ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 4, 2015

4

ಮಹದಾಯಿ : ಜನರ ದಾರಿ ತಪ್ಪಿಸುವುದು ಕಾಂಗ್ರೆಸ್‌ಗೆ ಶೋಭೆಯೇ?

‍ನಿಲುಮೆ ಮೂಲಕ

– ವೃಷಾಂಕ್ ಭಟ್,ದೆಹಲಿ

ಮಹದಾಯಿಕಳಸಾ-ಬಂಡೂರ ಕಾಲುವೆಗೆ ಮಹದಾಯಿ ನೀರು ಹರಿಸಲು ಪ್ರಧಾನಿಯೊಬ್ಬರೇ ಶಕ್ತರು ಎಂಬ ರಾಜಕೀಯ ಸುಳ್ಳನ್ನು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ತಿಳಿದೋ ತಿಳಿಯದೆಯೋ ಮಾಧ್ಯಮಗಳು ಕೂಡ ಹೆಚ್ಚು ಕಡಿಮೆ ಇದೇ ಸುಳ್ಳನ್ನು ಪ್ರಸಾರ ಮಾಡುತ್ತಿದೆ. ಮಹದಾಯಿ ಸಮಸ್ಯೆ ದೇಶದ ಸಮಸ್ಯೆಯಾಗಿ ಉಳಿದಿಲ್ಲ. ಕಾಂಗ್ರೆಸ್ ಪಾಲಿಗಿದು ರಾಜಕೀಯ ಅವಕಾಶ. ಮಹದಾಯಿ ಸಮಸ್ಯೆ ಜೀವಂತವಾಗಿದ್ದಷ್ಟು ದಿನವೂ ರಾಜ್ಯದ ಜನರ ಮನಸ್ಸಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚುತ್ತದೆ ಎಂಬುವುದು ಸಿದ್ಧರಾಮಯ್ಯ ಮತ್ತವರ ಹೈಕಮಾಂಡ್‌ಗೆ ತಿಳಿಯದ ವಿಷಯವಲ್ಲ. ಹಾಗಾಗಿ ಮಹದಾಯಿ ಸಮಸ್ಯೆ ಬಹೆಗರಿಯುವುದು ರಾಜ್ಯ ಸರ್ಕಾರಕ್ಕೇ ಬೇಕಿಲ್ಲ. ಸಮಸ್ಯೆ ಬಗೆಹರಿಸಲು ನಿಜಕ್ಕೂ ಸಾಧ್ಯವಿದೆಯೆಂದಾದರೆ ಅದು ಕಾಂಗ್ರೆಸ್‌ಗೆ ಮಾತ್ರ. ಮಹದಾಯಿ ಪ್ರಕರಣ ಸಂಬಂಧ ನ್ಯಾಯಾಧಿಕರಣ ರಚನೆಯಾದ ಬಗೆ ಮತ್ತು ಅದರಲ್ಲಿ ಕಾಂಗ್ರೆಸ್ ಪಾತ್ರ ಎಷ್ಟಿದೆ ಎಂಬುದನ್ನು ನೋಡೋಣ.

1) ಜುಲೈ 2002 : ಅಂತಾರಾಜ್ಯ ನದಿ ನೀರು ವ್ಯಾಜ್ಯ-1956 ಅಡಿಯಲ್ಲಿ ಮಹದಾಯಿ ನ್ಯಾಯಾಧಿಕರಣ ರಚಿಸುವಂತೆ ಗೋವಾ ಸರ್ಕಾರ ಕೇಂದ್ರಕ್ಕೆ ಮನವಿ ನೀಡಿತ್ತು. ಆದರೆ ಕೇಂದ್ರವು ಆ ಕೂಡಲೇ ನ್ಯಾಯಾಧಿಕರಣ ರಚಿಸಲಿಲ್ಲ.ಆಗಿದ್ದದ್ದು ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ.
2) ಏ.4-2006: ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ಸಭೆ ಕರೆದು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸುತ್ತಾರೆ. ಆದರೆ ಅಂದು ಗೋವಾ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಪ್ರತಾಪ್ ಸಿಂಗ್ ರಾಣೆ ನ್ಯಾಯಾಧಿಕರಣ ರಚನೆಯಾಗಲೇ ಬೇಕು ಎಂದು ಹಠ ಹಿಡಿಯುತ್ತಾರೆ. ಆ ಮೂಲಕ ಮಾತು ಕತೆಯ ಉದ್ದೇಶ ವಿಫಲ.
3) ಸೆ.2006 : ಮಹದಾಯಿ ನ್ಯಾಯಾಧಿಕರಣ ರಚಿಸುವಂತೆ ಪ್ರತಾಪ್ ಸಿಂಗ್ ರಾಣೆ ಅವರಿಂದ (ಗೋವಾ ಸರ್ಕಾರದಿಂದ) ಸುಪ್ರೀಂ ಕೋರ್ಟ್‌ಗೆ ಮನವಿ
4) 2007 : ಗೋವಾ ವಿಧಾನಸಭೆಚುನವಣಾ ಪ್ರಚಾರ. ನದಿ ವಿಚಾರವು ಜನರನ್ನು ಭಾವೋದ್ರೇಕಗೊಳಿಸುತ್ತದೆ ಎಂಬುದನ್ನು ಅರಿತಿದ್ದ ಸೋನಿಯಾ ಗಾಂಧಿ ಯಾವುದೇ ಕಾರಣಕ್ಕೂ ಕಳಸಾ-ಬಂಡೂರ ಕಾಲುವೆಗೆ ಮಹದಾಯಿ ನದಿ ನೀರು ಹರಿಯಲು ಬಿಡುವುದಿಲ್ಲ ಎಂದು ಹೇಳಿಕೆ ಕೊಡುತ್ತಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯ.
5) ಡಿ.10-2009 : ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆಯಂತೆ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಮಹದಾಯಿ ನ್ಯಾಯಾಧಿಕರಣ ರಚಿಸಲು ಯುಪಿಎ (ಕಾಂಗ್ರೆಸ್) ತೀರ್ಮಾನ.
6) ಅ.6-2010 : ನ್ಯಾಯಾಧಿಕರಣದ ಕೇಂದ್ರ ಹೊಸದಿಲ್ಲಿಯಲ್ಲಿಡಲು ಕ್ಯಾಬಿನೆಟ್ ಅನುಮೋದನೆ.
7) ನ.16-2010ರಂದು ನಿವೃತ್ತ ನಾಯಮೂರ್ತಿ ಎಂ.ಪಾಂಚಾಲ ನೇತೃತ್ವದಲ್ಲಿ ಮಹದಾಯಿ ನ್ಯಾಯಾಧಿಕರಣ ರಚನೆ

ಮಹಾದಾಯಿ ನ್ಯಾಯಾಧಿಕರಣ ರಚನೆಯಲ್ಲಿ ಕಾಂಗ್ರೆಸ್ ಪಾಲು ಸ್ಪಷ್ಟವಾಗಿ ಗೋಚರಿಸುತ್ತದೆ. ಕಾಂಗ್ರೆಸ್ ಮನಸ್ಸು ಮಾಡಿದ್ದಿದ್ದರೆ 2006ರಲ್ಲೇ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಸರಿ, ಅಂದು ಕಾಂಗ್ರೆಸ್ ಮಾಡಲಿಲ್ಲ. ಇಂದು ಬಿಜೆಪಿ ಮಾಡಲಿ ಎಂಬ ಪ್ರಶ್ನೆ ಉದ್ಭವಿಸುತ್ತದೆ. ವಾಸ್ತವದ ಸಂಗತಿಯೆಂದರೆ, ಇಂದೂ ಕೂಡ ಕಾಂಗ್ರೆಸ್ ಇಂದ ಮಾತ್ರ ಈ ಸಮಸ್ಯೆ ಬಗೆಹರಿಸಲು ಸಾಧ್ಯ. 2006ರಲ್ಲಿ ಯುಪಿಎ ಸರ್ಕಾರದ ಮಾತನ್ನೇ ಕೇಳದ ಗೋವಾ ಕಾಂಗ್ರೆಸ್, ಇಂದು ಮೋದಿಯ ಮಾತು ಕೇಳಲು ಸಾಧ್ಯವೇ? ಒಂದು ವೇಳೆ ಮೋದಿಯವರ ಮಾತನ್ನು ಗೋವಾ ಮುಖ್ಯಮಂತ್ರಿ ಬಿಜೆಪಿಯ ಲಕ್ಷ್ಮೀಕಾಂತ್ ಪರ್ಸೇಕರ್ ಒಪ್ಪಿ,ನದಿ ನೀರು ಕೊಡಲು ಒಪ್ಪಿದರೆ,ಮರು ದಿನದಿಂದ ಗೋವಾದಲ್ಲಿ ದೊಡ್ಡ ದೊಂಬಿ ನಡೆಯುತ್ತದೆ. ಅದು ಕಾಂಗ್ರೆಸ್ ನೇತೃತ್ವದಲ್ಲಿ. ಕಳಸಾ-ಬಂಡೂರ ಕಾಲುವೆಗೆ  ನೀರು ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿಯೇ ಹೇಳಿದ್ದರಲ್ಲ.

ಪ್ರಧಾನಿಯಾದವರಿಗೆ ಎಲ್ಲಾ ರಾಜ್ಯಗಳ ಮೇಲೆ ಒಂದು ಸಮನಾದ ಪ್ರೀತಿಯಿರುತ್ತದೆಯೇ ಹೊರತು, ಕರ್ನಾಟಕದ ಮೇಲೆ ಹೆಚ್ಚಿರಬೇಕೆಂದರೆ ಹುಚ್ಚುತನವಾದೀತು. ಇಂದು ಕರ್ನಾಟಕದ ಸಮಸ್ಯೆಯನ್ನು ಬಗೆಹರಿಸಲು ಹೋಗಿ ನಾಳೆ ಗೋವಾದಲ್ಲಿ ರಕ್ತಪಾತವಾದರೆ ಏನು ಮಾಡುವುದು? ಕಾಂಗ್ರೆಸ್ ಇಂದು ವಿಪಕ್ಷದಲ್ಲಿ ಕೂತಿರುವುದರಿಂದ ದೇಶವು ಸಮಸ್ಯೆಗಳಲ್ಲಿ ಬಿದ್ದಿರಲಿ ಎಂದು ಅದು ಬಯಸಿದರೆ ಆಶ್ಚರ್ಯವಿಲ್ಲ. ಆ ಕಾರಣಕ್ಕಾಗಿಯೇ ಮಹದಾಯಿ ಸಮಸ್ಯೆ ಬಗೆಹರಿಸಲು ಅದಕ್ಕೆ ಮನಸ್ಸಿಲ್ಲ.

ದೆಹಲಿಗೆ ಬಂದ ನಿಯೋಗ ಮಾಡಿದ್ದೇನು?
ಸುಮಾರು 25 ಜನರಿಂದ ಕೂಡಿರಬೇಕಿದ್ದ ಕರ್ನಾಟಕ ನಿಯೋಗ ಪ್ರಧಾನಿ ನಿವಾಸ ಹೊಕ್ಕ ವೇಳೆಗೆ 53 ದಾಟಿತ್ತು. ಬರಗಾಲ ಮತ್ತು ಮಹಾದಾಯಿ ಸಮಸ್ಯೆಯನ್ನಷ್ಟೇ ಕೊಂಡೊಯ್ಯದ ಸಿಎಂ ಸಿದ್ಧರಾಮಯ್ಯ ದ್ರಾಕ್ಷಿ,ದಾಳಿಂಬೆ ಹೀಗೆ ಐದಾರು ಮನವಿಗಳನ್ನು ಕೊಂಡೊಯ್ದು ಮುಖ್ಯ ವಿಷಯವನ್ನೇ ಡೈಲ್ಯೂಟ್ ಮಾಡಿದರು. ನಿಯೋಗದ ಮನವಿಗೆ ಪ್ರತಿಕ್ರಿಯಿಸಿದ ಮೋದಿ, ‘ಪ್ರಕರಣದ ಮಧ್ಯ ಪ್ರವೇಶದಲ್ಲಿ ನನಗೆ ಆಸಕ್ತಿಯಿಲ್ಲ.ನನ್ನ ಆಸಕ್ತಿಯಿರುವುದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ. ನ್ಯಾಯಾಧಿಕರಣ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿರುವ ಗೋವಾ ಕಾಂಗ್ರೆಸ್ ನಾಯಕರನ್ನು ಒಪ್ಪಿಸಿ’ ಎಂದರು.

ಪರಿಹಾರ ಕಂಡುಕೊಳ್ಳುವುದು ಹೇಗೆಂದು ಪ್ರಧಾನಿ ಸ್ಪಷ್ಟವಾಗಿ ತಿಳಿಸಿದ್ದರೂ ಕೂಡ, ಸುದ್ದಿಗೋಷ್ಠಿಯಲ್ಲಿ ಸಿದ್ಧರಾಮಯ್ಯನವರು ತಿಳಿಸಿದ್ದೇ ಬೇರೆಯಾಗಿತ್ತು. ಪ್ರಧಾನಿ ಮಾತಿ ತೃಪ್ತಿ ನೀಡಿಲ್ಲ ಎಂದರು. ಜೆಡಿಎಸ್‌ನ ಬಸವರಾಜ ಹೊರಟ್ಟಿಯವರಂತೂ ಪ್ರಧಾನಿ ನಮ್ಮ ಕಷ್ಟವನ್ನೇ ಆಲಿಸಲಿಲ್ಲ ಎಂಬಂತೆ ಮಾತನಾಡಿದರು. ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್,ಪ್ರಧಾನಿಯವರೇ ಈ ಸಮಸ್ಯೆ ಬಗೆಹರಿಸಬೇಕು ಎಂದು ಇಂದಿಗೂ ಹೇಳುತ್ತಿದ್ದಾರೆ.

ಹೀಗೆ ತಪ್ಪು ಮಾಹಿತಿ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಪಕ್ಷವು ಮತ ಚಲಾಯಿಸುವ ಜನರನ್ನು ಮೂರ್ಖರೆಂದು ಭಾವಿಸಿದೆಯೋ ಅಥವಾ ಸಮಸ್ಯೆ ಪರಿಹಾರಗೊಳ್ಳುವುದು ಬೇಕಿಲ್ಲವೋ ಎಂದು ಅವರೇ ಸ್ಪಷ್ಟಪಡಿಸಬೇಕು.

ಚಿತ್ರಕೃಪೆ : ದಿಹಿಂದೂ

4 ಟಿಪ್ಪಣಿಗಳು Post a comment
  1. Srinivasaiah
    ಸೆಪ್ಟೆಂ 4 2015

    In the beginning I had good opinion about NILUME . Now I feel it is totally a party based media and pro active in that direction. Hope this trend may change and an impartial NILUME may emerge, taking into account opinion from different directions.

    ಉತ್ತರ
    • ಸೆಪ್ಟೆಂ 4 2015

      ಶ್ರೀನಿವಾಸಯ್ಯನವರೇ,

      ನಿಮಗೇ ಈ ಲೇಖನ ಬಿಜೆಪಿಯವರ ಪಕ್ಷಪಾತಿ ಎನಿಸಿದರೆ ತಪ್ಪೇನೂ ಇಲ್ಲ.ಇದೇ ಸಮಸ್ಯೆಯ ಕುರಿತು ಕಾಂಗ್ರೆಸ್ ಅಭಿಪ್ರಾಯವೋ ಅಥವಾ ರೈತರು,ಹೋರಾಟಗಾರರ ಅಭಿಪ್ರಾಯವನ್ನು ನಮಗೆ ಕಳುಹಿಸಿದರೆ ಅದನ್ನೂ ಪ್ರಕಟಿಸುತ್ತೇವೆ.

      ನಿಲುಮೆ ಒಂದು ವೇದಿಕೆ ಮತ್ತು ನಮ್ಮ ನಿಲುವಿಗೆ ಬದ್ಧವಾಗಿದ್ದೇವೆ.ಲೇಖನಗಳು ಆಯಾ ಲೇಖಕರ ಅಭಿಪ್ರಾಯಗಳಷ್ಟೇ ಹೊರತು ನಿಲುಮೆಯದ್ದಲ್ಲ

      ಉತ್ತರ
    • Vrushanka Bhat
      ಸೆಪ್ಟೆಂ 4 2015

      Dear Shrinivasaiah Sir.
      Thousands of people are fighting in north karnataka region for mahadayi issue… the saddest thing is many of them doesn’t know the politics behind it…
      State government gaining mileage by misleading people …

      Giving right information to people is not political … reacting to a social issue is not political …

      I strongly hope that everyone including you are in favour of spreading awareness …

      ತಪ್ಪು ಮಾಹಿತಿಗಳಿಂದ ಬಡಿದಾಡಿಕೊಳ್ಳುತ್ತಿರುವವರಿಗೆ ಸತ್ಯ ತಿಳಿಸುವುದು ಸಾಮಾಜಿಕ ಜವಾಬ್ದಾರಿ …

      ಧನ್ಯವಾದಗಳು

      ಉತ್ತರ
  2. ಸೆಪ್ಟೆಂ 4 2015

    ನಿಜ ಸಾರ್‍ ನೀವು ಬರೆದಿರುವುದು. ಕಳಸಾ ಬಂಡೂರಿ ಸಮಸ್ಯೆಯೊಂದು ಇವರ ಆದ್ಯತೆಯಾಗಿದ್ದರೆ ಏನಾದರೂ ಆಗುತಿತ್ತು. ಆದರೆ ಸಿದ್ದು ಮಾಡಿದ್ದೇನು. ಕಬ್ಬು ಬೆಳೆಗಾರರ ಸಮಸ್ಯೆ ಪ್ರಧಾನಿ ಬಳಿಗಿಟ್ಟರು. ಆದರೆ ಮೋದಿ ಅವರು 6000 ಕೋಟಿ ರೂಗಳನ್ನು ಬಡ್ಡಿ ರಹಿತ ಸಾಲವಾಗಿ ಆಗಲೇ ನೀಡಿದೆ. ಆದರೂ ಕೂಡ ಸಿದ್ದು ಕೇಳಿದ್ದು ಅದನ್ನೇ! ಹೀಗಾದರೆ ಮುಂದೆ ಹೇಗೆ. ಉ.ಕ. ಜನರ ಪಾಡು!

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments