ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 7, 2015

3

ಅಂಥ ಹುಡುಗಿಯರ ನಡುವೆ ನಾವು ಕಳೆದು ಹೋಗಿದ್ದೇವೆ!

‍ನಿಲುಮೆ ಮೂಲಕ

– ವಿನಾಯಕ ಕೊಡ್ಸರ

ಪೋರ್ನ್ಪೋರ್ನ್‌ ಬ್ಯಾನ್‌ ರಾಷ್ಟ್ರೀಯ ವಿಪತ್ತು ಎಂಬಂತೆ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ. ಫೇಸ್ಬುಕ್‌, ವಾಟ್ಸಪ್‌ನಲ್ಲಿ ಒಂದಷ್ಟು ಜೋಕುಗಳು ಹರಿದಾಡುತ್ತಿವೆ. ಪರ-ವಿರೋಧದ ನಿಲುವುಗಳು ಇದ್ದೇ ಇದೆ! ನೀವು ಯಾವುದೇ ಸೆಕ್ಸ್‌ ವೀಡಿಯೋ ನೋಡಿದ್ರೂ, ಅದು ಸಹಜವಾಗಿದ್ದಲ್ಲ, ಸಂಪಾದನೆಗೊಂಡ ಆವೃತಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತೆ. ಕ್ಯಾಮೆರ ಫ್ರೇಮ್‌ಗಳು, ಬದಲಾಗುವ ಸ್ಥಳಗಳು, ಮ್ಯೂಸಿಕ್‌ನಲ್ಲಿನ ವ್ಯತ್ಯಯಗಳು ಎಲ್ಲವೂ ಕೂಡ ಇದೊಂದು ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋನಂತೆ ಎಡಿಟೆಡ್‌ ಆವೃತಿ ಮತ್ತು ಪೂರ್ತಿ ಸ್ಕ್ರಿಪ್ಟೆಡ್‌ ಎಂಬುದನ್ನು ಸೂಚಿಸುತ್ತದೆ.

ಜಗತ್ತಿಗೆ ಚಲಿಸುವ ಚಿತ್ರಗಳ ಪರಿಕಲ್ಪನೆ ಬಂದಾಗಿನಿಂದ ಈ ಪೊರ್ನೊಗ್ರಫಿಯ ಇತಿಹಾಸ ಸಿಗುತ್ತೆ. ಅಂದ್ರೆ ೧೮೯೦ರ ದಶಕದಿಂದಲೆ ಈ ಉದ್ಯಮ ಆರಂಭವಾಗಿದ್ದು ಎಂಬ ಅನುಮಾನದಿಂದ ಗೂಗಲ್‌ನಲ್ಲಿ ಇಂಥ ಚಿತ್ರಗಳು ಎಲ್ಲಿ ತಯಾರಾಗುತ್ತವೆ, ಹೇಗೆ ತಯಾರಾಗುತ್ತವೆ, ಇವುಗಳ ಹಕ್ಕಿಕತ್ತು ಏನು ಎಂಬ ಕುರಿತು ಒಂದಷ್ಟು ದಿನದ ಹಿಂದೆ ಸುಮ್ಮನೆ ಜಾಲಾಡಿದ್ದೆ.

ಈ ಪೋರ್ನ್‌ ವೀಡಿಯೋ ಉತ್ಪಾದಕ ಪ್ರೊಡೆಕ್ಷನ್‌ ಹೌಸ್‌ಗಳು ಮುಖ್ಯವಾಗಿ ಬೇರು ಬಿಟ್ಟಿರುವುದು ಯೂರೋಪ್‌ ಮತ್ತು ಅಮೆರಿಕದಲ್ಲಿ. ಒಂದು ಅಂದಾಜಿನ ಪ್ರಕಾರ ೨೦೧೨ರವೇಳೆಗೆ ಈ ನೀಲಿಚಿತ್ರ ಜಗತ್ತಿನ ವಾರ್ಷಿಕ ಆದಾಯ ೧೫-೨೦ ಶತಕೋಟಿ ಡಾಲರ್‌. ಅಮೆರಿಕದ ೨ ಪ್ರಮುಖ ವೆಬ್‌ಸೈಟ್‌ಗಳು ವರ್ಷಕ್ಕೆ ಸುಮಾರು ೪ ಶತಕೋಟಿ ಡಾಲರ್‌ನಷ್ಟು ವಹಿವಾಟು ನಡೆಸುತ್ತಿವೆ. ಅಲ್ಲಿಗೆ ಇದೊಂದು ವ್ಯವಸ್ಥಿತ ಉದ್ಯಮ ಎಂಬುದನ್ನು ಖಾತ್ರಿಪಡಿಸಿಕೊಂಡು ಇಂಟರ್‌ನೆಟ್‌ನಲ್ಲಿ ಜಾಲಾಡುತ್ತ ಹೋದಾಗ ನನಗೆ ಇಂಗ್ಲಿಷ್‌ನ ೨ ಅತ್ಯದ್ಭುತ ಲೇಖನ ಸಿಕ್ಕಿತ್ತು.

ಮುಖ್ಯವಾಗಿ ಅಮೆರಿಕದ ಸ್ಯಾನ್‌ ಫೆರ್ನಾಂಡೊ ವ್ಯಾಲಿ ಇಂಥ ಚಿತ್ರಗಳನ್ನು ಉತ್ಪಾದಿಸುವ ಅತಿ ಹೆಚ್ಚು ಪ್ರೊಡೆಕ್ಷನ್‌ ಹೌಸ್‌ಗಳನ್ನು ಹೊಂದಿರುವ ಅಡ್ಡ. ಅಲ್ಲಿಗೆ ಭೇಟಿ ನೀಡುವ ಲೇಖಕಿಯೊಬ್ಬಳು ಅಲ್ಲಿನ ಇಡೀ ಜಗತ್ತನ್ನು ವಿವರಿಸಿ ಒಂದು ಅದ್ಭುತವಾದ ಲೇಖನ ಬರೆಯುತ್ತಾಳೆ. ಇಡೀ ಪೋರ್ನ್‌ ಜಗತ್ತು ಒಂದು ಹಾಲಿವುಡ್‌ ಸಿನಿಮಾ ಉದ್ಯಮದಂತೆ ಎಂಬುದನ್ನು ಆಕೆ ಬರೆಯುತ್ತಾಳೆ. ಅಲ್ಲೊಬ್ಬ ನಿರ್ದೇಶಕ ಇರುತ್ತಾನೆ, ಆತನಿಗೆ ಸಹಾಯಕರು ಇರುತ್ತಾರೆ. ಸ್ಕ್ರಿಪ್ಟ್‌ ಇರುತ್ತೆ. ಕಾಲ್‌ಶೀಟ್‌ ಕೊಟ್ಟ ಸಮಯಕ್ಕೆ ಪೋರ್ನ್‌ ಮಾಡೆಲ್‌ಗಳು ಬರುತ್ತಾರೆ. ಶೂಟಿಂಗ್‌ ಮುಗಿಸಿಕೊಂಡು ಹೋಗುತ್ತಾರೆ ಎಂಬುದರಿಂದ ಹಿಡಿದು ಯಾವ್ಯಾವ ಫ್ರೇಮ್‌ಗಳು ಎಲ್ಲಿ, ಹೇಗೆ ಶೂಟ್ ಆಗುತ್ತೆ ಎಂಬುದನ್ನು ಆಕೆ ವಿವರಿಸುತ್ತಾಳೆ.

