ಟಿಂಗ್-ಟಾಂಗ್ : 1
– ವಿಶ್ವ ಸುಂಕಸಾಳ
೧. ಕೆಲವರು ಸತ್ಯವನ್ನು ಇಷ್ಟಪಡುತ್ತಾರೆ. ಯಾವತ್ತೂ ಸತ್ಯವನ್ನೇ ಹೇಳಬೇಕೆಂದೂ ಬಯಸುತ್ತಾರೆ.ಆದರೆ ಬಹಿರಂಗವಾಗಿ ಯಾವತ್ತೂ ಸತ್ಯವನ್ನೇ ಹೇಳುತ್ತಾ,ಒಪ್ಪಿಕೊಳ್ಳುತ್ತಾ ಹೋದರೆ ಮೋದಿ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗುವ ಭಯ..!!
೨. ನೀವು ತಟಸ್ಥ ಬರಹಗಾರರೆಂದು ಬಿಂಬಿಸಿಕೊಳ್ಳಬೇಕೆಂದಿದ್ದರೆ ಯಾವುದೇ ವಿಷಯದ ಮೇಲೆ ಬರೆದ ಬರಹವಾದರೂ ಸರಿ, ಕೊನೆಯಲ್ಲಿ ಮೋದಿಯನ್ನು ಟೀಕಿಸಿದರಾಯಿತು.
೩. ಸಲಹೆಯನ್ನು ಯಾರು ಬೇಕಾದರೂ ಕೊಡುತ್ತಾರೆ. ಆದರೆ ಎಲ್ಲರಿಗೂ ಸರ್ಕಾರೀ ಕಾರು, ಜನರ ದುಡ್ಡಿನಲ್ಲಿ ಮೋಜು ಮಾಡುವ ಸೌಲಭ್ಯಗಳೆಲ್ಲ ಸಿಗುವುದಿಲ್ಲ.
೪. ಕವಿಗಳಲ್ಲೂ ಕೆಲವರು ಸಜ್ಜನ ಕವಿಗಳಿರುತ್ತಾರೆ. ಎಲ್ಲರೂ ಜೀವಪರಕವಿಗಳಲ್ಲ.
೫. ಸೋಮಾರಿಗಳಿಗೆ ಮಾತ್ರ ಯೋಗದ ಅಗತ್ಯವಿದೆಯೆಂದು ನುಡಿದವರು ಕೊನೆಗೂ ಅದನ್ನು ಸ್ವತಃ ಮಾಡುವ ಮೂಲಕ ತಮ್ಮ ಮಾತನ್ನು ಸಾಬೀತುಪಡಿಸಿದರು.
೬. ಕೆಲವರು ಮುಂದಿನ ಐದು ವರ್ಷ ಟೀಕಾಕಾರರಾಗಿರಬೇಕೋ ಅಥವಾ ಹೊಗಳುಭಟರಾಗಿರಬೇಕೋ ಎಂಬುದನ್ನು ಚುನಾವಣೆ ನಿರ್ಧರಿಸುತ್ತದೆ.
೭. ಕೆಲವರ ಬಾಯ್ ಮೊಸರಾಗಲು ಕೈ(ಕೆ)ಸರ್ ಸಹಾಯಕ್ಕೆ ಬರುತ್ತದೆ.
೮. ನಕ್ಸಲರನ್ನು, ಭಯೋತ್ಪಾದಕರನ್ನು ಎನ್ ಕೌಂಟರ್ ನಲ್ಲಿ ಕೊಂದಾಗ ಯಾರಿಗೆ ಉರಿಯುತ್ತೋ ಅವರೇ ’ಮಹಾನ್ ಮಾನವತಾವಾದಿಗಳು’
೯. ಚಿಕನ್, ಮಟನ್ ತಿನ್ನುತ್ತಾ ಎಲ್ಲ ಪ್ರಾಣಿಗಳನ್ನೂ ಅವುಗಳ ರುಚಿಯಾಧಾರದಲ್ಲಿ ಮನಸಿನಲ್ಲೇ ಹೊಗಳುತ್ತಾ ಕವಿತೆ ಬರೆಯುವವನೇ ಜೀವಪರ ಕವಿ.
೧೦. ಬರೆದು ಲಾಯಕ್ಕಿಲ್ಲವೆಂದು ಹರಿದು ಕಸದ ಬುಟ್ಟಿಗೆ ಹಾಕಿದ ಕವಿತೆ ಮಣ್ಣಿನಲ್ಲಿ ಕರಗುವ ಮುನ್ನ ಎತ್ತಿಕೊಂಡರೆ ಆ ಕವಿತೆಯಲ್ಲಿ ನೆಲದ ವಾಸನೆಯಿರುತ್ತದೆ