ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 1, 2015

23

ಒಂದು ಸಾವಿನ ಸುತ್ತ ಬುದ್ಧಿಜೀವಿಗಳ ಭೂತಕುಣಿತ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಭೂತಕಲ್ಬುರ್ಗಿಯವರ ಸಾವು ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ಯಾರೋ ಇಬ್ಬರು ಅಪರಿಚಿತರು ಬೈಕ್‍ನಲ್ಲಿ ಮನೆವರೆಗೆ ಬಂದು ತಾವು ನಿಮ್ಮ ವಿದ್ಯಾರ್ಥಿಗಳು ಎಂದು ಹೇಳಿಕೊಂಡು ಕಲ್ಬುರ್ಗಿ ಎದುರು ಬಂದು ನಿಂತು ಅವರ ಹಣೆಯ ಸಹಸ್ರಾರಕ್ಕೆ ಗುರಿಯಿಟ್ಟು ಗುಂಡು ಹೊಡೆದು ಪರಾರಿಯಾದರು. ಕ್ಷಣಮಾತ್ರದಲ್ಲಿ ಕಲ್ಬುರ್ಗಿ ನೆಲಕ್ಕುರುಳಿದರು. ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಸುದ್ದಿ ಭಾನುವಾರದ ಮುಂಜಾನೆ ಹತ್ತೂವರೆ ಹೊತ್ತಿಗೆಲ್ಲ ರಾಜ್ಯಾದ್ಯಂತ ಸಂಚಲನ ಹುಟ್ಟಿಸಿತು. ಕೊಲೆ ಯಾಕಾಗಿ ಆಗಿದೆ, ಯಾರು ಮಾಡಿದ್ದಾರೆ ಎನ್ನುವುದರ ಕುರಿತು ಯಾರಿಗೂ, ಪೋಲೀಸರಿಗೂ ಮಾಹಿತಿ ಇರಲಿಲ್ಲ. ಆದರೆ, ಕೊಲೆ ನಡೆದು ಅರ್ಧತಾಸಿನಲ್ಲೇ ಈ ಕೊಲೆಯನ್ನು ಪೂರ್ವದಲ್ಲೇ ನಿಯೋಜಿಸಿದ್ದವರಂತೆ ಹತ್ತುಹಲವು ಸಾಹಿತಿಗಳು, ಪಂಡಿತರು ಮಾಧ್ಯಮಗಳಲ್ಲಿ ಕಾಣಿಸಿಕೊಂಡು “ಇದಕ್ಕೆ ಸಂಘಪರಿವಾರವೇ ಕಾರಣ. ಕಲ್ಬುರ್ಗಿಯವರ ವಿಚಾರವನ್ನು ಸಹಿಸಿಕೊಳ್ಳಲಾಗದೆ ಶೂಟ್ ಮಾಡಿ ಉಸಿರು ನಿಲ್ಲಿಸಿದ್ದಾರೆ” ಎಂದು ಹೇಳತೊಡಗಿದರು. ಬರಗೂರು ರಾಮಚಂದ್ರಪ್ಪ ಟಿವಿ ಜೊತೆಗೆ ಮಾತಾಡುತ್ತ ಎಷ್ಟೊಂದು ಕರಾರುವಾಕ್ಕಾಗಿ ಈ ಕೊಲೆಯ ವಿವರಗಳನ್ನು ಕೊಟ್ಟರೆಂದರೆ ಅವರೇ ಸಂಘಿಗಳ ಜೊತೆ ಕೂತು ಈ ಕೊಲೆಯನ್ನು ರೂಪಿಸಿದ್ದರೋ ಎಂಬ ಅನುಮಾನ ನೋಡುಗನಿಗೆ ಬರಬೇಕು, ಹಾಗಿತ್ತು! ಅತ್ತ ದೊಡ್ಡ ಬುದ್ಧಿಜೀವಿಗಳು ಟಿವಿ ಮಾಧ್ಯಮದಲ್ಲಿ ತಮ್ಮ ಚಿಂತನೆ ಹರಿಯಬಿಡುತ್ತಿದ್ದರೆ ಇತ್ತ ಮರಿ ಬುದ್ಧಿಜೀವಿಗಳು ಫೇಸ್‍ಬುಕ್ ಮತ್ತು ಟ್ವಿಟ್ಟರ್ ಮಾಧ್ಯಮಗಳಲ್ಲಿ ಸಂಘಪರಿವಾರ ಮತ್ತು ಕೋಮುವಾದಿಗಳನ್ನು ಹೀಯಾಳಿಸತೊಡಗಿದರು. ಕೆಲವರು ಕಲ್ಬುರ್ಗಿಯನ್ನು ಕೊಂದವನು ಆಧುನಿಕ ಗೋಡ್ಸೆ ಎಂದರು. ಸಂಜೆಯ ಹೊತ್ತಿಗೆ ಮತ್ತೆ ಟೌನ್‍ಹಾಲಿನೆದರು ಸೇರಿದ್ದ ಪ್ರಗತಿಪರ ಮತ್ತು ತಳಸ್ಪರ್ಶಿ ಚಿಂತಕರಿಗೆ ಯಾರು ಕೊಲೆಗಾರ ಎನ್ನುವುದು ರುಪಾಯಿಗೆ ಹದಿನಾರಾಣೆ ಸ್ಪಷ್ಟವಾಗಿತ್ತು!

ಇಲ್ಲಿ ನಡೆದಿರುವ ಒಂದಷ್ಟು ಘಟನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸೋಣ. ಕಲ್ಬುರ್ಗಿ ಸಾವಿನ ಹಿಂದೆ ನಾಲ್ಕು ಬಗೆಯ ಕಾರಣಗಳಿರುವ ಸಾಧ್ಯತೆ ಇದೆ. ಮೊದಲನೆಯದಾಗಿ, ಈ ಕೊಲೆ ಎಲ್ಲರಿಗಿಂತ ಹೆಚ್ಚಾಗಿ ಯಾವುದೋ ಒಂದು (ಅಥವಾ ಹಲವಾರು) ಬುದ್ಧಿಜೀವಿಗಳಿಗೇ ಅಗತ್ಯವಾಗಿತ್ತು ಎಂದು ವಾದಿಸಬಹುದು. ಕಳೆದ ಮೂರ್ನಾಲ್ಕು ತಿಂಗಳಿಂದ ಹೇಳಿಕೆ ಕೊಟ್ಟಲ್ಲೆಲ್ಲ ನಗೆಪಾಟಲಿಗೀಡಾಗುತ್ತಿರುವ ಬುದ್ಧಿಜೀವಿಗಳಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಅಗತ್ಯ ಎಂದಿಗಿಂತ ಹೆಚ್ಚಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಅವರು ತಾವುತಾವೇ ಹಂಚಿಕೆ ಹಾಕಿ ತಮ್ಮೊಳಗೆ ಸದ್ಯಕ್ಕೆ ಹೆಚ್ಚು ವಿವಾದಗಳಿಂದ ದೂರ ಇರುವ ಮತ್ತು ತಮಗೆ ಯಾವ ರೀತಿಯಲ್ಲೂ ಸಹಾಯಕ್ಕೆ ಬರಲಾರರು ಎಂದು ಕಾಣಿಸುವಂತಹ ವ್ಯಕ್ತಿಯನ್ನು ಟಾರ್ಗೆಟ್ ಮಾಡಿರುವುದು ಸಾಧ್ಯವಿದೆ ಅಲ್ಲವೆ? ಯಾಕೆಂದರೆ ಬುದ್ಧಿಜೀವಿಗಳು ಈಗ ರಾಜಕೀಯ ಶಕ್ತಿಪೀಠಕ್ಕೆ ಹಿಂದೆಂಗಿಂತ ಹೆಚ್ಚು ಸನಿಹವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಬಂದ ಒಂದು ಕಾಮೆಂಟನ್ನು ಹಿಡಿದುಕೊಂಡೇ ನಮ್ಮ ರಾಜ್ಯದ ಮಾಧ್ಯಮ ಸಲಹೆಗಾರರು ತನ್ನ ಪ್ರಭಾವ, ರಾಜಕೀಯ ಶಕ್ತಿಗಳನ್ನು ಬಳಸಿಕೊಂಡು ಹಲವರನ್ನು ಆಟವಾಡಿಸಿದ್ದನ್ನು ನಾವು ಈ ವರ್ಷದ ಆರಂಭದಲ್ಲಿ ನೋಡಿದ್ದೇವೆ. ಹೀಗಿರುವಾಗ, ರಾಜ್ಯದ ಹತ್ತುಹಲವು ಸಮಿತಿಗಳಲ್ಲಿ ಆಯಕಟ್ಟಿನ ಸ್ಥಾನ ಪಡೆಯುತ್ತಿರುವ ಬುದ್ಧಿಜೀವಿಗಳು ತಮ್ಮ ಹಣ, ಪ್ರಭಾವ, ಅಧಿಕಾರಗಳನ್ನು ದುರುಪಯೋಗಪಡಿಸಿಕೊಂಡು ತಮ್ಮೊಳಗಿನವನೇ ಆದ ವ್ಯಕ್ತಿಯೊಬ್ಬನ ಬಗ್ಗೆ ಕತ್ತಿ ಮಸೆದಿರುವುದು ಸರ್ವಥಾ ಸಾಧ್ಯವಿದೆ. ಹೊರಗಿನ ವ್ಯಕ್ತಿಯನ್ನು ನಿರ್ನಾಮ ಮಾಡುವುದಕ್ಕಿಂತಲೂ ತಮ್ಮೊಳಗಿನ ಒಬ್ಬನನ್ನೇ ದೈಹಿಕವಾಗಿ, ರಾಜಕೀಯವಾಗಿ ಮುಗಿಸಿಹಾಕುವುದು ಬುದ್ಧಿಜೀವಿಗಳಿಗೆ ಲಾಭಕರ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅದಕ್ಕೆ ತಕ್ಕಂತೆ ಬುದ್ಧಿಜೀವಿಗಳ ವಲಯದಲ್ಲಿರುವ ಒಬ್ಬ ಪೋಲೀಸ್ ಅಧಿಕಾರಿ, ಶೂಟರ್‍ನನ್ನು ಮುಂಬಯಿಯಿಂದ ಕರೆಸಿರುವ ಬಲವಾದ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಬುದ್ಧಿಜೀವಿಗಳಲ್ಲಿ ಹಲವರಿಗೆ ಮುಂಬೈ ನಗರಿಯ ಜೊತೆ ನಿಕಟ ಸಂಪರ್ಕ ಇದೆ ಎನ್ನುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು.

ಎರಡನೆಯದಾಗಿ, ಈ ಕೆಲಸವನ್ನು ಪ್ರಗತಿಪರ ಚಿಂತಕರು ಭಾವಿಸುತ್ತಿರುವಂತೆ ಬಜರಂಗಿಗಳು ಅಥವಾ ಸಂಘಪರಿವಾರದ ವ್ಯಕ್ತಿಗಳು ಮಾಡಿರಬಹುದು ಎಂದು ಇಟ್ಟುಕೊಳ್ಳೋಣ. ಕಲ್ಬುರ್ಗಿ ಈ ಹಿಂದೆ ಹಲವಾರು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟದ್ದರು. ಅನಂತಮೂರ್ತಿಯವರಿಗೆ ಬಸವಪ್ರಶಸ್ತಿ ಹೋಯಿತು ಎಂಬ ಕಾರಣಕ್ಕೆ ಭುಗಿಲ್ಲೆದ್ದಿದ್ದ ತನ್ನ ವೈಯಕ್ತಿಕ ದ್ವೇಷವನ್ನು, ಮೂರ್ತಿಯ ಮೇಲೆ ಉಚ್ಚೆಹುಯ್ಯುವ ಪ್ರಕರಣವನ್ನು ಅಕಾರಣವಾಗಿ ಎಳೆದುತರುವ ಮೂಲಕ ತೀರಿಸಿಕೊಂಡು ಮೈಲೇಜ್ ಪಡೆದಿದ್ದರು. ಇನ್ನೊಂದು ಸಂದರ್ಭದಲ್ಲಿ ಹಿಂದೂ ಎನ್ನುವುದು ಧರ್ಮವೇ ಅಲ್ಲ ಎಂದಿದ್ದರು. ಮಾರ್ಗ1 ರಿಂದ ಮುಂದಿನ ಆರು ಸಂಪುಟಗಳಲ್ಲಿ ಕೆಲವೇ ಕೆಲವು ಆಯ್ದ ವಚನಗಳನ್ನು ಬಳಸಿಕೊಂಡು ತಮಗೆ ಬೇಕಾದ ಸಿದ್ಧಾಂತಗಳನ್ನು ಬೆಳೆಸಿದ್ದರು ಎನ್ನುವುದೇನೂ ಗುಟ್ಟಾಗಿ ಉಳಿದಿಲ್ಲ. ತನ್ನ ಹೆಸರು ಪ್ರಚಾರ ಗಿಟ್ಟಿಸಬೇಕು, ತಾನು ಪದವಿ ಪ್ರಶಸ್ತಿ ಪಡೆಯಬೇಕು, ತನ್ನ ಮಾತುಗಳು ಹಲವು ಕಡೆ ಕಾಣಿಸಿಕೊಳ್ಳಬೇಕು ಇವೇ ಮುಂತಾದ ನಿಷ್ಪಾಪಿ ಬುದ್ಧಿಜೀವಿ ಕನಸುಗಳು ಕಲ್ಬುರ್ಗಿಯವರಿಗೂ ಇದ್ದವೇನೋ ಎಂದು ಎಲ್ಲರೂ ಭಾವಿಸುವಂತೆ ಅವರು ಕೆಲವೊಮ್ಮೆ ನಡೆದುಕೊಂಡಿದ್ದಾರೆ ಎನ್ನುವುದು ಸುಳ್ಳಲ್ಲ. ಆದರೆ, ಕಲ್ಬುರ್ಗಿ “ಮೂರ್ತಿಗೆ ಉಚ್ಚೆ ಮಾಡುವುದು ತಪ್ಪಲ್ಲ” ಎಂದದ್ದೂ “ಹಿಂದೂ ಧರ್ಮವೇ ಅಲ್ಲ” ಎಂದದ್ದೂ ಹಲವು ಜನರ ಕಣ್ಣು ಕೆಂಪಗಾಗಿಸಿತ್ತಾದರೂ ಅದು ಯಾರನ್ನೂ ಕೊಲ್ಲುವ ಮಟ್ಟಿಗಿನ ದ್ವೇಷಕ್ಕೆ ಎಳೆಸಿರಲಿಲ್ಲ. ಹಾಗೆ ನೋಡಿದರೆ, ಕಲ್ಬುರ್ಗಿಯವರ ಉಚ್ಚೆಪ್ರಕರಣದಲ್ಲಿ ಅವರಿಗಿಂತ ಹೆಚ್ಚಿನ ಅಪಾಯವನ್ನು ಅನಂತಮೂರ್ತಿಯವರು ಎದುರಿಸಬೇಕಾಗಿತ್ತು. ಮೋದಿ ಪ್ರಧಾನಿಯಾದ ನಾಡಲ್ಲಿ ತಾನಿರುವುದಿಲ್ಲ ಎಂದು ಹೇಳಿದ ಅನಂತಮೂರ್ತಿಯವರಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಹಲವರು ದುಡ್ಡು ಕಳಿಸಿ ಪ್ರತಿಭಟಿಸಿದ್ದರೇ ಹೊರತು ಯಾರೂ ಅವರ ಕತ್ತಿಗೆ ಮಚ್ಚು ಹಿಡಿದಿರಲಿಲ್ಲ. ಬುದ್ಧಿಜೀವಿಗಳು ನಮ್ಮ ಸಂಕೀರ್ಣಬದುಕಿನಲ್ಲಿ ಬಂದುಹೋಗುವ ಕಾಮಿಡಿ ಪಾತ್ರಗಳು ಎಂಬಷ್ಟಕ್ಕೇ ಜನಸಾಮಾನ್ಯರು ಅವರನ್ನು ಬಳಸಿಕೊಂಡಿದ್ದಾರೆ. ಹಾಗಿರುವಾಗ ಸಂಘಪರಿವಾರವಾಗಲೀ ಆರೆಸ್ಸೆಸ್ ಆಗಲೀ ಅವರನ್ನು ಕೊಲೆ ಮಾಡುವಷ್ಟು ಮುಂದುವರಿಯುತ್ತಾರೆ ಎನ್ನುವುದು ಊಹಾತೀತ ವಿಷಯ. ಸಂಶಯಗಳ ಪಟ್ಟಿಯ ಸಮಗ್ರತೆಗಾಗಿ ಇದನ್ನು ಪರಿಗಣಿಸಬೇಕು ಅಷ್ಟೆ.

ಇನ್ನು ಮೂರನೆಯದಾಗಿ, ಇದೊಂದು ಸುಪಾರಿ ಕೊಲೆ ಎಂದು ನಂಬಲು ಕಾರಣಗಳಿವೆ. ಕಲ್ಬುರ್ಗಿಯವರ ಸಂಸಾರದಲ್ಲಿ ಒಡಕುಗಳಿದ್ದವು, ಆಸ್ತಿವಿಚಾರದಲ್ಲಿ ಒಂದಷ್ಟು ಕಟಿಪಿಟಿ ಇತ್ತು ಎನ್ನುವ ಗಾಳಿಮಾತು ತೇಲಿಬರುತ್ತಿದೆ.ಆಸ್ತಿ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಕಲ್ಬುರ್ಗಿಯವರು ನ್ಯಾಯಹೋರಾಟ ನಡೆಸುತ್ತಿದ್ದರು. ಈ ಹೋರಾಟ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿತ್ತು. ದೊಡ್ಡ ಜಗಳಗಳೂ ಈ ಕಾರಣಕ್ಕಾಗಿ ನಡೆದಿದ್ದವು ಎನ್ನುವುದು ಧಾರವಾಡದ ಹಲವು ಕಲ್ಬುರ್ಗಿ ಆಪ್ತರಿಗೆ ತಿಳಿದಿರುವ ಸಂಗತಿ. ಇಷ್ಟು ಹೇಳಿದ ಮೇಲೆ ಮುಂದಿನ ಕತೆಯನ್ನು ನಾನು ಮತ್ತೆ ವಿವರಿಸಬೇಕಿಲ್ಲ; ಅರ್ಥ ಮಾಡಿಕೊಳ್ಳುವವರು ಮಾಡಿಕೊಳ್ಳುತ್ತಾರೆ ಎಂದು ಹೇಳಬಹುದೇನೋ. ಈ ಮೂರೂ ಕಾರಣಗಳಿಗೆ ಹೊರತಾದ ಇನ್ನೊಂದು ಕಾರಣವೆಂದರೆ, ಅವರ ತತ್ವ, ಸಿದ್ಧಾಂತ ಇವುಗಳಿಗೆಲ್ಲ ಅತೀತವಾದ ಯಾವುದೋ ಒಂದು ವೈರತ್ವ ಅವರ ಮೇಲೆ ಯಾರಿಗಾದರೂ ಇರುವುದು ಸಾಧ್ಯವಿದೆ. ಸಾರ್ವಜನಿಕ ಬದುಕಿನಲ್ಲಿ ಐವತ್ತುವರ್ಷಗಳನ್ನು ಕಳೆದವರು, ಒಂದು ವಿವಿಯ ಕುಲಪತಿಯಾಗಿದ್ದವರು  ಎಂದಾಗ, ಆತ ನೂರಾರು ಅಲ್ಲ ಸಾವಿರಾರು ಜನರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇದ್ದೇಇದೆ. ಹಾಗೆ, ಅಲ್ಲೆಲ್ಲಾದರೂ ಒಬ್ಬ ವ್ಯಕ್ತಿಗೆ ಇವರ ಜೊತೆ ವೃತ್ತಿಮತ್ಸರವೋ ಅಥವಾ ಇನ್ನಾವ ಕಾರಣಕ್ಕಾದರೂ ಹಗೆಯೋ ಇದ್ದರೆ, ಅವರು ಒಂದೋ ತಾನೇ ಇಲ್ಲವೇ ಬೇರಾರನ್ನಾದರೂ ಹಿಡಿದು ಕಲ್ಬುರ್ಗಿಯನ್ನು ಮುಗಿಸಿರುವ ಸಾಧ್ಯತೆ ಇದೆ. ಇವೆಲ್ಲ ಕೇವಲ ಊಹೆಗಳು; ಬಲವಾದ ಸಾಕ್ಷ್ಯಗಳು ಸಿಕ್ಕಿ ಕೊಲೆಯ ಪದರಗಳು ಪೂರ್ತಿಯಾಗಿ ಬಿಚ್ಚಿಕೊಳ್ಳುವವರೆಗೂ ಯಾವುದನ್ನೂ ಇದಮಿತ್ಥಂ ಎಂದು ಹೇಳುವುದು ಸಾಧ್ಯವಿಲ್ಲ.

ವಿಷಯ ಹೀಗಿರುವಾಗ ನಮ್ಮ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳು ಏಕಪಕ್ಷೀಯವಾಗಿ ಕೊಲೆಯ ಕಾರಣ ಇದೇ ಎಂದು ಒಂದೇ ಒಂದು ವಿಷಯವನ್ನು ಮಾತ್ರ ಮತ್ತೆಮತ್ತೆ ಪ್ರಸ್ತಾಪಿಸುತ್ತಿರುವುದರ ಹಿಂದಿನ ಉದ್ಧೇಶ ಏನು ಎನ್ನುವುದು ಜನಸಾಮಾನ್ಯನಿಗೆ ತಿಳಿಯದಂತಾಗಿದೆ. ಈ ಕೇಸ್‍ಅನ್ನು ಸಿಬಿಐಗೆ ವಹಿಸುತ್ತೇವೆ ಎಂದು ರಾಜ್ಯಸರ್ಕಾರ ಹೇಳಿದ ಮೇಲೂ ನಮ್ಮ ಟಿವಿ ಚಾನೆಲ್‍ಗಳಲ್ಲಿ ಈ ಕೋರ್ಟ್‍ಮಾರ್ಷಲ್ ಮುಂದುವರಿದಿದೆ. ಭಗವಾನ್, ಬರಗೂರು ಮುಂತಾದ ಸದ್ಯದ ವಿವಾದಾತ್ಮಕ ವ್ಯಕ್ತಿಗಳನ್ನು ಮಾತಾಡಿಸಿ, ಸ್ಟುಡಿಯೋಗೆ ಕರೆಸಿ ಅವರ ಬಾಯಿಂದ ಮತ್ತೆಮತ್ತೆ ಕೊಲೆಯ ಕಾರಣವನ್ನು ಸ್ಪಷ್ಟಪಡಿಸುತ್ತಿರುವುದರ ಹಿಂದಿನ ಹಕೀಕತ್ತು ಏನು? ಸದ್ಯಕ್ಕೆ ನಮ್ಮೆದುರು ಪ್ರಶ್ನೆಗಳ ಬೆಟ್ಟವೇ ಇದೆ.

1. ಕಲ್ಬುರ್ಗಿಯವರಿಗೆ ಇದುವರೆಗೆ ಸರಕಾರದ ಕಡೆಯಿಂದ ಪೋಲೀಸ್ ರಕ್ಷಣೆ ಕೊಡಲಾಗಿತ್ತು. ಅದನ್ನು ಹಿಂಪಡೆದ ಎರಡು ದಿನಗಳಲ್ಲೇ ಈ ಕೊಲೆ ನಡೆದುಹೋಗಿದೆ. ಇದು ಸರಕಾರದ ಇಂಟೆಲಿಜೆನ್ಸ್ ವೈಫಲ್ಯ. ಜೀವಬೆದರಿಕೆ ಇದ್ದ ಒಬ್ಬ ಸಾಹಿತಿಗೆ ರಕ್ಷಣೆ ಕೊಡದ ಸರಕಾರ ಈ ಕೊಲೆಯ ಜವಾಬ್ದಾರಿಯನ್ನು ಹೊರಬೇಕು, ಮತ್ತು ಗೃಹಸಚಿವರು ರಾಜೀನಾಮೆ ಕೊಡಬೇಕು ಎಂದು ಇದುವರೆಗೂ ಒಬ್ಬ ಬುದ್ಧಿಜೀವಿಯೂ ಯಾಕೆ ಹೇಳಿಕೆ ಕೊಟ್ಟಿಲ್ಲ?
2. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರೇ ತನ್ನ ಫೇಸ್ಬುಕ್ಕಿನಲ್ಲಿ ಒಂದಷ್ಟು ಪ್ರಗತಿಪರ ಚಿಂತಕರ ಪಟ್ಟಿ ಮಾಡಿ, ಇವರೆಲ್ಲ ಹಿಟ್‍ಲಿಸ್ಟಿನಲ್ಲಿದ್ದಾರೆ ಎಂದು ಬರೆದು, ಬಳಿಕ, ಸಂಘಿಗಳೇ ಈ ಕೊಲೆ ಮಾಡಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ. ಸರಕಾರದ ಉನ್ನತ ಹುದ್ದೆಯಲ್ಲಿರುವ ಒಬ್ಬ ವ್ಯಕ್ತಿ ಹೀಗೆ ಏಕಾಏಕಿ “ಇಷ್ಟು ಜನ ಮುಂದಿನ ಕೊಲೆಯಲ್ಲಿ ನೆಲಕ್ಕುರುಳುವ ಸಾಧ್ಯತೆಗಳಿವೆ” ಎಂದು ಬರೆದುಕೊಳ್ಳುವುದು ಏನನ್ನು ಸೂಚಿಸುತ್ತದೆ? ಹೀಗೆ ತನ್ನ ಸರಕಾರದ ಮಾನವನ್ನು ಮೂರಾಬಟ್ಟೆ ಮಾಡುತ್ತಿರುವ ಸಲಹೆಗಾರರಿಂದ ಮುಖ್ಯಮಂತ್ರಿಗಳು ಯಾಕೆ ಇನ್ನೂ ವಿವರಣೆ ಪಡೆದಿಲ್ಲ? ಹೆಚ್ಚಾಗಿ ಪತ್ರಿಕಾರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದವರನ್ನೇ ಮಾಧ್ಯಮ ಸಲಹೆಗಾರರನ್ನಾಗಿ ಆರಿಸಲಾಗುತ್ತದೆ. ಅವರಿಗೆ ಮಾಧ್ಯಮರಂಗದ ನೀತಿ ನಿಯಮಗಳ ಪರಿಚಯ ಇರಬೇಕೆನ್ನುವುದು ಅಪೇಕ್ಷಣೀಯ. ಆದರೆ ಅಂತಹ ಸಲಹೆಗಾರರೇ ಒಂದು ಜಾಲತಾಣದಲ್ಲಿ ಒಂದು ನಿರ್ಧಿಷ್ಟ ಸಂಸ್ಥೆಯ ಮೇಲೆ ನೇರ ಆರೋಪ ಮಾಡುವುದು ಕಾನೂನು ಪ್ರಕಾರ ಸರಿಯೇ? ಸಲಹೆಗಾರರು ಈ ತಪ್ಪಿಗಾಗಿ ಯಾವ ಕಾನೂನು ತೊಡಕುಗಳಡಿಯೂ ಬರುವುದಿಲ್ಲವೆ? ಅವರು ಪ್ರಶ್ನಾತೀತರೆ? ಸಿಬಿಐಗೆ ವಹಿಸಿರುವ ಒಂದು ಅತಿಸೂಕ್ಷ್ಮ ಪ್ರಕರಣದಲ್ಲಿ ತಾನೇ ಮುಂದಾಗಿ ಹೀಗೆ ಸಾರ್ವಜನಿಕವಾಗಿ ತೀರ್ಪು ಕೊಡುವುದು ನ್ಯಾಯಾಂಗ ಮತ್ತು ಸಂವಿಧಾನಕ್ಕೆ ವಿರುದ್ಧವಾದದ್ದು; ತಾನು ಅಸಾಂವಿಧಾನಾತ್ಮಕವಾಗಿ ನಡೆದುಕೊಂಡಿದ್ದೇನೆ ಎಂದು ಅವರಿಗೆ ಅನಿಸಿಲ್ಲವೆ?
3. ಕೊಲೆಯಾದ ಮರುಕ್ಷಣದಿಂದಲೇ ರಾಜ್ಯದ ಎಲ್ಲಾ ಬುದ್ಧಿಜೀವಿಗಳೂ ಒಂದೇ ಸಮನೆ ಕೋರಸ್‍ನಲ್ಲಿ ಸಂಘಿಗಳ ಮೇಲೆ ಆರೋಪ ಹೊರಿಸುತ್ತಿರುವುದರ ಮರ್ಮ ಏನು? ಡಿ.ಕೆ.ರವಿ ಕೇಸ್‍ನಲ್ಲೂ ಇವರು ಹೀಗೇ ವೃಂದಗಾನ ಮಾಡಿದ್ದರು ಎನ್ನುವುದನ್ನು ನಾವು ನೆನಪಿಸಿಕೊಳ್ಳಬೇಕು. ಒಂದು ಪತ್ರಕರ್ತೆಯಂತೂ ರವಿ ತನ್ನ ಸಹೋದ್ಯೋಗಿಗೆ 44 ಸಲ ಕರೆ ಮಾಡಿದ್ದರು ಎನ್ನುವ ಸುಳ್ಳುಸುದ್ದಿಯನ್ನು ಢಾಣಾಡಂಗುರ ಹೊಡೆದಿದ್ದರು. ಇಡೀ ಬುದ್ಧಿಜೀವಿ ವಲಯವೇ ಆಗ ಏಕಸ್ವರದಲ್ಲಿ ತಾರಸ್ಥಾಯಿಯಲ್ಲಿ ಸುಳ್ಳುಗಳ ಮಾಲೆ ಹೆಣೆದಿತ್ತು ಎನ್ನುವುದನ್ನು ಕನ್ನಡಿಗರು ನೋಡಿದ್ದಾರೆ. ಈಗ ನಡೆದಿರುವುದೂ ಅದೇ. ಇಂಥ ಯಾವುದೇ ಪ್ರಕರಣ ನಡೆದಾಗಲೂ ಬುದ್ಧಿಜೀವಿಗಳು ಮೊದಲು ಟೌನ್‍ಹಾಲ್ ಮುಂದೆ ಸೇರುತ್ತಾರೆ. ಅಲ್ಲಿ ಮತ್ತು ಪ್ರತಿಭಟನಾ ಸಭೆ ನಡೆದ ಬಳಿಕ ನಡೆಯುವ ಪಾನಗೋಷ್ಟಿಗಳ ಮಂದಬೆಳಕಿನಲ್ಲಿ ಅವರ ಮುಂದಿನ ನಡೆಯ ಬಗ್ಗೆ ವಿಸ್ತೃತ ಚರ್ಚೆ ಆಗುತ್ತದೆ. ಹೀಗೆ ಯಾವುದೇ ಪುರಾವೆ, ದಾಖಲೆಗಳ ಬಲ ಇಲ್ಲದೆ ಸಂಘಿಗಳ ಮೇಲೆ ಗೂಬೆ ಕೂರಿಸುತ್ತಿರುವವರ ವಿರುದ್ಧ ಯಾಕೆ ಕಾನೂನು ಕ್ರಮ ಕೈಗೊಳ್ಳಲಾಗಿಲ್ಲ?
4. ಒಬ್ಬನೇ ಒಬ್ಬ ಸಂಘಿಯೂ ಈ ಕೊಲೆಯ ಜವಾಬ್ದಾರಿಯನ್ನು ಹೊರಲು ಮುಂದೆ ಬಂದಿಲ್ಲ.ಆರೆಸ್ಸೆಸ್ ಆಗಲೀ ಬಜರಂಗದಳವಾಗಲೀ ಈ ಇಡೀ ಪ್ರಕರಣದಲ್ಲಿ ಅತ್ಯಂತ ಸಹನೆಯಿಂದ ನಡೆದುಕೊಂಡಿವೆ. ಹಾಗಿದ್ದರೂ ನಮ್ಮ ಬುದ್ಧಿಜೀವಿಗಳು ಈ ಸಂಸ್ಥೆಗಳ ಮೇಲೆ ನೇರವಾಗಿ ಆರೋಪ ಹೊರಿಸುತ್ತಿರುವುದು ಕಾನೂನುಬದ್ಧವಾಗುತ್ತದೆಯೆ? ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ ಮೇಲೆ ಆಯೋಜನೆಯಾದ ಟಿವಿ ಸಂವಾದ ಕಾರ್ಯಕ್ರಮಗಳಲ್ಲಿ ಮತ್ತೆ ಸಂಘಪರಿವಾರವೇ ಕೊಲೆಯಲ್ಲಿ ಭಾಗಿಯಾಗಿದೆ ಎಂದು ತೀರ್ಪು ಕೊಡಿಸಿದ್ದು ಏನನ್ನು ಸೂಚಿಸುತ್ತದೆ? ಹೀಗೆ ಜನಕ್ಕೆ ತಪ್ಪು ಸಂದೇಶ ರವಾನಿಸಿದ ಕಾರ್ಯಕ್ರಮ ನಿರ್ವಾಹಕರನ್ನು ಯಾಕೆ ಕಾನೂನು ಸಮರಕ್ಕೆ ಎಳೆಯಬಾರದು?
5. ಒಬ್ಬ ಪತ್ರಕರ್ತ “ಈ ಕೊಲೆಯ ಬಗ್ಗೆ ಒಂದು ಮಾಹಿತಿ ಸಿಕ್ಕಿದೆ. ಅದನ್ನು ನಾನು ಬುಧವಾರ ಪ್ರಕಟವಾಗುವ ಪತ್ರಿಕೆಯಲ್ಲಿ ಬರೆದುಕೊಳ್ಳುತ್ತೇನೆ” ಎಂದು ಜಾಲತಾಣದಲ್ಲಿ ಬರೆದುಕೊಳ್ಳುತ್ತಾನೆ. ರಾಜ್ಯದ ಒಬ್ಬ ಹಿರಿಯ ವ್ಯಕ್ತಿಯ ಕೊಲೆ ನಡೆದಾಗ ಅದನ್ನು ಮುಚ್ಚಿಟ್ಟು ಲೇಖನ ಬರೆಯುವುದು ಮುಖ್ಯವಾಗುತ್ತದೋ ಅಥವಾ ತನಗೆ ಸಿಕ್ಕಿರುವ ಮಾಹಿತಿಯನ್ನು ಪೋಲೀಸರಿಗೆ ನೀಡುವುದು ಮುಖ್ಯವಾಗುತ್ತದೋ? ಈತ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡರೂ ಪೋಲೀಸರು ಅವನನ್ನು ಯಾಕೆ ವಿಚಾರಣೆಗೆ ಕರೆಯಲಿಲ್ಲ? ಇಂಥ ಕ್ರಿಮಿನಲ್ ಮನಸ್ಥಿತಿಯ ಪತ್ರಕರ್ತರನ್ನು ಹೊರಗೆ ಅಲೆದಾಡಲು ಬಿಟ್ಟು, ಭಗವಾನ್ ಮೇಲೆ ಸಿಟ್ಟು ತೋಡಿಕೊಂಡ ಒಬ್ಬ ಇಪ್ಪತ್ತರ ಹರೆಯದ ಹುಡುಗನನ್ನು ಬಂಟ್ವಾಳದಲ್ಲಿ ಪೋಲೀಸರು ಬಂಧಿಸಿದ್ದಾರೆ. ನಮ್ಮ ರಾಜ್ಯದ ಪೋಲೀಸರು ಯಾವುದೇ ಕಾಣದ ಕೈಯ ಕೈಗೊಂಬೆಗಳಾಗಿ ವರ್ತಿಸುತ್ತಿಲ್ಲ ಎಂದು ಹೇಗೆ ನಂಬುವುದು?
6. ಈ ಕೊಲೆಯನ್ನು ಗ್ಲೋರಿಫೈ ಮಾಡುತ್ತ ಕರ್ನಾಟಕಕ್ಕೆ ತಾಲಿಬಾನ್ ಬಂದಿದೆ, ಐಸಿಸ್ ಬಂದಿದೆ, ಅವೆಲ್ಲಕ್ಕಿಂತ ದೊಡ್ಡ ಗಂಡಾಂತರ ಆವರಿಸಿದೆ ಎನ್ನುತ್ತ ಆಕಾಶವೇ ಕಳಚಿಬಿದ್ದಂತೆ ಆಡಿದ ಎಲ್ಲ ಬುದ್ಧಿಜೀವಿಗಳು ಕರ್ನಾಟಕದಲ್ಲಿ ನೂರು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿ ಹೋಗಿದ್ದರು? ಮಲೆಕುಡಿಯರ ಹುಡುಗನ ಕೈ ಕಡಿದು ಹಾಕಿದಾಗ ನಮ್ಮ ಮಾಧ್ಯಮ ಸಲಹೆಗಾರರು ಎಲ್ಲಿ ಅಡಗಿದ್ದರು? ಮಸೀದಿಗೆ ಹೋಗಿ ಪವಿತ್ರಗ್ರಂಥವನ್ನು ಹರಿದುಹಾಕಿದ ಕುಡುಕನನ್ನು ಅಲ್ಲಿನ ಮೌಲ್ವಿಗಳು ಸೇರಿ ಕೊಂದೇಬಿಟ್ಟರಲ್ಲ; ಆಗೆಲ್ಲಿ ಹೋಗಿತ್ತು ಇವರ ಮಾನವೀಯತೆ? ಆಗ ಯಾವ್ಯಾವುದೋ ಬಿಲಗಳಲ್ಲಿ ಅಡಗಿದ್ದ ಬುದ್ಧಿಜೀವಿಗಳು ಈಗ ಮಾತ್ರ ಅರ್ಧದಿನದಲ್ಲೇ ಟೌನ್‍ಹಾಲ್ ಎದುರು ಜಮೆಯಾಗಲು ಕಾರಣ ಏನು? ಭಗವದ್ಗೀತೆ, ರಾಮಾಯಣಗಳ ಚರ್ಚೆಗೆ ಕರೆದಾಗ ತಲೆಮರೆಸಿಕೊಂಡಿದ್ದ ಭಗವಾನ್ ಎಂಬ ಬುದ್ಧಿಜೀವಿ ಇದೊಂದು ವಿಷಯಕ್ಕೆ ಮಾತ್ರ ಟಿವಿಯಲ್ಲಿ ಮುಖ ತೋರಿಸಲು ಕಾರಣವೇನು?

