ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 1, 2015

4

ಎಷ್ಟೂ ಅಂತ ಮಾನಸಿಕ ಮಾಲಿನ್ಯ ಹರಡುತ್ತೀರಿ?

‍ನಿಲುಮೆ ಮೂಲಕ

– ಜೆಬಿಆರ್ ರಂಗಸ್ವಾಮಿ

ದೇಜಗೌನಮ್ಮ ಸಾಹಿತ್ಯಲೋಕದ ದೇವೇಗೌಡರಾದ ಮಾನ್ಯ ದೇ.ಜವರೇಗೌಡರು ಕ್ರೈಸ್ತರ ಸಭೆಯಲ್ಲಿ ಮಾತಾಡಿದ್ದಾರೆ. ಅಸಮಾನತೆ ಬೋಧಿಸುವ ಹಿಂದೂ ಧರ್ಮದ ಮೇಲೆ ಕೊಂಚವೂ ಗೌರವವಿಲ್ಲವಂತೆ.ಅದು ಧರ್ಮವೇ ಅಲ್ಲವೆಂದು ‎ಕಿಡಿಕಾರಿದರಂತೆ‬! 25 ವರ್ಷದಿಂದ ಕ್ರಿಸ್ತನನ್ನು ಪೂಜಿಸುತ್ತಿದ್ದಾರಂತೆ ! ಕ್ರಿಸ್ತ ಮಾತ್ರ ಸಮಾನತೆಯನ್ನು ಸಾರಿದ್ದಾರಂತೆ. ಹಿಂದೂಧರ್ಮದವರಿಗೆ ತಾರತಮ್ಯವನ್ನು ಬಿಡಲೂ ಮನಸ್ಸಿಲ್ಲವಂತೆ . . .ಅಂತ ಅದೇನೇನೋ ಹೇಳಿಕೊಂಡು ಸನ್ಮಾನ ಸ್ವೀಕರಿಸಿದ್ದಾರೆ. ( ಪ್ರಜಾವಾಣಿ 30-08-2015 )

ಅವರಿಗೆ ಹಿತವೆನಿಸಿದರೆ ಯೇಸುವನ್ನೋ ಮತ್ತೊಬ್ಬರನ್ನೋ ಆರಾಧಿಸಿಕೊಳ್ಳಲಿ.ಅದು ಅವರ ವೈಯುಕ್ತಿಕ.ಅದನ್ನು ಕಟ್ಟಿಕೊಂಡು ಏನೂ ಆಗಬೇಕಾಗಿಲ್ಲ.ಆದರೆ ಆ ಸಭೆಯಲ್ಲಿ ಅನಗತ್ಯವಾಗಿ ಹಿಂದೂಧರ್ಮವನ್ನು ಹೀಗೆಳೆದು ಮಾತಾಡುವ ಅಗತ್ಯವಿತ್ತೇ? ನೂರುವರ್ಷದ ಬದುಕಿನಲ್ಲಿ ಏನೇನೋ ಓದಿರುವ ಅವರಿಗೆ,ಪ್ರಪಂಚದ ‎ಎಲ್ಲ‬ ‎ಧರ್ಮಗಳಲ್ಲೂ‬ ಅಸಮಾನತೆ,ಕ್ರೌರ್ಯ,ಮೂಢಾಚರಣೆಗಳು ‎ಇರುವುದು‬ ತಿಳಿದೇ ಇಲ್ಲವೇ? ಸರ್ವರನ್ನೂ ಸಮಾನವಾಗಿ ಕಾಣುವ ತತ್ವಬೋಧೆ,ಮೌಲ್ಯಗಳು ಎಲ್ಲಧರ್ಮಗಳಲ್ಲೂ ಇದೆ. ನಿಜ.ಆದರೆ ಅವೇ ಮೌಲ್ಯ ಸಿದ್ಧಾಂತಗಳನ್ನು ‎ಅವು‬ ‎ಇರುವ‬ ‎ಹಾಗೆಯೇ‬ ‎ಸರ್ವರೆಲ್ಲರೂ‬ ‎ಸಮಾನವಾಗಿ‬ ‎ಆಚರಿಸಬಲ್ಲ‬ ‎ಒಂದೇ‬ ‎ಒಂದು‬ ‎ಧರ್ಮ‬ ‎ಯಾವುದಾದರೂ‬ ‎ಈ‬ ‎ಭೂಲೋಕದಲ್ಲಿದೆಯೇ‬?

ಈ ಎಡಬಿಡಂಗಿ ಹೇಳಿಕೆಗಳು ಇದೇ ಮೊದಲಲ್ಲ. ರೌಡಿ ಸಂಘಟನೆಯೊಂದನ್ನು ಹೀನಾಮಾನ ಹೊಗಳಿ ಅದರಿಂದಲೇ ಕನ್ನಡದ ಏಳಿಗೆ ಸಾಧ್ಯ ಅಂತ ಕಳೆದ ವರ್ಷ ಹೇಳಿದ್ದರು.ಈ ವರ್ಷ ಕ್ರೈಸ್ತರ ಸಭೆಗೆ ಹೋಗಿ ಈ ಘನಾಂದಾರಿ ಮಾತಾಡಿ ಸನ್ಮಾನ – ಚಪ್ಪಾಳೆ ಗಿಟ್ಟಿಸಿಕೊಂಡು ಬಂದಿದ್ದಾರೆ.ಹಾಗೇ ನೋಡಿದರೆ ಪರಮ ನಾಸ್ತಿಕನಾದ,ವೈಜ್ಞಾನಿಕ ವಿಚಾರಧಾರೆ ಪಾಲಿಸುವ ನನ್ನಂಥವನಿಗೇ ಈ ಬಗೆಯ ಮಾತುಗಳನ್ನು ಕೇಳಲು ಅಸಹ್ಯವೆನಿಸುತ್ತೆ.ಹಿಂದೂಧರ್ಮಕ್ಕೇನೋ ಅವಮಾನವಾಯಿತು ಅಂತ ‎ಖಂಡಿತ‬ ‎ಅಲ್ಲ‬.

ನೀವು ಮತ್ತು ನಿಮ್ಮಂತಹ ಬುದ್ದಿಜೀವಿಗಳು ಇಂತಹ ಮತ್ತು ಈ ಬಗೆಯ ಅನ್ಯಾಯದ,ಅನಿಷ್ಟದ ಹೇಳಿಕೆಗಳನ್ನು ಎಷ್ಟೂ ಅಂತ ಕೊಡ್ತೀರಿ? ಬುದ್ದಿಜೀವಿಗಳು ಅಂತ ನಿಮ್ಮಗಳನ್ನೆಲ್ಲ ಒಂದು ಎತ್ತರದ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ ನಮ್ಮಗಳಿಗೆ ಎಷ್ಟೂ ಅಂತ ಮೆಟ್ಟಿನಲ್ಲಿ ಹೊಡೆಯುತ್ತೀರಿ ? ನೀವು ಮತ್ತು ನಿಮ್ಮಂತಹ ವಿಚಾರವ್ಯಾಧಿ ಬುದ್ದಿಜೀವಿಗಳು ಎಷ್ಟೂ ಅಂತ ಮಾನಸಿಕ ಮಾಲಿನ್ಯ ಹರಡುತ್ತೀರಿ?

ನಿಮ್ಮಂತವರ ಮಾತುಗಳನ್ನು ಕೇಳಿ ಕೊತಕೊತ ಕುದಿಯುವ ಹಿಂದೂ ಸಂಘಟನೆಗಳ ಹುಡುಗರನ್ನು ನೋಡಿದರೆ,ಅವರ ಮಾತುಗಳನ್ನು ಕೇಳಿದರೆ ಆತಂಕವಾಗುತ್ತದೆ.ಸುಮ್ಮನಿರುವ ಅವರನ್ನೇಕೆ ರೊಚ್ಚಿಗೇಳಿಸುತ್ತೀರಿ?ಅವರಷ್ಟೇ ಆವೇಶದಲ್ಲಿರುವ ಮುಸ್ಲೀಂ ಮತ್ತು ದಲಿತ ಹುಡುಗರನ್ನೇಕೆ ಕೆರಳಿಸಿ ಛೂ ಬಿಡುತ್ತೀರಿ ? ಇದು ಕೇವಲ ದೇಜಗೌಗೆ ಕೇಳುವ ಪ್ರಶ್ನೆಯಲ್ಲ. ‎ನಮ್ಮ‬ ಎಲ್ಲ ‎ವಿಚಾರವ್ಯಾಧಿ‬ ‎ಬುಜೀಗಳಿಗೂ‬ ‎ಕೇಳುವ‬ ‎ಪ್ರಶ್ನೆ‬.

ಪ್ರತಿದಿನ ಇಷ್ಟೊಂದು ಉಗ್ರರ ಅನಾಹುತಗಳು,ಕೋಮುಗಲಭೆಗಳು ನಡೆಯುತ್ತಿವೆ. ಇಡೀ ದೇಶ ಪ್ರಕ್ಷುಬ್ಧವಾಗಿದೆ. ಇಂತಹ ಸಮಯದಲ್ಲಿ ‎ಹಿರಿಯರಾದ‬ ‎ನೀವುಗಳು‬ ‎ಮುಂದೆನಿಂತು‬ ಹಿಂದೂ – ಮುಸ್ಲೀಂ -ದಲಿತ – ಕ್ರೈಸ್ತರಲ್ಲಿ ‎ಸಾಮರಸ್ಯ‬ ‎ಮೂಡಿಸುವ‬ , ‎ಅಶಾಂತಿ‬ ಹೋಗಲಾಡಿಸುವ ಕೆಲಸ ಮೊದಲು ಮಾಡಬೇಕಿತ್ತು. ನಿಮ್ಮಿಂದ ಸಮಾಜದ ಪರಿವರ್ತನೆ ಸಾಧ್ಯವಿತ್ತು. ಆದದ್ದೇನು? ಗೂಟದ ಕಾರು , ಎಸಿ ಸೀಟಿಗಾಗಿ ಪರಸ್ಪರ ವೈಮನಸ್ಯ ಬೆಳೆಸುವ ಘನಕಾರ್ಯಗಳನ್ನೇ ಮಾಡುತ್ತ ಬಂದಿರಿ. ನಿಮ್ಮ Easy target ಅಂದರೆ ಹಿಂದೂಧರ್ಮ. ಅವರನ್ನು ಅನಗತ್ಯವಾಗಿ ಕೆರಳಿಸುತ್ತ, ಅವರ ವಿರುದ್ಧ , ದಲಿತ – ಮುಸ್ಲೀಮರನ್ನು ಎತ್ತಿಕಟ್ಟುತ್ತಲೇ ಬರುತ್ತಿದ್ದೀರಿ.

ಸರಿಯೇ ಯೋಚಿಸಿ.ಈಗಲಾದರೂ ಸಾಮರಸ್ಯದ ಕೆಲಸ ಆರಂಭಿಸಿ.

Read more from ಲೇಖನಗಳು
4 ಟಿಪ್ಪಣಿಗಳು Post a comment
 1. ನಾರಾಯಣ
  ಸೆಪ್ಟೆಂ 2 2015

  ಮುಂದೊಂದು ದಿನ ಬಹು ಪ್ರಚಾರದಲ್ಲಿರುವ ಅಶ್ಲೀಲ ಚಿತ್ರಗಳ ತಾರೆ ಇವರನ್ನು ಸನ್ಮಾನಕ್ಕೆ ಕರೆದರೆ, ಏನು ಹೇಳಿಕೆ ಕೊಡಬಹುದು ಎಂದು ಕಲ್ಪಿಸಿ ನಗೆಯು ಬರುತ್ತಿದ್ದೆ ಎನಗೆ ನಗೆಯು ಬರುತ್ತಿದೆ.

  ಉತ್ತರ
 2. shripad
  ಸೆಪ್ಟೆಂ 2 2015

  ಈ ಮಾನ್ಯರು ಹೋದಲ್ಲಿ ಬಂದಲ್ಲಿ ಕುವೆಂಪು ಅವರೇ ನನ್ನ ಗುರು ಅಂತಾರೆ! ಇದು ಕುವೆಂಪು ಅವರಿಗೆ ಗೌರವವೇ?

  ಉತ್ತರ
 3. Shiva Prakash
  ಸೆಪ್ಟೆಂ 2 2015

  ಚೀ ತೂ ಇದು ಒಂದು ಬದುಕು ಬಾಳಬೇಕ ?

  ಉತ್ತರ
 4. ಸೆಪ್ಟೆಂ 3 2015

  This is nothing but a psychotic behavior when pne is senile. He has lost his perception in total Having used to get receptions and honors all his life, he is going to enem camp which wants to destroy Sanathan dharma for recognition. shame he says, HOn Kuvempu is his guru and inspiration. He is not even eqial to Kuvempu’s shoes. Hope people and young men and women give him some books to read about the Vatican atrocyotes and Jihadi wars all around the world. I am shcoked that he has not understood the true meaning of Hinduism. Shema he was born in Bharath. Ask some army helicopters to pick him up and drop on the mountains of jerusalem where christians, Muslims and Jews can show him eternal love.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments