5ನೇ ವರ್ಷಕ್ಕೆ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳು
ಅಂದು ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ,”ಇವರಂತೆ ನಮ್ಮದು ವಿಧ್ವಂಸಕ ಮಾರ್ಗವಲ್ಲ;ನಮ್ಮದು ಜ್ಞಾನ ಮಾರ್ಗ”ವೆಂದಾಗ,ನನ್ನ ಮುಖಾಮುಖಿಯಾಗಿದ್ದವರು “ಮೊದಲ ಬಾರಿ ಕ್ಯಾಮೆರಾ ಮುಂದೆ ಬಂದಿರುವ ಜೋಷ್ ಹೀಗೆಲ್ಲ ಮಾತನಾಡಿಸುತ್ತದೆ” ಅನ್ನುವ ಅರ್ಥದಲ್ಲೆನೋ ವ್ಯಂಗ್ಯವಾಡಿದ್ದರು.ನನಗದು ಕೇಳಿಸಿತಾದರೂ,ಉತ್ತರಿಸಬೇಕಾದ ಸಮಯ ಅದಲ್ಲ ಅಂತ ಸುಮ್ಮನಾಗಿದ್ದೆ…
ನಾವು ಹೇಳಿದ ಮಾರ್ಗದಲ್ಲಿಯೇ ಸಾಗುತಿದ್ದೇವೆ.ಅದಕ್ಕೆ ಸಾಕ್ಷಿಯಾಗಿ,
5ನೇ ವರ್ಷಕ್ಕೆ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳು ಈಗ ನಿಮ್ಮ ಕೈಯಲ್ಲಿಟ್ಟಿದ್ದೇವೆ…
ಈ ಪುಸ್ತಕಗಳು ಖಂಡಿತವಾಗಿಯೂ ನೀವು ಇದುವರೆಗೆ ನಂಬಿಕೊಂಡು ಬಂದ ಸಿದ್ಧಾಂತಗಳನ್ನು,ಐಡಿಯಾಲಜಿಗಳನ್ನು ಪ್ರಶ್ನಿಸುತ್ತವೆ,ತಲೆಕೆಳಗೂ ಮಾಡುತ್ತವೆ.ಅಂತಿಮವಾಗಿ ಈ ಪುಸ್ತಕಗಳು ಯಾವುದೇ ಐಡಿಯಾಲಜಿಗಳ ನಡುವೆ ಸಿಲುಕಿಕೊಳ್ಳದೇ ಸತ್ಯವನ್ನು ಹುಡುಕುವುದು ಹೇಗೆ ಎಂಬ ಚಿಂತನೆಯನ್ನೂ ಮತ್ತು ನಮ್ಮ ಸಂಸ್ಕೃತಿಯ ಮೇಲೆ ನಮಗರಿವಿಲ್ಲದಂತೆ ತೊಡಿಸಲಾಗಿರುವ ಕನ್ನಡಕವನ್ನು ಸರಿಸಬಲ್ಲವು.ಈ ಕಾರಣದಿಂದಾಗಿಯೇ ನಿಲುಮೆ ಪ್ರಕಾಶನ “ಸಂಸ್ಥೆ”ಯಲ್ಲ, “ಸಾಂಸ್ಕೃತಿಕ ಚಳುವಳಿ” ಎಂದು ನಾವು ಹೇಳುವುದು…
ಈ ಪುಸ್ತಕಗಳನ್ನು ನೀವು ಕೊಂಡು ಓದಿ,ಇಷ್ಟವಾದರೆ ನಿಮ್ಮ ಬಳಗಕ್ಕೂ ಕೊಳ್ಳಲು ಹೇಳಿ. ಇನ್ನು ಈ ಪುಸ್ತಕದ ಕುರಿತ ಹೊಗಳಿಕೆ,ತೆಗಳಿಕೆ,ಟೀಕೆ-ಟಿಪ್ಪಣಿ,ವಿಮರ್ಶೆ ಎಲ್ಲಕ್ಕೂ, ನಿಲುಮೆ ವೆಬ್ ತಾಣದಲ್ಲಿ ಮುಕ್ತ ಚರ್ಚೆಗೆ ಅವಕಾಶವಿದೆ.
ಪುಸ್ತಕಗಳನ್ನು mybookadda.in ಇಂದ ಆನ್ಲೈನ್ ಆರ್ಡರ್ ಮಾಡಿ ತರಿಸಿಕೊಳ್ಳಬಹುದು.
ಸದ್ಯ ರಾಷ್ಟ್ರೋತ್ಥಾನದ ಪುಸ್ತಕ ಮಳಿಗೆಗಳಲ್ಲಿ ಪುಸ್ತಕಗಳು ಲಭ್ಯವಿದೆ.ಇನ್ನೆರಡು ದಿನಗಳಲ್ಲಿ ರಾಜ್ಯದ ಮುಖ್ಯ ಪುಸ್ತಕದಂಗಡಿಗಳನ್ನು ತಲುಪಲಿವೆ. ನಮ್ಮ ಪುಸ್ತಕಗಳನ್ನು ತಮ್ಮ ತಮ್ಮ ಊರಿನ ಓದುಗರಿಗೆ ತಲುಪಿಸುವ ಮೂಲಕ ನಮ್ಮ ಸಾಂಸ್ಕೃತಿಕ ಚಳುವಳಿಯಲ್ಲಿ ಕೈ ಜೋಡಿಸುವ ಇಚ್ಚೆಯಿರುವ ಗೆಳೆಯರು ನಮ್ಮನ್ನು ಸಂಪರ್ಕಿಸಿ.
ಜೊತೆಯಾಗಿ ಬೌದ್ಧಿಕ ದಾಸ್ಯದಿಂದ ಮುಕ್ತರಾಗುವತ್ತ ಹೆಜ್ಜೆಯಿಡೋಣ
ನಿಮ್ಮೊಲುಮೆಯ,
ನಿಲುಮೆ ಬಳಗ
ಹೊಸ ಪುಸ್ತಕಗಳು ಕನ್ನಡದಲ್ಲಿ ಬಂದಷ್ಟೂ ಸಂತೋಷವೇ! ನಿಮ್ಮ ಪ್ರಕಾಶನದ ವತಿಯಿಂದ ಕೇವಲ ಬಾಲಗಂಗಾಧರ ಪ್ರಣೀತ ಚಿಂತನೆಯಷ್ಟೇ ಅಲ್ಲ ಕನ್ನಡದ ಸಮಕಾಲಿನ ಚಿಂತನೆಯಲ್ಲಿ ಅತ್ಯುತ್ತಮವಾದುದು ಎಲ್ಲವೂ ಪ್ರಕಟಗೊಳ್ಳಲಿ ಎಂದು ಆಶಿಸುತ್ತೇನೆ.