ಪಾಕಿಸ್ತಾನ್, ಹುರಿಯತ್ ಮತ್ತು ನಮ್ಮ ಬುದ್ಧಿಜೀವಿಗಳು!!
– ಪ್ರದೀಪ್ ತ್ಯಾಗರಾಜ
ಬಹುಶಃ ಭಾರತದ ಜನ ಸಾಮಾನ್ಯರೆಲ್ಲರೂ ಒಕ್ಕೊರಲಿನಿಂದ ಹೇಳುವ ಮಾತೊಂದೇ, ಅದೇ ಪಾಕಿಸ್ತಾನ್ ಎನ್ನುವುದು ಒಂದು ದೊಡ್ಡ ದುರಂತ. ಈ ಪಾಕಿಸ್ತಾನ ಎಂಬುದು ಒಂದು ಭಿಕ್ಷುಕರ ದೇಶ ಅಂದರೂ ತಪ್ಪಲ್ಲ. ಯಾವುದೇ ದೇಶ ಕೂಡ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿ ಉದ್ಧಾರ ಆದ ಉದಾಹರಣೆಗಳಿಲ್ಲ. ಇಷ್ಟಕ್ಕೂ ಭಯೋತ್ಪಾದನೆಯೊಂದನ್ನು ಬಿಟ್ಟರೆ, ಆ ದೇಶಕ್ಕೆ ತಮ್ಮನ್ನು ಮಾರ್ಕೆಟ್ ಮಾಡಿಕೊಳ್ಳುವಂಥ ಇನ್ನೊಂದು ವಸ್ತುವಿಲ್ಲ. ಈ ದೇಶದ ಪರಿಸ್ಥಿತಿ ಹೇಗಿದೆಯಂದರೆ, ಪ್ರಜಾಪ್ರಭುತ್ವವನ್ನು ಹೇರಿಕೆಯೆಂಬ ರೀತಿ ಒಪ್ಪಿಕೊಳ್ಳುವ ವಿಷಮ ಸ್ಥಿತಿ ತಲುಪಿದ್ದಾರೆ. ಮಾತು ಮಾತಿಗೂ, ಪಶ್ಚಿಮ ರಾಷ್ಟ್ರಗಳ ಬಳಿಹೋಗಿ, ತಮ್ಮ ದೇಶಕ್ಕೆ ಸಹಾಯ ಹಸ್ತ ಚಾಚಿ ಎಂದು ಅಂಗಲಾಚುವುದರಲ್ಲೇ ಇವರು ಬರೋಬ್ಬರಿ ೬೫ ವರ್ಷಗಳನ್ನು ನಮ್ಮ ಭಾರತ ದೇಶದೊಂದಿಗೆ ಸವೆಸಿದ್ದಾರೆ. ನಮ್ಮ ದೇಶದಲ್ಲಿ ರಾಹುಲ್ ಗಾಂಧಿ ಎಂಬೋ ಮಹಾನ್ ಬುದ್ಧಿವಂತನಿಗೆ ಎಷ್ಟು ಮರ್ಯಾದೆ ಇದೆಯೋ, ಅಷ್ಟೇ ಮರ್ಯಾದೆ ಆ ನವಾಜ್ ಷರೀಫ್ ಎಂಬ ವ್ಯಕ್ತಿಗೆ ಪಾಕಿಸ್ತಾನದಲ್ಲಿ ಇದೆ. ಆ ದೇಶದ ನಿಜವಾದ ಆಡಳಿತವಿರುವುದೇ ಅವರ ಸೈನ್ಯಕ್ಕೆ. ೧೯೪೭ ರಿಂದಲೂ ಇದೆ ರೀತಿ ನಡೆದು ಬರುತ್ತಿದೆ. ಈ ಸಂಧರ್ಭದಲ್ಲಿ, ಈ ಹುರಿಯತ್ ಎನ್ನುವ ಸಂಘಟನೆ ಕೂಡ, ತನ್ನ ಬೇಳೆ ಬೇಯಿಸಿಕೊಳ್ಳಲು ಶುರು ಮಾಡಿದೆ. ಇದರ ಪರಿಣಾಮ ಭಾರತ ದೇಶದ ಹಲವಾರು ಬುದ್ಧಿಜೀವಿಗಳು ತಮ್ಮ ಅತಿ-ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಮುಂದಾಗಿರುವುದೇ ನಮ್ಮ ದೇಶದ ದುರಂತ.
ಇಷ್ಟೆಲ್ಲಾ ಹುಳುಕು ತುಂಬಿರುವ ಪಾಕಿಸ್ತಾನ ಎಂಬ ದೇಶದ ಬಗ್ಗೆ, ನಮ್ಮ ಬುಜೀಗಳ ಕಲ್ಪನೆ ನಿಜಕ್ಕೂ ಅದ್ಭುತ. ನಿಜಕ್ಕೂ ಆ ದೇಶದೊಂದಿಗೆ ಮಾತುಕತೆ ನಡೆಸಬೇಕಂಬ ಇವರ ಆಲೋಚನೆ ನಿಜಕ್ಕೂ ಆಘಾತಕಾರಿ. ಇಷ್ಟಕ್ಕೂ ಏನೂ ಸರಿಯಿಲ್ಲದ ಆ ದೇಶದ ಜೊತೆ ಮಾತನಾಡಲು ಏನಿದೆ? ಒಂದು ಪ್ರಜಾಪ್ರಭುತ್ವ ಸರ್ಕಾರದ ಮಾತನ್ನು ಕೇಳುವ ತಾಳ್ಮೆಯಾಗಲಿ, ಅಥವಾ ಸಂಯಮವಾಗಲಿ ಇಲ್ಲ. ಒಂದು ಸರ್ಕಾರ ಕೊಟ್ಟ ನಿರ್ಧಿಷ್ಟ ಅಂಶಗಳ ಬಗ್ಗೆ ಮಾತುಕತೆ ನಡೆಸುವಲ್ಲಿ ತಯಾರಿಲ್ಲ.
ಹಲವು ದಿನಗಳ ಕೆಳಗೆ, ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರ ಹಾಗು ಪಾಕಿಸ್ತಾನದ ಸರ್ಕಾರದ ನಡುವೆ ಎನ್.ಎಸ್.ಎ ಮಟ್ಟದ ಮಾತುಕತೆಗೆ ನವದೆಹಲಿಯಲ್ಲಿ ವೇದಿಕೆ ಸಜ್ಜುಗೊಂಡಿತ್ತು. ಎರಡೂ ಸರ್ಕಾರಗಳು, ರಷ್ಯಾದ ಯುಫಾ ನಲ್ಲಿ ಮಾಡಿದ ಒಪ್ಪಂದದ ಪ್ರಕಾರ, ಮಾತುಕತೆ ನಡೆಸಲು ತೀರ್ಮಾನಿಸಿತ್ತು. ಇದು ನಮ್ಮ ಮೋದಿ ಸರ್ಕಾರದ ಒಂದು ದಿಟ್ಟ ಹೆಜ್ಜೆ. ನಿಜಕ್ಕೂ ನಮ್ಮ ದೇಶದ ಜನತೆಗೆ ಮೊದಲೇ ತಿಳಿದಂತೆ, ಪಾಕಿಸ್ತಾನದ ಹರುಕು ಬುದ್ಧಿ ಮತ್ತೊಮ್ಮೆ ಇಲ್ಲಿ ಪ್ರದರ್ಶನವಾಯಿತು. ಆ ದೇಶದ ನಿಜ ಬಣ್ಣ ಏನೆಂಬುದು ಬಟಾಬಯಲಾಯಿತು. ಕೊನೆ ಕ್ಷಣದವರೆಗೂ ಈ ಮಾತುಕತೆಗೆ ಒಪ್ಪಿದ್ದ ಆ ಪಾಪಿಸ್ತಾನ, ತನ್ನ ಅಣ್ಣ ತಮ್ಮರ ನೆನಪಾಯಿತೇನೋ (ಹುರಿಯತ್ ನವರು), ಪಾಕಿಸ್ತಾನ್ ಸರ್ಕಾರ ತನ್ನ ಎನ್.ಎಸ್.ಎ ಮುಖ್ಯಸ್ತ ಸರ್ತಾಜ್ ಅಜೀಜ್ ಅನ್ನು ಹುರಿಯತ್ ಮುಖಂಡರ ಭೇಟಿಗೆ ಆಜ್ಞಾಪಿಸಿತು. ಇದು ನಮ್ಮ ದೇಶದ ಹೆಮ್ಮೆಯ ಎನ್.ಎಸ್.ಎ ಮುಖ್ಯಸ್ಥ ಅಜಿತ್ ದೊವಲ್ ರನ್ನು ಭೇಟಿ ಮಾಡಲು ಮೊದಲೇ ಆಗಬೇಕೆಂಬ ತಾಕೀತು ಮಾಡಿದ್ದರೇನೋ, ಅಂತೂ ಭಾರತ ಸರ್ಕಾರದ ಗಟ್ಟಿ ನಿಲುವು ಈ ಭೇಟಿಯನ್ನು ಸಾರಾ ಸಗಟಾಗಿ ನಿರಾಕರಿಸಿದ್ದೂ ಅಲ್ಲದೆ, ಪಾಕಿಸ್ತಾನಕ್ಕೆ ಒಂದು ಗಟ್ಟಿ ಸಂದೇಶವನ್ನು ರವಾನಿಸಿತು. ಇದೇ ಹಲವು ವರ್ಷಗಳ ಹಿಂದೆ, ಯು.ಪಿ.ಎ ಸರ್ಕಾರದ ಆಡಳಿತದಲ್ಲಿ ಈ ಮಾತುಕತೆ ನಡೆಯಬೇಕಾದರೆ, ಈ ಕಾಂಗ್ರೆಸ್ ಸರ್ಕಾರದವರು, ರಾಜಾರೋಷವಾಗಿ, ಹುರಿಯತ್ ಮುಖಂಡರನ್ನು ಭೇಟಿ ಮಾಡಲು, ಪಾಕಿಸ್ತಾನದವರಿಗೆ ರಾಜಥಿತ್ಯ ನೀಡಿತ್ತು. ಆದರೆ ಈಗಿನ ಪರಿಸ್ಥಿತಿಯೇ ಬೇರೆ, ಹಾಗೆ ಸುಮ್ಮನೆ ದೇಶ ಇಬ್ಭಾಗ ಮಾಡುವ ಆಲೋಚನೆ ಇರುವವರನ್ನು ಭೇಟಿ ಮಾಡುವ, ಮಾತುಕತೆ ನಡೆಸುವ ಹಾಗೆ ಇಲ್ಲ. ಇದು ನಮ್ಮ ದೇಶದ, ಘನ ಸರಕಾರದ ಸ್ಪಷ್ಠ ಸಂದೇಶ. ನಮಗೆಲ್ಲ ತಿಳಿದಿರುವ ಹಾಗೆ, ಕೊನೆ ಘಳಿಗೆಯಲ್ಲಿ ಪಾಕಿಸ್ತಾನ ತನ್ನ ಭೇಟಿಯನ್ನು ರದ್ದುಗೊಳಿಸಿತು. ಯಾಕೆಂದರೆ, ಆ ಭ್ರಷ್ಟ ಪಾಕಿಸ್ತಾನಕ್ಕೆ ಕಾಶ್ಮೀರ ವಿಷಯವೊಂದನ್ನು ಬಿಟ್ಟರೆ, ಮಾತಾಡಲು ಬೇರೆ ವಿಷಯಗಳು ಇಲ್ಲ. ಇದಕ್ಕೆ ಅವಕಾಶ ನಿರಾಕರಿಸಿದ ನಮ್ಮ ಸರ್ಕಾರದ ದಿಟ್ಟ ನಡೆ ಶ್ಲಾಘನೀಯ. ಭಯೋತ್ಪಾದನೆಯನ್ನೇ ತನ್ನ ಉಸಿರಾಗಿರಿಸಿಕೊಂಡಿರುವ ದೇಶದ ಜೊತೆ ಶಾಂತಿ ಮಾತುಕತೆ ಅಸಾಧ್ಯವೆಂಬುದು ನಮ್ಮ ಭಾರತ ದೇಶ ತೋರಿಸಿಕೊಟ್ಟಿದೆ.
ಇಷ್ಟೆಲ್ಲದರ ನಡುವೆಯೂ, ಈ ಲೇಖನದ ಉದ್ದೇಶವೇ ಬೇರೆ. ನಮ್ಮ ದೇಶದ ಕೆಲವು ಸೋಗಲಾಡಿಗಳು, ಸೆಕ್ಯುಲರ್ ಎಂಬ ಪಟ್ಟಿಯನ್ನು ತಮ್ಮ ಹಣೆಯ ಸುತ್ತಲೂ ಸುತ್ತಿಕೊಂಡಿರುವ ಬುದ್ಧಿ ಜೀವಿಗಳ ನಡೆಯನ್ನು ವಿವರಿಸಬೇಕೆಂಬ ಪ್ರಯತ್ನ ಅಷ್ಟೇ. ಇಷ್ಟಕ್ಕೂ ಪಾಕಿಸ್ತಾನದ ಭಯೋತ್ಪಾದನೆ ಕಮ್ಮಿಯಾಗಿರುವ ಯಾವ ಲಕ್ಷಣಗಳು ಇಲ್ಲ. ಪ್ರತಿ ದಿವಸ, ಒಂದಿಲ್ಲೊಂದು ಕಾರಣಕ್ಕೆ ಅಥವಾ ಕಾರಣ ಇಲ್ಲದೆಯೂ ನಮ್ಮ ದೇಶದ ಗಡಿ ಭಾಗದಲ್ಲಿ ನುಸುಳುಕೋರರು, ಪಾಕಿಸ್ತಾನದ ಸೈನಿಕರು, ಕಾಲು ಕೆರೆದುಕೊಂಡು ಜಗಳ ಮಾಡುತಿದ್ದಾರೆ, ದಾಳಿ ನಡೆಯುತ್ತಲೇ ಇದೇ. ಆದರೆ ಒಂದೇ ವ್ಯತ್ಯಾಸ ಎಂದರೆ, ಈಗಿನ ನಮ್ಮ ಸೈನಿಕರು, ಆದೇಶಕ್ಕೆ ಕಾಯಬೇಕಿಲ್ಲ, ಒಂದಕ್ಕೆ ಎರಡರಂತೆ ಮರುದಾಳಿ ಮಾಡಿ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ. ಆದರೆ ಬುಜೀಗಳ ಪಟ್ಟಿ ದೊಡ್ಡದಿದೆ ನಮ್ಮ ದೇಶದಲ್ಲಿ, ಒಬ್ಬ ಮಹೇಶ್ ಭಟ್ ಎಂಬ ಸಿನಿಮ ನಿರ್ದೇಶಕ, ಪ್ರತಿ ಬಾರಿಯೂ ತನ್ನ ಮೂಗನ್ನು ಪಾಕಿಸ್ತಾನದ ವಿಚಾರದಲ್ಲಿ ತೂರಿಸುತ್ತಾನೆ. ತನ್ನ ಪಾಕಿಸ್ತಾನ ಪ್ರೇಮವನ್ನು ಸಾರಿ ಸಾರಿ ಹೇಳುತ್ತಾನೆ. ಹಿಂದೂ ಧರ್ಮದ ಪರಮ ದ್ವೇಷಿ, ಈ ಮಹೇಶ್ ಭಟ್ ಪ್ರತಿ ಬಾರಿ ತನ್ನ ಬಾಯಿ ತೆರೆದಾಗಲೂ, ಪಾಕಿಸ್ತಾನದ ಬಗ್ಗೆ ನಿಷ್ಠೆಯನ್ನು ತೋರಿಸುತ್ತಾನೆ. ಇವರ ಸಾಲಿಗೆ, ಆ ನಕ್ಸಲರ ಬಗ್ಗೆ ಕನಿಕರ ತೋರುವ ಅರುಂಧತಿ ರಾಯ್ ಎಂಬ ಬುಜೀಯ ಪ್ರಕಾರ, ನರೇಂದ್ರ ಮೋದಿಯವರ ಸರ್ಕಾರ, ಶಾಂತಿ ಮಾತುಕತೆಗೆ ಆಸ್ಪದ ಕೊಡುತ್ತಿಲ್ಲವಂತೆ. ಇಷ್ಟಕ್ಕೂ ಇವರ ಶಾಂತಿ ವ್ಯಾಖ್ಯಾನ ಅಂದರೆ ರಸ್ತೆಯಲ್ಲಿ ಬಾಂಬ್ ಸಿಡಿಸುವುದೇ? ಅಥವಾ ಗಡಿಯಲ್ಲಿ ನಮ್ಮ ಸೈನಿಕರ ಹತ್ಯೆ ನಡೆಯುತ್ತಿದ್ದರೂ ನೋಡಿ ಸುಮ್ಮನಿದ್ದು, ಮಾತಾಡಲು ಕೂರುವುದೇ?. ನಮ್ಮ ಕನ್ನಡದ ಹಲವು ಬುಜೀಗಳಿಗೆ ಪಾಕಿಸ್ತಾನದ ಮ್ಯಾಪ್ ಸರಿಯಾಗಿ ಗೊತ್ತಿಲ್ಲದಿದ್ದರೂ ಅವರೂ ಹೇಳುವುದೂ ಇದನ್ನೇ. ಭಯೋತ್ಪಾದನೆಯನ್ನೇ ಬದುಕಾಗಿಸಿಕೊಂಡಿರುವ ದೇಶದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ಇಂಥವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?
ಈ ಕಾಂಗ್ರೆಸ್ ಪಕ್ಷ ಕೂಡ ಇದರ ಹೊರತಾಗಿಲ್ಲ. ಅಭಿಷೇಕ್ ಮನು ಸಿಂಘ್ವಿ ಎಂಬ ಅರೆಬೆಂದ ತಲೆಯ ಪವಾಡ ಪುರುಷರು ಇದ್ದಾರೆ. ಇತ್ತೀಚಿಗೆ ಎನ್.ಡಿ.ಟಿ.ವಿ ಎಂಬ ಮಹಾ ಸೆಕ್ಯುಲರ್ ಚಾನೆಲ್ ಒಂದರಲ್ಲಿ ನಡೆದ ಚರ್ಚೆಯಲ್ಲಿ, ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ವ್ಯಕ್ತಪಡಿಸಿದ ಏಕೈಕ ವ್ಯಕ್ತಿ. ಅದೂ ಕೂಡ ಪಾಕಿಸ್ತಾನದ ಒಬ್ಬರು ಚರ್ಚೆಯಲ್ಲಿ ಇರುವಾಗ. ಇದರ ಜೊತೆಯಲ್ಲೇ ಶೇಖರ್ ಗುಪ್ತ ಎಂಬ ಇನ್ನೊಬ್ಬ ಮಹಾ ಸೆಕ್ಯುಲರ್. ಇವರೆಲ್ಲರ ವಾದವನ್ನು ಆಲಿಸಿದ ಆ ಪಾಕಿಸ್ತಾನದ ವ್ಯಕ್ತಿಗೆ ಮಹಾ ಆನಂದವಾಗದೆ ಇರುತ್ತದೆಯೇ ? ಭಾರತ ದೇಶದಲ್ಲಿ ಕೂತು, ಈ ದೇಶದ ನಾಗರಿಕತೆ ಹೊಂದಿ, ಈ ದೇಶದ ಅನ್ನ ತಿಂದು, ಈ ದೇಶದದಲ್ಲಿ ತಮ್ಮ ಬದುಕು ಕಂಡಿಕೊಂಡಿರುವ ಈ ನಾಲಾಯಕ್ ಮನುಷ್ಯರಿಗೆ, ಆ ಪಾಕಿಸ್ತಾನದ ಮೇಲೆ ಪ್ರೀತಿ!! ಇದು, ನರೇಂದ್ರ ಮೋದಿ ಹಾಗು ಸರ್ಕಾರದ ಮೇಲಿನ ದ್ವೇಷದಿಂದ ಆಡಿರುವ ಮಾತು ಎಂದು ಈ ಕಾರ್ಯಕ್ರಮ ನೋಡಿದ ಪ್ರತಿಯೊಬ್ಬರಿಗೂ ಅನ್ನಿಸದೆ ಇರಲಾರದು. ಸ್ವಂತ ಕೆಲಸದ ಮೇಲೆ ಶ್ರದ್ದೆ ಇಲ್ಲ, ದೇಶದ ಮೇಲೆ ಗೌರವ ಮೊದಲೇ ಇಲ್ಲ. ಇಂಥವರೆಲ್ಲ ನಮ್ಮ ದೇಶದ ಬುದ್ಧಿ ಜೀವಿಗಳು. ಆ ಚರ್ಚೆಯಲ್ಲಿ ಪಾಲ್ಗೊಂಡ ಮತ್ತೊಬ್ಬ ವ್ಯಕ್ತಿ ಸಂಬಿತ್ ಪಾತ್ರ ಎಂಬ ಬಿ.ಜೆ.ಪಿ ವಕ್ತಾರ. ಸಂಬಿತ್ ಹೇಳಿದ ಒಂದೊಂದು ಮಾತುಗೂ,ಈ ಸೆಕ್ಯುಲರ್ಗಳು ತಳ ಸುಟ್ಟ ಬೆಕ್ಕಿನ ಹಾಗೆ ಕಿರುಚಾಡಿದ್ದು ಈಗ ಇತಿಹಾಸ. ಇದರಲ್ಲಿ ಸೂಕ್ಷ್ಮವಾಗಿ ಒಂದಂತು ಗಮನಿಸಬೇಕು, ನಮ್ಮ ದೇಶದ ವ್ಯಕ್ತಿಗಳೇ, ನಮಗೆ ದೇಶ ದ್ರೋಹ ಮಾಡಲು ಹಾತೊರೆಯುತ್ತಿದರೆ. ಇಂಥವರ ಸೋಗಲಾಡಿತನವನ್ನು ಬಯಲಿಗೆಳೆಯಬೇಕು. ಪ್ರತಿಯೊಬ್ಬ ನಾಗರಿಕನೂ, ದೇಶಾಭಿಮಾನ ಹೆಚ್ಚಿಸಕೊಳ್ಳಬೇಕು.
ಒಟ್ಟಿನಲ್ಲಿ, ನನಗಂತೂ ನಮ್ಮ ಭಾರತ ಸರ್ಕಾರದ ದಿಟ್ಟ ಹೆಜ್ಜೆ ನಿಜಕ್ಕೂ ಹೆಮ್ಮೆ ತಂದಿದೆ. ಮೋದಿಯವರು, ತಮ್ಮ ಅರಬ್ ದೇಶದ ಪ್ರವಾಸದ ಭಾಷಣದಲ್ಲಿ ಒಂದು ವಾಕ್ಯ ಹೇಳಿದರು, ಅದು ಹಿಂದಿಯಲ್ಲಿದೆ “ಸಮಜ್ ನೆ ವಾಲೆ, ಸಮಜ್ ಜಾಯೆಂಗೆ”, ಅಂದರೆ “ಇದು ಅರ್ಥ ಆಗುವವರಿಗೆ, ಆಗಲೇಬೇಕು” ಎಂದು. ಭಯೋತ್ಪಾದನೆ ಎದುರಿಸುವಲ್ಲಿ ಯಾವುದೇ ರಾಜಿ ಮಾತುಕತೆ ಅಸಾಧ್ಯ ಎಂದು ತೋರಿಸಿದ ನಮ್ಮ ಮೋದಿ ಸರ್ಕಾರದ ನಡೆಗೆ ಒಂದು ಹಾಟ್ಸ್ ಆಫ್!! ಜೈ ಹಿಂದ್!!
ಪಾಕಿಸ್ತಾನದ ದುರಂತಕ್ಕೆ ಅಮೆರಿಕಾದವರೂ ಹೊಣೆಗಾರರಾಗಿದ್ದಾರೆ. ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಹೋಗಿ ತಾವೇ ತಮ್ಮನ್ನು ಕಾಪಾಡಿಕೊಳ್ಳಬೇಕಾದ ಹಂತಕ್ಕೆ ಹೋಗಿ ತಲುಪಿಬಿಟ್ಟಿದ್ದಾರೆ, ಪಾಕಿಸ್ತಾನ-ಭಯೋತ್ಪಾದನೆ ಇವರೆಡೂ ಅವಿಭಾಜ್ಯ ಅಂಗಗಳಾಗಿ ರೂಪುಗೊಂಡಿವೆ. ಶೀಘ್ರದಲ್ಲಿಯೇ ಪಾಕಿಸ್ತಾನವು ಭೂಮಿಯಿಂದಲೇ ಮಾಯವಾಗುವ ಸನ್ನಿವೇಶ ಎದುರಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕಲ್ಲವೆ? ಪಾಕಿಸ್ತಾನದವರು ಅತಿಯಾಗಿ ಉಪ್ಪನ್ನು ತಿಂದಾಗಿದೆ. ವಿದ್ಯಾವಂತ ಮೂರ್ಖರು, ಅವಿದ್ಯಾವಂತ ಕ್ರೂರಿಗಳಿಂದ ತುಂಬಿ ಹೋಗಿರುವ ಪಾಕಿಸ್ತಾನ ಇನ್ನೆಂದಿಗೂ ತಲೆಯೆತ್ತಲು ಸಾಧ್ಯವೇ ಇಲ್ಲ. Who kills by sword, will die by sword.
ಸತ್ಯವಾದ ಮಾತು