ಸದ್ಯದ ಪರಿಸ್ಥಿತಿ ನೋಡಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ, ಕಲ್ಬುರ್ಗಿ ಕರ್ನಾಟಕದ ಸಾತ್ವಿಕ ಜನಕ್ಕೆ ಕೋಪ ಬರುವಂತೆ ಅನೇಕ ಹುಚ್ಚು ಹೇಳಿಕೆಗಳನ್ನು ಕೊಟ್ಟಿದ್ದರೂ ಅವರನ್ನು ಪರಿಹರಿಸಬೇಕು ಎಂಬ ಅಲೆ ಕರ್ನಾಟಕದಲ್ಲಿ ಇರಲಿಲ್ಲ. ಅದು ಕೂಡ, ಈಗ, ಅವರು ಬಹುತೇಕ ತೆರೆಮರೆಗೆ ಸರಿದಿದ್ದ ಸಮಯದಲ್ಲಿ ಧುತ್ತನೆ ಜೀವ ತೆಗೆಯುವ ಯೋಚನೆ ಯಾರಿಗೂ ಬಂದಿರಲಿಕ್ಕಿಲ್ಲ. ಸೈದ್ಧಾಂತಿಕ ವಿಚಾರಗಳಿಗಾಗಿ ಕೊಲೆ ಮಾಡಬೇಕು ಎಂದೇ ಯಾರಾದರೂ ಹೊಂಚುಹಾಕಿದ್ದರೆ, ಕಲ್ಬುರ್ಗಿಗಿಂತ ಹೆಚ್ಚು “ಸೂಕ್ತ”ವೆನಿಸುವ ಬೇರೆ ಆಯ್ಕೆಗಳಿದ್ದವು. ಅವು ಯಾವುವು ಎನ್ನುವುದನ್ನು ನಾನೇನೂ ಮುಕ್ತವಾಗಿ ಹೇಳಬೇಕಾಗಿಲ್ಲ. ಕರ್ನಾಟಕದ ಬುದ್ಧಿಜೀವಿಗಳ ದೊಂಬರಾಟವನ್ನೂ ಅವರ ವೈಚಾರಿಕ ದ್ವಂದ್ವಗಳನ್ನೂ ಕಂಡವರಿಗೆ ಅದಕ್ಕೆ ಉತ್ತರ ಗೊತ್ತಿದೆ. ಹಾಗಿರುವಾಗ, ಕಲ್ಬುರ್ಗಿ ಖಂಡಿತ ಯಾವುದೇ ವೈಚಾರಿಕ ಭಿನ್ನಾಭಿಪ್ರಾಯಗಳ ಗಿನಿಪಿಗ್ ಆಗಿರಲಿಲ್ಲ. ಹಾಗೆಯೇ ಅವರನ್ನು ಅವರದೇ ಗುಂಪಿನ ಬುದ್ಧಿಜೀವಿಗಳು ಪರಿಹರಿಸಿದರು ಎನ್ನುವ ಶಂಕೆಯನ್ನೂ ನಾವು ಸದ್ಯಕ್ಕೆ ಬಿಟ್ಟುಬಿಡಬಹುದು. ನಮ್ಮ ನಾಡಿನ ಬುದ್ಧಿಜೀವಿಗಳ ಪೌರುಷ ಮೈಕಿನ ಮುಂದೆ ಉತ್ತರಕುಮಾರನ ಆವೇಶದಲ್ಲಿ ಭಾಷಣ ಮಾಡುವುದು, ಟೌನ್‍ಹಾಲ್ ಎದುರು ಹಸು-ನಾಯಿಗಳ ಮಾಂಸ ತಿನ್ನುವುದು, ಸಾಮಾಜಿಕ ಜಾಲತಾಣದಲ್ಲಿ ಗಲಭೆ ಎಬ್ಬಿಸುವುದು, ತಮ್ಮ ಬ್ಯಾಂಕ್ ಅಕೌಂಟುಗಳಿಗೆ ಬೇನಾಮಿ ಮೂಲಗಳಿಂದ ಬಂದು ಬಿದ್ದ ದುಡ್ಡಿಗೆ ತಕ್ಕಂತೆ ಚೊಕ್ಕ ಲೇಖನಗಳನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸುವುದು – ಇಷ್ಟಕ್ಕೆ ಸೀಮಿತವಾಗಿದೆ ಎನ್ನಬಹುದು. ಹಾಗಾದರೆ ಕೊಲೆಗೇನು ಕಾರಣ ಎಂಬ ಪ್ರಶ್ನೆ ಎದ್ದಾಗ ಮತ್ತದೇ ಕುಟುಂಬ ಮನಸ್ತಾಪಗಳ ವಿಷಯಕ್ಕೆ ಬಂದು ನಿಲ್ಲುತ್ತೇವೆ.ಬುದ್ಧಿಜೀವಿಗಳ ಶೈಲಿಯಲ್ಲೇ ಮಾತನಾಡುವುದಾದರೇ “ಈ ಪ್ರಕರಣ ನಡೆದ ಮೇಲೆ ನಮ್ಮ ಬುದ್ಧಿಜೀವಿಗಳ ಕೆಲ ನಾಯಕರು ಸುಪಾರಿ ಕೊಟ್ಟು ಕೊಲೆ ಮಾಡಿಸಿದವರ ಜೊತೆ ಗುಪ್ತ ಸಮಾಲೋಚನೆ ನಡೆಸಿರುವ ಸಾಧ್ಯತೆ ಇದೆ. ಮತ್ತು ಈ ಸಮಾಲೋಚನೆಯಲ್ಲಿ,ನಾವು ಈ ಕೊಲೆಯನ್ನು ಸಂಘಪರಿವಾರದವರೇ ನಡೆಸಿದರು ಎಂದು ಗುಲ್ಲೆಬ್ಬಿಸುತ್ತೇವೆ. ಒಂದೆರಡು ವಾರ ಇದರ ಹವಾ ಇರುತ್ತದೆ. ಅಷ್ಟರಲ್ಲಿ ನಾವು ನಮ್ಮ ಅಧಿಕಾರದಂಡ ಉಪಯೋಗಿಸಿ ಪ್ರಕರಣವನ್ನು ಮುಚ್ಚಿಹಾಕುತ್ತೇವೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯೋಣ” ಎಂಬ ತೀರ್ಮಾನವಾಗಿರುವ ಸಾಧ್ಯತೆಯೂ ಇರಬಹುದಲ್ಲವೇ? ಇವರಲ್ಲಿ ಹಲವರು ಪತ್ರಿಕೆಗಳಲ್ಲಿ ಕಲ್ಬುರ್ಗಿ ಸಾವಿಗೆ ರಾಜಕೀಯದ ಬಣ್ಣ ಹಚ್ಚಲಿರುವವರು ಎನ್ನುವುದು ವಿಪರ್ಯಾಸ.

ಬುದ್ಧಿಜೀವಿಗಳ ಚಿಂತನೆ ಹೇಗಿದೆ ಎನ್ನುವುದನ್ನು ಅಳೆಯುವುದೇನೂ ಕಷ್ಟವಲ್ಲ.
1. ಈ ಕೊಲೆಯ ನಿಜವಾದ ಕಾರಣ ಏನು ಎನ್ನುವುದು ನಮಗೆ ಅಗತ್ಯ ಅಲ್ಲ. ಈ ಮೂಲಕ ನಮ್ಮ ಬೇಳೆಯನ್ನು ಆದಷ್ಟು ಬೇಯಿಸಿಕೊಳ್ಳಬೇಕು. ಸಿಗುವಷ್ಟು ಮೈಲೇಜ್ ದೊರಕಿಸಿಕೊಳ್ಳಬೇಕು – ಇದು ಹಲವರ ವರಸೆ.
2. ಈ ಕೊಲೆಯನ್ನು ಕಾರಣ ಮಾಡಿಕೊಂಡು ಬಲಪಂಥೀಯರನ್ನು ಕಟ್ಟಿಹಾಕಬೇಕು. ಹಲವರ ಮೇಲೆ ಕೇಸ್ ಜಡಿಯಬೇಕು. ಹಲವರಿಗೆ ಜೈಲು ದಾರಿ ತೋರಿಸಬೇಕು. ಇನ್ನು ಅವರು ಮಾತಾಡಲು ಉಸಿರೆತ್ತದ ಹಾಗೆ ಅವರಿಗೆ ಟ್ರೀಟ್‍ಮೆಂಟ್ ಕೊಡಬೇಕು – ಇದು ಇನ್ನು ಕೆಲವರ ವರಸೆ. ಒಂದು ಟಿವಿ ಚಾನೆಲ್‍ನಲ್ಲಿ ಭಾಗವಹಿಸಿದ ಮೂರು ಬುದ್ಧಿಜೀವಿಗಳು ಈ ಮಾತುಗಳನ್ನು ಮೇಲಿಂದ ಮೇಲೆ ಹೇಳಿದರು.ಇದೇ ವ್ಯಕ್ತಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಹಾಕಾವ್ಯಗಳನ್ನು ಬರೆಯುತ್ತಾರೆ ಎನ್ನುವುದೊಂದು ತಮಾಷೆ!
3. ಈ ಇಡೀ ಪ್ರಕರಣಕ್ಕೆ ಕೆಲವು ರಾಜಕೀಯ ವ್ಯಕ್ತಿಗಳ ಶ್ರೀರಕ್ಷೆ ಇದೆ. ಯಾವ ಕಾರಣಕ್ಕೂ ಈ ಪ್ರಕರಣವನ್ನು ಭೇದಿಸಲಾಗುವುದಿಲ್ಲ ಎಂದು ಅವರು ತಿಳಿದಿದ್ದಾರೆ. ಕೊಲೆಯ ನಿಖರತೆ ಗಮನಿಸಿದರೆ ಶಾರ್ಪ್ ಶೂಟರ್‍ಗಳನ್ನು ಮುಂಬಯಿಯಿಂದ ಕರೆಸಿಕೊಳ್ಳಲಾಗಿದೆ ಎನ್ನುವುದು ಸ್ಪಷ್ಟ. ಅಲ್ಲಿಯವರೆಗೆ ಹೋಗಿ ಪ್ರಕರಣದ ಸಿಕ್ಕುಗಳನ್ನು ಬಿಡಿಸಲು ಆಗುವುದಿಲ್ಲ ಎನ್ನುವುದು ಕೆಲವರ ಅಂಬೋಣ. ಅಥವಾ ತನಿಖೆಗೆ ಇಳಿದರೂ ಹಲವಾರು ವರ್ಷಗಳ ಕಾಲ ಎಳೆಯುತ್ತ ಹೋಗಬಹುದು. ಅಷ್ಟು ವರ್ಷವೂ ಬಲಪಂಥೀಯರ ಮೇಲೆ, ಸಂಘಿಗಳ ಮೇಲೆ ಗೂಬೆ ಕೂರಿಸುತ್ತ, ಕಾಗೆ ಹಾರಿಸುತ್ತ ಇರಬಹುದು ಎನ್ನುವುದು ಅವರ ಯೋಚನೆ.
4. ಕರ್ನಾಟಕ ರಾಜ್ಯ ಸರಕಾರಕ್ಕೆ ಆಕ್ಸಿಜನ್ ಸಿಲಿಂಡರ್‍ನ ಅಗತ್ಯವಿತ್ತು. ಮುಟ್ಟಿದ ತಟ್ಟಿದ ಕೇಸುಗಳಲ್ಲೆಲ್ಲ ಮಣ್ಣು ಮೆತ್ತಿಕೊಂಡು ಹತಾಶ ಸ್ಥಿತಿಯಲ್ಲಿ ನಿಂತಿದ್ದ ರಾಜ್ಯ ಸರಕಾರಕ್ಕೆ ಬಲಪಂಥೀಯರ ಮೇಲೆ ಏರಿಬರಲು ಒಂದು ಕಾರಣದ ಅಗತ್ಯವಿತ್ತು. ಅಲ್ಲದೆ, ಬಿಬಿಎಂಪಿ ಚುನಾವಣೆಯ ನಂತರದ ಬೆಳವಣಿಗೆಗಳ ಸಮಯದಲ್ಲಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಅದೊಂದು ನೆಪದ ಹುಡುಕಾಟದಲ್ಲಿದ್ದಂತಿತ್ತು. ಅದರ ಅವಸ್ಥೆಯನ್ನು ಚೆನ್ನಾಗಿ ಬಲ್ಲ ಭಟ್ಟಂಗಿಗಳು ಈ ಪ್ರಕರಣವನ್ನು ತನ್ನ ಕೈಗೆ ತೆಗೆದುಕೊಂಡು ಬುದ್ಧಿಜೀವಿಗಳ ಬಳಗ ಸೇರಿಸಿಕೊಂಡು, ರಾಜ್ಯದ ಜನತೆಗೆ ಹೊಸ ಕತೆಗಳನ್ನು ಹೇಳತೊಡಗಿದರು. ಕಿಂದರಜೋಗಿ ಯಾಕೆ ಪುಂಗಿ ಊದಿದ ಎನ್ನುವುದು ನಮಗೆಲ್ಲ ಚೆನ್ನಾಗಿ ಗೊತ್ತು!
5.ಈಗ ಪ್ರಕರಣ ಸಿಬಿಐಗೆ ಹೋಗಿರುವುದರಿಂದ, ಪ್ರಕರಣದಲ್ಲಿ ಏನೇ ತೀರ್ಪು ಬಂದರೂ ಅದು ತಮಗೆ ಅನುಕೂಲವಾಗಿಲ್ಲದಿದ್ದರೆ ಈ ಬುದ್ಧಿಜೀವಿಗಳು “ಇದರಲ್ಲಿ ಕೇಂದ್ರದ ಕೈವಾಡ ಇದೆ” ಎಂಬ ಹೊಸರಾಗ ಹಾಡಲು ಅನುಕೂಲ! ಕೊಲೆಗೆ ನಿಜವಾದ ಕಾರಣ ಏನು ಎನ್ನುವುದನ್ನು ಸಿಬಿಐ ಬಹಿರಂಗ ಪಡಿಸಿದ ಮೇಲೂ, ಅವರ “ಸಂಘಿರಾಗ” ಮುಂದುವರೆಯಲಿದೆ.
6. ಇತ್ತೀಚೆಗೆ ಬುದ್ಧಿಜೀವಿಗಳಲ್ಲೇ ಮೂರ್ನಾಲ್ಕು ಪಂಗಡಗಳಾಗಿ ಒಡೆದುಹೋಗಿದ್ದವರು ಇದ್ದರು. ಅವರವರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಅವನ್ನೆಲ್ಲ ಪರಿಹರಿಸಿಕೊಂಡು “ನಾವೆಲ್ಲ ಒಂದು” ಎಂಬ ಐಕ್ಯಗಾನ ಹಾಡಲು ಕೆಲವರು ಚಾತಕಪಕ್ಷಿಯಂತೆ ಕಾಯುತ್ತಿದ್ದರು. ಈ ಕೊಲೆಯನ್ನು ಅದಕ್ಕಾಗಿ ಸಮರ್ಥವಾಗಿ ಬಳಸಿಕೊಂಡರು.

ಒಟ್ಟಲ್ಲಿ, ನಮ್ಮ ನಡುವೆ ಸಂಭವಿಸಬಾರದಿದ್ದ ಒಂದು ದಾರುಣವಾದ ಕೊಲೆ ನಡೆದುಹೋಗಿದೆ. ಆದರೆ ಅದನ್ನು ತಂತಮ್ಮ ಲಾಭಗಳಿಗಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವುದರ ಲೆಕ್ಕಾಚಾರ ಮಾಡುತ್ತಿದ್ದಾರೆ ಆ ಹೆಣದ ಮೇಲೆ ಕೂತಿರುವ ಬುದ್ಧಿಜೀವಿಗಳೆಂಬ ಅಘೋರಿಗಳು. “ಅವಸ್ಥೆ” ಕಾದಂಬರಿಯಲ್ಲಿ ಬರುವ ಹುಡುಗಿಯ ಸಾವು ಮತ್ತು ಅದನ್ನು ರಾಜಕೀಯದ ಏಣಿಯಾಗಿ ಹೇಗೆ ಬಳಸಿಕೊಳ್ಳಬೇಕೆಂದು ಒಬ್ಬೊಬ್ಬರೂ ಒಂದೊಂದು ಸಲಹೆ ಕೊಟ್ಟು ಮುಖ್ಯಮಂತ್ರಿಯ ಕಣ್ಣಲ್ಲಿ ದೊಡ್ಡವನಾಗಲು ಪ್ರಯತ್ನಿಸುವ ಸಂದರ್ಭ ನೆನಪಾಗುತ್ತಿದೆ. ಕತೆಗಳಿಗಿಂತ ವಾಸ್ತವ ಕೆಲವೊಮ್ಮೆ ರುಚಿಕಟ್ಟಾಗಿರುತ್ತದೆ ಅಲ್ಲವೆ?

23 ಟಿಪ್ಪಣಿಗಳು Post a comment
  1. Deepak
    ಸೆಪ್ಟೆಂ 1 2015

    ರೋಹಿತ ಚಕ್ರ ತಿರ್ಥರೂ ಕಥೆ ಬರೆಯುತ್ತಾರೆ ಅಂತ ಇವತ್ತು ಗೊತ್ತಾಯ್ತು. ನಿಮ್ಮದು ಮಾಯಾ ವಾಸ್ತವ ಪ್ರಕಾರವನ್ನು ದಾಟಿ ಮಾಯೆಯನ್ನೇ ವಾಸ್ತವ ವಾಗಿಸುವ ಕತೆ. ಇಂಗ್ಲಿಷ್ ಭಾಷೆಯಯಲ್ಲಿ ಬರದ್ದಿದ್ರೆ ಭಾರತಕ್ಕೆ ಒಂದು ನೊಬೆಲ್ ಆದರು ಸಿಕ್ತಿತಲ್ಲ ಮಾರಾಯರೇ.

    ಉತ್ತರ
    • rohithmath
      ಸೆಪ್ಟೆಂ 1 2015

      ನಾನು ಕತೆಗಳನ್ನೂ ಬರೆಯುತ್ತೇನೆನ್ನುವುದು ನಿಮಗೆ ಇದುವರೆಗೆ ಗೊತ್ತಿರದಿದ್ದರೆ ನನ್ನನ್ನು ಸಮಗ್ರವಾಗಿ ಓದಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದೀರಿ ಅಂತಾಯ್ತು! ಎರಡು ಸಂಕಲನಗಳಾಗುವಷ್ಟು ಕತೆಗಳನ್ನು (ಸ್ವಂತ ಮತ್ತು ಅನುವಾದ) ಬರೆದಿದ್ದೇನೆ.

      ಇರಲಿ, ಈಗ ಈ ಲೇಖನದ ಬಗ್ಗೆ ನೀವು ವ್ಯಂಗ್ಯ ಮಾಡಲು ಹೊರಟಿದ್ದೀರಾದರೆ, ದಯವಿಟ್ಟು ನಿಮ್ಮ ಆಕ್ಷೇಪ ಯಾವ ವಿಷಯಕ್ಕೆ ಎನ್ನುವುದನ್ನು ನೇರವಾಗಿ ಹೇಳಿ. ವ್ಯಂಗ್ಯ, ಗೇಲಿಗಳಿಂದ ನನ್ನ ಅಭಿಪ್ರಾಯವನ್ನು ಡೈಲ್ಯೂಟ್ ಮಾಡಲು ಸಾಧ್ಯವಿಲ್ಲ.

      – ರೋಹಿತ್.

      ಉತ್ತರ
  2. Deepak
    ಸೆಪ್ಟೆಂ 1 2015

    ನಿಮ್ಮದು ಒಳ್ಳೆ ಕತೆಯಾಯಿತಲ್ಲ ಮಾರ್ರೆ . ನಿಮ್ಮ ಕತಾಸಂಕಲನಗಳು ಯಾವ ರದ್ದಿ ಅಂಗಡಿಯಲ್ಲಿ ಸಿಗುತ್ತವೆಂದು ಗೊತ್ತಿಲ್ಲ. ಇರಲಿ, ಪ್ರಯತ್ನಿಸುತ್ತೇನೆ ಸಿಕ್ಕರೆ ನಿಮ್ಮ ಕತೆ ಓದುವ ಪುಣ್ಯ ನನಗೆ. ನಿಮ್ಮ ಇಡೀ ಲೆಖನಕ್ಕೇ ಒಂದ ಆಕಾರವಿಲ್ಲ. ಒಂದತರ ಹೈಲಿ ದೈಲುಟೆ ಡ್ ಲಿಕ್ವಿಡ್. ಇನ್ನೇನು ಡೈಲ್ಯೂಟ್ ಮಾಡೋದು ನಿಮ್ಮ ಲೇಖನ ಟಿವಿ ಲಿ ಬರೊ ಕಾಮಡಿ ಶೋ ತರ ಇದೆ.

    ಉತ್ತರ
    • ಸೆಪ್ಟೆಂ 2 2015

      ಇಲ್ಲಿ ಬಂದಿರುವ ಕಾಮೆಂಟುಗಳನ್ನು ಓದಿದದ್ರೆ ಯಾರು ಕಾಮೆಡಿಯನ್ನು ಎಂಬುದು ಗೊತ್ತಾಗುತ್ತೆ.

      ಉತ್ತರ
  3. UDAYA Peruvaje
    ಸೆಪ್ಟೆಂ 1 2015

    ಉತ್ತಮ ಲೇಖನ ರೋಹಿತ್ ರೆ. ಧನ್ಯವಾದಗಳು.

    ಉದಯ ಪೆರುವಾಜೆ

    ಉತ್ತರ
  4. gajendra honnakote
    ಸೆಪ್ಟೆಂ 1 2015

    ಲೇಖನ ಬರೆದ ನಿಟ್ಟಿನಲ್ಲಿ ಯೋಚಿಸುವವರು ತುಂಬಾ ಕಡಿಮೆ ಎಲ್ಲರೂ ತಮ್ಮ ಮೂಗಿನ ನೇರಕ್ಕೆ ಮಾತಾಡುವವರೇ . ಧನ್ಯವಾದಗಳು ರೋಹಿತ್ ಚಕ್ರತೀರ್ಥ

    ಉತ್ತರ
  5. rohithmath
    ಸೆಪ್ಟೆಂ 1 2015

    ನೀವು ಯಾರ ಜೊತೆ ಮಾತಾಡುತ್ತಿದ್ದೀರೋ ಗೊತ್ತಿಲ್ಲ. ಇಲ್ಲಿ ನನ್ನ ಹೆಸರಿನ ಬೇರೆ ವ್ಯಕ್ತಿಗಳು ಬರೆದುಕೊಳ್ಳುವ ಕಾಮೆಂಟುಗಳಿಗೆ ನಾನು ಉತ್ತರದಾಯಿಯಲ್ಲ. ನಾನು ನನ್ನ ಒಂದು ಐಡಿ (rohithmath) ಯನ್ನು ಮಾತ್ರ ಉಪಯೋಗಿಸುವವನು.

    ನಿಮ್ಮ ಆಕ್ಷೇಪಗಳಿದ್ದರೆ ಲೇಖಕರ ಜೊತೆ ಚರ್ಚೆ ಮಾಡಿ. ಗೇಲಿ ಮಾಡುತ್ತ ವಾದವನ್ನು ತೇಲಿಸಿಹಾಕುವವರ ಜೊತೆ ಸಂವಾದ ನಡೆಸುತ್ತ ಕೂರುವವನಲ್ಲ ನಾನು. ನಿಮಗೆ ಅರ್ಥವಾಗಿದೆ ಎಂದು ಭಾವಿಸುತ್ತೇನೆ.

    – ರೋಹಿತ್.

    ಉತ್ತರ
    • ಸೆಪ್ಟೆಂ 1 2015

      ನಿಜ ಸತ್ಯ ಸಹಿಸಿಕೊಳ್ಳುವ ಶಕ್ತಿ ಬುದ್ಧಿ ಜೀವಿಗಳೆನಿಸಿಕೊಂಡ (ತಮಗೆ ತಾವೆ ಬುದ್ಧಿವಂತರು ಎಂದುಕೊಳ್ಳುವವರಿಗೆ) ಇಲ್ಲ ಬಿಡಿ

      ಉತ್ತರ
  6. Deepak
    ಸೆಪ್ಟೆಂ 1 2015

    ಅಭಾ ಭಾ ಭಾ ಕಿವಿಮೇಲೆ ಹುವಿಡೋದಕ್ಕೆ ಚನ್ನಾಗೇ ಕಲ್ತಿದಿರಲ್ಲ ಸ್ವಾಮಿ . ಲೇಖಕರು ರೋಹಿತ್ ಚಕ್ರತೀರ್ಥ. rohithmath ಕೂಡ ರೋಹಿತ್ ಚಕ್ರತೀರ್ಥ. ( ಮೊದಲನೆ ಕಾಮೆಂಟ್ ನಲ್ಲಿ ಗೊತ್ತಾಗುತ್ತೆ). Rohith ಮೇಲೆ ಕ್ಲಿಕ್ ಮಾಡಿದರೆ ರೋಹಿತ್ ಚಕ್ರತೀರ್ಥ ರ ಪ್ರೊಫೈಲ್ ಗೆ ಹೋಗುತ್ತೆ. ಎಲ್ಲ ಮಾಯಾಲೋಕ ನಮೋ ನಮಹ

    ಉತ್ತರ
    • rohithmath
      ಸೆಪ್ಟೆಂ 1 2015

      ನನ್ನ ಈಮೇಲ್ ಐಡಿಯನ್ನು ಬಳಸಿಕೊಂಡು ಬೇನಾಮಿವ್ಯಕ್ತಿಗಳು ಸೃಷ್ಟಿಸಿದ ಐಡಿ ಅದು. (ನೀವು ಹೇಳಿದ ಮೇಲೆ ನಾನೂ ಚೆಕ್ ಮಾಡಿ, ಬ್ಲಾಗ್ ಅಡ್ಮಿನ್ ಅವರಿಗೆ ವಿಷಯ ತಿಳಿಸಿದ್ದೇನೆ) ನನಗೆ ಎರಡೆರಡು ಐಡಿಗಳ ಅಗತ್ಯ ಖಂಡಿತ ಇಲ್ಲ. ಮತ್ತು ವಾದವನ್ನು ಬೈಗುಳ ಅಥವಾ ವ್ಯಂಗ್ಯದಿಂದ ಗೆಲ್ಲುವ ಅನಿವಾರ್ಯತೆಯೂ ನನಗಿಲ್ಲ. ವ್ಯಂಗ್ಯ ಬಿಟ್ಟರೆ ಚರ್ಚೆ. ಇಲ್ಲವಾದರೆ ನಿಮ್ಮ ದಾರಿ ನಿಮಗೆ.

      ಉತ್ತರ
    • ಸೆಪ್ಟೆಂ 1 2015

      ದೀಪಕ್,
      ಸ್ವಂತ ಹೆಸರಿನಿಂದ ಬರೆಯಲಾಗದ ಮುಖೇಡಿಗಳು ಈ ರೀತಿ ಹಾದಿ ತಪ್ಪಿಸುವ ಕೆಲಸಗಳನ್ನು ಚರ್ಚೆ ಹಾಳುಗೆಡವಲು ಮಾಡುತ್ತಲೇ ಇರುತ್ತವೆ.ಅದು ರೋಹಿತ್ ಅವರ ಐಡಿಯಿಂದ ಬಂದ ಕಮೆಂಟ್ ಅಲ್ಲ

      ಉತ್ತರ
  7. ನಾರಾಯಣ
    ಸೆಪ್ಟೆಂ 2 2015

    ಾತೀ ಉತ್ತಮ ವಿಶ್ಲೇಷಣೆ. ಕತೆ ಎನ್ನುವ ಕತ್ತೆಗಳನ್ನು ಉಪೇಕ್ಷಿಸಿ.

    ಉತ್ತರ
  8. ಸೆಪ್ಟೆಂ 2 2015

    ತರ್ಕಬದ್ಧವಾಗಿದೆ.

    ಉತ್ತರ
  9. ಸೆಪ್ಟೆಂ 2 2015

    Very good and apt analysis. I am having the same view and anger as the writer expressed here. Now national media is comparing him with Narendra Dhabolkar and Govind Pansare. They just wanted a relation to attack right wing groups. If one looks its no secret that Kalburgi nowhere near to these two rationalist thinkers of Maharashtra. They created a movement and became threat to the livelihood of Dhongi babas and Pansare created a movement against Toll Nakas in Kolhapur and all toll nakas were closed. SO these two made a peoples movement which made certain people loose their livelihood. But what is the contribution of Kalburgi except speaking irresponsibly? And now after his death all media especially national media who dont know the ground realities had made him martyr!

    And surprisingly i read a good and balanced article with proper approach in today’s Prajavani! Here is the link: http://www.prajavaniepaper.com/svww_zoomart.php?Artname=20150902a_006100002&ileft=273&itop=52&zoomRatio=130&AN=20150902a_006100002

    ಉತ್ತರ
    • ಸೆಪ್ಟೆಂ 2 2015

      ಹೌದು ನನಗೂ ಅನಿಸಿದ್ದು ಅದ್ದುತ ವಾಸ್ತವಾ೦ಶಗಳನ್ನು ಬಿ೦ಬಿಸಿದ ಬರಹ.

      ಉತ್ತರ
  10. ಸೆಪ್ಟೆಂ 2 2015

    ಇದು ನಿಜವಾದ ಸಮಗ್ರ ಚಿ೦ತನೆ. ಎಲ್ಲಾ ದೃಷ್ಠಿಕೋನದಿ೦ದಲೂ ಪ್ರಾಮಾಣಿಕವಾದ ಚಿ೦ತನೆ ನಡೆಸಿ ವಾಸ್ತವಾ೦ಶವನ್ನು ಬಿ೦ಬಿಸುವ ಬರಹ ……. ನಿಜಕ್ಕೂ ಅಪಾರ ಹೆಮ್ಮೆ ಅನಿಸುತಿದೆ ಬರೆದವರ ಬಗ್ಗೆ. ನನ್ನದೂ ಇದೇ ಚಿ೦ತನೆಯಾಗಿತ್ತು. ಆದರೆ ಇಷ್ಟೊ೦ದು ಅದ್ದುತವಾಗಿ ಬರೆಯಲು ನನಗೆ ಬರುವುದಿಲ್ಲ… ತು೦ಬಾ ತು೦ಬಾ ವೈಜ್ಞಾನಿಕವಾದ ತರ್ಕಕ್ಕೆ ನಿಲುಕುವ೦ತ ಪ್ರಜ್ಞಾವ೦ತ ಬರಹ…………

    ಉತ್ತರ
  11. Deepak
    ಸೆಪ್ಟೆಂ 2 2015

    ಬರೆಯುವವರು ಕತ್ತೆಗಲೋ ಇಲ್ಲ ಓದುವವರು ಕತ್ತೆಗಳೊ? ಒಂದು ಕತ್ತೆ ಯಂತು ಕಾಮೆಂಟ್ ಮಾಡಿರುವುದು ನಿಜ ……….. ಅದಿರಲಿ ಮೊದಲು ಈ ಲೇಖನ ತರ್ಕಬದ್ದವಾಗಿ ವಿಶ್ಲೇಷಿಸಲು ಯಾಕೆ ಸೋತಿದೆ ನೋಡೋಣ .

    ೧) ಬುದ್ದಿಜೀವಿಗಳು ಕಲಬುರ್ಗಿಯವರ ಸಾವಿಗೆ ಕರನಗಿರಬಹುದು ಎಂಬುದು ಈ ಲೇಕನದ ವಾದ ———- ಹಾಗಾದರೆ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಸ್ಪೋಟಗೊಂಡ ಬಮ್ಬುಗಲಿಗೆಲ್ಲ ಆರ್ ಎಸ ಎಸ, ಬಾ ಜಾ ಪಾ ( ಮುಂಬೈ ಸ್ಪೋತವನ್ನೂ ಒಳಗೊಂಡು ) ಕರಣ ಎನ್ನಬಹುದೇ?

    ೨) ಸಂಘಪರಿವಾರವಾಗಲೀ ಆರೆಸ್ಸೆಸ್ ಆಗಲೀ ಅವರನ್ನು ಕೊಲೆ ಮಾಡುವಷ್ಟು ಮುಂದುವರಿಯುತ್ತಾರೆ ಎನ್ನುವುದು ಊಹಾತೀತ ವಿಷಯ ಎನ್ನುತ್ತದೆ ಲೇಕನ : ಇಲ್ಲಿ ನೀವೇನು ಮಾಡುತ್ತಿದ್ದಿರಿ ಸರ್ ಇಲ್ಲಿ ನೀವು ಕೂಡ jujdement ಮಾಡ್ತಾ ಇದ್ದೀರಿ ……… ಇಲ್ಲಿ ನಿಮಗೂ ಬುದ್ದಿಜೀವಿಗಳಿಗೂ ವತ್ಯಸವಿಲ್ಲ ………… ಕಲ್ಬುರ್ಗಿ ಯವರ ಮೇಲೆ ಹಿಂದೆ ದಾಳಿಯ ಪ್ರಯತ್ನಗಳು ನಡೆದ ಸುದ್ದಿ ಇದೆ, ಇದನ್ನೆಲ್ಲಾ ಗಮನಿಸಿಯೂ ನಿಮ್ಮ ಜಾಣ ಕುರುಡ ಕಿವುಡ ರಾಗಿರುವುದು ನ ನಿಮ್ಮ ಪ್ರಾಮಾಣಿಕತೆಯ ಬಗ್ಗೆ ಭಯಂಕರ ಅನುಮಾನವನ್ನೇ ಹುತ್ತಿಸುತ್ತದೆ ……..
    ೩) ಮೂಲಭೂತವಾದಿಗಳೂ ಸುಪಾರಿ ಕೊಲೆಯನ್ನ ಮಾಡಿಸಬರದೆನ್ದೆನಿಲ್ಲವಲ್ಲ ……… ಮಹಾರಾಷ್ಟ್ರದಲ್ಲಿ ಈತರಹದ ಎರಡು ಕೊಲೆಗಳು ನಡೆದಿದೆ ಎನ್ನುವುದು ಸುಳ್ಳಲ್ಲ

    ೪) ಟಿ ವಿ ಮಾದ್ಯಮಗಳು ಈರಿತಿ ಮಾಡುತ್ತಿರುವುದು ಇದು ಮೊದಲೇನಲ್ಲ ಅಲ್ಲವೇ? ಆದರೆ ಈಗ ಬೆಂಕಿಬಿದ್ದುರುವುದು ಬೆಂಕಿ ಬಿದ್ದಿರಿವುದು ನಿಮ್ಮವರ ಬುಡಕ್ಕೆ ಅದಿಕ್ಕೆ ಈ ಹೋರಾಟ, ಚೀರಾಟ ಗೋಳಾಟ ಎಲ್ಲ

    ಉತ್ತರ
  12. Deepak
    ಸೆಪ್ಟೆಂ 2 2015

    ಬರೆಯುವವರು ಕತ್ತೆಗಳೊ ಇಲ್ಲ ಓದುವವರು ಕತ್ತೆಗಳೊ? ಒಂದು ಕತ್ತೆ ಯಂತು ಕಾಮೆಂಟ್ ಮಾಡಿರುವುದು ನಿಜ ……….. ಅದಿರಲಿ ಮೊದಲು ಈ ಲೇಖನ ತರ್ಕಬದ್ದವಾಗಿ ವಿಶ್ಲೇಷಿಸಲು ಯಾಕೆ ಸೋತಿದೆ ನೋಡೋಣ .

    ೧) ಬುದ್ದಿಜೀವಿಗಳು ಕಲಬುರ್ಗಿಯವರ ಸಾವಿಗೆ ಕಾರಣ ವಾಗಿರಬಹುದು ಎಂಬುದು ಈ ಲೇಕನದ ವಾದ ———- ಹಾಗಾದರೆ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಸ್ಪೋಟಗೊಂಡ ಬಾಂಬುಗಳಿಗೆಲ್ಲ ಆರ್ ಎಸ ಎಸ, ಬಾ ಜಾ ಪಾ ( ಮುಂಬೈ ಸ್ಪೋತವನ್ನೂ ಒಳಗೊಂಡು ) ಕರಣ ಎನ್ನಬಹುದೇ?

    ೨) ಸಂಘಪರಿವಾರವಾಗಲೀ ಆರೆಸ್ಸೆಸ್ ಆಗಲೀ ಅವರನ್ನು ಕೊಲೆ ಮಾಡುವಷ್ಟು ಮುಂದುವರಿಯುತ್ತಾರೆ ಎನ್ನುವುದು ಊಹಾತೀತ ವಿಷಯ ಎನ್ನುತ್ತದೆ ಲೇಕನ : ಇಲ್ಲಿ ನೀವೇನು ಮಾಡುತ್ತಿದ್ದಿರಿ ಸರ್ ಇಲ್ಲಿ ನೀವು ಕೂಡ jujdement ಮಾಡ್ತಾ ಇದ್ದೀರಿ ……… ಇಲ್ಲಿ ನಿಮಗೂ ಬುದ್ದಿಜೀವಿಗಳಿಗೂ ವ್ಯತ್ಯಾಸವಿಲ್ಲ ………… ಕಲ್ಬುರ್ಗಿ ಯವರ ಮೇಲೆ ಹಿಂದೆ ದಾಳಿಯ ಪ್ರಯತ್ನಗಳು ನಡೆದ ಸುದ್ದಿ ಇದೆ, ಇದನ್ನೆಲ್ಲಾ ಗಮನಿಸಿಯೂ ನಿಮ್ಮ ಜಾಣ ಕುರುಡ ಕಿವುಡ ರಾಗಿರುವುದು ನ ನಿಮ್ಮ ಪ್ರಾಮಾಣಿಕತೆಯ ಬಗ್ಗೆ ಭಯಂಕರ ಅನುಮಾನವನ್ನೇ ಹುಟ್ಟೀಸುತ್ತದೆ ……..
    ೩) ಮೂಲಭೂತವಾದಿಗಳೂ ಸುಪಾರಿ ಕೊಲೆಯನ್ನ ಮಾಡಿಸಬರದೆನ್ದೆನಿಲ್ಲವಲ್ಲ ……… ಮಹಾರಾಷ್ಟ್ರದಲ್ಲಿ ಈತರಹದ ಎರಡು ಕೊಲೆಗಳು ನಡೆದಿದೆ ಎನ್ನುವುದು ಸುಳ್ಳಲ್ಲ

    ೪) ಟಿ ವಿ ಮಾದ್ಯಮಗಳು ಈರಿತಿ ಮಾಡುತ್ತಿರುವುದು ಇದು ಮೊದಲೇನಲ್ಲ ಅಲ್ಲವೇ? ಆದರೆ ಈಗ ಬೆಂಕಿಬಿದ್ದುರುವುದು ನಿಮ್ಮವರ ಬುಡಕ್ಕೆ ಅದಿಕ್ಕೆ ಈ ಹೋರಾಟ, ಚೀರಾಟ ಗೋಳಾಟ ಎಲ್ಲ .

    ಉತ್ತರ
  13. T.M.Krishna
    ಸೆಪ್ಟೆಂ 2 2015

    ಬುದ್ದಿಜೀವಿಗಳೆಂದರೆ ಅದ್ಯಾಕೆ ಚಡ್ಡಿಯೊಳಗೆ ಕೆಂಜಿರುವೆ ಹೊಕ್ಕವರಂತೆ ಥಕ ಥಕ ಕುಣಿಯುತ್ತೀರೋ…ಅರ್ಥವಾಗುತ್ತಿಲ್ಲ. ಬುದ್ದಿಜೀವಿಗಳೆಲ್ಲಾ ಸಾರಾಸಗಟು ಸಮಯಸಾಧಕರೇ ಆಗಿರಲಿಕ್ಕಿಲ್ಲ ಎಂಬ ವಿವೇಕವಾದರೂ ಬೇಡವೇ? ಅದೂ ಒಬ್ಬ ಲೇಖಕನಿಗೆ…

    ಉತ್ತರ
    • rohithmath
      ಸೆಪ್ಟೆಂ 2 2015

      ಯಾವ ಬುದ್ಧಿಜೀವಿ ಸಮಯಸಾಧಕ ಅಲ್ಲ ಎನ್ನುವುದನ್ನು ದಯವಿಟ್ಟು ನಿರೂಪಿಸಿ.

      ಉತ್ತರ
  14. Shashidhara
    ಸೆಪ್ಟೆಂ 2 2015

    e kole bala pantha/edapanthada prasneyalla rohith..namma naduve idda …bereyade aayamadalli chintisaballudaagidda, hiriya mutsaddiya prana haranakke sambandisiddu…NImma lekhan ondarthadalli counter taradalli ideye horatu hosadenu illa. AAkarshaniyavaagi bareva nimma samarthya heege waste aaguttiruva bagge nanange vishadavide. Nayaaroo ayonijaralla , charcheyanne ollada abhipraya bedavannu sahisada samaaja namma naduve evolve aaguttiruvadakke navellaroo karanibootaraaguttiruvudu namma duranta..

    ಉತ್ತರ
  15. Shripad
    ಸೆಪ್ಟೆಂ 3 2015
  16. ಸೆಪ್ಟೆಂ 12 2015

    ರೋಹಿತ್‌ ಅವರೆ ನಿಮ್ಮ ಲೇಖನ ತರ್ಕಬದ್ಧವಾಗಿದೆ. ನಿಜ ನೀವು ಹೇಳಿರುವಂತೆಯೇ ಬುದ್ಧಿ ಜೀವಿಗಳ ಜೊತೆ ಟಿ.ವಿ ಚಾನಲ್‌ ಹಾಗೂ ಮಾಧ್ಯಮದವರು ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುವುದು ಸರಿಯಲ್ಲ. ಇಂಥವರೇ ಅವರಾಧಿ ಎಂದು ಬುದ್ಧಿಜೀವಿಗಳಿಗೆ ಮೊದಲೇ ತಿಳಿದಂತೆ ಮಾತನಾಡಿರುವುದಂತೂ ಸತ್ಯ. ಹೀಗಾಗಿ ನಿಮ್ಮ ಲೇಖನ ಉತ್ತಮವಾಗಿದೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments