ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 20, 2015

82

Sin ಅನ್ನು ಭಾಷಾಂತರಿಸಿದ ಪಾಪವೇ ವಸಾಹತುಪ್ರಜ್ಞೆ

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

Colonial ConsciousnessSin ಶಬ್ದದ ಅರ್ಥವೇನು ಎಂದು ಕೇಳಿದರೆ ಎಗ್ಗಿಲ್ಲದೇ ಪಾಪ ಎಂದು ಉಚ್ಚರಿಸಿಬಿಡುತ್ತೇವೆ. ಇದರಲ್ಲಿ ಅಷ್ಟು ತಲೆಕೆಡಿಸಿಕೊಳ್ಳುವಂಥದ್ದೇನೂ ಇಲ್ಲ ಎಂದೇ ಅನ್ನಿಸುತ್ತದೆ. ಮಾಡಬಾರದ್ದನ್ನು ಮಾಡುವದು ಪಾಪ ಎಂದು ನಾವೂ ಹೇಳುತ್ತೇವೆ. ಪಾಶ್ಚಿಮಾತ್ಯ ಕ್ರೈಸ್ತರೂ ಹೇಳುತ್ತಾರೆ. ಹೀಗಾಗಿ ಒಂದು ಹಂತದಲ್ಲಿ Sin=ಪಾಪ ಎನ್ನುವದು ಒಪ್ಪಿತವೇ. ಹಾಗೆಯೇ sinner=ಪಾಪಿ ಎಂಬುದೂ ಸರಿ. ಆದರೆ ಇಲ್ಲೊಂದು ಸಮಸ್ಯೆಯಿದೆ. ಪಾಪದ ವಿರುದ್ಧ ಪದ ಏನು ಎಂದಾಗ ಕ್ಷಣವೂ ತಡಮಾಡದೇ ಪುಣ್ಯ ಎನ್ನುತ್ತೇವೆ. ಆದರೆ Sin ಶಬ್ದದ ವಿರುದ್ಧ ಪದ ಏನು ಎಂದು ಕೇಳಿದರೆ?

ಮುಗ್ಗರಿಸಿ ಬಿದ್ದ ಅನುಭವವಾಯಿತಲ್ಲವೇ? ಇರಲಿ, Thesaurus ನಲ್ಲಿ Sin ಗೆ ಎಷ್ಟೊಂದು ವಿರುದ್ಧಪದಗಳಿವೆಯೋ ಅವನ್ನೆಲ್ಲ ಗಮನಿಸೋಣ, ಅವುಗಳು advantage, good, goodness, good deed, kindness, obedience, right, virtue, perfection, behavior, morality.ಇವೆಲ್ಲ ಶಬ್ದಗಳೂ ಪುಣ್ಯದ ಸುತ್ತ ಗಿರಕಿ ಹೊಡೆಯುತ್ತವೆಯೇ ವಿನಃ ಒಂದಾದರೂ ಪುಣ್ಯವನ್ನು ಸಂಪೂರ್ಣವಾಗಿ ಪ್ರತಿನಿಧಿಸುವಷ್ಟು ಪುಣ್ಯ ಕಟ್ಟಿಕೊಂಡಿದೆಯೇ? “ನೀವು ಜೀವನದಲ್ಲಿ ಬಹಳಷ್ಟು ಪುಣ್ಯ ಗಳಿಸಿದ್ದೀರಿ” ಎನ್ನುವದನ್ನು ಹೇಗೆ ಭಾಷಾಂತರಿಸುತ್ತೀರಿ?

Sin ಶಬ್ದವನ್ನು ಅರ್ಥಮಾಡಿಕೊಳ್ಳೋಣ. ಇದು ರಿಲಿಜನ್ನುಗಳಲ್ಲಿ act of violating the God’s will (ಸತ್ಯದೇವನ ಆಶಯವನ್ನು ಮೀರುವ ಕಾರ್ಯ) ಎಂಬರ್ಥದಲ್ಲಿ ಪ್ರಯೋಗವಾಗುತ್ತದೆ. ತಿನ್ನಬೇಡ ಎಂದ ಹಣ್ಣನ್ನು ತಿನ್ನುವದು Sin. ಮೂರ್ತಿಯನ್ನು ಪೂಜಿಸಬೇಡ ಎಂಬುದನ್ನು ಮೀರಿ ಪೂಜಿಸುವದು Sin. ಕ್ರೈಸ್ತನೊಬ್ಬ ಇಂಥ Sin ಗಳನ್ನು ಆಚರಿಸದಿರುವಂತೆ ಎಚ್ಚರ ವಹಿಸುತ್ತಾನೆ. ಹಾಗೊಂದು ವೇಳೆ ಆಚರಿಸಿದರೂ ಚರ್ಚಿನಲ್ಲಿ ಅದನ್ನು confess ಮಾಡಿಕೊಂಡು ಕ್ಷಮಿಸುವಂತೆ ಬೇಡಿಕೊಳ್ಳುತ್ತಾನೆ. ಏಕೆಂದರೆ ದೇವವಾಣಿಯನ್ನುಲ್ಲಂಘಿಸಿದರೆ ಶಾಶ್ವತ ನರಕ ಅವರಿಗಾಗಿ ಕಾದಿರುತ್ತದೆ. ಇದೇ ಮಾತು ಯಹೂದಿಗಳಿಗೆ ಮತ್ತು ಮುಸ್ಲಿಮರಿಗೂ ಅನ್ವಯವಾಗುತ್ತದೆ.

ಮೋಸಸ್ ಗೆ ನೀಡಿದ ೧೦ ಆದೇಶಗಳಲ್ಲಿ ಒಂದನ್ನು ಮೀರಿದರೂ ಅದು Sin. ಹತ್ತನ್ನೂ ಮೀರಿದರೂ ಅದು Sin. ಹೀಗಾಗಿ Sin ಅನ್ನು ಪರಿಮಾಣಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದೇಶಗಳನ್ನು ತಿಳಿಯದೇ ಮೀರಿದರೂ, ತಿಳಿದು ಮೀರಿದರೂ ಅದು ಬಗೆಹರಿಯುವದು ದೇವನಲ್ಲಿ ಕ್ಷಮೆ ಬೇಡಿದಾಗಲೇ. ಮಾಡಿರುವ Sin ನಾಶವಾಗುವದು ಕೇವಲ ಸತ್ಯದೇವನ ಕ್ಷಮೆಯಿಂದಲೇ ಹೊರತು ಅದಕ್ಕೆ ಇನ್ನಾವ ಪ್ರಾಯಶ್ಚಿತ್ತವೂ ಇಲ್ಲ. ಅಂತಃಕರಣದಿಂದ ಕ್ಷಮೆ ಬೇಡಿದಾಗ ಆತ ಖಂಡಿತವಾಗಿಯೂ ಕ್ಷಮಿಸುತ್ತಾನೆ ಎಂಬುದು ಎಲ್ಲ ಸೆಮೆಟಿಕ್ ರಿಲಿಜನ್ನುಗಳ ಪ್ರತಿಪಾದನೆ. ಭಗವಂತನ ಕ್ಷಮೆಗೆ ಅರ್ಹರಾದವರು ಶಾಶ್ವತ ಸ್ವರ್ಗವನ್ನನುಭವಿಸುತ್ತಾರೆ. ಇಲ್ಲದವರು ಶಾಶ್ವತ ನರಕವನ್ನನುಭವಿಸುತ್ತಾರೆ.

ಆದರೆ ನಮ್ಮ ಪಾಪ-ಪುಣ್ಯಗಳ ಕಲ್ಪನೆ ಈ ರೀತಿಯಾಗಿಲ್ಲ ಎಂಬುದು ನಮಗೆಲ್ಲರಿಗೂ ಅನುಭವಕ್ಕೆ ಬರುತ್ತದೆ. ಪ್ರತಿಫಲದ ಉದ್ದೇಶ ಇಟ್ಟುಕೊಂಡೇ ನಾವು ಪೂಜೆ ಮಾಡುತ್ತೇವೆ ಆದರೆ ನಮಗೆಂದೂ ಅದು ಕೃಷ್ಣನ “ಕರ್ಮಣ್ಯೇವಾಧಿಕಾರಸ್ತೇ” ಆದೇಶವನ್ನು ಮೀರಿದ ಪಾಪವಾಗಿ ಕಾಣಿಸುವದಿಲ್ಲ. ಹೆಚ್ಚು ಹೆಚ್ಚು ಪುಣ್ಯಗಳನ್ನು ಗಳಿಸಲು ನಾವು ಬಗೆಬಗೆಯ ಪೂಜೆಗಳನ್ನು ಮಾಡುತ್ತೇವೆ. ಮಾಡಿದ ಪಾಪಗಳನ್ನು ಕಳೆದುಕೊಳ್ಳಲು ಪ್ರಾಯಶ್ಚಿತ್ತಗಳನ್ನು ಮಾಡುತ್ತೇವೆ. ನಮ್ಮಲ್ಲಿ ಪುಣ್ಯ-ಪಾಪಗಳು ಕೂಡಿ ಕಳೆಯಬಹುದಾದ, ಲೆಕ್ಕ ಹಾಕಿಕೊಳ್ಳಬಹುದಾದ, ಮಾತ್ರೆಗಳು. ಇಲ್ಲಿ ಪುಣ್ಯ-ಪಾಪಗಳು ಪರಿಮಾಣೀಕೃತವಾಗಿವೆ. ಜನಸಾಮಾನ್ಯರಿಗೆ ಪಾಪವು ಕಬ್ಬಿಣದ ಸರಪಳಿಯ ಬಂಧನವಾದರೆ ಆಧ್ಯಾತ್ಮ ಮಾರ್ಗದಲ್ಲಿರುವವರಿಗೆ ಪುಣ್ಯವೂ ಕೂಡ ಚಿನ್ನದ ಸರಪಳಿಯ ಬಂಧನವೇ ಆಗಿರುತ್ತದೆ.

ನಮ್ಮ ಪರಂಪರೆಯಲ್ಲಿ ಕಾರ್ಯಗಳ ಉದ್ದೇಶ ಪಾಪ-ಪುಣ್ಯಗಳನ್ನು ನಿರ್ಣಯಿಸಲು ಮುಖ್ಯವೇ ಹೊರತು ಸ್ವತಂತ್ರವಾಗಿ ಕಾರ್ಯಗಳೇ ಅದನ್ನು ನಿರ್ಣಯಿಸುವದಿಲ್ಲ. ಒಂದು ಕ್ರಿಯೆಯ ಹಿಂದಿನ ಉದ್ದೇಶ ಅದನ್ನು ಮಾಡುವವನಿಗೆ ಮಾತ್ರ ಗೊತ್ತಿರುತ್ತದೆ. ಹೀಗಾಗಿ ಪಾಪ-ಪುಣ್ಯಗಳೇನಿದ್ದರೂ ಸಾಂದರ್ಭಿಕವಾಗಿ ನಿರ್ಣಯವಾಗುತ್ತವೆ. ನೂರು ಸುಳ್ಳು ಹೇಳಿ ಮದುವೆ ಮಾಡು ಎಂಬ ಗಾದೆಯೂ ಇದನ್ನೇ ಸ್ಪಷ್ಟೀಕರಿಸುತ್ತದೆ. ಪೂಜಿಸಲ್ಪಡುತ್ತಿರುವ ಗಣಪತಿಯನ್ನು ಒಡೆಯುವದು ಪಾಪ. ಪೂಜಿಸಿದ ನಂತರ ನೀರಿನಲ್ಲಿ ವಿಸರ್ಜಿಸುವದು ಪುಣ್ಯ. ಎರಡೂ ಕ್ರಿಯೆಗಳು ಹೆಚ್ಚು ಕಮ್ಮಿ ಒಂದೇ ಪರಿಣಾಮವನ್ನುಂಟು ಮಾಡುವಂತಹದ್ದು. ಆದರೆ ಉದ್ದೇಶಗಳು ಬೇರೆ ಬೇರೆ, ಹೀಗಾಗಿ ಪಾಪಪುಣ್ಯಗಳ ನಿರ್ಣಯವೂ ಕೂಡ ಸಾಂದರ್ಭಿಕ.

ಇಲ್ಲಿ ಇನ್ನೂ ಒಂದು ಗಮನಿಸಬೇಕಾದ ಅಂಶವಿದೆ. ತಿಳಿಯದೇ ಮಾಡಿದ ಪಾಪಗಳಿಗೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತವಾದರೂ, ಗೊತ್ತಿದ್ದೂ ಮಾಡಿದ ಪಾಪಗಳನ್ನು ಕಳೆಯಲು ಇನ್ನಿಷ್ಟು ಪ್ರಾಯಶ್ಚಿತ್ತ ಕರ್ಮಗಳನ್ನು ಮಾಡಬೇಕಾಗುತ್ತದೆ. ಕರ್ಮಗಳೇ ಕರ್ಮಗಳನ್ನು ನಿವಾರಿಸುವದರಿಂದ ಭಗವಂತನ ಕ್ಷಮೆಯ ಅಗತ್ಯವಿಲ್ಲ. ಅಲ್ಲದೇ ಸಂಚಿತ ಪುಣ್ಯ ಮತ್ತು ಪಾಪಗಳು ಎಂದಿಗೂ ಅನಂತವಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಂತೆ ಪುಣ್ಯ-ಪಾಪಗಳು. ಅವುಗಳೂ ಕೂಡ ಕ್ಷೀಣಿಸುತ್ತವೆ. ಪುಣ್ಯಗಳಿಸಿ ಸ್ವರ್ಗಕ್ಕೆ ಹೋದವರು ಹಿಂದಿರುಗಿ ಬರಲೇಬೇಕು. “ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ”. ಹೀಗಾಗಿ ಸ್ವರ್ಗ-ಮರ್ತ್ಯ-ನರಕಗಳಾವವೂ ಶಾಶ್ವತವಲ್ಲ ಎಂಬುದು ನಮ್ಮ ಪರಂಪರೆಯ ವಿಶೇಷತೆ ಮತ್ತು ಇದು ರಿಲಿಜನ್ನುಗಳ ನಂಬಿಕೆಗೆ ಸ್ಪಷ್ಟವಾಗಿ ವಿರುದ್ಧವಾಗಿದೆ.

Sin ಮತ್ತು ಪಾಪಗಳ ನಡುವಿನ ಅಂತರ ಕೇವಲ ನಂಬಿಕೆಗಷ್ಟೇ ಸೀಮಿತವಾಗಿದ್ದರೆ ಇಂದು ಈ ಚರ್ಚೆ ಮಹತ್ವದ್ದಾಗುತ್ತಿರಲಿಲ್ಲ. ಆದರೆ ಇದಕ್ಕೆ ಇನ್ನೊಂದು ಆಯಾಮವಿದೆ. Bible ಗೆ ಸಮಾನಾಂತರವಾಗಿ ಸೆಕ್ಯುಲರ್ ಲೋಕದಲ್ಲಿ Constitution ಇರುವಂತೆ, Sin ಗೆ ಸಮಾನಾಂತರವಾಗಿ Crime ಎಂಬುದೊಂದಿದೆ. ಅದನ್ನು ನಾವು ಅಪರಾಧ ಎಂದು ಭಾಷಾಂತರಿಸಿದ್ದೇವೆ. ಆದರೆ Crime ಮತ್ತು ಅಪರಾಧಗಳ ಅಂತರವೂ ಇಷ್ಟೇ ಅಗಲವಾಗಿದೆ. “ಅಪರಾಧ ಸಹಸ್ರಾಣಿ ಕ್ರಿಯತೇ ಅಹರ್ನಿಶಂ ಮಯಾ” ಎಂಬುದನ್ನು ಭಾಷಾಂತರಿಸಿ “I commit thousands of crimes every day and night” ಎಂದು ಮಾಡಿಬಿಟ್ಟರೆ ಸಾಕು ಗೊತ್ತಾಗುತ್ತದೆ Crime ಮತ್ತು ಅಪರಾಧಗಳ ಕಲ್ಪನೆಯ ನಡುವಿನ ಅಂತರವೆಷ್ಟು ಎನ್ನುವದು.

Bible ನಿಯಮಗಳನ್ನು ಮೀರಿವವನು Sinner ಹೇಗೋ, ಹಾಗೆ Constitution ನಿಯಮಗಳನ್ನು ಮೀರುವವನು Criminal. ಅದನ್ನು ನಾವು ಅಪರಾಧಿ ಎಂದು ಭಾಷಾಂತರಿಸಿದ್ದೇವೆ. ಆದರೆ ಕೊಲೆ-ಸುಲಿಗೆ ಮಾಡಿದಾಗ ಭಾರತೀಯನೊಬ್ಬನಿಗೆ ಕಾಡುವ ಅಪರಾಧಿ ಮನೋಭಾವ ಸರ್ಕಾರಕ್ಕೆ ಸಲ್ಲಿಸಬೇಕಾದ ಟ್ಯಾಕ್ಸ್ ಅನ್ನು ಏಮಾರಿಸಿದಾಗ ಕಾಡಿದೆಯೇ? ಟ್ಯಾಕ್ಸ್ ಅನ್ನು ಏಮಾರಿಸುವ ಕ್ರಿಯೆಯನ್ನು ಅಪರಾಧವೆಂದು ಪರಿಗಣಿಸಬೇಕಾಗಿದ್ದ ಭಾರತೀಯ ಅದನ್ನೊಂದು ಚಾಲೆಂಜ್ ಎಂದೇಕೆ ಪರಿಗಣಿಸುತ್ತಾನೆ? ಇದರ ಹಿಂದಿನ ಸಮಾಜದ ರಚನೆ ಏನು ಎಂಬುದನ್ನು ನಾವು ಈ ದೃಷ್ಟಿಯಿಂದ ಆಲೋಚಿಸಿದರೆ ಪರಿಹಾರ ಖಂಡಿತ ಸಾಧ್ಯ.

ನಮ್ಮ ಸಮಾಜವನ್ನು ಈ ಹಿಂದೆ ನಿಯಂತ್ರಿಸಿದ್ದು, ಈಗಲೂ ತಕ್ಕ ಮಟ್ಟಿಗೆ ನಿಯಂತ್ರಿಸುತ್ತಿರುವದು ಪಾಪ-ಪುಣ್ಯಗಳ ಕಲ್ಪನೆಯನ್ನು ಹೊತ್ತ ಪರಂಪರೆಗಳು. ಒಂದು ದಾನವನ್ನೋ, ಒಂದು ವ್ರತವನ್ನೋ ಮಾಡಬೇಕಾದರೂ, ಅದನ್ನು ಮಾಡಿದರೆ ಏನು ಸಿಗುತ್ತದೆ ಎಂಬುದೇ ನಮ್ಮ ಮೊದಲ ಪ್ರಶ್ನೆ. ವ್ರತ ಕಥೆಗಳಲ್ಲಂತೂ ವ್ರತವನ್ನು ಮಾಡಿದರೆ ಏನು ಬರುತ್ತದೆ ಎಂಬುದನ್ನು ತಿಳಿಸಿಯೇ ತೀರಬೇಕು. ೪ ಶ್ಲೋಕಗಳ ಸ್ತೋತ್ರಕ್ಕೆ ೮ ಶ್ಲೋಕಗಳ ಫಲಶ್ರುತಿ ನಮ್ಮ ಪರಂಪರೆಯ ವಾಸ್ತವ. ಪುಣ್ಯ ಮತ್ತು ಪಾಪವನ್ನು ನಾವು Merit ಮತ್ತು Demerit ಎಂಬರ್ಥದಲ್ಲಿ ಉಪಯೋಗಿಸುತ್ತೇವೆ. ಪುಣ್ಯಪ್ರಾಪ್ತಿ ಇಲ್ಲವೇ ಪಾಪನಿವೃತ್ತಿಯ ಉದ್ದೇಶವಿಲ್ಲದೇ ಯಾವ ಖರ್ಚಿನ ಕಾರ್ಯಗಳನ್ನೂ ನಾವು ಮಾಡುವವರಲ್ಲ.

೬೦ ವರ್ಷಗಳ ತನಕ ಸರಿಯಾಗಿ ಕಾನೂನಿನ ಪ್ರಕಾರ ಟ್ಯಾಕ್ಸ್ ಕಟ್ಟಿದರೆ ಅದೇನು ಸಿಗುತ್ತದೆ? ಅದರ ಬದಲು ಆ ಹಣ ಏಮಾರಿಸಿ, ದೇವಸ್ಥಾನಕ್ಕೋ, ದಾನಧರ್ಮಕ್ಕೋ ಮೀಸಲಿಟ್ಟರೆ ಪುಣ್ಯವಾದರೂ ಸಿಗುತ್ತದಲ್ಲವೇ? ಇದು ನಮ್ಮ ಜನರ ಯೋಚನೆ. ಪ್ರತಿಕ್ರಿಯೆಯೇ ಇಲ್ಲದ ಕ್ರಿಯೆಯನ್ನು ಊಹಿಸಲೂ ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ನಮ್ಮ ಸಂವಿಧಾನದಲ್ಲಿ ಅಪರಾಧಕ್ಕೆ ತಕ್ಕ ಶಿಕ್ಷೆ ಎಂಬ ಕ್ರಿಯೆ-ಪ್ರತಿಕ್ರಿಯೆಯ ವ್ಯವಸ್ಥೆ ನಮಗೆ ಅರ್ಥವಾಗುತ್ತದೆ. ಕಾನೂನಿನ ದಂಡ ಸಂಹಿತೆ ನಮಗೆ ಸ್ವಲ್ಪ ಸಮ್ಮತವಾಗುತ್ತದೆ. ಆದರೆ ಪುಣ್ಯಕ್ಕೆ ಸಮಾನಾಂತರ ಕಲ್ಪನೆ ನಮ್ಮ ಸಂವಿಧಾನದಲ್ಲಿ ಇಲ್ಲ. ಹೀಗಾಗಿ ಟ್ರಾಫಿಕ್ ರೂಲ್ಸನ್ನು ಮಧ್ಯರಾತ್ರಿಯೂ ಪಾಲಿಸುವ, ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಟ್ಯಾಕ್ಸ್ ಕಟ್ಟುವ ಮನಸ್ಥಿತಿ ನಮ್ಮಲ್ಲಿಲ್ಲ.

ಸರ್ಕಾರೀ ಸೇವೆಯಲ್ಲಿರುವವರಿಗೆ ಅವರ ಕರ್ತವ್ಯಕ್ಕೆ ಪ್ರತಿಯಾಗಿ ಪ್ರಶಸ್ತಿಯೇನೋ ಸಿಗಬಹುದು. ಆದರೆ ಸಾಮಾನ್ಯ ಮನುಷ್ಯನೊಬ್ಬ ಸರಿಯಾಗಿ ಪ್ರತಿವರ್ಷ ಟ್ಯಾಕ್ಸ್ ಕಟ್ಟಿ, ಕಾನೂನಿನ ನಿಯಮಗಳನ್ನು ಮೀರದೇ ಬದುಕಿದರೆ ನಮ್ಮ ಸರ್ಕಾರ ಅಂಥವನನ್ನು ಗುರುತಿಸುವ ಕೆಲಸವಾದರೂ ಮಾಡುತ್ತದೆಯೇ? ನನ್ನ ಅಪ್ಪ ಅಜ್ಜ ದಾನಶೂರ ಕರ್ಣನಂತಿದ್ದ ಎಂದು ಹೇಳಿಕೊಳ್ಳುವಲ್ಲಿ ಇರುವ ಹೆಮ್ಮೆ, ನನ್ನ ಅಪ್ಪ ಅಜ್ಜ, ೬೦ ವರ್ಷಗಳ ತನಕವೂ ಟ್ಯಾಕ್ಸ್ ಕಟ್ಟುತ್ತಿದ್ದ ಎಂದು ಹೇಳಿಕೊಳ್ಳುವದರಲ್ಲೇಕಿಲ್ಲ? ಹಾಗೆ ನೋಡಿದರೆ ನಮ್ಮ ದೇಶದಲ್ಲಿ Income Tax ಕಟ್ಟುವವರ ಸಂಖ್ಯೆ ಕಡಿಮೆ. ಹಾಗಿದ್ದರೆ ಅದನ್ನು ಕಟ್ಟುವವರು ಹೆಮ್ಮೆಯಿಂದ ಹೇಳಿಕೊಳ್ಳಬೇಕಿತ್ತಲ್ಲವೇ? ಕಟ್ಟದೇ ಇರುವ ಸ್ಥಿತಿವಂತರಿಗೆ ಅದು ಆದರ್ಶವಾಗಬೇಕಿತ್ತಲ್ಲವೇ?

೩ ದಿನಗಳಿಂದ ಏನೂ ತಿನ್ನದೇ ಹಸಿದ ಚಿಕ್ಕ ಹುಡುಗನೊಬ್ಬ ನೂರಾರು ರೂಪಾಯಿ ಬೆಲೆ ಬಾಳುವ ತಿಂಡಿಗಳನ್ನು ಅಂಗಡಿಯೊಂದರಿಂದ ಕದ್ದು ತಿನ್ನುತ್ತಾನೆ ಎಂದಿಟ್ಟುಕೊಳ್ಳಿ. ಆ ಪ್ರಕರಣ ಕೋರ್ಟಿನ ಮೆಟ್ಟಲು ಹತ್ತುತ್ತದೆ. ನಿಮ್ಮನ್ನು ನೀವೇ ನ್ಯಾಯಾಧೀಶನ ಸ್ಥಾನದಲ್ಲಿ ನಿಲ್ಲಿಸಿ ನೋಡಿಕೊಳ್ಳಿ. ತಿಳಿಯದೇ ಮಾಡಿದ ತಪ್ಪನ್ನು ಮನ್ನಿಸಲು ಸಂವಿಧಾನದ ಕಾನೂನು ಒಪ್ಪುತ್ತದೆಯೇ? ಹಾಗಂತ ಆತನಿಗೆ ಶಿಕ್ಷೆ ವಿಧಿಸುವದು ನಿಮ್ಮ ಮನಸ್ಸಾಕ್ಷಿಗೆ ಒಪ್ಪಿಗೆಯೇ? ಈ ದ್ವಂದ್ವಕ್ಕೆ ಕಾರಣ ಏನು? ಸಂವಿಧಾನವು ಅಪರಾಧವನ್ನು ವ್ಯಾಖ್ಯಾನಿಸುವದಕ್ಕೂ, ನಮ್ಮ ಪರಂಪರೆಯು ಪಾಪವನ್ನು ವ್ಯಾಖ್ಯಾನಿಸುವದಕ್ಕೂ ಇರುವ ವ್ಯತ್ಯಾಸವೇ ಕಾರಣವಲ್ಲವೇ? ಅದೇ ಈ ಪ್ರಕರಣವನ್ನು ಒಂದು ಹಳ್ಳಿ ಪಂಚಾಯ್ತಿ ಹೇಗೆ ನಿರ್ವಹಿಸುತ್ತದೆ?

ಈಗ ನಮಗೆ ಈ ಸಾಮಾಜಿಕ ಸಮಸ್ಯೆಗೆ ಪರಿಹಾರವೇನು ಎಂಬುದು ಅರ್ಥವಾಗುತ್ತದೆ. ನಮ್ಮ ಮನಸ್ಸಾಕ್ಷಿಗೆ, ಅನುಭವಕ್ಕೆ ಸಮ್ಮತವಾಗದ ಕಾನೂನುಗಳನ್ನು ಇಟ್ಟುಕೊಂಡು ಸಮಾಜವನ್ನು ನಿಭಾಯಿಸಲು ಖಂಡಿತ ಸಾಧ್ಯವಿಲ್ಲ. ನಮ್ಮ ಜನರ ಸ್ವಭಾವಕ್ಕೆ ತಕ್ಕಂತೆ ಸಾಮಾಜಿಕ ರಚನೆಯನ್ನು ಮಾಡಿಕೊಂಡು, ನಂತರ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿ, ಸಕಾರಾತ್ಮಕ ಬದಲಾವಣೆ ತರಬೇಕೇ ಹೊರತು, ಇಂಥ ಸಾಮಾಜಿಕ ರಚನೆಯನ್ನು ಹೊತ್ತ ಸಮಾಜವೇ ಆದರ್ಶ ಸಮಾಜ ಎಂದು ಭಾವಿಸಿ, ಊಹಿಸಿ, ಅಂಥ ಸಾಮಾಜಿಕ ರಚನೆಯನ್ನು ನಮ್ಮ ಮೇಲೆ ಹೇರಿಕೊಂಡು, ಅದಕ್ಕೆ ತಕ್ಕಂತೆ ಜನರು ತಮ್ಮ ಸ್ವಭಾವವನ್ನು ಬದಲಾಯಿಸಬೇಕು ಎಂದು ಅಪೇಕ್ಷಿಸುವದು ಖಂಡಿತ ವೈಜ್ಞಾನಿಕ ಪದ್ಧತಿಯಾಗಲಾರದು.

ಆಧಾರ:
೧. ಸ್ಮೃತಿ-ವಿಸ್ಮೃತಿ: ಭಾರತೀಯ ಸಂಸ್ಕೃತಿ (ಮೂಲ: ಪ್ರೊ. ಬಾಲಗಂಗಾಧರ. ಅನುವಾದ: ಪ್ರೊ. ರಾಜಾರಾಮ ಹೆಗಡೆ)
೨. ಬೌದ್ಧಿಕ ದಾಸ್ಯದಲ್ಲಿ ಭಾರತ (ಮೂಲ: ಪ್ರೊ. ಬಾಲಗಂಗಾಧರ. ಅನುವಾದ: ಪ್ರೊ. ರಾಜಾರಾಮ ಹೆಗಡೆ)
೩. ಬುದ್ಧಿಜೀವಿಗಳ ಮೂಢನಂಬಿಕೆಗಳು (ಮೂಲ: ಪ್ರೊ. ಬಾಲಗಂಗಾಧರ. ಅನುವಾದ: ಪ್ರೊ. ರಾಜಾರಾಮ ಹೆಗಡೆ)

82 ಟಿಪ್ಪಣಿಗಳು Post a comment
  1. Umesh
    ಆಗಸ್ಟ್ 20 2015

    ಉತ್ತಮವಾದ ಲೇಖನ. ನಮ್ಮ ಸನಾತನ ಧರ್ಮ ಪರಂಪರೆಯಲ್ಲಿ ಸರಳವಾಗಿ ಪಾಪ – ಪುಣ್ಯ ಏನು ಎಂಬುದನ್ನು ಈ ಶ್ಲೋಕದಲ್ಲಿ ತಿಳಿಸಿದ್ದಾರೆ –

    “ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಂ”.

    ಉಪಕಾರಮಾಡುವುದು ಪುಣ್ಯ, ಹಿಂಸಿಸುವುದು ಪಾಪ. ನಮ್ಮಲ್ಲಿ ದೇವನ ಆಜ್ಞೆಗೂ ಪುಣ್ಯ ಪಾಪಗಳಿಗೂ ನೇರ ಸಂಬಂದವಿಲ್ಲ.

    ಉತ್ತರ
  2. Rajaram Hegde
    ಆಗಸ್ಟ್ 20 2015

    ಸಮರ್ಥ ವಿಶ್ಲೇಷಣೆ. ಹಂಪಿಹೊಳೆಯವರ ಬುದ್ಧಿಯ ಕೆಲಸವನನ್ನು ನೋಡಿ ಖುಷಿ ಹಾಗೂ ಆಶ್ಚರ್ಯವಾಯಿತು. ಇಂಥ ವಿಶ್ಲೇಷಣೆಗಳು ಬರುತ್ತವೆಯೆಂದರೆ ನಾನು ಬಾಲು ಅವರನ್ನು ಕನ್ನಡಕ್ಕೆ ತಂದಿದ್ದೂ ಸಾರ್ಥಕ. ನಾನು ಕೂಡ ಈ ವ್ಯತ್ಯಾಸದ ಕುರಿತು ಪ್ರತ್ಯೇಕವಾಗಿ ಬರೆಯುವ ಅಗತ್ಯವನ್ನು ಮನಗಂಡಿದ್ದೆ. ಅದನ್ನು ವಿನಾಯಕ ಸಮರ್ಥವಾಗಿ ಪೂರೈಸಿದ್ದಾರೆ. ಇನ್ನು ಮುಂದೆ ಇಂಥವನ್ನು ಅವರಿಂದ ನಿರೀಕ್ಷಿಸಬಹುದು. ನಮ್ಮಲ್ಲಿ ಸದ್ಗತಿ ಎಂಬುದು ಪಾಪ ಹಾಗೂ ಪುಣ್ಯಗಳೆರಡರಿಂದಲೂ ಮುಕ್ತವಾಗುವ ಕ್ರಿಯೆ. ಪುಣ್ಯವೆಂಬುದು ಸದ್ಗತಿಗೆ ದಾರಿ ಮಾಡಿಕೊಡುತ್ತದೆ, ಆದರೆ ಪುಣ್ಯದಿಂದಲೂ ಕಳಚಿಕೊಂಡ ವಿನಃ ಮುಕ್ತಿಯಿಲ್ಲ, ಪುಣ್ಯವೂ ಪಾಪದಂತೇ ಫಲ ನೀಡುವ ಒಂದು ಸಂಗತಿ. ಅಂದರೆ ಅವೆರಡೂ ನಮ್ಮ ಮನಸ್ಸಿಗೆ ಅಂಟಿಕೊಳ್ಳುವ ಉಪಾಧಿಗಳು. ಇಂಥ ಉಪಾಧಿಗಳು ಇರುವೆಡೆಯಲ್ಲಿ ಮುಕ್ತಿ ಹೇಗೆ ಸಾಧ್ಯ? ನಮ್ಮ ಮನಸ್ಸು ಇವೆರಡರಿಂದಲೂ ಮುಕ್ತವಾಗಬೇಕು. ಆದರೆ ಸೆಮೆಟಿಕ್್ ರಿಲಿಜನ್ನಿನವರಿಗೆ ಸತ್ಯದೇವನ ಆಜ್ಞೆಯನ್ನು ಪಾಲಿಸಿದರೆ ಮಾತ್ರ ಅಂದರೆ ಸಿನ್ ಇಲ್ಲದಿದ್ದರೆ ಮಾತ್ರ ಅವನನ್ನು ಸೇರುವುದು ಸಾಧ್ಯ.

    ಉತ್ತರ
  3. ಆಗಸ್ಟ್ 20 2015

    ಇಂಗ್ಲಿಷ್ ಹಾಗೂ ದೇಶಿಯ ಭಾಷೆಗಳಲ್ಲಿರುವ ಭಾಷಾಂತರದ ವ್ಯತ್ಯಾಸಗಳು ಸಹಜವೇ ಸರಿ. ಪ್ರಸ್ತುತ, ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿನ ಯಾವ ಲೋಪ ಅಥವಾ ಸಮಸ್ಯೆ ‘ಸಿನ್’ ಶಬ್ದದ ಭಾಷಾಂತರದಲ್ಲಿನ ವ್ಯತ್ಯಾಸ ಅಥವಾ ಯಾವುದೇ ಇಂಗ್ಲಿಷ್ ಶಬ್ದದ ತುರ್ಜುಮೆಯಲ್ಲಿನ ದೋಷದಿಂದ ಉಂಟಾಗಿದೆ? ಸ್ಪೆಸಿಫಿಕ್ ಆಗಿ ವಿವರಿಸುತ್ತೀರಾ?
    ಇದಕ್ಕೆ ನೀವು ಹೇಳುವ ಪರಿಹಾರ ಏನು? ಹಳ್ಳಿ ಪಂಚಾಯತಿ ಗಳ ನ್ಯಾಯ ತೀರ್ಮಾನಗಳನ್ನು ಮಾನ್ಯ ಮಾಡಬೇಕೆಂಬುದು ನಿಮ್ಮ ಅಂಬೋಣವೇ?

    ಉತ್ತರ
    • Praveen Konandur
      ಆಗಸ್ಟ್ 20 2015

      ಉತ್ತಮ ಲೇಖನ ವಿನಾಯಕ್..
      ಪ್ರಜ್ಞಾರವರೇ ಈ ಬರಹ ಭಾಷಾಂತರದ ಸಮಸ್ಯೆಗಿಂತ ಮುಖ್ಯವಾಗಿ ಸಾಂಸ್ಕೃತಿಕ ವ್ಯತ್ಯಾಸದ ಕುರಿತು ಮಾತನಾಡುತ್ತಿದೆ. ಸಂಪ್ರದಾಯ ಪ್ರಧಾನ ಭಾರತೀಯ ಸಂಸ್ಕೃತಿಯು ಹೇಗೆ ರಿಲಿಜನ್ ಆಧಾರಿತ ಸಂಸ್ಕೃತಿಗಿಂತ ಭಿನ್ನವಾಗಿದೆ. ಕಾನೂನನ್ನು ನೋಡುವ ರೀತಿಯಲ್ಲಿ ಭಾರತೀಯರ ಧೋರಣೆ ಹೀಗ್ಯಾಕೆ ಎಂಬುದಕ್ಕೆ ಸಂಭವನೀಯ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡಿದ್ದಾರೆ…

      ಉತ್ತರ
      • ಆಗಸ್ಟ್ 21 2015

        ಕೆಳಗೆ ನನ್ನ ಅನಿಸಿಕೆಗಳನ್ನು ತಿಳಿಸಿದ್ದೇನೆ.

        ಉತ್ತರ
    • ಆಗಸ್ಟ್ 20 2015

      ಫ್ರಜ್ಞಾರವರೇ,

      ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿನ ಯಾವ ಲೋಪ ಅಥವಾ ಸಮಸ್ಯೆ ‘ಸಿನ್’ ಶಬ್ದದ ಭಾಷಾಂತರದಲ್ಲಿನ ವ್ಯತ್ಯಾಸ ಅಥವಾ ಯಾವುದೇ ಇಂಗ್ಲಿಷ್ ಶಬ್ದದ ತುರ್ಜುಮೆಯಲ್ಲಿನ ದೋಷದಿಂದ ಉಂಟಾಗಿದೆ? ಸ್ಪೆಸಿಫಿಕ್ ಆಗಿ ವಿವರಿಸುತ್ತೀರಾ?

      ನಮ್ಮ ಇಂದಿನ ನ್ಯಾಯಾಂಗ ವ್ಯವಸ್ಥೆಯಲ್ಲಿ Judgement ಎನ್ನುವದು ನಮಗೆ ನ್ಯಾಯವಾಗಿ ಕಾಣದಿರುವದೇ ದೋಷ. ಕಾನೂನುಗಳನ್ನು ಅನುಸರಿಸಬೇಕೆಂಬ ಪ್ರಜ್ಞೆ, ಕಾನೂನುಗಳನ್ನು ಮುರಿದಾಗ ಬರಬೇಕಾಗಿದ್ದ ಅಪರಾಧೀ ಮನೋಭಾವ ಬರದಿರುವದೇ ದೋಷ. ಸ್ಪೆಸಿಫಿಕ್ ಆಗಿ ವಿವರಿಸುವದಾದರೆ ಸಿಸಿಟಿವಿ ಇಲ್ಲದ ೧೦ ವರ್ಷಗಳ ಹಿಂದಿನ ಯೂರೋಪನ್ನು ಜ್ಞಾಪಿಸಿಕೊಳ್ಳಿ, ಮಧ್ಯರಾತ್ರಿ ೧೧ ಗಂಟೆಗೆ ರಸ್ತೆ ಖಾಲಿ ಇದ್ದಾಗ್ಯೂ ರೆಡ್ ಲೈಟ್ ಇದ್ದರೆ ಅಲ್ಲಿನ ಜನರು ಏನು ಮಾಡುತ್ತಿದ್ದರು? ನಿಂತು ಕಾಯುತ್ತಿದ್ದರು. ಈಗ ಭಾರತದಲ್ಲಿ ಸಿಸಿಟಿವಿ ಇದ್ದಾಗ್ಯೂ ಮಧ್ಯಾಹ್ನದಲ್ಲಿ ರೆಡ್ ಲೈಟ್ ಕಂಡರೆ ಏನು ಮಾಡುತ್ತಾರೆ? ಪೋಲೀಸ್ ಇಲ್ಲವೆಂದು ಖಾತ್ರಿ ಮಾಡಿಕೊಂಡು ರಸ್ತೆ ದಾಟುತ್ತಾರೆ. ಇದು ಕೊಲೆ,ಸುಲಿಗೆಯಂಥ ಕೆಲವಿಷ್ಟು “ಪಾಪಕಾರ್ಯ”ಗಳನ್ನು ಹೊರತು ಪಡಿಸಿ ಉಳಿದೆಲ್ಲ ಕಾನೂನುಗಳಿಗೂ ಅನ್ವಯಿಸುತ್ತದೆ.

      ಈ ಜನ ಸರಿ ಇಲ್ಲ. ಜನರು ಕಾನೂನಿಗೆ ಮನ್ನಣೆ ನೀಡುತ್ತಿಲ್ಲ, ಜನರ ಸ್ವಭಾವ ಬದಲಾಗಬೇಕು ಎಂದೆಲ್ಲ ನಾವು ಭಾಷಣ ಬಿಗಿಯುತ್ತಲೇ ಇರುತ್ತೇವೆ. ಆದರೆ ಎಲ್ಲ ಜನರ ಸ್ವಭಾವವೂ ಸರಿ ಇಲ್ಲ, ತಪ್ಪು ಮಾಡುತ್ತಿದ್ದೇವೆ ಎಂಬ ಆತ್ಮಸಾಕ್ಷಿ ಇಲ್ಲ, ಅದಿಲ್ಲ ಇದಿಲ್ಲ ಎನ್ನುವ ಬದಲು, ಬ್ರಿಟೀಷರು ನಮಗೆ ನೀಡಿದ ಕಾನೂನುಗಳ ಕಲ್ಪನೆಯೇ ನಮ್ಮ ದೇಶದ ಜನರ ಮೂಲಸ್ವಭಾವಕ್ಕೆ ಸರಿಹೊಂದುವದಿಲ್ಲ ಎಂದು ವಿಚಾರಿಸಿದರೆ? ನಮ್ಮ ದೇಶದಲ್ಲಿ ಒಬ್ಬ ಅನಕ್ಷರಸ್ಥ ತನ್ನಿಂದ ತಪ್ಪಾಯಿತು ಎಂದು ಹೇಳಿಕೊಳ್ಳುವಾಗ ಆತ ಯಾವ ಪುಸ್ತಕದ ಆಧಾರದ ಮೇಲೆ ತಾನು ಮಾಡಿದ್ದು ತಪ್ಪು ಎಂದು ತಿಳಿಯುತ್ತಾನೆ? ಏಕೆಂದರೆ ಬ್ರಿಟೀಷರು ನಮ್ಮನ್ನಾಳುವಾಗ 1935ರಲ್ಲಿ ಹಾಕಿಕೊಂಡಿದ್ದ ಸಂವಿಧಾನದ ಕಾನೂನುಗಳನ್ನೇ ಸ್ವಲ್ಪವೂ ಬದಲಾಯಿಸದೇ ಯಥಾವತ್ತಾಗಿ ಉಳಿದ ಕಾನೂನಿನೊಡನೆ ಸೇರಿಸಿಕೊಂಡು ೧೯೫೦ರಲ್ಲಿ ಜಾರಿಗೊಳಿಸಿಕೊಂಡಿದ್ದೇವೆ. ಬ್ರಿಟೀಷರು ನಮ್ಮ ಪರಂಪರೆಗಳನ್ನು ಹೇಗೆ ಅರ್ಥೈಸಿದರೋ ಹಾಗೆ ಕಾನೂನುಗಳನ್ನು ಮಾಡಿಕೊಂಡರು. ಆದರೆ ಅವರು ನಮ್ಮ ಪರಂಪರೆಯನ್ನು ಅರ್ಥೈಸಿದ ರೀತಿ ಸತ್ಯವಾಗಿತ್ತೇ? ಇದನ್ನು ನಾವೇ ಅಧ್ಯಯನ ಮಾಡಿ ಕಂಡುಕೊಳ್ಳಬೇಕು.

      ಹಳ್ಳಿ ಪಂಚಾಯತಿ ಗಳ ನ್ಯಾಯ ತೀರ್ಮಾನಗಳನ್ನು ಮಾನ್ಯ ಮಾಡಬೇಕೆಂಬುದು ನಿಮ್ಮ ಅಂಬೋಣವೇ?

      ಅಲ್ಲ.. ಪರಂಪರಾಗತವಾಗಿ ಜನರಿಂದ ಮಾನ್ಯತೆ ಪಡೆದಿರುವಂಥ ಹಳ್ಳಿ ಪಂಚಾಯ್ತಿಗಳು ನ್ಯಾಯ ತೀರ್ಮಾನ ಮಾಡುವಾಗ ಯಾವ ಪದ್ಧತಿಯನ್ನು ಅನುಸರಿಸುತ್ತದೋ ಆ ಪದ್ಧತಿಯನ್ನು ವೈಜ್ಞನಿಕವಾಗಿ ವಿಶ್ಲೇಷಿಸಿ, ಅನಂತರ ಮೂಡುವ ಸಿದ್ಧಾಂತಗಳ ಅಡಿಯಲ್ಲಿ ನ್ಯಾಯಾಂಗ ವ್ಯವಸ್ಥೆ ಕಾರ್ಯ ನಿರ್ವಹಿಸಬೇಕು. ನಮ್ಮದೇ ಸಾಮಾಜಿಕ ಸಿದ್ಧಾಂತಗಳ ಅಡಿಯಲ್ಲಿ ಸಾಮಾಜಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕೇ ಹೊರತು ಬ್ರಿಟೀಷರು ನಮ್ಮ ಸಮಾಜದ ಮೇಲೆ ಹೇರಲು ಹೊರಟ ವ್ಯವಸ್ಥೆಗಳನ್ನಲ್ಲ.

      ಉತ್ತರ
      • ಆಗಸ್ಟ್ 21 2015

        ನೀವು ಲೇಖನದಲ್ಲಿ ಹೇಳಹೊರಟಿರುವದನ್ನು ನಾನು ಹೀಗೆ ಅರ್ಥೈಸಿಕೊಳ್ಳುತ್ತೇನೆ-
        case 1 . ‘ಯುರೋಪಿಯನ್ನರು ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಕಾರಣ ಅವರ ಸಂವಿಧಾನದಲ್ಲಿನ ರೂಲ್ಸ್ ಗಳು ಅವರ ಕಲ್ಚರ್ ನಿಂದ ಬಂದಂತವು. ಅಂದರೆ ಕ್ರೈಸ್ತ ಥಿಯಾಲಜಿಯಿಂದ ಬಂದಂತವು. ಅವು ರಿಲಿಜಿಯನ್ ಪ್ರೇರಿತ ಕಾನೂನುಗಳಾಗಿರುವದರಿಂದ ಅಲ್ಲಿಯ ಜನರು ರೂಲ್ಸ್ ಗಳನ್ನು ಅನುಸರಿಸದಿರುವದು ಅನೈತಿಕ ಎಂದು ಭಾವಿಸುತ್ತಾರೆ’. ಎಂದಲ್ಲವೇ?

        ಇದಕ್ಕೆ ನನ್ನ ಆಬ್ಜೆಕ್ಷನ್ ಹೀಗೆ ಇದೆ:
        ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಧಾನವಾಗಿರುವ ಡೆಮಾಕ್ರಸಿ ಕ್ರಿಸ್ಚಿಯಾನಿಟಿಯಿಂದ ಬಂದಿದ್ದಲ್ಲ. ಎಷ್ಟೊ ವಿಷಯಗಳಲ್ಲಿ ಕ್ರಿಷ್ಚಿಯಾನಿಟಿಯ ವಿರುದ್ಧ ಡೆಮಾಕ್ರಸಿ ಇದೆ. ಡೆಮಾಕ್ರಸಿ ವೈಯಕ್ತಿಕ ಸ್ವಾತಂತ್ರ್ಯವನ್ನು ಬೆಂಬಲಿಸಿದರೆ, ಕ್ರಿಶ್ಚಿಯಾನಿಟಿ ಮೊನಾರ್ಕಿಸ್ಮ್ ನ ಸವಲತ್ತುಗಳನ್ನು ಅನುಭವಿಸುತ್ತಿತ್ತು. ಡೆಮಾಕ್ರಸಿಯ ಆಧಾರಿತ ಸಂವಿಧಾನವನ್ನು ಜಾರಿಗೆ ತಂದವನು ಕ್ಲಿಸ್ತೆನಸ್ (Clisthenes ). ಆತನ ಕಾಲ ಕ್ರಿಪೂ. ೫೦೦ ರ ಘಟ್ಟ.
        ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ‘ರೂಲ್ ಆಫ್ ಲಾ’ ಕ್ರಿಶ್ಚಿಯಾನಿಟಿ ಹುಟ್ಟುವ ಮೊದಲೇ ಇತ್ತು ಎನ್ನುವದು ನಿರ್ವಿವಾದ. ಸಿಸರೋ ನ ಕಾಲದಲ್ಲಿಯೇ ರೋಮ್ ಪ್ರಭಲವಾದ ಕಾನೂನಾತ್ಮಕ ಆಡಳಿತವನ್ನು ಹೊಂದಿತ್ತು. ಹಾಗಿದ್ದಾಗ ಕ್ರಿಶ್ಚಿಯನ್ ಥಿಯಾಲಜಿಯ ‘ಸಿನ್’ ಅಥವಾ ‘ಕರ್ರಪ್ಟ್’ ಶಬ್ದಗಳಲ್ಲಿನ ರಿಲಿಜಿಯಸ್ ಕಾನ್ಸಿಯಸ್ ನೆಸ್ ಯುರೋಪ್ ನಲ್ಲಿ ‘ರೂಲ್ ಆಫ್ ಲಾ’ ಗಿಡವನ್ನು ನೆಟ್ಟಿತು ಎನ್ನುವದು ಹಾಸ್ಯಾಸ್ಪದ. ಅಲ್ಲದೆ ೧೮ ನೆ ಶತಮಾನದಲ್ಲಿ ನಡೆದ ಫ್ರೆಂಚ್ ರಿವಾಲ್ಯೂಶನ್ ಗೆ ಕರ್ರಪ್ಷನ್ ಕೂಡ ಕಾರಣಗಳಲ್ಲೊಂದು. ಕರ್ರಪ್ಷನ್ ಅನ್ನು ಅನೈತಿಕ ಎಂದು ಅಲ್ಲಿಯ ಅಧಿಕಾರಿಗಳು ಭಾವಿಸಿದ್ದರೆ ಕರ್ರಪ್ಷನ್ ಅಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಿರಲಿಲ್ಲ.

        case 2. ಭಾರತೀಯರಿಗೆ ಕಾನೂನನ್ನು ಅನುಸರಿಸಬೇಕಾದ ಪ್ರಜ್ಞೆ, ಕಾನೂನುಗಳನ್ನು ಮುರಿದಾಗ ಬರಬೇಕಾಗಿದ್ದ ಅಪರಾಧೀ ಮನೋಭಾವ ಬರದಿರುವದಿಲ್ಲ. ಕಾರಣ, ಈ ಸಂವಿಧಾನ ನಮ್ಮ ಕಲ್ಚರ್ ನಿಂದ ಬಂದಿದ್ದಲ್ಲ. ನಮ್ಮ ನೈತಿಕತೆಗೆ, ರೂಲ್ಸ್ ಆಫ್ ಲಾ ನಲ್ಲಿನ ನೈತಿಕತೆಗೆ ಅಂತರ ಇದೆ. ಆದ್ದರಿಂದ ನಮ್ಮ ಕಲ್ಚರಿಗೆ ಹೊಂದುವಂತಹ ನ್ಯಾಯ ತೀರ್ಮಾನಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಕಾರ್ಯರೂಪಕ್ಕೆ ತರಬೇಕು.

        ಭಾರತ ವಿವಿಧ ಸಂಸ್ಕೃತಿಗಳ ದೇಶ. ಇಲ್ಲಿ ಎಲ್ಲಾ ಎಕ್ಷ್ ಟ್ರೀಮಿಟಿಗಳೂ ಇವೆ. ಕಾನೂನನ್ನು ಅಚ್ಚುಕಟ್ಟಾಗಿ ಪಾಲಿಸುವವರು ಇದ್ದಾರೆ, ಅನುಸರಿಸದಿರುವವರೂ ಇದ್ದಾರೆ. ಭಾರತೀಯ ಸಂಸ್ಕ್ರತಿಯನ್ನು ಜನರಲೈಸ್ ಮಾಡಿ ಒಂದೆ ತಕ್ಕಡಿಯಲ್ಲಿ ಹೇಗೆ ಹಿಡಿಯುತ್ತೀರಿ? ನಮ್ಮದಲ್ಲದ ಸಂಸ್ಕ್ರತಿಯನ್ನು ಅನುಸರಿಸಲು ಸಾಧ್ಯವಿಲ್ಲವಾಗಿದ್ದರೆ, ಉಳಿದ ಕೆಲವು ಪೌರಾತ್ಯ ರಾಷ್ಟ್ರಗಳು (ಜಪಾನ್, ತೈವಾನ್, ಚೈನಾ ಇತ್ಯಾದಿ) ಹೇಗೆ ಪಾಶ್ಚಿಮಾತ್ಯ ಸಂವಿಧಾನದ ಕಾನೂನುಗಳನ್ನು ಅಚ್ಚುಕಟ್ಟಾಗಿ ರೂಪಿಸಿಕೊಳ್ಳಲು ಹೇಗೆ ಸಾಧ್ಯವಾಯಿತು?

        ಉತ್ತರ
        • ಆಗಸ್ಟ್ 21 2015

          ಪ್ರಜ್ಞಾರವರೇ,

          ನಿಜ. ನಿಮ್ಮ ಮಾತುಗಳನ್ನು ಒಪ್ಪುತ್ತೇನೆ. ನನ್ನ ಮಾತುಗಳನ್ನು ಸರಿಯಾಗಿ ಗ್ರಹಿಸಿದ್ದೀರಿ. ನಿಮ್ಮ ಒಬ್ಜೆಕ್ಶನ್ ಗಳು ನಿಜವಾಗಿಯೂ ವಿಚಾರಿಸುವಂತೆ ಮಾಡಿತು. ಅವುಗಳ ಕುರಿತು ಹೇಳುವದಾದರೆ:

          ಮೂಲತಃ ರೂಲ್ ಆಫ್ ಲಾ (ಕಾನೂನಿನ ಸರ್ವಶ್ರೇಷ್ಠತೆ)ಯನ್ನು ಒಪ್ಪಿಕೊಂಡು ನಡೆಯುವ ಸಮಾಜದಲ್ಲೇ ಡೆಮಾಕ್ರಸಿ, ರಿಲಿಜನ್ನು, ಸಂವಿಧಾನಗಳು ಮೂಡಿಬರಲು ಸಾಧ್ಯ. ಹೀಗಾಗಿ ಕ್ರಿಶ್ಚಿಯನ್ನಂಥಾ ರಿಲಿಜನ್ನಿನ ಕಲ್ಪನೆಗೂ ಈ ಸಾಮಾಜಿಕ ಪರಿಸರ ಅತ್ಯಗತ್ಯ. ನಮ್ಮ ದೇಶದಲ್ಲಿ ಒಂದಾನೊಂದು ಪುಸ್ತಕವನ್ನು ಪಾಲಿಸುವ ಸಂಸ್ಕೃತಿಯೊಂದು ಹುಟ್ಟದೇ ಇರಲೂ ಕೂಡ ಇದೇ ಕಾರಣವಾಗುತ್ತದೆ. ಇರಲಿ. ಆದರೆ ಕ್ರಿ.ಪೂ. ೫೦೦ರಲ್ಲಿ ಅಥೆನ್ಸಿನಲ್ಲಿ ಇದ್ದ ಡೆಮಾಕ್ರಸಿ ಅದೇ ರೂಪದಲ್ಲಿದೆ ಎಂಬುದನ್ನು ಒಪ್ಪಲು ಸಾಧ್ಯವೇ ಎಂಬುದನ್ನು ನಾನಿನ್ನೂ ಅಧ್ಯಯನ ಮಾಡಿಲ್ಲ. ಏಕೆಂದರೆ ಆಗ ಬೇರೆ ಬೇರೆ ಟ್ರೈಬ್ ಗಳಲ್ಲಿ ಡೈರೆಕ್ಟ್ ಡೆಮಾಕ್ರಸಿ ಇತ್ತು ಎಂದು ಅರಿತಿದ್ದೇನೆ. ಅಲ್ಲದೇ ಆಗ ಪಾಗನ್ನರ ಬೇರೆ ಬೇರೆ ಸಂಪ್ರದಾಯಗಳೂ ಇದ್ದವು. ಅವರು ಬೇರೆ ಬೇರೆ ಮೂರ್ತಿಗಳನ್ನು ಪೂಜಿಸುವವರಾಗಿದ್ದರು. ತಮ್ಮ ಪರಂಪರೆಗಳನ್ನು ಪಾಲಿಸುವ, ಮತ್ತು ಉಳಿದವರ ಪರಂಪರೆಯನ್ನು ವಿಶ್ಲೇಷಿಸುವವರೂ ಆಗಿದ್ದರು. ಹೀಗಾಗಿ ಈಗಿನ ರೆಪ್ರಸೆಂಟೇಟೀವ್ ಡೆಮಾಕ್ರಸಿಗೂ, ಆಗಿನ ಡೈರೆಕ್ಟ್ ಡೆಮಾಕ್ರಸಿಗೂ ಮೂಲವ್ಯತ್ಯಾಸಗಾಳೇನಾದರೂ (ಕೇವಲ ಡೆಫಿನಿಶನ್ ಅಲ್ಲ, ಮೂಲ ಕಲ್ಪನೆಯೇ ಬೇರೆ) ಇವೆಯೇ ಎಂಬುದನ್ನು ನಾನಿನ್ನೂ ಅರಿಯಬೇಕಿದೆ. ಏಕೆಂದರೆ ಆಗ ರಿಲಿಜನ್ನುಗಳಿರಲಿಲ್ಲವಾದ್ದರಿಂದ ಸೆಕ್ಯುಲರಿಸಂ ಕೂಡ ಇರಲಿಲ್ಲ. ಅಂಥದ್ದರಲ್ಲಿ ಬೇರೆ ಬೇರೆ ಸಂಪ್ರದಾಯಗಳು ಕೆಲವು ರೂಲ್ ಆಫ್ ಲಾ ಮಾಡಿಕೊಂಡು ಹೇಗೆ ಪಾಲಿಸುತ್ತಿದ್ದರು ಎಂಬುದರ ಕುರಿತು ಅರಿಯಬೇಕಿದೆ.

          ಆದರೆ ಒಂದು ಸ್ಪಷ್ಟ, ಪ್ರೊಟೆಸ್ಟೆಂಟ್ ಚಳುವಳಿಯ ನಂತರದ ಸೆಕ್ಯುಲರಿಸಂ ಹುಟ್ಟಿಕೊಂಡಿತು. ಬೇರೆ ಬೇರೆ ರಿಲಿಜನ್ನುಗಳು ವಾಸಿಸುವ ಸಮಾಜವೊಂದಕ್ಕೆ ಸೆಕ್ಯುಲರಿಸಂ ಅತ್ಯಗತ್ಯವಾಯಿತು. ಗಾಡ್ ನ ನಿಯಮಗಳ ಬದಲು ಮಾನವರ ನಿಯಮಗಳು ಬಂದವು, ಮೊನಾರ್ಕಿಯ ಬದಲು ರೆಪ್ರೆಸೆಂಟೇಟೀವ್ ಡೆಮಾಕ್ರಸಿ ಬಂದಿತು. ಬೈಬಲ್ಲಿನ ಸರ್ವಶ್ರೇಷ್ಠತೆಯ ಬದಲು ಸಂವಿಧಾನದ ಸರ್ವಶ್ರೇಷ್ಠತೆ ಬಂದಿತು. ಹೀಗೆ ರಿಲಿಜನ್ನಿನ ಕಲ್ಪನೆಗಳೇ ಸೆಕ್ಯೂಲರ್ ರೂಪಗಳನ್ನು ತಾಳಿ ಬಂದಿವೆ. ಆದರೆ ಆ ಸಮಾಜಗಳು ಒಂದು ರೂಲ್-ಬುಕ್ ಅನ್ನು ಪಾಲಿಸುವದಂತೂ ನಿಜ. ಅದು ರಿಲಿಜನ್ನಾಗಿರಲಿ, ಸಂವಿಧಾನವಾಗಿರಲಿ. ರೂಲ್ ಅಫ್ ಲಾ ಅಥವಾ ಸಂವಿಧಾನ, ರಿಲಿಜನ್ನಿನಿಂದ ಹುಟ್ಟಿದ್ದಲ್ಲದಿರಬಹುದು ಆದರೆ ಯಾವ ಸಮಾಜದಲ್ಲಿ ರಿಲಿಜನ್ನು ಹುಟ್ಟಲು ಸಾಧ್ಯವೋ ಅಲ್ಲಿ ಮಾತ್ರ ಈಗಿರುವ ಸಂವಿಧಾನವೂ ಇರಲು ಸಾಧ್ಯ. ಈಗ ಎಲ್ಲ ದೇಶಗಳಲ್ಲಿ ಇರುವ ಸಂವಿಧಾನ, ಡೆಮಾಕ್ರಸಿಗಳು ರಿಲಿಜನ್ನಿನ ಸೆಕ್ಯೂಲರ್ ರೂಪಾಂತರ ಎನ್ನುವದು ಊಹಿಸಲು ಸಾಧ್ಯ. ಒಂದೇ ಥಿಯಾಲಜಿಯಿಂದ ಈಗಿನ ಕ್ರಿಶ್ಚಿಯನ್ ರಿಲಿಜನ್ನನ್ನೂ ಮತ್ತು ಈಗಿನ ಸಂವಿಧಾನವನ್ನೂ ಅರಿಯಲು/ಗ್ರಹಿಸಲು ಸಾಧ್ಯ.

          ಕರ್ರಪ್ಶನ್ ಎನ್ನುವ ಕಲ್ಪನೆಯೂ ಅಲ್ಲಿನ ಸಮಾಜಕ್ಕೇ ಅರ್ಥವಾಗುವಂಥದ್ದು. ಕರಪ್ಟ ಎಂದರೆ ಸರಿಯಾಗಿರುವದೊಂದು ಕೆಡುತ್ತ ಬರುವದು, ಯಾವ ನಿಯಮಗಳನ್ನು ಪಾಲಿಸುತ್ತ ಬರಬೇಕಿತ್ತೋ ಆ ಸ್ಟಾಂಡರ್ಡ್ ಇಂದ ಜಾರುವದು. ನಾರ್ಮೆಟಿವ್ ಅಥವಾ ಒಂದು ಆದರ್ಶವನ್ನು ಪಾಲಿಸಬೇಕು ಎಂಬ ನಿಯಮವನ್ನಿಟ್ಟುಕೊಳ್ಳದೇ ಕರಪ್ಶನ್ನನ್ನು ವ್ಯಾಖ್ಯಾನಿಸುವದು ಸಾಧ್ಯವೇ ಇಲ್ಲ. ಕರಪ್ಟ್ ಆಗಬೇಕಾದರೆ ಸರಿಯಾಗಿರುವ ವ್ಯವಸ್ಥೆಯೊಂದಿರಬೇಕು ಅಥವಾ ಅದನ್ನು ಒಂದು ಆದರ್ಶ ಕಲ್ಪನೆಯಾಗಿಯಾದರೂ ಹೊಂದಿರಬೇಕು. ಒಂದು ರಿಲಿಜನ್ನಿನ ಲಾ ಗಳಿಂದ ಸಮಾಜ ಜಾರುವದು, ಸಂವಿಧಾನದ ಕಾನೂನುಗಳನ್ನು ಸಮಾಜ ಮೀರುವದು ಇವೆಲ್ಲವೂ ಕರಪ್ಶನ್ ಎಂದು ಕರೆಯಿಸಿಕೊಳ್ಳುತ್ತದೆ. ಹೀಗಾಗಿ ಕರಪ್ಶನ್ ಎಂಬುದು ಅನೈತಿಕವೆಂದು ಭಾವಿಸುವದು ಪಾಶ್ಚಿಮಾತ್ಯರಿಗೆ ಕಷ್ಟವಲ್ಲ.

          ಭಾರತ ವಿವಿಧ ಸಂಸ್ಕೃತಿಗಳ ದೇಶವೆಂಬುದು ನಿಜ, ಒಂದು ಎಕ್ಸ್ಟ್ರೀಮಿಸಂ ಅನ್ನು ಉದಾಹರಣೆ ತೆಗೆದುಕೊಳ್ಳುವದಾದರೆ, ವಿಶ್ವೇಶ್ವರಯ್ಯನವರು ಆಫೀಸಿನ ಕೆಲಸಕ್ಕೊಂದು ಸರ್ಕಾರಿ ಪೆನ್ನು, ತಮಗಾಗಿ ಒಂದು ಸ್ವಂತ ಪೆನ್ನನ್ನು ಇಟ್ಟುಕೊಳ್ಳುತ್ತಿದ್ದರು. ಇದು ಅವರಾಗೇ ಅವರು ಹಾಕಿಕೊಂಡ ಆದರ್ಶವಾಗಿತ್ತೇ ಅಥವಾ ಕಾನೂನಿನ ಮೀರುವಿಕೆಯನ್ನು ಅಪರಾಧವೆಂದು ಪರಿಗಣಿಸಿದ್ದರೇ? ಭಾರತೀಯ ಸಂಸ್ಕೃತಿಗಳ ಅಸ್ತಿತ್ವವನ್ನು ಸಾರುವ ಒಂದಾನೊಂದು ಜನರಲೈಸ್ಡ್ ಕಲ್ಪನೆ ಮಾಡುವತ್ತ ಸಾಗಬೇಕಾಗಿದೆ. ಈಗಾಗಲೇ ವಚನ ಸಾಹಿತ್ಯಗಳ ಅಡಿಯಲ್ಲಿ ಅಂಥ ಪ್ರಯತ್ನವೂ ಸಾಗಿದೆ. ನಮ್ಮ ದೇಶವು ಹೇಗೆ ಪಾಶ್ಚಿಮಾತ್ಯ ಸಂವಿಧಾನವನ್ನು ಸ್ವೀಕರಿಸಿಕೊಂಡಿದೆಯೋ, ಹಾಗೇ ಚೀನಾದಂಥ, ಉಳಿದ ಪೌರ್ವಾತ್ಯ ದೇಶಗಳೂ ಸ್ವೀಕರಿಸಿವೆ. ಆದರೆ ನಮ್ಮಂತೆಯೇ ಬೇರೆ ಬೇರೆ ಸಂಸ್ಕೃತಿಗಳನ್ನು ಹೊಂದಿರುವ ಚೀನಾದಂಥ ದೇಶಗಳ ಜನಸಾಮಾನ್ಯರತ್ತ ಅವು ಎಷ್ಟು ಮುಟ್ಟಿವೆ ಎಂಬುದನ್ನೂ ನಾನು ಅಧ್ಯಯನ ಮಾಡಿಯೇ ತಿಳಿಯಬೇಕಾಗಿದೆ.

          ಉತ್ತರ
          • ಆಗಸ್ಟ್ 22 2015

            “ಮೂಲತಃ ರೂಲ್ ಆಫ್ ಲಾ (ಕಾನೂನಿನ ಸರ್ವಶ್ರೇಷ್ಠತೆ)ಯನ್ನು ಒಪ್ಪಿಕೊಂಡು ನಡೆಯುವ ಸಮಾಜದಲ್ಲೇ ಡೆಮಾಕ್ರಸಿ, ರಿಲಿಜನ್ನು, ಸಂವಿಧಾನಗಳು ಮೂಡಿಬರಲು ಸಾಧ್ಯ”

            ಆಬ್ಜೆಕ್ಷನ್: ‘ರೂಲ್ ಆಫ್ ಲಾ’ ದಿಂದ ರಾಜಕೀಯ/ಸಾಮಾಜಿಕ ಅಥವಾ ರಿಲಿಜಿಯನ್ ವ್ಯವಸ್ಥೆ ಮೂಡಿಬರುತ್ತದೆ ಎನ್ನುವದಕ್ಕಿಂತ ಆ ವ್ಯವಸ್ಥೆಗಳ ಗುಣಲಕ್ಷಣಗಳಲ್ಲಿ ರೂಲ್ ಆಫ್ ಲಾ ಒಂದು ಎನ್ನುವದು ಸೂಕ್ತವೆನಿಸುತ್ತದೆ. ಯಾಕೆಂದರೆ ಯಾವುದೇ ವ್ಯವಸ್ಥೆ ಇಲ್ಲದೆ ಪೂರ್ವಭಾವಿಯಾಗಿ ರೂಲ್ ಆಫ್ ಲಾ ಇರಲು ಸಾಧ್ಯವಿಲ್ಲ. ಹಾಗೆಯೇ ಇನ್ನೊಂದು ವಿಷ್ಯ. ರಿಲಿಜಿಯನ್ ಗಳು ಕಾನೂನಿನ ಸರ್ವ ಶ್ರೇಷ್ಟತೆಯನ್ನು ಎತ್ತಿ ಹಿಡಿಯಲಾರವು. ಯಾಕೆಂದರೆ ರಿಲಿಜಿಯನ್ ಗಳು ಅವರ ಗಾಡ್ ನ ಆದೇಶ ಗ್ರಂಥವನ್ನು ಹೊರತುಪಡಿಸಿದ ಯಾವುದೇ ವ್ಯವಸ್ಥೆಯನ್ನು ಒಪ್ಪಲಾರವು.ಆದ ಕಾರಣದಿಂದಾಗಿಯೇ ಇಸ್ಲಾಂ ರಾಷ್ಟ್ರಗಳಲ್ಲಿ ಡೆಮಾಕ್ರಸಿ ಪ್ರಚಲಿತಕ್ಕೆ ಬರುವದು ಸಾಧ್ಯವಾಗಿಲ್ಲ.

            “ಆದರೆ ಕ್ರಿ.ಪೂ. ೫೦೦ರಲ್ಲಿ ಅಥೆನ್ಸಿನಲ್ಲಿ ಇದ್ದ ಡೆಮಾಕ್ರಸಿ ಅದೇ ರೂಪದಲ್ಲಿದೆ ಎಂಬುದನ್ನು ಒಪ್ಪಲು ಸಾಧ್ಯವೇ ಎಂಬುದನ್ನು ನಾನಿನ್ನೂ ಅಧ್ಯಯನ ಮಾಡಿಲ್ಲ.”
            ಖಂಡಿತ ಆಗಿನ ಡೆಮಾಕ್ರಸಿ ಈಗಿನ ರೂಪದಲ್ಲಿರಲಿಲ್ಲ. ಆದರೆ ಡೆಮಾಕ್ರಸಿಯ ಐಡಿಯಾ ಹಾಗೂ ರೂಲ್ಸ್ ಗಳನ್ನು ಬರೆದಿಡುವ, ಪಾಲಿಸುವ, ವ್ಯವಸ್ಥೆ ಕ್ರಿಷ್ಚಿಯಾನಿಟಿಗಿಂತಲೂ ಮೊದಲೇ ಇತ್ತು ಎನ್ನುವದು ನನ್ನ ವಾದವಷ್ಟೆ. ಮೊದಲೇ ಹೇಳಿದಂತೆ ಸಿಸರೋ ಕಾಲದಲ್ಲಿದ್ದ ರಾಜಕೀಯ ವ್ಯವಸ್ಥೆ ಟ್ರೈಬ್ ಗಳಲ್ಲಿನ ವ್ಯವಸ್ಥೆಯಂತಿರಲಿಲ್ಲ. ಇನ್ನೂ ಆಧುನಿಕವಾಗಿ ಆರ್ಗನೈಸಡ್ ಆಗಿ ರೂಪುಗೊಂಡಿದ್ದವು. ನಂತರ ಆಧುನಿಕ ಕಾಲದಲ್ಲಿ ಅಂದರೆ ೧೬ ನೆ ಶತಮಾನದ ನಂತರ ಆಯಾ ಸಾಮಾಜಿಕ ಸ್ಥಿತಿಗನುಗುಣವಾಗಿ, ಯುರೋಪಿನಲ್ಲಿಯೇ ಆಯಾ ಪ್ರದೇಶಗಳಲ್ಲಿ ಮಾರ್ಪಾಟು ಹೊಂದಿತು. ಅದು ಸಹಜ. ನಂತರ ಬಂದ ವ್ಯವಸ್ಥೆಯ ರೂಲ್ ಆಫ್ ಲಾ ದ ಕೆಲವು ರಚನೆಗಳು ಕ್ರಿಶ್ಚಿಯಾನಿಟಿಯ ಪ್ರಭಾವವನ್ನು ಉಳಿಸಿಕೊಂಡವು ಎನ್ನುವದನ್ನು ನಾನೂ ಒಪ್ಪುತ್ತೇನೆ. ಆದರೆ ಕ್ರಿಶ್ಚಿಯಾನಿಟಿಗಿಂದಾಗಿ ‘ರೂಲ್ ಆಫ್ ಲಾ’ ಬಂದಿತು ಎನ್ನುವದನ್ನು ಒಪ್ಪಲು ಸಾಧ್ಯವೇ ಇಲ್ಲ. ಇದಕ್ಕೆ ಕಾರಣವನ್ನು ವಿವರಿಸಿದ್ದೇನೆ.

            “ಹೀಗಾಗಿ ಕರಪ್ಶನ್ ಎಂಬುದು ಅನೈತಿಕವೆಂದು ಭಾವಿಸುವದು ಪಾಶ್ಚಿಮಾತ್ಯರಿಗೆ ಕಷ್ಟವಲ್ಲ”
            ನಾನು ಕರ್ರಪ್ಷನ್ನಿನ ಗ್ರಾಂಥಿಕ ಅರ್ಥವನ್ನು ಪ್ರಶ್ನಿಸುತ್ತಿಲ್ಲ. ಪ್ರಶ್ನಿಸಿದರೂ ಅದು ಕ್ರೈಸ್ತ ಥಿಯಾಲಜಿಯಿಂದ ಬಂದದ್ದಲ್ಲವೆನ್ನಬಹುದು. ಕರಪ್ಟ್ ಶಬ್ದವನ್ನು ಮೊದಲು ಉಪಯೋಗಿಸಿದ್ದು ಅರಿಸ್ಟಾಟಲ್ ಹಾಗೂ ನಂತರ ಸಿಸರೋ. ಅಲ್ಲದೆ ಕರಪ್ಷನ್ನಿಗೆ ಮೊಟ್ಟ ಮೊದಲು ಅರಿಸ್ಟಾಟಲ್ ಹಾಗೂ ಸಿಸರೋ ನೀಡಿದ ಅರ್ಥಕ್ಕೂ, ನಂತರ ಕ್ರೈಸ್ತ ಥಿಯಾಲಜಿ ನೀಡಿದ ಅರ್ಥಕ್ಕೂ, ನಂತರ ಸೆಕ್ಯುಲರ್ ಸಮಾಜ/ಸಮಾಜವಾದೀ ವ್ಯವಸ್ಥೆಗಳು ನೀಡಿದ ಅರ್ಥಕ್ಕೂ ಬದಲಾವಣೆಗಳಿರುವದು ಸಹಜ. ಕರಪ್ಟ್ ಶಬ್ದವು ಕ್ರೈಸ್ತ ಥಿಯಾಲಜಿಯಿಂದ ಹುಟ್ಟಿಕೊಂಡಿದ್ದಾದರೆ ಅರಿಸ್ಟಾಟಲ್/ಸಿಸರೋ ಯಾವ ರಿಲಿಜಿಯನ್ ಅನ್ನು ನೋಡಿ ಆ ಶಬ್ದಕ್ಕೆ ಅರ್ಥವನ್ನು ಕೊಟ್ಟರು? ಅರಿಸ್ಟಾಟಲ್ ಕರಪ್ಟ್ ಶಬ್ದವನ್ನು ಅನೈತಿಕ ಎಂದು ಭಾವಿಸುವಾಗ ಯಾವ ಕ್ರೈಸ್ತ ಥಿಯಾಲಜಿಯೂ ಇರಲಿಲ್ಲವಲ್ಲ? ಅಷ್ಟಕ್ಕೂ ಎಥಿಕ್ಸ್ ಮೋರಲ್ಸ್ ಇವುಗಳಿಗೆ ಮೊದಲು ಫಿಲಾಸಫಿಕಲ್ ಅರ್ಥವನ್ನು ನೀಡಿದ್ದು ಅರಿಸ್ಟಾಟಲ್ , ಪ್ಲೇಟೊ ಸೇರಿದಂತೆ ಅನೇಕ ಗ್ರೀಕ್ ತತ್ವಶಾಸ್ತ್ರಜ್ಞರು ಎನ್ನುವದನ್ನು ಮರೆಯಬಾರದು. ಆ ಡೆಫಿನಿಶನ್ ಗಳನ್ನು ಕ್ರೈಸ್ತ ಥಿಯಾಲಜಿ ಬಾಡಿಗೆ ಪಡೆದು ತನ್ನ ಚೌಕಟ್ಟಿನೊಳಗೆ ಸೇರಿಸಿಕೊಂಡಿತು. ಆದರೆ ಇಂದು ನಾವು ಯಾವುದನ್ನು ಎಥಿಕ್ಸ್ ಎನ್ನುತ್ತೇವೆಯೋ ಅದು ಗ್ರೀಕರದೆ ಹೊರತು ಕ್ರೈಸ್ತ ಥಿಯಾಲಜಿಯ ಬಂಡವಾಳವಲ್ಲ. ಹಾಗಿದ್ದಾಗ ಕರಪ್ಶನ್ ಎನ್ನುವದು ಪಾಶ್ಚಾತ್ಯರಲ್ಲಿ ಅನೈತಿಕ ರೂಪಿಸಿದ್ದು ಕ್ರೈಸ್ತ ಥಿಯಾಲಜಿ ಎಂದರೆ ಮಹಾನ್ ಗ್ರೀಕ್ ತತ್ವಜ್ಞಾನಿಗಳ ಆತ್ಮ ಎದ್ದು ಬಂದು ನಮ್ಮನ್ನು ಬಂದು ಒದೆಯದೇ ಇರಲಾರದು.
            ಆದರೆ ಅದಕ್ಕಿಂತಲೂ ಮುಖ್ಯವಾಗಿ ನಾನು ಒಪ್ಪದಿರುವದು ಏನೆಂದರೆ ಆ ಗ್ರಾಂಥಿಕ ಅರ್ಥವು ಸಮಾಜವನ್ನು ಪ್ರತಿನಿಧಿಸಲೇಬೇಕಾಗಿಲ್ಲ ಎನ್ನುವದು. ಅಂದರೆ ಆ ಶಬ್ದದ ಉಗಮ, ಅರ್ಥ ಇವುಗಳು ಪ್ರಸ್ತುತದ ಸಾಮಾಜಿಕ ಸಮಸ್ಯೆಗಳನ್ನು ಅವಲೋಕಿಸುವಲ್ಲಿ ರಿಲೆವೆಂಟ್ ಎಂದು ಅನಿಸುವದಿಲ್ಲ. ಉದಾರಣೆಗೆ ಕರ್ರಪ್ಷನ್ ಅನ್ನು ಅನೈತಿಕ ಎಂದು ಮಧ್ಯಯುಗದಲ್ಲಿ ಪಾಶ್ಚಾತ್ಯ ಸಮಾಜವು ಏಕರೂಪವಾಗಿ ಬಗೆದಿದ್ದರೆ ಆ ಸಮಾಜದಲ್ಲಿ ಯಥೇಚ್ಛ ಕರ್ರಪ್ಷನ್ ಸೃಷ್ಟಿಯಾಗುತ್ತಿತ್ತೆ? ಅದಕ್ಕಾಗಿಯೇ ಪ್ರೆಂಚ್ ರೆವಾಲ್ಯೂಶನ್ ಅನ್ನು ಉದಾರಣೆ ನೀಡಿದ್ದು.
            ಬಾಲು ಅವರು ಇಂದಿನ ಬೌದ್ಧಿಕ ಪ್ರಪಂಚದ ಬೆಳವಣಿಗೆಯೆಲ್ಲದರ ಮೂಲ ಕಾರಣ ಕ್ರೈಸ್ತ ಥಿಯಾಲಜಿ ಎಂದು ಭಾವಿಸುತ್ತಾರೆ. ಆದರೆ ಕ್ರೈಸ್ತ ಥಿಯಾಲಜಿ ನಿಂತ ನೆಲ ಯಾವುದು?

            ಉತ್ತರ
            • ಆಗಸ್ಟ್ 22 2015

              “ಇದು ಅವರಾಗೇ ಅವರು ಹಾಕಿಕೊಂಡ ಆದರ್ಶವಾಗಿತ್ತೇ ಅಥವಾ ಕಾನೂನಿನ ಮೀರುವಿಕೆಯನ್ನು ಅಪರಾಧವೆಂದು ಪರಿಗಣಿಸಿದ್ದರೇ?”

              ಕಾನೂನಿನ ಮೀರುವಿಕೆಯನ್ನು ಅಪರಾಧವನಾಗಿ ಅವರು ಪರಿಗಣಿಸಿರಲಿಲ್ಲ ಎನ್ನುವದಕ್ಕೆ ಯಾವ ಆಧಾರವಿದೆ? ಬ್ರಿಟಿಷರು ಬರುವದಕ್ಕೂ ಮುನ್ನ ರಾಜರ ಆಳ್ವಿಕೆಯಲ್ಲಿ ಕಾನೂನುಗಳು ಇರಲಿಲ್ಲವೇ? ಶಾಸನಗಳು ಜಾರಿಯಲ್ಲಿರಲಿಲ್ಲವೇ? ಹಾಗೂ ಶಾಸನವನ್ನು ಕಾಯ್ದುಕೊಳ್ಳಲು ನ್ಯಾಯಾಂಗ ವ್ಯವಸ್ಥೆ ಇರಲಿಲ್ಲವೇ? ಇವು ಪಾಶ್ಚಾತ್ಯ ಕಾನೂನುಗಳಿಗಿಂತ ಭಿನ್ನವಾಗಿರಬಹುದು ನಿಜ. ಆದರೆ ರಸ್ತೆ ಮೂಲಭೂತ ಸಾಮಾಜಿಕ ಸೌಕರ್ಯಗಳು ಆಗಲೂ ಪಟ್ಟಣಗಳಲ್ಲಿ ಇತ್ತು. ಅವುಗಳಿಗೆ ನಿಯಮಗಳು ಇದ್ದವು.
              ಕೆಲವು ಬ್ರಿಟಿಶ್ ಕಾನೂನುಗಳು ಭಾರತೀಯರಿಗೆ ಸಮಂಜಸವೆನಿಸದು ಎನ್ನುವದನ್ನು ನಾನೂ ಒಪ್ಪುತ್ತೇನೆ. ಆದ್ರೆ ಆ ಕಾನೂನುಗಳಲ್ಲಿರುವ ಮೌಲ್ಯಗಳು ಭಾರತೀಯರಿಗೆ ಅರ್ಥವೇ ಆಗದಿದ್ದರೆ ಭಾರತೀಯ ಸಂವಿಧಾನ ಇಲ್ಲಿಯವರೆಗೂ ಉಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಉದಾರಣೆಗೆ ಬ್ರಷ್ಟಾಚಾರವನ್ನೆ ತೆಗೆದುಕೊಳ್ಳಿ. ಲಂಚ ತೆಗೆದುಕೊಳ್ಳುವದು ತಪ್ಪು ಎಂಬ ಕಲ್ಪನೆ ಬ್ರಿಟಿಷರು ಬರುವಲ್ಲಿತನಕ ನಮ್ಮ ಕಲ್ಪನೆಗೆ ಸುಳಿದಿರಲಿಲ್ಲವೇ?
              ಇನ್ನು ಉಳಿದ ಪೌರಾತ್ಯ ರಾಷ್ಟ್ರಗಳನ್ನು ತೆಗೆದುಕೊಳ್ಳಿ. ಜಪಾನ್, ಚೈನಾ ಗಳಲ್ಲಿ ಸಮಯಕ್ಕೆ ಕೆಲಸದ ಶಿಸ್ತಿಗೆ ಎಷ್ಟು ಮಹತ್ವ ಕೊಡುತ್ತಾರೆ ಎನ್ನುವದು ತಿಳಿದದ್ದೇ.ಕಾನೂನುಗಳನ್ನು( ಪಾಶ್ಚಾತ್ಯರಿಂದ ರೂಪುಗೊಂಡ) ಅಚ್ಚುಕಟ್ಟಾಗಿ ಪಾಲಿಸುವಲ್ಲೂ ಕೂಡ. ಅವರು ಈ ವಿಷಯಗಳಲ್ಲಿ ಪಾಶ್ಚಾತ್ಯರಿಗಿಂತಲೂ ಒಂದು ಕೈ ಮೇಲೆಂದರೆ ತಪ್ಪಲ್ಲ. ಅವರ ಕಲ್ಚರಿನಲ್ಲಿ ಇರದ ಪಾಶ್ಚಾತ್ಯ ಕಾನೂನುಗಳನ್ನು ಸುವ್ಯವಸ್ಥಿತವಾಗಿ ಪಾಲಿಸಲು ಹೇಗೆ ಸಾಧ್ಯವಾಯಿತು?

              ಉತ್ತರ
            • ಆಗಸ್ಟ್ 23 2015

              ಪ್ರಜ್ಞಾರವರೇ,

              ಬಾಲಗಂಗಾಧರರು, ೧೬ನೇ ಶತಮಾನದ ನಂತರ ಬೆಳೆದ ಸಾಮಾಜಿಕ/ರಾಜಕೀಯ ವ್ಯವಸ್ಥೆಗಳಿಗೆ ರಿಲಿಜನ್ನಿನ ಥಿಯಾಲಜಿಗಳು ಮೂಲಕಾರಣ ಎನ್ನುತ್ತಾರೆ. ಕ್ರೈಸ್ತ ಮತವನ್ನೊಪ್ಪಿದ ಮೊನಾರ್ಕಿಯಲ್ಲಿಯೂ ರಾಜನ ಸ್ಥಾನ ಬೈಬಲ್ಲಿನ ಕೆಳಗೇ ಇರುತ್ತದೆ. ಡೆಮಾಕ್ರಸಿಯನ್ನೊಪ್ಪಿದ ದೇಶದ ಪ್ರಧಾನಿ/ರಾಷ್ಟ್ರಪತಿಯ ಸ್ಥಾನ ಸಂವಿಧಾನದ ಕೆಳಗೇ ಇರುತ್ತದೆ. ಇಸ್ಲಾಂ ರಾಜ್ಯಗಳಲ್ಲಿ ಡೆಮಾಕ್ರಸಿ ಇಲ್ಲದಿದ್ದರೂ, ಸೌದಿರಾಜನ ಸ್ಥಾನ ಕುರಾನಿಗಿಂತ ಶ್ರೇಷ್ಠವಲ್ಲ.ಈ ಪರಿಕಲ್ಪನೆ ನಮ್ಮ ದೇಶದಲ್ಲಿ ಕಂಡು ಬರುವದಿಲ್ಲ. ಅಲ್ಲಿ ಕಾಣುವ ಪ್ರಕ್ರಿಯೆ, ಇಲ್ಲಿ ಕಾಣದಿರಲು ಒಂದು ಕಾರಣ ಬೇಕಾಗುತ್ತದೆ. ಒಂದೇ ಥಿಯರಿಯಿಂದ ಅಲ್ಲಿ ಆ ಪ್ರಕ್ರಿಯೆಯ ಅಸ್ತಿತ್ವವನ್ನೂ ಇಲ್ಲಿ ಅದರ ನಾಸ್ತಿತ್ವವನ್ನು ವರ್ಣಿಸಲು ಸಾಧ್ಯವೇ? ಬಹುಶಃ ಬಾಲಗಂಗಾಧರರಿಂದ ಸಾಧ್ಯ ಎಂದು ಅನಿಸುತ್ತದೆ.

              ರಿಲಿಜನ್ನುಗಳು ಕಾನೂನನ್ನು ಬೆಂಬಲಿಸುವದಿಲ್ಲ, ಕಾನೂನು ರಿಲಿಜನ್ನಿನ ನಂಬಿಕೆಗಳನ್ನು ಬೆಂಬಲಿಸುವದಿಲ್ಲ. ಆದರೆ ರಿಲಿಜನ್ನಿನ ಲೋಕಕ್ಕೂ ಮತ್ತು ಈಗಿನ ಸೆಕ್ಯುಲರ್ ಲೋಕಕ್ಕೂ ಈ ಮೇಲೆ ಹೇಳಿದ ಒಂದು Principle of Equivalence ಇದೆ. ಅದು ನಮ್ಮ ಪರಂಪರೆಗಳಲ್ಲಿ ಇಲ್ಲ. ಒಬ್ಬ ಕ್ರಿಶ್ಚಿಯನ್ ರಾಜ ಒಂದು ಪ್ರದೇಶವನ್ನು ಆಳುತ್ತಾನೆ ಎಂದಿಟ್ಟುಕೊಳ್ಳಿ ಆಗ ಬೈಬಲ್ ಆ ದೇಶದ ಸಂವಿಧಾನವಾಗುತ್ತದೆ. ಪ್ರಜೆಗಳ ವ್ಯಾಜ್ಯ, ಸರಿ/ತಪ್ಪುಗಳ ನಿರ್ಧಾರ, ಶಿಕ್ಷೆಗಳೆಲ್ಲವೂ ಬೈಬಲ್ಲಿನ ಅಧಾರದಲ್ಲಿಯೇ ನಡೆಯುತ್ತದೆ. ಆದರೆ ನಮ್ಮ ದೇಶದಲ್ಲಿ ಹಾಗಾಗುವದಿಲ್ಲ, ವೈಷ್ಣವರಾಜನೊಬ್ಬ ಶೈವರ ನಡುವಿನ ದಾವೆಗಳನ್ನು ಬಗೆಹರಿಸಲು, ಶೈವಾಗಮಗಳ ಆಧಾರವನ್ನು ಪಡೆಯುತ್ತಿದ್ದನು. ಈಗ ನಮ್ಮ ದೇಶದಲ್ಲಿ ಎರಡು ಮಠಗಳ ನಡುವಿನ ಜಗಳವನ್ನು ಇಲ್ಲಿನ ಧಾರ್ಮಿಕ ನ್ಯಾಯಶಾಸ್ತ್ರಗಳ ಅಡಿಯಲ್ಲಿ ನೋಡದೇ, ಕಾನೂನಿನ ಅಡಿಯಲ್ಲಿ ಬಗೆಹರಿಸಲು ಯತ್ನಿಸುತ್ತಿದ್ದೇವೆ. ಇದು ವೈಜ್ಞಾನಿಕವೇ? ನೀವೇ ಹೇಳಿ.

              ಒಂದು ಮಾತು ನಿಜ. ಕ್ರೈಸ್ತ ಧರ್ಮವೇನೂ ನಾನೂ ಗಾಡ್ ನ ದೇಣಿಗೆ ಎಂದೇನೂ ನಂಬುವವನಲ್ಲ. ಗ್ರೀಕರ, ಪಾಗನ್ನರ, ಇನ್ನುಳಿದ ತತ್ತ್ವಜ್ಞಾನಿಗಳ ವಿಚಾರಗಳಲ್ಲಿ ಕೆಲವನ್ನು ಕ್ರೈಸ್ತ ಧರ್ಮ ಒಳಗೊಂಡಿತು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಪ್ಲೇಟೋ “ಸಮಾಜದಲ್ಲಿ ರಾಜನ ಸರ್ವಶ್ರೇಷ್ಠತೆಯನ್ನು ಒಪ್ಪಿದ್ದ” ಎಂದು ಓದಿದ್ದೇನೆ. ಅಂದರೆ ಕ್ರಿಶ್ಚಿಯಾನಿಟಿ ಬರುವ ಮುಂಚಿನ ಯುರೋಪ್ ಸಮಾಜ ಕಾನೂನಿನ ಶ್ರೇಷ್ಠತೆಗಿಂತ ಮಾನವ ಶ್ರೇಷ್ಠತೆಯನ್ನು ಒಪ್ಪಿಕೊಂಡಿದ್ದಿರಬಹುದು. ಮತ್ತು ಅಂಥ ಮಾನವನನ್ನು ಅವರೇ ಆರಿಸುತ್ತಿದ್ದಿರಬಹುದು. ನಮ್ಮಲ್ಲೂ ಪಂಚಾಯ್ತಿ ಪಂಚರನ್ನು ಆಯಾ ಜಾತಿಯ ಜನರು ಆಯ್ಕೆ ಮಾಡುವ ಸಂಪ್ರದಾಯ ಕೆಲವು ಬುಡಕಟ್ಟುಗಳಲ್ಲಿತ್ತು. ಆ ದೃಷ್ಟಿಯಲ್ಲಿ ವಿಚಾರಿಸುವದಾದರೆ, ಕ್ರಿಸ್ತಪೂರ್ವ ಡೆಮಾಕ್ರಸಿಯನ್ನು “ಕಾನೂನಿನ ಸರ್ವಶ್ರೇಷ್ಠತೆ” ಅಥವಾ “ರೂಲ್ ಆಫ್ ಲಾ” ಅನ್ನು ಒಪ್ಪಿಕೊಳ್ಳದೆಯೂ ಕಲ್ಪಿಸಲು ಸಾಧ್ಯವಿದೆ ಎಂದು ನನ್ನ ಅನಿಸಿಕೆ. ಕ್ರೈಸ್ತ ಥಿಯಾಲಜಿಯಾಗಲೀ, ಇಂದಿನ ಸೆಕ್ಯುಲರ್ ಥಿಯಾಲಜಿಯಾಗಲೀ ಇವೆರಡಕ್ಕೂ ಬೈಬಲ್/ಸಂವಿಧಾನ ಶ್ರೇಷ್ಠತೆ ಎಂಬುದು ಸಮಾನ ಅಂಶಗಳು. ಇವೆರಡೂ ಥಿಯಾಲಜಿ, ನಿಂತಿರುವದು ರೂಲ್ ಆಫ್ ಲಾ ಎಂಬುದರ ಮೇಲೆಯೇ. ಈ ಅಂಶ ನಮ್ಮಲ್ಲಿಲ್ಲ, ಯೂರೋಪಿನಲ್ಲಿ ಮುಂಚೆಯೂ ಇದ್ದಿರಲಿಲ್ಲವೇ ಎಂಬುದನ್ನು ಗಮನಿಸಬೇಕು.

              ನೀವು ಎಕ್ಸ್ಟೀಮಿಸಂ ಬಗ್ಗೆ ಹೇಳಿದ್ದರಿಂದ ನಾನು ವಿಶ್ವೇಶ್ವರಯ್ಯನವರ ಎಕ್ಸ್ಟ್ರೀಂ ಆದರ್ಶವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದೇನೆ. ಅಷ್ಟೇ. ಒಂದು ವೇಳೆ ವಿಶ್ವೇಶ್ವರಯ್ಯನವರು ಸರ್ಕಾರಿ ಸಾಧನಗಳನ್ನು ತಮ್ಮ ಸ್ವಂತಕ್ಕೆ ಬಳಸಿದ್ದರೆ, ಅದೇನೂ ಕಾನೂನಿನ ಪ್ರಕಾರ ಕ್ರೈಂ ಆಗುತ್ತಿರಲಿಲ್ಲ. ಅವರಿಗೇನೂ ಶಿಕ್ಷೆಯೂ ಆಗುತ್ತಿರಲಿಲ್ಲ. ಆದರೆ ಅದು ಅಪರಾಧವಾಗುತ್ತಿತ್ತು ಅವರ ದೃಷ್ಟಿಯಲ್ಲಿ, ಅವರು ತಮ್ಮ ಜೀವನಗಳಲ್ಲಿ ಹಾಕಿಕೊಂಡಿದ್ದ ಆದರ್ಶಗಳ ದೃಷ್ಟಿಯಲ್ಲಿ. ನಾನು ಹೇಳಬಯಸುತ್ತಿರುವ ಅಪರಾಧ ಮತ್ತು ಕ್ರೈಂಗಳ ವ್ಯತ್ಯಾಸಕ್ಕೆ ಬಹುಶಃ ಇದಕ್ಕಿಂತ ಉತ್ತಮ ಉದಾಹರಣೆ ಸಿಗಲು ಸಾಧ್ಯವಿಲ್ಲ. ಇಷ್ಟಾಗಿ ಮೈಸೂರಿನ ವಿದ್ಯಾವಂತರಿಗೆ ಅವರೇನಾದರೂ ಇಂದು ಆದರ್ಶವಾಗಿದ್ದರೆ, ಅದಕ್ಕೆ ಅವರು ಹಾಕಿಕೊಂಡಿದ್ದ ಆದರ್ಶಗಳು ಕಾರಣವೇ ಹೊರತು ಅವರ ಕಾನೂನು ಪಾಲನೆಯ ಪ್ರಜ್ಞೆಯಲ್ಲ. ಕಾನೂನು ಪಾಲನೆಯೂ ಅವರ ಆದರ್ಶದ ಒಂದು ಭಾಗವಷ್ಟೇ. ಆದರೆ ಅವರ ಆದರ್ಶಗಳ ವ್ಯಾಪ್ತಿ ಕಾನೂನಿಗಿಂತ ದೊಡ್ಡದು. ಲಂಚ ತೆಗೆದುಕೊಳ್ಳುವದು ತಪ್ಪು ಎಂಬುದು ಮುಂಚೆಯೂ ಇತ್ತು ಈಗಲೂ ಇದೆ. ಆದರೆ ತಪ್ಪು/ಸರಿಗಳ ನಿರ್ಣಯಕ್ಕೆ reference ಬೇಕು. ನಮ್ಮಲ್ಲಿ ಆ reference ಯಾವದು? ಹಳ್ಳಿಯ ಪಂಚರಿಗೆ reference ಏನು? ರಾಜರಿಗೆ ಅಧಿಕಾರಿಗಳಿಗೆ reference ಏನು? ಮನುಸ್ಮೃತಿಯ ಇಂಥ ಅಧ್ಯಾಯದ, ಇಂಥ ಶ್ಲೋಕವೋ? ಅಥವಾ ಆತನಿಗೆ ಆತನ ಗುರು/ಸಮಾಜ ಹಾಕಿಕೊಟ್ಟ ಸಂಪ್ರದಾಯದ ಆದರ್ಶವೋ?

              ಬ್ರಿಟೀಷರು ಬರುವದಕ್ಕೆ ಮುಂಚೆ ರಾಜರು ನಿಯಮಗಳನ್ನು ಹಾಕಿದ್ದರು. ರಸ್ತೆ, ಕೆರೆ ಮುಂತಾದ ಸೌಕರ್ಯಗಳನ್ನು ಮಾಡಿದ್ದರು. ಆದರೆ ಈ ಯಾವ ನಿಯಮಗಳೂ ರಾಜನಿಗಿಂತ ಶ್ರೇಷ್ಠವಾಗಿರಲಿಲ್ಲ. ಅಲ್ಲದೇ ಕೆರೆ ಕಟ್ಟಿಸುತ್ತೇನೆ ಎಂದು ರಾಜ ಹೊರಟರೆ, ಆತ ಜಾಗವನ್ನು ಖರೀದಿಸಲು ಯಾವ ಭೂಮಿ ಅಧಿಗ್ರಹಣ ಕಾಯ್ದೆ ಬೇಕಾಗಿರಲಿಲ್ಲ. ಜಮೀನ್ದಾರರೇ ಬಿಟ್ಟುಕೊಡುತ್ತಿದ್ದರು. ರಾಜನ ಭಯ ಅಂತಲ್ಲ. ೪ ಜನರಿಗೆ ಒಳಿತಾಗುವದಾದರೆ ಎಂಥ ದಾನವನ್ನೂ ನಮ್ಮ ಹಿಂದಿನ ಜನತೆ ಮಾಡುತ್ತಿತ್ತು. ಈಗಲೂ ಮಠವೊಂದು ಅನಾಥರ ವಸತಿ ಶಾಲೆ ನಿರ್ಮಿಸುತ್ತೇನೆ ಎಂದು ಹೊರಟರೆ, ಭೂದಾನ ಮಾಡುವ ದಾನಿಗಳು ಈಗಲೂ ಇದ್ದಾರೆ (ಇರಲಿ, ಇತ್ತೀಚೆಗೆ ಇಂಥ ದಾನಗಳಲ್ಲಿ ರಾಜಕೀಯ ಸೇರಿಕೊಳ್ಳುತ್ತಿದೆ. ಆ ಪ್ರಶ್ನೆ ಬೇರೆ. ಆದರೆ ನಿಜವಾದ ದಾನಿಗಳು ಇಲ್ಲವೇ ಇಲ್ಲ ಎಂದೇನೂ ಇಲ್ಲವಲ್ಲ). ಈ ಹಿಂದೆ ಲಾಲ್ ಬಹಾದೂರ್ ಶಾಸ್ತ್ರಿಯವರು ವಾರದಲ್ಲೊಂದು ದಿನ ಒಪ್ಪತ್ತು ಊಟ ಬಿಡಿ ಎಂದು ಕೇಳಿದ್ದರು. ಅದು ಸಾಂವಿಧಾನಿಕವಾಗಿ ಸರಿಯೇ? ಆದರೆ ಜನ ಮಾಡಿದ್ದೇನು?

              ಹೀಗೊಮ್ಮೆ ಯೋಚಿಸಿ, ಕಾಶೀ ಯಾತ್ರೆಗೆ ವರ್ಷಗಟ್ಟಲೇ ಜನರು ಮನೆಯಿಂದ ಹೊರಹೋಗುತ್ತಿದ್ದರು ಅವರಿಗೆ ದಾರಿಯಲ್ಲಿ ಊಟಕ್ಕೆ ಯಾವ ಹೊಟೆಲ್ಲುಗಳಿತ್ತು? ಈ ಪ್ರಶ್ನೆ ಈಗ ಉದಯಿಸಲು ಕಾರಣ ನಾವು ಅನ್ನವನ್ನು, ವಿದ್ಯೆಯನ್ನು ಮಾರುವಂಥ System ಮಾಡಿಕೊಂಡಿದ್ದೇವೆ. ಆಗ ಅತಿಥಿ ಬಂದು ಉಣ್ಣದ ಹೊರತು ಮಾಡಿದ ಅಡಿಗೆಗೆ ಕೈ ಹಾಕದ ಸಮಾಜವೊಂದಿತ್ತು. “ಭುಂಜತೇ ತೇ ತ್ವಘಂ ಪಾಪಾತ್ ಯೇ ಪಚಂತ್ಯಾತ್ಮಕಾರಣಾತ್” ಎಂಬ ಗೀತಾವಾಕ್ಯವೇ ಇದಕ್ಕೆ ಕಾರಣವೆನ್ನೋಣವೇ? ಹಾಗೂ ಇಲ್ಲ, ಗೀತೆಗೂ ಮುಂಚೆ ಆ ಸಂಪ್ರದಾಯವಿತ್ತು. ಗೀತೆ ಇಲ್ಲದಿದ್ದರೂ ಆ ಸಂಪ್ರದಾಯ ಸ್ವಲ್ಪವಾದರೂ ಉಳಿದುಕೊಳ್ಳುತ್ತಿತ್ತು. ವಿದ್ಯೆಯನ್ನು ಮಾರುವ ಕಲ್ಪನೆಯೇ ನಮ್ಮ ಸಮಾಜದಲ್ಲಿರಲಿಲ್ಲ (ಗುರುದಕ್ಷಿಣೆಗೂ ಟ್ಯೂಷನ್ ಫೀ ಗೂ ವ್ಯತ್ಯಾಸ ಇದೆ ಎಂದೇ ಈ ಮಾತು ಹೇಳಿದ್ದೇನೆ). ಈಗ ನಾವೆಷ್ಟು ದೂರ ಬಂದಿದ್ದೇವೆ ಎಂದರೆ ಇವುಗಳನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ. ಅಂಥ ಸಮಾಜದಲ್ಲಿನ ನಿಯಮಗಳು ಈಗಿನ ಪಾಶ್ಚಿಮಾತ್ಯರ ಕಾನೂನಿನಂತೆ ಇರಲು ಸಾಧ್ಯವೇ? ವಾರಾನ್ನದಂಥ ಪರಿಕಲ್ಪನೆ ಈ ದೇಶದಲ್ಲಿ ಮಾತ್ರ ಯಾಕೆ ಬಂತು? ಯೂರೋಪಿನಲ್ಲೇಕೆ ಇರಲಿಲ್ಲ? ನಮ್ಮ ಸಮಾಜಗಳ ಸೃಷ್ಟಿ-ಸ್ಥಿತಿಗಳಿಗೆ ಪರಂಪರೆ/ಸಂಪ್ರದಾಯಗಳೇ ಬೇಕಾದಷ್ಟಾಗಿತ್ತು.

              ಸಮಯ ಪಾಲನೆಗೆ ಜಪಾನ್, ಚೈನಾದವರು ಬಹಳ ಮಹತ್ವ ಕೊಡುತ್ತಾರೆ. ನಾನು ಹೇಳುತ್ತೇನೆ, ನಾವೂ ಕೂಡ ಸಮಯಕ್ಕೆ ಅಷ್ಟೇ ಮಹತ್ವ ಕೊಡುತ್ತೇವೆ. ಮುಹೂರ್ತದ ಒಂದು ಘಳಿಗೆಯಾದರೂ ಆಚೀಚೆ ಮೀರಿ ನಡೆದ ಮದುವೆಗಳು, ಉಪನಯನಗಳು, ಗ್ರಹಪ್ರವೇಶಗಳು ಇವೆಯೇ? ಸಮಯಕ್ಕೆ ಮಹತ್ವ ಕೊಡದ ಜನರಲ್ಲಿ ಮುಹೂರ್ತದ ಕಲ್ಪನೆ ಇರಲು ಸಾಧ್ಯವಿತ್ತೇ? ಆಧ್ಯಾತ್ಮದ ಪರಿಕಲ್ಪನೆಯಲ್ಲಿ ಬೆಳೆದು ಬಂದ ಪ್ರತಿ ನಿಯಮಕ್ಕೂ ಜನರ ಮನ್ನಣೆ ಇದ್ದೇ ಇದೆ.

              ನಮ್ಮಲ್ಲಿ ಸಂವಿಧಾನ ಇದೆ. ಅದರ ಪಾಲನೆಯೂ ತಕ್ಕ ಮಟ್ಟಿಗೆ ಚೆನ್ನಾಗೇ ಇದೆ. ಸಂವಿಧಾನದ ಶ್ರೇಷ್ಠತೆಯನ್ನು ರಕ್ಷಿಸುವ ಶಾಸಕಾಂಗ/ಕಾರ್ಯಾಂಗ/ನ್ಯಾಯಾಂಗದ ಹಲವು ರಾಜಕಾರಣಿಗಳು, ಅಧಿಕಾರಿಗಳು, ವಕೀಲರುಗಳು ಮತ್ತು ಕೆಲವು ಸಮಾಜದ ಪ್ರತಿಷ್ಠಿತ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದೆಲ್ಲ ಸಾಮಾನ್ಯ ಜನರು ಸಂವಿಧಾನವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ. ಇದೇ ನಮ್ಮ ದೇಶದ ವಿಡಂಬನೆಯಾಗಿದೆ. ಕೆಲವು ಜನರಿಂದ, ಕೆಲವು ಜನರಿಗಾಗಿ, ಕೆಲವು ಜನರು ಸಂವಿಧಾನ ಮಾಡಿಕೊಂಡಿದ್ದಾರೆ. ಬಹುಸಂಖ್ಯಾತರು ತಮ್ಮ ಪಾಡಿಗೆ ತಾವಿದ್ದಾರೆ. ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳ ಸಂದರ್ಭದಲ್ಲಿ ಬಳಕೆಯಾಗುವ ದಂಡ ಸಂಹಿತೆ ನಮ್ಮ ದೇಶದಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಆಡಳಿತಸೂತ್ರಗಳ ಯಶಸ್ಸಿನ ಬಗ್ಗೆ ಹೇಳಲು ನನಗೆ ಬಾಯಿಯೇ ಬರುತ್ತಿಲ್ಲ.

              ಉತ್ತರ
              • ಆಗಸ್ಟ್ 23 2015

                “ಬಾಲಗಂಗಾಧರರು, ೧೬ನೇ ಶತಮಾನದ ನಂತರ ಬೆಳೆದ ಸಾಮಾಜಿಕ/ರಾಜಕೀಯ ವ್ಯವಸ್ಥೆಗಳಿಗೆ ರಿಲಿಜನ್ನಿನ ಥಿಯಾಲಜಿಗಳು ಮೂಲಕಾರಣ ಎನ್ನುತ್ತಾರೆ.”

                ಇಲ್ಲೇ ನನಗೆ ಅರ್ಥ ಮಾಡಿಕೊಳ್ಳಲು ಸಮಸ್ಯೆಯಿರುವದು. ಕ್ರೈಸ್ತ ಥಿಯಾಲಜಿಯು ೧೬ ನೆ ಶತಮಾನದ ಸಾಮಾಜಿಕ/ರಾಜಕೀಯ ವ್ಯವಸ್ಥೆಗಳಿಗೆ ಮೂಲಕಾರಣವಾಗಿದ್ದರೆ ಅದು ೧೬ನೆ ಶತಮಾನದವರೆಗೂ ಯಾಕೆ ಅಂತ ಬೆಳವಣಿಗೆಯನ್ನು ಸೃಸ್ಟಿಸಿರಲಿಲ್ಲ? ಅಂದರೆ ಕ್ರೈಸ್ತ ಥಿಯಾಲಜಿಯು ಸಾಮಾಜಿಕ/ರಾಜಕೀಯ ವ್ಯವಸ್ಥೆಯ ಬೆಳವಣಿಗೆಗೆ ಮೂಲಕಾರಣ ಅಗುವಂತಾಗಿದ್ದರೆ ತನ್ನ ಉಗಮದ ನಂತರ ಸುಮಾರು ೧೬೦೦ ವರ್ಷಗಳ ದೀರ್ಘ ಕಾಲವನ್ನು ಯಾಕೆ ತೆಗೆದುಕೊಂಡಿತು? ಅಂದರೆ ಕ್ರೈಸ್ತ ರಿಲಿಜಿಯನ್ ಉಗಮವಾದ ಕಾಲದ ತದನಂತರವೇ ಇಂತಹ ಬದಲಾವಣೆಗಳನ್ನು ಸೃಸ್ಟಿಸಬಹುದಿತ್ತಲ್ಲಾ? ಅಂದರೆ ಕ್ರಿ.ಶ ೨ ಅಥವಾ ೩ ನೆಯ ಶತಮಾನದಲ್ಲೋ ಇಂತಹ ಬೆಳವಣಿಗೆಗಳು ಯಾಕೆ ನಡೆಯಲಿಲ್ಲ? ಆದ್ದರಿಂದ ಕೇವಲ ಕ್ರೈಸ್ತ ಥಿಯಾಲಜಿ ಇಂತಹ ಬೆಳವಣಿಗೆಗೆ ನಾಂದಿ ಹಾಡಲಿಲ್ಲ ಎನ್ನುವದು ಸತ್ಯ.

                “ಒಂದೇ ಥಿಯರಿಯಿಂದ ಅಲ್ಲಿ ಆ ಪ್ರಕ್ರಿಯೆಯ ಅಸ್ತಿತ್ವವನ್ನೂ ಇಲ್ಲಿ ಅದರ ನಾಸ್ತಿತ್ವವನ್ನು ವರ್ಣಿಸಲು ಸಾಧ್ಯವೇ?”
                ಕ್ಷಮಿಸಿ ನಾನು ನಮ್ಮ ದೇಶದ ರಾಜಕೀಯ ಸ್ಥಿತಿಗತಿ ಹಾಗೂ ಪಾಶ್ಚಿಮಾತ್ಯ ರಾಜಕೀಯ ಸ್ಥಿತಿ ಒಂದೆ ಇತ್ತೆಂದು ಹೇಳಿಲ್ಲ. ಆದರೆ ರೂಲ್ ಆಫ್ ಲಾ ಎನ್ನುವ ಕಾನ್ಸೆಪ್ಟ್ ರಿಲಿಜಿಯನ್ ಇಂದ ಬಂದಿಲ್ಲ ಎಂದೆನಷ್ಟೆ. ಕ್ರಿಶ್ಚಿಯಾನಿಟಿಗಿಂತಲೂ ಮೊದಲು ರೂಲ್ ಆಫ್ ಲಾ ಇತ್ತು ಹಾಗೂ ನಂತರ ಆ ಲಾ ಗಳು ರಿಲಿಜಿಯಸ್ ಸ್ವರೂಪವನ್ನು ಪಡೆದುಕೊಂಡಿದ್ದನ್ನು ಒಪ್ಪುತ್ತೇನೆ. ಆದರೆ ರಿಲಿಜಿಯನ್ ಹುಟ್ಟುವದಕ್ಕಿಂತಲೂ ಮುಂಚೆ ರೂಲ್ ಆಫ್ ಲಾ ಇರಲಿಲ್ಲ ಎನ್ನುವದು ಐತಿಹಾಸಿಕವಾಗಿ ಸತ್ಯವಲ್ಲ. ಅದಕ್ಕಾಗಿಯೇ ಈ ಬಗ್ಗೆ ಸಿಸರೋ ನ ಕಾಲದ ಉದಾರಣೆಯನ್ನು ನೀಡಿದೆ. ಸಿಸರೋ ನ ಕಾಲದಲ್ಲಿದ್ದ ಸಂವಿಧಾನಿಕ ವ್ಯವಸ್ಥೆ ಬಗ್ಗೆ ಮಾಹಿತಿ ಬೇಕಾದರೆ ಸಿಸರೋ ನ ಸೆಕ್ರೆಟರಿಯಾದ ‘ಮಾರ್ಕಸ್ ಟೈರೊ’ ಬರೆದಿರುವ ಪುಸ್ತಕ, ಪತ್ರಗಳನ್ನು ಓದಿ. ಅಂದಹಾಗೆ ಈ ಟೈರೊ ಎನ್ನುವವನು ಇಂದು ನಾವು ಮುದ್ರಣಮಾಧ್ಯಮದಲ್ಲಿ ಬಳಸುತ್ತಿರುವ ‘ಶಾರ್ಟ್ ಹ್ಯಾಂಡ್’ ಸಿಸ್ಟಮ್ ಅನ್ನು ಬಳಕೆಗೆ ತಂದವನು. ಸಿಸರೋ ನ ಕಾಲದಲ್ಲಿದ್ದ ಸಾಂವಿಧಾನಿಕ ವ್ಯವಸ್ಥೆಗೂ ನಮ್ಮ ಹಳ್ಳಿ ಪಂಚಾಯತಿ ವ್ಯವಸ್ಥೆಗೂ ತುಲನೆ ಮಾಡಲಾಗದಷ್ಟು ಅಂತರ ಇದೆ.

                “ಲಂಚ ತೆಗೆದುಕೊಳ್ಳುವದು ತಪ್ಪು ಎಂಬುದು ಮುಂಚೆಯೂ ಇತ್ತು ಈಗಲೂ ಇದೆ.”
                ಖಂಡಿತ. ಆದರೆ ಬಾಲಗಂಗಾಧರರು ಏನು ಹೇಳುತ್ತಾರೆಂದರೆ “ಭ್ರಷ್ಟಾಚಾರ ಎಂದು ನಾವು ಯಾವ ಪರಿಕಲ್ಪನೆಯನ್ನು ಗುರುತಿಸುತ್ತಿದ್ದೆವೆಯೋ ಅದು ಭಾರತೀಯರ ಪ್ರಪಂಚಕ್ಕೆ ಅಪ್ರಸ್ತುತವಾಗಿದೆ” ಎನ್ನುತಾರೆ. (ಬುದ್ಧಿಜೀವಿಗಳ ಮೂಢನಂಬಿಕೆಗಳು:ಪೇಜ್ ನಂ: ೭೯ ನೋಡಿ). ಹಾಗೆಯೇ “ಆದರೆ ಭಾರತೀಯರ ವ್ಯವಹಾರವನ್ನು ಗಮನಿಸಿದರೆ ಭಾರತೀಯರು ಇದನ್ನು ಅನೈತಿಕವಾಗಿ ಭಾವಿಸುವದಿಲ್ಲವಷ್ಟೆ ಅಲ್ಲ, ಬಹುತೇಕರು ಇದನ್ನು ಪುರುಷಾರ್ಥ ಸಾಧನೆ ಎಂದುಕೊಂಡವರು ಇದ್ದಾರೆ” ಎನ್ನುತ್ತಾರೆ(ಬುದ್ಧಿಜೀವಿಗಳ ಮೂಢನಂಬಿಕೆಗಳು:ಪೇಜ್ ನಂ: ೮೨ ನೋಡಿ).
                ಬಾಲಗಂಗಾಧರರ ಥಿಯರಿಯಲ್ಲಿ ನಾನು ಪ್ರಶ್ನಿಸುವದಿಷ್ಟೆ:
                ಬಾಲಗಂಗಾಧರರು ಪಾಶ್ಚಿಮಾತ್ಯ ಸಮಾಜದ ವಿವರಣೆಯನ್ನು ಕೊಡುವಾಗ, ಶಬ್ದದ ಕ್ರೈಸ್ತ ಥಿಯಾಲಜಿಯ ಅರ್ಥವನ್ನು ವಿವರಿಸಿ ನಂತರ ಆ ಅರ್ಥದಂತೆ ಅಲ್ಲಿನ ಸಮಾಜದ ವಿವರಣೆಯನ್ನು ನೀಡುತ್ತಾರೆ. ಆದರೆ ಆ ಶಬ್ದದ ಅರ್ಥ ಇಡಿ ಸಮಾಜವನ್ನು ಎಲ್ಲಾ ಕಾಲದಲ್ಲೂ ಪ್ರತಿನಿಧಿಸುತ್ತದೆ ಎನ್ನುವದಕ್ಕೆ ಯಾವ ವೈಜ್ಞಾನಿಕ ಕಾರಣಗಳಿವೆ? ನೀವು ಪಾಶ್ಚಿಮಾತ್ಯನ ಬಳಿ ‘ನೀವ್ಯಾಕೆ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೀರಾ’ ಎಂದು ಕೇಳಿದರೆ, ಆತ ಕ್ರೈಸ್ತ ಥಿಯಾಲಜಿಯ ಬೈಬಲ್ ಅರ್ಥವನ್ನು ನೀಡಿ ಇದೆ ಅದಕ್ಕೆ ಕಾರಣ ಎಂದು ಹೇಳುತ್ತಾನಾ? ಕರಪ್ಶನ್ ಏನು ಅಂತ ಕೇಳಿದರೆ ಆತ ಪ್ರಚಲಿತದಲ್ಲಿ ಉಪಯೋಗಿಸುವ ಅರ್ಥವನ್ನು ಹೇಳುತ್ತಾನೆಯೆ ಹೊರತು ಬೈಬಲ್ ನ ಪುಟವನ್ನು ತಿರುವಿ ಹಾಕುವದಿಲ್ಲ. ಶಬ್ದದ ಅರ್ಥ ಜನರೇಶನ್ ಇಂದ ಜನರೇಶನ್ ಗೆ ಬದಲಾಗುತ್ತಾ ಹೋಗುತ್ತದೆ. ಹಾಗೆ ನೋಡಿದರೆ ನಾವು ಇಂದು ಉಪಯೋಗಿಸುತ್ತಿರುವ ಕನ್ನಡ ಅಥವಾ ಸಂಸ್ಕೃತ ಶಬ್ದಗಳ ಅರ್ಥದಂತೆ ಇವತ್ತು ಉಪಯೋಗಿಸುತ್ತಿದ್ದೇವಾ? ಉದಾರಣೆಗೆ ಪ್ರಜ್ಞೆ, ಜ್ಞಾನ ಇವುಗಳು ಆಧ್ಯಾತ್ಮಕತೆಯಲ್ಲಿ ಬಳಸಿದಂತವು. ಇಂದು ನಾವು ಬೇರೆಯದೇ ಸಂದರ್ಭದಲ್ಲಿ ಉಪಯೋಗಿಸುತ್ತಿದ್ದೇವೆ.

                “ಆದರೆ ಈ ಯಾವ ನಿಯಮಗಳೂ ರಾಜನಿಗಿಂತ ಶ್ರೇಷ್ಠವಾಗಿರಲಿಲ್ಲ.”
                ನಿಜ. ಭಾರತದಲ್ಲಿರುವ ಕಾನೂನುಗಳಿಗೆ ಯಾವುದೋ ಗ್ರಂಥದ ರೆಫೆರೆನ್ಸ್ ಇರಲಿಲ್ಲ. ಹಾಗೂ ರಾಜ್ಯದಿಂದ ರಾಜ್ಯಕ್ಕೆ ಲಾ ಗಳು ಭಿನ್ನವಾಗಿರುತ್ತಿತ್ತು ಕೂಡ. ನೀವು ಹೇಳಿದಂತೆ ಎಷ್ಟೊ ಕೆಲಸ ಕಾರ್ಯಗಳು ನಂಬಿಕೆಯ ಆಧಾರದ ಮೇಲೆಯೇ ನಡೆಯುತ್ತಿತ್ತು. ಆದರೆ ಬ್ರಿಟಿಶ್ ಕಾನೂನುಗಳು ಅರ್ಥವಾಗಲಾರದಷ್ಟು ನಮ್ಮ ಸಮಾಜ ಅನಾಗರೀಕತೆಯನ್ನಾಗಲೀ, ಜಡತ್ವವನ್ನಾಗಲೀ ಹೊಂದಿರಲಿಲ್ಲ. ಹಾಗಾಗಿಯೇ ಪ್ರಜಾಪ್ರಭುತ್ವಕ್ಕೆ ಭಾರತೀಯ ಸಮಾಜ ತೆರೆದುಕೊಂಡಿತು. ಇಲ್ಲದಿದ್ದರೆ ಈ ಸಂವಿಧಾನದ ವಿರುದ್ಧ ದಂಗೆಗಳು ನಡೆದು ಹೋಗುತ್ತಿದ್ದವು(ಇಂದಿಗೂ ಸರ್ಕಾರವನ್ನು ಉರುಳಿಸುವ ದಂಗೆಗಳಿವೆ, ಆದರೆ ಅವು ರಾಜಕೀಯ ಹಿತಾಸಕ್ತಿಗಾಗಿ ಕೃತಕವಾಗಿ ಮಾಡಲ್ಪಟ್ಟವು).

                ಉತ್ತರ
                • ಆಗಸ್ಟ್ 23 2015

                  ಈ ಎಲ್ಲಾ ಚರ್ಚೆಗಳಿಂದ ಮೂಡುವ ಅಭಿಪ್ರಾಯವೆಂದರೆ,
                  ಕಾನೂನು ಭಾರತದಲ್ಲೂ ಇತ್ತು. ಆದರೆ ಆ ಕಾನೂನಿನ ಉಲ್ಂಘನೆಗೆ ಸಂಬಂಧಿಸಿದ ವಿಚಾರಣೆ ನಡೆದಾಗ ಅದರಲ್ಲಿ ನೈತಿಕ ಪ್ರಜ್ಞೆಯ ಪಾಲು ಎಷ್ಟು ಎಂಬುದೂ ಪರಿಗಣಿಸಲ್ಪಡಲು ಅವಕಾಶ ಇತ್ತು. ಇದಕ್ಕೆ ಇತಿಹಾಸ,ಪುರಾಣ ಮತ್ತು ಶಾಸ್ತ್ರಗಳ ಆಧಾರ ಪಡೆದು ಒಂದು ಅಪರಾಧವನ್ನು ಕಾನೂನಿನ letters of the law ಮೂಲಕ ನೋಡದೆ spirit of the law ಮೂಲಕ ಇತ್ಯರ್ಥ ಮಾಡುವ ಪರಿಪಾಠ ಇತ್ತು. ಇದು ಭಾರತೀಯ ಧರ್ಮದ ಸಮಷ್ಟಿ ಪ್ರಜ್ಞೆಯ ಮೂಲಕ ಜೀವನ ನಡೆಸುವ ಪರಿಕಲ್ಪನೆಗೆ ಅನುಸಾರವಾಗಿಯೇ ಇತ್ತು.

                  ಇದಕ್ಕೆ ಪ್ರತಿರಿಕ್ತವಾದ ಜೀವನ ವಿಧಾನ ಪಶ್ಚಿಮದ್ದು. ಇಲ್ಲಿ ಕಾನೂನು ಇದೆ.ಅನುಷ್ಠಾನವೂ ಇದೆ.ಆದರೆ ಕಾನೂನು ಪಾಲನೆ ಅಥವಾ ಅದರ ಉಲ್ಲಂಘನೆ ಹೋದಲ್ಲಿ ನೈತಿಕ ಮೌಲ್ಯದ ಪರಿಗಣನೆ ಇಲ್ಲ.ೆಲ್ವನ್ನೂ ಪ್ರತ್ಯೇಕವಾಗಿ ನೋಡುವ ಮನೋಭಾವ ಇವರದ್ದು. ಪೌರಾತ್ಯ ಚಿಂತನೆಗೆ ಇದು ಬಹುತೇಕ ವಿರುದ್ಧವಾದ ಜೀವನ ವಿಧಾನ. ವಿಜ್ಞಾನವನ್ನು ಸಹಾ ಬಿಡಿ ಬಿಡಿಯಾಗಿ ಅಧ್ಯಯನ ಮಾಡಿದ ಸಮಾಜ ಇದು.
                  ಉದಾಹರಣೆಗಾಗಿ ಆಯುರ್ವೇದ ಮತ್ತು ಅಲೋಪಥಿಯನ್ನು ಹೋಲಿಸಬಹುದು.

                  ನಮ್ಮ ವೈದ್ಯ ಪದ್ಧತಿಯಲ್ಲಿ ಕಾಯಿಲೆಯನ್ನು ಒಟ್ಟು ದೇಹದ ಒಂದರೆ ಎಂದು ಪರಿಗಣಿಸಿದರೆ,ಅಲೋಪತಿಯಲ್ಲಿ ಅದನ್ನು ಬಿಡಿ ಬಿಡಿಯಾಗಿ ವಿಶ್ಲೇಷಿಸಿ treatment ಕೊಡುವುದು. ಇಲ್ಲಿ ಶೀಷ್ರವಾಗಿ ಪರಿಣಾಮಗಳನ್ನು ನೋಡಲು ಸಾಧ್ಯ.

                  ಹಾಗೆಯೇ ಕಾನೂನು ಮತ್ತು ನೈತಿಕತೆಯನ್ನು ಪ್ರತ್ೇಕಿಸಿದ ಇವರ ಪರಿಕಲ್ಪನೆಗಳನ್ನು ನಮ್ಮ ಸಮಾಜವನ್ನು ಈ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಸಜ್ಜುಗೊಳಿಸದೆ ವಿವೇಚನಾರಹಿತವಾಗಿ ಅಳವಡಿಸಿಕೊಂಡದ್ದು ವಿರೋಧಾಭಾಸಗಳಿಗೆ ಕಾರಣವಾಗಿರಬಹುದು.
                  ರಾವಣನನ್ನು ರಾಮ ಕೊಂದದ್ದನ್ನು ಸಮಗ್ರವಾಗಿ ಪರಿಗಣಿಸಿದರೆ ಅದೊಂದು ಧರ್ಮಕಾರ್ಯ. ಹೆಂಡತಿಯನ್ನು ಹೊತ್ತೊಯ್ದರೆ ಏನಾಯ್ತು, ಕೊಂದದ್ದು ಕೊಲೆಯೇ, ಹಾಗಾಗಿ ನೀನು ಅಪರಾಧಿ ಎಂಬುದು following the letter of the law ಆಗುವ ವಿಪರ್ಯಾಸ,spirit ಇಂದ ಕಳಚಿಕೊಳ್ಳುವುದು ನಮಗೆ ಅರಗುವುದು ಕಷ್ಟ.

                  ಉತ್ತರ
        • ಷಣ್ಮುಖ
          ಆಗಸ್ಟ್ 24 2015

          1. ಪ್ರಾಚೀನ ರೋಮ್ ಗ್ರೀಕ್ ಗಳಲ್ಲಿ ಪ್ರಜಾಪ್ರಭುತ್ವ, ರಿಪಬ್ಲಿಕ್, ರೂಲ್ ಆಫ್ ಲಾ,…. ಇತ್ಯಾಧಿ. ಎಲ್ವೂ ಇತ್ತು ಅನ್ನೋದು ಮತ್ತು ಪುರಾತನ ಭಾರತದಲ್ಲಿ ಇವೆಲ್ವೂ ಇತ್ತು ಅಂತ ಭಾರತೀಯ ರಾಷ್ಟ್ರೀಯವಾದಿ ಚಿಂತಕರು ಹೇಳುವುದು ಎರಡೂ ಒಂದೇ ರೀತಿಯ ‘ಮೌಲ್ಯ’ದವು. ಪ್ರಾಚೀನ ಗ್ರೀಕ್-ರೋಮ್ ಗಳ ಸಮಾಜ ಮತ್ತು ರಾಜಕೀಯದ ಜ್ಞಾನ ಇಂದಿನವರಿಗೆ ಪ್ರಾಪ್ತವಾಗುತ್ತಿರುವುದು ಎನ್ಲೈಟನ್ ಮೆಂಟ್ ಚಿಂತಕರ ವಿವವರಣೆಗಳ ಮೂಲಕ! ರಿಫಾರ್ಮೆಷನ್, ಎನ್ಲೈಟನ್ ಮೆಂಟ್, ಸೆಕಯುಲರೈಸೇಷನ್ ಎಲ್ಲವೂ ಕ್ರೈಸ್ಥಥಿಯಾಲಜಿಯ ಕೂಸುಗಳೇ ಎಂದು ಬಾಲು ಹೀದನ್ ಗ್ರಂಥದಲ್ಲಿ ಆಧಾರ ಸಮೇತ ತೋರಿಸುತ್ತಾರೆ! ಮೊದಲು ಅದನ್ನು ಓದಿ ನಂತರ ನಿಮ್ಮ ತಕರಾರುಗಳನ್ನು ಹೇಳಿ.

          2. ಇಡೀ ಡೆಮಾಕ್ರಸಿಯ ಐಡಿಯಾಗಳು, ಅದರೊಳಗಿರುವ ಸ್ವಾತಂತ್ರ್ಯ ಸಮಾನತೆ , ಉದಾರವಾದ, ಹಕ್ಕುಗಳು, ಇತ್ಯಾಧಿಗಳೆಲ್ಲವೂ ಕ್ರೈಸ್ತ ಥಿಯಾಲಜಿಯ ಅದರಲ್ಲೂ ಪ್ರೊಟೆಸ್ಟಂಟ್ ಕ್ರೈಸ್ತ ಥಿಯಾಲಜಿಯ ವಿಚಾರಗಳ ಸೆಕ್ಯುಲರ್ ರೂಪಗಳೇ! ಕ್ರಿಶ್ಚಿಯಾನಿಟಿಗೆ ಮುಂಚೆ ಡೆಮಾಕ್ರಸಿ ಇತ್ತು ಅಂದ್ರೆ ಏನು ಈ ಐಡಿಯಾಗಳಿದ್ವಾ? ಈ ರೀತಿಯ ರಾಜಕೀಯ ವ್ಯವಸ್ಥೆ ಇತ್ತು ಅಂತಾನಾ? ಚುನಾವಣೆ, ಜನರಸಬೆ, ಜನರು ಸೇರಿ ಕೆಲವು ವಿಚಾರ ಚರ್ಚಿಸುವುದೇ ಪ್ರಜಾಪ್ರಭುತ್ವ ಅಂತ ಅರ್ಥನಾ?

          3. “law” ಗೆ ಪೊಲಿಟಿಕಲ್ ಪವರ್ ಇರಬೇಕಾದದ್ದು ಬಹುಮುಖ್ಯ! ಪೊಲಿಟಿಕಲ್ ಪವರ್ ಅಂದ್ರೆ ಅದು ‘ಸಾವರಿನ್ ಪವರ್’ ಇಡೀ ಸಾವರ್ನಿಟಿ ಕಲ್ಪನೆಯೇ ಕ್ರಿಶ್ಚಿಯನ್ ‘ಸಾವರಿನ್ ಗಾಡ್’ನ ಪವರ್ ಅನ್ನು ಸೆಕ್ಯುಲರೀಕರಿಸಿಕೊಂಡು ಪ್ರಭುತ್ವ ಪಡೆದುಕೊಂಡು ಪ್ರಭುತ್ವವು ‘ಸಾವರಿನ್ ಸ್ಟೇಟ್’ ಆದದ್ದು! ಸಾವರ್ನಿಟಿಯ ಬಗ್ಗೆ ಪೊಲಿಟಿಕಲ್ ಥಿಯರಿಯಲ್ಲಿ ಚರ್ಚೆಯಾಗಲು ಆರಂಭವಾಗಿದ್ದೇ ಯಾವ ಕಾಲಗಟ್ಟದಲ್ಲಿ ಎನ್ನುವುದುನ್ನು ಸ್ವಲ್ಪ ನೋಡಿಕೊಂಡು ಬನ್ನಿ.

          4. ಚರ್ಚು ಮತ್ತು ಪ್ರಭುತ್ವದ ಸಂಘರ್ಷದಲ್ಲಿ ಪ್ರಭುತ್ವ ಕೊನೆಗೆ ಗೆದ್ದಿತು ಅಂತ ಚರಿತ್ರೆಯ ಕಥೆ ಹೇಳತ್ತೆ! ಆದ್ರೆ ವಾಸ್ತವದಲ್ಲಿ ಗೆದ್ದಿದ್ದು ಕೊನೆಗೆ ಚರ್ಚು! ಯಾಕೆಂದರೆ ಸ್ಟೇಟ್ ಚರ್ಚಿನ ಗುಣ, ಸ್ವಭಾವ, ಮತ್ತು ರಚನೆಗಳನ್ನು (ಸಾವರ್ನಿಟಿ, ಲಾ, ಕ್ಲರಿಕಲ್ ಸಿಸ್ಟಂ ಇತ್ಯಾಧಿ) ತನ್ನದಾಗಿಸಿಕೊಳ್ಳುವವರೆಗೂ ಅದು ಚರ್ಚಿನ ವಿರುದ್ದ ಪ್ರಭಾವಿಯಾಗಲೇ ಇಲ್ಲ! ಅಂದರೆ ಹೇಳಬೇಕೆಂದರೆ ಅಲ್ಲಿ ಹಿಂದಿದ್ದ ‘ಪ್ರಭುತ್ವ’ ತನ್ನ ಅಸ್ತಿತ್ವವನ್ನು ಕಳಕೊಂಡು ‘ಚರ್ಚು’ (ಕ್ರಿಶ್ಚಿಯಾನಿಟಿ) ‘ಸೆಕ್ಯುಲರೈಸ್’ ಆಗಿ ಸ್ಟೇಟ್ ನ ಸ್ವರೂಪ ಪಡೆಯಿತು! 16ನೇ ಶತಮಾನದ ನಂತರವೇ ಕ್ರಿಶ್ಚಿಯಾನಿಟಿ ಅಲ್ಲಿಯ ರಾಜಕೀಯ ಮತ್ತು ಸಮಾಜದ ವ್ಯವಸ್ಥೆಯ ರಚನೆಗಳಿಗೆ ಮೂಲಕಾರಣವೇಕಾಯಿತು ಎನ್ನುವುದಕ್ಕೆ ಈ ನೆಲೆಯಲ್ಲಿಯೇ ಉತ್ತರವಿದೆ.

          5. ಕ್ರಿಶ್ಚಿಯಾನಿಟಿ ಹುಟ್ಟಿದ ತಕ್ಷಣ ಯೂರೋಪಲ್ಲಿ ಅದು ವ್ಯಾಪಿಸಲಿಲ್ಲ. ಅದಾಗಿದ್ದು ನಾಲ್ಕನೇ ಶತಮಾನದ ನಂತರ. ಅಲ್ಲಿಂದ ಸಾವಿರ ವರ್ಷಗಳವರೆಗೆ ಯೂರೋಪಿನ ಸಂಸ್ಕೃತಿಯಲ್ಲಿ ನಿಧಾನಕ್ಕೆ ವ್ಯಾಪಿಸುತ್ತಾ ಸಾಗಿತು! ಆಧುನಿಕ ರಾಜಕೀಯ ಸಂಸ್ಥೆಗಳು ಮತ್ತು ಪರಭಾಷೆಗಳ ಹುಟ್ಟಿಗೂ ‘ಪ್ರೊಟೆಸ್ಟಂಟ್’ ಕ್ರಿಶ್ಚಿಯಾನಿಟಿಯ ಹುಟ್ಟಿಗೂ ಸಂಬಂದವಿದೆ. ಇಂದಿನ ಸ್ಟೇಟ್ ಗುಣಗಳ ಪ್ರಾಪ್ತವಾಗಿದ್ದು ಕ್ರಿಶ್ಚಿಯಾನಿಟಿಯಿಂದ ಎಂದಾದರೂ ನಿಜಕ್ಕೂ ಆ ಪ್ರಭಾವೀ ಗುಣ ಪ್ರಾಪ್ತವಾಗಿದ್ದು “ಪ್ರೊಟೆಸ್ಟಂಟ್ ಕ್ರಿಶ್ಚಿಯಾನಿಯಿಂದ” ಅದರಲ್ಲೂ ‘ಲಿಬರಲ್ ಡೆಮಕ್ರಸಿ’ ಎನ್ನುವದೇ ಸೆಕ್ಯುಲರೀಕೃತ ಗೊಂಡಿರುವ ‘ಪ್ರೊಟೆಸ್ಟಂಟ್ ಕ್ರಿಶ್ಚಿಯಾನಿಟಿ’ಯಲ್ಲದೆ ಇನ್ನೇನೂ ಅಲ್ಲ! ಹೀಗಿರುವಾಗ ಪ್ರಾಚೀನ ಭಾರತದಲ್ಲಿ ಮತ್ತು ರೋಮ್ -ಗ್ರೀಕ್ ರಲ್ಲಿ ಪ್ರಜಾಪ್ರಭುತ್ವಗಳನ್ನು ಹುಡುಕುವವರಿಗೆ ‘ಲಿಬರಲ್ ಡೆಮಾಕ್ರಸಿ’ ಅಂದ್ರೇನು ಅನ್ನುವ ಪ್ರಾಥಮಿಕ ಜ್ಞಾನವಿರುವ ಬಗ್ಗೆ ಸಂದೇಹವಿದೆ.

          ಉತ್ತರ
          • ಆಗಸ್ಟ್ 24 2015

            ಸಿಸರೋ ರಿಪಬ್ಲಿಕ್ ಗೋಸ್ಕರವೇ ಆತನ ಜೀವನವನ್ನು ಪಣವಾಗಿಟ್ಟ ಎನ್ನುವದು ಇತಿಹಾಸ. ಸ್ವತಃ ಆತ ಒಬ್ಬ ಲಾಯರ್ ಆಗಿದ್ದ. ಆತನ ಕೃತಿ De Legibus (On the Laws) ಕಾನೂನಿನ ಬಗ್ಗೆ, ರಿಪಬ್ಲಿಕ್ ಬಗ್ಗೆ ಮಾತನಾಡುತ್ತದೆ. ಆತ ಸ್ವತಃ ಹೇಳಿದ ಮಾತು,”We are all servants of the laws in order that we may be free.” ಎನ್ನುವದು ರೂಲ್ ಆಫ್ ಬಗ್ಗೆ ಮಾತನಾಡದೆ ಇನ್ನೇನು ಹೇಳುತ್ತದೆ? ಈ ಪುಸ್ತಕದ ಮೂರನೆ ವಾಲ್ಯೂಮ್ ಜ್ಯೂಡಿಶಿಯರಿ ಸಿಸ್ಟಮ್, ಸೆನೆಟ್, ಮ್ಯಾಜಿಸ್ಟ್ರೇಟ್, ಅಸೆಂಬ್ಲೀಸ್, ವೋಟಿಂಗ್ ಮತ್ತು ಲಾ ಬಗ್ಗೆ ವಿವರವಾಗಿ ಚರ್ಚಿಸುತ್ತದೆ. ಸಿಸರೋ ಬಗ್ಗೆ ಮಾಹಿತಿಗಳು ಕೇವಲ ಎನ್ ಲೈಟ್ಮೆಂಟ್ ಚಿಂತಕರಲ್ಲ, ಆತನೇ ಬರೆದಿರುವ ಪುಸ್ತಕಗಳು, ಹಾಗೂ ಆತನ ಸೆಕ್ರೆಟರಿ ಟೈರೊ ಬರೆದಿಟ್ಟಿದ್ದೆ ಇದೆ. ಸಿಸರೋ ನ ಕಾಲದಲ್ಲಿ ಲಾ ಗೆ ಪಾಲಿಟಿಕಲ್ ಪವರ್ ಇತ್ತು. ಈ ಬಗ್ಗೆ ಆತನ ಜೀವನ ಚರಿತ್ರೆಯೆ ಹೇಳುತ್ತದೆ(ಎನ್ ಲೈಟ್ಮೆಂಟ್ ಚಿಂತಕರು ಬರೆದಿದ್ದಲ್ಲ ಆತನ ಸೆಕ್ರೆಟರಿ ಬರೆದಿದ್ದು). ಆತನ ಕಾಲದಲ್ಲಿದ್ದ ರಿಪಬ್ಲಿಕ್, ರೂಲ್ ಆಫ್ ಲಾ ದ ಸ್ವರೂಪ ಮಾಡರ್ನ್ ಟೈಮ್ ಕಿಂತ ಭಿನ್ನವಾಗಿರಬಹುದು, ಅಥವಾ ಅದು ಪ್ರೋಟೊ ಸ್ಟೇಜ್ ನಲ್ಲಿಯೂ ಇದ್ದಿರಬಹುದಾದ್ದು ಸಹಜವೇ. ಆ ಬದಲಾವಣೆ ಇಂದೂ ಇದೆ. ಈ ಕಾರಣಕ್ಕಾಗಿ, ಮಧ್ಯಯುಗದಲ್ಲಿ ಮೂಡಿಬಂದ ರಾಜಕೀಯ ವ್ಯವಸ್ಥೆಗೂ, ಪಾಶ್ಚಾತ್ಯ ಪ್ರಿ-ಕ್ರಿಶ್ಚಿಯನ್ ರಾಜಕೀಯ ವ್ಯವಸ್ಥೆಗೂ ಸಂಬಂಧವೇ ಇಲ್ಲವೆನ್ನುವದು ಹೇಗಿದೆಯೆಂದರೆ, ರಾಕೆಟ್ ಗೂ ನ್ಯೂಟನ್ ನ ೩ ನೆಯ ನಿಯಮಕ್ಕೂ ಯಾವುದೇ ಸಂಬಂಧ ಇಲ್ಲ ಎಂದಂತಾಗುತ್ತದೆ. ಕ್ಯಾಥೊಲಿಕ್ ಚರ್ಚ್ ಹಾಗೂ ಪ್ರಾಟೆಸ್ಟಂತರ ಸಂಘರ್ಷದಿಂದ ಮಧ್ಯಯುಗದಲ್ಲಿ ಸಾಮಾಜಿಕ/ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಹುಟ್ಟಿಕೊಂಡಿದ್ದು ನಿಜ. ಹಾಗೆಯೇ ಪ್ರಪಂಚದಲ್ಲೆಲ್ಲೆಡೆ ಪಸರಿಸಿಕೊಂಡಿದ್ದಕ್ಕೆ ಕಾರಣ ಈ ಸಂಘರ್ಷ ಹಾಗು ಸೆಕ್ಯುಲರ್ ಚಿಂತನೆ ಎನ್ನುವದು ಅಷ್ಟೇ ನಿಜ. ಆದರೆ ರೂಲ್ ಆಫ್ ಲಾ ಎಂಬ ಕಾನ್ಸೆಪ್ಟ್ ಬಂದಿದ್ದೆ ಚರ್ಚ್ ನಿಂದ, ಅದಕ್ಕೂ ಮುನ್ನ ಇರಲಿಲ್ಲ ಎನ್ನುವದು ಐತಿಹಾಸಿಕವಾಗಿ ಸುಳ್ಳು. ಈ ಬಗ್ಗೆ ನನ್ನ ಪ್ರಶ್ನೆ ಏನೆಂದರೆ ಚರ್ಚ್ ತನ್ನ ಸಿಸ್ಟಮ್ ನಲ್ಲಿ ರೂಢಿಸಿಕೊಂಡ ಮಾದರಿ ಇಂಡಿಪೆಂಡೆಂಟ್ ಆಗಿತ್ತೆ? ಅಂದರೆ ಚರ್ಚ್ ಅಸ್ತಿತ್ವಕ್ಕೆ ಬಂದಾಗ ಅಥವಾ ಪ್ರವರ್ಧಮಾನಕ್ಕೆ ಬಂದಾಗ ಅಲ್ಲಿನ ಸಿಸ್ಟಮ್ ಅನ್ನು ರೂಪಿಸಿಕೊಂಡಾಗ ಸಂಪೂರ್ಣ ಹೊಸ ಮಾದರಿಯನ್ನು(ಇಂಡಿಪೆಂಡೆಂಟ್) ಹುಟ್ಟುಹಾಕಿತೆ? ಹಾಗಿದ್ದರೆ ಅದರ ಕರ್ತ ಯಾರು?
            ಹಾಗೆಯೇ ಬಾಲಗಂಗಾಧರರ ಥಿಯರಿಯ ಬಗ್ಗೆ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಿದ್ದೇನೆ. ಮತ್ತೊಮ್ಮೆ ಇಲ್ಲಿ ಬರೆಯುತ್ತಿದ್ದೇನೆ:
            ‘ಬಾಲಗಂಗಾಧರರು ಪಾಶ್ಚಿಮಾತ್ಯ ಸಮಾಜದ ವಿವರಣೆಯನ್ನು ಕೊಡುವಾಗ, ಶಬ್ದದ ಕ್ರೈಸ್ತ ಥಿಯಾಲಜಿಯ ಅರ್ಥವನ್ನು ವಿವರಿಸಿ ನಂತರ ಆ ಅರ್ಥದಂತೆ ಅಲ್ಲಿನ ಸಮಾಜದ ವಿವರಣೆಯನ್ನು ನೀಡುತ್ತಾರೆ. ಆದರೆ ಆ ಶಬ್ದದ ಅರ್ಥ ಇಡಿ ಸಮಾಜವನ್ನು ಎಲ್ಲಾ ಕಾಲದಲ್ಲೂ ಪ್ರತಿನಿಧಿಸುತ್ತದೆ ಎನ್ನುವದಕ್ಕೆ ಯಾವ ವೈಜ್ಞಾನಿಕ ಕಾರಣಗಳಿವೆ? ನೀವು ಪಾಶ್ಚಿಮಾತ್ಯನ ಬಳಿ ‘ನೀವ್ಯಾಕೆ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೀರಾ’ ಎಂದು ಕೇಳಿದರೆ, ಆತ ಕ್ರೈಸ್ತ ಥಿಯಾಲಜಿಯ ಬೈಬಲ್ ಅರ್ಥವನ್ನು ನೀಡಿ ಇದೆ ಅದಕ್ಕೆ ಕಾರಣ ಎಂದು ಹೇಳುತ್ತಾನಾ? ಕರಪ್ಶನ್ ಏನು ಅಂತ ಕೇಳಿದರೆ ಆತ ಪ್ರಚಲಿತದಲ್ಲಿ ಉಪಯೋಗಿಸುವ ಅರ್ಥವನ್ನು ಹೇಳದೇ ಹೊರತು ಬೈಬಲ್ ನಲ್ಲಿನ ಅರ್ಥದ ಕಂಠಪಾಠ ಒಪ್ಪಿಸುತ್ತಾನಾ?’

            ಉತ್ತರ
            • ಷಣ್ಮುಖ
              ಆಗಸ್ಟ್ 24 2015

              religion (religio) ಅನ್ನೋ ಶಬ್ದವೂ ಕ್ರಿಶ್ಚಿಯಾನಿಟಿಗಿಂತ ಮುಂಚೆನೇ ಇತ್ತು ಹಾಗಾಗಿ ರಿಲಿಜನ್ನು ಕೂಡ ಪ್ರಿ ಕ್ರಿಶ್ಚಿಯನ್/ಪ್ರಿಜುಡಾಯಿಕ್ ಅಂತನೂ ನೀವು ವಾದಿಸಬಹುದು. ಒಂದು ಶಬ್ದ ಯಾವ ಸಂಗತಿಯನ್ನು ಸೂಚಿಸುತ್ತದ್ದೆ ಅನ್ನೋದು ಮುಖ್ಯ! ಇರಲಿ legum ಅನ್ನೋ ಶಬ್ದವನ್ನು (ಕೆಲವೊಮ್ಮೆ ius ಅನ್ನೂ ಸಹ) ಲಾ ಅಂಥ ಭಾಷಾಂತರ ಮಾಡಿಕೊಂಡ ರೂಲ್ ಆಫ್ ಲಾ ರೂಮ್ಮನ್ನಿರಿಂದಲೂ ಇತ್ತೆಂದು ಕಟ್ಟಿಕೊಳ್ಳಲು ಆರಂಭಿಸಿದವರು ಹದಿನೇಳನೇ ಶತಮಾನದ ಇಂಗ್ಲೀಷ್ ಚಿಂತಕರು. ಈ ಅರ್ಥದಲ್ಲಿ ರೋಮನ್ನರ ಕಾಲದಲ್ಲೇಕೆ ಅರಿಸ್ಟಾಟಲನ ಕಾಲದಲ್ಲೂ Law ದ ಬಗ್ಗೆ ಮಾತನಾಡಲಾಗಿದೆ, ಅಂಥನೂ ವಾದಿಸುತ್ತಾ ಬರಲಾಗಿದೆ. (ಆರ್ಯನ್-ದ್ರಾವಿಡ ಸಿದ್ದಾಂತಗಳನ್ನು ಪಚುರಪಡಿಸಲು ಸಂಸ್ಕೃತ ಶಬ್ದಗಳಿಗೂ ಲ್ಯಾಟೀನ್ ಮತ್ತಿರರ ಭಾಷೆಗಳ ಶಬ್ದಗಳ ಸಮೀಕರಣವಿಟ್ಟುಕೊಂಡು ಇದೇ ಆಟವನ್ನು ಆಡಲಾಗಿತ್ತು) ಶಬ್ದಗಳ ಸಮೀಕರಣದ ಮೂಲಕ ಅದೇ ಇಂದಿನ ‘ರೂಲ್ ಆಫ್ ಲಾ’ ಕೂಡ ಅನ್ನೋದು ಸಿದ್ದಾಂತವಾಗಿಬಿಡುವುದಿಲ್ಲ. ಇಡೀ ಹೀದನ್ ಪುಸ್ತಕದಲ್ಲಿ ಬಾಲು ಚರ್ಚಿಸುವುದೇ ಈ ರೀತಿಯ ಪ್ರಿಕ್ರಶ್ಚಿಯನ್ ವಿಚಾರ ಮತ್ತು ಸಂಗತಿಗಳನ್ನು ಕ್ರಿಶ್ಚಿಯಾನಿಟಿಯು ತನ್ನೊಳಗೆ ಸೇರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಹೇಗೆ ಅವುಗಳಿಗೆ ತನ್ನ ಗುಣಗಳನ್ನು ಸೇರಿಸಿಕೊಂಡು ಹೇಗೆ ಪರಿವರ್ತನೆ ಮಾಡುತ್ತಾ ಹೋಯಿತು ಎನ್ನುವುದೇ ಆಗಿದೆ. ಮೊದಲು ‘ಹೀದನ್…’ ಓದಿ.

              ಉತ್ತರ
              • ಷಣ್ಮುಖ
                ಆಗಸ್ಟ್ 24 2015

                ರಿಲಿಜನ್ನು (ಪಶ್ಚಿಮದಲ್ಲಿ ಕ್ರಿಶ್ಚಿಯಾನಿಟಿ) ಒಂದು ನಿರ್ಧಿಷ್ಟ ಲೋಕಗ್ರಹಿಕೆಯನ್ನು ಹೊಂದಿದೆ. ಅದರ ಸಂಪರ್ಕಕ್ಕೆ ಬರುವ ಎಲ್ಲಾ ವಿಚಾರ, ಸಂಗತಿ, ಸಮುದಾಯಗಳನ್ನು ಅದೇ ಲೋಕಗ್ರಹಿಕೆಯ ಒಳಗೆ ಪರಿವರ್ತಿಸಿಕೊಳ್ಳುತ್ತ ಅರ್ಥೈಸಿ ಪ್ರಚುರಪಡಿಸುತ್ತದೆ. ಗ್ರೀಕ್ -ರೋಮ್ ನ ವಿಚಾರಗಳ ಬಗ್ಗೆ ಎನ್ಲೈಟನ್ ಮೆಂಟ್ ಚಿಂತಕರು ಮಾಡಿದ್ದು ಅದನ್ನೇ! ನೀವು ಸಿಸಿರೋ ವಿಚಾರಗಳೆಂದು ಗ್ರಹಿಸುತ್ತಿರುವುದು ಈ ಇಂಗ್ಲಿಷ್ ಚಿಂತಕರು ಗ್ರಹಿಸಕೊಟ್ಟ ‘law’ಅನ್ನು. ಅವರಿಗೆ ಹಾಗೆ ಗ್ರಹಿಸಿಕೊಟ್ಟಿದ್ದು (ಸೆಕ್ಯಲರೀಕೃತ ಕ್ರಿಶ್ಚಿಯನ್) ಲೋಕಧೃಷ್ಟಿ, ಅಷ್ಟೆ!

                ಇನ್ನೂ ಕ್ರಿಶ್ಚಿಯನ್ ಅಂತ ಒಂದು ಪಶ್ಚಿಮದ ಸಂಸ್ಕೃತಿ/ಚೌಕಟ್ಟು ಹೇಗೆ ಸಾಧ್ಯ? ಭಾರತ ಅಂತ ಒಂದು ಸಾಂಸ್ಕೃತಿಕ ಚೌಕಟ್ಟು ಹೇಗೆ ಸಾಧ್ಯ? ಎನ್ನುವುದು …. ಉಫ್ ಇದು ಪೋಸ್ಟ್ ಕಲೋನಿಯಲ್/ಮಾಡ್ರನ್ ಜಾರ್ಗನ್ ಗಳಿಂದ ಹುಟ್ಟುವ ಪ್ರಶ್ನೆ! ಈ ರೀತಿಯ ನಿಲುವುಗಳು ಕೊನೆಗೆ ಎಲ್ಲಿಗೆ ಬಂದು ನಿಲ್ಲುತ್ತವೆ ಅಂದರೆ ಇಬ್ಬರು ವ್ಯಕ್ತಿಗಳು ಒಂದೇ ರೀತಿಯಲ್ಲಿ ಯೋಚಿಸುತ್ತಾರೆ ಎಂದು ಹೇಗೆ ಹೇಳಲು ಸಾಧ್ಯ? ಇನ್ನೂ ಮುಂದೆ ಹೋಗಿ ಒಬ್ಬ ವ್ಯಕ್ತಿ ಎಲ್ಲಾ ಕಾಲಕ್ಕೂ ಒಂದೇ ರೀತಿಯಲ್ಲಿ ಯೋಚಿಸುತ್ತಾನೆ ಎಂದು ಹೇಗೆ ಹೇಳಲು ಸಾಧ್ಯ? ಎನ್ನುವ ಮಟ್ಟಕ್ಕೆ ಹೋಗಿ ಕೊನೆಗೆ ಸಮಾಜದ ಬಗ್ಗೆ ಜ್ಞಾನವೇ ಸಾಧ್ಯವಿಲ್ಲ ಎನ್ನುವ ಮಟ್ಟದ ಕ್ಲೀಷೆಗೆ ಹೋಗಿ ನಿಲ್ಲುತ್ತದೆ. ನೈಸರ್ಗಿಕ ಜಗತ್ತು ನಿರಂತರ ಬದಲಾಗುತ್ತಲೇ ಇರುವುದು ನೈಸರ್ಗಿಕ ವಿಜ್ಞಾನ ಬೆಳೆಸಲು ಎಂದೂ ಸಮಸ್ಯೆಯಾಗಲಿಲ್ಲ. ಹೇಳಬೇಕೆಂದರೆ ಸಿದ್ದಾಂತ/ಜ್ಞಾನ ಬೇಕಾಗುವುದು ಜಗತ್ತು (ಸಮಾಜ/ನಿಸರ್ಗ) ನಿರಂತರವಾಗಿ ಬದಲಾಗುತ್ತಿರುವುದರಿಂದ ಅಥವಾ ಒಂದೇ ರೀತಿಯಲ್ಲಿ ಕಾಣದೇ ಇರುವುದರಿಂದಲೇ!! ಜ್ಞಾನ ಕಟ್ಟುವ ಅಗತ್ಯವೇ ಈ ಕಾರಣಕ್ಕೆ!

                ಭಿನ್ನತೆಗಳು ಮತ್ತು ವೈವಿದ್ಯತೆಗಳು ವರ್ಗೀಕರಣಕ್ಕೆ ತೊಡಕಲ್ಲ. ಅನಿವಾರ್ಯ ಅಗತ್ಯ. ಸಸ್ತನಿ ಅಂತ ಒಂದು ವರ್ಗೀಕರಣ ಮಾಡಿದ ತಕ್ಷಣ ಸಸ್ಥನಿಯೊಳಗಿನ ಭಿನ್ನತೆಗಳನ್ನು ಅಲ್ಲಗೆಳೆಯುವ ಇಲ್ಲವೇ ತೊಡೆದು ಹಾಕಿದಂತಲ್ಲ! ಬದಲಿಗೆ ಆ ವರ್ಗೀಕರಣಕ್ಕೆ ಇರುವ ವಿವರಣೆ (ಥಿಯರಿ) ಅವೇಕೆ ಸಸ್ಥನಿಗಳು ಮತ್ತು ಅವುಗಳೊಳಗೆ ಇರುವ ಭಿನ್ನತೆಗಳನ್ನೂ ವಿವರಿಸಲು ಶಕ್ತವಾಗಿರಬೇಕು! ಹಾಗಾಗಿ ಸಸ್ಥನಿಯ ವರ್ಗೀಕರಣದ ಬಗ್ಗೆ (ಅಷ್ಟು ಒಳಭಿನ್ನತೆಗಳು ಇರುವಾಗ ಹೇಗೆ ಅವೆಲ್ಲಾ ಒಂದು ಎಂದು ಹೇಳಲು ಹೇಗೆ ಸಾಧ್ಯ?ಎಂದು) ಪ್ರಶ್ನೆ ಎತ್ತುವ ಮುನ್ನ ಸಸ್ಥನಿ ವರ್ಗೀಕರಣ ಹಿಂದಿನ ಥಿಯರಿಯನ್ನು ಮೊದಲು ಓದಿ ಆ ಥಿಯರಿಯನ್ನು ಮೊದಲು ಮುರಿದು ನಂತರ ವರ್ಗೀರಣವನ್ನು ಅಲ್ಲಗಳೆಯಬೇಕು. ನೀವು ಮೊದಲು ಅದನ್ನು ಮಾಡಿ ಹಾಗಾಗಿ ಈ ವಿವರಣೆಯ (ರೂಲ್ ಆಫ್ ಲಾ ಬಗ್ಗೆ) ನ್ನು ಅಲ್ಲಗಳೆಯಲು ಅದರ ಹಿಂದಿರುವ ಥಿಯರಿಯನ್ನು ಮುರಿಯಿರಿ ಅದಕ್ಕೆ ಮೊದಲು ಆ ಥಿಯರಿಯನ್ನು ಓದಿ. ಸೋ “ಹೀದನ್ ಓದಿ…. 🙂 )

                ಉತ್ತರ
                • ಷಣ್ಮುಖ
                  ಆಗಸ್ಟ್ 24 2015

                  ‘ನೀವ್ಯಾಕೆ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೀರಾ’ ಒಮ್ಮೆ ನೀವು ಪಶ್ಚಿಮದವನನ್ನು ಕೇಳಿ ನೋಡಿ! ನಿಮ್ಮನ್ನು ಮೇಲಿನಿಂದ ಕೆಳಗಿನವರೆಗೂ ಅನ್ಯಗ್ರಹ ಜೀವಿಯಂತೆಯೇ ನೋಡುತ್ತಾನೆ! ಅವನ ಲೋಕಗ್ರಹಿಕೆಯಲ್ಲಿ ಈ ಪ್ರಶ್ನೆಯೇ ಹಾಸ್ಯಾಸ್ಪದ! ಅವನಿಗೆ ಕಾನೂನ್ನು ಪಾಲಿಸುವುದು ಓರ್ವ ನಾಗರೀಕನ ಸಹಜಗುಣ! ಪಾಲಿಸದಿರುವುದೇ ಅಸಹಜ! (ನಮ್ಮಲ್ಲಿ ತದ್ವಿರುದ್ದ ಎಂಬಂತಾಗಿದೆ 🙂 ) ಅದನ್ನು ಆತನಿಗೆ ಸಹಜಗುಣನ್ನಾಗಿಸಿದ್ದು ಯಾವುದ ಅಲ್ಲಿಯ ಸಂಸ್ಕತಿ! ಆ ರೀತಿಯ ಲೋಕಗ್ರಹಿಕೆಯ ಸಂಸ್ಕತಿಯನ್ನು ಅಲ್ಲಿ ಕಟ್ಟಿ ಬೆಳೆಸಿದ್ದು ಯಾವುದು? ಕ್ರಿಶ್ಚಿಯಾನಿಟಿ!
                  ಒಂದು ದಿನದಲ್ಲಿ ಇದ್ದಕ್ಕಿಂತ ಆಗಿಬಿಡ್ತಾ! ಯೂರೋಪಿನಲ್ಲಿ ಎಲ್ರೂ ಕೂಡಲೇ ಒಪ್ಪಿಕೊಂಡ್ರಾ? ಇಲ್ಲ, ಈ ಕೆಲಸ ಸಾವಿರಾರು ವರ್ಷಗಳಿಂದ ನಿಧಾನಕ್ಕೆ ಹರಳು ಕಟ್ಟುತ್ತಾ ವ್ಯಾಪಿಸಿತು! ಎನ್ಲೈಟನ್ ಮೆಂಟಿಗೂ ಮೊದಲು ಮತಾಂತತರದ ಮೂಲಕ, ನಂತರ ಸೆಕ್ಯುಲರೀಕರಣದ ಮೂಲಕ ಲೋಕಗ್ರಹಿಕ ವ್ಯಾಪಿಸಲಾರಂಭಿಸಿತು. ಇಂದು ವಿಶ್ವವನ್ನೇ ವ್ಯಾಪಿಸಿಕೊಳ್ಳುತ್ತಿದೆ! ಪ್ರಜಾಪ್ರಭುತ್ವ ಮತ್ತು ರೂಲ್ ಆಫ್ ಲಾದ ಹೆಸರಲ್ಲಿ!! ಹಾಗೆ ವ್ಯಾಪಿಸುವಾಗ ಅದಕ್ಕೆ ಒಂದು ಅಗತ್ಯವಿದೆ ಅದು ನನ್ನದಲ್ಲ ನಿಮ್ಮಲ್ಲಿ ಹಿಂದಿನಿಂದಲೂ ಇತ್ತು ಆದರೆ ಸರಿ ಇರಲಿಲ್ಲ (ಭ್ರಷ್ಟವಾಗಿತ್ತು) ಎಂದು ನಂಬಿಸಬೇಕು. ಅದಕ್ಕೆ ಗ್ರೀಕ್ ರೋಮ್ ನಲ್ಲೂ ಅದಿತ್ತು (ಜೆಸ್ ಜೆಟಿಯಮ್, ಜಸ್ ಸಿವಿಲೆ, ಜಸ್ ನ್ಯಾಚುರೆ ಇತ್ಯಾಧಿ) ಪ್ರಾಚೀನ ಭಾರತದಲ್ಲೂ ಇತ್ತು (ಪುರುಷ ಸೂಕ್ತ, ಮನುಧರ್ಮಶಾಸ್ತ್ರ ಇತ್ಯಾಧಿ ಧರ್ಮಶಾಸ್ತ್ರಗಳು). ಆದ್ರೆಅವು ಅಮಾನವೀಯವಾಗಿತ್ತು ಎಂದು ತೋರಿಸಿಯೇ ಮಾನವೀಯ ರೂಲ್ ಆಫ್ ಲಾ ಗಾಗಿ ತನ್ನನ್ನು (ಲಿಬರಲ್ ಡಮಾಕ್ರಸಿ/ಪ್ರೊಟೆಸ್ಟಂಟ್ ಕ್ರಿಶ್ಚಿಯಾನಿಟಿಯನ್ನು) ಒಪ್ಪಿಸುತ್ತಿದೆ. ಸೆಕ್ಯಲರ್ ಕ್ರಿಶ್ಚಿಯನ್ನರು ಅದನ್ನು ಕೊಂಡಾಡುವರು! ತಾವು ಕ್ರಿಶ್ಚಿಯನ್ನರಾಗಿದ್ದೇವೆ ಅನ್ನೋದನ್ನು ಮರೆತು! ಪಾಪ ಜನಸಮುದಾಯಗಳಿಗೆ ಇದರ ತಲೆಬುಡ ಅರ್ಥವಾಗದೆ ಕಾನೂನಪಾಲಿಸದ ದಡ್ಡರು, ಅನೈತಿಕರೂ ನಾಗರೀಕ ಪ್ರಜ್ಞೆ ಇಲ್ಲದ ಮೂರ್ಖರಾಗಿ ಪರಿವರ್ತಿರಾಗುತ್ತಿರುತ್ತಾರೆ, ಅಷ್ಟೆ!

                  ಉತ್ತರ
                  • ಆಗಸ್ಟ್ 24 2015

                    “legum ಅನ್ನೋ ಶಬ್ದವನ್ನು (ಕೆಲವೊಮ್ಮೆ ius ಅನ್ನೂ ಸಹ) ಲಾ ಅಂಥ ಭಾಷಾಂತರ ಮಾಡಿಕೊಂಡ ರೂಲ್ ಆಫ್ ಲಾ ರೂಮ್ಮನ್ನಿರಿಂದಲೂ ಇತ್ತೆಂದು ಕಟ್ಟಿಕೊಳ್ಳಲು ಆರಂಭಿಸಿದವರು ಹದಿನೇಳನೇ ಶತಮಾನದ ಇಂಗ್ಲೀಷ್ ಚಿಂತಕರು”

                    ಕ್ಷಮಿಸಿ ಭಾಷಾಂತರವನ್ನು ನಾನು ಗಣನೆಗೆ ತೆಗೆದುಕೊಂಡಿಲ್ಲ. ತನ್ಮೂಲಕ ರೂಲ್ ಆಫ್ ಲಾ ಇತ್ತೆಂದು ಪ್ರಿ-ಕ್ರಿಶ್ಚಿಯಾನಿಟಿಯಲ್ಲಿ ಇತ್ತೆಂದು ವಾದಿಸುತ್ತಲ್ಲೂ ಇಲ್ಲ. ನಾನು ಹೇಳಿದ ಸಂಗತಿಗಳು ಎನ್ ಲೈಟ್ಮೆಂಟ್ ಚಿಂತಕರಿಂದ ಪಡೆದ ಪಾಠವೂ ಅಲ್ಲ. ಮೊದಲೇ ಹೇಳಿದಂತೆ ಅವು ಸ್ವತಃ ಸಿಸರೋ ಹಾಗೂ ಆತನ ಸೆಕ್ರೆಟರಿ ಬರೆದ ಪುಸ್ತಕಗಳಿಂದ ಆಯ್ದುಕೊಂಡಿದ್ದು. ಸ್ವತಃ ಸಿಸರೋ ತಾನು ಲಾಯರ್ ಆಗಿದ್ದಾಗ patricide ಕೇಸ್ ನ್ನು ನ್ಯಾಯಾಲಯದಲ್ಲಿ ಡಿಫೆಂಡ್ ಮಾಡಿಕೊಂಡಿದ್ದು, ‘De Legibus (On the Laws)’ ಪುಸ್ತಕದಲ್ಲಿ ಕಾಣುವದು ಲಾ ಎಂಬ ಶಬ್ದಕ್ಕಿಂತ ಹೆಚ್ಚು ಸಿಗುವದು ರಿಪಬ್ಲಿಕ್ ವ್ಯವಸ್ಥೆಯ ಪ್ರೋಟೊ. ನಂತರ ಬಂದ ಚರ್ಚ್ ಆಡಳಿತ ವ್ಯವಸ್ಥೆಯು ರೋಮನ್ ರಿಪಬ್ಲಿಕ್ ವ್ಯವಸ್ಥೆಯ ಮೇಲೆ ಸ್ವಲ್ಪವೂ ಆಧಾರಿತವಾಗಿರದಿದ್ದರೆ ಅದಕ್ಕೆ ಆಧಾರಗಳು ಬೇಕು. ಚರ್ಚ್ ವ್ಯವಸ್ಥೆಯ ‘ರೂಲ್ ಆಫ್ ಲಾ’ ದ ಯಾವ ಗುಣಲಕ್ಷಣಗಳು ರೋಮನ್ ರಿಪಬ್ಲಿಕ್ ನಲ್ಲಿ ಕಾಣಸಿಗುವದಿಲ್ಲ? ಅಥವಾ ಸಿಸರೋ ಹೇಳಿದ ರಿಪಬ್ಲಿಕ್, ರೂಲ್ ಆಫ್ ಲಾ ಫಿಲಾಸಫಿಕಲಿ ಯಾವ ರೀತಿ ಭಿನ್ನವಾಗಿದೆ?ಅದರ ಲಕ್ಷಣಗಳೇನು? ಚಾರ್ಲ್ಸ್ ಬಾಬೇಜ್ ಕಂಡುಹಿಡಿದ ಕಂಪ್ಯೂಟರಿಗೂ ಈಗಿನ ಕಂಪ್ಯೂಟರಿಗೂ ಅಜಗಜಾಂತರ ವ್ಯತ್ಯಾಸ ಇದೆ ನಿಜ. ಆ ಕಾರಣಕ್ಕಾಗಿ ‘ಚಾರ್ಲ್ಸ್ ಬಾಬೇಜನ’ ಕಂಪ್ಯುಟರ್ ನ ರಚನೆಗೂ ಇಂದಿನ ಕಂಪ್ಯೂಟರಿನ ರಚನೆಗೂ ಸಂಬಂಧವಿಲ್ಲ, ಕಂಪ್ಯೂಟರಿನ ಕ್ರಾಂತಿ ಆದದ್ದು ಪೆಂಟಿಯಮ್ ಹಾಗೂ ಎಎಂಡಿ ಕಂಪನಿಗಳಿಂದಾಗಿ ಆಯಿತು ಎನ್ನಲಾಗದು.

                    ” ಆ ರೀತಿಯ ಲೋಕಗ್ರಹಿಕೆಯ ಸಂಸ್ಕತಿಯನ್ನು ಅಲ್ಲಿ ಕಟ್ಟಿ ಬೆಳೆಸಿದ್ದು ಯಾವುದು? ಕ್ರಿಶ್ಚಿಯಾನಿಟಿ!”
                    ಅಂತಹ ಒಂದು ರಿಲಿಜಿಯಸ್ ಕಾನ್ಸಿಯಸ್ ನೆಸ್ ನಿಂದ ಹುಟ್ಟಿದ ಗ್ರಹಿಕೆ ಶತಮಾನದ ವರೆಗೆ ಮನುಷ್ಯನ ಆಫ್ ಸ್ಪ್ರಿಂಗ್ ಉಳಿಸಿಕೊಳ್ಳುತ್ತದೆ ಎನ್ನುವದಕ್ಕೆ ವೈಜ್ಞಾನಿಕ ಆಧಾರ ಯಾವುದು? ಅಂದರೆ ಒಬ್ಬ ಇಂದಿನ ಮನುಷ್ಯನ ಮುತ್ತಜ್ಜನ ಅಜ್ಜ ರಿಲಿಜಿಯಸ್ ಕಾನ್ಸಿಯಸ್ ನೆಸ್ ನಿಂದ ಕಾನೂನನ್ನು ಪಾಲಿಸಿದ ಅಂತಾದರೆ ಆ ಗ್ರಹಿಕೆ ಇಂದಿನ ತಲೆಮಾರಿನ ಈ ಮನುಷ್ಯನಿಗೆ (ಈತ ರಿಲಿಜಿಯಸ್ ಅಲ್ಲದಿದ್ದರೂ) ರವಾನೆಯಾಗುತ್ತದೆ ಎನ್ನುವದನ್ನು ವಿಜ್ಞಾನ ವಿವರಿಸುತ್ತದೆಯೇ? ಪಾಶ್ಚಾತ್ಯರೆಲ್ಲ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎನ್ನುವದು ಸ್ಟೀರಿಯೋ ಟೈಪ್ ಕೂಡ ಆಗಿದ್ದಿರಬಹುದು. ಕ್ರಿಶ್ಚಿಯನ್ ಸಮಾಜದಲ್ಲೇ ಕ್ರಿಮಿನಲ್ಸ್ ಗಳು ಸ್ಕ್ಯಾಮ್ ಗಳು ಆಗಿದ್ದು ಬಹಳಷ್ಟಿವೆ. ಫ್ರಾನ್ಸ್ ಸೋಸಿಯಲಿಸ್ಟ್ ದೇಶ ಆಗಿದ್ದಾಗ ಲಾ ಮತ್ತು ಆರ್ಡರ್ ಬಹಳ ನಿಧಾನ ಆಗಿತ್ತು ಎನ್ನುವದನ್ನು ಪಾಶ್ಚಾತ್ಯ ರಾಜಕೀಯ ಬರಹಗಾರರೆ ಅಭಿಪ್ರಾಯ ಪಡುತ್ತಾರೆ. ಯು ಎಸ್ ಎ ಅಂದರೆ ಕಲ್ಚರ್ ಇಲ್ಲದವರು, ಸೋಷಿಯಲಿಸ್ಟ್ ರಷ್ಯಾವನ್ನು ಕ್ರಿಮಿನಲ್ಸ್ ಗಳ ದೇಶವೆಂದು ಬಗೆದ ಪಾಶ್ಚಾತ್ಯ ಬರಹಗಾರರನ್ನು ಓದಿದ್ದೇನೆ(ಇಂತ ಸ್ಟಿರಿಯೋ ಟೈಪುಗಳು ನಿಜವೆಂದು ಹೇಳುತ್ತಿಲ್ಲ, ಆದರೆ ಒಂದು ಯುನಿಫಾರ್ಮ್ ಸಂಸ್ಕೃತಿಯಾಗಿದ್ದರೆ ಇಂತಹ ಸ್ಟೀರಿಯೋಟೈಪುಗಳು ಹುಟ್ಟುತ್ತಿರಲಿಲ್ಲ). ಸೌತ್ ಅಮೇರಿಕಾದಲ್ಲಿ ಗ್ಯಾಂಗ್ ವಾರ್ ನಡೆಯುವದು ಸಾಮಾನ್ಯವಂತೆ. ಆ ದೇಶವೊಂದಕ್ಕೆ ಕೆಲಸ ನಿಮಿತ್ತ ಹೋದ ನನ್ನ ಕಸಿನ್ ಗೆ ಹೊಟೆಲ್ ನವರು ಸಿಂಪಲ್ಲಾಗಿ ಎಚ್ಚರಿಸಿದರಂತೆ, ರಾತ್ರಿ ೯ ರ ನಂತರ ಹೊರಹೋಗಬೇಡಿ ಕಿಡ್ನ್ಯಾಪ್ ಮಾಡುವ ಜನರಿದ್ದಾರೆ ಎಂದು.( ಮಾನವ ಅಂಗಗಳನ್ನು ಮಾರಾಟ ಮಾಡುವ ಮಾಫಿಯಾಗಳು.) ಇಷ್ಟೆಲ್ಲಾ ಡಿಫರೆನ್ಸ್ ಅನ್ನು ಒಂದು ಥಿಯಾಲಜಿಯಿಂದ ಮೂಡಿಬಂದ ಸಮಾಜ ಬಿಚ್ಚಿಟ್ಟುಕೊಳ್ಳುತ್ತಿತ್ತೆ?

                    ಉತ್ತರ
                    • ಷಣ್ಮುಖ
                      ಆಗಸ್ಟ್ 25 2015

                      [ಅವು ಸ್ವತಃ ಸಿಸರೋ ಹಾಗೂ ಆತನ ಸೆಕ್ರೆಟರಿ ಬರೆದ ಪುಸ್ತಕಗಳಿಂದ ಆಯ್ದುಕೊಂಡಿದ್ದು.]
                      ಸ್ವತಃ ಧರ್ಮಶಾಸ್ತ್ರಗಳಲ್ಲಿ ಬರೆಯಲ್ಪಟ್ಟ ಸಾಲುಗಳನ್ನು ಆಯ್ದುಕೊಂಡೇ ಭಾರತೀಯ ಕಾನೂನುಗಳನ್ನು ನಿರೂಪಿಸಿದ್ದು ವಸಾಹತು ಶಾಹಿ so what? ಧರ್ಮಶಾಸ್ತ್ರಗಳಿದ್ದದ್ದು ಕಾನೂನುಗಳೇ ಎಂದು ಸಾಧಿಸಲಾಗುವುದೇ? ಅದಕ್ಕೆ ಹೆಚ್ಚಿನ ಸೈದ್ದಾಂತಿಕ ವಿವರಣೆಗಳ ಅಗತ್ಯವಿಲ್ಲವೇ?

                      [ಚಾರ್ಲ್ಸ್ ಬಾಬೇಜ್ ಕಂಡುಹಿಡಿದ ಕಂಪ್ಯೂಟರಿಗೂ ಈಗಿನ ಕಂಪ್ಯೂಟರಿಗೂ ಅಜಗಜಾಂತರ ವ್ಯತ್ಯಾಸ ಇದೆ ನಿಜ. ಬಾಬೇಜನ’ ಕಂಪ್ಯುಟರ್ ನ ರಚನೆಗೂ ಇಂದಿನ ಕಂಪ್ಯೂಟರಿನ ರಚನೆಗೂ ಸಂಬಂಧವಿಲ್ಲ, ಕಂಪ್ಯೂಟರಿನ ಕ್ರಾಂತಿ ಆದದ್ದು ಪೆಂಟಿಯಮ್ ಹಾಗೂ ಎಎಂಡಿ ಕಂಪನಿಗಳಿಂದಾಗಿ ಆಯಿತು ಎನ್ನಲಾಗದು.]

                      ಇದೇ ತರಹ ಹಿಂದೆಯೂ ನ್ಯೂಟನ್ನನ ಉದಾ. ಕೊಟ್ರಿ ಆದರೆ ಆ ಉಧಾಹರಣೆಳಿಂದ ಹುಟ್ಟುವ ವಾದವನ್ನು ಮರೆತ್ರಿ. exactly ಬಾಬೇಜನ ಕಂಪ್ಯೂಟರಿನ ಮುಂದುವರಿದ ಭಾಗವೇ ಇಂದಿನ ಕಂಪ್ಯೂಟರ್ ಮತ್ತು ನ್ಯೂಟನ್ನಿನ ಮೂರನೇ ನಿಯಮವನ್ನು ಆದರಿಸಿಯೇ ರಾಕೇಟ್ ಉಡಾಯಿಸುವುದು ಎನ್ನುವುದಕ್ಕೆ ಸೈದ್ದಾಂತಿಕ ವಿವರಣೆಗಳು ಇವೆ ಮತ್ತು ಇದನ್ನು (ಅವುಗಳ ಮುಂದುವರಿಕೆ ಅಲ್ಲ ಎಂದು) ಯಾರೂ ತಪ್ಪೆಂದು ಇದುವರೆಗೂ ತೋರಿಸಿಲ್ಲ. ಆದರೆ ಗ್ರೀಕೋ ರೋಮನ್ ಸಮಾಜದ ಸಂಗತಿಗಳಿಗೂ ಪೋಸ್ಟ್ ಕ್ರಿಶ್ಚಿಯನ್ ಕಾಲದ ರಾಜಕೀಯ, ಸಾಮಾಜಿಕ ವ್ಯವಸ್ಥೆ, ಸಂಸ್ಕೃತಿ ಮತ್ತು ಕಾನೂನುಗಳಲ್ಲಿ ಸಂಪೂರ್ಣ ಭಿನ್ನತೆ ಇದೆ ಮತ್ತು ಮುಂದುವರಿಕೆಯಲ್ಲ ಬದಲಾಗಿ ಸಂಪೂರ್ಣ ಸ್ಥಿತ್ಯಂತರ ಎನ್ನುವುದನ್ನೇ ಬಾಲು ‘ಹೀದನ್ ….’ ಪುಸ್ತಕದಲ್ಲಿ ಆಧಾರ ಸಮೇತ ತರ್ಕ ಬದ್ದವಾಗಿ I mean ವೈಜ್ಞಾನಿಕವಾಗಿ ತೋರಿಸಿದ್ದಾರೆ.
                      ಬರೀ ಹೇಳಿಕೆಗಳ ವಾದ ಹೇಗಾಗುವುದಿಲ್ಲವೋ ಹಾಗೆಯೇ ಒಂದು ಹೇಳಿಕೆಯನ್ನು ಪ್ರಶ್ನೆಯಾಗಿಸಿ ತಕ್ಷಣ ಅದು ಪ್ರಶ್ನೆಯೂ ಆಗುವುದಿಲ್ಲ. ಹೇಳಿಕೆಗೆ ಪುರಾವೆ ಮತ್ತು ತರ್ಕಬದ್ದ ವಾದಗಳಿಂದ ಬೆಳೆಸಿದ ಥಿಯರಿಯ ಬೆಂಬಲ ವಿರಬೇಕು. ಅದು ಬಾಲುರ ವಾದಗಳಿಗಿದೆ. ನಿಮ್ಮ ಪ್ರಶ್ನೆಗಳು ಆ ಥಿಯರಿಯನ್ನು ಕೈಬಿಟ್ಟು ಅದರ ವಾದದಿಂದ ಹುಟ್ಟಿದ ಹೇಳಿಕೆಗಳನ್ನು ಪ್ರಶ್ನೆಯಾಗಿ ಪರಿವರ್ತಿಸಿಕೊಂಡು (ಆ ಪ್ರಶ್ನೆಗಳಿಗೆ ಸೈದ್ದಾಂತಿಕ ವಾದದ ಹಿನ್ನೆಲೆ ಇಲ್ಲ ಬದಲಿಗೆ ಅದೇ ತಥಾಕತಿತ ಹಳೆಯ ವಾದಗಳ ಚೌಟ್ಟುಗಳೇ ಆಧಾರ) ಮಾತನಾಡುತ್ತಿದ್ದೀರಿ, ಅಷ್ಟೆ!

                      ರಷ್ಯಾ, ಅಮೇರಿಕ ಮತ್ತಿರ ದೇಶಗಳ ಉಧಾಹರಣೆಗಳನ್ನು ಕೊಟ್ಟರೂ ಅವು ಈ ಥಿಯರಿಯು ವಿವರಿಸದ ಪ್ರತಿ ಉಧಾಹರಣೆಗಳು ಪ್ರತಿಕೂಲ ಸಾಕ್ಷಿಗಳು (Counter evidence) ಎಂದೂ ತೋರಿಸಬೇಕು. ಆಗ ಅದು ಈ ಥಿಯರಿಯ ಅನಾಮಲಿ ಆಗುತ್ತದೆ. ಅದಕ್ಕೆ ಕಾನೂನು ವಿರೋಧಿಸುವ ಅಷ್ಟು ಪ್ರಕರಣಗಳಿದ್ದರೂ ಅವರುಗಳು ಕಾನೂನು ವಿರೋಧಿಸುವುದು ಸಹಜ ಮತ್ತು ಅನೈತಿಕವಲ್ಲ ಎನ್ನುವ ಸಾಂಸ್ಕೃತಿಕ ಭಾವನೆಯನ್ನು ಅವರೆಲ್ಲರೂ ಹಂಚಿಕೊಳ್ಳುವರು ಎನ್ನುವುದನ್ನು ಈ ಉಧಾಹರಣೆಗಳನ್ನು ಆದರಿಸಿ ತರ್ಕಬದ್ದವಾಗಿ ತೋರಿಸಬೇಕು. ಅದೇ ಇಲ್ಲಿ ವಿನಾಯಕ ಹಂಪಿ ಹೊಳಿಯವರ ಲೇಖನದಲ್ಲಿಯೇ ಇಲ್ಲಿಯ ಜನ ಹೇಗೆ ಕಾನೂನಿಗೆ ವಿರುದ್ದ ನಡೆಯುವುದು ಒಂದು ಅನೈತಿಕವಾದ ಕ್ರಿಯೆ ಎನ್ನುವ ಗಿಲ್ಟ್ ಇಲ್ಲದಿರುತ್ತಾರೆ ಎನ್ನುವುದನ್ನು ವಾದಿಸಿದ್ದಾರೆ. ನೀವೂ ಹಾಗೆ ತೋರಿಸಿ ಆಗ ಈ ಥಿಯರಿ ಬಿದ್ದು ಹೋಗುತ್ತದೆ.
                      (ಸ್ಟೀರಿಯೋ ಟೈಪುಗಳು ವೈಯುಕ್ತಿ ಮಟ್ಟದಿಂದ ಜನಾಂಗ, ದೇಶ, ಖಂಡಗಳ ದ ಮಟ್ಟದವರೆಗು ಹುಟ್ಟುತ್ತಿರುತ್ತದೆ, ಮುಖ್ಯವಾಗಿ ಪಶ್ಚಿಮದಲ್ಲಿ. ಇದರ ಬಗ್ಗೆ ಬಾಲುದೇ ವೈಜ್ಞಾನಿಕ ಸಿದ್ದಾಂತವಿದೆ. ಸುಮ್ಮೆನೆ ಸ್ಟೀರಿಯೋ ಟೈಪುಗಳ ಚರ್ಚೆ ಸಧ್ಯಕ್ಕೆ ಇಲ್ಲಿ ಬೇಡ)

                    • ಷಣ್ಮುಖ
                      ಆಗಸ್ಟ್ 25 2015

                      ನೀವು ಮೇಲಿನ ಒಂದು ಪ್ರತಿಕ್ರಿಯೆಯಲ್ಲಿ ಹೀಗೆ ಕೇಳಿದ್ದೀರಿ “ಬ್ರಿಟಿಷರು ಬರುವದಕ್ಕೂ ಮುನ್ನ ರಾಜರ ಆಳ್ವಿಕೆಯಲ್ಲಿ ಕಾನೂನುಗಳು ಇರಲಿಲ್ಲವೇ? ಶಾಸನಗಳು ಜಾರಿಯಲ್ಲಿರಲಿಲ್ಲವೇ? ಹಾಗೂ ಶಾಸನವನ್ನು ಕಾಯ್ದುಕೊಳ್ಳಲು ನ್ಯಾಯಾಂಗ ವ್ಯವಸ್ಥೆ ಇರಲಿಲ್ಲವೇ?”

                      ಇದನ್ನು ಸಾಧಿಸಿ ತೋರಿಸಿದರೆ ಸಾಕು ನಮ್ಮ ವಾದಗಳೆಲ್ಲವೂ ಬಿದ್ದು ಹೋಗುತ್ತದೆ. ನೀವು ಚರಿತ್ರೆಯನ್ನಾದರೂ ಆದರಿಸಿ ಪುರಾಣಗಳನ್ನಾದರೂ ಆದರಿಸಿ ಹಿಂದೆ ನಮ್ಮಲ್ಲಿ ಯಾವ ರಾಜ ಯಾವ ಕಾಲದಲ್ಲಿ ಯಾವ ಕಾನೂನುಗಳನ್ನು/ಶಾಸನಗಳನ್ನು ಮಾಡಿದ? ಅವುಗಳನ್ನು ಮಾಡುವ ಪ್ರಕ್ರಿಯೆಗಳೇನಾಗಿದ್ದವು? ಅವುಗಳನ್ನು ಜಾರಿಗೊಳಿಸುವ ಮೆಕ್ಯಾನಿಸಂಗಳು ಯಾವ ರೀತಿಯಲ್ಲಿದ್ದವು! ಅಂದ್ರೆ ನಮ್ಮಲ್ಲಿ ಹಿಂದಿನ ರಾಜರುಗಳು (ರಾಜಕೀಯ ವ್ಯವಸ್ಥೆಯಲ್ಲಿ ಯಾರಾದರೂ/ಯಾವುದಾದರೂ) ಶಾಸನೀಯ (ಶಾಸನ ರೂಪಿಸವ), ಕಾರ್ಯಾಂಗೀಯ (ಶಾಸನ ಜಾರಿಗೊಳಿಸುವ), ಮತ್ತು ನ್ಯಾಯಾಂಗೀಯ (ಶಾಸನಗಳನ್ನು ಅರ್ಥೈಸಿ ತೀರ್ಪುಕೊಡುವ) ಕಾರ್ಯಗಳು ಮಾಡುತ್ತಿದ್ದರು ಎಂದು ನೀವು ಆಧಾರ ಸಮೇತ ತರ್ಕಬದ್ದ ವಾದಗಳ ಮೂಲಕ ತೋರಿಸಿ. ಆಗ ನಿಮ್ಮ ಮೇಲಿನ ಎಲ್ಲಾ ಸಮಸ್ಯೆಗಳಿಗೂ ಉತ್ತರ ವೆಂದು ನಾ ಭಾವಿಸುವೆನು. ಇದೊಂದಕ್ಕೆ ಮಾತ್ರ ಸೀಮಿತಗೊಳಿಸಿ ಚರ್ಚಿಸುವ

  4. Rajaram Hegde
    ಆಗಸ್ಟ್ 20 2015

    ವಿನಾಯಕ್, ಮತ್ತೊಂದು ಮುಖ್ಯ ವಿಷಯವನ್ನು ನೀವು ಎತ್ತಿದ್ದೀರಾ. ಅದೆಂದರೆ ಭಾರತೀಯರಿಗೆ ಸಿನ್ ಹಾಗೆ ಕ್ರೈಮ್ ಕೂಡ ಗೊತ್ತಿಲ್ಲ, ಅಂತ. ಹಾಗಾಗಿ ಅವರು ಅಪರಾಧಗಳನ್ನು ನೋಡುವ ರೀತಿ ಬೇರೆಯೇ ಆಗಿದೆ ಅಂತ. ಇದು ಅತ್ಯಂತ ಮುಖ್ಯ. ಏಕೆಂದರೆ ಹಾಗಾದ ಪಕ್ಷದಲ್ಲಿ ಭಾರತೀಯರಿಗೆ ಗಿಲ್ಟ್ ಪ್ರಜ್ಞೆ ಇರಲಿಕ್ಕೆ ಸಾಧ್ಯವಿಲ್ಲ. ಗಾಡ್ ನ ಆಜ್ಞೆಯನ್ನು ಧಿಕ್ಕರಿಸಿದಾದ ಗಿಲ್ಟ್ ಹುಟ್ಟುವವರಿಗೆ ಕಾನೂನನ್ನು ಧಿಕ್ಕರಿಸಿದಾಗ ಕೂಡ ಅದು ಹುಟ್ಟುತ್ತದೆ. ಸಿನ್ ಹಾಗೂ ಕ್ರೈಮ್ ಎಂಬುದೇ ಗೊತ್ತಿಲ್ಲದವರಿಗೆ ಗಿಲ್ಟ್ ಭಾವನೆ ಕೂಡ ಹುಟ್ಟಲು ಸಾಧ್ಯವಿಲ್ಲ. ಗಿಲ್ಟ್ ನ್ನು ನಾವು ಅಪರಾಧ ಪ್ರಜ್ಞೆ ಎಂದು ಭಾಷಾಂತರಿಸಿಕೊಂಡಿರುವುದರಿಂದ ಭಾರತೀಯರಿಗೆ ಗಿಲ್ಟ್ ಪ್ರಜ್ಞೆ ಇದೆ ಎಂದು ಭ್ರಮಿಸುತ್ತೇವೆ. ಆದರೆ ಭಾರತೀಯರ ವ್ಯವಹಾರವನ್ನು ನೋಡಿದರೆ ಅದು ಅಸಂಭವನೀಯ. ಈ ಕುರಿತು ಸ್ವಲ್ಪ ಯೋಚಿಸಿ ಏನಾದರೂ ಬರೆಯಿರಿ.

    ಉತ್ತರ
  5. ಅನಾರ್ಸನಿಕ
    ಆಗಸ್ಟ್ 21 2015

    ಬಹಳ ಯೋಚಿಸಬೇಕಾದ ವಿಚಾರ.

    ಬಾಲುರವರಂತೂ ಸಿನ್(ಪಾಪ), ಏಥಿಯಿಸಂ(ನಿರೀಶ್ವರ ವಾದ), ಥಿಯಾಲಜಿ(ಈಶ್ವರವಾದ), ರಿಲಿಜನ್(ಮತಧರ್ಮ) ಇತ್ಯಾದಿಗಳನ್ನು ಬೇಕುಬೇಕಾದಂತೆ ಅನುವಾದಿಸಿದ್ದಗಿರುವುದೇ ಇಂದಿನ ಎಲ್ಲಾ ಸಮಸ್ಯೆಗಳಿಗೂ ಮೂಲ ಅಂತ ಜಗಳದ ಭಂಗಿಯಲ್ಲಿ ನಿಲ್ಲುವವರು.

    ಈ ದಿಕ್ಕಿನಲ್ಲಿ ನಾವು
    “ಪಾಪೋಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪಸಂಭವಃ
    ತ್ರಾಹಿಮಾಂ ಕೃಪಯಾ ದೇವಃ ಸರ್ವ ಪಾಪ ಹರೋ ಭವಃ”
    ಎಂಬಿತ್ಯಾದಿ ಶ್ಲೋಕಗಳು ರಚನೆಯಾದ ಕಾಲ ಮತ್ತು ಹಿನ್ನೆಲೆಗಳೇನು ಅನ್ನುವುದನ್ನು ಚರ್ಚಿಸಬೇಕಿದೆ.

    ಪಾಪ-ಪುಣ್ಯದಂತೆಯೇ ಧರ್ಮ-ಅಧರ್ಮ ಅನ್ನುವುದೂ ಸಹಾ ವೈದಿಕರೂ ಅಲ್ಲದ ಅಕ್ಷರಸ್ತರೂ ಅಲ್ಲದ ಮಂದಿಯ ವಿವೇಚನೆ-ತೀರ್ಮಾನಗಳನ್ನು ನಿಯಂತ್ರಿಸುವುದಾಗಲೀ, ಒಬ್ಬ ಕಳ್ಳ ಒಬ್ಬ ಡಕಾಯಿತ ಒಬ್ಬ ಶುದ್ಧ ವಂಚಕನೂ ತನಗೆ ಅಧರ್ಮ ಅಂತ ಕಂಡಿದ್ದಕ್ಕೆ ನೊಂದುಕೊಳ್ಳುವುದಾಗಲೀ ನಮ್ಮಲ್ಲಿ ಬಹಳ ಮಂದಿಯ ಅನುಭವಕ್ಕೆ ಬಂದಿರಬಹುದು. “ಅದು ನನ್ ಧರ್ಮ ಅಲ್ಲ ಸ್ವಾಮೀ, ನಾನ್ ಹಂಗ್ ಮಾಡಲ್ಲ, ವಿಶ್ವಾಸ ಇಡಿ..” ಅನ್ನುವುದು ಸಾಮಾನ್ಯವಾಗಿ ದಿನಂಪ್ರತೀ ಕಿವಿಗೆ ಬೀಳಬಹುದಾದ ಮಾತು. ಇದರಲ್ಲಿ ಹಾಗಾದರೆ ವಸಾಹತೀಯ/ಮಹಮದೀಯ/ವೈದಿಕ ಇತ್ಯಾದಿ ಪ್ರಭಾವಗಳು ಇವೆಯೇ? ಎಷ್ಟಿದ್ದಾವು?? ಇದೂ ಒಂದು ಚರ್ಚೆಯ ವಿಷಯ.

    ಉತ್ತರ
    • ಆಗಸ್ಟ್ 21 2015

      ನಿಜ. ಈ ಶ್ಲೋಕವನ್ನು ನಾನು ೧-೨ ದಿನ ಕೂತು ಆಲೋಚಿಸಿದ್ದೆ ಈ ಲೇಖನ ಬರೆಯುವಾಗ. ಕಾರಣ ಮೊದಲನೇ ಶಬ್ದವಾದ “ಪಾಪೋಽಹಂ” ಎಂಬುದು. ನಾನು ಪಾಪಿ ಎಂದು ಹೇಳಬೇಕಿದ್ದರೆ ಪಾಪ್ಯಹಂ ಎನ್ನಬಹುದಿತ್ತು. ಆದರೆ ಪಾಪೋಽಹಂ ಎಂದಿರುವದು ನನಗೆ ಆಶ್ಚರ್ಯ ಉಂಟು ಮಾಡಿದ್ದು ಹೌದು. ಕಾರಣ ಸಂಸ್ಕೃತದಲ್ಲಿ ಪಾಪಿ ಶಬ್ದ ಇದೆಯೇ? ಕನ್ನಡದಲ್ಲಿ ಪಾಪಿ ಶಬ್ದ ಮೊದಲು ಇತ್ತೇ ಎಂಬ ಸಂಶಯ ನನ್ನಲ್ಲಿ ಮನೆ ಮಾಡಿದೆ. ಆದರೆ ಇದಕ್ಕೆ ನನ್ನ ಬಳಿ ಅಧಾರವಿಲ್ಲ. ವಸಾಹತು ಆರಂಭದ ಮುಂಚಿನ ಸಂಸ್ಕೃತ-ಕನ್ನಡ ಕಾವ್ಯಗಳಲ್ಲಿ ಪಾಪಿ ಶಬ್ದವಿದೆಯೇ ಎಂಬುದು ನನಗಿನ್ನೂ ಸ್ಪಷ್ಟವಾಗಿಲ್ಲ. ಪಾಪಿ ಶಬ್ದ ಹಳೆಗನ್ನಡದಲ್ಲೂ ಇತ್ತೇ/ಇಲ್ಲವೇ ಎಂಬುದನ್ನು ನನಗಿನ್ನೂ ನಿಖರವಾಗಿ ಗೊತ್ತಾಗಿಲ್ಲ. ಏಕೆಂದರೆ ಪುಣ್ಯ ಮಾಡುವವನನ್ನು ಪುಣ್ಯಿ ಎನ್ನುವದಿಲ್ಲ, ಪುಣ್ಯಾತ್ಮ ಎನ್ನುತ್ತೇವೆ. ಪಾಪಾತ್ಮ ಶಬ್ದವಿದೆ. ಆದರೆ ಪಾಪಿ ಶಬ್ದವು ರಾಮಾಯಣ-ಮಹಾಭಾರತ ಅಥವಾ ಮುಂಚಿನ ಕಾವ್ಯಗಳಲ್ಲಿ ಪಂಪ-ಕುಮಾರವ್ಯಾಸರಲ್ಲಿ ಬಳಕೆಯಾಗಿದೆಯೇ ಎಂಬುದು ನನಗೆ ಇನ್ನೂ ಸ್ಪಷ್ಟವಾಗಿಲ್ಲ. ಆದ್ದರಿಂದಲೇ ನಾನು ಈ ಶ್ಲೋಕವನ್ನು ಹಾಕದೇ ಹಾಗೇ ಬಿಟ್ಟಿದ್ದೇನೆ.

      ಉತ್ತರ
      • ಆಗಸ್ಟ್ 21 2015

        ಅಥವಾ ಕನ್ನಡ/ಹಳೆಗನ್ನಡದಲ್ಲಿ ಪಾಪಿ ಶಬ್ದವು ಪ್ರಯೋಗವಾಗಿರಬಹುದು, ಹಳೆಯ ಸಂಸ್ಕೃತ ಕಾವ್ಯಗಳಲ್ಲಿ, ರಾಮಾಯಣ, ಮಹಾಭಾರತ ಪುರಾಣಗಳಲ್ಲಿ ಪ್ರಯೋಗವಾಗಿದೆಯೇ ಎಂಬುದನ್ನು ಇನ್ನೂ ಅರಿಯಬೇಕಿದೆ.

        ಉತ್ತರ
        • WITIAN
          ಆಗಸ್ಟ್ 22 2015

          ಬಹುಶಃ ಭೀಷ್ಮ ಸಾಹನಿಯವರ ಹಿಂದಿ ಕತೆ ಅಂತ ನೆನಪು.. ಅದನ್ನು ಆಧರಿಸಿ ಗೋವಿಂದ ನಿಹಲಾನಿ ‘ತಮಸ್’ ಹೆಸರಿನಲ್ಲಿ ಒಂದು ಸರಣಿಯನ್ನೂ ಹಿಂದಿಯಲ್ಲಿ ಮಾಡಿದ್ದರು ಅಂತ ಕಾಣತ್ತೆ. ಅದರಲ್ಲಿ ಹಿಂದೂ ರಾಷ್ಟ್ರೀಯ ಸಂಘಟನೆಯೊಂದರ ಹಿರಿಯರೊಬ್ಬರು ಕಿರಿಯರಿಗೆ ‘ಪಾಪೋsಹಮ್ ಪಾಪಕರ್ಮಾಹಮ್..’ ಶ್ಲೋಕವನ್ನು ಹೇಳುವುದಕ್ಕೆ ನಿರುತ್ತೇಜಿಸುತ್ತಿದ್ದರು ಎನ್ನುವ ಪ್ರಸ್ತಾಪ ಬರುತ್ತದೆ. ಶುದ್ಧ ವೈದಿಕ ಸಂಪ್ರದಾಯವನ್ನಾಗಿ ಸನಾತನಧರ್ಮವನ್ನು ಆಚರಿಸ ಹೊರಟ ಆರ್ಯಸಮಾಜಿಗಳು ಇಂದಿಗೂ ಈ ಶ್ಲೋಕವನ್ನು ಹೇಳುವುದಿಲ್ಲ ಎಂದು ಕೇಳಿದ್ದೇನೆ. ಆರ್ಯ ಸಮಾಜದ ಸಂಪರ್ಕವಿರುವ ಓದುಗರು ಯಾರಾದರೂ ಉತ್ತರಿಸಬಹುದೇ? ಬಹುಶಃ ಈ ಶ್ಲೋಕದ ಉಗಮ ಸಂಸ್ಕೃತ ಕಾವ್ಯಗಳಲ್ಲಿ ಇದ್ದೀತೆಂದು ನನ್ನ ನಂಬಿಕೆ. ಸಂಸ್ಕೃತದ ಹಲವಾರು ಪ್ರಾರ್ಥನಾಶ್ಲೋಕಗಳು ಇತ್ತೀಚಿನ ಕಾವ್ಯ ಪ್ರತಿಭೆಯ ಫಲಗಳೇ! ಉದಾಹರಣೆಗೆ ‘ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ’ ಕಾಳಿದಾಸನ ಕುಮಾರಸಂಭವದ ಶ್ಲೋಕ ಎನ್ನುವುದು ಬಹಳಜನರಿಗೆ ತಿಳಿದಿರಲಿಕ್ಕಿಲ್ಲ.

          ಉತ್ತರ
  6. Devu Hanehalli
    ಆಗಸ್ಟ್ 21 2015

    Dear Sri Hampihole, This shloka has been pestering me for a long time. I asked the Late Sri Seetharama Kalkura, a Samaveda scholar, nearly 10 years ago regarding this. He said the shloka has nothing to do with Vaidik Tradition; it was not uttered during any Vedic rituals. Even during poojas purohits do not invoke this. He said that only `recently’ some Purohitas started using this. (I didn’t ask him the relative stretch of `recently’) Even now, only during Mantrakshathe they chant this. I vividly remember the fact that renowned Sanskrit Scholar the late Sri Barkur Nilakanta Shastry once declined chant this `mantra’.

    ಉತ್ತರ
  7. ಆಗಸ್ಟ್ 23 2015

    ಕಾನೂನು ಪಾಲನೆ, ಧರ್ಮ ಮತ್ತು ದೇಶಗಳು
    ವಿನಾಯಕ ಹಂಪಿಹೊಳಿಯವರು ತಮ್ಮ ಪಾಪ ಪ್ರಜ್ಞೆ ಮತ್ತು ಧರ್ಮ ಕಾನೂನು ಪಾಲನೆಗೆ ಹೇಗೆ ಜನರನ್ನು ಅಣಿಗೊಳಿಸುತ್ತವೆ ಎಂಬ ಬಗ್ಗೆ ಚಿಮ್ತನಾರ್ಹವಾದ ಲೇಖನ ಬರೆದಿದ್ದಾರೆ. ಇದನ್ನು ಹೀಗೆ ಕುರಿತು ಯೊಚಿಸಬಹುದೆಂಬುದೇ ನನಗೆ ಸ್ಪಷ್ಟವಾಗಿ ಹೊಳೆದಿರಲಿಲ್ಲ. ಕಳೆದ ೧೫ ವರುಷಗಳಿಂದ ಇಂಗ್ಲೆಂಡಿನಲ್ಲಿ ಇರುವ ನನಗೆ ಕಾನೂನುಗಳನ್ನು ಪಾಲಿಸುವಲ್ಲಿ ಇವರು ತೋರುವ ಬದ್ಧತೆ ಕೆಲವುಸಾರಿ ಅಚ್ಚರಿಮೂಡಿಸಿರುವುದಂತೂ ನಿಜ;ಕೆಲವೊಮ್ಮೆ ಸ್ವಂತ ವಿಚಾರವನ್ನೇ ಮಾಡದೆ ಕುರುಡಾಗಿ ನಿಯಮಪಾಲನೆ ಮಾಡುವ ಇವರನ್ನು ಕಂಡು ಅದೇ ವಿಚಾರವಾಗಿ ನನ್ನ ಒಳ ಅನಿಸಿಕೆಗಳ ತಾಕಲಾಟವನ್ನು ನಾನು ಅನುಭವಿಸಿಯೂ ಇದ್ದೇನೆ.
    ಇನ್ನು ಇದರಲ್ಲಿನ ಕೆಲವು ಅಂಶಗಳನ್ನು ಎತ್ತಿಕೊಂಡು ಪ್ರಜ್ಞಾ ಆನಂದ ಅವರು ತರ್ಕಬದ್ಧವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ಅವುಗಳಿಗೆ ಉತ್ತರ ಅಷ್ಟು ಸರಳವಲ್ಲ ಎಂಬುದು ನನ್ನ ಭಾವನೆ.
    ನಾನು ಕಂಡಂತೆ ಕೆಲವು ವಿಚಾರಗಳನ್ನು ಓದುಗರ ಗಮನಕ್ಕೆ ತರುವುದಷ್ಟೇ ನನ್ನ ಉದ್ದೇಶ.
    sin ಎಂಬ ಭಾವದಿಂದ ಇವರ ಕಾನೂನು ಪಾಲನೆ ಪ್ರೇರಿತವಾಗಿದೆಯೇ ಎಂಬುದು ನನಗೆ ತಿಳಿಯದು. ಬಹುತೇಕ ಜನ ಇಲ್ಲಿ ಧರ್ಮವನ್ನು ತ್ಯಜಿಸಿಲ್ಲದಿದ್ದರೂ ಕಟ್ಟು ನಿಟ್ಟಾಗಿ ಆಚರಿಸುತ್ತಿಲ್ಲ ಅಥವಾ ಆಚರಣೆ ಇಲ್ಲವೇ ಇಲ್ಲ ಎನ್ನಬಹುದು. ಆದರೆ ಶತಮಾನಗಳಿಂದ ಬಂದ ರಿವಾಜು ಬದಲಾಗದೆ ಉಳಿದಿದೆಯೆಂದು ಊಹಿಸಬಹುದು. ಹಾಗೆ ನೋಡಿದರೆ, ಧರ್ಮವನ್ನು ಕಟ್ಟಾಗಿ ಆಚರಿಸುವ ವಿದ್ಯಾವಂತ ಜನರು ಕಾನೂನನ್ನು ಮುರಿಯಲು ಹೋಗಿ ಸಿಕ್ಕಿಕೊಂಡಿರುವ ಉದಾಹರಣೆಗಳೂ ಇವೆ.
    ಇವರು ಕಾನೂನನ್ನು ಪಾಲಿಸಲು ಇರುವ ಇನ್ನೊಂದು ಮುಖ್ಯ ಕಾರಣ ಆ ನಿಯಮದ ಅನುಷ್ಠಾನ. ದೇಶ ಚಿಕ್ಕದಿದ್ದು ಜನಸಂಖ್ಯೆ ಕಡಿಮೆ ಇರುವಲ್ಲಿ ನೀತಿ ನಿಯಮಗಳ ಕಡ್ಡಾಯ ಪರಿಪಾಲನೆ ಮಾಡಿಸುವುದು ಪ್ರಾಯಶ್ಃ ಸುಲಭ. ಕೋರ್ಟು ಕಚೇರಿಗಳು ತ್ವರಿತದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡುವುದರಿಂದ ಜನರಿಗೆ ಪಾಲಿಸದಿದ್ದರೆ ಆಗುವ ಪರಿಣಾಮಗಳ ಅನುಭವ ಬೇಗನೇ ಆಗುತ್ತದೆ. ಹಾಗಾಗಿ ಭಯದಿಂದ ನಡೆದುಕೊಳ್ಳುತ್ತಾರೆ.
    ಮೂಲಭೂತ ಅವಶ್ಯಕತೆಗಳು ಸರಕಾರದ ಮೂಲಕ ದೊರಕಿಬಿಡುವುದರಿಂದ ಹೆಚ್ಚು ತಲೆ ಕೆಡಿಸಿಕೊಳ್ಳುವ ಪ್ರಮೇಯ ಇಲ್ಲ. ನಿಯಮಾನುಸಾರ ನಡೆದುಕೊಂಡರೆ ಜೀವನ ಸುಗಮವಾಗಿ ಸಾಗುವುದರಿಂದ ಸುಮ್ಮನೆ ನಡೆದುಕೊಂಡರಾಯಿತು, ತಲೆ ನೋವ್ಯಾಕೆ ಎನ್ನುವ ಮನೋಭಾವ. ಸ್ವಂತ ಯೋಚಿಸಿ ಮಾಡುವುದೇನಿದೆ. ನನ್ನ ಕೆಲಸ ನಾನು ಮಾಡಿದರಾಯಿತು ಎನ್ನುವ ಧೋರಣೆಯೂ ಇರುತ್ತದೆ.
    ಹೆಚ್ಚಿನ ಕೆಲಸಗಳು protocol ಅನುಸಾರ ನಡೆಯುವುದರಿಂದಲೂ, ಅದರ ಮೇಲೆ ಕಣ್ಣಿಡಲು ಗುಂಪಿನ ಎಲ್ಲ ಸದಸ್ಯರಿಗೂ ಅಧಿಕಾರ ಇರುವುದರಿಂದಲೂ, ಯಾರು ಬೇಕಾದರೂ ತಮ್ಮ ಕಾರ್ಯವನ್ನು ಪ್ರಶ್ನಿಸಬಹುದೆಂಬ ಅರಿವಿನಿಂದ ಎಲ್ಲ ಅದರ ರೀತ್ಯಾ ನಡೆದುಕೊಳ್ಳುವ ಮನಸ್ಸು ಮಾಡಿಬಿಡುತ್ತಾರೆ.
    ಅಧಿಕಾರ ಇದ್ದರೂ, ದರ್ಪವನ್ನು ಪ್ರದರ್ಶಿಸಲು ಇಲ್ಲಿನ ವ್ಯವಸ್ಥೆಯಲ್ಲಿ ಅವಕಾಶ ಕಡಿಮೆ. ಹಾಗಾದಾಗ ಸ್ವಾಭಾವಿಕವಾಗಿಯೇ ನಾನು ಕಾನೂನಿನ ಪರಿಧಿಯಿಂದ ಹೊರಗೆ ಎಂಬ ಭಾವನೆ ಬರುವ ಅವಕಾಶಗಳು ಕಡಿಮೆ.
    ಇನ್ನು ಸಂದಿ ಗೊಂದಿಗಳಲ್ಲಿ ಪೋಲೀಸರು ಕಾಯುವ ವಿಚಾರ ಗೊತ್ತಿರುತ್ತದೆ. ಹಾಗಾಗಿ traffic ದೀಪಗಳಲ್ಲಿ, ಹಾಗೂ ವೇಗದ ಮಿತಿಯಿರುವಲ್ಲಿ ಹುಷಾರಾಗಿ ಗಾಡಿ ನಡೆಸುತ್ತಾರೆ. driving ಪರೀಕ್ಷೆ ಬಹಳ ಕಟ್ಟು ನಿಟ್ಟು. ಕೆಲವಾರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಮಾತ್ರವೇ ಉತ್ತೀರ್ಣರಾಗುವುದರಿಂದ ಈ ನಿಯಮಗಳು ನಮ್ಮ ನಡವಳಿಕೆಯಲ್ಲಿ ಸ್ವಾಭಾವಿಕವಾಗಿ ಸೇರಿಹೋಗಿರುತ್ತವೆ.
    ಕನಿಷ್ಠ ಪ್ರಮಾಣದ ವಿದ್ಯಾಭ್ಯಾಸ ದೊರಕಿತ್ತಾದ ಕಾರಣ ಮುಂಚಿನ ತಲೆಮಾರುಗಳು ಮೌಲ್ಯಗಳನ್ನು ದಾಟಿಸಿವೆ. ತೀರಾ ಕಳಪೆಯಾದ ಜಾಗದಲ್ಲಿರುವ ಕೆಲಸ ಕಾರ್ಯಗಳನ್ನು ಮಾಡದ, ಸರಕಾರದ ಭತ್ಯೆಯಲ್ಲಿ ದಿನ ದೂಡುವ, ವಿದ್ಯೆಯೂ ಇರದ,ಸಮಾಜದ ಮೇಲೆ ಹೊರೆಯಾಗಿರುವ ಸಂತತಿಗಳು ಸಾಕಷ್ಟಿವೆ. ಇವುಗಳಿಗೆ ಯಾವುದೇ sin ಪರಿಕಲ್ಪನೆಯಾಗಲೀ, ಧರ್ಮದ ವಾಸನಯಾಗಲೀ ಇಲ್ಲ. ಇವರು ನಿಯಮಾನುಸಾರ ಇರುವುದೂ ಇಲ್ಲ. ಶಿಕ್ಷೆಯ ಭಯಕ್ಕಷ್ಟೇ ಮಾಡುತ್ತವೆ.
    ಸಾರ್ವಜನಿಕ ನಡವಳಿಕೆಯ ನಿಯಮಗಳನ್ನು ತಂದೆ ತಾಯಿಯರು ಮಕ್ಕಳಿಗೆ ಮೊದಲಿನಿಂದಲೇ ಅಭ್ಯಾಸ ಮಾಡಿಸಿರುತ್ತಾರೆ. ಅವು sin ಪರಿಕಲ್ಪನೆಯಿಂದ ಬಂದಿರಲಾರವಾದರೂ, ತಮ್ಮ ಬಂಧು ಮಿತ್ರರಲ್ಲಿ ನದೆದುಕೊಳ್ಳಬೇಕಾದ ರೀತಿ ರಿವಾಜುಗಳಿಗ ಅನುಸಾರವಾಗಿಯೇ ಇವೆಲ್ಲವೂ ಕಲಿಸಲ್ಪಡುತ್ತವೆ. ಹಾಗೆಂದು ಎಲ್ಲವೂ perfect ಎಂದುಕೊಳ್ಳಬೇಕಾಗಿಲ್ಲ. ಅವಕಾಶ ಸಿಕ್ಕಿದರೆ ದೋಚಿ ಬಾಚುವ ಬುದ್ಧಿ ಇಲ್ಲಿನವರಿಗೂ ಇದೆ. ಆದರೆ ಕಾನೂನು ವ್ಯವಸ್ಥೆ ಬಿಗಿಯಾಗಿರುವುದರಿಮ್ದ ಹಾಗೆ ನಡೆದುಕೊಳ್ಳುತ್ತಾರೆ. ಉದಾಹರಣೆಗೆ
    ೧. ಮೂರು ವರುಷಗಳ ಹಿಂದೆ ಲೋಕಸಭಾ ಸದಸ್ಯರು ಕಾನೂನು ಮೀರಿ ತಮ್ಮ ಭತ್ಯೆಗಳನ್ನು ಪಡೆದಿದ್ದರು. ಕಾನೂನಿನ ಪರಿಮಿತಿಯಲ್ಲಿ ತಿಂದವರು ನೈತಿಕ (moral) ಅಲ್ಲದ ಕ್ಕಾರಣಗಳಿಗಾಗಿ ಹಣ ಸಂದಾಯ ಮಾಡಿಸಿಕೊಂಡಿದ್ದರು. ಅದು ಹೊರಬಿದ್ದು ದೊಡ್ಡ ಗಲಾಟೆಯೇ ಆಯಿತು. ಹತ್ತಾರು ವರುಶಗಳಿಂದ ಇದು ನಡೆದಿತ್ತು
    ೨. ಇರಾಕ್ ಮೇಲಿನ ಯುದ್ಧಕ್ಕೆ ಕಾನೂನನ್ನು ಎಳೆದು ತಿರುಚಿ ಅದು ಒಪ್ಪುತ್ತದೆ ಎಂಬುದನ್ನು ಬಲವಂತವಾಗಿ ಸಾಬೀತುಗೊಳಿಸಲಾಯಿತು. ಅದರ ಹಿಂದಿನ ದುರುದ್ದೇಶಗಳನ್ನು ಮರೆಮಾಚಲಾಯಿತು.
    ೩.ನಮ್ಮ ಆಸ್ಪತ್ರೆಗಳಲ್ಲಿ ಅಸಾಧಾರಣ ಸೇವೆ ಮಾಡಿದವರಿಗೆ ಹಣಕಾಸಿನ ರೂಪದಲ್ಲಿ ಪ್ರತಿಫಲ ನೀದಲಾಗುತ್ತದೆ. ಇದಕ್ಕಾಗಿ ನಾನು ಏನನ್ನು ಮಾಡಿದೆ ಎಂಬುದಾಗಿ ಬರೆದುಕೊಂಡು ಅರ್ಜಿ ಸಲ್ಲಿಸಬೇಕು. ಇದು ಕಾನೂನು ಬದ್ಧವೇ ಆಗಿದ್ದರೂ ಆ ಹಣದಾಸೆಗೆ ಏನೋ ಒಂದು ಕೆಲಸ ಮಾಡಿ ಅದನ್ನೇ ದೊಡ್ಡದಾಗಿ ಬಿಂಬಿಸಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಕೆಲಸವೂ ನಡೆಯುತ್ತದೆ. ಅದರಿಂದ ಯಾರಿಗೂ ಎನೂ ಉಪಯೋಗ ಬಹುತೇಕ ಸಂದರ್ಭಗಳಲ್ಲಿ ಆಗಿರುವುದೇ ಇಲ್ಲ. ಅದಕ್ಕಾಗಿ ಇಂತಹ ಜನಗಳ ಚಿಕ್ಕ ಪಟಾಲಂ ಕೂಡಾ ಕಾರ್ಯೋನ್ಮುಖವಾಗಿರುತ್ತದೆ.
    ೪.ಕಾನೂನು ಚೌಕಟ್ಟಿನಲ್ಲಿ ಸರಿಯಾಗಿದ್ದೇವೆ ಎಂದು ತೋರಿಸುತ್ತಾ ಗ್ರಾಹಕರಿಗೆ ಮೋಸ ಮಾಡುವ ಎಷ್ಟೋ ಸಂದರ್ಭಗಳು ನಡೆದೇ ಇರುತ್ತವೆ.
    ೫. ಎರಡು ಮದುವೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಹಾಗೆಂದು affair ಇಟ್ಟುಕೊಂಡವರಿಗೇನೂ ಕಡಿಮೆ ಇಲ್ಲ. affair ಗೆ ಕಾನೂನಿನಲ್ಲಿ ಶಿಕ್ಷೆಯಿಲ್ಲ!! ಯಾವುದು ನೈತಿಕ ಅನೈತಿಕ ಎಂಬ ಪ್ರಶ್ನೆ ಇಲ್ಲಿ ಪ್ರಸ್ತುತವಾಗುವುದೇ ಇಲ್ಲ.
    ಸಾಮಾನ್ಯ ನಾಗರೀಕನಿಗೆ ಹಲವಾರು ಸಂಘ ಸಂಸ್ಥೆಗಳ ಮೂಲಕ ರಕ್ಷಣೆಯ ಭರವಸೆಯನ್ನು ಸರಕಾರ ಒದಗಿಸುವುದರಿಂದ ಹಾಗೂ ಉಲ್ಲಂಘಿಸಿದವರಿಗೆ ಬಹುತೇಕ ಸಂದರ್ಭಗಳಲ್ಲಿ ಶಿಕ್ಷೆ ತಪ್ಪದೇ ಆಗುವುದರಿಂದ ಪಾಲನೆ ಸರಿಯಾಗಿದೆ.
    ಹಣಕಾಸಿನ ವಹಿವಾಟುಗಳು national insurance ನಂಬರ್ ಮೂಲಕ ನಡೆಯುವ ಕಾರಣ ತೆರಿಗೆ ವಂಚನೆಗೆ ಹೆಚ್ಚು ಅವಕಾಶವಿರುವುದಿಲ್ಲ. ಆದರೂ, ವಿದೇಶಿ ಬ್ಯಾಂಕುಗಳ ಮೂಲಕ, ಬೇನಾಮಿ ಕಂಪನಿಗಳ ಮೂಲಕ, ಸುಳ್ಳು ನಷ್ಟವನ್ನು ತೋರುವುದರ ಮೂಲಕ ವಂಚಿಸುವವರು ಇದ್ದೇ ಇದ್ದಾರೆ. ಅವರಲ್ಲಿ ಶ್ರೀಮಂತ ಕುಳಗಳು ಹೆಚ್ಚು ಎನ್ನುವುದು ಗಮನಾರ್ಹ.

    ಉತ್ತರ
    • ಆಗಸ್ಟ್ 23 2015

      ಧನ್ಯವಾದಗಳು ಸರ್…

      ಉತ್ತರ
    • ಆಗಸ್ಟ್ 23 2015

      “ಇವರು ಕಾನೂನನ್ನು ಪಾಲಿಸಲು ಇರುವ ಇನ್ನೊಂದು ಮುಖ್ಯ ಕಾರಣ ಆ ನಿಯಮದ ಅನುಷ್ಠಾನ. ದೇಶ ಚಿಕ್ಕದಿದ್ದು ಜನಸಂಖ್ಯೆ ಕಡಿಮೆ ಇರುವಲ್ಲಿ ನೀತಿ ನಿಯಮಗಳ ಕಡ್ಡಾಯ ಪರಿಪಾಲನೆ ಮಾಡಿಸುವುದು ಪ್ರಾಯಶ್ಃ ಸುಲಭ. ಕೋರ್ಟು ಕಚೇರಿಗಳು ತ್ವರಿತದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡುವುದರಿಂದ ಜನರಿಗೆ ಪಾಲಿಸದಿದ್ದರೆ ಆಗುವ ಪರಿಣಾಮಗಳ ಅನುಭವ ಬೇಗನೇ ಆಗುತ್ತದೆ. ಹಾಗಾಗಿ ಭಯದಿಂದ ನಡೆದುಕೊಳ್ಳುತ್ತಾರೆ.”

      ತುಂಬಾ ಸರಿಯಾದ ಮಾತನ್ನು ಹೇಳಿದ್ದೀರಾ ಸರ್. ನನ್ನ ಕೆಲವು ಸಹೋದ್ಯೋಗಿಗಳು ಕೂಡ ಇದೆ ರೀತಿಯಾಗಿ ಹೇಳುತ್ತಾರೆ. ಅಲ್ಲಿ ಕಾನೂನು ಪಾಲನೆ ಮಾಡದಿದ್ದರೆ ವಿಧಿಸುವ ಶಿಕ್ಷೆಗೆ ಹೆದರಿ ಜನರು ಕಾನೂನು ಪಾಲನೆ ಮಾಡುತ್ತಾರೆ ಎಂದು.ಅಲ್ಲದೆ ಜನಸಂಖ್ಯೆ ನಿಯಂತ್ರಣದಲ್ಲಿರುವದರಿಂದ ಅಲ್ಲಿನ ವ್ಯವಹಾರ ವಹಿವಾಟುಗಳು ಬೇಗ ಆಗುತ್ತವೆ ಎನ್ನುವದು ನಿಜ. ಭಾರತದಲ್ಲಿಯೂ ಕೂಡ ಬೇರೆ ಬೇರೆ ರಾಜ್ಯಗಳಲ್ಲಿ ಕಾನೂನು ಪಾಲನೆ ಸ್ವಲ್ಪ ಮಟ್ಟಿಗೆ ಬೇರೆ ಬೇರೆಯೇ ಆಗಿದೆ.ಸುಮಾರಾಗಿ ನಾನು ನೋಡಿದ ಹಾಗೆ ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಷ್ಟು ಹೈದರಾಬಾದಿನಲ್ಲಿ ಅನುಸರಿಸುವದಿಲ್ಲ. ಯಾಕೆಂದರೆ ಬೆಂಗಳೂರಿನಲ್ಲಿ ಕ್ರಮವನ್ನು ಅಲ್ಲಿಗಿಂತಲೂ ಕಟ್ಟುನಿಟ್ಟಾಗಿ ಕೈಗೊಳ್ಳುತ್ತಾರೆ.
      ಇಲ್ಲಿಯೂ ಸಹ ಪ್ರೈವೇಟ್ ಸೆಕ್ಟರ್ ಗಳ ವ್ಯವಹಾರದಲ್ಲಿ ಜನರು ನಿಯಮ ಪಾಲನೆಯನ್ನು ಕಟ್ಟುನಿಟ್ಟಾಗಿಯೇ ಆಚರಿಸುತ್ತಾರೆ. ಉದಾರಣೆಗೆ ಕ್ರೆಡಿಟ್ ಕಾರ್ಡ್, ಪೋಸ್ಟ್ ಪೇಯ್ಡ್ ಟೆಲಿಫೋನ್ ಬಿಲ್ ಗಳ ಪೇಯ್ಮೆಂಟ್ ಮಾಡುವಲ್ಲಿ ಜನ ಉದಾಸೀನ ಮಾಡುವದಿಲ್ಲ. ಯಾಕೆಂದರೆ ತಪ್ಪಿದರೆ ಒಂದಕ್ಕೆ ಎರಡರಷ್ಟು ದಂಡ ವಸೂಲಿ ಮಾಡುವರು ಈ ಕಾರ್ಪೋರೇಟ್ ಗಳು. ಅಷ್ಟೆ ಕಟ್ಟುನಿಟ್ಟಾಗಿ ಇಲ್ಲಿನ ಜನ ಮನೆಯ ಕರೆಂಟ್ ಬಿಲ್ ಕಟ್ಟುವದೆ ಹೋಗಬಹುದು. ಇಲ್ಲಿನ ಪ್ರೈವೇಟ್ ಕಂಪನಿಗಳು ಆ ಮಟ್ಟಿಗೆ ಜನರಲ್ಲಿ ಬದಲಾವಣೆಯನ್ನು ತಂದಿವೆ ಎನ್ನಬಹುದು. ಎಂ ಏನ್ ಸಿ ಗಳಲ್ಲಿ ಕೆಲಸ ಮಾಡುವ ಭಾರತೀಯರು ಅಲ್ಲಿನ ನಿಯಮಗಳನ್ನು ಕಟ್ಟುನಿಟ್ಟಾಗಿಯೆ ಆಚರಿಸುತ್ತಾರೆ. ಆದರೆ ಅರ ಟಿ ಓ ಆಫೀಸ್ ಗಳಲ್ಲಿ ಕೆಲಸ ಮಾಡುವ ಜನರ ಪರಿಯನ್ನು ಗಮನಿಸಿದರೆ ಇದಕ್ಕೆ ತದ್ವಿರುದ್ದ. ಇದಕ್ಕೆ ಕಾರಣ ರಿಲಿಜಿಯಸ್ ಕಾನ್ಸಿಯಸ್ ನೆಸ್ ಅಂದರೆ ತಪ್ಪಾಗುತ್ತದೆ.
      ನನಗೆ ಬಾಲಗಂಗಾಧರ್ ಅವರ ಥಿಯರಿಯಲ್ಲಿ ಸರಿ ಕಾಣದಿರುವ ಅಂಶಗಳಲ್ಲಿ ಇದೂ ಒಂದು. ಅವರುಕ್ರೈಸ್ತ ಥಿಯಾಲಜಿಯ ಗ್ರಾಂಥಿಕ ಅರ್ಥವು ಅಲ್ಲಿನ ಸಮಾಜವನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ. ಇದು ಯಾವುದೋ ಒಂದು ಜನರೇಶನ್ ನಲ್ಲಿ ಒಂದು ನಡೆದು ಬರಲು ಸಾಧ್ಯವಿದ್ದರೂ ಬಹಳ ಕಾಲದವರೆಗೆ ಇರಲು ಸಾಧ್ಯವಿಲ್ಲ.

      ಉತ್ತರ
      • ಆಗಸ್ಟ್ 25 2015

        ಬಹಳ ಸಮಯದ ನಂತರ ಪ್ರಬುದ್ಧವಾದ ವಾದ ಪ್ರತಿವಾದ ಸರಣಿ ಓದಿದ ಸಂತೋಷ ದೊರೆಯಿತು. ವಿನಾಯಕ,ಪ್ರಜ್ಞಾ,ಹಾಗೂ ಷಣ್ಮುಖ ಅವರಿಗೆ ಧನ್ಯವಾದಗಳು. ಅಂದಹಾಗೆ ಪ್ರಜ್ಞಾ ಅವರ ವೃತ್ತಿ ಹಿನ್ನೆಲೆ ಯಾವುದು? ಇಷ್ಟೊಂದು ಆಳವಾಗಿ ಚರ್ಚಿಸುವುದರ ಕುರಿತು ಕುತೂಹಲಕ್ಕಷ್ಟೇ.

        ಉತ್ತರ
        • ಆಗಸ್ಟ್ 25 2015

          ಥ್ಯಾಂಕ್ಸ್ ಸರ್. ನಾನು ಒಂದು ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದೇನೆ

          ಉತ್ತರ
          • ಆಗಸ್ಟ್ 25 2015

            ಇಷ್ಟೊಂದು ಇತಿಹಾಸ,ತರ್ಕಶಾಸ್ತ್ರ, ಸಮಾಜಶಾಸ್ತ್ರ ಕಲಿಯುವ ಅವಕಾಶ ಇದ್ದಲ್ಲಿ ನಾನೂ ಇಂಜಿನಿಯರಿಂಗ್ ಮಾಡಬಹುದಾಗಿತ್ತು. ಸುಮ್ಮನೆ ಡಾಕ್ಟರ್ ಆಗಿದ್ದಾಯ್ತಲ್ಲ.
            ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ. ಅದರಿಂದ ಬರುವ discussion ನಿಂದ ನನಗೂ ಸ್ವಲ್ಪಮಟ್ಟಿಗೆ enlightenment ಆಯ್ತು.

            ಉತ್ತರ
            • ಆಗಸ್ಟ್ 26 2015

              ಹಾಗೇನಿಲ್ಲ ಸರ್. ನಾನೂ ಇತಿಹಾಸ, ಸಮಾಜಶಾಸ್ತ್ರವನ್ನು ಅಧ್ಯಯಿಸಿಲ್ಲ. ಆನ್ ಲೈನ್ ಪಾಠವನ್ನಷ್ಟೆ ಮಾಡಿದ್ದು.

              ಉತ್ತರ
  8. Rajaram Hegde
    ಆಗಸ್ಟ್ 25 2015

    ಈ ಚರ್ಚೆ ಚೆನ್ನಾಗಿ ನಡೆಯುತ್ತಿದೆ. ಪ್ರಜ್ಞಾ ಅವರಿಗೆ ಪಾಶ್ಚಾತ್ಯ ಕಾನೂನುಗಳ ಹಿಂದೆ ಥಿಯಾಲಜಿಯ ಭೂಮಿಕೆ ಇದೆ ಎನ್ನುವುದು ಮುಖ್ಯವಾಗಿ ಆಕ್ಷೇಪಾರ್ಹವಾದ ವಿಚಾರ. ಇದಕ್ಕೆ ಸಂಬಂಧಿಸಿದಂತೆ ಷಣ್ಮುಖ ಅವರು ಸಾಕಷ್ಟು ವಿವರಗಳನ್ನು ಒದಗಿಸಿದ್ದಾರೆ. ಅಷ್ಟಾಗಿಯೂ ಕೂಡ ಪ್ರಜ್ಞಾ ಅವರಿಗೆ ಅದು ಒಪ್ಪಿತವಾದಂತಿಲ್ಲ. ಬಾಲಗಂಗಾಧರ ಅವರು ತಿಳಿಸುವುದೆಂದರೆ ಥಿಯಾಲಜಿಯು ಒಂದು ಧೋರಣೆಯನ್ನು ರೂಪಿಸುತ್ತದೆ, ಆ ಧೋರಣೆಯು ಯುರೋಪಿನ ಸೆಕ್ಯುಲರ್ ಪ್ರಭುತ್ವಗಳು ಕಾನೂನನ್ನು ರೂಪಿಸಿಕೊಳ್ಳಲಿಕ್ಕೆ ಬುನಾದಿಯಾಗುತ್ತವೆ. ಅದರರ್ಥ ಥಿಯಾಲಜಿಯ ವಿವರಗಳು ಮರೆಯಾಗಿರಬಹುದು, ಧೋರಣೆ ಉಳಿಯುತ್ತದೆ. ಆ ಧೋರಣೆ ಎಂದರೆ ಕಾನೂನುಗಳು ಮನುಷ್ಯನ ವಿಲ್ ( ಇಚ್ಛೆ ?) ಎಂಬುದು. ಅಂದರೆ ಒಂದು ಪ್ರಭುತ್ವದಲ್ಲಿರುವ ಕಾನೂನುಗಳು ಆ ಪ್ರಭುತ್ವವನ್ನು ರಚಿಸಿಕೊಂಡ ಮನುಷ್ಯರ ಇಚ್ಛೆಯನ್ನು ಪ್ರತಿನಿಧಿಸುತ್ತದೆ. ಇಂಥ ಇಚ್ಛೆಯೇ ಸಾರ್ವಭೌಮತ್ವ. ಥಿಯಾಲಜಿಯಲ್ಲಿ ಗಾಡ್ ಸಾರ್ವಭೌಮನಾಗಿದ್ದರೆ ಸೆಕ್ಯುಲರ್ ಪ್ರಭುತ್ವದಲ್ಲಿ ಮನುಷ್ಯ ಅಂಥ ಸಾರ್ವಭೌಮನಾಗುತ್ತಾನೆ. ಧೋರಣೆ ಒಂದೇ. ವಿವರ ಬೇರೆ. ಇನ್ನು ಈ ಧೋರಣೆಯು ಆಧುನಿಕ ಸೆಕ್ಯುಲರ್ ರಾಜಕೀಯ ಚಿಂತನೆಗಳಲ್ಲಿ ಕ್ರಮವಾಗಿ ಥಿಯಾಲಜಿಯ ಬುನಾದಿಯ ಮೇಲೆ ರೂಪುಗೊಂಡಿದೆ ಎಂಬುದನ್ನು ಕಾನೂನು ಮಾತ್ರವಲ್ಲ, ಹಕ್ಕುಗಳ ಕಲ್ಪನೆ, ಸಮಾನತೆ,ಸ್ವಾತಂತ್ರ , ಸಾರ್ವಭೌಮತ್ವ, ಇತ್ಯಾದಿ ಕಲ್ಪನೆಗಳ ಮೂಲಕವೂ ಗುರುತಿಸಬಹುದು ಎಂಬುದನ್ನು ಬಾಲಗಂಗಾಧರ ಅವರು ತಮ್ಮ ಬರವಣಿಗೆಗಳಲ್ಲಿ ತೋರಿಸುತ್ತಾರೆ. ಕ್ರಿಶ್ಚಿಯಾನಿಟಿಯು ಒಂದು ಲೋಕದೃಷ್ಟಿಯನ್ನು ರೂಪಿಸಿತ್ತು ಹಾಗೂ ಈ ಮೇಳಿನ ಎಲ್ಲಾ ಪರಿಕಲ್ಪನೆಗಳೂ ಅದರಅವಿಭಾಜ್ಯ ಅಂಗಗಳಾಗಿವೆ. ಇಂಥ ಲೋಕದೃಷ್ಟಿಯು ಕಲ್ಪಿಸಿಕೊಂಡ ಕಾನೂನಿನ ಆಳ್ವಿಕೆ ಎಂಬುದನ್ನು ಈ ಎಲ್ಲಾ ಪರಿಕಲ್ಪನೆಗಳ ಜೊತೆಗೆ ಇಟ್ಟು ನೋಡಬೇಕು. ಅವುಗಳಿಂದ ತಪ್ಪಿಸಿ ನೋಡಿದಲ್ಲಿ ಅದರ ನಿರ್ದಿಷ್ಟ ಸಂದರ್ಭ ತಿಳಿಯುವುದಿಲ್ಲ. ಇಲ್ಲ ಲಾ ಮಾತ್ರವೇ ಥಿಯಾಲಜಿಯಿಂದ ಬಂದಿಲ್ಲ ಅದಕ್ಕೆ ಸಂಬಂಧಿಸಿದ ಉಳಿದೆಲ್ಲವೂ ಬಂದಿವೆ ಎಂಬುದನ್ನು ವಿಶೇಷವಾಗಿ ವಾದಿಸಬೇಕಾದರೆ ಬಾಲಗಂಗಾಧರ ಅವರ ವಾದಗಳನ್ನು ವ್ಯವಸ್ಥಿತವಾಗಿ ತಿರಸ್ಕರಿಸಬೇಕಾಗುತ್ತದೆ.
    ಆಧುನಿಕ ಲಾ ಸಂಬಂಧಿಸಿ ಮಾತನಾಡುವಾಗಅವುಗಳ ದೇಶ ಕಾಲ ಹಿನ್ನೆಲೆಯಲ್ಲಿ ಕ್ರೈಸ್ತ ಥಿಯಾಲಜಿ ಇತ್ತೇ ವಿನಃ ರೋಮನ್ ಲಾ ಇರಲಿಲ್ಲ ಎಂಬುದು ವಾಸ್ತವ. ಹಾಗಾಗಿ ರೂಲ್ ಆಫ್ ಲಾ ಎಂಬುದು ಥಿಯಾಲಜಿಯಿಂದ ಹುಟ್ಟಿದ್ದು ಎಂಬ ಹೇಳಿಕೆ ಅಸಂಗತವಲ್ಲ.ಇನ್ನು ಕ್ರೈಸ್ತ ಥಿಯಾಲಜಿಗೆ ಗ್ರೀಕ್ ಹಾಗೂ ರೋಮನ್ ಚಿಂತನೆಗಳ ಪ್ರಭಾವವಿತ್ತೆ ಎಂಬುದು ಒಂದು ಪ್ರತ್ಯೇಕ ಪ್ರಶ್ನೆ. ಖಂಡಿತವಾಗಿಯೂ ಇತ್ತು. ಕ್ರೈಸ್ತ ಚಿಂತನೆಗಳು ಬೆಳೆದಿದ್ದೇ ಗ್ರೀಕ ಹಾಗೂ ರೋಮನ್ನರ ಜಗತ್ತಿನಲ್ಲಿ. ಆದರೆ ಆ ಜಗತ್ತನ್ನು ಕ್ರೈಸ್ತರು ರಿಲಿಜನ್ನಾಗಿ ಪರಿವರ್ತಿಸಿ ಒಳಗೊಂಡರು. ರೋಮನ್ ಲಾ ಎಂಬುದು ಸುಪ್ರಸಿದ್ಧವಾದುದು, ಸಿಸೆರೋ ಕೂಡ ಅವುಗಳಅಗತ್ಯವನ್ನು ಒತ್ತಿ ಹೇಳುವುದರಲ್ಲಿ ಆಶ್ಚರ್ಯವಿಲ್ಲ. ಹಾಗೆಂದ ಮಾತ್ರಕ್ಕೆ ರೋಮನ್ನರು ಮನುಷ್ಯನನ್ನು ಸಾರ್ವಭೌಮತ್ವಕ್ಕೆ ಸಮೀಕರಿಸಿಕೊಂಡು ಕಾನೂನು ಅವನ ಇಚ್ಛೆ ಎಂಬ ನಿರ್ದಿಷ್ಟ ಧೋರಣೆಯನ್ನು ತಳೆದಿದ್ದರು ಎಂಬುದಕ್ಕೆ ಅದು ಆಧಾರವನ್ನು ಒದಗಿಸುವುದಿಲ್ಲ.
    ಭಾರತಕ್ಕೆ ಬಂದರೆ ಬ್ರಿಟಿಷರು ಭಾರತದಲ್ಲಿ ತಮ್ಮ ಪ್ರಭುತ್ವವನ್ನು ರಚಿಸುವವರೆಗೆ ಭಾರತದಲ್ಲಿ ಸ್ಟೇಟ್ (ಕಾನೂನನ್ನು ಆಧರಿಸಿದ ಪ್ರಭುತ್ವ) ಇರಲಿಲ್ಲ ಎಂಬುದು ಇತಿಹಾಸದಲ್ಲಿ ಕಂಡುಬರುವ ಸತ್ಯ. ನಮ್ಮ ದೇಶೀ ಪ್ರಭುತ್ವಗಳು ಆಳ್ವಿಕೆ ನಡೆಸಿದ ಪರಿಯೇ ಬೇರೆ. ಅವು ಕಾನೂನುಗಳನ್ನು ರಚಿಸಿ ಆಳ್ವಿಕೆಯನ್ನು ನಡೆಸಲಿಲ್ಲ. ಶಾಸನಎಂದರೆ ಕಾನೂನಲ್ಲ. ನಮ್ಮಲ್ಲಿ ಈ ಕಾನೂನು, ಕಾಯಿದೆ ಎಂಬ ಪರ್ಶೀಯನ್ ಮೂಲದ ಶಬ್ದಗಳನ್ನು ಬಿಟ್ಟರೆ ದೇಶೀ ಶಬ್ದಗಳೂ ಭಾಷಾಂತರಕ್ಕೆ ಸಿಗುವುದಿಲ್ಲ. ಭಾರತೀಯರಿಗೆ ರೂಲ್ ಆಫ್ ಲಾ ಎಂಬುದು ಬ್ರಿಟಿಷರು ಬಂದ ನಂತರವಷ್ಟೇ ಗೊತ್ತಾಗಲಿಕ್ಕೆ ಸಾಧ್ಯ. ಭಾರತೀಯರಿಗೆ ರಿಲಿಜನ್ನು ಹಾಗೂ ಅದು ಸೃಷ್ಟಿಸುವ ಲೋಕದೃಷ್ಟಿಗಳೂ ಅಪರಿಚಿತ.ಇದು ಸಾಂಪ್ರದಾಯಿಕ ಸಮಾಜ.ಇದರ ಸದಸ್ಯರು ಜಗತ್ತಿನಲ್ಲಿ ಬದುಕಲು ಕಲಿಯುವ ಕ್ರಮವೇ ಬೇರೆ. ಜಗತ್ತನ್ನು ಗ್ರಹಿಸುವ ಕ್ರಮವೇ ಬೇರೆ. ಭಾರತೀಯ ಸಂಸ್ಕೃತಿಯ ಕುರಿತು ಇದುವರೆಗೆ ಬಂದಆಳವಾದ ಸಂಶೋಧನೆಗಳೆಲ್ಲವೂ ಇದನ್ನು ಹೆಚ್ಚೆಚ್ಚು ಒ್ಪಪೊಕೊಳ್ಳತೊಡಗಿವೆ. ಬಾಲಗಂಗಾಧರರು ಇಂಥ ಸಂಶೋಧನೆಗಳು ಗುರುತಿಸುವ ಸಮಸ್ಯೆಗಳನ್ನೇ ತಮ್ಮ ಸಿದ್ಧಾಂತದ ಮೂಲಕಅರ್ಥಮಾಡಲು ಪ್ರಯತ್ನಿಸುತ್ತಾರೆ. ಇಂಥ ಪರಿಸ್ಥಿತಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಭಾರತೀಯರು ಕಾನೂನುಗಳಿಗೆ ಏಕೆ ಹೀಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಕುರಿತು ತಮ್ಮ ವಾದವನ್ನು ಮಂಡಿಸುತ್ತಾರೆ.
    ಭಾರತೀಯರಿಗೂ ಕಾನೂನಿನ ಆಳ್ವಿಕೆ ಗೊತ್ತಿದೆ ಎನ್ನಬೇಕಾದರೆ ಅವರು ತಮ್ಮಇತಿಹಾಸದಲ್ಲೇ ಕಂಡು ಕೇಳರಿಯದ ಸಂಗತಿಯೊಂದನ್ನು ಕಳೆಇನ್ನೂರು ವರ್ಷಗಳಲ್ಲಿ ತಮ್ಮದನ್ನಾಗಿ ಮಾಡಿಕೊಂಡಿದ್ದಾರೆ ಎಂದು ನಿರ್ದಿಷ್ಟವಾಗಿ ವಾದಿಸಬೇಕಾಗುತ್ತದೆ. ಒಂದೊಮ್ಮೆ ಅವರು ಅದನ್ನು ತಮ್ಮದನ್ನಾಗಿ ಮಾಡಿಕೊಂಡಿದ್ದರೆ ಈ ಪ್ರಭುತ್ವದ ಸರ್ವೋಚ್ಛಅಧಿಕಾರಿಗಳಿಂದ ಹಿಡಿದು ಸಾಮಾನ್ಯನ ವರೆಗೆ ಏಕೆ ಅವನ್ನು ಮುರಿಯುವುದರಲ್ಲಿ ನಿರತರಾಗಿದ್ದಾರೆ? ಎಂಬ ಪ್ರಶ್ನೆಗೆ ಉತ್ತರಿಸಬೇಕು. ಯುರೋಪಿನಲ್ಲೂ ಜನರು ಅದನ್ನು ಮುರಿಯುತ್ತಾರೆ ಎಂಬುದು ಅಲ್ಲೂ ಕ್ರಿಮಿನಲ್ ಗಳು ಇದ್ದಾರೆ ಎನ್ನುವುದನ್ನು ತಿಳಿಸುತ್ತದೆ. ಕ್ರಿಮಿನಲ್ ಚಟುವಟಿಕೆಗಳನ್ನು ತಡೆಯಲಿಕ್ಕಾಗಿಯೇ ಅಲ್ಲವೆ ಕಾನೂನನ್ನು ಅಳವಡಿಸಿಕೊಳ್ಳುವುದು? ಆದರೆ ಅಂಥ ಕ್ರಿಮಿನಲ್್ ಗಳಿಗೆ ಬೇಲಿನಿಂದ ಬಿಡುಗಡೆಯಾದಾಗ ಹಾರ ಹಾಕಿ ಮೆರವಣಿಗೆ ಮಾಡುತ್ತಾರೆಯೆ? ಅಂಥವರಿಗೆ ಮನ್ನಣೆ ನೀಡಿ ನಾಯಕರನ್ನಾಗಿ ಮಾಡುತ್ತಾರೆಯೆ? ಏಕೆ ನಮ್ಮಲ್ಲಿ ನ್ಯಾಯಾಧೀಶರೇ ಕಾನೂನನ್ನು ಮುರಿಯುತ್ತಾರೆ? ಒಬ್ಬಿಬ್ಬರೆ? ಲೋಕಾಯುಕ್ತರೇ ಆ ಕೆಲಸ ಮಾಡುತ್ತಾರೆ. ನಮ್ಮ ಪ್ರಭುತ್ವವೇ ಇಂಥ ಕ್ರೈಮ್ ಗಳನ್ನು ರಕ್ಷಿಸಲಿಕ್ಕೆ ಕಂಕಣ ಬದ್ಧವಾಗಿರುತ್ತದೆ. ಇವರಿಗೆಲ್ಲ ಕಾನೂನನ್ನು ಮುರಿಯುವುದು ಅಪರಾಧಎಂದೇ ಅನಿಸುವುದಿಲ್ಲ. . ಜನರಿಗೂ ಅವರು ಹಾಗೆ ಕಾಣುವುದಿಲ್ಲ. ಏಕೆ ಕೋರ್ಟುಗಳಲ್ಲಿ ಸುಳ್ಳು ಹೇಳುವುದು ಕಡ್ಡಾಯವಾಗಿದೆ? ಇಂಥ ಜನ ಎಷ್ಟಿರಬಹುದು? ನ್ಯಾಯಾಲಯಗಳಲ್ಲಿ ವಕೀಲರು, ನ್ಯಾಯಾಧೀಶರಾದಿಯಾಗಿ ಎಷ್ಟಿರಬಹುದು? ರಾಜಕಾರಣಿಗಳಲ್ಲಿ, ಸರ್ಕಾರೀ ಆಢಳಿತಾಧಿಕಾರಿಗಳಲ್ಲಿ ಎಷ್ಟಿರಬಹುದು? ಹೋಗಲಿ, ಶಿಕ್ಷಕರು, ವೈದ್ಯರುಉದ್ಯಮಿಗಳು ಮೊದಲಾಗಿ ದಾರಿಯಲ್ಲಿ ಹೋಗುವ ದಾಸಯ್ಯಗಳ ವರೆಗೆ ಎಷ್ಟು ಜನರಿರಬಹುದು? ಇವರೆಲ್ಲಏಕೆ ಹೀಗೆ ಆಡುತ್ತಾರೆ? ಹೀಗಿಲ್ಲದವರೇ ಅಪರೂಪ ಎಂಬುದು ನಮ್ಮ ಸಾಮಾನ್ಯ ಜ್ಞಾನವಲ್ಲವೆ? ಕಾನೂನಿನ ಕುರಿತು ಇದೊಂದು ವಿಭಿನ್ನ ಧೋರಣೆಯನ್ನು ಸೂಚಿಸುತ್ತದೆ.
    ಇಂದಿನ ಕಾನೂನು ಕ್ಷೇತ್ರದಲ್ಲಿರುವವರು ಈ ವಾಸ್ತವವನ್ನು ಗುರುತಿಸದೇ ಸುಮ್ಮನೆ ಕಾನೂನಿನಆಳ್ವಿಕೆ ಯ ಕಲ್ಪನೆ ಈ ಎಲ್ಲಾ ಜನರಿಗೂ ಇದೆ ಎನ್ನುತ್ತಿರುವುದೇ ಭಾರತದ ದುರಂತ. ಒಂದೊಮ್ಮೆ ಈ ಮೇಲಿನ ಎಲ್ಲಾ ಭಾರತೀಯರಿಗೆ ಕಾನೂನಿನ ಆಳ್ವಿಕೆ ಎಂಬುದು ಗೊತ್ತಿದೆ ಅಂತಾದಲ್ಲಿ ಭಾರತೀಯರು ಹುಟ್ಟಾ ಕ್ರಿಮಿನಲ್ ಬುದ್ಧಿಯವರು, ಹುಟ್ಟಾ ಮೋಸಗಾರರು, ಸುಳ್ಳರು ಎಂದು ಯುರೋಪಿಯನ್ನರು ಹೇಳಿದ್ದನ್ನು ಧೃಡೀಕರಿಸಿದಂತೆ. ಹಾಗಾಗಿ ನಮ್ಮ ಮುಂದೆ ಎರಡು ಆಯ್ಕೆಗಳು ತೆರೆದಿವೆ 1. ಬಹುಶಃ ಭಾರತೀಯರಿಗೆ ಕಾನೂನಿನ ಪ್ರಜ್ಞೆ ಇದ್ದರೂ ಅವರು ಹುಟ್ಟಾ ಕ್ರಿಮಿನಲ್ ಗಳಾಗಿರುವುದರಿಂದಅವರಿಗೆ ಅದನ್ನು ಗೌರವಿಸಲಾಗುತ್ತಿಲ್ಲ. 2. ಬಹುಶಃ ಅವರಿಗೆ ಕಾನೂನನ್ನ ಮುರಿಯುವುದು ಅಪರಾಧವಾಗಿ, ಪಾಪವಾಗಿ ಕಾಣಿಸುತ್ತಿಲ್ಲ. ಅಂದರೆ ಈ ಸಮಾಜವೇ ಕಾನೂನಿನ ಕುರಿತು ಪಾಶ್ಚಾತ್ಯರಿಗಿಂತ ಬೇರೆಯ ಗ್ರಹಿಕೆಗಳ ಮೇಲೆ ನಿಂತಿರಬಹುದು.

    ಉತ್ತರ
  9. ಆಗಸ್ಟ್ 25 2015

    ಷಣ್ಮುಖ ಅವರಿಗೆ-
    “[ಧರ್ಮಶಾಸ್ತ್ರಗಳಿದ್ದದ್ದು ಕಾನೂನುಗಳೇ ಎಂದು ಸಾಧಿಸಲಾಗುವುದೇ? ಅದಕ್ಕೆ ಹೆಚ್ಚಿನ ಸೈದ್ದಾಂತಿಕ ವಿವರಣೆಗಳ ಅಗತ್ಯವಿಲ್ಲವೇ?]”

    ಸಿಸರೋ ಬಗ್ಗೆ ದೊರೆಯುವ ಐತಿಹಾಸಿಕ ಆಧಾರವನ್ನು ತಿರಸ್ಕರಿಸಬೇಕಾದರೆ ಅದಕ್ಕೆ ಕಾರಣಗಳು ಬೇಕು. ಸಿಸರೋ ನ ಸೆಕ್ರೆಟರಿ ಟೈರೊ ಬರೆದಿದ್ದು ಸಿಸರೋ ನ ಜೀವನದ ಕೆಲವು ಘಟನೆಗಳನ್ನು. ನೀವು ಸಿಸರೋ ನ ಬಗ್ಗೆ ತಿರಸ್ಕರಿಸುವ ಅಂಶಗಳು ಯಾವವು ಎಂಬುದನ್ನು ಸ್ಪಷ್ಟಪಡಿಸಿ. ಸಿಸರೋ ಲಾಯರ್ ಆಗಿದ್ದನ್ನು ತಿರಸ್ಕರಿಸುತ್ತೀರಾ? ಅಥವಾ ಕೋರ್ಟ್ ನಲ್ಲಿ ಆತ patricide ಕೇಸ್ ಅನ್ನು ವಾದ ಮಾಡಿದ್ದನ್ನು ತಿರಸ್ಕರಿಸುತ್ತೀರಾ? ರೋಮನ್ ರಿಪಬ್ಲಿಕ್ ನಲ್ಲಿ ವರ್ಷಕ್ಕೆ ೨೦ ಮಂದಿ quaestor ರನ್ನು ಆಯ್ಕೆ ಮಾಡುವ ಪದ್ಧತಿ ಇದ್ದಿದ್ದು ಸುಳ್ಳಾ?ಮುಂದೆ ಆತ quaestor ಆಗಿ ಎಲೆಕ್ಟ್ ಆಗಿದ್ದು ಸುಳ್ಳಾ? ‘cursus honorum ‘ ಎಂಬ ಪಬ್ಲಿಕ್ ಆಫೀಸ್ ಗಳು ಇದ್ದಿದ್ದು ಸುಳ್ಳಾ? ಹಾಗೂ ‘cursus honorum ‘ ಮಿಲಿಟರಿ ಹಾಗೂ ರಾಜಕೀಯ ವಿಭಾಗಗಳನ್ನು ಆಡ್ಮಿನಿಸ್ಟ್ರೇಶನ್ ಗಳ ಜವಾಬ್ದಾರಿಯನ್ನು ಹೊತ್ತಿದ್ದು ಸುಳ್ಳಾ? ರಾಜಕೀಯ ಕಾರ್ಯಾಳಯಕ್ಕಾಗಿ ಸೆನೇಟ್ ಗಳಿದ್ದದ್ದು ಸುಳ್ಳಾ? ಅಥವಾ ಅಲ್ಲಿ ಕೋರ್ಟ್, ಲಾಯರ್ , ಕಾನೂನು ಶಿಕ್ಷೆ, ಆಡ್ಮಿನಿಸ್ಟ್ರೇಶನ್ ಎಲ್ಲಾ ಇದ್ದು ಅಲ್ಲಿ ರೂಲ್ ಆಫ್ ಲಾ ಹಾಗೂ ಸಿಸ್ಟಮ್ ಎಂಬುದೇ ಇರಲಿಲ್ಲ ಎನ್ನುವದಕ್ಕೆ ನೀವು ನೀಡುವ ತಾರ್ಕಿಕ ಕಾರಣ ಏನು? ಇಷ್ಟೆಲ್ಲ ಚರ್ಚಿಸುವದಕ್ಕಿಂತ ನಾನು ಸಿಂಪಲ್ಲಾಗಿ ಕೇಳುವದಿಷ್ಟೆ. ನೀವು ಹೇಳುವ ರೂಲ್ ಆಫ್ ಲಾ ದ ಮೂಲಭೂತ ಲಕ್ಷಣವೇನು? ಒಂದು ಸಿಸ್ಟಮ್ ನಲ್ಲಿ ಇರಬೇಕಾದ ಯಾವ ಲಕ್ಷಣ ರೋಮನ್ ರಿಪಬ್ಲಿಕ್ ನಲ್ಲಿ ಇರಲಿಲ್ಲ?

    “ಆದರೆ ಗ್ರೀಕೋ ರೋಮನ್ ಸಮಾಜದ ಸಂಗತಿಗಳಿಗೂ ಪೋಸ್ಟ್ ಕ್ರಿಶ್ಚಿಯನ್ ಕಾಲದ ರಾಜಕೀಯ, ಸಾಮಾಜಿಕ ವ್ಯವಸ್ಥೆ, ಸಂಸ್ಕೃತಿ ಮತ್ತು ಕಾನೂನುಗಳಲ್ಲಿ ಸಂಪೂರ್ಣ ಭಿನ್ನತೆ ಇದೆ”
    ‘ಸಂಪೂರ್ಣ ಭಿನ್ನತೆ’ ಇದನ್ನು ನಾನು ಮೇಲೆ ಕೇಳಿದ ಪ್ರಶ್ನೆಗೆ ಉತ್ತರವೆಂಬಂತೆ ಉತ್ತರಿಸಿ.

    ” ಹೇಳಿಕೆಗೆ ಪುರಾವೆ ಮತ್ತು ತರ್ಕಬದ್ದ ವಾದಗಳಿಂದ ಬೆಳೆಸಿದ ಥಿಯರಿಯ ಬೆಂಬಲ ವಿರಬೇಕು”
    ಅದನ್ನೇ ನಾನು ಕೇಳುತ್ತಿರುವದು. :), ಎಷ್ಟೊ ಶತಮಾನಗಳ ಹಿಂದೆ ಸಮಾಜದಲ್ಲಿ ಕಾನೂನು ರಿಲಿಜಿಯಸ್ ಕಾನ್ಸಿಯಸ್ ನೆಸ್ ನಿಂದ ಅನುಸರಿಸಲ್ಪಡುತ್ತಿದ್ದರೆ, ಆ ಕಾನ್ಸಿಯಸ್ ನೆಸ್ ಇಂದಿನ ತಲೆಮಾರಿಗೆ (ಈ ತಲೆಮಾರಿನ ವ್ಯಕ್ತಿ ರಿಲಿಜಿಯಸ್ ಅಲ್ಲದಿದ್ದರೂ) ರವಾನೆಯಾಗುತ್ತದೆ ಎನ್ನುವದಕ್ಕೆ ವೈಜ್ಞಾನಿಕ ವಿವರಣೆ ಇದೆಯೇ ಎಂದು ಅದಿಕ್ಕೆ ನಾನು ಆಗ ಕೇಳಿದ್ದು. ಇಲ್ಲ ಎಂದರೆ ದೇವನೂರು ಮಹಾದೇವರ ಕೋಣನ ಬಲಿ ಕಥೆಯಷ್ಟೆ (ಅ)ವೈಜ್ಞಾನಿಕ ರೂಪವನ್ನು ತಳೆದುಕೊಳ್ಳುತ್ತದೆ. ಸಾವಿರ ವರ್ಷಗಳ ತನಕ ಕಾನ್ಸಿಯಸ್ ನೆಸ್ ಹರಿದು ಬರಲು ಸಾಧ್ಯವಿದೆ ಎನ್ನುವದಕ್ಕೆ ವೈಜ್ಞಾನಿಕ ವಿವರಣೆ ಇದ್ದರೆ, ಒಂದಿನ್ನೂರು ವರ್ಷಗಳ ಅವಧಿಯಲ್ಲಿ ರೋಮನ್ ಸಾಮ್ರಾಜ್ಯದ ನಂತರ ಬಂದ ಚರ್ಚ್ ಆಡಳಿತ ವ್ಯವಸ್ಥೆ ಯಾಕೆ ‘ಸಂಪೂರ್ಣ ಭಿನ್ನತೆ’ ಯನ್ನು ಪಡೆಯಿತು(ಅಥವಾ ಪ್ರಭಾವವನ್ನು ಪಡೆಯದೆ ಬೆಳೆಯಿತು) ಎನ್ನುವದಕ್ಕೂ ಅದಕ್ಕೆ ವ್ಯತಿರಿಕ್ತವಾದ ವೈಜ್ಞಾನಿಕ ವಿವರಣೆ ಬೇಕೆ ಬೇಕು(ಇಲ್ಲದಿದ್ದರೆ ದುಷ್ಯಂತ ಶಾಕುಂತಲೆಯನ್ನು ಮರೆತಂತೆ ರೋಮನ್ ಸಾಮ್ರಾಜ್ಯ ಪತನದ ನಂತರ ಅಲ್ಲಿಯ ಜನರು ಆ ಪ್ರದೇಶದ ಇತಿಹಾಸವನ್ನು ಮರೆತುಬಿಟ್ಟರು ಎಂಬ ವಿವರಣೆಯನ್ನು ಆಧಾರವನ್ನಾಗಿ ತೆಗೆದುಕೊಳ್ಳಬೇಕು ಅಷ್ಟೆ)
    ‘ರಿಲಿಜಿಯಸ್ ಕಾನ್ಸಿಯಸ್ ನೆಸ್’ ಬಗ್ಗೆ ಸೈಕಾಲಜಿ ಕೊಟ್ಟ ವಿವರಣೆ ಈ ಥಿಯರಿಯನ್ನು ಇದನ್ನು ಬಲಪಡಿಸುತ್ತದೆಯೆ? ಇದೆಲ್ಲವನ್ನೂ ನಾನು ವೈಜ್ಞಾನಿಕವಾಗಿಯೇ ಪ್ರಶ್ನಿಸಿದ್ದೇನೆ. ಬಟ್ ಇದನ್ನು ಕೇಳಿದರೆ ಆಗಿನಿಂದ ನಿಮ್ಮ ಉತ್ತರ ಒಂದೆ;’ಮಧ್ಯಯುಗದ ರೂಲ್ ಆಫ್ ಲಾ ಬಂದಿದ್ದು ಕ್ರಿಶ್ಚಿಯಾನಿಟಿಯಿಂದ’ ಎಂಬ Argumentum ad nauseam ವಾದ.

    “ಇದನ್ನು ಸಾಧಿಸಿ ತೋರಿಸಿದರೆ ಸಾಕು ನಮ್ಮ ವಾದಗಳೆಲ್ಲವೂ ಬಿದ್ದು ಹೋಗುತ್ತದೆ. ನೀವು ಚರಿತ್ರೆಯನ್ನಾದರೂ ಆದರಿಸಿ ಪುರಾಣಗಳನ್ನಾದರೂ ಆದರಿಸಿ ಹಿಂದೆ ನಮ್ಮಲ್ಲಿ ಯಾವ ರಾಜ ಯಾವ ಕಾಲದಲ್ಲಿ ಯಾವ ಕಾನೂನುಗಳನ್ನು/ಶಾಸನಗಳನ್ನು ಮಾಡಿದ? ”
    ಚರಿತ್ರೆಯಲ್ಲಿ ಅನೇಕ ರಾಜರುಗಳು ಶಾಸನವನ್ನು ಮಾಡಿದ್ದರು. ಉದಾ: ಅಶೋಕ. ದೆಹಲಿಯ ಮ್ಯೂಸಿಯಮ್ ನಲ್ಲಿ ಅದು ಇಂದಿಗೂ ನೋಡಲು ಲಭ್ಯವಿದೆ.ಮುಘಲ್ ಹಾಗೂ ಮೌರ್ಯರ ಆಳ್ವಿಕೆಯಲ್ಲಿ, ಕೃಷ್ಣದೇವರಾಯನ ಆಡಳಿತದಲ್ಲಿ ಕೋರ್ಟ್ ಗಳು ಇದ್ದಿದ್ದವು ಎಂದು ಓದಿದ್ದೇನೆ. ಅಷ್ಟಕ್ಕೂ ನಾನು ನಮ್ಮಲ್ಲಿ ಕಾನೂನುಗಳಿದ್ದವು ಎಂದು ಹೇಳಿದೆನಾದರೂ, ಅದು ಮಧ್ಯಯುಗದ ಪಾಶ್ಚಿಮಾತ್ಯ ರಾಜಕೀಯ ವ್ಯವಸ್ಥೆಯ ರಚನೆಯನ್ನು ಹೊಂದಿತ್ತು ಎಂದು ಎಲ್ಲೂ ಹೇಳಿಲ್ಲ. ಭಾರತೀಯರಿಗೆ ಕಾನೂನಿನ ಪರಿಕಲ್ಪನೆ ಇತ್ತು, ಕಾನೂನು ಎಂಬುದು ಏಲಿಯನ್ ಆಗಿರಲಿಲ್ಲ ಎಂದು ಹೇಳಲಷ್ಟೆ ಅದನ್ನು ಹೇಳಿದ್ದು. ಆದರೆ, ಭಾರತೀಯರಿಗೆ ಪಾಶ್ಚಾತ್ಯ ಕಾನೂನಿನ ಚೌಕಟ್ಟೆ ಅರ್ಥವಾಗದು, ಅಥವಾ ಆ ಚೌಕಟ್ಟಲ್ಲಿರುವ ನೈತಿಕ ಮೌಲ್ಯಗಳೇ ಅರ್ಥವಾಗುವದಿಲ್ಲ ಅಥವಾ ಆ ನೈತಿಕತೆಯನ್ನು ತಪ್ಪು ಎಂದೆ ಅನಿಸುವದಿಲ್ಲ, ಹಾಗಾಗಿ ಕಾನೂನಿನ ಚೌಕಟ್ಟಿನಲ್ಲಿ ಬದುಕಲು ಗೊತ್ತಿಲ್ಲ ಎಂಬ ಹೇಳಿಕೆಯನ್ನು ಸಾರಾಸಗಟವಾಗಿ ನಿರಾಕರಿಸುತ್ತೇನೆ. ಕಾನೂನನ್ನು ಕಡ್ಡಾಯವಾಗಿ ಪಾಲಿಸುವ ಭಾರತೀಯರು ಬೇಕಾದಷ್ಟಿದ್ದಾರೆ. ಅದನ್ನು ಅವರು ಒತ್ತಾಯಪೂರ್ವಕವಾಗಿ ಪಾಲಿಸುತ್ತಿರಲಿಲ್ಲ ಎನ್ನಲು ಹಂಪಿಹೊಳಿಯವರು ಕೊಟ್ಟ ವಿಶ್ವೇಶ್ವರಯ್ಯನವರ ಉದಾರಣೆ ಇಲ್ಲಿ ಗಮನಾರ್ಹವಾದುದು. ಕಾನೂನು ಪಾಲಿಸದ ಕೆಲ ಬೃಷ್ಟರ ಸ್ಥಿತಿಯನ್ನು ಇಡಿ ಭಾರತೀಯರ ಸಮಸ್ಯೆ ಎಂಬಂತೆ ಜನರಲೈಸ್ ಮಾಡುವದು ತೀರಾ ಬಾಲಿಶತನ.

    ಉತ್ತರ
    • ಆಗಸ್ಟ್ 26 2015

      ಭಾರತದಲ್ಲಿ ಕಾನೂನು ಪಾಲನೆ ಮಾಡದಿರಲು, ಲಂಚ ಋಷುವತ್ತು ಹೊಡೆಯಲು, ತೆರಿಗೆ ಕದಿಯಲು
      ಅಪ್ರಾಮಾಣಿಕ ರಾಜಕಾರಣಿಗಳು, ಇಂದಿರಾಗಾಂಧಿ ಕಾಲದ 90% ತೆರಿಗೆ ಪದ್ದಧತಿ,ಪಾವತಿಸಿದ ತೆರಿಗೆಯ ದುರ್ಬಳಕೆ ಇತ್ಯಾದಿ ಕಾರಣ. ಇದು ಮುಂದೆ ಕೆಡುತ್ತಲೇ ಹೋಯಿತು.
      ಇನ್ನು ನ್ಯಾಯಾಂಗ ವ್ಯವಸ್ಥೆ ಯ ಮೇಲಿನ ಅಪನಂಬಿಕೆ ಕಾನೂನು ಮುರಿಯಲು ಪ್ರೇರೇಪಿಸಿತು.
      ನನಗೆ ಕಂಡುಬಂದಂತೆ ಹೆಚ್ಚು ತೆರಿಗೆಯನ್ನು ಕೊಡುವುದರಿಂದ ನಮ್ಮ ಜೀವನ ಸುಗಮ ಆಗುವುದಾದರೆ ಯಾರೂ ಅದನ್ನು ಮಾಡಲು ಹಿಂಜರಿಯುವುದಿಲ್ಲ. ಅದು ನಮ್ಮ ದೇಶದಲ್ಲಿ ಆಗುತ್ತಿಲ್ಲ ಅಷ್ಟೇ.
      ಇಲ್ಲಿಯೂ ಸಹ ಲಂಚ ಇದೆ. ಜನರ ದಿನದ ಜೀವನಕ್ಕೆ ಅದರಿಂದ ತೊಂದರೆ ಇಲ್ಲ ಅಷ್ಟೇ. ಸರಕಾರ ಬೇಕೆಂದರೆ ನಮ್ಮ ಎಲ್ಲಾ ವ್ಯವಹಾರ ಜಾಲಾಡಬಹುದು.ಅಂತಹ ವ್ಯವಸ್ಥೆ ಇರುವ ಕಾರಣ ರಾಜಾರೋಷವಾಗಿ ಕಾನೂನು ಮುರಿಯಲು ಆಸ್ಪದವಿಲ್ಲ. ಆದಾಗ್ಯೂ ಸಾಕಷ್ಟು ನಿದರ್ಶನ ಇವೆ.

      ಇವರ ವ್ಯಕ್ತಿ ಗತ ವಾದ ಬದಲಾವಣೆಗೆ ಬದಲು ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರುವ ಪರಿಪಾಠ ಇಟ್ಟುಕೊಂಡಿರುವ ಕಾರಣ ವ್ಯಕ್ತಿ ಅದರ ಭಾಗವಾಗಿ ನಿಯಮಾನುಸಾರ ನಡೆಯಲುಪ್ರೇರೇಪಿಸಲ್ಪಡುತ್ತಾನೆ ಎಂಬುದು ನನ್ನ ಅನುಭವ.

      ಉತ್ತರ
  10. ಷಣ್ಮುಖ
    ಆಗಸ್ಟ್ 25 2015

    Why don’t you see Rajaram Hegde sir’s reply! ? He is already answered your questions!

    And you didn’t prove the existence of legislature, executive and judiciary in ancient India other than saying somewhere you read something and saw something! (Excuse me for not writing in kannada)

    ಉತ್ತರ
    • ಆಗಸ್ಟ್ 26 2015

      ನಾನಲ್ಲಿಯೂ ಉತ್ತರವನ್ನು ಕಂಡಿಲ್ಲ. ನೀವೆ ಇಲ್ಲಿ ನನ್ನ ಪ್ರತಿ ಪ್ರಶ್ನೆಗೂ ಉತ್ತರಿಸಿ, ಅಥವಾ ಆ ಉತ್ತರವನ್ನು ಇಲ್ಲಿ ಪೇಸ್ಟ್ ಮಾಡಿ.

      “And you didn’t prove the existence of legislature, executive and judiciary in ancient India other than saying somewhere you read something and saw something!”
      ಎ.ಕೆ ನೀಲಕಂಠ ಶಾಸ್ತ್ರಿಯವರು ಬರೆದ ‘ History of South India, From Prehistoric times to fall of Vijayanagar ‘ ಪುಸ್ತಕದಲ್ಲಿ ವಿಜಯನಗರದಲ್ಲಿ ಸ್ಥಿತಿಗತಿಗಳ ಬಗ್ಗೆ ಬರೆದಿದ್ದಾರೆ. ಮೊದಲೇ ಹೇಳಿದಂತೆ ನಾನು ಭಾರತದಲ್ಲಿ ಆಧುನಿಕ ಮೌಲ್ಯದ ರಚನೆಯ ರೂಲ್ ಆಫ್ ಲಾ ಇತ್ತೆಂದು ಎಲ್ಲೂ ಹೇಳಿಲ್ಲ. ಆದ್ರೆ ಭಾರತೀಯರಿಗೆ ತನ್ನದೇ ಕಾನೂನಿನ ಮೌಲ್ಯದ ಬಗ್ಗೆ ಅರಿವಿತ್ತು ಎನ್ನುವದಕ್ಕಾಗಿ ಹೇಳಿದ್ದು. ಕಾನೂನಿನ ಪರಿಕಲ್ಪನೆಯೇ ಇಲ್ಲದಿದ್ದರೆ ಭಾರತ ಸಂವಿಧಾನವನ್ನು ಅಕ್ಸೆಪ್ಟ್ ಮಾಡಿಕೊಳ್ಳುತ್ತಲೇ ಇರಲಿಲ್ಲ. ಉದಾರಣೆಗೆ ಹಳ್ಳಿಗಳಲ್ಲಿ ಓದದವರಿಗೂ ‘ಚಿನ್ನವನ್ನು ಅಡವಿಡುವದು’ ಎಂದರೆ ಅರ್ಥವಾಗುತ್ತದೆ(ಅದನ್ನು ಜಾರಿಗೊಳಿಸುವ ವ್ಯವಸ್ಥೆ, ಪ್ರಾಸೆಸ್ ಗಳಲ್ಲಿ ಸ್ಪಷ್ಟತೆಯಿರದಿದ್ದರೂ). ಕೊಲೆ ಸುಲಿಗೆ, ಕಳ್ಳತನ ತಪ್ಪೆಂದು ಆಗಿನ ಜನರಿಗೂ ಗೊತ್ತಿತ್ತು. ಅವುಗಳು ತಪ್ಪು ಎಂದು ಬ್ರಿಟಿಶ್ ಕಾನೂನು ಹೇಳಿದಾಗ ಅದು ತಪ್ಪೇಕೆ ಎಂದು ಕನ್ ಪ್ಯೂಸ್ ಆಗಿರಲಿಲ್ಲ ಇಲ್ಲಿಯ ಜನ. ಹಂಪಿಹೊಳಿಯವರಿಗೆ ಸ್ಪಷ್ಟವಾಗಿಯೇ ಈ ಬಗ್ಗೆ ಹೇಳಿದ್ದೇನೆ.
      ಹೋಗ್ಲಿ ಬಿಡಿ, ಭಾರತ ಮುಘಲರು, ಬ್ರಿಟಿಷರು ಬರುವದಕ್ಕಿಂತ ಮೊದಲು ಸ್ಟೋನ್ ಏಜ್ ನಲ್ಲಿತ್ತು ಎಂದೆ ಅಂದುಕೊಳ್ಳೋಣ. ಅದರಿಂದ ನಾನು ಈ ವಾದದಲ್ಲಿ ಕಳೆದುಕೊಳ್ಳುವದೇನೂ ಇಲ್ಲ.

      ಉತ್ತರ
      • ಷಣ್ಮುಖ
        ಆಗಸ್ಟ್ 26 2015

        🙂 so only law law must say stealing is wrong 🙂 good.. 🙂

        Colonial writers and their Indian successors saw laws and legislations in ancient India but without proof!!! (For your kind information, I am teaching Ancient Indian Social and Political thought for more than 12 years to Post Graduate students! And Prof Rajaram Hegde is an famous Ancient and midival indian history and archeological researcher. So please don’t simply reproduce same old text book stories to us)

        ಉತ್ತರ
      • ಷಣ್ಮುಖ
        ಆಗಸ್ಟ್ 26 2015

        [. ಬಾಲಗಂಗಾಧರ ಅವರು ತಿಳಿಸುವುದೆಂದರೆ ಥಿಯಾಲಜಿಯು ಒಂದು ಧೋರಣೆಯನ್ನು ರೂಪಿಸುತ್ತದೆ, ಆ ಧೋರಣೆಯು ಯುರೋಪಿನ ಸೆಕ್ಯುಲರ್ ಪ್ರಭುತ್ವಗಳು ಕಾನೂನನ್ನು ರೂಪಿಸಿಕೊಳ್ಳಲಿಕ್ಕೆ ಬುನಾದಿಯಾಗುತ್ತವೆ. ಅದರರ್ಥ ಥಿಯಾಲಜಿಯ ವಿವರಗಳು ಮರೆಯಾಗಿರಬಹುದು, ಧೋರಣೆ ಉಳಿಯುತ್ತದೆ. ಆ ಧೋರಣೆ ಎಂದರೆ ಕಾನೂನುಗಳು ಮನುಷ್ಯನ ವಿಲ್ ( ಇಚ್ಛೆ ?) ಎಂಬುದು. ಅಂದರೆ ಒಂದು ಪ್ರಭುತ್ವದಲ್ಲಿರುವ ಕಾನೂನುಗಳು ಆ ಪ್ರಭುತ್ವವನ್ನು ರಚಿಸಿಕೊಂಡ ಮನುಷ್ಯರ ಇಚ್ಛೆಯನ್ನು ಪ್ರತಿನಿಧಿಸುತ್ತದೆ. ಇಂಥ ಇಚ್ಛೆಯೇ ಸಾರ್ವಭೌಮತ್ವ. ಥಿಯಾಲಜಿಯಲ್ಲಿ ಗಾಡ್ ಸಾರ್ವಭೌಮನಾಗಿದ್ದರೆ ಸೆಕ್ಯುಲರ್ ಪ್ರಭುತ್ವದಲ್ಲಿ ಮನುಷ್ಯ ಅಂಥ ಸಾರ್ವಭೌಮನಾಗುತ್ತಾನೆ. ಧೋರಣೆ ಒಂದೇ. ವಿವರ ಬೇರೆ. ಇನ್ನು ಈ ಧೋರಣೆಯು ಆಧುನಿಕ ಸೆಕ್ಯುಲರ್ ರಾಜಕೀಯ ಚಿಂತನೆಗಳಲ್ಲಿ ಕ್ರಮವಾಗಿ ಥಿಯಾಲಜಿಯ ಬುನಾದಿಯ ಮೇಲೆ ರೂಪುಗೊಂಡಿದೆ ಎಂಬುದನ್ನು ಕಾನೂನು ಮಾತ್ರವಲ್ಲ, ಹಕ್ಕುಗಳ ಕಲ್ಪನೆ, ಸಮಾನತೆ,ಸ್ವಾತಂತ್ರ , ಸಾರ್ವಭೌಮತ್ವ, ಇತ್ಯಾದಿ ಕಲ್ಪನೆಗಳ ಮೂಲಕವೂ ಗುರುತಿಸಬಹುದು ಎಂಬುದನ್ನು ಬಾಲಗಂಗಾಧರ ಅವರು ತಮ್ಮ ಬರವಣಿಗೆಗಳಲ್ಲಿ ತೋರಿಸುತ್ತಾರೆ. ಕ್ರಿಶ್ಚಿಯಾನಿಟಿಯು ಒಂದು ಲೋಕದೃಷ್ಟಿಯನ್ನು ರೂಪಿಸಿತ್ತು ಹಾಗೂ ಈ ಮೇಳಿನ ಎಲ್ಲಾ ಪರಿಕಲ್ಪನೆಗಳೂ ಅದರಅವಿಭಾಜ್ಯ ಅಂಗಗಳಾಗಿವೆ. ಇಂಥ ಲೋಕದೃಷ್ಟಿಯು ಕಲ್ಪಿಸಿಕೊಂಡ ಕಾನೂನಿನ ಆಳ್ವಿಕೆ ಎಂಬುದನ್ನು ಈ ಎಲ್ಲಾ ಪರಿಕಲ್ಪನೆಗಳ ಜೊತೆಗೆ ಇಟ್ಟು ನೋಡಬೇಕು. ಅವುಗಳಿಂದ ತಪ್ಪಿಸಿ ನೋಡಿದಲ್ಲಿ ಅದರ ನಿರ್ದಿಷ್ಟ ಸಂದರ್ಭ ತಿಳಿಯುವುದಿಲ್ಲ. ಇಲ್ಲ ಲಾ ಮಾತ್ರವೇ ಥಿಯಾಲಜಿಯಿಂದ ಬಂದಿಲ್ಲ ಅದಕ್ಕೆ ಸಂಬಂಧಿಸಿದ ಉಳಿದೆಲ್ಲವೂ ಬಂದಿವೆ ಎಂಬುದನ್ನು ವಿಶೇಷವಾಗಿ ವಾದಿಸಬೇಕಾದರೆ ಬಾಲಗಂಗಾಧರ ಅವರ ವಾದಗಳನ್ನು ವ್ಯವಸ್ಥಿತವಾಗಿ ತಿರಸ್ಕರಿಸಬೇಕಾಗುತ್ತದೆ.
        ಆಧುನಿಕ ಲಾ ಸಂಬಂಧಿಸಿ ಮಾತನಾಡುವಾಗಅವುಗಳ ದೇಶ ಕಾಲ ಹಿನ್ನೆಲೆಯಲ್ಲಿ ಕ್ರೈಸ್ತ ಥಿಯಾಲಜಿ ಇತ್ತೇ ವಿನಃ ರೋಮನ್ ಲಾ ಇರಲಿಲ್ಲ ಎಂಬುದು ವಾಸ್ತವ. ಹಾಗಾಗಿ ರೂಲ್ ಆಫ್ ಲಾ ಎಂಬುದು ಥಿಯಾಲಜಿಯಿಂದ ಹುಟ್ಟಿದ್ದು ಎಂಬ ಹೇಳಿಕೆ ಅಸಂಗತವಲ್ಲ.ಇನ್ನು ಕ್ರೈಸ್ತ ಥಿಯಾಲಜಿಗೆ ಗ್ರೀಕ್ ಹಾಗೂ ರೋಮನ್ ಚಿಂತನೆಗಳ ಪ್ರಭಾವವಿತ್ತೆ ಎಂಬುದು ಒಂದು ಪ್ರತ್ಯೇಕ ಪ್ರಶ್ನೆ. ಖಂಡಿತವಾಗಿಯೂ ಇತ್ತು. ಕ್ರೈಸ್ತ ಚಿಂತನೆಗಳು ಬೆಳೆದಿದ್ದೇ ಗ್ರೀಕ ಹಾಗೂ ರೋಮನ್ನರ ಜಗತ್ತಿನಲ್ಲಿ. ಆದರೆ ಆ ಜಗತ್ತನ್ನು ಕ್ರೈಸ್ತರು ರಿಲಿಜನ್ನಾಗಿ ಪರಿವರ್ತಿಸಿ ಒಳಗೊಂಡರು. ರೋಮನ್ ಲಾ ಎಂಬುದು ಸುಪ್ರಸಿದ್ಧವಾದುದು, ಸಿಸೆರೋ ಕೂಡ ಅವುಗಳಅಗತ್ಯವನ್ನು ಒತ್ತಿ ಹೇಳುವುದರಲ್ಲಿ ಆಶ್ಚರ್ಯವಿಲ್ಲ. ಹಾಗೆಂದ ಮಾತ್ರಕ್ಕೆ ರೋಮನ್ನರು ಮನುಷ್ಯನನ್ನು ಸಾರ್ವಭೌಮತ್ವಕ್ಕೆ ಸಮೀಕರಿಸಿಕೊಂಡು ಕಾನೂನು ಅವನ ಇಚ್ಛೆ ಎಂಬ ನಿರ್ದಿಷ್ಟ ]

        ಉತ್ತರ
        • ಷಣ್ಮುಖ
          ಆಗಸ್ಟ್ 26 2015

          …..ಧೋರಣೆಯನ್ನು ತಳೆದಿದ್ದರು ಎಂಬುದಕ್ಕೆ ಅದು ಆಧಾರವನ್ನು ಒದಗಿಸುವುದಿಲ್ಲ.]

          ಉತ್ತರ
          • ಆಗಸ್ಟ್ 27 2015

            ಇದನ್ನೇ ನಾನು ಇಲ್ಲಿಯವರೆಗೂ ‘Argumentum ad nauseam ವಾದವೆಂದು ಕರೆದಿದ್ದು. ಈಗ ಈ ಹೇಳಿಕೆಯನ್ನೇ ಅನಾಲಿಸಿಸ್ ಮಾಡೋಣ:
            “ಬಾಲಗಂಗಾಧರ ಅವರು ತಿಳಿಸುವುದೆಂದರೆ ಥಿಯಾಲಜಿಯು ಒಂದು ಧೋರಣೆಯನ್ನು ರೂಪಿಸುತ್ತದೆ, ಆ ಧೋರಣೆಯು ಯುರೋಪಿನ ಸೆಕ್ಯುಲರ್ ಪ್ರಭುತ್ವಗಳು ಕಾನೂನನ್ನು ರೂಪಿಸಿಕೊಳ್ಳಲಿಕ್ಕೆ ಬುನಾದಿಯಾಗುತ್ತವೆ”
            ಈ ಮೇಲಿನ ಹೇಳಿಕೆಗೆ ವೈಜ್ಞಾನಿಕ ವಿವರಣೆ ಏನು? ಅಂದರೆ ಥಿಯಾಲಜಿ ಅಥವಾ ರಿಲಿಜಿಯಸ್ ಕಾನ್ಸಿಯಸ್ ನೆಸ್ ಬಗೆಗಿನ ಈ ಮೇಲಿನ ವಿವರಣೆಯನ್ನು, ಅಥವಾ ಧೋರಣೆಯನ್ನು ಸೈಕಾಲಜಿಯಾಗಲೀ ಅಥವಾ ಬೇರ್ಯಾವುದೇ ವಿಜ್ಞಾನ ಸಾಕ್ಷೀಕರಿಸುತ್ತದೆಯೆ? ಥಿಯಾಲಜಿಯ ಧೋರಣೆಯನ್ನು ಸಾಭೀತುಪಡಿಸಲಾಗಿದೆಯೆ?ಸಾಭೀತುಪಡಿಸಲಾಗಿದ್ದರೆ ಅದಕ್ಕೆ ಅನುಸರಿಸಿದ ಮಾದರಿ ಯಾವುದು? ಈ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವ ಬದಲು ನೀವು ಅದೊಂದನ್ನೆ ಒತ್ತಿ ಹೇಳುತ್ತಿದ್ದೀರಾ. ಥಿಯಾಲಜಿಯ ಈ ಧೋರಣೆಯನ್ನು ಸ್ಪಷ್ಟ ಪಡಿಸಲು ವೈಜ್ಞಾನಿಕ ವಿವರಣೆ ಇಲ್ಲದಿದ್ದರೆ, ಬುದ್ಧಿಜೀವಿಗಳ ಬ್ರಾಹ್ಮಣ್ಯದ ವಿವರಣೆಗಿಂತ ಇದು ಹೆಚ್ಚು ವೈಜ್ನಾನಿಕವಾಗುವದಿಲ್ಲ. ದೇಹದೊಳಗೆ ಬ್ಯಾಕ್ಟೀರಿಯಾ(antigen) ಪ್ರವೇಶಿಸಿದರೆ ಅದನ್ನು ಸದೆಬಡಿಯಲು ಅದಕ್ಕೆ ಕಾಂಪ್ಲಿಮೆಂಟರಿಯಾಗಿ antibody ಉತ್ಪನ್ನವಾಗುತ್ತದೆ. ಹಾಗಂದ ಮಾತ್ರಕ್ಕೆ antigen ಸತ್ತರೂ antibody ಆ antigen ನ ಸ್ವರೂಪವನ್ನು ಉಳಿಸಿಕೊಳ್ಳುತ್ತದೆ ಎಂದಂತೆ ಆಯಿತು ನಿಮ್ಮ ವಾದ. ಇದನ್ನು ‘ಫಾಲ್ಸ್ ಇಕ್ವಿವೆಲೆನ್ಸ್’ ಎಂದು ಕರೆಯುತ್ತಾರೆ ಅಷ್ಟೆ. ಆದರೆ ಇದು ‘ಫಾಲ್ಸ್ ಇಕ್ವಿವೆಲೆನ್ಸ್’ ಅಲ್ಲ ಎನ್ನಲು ಥಿಯಾಲಜಿಯ ನೀವು ಹೇಳುವ ಧೋರಣೆಯನ್ನು ಸಮರ್ಥಿಸುವ ವೈಜ್ಞಾನಿಕ ವಿವರಣೆ ಬೇಕೆ ಬೇಕು.

            ಉತ್ತರ
      • ಆಗಸ್ಟ್ 26 2015

        ಪ್ರಜ್ಞಾರವರೇ,

        ಭಾರತೀಯರಿಗೂ ಅವರದೇ ಆದ ಕಾನೂನುಗಳಿದ್ದವು ಎಂದು ಹೇಳುವ ಮುಂಚೆ ನಾವು ಕೆಲವು ಅಂಶಗಳನ್ನು ಗಮನಿಸಬೇಕು. ಉದಾಹರಣೆಗೆ, ಶರಣರ ದರ್ಶನವನ್ನು ಒಪ್ಪಿಕೊಂಡ ರಾಜನು, ಶೈವರೇ ಹೆಚ್ಚಿದ್ದ ರಾಜ್ಯವೊಂದರಲ್ಲಿ ಒಬ್ಬ ಮಾಡಿದ ಅಪರಾಧವನ್ನು ಯಾವುದಾದರೂ ವಚನವೊಂದರ ವಿಧಿ/ನಿಷೇಧದ ಅಡಿಯಲ್ಲಿ ತಂದು ಸರಿ/ತಪ್ಪುಗಳನ್ನು ನಿರ್ಣಯಿಸುತ್ತಿದ್ದನೇ? “ಕಳಬೇಡ ಕೊಲಬೇಡ” ಎಂಬ ವಚನವನ್ನು ಮೀರಿದ್ದಕ್ಕಾಗಿ ನಿನಗೆ ಈ ಶಿಕ್ಷೆ ಎಂದು ತೀರ್ಪುಕೊಡುತ್ತಿದ್ದನೇ? ನಿಜ, ಕೌಟಿಲ್ಯನ ಅರ್ಥಶಾಸ್ತ್ರವಿದೆ, ಮಹಾಭಾರತದ ಶಾಂತಿಪರ್ವವೂ ಇದೆ. ಮನುಸ್ಮೃತಿಯೂ ಇದೆ. ಇವೆಲ್ಲವೂ ರಾಜನಾದವನೊಬ್ಬ ಆಡಳಿತ ಮಾಡಲಿಕ್ಕೆ ಸುಸೂತ್ರವಾಗುವಂತೆ ಸಹಾಯ ಮಾಡುವ ಗ್ರಂಥಗಳು. ಆದರೆ ಅವು ಸಂವಿಧಾನಗಳಲ್ಲ. ಇವೆಲ್ಲ ಹೆಚ್ಚು ಕಮ್ಮಿ ಅಡುಗೆ ಪುಸ್ತಕಗಳಿದ್ದಂತೆ. ಒಂದಾನೊಂದು ಕ್ರಿಯೆಯನ್ನು ಸರಿಯಾಗಿ ಮಾಡುವ ವಿಧಾನವೊಂದನ್ನು ಕಲಿತು ನಂತರ ಅದನ್ನು ಡಾಕ್ಯುಮೆಂಟ್ ಮಾಡಿದರೆ ಅದೇ ಶಾಸ್ತ್ರ.

        ನಮ್ಮ ವೇದಗಳ ವಿಧಿ/ನಿಷೇಧಗಳು, ರಾಜ್ಯಶಾಸ್ತ್ರದ ಕುರಿತ ಪುರಾತನ ಗ್ರಂಥಗಳು ಆಗಿನ ಸಮಾಜದ ಸ್ಟಾಂಡರ್ಡ್ ಪ್ರಾಕ್ಟೀಸ್ ಗಳ ಸಂಗ್ರಹವೇ ಹೊರತು, ಈ ಸಮಾಜ ಹೀಗಿರಬೇಕು ಹಾಗಿರಬೇಕು ಎಂಬ ಇಚ್ಛೆಯೊಂದಿಗೆ ರೂಪಿಸಿಕೊಂಡ System ಅಲ್ಲ. ತಂದೆ ತಾಯಿಯನ್ನು ಗೌರವಿಸುವ ಪರಂಪರೆ ಇದ್ದಿದ್ದರಿಂದ ವೇದಗಳಲ್ಲಿ ಮಾತೃದೇವೋ ಭವ ಪಿತೃದೇವೋ ಭವ ಎಂಬ ಮಾತುಗಳಿವೆಯೇ ಹೊರತು ಪುಸ್ತಕದಲ್ಲಿ ಹಾಗೆ ಬರೆದಿರುವದರಿಂದ ಬ್ರಾಹ್ಮಣನೊಬ್ಬ ತನ್ನ ತಂದೆ/ತಾಯಿಯನ್ನು ಗೌರವಿಸುತ್ತಾನೆ ಎಂದಲ್ಲ.

        ಈಗಿನ ಸಂವಿಧಾನ ಕಳ್ಳತನ ಎಂಬ ಕ್ರಿಯೆಗೆ ಶಿಕ್ಷೆ ಏಕೆ ಕೊಡುತ್ತದೆ? ಕಳ್ಳತನ ಎಂಬ ಕ್ರಿಯೆ, ಸಮಾಜದ ಜನರ ಇಚ್ಛೆಯನ್ನು ಬಿಂಬಿಸುವ ಕಾನೂನನ್ನು ಮೀರುವದರಿಂದ ಶಿಕ್ಷಾರ್ಹವಾಗುತ್ತದೆ. ನಮ್ಮ ಪರಂಪರೆ ಈ ರೀತಿ ಯೋಚಿಸುವದಿಲ್ಲ. ತೀರ್ಪು ಕೊಡಲು ಒಂದಾನೊಂದು ಪುಸ್ತಕವನ್ನೋ ಪ್ರಕರಣವನ್ನೋ ಕೇವಲ ರೆಫೆರೆನ್ಸ್ ಆಗಿ ಉಪಯೋಗಿಸುವದು ಬೇರೆ. ಈ ಪುಸ್ತಕವೇ ಅಂತಿಮ ಎಂದು ಹೇಳಿ ಅದನ್ನು ಮೀರಿದ್ದಕ್ಕೆ ಶಿಕ್ಷೆ ನೀಡುವದೇ ಬೇರೆ.

        ಸಿಸೆರೋ ನ ಕಾರ್ಯಗಳನ್ನು ಅರ್ಥೈಸಿಕೊಳ್ಳುವ ಜ್ಞಾನ ನನ್ನಲ್ಲಿಲ್ಲ. ಕಾರಣ ಆತನ ಮೂಲಭಾಷೆ ನನ್ನ ಅರಿವಿಗೆ ಹೊರತಾದದ್ದು. ಈಚಿನ ಇಂಗ್ಲೀಷ್ ಅನುವಾದಗಳು ಆತನ ಕಲ್ಪನೆಯನ್ನೇ ಹೊಂದಿವೆಯೇ ಎಂಬುದು ಸಂಶಯಾಸ್ಪದ. ಆತ ರೂಲ್ ಆಫ್ ಲಾ ಅನ್ನು ಬೆಂಬಲಿಸಿದ್ದ. ಕಾನೂನಿನ ಸರ್ವಶ್ರೇಷ್ಠತೆಯನ್ನು ಪ್ರತಿಪಾದಿಸಿದ್ದ ಎಂಬುದು ನಂತರದ ಬೆಳವಣಿಗೆಗಳೋ, ಅಥವಾ ಆತನ ಫಿಲಾಸಫಿಯನ್ನು ಮೂಲತಃ ಓದಿಕೊಂಡು ದಾಟಿಸಿಕೊಂಡು ಬಂದಿರುವ ಫಿಲಾಸಫರ್ ಗಳ ಅಭಿಪ್ರಾಯವೋ ಗೊತ್ತಿಲ್ಲ. ಏಕೆಂದರೆ ಈ ವ್ಯತ್ಯಾಸ ಬೌದ್ಧ ಮತ್ತು ವಚನ ದರ್ಶನಗಳನ್ನು ಅರ್ಥೈಸುವದರಲ್ಲಿ ಕಂಡು ಬಂದಿದೆ. ಹೀಗಾಗಿ “ಸಿಸೆರೋ ಸಂವಿಧಾನವನ್ನು ಪ್ರತಿಪಾದಿಸಿದ್ದ ಎಂಬುದು ಇತಿಹಾಸ” ಎಂಬ ವಾಕ್ಯದ ಸತ್ಯಾಸತ್ಯತೆಯೇ ಅರಿಯಬೇಕಿದೆ.

        ಉತ್ತರ
        • ಆಗಸ್ಟ್ 27 2015

          ಧಾರ್ಮಿಕ ಹೊತ್ತಗೆಗಳನ್ನಾಧರಿಸಿದ ಕಾನೂನು ನಮ್ಮಲ್ಲಿತ್ತು ಎಂದು ನಾನೆಲ್ಲೂ ಹೇಳಿಲ್ಲ. ನಾನು ಹೇಳದಿರುವದರ ಬಗ್ಗೆ ಮತ್ತೆ ಮತ್ತೆ ಸ್ಪಷ್ಟತೆಯನ್ನು ಕೊಡಲು ಸಾಧ್ಯವಿಲ್ಲ. ಆದ್ರೆ ಭಾರತೀಯರಿಗೆ ಕಾನೂನಿನ ಮೌಲ್ಯಗಳು ಅರ್ಥವಾಗದಿದ್ದರೆ ಇಷ್ಟೊತ್ತಿಗೆ ಭಾರತ ಒಂದು ಪೈರೇಟ್ ದೇಶ ಆಗಿರುತ್ತಿತ್ತು. ಪಾಶ್ಚಾತ್ಯ ಕಾನೂನು ಮೌಲ್ಯಗಳು ನಮ್ಮ ಮೌಲ್ಯಗಳಿಗಿಂತ ಬೇರೆಯದೇ ಆಗಿದ್ದರೂ ನಾವು ನಮ್ಮದೇ ಮೌಲ್ಯಗಳಿಗೆ ಸಮೀಕರಿಸಿ ಅವನ್ನು ಅನುಸರಿಸುತ್ತೇವೆ. ಭಾರತದಷ್ಟು ಸಡಿಲ ಕಾನೂನು, ಪರಿಸ್ಥಿತಿ ಬೇರೆ ದೇಶದಲ್ಲಿದ್ದರೆ ಹಾಡು ಹಗಲಿಗೆ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದರು. ಆದರೆ ಬಾಲಗಂಗಾಧರ್ ಅವರ ಪ್ರಕಾರ ಭಾರತೀಯರಿಗೆ ಬ್ರಷ್ಟಾಚಾರ ಎನ್ನುವದು ತಪ್ಪು ಅಂತಾನೆ ಅನಿಸೋಲ್ವಂತೆ. ಇದರ ಬಗ್ಗೆ ನೀವೆನಂತೀರಿ?

          ಉತ್ತರ
          • ಆಗಸ್ಟ್ 27 2015

            ಪ್ರಜ್ಞಾರವರೇ,

            ಭಾರತೀಯರಿಗೆ ಕಾನೂನಿನ ಮೌಲ್ಯಗಳನ್ನು ಸಂಪ್ರದಾಯಗಳ ಮೌಲ್ಯಗಳೊಂದಿಗೆ ಸಮೀಕರಿಸುವದರಿಂದ ಅರ್ಥವಾಗುತ್ತವೆಯೇ ಹೊರತು ಕಾನೂನನ್ನೇ ಸ್ವತಂತ್ರವಾಗಿ ಅರ್ಥೈಸಿಕೊಂಡಿಲ್ಲ. ಹಾಗೆ ನೋಡಿದರೆ ಅತ್ಯಾಚಾರ/ಕೊಲೆಗಳಂಥ ಮೊಕದ್ದಮೆ ನಡೆಯುತ್ತಿರುವ ಮನುಷ್ಯ ಬೈಲ್ ಪಡೆಯುವದೂ ಕೂಡ ಅನಕ್ಷರಸ್ಥ ಸಂತ್ರಸ್ತರ ಮನೆಜನರಿಗೆ ಅರ್ಥವಾಗುವದಿಲ್ಲ. ಮಾಡಿರುವ ಕ್ರಿಯೆಗೆ ಶಿಕ್ಷೆ ಕೊಡದೇ, ಆ ಕ್ರಿಯೆಯನ್ನು ಒಂದು ಕಾನೂನಿನಡಿಯಲ್ಲಿ ಎಳೆದು ತಂದು ಹೆಚ್ಚು ಶಿಕ್ಷೆ ಕೊಡುವಂತೆ ಮಾಡುವ ಸಂತ್ರಸ್ತರ ಪರ ವಕೀಲರ ವಾದಗಳು, ಅದೇ ಕ್ರಿಯೆಯನ್ನು ಇನ್ನೊಂದು ಕಾನೂನಿನಡಿಯಲ್ಲಿ ಎಳೆದು ತಂದು ಶಿಕ್ಷೆಯ ಪ್ರಮಾಣವನ್ನು ತಗ್ಗಿಸುವಂತೆ ಮಾಡುವ ಆರೋಪಿಯ ಪರ ವಕೀಲರ ವಾದಗಳು ಇವೆಲ್ಲ ಅರ್ಥವಾಗುವದಿಲ್ಲ. ಮಾಡಿರುವ ತಪ್ಪನ್ನು ಒಪ್ಪಿಕೊಂಡ ಮೇಲೂ ವಾದವಿವಾದಗಳು ಜರುಗಿ ೧೦ ವರ್ಷಗಳ ನಂತರ ಪ್ರಕಟವಾಗುವ ನ್ಯಾಯ ಖಂಡಿತ ಅರ್ಥವಾಗುವಂಥದ್ದಲ್ಲ. ಒಂದು ಪ್ರಕರಣವನ್ನು ೧೮ವರ್ಷ ವಿಚಾರಿಸಿ ನೀಡಿದ ತೀರ್ಪನ್ನು ಇನ್ನೊಂದು ಕೋರ್ಟು ೧೮ ದಿನಗಳಲ್ಲಿ ಅಸಿಂಧು ಎಂದು ತೀರ್ಪು ನೀಡುವದು ಹೇಗೆ ಅರ್ಥವಾಗುತ್ತದೆ?

            ನೋಡಿ ಸಾಮಾನ್ಯ ಭಾರತೀಯ ಕಾನೂನುಗಳನ್ನು ಓದಿರುವದಿಲ್ಲ. ಆದರೆ ಆತನ ಸಂಪ್ರದಾಯಗಳಿಗಿಂತ ಇವುಗಳು ಭಿನ್ನವೇನಲ್ಲ ಎಂಬ ಊಹೆಯಡಿಯಲ್ಲಿ ತನ್ನ ಪಾಡಿಗೆ ತಾನು ಜೀವನ ಸಾಗಿಸುತ್ತಿರುತ್ತಾನೆ. ಸದ್ಯಕ್ಕೆ ನಮ್ಮ ದೇಶದಲ್ಲಿ ಜನಸಾಮಾನ್ಯರು ಸುಸೂತ್ರವಾಗಿ ಜೀವನ ನಡೆಸುತ್ತಿದ್ದರೆ ಅದಕ್ಕೆ ಕಾರಣ ಇದೇ ಊಹೆ. ಎಲ್ಲ ರಾಜಕಾರಣಿಗಳ ಕೆಟ್ಟ ಕೆಲಸಗಳ ಅರಿವೂ ಆತನಿಗಿರುತ್ತದೆ. ಆದರೆ ಅವರನ್ನು ಹಿಡಿದು ಶಿಕ್ಷಿಸುವ ಶಕ್ತಿ ಕಾನೂನಿನಲ್ಲಿಲ್ಲ ಎಂಬುದೂ ಆತನಿಗೆ ಗೊತ್ತಿದೆ. ಏಕೆಂದರೆ ಕಾನೂನುಗಳನ್ನು ಅರಿತವರು ಅದನ್ನು ಮುರಿಯುವದರಲ್ಲೇ ಮಗ್ನರಾಗಿದ್ದಾರೆ. ಇರಲಿ ಕಾನೂನಿನ ಬಗ್ಗೆ ಹೆಚ್ಚು ಹೇಳಲು ಹೋಗುವದಿಲ್ಲ. ನಿಮಗೆ ಈಗಾಗಲೇ ಗೊತ್ತಿದೆ.

            ಭ್ರಷ್ಟಾಚಾರದ ಕುರಿತು ಬಾಲಗಂಗಾಧರವರ ಹೇಳಿಕೆಯನ್ನು ಇದೇ ಅರ್ಥದಲ್ಲೇ ಗ್ರಹಿಸಬೇಕಾಗುತ್ತದೆ. ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿ ಕಾಣುವದರಿಂದ ಇನ್ನೊಬ್ಬರ ಹಣವನ್ನು ಏಮಾರಿಸುವದು ತಪ್ಪಾಗಿ ಕಾಣುತ್ತದೆಯೇ ಹೊರತು, ಪಾಶ್ಚಿಮಾತ್ಯರಂತೆ ನಾವು ವಿಚಾರಿಸುವದಿಲ್ಲ ಎಂಬ ಮಾತನ್ನು ಅವರು ಹೇಳಿದ್ದಾರೆ. ನೀವು ಆರಂಭದ ಅರ್ಧವಾಕ್ಯವನ್ನಷ್ಟೇ ತೆಗೆದುಕೊಂಡು ಅಷ್ಟಕ್ಕೇ ಗಂಟು ಬಿದ್ದರೆ ಹೇಗೆ? ಗೀತೆಯಲ್ಲಿ ಕೃಷ್ಟ “ಸರ್ವಧರ್ಮಾನ್ ಪರಿತ್ಯಜ್ಯ” ಮತ್ತು “ಯಥೇಚ್ಛಸಿ ತಥಾ ಕುರು” ಎಂದು ಹೇಳಿದ್ದಾನೆ, ಹೀಗಾಗಿ ಅದುವೇ ಗೀತಾಸಾರ ಎಂದಂತಾಗುತ್ತದೆ.

            ಉತ್ತರ
  11. ಷಣ್ಮುಖ
    ಆಗಸ್ಟ್ 26 2015

    My simple question. Tell me, according to which section (and part) of Roman law Ciciro’s death penalty was done? which law said his crime was punished to death by cutting his head?. If you could spell it I will rethink my position.

    ಉತ್ತರ
    • ಆಗಸ್ಟ್ 26 2015

      Political assassination is nothing to do with the question of Roman republic. Does killing of Tsar family by Lenin Govt anything to do with disagreeing communist regime in Soviet Russia?

      ಉತ್ತರ
      • ಷಣ್ಮುಖ
        ಆಗಸ್ಟ್ 26 2015

        Law must be above all and no one is the above the law ! And all excusitions must cite the specific section of the law as the ground for the specific decision ! Please cite such examples … Please cite such examples in Roman period and give the reference.

        Alas , I just read the what is the meaning of republic that Ciciro’s uses! No one has any definite clue about what it is. Some one say it as “public thing” someother say ‘common wealth’ and so on but not sure what exactly it is . …interestingly, They say it is nothing to do with the concept of modern republics. 🙂

        ಉತ್ತರ
        • ಷಣ್ಮುಖ
          ಆಗಸ್ಟ್ 26 2015

          “To Cicero, law was not a matter of written statutes, and lists of regulations, but was a matter deeply ingrained in the human spirit, one that was an integral part of the human” experience.http://www.liquisearch.com/de_legibus/book_one

          What a joke ? You really kidding us ! This statement itself demonstrates that the modern ‘Rule of Law’ is nothing to do with the Ciciro’s connotation of ‘Law’. 🙂
          One cannot even imagine the Law without written statutes today! And even in 18-19th century Europe for that matter 🙂

          That’s it from my side

          ಉತ್ತರ
          • ಆಗಸ್ಟ್ 26 2015

            ಡಿ ಲೆಜಿಬಸ್ ನ ೩ನೆ ಪುಸ್ತಕವನ್ನು ಭಾಷಾಂತರಿಸಿ. ಅಷ್ಟಕ್ಕೂ ನಾನು ಮೊದಲು ಸಿಸರೋ ಜೀವನದ ಬಗ್ಗೆ ನೀಡಿದ ಘಟನೆಗಳನ್ನು ತಿರಸ್ಕರಿಸಲು ನಿಮಗಿರುವ ಕಾರಣಗಳನ್ನು ನೀವು ಹೇಳದೆ ಎಸ್ಕೇಪ್ ಆದ್ರಿ. ಬೇಕಾದ್ರೆ ಇನ್ನೊಮ್ಮೆ ಪೇಸ್ಟ್ ಮಾಡುತ್ತೇನೆ, ಸಾಧ್ಯವಾದರೆ ನೋಡಿ ಹೇಳಿ. 🙂
            “ಸಿಸರೋ ಲಾಯರ್ ಆಗಿದ್ದನ್ನು ತಿರಸ್ಕರಿಸುತ್ತೀರಾ? ಅಥವಾ ಕೋರ್ಟ್ ನಲ್ಲಿ ಆತ patricide ಕೇಸ್ ಅನ್ನು ವಾದ ಮಾಡಿದ್ದನ್ನು ತಿರಸ್ಕರಿಸುತ್ತೀರಾ? ರೋಮನ್ ರಿಪಬ್ಲಿಕ್ ನಲ್ಲಿ ವರ್ಷಕ್ಕೆ ೨೦ ಮಂದಿ quaestor ರನ್ನು ಆಯ್ಕೆ ಮಾಡುವ ಪದ್ಧತಿ ಇದ್ದಿದ್ದು ಸುಳ್ಳಾ?ಮುಂದೆ ಆತ quaestor ಆಗಿ ಎಲೆಕ್ಟ್ ಆಗಿದ್ದು ಸುಳ್ಳಾ? ‘cursus honorum ‘ ಎಂಬ ಪಬ್ಲಿಕ್ ಆಫೀಸ್ ಗಳು ಇದ್ದಿದ್ದು ಸುಳ್ಳಾ? ಹಾಗೂ ‘cursus honorum ‘ ಮಿಲಿಟರಿ ಹಾಗೂ ರಾಜಕೀಯ ವಿಭಾಗಗಳನ್ನು ಆಡ್ಮಿನಿಸ್ಟ್ರೇಶನ್ ಗಳ ಜವಾಬ್ದಾರಿಯನ್ನು ಹೊತ್ತಿದ್ದು ಸುಳ್ಳಾ? ರಾಜಕೀಯ ಕಾರ್ಯಾಳಯಕ್ಕಾಗಿ ಸೆನೇಟ್ ಗಳಿದ್ದದ್ದು ಸುಳ್ಳಾ? ಅಥವಾ ಅಲ್ಲಿ ಕೋರ್ಟ್, ಲಾಯರ್ , ಕಾನೂನು ಶಿಕ್ಷೆ, ಆಡ್ಮಿನಿಸ್ಟ್ರೇಶನ್ ಎಲ್ಲಾ ಇದ್ದು ಅಲ್ಲಿ ರೂಲ್ ಆಫ್ ಲಾ ಹಾಗೂ ಸಿಸ್ಟಮ್ ಎಂಬುದೇ ಇರಲಿಲ್ಲ ಎನ್ನುವದಕ್ಕೆ ನೀವು ನೀಡುವ ತಾರ್ಕಿಕ ಕಾರಣ ಏನು? ಇಷ್ಟೆಲ್ಲ ಚರ್ಚಿಸುವದಕ್ಕಿಂತ ನಾನು ಸಿಂಪಲ್ಲಾಗಿ ಕೇಳುವದಿಷ್ಟೆ. ನೀವು ಹೇಳುವ ರೂಲ್ ಆಫ್ ಲಾ ದ ಮೂಲಭೂತ ಲಕ್ಷಣವೇನು? ಒಂದು ಸಿಸ್ಟಮ್ ನಲ್ಲಿ ಇರಬೇಕಾದ ಯಾವ ಲಕ್ಷಣ ರೋಮನ್ ರಿಪಬ್ಲಿಕ್ ನಲ್ಲಿ ಇರಲಿಲ್ಲ?”
            ಈ ಉತ್ತರಕ್ಕೆ ಕಳೆದೆರಡು ದಿನಗಳಿಂದ ಕಾಯುತ್ತಿದ್ದೇನೆ. ಸಾಧ್ಯವಾದರೆ ಉತ್ತರಿಸಿ. ನಿಮಗೆ ಇಂತಹ ಪ್ರಶ್ನೆಗಳನ್ನು ಉತ್ತರಿಸಲು ಎಷ್ಟು ಕಷ್ಟ ಸಾಧ್ಯ ಎನ್ನುವದು ನನಗರ್ಥವಾಗುತ್ತದೆ. 🙂

            ಉತ್ತರ
      • ಷಣ್ಮುಖ
        ಆಗಸ್ಟ್ 26 2015

        Get it right!… killing kzar was to disagreeing kings law and establishing law of communist regime! It is executed as per the law of revolutionary comrades 🙂 Even today revolutionary comrades do run the trial in their own court before giving capital punishment! 🙂

        ಉತ್ತರ
        • ಆಗಸ್ಟ್ 27 2015

          ತಾನು ೧೨ ವರ್ಷಕ್ಕಿಂತಲೂ ಇತಿಹಾಸದ ಪ್ರೊಫೆಸರ್ ಎಂದು ಬೆನ್ನುತಟ್ಟಿಕೊಳ್ಳುವ ಮೊದಲು, ತ್ಸಾರ್ ಕುಟುಂಬವನ್ನು ಲೆನಿನ್ ಕೊಲ್ಲುವಾಗ ಯಾವ ಕಮ್ಯುನಿಷ್ಟ್ ಕಾನೂನಿನ ಆಧಾರದ ಮೇಲೆ ಆ ಹತ್ಯೆಯನ್ನು ನಡೆಸಿದ ಎಂಬ ವಿವರಣೆಯನ್ನು ನೀಡಿದ್ದರೆ ಚೆನ್ನಾಗಿತ್ತು. ತ್ಸಾರ್ ಕುಟುಂಬವನ್ನು ಲೆನಿನ್ ಕೊಲ್ಲಿಸುವಾಗ ಆಗಲೇ ಕಮ್ಯುನಿಷ್ಟ್ ಸ್ಥಾಪನೆಯಾಗಿತ್ತು ಎಂದು ಹಿಸ್ಟರಿ ಪ್ರೊಫೆಸರ್ ಒಬ್ಬರಿಗೆ ಪಾಠ ಮಾಡಲಾಗಲಿಲ್ವಲ್ಲ ಛೆ.

          ಉತ್ತರ
  12. Rajaram Hegde
    ಆಗಸ್ಟ್ 26 2015

    “ಹೋಗ್ಲಿ ಬಿಡಿ, ಭಾರತ ಮುಘಲರು, ಬ್ರಿಟಿಷರು ಬರುವದಕ್ಕಿಂತ ಮೊದಲು ಸ್ಟೋನ್ ಏಜ್ ನಲ್ಲಿತ್ತು ಎಂದೆ ಅಂದುಕೊಳ್ಳೋಣ. ಅದರಿಂದ ನಾನು ಈ ವಾದದಲ್ಲಿ ಕಳೆದುಕೊಳ್ಳುವದೇನೂ ಇಲ್ಲ.”
    ಈ ಹೇಳಿಕೆಯ ಪ್ರಕಾರ ಬ್ರಿಟಿಷರು ಭಾರತಕ್ಕೆ ಪರಿಚಯಿಸಿದ ಪರಿಕಲ್ಪನೆಗಳು ಹಾಗೂ ಮಾನವ ಚಿಂತನೆಗಳು ಒಂದು ಸಂಸ್ಕೃತಿಯಲ್ಲಿ ಇಲ್ಲದಿದ್ದರೆ ಅದು ಶಿಲಾಯುಗದ ಸಂಸ್ಕೃತಿಗೆ ಸಮ. ಬ್ರಿಟಿಷರು ಭಾರತಕ್ಕೆ ಬಂದು ಈ ಸಂಸ್ಕೃತಿಯ ಕುರಿತು ಇದೇ ಮಾತುಗಳನ್ನೇ ಹೇಳಿದ್ದಾರೆ. ಏಕೆಂದರೆ ಪಾಶ್ಚಾತ್ಯ ಆದರ್ಶಗಳು ಹಾಗೂ ಪರಿಕಲ್ಪನೆಗಳು ಇಲ್ಲದ ಭಾರತೀಯ ಸಮಾಜವು ಅವರಿಗೆ ಅನಾಗರಿಕ ಸಮಾಜವಾಗಿ ಕಂಡಿತ್ತು. ಈ ಧೋರಣೆಯೇ ವಸಾಹತು ಪ್ರಜ್ಞೆ. ಹಲವು ವಿದ್ಯಾವಂತ ಭಾರತೀಯರೂ ಕೂಡಇದನ್ನು ಒಪ್ಪಿಕೊಂಡಿದ್ದರು. ಭಾರತದಲ್ಲಿ ಸ್ವಾಮಿ ವಿವೇಕಾನಂದರಿಂದ ಹಿಡಿದು ಗಾಂಧೀಜಿ, ಧರ್ಮಪಾಲಅವರ ವರೆಗೆ ಅನೇಕ ಚಿಂತಕರುಈ ಧೋರಣೆಯನ್ನು ಖಂಡಿಸಿದ್ದಾರೆ. ಆದರೂ ಭಾರತೀಯ ವಿದ್ಯಾವಂತರಿಗೆ ಇಂಥ ಚಿಂತಕರ ಕುರಿತೂ ಭರವಸೆ ಬರುತ್ತಿಲ್ಲ. ಭಾರತದಲ್ಲಿ ಕಾನೂನಿನ ಪ್ರಭುತ್ವಗಳು ಇರಲಿಲ್ಲೆಂಬ ವಾಸ್ತವಕ್ಕೆ ನಾವು ಮತ್ತೂ ಒಂದು ರೀತಿಯಲ್ಲಿ ಪ್ರತಿಕ್ರಿಯಿಸಬಹುದು: ಅದೆಂದರೆ ಈ ನಾಗರೀಕತೆಯು ಮತ್ತೆ ಯಾವ ಪರ್ಯಾಯ ವ್ಯವಸ್ಥೆಯನ್ನು ಆಧರಿಸಿ ಪ್ರಭುತ್ವಗಳನ್ನು ರಚಿಸಿಕೊಂಡು ಸಾವಿರಾರು ವರ್ಷಗಳ ವರೆಗೆ ಬೆಳೆದು ಬಂದಿರಬಹುದು? ಅದೇಕೆ ಪ್ರಜ್ಞಾ ಅವರಲ್ಲಿ ಇಂಥ ಪ್ರಶ್ನೆಗಳು ಹುಟ್ಟುವುದಿಲ್ಲ?

    ಉತ್ತರ
    • ಆಗಸ್ಟ್ 26 2015

      “ಹೋಗ್ಲಿ ಬಿಡಿ, ಭಾರತ ಮುಘಲರು, ಬ್ರಿಟಿಷರು ಬರುವದಕ್ಕಿಂತ ಮೊದಲು ಸ್ಟೋನ್ ಏಜ್ ನಲ್ಲಿತ್ತು ಎಂದೆ ಅಂದುಕೊಳ್ಳೋಣ. ಅದರಿಂದ ನಾನು ಈ ವಾದದಲ್ಲಿ ಕಳೆದುಕೊಳ್ಳುವದೇನೂ ಇಲ್ಲ.”
      ಈ ನನ್ನ ಮಾತನ್ನು ಷಣ್ಮುಖ ಅವರಿಗೆ ವ್ಯಂಗವಾಗಿ ಆಡಿದ್ದೆನೆಂದು ಅರ್ಥಮಾಡಿಕೊಂಡಿದ್ದರೆ ನೀವು ಕಾಮೆಂಟಿಸಬೇಕಾದ ಸಂದರ್ಭ ಬರುತ್ತಿರಲಿಲ್ಲ.

      ಉತ್ತರ
  13. ಆಗಸ್ಟ್ 27 2015

    I think it is imperative that we stick to the points on discussion rather than becoming personal. Most discussions lose their strength because of this weakness creeping at some point.
    When Nagashetty used to misguide the discussions in the past, I became personal on him along with WITIAN. We successfully ousted him.
    Here that does not arise. All the parties are raising valid arguments. It should continue on those lines only.
    Suppose both hit a deadlock in the arguments not being able to convince one another, the best possible solutions is to collaborate to fine the answer together redrawing their position.
    This is what I sometimes do when I teach my postgraduate students.There is nothing to lose- Only gain for all the parties.
    Hope it helps.

    ಉತ್ತರ
  14. Rajaram Hegde
    ಆಗಸ್ಟ್ 27 2015

    Dear Sudarshanrao , I fully agree with your suggestion. I have appreciation for Prajna, who is basically from engineering, for having read the kannada book by Balu and being curious about this topic. I am convinced with Balagangadhara’s arguments may be because I have followed whatever he has written so far, and I was also a part of his research group and moreover I translated his works. As a historical researcher for last three decades I have been closely following the debate on pre colonial Indian polity. The point is whether Indians know the rule of law. If one has not read Balagangadhara’s works, or followed what the recent debates on pre colonial Indian polity, he should first equip himself with that knowledge before making personal comments on the scholarship of those who are practicing in this field. We can just continue such debates with anybody and make comments. I can do it with a practicing medical doctor without reading anything in that field with my common sense and second hand information.This is what is called polemic.

    ಉತ್ತರ
    • ಆಗಸ್ಟ್ 27 2015

      Thanks sir.
      I believe Prajna has a reasonable knowledge when she is questioning some of the propositions in the article and ensuing discussions.
      At some point the discussion is on two lines where the parties are not too clear on each other. The perception of what the other is saying is missing. That was the reason I suggested to go back and raise the questions once again rephrasing or put it in a way that each other would agree that this is what they actually are talking and see that complies with the spirit of the article.
      Shanmukha sir,at some point saying that he is teaching for 12 years is no way strengthened his position.

      Sudarshan

      ಉತ್ತರ
      • ಷಣ್ಮುಖ
        ಆಗಸ್ಟ್ 27 2015

        OK, ನನ್ನ ವಾದ ಸರಳ, ಪ್ರಾಚೀನ ಭಾರತದಲ್ಲಿ ಕಾನೂನುಗಳು ಇರಲು ಸಾಧ್ಯವೇ ಇಲ್ಲ! ನನ್ನ ವಾದ ತಪ್ಪು ಎಂದು ತೋರಿಸಬಹುದು. ಅದನ್ನು ತೋರಿಸ ಬೇಕೆಂದರೆ ಕಾನೂನು ಮಾಡಿದ ಜಾರಿಗೊಳಿಸಿದ ಮತ್ತು ಕಾನೂನುಗಳನ್ನ ಅರ್ಥೈಸಿ ಅನ್ವಯಿಸುವ ಮೆಕ್ಯಾನಿಸಂಗಳನ್ನು ಆಧಾರ ಸಮೇತ ತೋರಿಸಬೇಕು, ಅದನ್ನು ಮಾಡಿ ಸಾಕು.
        (ಇನ್ನೂ ರೋಮ್ Legium ನಂತಹ ಶಬ್ದಗಳನ್ನು law ಅಂತನೇ 17-18ನೇ ಶತಮಾನದ ಎನ್ಲೈಟನ್ ಮೆಂಟ್ ಚಿಂತಕರು ಹೇಳುತ್ತಾ ಬಂದರೂ ಅದು ಇಂದಿನ law ಆಗಿರುವ ಸಾಧ್ಯವೇ ಇಲ್ಲ. ಅಂದ್ರೆ ಅದು ರೋಮ್ ನಾಲ law ನಿಂದಲೇ ಬೆಳೆದು ಬಂದಿರುವ ಸಾಧ್ಯತೆಯೇ ಇಲ್ಲ. ಈ ಚರ್ಚೆಯ ಸಂಧರ್ಭದಲ್ಲೂ ಪ್ರಜ್ಞಾ ಉಲ್ಲೇಖಿಸಿದ ವಾಖ್ಯವನ್ನು ಭ್ರಿಟನ್ ನಲ್ಲಿರುವ ನನ್ನ ಲಾ ಪ್ರೊಪೆಸರ್ ಆಗಿರುವ ಸ್ನೇತಹರ ಹತ್ತಿರವೂ ಚರ್ಚಿಸಿದೆ. ಅವರೂ ಕೂಡ ಹೇಳುವುದು ಇದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಆಧುನಿಕ Law ಕಲ್ಪನೆ ಹೀಗೋಗ್ರೋಷಿಯಸ್ ((16ನೇ ಶತಮಾನ) ನಿಗಿಂತ ಹಿಂದೆ ಹೋಗಲು ಸಾಧ್ಯವಿಲ್ಲ ಎಂದರು. ಮತ್ತು Law ಅಂತ ಹೇಳಲ್ಪಡುವವೆಲ್ಲವೂ ರೋಮನ್ನರ ಕಾಲದಲ್ಲಿದ್ದ ವಿಭಿನ್ನ ಬುಡಕಟ್ಟುಗಳ ರೂಢಿ-ಪದ್ದತಿ-ನಡಾವಳಿಗಳನ್ನು ಕ್ರೋಢಿಕರಿಸಿಕೊಂಡಿದ್ದವು. ಹಾಗಾಗಿ ಅವು ರೂಢಿ, ಪದ್ದತಿ, ನಡಾವಳಿಗಳು ಎನ್ನುವಂತೆ ಅರ್ಥೈಸಬಹುದೇ ವಿನಃ ಆಧುನಿಕ ರೂಲ್ ಆಫ್ ಲಾ ಅಂತ ಹೇಳಲು ಸಾಧ್ಯವೇ ಇಲ್ಲ ಎಂದೇ ಅವರೂ ಹೇಳುತ್ತಾರೆ. ಬೇಕಿದ್ದರೆ ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಬಹುದು. ಇದರ ಬಗ್ಗೆ ಇಲ್ಲಿ ಚರ್ಚೆ ಮುಂದುವರಿಸಿ ಫಲವಿಲ್ಲ. ಆದರೆ ಭಾರೆತೀಯ ಕಾನೂನುಗಳ ಬಗ್ಗೆ ನಾನು ಚರ್ಚೆಯನ್ನು ಮುಂದುವರಿಸಬಲ್ಲೆ.)

        ಉತ್ತರ
        • ಷಣ್ಮುಖ
          ಆಗಸ್ಟ್ 27 2015

          ತಿದ್ದುಪಡಿ: ಹೀಗೋಗ್ರೋಷಿಯಸ್ (17ನೇ ಶತಮಾನ)

          ಉತ್ತರ
        • ಆಗಸ್ಟ್ 27 2015

          “ಇನ್ನೂ ರೋಮ್ Legium ನಂತಹ ಶಬ್ದಗಳನ್ನು law ಅಂತನೇ 17-18ನೇ ಶತಮಾನದ ಎನ್ಲೈಟನ್ ಮೆಂಟ್ ಚಿಂತಕರು ಹೇಳುತ್ತಾ ಬಂದರೂ ಅದು ಇಂದಿನ law ಆಗಿರುವ ಸಾಧ್ಯವೇ ಇಲ್ಲ. ಅಂದ್ರೆ ಅದು ರೋಮ್ ನಾಲ law ನಿಂದಲೇ ಬೆಳೆದು ಬಂದಿರುವ ಸಾಧ್ಯತೆಯೇ ಇಲ್ಲ.”
          ಉಫ್ ಇದರ ಬಗ್ಗೆ ನನಗಂತೂ ಹೇಳಿ ಹೇಳಿ ಸಾಕಾಯಿತು. ಪ್ರಾಚೀನ ಭಾರತದಲ್ಲಿ ಕಾನೂನು ವ್ಯವಸ್ಥೆ ಇದೆ ಎಂದೂ ನಾನೆಲ್ಲೂ ಹೇಳಿಯೇ ಇಲ್ಲ. ನಾನು ಹೇಳದ ವಿಷಯಗಳ ಕುರಿತು ನಾನು ಇನ್ನು ಸ್ಪಷ್ಟೀಕರಿಸುವದಿಲ್ಲ.
          ಇನ್ನು ಸಿಸರೋ ನ ಬಗ್ಗೆ ನಾನು ‘ಲಾ ಎಂಬ ಶಬ್ದ Legium ಎಂಬ ಶಬ್ದದಿಂದ ಬಂದಿದೆ ಹಾಗಾಗಿ ರೋಮ್ ನಲ್ಲಿ ರೂಲ್ ಆಫ್ ಲಾ ಇತ್ತು ಎಂದು ವಾದಿಸುತ್ತಿಲ್ಲ. ಇದನ್ನು ಮೊದಲೇ ಸ್ಪಷ್ಟಿಕರಿಸಿದ್ದೇನೆ. ಆದರೆ ರೂಲ್ ಆಫ್ ಲಾ ದಲ್ಲಿರಬೇಕಾದ ಯಾವ ಗುಣಲಕ್ಷಣಗಳು ಸಿಸರೋ ನ ಜೀವನದ ಬಗ್ಗೆ ನಾನು ಉಲ್ಲೆಕಿಸಿದ ಸಂಗತಿಗಳಲ್ಲಿ ಇಲ್ಲವೆಂದು ಸ್ಪಷ್ಟೀಕರಿಸಿ ಎಂದು ಪ್ರಶ್ನಿಸಿದ್ದೆ. ನೀವಿನ್ನೂ ಅದಕ್ಕೆ ಉತ್ತರಿಸಿಲ್ಲ.
          ನಾನು ಹೇಳದಿರುವ ವಿಷಯಗಳನ್ನು ನೀವು ಬೇರೆಯದೇ ರೀತಿಯಲ್ಲಿ ಉಲ್ಲೆಕಿಸಿ ಅದರ ವಿರುದ್ದ ವಾದಿಸುತ್ತಿದ್ದೀರಾ ಹೊರತು ನಾನು ನಿಜವಾಗಿ ಕೇಳಿರುವ ಪ್ರಶ್ನೆಗಳಲ್ಲ. ಇಂತಹ ಸ್ಟ್ರಾ ಮ್ಯಾನ್ ಲಾಜಿಕಲ್ ಫಾಲಸಿಯ ನ ಅವಶ್ಯಕತೆಯಿಲ್ಲ. ಆದರೆ ನಿಮಗದರ ಅಗತ್ಯತೆಯೊಂದೆ ಉಳಿದಿದೆಯೆನಿಸುತ್ತದೆ. ಇಡೀ ಚರ್ಚೆಯಲ್ಲಿ ಕಂಡುಬಂದ ಲಾಜಿಕಲ್ ಫಾಲಸಿಯೆಂದರೆ:
          ೧. Argumentum ad nauseam fallacy
          ೨. False equivalence fallacy
          ೩. Straw-man fallacy
          ೪. Red -herring fallacy
          ಸಿಸರೋ ಬಗೆಗಿನ ಪ್ರಶ್ನೆಗಿಂತಲೂ ನಾನು ಮುಖ್ಯವಾಗಿ ಕೇಳಿದ್ದು, ರಿಲಿಜಿಯಸ್ ಕಾನ್ಸಿಯಸ್ ನೆಸ್ ಬಗ್ಗೆ ವೈಜ್ಞಾನಿಕ ವಿವರಣೆ ಹಾಗೂ ಅದು ಹೇಗೆ ಬಾಲಗಂಗಾಧರರು ಮಂಡಿಸಿದ ವಾದವನ್ನು ಸಮರ್ಥಿಸುತ್ತದೆ ಎನ್ನುವದರ ಬಗ್ಗೆ. ಇದರ ಉತ್ತರ ದೊರೆಯಬಹುದೆಂದು ನನಗಂತೂ ನಂಬಿಕೆಯಿಲ್ಲ.

          ಉತ್ತರ
          • ಷಣ್ಮುಖ
            ಆಗಸ್ಟ್ 27 2015

            ಇರಲಿ ನಮ್ಮದೆಲ್ಲವೂ ಫಾಲ್ಲಸಿಯಾಗಿಯೇ ಇರಲಿ…. ಹೀದನ್ ಗ್ರಂಥದಲ್ಲಿ ರಿಲಿಜಿಯನ್ ಎನ್ನುವುದು ಹರಡುತ್ತಾ ಹೇಗೆ ಅದೊಂದು ಲೋಕವನ್ನು ಗ್ರಹಿಸುವ ಚೌಟ್ಟಾಗಿ ಮಾರ್ಪಡುತ್ತದೆ ಕಾಲ ಕಾಲಕ್ಕೆ ಅದು ಥಿಯಾಲಜಿಯಾಗಿ, ಕಲಿಕಾ ಸಂಯೋಜನೆಯಾಗಿ, ಸುಧಾರಣಾವಾದವಾಗಿ, ಸೈನ್ಸಾಗಿ . ಸೆಕ್ಯುಲರ್ ಐಡಿಯಾಗಳಾಗಿ ರೂಪಾಂತರಗೊಳ್ಳುತ್ತಾ ನಿರ್ಧಿಷ್ಟ ರೀತಿಯಲ್ಲಿಯೇ ಜಗತ್ತನ್ನು ಅರ್ಥಮಾಡಿಕೊಳ್ಳುವ ಮತ್ತು ವಿವರಿಸುವ ಮಿತಿಯನ್ನು ಒಂದು ಸಂಸ್ಕೃತಿಯ ಹಿನ್ನೆಲೆಯವರಿಗೆ ಹೇರುತ್ತದೆ ಎನ್ನುವುದನ್ನು ಸಾಂಗವಾಗಿಯೇ ವಿವರಿಸಿದ್ದಾರೆ. ಮೊದಲು ಅದನ್ನು ಓದಿ ಅದರಲ್ಲಿ ರಿಲಿಜಸ್ ಕಾನ್ಸಿಯಸ್ ಒಂದು ಕಲ್ಚರಲ್ ಕಾನ್ಷಿಯಸ್ ಆಗಿ , ವರ್ಲ್ಡ್ ವೀವ್ ಆಗಿ ಮತ್ತು ಕಲೋನಿಯಲ್ ಕಾನ್ಷಿಯಸ್ ಆಗಿ ಹೇಗೆ ಪುನಃಪನಃ ಕಟ್ಟಿಕೊಂಡು ಒಂದು ಲೋಕಧೃಷ್ಟಿಯ ಚೌಕಟ್ಟನ್ನು ಮುಂದುವರಿಸುತ್ತದೆ ಎನ್ನುವುದನ್ನು ವೈಜ್ಞಾನಿಕವಾಗಿಯೇ ಆಧಾರ ಸಮೇತ ತರ್ಕಬದ್ದವಾಗಿ ತೋರಿಸಿದ್ದಾರೆ. ಹೋಗಿ ಅದನ್ನು ಓದಿ.

            ಇನ್ನೂ ಭಾರತೀಯ ಕಾನೂನುಗಳ ಬಗ್ಗೆ ನೀವು ಚರ್ಚಿಸುವುದಿದ್ದರೆ ಮುಂದುವರಿಯುವ… ಇಲ್ಲದಿದ್ದರೆ ಇಲ್ಲಿಗೆ ನಿಲ್ಲಿಸುತ್ತೇನೆ.

            ಉತ್ತರ
            • ಆಗಸ್ಟ್ 27 2015

              “ಹೀದನ್ ಗ್ರಂಥದಲ್ಲಿ ರಿಲಿಜಿಯನ್ ಎನ್ನುವುದು ಹರಡುತ್ತಾ ಹೇಗೆ ಅದೊಂದು ಲೋಕವನ್ನು ಗ್ರಹಿಸುವ ಚೌಟ್ಟಾಗಿ ಮಾರ್ಪಡುತ್ತದೆ ಕಾಲ ಕಾಲಕ್ಕೆ ಅದು ಥಿಯಾಲಜಿಯಾಗಿ, ಕಲಿಕಾ ಸಂಯೋಜನೆಯಾಗಿ, ಸುಧಾರಣಾವಾದವಾಗಿ, ಸೈನ್ಸಾಗಿ . ಸೆಕ್ಯುಲರ್ ಐಡಿಯಾಗಳಾಗಿ ರೂಪಾಂತರಗೊಳ್ಳುತ್ತಾ ನಿರ್ಧಿಷ್ಟ ರೀತಿಯಲ್ಲಿಯೇ ಜಗತ್ತನ್ನು ಅರ್ಥಮಾಡಿಕೊಳ್ಳುವ ಮತ್ತು ವಿವರಿಸುವ ಮಿತಿಯನ್ನು ಒಂದು ಸಂಸ್ಕೃತಿಯ ಹಿನ್ನೆಲೆಯವರಿಗೆ ಹೇರುತ್ತದೆ ಎನ್ನುವುದನ್ನು ಸಾಂಗವಾಗಿಯೇ ವಿವರಿಸಿದ್ದಾರೆ. ಮೊದಲು ಅದನ್ನು ಓದಿ ”
              .
              .
              ಓದಿದ್ದೇನೆ ಆದರೆ ನನಗಂತೂ ಅಲ್ಲಿ ಉತ್ತರ ಸಿಕ್ಕಿಲ್ಲ. ನೀವೆ ಅದನ್ನು(ವೈಜ್ಞಾನಿಕ ನೆಲೆಯನ್ನು) ಸಂಕ್ಷಿಪ್ತವಾಗಿ ವಿವರಿಸಬಹುದಲ್ಲ(Argumentum ad nauseam ಒಂದನ್ನು ಬಿಟ್ಟು).

              ಉತ್ತರ
              • ಷಣ್ಮುಖ
                ಆಗಸ್ಟ್ 27 2015

                ಅಲ್ಲಿ ಸಿಗದ್ದು ಇನ್ನೆಲ್ಲೂ ಸಿಗಲಾರದು! ರಾಜಾರಾಮ ಹೆಗಡೆಯವರು ಸಂಕ್ಷಿಪ್ತವಾಗಿ ವಿವರಿಸಿದರೂ ಅದು ನಿಮಗೆ ಉತ್ತರವಾಗಿಲ್ಲ!. Argumentum ad nauseam ಕಳೆದ ಎರಡು ಶತಮಾನಗಳಿಂದ ಎಲ್ರೂ ಹಾಗೆಯೇ ಹೇಳಿಕೊಂಡು ಬಂದಿದ್ದಾರೆ ಹಾಗಾಗಿ ಅವೇ ಸತ್ಯ ಎಂದು ಅದೇ ರಾಗ ಹಾಡುವವರಿಗೆ ಅನ್ವಯಿಸಲ್ಲ! ನಮಗೇ ಅನ್ವಯಿಸತ್ತೆ ಅಂದ್ರೆ ಸಂತೋಷ! ಇರಲಿ ಮೊದಲು ‘ಹೀದನ್…..’ ಓದಿ 🙂

                ಉತ್ತರ
          • ಷಣ್ಮುಖ
            ಆಗಸ್ಟ್ 27 2015

            ಮೊದಲು ಹೀಗೆ ಹೇಳೋದು [“ಬ್ರಿಟಿಷರು ಬರುವದಕ್ಕೂ ಮುನ್ನ ರಾಜರ ಆಳ್ವಿಕೆಯಲ್ಲಿ ಕಾನೂನುಗಳು ಇರಲಿಲ್ಲವೇ? ಶಾಸನಗಳು ಜಾರಿಯಲ್ಲಿರಲಿಲ್ಲವೇ? ಹಾಗೂ ಶಾಸನವನ್ನು ಕಾಯ್ದುಕೊಳ್ಳಲು ನ್ಯಾಯಾಂಗ ವ್ಯವಸ್ಥೆ ಇರಲಿಲ್ಲವೇ?”]

            ನಂತರ ಅದನ್ನು ಸಾಬೀತು ಮಾಡುವ ಪ್ರಸಂಗ ಬಂದಾಗ ಹೀಗೆ ಜಾರೋದು!:
            [ಪ್ರಾಚೀನ ಭಾರತದಲ್ಲಿ ಕಾನೂನು ವ್ಯವಸ್ಥೆ ಇದೆ ಎಂದೂ ನಾನೆಲ್ಲೂ ಹೇಳಿಯೇ ಇಲ್ಲ. ನಾನು ಹೇಳದ ವಿಷಯಗಳ ಕುರಿತು ನಾನು ಇನ್ನು ಸ್ಪಷ್ಟೀಕರಿಸುವದಿಲ್ಲ.]

            ಇದು ಇವರ ಆಟ ! ನಮಗೆ ಬೇರೆ ಕೆಲಸ ಇದೆ! ನಮಸ್ಕಾರ.

            ಉತ್ತರ
            • ಆಗಸ್ಟ್ 28 2015

              ಹ್! ಅಲ್ಲಿ ನಾನು ಕೇಳಿದ್ದು ಪ್ರಶ್ನೆಯೇ ಹೊರತು ವಾದವಲ್ಲ. ನಾನು ಕೇಳಿದ್ದು “ಇರಲಿಲ್ಲವೇ?”, “ಜಾರಿಯಲ್ಲಿರಲಿಲ್ಲವೇ?” “ಇರಲಿಲ್ಲವೇ?” ಎಂದು ನಿಮ್ಮ ಕಣ್ಮುಂದೆಯೆ ಇದೆ. ನೀವದನ್ನು “ಇತ್ತು”, “ಜಾರಿಯಲ್ಲಿತ್ತು” ಎಂದು ನಾನು ಹೇಳಿದ್ದೆನೆಂದು ಬದಲಾಯಿಸಿ ಅದರ ವಿರುದ್ದ ನಿಮ್ಮ ವಾದವನ್ನು ಮುಂದಿಟ್ಟಿರಿ.
              ಗುಡ್ ಇದನ್ನೇ ನಾನು ಸ್ಟ್ರಾ ಮ್ಯಾನ್ ಫಾಲಸಿ ಎಂದಿದ್ದು.

              ಉತ್ತರ
              • ಷಣ್ಮುಖ
                ಆಗಸ್ಟ್ 28 2015

                🙂 ಹೌದು ಬಿಡಿ ಅಷ್ಟೂ ಅರ್ಥವಾಗದವರು ಏನ್ ಮಾಡೋದು? 🙂

                ಉತ್ತರ
          • ಷಣ್ಮುಖ
            ಆಗಸ್ಟ್ 27 2015

            ಮೊದಲ ಹೇಳಿಕೆ: [ಆತನ ಕೃತಿ De Legibus (On the Laws) ಕಾನೂನಿನ ಬಗ್ಗೆ, ರಿಪಬ್ಲಿಕ್ ಬಗ್ಗೆ ಮಾತನಾಡುತ್ತದೆ. ಆತ ಸ್ವತಃ ಹೇಳಿದ ಮಾತು,”We are all servants of the laws in order that we may be free.” ಎನ್ನುವದು ರೂಲ್ ಆಫ್ ಬಗ್ಗೆ ಮಾತನಾಡದೆ ಇನ್ನೇನು ಹೇಳುತ್ತದೆ?]

            ಅದನ್ನು ಸಾಬೀತು ಮಾಡಬೇಕಾಗಿ ಬಂದ್ರೆ ಹೇಳೋದು:
            [ಸಿಸರೋ ನ ಬಗ್ಗೆ ನಾನು ‘ಲಾ ಎಂಬ ಶಬ್ದ Legium ಎಂಬ ಶಬ್ದದಿಂದ ಬಂದಿದೆ ಹಾಗಾಗಿ ರೋಮ್ ನಲ್ಲಿ ರೂಲ್ ಆಫ್ ಲಾ ಇತ್ತು ಎಂದು ವಾದಿಸುತ್ತಿಲ್ಲ.]

            ಇದು ಯಾವ fallacy ಯೂ ಅಲ್ಲ, ಇವರ ಜಾರುಬಂಡಿ ಆಟ ! ಕ್ಷಮಿಸಿ ನಮಗೆ ಬೇರೆ ಕೆಲಸ ಇದೆ! ‘ಹೀದನ್…’ ಓದಿ… 🙂 ನಮಸ್ಕಾರ!

            ಉತ್ತರ
            • ಆಗಸ್ಟ್ 28 2015

              ”We are all servants of the laws in order that we may be free.” ಎನ್ನುವದು ರೂಲ್ ಆಫ್ ಬಗ್ಗೆ ಮಾತನಾಡದೆ ಇನ್ನೇನು ಹೇಳುತ್ತದೆ?”

              ಹೌದು ಇದನ್ನು ಪ್ರಶ್ನಿಸಿದ್ದು ನಾನೇ. ಈ ಸಂದರ್ಭದಲ್ಲಿ legium ಅಂದರೆ ಲಾ ಅಲ್ಲದಿದ್ದರೆ ಇನ್ನೇನು ಅನ್ನುವದು ನನ್ನ ಪ್ರಶ್ನೆ.ಈ ನನ್ನ Interrogative sentence ಅನ್ನು ನೀವು Assertive sentence ಅನ್ನಾಗಿ ಬದಲಾಯಿಸಿ ನಿಮ್ಮ ವಾದವನ್ನು ಮುಂದಿಟ್ಟಿರಿ(Once again straw-man). ಆದರೂ ಈ ಸಂದರ್ಭದಲ್ಲಿ legium ಇನ್ಯಾವ ಅರ್ಥವನ್ನು ಕೊಡುತ್ತದೆ ಎನ್ನುವದರ ಬಗ್ಗೆ ನೀವು ಇಂದಿಗೂ ಉತ್ತರಿಸಿಲ್ಲ. ಇದರ ಜೊತೆಗೆ ಸಿಸರೋ ನ ಜೀವನದ ಘಟನೆಗಳನ್ನೂ ದಾಖಲಿಸಿ ಪ್ರಶ್ನಿಸಿದ್ದೆ. ಅದಕ್ಕೂ ನಿಮ್ಮ್ಂದ ಉತ್ತರ ದೊರೆಯಲಿಲ್ಲ.

              ಉತ್ತರ
              • ಷಣ್ಮುಖ
                ಆಗಸ್ಟ್ 28 2015

                🙂 ಬೆಳಿಕಿನ “ಕಿರಣ”ನಿಲ್ಲ ಸೂರ್ಯನನ್ನೂ ಸಸ್ಯಗಳ ವಿವರಣೆಯಿಲ್ಲದ “ಬಾಟ್ನಿ’ I mean ಸಸ್ಯಶಾಸ್ತ್ರವನ್ನೂ ತೋರಿಸುವುದು ನಂಗೆ ಕಷ್ಟ ಬಿಡಿ! 🙂 🙂

                ನಮಸ್ಕಾರ!

                ಉತ್ತರ
                • ಷಣ್ಮುಖ
                  ಆಗಸ್ಟ್ 28 2015

                  ಸಾರಿ ಮರೆತೆ….:-) “ಹೀದನ್….” ಓದಿ… 🙂

                  ಉತ್ತರ
      • ಷಣ್ಮುಖ
        ಆಗಸ್ಟ್ 27 2015

        12 ವರ್ಷದಿಂದ ಬೋದಿಸಿತ್ತಿದ್ದೇನೆ ಎಂದಿದ್ದು ಈ ಪಠ್ಯಗಳಲ್ಲಿರುವ ತಥಾಕಥಿತ ವಾದಗಳು ನಮಗೆ ಪರಿಚಯವಿದೆ. ಈ ನಿರೂಪಿಣೆಗಳು ವಸಾಹತುಶಾಹಿ ಚೌಕಟ್ಟಿನ ಹಿನ್ನೆಲೆಯಲ್ಲಿ ಇಲ್ಲಿನ ಆಕರಗಳನ್ನು ಅರ್ಥೈಸಿಕೊಂಡು ಹುಟ್ಟಿದ ಕಥೆಗಳೇ ವಿನಃ ಆಧಾರ ಸಮೇತ ತರ್ಕಬದ್ದವಾಗಿ ಮಂಡಿಸಲಾಗಿರುವ ವೈಜ್ಞಾನಿಕ ಸಿದ್ದಾಂತಗಳಲ್ಲ ಎನ್ನುವುದು ನಮ್ಮ ನಿಲುವು. ಹಾಗಾಗಿ ನಮ್ಮ ವಾದಗಳನ್ನು ತಪ್ಪು ಎಂದು ತೋರಿಸಲು ಮೌರ್ಯರ, ವಿಜಯನಗರ ಅಥವಾ ಇನ್ನಾವುದೋ ಕಾಲದ ಬಗ್ಗೆ ಬರೆದಿರುವ ಚರಿತ್ರೆಯ ಪಠ್ಯದ ಸಾಲುಗಳು ಪುರಾವೆಯಾಗುವುದಿಲ್ಲ! ಹೇಳಬೇಕೆಂದರೆ ಚರಿತ್ರೆಯ ಪಠ್ಯಗಳ ಈ ನಿರೂಪಣೆಗಳ ಕುರಿತೇ ಪ್ರಶ್ನೆಗಳು ಹುಟ್ಟಿರುವುದರಿಂದ ಅವೇ ಪಠ್ಯಗಳನ್ನು ತನ್ನ ವಾದಕ್ಕೆ ಸಾಕ್ಷಿಯಾಗಿ ನೀಡುವುದಕ್ಕಿಂತಲೂ ಹೆಚ್ಚಿನ ಕೆಲಸದ ಅಗತ್ಯ ಇದೆ ಎಂದಷ್ಟೆ ನಾವು ಹೇಳುತ್ತಿರುವುದು.

        ಉತ್ತರ
  15. Manjunath
    ಸೆಪ್ಟೆಂ 4 2015

    ಪ್ರಜ್ಞಾ ಆನಂದ್
    ಹೀದನ್ ಓದಿ ಅದನ್ ಓದಿ ಎಂದು ಪದೇಪದೇ ಹೇಳುತ್ತಾರೆ ಯಾವು’ದನ್’ ಓದಿದರೂ ಚರ್ಚೆ ಮಾಡೋಕೆ ಯಾಕೆ ತೊಂದರೆ. ಆದರೆ ಹಿಂದೆ ಇದೆ ಗುಂಪಿನ ಪ್ರವೀಣ ಎಂಬುವರರೊಡನೆ ಅನ್ಯಭಾಗ್ಯದ ಚರ್ಚೆ ಮಾಡುತ್ತಿರುವಾಗ, ನಾನು ಕೂಡ ಕೆಲವನ್ನು ಓದಲು ಸಾಧ್ಯವೆ ಎಂದು ಕೇಲಿದ್ದೆ,ಅದಕ್ಕೆ ಅವರು ಇವೆಲ್ಲಾ ಹಳೆಯ ತಂತ್ರಗಳು ಎಂದೆಲ್ಲಾ ಹಾರಾಡಿದ್ದರು ಅವರ ಮಾತುಗಳಲ್ಲೆ ನೋಡಿ
    “-ಬಡತನದ ಕುರಿತು, ಕೃಷಿಯ ಕುರಿತು, ಬೆಲೆ ನಿಗಧಿಯ ಕುರಿತು ಸಣ್ಣ ಸಂಸ್ಥೆಗಳಿಂದ ಹಿಡಿದು ವಿಶ್ವಸಂಸ್ಥೆ ವರೆಗೂ ವರದಿಗಳು ರಾಶಿ ರಾಶಿ ಬಿದ್ದಿವೆ. ಅದನ್ನೆಲ್ಲಾ ಓದಿ ಎಂದಾಕ್ಷಣ ದೊಡ್ಡ ಚರ್ಚಾಪಟು ಆಗುತ್ತೀರೆಂಬ ಕನಸು ಕಾಣಬೇಡಿ. ಇದು ಚರ್ಚೆಯ ತಂತ್ರಗಳಲ್ಲಿ ಅತ್ಯಂತ ಹಳೆಯದು”
    ಹಾಗಾದರೆ ಹೀದನ್ ಓದಿ ಎಂದು ಇಲ್ಲಿ ಹಪಹಪಿಸುತ್ತಿರುವುದು ಚರ್ಚೆಯ ತಂತ್ರವೇ ಇರಬೇಕು. ಬೇರೆಯವರು ಹೇಳಿದ್ದನ್ನು ಇವರು ಓದಲು ತಯಾರಿಲ್ಲ ಹಾಗೆ ಹೇಳಿದರೆ ತಂತ್ರ ಮಂತ್ರ ಎಂದು ಲಾಗ ಹಾಗುತ್ತಾರೆ ಇನ್ನು ಇವರು ಏನು ಮಾಡುತ್ತಿದ್ದಾರೊ? ಮೋಸ್ಟ್ಲಿ ಇವರ ಗುಂಪಿನಲ್ಲಿ ಒಬ್ಬೊಬ್ಬರದು ಒಂದೊಂದು ತಂತ್ರವಿರಬೇಕು. ಒಬ್ಬರು ಹಾಗೆ ಓದುವುದು ಹಳೆಯ ತಂತ್ರ ಎಂದರೆ ಮತ್ತೊಬ್ಬರು ಓದಿ ಓದಿ ಎಂದು ಚರ್ಚೆಯ ಮದ್ಯೆಯಲ್ಲಿ ನೂರು ಸಾರಿ ಪುನರುಚ್ಚರಿಸುತ್ತಾರೆ. ತಂತ್ರ ಕುತಂತ್ರಗಳೆಲ್ಲಾ ಇವರ ಅನುಕೂಲಕ್ಕೆ ತಕ್ಕಂತೆ ಇರುವ ಮಾನದಂಡಗಳು ಎನಿಸುತ್ತದೆ. ಪ್ರವೀನ್ ಹೇಳಿರುವಂತೆ ಷಣ್ಮುಖರವರು ಬಳಸುತ್ತಿರುವುದು ಅತ್ಯಂತ ಹಳೆಯ ತಂತ್ರ

    ಉತ್ತರ
    • ಸೆಪ್ಟೆಂ 4 2015

      ಮಂಜುನಾಥರೇ,

      ಮಾತುಮಾತಿಗೂ ಹೀದನ್ ಓದಿ ಎಂದು ಹೇಳಿಲ್ಲ. ಇಡೀ ಈ ಲೇಖನವು, ಈಗಿನ ಪಾಶ್ಚಾತ್ಯ ಸೆಕ್ಯುಲರ್ ಲೋಕವು, ರಿಲಿಜನ್ನಿನದೇ ಇನ್ನೊಂದು ರೂಪವಾಗಿದೆ ಎಂಬ, ಭಾರತೀಯರ ಮಟ್ಟಿಗೆ ಸಹಜವಾಗಿಯೇ ಅನುಭವಕ್ಕೆ ಕಾಣುವಂಥ ಸಿದ್ಧಾಂತದ ಮೇಲೆ ನಿಂತಿದೆ. ಇದನ್ನು ಬಾಲಗಂಗಾಧರರು ತಮ್ಮ ಹೀದನ್ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ. ಅವರ ಸಿದ್ಧಾಂತವನ್ನೇಕೆ ಒಪ್ಪಬೇಕು, ಅದಕ್ಕೆ ವಿವರಣೆ ಅಥವಾ ಕಾರಣ ಏನು ಎಂಬ ಪ್ರಶ್ನೆ ಬಂದರಷ್ಟೇ ಹೀದನ್ ಓದಿ ಎಂಬ ಉತ್ತರ ಬರುತ್ತದೆ. (ಬೆಳಕಿನ ವೇಗ ಎಂದಿಗೂ ಬದಲಾಗದು ಎಂಬುದನ್ನು ಮೈಕಲ್ಸನ್ ಮೋರ್ಲಿ ಅವರ ಪ್ರಯೋಗದ ಅನುಭವದಿಂದಲೇ ಕಾಣಬಹುದು. ಆದರೆ ನಿಮಗೆ ಅದಕ್ಕೆ ಸೈದ್ಧಾಂತಿಕ ವಿವರಣೆ ಬೇಕಾದರೆ ಮಾತ್ರ ನೀವು ಜನರಲ್ ರಿಲೇಟಿವಿಟೀ, ಸ್ಪೆಷಲ್ ರಿಲೇಟಿವಿಟಿ ಓದಬೇಕಾಗುತ್ತದೆ.)

      ಅದೇ ಅರ್ಥದಲ್ಲೇ ಇಲ್ಲಿಯೂ ಹೀದನ್ ಪುಸ್ತಕವನ್ನು ಓದಿ ಎಂದು ಹೇಳಲಾಗಿದೆಯೇ ಹೊರತು, ಉತ್ತರಗಳಿಂದ ಜಾರಿಕೊಳ್ಳಲಲ್ಲ. ಬಾಲಗಂಗಾಧರರು ಈಗಾಗಲೇ ತಮ್ಮ ಸಿದ್ಧಾಂತವನ್ನು ಮಂಡಿಸಿದ್ದಾರೆ ಆ ಪುಸ್ತಕದಲ್ಲಿ. ಅದನ್ನು ಆಧಾರವಾಗಿರಿಸಿ ಈ ಲೇಖನ ಬರೆಯಲಾಗಿದೆ. ಈ ಲೇಖನದ ಹಿಂದಿನ ಸಿದ್ಧಾಂತವನ್ನೇ ಪ್ರಶ್ನಿಸಿದರೆ ನಾವು ಆ ಸಿದ್ಧಾಂತವನ್ನು ಪ್ರತಿಪಾದಿಸುವ ಪುಸ್ತಕವನ್ನು ಆಶ್ರಯಿಸಲೇ ಬೇಕಾಗುತ್ತದೆ.

      ಪ್ರಜ್ಞಾರವರ ವಾದದಲ್ಲಿ ಸಿಸೆರೋ ಅದಾಗಲೇ, ಕಾನ್ಸಿಟ್ಯುಷನ್, ಲಾ, ಇತ್ಯಾದಿಗಳನ್ನು ಈಗಿನ ಅರ್ಥದಲ್ಲಿಯೇ ಉಪಯೋಗಿಸಿದ್ದ ಎಂದು ಹೇಳಿದ್ದಾರೆ. ಸಿಸೆರೋ ಇವೆಲ್ಲವನ್ನು ಯಾವ ಅರ್ಥದಲ್ಲಿ ಹೇಳಿದ್ದನೋ, ಅವ್ಯಾವ ಅರ್ಥವೂ ಈಗ ಬಳಕೆಯಲ್ಲಿ ಇಲ್ಲ. ಈಗ ಯಾವ ಅರ್ಥದಲ್ಲಿ ಈ ಶಬ್ದಗಳನ್ನು ಬಳಸುತ್ತಿದ್ದೇವೆಯೋ, ಆ ಅರ್ಥದಲ್ಲಿ ಆ ಶಬ್ದಗಳು ಪ್ರಯೋಗವಾಗಿರಲೇ ಇಲ್ಲ ಎಂಬುದು ನಮ್ಮ ವಾದವಾಗಿದೆ. ಕಾರಣ ಈಗಿನ ಅರ್ಥಗಳನ್ನೇ ಇಟ್ಟುಕೊಂಡು ಗ್ರೀಕ್ ಫಿಲಾಸಫರುಗಳನ್ನು ಅರ್ಥೈಸ ಹೋದರೆ ಕನ್ಸಿಸ್ಟನ್ಸಿಯೇ ಸಿಗುವದಿಲ್ಲ ಎಂಬುದು ಅವರ ಹೀದನ್ ಪುಸ್ತಕದಲ್ಲಿ ಧಾರಾಳವಾಗಿ ಕಂಡುಬರುವ ಅಂಶ. ಇದು ಬಾಲಗಂಗಾಧರರ ವಾದವಾಗಿದೆ.

      ಹೀಗಾಗಿ ನಾವಿಲ್ಲಿ ಇಂದು ಸಿಸೆರೋನ ಬಗ್ಗೆ ಸಿಗುವ ಇಂಗ್ಲೀಷ್ ಆಕರಗಳ ಪಠ್ಯಗಳನ್ನೇ ಸಂದೇಹಿಸುತ್ತಿದ್ದೇವೆ. ಹೀಗಾಗಿ ಪ್ರಜ್ಞಾರವರು ಸಿಸೆರೋನ ಬಗ್ಗೆ ಯಾವ ಇಂಗ್ಲೀಷಿನ ಪುಸ್ತಕ ಓದಿ ಪ್ರಶ್ನೆ ಕೇಳುತ್ತಿದ್ದಾರೋ ಆ ಪುಸ್ತಕವನ್ನು, ಆ ಪುಸ್ತಕದ ಕರ್ತೃ, ಸಿಸೆರೋನ ಶಬ್ದಗಳಿಗೆ ಕಲ್ಪಿಸಿದ ಅರ್ಥಗಳನ್ನು ಸಂದೇಹಿಸುತ್ತಿದ್ದೇವೆ. ಈ ಮಾತು ನಮ್ಮ ದೇಶದ ರಾಜರು ಮಾಡಿದ ನಿಯಮಗಳ ಕುರಿತು ನಾವು ಬರೆದುಕೊಂಡ ಪಠ್ಯಗಳಿಗೂ ಅನ್ವಯಿಸುತ್ತದೆ.

      ಪಾಶ್ಚಿಮಾತ್ಯರಲ್ಲಿನ ಕ್ರಿ.ಪೂ. ತತ್ತ್ವಜ್ಞಾನಿಗಳನ್ನು, ಅವರ ಶಬ್ದಗಳನ್ನು ನಾವು ಇಂದಿನ ಅರ್ಥದಲ್ಲಿ ಪರಿಗ್ರಹಿಸುವದರ ಮೂಲಕ ಹಿಂದಿನ ಗ್ರೀಸಿನಲ್ಲಿ ಡೆಮಾಕ್ರಸಿ, ಕಾನ್ಸ್ಟಿಟ್ಯುಷನ್ ಗಳು ಇದ್ದವು ಎಂದು ವಾದಿಸುತ್ತೇವೆ. ಅವರ ಕಾಲದಲ್ಲಿ ಪ್ರಚಲಿತದಲ್ಲಿದ್ದ ಕಾನ್ಸ್ಟಿಟ್ಯುಷನ್, ಲಾ, ಇತ್ಯಾದಿಗಳು ಈಗಿನ ಅರ್ಥವನ್ನು ಹೊಂದಿರಲಿಲ್ಲ. ಅವೆಲ್ಲ ಶಬ್ದಗಳಷ್ಟೇ ಈಗಲೂ ಉಳಿದಿವೆ ಆದರೆ ಅರ್ಥಗಳು ಸಂಪೂರ್ಣ ಬದಲಾಗಿವೆ ಎಂಬುದನ್ನು ಅವರ ಪುಸ್ತಕದಲ್ಲಿ ನೋಡಬಹುದು. ಅವರು ಅದನ್ನು ಸೈದ್ಧಾಂತಿಕವಾಗಿ ತೋರಿಸಿಕೊಟ್ಟಿದ್ದಾರೆ.

      ವಚನಕಾರರು ಸಾಮಾಜಿಕ ಚಳುವಳಿಗಾರರೇ ಅಲ್ಲ ಎಂಬುದು ಬಾಲಗಂಗಾಧರರ ವಾದ. ವಚನಕಾರರು ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದ ಚಳುವಳಿಗಾರರೇ ಎಂಬ ಇಂದಿನ ಸಂಶೋಧನಾ ಗ್ರಂಥಗಳನ್ನೇ ಗಟ್ಟಿ ಹಿಡಿದುಕೊಂಡರೆ ಅದು ನಮ್ಮ ವಾದದ ವಿರುದ್ಧ ಸಿಗುವ ಪುರಾವೆಯಾಗುವದಿಲ್ಲ. ಇಲ್ಲಿ ಪಾಶ್ಚಿಮಾತ್ಯರು ಬರುವ ಮುಂಚೆಯೇ ವಚನಗಳನ್ನು ಯಾರು ಸಾಮಾಜಿಕ ಸಮಾನತೆಯ ಹೋರಾಟವೆಂದು ಪರಿಗಣಿಸಿದ್ದರು ಎಂಬುದನ್ನು ತೋರಿಸಿದರೆ ಸಾಕು ಬಾಲಗಂಗಾಧರರ ವಾದ ತಾನಾಗಿಯೇ ಬಿದ್ದು ಹೋಗುತ್ತದೆ. ಇದೇ ಮಾತು ಸಿಸೆರೋನ ಕಾರ್ಯಗಳಿಗೂ ಅನ್ವಯಿಸುತ್ತದೆ. ಆತ ಕಾನೂನಿನ ಮೇಲೆ ನೆಲೆನಿಂತ ಸಾಂವಿಧಾನಿಕ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದ ಎಂಬುದು ಪ್ರೊಟೆಸ್ಟಂಟ್ ವಾದಕ್ಕಿಂತ ಮುಂಚೆ ಎಲ್ಲಿಯಾದರೂ ಬರೆದದ್ದು, ಆತನ ಶಿಷ್ಯಂದಿರು ಹೇಳಿಕೊಂಡಿದ್ದು ಇದೆಯೇ? ಇದ್ದರೆ ತೋರಿಸಿ, ಬಾಲಗಂಗಾಧರರ ವಾದ ತಾನಾಗಿಯೇ ಬೀಳುತ್ತದೆ.

      ಉತ್ತರ
      • ಸೆಪ್ಟೆಂ 7 2015

        “ಪ್ರಜ್ಞಾರವರ ವಾದದಲ್ಲಿ ಸಿಸೆರೋ ಅದಾಗಲೇ, ಕಾನ್ಸಿಟ್ಯುಷನ್, ಲಾ, ಇತ್ಯಾದಿಗಳನ್ನು ಈಗಿನ ಅರ್ಥದಲ್ಲಿಯೇ ಉಪಯೋಗಿಸಿದ್ದ ಎಂದು ಹೇಳಿದ್ದಾರೆ. ಸಿಸೆರೋ ಇವೆಲ್ಲವನ್ನು ಯಾವ ಅರ್ಥದಲ್ಲಿ ಹೇಳಿದ್ದನೋ, ಅವ್ಯಾವ ಅರ್ಥವೂ ಈಗ ಬಳಕೆಯಲ್ಲಿ ಇಲ್ಲ. ಈಗ ಯಾವ ಅರ್ಥದಲ್ಲಿ ಈ ಶಬ್ದಗಳನ್ನು ಬಳಸುತ್ತಿದ್ದೇವೆಯೋ, ಆ ಅರ್ಥದಲ್ಲಿ ಆ ಶಬ್ದಗಳು ಪ್ರಯೋಗವಾಗಿರಲೇ ಇಲ್ಲ ಎಂಬುದು ನಮ್ಮ ವಾದವಾಗಿದೆ.”

        ಹಂಪಿಹೊಳಿಯವರೆ ಸಿಸರೋ ನ ಕಾಲದ ligum ಶಬ್ದಾರ್ಥಕ್ಕೂ ಈಗಿನ law ಶಬ್ದಕ್ಕೂ ಮೂಲ ಅರ್ಥ ಹುಡುಕುವದರ ಮೂಲಕ ವಾದಿಸುವದರಲ್ಲಿ ಅರ್ಥವಿಲ್ಲ. ಆದರೆ ನಾನು ಕೇಳಿದ್ದು ರೂಲ್ ಆಫ್ ಲಾ ನ ಯಾವ ಲಕ್ಷಣಗಳು ಸಿಸರೋ ನ ಕಾಲದ ವ್ಯವಸ್ಥೆಯಲ್ಲಿ ಇರಲಿಲ್ಲ ಎಂದು. ಆ ಬಗ್ಗೆ ಕೆಲವು ಘಟನಾವಳಿಗಳನ್ನು ಇಲ್ಲಿ ಉಲ್ಲೇಕಿಸಿದ್ದೆನೆ. ಉದಾರಣೆಗೆ ಸಿಸರೋ ನು Gaius Verres ಎಂಬ ಗವರ್ನರ್ ನನ್ನು ಕೋರ್ಟ್ ನಲ್ಲಿ ಬೇರೆ ಬೇರೆ ಭ್ರಷ್ಟಾಚಾರದ ಆಪಾದನೆಯ ಮೇರೆಗೆ ಪ್ರಾಸಿಕ್ಯೂಟ್ ಮಾಡುತ್ತಾನೆ. ಇನ್ನೂ ಬೇಕಾದರೆ ನನ್ನ ಮೊದಲಿನ ಕಾಮೆಂಟ್ ಅನ್ನು ಖೋಟ್ ಮಾಡುತ್ತೇನೆ. “ಸಿಸರೋ ಲಾಯರ್ ಆಗಿದ್ದನ್ನು ತಿರಸ್ಕರಿಸುತ್ತೀರಾ? ಅಥವಾ ಕೋರ್ಟ್ ನಲ್ಲಿ ಆತ patricide ಕೇಸ್ ಅನ್ನು ವಾದ ಮಾಡಿದ್ದನ್ನು ತಿರಸ್ಕರಿಸುತ್ತೀರಾ? ರೋಮನ್ ರಿಪಬ್ಲಿಕ್ ನಲ್ಲಿ ವರ್ಷಕ್ಕೆ ೨೦ ಮಂದಿ quaestor ರನ್ನು ಆಯ್ಕೆ ಮಾಡುವ ಪದ್ಧತಿ ಇದ್ದಿದ್ದು ಸುಳ್ಳಾ?ಮುಂದೆ ಆತ quaestor ಆಗಿ ಎಲೆಕ್ಟ್ ಆಗಿದ್ದು ಸುಳ್ಳಾ? ‘cursus honorum ‘ ಎಂಬ ಪಬ್ಲಿಕ್ ಆಫೀಸ್ ಗಳು ಇದ್ದಿದ್ದು ಸುಳ್ಳಾ? ಹಾಗೂ ‘cursus honorum ‘ ಮಿಲಿಟರಿ ಹಾಗೂ ರಾಜಕೀಯ ವಿಭಾಗಗಳನ್ನು ಆಡ್ಮಿನಿಸ್ಟ್ರೇಶನ್ ಗಳ ಜವಾಬ್ದಾರಿಯನ್ನು ಹೊತ್ತಿದ್ದು ಸುಳ್ಳಾ? ರಾಜಕೀಯ ಕಾರ್ಯಾಳಯಕ್ಕಾಗಿ ಸೆನೇಟ್ ಗಳಿದ್ದದ್ದು ಸುಳ್ಳಾ? ಅಥವಾ ಅಲ್ಲಿ ಕೋರ್ಟ್, ಲಾಯರ್ , ಕಾನೂನು ಶಿಕ್ಷೆ, ಆಡ್ಮಿನಿಸ್ಟ್ರೇಶನ್ ಎಲ್ಲಾ ಇದ್ದು ಅಲ್ಲಿ ರೂಲ್ ಆಫ್ ಲಾ ಹಾಗೂ ಸಿಸ್ಟಮ್ ಎಂಬುದೇ ಇರಲಿಲ್ಲ ಎನ್ನುವದಕ್ಕೆ ನೀವು ನೀಡುವ ತಾರ್ಕಿಕ ಕಾರಣ ಏನು?”
        ಇಲ್ಲಿ ಶಬ್ದಾರ್ಥವನ್ನು ಕಡೆಯುವದಕ್ಕಿಂತಲೂ ಆ ವ್ಯವಸ್ಥೆಯಲ್ಲಿ ರೂಲ್ ಆಫ್ ಲಾ ಇರಲಿಲ್ಲ ಎನ್ನುವದನ್ನು ತೋರಿಸಲು ರೂಲ್ ಆಫ್ ಲಾ ದ ಯಾವ ಲಕ್ಷಣಗಳು ಇರಲಿಲ್ಲವೆಂದು ಸಾಭೀತುಪಡಿಸಬೇಕಾಗುತ್ತದೆ. ಒಂದು ಶಬ್ದಾರ್ಥವನ್ನು ವ್ಯಾಖ್ಯಾನಿಸುವದರ ಮೂಲಕ ಸಾಮಾಜಿಕ ಚಿತ್ರಣವನ್ನು ನೀಡುವದು ತೀರ ಅವೈಜ್ಞಾನಿಕ. ಒಂದು ಶಬ್ದ ಒಂದೆ ಪ್ರದೇಶದಲ್ಲಿ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ರೀತಿಯಾಗಿ ಬಳಸಲ್ಪಡಬಹುದು. ಚಾರ್ಲ್ಸ್ ಬಾಬೇಜನ ನು ನಿರ್ಮಿಸಿದ ಕಂಪ್ಯುಟರ್ ನಲ್ಲಿ ಇವತ್ತಿನ ಕಂಪ್ಯೂಟರಿನಲ್ಲಿ ಕಾಣಸಿಗುವ ಹಾರ್ಡ್ ಡಿಸ್ಕ್, ಪಿ.ಸಿ.ಬಿ, ಓ ಎಸ್ ಇರಲಿಲ್ಲವೆಂದಮಾತ್ರಕ್ಕೆ ಆತನದ್ದು ಕಂಪ್ಯೂಟರ್ ಅಲ್ಲವೆನ್ನಲಾಗದು. ಆಗಿನ ‘ಕಂಪ್ಯೂಟರ್’ ಎನ್ನುವದರ ಪರಿಕಲ್ಪನೆಗೆ ಹಾಗೂ ಈಗಿನ ‘ಕಂಪ್ಯೂಟರ್’ ಪರಿಕಲ್ಪನೆಗೆ ಸಾಕಷ್ಟು ವ್ಯತ್ಯಾಸವಿದೆ ಕೂಡ. ಆ ಶಬ್ದಾರ್ಥಕ್ಕಿಂತಲೂ ಮೂಲಭೂತ ಲಕ್ಷಣಗಳು ಮುಖ್ಯವಷ್ಟೆ.
        ಶಬ್ದಾರ್ಥವನ್ನಾದರಿಸಿ ಸಾಮಾಜಿಕ ವಿವರಣೆಯನ್ನು ನೀಡುವದು ವಾದದಲ್ಲಿನ ಮೊದಲ ಲೋಪ. ಉದಾರಣೆಗೆ ನಿಮಗೊಂದು ಪ್ರಶ್ನೆ ಕೇಳಿದ್ದೆ. ಪಾಶ್ಚಿಮಾತ್ಯನ ಬಳಿ ‘ನೀವ್ಯಾಕೆ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೀರಾ’ ಎಂದು ಕೇಳಿದರೆ, ಆತ ಕ್ರೈಸ್ತ ಥಿಯಾಲಜಿಯ ಬೈಬಲ್ ಅರ್ಥವನ್ನು ನೀಡಿ ಇದೆ ಅದಕ್ಕೆ ಕಾರಣ ಎಂದು ಹೇಳುತ್ತಾನಾ? ಕರಪ್ಶನ್ ಏನು ಅಂತ ಕೇಳಿದರೆ ಆತ ಪ್ರಚಲಿತದಲ್ಲಿ ಉಪಯೋಗಿಸುವ ಅರ್ಥವನ್ನು ಹೇಳುತ್ತಾನೆಯೆ ಹೊರತು ಬೈಬಲ್ ನ ಕಂಠಪಾಠವನ್ನು ಒಪ್ಪಿಸುವದಿಲ್ಲ.
        ಇನ್ನು ಹೀದನ್ ಪುಸ್ತಕದಲ್ಲಿ ಹೇಳಿರುವ ‘ರಿಲಿಜಿಯಸ್’ ನ ಧೋರಣೆಯನ್ನು(ಹಾಗೂ ಅದರ ಲಕ್ಷಣವನ್ನು) ವೈಜ್ಞಾನಿಕವಾಗಿ ಸಾಭೀತುಪಡಿಸಲಾಗದಿದ್ದರೆ ಅದು ಬುದ್ಧಿಜೀವಿಗಳು ಹೇಳುವ ಬ್ರಾಹ್ಮಣ್ಯದ ಥಿಯರಿಗಳಿಗಿಂತ ಭಿನ್ನವಾಗಿರುವದಿಲ್ಲ.

        ಉತ್ತರ
          • ಸೆಪ್ಟೆಂ 11 2015

            ಲಿಂಕುಗಳನ್ನು ನೀಡುವ ಬದಲು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ. You know my english is poor.

            ಉತ್ತರ
            • Naani
              ಸೆಪ್ಟೆಂ 11 2015

              🙂 🙂 🙂 ಇಂಗ್ಲೀಷ್ ಮೇಷ್ಟ್ರನ್ನು ನೇಮಿಸಿಕೊಂಡು ಓದಿಸಿಕೊಳ್ಳಿರಿ ನಮಗೆ ಕ್ಯಾಮೆ ಇದೆ. ಮೊದಲು ಬಾಲಗಂಗಾಧರರ ವಾದಗಳನ್ನು ಓದಿ. ನಂತರ ಅವರ ತಂಡದವರನ್ನು Speechless ಆಗುವಂತಹ ಪ್ರಶ್ನೆಗಳನ್ನು ಕೇಳುವಿರಂತೆ… ಜ್ಞಾನದಾಹಿಗಳೊಂದಿಗೆ ಚರ್ಚಿಸಬಹುದು…. ದುರ….ಯೊಂದಿಗೆ ಅಲ್ಲ!!

              ಉತ್ತರ

ನಿಮ್ಮದೊಂದು ಉತ್ತರ ಷಣ್ಮುಖ ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments