ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 10, 2015

20

‘ಸ್ವಪ್ನ ಸಾರಸ್ವತ’ದ ಪುಟಗಳಲ್ಲಿ

‍ನಿಲುಮೆ ಮೂಲಕ

– ಮನುಶ್ರೀ ಜೋಯಿಸ್

ಸ್ವಪ್ನ ಸಾರಸ್ವತ'“ಸ್ವಪ್ನ ಸಾರಸ್ವತ” ಒಂದು ಸುಂದರ ಸುಧೀರ್ಘ ಕಾದಂಬರಿ. ಸುಮಾರು ಐದು ತಲೆಮಾರುಗಳ ಸಾರಸ್ವತ ಕುಟುಂಬದ ಇತಿಹಾಸ ಹೇಳುವಂತ ಕಥೆ. ಇದು ಬರೀ ಆ ವರ್ಗಕ್ಕೆ ಮಾತ್ರ ಸೀಮಿತವಾಗಿರದೆ ಸಂಘಜೀವಿ ಮನುಷ್ಯನ ಪರಿಸರ ಪ್ರೀತಿಯನ್ನು, ಪ್ರಕೃತಿಯನ್ನು ಹಚ್ಚಿಕೊಳ್ಳುವ ರೀತಿಯನ್ನು ಬಿಂಬಿಸುತ್ತದೆ.

ಗೋವಾದಲ್ಲಿ ಪೋರ್ಚುಗೀಸರ ಆಕ್ರಮಣಕ್ಕೆ ಸಿಕ್ಕು ದಿಕ್ಕಾಪಾಲಾಗುವ ಸಾರಸ್ವತ ಬ್ರಾಹ್ಮಣರ ಕಷ್ಟ-ಕಾರ್ಪಣ್ಯದಿಂದ ಈ ಕಥೆ ಪ್ರಾರಂಭವಾಗುತ್ತದೆ. ದಾಳಿಯಿಂದಾಗುವ ದೇವಸ್ಥಾನಗಳ ಹಾನಿ, ಆಸ್ತಿ-ಪಾಸ್ತಿಗಳ ನಷ್ಟ, ಸಂಸ್ಕೃತಿಯ ಪತನ ಮುಂತಾದವುಗಳನ್ನು ಲೇಖಕರು ಯಶಸ್ವಿಯಾಗಿ,ಸೂಕ್ಷವಾಗಿ ಚಿತ್ರಿಸಿದ್ದಾರೆ. ಇನ್ನು ಧರ್ಮಹಾನಿಯ ಸಮಯದಲ್ಲಿ ಮನದಲ್ಲಿನ ತೊಳಲಾಟ, ಗೊಂದಲಗಳನ್ನು ಸಾಮಾನ್ಯ ಮನುಷ್ಯನೊಬ್ಬ ಎದುರಿಸುವ ಪರಿ ಮನ ಮುಟ್ಟುವಂತಿದೆ.

ಸ್ನೇಹದ ಹಳಿಯಲ್ಲಿ ಬದುಕಿನ ಬಂಡಿ ಸಾಗುವುದು.ದೌರ್ಬಲ್ಯದಲ್ಲೇ ಮುಂದೆ ಸಾಗಿ ಮನಸಲ್ಲೇ ಮುಚ್ಚಿಟ್ಟು ಕೊಳ್ಳುವ ಪಶ್ಚಾತ್ತಾಪ. ದ್ವೇಷದ ಚಿಕ್ಕ ಕಿಡಿಯಿಂದ ಹೊತ್ತಿ ಉರಿವ ಮನೆ, ಮನಸ್ಸು.ಅಷ್ಟೈಶ್ವರ್ಯಗಳಿದ್ದೂ ಎಲ್ಲವನ್ನು ಕಳೆದುಕೊಂಡು ವಲಸೆಬಂದು ಪರಸ್ಥಳದಲ್ಲಿ ನೆಲೆನಿಂತು ಬದುಕು ಕಟ್ಟಿಕೊಳ್ಳುವ ಜೀವನ ಪ್ರೀತಿ. ಮನುಷ್ಯನ ಮೋಹ,ಲೋಭ,ದ್ವೇಷಗಳು, ದಾರಿ ತಪ್ಪುವ ಮನಸ್ಸಿನ ಹೊಯ್ದಾಟಗಳು,ಪರಿಣಾಮಗಳು,ಜಿಜ್ಞಾಸೆಗಳು ಯಥಾವತ್ತಾಗಿ ಜೀವನವೇ ಹಾಳೆಯ ಮೇಲೆ ಮೂಡಿ ಬಂದಂತಿದೆ.

ಕಾದಂಬರಿಯ ಅಂಶಗಳನ್ನು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ.ಪ್ರತಿ ಪುಟದಲ್ಲೂ  ಪಾತ್ರಗಳನ್ನು ಹತ್ತಿರದಿಂದ ಕಂಡಾಗ ಬದುಕು ಭೀಕರ, ನಿಗೂಢ ಅನಿಸುತ್ತದೆ. ಅದೇ ಪುಸ್ತಕ ಮುಗಿದಾಗ ಇವು ಪೂರ್ಣ ಬದುಕಿನ ಹಲವು ಮುಖಗಳು ಎಂದು ಅರಿವಾಗುತ್ತದೆ. ನೋವು -ನಲಿವು, ಸುಖ-ದುಃಖ ಎಲ್ಲಾ ತಾತ್ಕಲಿಕ ಮತ್ತು ಸ್ವಾಭಾವಿಕ ಎಂಬ ನಿಲುವು ಮೂಡುತ್ತದೆ.

ಇಲ್ಲಿ ನಾಗ್ಡೂ ಬೇತಾಳನ ಪಾತ್ರವೇ ಒಂದು ಸಂದೇಶ. ಎಷ್ಟೇ ಬದಲಾವಣೆ,  ಅನಿರೀಕ್ಷಿತ ತಿರುವುಗಳಿದ್ದರೂ ಬದುಕು ತನ್ನ ನಿಯಮಗಳನ್ನು ಕಾಯ್ದುಕೊಳ್ಳುತ್ತದ ಎಂಬುದಕ್ಕೆ ಒಂದು ಉದಾಹರಣೆ. ಗೊಂದಲಗಳಿಗೆ ಸಿಕ್ಕಿಕೊಂಡಾಗ ಪ್ರಶ್ನೆ ಕೇಳಿ ಅದರಲ್ಲಿಯೇ ಉತ್ತರ ಹೇಳುವ ಈ ಮಾಯಾವಿ ಗುರಿಯ ಕಡೆ ಜನರನ್ನು ನಡೆಸುವುದು ಇಲ್ಲಿನ ಸ್ವಾರಸ್ಯಗಳಲ್ಲಿ ಒಂದು.ಕೊನೆಯಲ್ಲಿ ನಾಗ್ಡೂ ಬೇತಾಳನ ಮಾತುಗಳು ದಾರಿದೀಪದಂತೆ ಯುಗ-ಯುಗಾಂತರಕ್ಕೂ ಬೆಳಕು ಬೀರುತ್ತದೆ.

ಕಥೆಯ ಮಡಿಕೆಗಳಲ್ಲಿ ಜೀವನದ ಹಲವು ಮುಖಗಳನ್ನು ಹುದುಗಿಸಿದ,ವಿಚಾರ ಮಾಡುವಂತೆ, ಉತ್ತಮ ಸಾರಾಂಶದ ಒಳ್ಳೆಯ ಕೃತಿ. ದಿನ ನಿತ್ಯದ ಜೀವನದಲ್ಲಿ ಕಳೆದು ಹೋದಾಗ ಒಂದು ಮನೆತನದ ನಾನೂರು ವರುಷದ ಕಥೆ ಕೇಳಿದರೆ ಜೀವನದ ಒಂದು ಪೂರ್ಣ ಚಿತ್ರ ಕಂಡಂತಾಗುತ್ತದೆ. ನಾನೂರು ಪುಟಗಳ ಓದು ಆಯಾಸ ನೀಗಿಸಿ ಹೊಸ ಹುರುಪು ನೀಡುತ್ತದೆ.

20 ಟಿಪ್ಪಣಿಗಳು Post a comment
 1. Rajaram Hegde
  ಆಗಸ್ಟ್ 10 2015

  ಇತ್ತೀಚಿನ ವರ್ಷಗಳಲ್ಲಿ ನಾನು ಓದಿದ ಅತ್ಯಂತ ಉತ್ಕೃಷ್ಟ ಕಾದಂಬರಿ. ಓದಿದ ನಂತರ ಈ ಕಾದಂಬರಿಯ ಗುಂಗಿನಿಂದ ಹೊರಬರಲಿಕ್ಕೆ ನನಗೆ ತಿಂಗಳುಗಳೇ ಬೇಕಾದವು. ಇದೊಂಥರಾ ಮಹಾಕಾವ್ಯದಂತೆ ಇದೆ. ಈ ಕುರಿತು ಬರೆಯುತ್ತೇನೆಂಬುದಾಗಿ ಗೋಪಾಲಕೃಷ್ಣ ಪೈಗಳಿಗೆ ಪ್ರಾಮೀಸ್ ಮಾಡಿದ್ದೆ. ಆದರೆ ಇನ್ನೂ ಸಾಧ್ಯವಾಗುತ್ತಿಲ್ಲ.

  ಉತ್ತರ
 2. Shripad
  ಆಗಸ್ಟ್ 10 2015

  ಹೌದು. ಕನ್ನಡದ ಉತ್ತಮ ಕಾದಂಬರಿಗಳಲ್ಲಿ ಇದೂ ಒಂದ ಇದಕ್ಕಿಂತ ತುಸು ಮುಂಚೆ ಹೊರ ಬಂದ ವಿ ಟಿ ಶೀಗೇಹಳ್ಳಿಯವರ “ತಲೆಗಳಿ” ಕೂಡ ಇದೇ ಸಾಲಿಗೆ ಸೇರುವಂಥದ್ದು. ಅದನ್ನು ನಮ್ಮ ಯಾವ ವಿಮರ್ಶಕರೂ ಓದುವುದಿರಲಿ, ಕಣ್ಣೆತ್ತಿಯೂ ನೋಡಿದಂತೆ ಕಾಣುವುದಿಲ್ಲ. ಕನ್ನಡದಲ್ಲಿ “ಲೇಖಕರ” ಹೆಸರು ನೋಡಿ ಮಣೆ ಹಾಕುವ ಕೆಟ್ಟ ಟ್ರೆಂಡ್ ಶುರುವಾದಾಗಿನಿಂದ ಅನೇಕ ಸಾಹಿತ್ಯಕ ಅನ್ಯಾಯಗಳಾಗಿವೆ.

  ಉತ್ತರ
 3. anonymous
  ಆಗಸ್ಟ್ 10 2015

  “ಇತ್ತೀಚಿನ ವರ್ಷಗಳಲ್ಲಿ ನಾನು ಓದಿದ ಅತ್ಯಂತ ಉತ್ಕೃಷ್ಟ ಕಾದಂಬರಿ”

  Then you must have not read Ooru Bhanga by Vivek Shanbhag.

  ಉತ್ತರ
 4. anonymous
  ಆಗಸ್ಟ್ 10 2015

  “ಇತ್ತೀಚಿನ ವರ್ಷಗಳಲ್ಲಿ ನಾನು ಓದಿದ ಅತ್ಯಂತ ಉತ್ಕೃಷ್ಟ ಕಾದಂಬರಿ”

  Then you haven’t read Viveka Shanabhaga’s Ooru Bhanga!

  ಉತ್ತರ
  • ಆಗಸ್ಟ್ 16 2015

   You can’t compare apple and oranges. Equally,one might like apple taste more than orange and still hold that belief to be true.
   If you have any substance, comments on the essence of the content and add to the discussion rather than bringing an abtuse matter.
   I have a suspicion that this is the same old wine presenting itself in a new bottle.

   ಉತ್ತರ
   • anonymous
    ಆಗಸ್ಟ್ 17 2015

    Are u blind? Or mentally challenged? Or simply too lazy to scroll down and find answers for your questions? Don’t behave like a jerk just because you can.

    “ಹೆಗ್ಡೇರೆ, ತಲೆಗಳಿ ಹವ್ಯಕ ಭಾಷೆಯಲ್ಲಿ ಬರೆದಂತಹ ಕಾದಂಬರಿ. ಪ್ರಸ್ತುತದ ಅತ್ಯುತ್ತಮ ಕಾದಂಬರಿ ಆಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಬರೆದ ಕಾದಂಬರಿಯಲ್ಲ, ಆದರೆ ಅದರ ಮಟ್ಟಿಗೆ ಚೆನ್ನಾಗಿಯೇ ಇದೆ. ಊರುಭಂಗ ಮಹತ್ವಾಕಾಂಕ್ಷೆಯ ಕೃತಿ – ಬೆಂಗಳೂರಿನ ಕಾರ್ಪೋರೆಟ್ ಜೀವನದ ಒಳಲಯವನ್ನು ರೂಪಕವಾಗಿಸಲು ಛಲದಿಂದ ಬರೆದಂತಹ ಕಾದಂಬರಿ.”

    ಉತ್ತರ
    • ಆಗಸ್ಟ್ 18 2015

     ಈ ananus ಮತ್ತು anonymous ಎರಡೂ ಒಂದೇ ಎಂಬುದನ್ನು ಪತ್ತೆ ಹಚ್ಚಿದ್ದಾಯಿತು. ಒಂದ ದೇಹಕ್ಕೆ ಎರಡು ಮುಖಗಳ ಅಥವಾ –ಕವೋ .
     ಇದು ಬಿದಿರಿನೊಳಗಿನ ಚದುರನ ಆಟಗಳ ಇಲ್ಲವೆ ಗೂಳಿ ಬಸವನ ತೊಪ್ಪೆಯೋಟವೋ ಅಥವಾ ಚೋರ ಜಂಗಮ ನಾಗನ ಕುಚೇಷ್ಟೆ ತಿಳಿಯದಾಯಿತಲ್ಲ ಚನ್ನಬಸವಾssssss

     ಉತ್ತರ
 5. ಆಗಸ್ಟ್ 11 2015

  ನಾಗ್ಡೋ ಬೇತಾಳನೆಂಬ ಪಾತ್ರ ಈ ಕಥೆಯ ನೈತಿಕ ತಿರುಳಾಗಿ, ಉಳಿದ ಮನುಷ್ಯ ಮಾತ್ರರ ಬದುಕುಗಳು ಬಿಚ್ಚಿಕೊಳ್ಳುತ್ತಾ ಹೋಗುವ ಬಹುಪದರದ ಹಣ್ಣಿನ ರೀತಿಯಲ್ಲಿ ಈ ಕಾದಂಬರಿ ಮೂಡಿಬಂದಿದೆ. ಇದನ್ನು ರಚಿಸುವಲ್ಲಿ ಲೇಖಕರು ತೋರಿಸಿರುವ ಪ್ರೀತಿ ಅನನ್ಯವಾದದ್ದು.
  ಭೂತಹಿಡಿದವನಂತೆ ಓದಿ ಮುಗಿಸಿದೆ.ಅಪರೂಪದ ಸಂಗ್ರಹ ಯೋಗ್ಯ ಕ್ೃತಿ

  ಉತ್ತರ
 6. anonymous
  ಆಗಸ್ಟ್ 11 2015

  “ನಾಗ್ಡೋ ಬೇತಾಳನೆಂಬ ಪಾತ್ರ ಈ ಕಥೆಯ ನೈತಿಕ ತಿರುಳಾಗಿ, ಉಳಿದ ಮನುಷ್ಯ ಮಾತ್ರರ ಬದುಕುಗಳು ಬಿಚ್ಚಿಕೊಳ್ಳುತ್ತಾ ಹೋಗುವ ಬಹುಪದರದ ಹಣ್ಣಿನ ರೀತಿಯಲ್ಲಿ ಈ ಕಾದಂಬರಿ ಮೂಡಿಬಂದಿದೆ”

  LOL 😁

  These type of heavy statements are best delivered by the intellectuals whom you oppose tooth and nail. 😜

  ಉತ್ತರ
  • ಆಗಸ್ಟ್ 16 2015

   Ananus,
   ನೀನು ಭೂಮಿಯೊಳಗೆ ಬೆಳೆದ ಕಾರಣ ನಿನಗೆ ಇವೆಲ್ಲ. Heavy ಅನ್ನಿಸಬಹುದು. ಮಣ್ಣಲ್ಲಿ ಮುಖವಿಟ್ಟ್ು lol ಮಾಡಬೇಡ. ಮಣ್ಣು ಮುಕ್ಕಬೇಕಾಗುತ್ತದೆ.
   ನಿನಗೆ ಎಲ್ಲ heavy ಯೇ. ನೀನು ಹೇಳಿದ intellectual ಗಳು ಹೇಳಬಹುದಾದ ಮಾತುಗಳನ್ನು ಅವರೇನು ಗುತ್ತಿಗೆ ಹಿಡಿದಿಲ್ಲ ತಾನೇ. ನಾನೂ ಹೇಳ್ತೇನೆ. ನೀನೇನು ಉರ್ಕೋಬೇಡ.
   ನಾನು ಈಗ ಹೇಳಿದ್ದು ನಿನಗೆ heavy ಆಗಿದ್ದರೆ anannus ಗೆ ಅನಾಸಿನ್ ಬೇಕಾಗಬಹುದು. ಹೋಗು ಮಗು, ಮಾತ್ರೆ ತಿಂದು ಮಲಗು.
   ಘರ್ ವಾಪಸು ಬಗ್ಗೆ ಇನ್ನೊಂದು ಸಲ ಮಾತಾಡೋಣ.

   ಉತ್ತರ
  • ಆಗಸ್ಟ್ 16 2015

   An-anus ಅನ್ನುವುದೋ,ಅನಾನಸ್ ಅನ್ನುವುದೋ ಸ್ವಲ್ಪ ಹೇಳಪ್ಪ. ನಿನ್ನ ಹೆಸರು ಓದಿದರೆ LOL ಮಾಡೋಣ ಅನಿಸುತ್ತದೆ

   ಉತ್ತರ
   • anonymous
    ಆಗಸ್ಟ್ 17 2015

    You have two of those? Or ten? Are u a postmodern Ravana with ten anus?

    ಉತ್ತರ
    • ಆಗಸ್ಟ್ 17 2015

     ನನಗೆ ಹೆಸರು ಆಕಾರ ಎರಡೂ ಇವೆ. ನೀನು anonymous ಆದ ಕಾರಣ ನನಗೆ ಆರೋಪಿಸಿದ ಒಂದು ಎರಡು ನಿನಗೆ ಒಪ್ಪುತ್ತೆ,ಏನಂತೀಯ

     ಉತ್ತರ
 7. valavi
  ಆಗಸ್ಟ್ 12 2015

  ಕರಾವಳಿಯಲ್ಲಿನ ಬ್ರಾಹ್ಮಣರನ್ನು ಬಹುವಿಧವಾಗಿ ಹಿಂಸಿಸಿ ಮತಾಂತರ ಮಾಡಿದರು ಪೋರ್ಚುಗೀಸರೆನ್ನುತ್ತಾರೆ. ಹಾಗೆ ಮತಾಂತರಗೊಂಡವರಲ್ಲಿ ಒಬ್ಬರು ನಮ್ಮೂರಿನ ಸೈನಿಕ ಶಾಲೆಯಲ್ಲ್ಲಿ ಉನ್ನತ ಹುದ್ದೆಯಲ್ಲಿದ್ದು ಈಗ ನಿವೃತ್ತಿ ಪಡೆದಿದ್ದಾರೆ. ಇರಲಿ , ಹಾಗೆ ಬಲವಂತವಾಗಿ ಮತಾಂತರವಾದವರಲ್ಲಿ ಆ ಧರ್ಮದ ಕುರಿತು ಅದಮ್ಯ ದ್ವೇಷ ಬೆಳೆಯಬೇಕಲ್ಲವೆ? ಆದರೆ ಅಂಥವರೇ ಮೂಲ ಕ್ರಿಸ್ಚಿಯನ್ ಗಿಂತ ಹೆಚ್ಚಾಗಿ ಕ್ರೈಸ್ತ ಧರ್ಮವನ್ನು ಪ್ರೀತಿಸುತ್ತಾರಲ್ಲಾ? ತಮ್ಮ ತಾತ ಮುತ್ತಾತಂದಿರು ನಂಬಿದ ಧರ್ಮವನ್ನು ಬಿಡಲು ಅವರೆಷ್ಟು ಬವಣೆ ನೋವು ಅನುಭವಿಸಿರಬೇಕೆಂದು ಇವರು ವಿಚಾರಿಸುವದೇ ಇಲ್ಲವಲ್ಲಾ? ಯಾರಾದರೂ ಒಂದು ಧರ್ಮ, ನಂಬಿಕೆ ಬಿಟ್ಟು ಇನ್ನೊಂದನ್ನು ಆಚರಿಸಬೇಕೆಂದರೆ ಮೊದಲ ತಲೆಮಾರಿನವರಿಗಾದರೂ ನೋವಿದ್ದೇ ಇರುತ್ತಲ್ಲವೆ? ಅವರು ಮುಂದಿನವರಿಗೂ ತಮ್ಮ ನೋವನ್ನು ದಾಟಿಸಿಯೇ ಇರುತ್ತಾರಲ್ಲವೆ? ಹಾಗಿದ್ದಾಗ್ಯೂ ಇವರು ಅದು ಹೇಗೆ ಹೊಸ ಧರ್ಮವನ್ನು ಅಷ್ಟು ಪ್ರೀತಿಸುತ್ತಾರೆ? ತಮ್ಮ ಪರಂಪರೆಯನ್ನು ಕಸಿದುಕೊಂಡು ಹೇಳಿಕೊಳ್ಲಲು ತಮಗೇನೂ ಹೆಮ್ಮೆಯ ವಿಷ್ಯಗಳಿಲ್ಲದಂತೆ ಮಾಡಿದವರನ್ನು ಅದು ಹೇಗೆ ಇವರು ಪ್ರೀತಿಸುತ್ತಾರೆ? ಹ್ಯಾಗೆ ಪ್ರೀತಿ ಬರುತ್ತೆ? ದಲಿತರಿಗಾದರೆ ಮೇಲ್ಜಾತಿಯವರ ದಬ್ಬಾಳಿಕೆಯಿಂದ ಬಿಡುಗಡೆಯಾಯಿತೆಂದು ಸಮಾಧಾನ ಹೊಂದಿದರೆನ್ನಬಹುದು. ಆದರೆ ಬ್ರಾಹ್ಮಣರಿಗೆ ಅಂಥ ಯಾವ ದಬ್ಬಾಳಿಕೆ ಇಲ್ಲದೇ ಒತ್ತಾಯಕ್ಕಾಗಿ ಮತಾಂತರವಾದಾಗ ಅವರ ಬಗ್ಗೆ ಹೇವರಿಕೆ ಹುಟ್ಟಬೇಕಲ್ಲವೆ? ಆದರೆ ನಮ್ಮ ಸೈನಿಕ ಶಾಲೆಯ ಆ ವ್ಯಕ್ತಿ ಹೆಮ್ಮೆಯಿಂದ ನಿಷ್ಠೆಯಿಂದ ತಮ್ಮ ಕ್ರಿಸ್ತಿಯನ್ ಧರ್ಮದ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರು. ವಿಚಿತ್ರವಲ್ಲವೆ ಈ ವಿದ್ಯಮಾನಾ?????!!!!!!!

  ಉತ್ತರ
  • ಅನಾನಸ್
   ಆಗಸ್ಟ್ 12 2015

   ಪೋರ್ಚುಗೀಸರ ಕಾಲದಲ್ಲಿ ಬಲವಂತವಾಗಿ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾದ ಕರಾವಳಿಯ ಬ್ರಾಹ್ಮಣರಿಗಾಗಿ ಒಂದು ಘರ್ ವಾಪಸಿ ಕಾರ್ಯಕ್ರಮವನ್ನೇಕೆ ಆಯೋಜಿಸಬಾರದು? ಅವರನ್ನೆಲ್ಲ ಹಿಂದೂ ಧರ್ಮಕ್ಕೆ ವಾಪಾಸು ಕರೆದುಕೊಂಡು ಬ್ರಾಹ್ಮಣ ಪಟ್ಟ ಕೊಟ್ಟರೆ ಅವರು ಕ್ರಿಶ್ಚಿಯನ್ ಧರ್ಮವನ್ನು ಪ್ರೀತಿಸುವುದನ್ನು ನಿಲ್ಲಿಸಿಯಾರು.

   ಉತ್ತರ
   • ಆಗಸ್ಟ್ 16 2015

    An-anus ಅನ್ನುವುದೋ,ಅನಾನಸ್ ಅನ್ನುವುದೋ ಸ್ವಲ್ಪ ಹೇಳಪ್ಪ. ನಿನ್ನ ಹೆಸರು ಓದಿದರೆ LOL ಮಾಡೋಣ ಅನಿಸುತ್ತದೆ

    ಉತ್ತರ
 8. rajaram hegde
  ಆಗಸ್ಟ್ 12 2015

  ನಾನು ತಲೆಗಳಿ ಹಾಗೂ ಊರುಭಂಗಗಳನ್ನು ಓದುತ್ತೇನೆ. ನನಗೂ ಅವುಗಳ ಕುರಿತು ಕುತೂಹಲವಿದೆ.

  ಉತ್ತರ
  • ಅನಾನಸ್
   ಆಗಸ್ಟ್ 13 2015

   ಹೆಗ್ಡೇರೆ, ತಲೆಗಳಿ ಹವ್ಯಕ ಭಾಷೆಯಲ್ಲಿ ಬರೆದಂತಹ ಕಾದಂಬರಿ. ಪ್ರಸ್ತುತದ ಅತ್ಯುತ್ತಮ ಕಾದಂಬರಿ ಆಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಬರೆದ ಕಾದಂಬರಿಯಲ್ಲ, ಆದರೆ ಅದರ ಮಟ್ಟಿಗೆ ಚೆನ್ನಾಗಿಯೇ ಇದೆ. ಊರುಭಂಗ ಮಹತ್ವಾಕಾಂಕ್ಷೆಯ ಕೃತಿ – ಬೆಂಗಳೂರಿನ ಕಾರ್ಪೋರೆಟ್ ಜೀವನದ ಒಳಲಯವನ್ನು ರೂಪಕವಾಗಿಸಲು ಛಲದಿಂದ ಬರೆದಂತಹ ಕಾದಂಬರಿ.

   ಉತ್ತರ
 9. ಆಗಸ್ಟ್ 18 2015

  ಈ ananus ಮತ್ತು anonymous ಎರಡೂ ಒಂದೇ ಎಂಬುದನ್ನು ಪತ್ತೆ ಹಚ್ಚಿದ್ದಾಯಿತು. ಒಂದ ದೇಹಕ್ಕೆ ಎರಡು ಮುಖಗಳ ಅಥವಾ –ಕವೋ .
  ಇದು ಬಿದಿರಿನೊಳಗಿನ ಚದುರನ ಆಟಗಳ ಇಲ್ಲವೆ ಗೂಳಿ ಬಸವನ ತೊಪ್ಪೆಯೋಟವೋ ಅಥವಾ ಚೋರ ಜಂಗಮ ನಾಗನ ಕುಚೇಷ್ಟೆ ತಿಳಿಯದಾಯಿತಲ್ಲ ಚನ್ನಬಸವಾssssss

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments