ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 11, 2015

2

ಮಲೇಷ್ಯಾದಲ್ಲಿ ನರಕಯಾತನೆ ಅನುಭವಿಸುತಿದ್ದ ಯುವಕರಿಗೆ ಒಂದು ಈ-ಮೇಲ್ ‪#‎ಅಚ್ಚೇದಿನ್‬ ತಂದ ಕಥೆ

‍ನಿಲುಮೆ ಮೂಲಕ

– ಅರುಣ್ ಬಿನ್ನಡಿ

Anil Chalageriಕಾಡಿ ಬೇಡಿದ್ದಕ್ಕೆ ದಿನಕ್ಕೆ ಸಿಗುತ್ತಿದ್ದದ್ದು ಕೇವಲ ಒಂದೊತ್ತು ಊಟ,ಭವಿಷ್ಯದ ಕನಸುಗಳು ಮೊಸದ ಜಾಲಕ್ಕೆ ಸಿಲುಕಿ ಕಣ್ಮರೆಯಾಗಿದ್ದವು,ಕತ್ತಲೆಯ ಕೊಣೆಯಲ್ಲಿ ೨೦ ದಿನಗಳಿಂದ ನರಕಯಾತನೆಯ ರೌದ್ರನರ್ತನ,ಅಷ್ಟಕ್ಕೂ ಹೇಗಾದರು ಈ ವಿಷವರ್ತುಲದಿಂದ ಜೀವವನ್ನಾದರು ಉಳಿಸಿಕೊಳ್ಳೊಣವೆಂದರೆ ಆ ದೇಶದಲ್ಲಿ ಯಾರು ಪರಿಚಿತರಿರಲಿಲ್ಲ,ಒಟ್ಟಿನಲ್ಲಿ ಆ ಯುವಕರ ಪಾಲಿಗೆ ಜಗತ್ತಿನ ಬೆಳಕು ನೊಡಲು ಯಾವ ದಾರಿಯು ಉಳಿದಿರಲಿಲ್ಲ,ಉದ್ಯೋಗ ಅರಸಿ ದೂರದ ಮಲೇಶಿಯಾಕ್ಕೆ ಹೋದ ನಮ್ಮ ಬೆಂಗಳೂರಿನ ಇಬ್ಬರು ಯುವಕರ ದಾರುಣ ಕಥೆ ಇದು.

ಬೆಂಗಳೂರಿನ ಕೆಂಗೇರಿಯ ರಾಜೀವ್ ಮತ್ತು ಪ್ರಭು ಎಂಬ ಯುವಕರಿಬ್ಬರು ಉದ್ಯೋಗಕ್ಕಾಗಿ ಮಲೇಷ್ಯಾಗೆ ತೆರಳಲು ನಿರ್ಧರಿಸಿದ್ದರು.ಆಗ್ರಾದಲ್ಲಿರುವ ಟ್ರಾವೆಲ್ ಏಜೆಂಟ್ ಇಬ್ಬರಿಂದಲೂ ತಲಾ ೨.೫೦ಲಕ್ಷ ಹಣವನ್ನು ಕೇಳಿದ್ದಾನೆ.ಈ ಹುಡುಗರು ಹಣ ನೀಡಿದ ಬಳಿಕ ಅವರಿಗೆ ಏರ್-ಟಿಕೇಟ್ ಕೊಟ್ಟು ಮಲೇಷ್ಯಾಗೆ ಕಳುಹಿಸಲಾಗಿದೆ.ಅಲ್ಲಿ ತಲುಪಿಕೊಂಡ ನಂತರ ತಿಳಿದುಬಂದಿದ್ದೇನೆಂದರೆ ಭಾರತದ ಏಜೆಂಟ್ ಅಲ್ಲಿನ ಏಜೆಂಟರಿಗೆ ದುಡ್ಡು ನೀಡಿರಲಿಲ್ಲ.ಅಲ್ಲಿನ ಏಜೆಂಟರು ಈ ಹುಡುಗರನ್ನು ೧೮ ದಿನಗಳ ಗೃಹಬಂಧನದಲ್ಲಿಟ್ಟು ದಿನಕ್ಕೆ ಒಂದೊತ್ತು ಊಟ ಮಾತ್ರ ನೀಡುತಿದ್ದರು ಮತ್ತು ಕುಟುಂಬದವರಿಗೆ ಕರೆ ಮಾಡಿಸಿ ಹಣಕ್ಕಾಗಿ ಬೇಡಿಕೆಯಿಡುತಿದ್ದರು.ಅತ್ತ ಆ ಯುವಕರು ಸಿಬು ಎಂಬ ಸಣ್ಣ ಪಟ್ಟಣದಲ್ಲಿ ಒಂದು ಕೋಣೆಯಲ್ಲಿ ಬಂಧಿತರಾಗಿ ಹೈರಾಣಗಿದ್ದರೇ,ಇತ್ತ ಹೆತ್ತವರಿಗೆ ದಿಕ್ಕು ತೋಚದಂತಾಗಿತ್ತು.ಈ ಸುದ್ದಿ ಕೆಂಗೇರಿ ಬಿಜೆಪಿಯ ಯುವಮುಖಂಡರಾದ ಅನಿಲ್ ಚಳಗೇರಿಯವರ ಗಮನಕ್ಕೆ ಬಂದಿದೆ.

ಅನಿಲ್ ಅವರು ಮರು ದಿನವೇ,ಸುಷ್ಮಸ್ವರಾಜ್ ಜೀ ನಿರ್ವಹಿಸುವ ವಿದೇಶಿ ವ್ಯವಹಾರಗಳ ಖಾತೆಯ ಕಛೇರಿಗೆ,ಬೆಂಗಳೂರಿನ ಕೆಂಗೇರಿಯ ಇಬ್ಬರು ಹುಡುಗರನ್ನು ಮಲೇಷಿಯಾದಲ್ಲಿ ಗೃಹಬಂಧನದಲ್ಲಿ ಇಟ್ಟಿರುವ ಬಗ್ಗೆ ಹಾಗು ಅವರನ್ನು ಭಾರತಕ್ಕೆ ಕರೆ ತರಲು ಸಹಾಯ ಕೋರಿ ಒಂದು ಈ-ಮೇಲ್ ಮಾಡಿದ್ದಾರೆ.ಮೇಲ್ ಮಾಡಿದ ೩೫ ನಿಮಿಷಕ್ಕೆ ಸರಿಯಾಗಿ,”ಸಚಿವಾಲಯದಿಂದ ಮಾಹಿತಿ ಕಲೆಹಾಕುತ್ತಿದ್ದೇವೆ,ಕೆಲವೆ ಗಂಟೆಗಳ ಒಳಗೆ ಆಕ್ಷನ್ ತೆಗೆದುಕೊಳ್ಳುತ್ತೆವೆಂದು ಮೇಲ್ ಬಂತು”. ಬಹುಶಃ ವ್ಯವಸ್ಥೆಯ ಮಂದಗತಿಯ ಚಲನವಲನಗಳನ್ನು ನೋಡಿ ಬೇಸರವಾಗಿ,ವ್ಯವಸ್ಥೆಯನ್ನು ಉಗಿದು ಉಪ್ಪಿನಕಾಯಿಹಾಕಿರುವ ನಮಗೆ ತಟ್ಟನೆ ಸ್ಪಂದಿಸುವ ಇಂತಹ ಘಟನೆಗಳು ಶಾಕ್ ಕೊಡುವಂತದ್ದೆ!

೧ ಗಂಟೆ ೫೫ ನಿಮಿಷಕ್ಕೆ ಸರಿಯಾಗಿ ಇನ್ನೊಂದು ಈ-ಮೇಲ್ ಬಂತು,”ಆ ಯುವಕರ ಹತ್ತಿರ ಹಾಗು ಟ್ರಾವೆಲ್ ಏಜೆಂಟ್ ಹತ್ತಿರ ಮಾತನಾಡಿದ್ದೇವೆ ಯುವಕರನ್ನು ಭಾರತಕ್ಕೆ ಕರೆತರುತ್ತೆವೆ”ಎಂಬ ಭರವಸೆ ನುಡಿಗಳು,ಕಣ್ಣುಗಳನ್ನು ದೊಡ್ಡದಾಗಿಸಿ ಪದೆ ಪದೆ ಬಿಡದೆ ನೋಡುವಂತೆ ಮಾಡಿದಲ್ಲದೆ,ಉಸಿರು ಬಿಗಿ ಹಿಡಿಸಿ ಬಿಟ್ಟಿದ್ದವು.ಯೆಮೆನ್,ಇರಾಕ್,ಸಿರಿಯಾ ಕಂಡ ಕಂಡಲ್ಲಿಂದ ಅತ್ಯದ್ಭುತ ಕಾರ್ಯಚರಣೆ ಮಾಡಿ ಭಾರತೀಯರನ್ನು ಕರೆ ತಂದಿರುವ ಕಥೆಗಳನ್ನು ಕೇಳಿದವರಿಗೆ ಸರ್ಕಾರದ ಕಾರ್ಯವೈಖರಿ ಸ್ವತಃ ಅನುಭವಕ್ಕೆ ಬಂದಿರುವ ಸಮಯದಲ್ಲಿ ಮಕ್ಕಳು ಮನೆಗೆ ಬರುವ ಸೂಚನೆ ಸಿಕ್ಕಿತ್ತು.

ಆ ಯುವಕರನ್ನು ಭಾರತಕ್ಕೆ ಕರೆ ತರುವಲ್ಲಿ ಅನಿಲ್ ರವರದ್ದು ವಿಷೇಶ ಪಾತ್ರ. ಒಟ್ಟಿನಲ್ಲಿ ಸರ್ಕಾರ ಕೇವಲ ೫ ದಿನದಲ್ಲಿ ಆ ಯುವಕರನ್ನು ತಾಯಿ ನಾಡಿಗೆ ಕರೆ ತಂದಿದ್ದು ಇನ್ನೊಂದು ವಿಶೇಷ.

ಸದಾ ವ್ಯವಸ್ಥೆಯನ್ನು ದೂರುವ ನಾವುಗಳು ವ್ಯವಸ್ಥೆ ಅತ್ಯಧ್ಬುತ ಕೆಲಸಗಳನ್ನು ಮಾಡಿದಾಗ ಬೆನ್ನು ತಟ್ಟಬೇಕಾಗಿದ್ದು ನಮ್ಮ ಕರ್ತವ್ಯ.ಆ ಕಾರಣಕ್ಕೆ ನರೇಂದ್ರ ಮೋದಿಯವರ ಸರ್ಕಾರಕ್ಕೆ, ಸುಷ್ಮಾಜೀ ಗೆ,ವಿದೇಶಾಂಗ ಸಚಿವಾಲಯಕ್ಕೆ ಹಾಗು ಅನಿಲ್ ಚಳಗೆರಿಯವರಿಗೆ ನನ್ನ ಪ್ರೀತಿಯ ಧನ್ಯವಾದಗಳು…

2 ಟಿಪ್ಪಣಿಗಳು Post a comment
  1. ಡಿಸೆ 11 2015

    Maanyare, Sarakaara Aadalitatmikavaagi, koodale krama kaigondare entaha samasyeyu koodale bagehariyuttade embudakke adu jeevanta. saakshi. Ee kaaryakramadalli paalkonda Janapratinidigalu. adhikaarigalu ellaru prasamsahaaraharu.

    ಉತ್ತರ
  2. Mallappa
    ಡಿಸೆ 12 2015

    ಈ ಅದ್ಭುತ ಕಾರ್ಯವನ್ನು ಮಾಡಿದ ಸಮಸ್ಥರಿಗೂ ಧನ್ಯವಾದಗಳು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments