಾತನಾಗಿ ಬದುಕು ಸಾಗಿಸಬೇಕು. ಸಾಧ್ಯವೇ? ಎಲ್ಲರೊಂದಿಗೆ ಬೆರೆತರೂ ಪರಕೀಯನಾಗುವ ಈ ಬಾಳು ಬೇಕೆ? ಸೈನಿಕ ಹೋರಾಡಿದರೆ ಇಡೀ ದೇಶವೇ ಅವನ ಗುಣಗಾನ ಮಾಡುತ್ತದೆ. ಸರಕಾರ ಪರಮವೀರ ಚಕ್ರ ಕೊಡುತ್ತದೆ. ಆದರೆ, ಬೇಹುಗಾರನಿಗೆ ಅಂತಹ ಸೌಲಭ್ಯ ಇಲ್ಲ. ಪ್ರಶಸ್ತಿ-ಸನ್ಮಾನಗಳ ಕತೆ ಹಾಗಿರಲಿ, ಸಾಯುವವರೆಗೂ ಅವನು ನಿಜಕ್ಕೂ ಏನಾಗಿದ್ದ ಎನ್ನುವುದು ಹೊರಜಗತ್ತಿಗೆ ತಿಳಿಯುವುದಿಲ್ಲ! ಇದೆಲ್ಲ ಬೇಕಾ? ಇನ್ನಾರು ತಿಂಗಳಲ್ಲಿ ಪರೀಕ್ಷೆಗಳು ಮುಗಿದು ಪದವಿಪತ್ರ ಕೈಯಲ್ಲಿರುತ್ತದೆ. ಎಲ್ಲಾದರೂ ಸರಿಯಾದ ನೌಕರಿ ಹುಡುಕಿಕೊಂಡರೆ ಲೈಫ್ ಸೆಟಲ್ಡ್! ಆಮೇಲೆ ಒಂದೈದು ವರ್ಷದಲ್ಲಿ ಪತ್ನಿಸುತಾಲಯಗಳ ಗೂಡು ಕಟ್ಟಿಕೊಂಡು ಬೆಚ್ಚಗಿದ್ದುಬಿಡಬಹುದು. ಏನು ಮಾಡಲಿ? ಸಲಹೆ ಕೊಡಿ ಅಂತ ಮೇಷ್ಟ್ರ ಬಳಿ ಚರ್ಚಿಸುವಂತಿಲ್ಲ, ಹಿರಿಯರನ್ನು ಕೇಳುವಂತಿಲ್ಲ! ಮಿದುಳಿನಲ್ಲಿ ಮೋಡ ಕೆನೆಗಟ್ಟಿತ್ತು. ತುಟಿಗಳಿಗೆ ಮೇಘಮಲ್ಹಾರ ಮರೆತುಹೋಗಿತ್ತು.
ಕೆಲವು ದಿನಗಳ ಬಳಿಕ ರಾ ಅಧಿಕಾರಿಗಳು ಮತ್ತೆ ಸಂಪರ್ಕಿಸಿದರು. ರವೀಂದ್ರನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇಹುಗಾರಿಕೆಯ ನಿಗೂಢಲೋಕದ ಪರಿಚಯ ಮಾಡಿಕೊಟ್ಟರು. ಆ ಕೆಲಸಕ್ಕೆ ಎಷ್ಟು ಚಾಣಾಕ್ಷತೆ ಬೇಕಾಗುತ್ತದೆಂಬ ವಿವರಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. “ಯೂ ಕ್ಯಾನ್ ಡೂ ಇಟ್” ಎಂದು ಹುರಿದುಂಬಿಸಿದರು. “ಯೂ ಮಸ್ಟ್ ಡೂ ಇಟ್” ಎಂದು ಬೆನ್ನುತಟ್ಟಿದರು. ರವೀಂದ್ರ ಕೊನೆಗೂ ತಾನು ಈ ಕೆಲಸಕ್ಕೆ ಸೇರುವುದೆಂದು ನಿರ್ಧರಿಸಿಬಿಟ್ಟ. ತಕ್ಕ ಹುಡುಗಿ ಸಿಕ್ಕರೆ ಮದುವೆ ಮಾಡಿಬಿಡಬೇಕು ಎಂದು ಗಡಿಬಿಡಿಯಲ್ಲಿ ಓಡಾಡುವ ಅಪ್ಪಯ್ಯನೆದುರು ಮಗ ಬಂದು ತಾನು ಸನ್ಯಾಸಿಯಾಗುತ್ತೇನೆ ಎಂದರೆ ಎಂತಹ ಬಿರುಗಾಳಿ ಏಳುತ್ತದೋ ಅಂಥದೇ ಸುನಾಮಿಯೊಂದು ರವೀಂದ್ರನ ಮನೆಯಲ್ಲೂ ಎದ್ದಿತು. ಹೆತ್ತವರನ್ನು ಒಪ್ಪಿಸುವಷ್ಟರಲ್ಲಿ ಅವನಿಗೆ ಸಾಕುಸಾಕಾಯಿತು. ಸಹಜವೇ ತಾನೆ?
***
RKಗೆ ಎರಡುವರ್ಷ ದೆಹಲಿಯಲ್ಲಿ ಕಠಿಣ ತರಬೇತಿ. ಕಾಲೇಜು ಗೆಳೆಯರಿಗೆ ಇಷ್ಟು ದಿನ ತಮ್ಮ ಜೊತೆ ಓಡಾಡಿಕೊಂಡಿದ್ದ ಈ ಹುಡುಗ ಎಲ್ಲಿ ಹೋದ ಎನ್ನುವುದೇ ತಿಳಿಯಲಿಲ್ಲ.ಮನೆಗೆ ಹೋಗಿ ವಿಚಾರಿಸಿದವರಿಗೆ ಅದೇನೋ ಸುಳ್ಳು ಹೇಳಿ ಸಾಗಹಾಕಿದ್ದಾಯಿತು. ಅತ್ತ, ಹಗಲುರಾತ್ರಿ ಅವನ ತರಬೇತಿ ಜಾರಿಯಲ್ಲಿತ್ತು. ಪ್ರಾಥಮಿಕ ಪಾಠಗಳು ಆದ ಮೇಲೆ ಒಂದು ದಿನ ಉನ್ನತಾಧಿಕಾರಿಯೊಬ್ಬರು ಬಂದು, “ತರಬೇತಿ ಮುಗಿದ ಮೇಲೆ ನೀನು ಹೋಗಬೇಕಾಗಿರುವುದು ಪಾಕಿಸ್ತಾನಕ್ಕೆ! ಮುಂದಿನ ಕನಿಷ್ಠ ಮೂವತ್ತು ವರ್ಷಗಳನ್ನು ಅಲ್ಲಿ ಕಳೆಯಲು ತಯಾರಾಗಿಬೇಕು” ಎಂದುಬಿಟ್ಟರು! ರಾಜಸ್ತಾನದ ಗಡಿಭಾಗವಾದ ಗಂಗಾನಗರದಿಂದ ಬಂದಿದ್ದ ರವೀಂದ್ರನಿಗೆ ಆ ಕಡೆಯ ಉರ್ದು ಭಾಷೆ ಅಲ್ಪಸ್ವಲ್ಪ ಬರುತ್ತಿತ್ತು ಅಷ್ಟೆ.ಈಗ ಅದನ್ನು ಮಾತೃಭಾಷೆಯಷ್ಟು ಸಹಜವಾಗಿ ಮಾತಾಡಲು ಬೇಕಾದ ಟ್ರೇನಿಂಗ್ ಶುರುವಾಯಿತು. ನಮಸ್ತೆ ಅನ್ನುತ್ತಿದ್ದವನು ಅಸ್ಸಲಾಮಲೈಕುಂ ಅನ್ನಬೇಕಾಯಿತು. ಮುಸ್ಲಿಮರಂತೆ ಅವನಿಗೆ ಮುಂಜಿ ಮಾಡಿಸಲಾಯಿತು. ಪಾಕಿಸ್ತಾನದ ಮೂಲೆಮೂಲೆಗಳ ಭೌಗೋಳಿಕ ವಿವರಣೆ ಕೊಡಲಾಯಿತು. ಇಸ್ಲಾಂ ಪಾಠವೂ ನಡೆಯಿತು. ಒಟ್ಟಲ್ಲಿ ಅವನ ಮೈಯ ಕಣಕಣಕ್ಕೂ ಹೊಸ ಐಡೆಂಟಿಟಿ ಬರಬೇಕು. ಕನಸಲ್ಲಿ ಎಬ್ಬಿಸಿ ಕೇಳಿಸಿದರೂ ಅವನು ಅಪ್ಪಿತಪ್ಪಿಯೂ ತನ್ನ ಹಳೆಪ್ರವರ ಹೇಳುವ ಹಾಗಿರಬಾರದು. ಮರಳಲ್ಲಿ ತಲೆಮಟ್ಟ ಮುಳುಗಿಸಿದರೂ, ಕುದುರೆಯಿಂದ ಎಳಸಿದರೂ, ಕಲ್ಲುಕಟ್ಟಿ ನೀರಿಗೆ ಚೆಲ್ಲಿದರೂ ಅವನು ತನ್ನ ನಿಜಕತೆ ಹೇಳಬಾರದು. ಹೇಳಿದರೂ ಅದನ್ನು ನಂಬುವಂಥ ಸಾಕ್ಷಿಗಳು ಸಿಗಬಾರದು!
1975ರಲ್ಲಿ ಈ ಇಪ್ಪತ್ತೆರಡರ ಹುಡುಗ ಗಡಿ ನುಸುಳಿಕೊಂಡು ಪಾಕಿಸ್ತಾನ ಸೇರಿದ. ಅಂತೂ ಮೊದಲ ಪರೀಕ್ಷೆಯಲ್ಲಿ ತೇರ್ಗಡೆಯಾದ!
“ಏನು ಹೆಸರು?”, ಕೇಳಿದರು ಸಂದರ್ಶಕರು.
“ನಬಿ ಅಹ್ಮದ್ ಶಕೀರ್” ಎಂದ ಅವನು.
ಅವರು ಅವನ ಶಾಲೆ ಸರ್ಟಿಫಿಕೇಟುಗಳನ್ನು ಮೇಲಿಂದ ಮೇಲೆ ನೋಡಿದರು. ಅಷ್ಟರಲ್ಲಿ ಹುಡುಗ ತನ್ನ ಕಥೆ ಹೇಳಿಕೊಂಡ. “ಚಿಕ್ಕವನಿರುವಾಗಲೇ ಅಪ್ಪ ತೀರಿಕೊಂಡ. ಆಮೇಲೆ ಓದಿಸಿದವಳು ಅಮ್ಮ. ಕೂಲಿನಾಲಿ ಮಾಡಿ ತುತ್ತು ಉಣಿಸಿದಳು. ಎರಡು ವರ್ಷದ ಹಿಂದೆ ಅವಳೂ ತೀರಿಕೊಂಡಳು. ಹೇಗೋ ಕಷ್ಟಪಟ್ಟು ಶಾಲೆ ಮುಗಿಸಿದ್ದೇನೆ. ಎಲ್‍ಎಲ್‍ಬಿ ಮಾಡುವ ಆಸೆ ಇದೆ. ಒಂದಷ್ಟು ದುಡ್ಡೂ ಹೊಂದಿಸಿದ್ದೇನೆ. ಸೀಟಿಲ್ಲ ಎನ್ನಬೇಡಿ ಸಾರ್. ದೇಶಸೇವೆ ಮಾಡಬೇಕು ಅಂತ ಆಸೆ ಇಟ್ಕೊಂಡಿದೇನೆ ಸಾರ್” ಎಂದ ನಬಿ. ಇಂತಹ ಗೋಳಿನ ಕತೆಗಳನ್ನು ಹಲವಾರು ಸಲ ಕೇಳಿದ್ದ ಸಂದರ್ಶಕ ಮತ್ತೇನೂ ವಿಚಾರಿಸುವ ಗೋಜಿಗೆ ಹೋಗದೆ “ಅಡ್ಮಿಟೆಡ್” ಎಂದು ಬರೆದುಬಿಟ್ಟರು. ಹುಡುಗ ಕಾನೂನು ಕಲಿಯಲು ಕಾಲೇಜು ಸೇರಿದ! ಅಲ್ಲಿ ಮೂರುವರ್ಷಗಳಲ್ಲಿ ಚೆನ್ನಾಗಿ ಓದಿದ. ಗೆಳೆಯರನ್ನು ಸಂಪಾದಿಸಿಕೊಂಡ. ಕರಾಚಿ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದ ಮೇಲೆ ಪಾಕಿಸ್ತಾನದ ಸೇನೆಗೆ ಸೇರಿದ. ಪ್ರಚಂಡ ದೇಶಭಕ್ತನಾಗಿದ್ದ ನಬಿಯ ಮೇಲೆ ಮೇಲಧಿಕಾರಿಗಳ ಕೃಪಾದೃಷ್ಟಿ ಬಿತ್ತು. ಸೇನೆಯಲ್ಲಿ ಅಧಿಕಾರಿಯಾಗಿ ಭಡ್ತಿ ಸಿಕ್ಕಿತು. ಸಹೋದ್ಯೋಗಿಗಳಿಗೆ ನಭಿ ಅಚ್ಚುಮೆಚ್ಚಿನವನಾದ. ಈ ಪ್ರೀತಿ-ವಿಶ್ವಾಸ-ನಂಬಿಕೆ ಮೇಜರ್ ಹುದ್ದೆಯವರೆಗೆ ಅವನನ್ನು ಎಳೆದುಕೊಂಡುಹೋಯಿತು. ಉನ್ನತಾಧಿಕಾರಿಗಳ ರಹಸ್ಯಸಭೆಗಳಿಗೆ ಮೇಜರ್ ನಬಿ ಸಾರ್‍ಗೆ ಎಂಟ್ರಿ ಸಿಕ್ಕಿತು.
ಅಷ್ಟರಲ್ಲಿ ನಬಿ, ಅಮಾನತ್ ಎಂಬ ಪಾಕಿಸ್ತಾನದ ಹೆಣ್ಣೊಬ್ಬಳನ್ನು ಮದುವೆಯೂ ಆದ. “ನೀನೇ ನನ್ನ ಆಸ್ತಿ ಕಣೆ. ದಿಕ್ಕಿಲ್ಲದ ನನಗೆ ಇನ್ನಾರು ದಿಕ್ಕು?” ಎಂದು ಫಿಲ್ಮಿ ಡೈಲಾಗ್ ಹೊಡೆದು ಅವಳಿಗೆ ಬೊಗಸೆಗಟ್ಟಲೆ ಪ್ರೀತಿ ಸುರಿದ. ಯಾವುದಕ್ಕೂ ಕೊರತೆ ಇಲ್ಲದಂತೆ ಅವಳನ್ನು ನೋಡಿಕೊಂಡ. ಎರಡುವರ್ಷಗಳು ಕಳೆವಷ್ಟರಲ್ಲಿ ಮಗಳೊಬ್ಬಳಿಗೆ ತಂದೆಯಾದ. ಪುಟ್ಟಮಗುವನ್ನು ಎದೆ ಮೇಲೆ ಮಲಗಿಸಿಕೊಂಡು ನಿದ್ದೆಹೋದ ದಿನ ಕನಸಿನಲ್ಲಿ ರವೀಂದ್ರನ ತಾಯಿ ಬರುವುದಿತ್ತು. ಏನ್ ಮಗೂ ಚೆನ್ನಾಗಿದೀಯ ಎಂದು ತಲೆಯ ಮೇಲೆ ಬೆರಳಾಡಿಸಿ ಕುಶಲ ಕೇಳುವುದಿತ್ತು. ನಮ್ಮನ್ನೆಲ್ಲ ಮರೆತೇಬಿಟ್ಯೇನೋ? ಎಂದು ಮರುಗುವ ಅಪ್ಪನ ಎರಡುಹನಿ ಕಣ್ಣೀರು ಎದೆಮೇಲೆ ಬಿದ್ದಂತಾಗಿ ಥಟ್ಟನೆ ಎಚ್ಚರಾಗುವುದಿತ್ತು. ಕಳೆದ ವಾರ ನನ್ನ ಮದುವೆ ಆಯ್ತು ಅಣ್ಣಾ, ನೀನು ಮಾತ್ರ ಬರಲೇಇಲ್ಲ ನೋಡು ಎಂದು ತಂಗಿ ಕೋಪದಿಂದ ಬಿರಬಿರನೆ ನಡೆದುಹೋದಂತೆ ಭಾಸವಾಗಿ ಕೂತಲ್ಲೇ ಕಲ್ಲಾಗಿಬಿಡುತ್ತಿದ್ದ. ಚಳಿಯಲ್ಲೂ ಬೆವರಿಳಿಯುವ ಅವನ ಮುಖವನ್ನು ಪತ್ನಿ ವಿಚಿತ್ರಸಂಶಯದಿಂದ ನೋಡಿದರೆ, ಏನಿಲ್ಲ ತೀರಿಕೊಂಡ ಅಮ್ಮನ ನೆನಪು ಬಂತು ಕಣೇ ಎಂದು ಅವಳ ಹಣೆಗೆ ಮುತ್ತಿಟ್ಟು ಸಮಾಧಾನಮಾಡುತ್ತಿದ್ದ. ನೌಕರಿಯ ಮೇಲಿನ ನಿಷ್ಠೆಗಾಗಿ ಇರುವ ತಂದೆತಾಯಿಯರನ್ನು ಹೀಗೆ ಹಲವು ಬಾರಿ ಸಾಯಿಸಿ ತಬ್ಬಲಿಯಾಗಿರುವ ತನ್ನ ಅವಸ್ಥೆಗೆ ಒಳಗೊಳಗೇ ಇಳಿದುಹೋಗುತ್ತಿದ್ದ.
ಇತ್ತ ರಾ ಆಫೀಸಿಗೆ ಅದು ಹೇಗೋ ವಾರ-ಎರಡು ವಾರಕ್ಕೊಮ್ಮೆ ತಪ್ಪದೆ ಕಾಗದಗಳು ಬಂದು ತಲುಪುತ್ತಿದ್ದವು. ಸಂಶಯವೇ ಇಲ್ಲ, ಅದೇ ಹುಡುಗ ಗುಟ್ಟಾಗಿ ಕಳಿಸಿದ ಪತ್ರಗಳು ಅವೆಲ್ಲ. ಒಂದೇ ಕಡೆಯಿಂದ ಕಳಿಸಿದರೆ ಸಂಶಯ ಬರುತ್ತದೆ ಎಂಬ ಕಾರಣಕ್ಕೆ ಬೇರೆಬೇರೆ ಊರುಗಳಿಂದ ಪತ್ರಗಳನ್ನು ಕಳಿಸುತ್ತಿದ್ದನಾತ. ಇಂಟರ್ನೆಟ್, ಸೆಟಲೈಟ್ ಮೊಬೈಲುಗಳಿಲ್ಲದ ಆ ಕಾಲದಲ್ಲಿ ಸಂವಹನ ಎಷ್ಟು ಕಷ್ಟವಾಗಿತ್ತೆನ್ನುವುದನ್ನು ಊಹಿಸಬಹುದು. ಆದರೂ ವಾರಕ್ಕೊಮ್ಮೆ ಪತ್ರ ಕಳಿಸದೆ ಬಿಟ್ಟವನಲ್ಲ ಅವನು. ಹೆಚ್ಚಿನವುಗಳು ಯಾವುದೋ ನಿಗೂಢ ಲಿಪಿಯಲ್ಲಿರುತ್ತಿದ್ದವು. ಕೀಲಿ ತಿರುಗಿಸಿ ಭದ್ರಪಡಿಸಿದ ಬೀಗವನ್ನು ಮತ್ತೆ ಅದೇ ಕೀಲಿ ಹಾಕಿ ಉಲ್ಟಾ ತಿರುಗಿಸಿ ತೆಗೆಯಬೇಕಾದಂತೆ, ಕೆಲವು ಸಲ ಅವನು ಕೋಡ್ ಭಾಷೆಯಲ್ಲಿ ಬರೆದ ಪತ್ರವನ್ನು ಇಲ್ಲಿ ಡಿಕೋಡ್ ಮಾಡಿ ಓದಬೇಕಾಗುತ್ತಿತ್ತು. ಹಾಗೆ ಬರುತ್ತಿದ್ದ ಒಂದೊಂದು ಪತ್ರದಲ್ಲೂ ಸ್ಫೋಟಕ ಮಾಹಿತಿಗಳು ಅಡಗಿರುತ್ತಿದ್ದವು. ಪಾಕಿಸ್ತಾನ, ಗಡಿಯ ಯಾವ ಭಾಗದಲ್ಲಿ ಸೇನೆಯನ್ನು ಕಳಿಸಿ ಯುದ್ಧಕ್ಕೆ ಹಂಚಿಕೆ ಹಾಕುತ್ತಿದೆ ಎಂಬ ಮಾಹಿತಿಯನ್ನು ಹೇಗೋ ಸಂಪಾದಿಸಿ ಅವನು ಇವರಿಗೆ ಮುಟ್ಟಿಸುತ್ತಿದ್ದ. ಹಾಗಾಗಿ, ಅತ್ತ ಪಾಕಿಸ್ತಾನದ ಸೇನೆ ಬಂದು ಜಮೆಯಾಗುವ ಮೊದಲೆ ಇತ್ತಕಡೆಯ ಸೈನಿಕರು ಸರ್ವಸನ್ನದ್ಧರಾಗಿ ನಿಂತುಬಿಡುತ್ತಿದ್ದರು!
ಒಂದೆರಡು ಸಲ ರವೀಂದ್ರ ಗುಟ್ಟಾಗಿ ಭಾರತಕ್ಕೆ ಬಂದುಹೋದ. ಹಾಗೆ ಬಂದವನನ್ನು ರೆಡ್‍ಕಾರ್ಪೆಟ್ ಹಾಕಿ ಸ್ವಾಗತಿಸುವ ಹಾಗಿರಲಿಲ್ಲವಲ್ಲ! ರಾ ಸಂಸ್ಥೆಗೆ ಕೂಡ ಹಿಂದಿನ ಬಾಗಿಲಲ್ಲಿ ಮುಸುಕುಧಾರಿಯಾಗಿ ಹೋಗಬೇಕಿತ್ತವನು! ಅವನಿಂದ ಪಾಕಿಸ್ತಾನದ ಒಳಗೆ ನಡೆಯುತ್ತಿರುವ ಯುದ್ಧತಂತ್ರಗಳ ಮಾಹಿತಿಯನ್ನು ರಾ ಅಧಿಕಾರಿಗಳು ಪಡೆದುಕೊಂಡರು. ಕೇಂದ್ರದ ಗೃಹಸಚಿವರಾಗಿದ್ದ ಎಸ್.ಬಿ.ಚವ್ಹಾಣ್ ಕೂಡ ಗುಟ್ಟಾಗಿ ರವೀಂದ್ರನನ್ನು ಭೇಟಿಯಾಗಿ ಬೆನ್ನು ತಟ್ಟಿದರು. ಶತ್ರುದೇಶದಲ್ಲಿ ಕೆಲಸ ಮಾಡುವಾಗ ಏಕಾಂಗಿ ಎಂದು ಎಂದೂ ಎಣಿಸಬೇಡಪ್ಪ; ಇಡೀ ಭಾರತವೇ ನಿನ್ನ ಜೊತೆ ಇದೆ ಅಂತ ತಿಳಕೋ. ದೇಶಕ್ಕಾಗಿ ಕೆಲಸ ಮಾಡ್ತಿದೇನೆ ಎಂಬ ಹೆಮ್ಮೆ ಸದಾ ಹೃದಯದಲ್ಲಿರಲಿ ಎಂದು ಅಪ್ಪಿಕೊಂಡು ಹೇಳಿದರು. ಮತ್ತೆ ಗುಟ್ಟಾಗಿ ಅವನನ್ನು ದೇಶದ ಪ್ರಧಾನಿ ಇಂದಿರಾಗಾಂಧಿಯ ಬಳಿ ಕರೆದೊಯ್ದರು. ಆಕೆ ಇವನಿಗೆ “ಬ್ಲ್ಯಾಕ್ ಟೈಗರ್” ಎಂಬ ಬಿರುದನ್ನೂ ದಯಪಾಲಿಸಿದರು. ಮರುದಿನದ ಯಾವ ಪತ್ರಿಕೆಯಲ್ಲೂ ಈ ಪ್ರಶಸ್ತಿಯ ವಿಷಯ ಬರಲಿಲ್ಲ. ಗೂಢಚಾರನ ಬದುಕು ಅರಳುವುದೇ ಕತ್ತಲೆ ಲೋಕದಲ್ಲಿ ತಾನೆ?
***
ನದಿ ಎಂದ ಮೇಲೆ ತಿರುವುಗಳಿರಬೇಕು. ನಾಟಕ ಎಂದಮೇಲೆ ಅನಿರೀಕ್ಷಿತ ದೃಶ್ಯಬದಲಾವಣೆಗಳು ಇರಬೇಕು. ಇನ್ನೇನು ಹೀಗೆಯೇ ನಡೆದುಹೋಗುತ್ತದೆ ಎಂದು ಉಸಿರು ಬಿಗಿಹಿಡಿದು ಕೂತ ಪ್ರೇಕ್ಷಕನಿಗೆ ಮಂಕುಬೂದಿ ಎರಚಿ ಕತೆ ಬೇರೊಂದು ದಿಕ್ಕಿನತ್ತ ಹೊರಳಬೇಕು. ಮೊದಲ ಅಂಕದಲ್ಲಿ ರಾಜನಾಗಿ ಕಿರೀಟ ತೊಟ್ಟವನು,ಎರಡನೇ ಅಂಕದಲ್ಲಿ ಸಂತೆಯಲ್ಲಿ ಹೆಂಡತಿಯನ್ನು ಮಾರಲು ನಿಂತಿದ್ದರೆ, ಪ್ರೇಕ್ಷಕನಿಗೆ ರೋಮಾಂಚನವಾಗುತ್ತದೆ. ಆಹಾ ಎಂದು ಚಪ್ಪರಿಸುತ್ತ ಕತೆಯನ್ನು ಸವಿಯುತ್ತಾನೆ. ರವೀಂದ್ರನ ಜೀವನದಲ್ಲಿ ಅಂಕದ ಪರದೆ ಅಷ್ಟುಬೇಗ ಬದಲಾಗಿಬಿಡುತ್ತದೆ ಎನ್ನುವುದು ಎನ್ನುವುದು ಮಾತ್ರ ಸ್ವತಃ ಅವನಿಗೂ ಗೊತ್ತಿರಲಿಲ್ಲ ಎಂದು ಕಾಣುತ್ತದೆ. ಒಂದು ದಿನ ಸೇನೆಯ ಉನ್ನತ ಅಧಿಕಾರಿಗಳಿಂದ ಅವನಿಗೆ ಬುಲಾವ್ ಬಂತು. ಕರೆದಿದ್ದವರು ಅವನನ್ನು ಕೊಠಡಿಯಲ್ಲಿ ತಮ್ಮೆದುರು ಕೂರಿಸಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ನೋಡಿದರು.
“ಮೇಜರ್ ನಬಿ ಅಹ್ಮದ್ ಶಕೀರ್!”
“ಯೆಸ್ ಸರ್. ಹೇಳಿ”
“ನೀವು ಒಬ್ಬ ನಿಷ್ಠಾವಂತ, ಪ್ರಾಮಾಣಿಕ ಸೇನಾಧಿಕಾರಿ. ದೇಶಕ್ಕಾಗಿ ಪ್ರಾಣವನ್ನೇ ಕೊಡಬಲ್ಲ ಮಹಾನ್‍ವ್ಯಕ್ತಿ. ಅಗತ್ಯಬಿದ್ದರೆ ಜೀವನದ ಎಲ್ಲ ಸುಖಕಷ್ಟಗಳನ್ನೂ ಬದಿಗಿಟ್ಟು ದೇಶಸೇವೆ ಮಾಡಬಲ್ಲ ಉತ್ಸಾಹ ತುಂಬಿತುಳುಕುತ್ತಿರುವವರು. ಆದರೆ,..”
“ಆದರೆ?”
“ಆದರೆ, ದೇಶ ನಿಮ್ಮನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂಬ ಅನುಮಾನ ನಮಗೆ”
“ಈ ಅನುಮಾನ ಯಾಕೆ ಸರ್? ದೇಶ ನನ್ನನ್ನು ತುಂಬಾ ಚೆನ್ನಾಗಿ ಸಲಹುತ್ತಿದೆಯಲ್ಲ!”
“ಮತ್ತೇಕೆ ಅದು ನಿಮ್ಮನ್ನು ದೇಶಭ್ರಷ್ಟನಂತೆ ಹೊರಹಾಕಿ ಶತ್ರುದೇಶದಲ್ಲಿ ತಿರುಗುವಂತೆ ಮಾಡಿತು?”
ರವೀಂದ್ರನಿಗೆ ಥಟ್ಟನೆ ಅಪಾಯದ ಮೊದಲ ಸೂಚನೆ ಸಿಕ್ಕಿತು. ಗಂಟಲಿನ ಎಳಸುನಾಳಕ್ಕೆ ರಬ್ಬರ್‍ಬ್ಯಾಂಡಲ್ಲಿ ಗುರಿಯಿಟ್ಟು ಹೊಡೆದಂತೆ ಅನಿಸಿತು. ಆಘಾತವಾಗಿಲ್ಲ ಎನ್ನುವ ಪೋಸು ಕೊಟ್ಟರೂ ಮೈಮುಳ್ಳೆದ್ದುಬಿಟ್ಟಿತ್ತು. ಅವನ ಮೂಲಸ್ವರೂಪ ಏನು ಎನ್ನುವುದು ಅಲ್ಲಿ ಖಾಕಿ ತೊಟ್ಟ ಅಧಿಕಾರಿಗಳಿಗೆ ತಿಳಿದುಹೋಗಿತ್ತು. ಅದಕ್ಕೆ ಕಾರಣವಾದದ್ದು ರಾ ಸಂಸ್ಥೆಯೇ ಮಾಡಿಕೊಂಡ ಒಂದು ಪುಟ್ಟ ಎಡವಟ್ಟು ಎಂದು ಹೇಳಬೇಕು. ಕರಿಹುಲಿಯ ಜೊತೆ ಇನ್ನೊಂದು ಹುಲಿ ಇದ್ದರೆ ಚೆನ್ನಾಗಿರುತ್ತದೆ; ಒಬ್ಬನಿಗಿಂತ ಇಬ್ಬರಿರುವುದು ಮೇಲು ಎಂದು ಬಗೆದ ರಾ, 1983ರಲ್ಲಿ ಇನ್ಯಾತ್ ಮಸಿಹ ಎಂಬ ಎರಡನೇ ಗೂಢಚಾರನನ್ನು ರವೀಂದ್ರನಂತೆಯೇ ತಯಾರು ಮಾಡಿ ಪಾಕಿಸ್ತಾನದ ಬೇಲಿ ಮುರಿದು ಒಳಕಳಿಸಿತ್ತು. ಆದರೆ, ಅವನ ದುರದೃಷ್ಟವೋ ಅಥವಾ ಪಾಕಿಸ್ತಾನದ ರಕ್ಷಣೆಯಲ್ಲಿ ಆಧುನಿಕತೆ ಬಂದಿತ್ತೋ – ಒಟ್ಟಲ್ಲಿ ಅವನು ಹಾಗೆ ಕಳ್ಳಬಾಗಿಲಿನಿಂದ ಒಳಸೇರುವಾಗಲೇ ಸಿಕ್ಕಿಬಿದ್ದ. ಮೊದಮೊದಲಿಗೆ ಮಗುಮ್ಮಾಗಿ ಕೂತರೂ ಕಾದ ಸರಳಲ್ಲಿ ಬೆನ್ನಿಗೆ ಬರೆ ಹಾಕತೊಡಗಿದ ಮೇಲೆ ಇನ್ಯಾತ್ ತನ್ನ ನಿಜರೂಪದ ಬಗ್ಗೆ ಬಾಯಿಬಿಟ್ಟ. ಮಾತ್ರವಲ್ಲ ತನ್ನನ್ನು ರವೀಂದ್ರನ ಜತೆ ಸೇರಿಕೊಳ್ಳಲು ಕಳಿಸಲಾಗಿತ್ತು ಎಂಬ ಮಾಹಿತಿಯನ್ನೂ ಹೊರಹಾಕಿದ. ಪಾಕಿಸ್ತಾನದ ತನಿಖಾಧಿಕಾರಿಗಳಿಗೆ ಇಷ್ಟೇ ಸಾಕಾಯಿತು.
ಮೇಜರ್ ನಬಿಯನ್ನು ಹೀಗೆ ಅಪರಾಧಿ ಸ್ಥಾನದಲ್ಲಿ ಕೂರಿಸಿ ಎರಡುವರ್ಷ ಚಿತ್ರಹಿಂಸೆ ಕೊಟ್ಟರು. ಅವನನ್ನು ಮೊದಲಿಗೆ ಸಿಯಾಲ್‍ಕೋಟ್ ಜೈಲಿಗೆ ಸಾಗಿಸಲಾಯಿತು. ಇದು ನಮ್ಮ ತಿಹಾರ್‍ಗಿಂತಲೂ ಕೆಳಮಟ್ಟದ ಕಟ್ಟಾಕೊಳಕು ಸೆರೆಮನೆ. ಅತ್ತ ಅವನ ಮನೆ ಜಪ್ತಿ ಮಾಡಿದರು. ಹೆಂಡತಿಗೆ ನಿನ್ನ ಗಂಡ ದೇಶದ್ರೋಹಿ ಎಂದು ಹೇಳಿದರು. ಅವನು ಸಿಕ್ಕಿಬಿದ್ದ ಸುದ್ದಿ ರಾ ಇಲಾಖೆಗೂ ಬಂತು. ಗಂಗಾನಗರದ ಮನೆಯಲ್ಲಿ ಮಾತ್ರ ನೀರವಮೌನ ಹಬೆಯಾಡಿತು. “ಆ ಮಗನನ್ನು ನಾವು ಸತ್ತಿದ್ದಾನೆಂದೇ ತಿಳಿದಿದ್ದೇವೆ” ಎಂದಿತು ಉಸಿರುಗಟ್ಟಿದ ಹೆತ್ತಕರುಳು. 1985ರಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟು, ರಾಜಕೀಯ ಕುತಂತ್ರ, ದೇಶದ ವಿರುದ್ಧ ಪಿತೂರಿ, ರಕ್ಷಣೆಯ ವಿಚಾರದಲ್ಲಿ ರಾಜಿ ಎನ್ನುತ್ತ ಹತ್ತಿಪ್ಪತ್ತು ಆರೋಪಗಳ ಮೂಟೆಯನ್ನು ನಬಿಯ ಮೇಲೆ ಹಾಕಿ, ಅವನಿಗೆ ನೇಣು ಶಿಕ್ಷೆ ವಿಧಿಸಿತು. ಅದಾಗಿ ಆರೇಳು ತಿಂಗಳಾದ ಮೇಲೆ, ಈ ಶಿಕ್ಷೆಯ ಪ್ರಮಾಣ ಕಡಿಮೆಯಾಗಿ ಜೀವಾವಧಿಗೆ ಬಂದು ನಿಂತಿತು.
ಅಲ್ಲಿಂದ ಮುಂದಿನದ್ದು ಗೋಳಿನ ಕತೆ. ರವೀಂದ್ರನನ್ನು ಹತ್ತುಹಲವು ಜೈಲುಗಳಲ್ಲಿ ಇಡಲಾಯಿತು. ಸಿಯಾಲ್‍ಕೋಟ್‍ನಿಂದ ಕೋಟ್ ಲಕ್ಪತ್‍ಗೆ ಕರೆದೊಯ್ಯಲಾಯಿತು. ಅಲ್ಲಿಂದ ಮಿಯಾನ್‍ವಾಲಿ ಜೈಲಿಗೆ ತಂದರು. ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿದ್ದುದರಿಂದ, ರಕ್ಷಣಾ ಇಲಾಖೆಯ ಹಲವು ರಹಸ್ಯಗಳು ಅವನ ಕೈ ಹಾದುಹೋಗಿದ್ದವು. ಅವುಗಳಲ್ಲಿ ಎಷ್ಟನ್ನು ಭಾರತಕ್ಕೆ ಕಳಿಸಿದ್ದೀ ಬೊಗಳು ಎಂದು ಪಾಕ್‍ಸೇನೆಯ ಅಧಿಕಾರಿಗಳು ಕೈಗೆ ಬೆಲ್ಟು ಎತ್ತಿಕೊಂಡು ವಿಚಾರಿಸತೊಡಗಿದರು. ಅವನನ್ನು ಕತ್ತಲಕೋಣೆಯಲ್ಲಿ ಹಾಕಿ ಕೊಳೆಸಿದರು. ನಡುಗುವ ಚಳಿಯಲ್ಲಿ ನೆಲದ ಮೇಲೆ ಮಲಗಿಸಿದರು. ಊಟ ಕೊಡದೆ ಉಪವಾಸ ಕೆಡವಿದರು. ಬಾಯಿ ಬಿಡಿಸಲು ಏನೆಲ್ಲ ರಣಶಿಕ್ಷೆಗಳನ್ನು ಕೊಡಬಹುದೋ ಅವೆಲ್ಲವನ್ನೂ ಕೊಟ್ಟರು.
***
ಅಂತಹ ಘನಘೋರ ಬದುಕಿನ ವಿವರಗಳನ್ನು ರವೀಂದ್ರ ಹೇಗೆಹೇಗೋ ಕಾಗದ ಸಂಪಾದಿಸಿ ಬರೆದು ಗುಟ್ಟಾಗಿ ಗಂಗಾನಗರದ ಮನೆಗೆ ಕಳಿಸುತ್ತಿದ್ದ. ವರ್ಷಕ್ಕೆ ಒಂದೋ ಎರಡೋ ಅಂತಹ ಪತ್ರಗಳು ಮನೆಯವರಿಗೆ ಸಿಗುತ್ತಿದ್ದವು. ಅವುಗಳನ್ನು ಓದಿ ಎದೆ ಬಡಿದುಕೊಳ್ಳುವುದಕ್ಕಿಂತ ಓದದಿರುವುದೇ ಮೇಲು ಎಂದು ಅವರು ಭಾವಿಸುವಂತಿತ್ತು. ಕಾಲಕ್ರಮೇಣ, ಜೈಲಿನ ಕೊಳಕು ಸೆಲ್ಲಿನಲ್ಲಿ ದಿನದೂಡುತ್ತ ರವೀಂದ್ರನಿಗೆ ಅಸ್ತಮಾ ಅಮರಿಕೊಂಡಿತು. ಅದಕ್ಕೆ ಬೇಕಾದ ಔಷಧವನ್ನೂ ಪಾಕಿಸ್ತಾನ ಕೊಡಲಿಲ್ಲ. ಅತ್ತೆಯ ಮೇಲಿನ ಕೋಪದಲ್ಲಿ ಕೊತ್ತಿಗೆ ಹೊಡೆದಂತೆ, ಭಾರತದ ಮೇಲಿದ್ದ ರೋಷವೇಶಗಳನ್ನೆಲ್ಲ ತನ್ನ ಕೈಗೆ ಸಿಕ್ಕಿದ ಈ ಬೇಹುಗಾರನ ಮೇಲೆ ಅದು ತೀರಿಸಿಕೊಂಡಿತು. ಕೊನೆಗೆ ಅವನನ್ನು ಮುಲ್ತಾನ್‍ನಲ್ಲಿರುವ ಸೆಂಟ್ರಲ್ ಜೈಲಿಗೆ ಹಾಕಿದರು. ರವೀಂದ್ರನಿಗೆ, ತಪ್ಪಿಸಿಕೊಂಡು ಓಡುವ ಎಲ್ಲಾ ದಾರಿಗಳೂ ಶಾಶ್ವತವಾಗಿ ಮುಚ್ಚಿಹೋದವು. ಅಲ್ಲದೆ ಓಡಿಹೋಗುವಷ್ಟು ಕಸುವೂ ಅವನ ದೇಹದಲ್ಲಿ ಉಳಿದಿರಲಿಲ್ಲ. ಅದೇ ಜೈಲಿನಲ್ಲಿ ಇನ್ಯಾತ್‍ನನ್ನೂ ಕೂಡಿಹಾಕಿದ್ದರು. ಸುಮಾರು ಹದಿನೆಂಟು ವರ್ಷ ಚಿತ್ರಹಿಂಸೆ ಅನುಭವಿಸಿ ಇನ್ಯಾತ್ ತೀರಿಕೊಂಡ. ಅದೇ ದಾರಿಯಲ್ಲಿದ್ದ ರವೀಂದ್ರ ಕೊನೆಕೊನೆಗೆ ಆದಷ್ಟು ಬೇಗ ಸಾವು ಬರಲಪ್ಪಾ ಎಂದು ಪ್ರಾರ್ಥಿಸುವಂತಾಗಿತ್ತು. ಅಲ್ಲಿರುವಾಗಲೇ ಒಂದು ಚಳಿಗಾಲದಲ್ಲಿ ಅವನಿಗೆ ಶ್ವಾಸಕೋಶದ ಕ್ಷಯ ಕೂಡ ಆವರಿಸಿಕೊಂಡಿತು. ಎಲ್ಲಾ ನರಕಯಾತನೆಗಳನ್ನು ಮೌನವಾಗಿ ಅನುಭವಿಸಿ ರವೀಂದ್ರ 2001ರ ನವಂಬರ್ 21ರಂದು ತನ್ನ 49ನೇ ವಯಸ್ಸಿನಲ್ಲಿ ಕಣ್ಣುಮುಚ್ಚಿದ.ರಸ್ತೆಯಲ್ಲಿ ಸತ್ತುಬಿದ್ದ ನಾಯಿಯನ್ನು ಎಳೆದುಹಾಕಿ ಹೂಳುವಂತೆ, ಪಾಕಿಗಳು ರವೀಂದ್ರನ ಶವಕ್ಕೆ ಕನಿಷ್ಠ ಸಂಸ್ಕಾರಗಳನ್ನೂ ಮಾಡದೆ, ಅದೇ ಜೈಲಿನ ಹಿಂಭಾಗದಲ್ಲಿ ಹೂತು ಕೈತೊಳೆದುಕೊಂಡರು.
***
ಸಾಯುವ ಮೂರು ದಿನಗಳ ಮೊದಲು ರವೀಂದ್ರ ತನಗೆ ಸಿಕ್ಕಿದ ಒಂದು ತಂಡು ಕಾಗದಲ್ಲಿ “ನಾನು ಅಮೆರಿಕದ ಪ್ರಜೆಯಾಗಿದ್ದರೆ, ಸೆರೆ ಸಿಕ್ಕ ಮೂರೇ ದಿನದಲ್ಲಿ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಬಹುದಾಗಿತ್ತು.” ಎಂದು ಬರೆದುಕೊಂಡಿದ್ದ. ರವೀಂದ್ರ ತನ್ನ 18 ವರ್ಷಗಳನ್ನು ಜೈಲಲ್ಲಿ ಕಳೆಯುವುದರ ಜೊತೆಗೆ ಒಟ್ಟು 26 ವರ್ಷಗಳನ್ನು ಶತ್ರುರಾಷ್ಟ್ರದಲ್ಲಿ ಕತ್ತಿಯಲಗಿನ ಮೇಲೆ ನಡೆಯುವಂತೆ ಕಳೆದ. ಅವನು ಜೈಲು ಪಾಲಾದ ಮೇಲೆ ನಮ್ಮ ದೇಶದ ಸರಕಾರ ಒಮ್ಮೆಯಾದರೂ ಬಿಡುಗಡೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿತೆ? ಅನುಮಾನ. ರವೀಂದ್ರ ಜೈಲುಪಾಲಾದ ಮೇಲೆ ಗಂಗಾನಗರದ ಅವನ ಮನೆಯವರಿಗೆ ಐನೂರು ರುಪಾಯಿ ಮಾಸಾಶನ ಕಳಿಸಿದರೆ ಸಾಕು ಎಂದು ಅದು ಬಗೆದಹಾಗಿತ್ತು. ಅವನು ಸತ್ತ ಮೇಲೆ, ತಿಂಗಳಿಗೆ 2000 ರುಪಾಯಿಯನ್ನು ಕಳಿಸುತ್ತಿದ್ದರು. 2006ರಲ್ಲಿ ಅವನ ತಾಯಿ ಅಮಲಾದೇವಿ ತೀರಿಕೊಂಡಮೇಲೆ, ಆ ಮಾಸಾಶನವೂ ನಿಂತಿತು. ಪದವಿ ಮುಗಿಸಿ ಯಾವುದಾದರೂ ಪುಟ್ಟ ಕೆಲಸ ಹಿಡಿದು ಸಂಸಾರ ಮಾಡಿ ಬದುಕು ಕಟ್ಟಿಕೊಳ್ಳುವ ಆಸೆ ಇಟ್ಟುಕೊಂಡಿದ್ದ ಹುಡುಗನಿಗೆ ಬದುಕೇ ನಾಟಕರಂಗವಾಗುತ್ತದೆ; ಶುಭಂ ಎಂದು ಮುಗಿಯಬೇಕಿದ್ದದ್ದು ದುಃಖಾಂತವಾಗುತ್ತದೆ ಎನ್ನುವುದು ಮಾತ್ರ ಗೊತ್ತಿರಲಿಲ್ಲ. ಅದಕ್ಕೆ ಕ್ಲೈಮಾಕ್ಸ್ ಎನ್ನುವಂತೆ, ಅವನ ಕತೆಯಿಂದ ಸ್ಫೂರ್ತಿ ಪಡೆದು ನಿರ್ಮಿಸಿದ ಬಾಲಿವುಡ್ ಸಿನೆಮ ನಟನೆ ಗೊತ್ತಿಲ್ಲದ ನಟನಿಗೂ 300 ಕೋಟಿ ರುಪಾಯಿ ತಂದುಕೊಟ್ಟಿತು ಎನ್ನುವುದು ಎಂತಹ ಕ್ರೂರವ್ಯಂಗ್ಯ!
‘ಓ ಮನಸೇ’ಯಲ್ಲಿ ಪ್ರಕಟಿತ
ಬಂದ ೩೦೦ ಕೋಟಿಯಲ್ಲಾದರೂ ಒಂದಂಶ “ರವೀಂದ್ರ ಕೌಶಿಕ್” ಅವರ ಕುಟುಂಬಕ್ಕೆ ಕೊಡಬೇಕಿತ್ತು… 😥
300 crore also not enough for him.
ಭಾರತದಂತಹ ಪ್ರಜಾಸತ್ತಾತ್ಮಕ ದೇಶ ಈ ರೀತಿಯಲ್ಲಿ ಒಬ್ಬ ಅಮಾಯಕನನ್ನು ಗೂಢಚಾರಿಕೆಗೆ ಬಲಿ ಕೊಟ್ಟಿದ್ದು ಸರಿಯೇ? ರವೀಂದ್ರನ ವೈಭವೀಕರಣದ ಬದಲು ಇದರ ಬಗ್ಗೆ ಚರ್ಚೆ ಆಗತಕ್ಕದ್ದು.
ನಮನ ಸಲ್ಲುವ ಕಡೆ ಮೊದಲು ನಮನವನ್ನೂ,ಕೃತಜ್ಞತೆಯನ್ನೂ ಸಲ್ಲಿಸತಕ್ಕದ್ದು ಹಾಗೂ ತಾವು ಯಾವ ಪ್ರಪಂಚದಲ್ಲಿ ಬದುಕುತ್ತಿರುವಿರೆಂಬುದನ್ನ ಅರಿಯತಕ್ಕದ್ದು.
ತಾವು ಹೆಚ್ಚಾಗಿ ವಹಿಸಿಕೊಂಡು ಮಾತನಾಡುವ ಜೀವಪರ ನಡವಳಿಕೆ ತಮ್ಮ ಬಾಂಧವರಲ್ಲಿ ಕಾಣುವುದಿಲ್ಲ ಎಂಬ ಸತ್ಯವನ್ನು ಮನಗಾಣತಕ್ಕದ್ದು.
ದರ್ಗಾ ಸರ್ ಅವರನ್ನು ಪಾಪಿಸ್ತಾನಕ್ಕೆ ಕಳಿಸಿ ಅವರ ಮನಪರಿವರ್ತನೆಗೆ ಪ್ರಯತ್ನಿಸತಕ್ಕದ್ದು
ಇದ್ಯಾವುದೂ ಆಗದಿದ್ದಲ್ಲಿ ಕುಚೇಷ್ಟಯನ್ನು ಬಿಡತಕ್ಕದ್ದು. ಇಲ್ಲವೇ ಎಗರಾಡತಕ್ಕದ್ದೂ
What’s this?
ಚಂಡಾಲ ದೇವರಿಗೆ ಚಪ್ಪಲಿ ಪೂಜೆ.
What’s this nonsense?
ಕೆಸರನ್ನು ಕೆಸರಿನಿಂದಲೇ ತೊಳೆಯುವ ಪ್ರಯತ್ನ
Are you drunk?
ಖಂಡಿತ ಇಲ್ಲ. ದೇಶಗಳು ಗುಪ್ತ ಚಾರಿಕೆಯನ್ನು ನಡೆಸಲೇಬೇಕಾದ ಬೇಕಾದ ಅನಿವಾರ್ಯತೆ ಮನಗಾಣದೆ ವಿಷಯವನ್ನು ತಿರುಚುವ ಉದ್ಧಟತನವನ್ನು ಅಮಲೇರಿಸಿಕೊಂಡವರಿಗೆ ಅದೇ ಹೆಂಡವನ್ನು ಉಣಬಡಿಸುವ ಚಿಕ್ಕ ಪ್ರಯತ್ನ.
ಕುಚೇಷ್ಟೆ ಬಿಡತಕ್ಕದ್ದು,ಇಲ್ಲವೇ ಮೆಣಸಿನಕಾಯಿಯನ್ನು ಇಟ್ಟುಕೊಂಡು ಕುಣಿದಾಡತಕ್ಕದ್ದು.
ಇದೇನು?ಉದಾರವಾದಿ,ಶರಣ ತತ್ವ ಪ್ರತಿಪಾದಕರು ಹಿಡಿಶಾಪಕ್ಕೆ ಶರಣಾದದ್ದು.
ವಿನಾಶಕಾಲ ಅದರಪಾಡಿಗೆ ಅದು ಬರತ್ತೆ,ಹೋಗತ್ತೆ ಬ್ರದರ್. ಲೇಖನದ ಮೂಲ ಉದ್ದೇಶವನ್ು ಅಡ್ಡದಾರಿಗೆ ಎಳೆಯುವ ನಿಮ್ಮ ವಿಪರೀತ ಬುದ್ಧಿ ವಿನಾಶದ ಹಾದಿ ಹಿಡಿದಿದ್ದಂತೂ ಸ್ಪಷ್ಟ.
ಭಲೇ ಬಸವ ಅನ್ನಿಸ್ಕೊಳಳೋದ್ ಬಿಟ್ಟು ಬೀದಿ ಬಸವ ಆಗ್ದಿದ್ರೆ ಆಯ್ತಲ್ಲ.
ಏನಂತೀರ ಬ್ರದರ್.
ಮೆಣಸಿನಕಾಯಿ ಖದರ್ ಸಾಕಾ?
ಆ ತೊಂದರೆ ನಿಮಗೆ ಬೇಡ. ನಾನೇ ಕೊಳ್ಳುತ್ೇನೆ. ಸಂಸ್ಕೃತಿಯನ್ನು ತಿರಸ್ಕರಿಸುವ, ಎಲ್ಲಕ್ಕೂ ಒಡಕು ಮಾತನಾಡುವ, ಅನಿಷ್ಟಕ್ಕಲ್ಲಾ ಬ್ರಾಹಮಣರನ್ನು ದೂರುವ ನಿಮ್ಮ ಋಣ ನನಗೆ ಬೇಡ.
ಕುಚೇಷ್ಟೆ ನಿಮ್ದೊಂದೇ ಸ್ವತ್ತು ಅಲ್ಲ ನಾವೂ ಮಾಡಬಹುದೆಂದು ತೋರಿಸಬೇಕಾಗಿತ್ತು, ಆಯಿತು.
ಮಿ. ರಾವ್,
೧. ಬ್ರಾಹ್ಮಣ್ಯ = ಬ್ರಾಹ್ಮಣ ಎಂಬ ತಮ್ಮ ಸಮೀಕರಣವನ್ನು ನಾನು ಒಪ್ಪಿಕೊಂಡಿಲ್ಲ. ಬ್ರಾಹ್ಮಣ್ಯ ಎಲ್ಲಾ ಜಾತಿಗಳಲ್ಲೂ ಕಂಡು ಬರುತ್ತದೆ. ಹಿಂದೆಯೂ ಇಂದೂ ಬ್ರಾಹ್ಮಣರಲ್ಲಿ ಬ್ರಾಹ್ಮಣ್ಯವನ್ನು ತ್ಯಜಿಸಿರುವವರು ಅನೇಕರಿದ್ದಾರೆ – ಉದಾ: ಯೂ ಆರ್ ಅನಂತಮೂರ್ತಿ. ಅಂತಹವರ ಬಗ್ಗೆ ನನಗೆ ಬಹಳ ಗೌರವವಿದೆ.
೨. ಅನಿಷ್ಟಕ್ಕೆಲ್ಲ ಬ್ರಾಹ್ಮಣ್ಯವೇ ಕಾರಣ – ಇದೂ ಕೂಡ ತಮ್ಮ ಕಲ್ಪನೆ, ನನ್ನದಲ್ಲ! ಬ್ರಾಹ್ಮಣ್ಯದಿಂದ ಕೆಲವೊಂದು ಘನಿಷ್ಠ ಪ್ರಮಾಣದ ಅನಿಷ್ಟಗಳಾಗಿವೆ ಎಂಬುದನ್ನು ಒಪ್ಪಿಕೊಂಡರೆ ತಾವು ಚಿಕ್ಕವರಾಗುವುದಿಲ್ಲ.
೩. ತಾವು ಕುಚೇಷ್ಟೆ ಮಾಡುವದರಲ್ಲಿ ಪರಿಣತರು ಎಂಬುದನ್ನು ನಾನು ಒಪ್ಪಿಕೊಂಡಿದ್ದೇನೆ. ಪದೇ ಪದೇ ತಮ್ಮ ಪಾರಿಣಿತ್ಯದ ಪ್ರದರ್ಶನವನ್ನು ಮಾಡುವ ಅಗತ್ಯವಿಲ್ಲ.
೪. ಗೂಢಚಾರಿಕೆ ಭಾರತಕ್ಕೆ ಅಗತ್ಯ ಎಂದು ಹೇಳುವ ತಾವು ತಮ್ಮ ಕುಟುಂಬದ ಸದಸ್ಯರನ್ನು ಗೂಢಚಾರಿಕೆಗೆ ರವೀಂದ್ರನ ಹಾಗೆ ಬಲಿ ಕೊಡಲು ಸಿದ್ಧರಿದ್ದೀರ? ತಮ್ಮ ಬದ್ಧತೆ ವೈಭವೀಕರಣಕ್ಕೆ ಸೀಮಿತವಾಗಿದೆಯಲ್ಲವೇ?
Reblogged this on ಮಳೆಗಾಲದ ರಂಗೋಲಿ and commented:
ಇದು ಒಂದು ಕಥೆಯಾಗಿದ್ದರೆ ನೆಮ್ಮದಿಯೆನಿಸುತ್ತಿತ್ತು. ಆದರೆ ಇಂಥ ವಾಸ್ತವವಾಗಿ ದೇಶಕ್ಕಾಗಿಯೇ ಜೀವಿಸಿದಂಥ ಘಟನೆ ಕೇಳಿದರೆ ನಮ್ಮ ಸಣ್ಣತನದ ಅರಿವಾಗುತ್ತದೆ.
ಎಲ್ಲರಿಗೂ ಸೈನ್ಯಕ್ಕೆ ಸೇರಲು ಆಗದೆ ಇರಬಹುದು. ಆದರೆ ಪ್ರತಿಯೊಬ್ಬ ಭಾರತೀಯನು ಸೈನಿಕನೊಬ್ಬನನ್ನು ತನ್ನೊಳಗೆ ಪ್ರತಿಷ್ಠಾಪಿಸಿಕೊಳ್ಳಬೇಕು ಅನಿಸುತ್ತದೆ.
athyadbutha saadane black tiger..idara bagge nijavaagalu chinteya agatyavide..
I am typing in English,because of lack of facility.
Dear Brother Basava,
all this discussion took place because you deviated form the path of the topic and the subject. Therefore an apology from you is owed to the readers here and also an endorsement is timely from you to stick to the spirit of the article. This is not the first time that has happened, so it is a repetitive theme.
With regards to Brahmanya: There might have been some injustices done by a certain set of people but on cannot hold that as a sole reason for all the evils of the society. What you are not undersatnding is that behind every deterioration, it is the human greed in one or the other form that is the cause, not the sharstras or vedas or the puranas.
Take for example, the constitution of India itself: it its entirety,it is noble.How it is being misappropriated , misused to cause chaos in the society.Who is doing it? There are very few brahmins today holding key positions and Brahmanya is not its cause as it stands out of the administrative power corridors largely.Look at UP, Bihar, West Bengal. All are ruled and ruined by the so called backward classes. Constitution and those written it could not be blamed for that.
Look at your own Basava movement. It is ridiculous to see the jati, upajati , superior and inferior complex with in it.
If you want to trumpet what western scholars told you, what Nehru’s historians wrote, what leftist agenda propagates, what suits you own hidden agenda, then it is fine. But do not expect some one to agree to it as you have not seen the life we have led. You have not seen the struggles that we have come through fighting at every step of our life for food, education, books, money, job and so forth.
As regards to your final question: that again is totally irrelevant but I reply:
for once, the article was about a patriot who gave his life for the country. It is our duty to respect him, salute him pay our gratitude and know about him.If we know such characters, we could tell our children. we could get inspiration. Some people are inspired spontaneously, some people get inspiration by inducement and some people might need a gentle force. This is the reality of life and JEEVAPARA NADAVALIKE.!! You cannot deny that. So, mere glorification might have its effect directly or indirectly so one should not question the intention and that itself is wrong. This was what provoked me to write reply to you in the first place.
As regards to sending someone from my family, I do not know. I myself put forward to join army as a doctor but that did not materialise. i wanted to join goverment health service and serve in villages but denied the previlage because I belong to Brahmin caste and did not have money to bribe.This despite being meritorious throughout and trained in top institutes of the country.
So, do not think that you guys only have considerations for the society and welfare, we too have it. Go back to 60s 50s,and 70s to see how schools and colleges as well as universities were and the faculty they had, their background and compare that now with the current cohort. The answer is glaring and evident. Go to Govt hospitals and take a look, who manages them and-how they are.Look at your own government in karnataka and see who is ruling and how the administration is.
I hope to stop here.
Sudarshana
Another point brother,
without leaving brahmanya also there are innumerable people who did good for the society
1.Sir MV
2.Su.Ram.EkkunDi,
3.S.L.Bhyrappa (donates all his proze, award money to social causes)
4.B.M.Sri
5.Yamunaacharya
6.VeeSee
7.D.V.G
8.HiriyaNNa
9.Tee Nam Sri
10.Hiriyanna
12.and so on.
on the other hand U.R.Anantamurthy did hardly anything worthwhile forth society at large. At the most he was self serving.
ಬರೆಯ ಬೇಕಾದ್ದನ್ನು ಬರೆದಿದ್ದೇನೆ. ಮತ್ತೊಂದು ಸಲ ಟೈಪಿಸುವ ಉಸಾಬರಿಗೆ ಹೋಗಲಾರೆ. ಬೇಕಿದ್ದರೆ ಓದಿಕೊಳ್ಳಿ. ಇಲ್ಲವೇ ಬಿಡಿ.
ಇಲ್ಲಿಗೆ ಇಷ್ಟು ಸಾಕು.
Please don’t digress. All governments, including the so-called democracies, are indulged in this kind of senseless, pointless espionage. There are thousands and thousands of such horrific stories worldwide. The youth who are drunk with a heavy doss of patriotism or spy-thriller-nonsense-literature fall prey. Several leaders in the past have tried to break away from this irrational `tradition’ but failed miserably. (Like our own humble IK Gujral’s childish idealism led to the arrest, torture and murder of countless Indian spies in Pakistan.) This is the hightime, that the UNO, Amnesty International, International Court and such bodies sit together and bring an end to this ugly, inhuman practice. Among the celebrated spies, I think, only Putin and Dhoval are the `success’ stories!! The rulers, the top military brass do not send their kids as spies!! MAN – what an irrational animal!!!
ದೇವು, ಇಲ್ಲಿ ಗೂಢಚಾರಿಕೆಯ ವೈಭವೀಕರಣ ಮಾಡುತ್ತಿರುವ ರೋಹಿತ್, ರಾವ್, ಶೆಟ್ಟಿ ಮೊದಲಾದ ಹಿಂದೂ ಯುವಕರಿಗೆ ಗೂಢಚಾರಿ ರವೀಂದ್ರನು ಹಿಂದೂ ಧರ್ಮ ತ್ಯಜಿಸಿ ಸುನ್ನತಿ ಮಾಡಿಸಿಕೊಂಡು ಇಸ್ಲಾಮಿಗೆ ಮತಾಂತರವಾದುದರ ಬಗ್ಗೆ ತಕರಾರಿಲ್ಲ, ಆತ ಪಾಕಿಸ್ತಾನದ ಮುಸಲ್ಮಾನ ಹೆಣ್ಣನ್ನು ಮದುವೆಯದುದರ ಬಗ್ಗೆ ತಕರಾರಿಲ್ಲ, ಆಕೆಗೆ ಇವನಿಂದ ಹುಟ್ಟಿದ ಮಗು ಕೂಡ ಪಾಕಿಸ್ತಾನದ ಪ್ರಜೆಯಾಗಿ ಮುಸಲ್ಮಾನ ಮತದಲ್ಲಿ ಬೆಳೆದುದರ ಬಗ್ಗೆ ತಕರಾರಿಲ್ಲ. ಏಕೆ?
ದಯವಿಟ್ಟು ಈ ಲೇವಡಿ – ಕೆಸರೆರಚಾಟವನ್ನು ಇಲ್ಲಿಗೇ ನಿಲ್ಲಿಸಿ ಬ್ರದರ್ ಬಸವ ಅವ್ರೆ, ಒಂದೊಳ್ಳೆ ಲೇಖನ ಓದಿದ ನಂತರ ಇದೆಲ್ಲ ನೋಡಿದರೆ ಚೆನ್ನಾಗಿರುವುದಿಲ್ಲ ಓದುಗರಿಗೆ; ಅಷ್ಟಕ್ಕೂ ವಾದ ಮಾಡಲೇಬೇಕಾದಲ್ಲಿ ವೈಯಕ್ತಿಕವಾಗಿ ಸಂವಹಿಸಿ / ಸುಧರ್ಶನ್ ರಾವ್ ಅವರನ್ನೇ ಖುದ್ದಾಗಿ ಭೇಟಿಯಾಗಿ…
೧) ಹೌದು, ಶತ್ರು ರಾಷ್ಟ್ರದಲ್ಲಿ ಗೂಢಾಚಾರಿಕೆ ಮಾಡದಿದ್ದಲ್ಲಿ, ಅವರ ರಹಸ್ಯ ಮಾಹಿತಿ ಕಳಿಸದಿದ್ದಲ್ಲಿ ಒಂದಕ್ಕಿಂತ ಹೆಚ್ಚು ಪ್ರಾಣ ಭಾರತಾಂಬೆಯು ತೆರಬೇಕಿತ್ತು…
೨) ಹೌದು – ತಕರಾರಿಲ್ಲ. ಏಕೆಂದರೆ ದೇಶವಾಸಿಗಳು ಮಾಡಿಕೊಂಡಿರುವ ಜಾತಿಗಿಂತ ದೇಶ ಮುಖ್ಯ…
೩) ಖಂಡಿತವಾಗಿಯೂ ಕೂಡ, ಕುಟುಂಬದ ಸದಸ್ಯರು – ನನ್ನ ಸ್ನೇಹಿತರು – ಸ್ವಃತ ನನ್ನನ್ನು ಬಲಿಕೊಡಲು “ಸಂತೋಷ”ದಿಂದ ಸಿದ್ದನಿದ್ದೇನೆ… (ಇಲ್ಲದಿದ್ದಲ್ಲಿ ಗಡಿಯಲ್ಲಿ ಹಲವು ಯೋಧರು – ನಾಡಿನಲ್ಲಿ ಮುಗ್ದ ಜನರ ಬಲಿಯಾಗುತ್ತದೆ! )
ಗೂಢಚಾರಿಕೆಯಲ್ಲಿ ನನ್ನದು ತಪ್ಪು ಕಲ್ಪನೆಯಿರಬಹುದು, ಆದರೆ ಆರ್.ಕೆ ಅವ್ರಿದಂತಲೂ ನಮ್ಮ ದೇಶಕ್ಕೆ ಸಹಾಯವಾಗಿದೆಯಲ್ಲವೆ?
ಶತ್ರು ರಾಷ್ಟ್ರದವರಿಂದಲೇ ಅಲ್ಲಿಯ ಗೂಢಚರ್ಯೆ – ಮೂಲದ ನಂಬಲರ್ಹತೆ?
ಮತಾಂತರವನ್ನು “ಉಗ್ರ”ವಾಗಿ ಖಂಡಿಸದೇ ಇರುವ ಏಕೈಕ ಧರ್ಮ – ಹಿಂದೂ
ನಿಮ್ಮ ದೃಷ್ಟಿಯಲ್ಲಿ ನಾನು ಹಾಗೆ ಇರಲಿ (ಬಾಯಿ ಬಡಾಯಿ); ದೇಶಸೇವೆಗೆ ಇರುವ ದಾರಿಗಳು ಮತ್ತು ಬೇಕಾಗಿರುವ ಅರ್ಹತೆಗಳ ಬಗ್ಗೆ ಸವಿಸ್ತಾರವಾಗಿ ಬರೆಯಿರಿ ಬ್ರದರ್, ಅಥವಾ ಬರೆದಿರುವ ಲೇಖನಗಳ ಬಗ್ಗೆ ಮಾಹಿತಿ ನೀಡಿರಿ… ಹೆಚ್ಚು ಉಪಯುಕ್ತ ಮಾಹಿತಿ ನಿಮ್ಮ ಲೇಖನವಿದ್ದಲ್ಲಿ ಇದ್ದಲ್ಲಿ ಖಂಡಿತ ಪಾಲಿಸುತ್ತೇನೆ!
PS: ದಯವಿಟ್ಟು ಹೀಗಳಿಕೆ ರಹಿತ ನಿಲುಮೆ(comment) ನಿಮ್ಮದಾಗಲಿ, ನಮ್ಮೊಲುಮೆಯ ‘ನಿಲುಮೆ’ಯಲಿ ನಿಮ್ಮ ಗೌರವಕ್ಕೆ ಕುಂದು ಬರದಿರಲಿ…
ನನ್ನ ಬ್ರಾಹ್ಮಣ್ಯಕ್ಕೆ ಕಾರುಣ್ಯವೂ ಇದೆ,ಕಾಠಿಣ್ಯವೂ ಇದೆ ಶರಣರೆ.
ಉತ್ತರ ಪ್ರತ್ಯುತ್ತರಗಳು ಸೇರಿ ಜಂಗಮವಾಣಿಯಲ್ಲಿ (mobile view / mobile version) ಓದುವಾಗ ಕ್ರಮವಾಗಿ ಒಂದು-ಎರಡು-ಮೂರನೆಯ ಅನಿಸಿಕೆಗಳು ಮಾತ್ರ ಕಾಣಿಸುತ್ತವೆ…! ತದನಂತರದ ಪ್ರತ್ಯುತ್ತರಗಳು ಮತ್ತು ಅನಿಸಿಕೆಗಳು (successive comments after third reply / comments) ಅಗೋಚರವಾಗಿವೆ…!
ಹೇಗಾದರೂ ಮಾಡಿ ಎಲ್ಲಾ ಅನಿಸಿಕೆಗಳು ಜಂಗಮವಾಣಿಯಲ್ಲಿ ಓದುವಾಗ ಕೂಡ ಗೋಚರವಾಗುವಂತೆ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ…!!!
ನಿಜ, ನಾನು ಸಹ ಹಾಗೇ ಯೋಚಿಸುತ್ತೇನೆ. ಆದರ,ಈ ಅಪದ್ಧಗಳನ್ನು ಹಾಗೆ ಬಿಟ್ಟರೆ ತಮ್ಮದೇ ಗೆಲುವೆಂದು ಬೀಗಿ ಬಿಡುತ್ತವೆ. ಹಾಗಾಗಿ ಈ ಬೆರಳ ಶೋಷಣೆ.
ಭಾರತದ ಸಮಾಜವನ್ನು ಸೀಳಲು ವ್ಯವಸ್ಥಿತ ಹುನ್ನಾರ ನಡೆದಿದೆಯೆಂಬುದು ನಿಮಗೆ ತಿಳಿದಿರಬಹುದು. ಇತ್ತೀಚೆಗೆ ಪೇಪರು,ಚಾನೆಲು,ಎಲ್ಲೆಲ್ಲೂ ನೋಡಿ. ಅದರದ್ದೇ ತುತ್ತ್ೂರಿ. ಹಾಗಾಗಿ ನಮ್ಮ ಪ್ರತಿಭಟನೆ ದಾಖಲು ಮಾಡುವುದು ಅವಶ್ಯಕ.
ಪ್ರೀತಿಯ ಬ್ರದರ್ ಬಸವ ಅವರೆ, “ಯೋಗ”ವನ್ನು ವಿಶ್ವದ ೧೭೦+ಕ್ಕೂ ಹೆಚ್ಚಿನ ದೇಶಗಳು ಮನಃಪೂರ್ವಕವಾಗಿ ವರ್ಷದ ಒಂದು ದಿನ ಆಚರಿಸಲು ಒಪ್ಪಿಕೊಂಡಿವೆ… ಈ ಕೆಲಸ (ವಿಶ್ವ ಮಟ್ಟದಲ್ಲಿ ‘ಯೋಗ’ಕ್ಕೆ ಮಾನ್ಯತೆ ಸಿಗುವುದು) ಮೊದಲೇ ಆಗಿದ್ದರೆ ವಿಶ್ವದೆಲ್ಲೆಡೆ ಮತ್ತಷ್ಟು ಜನ ಆರೋಗ್ಯವಂತರಾಗಿ – ನೆಮ್ಮದಿಯಾಗಿ ಇರುತ್ತಿದ್ದರು ಎನ್ನುವುದು “ವಿಶ್ವ ಆರೋಗ್ಯ ಸಂಸ್ಥೆ”ಯ ದಿಗ್ಗಜರ ಅಂಬೋಣ…!
ಅದು ಹಾಗಿರಲಿ ಬ್ರದರ್, ಈ ಸರ್ವೇಜನೋ ಸುಖಿಃನೋ ಭವಂತು ಎನ್ನುವಂತಃ ಕಾರ್ಯದಲ್ಲಿ, “ವೈದಿಕತೆಯನ್ನು ಯೋಗದ ಮೂಲಕ ಮುಸಲ್ಮಾನ-ಕ್ರಿಶ್ಚಿಯನ್-ಅಲ್ಪಸಂಖ್ಯಾತರ ಮೇಲಷ್ಟೇ ಅಲ್ಲ ಅಹಿಂದ ವರ್ಗದ ಮೇಲೂ ಹೇರುವ ಹುನ್ನಾರ” ಮತ್ತು “ನವವೈದಿಕತೆಯು ಭಾರತದ ಸಮಾಜವನ್ನು ಸೀಳಲು ವ್ಯವಸ್ಥಿತ ಹುನ್ನಾರ” ಎಂಬುದು ಎಷ್ಟರ ಮಟ್ಟಿಗೆ ಸತ್ಯ ಬ್ರದರ್?
ಈ ಮೇಲಿನ ನಿಮ್ಮ ನಿಲುವಿಗೆ ‘ವಿಶ್ವಕ್ಕೇ ಒಂದು ತೆರನಾದ ಯೋಚನೆ – ನಿಮ್ಮದೇ ತದ್ವಿರುದ್ಧ ಯೋಚನೆ’ ಎನ್ನುವ ಆಯಾಮ ಬರುವುದಿಲ್ಲವೇ ಬ್ರದರ್? ಹಾಗೆ ಬಂದರೆ ಸರಿಯೇ ಬ್ರದರ್?
ಹತ್ತು ಜನರ ಒಳಿತಿಗೆ – ಇಬ್ಬರ ತಲೆಗೆ ಪೆಟ್ಟು ಕೊಡುವುದರಲ್ಲಿ ತಪ್ಪೇನಿಲ್ಲ… (ಒಳ್ಳೆಯ ಕೆಲಸಕ್ಕೆ ಹಾದಿ ಯಾವುದಾರರೇನು? ಎಂಬರ್ಥದಲ್ಲಿ)
ಯೋಗ ಎಲ್ಲರಿಗೂ ತಲುಪುವುದಾದರೆ ಅದನ್ನು ಸಂಗ-ಸಂಸ್ಥೆ ಮಾಡಿದರೇನು – ದಾಸರು ಮಾಡಿದರೇನು – ಶೂದ್ರರು ಮಾಡಿದರೇನು – ಶರಣರು ಮಾಡಿದರೇನು? ಹಾದಿ ಬೇರೆಯದಾದರೂ ಮೂಲ ಉದ್ದೇಶ ಒಂದೇ ಅಲ್ಲವೇ?
ಸ್ವಲ್ಪ ಹೆಚ್ಚಿಗೆ ಕ್ರೆಡಿಟ್ಟು ತೆಗೆದುಕೊಂಡಿದ್ದಾರೆ; ಬಿಡಿ ಹೋಗ್ಲಿ; ಮುಂದಿನ ಸಲ ನಮ್ಮ ನಿಲುಮೆಯಿಂದಲೇ ಇಂಥಹ ಜನಸಾಮಾನ್ಯರಿಗೆ ತಲುಪುವ ಹೊಸ ಕಾರ್ಯಕ್ರಮ ಆದಾಗ (ಆಗಿದ್ದೇ ಹೌದಾದಲ್ಲಿ ಅನಂತ ಆನಂದ!) ನಾವು – ನೀವು ನಮ್ಮ-ನಿಮ್ಮ ಫೇಸ್ಬುಕ್ಕಿನಲ್ಲಿ ಕ್ರೆಡಿಟ್ ತೆಗೆದುಕೊಳ್ಳೋಣ 😉
ಏರಡು ಮೂರು ಪ್ಯಾರಾದಲ್ಲಿ ಕೇವಲ “ಒಂದೊಂದು” ವಾಕ್ಯವನ್ನೇ ಹಿಡಿದು ಪ್ರತಿಕ್ರಿಯಿಸುವುದು ಸಮಂಜಸವೆನಿಸುತ್ತಿಲ್ಲ… ಬ್ರದರ್ ಬಸವ ಅವರೆ, ಸಂಕ್ಷಿಪ್ತ ಸಾರಾಂಶಕ್ಕೆ ಪ್ರತಿಕ್ರಿಯಿಸಿದರೆ ನಾನು ನನ್ನ ಉತ್ತರ/ಮಾತು ಹೇಳಬಹುದು ನೋಡಿ…
ಮತ್ತು ಸುಖಾಸುಮ್ಮನೆ ಪರರ ನಿಂದಿಸಿದ್ದು ತಪ್ಪೆಂದು ತಿಳಿದ ಮೇಲೆ ಕ್ಷಮೆಯು – ಔಚಿತ್ಯವಾಗಿದೆ. (ಇಲ್ಲವಾದಲ್ಲಿ ನನ್ನ “ಬಾಯಿ ಬಡಾಯಿ” ಹೇಳಿಕೆಯನ್ನು ಸರಿಮಾಡಲು ಹೆಚ್ಚಿನ ದಾರಿ ತೋರಿಸಬೇಕಾಗಿ ಸವಿನಯ ವಿನಂತಿ)
ಅಜೆಂಡ (/ಉದ್ದೇಶ) ಇಲ್ಲದೆ ಕೆಲಸ ಮಾಡುವವರನ್ನು ವೈದ್ಯಕೀಯ ಜಗತ್ತಿನಲ್ಲಿ ಏನೆನ್ನುವರೆಂದು ನಿಮಗೇ ಗೊತ್ತು ಬ್ರದರ್…!
ಚೆಡ್ಡಿಯ ಉದ್ದೇಶ – ಸರ್ವೇಜನೋ ಸುಖಿಃನೋ ಭವಂತು…!
[ಚೆಡ್ಡಿಯನ್ನು ಇಷ್ಟು ಕೂಲಂಕೂಷವಾಗಿ ಗಮನಿಸುತ್ತಾ ಬಂದಿರುವ ಬ್ರದರ್ ಬಸವ ಅವರೆ, ಅವರಿಲ್ಲದಿದ್ದರೆ ಪುಂಡ-ಪೋಕರೀ ಅಹಿಂದುಗಳಿಂದ ನಿಮ್ಮ ತಾಯಿ – ತಂಗಿಯರು ಈಗಿರುವಷ್ಟು ನಿರ್ಬಯದಿಂದ ಓಡಾಡಲಾಗುತ್ತಿತ್ತೇ? ಪ್ರತಿಯೊಂದು ಸಂಘ-ಸಂಸ್ಥೆಯಿಂದ ಅನುಕೂಲ-ಅನಾನುಕೂಲ ಖಾಯಂ…! ಅನಾನುಕೂಲರಹಿತ ಸಂಗ-ಸಂಸ್ಥೆಯಂತವು ಇದ್ದರೆ ಬಿಡಿಯ ಬಿಟ್ಟು ಹೇಳಿ 🙂 ]
Alas! what this!! Your trading of charges and ugly words is as senseless as espionage!! Please stop this.
In a limited sense and considering the purpose of running a system smoothly and safely, we feel that such works (espionage etc) necessary and patriotic. But in both idealistic and larger sense they are futile, useless, inhuman and what not!! (Edward Snowden’s actions proved that ultimately they are useless and funny too!! In that sense he served a great purpose. Of course, putting his own life at risk) How long Indians remember such senseless sacrifice!! After all, why should they remember?? Ultimately that is a loss for a mother. That is the ultimate truth. That is important. If anyone (may be a leader or General or a poet….) knows the value of a mother’s tears he does not glorify this `tradition’ created by the hegemonies world over. (For most of the Indians losing Sachin’s wicket or a maggy sachette is more horrific and tragic than losing a soldier.) Rationalising or defending a mother’s loss is cruel. But unfortunately, modern governments are worse than the medieval and barbaric juntas. They spend life and money in millions. Patriotism is myth or a lie generated by the greedy poets and `bhattangis’ to make the hapless subjects to die for the cruel kings!!
ಹಲವಾರು ಮುಗ್ಧ ಜನರ – ಸೈನಿಕರ ಪ್ರಾಣಕ್ಕೆ, ಅವರ ತಾಯಂದಿರ ಆಕ್ರಂದನಕ್ಕಿಂತ ಒಬ್ಬ ದೇಶಭಕ್ತನ ಪ್ರಾಣ – ಅವನ ತಾಯಿಯ ದುಃಖ ಒಳ್ಳೆಯದಲ್ಲವೇ…?! @Devu Hanehalli
ಬಸವ ಬ್ರದರ್ ಮತ್ತಿತರ ಒಡಕು ನಡೆಯ,ನುಡಿಯೊಳಗಾಗಿ ನಡೆಯದ,ಕೂಡಲಸಂಗಮನ ಹೆಸರಿನಲ್ಲಿ ಬೇಳೆಬೇಯಿಸಿಕೊಂಡು ಬದುಕುವ
ಆಧುನಿಕ ಸಮಾಜಸುಧಾರಕರದ್ದೆಲ್ಲ ಒಂದೇ ಕುಯುಕ್ತಿ
೧. ಬಿಡಿ ಹೇಳಿಕೆ,ವಾಕ್ಯ, ಸಾಲು,ಇಲ್ಲವೇ ಪದ ಎಳೆದುಕೊಂಡು ಟೀಕಿಸುವುದು
೨.ವಿಷಯದ ಸಮಗ್ರತೆಯನ್ನು ನಿರ್ಲಕ್ಷಿಸಿ ವಿತಂಡವಾದ ಮಾಡುವುದು.
೩. ತಮ್ಮ ಸಂಕುಚಿತ ದೃಷ್ಟಿ ಕೋನದ ಒಳಗೆ ಎಲ್ಲವನ್ನೂ ನೋಡಲೆತ್ನಿಸುವುದು.
ಅದರಾಚೆಗಿನ ಎಲ್ಲವೂ ವೈದಿಕಷಾಹಿಯ ಹುನ್ನಾರ ಎನ್ನುವುದು.
ಗೂಢಚರ್ಯೆಯ ಅನಿವಾರ್ಯತೆ ಪರ್ಶ್ನಿಸಿದರು.
ಈಗ,ಅದು ಇರಬೇಕು ಆದರ ಅದಕ್ಕಾಗಿ ವ್ಯಕ್ತಿ ಗಳನ್ನು ಬಳಸಲಾಗದೆಂಬ ಅಪ್ಪಣೆ!! ಉಡಾಫೆಯ ಹೇಳಿಕೆ ಯಾರಾದರೂ ಕೊಡಬಹುದು. ಪರಿಹಾರ ಮಾತ್ರ ಕೇಳಬೇಡಿ. ಅಷ್ಟಕ್ಕಿಂತ ಕೊಟ್ಟರೆ, ಪಾಪಿಸ್ತಾನದವರನ್ನೇ ಖರೀದಿಸಬಹುದಾಗಿತ್ತು ಎಂಬ non pragmatic ವಾದ. ಇವರು ಮಾನವಾತಾ ವಾದಿಗಳು. ಯಾಕೆ ಪಾಪಿಸಗತಾನದ ಜೀವಗಳು ಜೀವಪರವಾ್ವರಿಗೆ ಕಾಣಲಿಲ್ಲವೋ?
ಚೆಡ್ಡಿಗಳನ್ನು ದೂರುವ ಇವರಿಗೆ ಅನಾಹುಗಳಲ್ಲಿ ದುಡಿದ,ಕಲ್ಯಣಿಗಳನ್ನು ಪುನರುಜ್ಜೀವನ ಗೊಳಿಸುತ್ತಿರುವ,ಮಕ್ಕಳಿಗೆ ದೇಶ ಭಾಷೆಪ್ರೇಮ ತುಂಬುವ ಅವರ ಸಕಾರಾತ್ಮಕ ಕೆಲಸ ಕಾಣುವುದೇ ಇಲ್ಲ.
ಏನಾದರೂ ಒಳ್ಳೆಯ ಕೆಲಸ ಮಾಡಿದ್ರೆ ತಾನೆ ಅದರ ಅರಿವು. ಕೊಚ್ಚೆಯಲ್ಲಿ ಬಿದ್ದ ಹುಳುಗಳಿಗೆ ಲೋಹವು ಹಾಗೇ ಅನ್ನುವ ಭ್ರಮೆ,ಮತ್ತೇನಿಲ್ಲ.
ಪಾಕಿಸ್ತಾನ ಒಂದು Islamic Republic State, ಎಂದರೆ ಇಸ್ಲಾಮಿ ಗಣರಾಜ್ಯ. ಅಲ್ಲಿಯ ಜನರಂತೆ ಇರಬೇಕು, ಅಲ್ಲಿಯ ಮಾಹಿತಿಯನ್ನು ಗೋಪ್ಯವಾಗಿ ಪಡೆಯಬೇಕು, ಮತ್ತು ಮಿಕ್ಕವರಿಗೆ ಅನುಮಾನ ಬರದಂತೆ ಇರಬೇಕೆಂದರೆ ಮುಸ್ಲಿಮನಾಗಿ ಇರಬೇಕಿತ್ತು. ಅದನ್ನು ಮಾಡಲೆಂದೇ ರವೀಂದ್ರ ಕಶ್ಯಪ್ ಗೆ ಮುಸ್ಲಿಮ್ ಹೆಸರನ್ನೂ ಐಡೆಂಟಿಟಿಯನ್ನೂ ಸೃಷ್ಟಿಸಲಾಯಿತು. ಶತ್ರು ದೇಶವೊಂದಕ್ಕೆ ಹೋಗಿ ಹೇಗೆ ಮಾಹಿತಿ ಪಡೆಯಬೇಕು, ಹೇಗೆ ವರ್ತಿಸಬೇಕು, ಗೋಪ್ಯತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದರ ಸೂಕ್ಶ್ಮ ವಿವರಗಳನ್ನು ಗುಪ್ತಚರ ಇಲಾಖೆಗೇ ಬಿಡುವುದು ಒಳ್ಳೆಯದು. ಈ ವಿಷಯಗಳಲ್ಲಿ ನಾಗಶೆಟ್ಟಿ ಶೇತ್ಕರನ (ಅಥವಾ ಮೊದ್ದು ‘ಬ್ರದರ್’ ಬಸವನ) ಘನ ಅಭಿಪ್ರಾಯಗಳನ್ನು ಕೇಳಿದರೆ, ಅದರಂತೆಯೇ ಮಾಡಬೇಕೆಂದರೆ secret operations ಎನ್ನುವ ವಿಷಯಕ್ಕೆ ಎಳ್ಳು-ನೀರು ಬಿಡುವುದೇ ಒಳ್ಳೆಯದು.
ಶರಣರ ಮಹಿಮೆ … ನಿಜವಾಗಿ ಅನಾವರಣ ಆಯ್ತ .ಪತ್ರಕೋದ್ಯಮದಲ್ಲಿರುವ ತಾವು ಪಕ್ಷಪಾತೀ ಹಳದಿ ಕಾಮಾಲೆ ರೋಘ್ರಸ್ತ ಲೇಖನಗಳನ್ನು ಪುಂಖಾನುಪುಂಖವಾಗಿ ಬರೆದಿರಬೇಕು.ತಮ್ಮ ನಿಜನಾಮ ಕಾವ್ಯ ನಾಮ,ಗೂಢಚಾರನಾಮ,ನಿಗೂಢನಾಮ ಇತ್ಯಾದಿ ಪರಾಂಬರಿಸಿ. ನನ್ನ ನಿಮ್ಮ ನಡುವೆ ಇತರ ನಾಮಗಳ್ಯಾಕೆ.ನಾನು ನನ್ನ ನಿಜನಾಮ ಕೊಟ್ಟಿರುವೆ.ತಮಗೂ ಧೈರ್ಯ ಇದ್ದರೆ ಪರಾಂಬರಿಸಿ.ಿವಿಷಯಾಂತರ ಮಾಡಿ ವೀರ ಬಸವಣ್ಣನವರ ಕುಲದಲ್ಲಿ ಹುಲಿ ಹೊಟ್ಟೆಯಲ್ಲಿ ನರಿಯಂತೆ ಹುಟ್ಟಿದ ಹುಲುಮಾನವರಾಗಬೇಡಿ ಬ್ರದರ್.
ನಾನು ಕುಹಕ ಮಾಡಿದರೂ ಸೊಂಟದ ಕೆಳಗೆ ಇಳಿದಿರಲಿಲ್ಲ ಶರಣರ ಸಾಬರೆ. ತಾವು ತಮ್ಮ ಹದ್ದುಮೀರಿ ಒದ್ದೆಯಾಗಿ ಹೋದಿರಿ.
ನಾಲಿಗೆ ಕುಲ ಹೇಳಿತು ಎನ್ನುವ ಜನಪದದ ನುಡಿಯನ್ನು ನಿಜವಾಗಿಸಿದ ಶ್ರೇಯಸ್ಸು ತಮಗೆ ಎಂದಿತು.