ಇಲ್ಲಿ ಒಂದಿಷ್ಟು ಹಾಸ್ಯ, ಹತಾಶೆ, ನೋವು, ಸಿಟ್ಟು, ಸೆಡವು, ಪ್ರಚಲಿತ ವಿದ್ಯಮಾನಗಳು, ಕಥೆ-ವ್ಯಥೆಗಳು, ಇತಿಹಾಸ, ದೇಶ, ಭಾಷೆ,ಧರ್ಮ, ಸಿನೆಮ, ಪುಸ್ತಕ ಪರಿಚಯ ಎಲ್ಲ ಸಿಗುತ್ತದೆ. ನಮ್ಮ ನಮ್ಮ ಅಭಿಪ್ರಾಯಗಳನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಬೇಕೆಂಬ ಆಶಯವೆ ಈ ನಿಲುಮೆ. ನಿಲುಮೆಯೊಳಗೆ ಒಂದು ಸುತ್ತು ಹೊಡೆದು ಬನ್ನಿ. ನಿಮ್ಮ ಅಭಿಪ್ರಾಯ ತಿಳಿಸಿ. ಸಾಧ್ಯವಾದಲ್ಲಿ ನಿಮ್ಮ ಒಂದು ಲೇಖನ ಯಾ ಕವನಗಳನ್ನು ನಮಗೆ ಕಳುಹಿಸಿದರೆ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೂ ಸೇರಿದಂತಾಗುತ್ತದೆ. ನಿಮ್ಮ ಲೇಖನಗಳನ್ನು nilume@sify.com ಅಥವಾ baraha@nilume.net ಇ-ಮೇಲ್ ವಿಳಾಸಕ್ಕೆ ಕಳುಹಿಸಿ. ಹನಿಹನಿ ಸೇರಿದರೆ ಹಳ್ಳ- ತೆನೆತೆನೆಗೂಡಿದರೆ ಬಳ್ಳ ಅನ್ನೋ ಮಾತಿದೆಯಲ್ಲ ಹಾಗೆಯೇ, ‘ನಿಲುಮೆ’ಯನ್ನ ಕನ್ನಡ ಸಾಹಿತ್ಯ ಪ್ರಪಂಚದ ಮನೆ ಮಾತಾಗಿಸುವ ಬನ್ನಿ. ಈ ನಿಲುಮೆ ಬರಿ ನಮ್ಮದಲ್ಲ ಇದು ನಿಮ್ಮದು, ಪ್ರತಿಯೊಬ್ಬ ಕನ್ನಡಿಗನದು. ಹೆಚ್ಚಿನ ಮಾಹಿತಿಗೆ: https://nilume.net/about
ನಿಲುಮೆ ತಂಡದಲ್ಲಿ ಯಾರು ಯಾರು ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು. ಯಾವುದೇ ಹಿಡನ್ ಅಜೆಂಡಾವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ, ಅದಕ್ಕೆ ಕಾರಣ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು. ಇವರೇ ಮುಖ್ಯವಾದಾಗ ನಾವು ನಮ್ಮ ಹೆಸರು ಹೇಳಿಕೊಂಡು ಓಡಾಡುವುದು ತೋರಿಕೆಯಾಗಬಹುದು ಅನ್ನುವ ಕಾರಣಕ್ಕಾಗಿ ಮಾತ್ರ. ನಾವು ಮಾಡುತ್ತಿರುವ ಚಿಕ್ಕ ಕೆಲಸಕ್ಕೆ ದೊಡ್ಡ ಪ್ರಚಾರ ಬೇಡ ಎಂಬ ಕಾರಣಕ್ಕಾಗಿಯಷ್ಟೆ...!
ಕಲಾಂ ಸಾಹೇಬರನ್ನು ಎಷ್ಟು ಕೊಂಡಾಡಿದರೂ ಸಾಲದು. ಅವರ ಪ್ರತಿಯೊಂದು ನಡೆಯೂ ಕೂಡ ಸ್ತುತ್ಯಾರ್ಹ. ಅದಕ್ಕೆ ಪದಗಳೇ ಸಾಲುವುದಿಲ್ಲ. ಆ ವಿಶ್ವಮಾನವತಾ ವಾದಿಗೆ, ಅವರ ವಿಶ್ವಮಾನವತಾ ನಡೆಗೆ, ಗುಣಕ್ಕೆ, ನಾನೆಂದೋ ಮರುಳಾಗಿ ಹೋಗಿದ್ದೆ. ಅರ್ಥವಿಲ್ಲದ ಜನ್ಮಕ್ಕೆ ಅರ್ಥವನ್ನು ಕಲ್ಪಿಸಿಕೊಂಡು, ಸಾರ್ಥಕ ಜೀವನ ನಡೆಸಿದ ಮಹಾವ್ಯಕ್ತಿ ಅವರು. ಕಡೆಗೂ ಬೆಂಬಿಡದೇ ಬರುವ ಸಾವಿಗೆ ಶರಣಾಗಿ ಬಾರದ ಲೋಕಕ್ಕೆ ಹೊರಟು ಹೋದರು. ಎಲ್ಲರೂ ಒಂದು ದಿನ ಈ ಲೋಕವನ್ನು ತ್ಯಜಿಸಲೇ ಬೇಕು. ಅವರ ಆತ್ಮಕ್ಕೆ ಇದೋ ನನ್ನ ಸಹಸ್ರ ಸಹಸ್ರ ನಮನಗಳು.
May be his mortal body is dead BUT HE LIVES IN EVERY INDIAN