ಇದಿಷ್ಟು ಕಾನೂನಿನ ಅಂಗೀಕೃತ ಚೌಕಟ್ಟಿನಲ್ಲಿ ನಡೆಯುವ ನೀಲಿ ಚಿತ್ರ ಉದ್ಯಮದ ಕಥೆ. ಅಂದ್ರೆ ಈ ಚಿತ್ರ ನಿರ್ಮಾಣ ಸಂಸ್ಥೆಗಳು ಅಮೆರಿಕ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತವೆ. ಇಲ್ಲಿ ಬರುವ ನಟ, ನಟಿ, ನಿರ್ದೇಶಕರೆಲ್ಲರಿಗೆ ಸಂಭಾವನೆ ಕೊಡುತ್ತವೆ. ಇಲ್ಲಿ ಕೆಲಸ ಮಾಡುವ ಎಲ್ಲರಿಗೂ ಇದೊಂದು ಹೊಟ್ಟೆ ಪಾಡಿನ ಉದ್ಯಮ. ಕನ್ನಡದಲ್ಲಿ ದಿನಕ್ಕೆ ೫೦ ಧಾರಾವಾಹಿಗಳು ಓಡುವಂತೆ ಅಲ್ಲಿಯೂ ದಿನಕ್ಕೆ ನೂರಾರು ಪೋರ್ನ್‌ ಚಿತ್ರಗಳ ಶೂಟಿಂಗ್‌ ನಡೆಯುತ್ತದೆ. ವೆಬ್‌ಸೈಟ್‌, ಡಿವಿಡಿ, ಪ್ರಿಂಟ್‌ ಮುಂತಾದ ಮಾಧ್ಯಮಗಳ ಮೂಲಕ ಅವು ಬಿತ್ತರಗೊಳ್ಳುತ್ತವೆ. ಅದ್ರಿಂದ ಸಂಸ್ಥೆ ಆದಾಯ ಗಳಿಸುತ್ತದೆ. ಹೀಗಾಗಿ ಇಲ್ಲಿ ದುಡ್ಡಿಗಾಗಿ ಅಥವಾ ಚಪಲ ತೀರಿಸಿಕೊಳ್ಳಲು ಇಷ್ಟ ಇದ್ದವರು ಮಾತ್ರ ಕೆಲಸ ಮಾಡುತ್ತಾರೆ.

ಆದರೆ ಇದೇ ಜಗತ್ತಿನ ಇನ್ನೊಂದು ಮುಖವಿದೆ. ಅದು ಮಾಫಿಯ ಜಗತ್ತು. ತೆರಿಗೆ ರಹಿತವಾಗಿ, ಕಾನೂನುಬಾಹೀರವಾಗಿ ನಡೆಯುವ ಜಗತ್ತಿದು. ಇಲ್ಲಿ ಹೆಣ್ಣುಮಗಳೊಬ್ಬಳಿಗೆ ಡ್ರಗ್‌ ನೀಡಿಯೋ, ಕಿಡ್ನಾಪ್‌ಮಾಡಿಯೋ, ಬೆದರಿಕೆಯಿಂದಲೊ ನೀಲಿ ಚಿತ್ರಗಳು ತಯಾರಾಗುತ್ತವೆ. ಯಾವುದೋ ಹೊಟೇಲ್‌ನಲ್ಲಿ, ಬಚ್ಚಲು ಮನೆಯಲ್ಲಿ ಸಿಸಿ ಕ್ಯಾಮೆರ ಇಟ್ಟು ಶೂಟಾದ ಅಸ್ಪಷ್ಟವಾದ, ಲೈಟಿಂಗ್‌ ಇಲ್ಲದ, ಎಡಿಟಿಂಗ್ ಇಲ್ಲದ ವೀಡಿಯೋಗಳು ಈ ಜಗತ್ತಿನಲ್ಲಿ ಸೃಷ್ಟಿಯಾಗುತ್ತವೆ! ಇದೊಂದು ಅಪಾಯಕಾರಿ ಪ್ರಪಂಚ. ಅನೇಕ ಹೆಣ್ಣುಮಕ್ಕಳ ಬದುಕನ್ನು ಬೀದಿಗೆ ತರುವ ಪ್ರಪಂಚ. ಇದ್ರಿಂದ ಸರ್ಕಾರಕ್ಕೆ ನಯಾ ಪೈಸೆ ಆದಾಯವೂ ಬರುವುದಿಲ್ಲ. ಅಮೆರಿಕ ಸರ್ಕಾರ ಇಂಥವರನ್ನು ಹಿಡಿದು, ಹಿಡಿದು ಬುಟ್ಟಿಗೆ ತುಂಬುತ್ತಿದೆ.

ನಾನು ಮೇಲೆ ಮಾತಾಡಿದ ಅಮೇರಿಕದ ಇಂಡಸ್ಟ್ರಿಯಂತೆ ಜಗತ್ತಿನ ಉಳಿದ ದೇಶಗಳ ಉದ್ಯಮವಿದೆ. ಆದ್ರೆ ನೀವು ಏಷ್ಯಾಕ್ಕೆ ಬಂದ್ರೆ ಅದೊಂಚೂರು ಭಿನ್ನವಾಗಿದೆ. ಇಲ್ಲಿ ಅನೇಕ ರಾಷ್ಟ್ರಗಳಲ್ಲಿ ದಟ್ಟ ದರಿದ್ರವಾದ ಬಡತನವಿದೆ ಮತ್ತು ಸಿಂಗಲ್‌ ಮಾಮ್‌, ಸೂಳೆಗಾರಿಕೆ ಎಂಬ ಸಂಸ್ಕೃತಿ ಹೆಚ್ಚಾಗಿದೆ. ಹೀಗಾಗಿ ಈ ಸಂಸ್ಕೃತಿಯವರು ಹೊಟ್ಟೆಪಾಡಿಗಾಗಿ, ದುಡ್ಡಿನ ಆಮಿಷಕ್ಕಾಗಿ, ಬದುಕಿನ ಅನಿವಾರ್ಯತೆಗಾಗಿ ನೀಲಿ ಚಿತ್ರ ಜಗತ್ತಿನೊಳಗೆ ಒಂದಾಗಿದ್ದಾರೆ.

ಇವಿಷ್ಟು ಹಾರ್ಡ್‌ಕೋರ್‌ ಪೋರ್ನ್‌ ಕಥೆ! ಭಾರತ ಇವತ್ತೊಂದು ಸಂಕೀರ್ಣ ಸ್ಥಿತಿಯಲ್ಲಿದೆ. ಸಹಸ್ರಮಾನದ ತಲೆಮಾರು ಅಥವಾ ಮಿಲೇನಿಯಂ ಜನರೇ‍ಷನ್‌ ಎಂದು ಕರೆಸಿಕೊಳ್ಳುವ ಇಂದಿನ ಯುವ ಸಮುದಾಯ ಒಂದು ರೀತಿ ಅತಂತ್ರ ಸ್ಥಿತಿಯಲ್ಲಿದೆ. ಆ ಕಡೆ ಪೂರ್ತಿಯಾಗಿ ಪಾಶ್ಚಾತ್ಯ ಸಂಸ್ಕೃತಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಈ ಕಡೆ ಭಾರತೀಯಯಾಗಿ ಉಳಿಯುವ ಇರಾದೆಯೂ ಇಲ್ಲ. ವೇಗಯುತವಾಗಿ ಐಷಾರಾಮಿತನ ಬರಬೇಕು, ಬದುಕನ್ನು ಎಂಜಾಯ್‌ ಮಾಡಿಬಿಡಬೇಕು ಎಂಬ ಚಪಲ. ಹಾಗಂತ ಪೂರ್ತಿಯಾಗಿ ಪಾಶ್ಚಾತ್ಯರಂತೆ ಅಪ್ಪ-ಅಮ್ಮ, ಗಂಡ, ಸಂಸಾರ, ಸಮಾಜವನ್ನು ಬಿಟ್ಟು ಏಕಾಂಗಿಯಾಗುವ ನಿಲ್ಲುವ ಧೈರ್ಯವಿಲ್ಲ (ನಮ್ಮಲ್ಲಿ ಬಹಳ ಜನಕ್ಕೆ ಪಾಶ್ಚತ್ಯರೆಲ್ಲ ಮೂರು ಬಿಟ್ಟವರಂತೆ ಬದುಕುತ್ತಾರೆ ಎಂಬ ಬಹುದೊಡ್ಡ ತಪ್ಪು ಕಲ್ಪನೆಯಿದೆ. ಶೇ. ೩೦-೪೦ರಷ್ಟು ಪಾಶ್ಚಾತ್ಯರು ಮಾತ್ರ ಹಾಗೆ ಬದುಕುವುದು. ಉಳಿದ ೬೦-೭೦ರಷ್ಟು ಮಂದಿ ಶುದ್ಧವಾಗಿ ಭಾರತೀಯರಂತೆ ಸಂಸಾರ, ಸಂಬಂಧ ಎಂಬ ಸಂಕೋಲೆಯಲ್ಲಿನ ಬದುಕನ್ನು ಇಷ್ಟಪಡುವವರು. ಅವರ ಚಿಂತನೆ, ಬದುಕಿನ ಶೈಲಿಯಲ್ಲಿ ಒಂಚೂರು ವ್ಯತ್ಯಾಸವಿರುತ್ತದೆ. ಆದರೆ ಬದುಕಿನ ಮೂಲ ಉದ್ದೇಶ ನಮ್ಮ ದೇಶದಂತೆ ಇದೆ).

ಇಂಥ ಒಂದು ಸಂದಿಗ್ಧ ಸ್ಥಿತಿ ಹುಟ್ಟು ಹಾಕಿರುವುದೇ ಕಾರ್ಪೊರೇಟ್‌ ಹಾದರಿಕೆ! ಬಹುಶಃ ಈ ಪದ ಬಳಕೆ ತಪ್ಪಾಗಬಹುದು. ಯಾಕಂದ್ರೆ ಒಬ್ಬ ಓಶೋ, ಭೈರಪ್ಪನವರನ್ನು ಓದಿಕೊಂಡ ನಾನಂತೂ ಸೆಕ್ಸ್‌ನ್ನು ಅಸಹ್ಯ, ತಪ್ಪು, ಕಾನೂನು ಬಾಹೀರ ಎಂಬ ರೀತಿಯಲ್ಲಿ ಮಾತನಾಡಲಾರೆ. ಆದ್ರೆ ಯಾವುದೋ ಆಮಿಷಕ್ಕೆ ಒಳಗಾಗಿ ಸೆಕ್ಸ್‌ನ್ನು, ದೇಹವನ್ನು ಮಾರಿಕೊಳ್ಳುವ ಪ್ರಕ್ರಿಯೆಗೆ ನಾನಂತೂ ಹಾದರಿಕೆ ಎಂತಲೇ ಕರೆಯುತ್ತೇನೆ. ಸ್ವಯಂ ಇಚ್ಛೆಯಿಂದ, ಪ್ರೀತಿಯಿಂದ ದೈಹಿಕ ಸಂಬಂಧ ಇಟ್ಟುಕೊಂಡಿದ್ದರೆ ಅದು ಬೇರೆಯ ಮಾತು ಹಾಗೂ ಅವರ ಬದುಕಿನ ಸ್ವತಂತ್ರವದು.

ಸಾಫ್ಟ್‌ವೇರ್‌, ಮಾಧ್ಯಮ ಸೇರಿದಂತೆ ಕಾರ್ಪೊರೇಟ್‌ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವ ಅನೇಕ ಗೆಳೆಯರು ಮಾತಾಡುವುದನ್ನು ಕೇಳಿದ್ದೇನೆ. ‘ಅದೊಂದು ಹುಡುಗಿಯಿಂದ ಇಡೀ ಆಫೀಸ್‌ ಹಾಳಾಗಿದೆ. ಆ ಹುಡುಗಿ ಬಂದವಳೆ ಎಷ್ಟು ಬೇಗ ಬೆಳೆಯುತ್ತಿದ್ದಾಳೆ. ತಲೆಯಲ್ಲಿ ಎರಡಕ್ಷರವಿಲ್ಲದಿದ್ದರೂ ಎದೆಯೊಳಗಿನ ಎರಡಕ್ಷರಗಳು ಕೆಲಸ ಮಾಡುತ್ತಿವೆ’ ಇಂಥ ಹತ್ತಾರು ಮಾತುಗಳನ್ನು ನಿತ್ಯವೂ ಕೇಳುತ್ತಿರುತ್ತೇವೆ. ಇಂಥ ಹುಡುಗಿಯರಿಂದ ನಿಜವಾದ ಪ್ರತಿಭಾವಂತ ಕಳೆದು ಹೋಗಿರುತ್ತಾನೆ. ತನ್ನ ತನವನ್ನು ಪೂರ್ತಿಯಾಗಿ ಕಳೆದುಕೊಂಡು ಕೆಲಸ ಮಾಡುತ್ತಿರುತ್ತಾನೆ. ಇದೆಲ್ಲ ಎಷ್ಟು ದಿನ ನಡೆಯುತ್ತೆ ಎಂಬುದು ನಂತರದ ಮಾತು. ಆದ್ರೆ ನಡೆದಷ್ಟೆ ದಿನದಲ್ಲಿ ಬೇರೆಯವರು ಅನುಭವಿಸುವ ನೋವು, ಯಾತನೆ ದೊಡ್ಡದಿದೆ.
ಪೋರ್ನ್‌ ಜಗತ್ತಿಗಿಂತ ಭಯಾನಕವಾದ ಜಗತ್ತೊಂದು ಇಲ್ಲಿ ನಿರ್ಮಾಣವಾಗುತ್ತಿದೆ. ನಿಜವಾಗಿಯೂ ಪ್ರತಿಭೆ ಹೊಂದಿದ್ದು ಬೆಳವಣಿಗೆ ಬೇರೆ. ಅಂಥ ಬೆಳವಣಿಗೆಗಳು ಕಣ್ಣಿಗೆ ಸ್ಪಷ್ಟವಾಗಿಯೂ ಕಾಣುತ್ತದೆ. ಯಾರಿಗೂ ಕಾಣದಂತೆ ಕತ್ತಲಿನಲ್ಲಿ ನಡೆದ ಬೆಳವಣಿಗೆಗಳು, ಮನಸ್ಸಿಗಂತೂ ಅರ್ಥವಾಗುತ್ತದೆ! ಇದ್ರಿಂದ ಹುಡುಗರು ಮಾತ್ರವಲ್ಲ, ಪ್ರತಿಭಾವಂತ ಅನೇಕ ಹುಡುಗಿಯರು ವ್ಯಥೆ ಪಡುತ್ತಿದ್ದಾರೆ.

ಸರಿ, ತಪ್ಪುಗಳ ನಿರ್ಣಯ ಕಷ್ಟ. ಒಂದು ಅಧಿಕಾರ, ದುಡ್ಡಿಗಾಗಿ ತಮ್ಮನ್ನು ತಾವು ಕದ್ದು-ಮುಚ್ಚಿ ಮಾರಿಕೊಳ್ಳುವವರಿಗಿಂತ ತೀರ ‘ನನ್ನ ಹೊಟ್ಟೆಪಾಡೇ ಇದು’ ಅಂತ ಒಪ್ಪಿಕೊಂಡು, ಪೂರ್ತಿ ಬಿಚ್ಚಿ ಬೆತ್ತಲಾಗಿ ನಿಲ್ಲುವವರೇ ಉತ್ತಮರು ಅನ್ನಿಸುತ್ತಾರೆ.  ಒಂದು ನಾಗರೀಕತೆಯ ಅಂತ್ಯವಾಗಬೇಕಾಗಿದ್ದು ಅನಾಗರೀಕತೆಯಲ್ಲೇ! ಅಂದ್ರೆ ಮನುಷ್ಯರಿಗೆ ಒಂದು ಹಂತದಲ್ಲಿ ಬಟ್ಟೆ ತೊಡುವುದು ಗೊತ್ತಿರಲಿಲ್ಲ. ಅದರ ವ್ಯುತ್ಕ್ರಮ ರೂಪವಾಗಿ ಮುಂದೊಂದು ದಿನ  ಗೊತ್ತಿದ್ದು ಬಟ್ಟೆ ತೊಡಲಾಗದ ಸಮಾಜವು ನಿರ್ಮಾಣವಾಗುತ್ತೆ. ಅದೇ ಈ ಪ್ರಸ್ತುತ ನಾಗರೀಕತೆಯ ಅಂತ್ಯ!

ಅಂದಹಾಗೆ ಸೆಕ್ಸ್‌ ಎಂಬುದು ನನ್ನ ಪ್ರಕಾರ ಭಾರತದ ಮಟ್ಟಿಗೆ ತೀರ ವೈಯಕ್ತಿಕವಾಗಿದ್ದು. ನೀವು ಎಲ್ಲರಲ್ಲಿಯೂ ತೋರಿಸಿಕೊಳ್ಳಲಾಗದೆ ತೀರ ಗೌಪ್ಯತೆಯಿಂದ ನಿಮ್ಮ ದಾಂಪತ್ಯದ ಸಂಬಂಧವನ್ನು ಕಾಪಾಡಿಕೊಳ್ಳುವುದು ಅದ್ರಿಂದ ಮಾತ್ರ. ಯಾವತ್ತು ಅದು ಮುಕ್ತವಾಗುತ್ತೋ ಆವತ್ತು ಒಂದು ನಾಯಿಗೂ,ದನಕ್ಕೂ,ಮನುಷ್ಯನಿಗೂ ಯಾವ ವ್ಯತ್ಯಾಸವೂ ಉಳಿಯುವುದಿಲ್ಲ. ಆಗ ಬಟ್ಟೆ ಹಾಕಿಕೊಂಡು ಬದುಕುವುದು, ಈ ಪೋರ್ನು ಬ್ಯಾನ್‌ ಎಂಬ ರಾಷ್ಟ್ರೀಯ ವಿಪತ್ತು ಯಾವುದು ಇರುವುದಿಲ್ಲ! ಅಕ್ರಮಕ್ಕೆ ಕಡಿವಾಣ ಹಾಕುವುದು ಅವಶ್ಯ ಕೆಲಸ. ಮೋದಿ ಮಾಡಿದ್ದು ಅದನ್ನೆ. ಅಂದಹಾಗೆ ಅದಕ್ಕಿಂತ ಮುಂಚೆ ಒಬಾಮಾ ಈ ಕೆಲಸ ಮಾಡಿದ್ದಾರೆ. ಯಾಕೆ ಎಲ್ಲ ಪೋರ್ನ್ ತಾಣಗಳಿಗೂ ಕಡಿವಾಣ ಬಿದ್ದಿಲ್ಲ ಎಂಬುದಕ್ಕೂ ಇದೇ ಉತ್ತರ. ಅಮೆರಿಕ ಕೊಟ್ಟ ಪಟ್ಟಿಯನ್ನೇ ಭಾರತ ಭಟ್ಟಿಯಿಳಿಸಿದೆ ಜೊತೆಗೊಂದಿಷ್ಟು ಭಾರತೀಯ ವೆಬ್‌ಸೈಟ್‌ಗಳನ್ನು ಸೇರಿಸಿ. ಉದ್ಯಮವಾಗಿ ನಡೆಯುವ ನೀಲಿಚಿತ್ರಕ್ಕೆ ಅವಕಾಶ ನೀಡಿದೆ. ಮೋದಿಗೆ ಜೈ! ಇದನ್ನು ವಿರೋಧಿಸಿ ಟೌನ್‌ಹಾಲ್‌ನಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡಿದ್ರೆ ಅವರಿಗಂತೂ ಮೊದಲು ಜೈ!!!

3 ಟಿಪ್ಪಣಿಗಳು Post a comment
 1. Shripad
  ಆಗಸ್ಟ್ 7 2015

  CLASS, NICE write up.

  ಉತ್ತರ
 2. Sheshagiri
  ಆಗಸ್ಟ್ 7 2015

  ಕಳೆದ 4-5 ದಿನಗಳಿಂದ ಈ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ.

  ಪೋರ್ನ್ ಸಮರ್ಥಿಸಲು ಅದರ ಪರವಾಗಿ ನಿಲ್ಲುವವರು ನೀಡುವ ಮುಖ್ಯ ಕಾರಣಗಳು.

  ————————————————————————-
  1. ದೇಶದಲ್ಲಿ ಅಲ್ಲಲ್ಲಿ ಹಿಂಸಾಚಾರ ಆಗಿದೆ / ಆಗುತ್ತಿದೆ ಅನ್ನುವ ಕಾರಣಕ್ಕೆ ಚಲನಚಿತ್ರಗಳಲ್ಲಿ ಹಿಂಸೆ ಅಥವಾ ಫ಼ೈಟಿಂಗ್, ಬಾಂಬು ಸ್ಪೋಟ ಮೊದಲಾದವನ್ನು ನಿಲ್ಲಿಸಲಾಗಿದೆಯೇ ? ಅಥವಾ ನಿಲ್ಲಿಸಲು ಸಾಧ್ಯವೇ ? ಸಿನಿಮಾಗಳು ಬರುವದಕ್ಕೂ ಮೊದಲು ಹಿಂಸೆ ನಡೆದಿರಲಿಲ್ಲವೇ ? ಅದರಂತೆ ಪೋರ್ನ್ ನೋಡಿದ ಮಾತ್ರಕ್ಕೆ ಜನ ಅತ್ಯಾಚಾರದಲ್ಲಿ ಭಾಗವಗಿಸುತ್ತಾರೆಂದು ಹೇಗೆ ಹೇಳುತ್ತೀರಿ. ನಾಲ್ಕು ಗೋಡೆಯ ಮಧ್ಯದಲ್ಲಿ ಯಾರಿಗೂ ತೊಂದರೆಯಾಗದಂತೆ ನೋಡಿದರೆ, ಸರ್ಕಾರಕ್ಕೆ ಯಾಕೆ ಸಮಸ್ಯೆ? ಇದು ಮಾನವೀಯ ವೈವ್ಯಕ್ತಿಕ ಹಕ್ಕುಗಳ ದಮನ.

