ಯುವಾಬ್ರಿಗೇಡ್ ನ ಲೋಕಕಲ್ಯಾ(ಣ)ಣಿ ಕಾರ್ಯ
– ಯುವಾ ಬ್ರಿಗೇಡ್
ಆಕಾಶಾತ್ ವಾಯುಃ ವಾಯೋರಗ್ನಿಃ ಅಸ್ಮೀರಾಶಃ ಅರಭ್ಯಪೃಥಿವೀಂ ಶೃಧಿವ್ಯಾ ಓಷಧಯಃ ಓಷಧಿಭ್ಯೋನ್ನಮ್ ಹಾಗಂತ ವೇದವಾಕ್ಯ ಸೃಷ್ಟಿಯ ಕ್ರಮ ಅದು. ಆಕಾಶದಿಂದ ವಾಯು ಅದರಿಂದ ಅಗ್ನಿ ಆ ಮೂಲಕ ನೀರು ಭೂಮಿ ಸಸ್ಯಗಳು ಅನ್ನ ಮತ್ತು ಕೊನೆಗೆ ಪುರುಷ. ಸೃಷ್ಟಿಯಲ್ಲಿ ನಮ್ಮದು ಕೊನೆಯ ಅವತರಣ. ನಮ್ಮ ಉಳಿವಿಗೆ ಬೇಕಾದ್ದೆಲ್ಲ ಮೊದಲಿಗೆ ನಿರ್ಮಾಣಗೊಂಡಿತು.ನಮ್ಮ ಹಿರಿಯರೂ ಭಗವಂತ ಕೊಟ್ಟಿದ್ದನ್ನೆಲ್ಲಾ ದೇವರೆಂಬಂತೆ ಪೂಜಿಸಿದರು. ವೃಕ್ಷ ಪೂಜೆ, ಭುಮಿ ಪೂಜೆ, ಯಾಗ ಯಜ್ಞ, ನದೀ ಪೂಜೆ, ಯಾವುದನ್ನು ಮಾಡಿಲ್ಲ ಹೇಳಿ? ದುರದೃಷ್ಟವೆಂದರೆ ಹೀಗೆ ಪೂಜೆಯಷ್ಟೇ ಮಾಡಿದೆವು. ಅದನ್ನು ಉಳಿಸಿಕೊಳ್ಳಬೇಕೆಂಬ ಪ್ರಜ್ಞೆ ಮಾತ್ರ ತೊರೆದುಬಿಟ್ಟೆವು.
ಅನಾಮತ್ತಾಗಿ ವೃಕ್ಷಕ್ಕೆ ಕೊಡಲಿ ಬೀಸಿದೆವು. ನಾಶದ ಮಹಾಪರ್ವ ನಡೆಯಿತು. ಭೂಮಿಗೆ ವಿಷವುಣಿಸಿದೆವು. ನೀರನ್ನು ಅತ್ಯಂತ ಕೆಟ್ಟದಾಗಿ ಬಳಸಿದೆವು. ಭುಮಿಯ ಮೇಲಣ ನೀರು ಖಾಲಿಯಾಗುತ್ತಿದ್ದಂತೆ ಕೊಳವೆ ಬಾವಿ ಕೊರೆಸಿದೆವು. ನೂರು ಇನ್ನೂರು ಐನೂರು ಎಂಟುನೂರು ಕೊನೆಗೆ ಸಾವಿರ ಅಡಿ ಆಳಕ್ಕೆ ಭುಮಿಯನ್ನು ಕೊರೆದು ಅನಾಯಾಸವಾಗಿ ನಿಮಿಷಗಳಲ್ಲಿ ನೀರನ್ನು ಮೇಲೆತ್ತಬಲ್ಲ ತಂತ್ರಜ್ಞಾನ ನಿರ್ಮಾಣಗೊಂಡಿತು. ನೀರು ಆಳದಿಂದ ಮೇಲಕ್ಕೆ ಬಂತು ನಿಜ; ಆದರೆ ಇಷ್ಟು ಆಳಕ್ಕೆ ನೀರು ಇಳಿಯಲು ಇಳಿಯಲು ನಡೆದಿರುವ ದೀರ್ಘ ಪ್ರಕ್ರಿಯೆ ನಮ್ಮವರಿಗೆ ಮರೆತುಹೋಗಿತ್ತು. ಸಲೀಸಾಗಿ ನೀರು ಆಳದಿಂದ ಮೇಲೆ ಬರುವಾಗ ಭೂಮಿಯ ಮೇಲ್ಪದರದ ನೀರನ್ನು ಕಷ್ಟಪಟ್ಟು ಉಳಿಸಿಕೊಳ್ಳುವುದು ಇಲ್ಲವಾಯ್ತು.ನೋಡನೋಡುತ್ತಲೇ ಬಾವಿಗಳು ಮುಚ್ಚಿದವು. ಕಲ್ಯಾಣಿ – ಪುಷ್ಕರಣಿಗಳು ಪಾಳುಬಿದ್ದವು. ಕೆರೆಗಳು ಆಕ್ರಾಂತವಾದವು. ಅಂತರ್ಗಂಗೆಗೆ ಹಾತೊರೆದ ಮನುಷ್ಯ ಕಣ್ಣೆದುರಿನ ಗಂಗೆಯ ಮರೆತ.
ಕಾಲ ಉರುಳಿತು. ಭೂಮಿಯಡಿಯ ನೀರು ಖಾಲಿಯಾಗುತ್ತಾ ಬಂದಂತೆ ಮಾನವ ಹೈರಾಣಾದ. ಸರ್ಕಾರದೆದುರು ಪ್ರತಿಭಟನೆಗೆ ನಿಂತ. ಆಕಾಶಕ್ಕೆ ದೃಷ್ಟಿ ನೆಟ್ಟು ಭಗವಂತನನ್ನು ದೂಷಿಸಿದ. ಇಳುವರಿ ಹೆಚ್ಚಿಸುವ ಭರದಲ್ಲಿ ಕ್ರಿಮಿನಾಶಕ ಭೂಮಿಗೆ ಸುರಿದ. ತಿನ್ನುವ ಊಟ ವಿಷವಾಯ್ತು. ಆರೋಗ್ಯ ಕಳೆದುಕೊಂಡ. ಬೀದಿಗೆ ಬಂದ. ಆತ್ಮಹತ್ಯೆ ಮಾಡಿಕೊಂಡ. ಬದುಕಲು ಮೋಸ ಮಾಡುವ ದಾರಿ ಹುಡುಕಿದ. ತಾಯಿು ಪೂಜಿಸಿದ ಭೂಮಿ ಮಾರಿದ. ದೇವರೆಂದ ದನವನ್ನು ಕಟುಕನ ಕೈಗಿತ್ತ. ಬದುಕು ಮೂರಾಬಟ್ಟೆಯಾಯಿತು. ಹಾಗಾಗಲು ಕಾರಣವೇನೆಂದು ಹುಡುಕಿದರೆ ಅದು ಜಲದ ಸೆಲೆಯೆಡೆಗೆ ಬಂದು ನಿಂತಿತು. ನೀರಿಗೆ ತೋರಿದ ಅಗೌರವದ ಶಾಪವದೆಂದು ಎಲ್ಲರೂ ಹೇಳಿದರು. ನಮಗೆ ಅರ್ಥವಾಯಿತು. ಆದರೆ ಮರಳಿ ಹೋಗುವ ಮಾರ್ಗವಿರಲಿಲ್ಲ. ಮನೆಯ ಬಳಿ ನೀರಿಂಗಿಸುವ ತೊಟ್ಟಿ ಕಟ್ಟಿದ್ದಾಯ್ತು. ಬೋರ್ ವೆಲ್ ಗೆ ನೀರು ಉಣಿಸುವ ಪ್ರಕ್ರಿಯೆಯೂ ನಡೆಯಿತು.ಈ ವಿಚಾರಗಳ ಕುರಿತಂತೆ ಅನೇಕರಿಗೆ ತಲೆಯಲ್ಲಿ ಹುಳ ಕೊರೆಯುತ್ತಲೇ ಇತ್ತು.
ಆಗಲೇ ಕಣ್ಣೆದುರಿಗೆ ಕಂಡದ್ದು ಕಲ್ಯಾಣಿಗಳು. ಯುವಾ ಬ್ರಿಗೇಡ್ ತರುಣರನ್ನು ಕಲ್ಯಾಣಿಯತ್ತ ಸೆಳೆಯುವ ಗಂಭೀರ ಮತ್ತು ಸಾಹಸೀ ಪ್ರಯತ್ನಕ್ಕೆ ಕೈ ಹಾಕಿತು. ಅಚ್ಚರಿಯೇನು ಗೊತ್ತೇ? ಅನೇಕರಿಗೆ ಕಲ್ಯಾಣಿಯ ಪರಿಚಯವೇ ಇರಲಿಲ್ಲ. ಕಲ್ಯಾಣಿ ಕಾರ್ಯಕ್ರಮವೆಂದರೆ ಸಾಮೂಹಿಕ ಕಲ್ಯಾಣ ಮಾಡುವುದೆಂದೇ ಕೆಲವರು ಭಾವಿಸಿದ್ದರೂ ಕೂಡಾ!
ತೊಟ್ಟ ಹಠವನ್ನು ಸಾಕಾರಗೊಳಿಸುವ ಪ್ರಯತ್ನ ಶುರುವಾಯ್ತು. ಮೈಸೂರಿನಲ್ಲಿ ನಡೆದ ನೀರುಳಿಸುವ ತರಬೇತಿ ಶಿಬಿರದಲ್ಲಿ ರಾಜ್ಯದೆಲ್ಲೆಡೆಯಿಂದ ತರುಣರು ಬಂದರು. ಸುದೀರ್ಘ ಚರ್ಚೆ ನಡೆಯಿತು. ನೀರು ಅದನ್ನುಳಿಸುವ ಮಾರ್ಗ ಇವುಗಳ ಕುರಿತಂತೆ ಬೆಳಕು ಚೆಲ್ಲುವಲ್ಲಿ ಐಐಎಸ್ಟಿ ಯ ವಿಜ್ಞಾನಿಗಳಿದ್ದರು, ಪತ್ರಕರ್ತರಿದ್ದರು, ಚಳವಳಿಯ ಕಾರ್ಯಕರ್ತರೂ ಇದ್ದರು! “ತರುಣ ಶಕ್ತಿ ತಣಿಯಲಿ ಪೃಥ್ವಿ” ಯೋಜನೆಗೆ ಚಾಲನೆ ದೊರೆಯುತ್ತಿದ್ದಂತೆ ಗತಿಯೂ ತೀವ್ರವಾಯ್ತು. ಕಲ್ಯಾಣಿಯ ಹುಡುಕಾಟ, ಸ್ವಚ್ಛತೆ ಭರದಿಂದ ಸಾಗಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆಯಲ್ಲಿ ಕನಿಷ್ಠ ಐದು ದಶಕಗಳಿಂದ ಮಾಯವಾಗಿದ್ದ ಕಲ್ಯಾಣಿಯನ್ನು ಗುರುತಿಸಲಾಯ್ತು. ಮೇ 1 ರ ಕಾರ್ಮಿಕರ ದಿನದಂದು ಸುತ್ತಲೂ ಬೆಳೆದುಕೊಂಡಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವುದರೊಂದಿಗೆ ಕೆಲಸ ಆರಂಭವಾಯ್ತು. ಅಲ್ಲಿಂದಾಚೆಗೆ ಮೂರ್ನಾಲ್ಕು ವಾರಾಂತ್ಯಗಳ ಕೆಲಸ. ಕನಿಷ್ಠ 25 ರಿಂದ 30 ಟ್ರ್ಯಾಕ್ಟರುಗಳಷ್ಟು ಕಲ್ಯಾಣಿಯಿಂದ ಹೊರಹಾಕಲ್ಪಟ್ಟಿತು. ನೋಡುವ ಜನರ ಕಣ್ಣಿಗೆ ಹಬ್ಬ. ಕೆಲಸ ಮಾಡುತ್ತಿದ್ದ ಕಾರ್ಯಕರ್ತರ ಮೈ – ಕೈ ಚಿಂದಿ. ಹಂತಹಂತವಾಗಿ ಕಲ್ಯಾಣಿ ತೆರೆದುಕೊಳ್ಳಲಾರಂಭಿಸಿತು. ಒಂದೊಂದೇ ಮೆಟ್ಟಿಲು ಕಾಣಲಾರಂಭಿಸಿತು. ಸಮರೋಪಾದಿಯ ಕೆಲಸದ ನಂತರ ಕಲ್ಯಾಣಿಗೆ ಮರುಸ್ವರೂಪ ದೊರೆಯಿತು. ಅದೇ ದಿನ ಭೋರೆಂದು ಸುರಿದ ಮಳೆಗೆ ಅರ್ಧದಷ್ಟು ಕಲ್ಯಾಣಿಯಲ್ಲಿ ನೀರು ತುಂಬಿ ಕಾರ್ಯಕರ್ತರ ಹರ್ಷಕ್ಕೆ ಪಾರವೇ ಇಲ್ಲದಂತಾಯ್ತು.
ಉತ್ತರ ಕರ್ನಾಟಕಕಕ್ಕೆ ನಿಜವಾದ ಕಲ್ಯಾಣಿಯ ಕಿಡಿ ಹೊತ್ತಿಬಿಟ್ಟಿತ್ತು. ರಾಯಚೂರಿನ ತರುಣರು ಅತ್ಯಂತ ಕೊಳಕಾಗಿದ್ದ ಕಲ್ಯಾಣಿಯ ಆಳಕ್ಕೆ ಇಳಿದು ಸ್ವಚ್ಛತೆಗೆ ತೊಡಗಿದರು. ಕಾಲೇಜಿನ ವಿಧ್ಯಾರ್ಥಿಗಳೂ ಶ್ರಮದಾನ ಮಾಡಿದ್ದು ವಿಶೇಷವಾಗಿತ್ತು. ಬಳ್ಳಾರಿಯ ಮೂರು ತಾಲ್ಲೂಕುಗಳಲ್ಲಿ ಮೂರು ಕಲ್ಯಾಣಿಗಳ ಸ್ವಚ್ಛತೆಯ ಸಾಹಸ. ಆರಂಭದ ಕೆಲವು ದಿನಗಳ ಕಾಲ ಕಲ್ಯಾಣಿಯೇ ದೊರೆಯದೇ ಕಂಗಾಲಾಗಿದ್ದ ಜಿಲ್ಲೆ ಅದು. ಕಲ್ಯಾಣಿ ಹುಡುಕಿಕೊಟ್ಟವರಿಗೆ ಬಹುಮಾನವನ್ನೂ ಘೋಷಿಸಿತ್ತು ಬಳ್ಳಾರಿ ಯುವಾ ಬ್ರಿಗೇಡ್. ಈಗ ಕೆಲಸಕ್ಕಿಳಿದ ಮೇಲೆ ಅರೆಕ್ಷಣವೂ ಸುಮ್ಮನಿರದೇ ದುಡಿಯಲಾರಂಭಿಸಿದರು. ಸಂಡೂರಿನಲ್ಲಿ ಕಲ್ಯಾಣಿಯ ಆಳದಲ್ಲಿ ಧ್ವನಿವರ್ಧಕವನ್ನಿಟ್ಟು ದೇಶಭಕ್ತಿಗೀತೆ ಕೇಳುತ್ತಾ ಕಾರ್ಯಕರ್ತರು ಸ್ವಚ್ಛತೆಯಲ್ಲಿ ತೊಡಗಿದ್ದು ನೋಡುಗರ ಕಣ್ಮನ ಸೆಳೆದಿತ್ತು. ಬಳ್ಳಾರಿಯಲ್ಲಿಯೇ ಆರು ಜನ ಸಾಧುಗಳು ಈ ಕಾರ್ಯಕ್ಕಿಳಿದು ಜನರ ಹುಬ್ಬು ಮೇಲೇರುವಂತೆ ಮಾಡಿಬಿಟ್ಟಿದ್ದರು.
ಗದಗಿನ ರಾಚೋಟೇಶ್ವರ ದೇವಸ್ಥಾನದ ಕಲ್ಯಾಣಿಯ ಆಳವೇ 70 ಅಡಿ. ಅದರ ಆಯ್ಕೆಯೇ ಸಾಹಸದ ಪರಮಾವಧಿ. ಕಾರ್ಯಕರ್ತರು ಅಲ್ಲಿ ಸ್ವಚ್ಛ ಮಾಡಲು ನಡೆಸಿದ್ದು ಬರಿಯ ಸ್ವಚ್ಛತಾ ಆಂದೋಲನವನ್ನಲ್ಲ, ಸ್ವಚ್ಛತೆಯ ಸಾಹಸ! ಹುಬ್ಬಳ್ಳಿಯ ತರುಣರು ಕಲ್ಯಾಣಿ ಸಿಗದೇ ಕೆರೆಯೊಂದರ ಆವರಣವನ್ನು ಸ್ವಚ್ಛಗೊಳಿಸಿ ತಮ್ಮ ಜಲಪ್ರೇಮವನ್ನು ಮೆರೆದದ್ದು ವಿಷೇಶವಾಗಿತ್ತು. ಹೊನ್ನಾವರದವರು ಸದಾ ಹರಿಯುವ ರಾಮತೀರ್ಥದ ಆವರಣವನ್ನು ಸ್ವಚ್ಛ ಮಾಡಿ ಜನಮನ್ನಣೆಗಳಿಸಿದರು. ಮಂಡ್ಯದಲ್ಲಿ ಕಾಣುವುದೇ ಇಲ್ಲವಾಗಿದ್ದ ಮುನ್ನೂರು ವರ್ಷಗಳ ಹಳೆಯ ಕಲ್ಯಾಣಿ ಕಾರ್ಯಕರ್ತರ ಶ್ರಮದಿಂದ ಪುನರುಜ್ಜೀವನಗೊಂಡಾಗ; ಊರಿನ ಜನರಿಗೆ ಬಿಡಿ ಸ್ವತಃ ಕೆಲಸ ಮಾಡಿದವರೂ ಗಾಬರಿಗೊಂಡಿದ್ದರು. ಇಡಿಯ ಕಲ್ಯಾಣಿಯೇ ಜೀವಂತಗೊಂಡು ಉಸಿರಾಡುತ್ತಿತ್ತು. ಮೈಸೂರು, ಶಿವಮೊಗ್ಗ, ಡಾಬಸ್ ಪೇಟೆ, ಜಿಗಣಿ, ಗೊಟ್ಟಿಗೆರೆ, ವಿಜಯಪುರ, ಕಲ್ಬುರ್ಗಿ,ಕೊಪ್ಪಳ ಎಲ್ಲೆಡೆ ನೂರಾರು ಕಾರ್ಯಕರ್ತರ ಮಿಲನ, ಹಬ್ಬದ ವಾತಾವರಣ ನಡೆದೇ ಇತ್ತು. ಚಿಕ್ಕಬಳ್ಳಾಪುರದಲ್ಲಿ ಕಲ್ಯಾಣಿ ಸ್ವಚ್ಛತೆಯ ನಂತರ ಅದೇ ಜಾಗದಲ್ಲಿ ಕಾರ್ಯಕರ್ತನೊಬ್ಬನ ಹುಟ್ಟಿದ ಹಬ್ಬದ ಆಚರಣೆಯೂ ನಡೆದುಹೋಯಿತು.
ಇದಕ್ಕೆಲ್ಲಾ ಕಿರೀಟಪ್ರಾಯವಾದುದು ಗೋವೆಯಲ್ಲಿ ವಿದ್ಯಾರಣ್ಯರು ಕಟ್ಟಿದ ಮಾಧವ ತೀರ್ಥವೆಂಬ ಕಲ್ಯಾಣಿಯನ್ನು ಅಲ್ಲಿನ ಯುವಾ ಬ್ರಿಗೇಡ್ ಮಂದಿ ಸ್ವಚ್ಛಗೊಳಿಸಿದ್ದು. ಈ ಕಲ್ಯಾಣಿಯಲ್ಲಿ ಮತಾಂತರಿತ ಹಿಂದೂಗಳನ್ನು ಮಾತೃಧರ್ಮಕ್ಕೆಳೆದು ತರುವ ಪ್ರಯತ್ನ ಮಾಡಲಾಗುತ್ತಿತ್ತಂತೆ!
ಕಲ್ಯಾಣಿ ಸ್ವಚ್ಛತೆ ಮಾಡುವ ಯೋಜನೆ ಬಲು ದೊಡ್ಡದು ಮತ್ತು ಕಡುಕಷ್ಟದ್ದೆಂದು ಆರಂಭದಲ್ಲಿ ಖಂಡಿತಾ ಅನ್ನಿಸಿತ್ತು. ಆದರೆ ದಿನಗಳೆದಂತೆ ಮಾಡುವ ಕೆಲಸ ಆನಂದದಾಕವಾಯ್ತು. ಉಡುಪಿಯ ಕಾರ್ಯಕರ್ತರು ತಡವಾಗಿ ಅಖಾಡಕ್ಕಿಳಿದರೂ 800 ವರ್ಷಗಳಷ್ಟು ಹಳೆಯ ಕಲ್ಯಾಣಿಗೆ ಕೈ ಹಾಕಿದರು. ಅದಕ್ಕೆ ಹೊಂದಿಕೊಂಡಿದ್ದ ದೇವಸ್ಥಾನದ ಅರ್ಚಕರು ಆನಂದಭಾಷ್ಪ ಸುರಿಸುತ್ತಾ ತನ್ನ ಇಳಿವಯಸ್ಸಿನಲ್ಲಿ ಕಂಡ ಈ ದೃಶ್ಯದಿಂದ ರೋಮಾಂಚಿತರಾಗಿದ್ದರು.
ಅನೇಕರು ಬಗೆಬಗೆಯ ಪ್ರಶ್ನೆ ಕೇಳಿದ್ದರು. ಕಲ್ಯಾಣಿ ಸ್ವಚ್ಛ ಮಾಡುವುದರಿಂದ ಲಾಭವೇನು? ಅಂತ. ಪ್ರತಿಯೊಂದರಲ್ಲೂ ಲಾಭ ಹುಡುಕುವುದು ನಮ್ಮೆಲ್ಲರಿಗೂ ಚಟದಂತಾಗಿಬಿಟ್ಟಿದೆ. ಸತ್ಯ ಹೇಳಬೇಕೆಂದರೆ ಕಲ್ಯಾಣಿಯ ಸ್ವಚ್ಛತೆಯಲ್ಲಿ ನಮಗೆ ಲಾಭವಿದೆ. ಆದರಿದು ಅಲ್ಪಕಾಲದ ಕೆಲವರಿಗೆ ಮಾತ್ರ ದಕ್ಕುವಂಥದ್ದಲ್ಲ. ಇದು ಶಾಶ್ವತವಾದ ಮತ್ತು ಇಡಿಯ ಮನುಕುಲಕ್ಕೆ ದೊರಕುವ ಲಾಭ. ಅಲ್ಲದೇ ಮತ್ತೇನು? ನಮ್ಮ ಹಿರಿಯರು ಮಂದಿರಕ್ಕೆ ಹೊಂದಿಕೊಂಡಂತೆ ನೀರಿಂಗಿಸುವ ಕಲ್ಯಾಣಿಗಳನ್ನು ಕಟ್ಟಿಸಿ ಅಂತರ್ಜಲವನ್ನು ಪುಷ್ಟಿಗೊಳಿಸಿದರೆ ನಾವು ಅವುಗಳನ್ನು ಮುಚ್ಚಿ ರಾಕ್ಷಸರಾಗುತ್ತಿದ್ದೇವಲ್ಲ. ಕೊನೆಯ ಪಕ್ಷ ಈ ಪೀಳಿಗೆಯ ತರುಣವರ್ಗ ಆ ಪಟ್ಟದಿಂದ ಮುಕ್ತಗೊಂಡು ಹೊಸ ಕಲ್ಯಾಣಿಯನ್ನು ಕಟ್ಟಲಾರೆವು ಸರಿ; ಆದರೆ ಹಳೆಯದ್ದನ್ನು ಉಳಿಸಬಲ್ಲೆವು ಎಂದು ಎದೆತಟ್ಟಿ ಹೇಳಿತಲ್ಲ. ಅದು ವಿಶೇಷ.
ಈ ಯಾತ್ರೆ ಇಲ್ಲಿಗೆ ನಿಲ್ಲುವುದಿಲ್ಲ. ಬಾಯಾರಿದ ಭೂಮಿಯನ್ನು ತಣಿಸಬೇಕೆಂಬ ನಮ್ಮ ಸಾಹಸಕ್ಕೆ ವರುಣದೇವ ಭರಪೂರ ಮಳೆಯಾಗಿ ಸುರಿದ. ಈಗ ನಮಗೆ ಸವಾಲಿದೆ. ಬರಡಾಗಿರುವ ನೆಲಕೆ ಹಸಿರು ಕೊಟ್ಟು, ತಣಿದ ಭೂಮಿ ಉಸಿರಾಡಲು ಅನುವು ಮಾಡಿಕೊಡುವ ಪ್ರಯತ್ನ ಶುರುವಾಗಲಿದೆ. ಸಸ್ಯಶ್ಯಾಮಲೆಯ ಹೆಸರಿನಲ್ಲಿ!
ರಾಜ್ಯಾದ್ಯಂತ ಕೆರೆಗಳ ಬದಿಯಲ್ಲಿ ಗದ್ದೆಯ ಬದುವಿನಲ್ಲಿ, ಸ್ಮಶಾನದ ಆವರಣಕ್ಕೆ, ಗೋಮಾಳದ ಸುತ್ತಲೂ, ಎಲ್ಲೆಲ್ಲೂ ಪರಿಸರಕ್ಕೆ ಪೂರಕವಾದ ಗಿಡ ನೆಡುವ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಊರಿಗೊಂದು ಅರಳಿ ನೆಟ್ಟು ಉಸಿರು ಮರಳಿ ಕೊಡುವ ಸಂಕಲ್ಪ ಮಾಡಿದ್ದೇವೆ.ಹೌದು. ಹೊಸಪೀಳಿಗೆ ಎದ್ದಿದೆ. ಜಾಡ್ಯವನ್ನು ಕಿತ್ತೆಸೆದು ಜಾಗೃತವಾಗಿ ನಿಂತಿದೆ. ವಿಶ್ವಗುರು ಭಾರತ ನಿರ್ಮಾಣಕ್ಕೆಂದು ದೇಹದ ಹನಿ ಹನಿ ಬೆವರನ್ನು ಸುರಿಸಲು, ರಕ್ತದ ಕಣಕಣ ಬಸಿಯಲು ಸಿದ್ಧವಾಗಿದೆ. ಅಚ್ಛೇದಿನ್ ಸನಿಹದಲ್ಲಿಯೇ ಇದೆ.
ಚಿತ್ರಕೃಪೆ : ವಿಜಯವಾಣಿ
Nice work and report.
ಈ ವಿಷಯ ನಿಜವಾಗಿಯೂ ನಡೆದಿದ್ದರೆ ಇದಕಿಂತಲೂ ವಿಷೇಶ ಸುದ್ದಿ ಇನ್ನೊಂದು ಇಲ್ಲ
ಖಂಡಿತವಾಗಿ ನಡೆದಿದೆ ಮಲ್ಲಪ್ಪನವರೇ
Excellent work,however what needs to be done is continuous follow up.In the not very distant past these step wells were responsible for Transmission of Guine a worm(Naru unnu) in no of states like karnataka,And had a,Maharashtra Rajasthan etc.some corrective measures need to be taken as a follo up action eg.Humans should not allowed to gain direct physical access to water bodies. provide puppies/pumping of water where Electricity is not an issue
All the best, keep up good work
ಸುದರ್ಶನ ಗುರುರಾಜರಾವ್ ವಿರಚಿತ ‘ಕುಚೇಷ್ಟಾಸುರ’ ಪುರಾಣವು
‘ನಿಲುಮೆ’ ಯೆಂಬ ಸಕಾರಾತ್ಮಕ ಆಲೋಚನೆಗಳ ಹವಿಸ್ಸನ್ನು ಅರ್ಪಿಸಿ ಸುಭದ್ರಾ ಸಮಾಜವನ್ನು ಕಟ್ಟುವ ಯಜ್ಞದಲ್ಲಿ , ಪುರಾಣ ಪುಣ್ಯಕಥೆಗಳಲ್ಲಿ ಬರುವಂತೆ ಹಾವಿನ ಹೆಸರಿನ ರಾಕ್ಷಸನೊಬ್ಬ ಬಂದು ಯಜ್ಞದ ದಿಕ್ಕು ತಪ್ಪಿಸುವ ಹಾವಳಿ ಮಾಡತೊದಗಿದ. ಸದಾ ಹುಳುಕು ಎಂಬ ಹುಳುಗಳನ್ನೇ ಮೇಯುತ್ತ ಮೆರೆದಿದ್ದ ಕುಚೇಷ್ಟೆಗೆ ಹೆಸರಾದ ಈ ನಾಗನನ್ನು ಹಲವರು ಹಲವು ಸಾಮ,ದಾನ ಭೇದಗಳಿಂದ ದಾರಿಗೆ ತರಲು ಯತ್ನಿಸಿದರು ಸಾಧ್ಯವಾಗದೆ ಹೋಯಿತು. ತನ್ನ ಮಾತು ಧೋರಣೆ ರೂಪಗಳನ್ನು ಬದಲಾಯಿಸುತ್ತಿದ್ದ ಇವನನ್ನು ಕಟ್ಟಿಹಾಕುವುದು ಸಾಧ್ಯವಿಲ್ಲದಾಯಿತು. ವೀರಜಂಗಮ ಎಂಬ ಸ್ವಪ್ರದಾನ ಮಾಡಿಕೊಂಡ ಬಿರುದನ್ನೂ ಧರಿಸಿ ಬಂದಾಗ ಒಮ್ಮೆ ಕಡೆಗೆ WITIAN ಎನ್ನುವವರು ತಮ್ಮ ತೀಕ್ಷ್ಣವಾದ ಈಟಿಯಿಂದ ತಿವಿಯಲು ನಾಗನು ರಕ್ತ ಕಾರುತ್ತ ಧ್ವಂಸವಾಗಿ ಹೋದನು.
ಆದರೇನು, ರಕ್ತಬೀಜನ ವಂಶಸ್ಥನಾದ ಕಾರಣ, ಅತನ್ನಂತೆಯೇ ಇದ್ದ ಇನ್ನೊಂದು ಜೀವಿಯನ್ನು ಮಹಿಷಾಸುರನ ತಮ್ಮನಂತೆ ಬಸವನ ಸ್ವರೂಪ ಧರಿಸಿ ‘ಬ್ರದರ್ ಬಸವ’ ಎಂಬ ಉಪದ್ರವಿಯಾಗಿ ಜನಿಸಿದನು. ಪ್ರಾಣಿಸ್ವರೂಪದಿಂದ ‘ನಿಲುಮೆ’ ಸದಾಶಯಗಳಿಂದ ಹಸಿರಾಗಿ,ಸಮಾಜದಲ್ಲಿ ವೈಚಾರಿಕತೆ ಎಂಬ ಹೊಸ ಆಮ್ಲಜನಕವನ್ನೇ ತುಂಬುತ್ತಿದ್ದ, ಎಂಬ ಹುಲುಸಾಗಿ ಬೆಳೆದಿದ್ದ ಹೊಲದಲ್ಲಿ ನುಗ್ಗಿ ಬೀದಿಬಸವನಂತೆ ಧ್ವಂಸ ಮಾಡತೊಡಗಿದನು.ಇವನ ಉಪ್ಟಳವನ್ನು ತಾಳಲಾಗದೆ ಹೆಗಡೆ ಅವರು ಸಾಮ ದಾನ ಭೇದಗಳನ್ನು ಬಳಸಿದರು. ಆದರೆ ಸುದರ್ಶನ ಮತ್ತು WITIAN ಇಬ್ಬರೂ ಮೊದಲಿನಿಂದಲೇ ದಂಡವನ್ನು ಬೀಸಿದರು. ಬಸವ ತನ್ನ ಮೇಯುವಿಕೆಯನ್ನು ಮುಂದುವರಿಸಿತು. ಕಡೆಗೆ ಹೊಲದವರನ್ನೇ ಗುಮ್ಮಲು ಬಂದಿತು. ಅದನ್ನು ಕೊಂಬು ಹಿಡಿದು ನೆಲಕ್ಕೆ ಅಪ್ಪಳಿಸುವಲ್ಲಿ ತನ್ನ ನಿಜಸ್ವರೂಪವನ್ನು ತೋರುತ್ತಾ , ಕೆಟ್ಟ ಕೊಳಕು ಮಾತುಗಳನ್ನು ಬಡಬಡಿಸುತ್ತಾ ,ತನ್ನೆಲ್ಲ ಹೊಲಸನ್ನು ಕಾರಿಕೊಳ್ಳುತ್ತಾ ನಿರ್ನಾಮವಾಗಿ ಹೋಯಿತು. .
ಆದರೇನು, ಇಂತಹ ರಕ್ತಬೀಜರ ಗುರು ಒಬ್ಬರು ಇದ್ದಾರೆ. ಅವರು ದ್ವೇಷ-ಹಗೆ -ವಿಶ್ಯಾಂತರ- ದ್ರೋಹ-ಕುಹಕ – ನಕಾರತ್ಮಕತೆ-ಎಂಬ ಆರು ಮಂತ್ರಗಳಿಂದ ಮತ್ತೆ ಜೀವಕೊಟ್ಟರು. ಅದು BB ಎಂಬ ಭಯಾನಕ ಬೌ-ಬೌ ಎಂಬುವ ಸೀಳುನಾಯಿಯಾಗಿ ಜನ್ಮತಾಳಿತು. ಬರೀ “ಬಂಡವಾಳವಿಲ್ಲದ ಬಡಾಯಿ”ಯನ್ನು ಕೊಚ್ಚಲು ತನ್ನ BB ಎಂಬ ನಾಮಧೇಯವನ್ನು ಬಳಸಿಕೊಂಡಿತು. ತಾನು ಏನನ್ನೂ ಕಿಸಿಯದಿದ್ದರೂ, ಯುವಾ ಬ್ರಿಗೆಡಿನ ದೇಶಪ್ರೇಮಿ ತರುಣರಿಗೆ ಪಾರ್ಥೇನಿಯುಮ್ ಕಿತ್ತಬೇಕೆಂತಲೂ, ದೇಶಪ್ರೇಮ, ಸಂಸ್ಕೃತಿ-ಪರಂಪರೆಯ ಮೇಲೆ ಯಾವ ಗೌರವವೂ ಇಲ್ಲದೆ ಕೆಲಸ ಮಾಡಬೇಕೆಂತಲೂ ಕರೆಕೊಟ್ಟಿತು.
‘ಚಿತ್ತ ಹುತ್ತಗಟ್ತದೆ ಕವಿತೆ ಕೆತ್ತಲಾಗದೆಂಬ’ ಸಾರ್ವಕಾಲಿಕ ಸತ್ಯವಾದ ಕವಿವಾಣಿಯನ್ನು ತಿಳಿಯದೇ, ದೇಶಪ್ರೇಮ ಎಂಬುದು ಸಂಸ್ಕೃತಿಯ ಮೂಲಕ ಕಿಚ್ಚು -ಕೆಚ್ಚು ಕಟ್ಟದೆ ಸೇವೆ ಎಂಬ ಕುಡಿ ಮೊಳೆಯದು ಎಂಬ ಸತ್ಯವನ್ನು ತಿಳಿಯದೆ ಆಂಗ್ಲಭಾಶೆಯಲ್ಲೇ ಅರಚಲು ತೊಡಗಿತು.ಇತರರು ಇಂಗ್ಲೀಶ್ ಬಳಸಿದಾಗ ಓದಲು ಆಗದೆಂದು ತಗಾದೆ ತೆಗೆಯುವ ತಾನೇ ಅದನ್ನು ಮುರಿದದ್ದು ಇದರ ಎಡಬಿಡಂಗಿ-ಆಶಾಢಭೂತಿತನಕ್ಕೆ ತಾನೇ ಸಾಕ್ಷಿ ಒದಗೈಸಿತು. ಇಂತಹ ಉಪದ್ರವಗಳನ್ನು ಹಣಿದು ಅನುಭವ ಇರುವ ವೀರರು ಬರಲಿದ್ದಾರೆ ಎಂಬುದನ್ನು ಪ್ರಪಂಚ ಕಾಡು ನೋದಲಿದೆ. ಇದಕ್ಕೆ ಹೊಸ ಅವತಾರ ತಾಳುವ ಅವಶ್ಯಕತೆ ಇದೆಯೋ ಎಂಬುದನ್ನು ಧರ್ಮ ರಕ್ಷಕನು ಚಿಂತಿಸುತ್ತಿರುವಲ್ಲಿ ನಾಗಾಸುರನ ರಾಮಜಾನ ಪುರಾಣವು ಮಧ್ಯಂತರ ವಿರಾಮಕ್ಕೆ ಬಂದುದು
ನಮ್ಮ ಯುವಜನತೆ ವಾಟ್ಸ್ ಯಾಪ್, ಕಂಪ್ಯೂಟರ್ ಗೇಮ್, ಪಬ್ಬು ,ಕ್ಲಬ್ಬು,ಮಾಲು, ಅಲ್ಲಿನ ಸಿನಿಮಾ ಮತ್ತು ಗೇಮ್ ಗಳು, ಸದಾ ಕಿವಿಯಲ್ಲಿ ವಾಯರ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಬೆಳಗಿನ ವರೆಗೆ ಎಚ್ಚರಿದ್ದು ಸಂಜೆವರೆಗೆ ಬಿದ್ದುಕೊಳ್ಳುತ್ತಾ ಚಡ್ಡಿ ಹಾಕಿಕೊಂಡು ಮಜಾ ಉಡಾಯಿಸ್ತಾ ಇರೋರು ಮಾತ್ರ ಅಂದುಕೊಂಡಿದ್ದೆ. ನಿಜವಾಗಿಯೂ ಇಂಥ ತರುಣರೂ ಇದ್ದಾರಾ?? ಯಪ್ಪಾ ತುಂಬಾ ಆಚ್ಚರಿಯಾಗ್ತಿದೆ ನಂಗೆ. ಸೈನಿಕರಿಗಿಂತ ನೀವೂ ಒಂದು ಕೈ ಮೇಲೇನೇ ಇದ್ದೀರಿ. ಮುಂದುವರಿಸಿ. ನಿಮಗೆ ನಮ್ಮ ಅನಂತಾನಂತ ಕೃತಜ್ಞತೆಗಳೊಂದಿಗೆ ಅನಂತ ಶುಭ ಹಾರೈಕೆಗಳೂ ಕೂಡ.