ನಮ್ಮ ನಡುವೆ ಮೊಳಕೆಯೊಡೆಯುತ್ತಿರುವ ಸೆಕ್ಯುಲರ್ ಭಯೋತ್ಪಾದಕರು
– ರೋಹಿತ್ ಚಕ್ರತೀರ್ಥ
ಕನ್ನಡದ ಚಲನಚಿತ್ರ ನಿರ್ದೇಶಕರೊಬ್ಬರು ಉದುರಿಸಿದ ಅಣಿಮುತ್ತುಗಳು ಇವು: “ಭಗತ್‍ಸಿಂಗ್, ಆಜಾದ್ ಮುಂತಾದವರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ವ್ಯವಸ್ಥೆ ತನಗಾಗದವರ ಕತ್ತಿಗೆ ನೇಣು ಬಿಗಿಯಲು ಸದಾ ಉತ್ಸುಕವಾಗಿರುತ್ತದೆ. ಒಂದೊಂದು ಕಾಲಕ್ಕೆ ಒಂದೊಂದು ಸರಿ ಅನ್ನಿಸುತ್ತದೆ. ಕಾನೂನು ಯಾವತ್ತೂ ಸಾಪೇಕ್ಷ. ಆಳುವವರ ಮರ್ಜಿಗೆ ತಕ್ಕಂತೆ ನ್ಯಾಯ, ಕಾನೂನು, ಶಿಕ್ಷೆಯ ರೂಪಗಳು ಬದಲಾಗಬಹುದು.” ಈ ನಿರ್ದೇಶಕರು ಇಷ್ಟೆಲ್ಲ ಸಂಶೋಧನೆ ಮಾಡಿದ್ದು ಯಾಕೆಂದರೆ, ಯಾಕೂಬ್ ಮೆಮೊನ್ ಎಂಬ ದೇಶದ್ರೋಹಿಯನ್ನು ಗಲ್ಲಿಗೇರಿಸಬೇಕು ಎಂದು ಸುಪ್ರೀಂ ಕೋರ್ಟು ತೀರ್ಪು ಕೊಟ್ಟಿದ್ದು ಇವರಿಗೆ ಹೃದಯಕ್ಕೆ ಗೀರು ಕೊರೆದಷ್ಟು ನೋವಾಗಿದೆಯಂತೆ. ಅವನನ್ನು ಗಲ್ಲಿಗೇರಿಸಬಾರದು, ಭರತಖಂಡದ ನೂರಿಪ್ಪತ್ತು ಕೋಟಿ ಜನಗಳ ಮಧ್ಯೆ ಅವನೊಬ್ಬ ನಮಗೆ ಭಾರವಾಗುತ್ತಾನೆಯೇ? ಅವನನ್ನು ನೆಮ್ಮದಿಯಿಂದ ಇರಗೊಡಬೇಕು – ಎನ್ನುವುದು ಈ ನಿರ್ದೇಶಕರು ಮತ್ತು ಅವರ ಜೊತೆಗಿರುವ ಹತ್ತಾರು ಬುದ್ಧಿಜೀವಿಗಳ ವಾದ ಮತ್ತು ಅಳಲು. ಅವರ ಮಾತನ್ನು ಮೇಲುಮೇಲಕ್ಕೇ ನೋಡಿ “ಆಹಾ ಎಷ್ಟು ಚೆಂದ ಹೇಳಿದ್ದಾರಲ್ಲವಾ? ಮಾನವೀಯತೆ ಅವರ ಪದಪದಗಳಲ್ಲೂ ಜಿನುಗುತ್ತಿದೆ. ಅಂತಃಕರಣದ ಪ್ರೀತಿ, ಆದರ ಅವರ ಹನಿಹನಿ ರಕ್ತದಲ್ಲೂ ತೊಟ್ಟಿಕ್ಕುತ್ತಿದೆ” ಎಂದು ಭಾವಪರವಶರಾಗಿ ಸೋತುಹೋಗುವವರೂ ನಮ್ಮಲ್ಲಿ ಬಹುಮಂದಿ ಇದ್ದಾರೆ. ಮಹನೀಯರ ಮಾತುಗಳನ್ನು ಸ್ವಲ್ಪ ನಿದ್ದೆಬಿಟ್ಟೆದ್ದು ವಸ್ತುನಿಷ್ಠವಾಗಿ ನೋಡೋಣ.
ಅವರು ಹೇಳಿದಂತೆ, ಭಗತ್‍ಸಿಂಗ್‍ನನ್ನು ಬ್ರಿಟಿಷರು ಗಲ್ಲಿಗೇರಿಸಿದರು ಎನ್ನುವುದನ್ನು ಒಪ್ಪಬಹುದು. ಆದರೆ, ಆಜಾದ್ ಚಂದ್ರಶೇಖರ್, ಬ್ರಿಟಿಷರಿಗೆ ತಾನು ಜೀವಂತ ಸಿಗಬಾರದು ಎಂಬ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆಜಾದ್ ಎಷ್ಟು ಉಗ್ರವಾಗಿ ಬ್ರಿಟಿಷ್ ಸರಕಾರವನ್ನು ಕಾಡಿದ್ದರೆಂದರೆ, ಅವರ ಮೃತಶರೀರವನ್ನು ಕೂಡ ಮುಟ್ಟಲು ಪರಂಗಿಗಳು ಹಿಂದೆಮುಂದೆ ನೋಡಿದರಂತೆ. ಅಂದಿನ ಕಾಲಕ್ಕೆ ಅದೇ ಸರಿ ಎಂದು ಹೇಳಿ ಇತಿಹಾಸವನ್ನೇ ತಿರುಚಿಹಾಕುವ ನಿರ್ದೇಶಕರು, ಬುದ್ಧಿವಂತಿಕೆಯಿಂದ ಮರೆಮಾಚಿದ ಸತ್ಯವೇನು ಗೊತ್ತೆ? ಆ ಕಾಲಕ್ಕೆ ಹಾಗೆ ತಾವು ನಡೆದದ್ದೇ ಸರಿ ಎಂದು ಆಡಳಿತ ಮಾಡುತ್ತಿದ್ದ ಬ್ರಿಟಿಷರಿಗೂ ತಾವು ಮಾಡುತ್ತಿರುವುದು ಮಹಾತಪ್ಪು, ಅನ್ಯಾಯ ಎನ್ನುವುದು ಗೊತ್ತಿತ್ತು. ಬಿಳಿಯರು ಅನ್ಯಾಯ ಮಾಡುತ್ತಿದ್ದಾರೆಂಬ ಕಾರಣಕ್ಕೇನೇ ಬುದ್ಧಿಜೀವಿಗಳು ಪೂಜಿಸುವ ಗಾಂಧಿದೇವರು ಕೂಡ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದು! ಭಾರತೀಯರನ್ನು ಹತ್ತಿಕ್ಕಲೆಂದೇ ಬ್ರಿಟಿಷರು ಸಾವಿರಾರು ದೇಶಭಕ್ತರನ್ನು ಜೈಲಿಗೆ ಹಾಕಿದರು; ಗಲ್ಲಿಗೇರಿಸಿದರು; ಅಮಾನುಷವಾಗಿ ಕೊಂದರು. ಅಲ್ಲಿ, ಭಾರತದ ಬಡಪಾಯಿಗೆ ನ್ಯಾಯಾಲಯದಲ್ಲಿ ನಿಂತು ತನ್ನ ಕಡೆಯ ವಾದ ಮಂಡಿಸಲು ಅವಕಾಶವೇ ಇರಲಿಲ್ಲ. ಸರಿತಪ್ಪುಗಳ ಸಮತೂಕ ಇರಲಿಲ್ಲ. ಇದ್ದದ್ದು ಒಂದೇ – ನಿರಂಕುಶ ಆಡಳಿತ. ಎದುರು ಮಾತಾಡಿದವರ ನಾಲಿಗೆ ಸೀಳುವ, ಪ್ರತಿಭಟಿಸಿದವರ ಕೈಕಡಿಯುವ, ಘೋಷಣೆ ಕೂಗಿದವರ ಸದ್ದಡಗಿಸುವ ಅಮಾನವೀಯ ಪಾಶವೀ ಸರಕಾರ ಇದ್ದದ್ದು ಆಗ. ಹಾಗಾಗಿ, ಭಗತ್ ಸಿಂಗ್ ಆಗಲೀ ಆಜಾದ್ ಆಗಲೀ ಆಗಿನ ಕಾಲದ ಕಾನೂನಿಗೆ ತಕ್ಕಂತೆ ಅಪರಾಧಿಗಳಾಗಿದ್ದರು ಎನ್ನುವುದೇ ಹಾಸ್ಯಾಸ್ಪದ ಹೇಳಿಕೆಯಾಗುತ್ತದೆ! ಭಗತ್‍ಸಿಂಗರನ್ನು ನೇಣಿಗೆ ಹಾಕಿದ ಕಾನೂನು ನ್ಯಾಯಯುತವಾಗಿತ್ತು ಎಂದು ಭಾರತೀಯರಿರಲಿ, ಈಗಿನ ಬ್ರಿಟಿಷರು ಕೂಡ ಒಪ್ಪುವುದಿಲ್ಲ. ಆದರೆ, ನಮ್ಮ ಬುದ್ಧಿಜೀವಿಗಳಿಗೆ ಮಾತ್ರ, ಅದು ನ್ಯಾಯಸಮ್ಮತ ಕಾನೂನಾಗಿ ಕಾಣುತ್ತದೆ! ಎಂಥ ದುರಂತ ನೋಡಿ!
ಭಯೋತ್ಪಾದನೆಗೆ ಧರ್ಮ ಇಲ್ಲ!
ಯಾಕೂಬ್ ಮೆಮೊನ್‍ನನ್ನು ಬಿಟ್ಟುಬಿಡಬೇಕು, ಅವನು ನಿರಪರಾಧಿ ಎಂದು ಒವೈಸಿಯಾದಿಯಾಗಿ ನಮ್ಮ ದೇಶದ ಎಲ್ಲ ಬುದ್ಧಿಜೀವಿಗಳೂ ತುದಿಗಾಲಲ್ಲಿ ನಿಂತು ಪ್ರಾರ್ಥಿಸುತ್ತಿದ್ದರು.ಇವರ ಬೇಡಿಕೆ ಇಷ್ಟೆ: ಯಾಕೂಬ್ ಒಬ್ಬ ಮುಸ್ಲಿಮ್. ಅವನು ಮುಸ್ಲಿಮನಾದ್ದರಿಂದಲೇ ಅವನ ಮೇಲೆ ಇಲ್ಲದ ಕೇಸುಗಳನ್ನು ಜಡಿದು ಗಲ್ಲಿನ ದಾರಿ ತೋರಿಸಲಾಗುತ್ತಿದೆ. ಈ ದೇಶದಲ್ಲಿ ಅಲ್ಪಸಂಖ್ಯಾಕರಿಗೆ ರಕ್ಷಣೆ ಇಲ್ಲ. ಕಾನೂನು ಅವರ ಕೈಹಿಡಿಯುವುದಿಲ್ಲ. ಯಾಕೂಬ್‍ನನ್ನು ಗೌರವಾನ್ವಿತವಾಗಿ ನಡೆಸಿಕೊಳ್ಳಬೇಕು. ಅವನನ್ನು ನೇಣುಗಂಬದಿಂದ ಪಾರುಮಾಡಬೇಕು; ಸಾಧ್ಯವಾದರೆ ಖುಲಾಸೆ ಮಾಡಬೇಕು! ಮುಂಬೈ ಸರಣಿ ಸ್ಫೋಟದಲ್ಲಿ ಇನ್ನೂರೈವತ್ತು ಜನರನ್ನು ಕೊಂದ ಆರೋಪ ಹೊತ್ತ ಒಬ್ಬ ಖಳನಾಯಕನ ರಕ್ಷಣೆಗಾಗಿ ಸಂಸದರು, ಪತ್ರಕರ್ತರು, ಬುದ್ಧಿಜೀವಿಗಳಾದಿಯಾಗಿ ಕಾಂಗ್ರೆಸ್ ಚಮಚಾಗಳ ದೊಡ್ಡ ಪಡೆಯೇ ಮಂಡಿಯೂರಿ ಕೂತು ಬೇಡುತ್ತಿದೆ ಎಂದರೆ ನಮ್ಮ ದೇಶ ಯಾವ ಗತಿಯಲ್ಲಿ ಹೋಗುತ್ತಿದೆ ಎಂಬುದರ ಅಂದಾಜು ಸಿಕ್ಕೀತು. ದೇಶದಲ್ಲಿ ಇದುವರೆಗೆ ನಡೆದಿರುವ ಎಲ್ಲಾ ಭಯೋತ್ಪಾದಕ ದಾಳಿಗಳನ್ನು ಪರಿಗಣಿಸಿದರೆ ಅವುಗಳಲ್ಲಿ ಎಷ್ಟು ದಾಳಿಗಳನ್ನು ಮುಸ್ಲಿಮ್ ಭಯೋತ್ಪಾದಕರು ಮಾಡಿದ್ದಾರೆ ಎನ್ನುವುದನ್ನು ಐದು ವರ್ಷದ ಪುಟಾಣಿ ಕೂಡ ಸ್ಪಷ್ಟವಾಗಿ ಹೇಳಬಲ್ಲುದು. ಆದರೂ, ನಾವು ಸಂವಿಧಾನಕ್ಕೆ ಗೌರವ ಕೊಟ್ಟಿದ್ದೇವೆ. ಜಾತ್ಯತೀತ ಭಾವನೆಗಳಿಗೆ ಇನ್ನೂ ಈ ದೇಶದ ಬಹುಸಂಖ್ಯಾತ ಹಿಂದೂಗಳು ಮರ್ಯಾದೆ ಕೊಡುತ್ತಾ ಬಂದಿದ್ದಾರೆ. ನಮ್ಮ ನೆರೆಹೊರೆಯಲ್ಲಿರುವ ಅಥವಾ ಸಹೋದ್ಯೋಗಿಗಳಾಗಿರುವ ಯಾವ ಮುಸಲ್ಮಾನನನ್ನು ಕೂಡ ನಾವು ಅವಮಾನಿಸುವುದಿಲ್ಲ; ಅನುಮಾನಿಸುವುದೂ ಇಲ್ಲ. ದೇಶದಲ್ಲಿ ಪ್ರತಿಯೊಂದು ಬಾಂಬ್ ದಾಳಿಯಾದಾಗಲೂ, ಪ್ರತಿ ಸಲ ರಕ್ತದ ಕೋಡಿ ಹರಿದಾಗಲೂ ನಮ್ಮ ಘನ ಬುದ್ಧಿಜೀವಿಗಳು “ಭಯೋತ್ಪಾದನೆಗೆ ಧರ್ಮ ಇಲ್ಲ” ಎಂಬ ಮಾಮೂಲಿ ರಾಗ ಹಾಡುತ್ತಾರೆ. ನಾವ್ಯಾರೂ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿಲ್ಲ. ಹೌದು, ಭಯೋತ್ಪಾದನೆ ಎಲ್ಲ ಧರ್ಮಗಳ ಎಲ್ಲೆ ಮೀರಿದ ಒಂದು ವಿಕೃತ ಚಟುವಟಿಕೆ; ಯಾವ ಧರ್ಮಗ್ರಂಥ ಕೂಡ ಹಿಂಸೆಯನ್ನು ಬೋಧಿಸಲಾರದು ಎಂದು ನಮ್ಮನ್ನು ನಾವು ಸುಳ್ಳೇ ನಂಬಿಸಿಕೊಂಡು ಬಂದಿದ್ದೇವೆ. ಭಗವದ್ಗೀತೆ ಹಿಂಸೆಗೆ ಪ್ರಚೋದನೆ ನೀಡುತ್ತದೆ, ಅದನ್ನು ಸುಟ್ಟು ಹಾಕಬೇಕು ಎಂದು ಹೇಳಿದ ಮಹಾನುಭಾವರು ಕೂಡ ಈ ನೆಲದಲ್ಲಿ ಇನ್ನೂ ಸುಟ್ಟುಹೋಗದೆ, ಉಸಿರು ನಿಲ್ಲದೆ ನೆಮ್ಮದಿಯಿಂದ ಓಡಾಡಿಕೊಂಡಿದ್ದಾರೆ. ಯಾಕೆಂದರೆ ನಮ್ಮದು ಜಾತ್ಯತೀತ ದೇಶ. ಇಷ್ಟೆಲ್ಲ ಇರುವಾಗ, ಕಳೆದ ನಲವತ್ತೈವತ್ತು ವರ್ಷಗಳಿಂದ ಭಯೋತ್ಪಾದನೆಗೆ ಧರ್ಮ ಇಲ್ಲ; ಖುರಾನ್‍ನಲ್ಲಿ ಜೆಹಾದ್ ಬಗ್ಗೆ ಪ್ರಸ್ತಾಪವೇ ಇಲ್ಲ ಎನ್ನುತ್ತಾ ದೇಶವನ್ನು ನಂಬಿಸಿಕೊಂಡು ಬಂದಿದ್ದ ಬುದ್ಧಿಜೀವಿಗಳು ಈಗ – ಯಾಕೂಬ್‍ನನ್ನು ಗಲ್ಲಿಗೇರಿಸುವ ಕ್ಷಣ ಬಂದಾಗ ಮಾತ್ರ “ಅವನನ್ನು ಮುಸ್ಲಿಮ್ ಎನ್ನುವ ಕಾರಣಕ್ಕೆ ಗಲ್ಲಿಗೇರಿಸಲಾಗುತ್ತದೆ” ಎನ್ನುತ್ತಿದ್ದಾರಲ್ಲ? ಅದರರ್ಥ, ಇದುವರೆಗೆ ನಡೆದಿರುವ ಎಲ್ಲ ಭಯೋತ್ಪಾದನೆಗಳೂ ಮುಸ್ಲಿಮರಿಂದಲೇ ಆಗಿರವುದು ಎಂದು ಅದರ ಅರ್ಥವೇ? ಒಬ್ಬ ಉಗ್ರನನ್ನು, ಅವನ ರಿಲಿಜನ್ನನ್ನು ಮುಂದಿಟ್ಟುಕೊಂಡು ರಕ್ಷಿಸಲು ಹೆಣಗಾಡುತ್ತಿರುವ ಬುದ್ಧಿಜೀವಿಗಳಿಗೆ ತಮ್ಮ ಈ ಬಗೆಯ ಸಮರ್ಥನೆಯ ಮೂಲಕ, ಭಯೋತ್ಪಾದಕರೆಲ್ಲ ಮುಸ್ಲಿಮರೆಂಬ “ತಪ್ಪು” ಸಂದೇಶ ರವಾನಿಸುತ್ತಿದ್ದೇವೆಂಬ ಅರಿವು ಇಲ್ಲವೆ?
ಬಹುಶಃ ನಮ್ಮ ಬುದ್ಧಿಜೀವಿಗಳಿಗೆ ನ್ಯಾಯಾಂಗದ ಮೇಲೆ ನಂಬಿಕೆ ಇದ್ದಂತಿಲ್ಲ. ಈ ದೇಶದಲ್ಲಿ ನ್ಯಾಯಾಂಗವನ್ನು ಯಾರು ಬೇಕಾದರೂ ಅಪಹಾಸ್ಯ ಮಾಡಬಹುದು ಎನ್ನುವ ಪರಿಸ್ಥಿತಿ ಬಂದ ಹಾಗಿದೆ. ಯಾಕೂಬ್‍ನಂತಹ ಕಳ್ಳನನ್ನು ಗಲ್ಲಿಗೇರಿಸುವುದು ಬೇಡ; ಬೇಕಾದರೆ ಅವನನ್ನು ಇನ್ನೊಂದಿಷ್ಟು ವರ್ಷ ಜೈಲಲ್ಲಿ ಇಡಬಹುದು – ಎಂದು ನಮ್ಮ ದೇಶದ ಸೆನ್ಸೇಶನಲ್ ಸೆಲೆಬ್ರಿಟಿ ಸಲ್ಮಾನ್ ಖಾನ್, ಕೋರ್ಟಿಗೇ ಸಲಹೆ ಕೊಡುತ್ತಾನೆ! ಇನ್ನು, ಅವನ ವಿಚಾರಣೆ ನಡೆದಾಗ ಕೂಡ ನಮ್ಮ ಇದೇ ಬುದ್ಧಿಜೀವಿಗಳು, “ಸಲ್ಮಾನ್ ತಪ್ಪು ಮಾಡಿರಬಹುದು. ಆದರೆ ಅದಕ್ಕಾಗಿ ಜೈಲು ಶಿಕ್ಷೆ ಕೊಡಬೇಡಿ!” ಎಂದು ಅತ್ತುಕರೆದು ಅಲವತ್ತುಕೊಂಡದ್ದು ಹಸಿರಾಗಿದೆ. ಅಷ್ಟೆಲ್ಲ ದೂರ ಯಾಕೆ ಹೋಗಬೇಕು; ನಮ್ಮ ರಾಜ್ಯದಲ್ಲೇ ಕೆಲವು ತಿಂಗಳ ಹಿಂದೆ, ಶಿವಮೊಗ್ಗದಲ್ಲಿ “ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ತಾನ್ ಮುರ್ದಾಬಾದ್” ಎಂದು ಘೋಷಣೆ ಕೂಗಿದವರನ್ನು ಕೂಡ, ಅವರು ಬುದ್ಧಿಜೀವಿಗಳಿಗೆ ಬೇಕಾದ ರಿಲಿಜನ್ನಿನವರು ಎಂಬ ಕಾರಣಕ್ಕೆ ಬಿಟ್ಟುಬಿಡಲಾಯಿತು. ಅವರ ಮೇಲಿದ್ದ ಎಲ್ಲ ಕೇಸುಗಳನ್ನು ವಾಪಸು ಪಡೆಯಲಾಯಿತು. ನಮ್ಮ ಪತ್ರಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಎಲ್ಲಾದರೂ ನಡೆದ ಗಲಾಟೆ, ಗಲಭೆ, ದೊಂಬಿಗಳ ವಿವರ ಕೊಡುವಾಗ, ಅದು ಹಿಂದೂಗಳ ತಪ್ಪಾಗಿದ್ದರೆ, ಅದನ್ನು ದೊಡ್ಡದಾಗಿ ದಪ್ಪಕ್ಷರಗಳಲ್ಲಿ ಬರೆದು ಪ್ರಚಾರ ಮಾಡುತ್ತವೆ. ಮುಸ್ಲಿಮ್ ಅಥವಾ ಕ್ರಿಶ್ಚಿಯನ್ ಮತಗಳಿಗೆ ಸಂಬಂಧಿಸಿದವರಿಂದ ಆಗಿದ್ದರೆ, ಅಲ್ಲಿ ಮತ-ಧರ್ಮ-ಕೋಮುಗಳ ಪ್ರಸ್ತಾಪವೇ ಇರುವುದಿಲ್ಲ. ತಪ್ಪಿತಸ್ಥರ ಹೆಸರುಗಳನ್ನು ಕೂಡ ಜಾಣತನದಿಂದ ಮರೆಮಾಚಲಾಗುತ್ತದೆ. ಹಿಂದೂ ಧರ್ಮವನ್ನು ಹೊರತುಪಡಿಸಿ ಮತ್ಯಾರೇ ಗಲಭೆಗಳಲ್ಲಿ ತೊಡಗಿಕೊಂಡರೂ ಅವರನ್ನು ಅವರ ಮತಗಳಿಂದ ಗುರುತಿಸಲು ನಮ್ಮ ನಿಷ್ಪಕ್ಷಪಾತಿ ಪತ್ರಕರ್ತರು ಹಿಂದೇಟು ಹಾಕುತ್ತಾರೆ. ಯಾಕೆ ಗೊತ್ತಾ? ಯಾಕೆಂದರೆ ನಮ್ಮದು ಜಾತ್ಯತೀತ ದೇಶ! ಇಲ್ಲಿ ಅವಮಾನ, ಬಯ್ಗುಳ, ದೋಷಾರೋಪ, ಕೇಸು, ಬಡಿತ, ಏರೋಪ್ಲೇನ್ ಎತ್ತಾಟಗಳೆಲ್ಲ ಹಿಂದೂಧರ್ಮೀಯರಿಗೆ ಮಾತ್ರ ಮೀಸಲು. ಉಳಿದವರನ್ನು ಈ ಎಲ್ಲ ಸೌಲಭ್ಯಗಳಿಂದ ಹೊರಗಿಡಲಾಗಿದೆ!
ನಾಯಕನಟನೂ ಅಂಜುವಂತಿದೆಯಂತೆ…
ಇನ್ನೊಬ್ಬ ಬುದ್ಧಿಜೀವಿ ಹೇಳುತ್ತಾನೆ – “ಪಾಪ, ಸಲ್ಮಾನ್ ಖಾನ್ ತಾನು ಬರೆದ ಒಂದು ಸಣ್ಣ ಟ್ವೀಟ್‍ಗೆ ಬಂದ ಪ್ರತಿಕ್ರಿಯೆಯ ಬಿಸಿ ತಡೆದುಕೊಳ್ಳಲಾರದೆ ಅದನ್ನು ಅಳಿಸಿಹಾಕಬೇಕಾಯಿತು. ತನ್ನ ಸಿನೆಮಾಾಗಳಲ್ಲಿ ಮೂಜಗವನ್ನು ಗೆಲ್ಲುವ ಈ ಎಂಟೆದೆಯ ಬಂಟ, ನಿಜಜೀವನದಲ್ಲಿ ತನ್ನ ಒಂದು ಪುಟ್ಟ ಅನ್ನಿಸಿಕೆಯನ್ನು ಕೂಡ ಹೇಳಿಕೊಳ್ಳಲು ಅಂಜಬೇಕಾದ ವಿಷಯ ಪರಿಸ್ಥಿತಿ ಭಾರತದಲ್ಲಿ ಬಂದಿದೆ. ಇಂತಹ ಸನ್ನಿವೇಶ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ!” ನಿಜ ಸ್ವಾಮಿ, ಪ್ರಜಾಪ್ರಭುತ್ವಕ್ಕೆ ಏನೇನು ಮಾರಕ ಎಂಬುದನ್ನು ನಾವು ಈ ಬುದ್ಧಿಜೀವಿಗಳ ಬಾಯಿಂದ ಕೇಳಿಯೇ ಕಲಿಯಬೇಕು! ಇಲ್ಲವಾದರೆ ನೋಡಿ, ನಮಗೆ ನಾವೆಂಥಾ ವಿಷಮ ಪರಿಸ್ಥಿತಿಯಲ್ಲಿದ್ದೇವೆಂಬ ಅರಿವು ಕೂಡ ಬರುವುದಿಲ್ಲ!! ಲೋಕದಲ್ಲಿ ಆಗುವ ಎಲ್ಲಾ ತೊಂದರೆಗಳನ್ನೂ ಕೊನೆಗೆ ಮೋದಿ ಎಂಬ ಅಲುಗದ ಗೂಟಕ್ಕೆ ಸುತ್ತಿಹಾಕುವ ಬ್ರಹ್ಮವಿದ್ಯೆಯನ್ನು ಈ ಬುದ್ಧಿಜೀವಿಗಳಿಂದಲೇ ನಾವು ಕಲಿಯಬೇಕು! ವಾಸ್ತವದಲ್ಲಿ, ಸಲ್ಮಾನ್ ಖಾನ್ ವಿಷಯದಲ್ಲಿ ನಡೆದದ್ದು ಇಷ್ಟು- ಆತ ಯಾಕೂಬ್ ಎಂಬ ಸೋದರನನ್ನು ಯಾಕೆ ವೃಥಾ ಗಲ್ಲಿಗೇರಿಸುತ್ತೀರಿ; ಹಾಗೆ ಗಲ್ಲಿಗೆ ಹಾಕಲೇಬೇಕೆಂದಿದ್ದರೆ ಮುಂಬೈಯಲ್ಲಿ ಬಾಂಬು ಹಾಕಿ ಓಡಿಹೋದವರನ್ನು ಹಿಡಿದುತಂದು ನೇಣು ಸಿಕ್ಕಿಸಿ – ಎಂದು ಮೊದಲ ಟ್ವೀಟ್ ಮಾಡಿದ. ಅವನ ಈ ಪೆದ್ದುತನಕ್ಕೆ ಕೆರಳಿದ ದೇಶಭಕ್ತರು ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳಲು ಶುರುಮಾಡಿದರು. ಕೊನೆಗೆ ಸಲ್ಮಾನ್‍ನಿಗೆ ತಂದೆಯಿಂದ ಫೋನ್ ಬಂತು. ತಂದೆಯ ಮಾತನ್ನು ಶಿರಸಾ ಪಾಲಿಸುವ ಈ ಶ್ರೀರಾಮಚಂದ್ರ, “ಪಿತೃವಾಕ್ಯ ಪರಿಪಾಲನೆಗಾಗಿ ನಾನು ಈ ಹಿಂದೆ ಬರೆದದ್ದನ್ನು ಅಳಿಸುತ್ತಿದ್ದೇನೆ” ಎಂದು ಘೋಷಿಸಿ ಟ್ವೀಟನ್ನು ಅಳಿಸಿದ. ತನ್ನ ಟ್ವಿಟರ್ ಪುಟದಿಂದ ಅಳಿಸಿದ ಮಾತ್ರಕ್ಕೆ ಆತನ ಮನಸ್ಥಿತಿ ಬದಲಾಗಿ ಹೋಯಿತು ಎಂದು ಯಾರೂ ಭಾವಿಸಬೇಕಿಲ್ಲ. ಇಷ್ಟಕ್ಕೂ ಆತ ತಾನು ಬರೆದದ್ದನ್ನು ವಾಪಸ್ ಪಡೆದದ್ದು ತಂದೆ ಹೇಳಿದರು ಎನ್ನುವ ಕಾರಣಕ್ಕೇನೇ ಹೊರತು ದೇಶದ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಮಾಡಿದೆ ಎಂಬ ಕಾರಣಕ್ಕಾಗಿಯೇನೂ ಅಲ್ಲ! ಸಲ್ಮಾನ್ ಹೇಳಿಕೇಳಿ ಒಬ್ಬ ಉದ್ಯಮಿ. ಅವನಿಗೆ ಬಾಂಬ್ ಸ್ಫೋಟಕ್ಕೆ ಕಾರಣನಾದ ಯಾಕೂಬ್‍ನನ್ನು ಸಮರ್ಥಿಸಿಕೊಂಡು ದಾವೂದ್‍ನಿಗೆ ತನ್ನ ನಿಷ್ಠೆಯನ್ನು ಪರೋಕ್ಷವಾಗಿಯಾದರೂ ತೋರಿಸಬೇಕಾಗಿತ್ತು. ಜೊತೆಗೆ, ದೇಶದ ತನ್ನ ಲಕ್ಷಾಂತರ ಭಾಯಿಗಳಿಗೂ “ನಾನು ನಿಮ್ಮೊಂದಿಗಿದ್ದೇನೆ” ಎಂಬ ಸಂದೇಶ ರವಾನಿಸಬೇಕಾಗಿತ್ತು. ಅಲ್ಲದೆ, ಈಗಾಗಲೇ ಕೋಟಿಗಟ್ಟಲೆ ಬಾಚುತ್ತಿರುವ ಬಾಯಿಜಾನ್ ಸಿನೆಮಾಾದ ಕಲೆಕ್ಷನ್ ಕೂಡ ಕಡಿಯದಂತೆ ನೋಡಿಕೊಳ್ಳಬೇಕಿತ್ತು. ಹೀಗೆ ದಾವೂದ್, ಮುಸ್ಲಿಮ್ ಮತ್ತು ಹಿಂದೂ ಎಂಬ ಮೂರು ಗೂಟಗಳನ್ನು ಉಳಿಸಿಕೊಳ್ಳಲು ಅವನಿಗೆ ಟ್ವೀಟ್ ಮಾಡಿ ಅಳಿಸುವ ಒಂದು ಕಪಟನಾಟಕ ಆಡಬೇಕಾಗಿಬಂತು.
ಆದರೆ ನಮ್ಮ ಬುದ್ಧಿಜೀವಿಗಳಿಗೆ ಇಲ್ಲೂ ನಮ್ಮ ದೇಶದ ವಿಷಮ ಪರಿಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಪಾಪ, ಸಲ್ಮಾನ್‍ನಂಥ ಸಲ್ಮಾನ್‍ಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ ನೋಡಿದಿರಾ? ಸಿನೆಮಾದಲ್ಲಿ ಕಾರು-ಲಾರಿಗಳನ್ನೆಲ್ಲ ಎತ್ತಿ ಭುಜಬಲ ಪರಾಕ್ರಮ ಮೆರೆಯುವ ನಾಯಕನಟನಿಗೇ ತನ್ನ ಮನದಾಳದ ಒಂದು ಮಾತನ್ನು ಹೇಳಲು ಅವಕಾಶ ಇಲ್ಲವೆಂದ ಮೇಲೆ ನಾವೆಂಥ ಘನಘೋರ ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ ನೋಡಿ ಎಂದು ನಮ್ಮೂರ ಬುದ್ಧಿಜೀವಿಗಳು ತಮ್ಮ ಹಳೇಸ್ಟಾಕಿನ ಮೊಸಳೆಕಣ್ಣೀರನ್ನು ಒಂದಷ್ಟು ಸುರಿಸಿ ಖರ್ಚು ಮಾಡುತ್ತಿದ್ದಾರೆ. ತನ್ನ ಬಾಯಿಗೆ ಬಂದದ್ದನ್ನು ಟ್ವಿಟರ್ ಅಥವಾ ಫೇಸ್‍ಬುಕ್ಕಿನಲ್ಲಿ ಹಾಕಿಕೊಳ್ಳುವ ಸ್ವಾತಂತ್ರ್ಯ ಸಲ್ಮಾನ್‍ಖಾನ್ ಅಥವಾ ದೇಶದ ಯಾವುದೇ ಪ್ರಜೆಗೆ ಇದೆಯೆಂದ ಮೇಲೆ, ಅದನ್ನು ಅಳಿಸುವ ಅಥವಾ ಉಳಿಸುವ ಪೂರ್ಣ ಸ್ವಾತಂತ್ರ್ಯ ಕೂಡ ಅವರಿಗೇ ಇದೆಯಲ್ಲವೆ? ಹಾಗೆಯೇ ತಾವು ಬರೆದುಕೊಂಡ ಅಸಡ್ಡಾಳ ಮಾತುಗಳಿಗೆ ಬರುವ ಎಲ್ಲ ಪ್ರತಿಕ್ರಿಯೆಗಳನ್ನು ಎದುರಿಸುವ ಜವಾಬ್ದಾರಿಯನ್ನು ಕೂಡ ಅವರೇ ವೈಯಕ್ತಿಕವಾಗಿ ಹೊತ್ತುಕೊಳ್ಳಬೇಕಲ್ಲವೆ? ಹುಲಿಯ ಜೊತೆ ಸರಸ ಆಡಲು ಹೋದವನು, ಅದರಿಂದ ಪರಚಿಸಿಕೊಳ್ಳಲೂ ಸಿದ್ಧನಾಗಿರಬೇಕಾಗುತ್ತದೆ. ನಮ್ಮ ಬುದ್ಧಿಜೀವಿಗಳಿಗೆ ಇದೇನೂ ತಿಳಿಯದ ಸಂಗತಿಯಲ್ಲ. ಆದರೆ, ಸಲ್ಮಾನ್ ಖಾನನೆಂಬ ಚಾರಸೋ ಬೀಸ್ ವ್ಯಕ್ತಿಯ ಎಡಬಿಡಂಗಿ ಕೆಲಸಗಳನ್ನು ಇಟ್ಟುಕೊಂಡಾದರೂ ಭಾರತದ ಈಗಿನ “ವಿಷಮ” ಪರಿಸ್ಥಿತಿಯನ್ನು ಪ್ರಪಂಚಕ್ಕೆ ತೋರಿಸಬೇಕು; ಮೋದಿಯ ಸರಕಾರದಲ್ಲಿ ಜನ ಎಷ್ಟೊಂದು ಭೀತರಾಗಿ ಉಸಿರಾಡುವುದಕ್ಕೂ ಯೋಚಿಸುವಂತಾಗಿದೆ ಎಂಬುದನ್ನು ಹೇಳಬೇಕು ಎನ್ನುವುದೇ ಇವರ ಅಜೆಂಡಾ. ಸಿಂಹವು ಸುಮ್ಮನಾದಾಗ ಕತ್ತೆಕಿರುಬಗಳು ಕಿರುಚಾಡುತ್ತವೆ ಎನ್ನುವ ಮಾತಿನ ಹಾಗೆ, ನ್ಯಾಯದೇವತೆ ಸಲ್ಮಾನ್ ಖಾನನ ವಿಷಯದಲ್ಲಿ ಮೌನವಾಗಿರುವುದರಿಂದ, ಅವನು ತಾನೂ ಒಬ್ಬ ಕ್ರಿಮಿನಲ್ ಎನ್ನುವುದನ್ನು ಮರೆತು ಇನ್ನೊಬ್ಬ ದುರುಳನ ಪರವಾಗಿ ದನಿಯೆತ್ತಿ ಮಾತಾಡುವಂತಾಗಿದೆ ಅಷ್ಟೆ. ಫುಟ್‍ಪಾತಿನಲ್ಲಿ ಮಲಗಿದವರ ಮೇಲೆ ಕಾರು ಹತ್ತಿಸಿ ಜೀವ ತೆಗೆದದ್ದಕ್ಕೆ ಅಥವಾ ರಾಜಸ್ತಾನದಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಿದ್ದಕ್ಕೆ ತಕ್ಕ ಶಿಕ್ಷೆ ಅವನಿಗೆ ಸಿಗುತ್ತಿದ್ದರೆ, ಅವನು ಈಗ ಯಾಕೂಬ್‍ನಿಗೆ ಬೆಂಬಲ ಘೋಷಿಸುವ ವಿಪರೀತ ವಿದ್ಯಮಾನವನ್ನು ನಾವು ಕಾಣಬೇಕಾಗಿರಲಿಲ್ಲ.
ಒಟ್ಟಲ್ಲಿ, ನಮ್ಮ ಸುತ್ತಮುತ್ತ ಮರಿಭಯೋತ್ಪಾದಕರು ಹುಟ್ಟಿ ಬರುತ್ತಿದ್ದಾರೆ. ಇವರ ಕೈಯಲ್ಲಿ ಬಂದೂಕುಗಳಿಲ್ಲ; ಆದರೆ ಹದತಪ್ಪಿದ ವಿಚಾರಗಳ ಭರ್ಜಿಗಳಿವೆ. ಕಣ್ಣಿಗೆ ಸೆಕ್ಯುಲರಿಸಂ ಎಂಬ ಬಣ್ಣದ ಕನ್ನಡಕವಿದೆ. ಹಣೆಯಲ್ಲಿ ಬುದ್ಧಿಜೀವಿಯೆಂಬ ಕಿರೀಟವಿದೆ. ಮಿದುಳು ಎಂಬ ವಸ್ತು ಇರಬೇಕಿದ್ದಲ್ಲಿ ಈ ಸೆಕ್ಯುಲರ್ ಉಗ್ರಗಾಮಿಗಳು ಹಿಂದುತ್ವ, ಮೋದಿ, ಬಲಪಂಥ, ಸನಾತನ ಧರ್ಮ ಇತ್ಯಾದಿಗಳ ಬಗ್ಗೆ ಅಬ್ಬಬ್ಬಾ ಎನಿಸುವಷ್ಟು ವಿಷ ಹುದುಗಿಸಿಟ್ಟುಕೊಂಡಿದ್ದಾರೆ. ಹಾಗಾಗಿಯೇ ಇವರಿಗೆ ಇನ್ನೂರೈವತ್ತು ಜನರ ಜೀವ ಉಡಾಯಿಸಿದ ಯಾಕೂಬ್ ದೇಶಭಕ್ತನಂತೆ ಕಾಣಿಸುತ್ತಾನೆ. ಸಮಾಜಸುಧಾರಕಿಯ ಪೋಸ್ ಕೊಟ್ಟು ಕೋಟ್ಯಂತರ ರುಪಾಯಿಗಳನ್ನು ಅಕೌಂಟಿಗೆ ತುಂಬಿಸಿಕೊಂಡ ತೀಸ್ತಾ ಸೇತಲ್ವಾಡ್ ಕ್ರಾಂತಿಕಾರಿಯಾಗಿ ಕಾಣಿಸುತ್ತಾಳೆ. ದೇಶಕ್ಕೆ ಪ್ರತಿದಿನ ನುಸುಳಲು ಯತ್ನಿಸುತ್ತಿರುವ ಭಯೋತ್ಪಾದಕರು ಸ್ವಾತಂತ್ರ್ಯ ಸೇನಾನಿಗಳಂತೆ ಕಾಣುತ್ತಾರೆ. ಬೆನ್ನಿಗೆ ಚೂರಿ ಇರಿಯಲು ಕಾದುಕೂತಿರುವ ಪಾಕಿಸ್ತಾನ ಪರಮಬಂಧುವಿನಂತೆ ಗೋಚರಿಸುತ್ತದೆ. ದಿನನಿತ್ಯ ನೂರಾರು ಮುಗ್ಧ ಹೆಣ್ಣುಮಕ್ಕಳನ್ನು ಮೃಗಗಳಂತೆ ಭೋಗಿಸಿ ಎಸೆಯುತ್ತಿರುವ ಐಸಿಸ್ ಉಗ್ರರು ಪರಮದಯಾಳು ಪ್ರವಾದಿಯ ಆಶೀರ್ವಾದವಿರುವ ಅಣ್ಣತಮ್ಮಂದಿರಂತೆ ಕಾಣುತ್ತಾರೆ. ಕಾಶ್ಮೀರದ ಪ್ರತ್ಯೇಕತಾವಾದಿಗಳು ಆದರ್ಶ ಮುತ್ಸದ್ದಿಗಳಂತೆ ಕಾಣುತ್ತಾರೆ. ಸಲ್ಮಾನ್‍ಖಾನನಂತಹ “ಮೂರು ಬಿಟ್ಟವರು” ಇವರಿಗೆ ಮಹಾನ್ ನಾಯಕರಂತೆ ಕಾಣುತ್ತಾರೆ! ಅಷ್ಟೇ ಏಕೆ, ಸುಪ್ರೀಂ ಕೋರ್ಟ್ ಎಂಬ ನ್ಯಾಯಾಂಗದ ಅತ್ಯುಚ್ಛಪೀಠ ಇವರಿಗೆ ಆಡಳಿತ ಪಕ್ಷದ ದಾಳದಂತೆ ಕಾಣುತ್ತದೆ! ಕಾರ್ಗಿಲ್ ದಿವಸವನ್ನು ಪ್ರತಿವರ್ಷವೂ ಮರೆಯದೆ ಆಚರಿಸುವ ಈ ದೇಶದ ನಿಜವಾದ ದೇಶಭಕ್ತರು ಇವರ ಕಣ್ಣಿಗೆ ದುರುಳರಂತೆ, ವಿಕೃತಾನಂದರಾಗಿ ಕಾಣಿಸುತ್ತಾರೆ. ಭಯೋತ್ಪಾದಕರನ್ನು ಸದೆ ಬಡಿಯಲು ಕೇಂದ್ರ ಸರಕಾರ ಪಂಜಾಬಿನಲ್ಲಿ ಇನ್ನಿಲ್ಲದಂತೆ ಹೋರಾಡುತ್ತಿದ್ದರೆ, ಈ ಸೆಕ್ಯುಲರ್ ಭಯೋತ್ಪಾದಕರು ದೆಹಲಿಯಲ್ಲಿ ಕೇಂದ್ರದ ವಿರುದ್ಧವೇ ಪ್ರತಿಭಟನೆ ಮಾಡುತ್ತಾರೆ! ಯಾಕೂಬ್‍ನನ್ನು ಬಿಡುಗಡೆ ಮಾಡಲೇಬೇಕೆಂದು ಖಡಕ್ಕಾಗಿ ಒತ್ತಾಯಿಸಿ (ಅಂದರೆ, ಧಮಕಿ ಹಾಕಿ) ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತಾರೆ! ಹೊರಗಿನ ಭಯೋತ್ಪಾದಕನನ್ನಾದರೂ ಬಂದೂಕಿನಿಂದ ಹೊಡೆದುರುಳಿಸಬಹುದೇನೋ. ಆದರೆ ಈ ಸೆಕ್ಯುಲರ್ ಭಯೋತ್ಪಾದಕ ಅಷ್ಟುಬೇಗ ನೀಗುವವನಲ್ಲ! ದೇಶದಲ್ಲಿ ಮೊಳಕೆಯೊಡೆಯುತ್ತಿರುವ ಈ ಹೊಸ ಬಗೆಯ ಭಯೋತ್ಪಾದಕರ ಪಡೆಯಿಂದ ಗಂಡಾಂತರ ಕಾದಿದೆ ಎನ್ನುವುದರಲ್ಲಿ ಮಾತ್ರ ಸಂಶಯ ಇಲ್ಲ.
ಸ್ವಾಂತಂತ್ರ್ಯ ಕಾಲದ ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಹೋಗಿ ನೆಲಸಲು ಬಯಸಿದ್ದ ಅನೇಕ ಮುಸಲ್ಮಾನರಿಗೆ ಕಾರಣಾಂತರಗಳಿಂದ ಹೋಗಲು ಸಾಧ್ಯವಾಗಲಿಲ್ಲ. ಅವರೆಲ್ಲ ಭಾರತದಲ್ಲೇ ಇರಬೇಕಾದಂತಹ ಪರಿಸ್ಥಿತಿ ಉದ್ಭವಿಸಿತು. ಉದಾಹರೆಣೆಗೆ ಹೈದರಾಬಾದ್ ಪ್ರಾಂತ್ಯದ ಮುಸಲ್ಮಾನರು ಹಾಗೂ ಕಾಶ್ಮೀರದ ಮುಸಲ್ಮಾನರು. ಇವರಿಗೆ ಇಂದಿಗೂ ವಿಭಜನೆ ಕಾಲದಲ್ಲಿ ತಪ್ಪಿದ ಅವಕಾಶದ ಬಗ್ಗೆ ಬೇಸರವಿದೆ, ಅದು ಒವೈಸಿ ತರಹದ ನಾಯಕತ್ವಕ್ಕೆ ಅವರನ್ನು ದೂಡಿದೆ. ಆದುದರಿಂದ ಪಾಕಿಸ್ತಾನದ ಬಗ್ಗೆ ಒಲವಿರುವ ಮುಸಲ್ಮಾನರಿಗೆ ಸೂಕ್ತ ಪರಿಹಾರ ಕೊಟ್ಟು ಮತ್ತೊಮ್ಮೆ ಪಾಕಿಸ್ತಾನಕ್ಕೆ ವಲಸೆ ಹೋಗಲು ಸರಕಾರ ಯೋಜನೆಯೊಂದನ್ನು ಕಾರ್ಯಗತ ಮಾಡಬೇಕು. ಈ ಬಗ್ಗೆ ಪಾಕಿಸ್ತಾನದ ನಾಯಕತ್ವದ ಜೊತೆಗೆ ದ್ವಿಪಕ್ಷೀಯ ಮಾತುಕತೆ ಶುರು ಮಾಡಬೇಕು.
ಚೆನ್ನಬಸವೇಶ್ವರ ಬಿದರಿಯವರೇ, ಪಾಪ “ಅವರು” ಅಂದು ಪಾಕಿಸ್ತಾನಕ್ಕೋ, ಬಾಂಗ್ಲಾಕ್ಕೋ ಹೋಗಲು ಆಗದವರೆಂದೂ.. ಅವರು ಹಾಗೆ ಯೋಚಿಸರಬಹುದೆಂದೂ, ಕಾರಣಾಂತರಗಳಿಂದ ಹೋಗಲು ಆಗದವರೆಂದೂ ತರ್ಕಿಸಿ, ಅವರ ತಪ್ಪಲ್ಲದ ಕಾರಣಕ್ಕೆ ಓವೈಸಿಯಂತಹ ಮಹಾನುಭಾವ ನಿರ್ಮಾಣಗೊಂಡನೆಂಬ ನಿಮ್ಮ ಮಹಾನ್ ಆವಿಷ್ಕಾರಕ್ಕೆ ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿ ಕೊಟ್ಟರೂ ಕಡಿಮೆಯೇ. ಈ ದೇಶದ ಭದ್ರತೆಯ ಬಗ್ಗೆ, ಈ ದೇಶದ ನೆಲ-ಜಲ-ಜನಗಳ ಬಗ್ಗೆ ಬೇಕಿನಿಸಿದ ಹಾಗೆ ಬಾಯಿ ಹರಿಬಿಟ್ಟು, ತಿರಸ್ಕಾರ ಭಾವದಿಂದ ಇಲ್ಲಿಯ ಸರ್ವೋಚ್ಚನ್ಯಾಯಾಲಯದ ಆದೇಶದ ವಿರುದ್ಧವೆನಿಸುವ ಧ್ವನಿಯನ್ನೇ ತುಂಬಿಕೊಂಡು ಯಾಕೂಬ್ ಪರವೆನಿಸುವ ಧ್ವನಿಯನ್ನು ಎತ್ತುತ್ತೀರಲ್ಲಾ ಸ್ವಲ್ಪವೂ ನಾಚಿಕೆಯಾಗಬೇಡವೇ ? ಇಲ್ಲಿಂದ ಪಾಕಿಸ್ತಾನಕ್ಕೆ ಹೋದ ಮುಸ್ಲೀಮರೆಲ್ಲಾ ಸೌಖ್ಯದಿಂದ, ಪರಮಸಂತೋಷದಿಂದ ಆನಂದತುಂದಿಲರಾಗಿ ನಿತ್ಯವೂ ಲೋಲಾಡುತ್ತಿದ್ದಾರೆ ಆಲ್ಲವೇ? ಪಾಪ! ಅವರನ್ನು ಸೇರಲಾಗದೇ ನಿತ್ಯವೂ ಮೋದಿಆಳ್ವಿಕೆಯ ಭಾರತದಲ್ಲಿ ಉಸಿರುಗಟ್ಟುವ ವಾತಾವರಣದಲ್ಲಿರುವ ಆ ಮಹಾನುಭಾವರಿಗೆ ನಿಮ್ಮಂಥ ಪ್ರಾಜ್ಞರ ದಿವ್ಯ ಸಾಂತ್ವನ ನಿಜಕ್ಕೂ ಬೇಕಿತ್ತಲ್ಲವೇ?! ಈದ್ ಬಂದರೆ ಇದ್ದಬದ್ದದ್ದೆಲ್ಲವನ್ನೂ “ಅವರಿಗಾಗಿ” ಮೀಸಲಿಡುವ ತೆಲಂಗಾಣಜನಕನ ನಾಡಿನಲ್ಲಿಯೂ ಅವರು ಕ್ಷೇಮವಾಗಿಲ್ಲ….. ಹಾಗಾಗಿ ” ಪಾಕಿಸ್ತಾನದ ಬಗ್ಗೆ ಒಲವಿರುವ ಮುಸಲ್ಮಾನರಿಗೆ ಸೂಕ್ತ ಪರಿಹಾರ ಕೊಟ್ಟು ಮತ್ತೊಮ್ಮೆ ಪಾಕಿಸ್ತಾನಕ್ಕೆ ವಲಸೆ ಹೋಗಲು ಸರಕಾರ ಯೋಜನೆಯೊಂದನ್ನು ಕಾರ್ಯಗತ ಮಾಡಬೇಕು. ಈ ಬಗ್ಗೆ ಪಾಕಿಸ್ತಾನದ ನಾಯಕತ್ವದ ಜೊತೆಗೆ ದ್ವಿಪಕ್ಷೀಯ ಮಾತುಕತೆ ಶುರು ಮಾಡಬೇಕು..” ಎಂದು ಘೋಷಿಸುತ್ತೀರಲ್ಲಾ, ಇಂದಿನ ಪಾಕಿಸ್ತಾನವನ್ನು ನೋಡಿಯೂ ವಲಸೆ ಹೋಗಲಿ ಎಂಬ ನೀವು ಮಾನವೀಯತೆ ಇರುವವರಾ?!! ಮಾತೆತ್ತಿದರೆ, ಮಾನವಹಕ್ಕುಗಳ ಹೆಸರಿನಲ್ಲಿ ದೇಶದ ಅಖಂಡತೆಯ ಸೊಗಡನ್ನೇ ಕೊಳ್ಳೆಹೊಡೆಯುತ್ತಿರುವುದು, ನಿಮ್ಮಂತಹವರ ಈ ಸೋಗಲಾಡಿತನ. ನಿಮ್ಮ ಲೆಕ್ಖಕ್ಕೆ ಹಿಂದೂಗಳು ಮಾನವರೇ ಅಲ್ಲ. ಈ ದೇಶದ ಮೂಲ ಸಂಸ್ಕೃತಿಯ ಮೇಲೆ ವೃಥಾ ದ್ವೇಷ ಬೆಳೆಸಿಕೊಂಡು, ಯಾರದ್ದೋ ಬುದ್ದಿಯ ತ್ಯಾಜ್ಯಗಳಿಂದಾದ ಸಿದ್ಧಾಂತವನ್ನೇ ಬಾಸಿಂಗದಂತೆ ಸಿಗಿಸಿಕೊಂಡು ಸ್ವಂತ ಬುದ್ದಿಗೆ ಕೃಷಿಮಾಡುವ ಅವಕಾಶವನ್ನೂ ಕೊಡದೇ, ಸ್ವಾರ್ಥಸಾಧನೆಗಾಗಿ ದೇಶದ್ರೋಹದ ಪರವಾಗಿಯೂ ಧ್ವನಿಎತ್ತುವ ಕಾಯಕವನ್ನು ನಿಷ್ಠೆಯಿಂದ, ನಿರ್ಭಿಡೆಯಿಂದ ಮಾಡುತ್ತಿರುವ, ಸ್ವಘೋಷಿತ “ಪ್ರಗತಿ”ಪರರೇ, ಅವಕಾಶವಿರದ್ದರೂ ಅವಕಾಶವೆಂದುಕೊಂಡು ಬಾಯಿಚಪಲ ತೀರಿಸಿಕೊಳ್ಳುವ ನಿಮ್ಮ ಹಂಬಲ, ಅವ್ಯಾಹತವಾಗಿ ನಡೆಯುತ್ತಿದೆ. Congratulations.
I think Mr. Bidari has a point. Government should facilitate migration of interested Muslims to Pakistan. Let’s start with Sania Mirza.
Excellent one….
ಲೇಖನದ ಒಟ್ಟಾರೆ ಆಶಯಕ್ಕೆ ಪರವಾಗಿದ್ದೇನೆ, ಅದರೆ ಸಲ್ಮಾನ ಖಾನ್ ಟೈಗರ್ ಮೆಮೊನ್ಗೆ ಶಿಕ್ಷೆ ಆಗಬೇಕಾಗಿತ್ತು ಎಂದಿರುವುದು ಕೆಟ್ಟ ಉದ್ದೇಶದಿಂದ ಎನ್ನಲು ಪುರಾವೆಯಿಲ್ಲ. ಯಾಕೂಬನಿಗಿಂತ ಹೆಚ್ಚಿನ ಅಪರಾಧವನ್ನು ಟೈಗರ್ ಮಾಡಿದ್ದಾನೆ, ಅವನಿಗೆ ಶಿಕ್ಷೆ ಆಗಬೇಕು ಎಂದು. ಇಂತಹ ವಿಷಯಗಳನ್ನು ತಿದ್ದಿ ಬರೆಯಬೇಕೆಂದು ಬೇಡಿಕೊಳ್ಳುತ್ತೇನೆ.
ಸೈನ್ಯ ಎಷ್ಟು ಬಲವಾದರೇನು, ಒಳಗಿನ ಶತ್ರುವನ್ನು ನಿಗ್ರಹಿಸಲು ಯಾವ ಬಂದೂಕಿಗೂ ಸಾಧ್ಯವಿಲ್ಲ. ವಿಶ್ವವಿದ್ಯಾಲಯಗಳಲ್ಲಿ, ಹ್ಯುಮಾನಿಟೀಸ್ ಹೆಸರಿನಲ್ಲಿ, ಕಲಾ ವಿಭಾಗದ ಎಲ್ಲ ವಿಷಯಗಳಲ್ಲಿ ವರ್ಷಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಈ ಬಗೆಯ ವ್ಯಕ್ತಿಗಳ ನಿರ್ಮಾಣ ನಡೆಯುತ್ತಿದೆ. ಅದೆಷ್ಟು ಪ್ರಬಲವಾದ ವೃತ್ತ ಎಂದರೆ, ಯಾವುದೇ ಸಕಾರಾತ್ಮಕ ವಿಚಾರಧಾರೆಯ ಸಂಸ್ಥೆಯೊಂದು ತನ್ನ ಪತ್ರಿಕೋದ್ಯಮ ವಿಭಾಗಕ್ಕೆ ವಿಕೃತಿಗಳಿಲ್ಲದ ಶಿಕ್ಷಕನನ್ನು ಹುಡುಕಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ವಿಘಟಕ ಚಿಂತನೆಯಿಲ್ಲದ ಬೌದ್ಧಿಕ ಪರಿವಾರವೇ ಇಲ್ಲ ಎನ್ನುವಂಥಾ ಸ್ಥಿತಿಯೊಂದು ನಿರ್ಮಾಣವಾಗಿದೆ.
ಪ್ರಗತಿಪರರು ದ್ವಂದ್ವಕ್ಕೆ ಹೆಸರು ವಾಸಿಯಾದವರು. ಹಿಪೋಕ್ರೆಟ್ಸ್ ಎಂದರೂ ಪಾಪ ಬರಲಾದರದು
ಬಹಳ ದಿವಸಗಳಿಂದ ಒಂದು ಪ್ರಶ್ನೆ ನನಗೆ ಬಗೆಹರಿಯುತ್ತಿಲ್ಲ..
ಗೋಧ್ರಾದಲ್ಲಿ ರೈಲ್ವೇ ಬೋಗಿ ಸುಟ್ಟದ್ದು ಮೂಲಪ್ರೇರಣೆಯಾಗಿದೆ ಮತ್ತು ಅಮಾಯಕರ ಹತ್ಯೆ ಅದರ ಪರಿಣಾಮವಾಗಿದೆ.
ಹಾಗೆಯೇ ಅಯೋಧ್ಯೆಯಲ್ಲಿ ಮಸೀದಿ ನೆಲಸಮ ಮಾಡಿದ್ದು ಮೂಲಪ್ರೇರಣೆಯಾಗಿದೆ ಮತ್ತು ಮುಂಬಯಿ ಸ್ಫೋಟ ಸರಣಿ ಅದರ ಪರಿಣಾಮವಾಗಿದೆ.
ಹೀಗೆ ಮೊದಲ ಹಿಂಸಾಚಾರ ಪ್ರಕರಣದಲ್ಲಿ ಮುಸ್ಲಿಮರು ಮೂಲಪ್ರೇರಕರಾದರೆ
ಎರಡನೆಯ ಪ್ರಕರಣದಲ್ಲಿ ಹಿಂದೂಗಳು ಮೂಲ ಪ್ರೇರಕರಾಗಿರುವರು.
ಆದರೆ ನಮ್ಮ ಬುದ್ಧಿಜೀವಿಗಳು ಎರಡೂ ಪ್ರಕರಣಗಳಲ್ಲಿ (ಮಸೀದಿ ಧ್ವಂಸ ಪ್ರಕರಣ ಮತ್ತು ಗೋಧ್ರಾ ಪ್ರಕರಣ) ಹಿಂದೂಗಳೇ ಸಮಾನವಾಗಿ ತಪ್ಪಿತಸ್ಥರಾಗಿರುವರು ಎಂಬಂತೆ ಈಗಲೂ ಬಿಂಬಿಸುತ್ತಿರುವರು.
ಇದು ಮಾರ್ಜಾಲ ನ್ಯಾಯವಲ್ಲವೇ? ಅರ್ಥವಾಗುತ್ತಿಲ್ಲ..
ಭಾರತದ ಕಾನೂನು ಮುಸ್ಲಿಮರಿಗೆ ನ್ಯಾಯಯುತವಾಗಿಯೇ ಕೆಲವು ವಿಶೇಷ ಸವಲತ್ತು ನೀಡಿರಬಹುದು
ಆದರೆ ಸಾಮಾಜಿಕ ಅಪರಾಧಗಳಲ್ಲೂ ಮೀಸಲಾತಿ, ಸವಲತ್ತುಗಳನ್ನು ಪರಿಗಣಿಸುವುದು ಉಚಿತವೇ?
ಇದಕ್ಕೆ ಯಾರಾದರೂ ಬುದ್ಧಿಜೀವಿಗಳು ಇದಕ್ಕೆ ಉತ್ತರಿಸುವರೇ?
ನೀವೇನಾದರೂ ಸರಿಯಾದ ಇತಿಹಾಸ ಅರ್ಥಮಾಡಿಕೊಳ್ಳಬಲ್ಲವರು ಹೌದೋ ಅಲ್ಲವೋ ಗೊತ್ತಿಲ್ಲ. ಅದ್ಯಾವುದೋ ಎರಡನೇ ಪ್ರಕರಣ ಅನ್ನುತ್ತೀರಲ್ಲಾ… ಅದರಲ್ಲಿ ಹಿಂದೂಗಳು ಯಾಕೆ ಮೂಲ ಪ್ರೇರಕರು ? ರಾಮಜನ್ಮಭೂಮಿ ಎಂದು ಗುರುತಿಸಲಾಗುವ ಸ್ಥಳದಲ್ಲಿ ಸಹಸ್ರಮಾನಗಳಿಂದ ಇದ್ದ ಕಟ್ಟವನ್ನು ಕೆಡವಿ ಮಸೀದಿ ನಿರ್ಮಿಸಿದ್ದಕ್ಕೆ ಪುರಾವೆಗಳಿದ್ದರೂ, ಸುಪ್ರೀಂಕೋರ್ಟ್ ಅದನ್ನು ಒಪ್ಪಿಕೊಂಡೇ ಮೂವರಿಗೆ ಆ ಭೂಮಿಯನ್ನು ಹಂಚಿದ್ದರೂ ಬಹುದಿನದಿಂದ ಪ್ರಶ್ನೆ ಬಗೆಹರಿಯುತ್ತಿಲ್ಲವೆಂಬ ನಾಟಕವೇಕೆ? ಒಂದು ವೇಳೆ ಯಾವ ಸಾಕ್ಷ್ಯವೂ ಇರದಿದ್ದರೆ, ಕೇವಲ ಮಸೀದಿಗೆ ಸೇರಿದ ಜಾಗವೆಂಬ ನಿರ್ಣಯ ಬರಬೇಕಿತ್ತಲ್ಲವೇ? ಪುರಾತತ್ತ್ವ ಇಲಾಖೆಯೂ ಅನುಮೋದಿಸಿರುವ ಆಧಾರಗಳು ಸುಳ್ಳೇ? ಸಾವಿರಾರು ವರ್ಷಗಳಿಂದ ಇರುವ ಕಾಶೀ-ಮಥುರಾ ಮುಂತಾದ ಮುಖ್ಯ ಹಿಂದೂ ದೇವಾಲಯಗಳ ಪಕ್ಕದಲ್ಲೇ ಬೇಕೆಂದೇ ದುರುದ್ದೇಶದಿಂದ ಮಸೀದಿ ನಿರ್ಮಾಣ ಮಾಡಿದ್ದು ಬಣ್ಣದ ಕನ್ನಡಕ್ಕೆ ಕಾಣುವುದಿಲ್ಲ. ದೇವಸ್ಥಾನಗಳನ್ನು ಕೆಡವಿ ಮಸೀದಿ ಮಾಡಿದ ಉದಾಹರಣೆ ನೂರಾರು; ಬೇಕಿದ್ದರೆ ಒಮ್ಮೆ ಶ್ರೀರಂಗಪಟ್ಟಣಕ್ಕೆ ಹೋಗಿ ರಸ್ತೆಯಲ್ಲೇ ನಿಂತು ನೋಡಿ ಬನ್ನಿ. ದೇವಾಲಯ ಸ್ವರೂಪದ ಕಂಬಗಳ ಮೇಲೆ ಮಸೀದಿ ನಿಂತದ್ದನ್ನು ಕಂಡು ಧನ್ಯತಾಭಾವವನ್ನು ಹೊಂದಿ ಬನ್ನಿ. ಹಿಂದೂಗಳು ತಮ್ಮ ಹಕ್ಕಿಗಾಗಿ ಹೋರಾಡುವುದು ತಪ್ಪೆಂಬ ಸುಪ್ತಾರ್ಥದಲ್ಲಿ ನಿಮ್ಮ ದನಿ ಇದ್ದಂತೆ ಕಾಣುತ್ತಿದೆ.
ನಿಷೇಧಿತ ಪ್ರದೇಶದೊಳಗೆ ಅತಿಕ್ರಮವಾಗಿ ಪ್ರವೇಶಿಸಿ ಸಾವಿರ ವರ್ಷಗಳಷ್ಟು ಹಳೆಯದಾದ ಮಸೀದಿ ಅಥವಾ ಮಸೀದಿಯಂತಹ ಕಟ್ಟಡವನ್ನು ಧ್ವಂಸ ಮಾಡಿದವರು ಸುಪ್ರೀಂ ಕೋರ್ಟಿನ ತೀರ್ಮಾನವನ್ನು ಹಾಗು ಪುರಾತತ್ವ ಇಲಾಖೆಯ ಆಧಾರಗಳನ್ನು ಉಲ್ಲೇಖಿಸುವುದು ಮತ್ತು ಗೌರವಿಸುವುದು ಹಾಸ್ಯಾಸ್ಪದ. ಕೋರ್ಟಿನ ಆಜ್ಞೆಯನ್ನು, ಪುರಾತತ್ವ ಇಲಾಖೆಯ ಪುರಾವೆಗಳನ್ನು ಕಾಲ ಕಸದಂತೆ ನಿರ್ಲಕ್ಷಿಸಿ, ನಿಷೇಧಿತ ಪ್ರದೇಶದೊಳಗೆ ಅತಿಕ್ರಮವಾಗಿ ಪ್ರವೇಶಿಸಿ ಮಂದಿರವನ್ನು ಅಲ್ಲೇ ನಿರ್ಮಿಸುವೆವು ಎಂದು ಕೂಗಾಡಿದ ಶೂರರಿಗೆ ಇಪ್ಪತ್ತೈದು ವರ್ಷಗಳಾದರೂ ಮಂದಿರ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ ಏಕೆ? ನ್ಯಾಯಾಲಯದ ಆಜ್ಞೆಯನ್ನು ಕಾಲಕಸಗೈದವರು ಕಾನೂನಿನ ತೊಡಕಿದೆ ಎಂದು ವಿವರಣೆ ನೀಡಿದರೆ ಅದು ವಂಚನೆಯಾಗುತ್ತದೆ.
ಹಿಂದೂಗಳು ತಮ್ಮ ಹಕ್ಕಿಗಾಗಿ ಹೋರಾಡಿದರೆ ಯಾರೂ ಆಕ್ಷೇಪಿಸಲಾರರು. ಆದರೆ ಇಲ್ಲಿ ಹೋರಾಟ, ಕೊನೆಯ ಪಕ್ಷ ರಾಮನ ಕುರಿತ ಭಕ್ತಿಯಾದರೂ ಎಲ್ಲಿದೆ?
ಅಂದು ದಶರಥನ ಕುರುಡು ಪ್ರೇಮ ಕೈಕೇಯಿಯಲ್ಲಿ ಕುರುಡು ದ್ವೇಷಕ್ಕೆ ಜನ್ಮ ನೀಡಿದ ಹಾಗೆ ಇಂದಿನ ಸಂಘ ಪರಿವಾರ ಮಾಡುತ್ತಿರುವ ರಾಜಕಾರಣವು ಕಾಂಗ್ರೇಸ್‌ಗಳ ಹುಸಿ ಮುಸ್ಲಿಂ ಪ್ರೀತಿಯ ಶನಿಸಂತಾನವಾಗಿದೆ. ತ್ರೇತಾಯುಗದ ರಾಜಕೀಯ ಕುತಂತ್ರಗಳು ರಾಮನನ್ನು ಮೊದಲ ಸಲ ಕಾಡಿಗಟ್ಟಿತು. ಈಗ ಕಲಿಯುಗದಲ್ಲಿ ಸಂಘ ಪರಿವಾರದ (ಇದೊಂದು ಧಾರ್ಮಿಕ ಸಂಸ್ಥೆಯೋ, ರಾಜಕೀಯ ಸಂಸ್ಥೆಯೋ ತಿಳಿಯದು) ಸೋಗಲಾಡಿತನದಿಂದಲೋ, ಮುಸ್ಲಿಂ ದ್ವೇಷದಿಂದಲೋ ಅವನು ಎರಡನೆಯ ಸಲ ವನವಾಸ ಅನುಭವಿಸುತ್ತಿರುವನು.
ಈ ವೀಡಿಯೋ ಪೂರ್ಣನೋಡಿ. ನಿಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿವೆ. ಯಾವುದು ಹಾಸ್ಯಾಸ್ಪದ ಅನ್ನುವ ಬಗ್ಗೆ ಚರ್ಚೆ ಬೇಕಿದ್ದರೆ ಮತ್ತೆ ಮಾಡೋಣ.
Nice article
Let MSM and liberals support Yakub and other terrorists. That will naturally polarize opinion of the common people. Modi will be the beneficiary of the polarization and will help him hang on to power despite his government’s failure to bring achche din.
ಪ್ರಗತಿಪರರು ಅಥವಾ ಇಂಟೆಲೆಕ್ಚುವಲ್ ಗಳನ್ನು ಕುರಿತು ಕಲ್ಚರಲ್ ಕ್ರಿಟಿಸಿಸಂನಲ್ಲಿ ಬರೆದ ಮಾತು: “…the intellectuals formerly have known as moralists and publicists, before those became dirty words. That is to say, they are those who have taken it upon themselves to describe the conduct of their fellow citizens to their fellow citizens, taking conduct in a very broad sense, including prominently that part of it which concerns moving ideas from one mind to another; to judge whether and how that conduct is wanting; and to suggest more desirable states of affairs. No principled distinction can be drawn between cultural criticism and the writing of newspaper editorials, just as there is none between book reviewing and literary criticism; the main social difference is that people who say they engage in “foo criticism” are now more likely to be university professors than the op-ed writers and reviewers.
ಇದಕ್ಕಿಂತ ಇನ್ನೇನೂ ಬೇಕಿಲ್ಲ.
If we Hindus stand together socially,economically&most importantly,politically,we can emerge as winners in this proxy war.I suggest interested ppl 2 read ‘Aavarana-The veil’by S.l.Bairappa.Also talk 2 ur children about LoveJihad,Vote bank politics +send them2 RSS shakhas if possible.