  2. ಇಂದಿನ ಮುಂದುವರೆದ ಯುಗದಲ್ಲಿ ಲೈಂಗಿಕ ಶಿಕ್ಷಣದ ಅಗತ್ಯವಿದೆ. ಪೋರ್ನ್ ಅಂಥಹ ಶಿಕ್ಷಣವನ್ನು ನೀಡುತ್ತಿದೆ. ಆದ್ದರಿಂದ ಇದನ್ನು ಬಹಿಷ್ಕರಿಸಿದರೆ, ವ್ಯವಸ್ಥಿತ ಲೈಂಗಿಕ ಶಿಕ್ಷಣ ವ್ಯವಸ್ಥೆಗೆ ಭಂಗ ತಂದಂತೆ.

  3. ಮನುಷ್ಯ ತನಗೆ ಸಾಧಿಸಲಾಗದ, ತನಗೆ ಎಟುಕಲಾಗದ ಭೋಗಗಳನ್ನು ಈ ಪೋರ್ನ್ ಗಳ ನೊಡುವಿಕೆಯೊಂದಿಗೆ ಕಾಲ್ಪನಿಕ ಅಥವಾ ದೈಹಿಕ ಭೋಗಗಳಿಂದ ಅನುಭವಿಸಿಕೊಳ್ಳುತ್ತಾನೆ. ಅದನ್ನು ತಡೆದರೆ ಅವನ ಹಕ್ಕಿನ ಹರಣವಾದಂತೆ.
  —————————————————————————————————–

  ಈ ಮೂರು ಮುಖ್ಯಪ್ರಶ್ನೆಗಳಿಗೆ ಸರಕಾರ ಹಾಗೂ ಪೋರ್ನ್ ದೇಶದ ಒಳಿಗೆ ಮಾರಕ ಎಂದು ಒಪ್ಪುವ ಸಂಸ್ಥೆಗಳು, ಮಾಧ್ಯಮಗಳು ಸರಿಯಾಗಿ ಉತ್ತರಿಸಿ ಜನರನ್ನು ಸರಿದಾರಿಗೆ ತರುವ ಪ್ರಯತ್ನಮಾಡಬೇಕಿದೆ.

  ನನ್ನ ಅಭಿಪ್ರಾಯವನ್ನು ಈ ಮೂರೂ ಪ್ರಶ್ನೆಗಳಿಗೆ ಉತ್ತರದ ರೂಪದಲ್ಲಿ ನೀಡುತ್ತಿದ್ದೇನೆ. ಪೋರ್ನ್ ಬಹಿಷ್ಕಾರಕ್ಕೆ ಅನೇಕ ಕೋನಗಳಿಂದ ಬಂದ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಸರಕಾರವಾಗಲೀ ನ್ಯಾಯಾಲಯವಾಗಲೀ ಇಂತಹ ಕ್ರಮಕ್ಕೆ ಮುಂದಾಗಿರುತ್ತವೆ. ಕೆಲವು ಹಂತಗಳಲ್ಲಿ ವ್ಯಕ್ತಿಗಿಂತ ಸಮಷ್ಟಿಯ ಹಿತದೃಷ್ಟಿಯಿಂದ ನಿರ್ಧಾರಗಳೂ ಅನಿವಾರ್ಯವಾಗುತ್ತವೆ.

  ಮುಖ್ಯವಾಗಿ ಮಹಾನಗರ ಮತ್ತು ಕೆಲ ನಗರಗಳ ಮಾನಸಿಕರೋಗ ತಜ್ಞರೂ / ಮನಃಶಾಸ್ರಜ್ಞರೂ / ಸಮಾಜಸೇವಕರೂ / ಪೋಷಕರೂ ಅಭಿಪ್ರಾಯ ಪಡುವಂತೆ,…. ಯೌವನದ ಆರಂಭದ ದಿನಗಳಲ್ಲೇ ಪೋರ್ನ್ ನೋಡಲಾರಂಭಿಸಿರುವ ಬಹುಪಾಲು ವಿದ್ಯಾರ್ಥಿಗಳು ಓದಿನಲ್ಲಿ ಹಿಂದುಳಿಯುವುದು, ಕಾಲ್ಪನಿಕ ಮನಸ್ಕರಾಗಿ ಯಾವುದೇ ಕೆಲಸದಲ್ಲಿ ಆಸಕ್ತಿ ಅಥವಾ ಶ್ರದ್ಧೆಯನ್ನು ಬೆಳೆಸಿಕೊಳ್ಳಲಾಗದೇ ಜೀವನದ ಗುರಿಯನ್ನಾಗಲೀ ಅಥವಾ ಓದಿನ ಗುರಿಯನ್ನಾಗಲೀ ಸಾಧಿಸಲಾಗದೇ ಕೆಲ ವರ್ಷಗಳ ನಂತರ ವ್ಯಥೆಪಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಜೊತೆಗೆ ಆ ವಯಸ್ಸಿನ ನಡವಳಿಕೆ ಮತ್ತು ಪೋರ್ನ್ ನ ಪ್ರಭಾವದಿಂದಾಗಿ ಎದಿರು ಕಾಣುವ ವ್ಯಕ್ತಿಗಳನ್ನೋ / ಸಹಪಾಠಿಗಳನ್ನೋ / ನೆರೆಯವರನ್ನೋ ತಮ್ಮ ಕಾಲ್ಪನಿಕ ಸನ್ನಿವೇಶಗಳಲ್ಲಿ ಚಿತ್ರಿಸಿಕೊಂಡು, ಅಂತಹ ಸನ್ನಿವೇಶಗಳು ಉಂಟಾದೀತು ಅಥವಾ ಉಂಟಾಗಲೆಂಬ ಆಶಯದ ಹಿನ್ನೆಲೆಯಲ್ಲಿ ತಮಗೇ ಅರಿವಿಲ್ಲದಂತೆ ಅಂತಹ ಪ್ರವೃತ್ತಿಯ ಕಡೆವಾಲುತ್ತಾರೆ. ಕೆಲವರು ಇನ್ನೂ ಮುಂದುವರೆದು ಅತ್ಯಾಚಾರ ಮೊದಲಾದ ಪ್ರಕರಣಗಳಲ್ಲಿ ಭಾಗಿಯಾದದ್ದಿದೆ. ನಿರ್ಭಯಾ ಪ್ರಕರಣ ಮುಂತಾದ ಅನೇಕ ಪ್ರಕರಣಗಳಲ್ಲಿ ಆರೋಪ ಸಾಬೀತಾದ ಯುವಕರು ಇದನ್ನು ಒಪ್ಪಿಕೊಂಡಿದ್ದಾರೆ. ಇದಕ್ಕೇ ಪೋರ್ನ್ ಮುಖ್ಯಕಾರಣವೆಂದು ಹೇಗೆ ಹೇಳುವುದು ? ಅತ್ಯಾಚಾರ ಪೋರ್ನ್ ಬರುವಕ್ಕಿಂತಲೂ ನಡೆದಿಲ್ಲವೇ? ಎಂಬ ಸಮರ್ಥಕರು ಇಲ್ಲಿ ಗಮನಿಸಬೇಕಾದದ್ದು, ಪೋರ್ನ್ ನಿಂದಾಗಿ ಪ್ರೇರಿತರಾಗಿದ್ದೆವು ಎಂಬ ಅವರ ಮಾತನ್ನು ತಳ್ಳಿಹಾಕಬಾರದು. ಕುಡಿತದಿಂದಲೂ ಅಂತಹ ದುಷ್ಪರಿಣಾಮವಿದೆ ಹಾಗಂತ ಬ್ಯಾನ್ ಮಾಡಿದ್ದಾರಾ ? ಎಂದೆಲ್ಲಾ ಕೇಳುವ ಮೊದಲು, ಅವುಗಳಿಂದ ವ್ಯವಸ್ಥೆಗಳ ಮೇಲಿನ ಪರಿಣಾಮಗಳ ಆಗುಹೋಗುಗಳನ್ನೂ ಗಮನಿಸಬೇಕಾಗುತ್ತದೆ. ಕುಡಿತವೂ ತಪ್ಪೇ! ಅತ್ಯಾಚಾರ ಮೊದಲಾದ ಕೆಟ್ಟಕೆಲಸ ಪೋರ್ನ್ ನೋಡದೆಯೂ, ಕುಡಿಯದೆಯೂ ಮಾಡಿದ ಪಾಪಿಗಳಿರಬಹುದು. ಅಂತಹ ಪಾತಕಿಗಳು ಪೋರ್ನ್ ನೋಡಿಯೂ ಬಿಟ್ಟಿದ್ದಿದ್ದರೆ, ಉರಿಯುವ ಬೆಂಕಿಗೆ ತುಪ್ಪಸುರಿದಂತಾಗುತ್ತಿತ್ತು. ಪೋರ್ನ್ ಮಾಡುವ ಕೆಲಸವೇ ಅದು. ಇಗಾಗಲೇ ಹೊತ್ತಿದ ಬೆಂಕಿಯನ್ನು ಇನ್ನಷ್ಟು ಹರಡುವ ಕೆಲಸ. ಆದರೆ, ಸಮರ್ಥಕರ ಪ್ರಕಾರ ಮೂಲ ಬೆಂಕಿಗೆ ಕಾರಣ ಇದಲ್ಲವೆಂದೂ ಹಾಗಾಗಿ ತಪ್ಪು ಕೇವಲ ತಪ್ಪಿಸ್ಥನದು ಎಂಬ ಗ್ರಹಿಕೆ; ಕೊಲೆ-ಸುಲಿಗೆ ಮಾಡಿದವನಷ್ಟೇ ಅಲ್ಲದೇ ಮಾಡಿಸಿದವನು ಯಾರೆಂದು ತಿಳಿದೂ ತಪ್ಪಿತಸ್ಥನಲ್ಲ ಎಂದು ನೀವು ಘೋಷಿಸುವುದಾದರೆ ಅಂತಹ ತಪ್ಪಿನಲ್ಲಿ ನೀವೂ ಭಾಗಿಯಾದಂತೆ. ಇದು ಕೇವಲ ನಾಲ್ಕುಗೋಡೆಯ ಮಧ್ಯದಲ್ಲಿ ನೋಡಿ ಮುಗಿದ ಕೂಡಲೇ ಕೊನೆಗೊಳ್ಳುವಂಥದ್ದಲ್ಲ. ನೋಡಿದ ಮೇಲೆ ಅನೇಕ ದುಷ್ಪರಿಣಾಮಗಳ ಆರಂಭವೂ ಆಗುವ ಸಾಧ್ಯತೆ ಇದೆ. ಇಂತಹ ವಿಷಯಗಳಲ್ಲಿ ಸರಕಾರಗಳಿಗೆ ಸಮಷ್ಟಿಯ ದೃಷ್ಟಿ ಇಲ್ಲಿ ಮುಖ್ಯವೇ ಹೊರತು ಒಬ್ಬ ವ್ಯಕ್ತಿಯ ಖಾಸಗೀತನವಲ್ಲ. ಪೋರ್ನ್ ನೋಡದೆಯೂ ಜೀವನಾನಂದವನ್ನು ಅನುಭವಿಸಿದವರು ಇಲ್ಲವೇ ? ೨ ತಲೆಮಾರಿಗೂ ಹಿಂದೆ ಬದುಕಿದ ಜನಕ್ಕೆ ಇದ್ಯಾವೂದು ಇಲ್ಲದೇ ಖಾಸಗೀತನಕ್ಕೇನೂ ಭಂಗಬಂದಿರಲಿಲ್ಲವಲ್ಲ. ಇದು ಕಾಲ/ತಂತ್ರಜ್ಞಾನ ಮುಂದುವರೆದಿದೆ ಎಂಬುದರ ಸದುಪಯೋಗವೋ, ದುರುಪಯೋಗವೋ ಎಂದು ಸರಿಯಾಗಿ ಆಲೋಚಿಸಬೇಕು.

  ಇನ್ನು ಲೈಂಗಿಕ ಶಿಕ್ಷಣಕ್ಕೆ ಈ ಮಾಧ್ಯಮವನ್ನು ಬಳಸುವುದು ಹಾಸ್ಯಾಸ್ಪದ. ಲೈಂಗಿಕ ಶಿಕ್ಷಣಕ್ಕೆ ಹಿರಿಯರು ಹಿತ-ಮಿತ ರೀತಿಯಲ್ಲಿ ಮುಕ್ತಮಾತುಕತೆ ನಡೆಸಿ ಶಿಕ್ಷಣವನ್ನು ನೀಡಬಹುದು. ಅದಕ್ಕಾಗಿ ಓದಿಕೊಳ್ಳಲು ಬೇಕಾದ ಸಾಹಿತ್ಯಗಳೂ ಉಪಲಬ್ಧವಿರುತ್ತವೆ. ಇಂದಿನ ಯುಗದಲ್ಲಿ ನಿರಾಯಾಸವಾಗಿ ಅಂತರ್ಜಾಲದಿಂದ ಅಂತಹ ಓದಿಗೆ ಪೂರಕವಾದ ಪರಿಕರಗಳು ಲಭ್ಯವಿದ್ದೇ ಇರುತ್ತವೆ. ಪೋರ್ನ್ ಸಮರ್ಥಕ ಬುದ್ಧಿಜೀವಿಗಳೇ ! ಭಾರತದಲ್ಲಿ ಎನೋ ಆಗಬಾರದ್ದು ಆಗಿಹೊಯಿತು ಎಂದು ಬೊಬ್ಬೆ ಹಾಕುವ ಮೊದಲು, ಪೋರ್ನ್ ನ ಉತ್ಪಾದಕ ರಾಷ್ಟ್ರಗಳಲ್ಲೊಂದಾದ ಅಮೇರಿಕಾ ಕೂಡಾ ಬೇರೆ ದೇಶಗಳು ಬೇಕಾದರೆ ಹಾಳಾಗಲೀ, ತನ್ನ ದೇಶದ ೧೮ಕ್ಕಿಂತ ಕೆಳಗಿನ ಮಕ್ಕಳಿಗೆ ಸಿಗದಂತೆ ಅನೇಕ ಮುನ್ನೆಚ್ಚರಿಕೆವಹಿಸುತ್ತದೆ. ಆಪಲ್, ಗೂಗಲ್. ಮೈಕ್ರೋಸಾಫ್ಟ್ ಬಿಂಗ್ ಮೊದಲಾದವು ಈ ಬಗ್ಗೆ ಎಚ್ಚರಿಕೆಯ ಗಂಟೆ ಈಗಾಗಲೇ ಬಾರಿಸಿವೆ. ಎಡಪಂಥೀಯ ಧೋರಣೆಯವರು ಭಾರತದಲ್ಲಿ ಪೋರ್ನ್ ಬ್ಯಾನ್ ಮಾಡಿದಕೂಡಲೇ ನಿರಂತರ ವಾಗ್ಧಾಳಿ ನಡೆಸುತ್ತಿದ್ದಾರೆ. ಪಾಪ! ಅವರಿಗೆ ತಮ್ಮ ಮಾನಸ-ತವರು, ಚೈನಾ ಪೋರ್ನ್ ಅನ್ನು ಸಂಫೂರ್ಣ ಬಹಿಷ್ಕರಿಸಿರುವುದು ತಿಳಿದಿಲ್ಲವೆಂಬತಿದ್ದಾರೆ.

  ಇನ್ನು ಮನುಷ್ಯ ತನಗೆ ಸಾಧಿಸಲಾಗದ್ದನ್ನು ಪೋರ್ನ್ ನಿಂದ ಪಡೆಯುತ್ತಾನೆ. ಅದು ಖಾಸಗೀ ವಿಷಯ / ಹಕ್ಕು ಎನ್ನುವುದಾದರೆ, ಅದನ್ನು ವಿಕೃತಿ ಎಂದು ಕರೆಯಲೇಬೇಕಾಗುತ್ತದೆ. ಸಹಜಕ್ಕೂ ವಿಕೃತಿಗೂ ವ್ಯತ್ಯಾಸವಿದೆ. ಈ ವಿಕೃತಿಗಳೇ ಸರಿ ಎಂದು ಭಾವಿಸುವವರು ಯಾರೂ ಸಹಜವಾದ ಜೀವನ ನಡೆಸಿದವರಾಗಿರುವುದಿಲ್ಲ. ತಮಗೆ ಎಲ್ಲವೂ ತಿಳಿದಿದೆ ಅಥವಾ ತಮ್ಮನ್ನು ಯಾರೂ ಪ್ರಶ್ನಿಸಬಾರದು, ಆದರೆ ತಾವು ಮಾತ್ರ ಎಲ್ಲದಕ್ಕೂ ಎಲ್ಲವನ್ನೂ ಹೀಗಳೆಯಬಹುದೆಂಬ ಮನಃಸ್ಥಿತಿ ಇಂತಹವರದ್ದು. ಇಂತಹ ಮನಃಸ್ಥಿತಿಯವರಿಗೆ ಉತ್ತರಿಸಿಯೂ ಪ್ರಯೋಜನವಿಲ್ಲ. ಸಿಕ್ಕದ್ದು ಎಂದಿಗೂ ಅವರಿಗೆ ಉತ್ತರವಾಗಿರುವಿದಿಲ್ಲ; ಪ್ರಶ್ನೆಗಳು ತಮ್ಮ ಸೀಮೀತ ಬುದ್ಧಿಯನ್ನು ದಾಟಲೂ ಬಿಡುವುದಿಲ್ಲ. ಮತ್ತೆ ಅವೇ ಪ್ರಶ್ನೆಗಳು; ಅವೇ ದೊಂಬರಾಟ.

  ಸದನದಲ್ಲಿ ಅದ್ಯಾರೋ ನಾಲಾಯಕ್ ಶಾಸಕರು ಅಶ್ಲೀಲವನ್ನು ನೋಡಿದ್ದಕ್ಕೆ ತಿಂಗಳುಗಟ್ಟಲೇ ಬಾಯಿಬಡೆದುಕೊಂಡವರೇ, ಇವತ್ತು ಪೋರ್ನ್ ಖಾಸಗೀಹಕ್ಕು ಎಂದು ಬಡಿದಾಡುವುದನ್ನು ಕಂಡರೆ ಇವರ ಇಬ್ಬಂದಿತನ ಅರ್ಥವಾಗದೇ? ಅದನ್ನು ಸದನಲ್ಲಿ ನೋಡುವುದೂ ತಪ್ಪು; ಎಕಾಂತದಲ್ಲಿ ಸದ್ದಿಲ್ಲದೇ ನೋಡುವುದೂ ತಪ್ಪು ಎಂಬ ಧೋರಣೆ ವಿಕೃತ ವಿಕ್ರೀತಮಾಧ್ಯಮವರಿಗೆ ಹೇಗೆ ಬರಲು ಸಾಧ್ಯ!? ಕಾರ್ಪೋರೇಟ್ ಕಂಪನಿಗಳು, ಅನೇಕ ಸಂಘ ಸಂಸ್ಥೆಗಳು ಅನೇಕ ಇಂಟರ್ನೆಟ್ ತಾಣಗಳನ್ನು ಜಾಲಾಡದ ಹಾಗೆ ನಿರ್ಬಂಧಿಸಿರುತ್ತಾರೆ. ಅಲ್ಲೇಕೆ ಈ ಜನಗಳು ತಮ್ಮ ಹಕ್ಕು ದಮನವಾಯಿತೆಂದು ಹಾರಾಡುವುದಿಲ್ಲ?! ಒಂದು ವೇಳೆ ಪೋರ್ನೋಗ್ರಫಿಯನ್ನು ಸಮರ್ಥಿಸುವವರು ನಾಳೆ ತಾವೇ ಒಂದು ದೊಡ್ಡ ಕಂಪನಿ ನಡೆಸಿದರೆ ತನ್ನಲ್ಲಿರುವ ಉದ್ಯೋಗಿಗಳಿಗೆ ಕಂಪನಿಯ ಖಾಸಗೀ ಸ್ಥಳಗಳಲ್ಲಿ, ತಮ್ಮ ಇಂಟರ್ನೆಟ್ ವ್ಯವಸ್ಥೆಯಿಂದ ನೋಡಲು ಬಿಡುತ್ತಾರೆಯೇ ? ಖಂಡಿತಾ ಇಲ್ಲ. ಹಾಗೆ ಬಿಟ್ಟರೆ, ಕಂಪನಿಯೇ ಹಾಳಾಗಿ, ಉದ್ಯೋಗಿಗಳಿಂದ ಆಗಬೇಕಾದ ಕೆಲಸ ಕಾಲಕ್ಕೆ ಸರಿಯಾಗಿ ಆಗದೇ ಅರ್ಥವ್ಯವಸ್ಥೆಯೇ ಅಲುಗಾಡಿಹೋಗುತ್ತದೆಂದು ಅನ್ನಿಸದಿರದೇ? ಯಾವ ಸಣ್ಣ ಕಂಪನಿಯೂ ಈ ವಿಷಯದಲ್ಲಿ ನಿರ್ಬಂಧ ಸಡಿಲಿಸಲು ಇಚ್ಛೆಪಡುವುದಿಲ್ಲ. ಹಾಗಿದ್ದ ಮೇಲೆ ದೇಶವನ್ನು ನಡೆಸುವ ಸರ್ಕಾರ ನಿರ್ಬಂಧ ಹೇರಿದರೆ ಯಾಕಿಷ್ಟು ಕಾರುವಿಕೆ?!! ಯಾವುದರಿಂದ ತಮ್ಮ ಯುವ ಮಕ್ಕಳು ದಾರಿತಪ್ಪಬಾರದೆಂದು ಎಚ್ಚರವಹಿಸುತ್ತಾರೋ, ಅದು ಬೇಕೆನ್ನುವುದು, ದೇಶ-ದೃಷ್ಟಿಯೋ?! ಮೋದಿಸರ್ಕಾರದ ಮೇಲಿನ ದ್ವೇಷದೃಷ್ಟಿಯೋ?! ತಿಳಿದವರು ಮನಗಾಣಬೇಕು.

  ಈ ವಿಷಯದ ಕುರಿತು ಏನ್. ಡಿ. ಟಿವಿ ನಡೆಸಿದ ಕಾರ್ಯಕ್ರಮವನ್ನು ಒಮ್ಮೆ ನೋಡಿ. ಜೊತೆಗೆ ಪೋರ್ನ್ ಬಹಿಷ್ಕಾರ ಅನಗತ್ಯ ಅಂತ ಸಾಧಿಸಲು ಹೊರಟವರವ ತರ್ಕವನ್ನೂ ನೋಡಿ. ನಿಷ್ಪಕ್ಷಪಾತಿಯಾಗಿರಬೇಕಾಗಿದ್ದ ನಿರೂಪಕಿಯೇ ಸ್ವತಃ ಪೋರ್ನ್ ಪರವಾಗಿ ಮಾತಾಡುತ್ತಾ ಈ ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಕೀಳಾಗಿ ಮಾತನಾಡುವ ಧೈರ್ಯ ತೋರುತ್ತಾಳೆ. “ಒಬ್ಬ ಹೆಣ್ಣು ತನಗೆ ಬೇಕೆನಿಸಿದ ವ್ಯಕ್ತಿಯ ಜೊತೆ (ತನ್ನ ವೈವಾಹಿಕ ಜೀವನದ ಚೌಕಟ್ಟನ್ನೂ ಮೀರಿ) ಮಲಗುವುದರಲ್ಲಿ ತಪ್ಪೇನು?! ಅನೇಕರು ಹಾಗಿದ್ದಾರೆ” ಎಂಬ ಹಾರಿಕೆಯ ಸಮರ್ಥನೆಯನ್ನೂ ನೀಡಿದ್ದಾಳೆ. ಈ ಮಾನಸಿಕ ಸ್ಥಿತಿಗೆ ಕಾರಣವೇನು ? ಸ್ವಚ್ಛಂದ ಪ್ರವೃತ್ತಿಯಲ್ಲವೇ! ವಿಕೃತಭಾವ ಅನ್ನಿಸುವುದಿಲ್ಲವೇ! ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶರು ಹೇಳಿದ ಒಂದು ಮಾತಿನ ಸುತ್ತವೇ ಹುತ್ತಕಟ್ಟುವ ಇವರು, ಆ ಮಾತಿನ ನಂತರದ ಬೆಳವಣಿಗೆಗಳನ್ನು ಗಾಳಿಗೆ ತೂರಿದ್ದಾರೆ. ತಮಗೆ ಬೇಕಾದ್ದನ್ನು ಮಾತ್ರ ಹೆಕ್ಕಿಕೊಂಡು, ಸಹಜ ಸ್ವಂತಿಕೆಗಳಿರದ ಯಾವುದೋ ಇಸಂ ಗಳನ್ನು ನೆಕ್ಕಿಕೊಂಡು ಬದುಕುವವರ ಮನೋಧರ್ಮವೇ ಅಶ್ಲೀಲ. ಆ ಬೌದ್ಧಿಕ ಅಶ್ಲೀಲತೆಯೂ ನಮ್ಮ ದೇಶದಿಂದ ದೂರವಾಗಲೆಂದು ಆಶಿಸೋಣ.

  http://www.ndtv.com/video/player/left-right-centre/porn-sites-blocked-is-government-being-the-moral-police/377490?livevideo-mostpopular

  ಉತ್ತರ
 3. modaka
  ಆಗಸ್ಟ್ 12 2015

  “ಅಂಥ ಹುಡುಗಿಯರ ನಡುವೆ ನಾವು ಕಳೆದು ಹೋಗಿದ್ದೇವೆ!”

  ಭಳಿರೆ! ಮೇಲಿನ ಮಾತಿನ ವಾರಸುದಾರರು ಬದುಕಿನಲ್ಲಿ ತಮ್ಮ ನಿರಾಸೆಗಳಿಗೆ ಹೊಣೆಮಾಡಲು ಒಂದು ಹರಕೆಯ ಕುರಿಯೊಂದನ್ನು ಹುಡುಕುವುದರಲ್ಲಾದರೂ ಯಶಸ್ವಿಯಾಗಿದ್ದಾರೆ ಎಂಬುದನ್ನು ಮೆಚ್ಚಬೇಕಿದೆ. 😀

  “ತಾವು” (ಅಥವಾ ತಮ್ಮಂತವರು), “ಕಳೆದು ಹೋಗಿರುವುದಕ್ಕೆ”, “ಅಂಥ ಹುಡುಗಿ”ಯರೇ ಕಾರಣ -ಎಂದು ಹಲಬುವ ಈ ಲೇಖನದ ಲೇಖಕರಂಥವರ ಸೆಕ್ಸಿಸ್ಟು ಸಿನಿಕತೆ ಚುವನಿಸಂಗಳಿಗೂ, ದರ್ಶನ್ ಎಂಬ ನಟನ ಧಿಮಾಕು ದುಂಡಾವರ್ತಿಗಳಿಗೆ ನಿಖಿತಾ ಎಂಬ ನಟಿಯೇ ಕಾರಣಳು ಅಂತ ಹೊರಟಿದ್ದ ಕನ್ನಡ ಚಿತ್ರರಂಗದ ಧುರೀಣರ ಧೋರಣೆಗೂ ತುಚ್ಛತನದಲ್ಲಿ ಯಾವ ವ್ಯತ್ಯಾಸವೂ ಇಲ್ಲ.

  ಇವರನ್ನುವ ಹಾಗೆಯೇ ಇವರುಗಳ ಆಫೀಸಿನಲ್ಲಿನ ಕೆಲವು ಹುಡುಗಿಯರ “ತಲೆಯಲ್ಲಿ ಎರಡಕ್ಷರವಿಲ್ಲದಿದ್ದರೂ ಎದೆಯೊಳಗಿನ ಎರಡಕ್ಷರಗಳು ಕೆಲಸ ಮಾಡುತ್ತಿವೆ” ಅಂತಲೇ ಅನ್ನೋಣ. ಹಾಗೆಯೇ ಆ “ಎದೆಯೊಳಗಿನ ಎರಡಕ್ಷರ” ಗಳನ್ನು ಓದಿಕೊಂಡಿದ್ದು ಇವರದೇ ಆಫೀಸುಗಳ ಕೆಲವು ಹುಡುಗ ಬಾಸುಗಳ “ತಲೆಯಲಿಲ್ಲದಿದ್ದರೂ ವೃಷಣದಲ್ಲಿದ್ದ ಎರೆಡು ಕಣ್ಣುಗಳು” ಅಂತಲೂ ಅನ್ನಬೇಕಲ್ಲವೇ? ಭಾಷೆ ಅಸಭ್ಯವಾಯಿತೇ?? ಯಾರದ್ದು???

  ಪತ್ರಕರ್ತರ ಕೆಲಸದಲ್ಲಿನ ಇವರ ನಿರ್ಲಜ್ಜ ಭಾಷೆ-ಮನೋಸ್ಥಿತಿಗಳಿಗೂ ನಿರ್ಭಯಾ ಕೇಸಿನ ಆರೋಪಿಗಳ ಆ ಒಬ್ಬ ಬಾಯಿಬಡುಕ ವಕೀಲನ ಭಾಷೆ-ಮನೋಸ್ಥಿತಿಗಳಿಗೂ ಯಾವ ವ್ಯತ್ಯಾಸವಿದೆ?

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments