ವಿಷಯದ ವಿವರಗಳಿಗೆ ದಾಟಿರಿ

ಜುಲೈ 30, 2015

6

ಸಮಯ ’ಪ್ರಜ್ಞೆ’ ಎಲ್ಲೆ ಮೀರಿದರೆ ಸಮಾಜ ಸಿಡಿದೇಳಬೇಕಾಗುತ್ತೆ..!

‍ನಿಲುಮೆ ಮೂಲಕ

– ಸಂಕೇತ್ ಹೆಗ್ಡೆ

ಅಬ್ದುಲ್ ಕಲಾಂಮಾನವ ಸಮಾಜ ಕೆಲವು ವ್ಯಕ್ತಿಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ! ಯೆಸ್, ಅವರೂ ಇದೇ ಪ್ರದೇಶದಲ್ಲಿ ಹುಟ್ಟಿದವರು,ಇದೇ ಗಾಳಿ ಸೇರಿಸಿದವರು, ಇದೇ ಮಣ್ಣಿನಲ್ಲಿ ಬೆಳೆದ ಆಹಾರ ತಿಂದವರು, ನಾವು ಕುಡಿಯುವ H2Oವನ್ನೇ ಕುಡಿದವರು. ಆದರೆ ಅವರಲ್ಲೊಂದು ಅಪೂರ್ವ ‘Character’ ಮೂಡಿರುತ್ತೆ! ಕ್ಷಮಿಸಿ, ಅವರು ಬೆಳೆಸಿಕೊಂಡಿರುತ್ತಾರೆ. ಅದು ನಿಷ್ಕಳಂಕ ವ್ಯಕ್ತಿತ್ವ, ಕೈತೊಳೆದುಕೊಂಡು ಮುಟ್ಟಬೇಕು! ಅಂಥವರು ಜನರಿಗೆ ತೀರಾ ಆಪ್ಯಾಯಮಾನವಾಗಿರುತ್ತಾರೆ. ಅವರು ಜೀವನದಲ್ಲಿ ಯಾರೂ ಸಾಧಿಸದಿದ್ದದ್ದೊಂದನ್ನು ಸಾಧಿಸಿರಬಹುದು, ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರಬಹುದು, ಅಥವಾ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿರಬುಹುದು, ಕೊನೆಗೆ ರಾಷ್ಟ್ರಪತಿ ಹುದ್ದೆಯನ್ನೂ ಅಲಂಕರಿಸಿರಬಹುದು! It doesn’t matter, ಜನ ಅವರನ್ನು ಪ್ರೀತಿಸುವುದು ಖಂಡಿತ ಇವ್ಯಾವುದಕ್ಕೂ ಅಲ್ಲ! ಕೇವಲ ಅಂಥವರ ಹೃದಯ ಸಂಪನ್ನತೆಗೆ. ಕಲಾಂ ಸರ್ ಒಮ್ಮೆ ಬಾಯ್ಬಿಟ್ಟು ಹೇಳಿದ್ದರು ” I am not a handsome guy, but I can give my hand-to-some-one who needs help. Beauty is in heart, not in face” ಅಂತ. ಕಲಾಂ ದೇಶ ಬಾಂಧವರ ಕಣ್ಮಣಿಯಾಗಿದ್ದು ತಮ್ಮ ರೂಪದಿಂದಲ್ಲ, ನಡತೆಯಿಂದ. ಕಲಾಂ ತೀರಾ ಪುಟ್ಟ ಮಕ್ಕಳೊಂದಿಗೆ ಕಾಲಕಳೆಯುತ್ತಿದ್ದ ಎಷ್ಟು ಫೋಟೋಗಳು ಬೇಕು? ಕಂದಮ್ಮಗಳು ತಾತನನ್ನು ಹಾಗೆ ಅವರನ್ನು ಸುತ್ತುವರಿಯುತ್ತಿದ್ದವಲ್ಲ, ಅವುಗಳಿಗೆ ರಾಷ್ಟ್ರಪತಿ ಅಂದರೇನು, Rocket Engineer ಅಂದರೇನು ಅಂತ ಬಿಲ್ ಕುಲ್ ಗೊತ್ತಿರುವುದಿಲ್ಲ!

ಆದರೆ ನಮ್ಮಲ್ಲಿ ಕೆಲವರು ಅತಿಬುಧ್ಧಿವಂತರಿದ್ದಾರೆ. ಅಭ್ಯಂತರವಿಲ್ಲ ಬಿಡಿ, ಪ್ರಕೃತಿನಿಯಮ. ಅಕ್ಕಿಯಲ್ಲಿ ನೆಲ್ಲೇ ಇರಬಾರದೆಂದರೆ? ಆದರೆ ಅವರು ತಮ್ಮ ಸಮಯಸಾಧಕತನ, ಜ್ಞಾನ, ಇತಿಹಾಸ ಪ್ರಜ್ಞೆಯನ್ನು ತೋರಿಸಹೋಗಿ ಕಲಾಂ ರಂಥವರ ಬಗ್ಗೆ ಈ ಸಮಯದಲ್ಲಿ ಎನೇನೋ ಬರೆದರೆ? ಬರಹವೇನೋ ಬಾಲಿಶ, ಹೋಗಲಿ ಬಿಡಿ, ಆದರೆ ಅದು ಸಮಾಜದ ಸ್ವಾಸ್ಥ್ಯ ಕೆಡಿಸುವ side effect ಹೊಂದಿರಬಾರದು ಅಲ್ಲವಾ? We have better business ಅಂತ ಮೂಗುಮುರಿಯೋಣ ಅಂದರೆ, ಇದು ಅವರ ಎರಡನೆಯ ತಪ್ಪು! ಹಿಂದೊಮ್ಮೆ ವಿವೇಕಾನಂದರ ಬಗ್ಗೆ ಇದಕ್ಕಿಂತ ಅವಿವೇಕತನದಿಂದ ಬರೆದಿದ್ದರು.ಅಬ್ದುಲ್ ಕಲಾಂ ಹೇಗೆ ರಾಷ್ಟ್ರಪತಿಯಾದರು ಅಂತ ’ಅದ್ಭುತವಾಗಿ’ ವಿವರಿಸಿ, ದಿನೇಶ್ ಅಮಿನ್ ಮಟ್ಟು ಬರೆದಿದ್ದಾರೆ. ಮೊದಲು ಈ ಲಿಂಕಿನಲ್ಲಿ ಓದಿಕೊಂಡುಬಿಡಿ.

ಮಾನ್ಯ ದಿನೇಶ್ ಅಮಿನ್ ಮಟ್ಟು ಅವರ ಪ್ರಕಾರ ಕಲಾಂ ರ ಪ್ರತಿಭೆ ಅವರಿಗೆ ಪ್ರೆಸಿಡೆನ್ಸಿಯನ್ನು ಕೊಡಲಿಲ್ಲವಂತೆ. ವಾಜಪೇಯಿಯವರು ಕೊಟ್ಟರಂತೆ. ಅದೂ ಯಾಕಾಗಿ ಗೊತ್ತಾ? ನೋಡಿ, ಅವರು  ಬರೆಯುತ್ತಾರೆ- “ಮೊದಲನೆಯದಾಗಿ ಗುಜರಾತ್ ಕೋಮುಗಲಭೆಯಿಂದಾಗಿ ಎನ್.ಡಿ.ಎ ಮಿತ್ರ ಕೂಟಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದ ಕೋಮುವಾದಿ ಸರ್ಕಾರ ಎನ್ನುವ ಕಳಂಕವನ್ನು ತೊಡೆದುಹಾಕುವ ಉದ್ದೇಶ ವಾಜಪೇಯಿ ಅವರಿಗಿತ್ತು. ಎರಡನೆಯದಾಗಿ ನರೇಂದ್ರ ಮೋದಿ ಅವರ ರಾಜೀನಾಮೆ ಪಡೆಯಲು ಹೊರಟಿದ್ದವರಿಗೆ ತಮ್ಮ ಸಹದ್ಯೋಗಿಗಳ ವಿರೋಧದಿಂದಾಗಿ ಸಾಧ್ಯವಾಗದೆ ಅವಮಾನವಾಗಿತ್ತು. ರಾಷ್ಟ್ರಪತಿ ಸ್ಥಾನಕ್ಕೆ ತನ್ನದೇ ಅಭ್ಯರ್ಥಿಯನ್ನು ಸೂಚಿಸುವ ಮೂಲಕ ತನ್ನ ಸ್ಥಾನದ ಬಲವನ್ನು ತೋರಿಸುವ ಉದ್ದೇಶವೂ ಅವರಿಗಿತ್ತು. ಮೂರನೆಯದಾಗಿ ಬಿಜೆಪಿ ಮುಸ್ಲಿಮ್ ವಿರೋಧಿ ಪಕ್ಷ ಎಂದು ಆರೋಪಿಸುವವರಿಗೆ ಉತ್ತರವನ್ನೂ ನೀಡುವ ಉದ್ದೇಶವೂ ವಾಜಪೇಯಿ ಅವರಿಗಿತ್ತು.”

ಅಯ್ಯೋ ಸರ್ ದಿನೇಶ್ ಅಮಿನ್ಮಟ್ಟು ಅವರೇ, ನೀವು ಉಪ್ಪು ತಿಂದಷ್ಟು ನಾವು ಅನ್ನ ತಿಂದಿಲ್ಲ. ನೀವು ಪತ್ರಿಕೋದ್ಯಮದಲ್ಲಿ ಅಗಾಧ ಅನುಭವ ಹೊಂದಿದ್ದೀರಿ. ಕಲಾಂ ರಂಥದ್ದೊಂದು ಚೈತನ್ಯ ಇನ್ನಿಲ್ಲವಾದಾಗ ಏನು ಬರೆಯಬೇಕು ಅಂತ ನಮ್ಮಂಥ ಅಲ್ಪರು ಹೇಳಬೇಕೇನು? ನೀವು ಓದಿ ತಿಳಿದುಕೊಂಡವರು. ಕಲಾಮ್ ಹೇಗೆ ಛಲದಿಂದ ಕಲಿತರು, ಹೇಗೆ ಒಂದಾದ ಮೇಲೊಂದು ಪ್ರಾಜೆಕ್ಟ್ ಗಳನ್ನು ಪೂರ್ತಿಗೊಳಿಸಿದರು, ಆ ಮೂಲಕ ದೇಶದ ದಿಕ್ಕನ್ನು ಹೇಗೆ ಬದಲಿಸಿದರು ಅನ್ನುವುದನ್ನ ನಮ್ಮಂತ ’ಅಜ್ಞಾನಿಗಳಿಗೆ’ ತಮ್ಮ ಲೇಖನದ ಮೂಲಕ ತಿಳಿಸಿಕೊಡಿ. ಅದು ಬಿಟ್ಟು ಅದ್ಯಾವುದೋ ಓಬೀರಾಯನ ಕಾಲದ ಅಡಗೂಲಜ್ಜಿ ಕಥೆ ಹೇಳಬೇಡಿ, ನೀವು great ಅಂತ ಅನ್ನಿಸುವುದಿಲ್ಲ. ಅದು ಹೇಗೋ ಸರ್ಕಸ್ ಮಾಡಿ ವಾಜಪೇಯಿಯವರನ್ನೂ ಸಿಕ್ಕಿಸಿ ಹಳಿದುಬಿಟ್ಟರೆ ದೊಡ್ಡ ಪ್ರಗತಿಪರ ಅನ್ನುವ impression ಬರುವುದಿಲ್ಲ. ಅಷ್ಟಕ್ಕೂ ಏನನ್ನು ಸಾಧಿಸಹೊರಟಿದ್ದೀರಿ?

ಕೊನೆಗೆ ಅಮಿನ್ ಸಾಹೇಬರು ” ಸಹಮತ ಮೂಡಿಸಲು ವಾಜಪೇಯಿ ಅವರು ಮೊದಲು ಪ್ರಮೋದ್ ಮಹಾಜನ್ ಅವರನ್ನು ಬಾಳ್ ಠಾಕ್ರೆ ಅವರಲ್ಲಿಗೆ ಕಳುಹಿಸಿಕೊಟ್ಟರು. ನಂತರ ಮಹಾಜನ್ ಅವರನ್ನೇ ಕಲಾಂ ಅವರ ಚುನಾವಣಾ ಏಜಂಟ್ ಮಾಡಿದರು. ಅಬ್ದುಲ್ ಕಲಾಂ ಅವರನ್ನು ಒಪ್ಪಿಸುವ ಜವಾಬ್ದಾರಿಯನ್ನು ವಾಜಪೇಯಿ ಅವರು ಚಂದ್ರಬಾಬು ಅವರಿಗೆ ನೀಡಿದ್ದರು. ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಕೂಡಾ ಬೆಂಬಲ ವ್ಯಕ್ತಪಡಿಸಿತ್ತು. (ಅಲೆಗ್ಸಾಂಡರ್ ಹೆಸರು ತಪ್ಪಿಹೋಗಿ ಸೋನಿಯಾಗಾಂಧಿ ಪ್ರಧಾನಿಯಾಗುವ ಅವಕಾಶ ಜೀವಂತವಾಗಿ ಉಳಿಯಿತಲ್ಲ ಎನ್ನುವ ಸಮಾಧಾನ ಕಾಂಗ್ರೆಸ್ ನಾಯಕರದ್ದು). ಆದರೆ ಎಡಪಕ್ಷಗಳು ಮಾತ್ರ ಬೆಂಬಲ ನೀಡಲಿಲ್ಲ. ಕೊನೆಗೆ ವಾಜಪೇಯಿ ಅವರ ಬತ್ತಳಿಕೆಯಿಂದ ಹೊರಟ ‘ಕಲಾಂ ಕ್ಷಿಪಣಿ’ ಗುರಿ ತಲುಪಿತ್ತು. ” ಅಂತೆಲ್ಲ ಒಂದು ಕ್ಲಿಷ್ಟ algorithm ನಂತೆ ಬರೆದು ಕೈತೊಳೆದುಕೊಂಡುಬಿಟ್ಟರು. ಒಂದು ವಿಷಯ ಅಮಿನ್ ಸರ್, “ಕೊನೆಗೆ ವಾಜಪೇಯಿ ಅವರ ಬತ್ತಳಿಕೆಯಿಂದ ಹೊರಟ ‘ಕಲಾಂ ಕ್ಷಿಪಣಿ’ ಗುರಿ ತಲುಪಿತ್ತು. ” ಅಂತ ನಿಮ್ಮಿಂದ ಬರೆಸಿಕೊಳ್ಳುವ ದೊಡ್ಡ ’ಸೌಭಾಗ್ಯ’ ಕಲಾಂ ರಿಗೆ ಬೇಡವಿತ್ತು. ಕಲಾಂ ಯಾರೋ ಹಚ್ಚಿದ ಅಗ್ನಿಯಿಂದ  ಗುರಿ ಮುಟ್ಟುವ ಕ್ಷಿಪಣಿಯಲ್ಲ. ಬದಲಾಗಿ ಅವರು AGNI ಸೀರೀಸ್ ಕ್ಷಿಪಣಿಗಳ ರೂವಾರಿ. ಪರರ ಬದುಕಲ್ಲಿ ದೀಪ ಬೆಳಗಿ ಗುರಿಮುಟ್ಟಿಸುವ ಇಂಧನ.

ಸರಿ ಬಿಡಿ. ವಾಜಪೇಯಿಯವರೇ ಸರ್ಕಸ್ ಮಾಡಿ ಕಲಾಂ ರನ್ನು ರಾಷ್ಟ್ರಪತಿ ಮಾಡಿದರು ಅಂತಿಟ್ಟುಕೊಳ್ಳೋಣ. ಹಾಗಾದದ್ದು ಬಹಳ ಒಳ್ಳೆಯದೇ ಆಯಿತಲ್ಲ? ವಾಜಪೇಯಿಯವರಿಗೆ ಇವತ್ತು ದೇಶ ಎದ್ದು ನಿಂತು ದೊಡ್ಡ ಥ್ಯಾಂಕ್ಸ್ ಹೇಳಬೇಕು. “ಹಿಂದೆ ಕಂಡಿಲ್ಲ, ಮುಂದೆ ಗೊತ್ತಿಲ್ಲ” ಅನ್ನುವಂಥ ರಾಷ್ತ್ರಪತಿಯನ್ನು ಕೊಟ್ಟಿದ್ದಕ್ಕೆ. ನೀವು ಅವಕಾಶ ಸಿಕ್ಕಿತು ಅಂತ ವಾಜಪೇಯಿಯವರನ್ನು ಹಳಿದು ಬಿಟ್ಟರೆ, “ವಾಜಪೇಯಿ ಅಂದರೇನು” ಅಂತ ದೇಶದ ಜನರಿಗೆ ಗೊತ್ತು. ನೀವು mis-introduce ಮಾಡುವ ಅವಶ್ಯಕತೆಯಿಲ್ಲ, ಕ್ಷಮಿಸಿ. ನೀವು ವಿವೇಕಾನಂದರ ಬಗ್ಗೆ ’ಶತಮಾನದ ಲೇಖನ’ ಬರೆದಾಗ ನನಗೆ ಗೊತ್ತಾಗಿರಲಿಲ್ಲ. ಮೊನ್ನೆ ವಿವಾದವೆದ್ದಾಗ ಅದನ್ನೂ ಓದಿದೆ. ಇಷ್ಟು ತಡವಾಗಿಯೇಕೆ ಪ್ರತಿ-ಲೇಖನ ಬರೆಯೋದು ಅಂತ ಕೈಬಿಟ್ಟಿದ್ದೆ. ಆದರೆ ಎರಡನೇ ಬಾರಿ ನೀವು ಕಲಾಂ ರನ್ನು ಆರಿಸಿಕೊಂಡಿದ್ದೀರಿ, ಅದೂ ಈ ಸಮಯದಲ್ಲಿ. ಎರಡನೇ ಬಾರಿ ಮಾಡುವುದನ್ನು ’ತಪ್ಪು’ ಅನ್ನುವುದಿಲ್ಲ, ’ಆಯ್ಕೆ’ ಅನ್ನುತ್ತಾರೆ. ಎಲ್ಲದಕ್ಕೂ ಕೆಲವರು ತಮ್ಮ ಪೂರ್ವಗ್ರಹವಾದ ಎಡಪಂಥ ಅಥವಾ ಬಲಪಂಥವನ್ನೇ ತಳಕುಹಾಕುತ್ತ ಕುಳಿತುಬಿಟ್ಟರೆ, ಯಾವ ಪಂಥಕ್ಕೂ ಸೇರದ ನಮ್ಮಂಥ ಸಾಮಾನ್ಯ ಜನರಿಗೆ ಅಸಹನೆ ತಂದುಬಿಡುತ್ತೆ. ತಾಳ್ಮೆ ಕಳೆದುಹೋಗಿ ಲೇಖನಿ ಹಿಡಿಯಬೇಕಾಗುತ್ತೆ.

2020ರ ಒಳಗೆ ಭಾರತವನ್ನು ಅಭಿವೃಧ್ಧಿ ಹೊಂದಿದ ರಾಷ್ಟ್ರವನ್ನಾಗಿಸಬೇಕೆಂಬು ಕಲಾಂ ರ ಕನಸಾಗಿತ್ತು. ಅದು ಕೋಟ್ಯಂತರ ಭಾರತೀಯರ ಕನಸೂ ಹೌದು. ನನಸಾಗಬೇಕಾದರೆ ದೇಶ ಅದರ ಕಡೆ concentrate ಮಾಡಬೇಕಾಗುತ್ತೆ. ಇಸ್ರೇಲಿಯನ್ನರು ಕಳೆದ ಶತಮಾನದ ಉತ್ತರಾರ್ಧದಲ್ಲಿ ದುಡಿದರಲ್ಲ ಹಾಗೆ ದುಡಿಯಬೇಕಾಗುತ್ತೆ. ವೈಯಕ್ತಿಕ ಅಥವಾ ಪಕ್ಷದ ಒಳಿತಿಗಿಂತ ಮಿಗಿಲಾಗಿ ಸಮಾಜದ ಅಥವಾ ದೇಶದ ಒಳಿತಿನ ಬಗ್ಗೆ ಯೋಚಿಸಿ ಕಾರ್ಯೋನ್ಮುಖವಾಗಬೇಕಾಗತ್ತೆ.  ಹೀಗೆ ಬಾಲಿಶವಾಗಿ ನೀವು ಎಡ-ಬಲ ಪಂಥದವರು ಜಗಳವಾಡುತ್ತ ಕುಳಿತುಬಿಟ್ಟರೆ?ಒಬ್ಬ ಸಾಮಾನ್ಯನಾಗಿ ನಾನು ಈ ಲೇಖನವನ್ನು ಬರೆದಿದ್ದು ಎಡ-ಬಲ ಪಂಥದವರಿಗೆ ಇದನ್ನು ಹೇಳಲು ಅಷ್ಟೆ…The crying need of India is some ‘Seriousness’. ದಯವಿಟ್ಟು ಒಳ್ಳೆಯದೇನನ್ನೂ ಸೃಷ್ಟಿಸಲು ಸಾಧ್ಯವಾಗದಿದ್ದರೆ, atleat ಕೆಟ್ಟದೇನನ್ನೂ ಸೃಷ್ಟಿಸಬೇಡಿ..

6 ಟಿಪ್ಪಣಿಗಳು Post a comment
 1. ಜುಲೈ 30 2015

  “atleat ಕೆಟ್ಟದೇನನ್ನೂ ಸೃಷ್ಟಿಸಬೇಡಿ.”….i dnt understand whats wrong with mattu’s article….whoever wrote this article is polically ingorant…..what Mr mattu has observred is right…..kalam choice as president was polical one ..it had nothing to do with meritocracy……every one trying to make late kalam larger than life…he was an aeronautical engineer…

  ಉತ್ತರ
  • ಜುಲೈ 30 2015

   OK sir… I am very dumb and not as intelligent as U. Let’s think kalam’s achieve ments had nothing to do with his selection as President. Then If we ignore our merits, then there exists no difference between I, U and Kalam or other 100 crore Indians. There were many scientists, thinkers and philosophers among us. Then why didn’t Vajapayee ignored all of them and gone for Kalam?
   One more thing. ಈ ಸಮಯದಲ್ಲಿ ಅಂಥದ್ದೊಂದು ಅಸಂಬದ್ಧ ಲೇಖನ ಬರೆಯುವುದು “ಕೆಟ್ಟದ್ದನ್ನು ” ಸೃಷ್ಟಿಸಿದ ಹಾಗೆಯೇ. ಯಾಕೆ ಅಂಥ ಲೇಖನದಲ್ಲಿ ವಿವರಿಸಿದ್ದೇನೆ. ಕನ್ನಡ ಬರುವುದೇ ಹೌದಾದರೆ ಮತ್ತೊಮ್ಮೆ ಓದಿಕೊಳ್ಳಿ.

   ಉತ್ತರ
 2. vijay
  ಜುಲೈ 30 2015

  ಯಶ್ವಂತ ಅವರೇ.. ಇಲ್ಲಿ ನಾವು ಹೇಳಹೊರಟಿರುವುದು ಏನು ? ನೀವು ಅರ್ಥೈಸಿಕೊಂಡದ್ದು ಏನು ?? ಕಲಾಂ ಅವರ ನಿರ್ಗಮನದ ನಂತರ, ಅವರ ಸಾದನೆಗಳನ್ನ ಜನರ ಮುಂದಿಡುವ ಕೆಲಸ ಆಗಬೇಕೋ ? ಅಥವಾ, ಅವರಿಗೆ ಅವಕಾಶಗಳನ್ನ ಕೊಡಮಾಡಿಕೊಟ್ಟವರಾರು , ಆಗಿನ ರಾಜಕೀಯದ ಚದುರಂಗದಲ್ಲಿ ಇವರು ಹೇಗೆ ದಾಳವಾದರೂ ಅನ್ನೋದನ್ನ ಜನರ ಮುಂದಿಡಬೇಕೋ ?? ಒಂದೆರಡು ಒಳ್ಳೆ ಮಾತಾಡಿದ್ರೆ ಮಟ್ಟು ಲೇಖನಕ್ಕೆ ಸ್ವಲ್ಪವಾದರೂ ಬೆಲೆ ಇರ್ತಿತ್ತು… !!

  ಉತ್ತರ
 3. anonymous
  ಜುಲೈ 31 2015

  Ameen Mattu is employed to write speeches for CM Siddaramaiah and in that capacity his job is to portray Congress party in positive light and other parties negatively. That’s what he gets paid for. So even when talking about Kalam, he is doing the service of his pay master. Are you surprised?

  ಉತ್ತರ
  • ಆಗಸ್ಟ್ 1 2015

   Haha… I am not surprised, but have got frustrated about ’ಪೂರ್ವಗ್ರಹ ಪೀಡಿತ ಮನಸ್ಸುಗಳು’!

   ಉತ್ತರ
 4. samat
  ಆಗಸ್ಟ್ 5 2015

  ಹೌದು, ಅಮೀನಮಟ್ಟು ಅವರ ಲೇಖನದ ಧಾಟಿ ಸರಿಯಿಲ್ಲ. ಕಲಾಂಗಾಥೆಯನ್ನು ಅದು ಪೂರ್ಣವಾಗಿ ಹೇಳುವುದೂ ಇಲ್ಲ. ಯಾವುದೋ ಒಂದು ಕ್ಷುಲ್ಲಕತನದಲ್ಲಿ ಬಹುತೇಕವಾಗಿ ನಿರಾಧಾರವಾದ ರೂಮರ್ಗಳನ್ನು ಎಲ್ಲರಿಗೂ ಒಪ್ಪಿದಂತೆ ದಾಖಲಾದ ಇತಿಹಾಸವೇನೋ ಎಂಬಂತೆ ಬರೆದಿರುವುದು ಮೇಲ್ನೋಟಕ್ಕೇ ತಿಳಿಯುತ್ತೆ.

  ಜನಪ್ರಿಯರೋರ್ವರ ಸಾವಿನ ಸಮಯದಲ್ಲೂ ಸಮತೂಕದಲ್ಲಿ ಹೇಗೆ ಸಾಧನೆಯನ್ನು ಸ್ಮರಿಸುವುದರ ಜೊತೆಜೊತೆಗೇ ಔಚಿತ್ಯಮೀರದಂತೆ ವಿಮರ್ಶೆಯನ್ನೂ ವ್ಯಕ್ತಪಡಿಸಬಹುದು ಎನ್ನುವುದನ್ನು ತೋರಿಸಿಕೊಡುವುದು ಕಲಾಂ ಅವರ ಓರ್ವ ನಿಜವಾದ ಟೀಕಾಕಾರರು ಬರೆದ ಈ ಲೇಖನ: (ಡಾ. ಕಲಾಂ ಏನಾಗಿರಲಿಲ್ಲ ಎಂದರೆ…) http://bit.ly/1K3tEZ3

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments