ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 18, 2015

23

ಪ್ರಗತಿಪರರ ಪಾಲಿನ ಬಿಸಿತುಪ್ಪ ‘ಪ್ರೊ.ಬಾಲು’

by ನಿಲುಮೆ

– ರಾಕೇಶ್ ಶೆಟ್ಟಿ

ಪ್ರೊ.ಬಾಲಗಂಗಾಧರಜಿ.ಎನ್ ನಾಗರಾಜ್ ಅವರು ಪ್ರೊ.ಬಾಲಗಂಗಾಧರರು ಡೈಲಿಯೋ ಎಂಬ ವೆಬ್ ತಾಣದಲ್ಲಿ ಬರೆದ ಲೇಖನದಿಂದ ತಮಗೆ ಬೇಕಾದ ಸಾಲುಗಳನ್ನು ಹೆಕ್ಕಿಕೊಂಡು,ತಮಗೆ ಬೇಕದಾಂತೆ ಅದನ್ನು ಅನುವಾದಿಸಿಕೊಂಡು ತಮ್ಮ ಫೇಸ್ಬುಕ್ ವಾಲಿನಲ್ಲಿ ಹಾಕಿಕೊಂಡಿದ್ದನ್ನು ಗೆಳೆಯರು ಗಮನಕ್ಕೆ ತಂದರು.ಕಮ್ಯುನಿಸ್ಟ್ ಇತಿಹಾಸಕಾರರು ಈ ದೇಶದ ಇತಿಹಾಸಕ್ಕೆ ಎಸಗಿರುವ ಅಪಚಾರವನ್ನು ಅರುಣ್ ಶೌರಿಯವರ ಎಮಿನೆಂಟ್ ಹಿಸ್ಟಾರಿಯನ್ಸ್ ಕೃತಿಯಲ್ಲಿ ಓದಿ ತಿಳಿದಿದ್ದೆ. ಈಗ ಕಣ್ಣ ಮುಂದಿರುವ ಲೇಖನವೊಂದನ್ನು ಕಮ್ಯುನಿಸ್ಟ್ ಮನಸ್ಸೊಂದು ಹೇಗೆ ತಿರುಚಿ ಜನರ ಮುಂದಿಟ್ಟು ಪ್ರಚೋದಿಸಬಲ್ಲದು ಎಂಬುದಕ್ಕೊಂದು ಉದಾಹರಣೆ ಸಿಕ್ಕಿತು.

“ಭಾರತದಲ್ಲಿ ಜಾತಿಯೇ ಇಲ್ಲವೆಂಬ ಸಂಶೋಧಕ” ಎಂದು ಬಾಲು ಅವರನ್ನು ಕರೆಯುವ ಮೂಲಕ ಒಂದು ಸುಳ್ಳಿನಿಂದಲೇ ಲೇಖನವನ್ನು ಹೇಗೆ ಶುರು ಮಾಡಬೇಕು ಎಂಬುದನ್ನು ಮಾನ್ಯ ನಾಗರಾಜ್ ಅವರು ತೋರಿಸಿಕೊಟ್ಟಿದ್ದಾರೆ.ಬಾಲು ಅವರ ವೇಷ ಕಳಚಿ ತಮ್ಮ ನಿಜ ಕುರೂಪದಲ್ಲಿ ಕಾಣಿಸಿಕೊಂಡಿದ್ದಾರಂತೆ.ಸ್ವಾಮಿ ನಾಗರಾಜ್ ಅವರೇ ಬಾಲು ಅವರು ಮಾತುಗಳನ್ನು ಎರಡು ವರ್ಷಗಳಿಂದಲೂ ಕೇಳುತಿದ್ದೇನೆ ಅದು ಮೊದಲಿನಂತೆಯೇ ಇದೆ.ತಾವು ಕಂಡುಕೊಂಡ ಸತ್ಯವನ್ನು ಹಿಂದೆ ಮುಂದೆ ನೋಡದೇ ಹೇಳುವಷ್ಟು ಎದೆಗಾರಿಕೆ ಮತ್ತು ಪ್ರಾಮಾಣಿಕತೆ ಅವರಲ್ಲಿದೆ. ಅದಿಲ್ಲದಿದ್ದರೇ, ಮೋದಿಯವರ ಬೆಂಬಲಿಗರ ನಡುವೆ ನಿಂತು ಸ್ವಚ್ಚ ಭಾರತ ಅಭಿಯಾನವನ್ನು ಅವರು ಟೀಕಿಸುತ್ತಿರಲಿಲ್ಲ.ಹಿಂದೂ-ಬೌದ್ಧ ಧಾರ್ಮಿಕ ಸಮಾವೇಶದಲ್ಲಿ ನಿಂತು ಅಲ್ಲಿನ ಸಭಿಕರನ್ನು ಮತ್ತು ಸಹಭಾಷಣಕಾರರನ್ನು ನೇರವಾಗಿಯೇ ನೀವು ಕ್ರಿಶ್ಚಿಯನ್ನರಂತೆಯೇ ಯೋಚಿಸುತ್ತೀರಿ ಅಂತ ಹೇಳುವ ಧೈರ್ಯ ಮಾಡುತ್ತಿರಲಿಲ್ಲ.ಸುಳ್ಳನ್ನು ಸಕ್ಕರೆ ಪಾಕದಲ್ಲಿ ಅದ್ದಿ ಜನರನ್ನು ಯಾಮಾರಿಸುವ ಸೆಕ್ಯುಲರ್ರುಗಳಿಗೆ,ಹಿಪೋಕ್ರೈಟುಗಳಿಗೆ ಬಾಲು ಅವರ ನೇರ ಮಾತುಗಳು ಭರ್ಜಿಯಂತೆ ಇರಿಯುವುದು ಸಹಜವೇ.

ಹೌದು.ಅಂಬೇಡ್ಕರ್ ಅವರನ್ನು ವೈಚಾರಿಕವಾಗಿ ಟೀಕಿಸುವಾಗ ಈಡಿಯಟ್ ಎಂದಿರುವುದನ್ನು ಬಾಲು ಸಮರ್ಥಿಸಿಕೊಂಡಿದ್ದಾರೆ.ಈಡಿಯಟ್ ಎಂಬುದು ನಮ್ಮ ಸಂಸ್ಕೃತಿಯಲ್ಲಿ ಬಳಸಬಾರದ ಅಶ್ಲೀಲ ಪದವಾಗಿದ್ದರೆ ’ ಥ್ರೀ ಈಡಿಯಟ್ಸ್’ ಹೆಸರಿನ ಸಿನೆಮಾಕ್ಕೆ ಸೆನ್ಸಾರ್ ಮಂಡಳಿಯವರು ಅಸ್ತು ಎಂದಿದ್ದೇಗೆ? ಜನರು ಮುಗಿಬಿದ್ದು ನೋಡಿ ಕೋಟಿ ಕೋಟಿಗಳಿಸಿದ್ದೇಗೆ? ಇರಲಿ. ಈಡಿಯಟ್ ಎಂಬುದನ್ನು ಟೀಕೆ-ಬೈಗಳವೇ ಎಂದಿಟ್ಟುಕೊಳ್ಳೋಣ.ರಾಮ-ಕೃಷ್ಣರಾದಿಯಾಗಿ ದೇವರನ್ನೇ ಟೀಕಿಸುವ-ಪ್ರಶ್ನಿಸುವ ಸಂಸ್ಕೃತಿ ನಮ್ಮದು ಅಂತದ್ದರಲ್ಲಿ ಅಂಬೇಡ್ಕರ್ ಅವರು ಅದನ್ನೂ ಮೀರಿದವರೇ ಎಂದು ಬಾಲು ಪ್ರಶ್ನಿಸುತ್ತಾರೆ ಜೊತೆಗೆ ಅಂಬೇಡ್ಕರ್ ವಾದಿಗಳು ಅಂಬೇಡ್ಕರ್ ಅವರ ಕುರಿತು ಒಂದೇ ಒಂದು ಟೀಕೆಯನ್ನು ಸಹಿಸಿಕೊಳ್ಳದಷ್ಟು ಅಸಹಿಷ್ಣುಗಳು ಎನ್ನುತ್ತಾರೆ.ಬೇಕಿದ್ದರೆ ಬಾಲು ಅವರು ಸಹ ಅಂಬೇಡ್ಕರ್ ಅವರನ್ನು ಬಹಿರಂಗವಾಗಿ ಹಾಡಿ ಹೊಗಳಿ,ಖಾಸಗಿಯಾಗಿ ಬಯ್ಯುವ ಸೆಕ್ಯುಲರ್ರು-ಕಮ್ಯುನಿಸ್ಟರಂತೆ ಮಾತನಾಡಬಹುದಿತ್ತು.ಆಗ ಅವರು ಈ ರೀತಿ ಟಾರ್ಗೆಟ್ ಆಗುತ್ತಿರಲಿಲ್ಲ.ಆದರೆ,ಬಾಲು ತಮಗನಿಸಿದ್ದನ್ನು ನೇರವಾಗಿಯೇ ಹೇಳಿದ್ದಾರೆ. ಹೀಗೆ ನೇರವಾಗಿ ಹೇಳುವ ಭರದಲ್ಲಿ ಕಲ್ಬುರ್ಗಿಯವರ ಜೊತೆ ಛೋಟಾ ರಾಜನ್ ಹೆಸರು ಸೇರಿಸುವುದು ಬೇಕಿರಲಿಲ್ಲ.

Kalburgi on CSLCಆದರೆ,ಕಲ್ಬುರ್ಗಿಯವರ ವೈಚಾರಿಕ ಅಸಹಿಷ್ಣುತೆಯನ್ನು ಟೀಕಿಸುವುದು ಹೇಗೆ ತಪ್ಪಾಗುತ್ತದೆ ನಾಗರಾಜ್ ಅವರೇ? ೨೦-ಮೇ-೨೦೧೩ರ ಪತ್ರಿಕೆಗಳ ವರದಿಯನ್ನು ತೆಗೆದು ನೋಡಿ.ಬಸವಶ್ರೀ ಪ್ರಶಸ್ತಿಯನ್ನು ಸ್ವೀಕರಿಸುವಾಗ ಮಾನ್ಯ ಕಲ್ಬುರ್ಗಿಯವರು “ಬಸವಣ್ಣನವರ ವಚನಗಳ ಕುರಿತು ಕುವೆಂಪು ವಿವಿಯಲ್ಲಿ ನಡೆಯುತ್ತಿರುವ ವಿಕೃತ ಸಂಶೋಧನೆಗಳಿಗೆ ಕಡಿವಾಣ ಹಾಕಬೇಕಿದೆ .ಈ ಎಲ್ಲ ಸಂಶೋಧನೆಗಳು ಸಮಾಜಕ್ಕೆ ತಪ್ಪು ಕಲ್ಪನೆಯನ್ನು ಕೊಡುತ್ತವೆ” ಎಂದಿರುವುದು ತಿಳಿಯುತ್ತದೆ.ಖುದ್ದು ಸಂಶೋಧಕರಾಗಿದ್ದ ಕಲ್ಬುರ್ಗಿಯವರು ಮತ್ತೊಂದು ಸಂಶೋಧನಾ ತಂಡಕ್ಕೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಯವರಿದ್ದ ಸಮಾರಂಭದಲ್ಲಿ ಹೇಳುವುದು ಸಹನೆಯ ಪ್ರತೀಕವೇ?

ಇನ್ನು ಈ ವಿಷಯದ ಕುರಿತು ಅವಧಿಯಲ್ಲೊಂದು ಲೇಖನ ಪ್ರಕಟವಾಗಿದೆ. ’ ಜನಶಕ್ತಿ ನಡೆಸಿದ ಉತ್ಸವ ಮತ್ತು ಸಮಾವೇಶದಲ್ಲಿನ ಆಗ್ರಹದ ಪ್ರತಿ’ಯಂತೆ ಅದು.ಅದರಲ್ಲಿ ಉಲ್ಲೇಖವಾಗಿರುವ ಕೆಲವು ಸಾಲುಗಳ ಬಗ್ಗೆ ಒಂದೆರಡು ಮಾತು ಹೇಳಬೇಕು : “ಕರ್ನಾಟಕದಲ್ಲಿ ಜಾತಿ ಪದ್ಧತಿ ಎಂಬುದು ಬ್ರಿಟಿಷರು ಹುಟ್ಟು ಹಾಕಿದ ಪರಿಕಲ್ಪನೆ. ವಾಸ್ತವವಾಗಿ ಜಾತಿ ಎಂಬುದೇ ಇಲ್ಲ. ವಚನಕಾರರು ಜಾತಿವ್ಯವಸ್ಥೆ ವಿರುದ್ಧ ಚಳುವಳಿ ಹೂಡಿದ್ದರು ಎನ್ನುವುದು ಆಧಾರರಹಿತ. ಇವೆಲ್ಲಾ ‘ಸಿ.ಎಸ್.ಎಲ್.ಸಿ.’ ‘ಸಂಶೋಧನೆ’ಗಳು. ಅವರ ಈ ಸಿದ್ಧಾಂತಗಳು ವಿದ್ವಾಂಸರ ತೀವ್ರ ಟೀಕೆಗೆ ಒಳಗಾಗಿದ್ದು ಡಾ, ಕಲಬುರ್ಗಿ ಅವರು ಈ ವಾಗ್ವಾದದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಮೇಲೆ ‘ಸಿ.ಎಸ್.ಎಲ್.ಸಿ.’ ಕೇಂದ್ರವನ್ನು ಮುಚ್ಚಲಾಗಿತ್ತು ಎಂದೂ ಇಲ್ಲಿ ನೆನಪಿಸಿಕೊಳ್ಳಬಹುದು. ಡಾ, ಕಲಬುರ್ಗಿ ಅವರನ್ನು ‘ಅಸಹಿಷ್ಣು’ ಎಂದು ಕರೆಯಲು ಇದೇ ಕಾರಣವಾಗಿರಬಹುದು.”

ಎಷ್ಟು ನಯವಾಗಿ ಸುಳ್ಳನ್ನು ಮುಚ್ಚಿಡಬಹುದು ಮತ್ತು ಪಸರಿಸಬಹುದು ಎಂಬುದನ್ನು ಇವರಿಂದ ನೋಡಿ ಕಲಿಯಬೇಕು.“ಜಾತಿ ಪದ್ಧತಿ ಬ್ರಿಟಿಷರು ಹುಟ್ಟುಹಾಕಿದ ಪರಿಕಲ್ಪನೆ ಮತ್ತು ಜಾತಿ CSLC Close Down- Vijayavani Reportಎಂಬುದೇ ಇಲ್ಲ” ಎಂದು ಬಾಲು ಅವರಾಗಲಿ ಅಥವಾ ಅವರ ಸಂಶೋಧನಾ ತಂಡವಾಗಲಿ ಎಲ್ಲಿ ಹೇಳಿದೆ ಎಂಬುದನ್ನು ಇವರು ಸತ್ಯಸಂಧರಾಗಿದ್ದರೇ ತೋರಿಸಲಿ ನೋಡೋಣ. “ಸಿ.ಎಸ್.ಎಲ್.ಸಿ ಕೇಂದ್ರವನ್ನು ಮುಚ್ಚಲಾಗಿತ್ತು” ಎನ್ನುವ ಈ ಜನರು ಅದು ಮುಚ್ಚಿದ್ದಲ್ಲ “ಮುಚ್ಚಿಸಲಾಗಿದ್ದು” ಎಂಬುದನ್ನು ಮರೆಮಾಚುತ್ತಾರೆ.ಇನ್ನು ಕಲ್ಬುರ್ಗಿಯವರು ಈ ಚರ್ಚೆಯಲ್ಲಿ ಏನು ಮಾತನಾಡಿದರು ಎಂಬುದನ್ನು ಮೇಲೆಯೇ ಹೇಳಿದ್ದೇನೆ.

ಅವಧಿಯ ಈ ಲೇಖನದಲ್ಲಿ ಕೆವಿ.ತಿರುಮಲೇಶ್ ಅವರ ಕಮೆಂಟೊಂದನ್ನು ನೋಡಿದೆ.ಪ್ರತಿಕ್ರಿಯೆಗೇ ಯೋಗ್ಯವಲ್ಲದ ಅದರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು ಬಿಡಿ. ಅಷ್ಟಕ್ಕೂ ಈ ತಿರುಮಲೇಶ್ ಅವರು ಬಾಲು ಮತ್ತು ತಂಡದವರ ಸಂಶೋಧನೆಯ ಕುರಿತ ಯಾವ ಬೌದ್ಧಿಕ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ?

ಮಾನ್ಯ ನಾಗರಾಜ್ ಅವರೇ,ಬಾಲು ಅವರನ್ನು ಮತ್ತು ಅವರ ತಂಡದ ಸಂಶೋಧನೆಗಳನ್ನು ವೈಚಾರಿಕ ಮಟ್ಟದಲ್ಲಿ ಟೀಕಿಸುವುದು ಸರಿಯೆನಿಸುತ್ತದೆಯೇ ಹೊರತು,ಅವರ ಲೇಖನದ ಸಾಲುಗಳನ್ನು ನಿಮಗೆ ಬೇಕಾದಂತೆ ಹೆಕ್ಕಿಕೊಂಡು ಜನರನ್ನು ಪ್ರಚೋದಿಸುವುದರಿಂದಲ್ಲ.ನಿಮ್ಮ ಪೋಸ್ಟಿನಲ್ಲಿ ಅದ್ಯಾರೋ ಮಹಾನುಭಾವನೊಬ್ಬ ಲಂಕೇಶ್ ಅವರ ಕಾಲದಲ್ಲಿ ಬಾಲು ಅವಿತುಕೊಂಡಿದ್ದರು ಎಂದು ಬರೆದಿದ್ದಾನೆ. ಭೈರಪ್ಪನವರು ಆವರಣ ಬರೆದಾಗ,ಬಾಲು ಟೀಕಿಸಿದಾಗ “ಈಗ ಲಂಕೇಶ್ ಇರಬೇಕಿತ್ತು.ಈಗ ಅವರಿರಬೇಕಿತ್ತು…ಇವರಿರ ಬೇಕಿತ್ತು” ಎಂದು ನೆನೆಸಿಕೊಂಡು ಸಮಾಧಾನ ಮಾಡಿಕೊಳ್ಳುವುದು ಬೌದ್ಧಿಕ ದಾರಿದ್ರ್ಯವಷ್ಟೇ.ಆತನ ಕಮೆಂಟು ನೋಡಿದಾಗ, ಹೌದಪ್ಪ ಲಂಕೇಶ್ ಅವರೇ ಇರಬೇಕಿತ್ತು.ಆಗಲಾದರೂ ಅದೆಂತ ವೈಚಾರಿಕ ಚರ್ಚೆ ನಡೆದೀತು ಎಂಬುದನ್ನೂ ನಾವು ನೋಡುತಿದ್ದೆವು ಮತ್ತು ಲಂಕೇಶರ ವೈಚಾರಿಕತೆಯನ್ನು ನಾವು ಪ್ರಶ್ನಿಸುತಿದ್ದೆವು ಎನಿಸಿತು ನನಗೆ.ನಿನ್ನೆ ಹಿರಿಯ ಲೇಖಕರೊಬ್ಬರ ಜೊತೆ ಮಾತನಾಡಿದಾಗ ಅವರೂ ಇದೇ ರೀತಿ ಹೇಳಿದರು ’ಇರಬೇಕಿತ್ತು ಕಣ್ರಿ ಲಂಕೇಶ್.ನಾವು ಪ್ರಶ್ನಿಸಬಹುದಿತ್ತು” ಅಂತ.

ಬಾಲು ಅವರ ಬೌದ್ಧಿಕ ಮಟ್ಟಕ್ಕೆ ಅಂಬೇಡ್ಕರ್ ಅವರನ್ನು ಟೀಕಿಸುವುದು ಸರಿಯಿದ್ದಿರಬಹುದು.ಆದರೆ ಅವರು ಈಡಿಯಟ್ ಎಂಬ ಪದಕ್ಕೆ ಸಂವಾದಿಯಾಗಿ ಬೇರೆ ಪದ ಬಳಸಿದ್ದರೇ ಅಥವಾ ಅಂಬೇಡ್ಕರ್ ಅವರನ್ನು ಹಾಗೇಕೆ ಕರೆಯಬಯಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದ್ದರೇ, ಅವರ ಲೇಖನವನ್ನು ಪ್ರಶ್ನಿಸಲು ಈ ಜನರ ಬಳಿ ಯಾವ ಅಸ್ತ್ರವೂ ಉಳಿಯುತ್ತಿರಲಿಲ್ಲ.ಈ ರೀತಿ ಮಾತನಾಡಿ ವಿವಾದಕ್ಕಾಗಿ ಕಾಯುವ ಜನರ ಬಾಯಿಗೆ ಆಹಾರ ಒದಗಿಸುವ ಬದಲು ಬಾಲು ಅವರು ನಮ್ಮನ್ನು ಬೌದ್ಧಿಕವಾಗಿ ಇನ್ನು ಹೆಚ್ಚೆಚ್ಚು ಚಿಂತನೆಗೆ ಹಚ್ಚುವಂತೆ ಮಾತನಾಡಬಹುದಿತ್ತು. ಅವರಿಗೆ ಇಲ್ಲಿನ ಬುದ್ಧಿಜೀವಿಗಳ ಮೇಲೆ ಬೇಸರವಿದ್ದಿರಬಹುದು.ಆದರೆ,ಇಲ್ಲೊಂದು ಯುವ ಸಮೂಹವೂ ಅವರ ಸಂಶೋಧನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ ಮತ್ತು ಅವರ ಚಿಂತನೆಗಳನ್ನು ಸಕರಾತ್ಮಕ ಹಾದಿಯಲ್ಲಿ ಜನರಿಗೆ ತಲುಪಿಸುತ್ತಿದೆ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು.ಈ ರೀತಿ ಮಾತನಾಡುವುದರಿಂದ ಬೌದ್ಧಿಕ ವೇಷದಲ್ಲಿರುವ ರಾಜಕಾರಣಿಗಳಿಗೆ ಲಾಭ ಮಾಡಿಕೊಟ್ಟಂತಾಗುತ್ತದಷ್ಟೇ.

ಬಾಲು ಅವರ ಸಂಶೋಧನಾ ಲೇಖನಗಳನ್ನು ಕಂಡೂ ಕಾಣದಂತೆ ಕಣ್ಮುಚ್ಚಿ (ಮರಳಿನೊಳಗೆ ಕತ್ತನ್ನು ತೂರಿಸುವ ಆಸ್ಟ್ರಿಚ್ನಂತೆ) ಕುಳಿತಿರುವ ಈ ಬುದ್ಧಿಜೀವಿಗಳು,ವಚನ ಸಾಹಿತ್ಯದಲ್ಲಿ ಇವರು ಚರ್ಚೆಯಾಗದಂತೆ ತಡೆದ ವಿಷಯಗಳೆಲ್ಲವೂ “ಕೊಟ್ಟಕುದುರೆಯನೇರಲರಿಯದೆ” ಎಂಬ ಪುಸ್ತಕ ರೂಪದಲ್ಲಿ ಬಂದಾಗಲೂ ಅಂತದ್ದೊಂದು ಪುಸ್ತಕವೇ ಬಂದಿಲ್ಲವೇನೋ ಎಂಬಂತೆ ಧೃತರಾಷ್ಟ್ರ ಅಭಿನಯ ಮಾಡುವ ಈ ಜನರ ಕೈಗೆ ಸಿಗುವುದು ಕೇವಲ ಇಂತ ಭಾಷಣಗಳೇ.ಹೋಗಲಿ ಅದನ್ನಾದರೂ ನೇರವಾಗಿ ಇಡುತ್ತಾರೆಯೇ? ಇಲ್ಲ! ತಿರುಚಿಕೊಂಡು ತಮ್ಮ ಲಾಭಕ್ಕೆ ತಕ್ಕಂತೆ.

ಇಷ್ಟು ದಿನ ಬಾಲು ಎಂಬುವವರೊಬ್ಬರಿದ್ದಾರೆ ಎಂಬುದನ್ನೇ ಮರೆತು ತಮ್ಮ ಸೆಕ್ಯುಲರ್ ಲೋಕದಲ್ಲಿ ವಿಹರಿಸುತ್ತಿದ್ದವರಿಗೇ ಈಗ ತಟ್ಟನೇ ಬಾಲುವಿನ ಭಾಷಣ ಸಿಕ್ಕಿದೆ.ಇನ್ನು ಅದನ್ನಿಡಿದು ಒಂದಿಷ್ಟು ವೈಚಾರಿಕ ರಾಜಕಾರಣ ಮಾಡುತ್ತಾರೆ.ಅಸಲಿಗೆ ಈ ಜನರು ಬೌದ್ಧಿಕ ವೇಷದಲ್ಲಿರುವ ರಾಜಕಾರಣಿಗಳು.ವೈಚಾರಿಕ ಚರ್ಚೆಗೆ ಇವರು ಸಿದ್ದರಿಲ್ಲ, ಇವರದ್ದೇನಿದ್ದರೂ ವೈಚಾರಿಕ ರಾಜಕಾರಣಕ್ಕಷ್ಟೇ.

ವಚನ ಸಾಹಿತ್ಯವೂ ಸೇರಿದಂತೆ ಬಾಲು ಅವರ ಸಂಶೋಧನೆಯ ಮೂರು ಪುಸ್ತಕಗಳನ್ನು ನಮ್ಮ ನಿಲುಮೆ ಪ್ರಕಾಶನವೇ ಪ್ರಕಟಿಸಿದೆ.ಬಾಲು ಅವರ ಸಂಶೋಧನೆಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಸಿದ್ದವರು ಓದಿಕೊಳ್ಳಬಹುದು.ಇಲ್ಲಪ್ಪ ನಾವು ನಾಗರಾಜ್ ಅವರಂತವರು ಹೆಕ್ಕಿಕೊಟ್ಟ ಸಾಲುಗಳನ್ನೇ ಹಿಡಿದುಕೊಂಡು ಬಯ್ದಾಡಿ ಸಮಾಧಾನ ಮಾಡಿಕೊಳ್ಳುವ ಪೈಕಿ ಎಂದರೆ ಒಳ್ಳೆಯದು. ಅದರಲ್ಲೇ ಸಮಾಧಾನ ಮಾಡಿಕೊಳ್ಳಿ.

ಒಟ್ಟಿನಲ್ಲಿ ಈ “ಅಸಹಿಷ್ಣುತೆ ಚಳವಳಿ” ಗುಂಪಿನ ಜನರ “ಅಸಹಿಷ್ಣುತೆ” ಯಾವ ಮಟ್ಟದ್ದು ಎಂಬುದನ್ನು ಬಾಲು ಅವರ ಒಂದು ಭಾಷಣ ಮತ್ತೊಂದು ಲೇಖನ ಹೊರಹಾಕಿ ನಮ್ಮ ಮುಂದಿಟ್ಟಿದೆ.ಇವರು ದೇವರುಗಳ ಬಗ್ಗೆ ಜನರ ಆಚಾರ-ವಿಚಾರಗಳನ್ನು ಹಿಗ್ಗಾ-ಮುಗ್ಗಾ ಟೀಕಿಸುವುದನ್ನು ವಿರೋಧಿಸುವ ಜನ ಸಾಮಾನ್ಯರಿಗೆ ಕೋಮುವಾದಿಗಳು/ ಹಿಂದುತ್ವವಾದಿಗಳು ಎಂಬ ಪಟ್ಟಕಟ್ಟುವ ಈ ಸೆಕ್ಯುಲರ್ ಮಂದಿ ಈಗ ಮಾಡುತ್ತಿರುವುದೇನು? ಇವರ ನಂಬಿಕೆಯನ್ನು ಪ್ರಶ್ನೆ ಮಾಡಿದರೆ ಬೆಂಕಿ ಹೊತ್ತಿಸಿಕೊಂಡವರಂತಾಡುವುದೇಕೆ? ಸ್ವಲ್ಪ ಸಹಿಸಿಕೊಳ್ಳಿ ಸೆಕ್ಯುಲರ್ ಮಹಾಶಯರೇ. ಅಸಹಿಷ್ಣುತೆ ಒಳ್ಳೆಯದಲ್ಲ ಅಲ್ಲವೇ?

***     ***     ***

ಬಾಲು ಅವರ ಲೇಖನದ ಕುರಿತು ನಾಗರಾಜ್ ಅವರ ವರ್ಶನ್ ಏನು ಮತ್ತು ಬಾಲು ನಿಜವಾಗಿ ಆ ಲೇಖನದಲ್ಲಿ ಹೇಳಿರುವುದೇನು ಎಂಬುದನ್ನು ಇಲ್ಲಿ ದಾಖಲಿಸಿದ್ದೇನೆ.ಅವೆರಡನ್ನೂ ಓದಿಕೊಳ್ಳಿ.ನಾನು ಬಾಲು ಅವರ ಪೂರ್ಣ ಲೇಖನವನ್ನು ಅನುವಾದಿಸಿಲ್ಲ.ಬದಲಿಗೆ,ಮಾನ್ಯ ನಾಗರಾಜ್ ಅವರ ಎಲ್ಲೆಲ್ಲಿಂದ ಹೆಕ್ಕಿಕೊಂಡು ಬಾಲು ಅವರ ವಿರುದ್ಧ ಜನರನ್ನು ಎತ್ತಿಕಟ್ಟಲು ಪ್ರಯತ್ನಿಸುತಿದ್ದಾರೆಯೋ ಅಂತಹ ಮಾತುಗಳು ಬಾಲು ಅವರಿಂದ ಹೇಗೆ ಮತ್ತು ಯಾವ ಹಿನ್ನೆಲೆಯಲ್ಲಿ ಬಂದಿವೆ ಎಂಬುದನ್ನು ಮಾತ್ರ ಮುಂದಿಡುತಿದ್ದೇನೆ.

ನಾಗರಾಜ್ ವರ್ಶನ್ : ಕಲಬುರ್ಗಿಯವರು ವಿಗ್ರಹ ಪೂಜೆಯನ್ನು ಟೀಕಿಸಿದರು. ಅವರು ಬಹಳ ಅಸಹಿಷ್ಣುತೆಯುಳ್ಳವರು ಅಂತಹ ಅಸಹಿಷ್ಣು ಜನರನ್ನಲ್ಲದೆ ಸಹಿಷ್ಣುತೆಯುಳ್ಳವರನ್ನು ಕೊಲ್ಲಬೇಕೆ?

ಬಾಲು ಹೇಳಿದ್ದೇನು? : … ಹತ್ಯೆಗಳಲ್ಲಿ ಜನರು ಅಸಹಿಷ್ಣುತೆಗಳನ್ನು ಹುಡುಕುತಿದ್ದಾರೆ.ಉದಾಹರಣೆಗೆ ಕಲ್ಬುರ್ಗಿಯವರ ಹತ್ಯೆಯಿಂದ ಶುರುವಾದ ಅಸಹಿಷ್ಣುತೆಯ ವಿವಾದ.ಕಲ್ಬುರ್ಗಿಯವರೇ ಹಲವು ವಿಷಯಗಳಲ್ಲಿ ಅಸಹಿಷ್ಣುವಾಗಿದ್ದರು.ಸೆಮೆಟಿಕ್ ರಿಲಿಜನ್ನುಗಳಲ್ಲಿ idol worship ಎಂಬುದರ ನಿಜಾರ್ಥವೇನು ಮತ್ತು ಯಾವುದು sin ಎಂದು ಕರೆಸಿಕೊಳ್ಳುತ್ತದೇ ಎಂಬುದನ್ನು ಇತರ ಬುದ್ಧಿಜೀವಿಗಳಂತೆ ಅರಿಯದೆಯೇ, ಮೂರ್ತಿಪೂಜೆಯ ವಿರುದ್ಧ ಮಾತನಾಡುತಿದ್ದರು.ಅವರ ನಂಬಿಕೆಗೆ ವಿರುದ್ಧವಾದ ವಿಚಾರಗಳ ಬಗ್ಗೆಯೂ ಅವರಿಗೆ ಅಸಹಿಷ್ಣುತೆಯಿತ್ತು.ಅವರದ್ದೇ ಮನಸ್ಥಿತಿಯ ಒಂದಷ್ಟು ಜನರ ಗುಂಪು ಕಟ್ಟಿಕೊಂಡು ಕನ್ನಡ ಪತ್ರಿಕೆಯ ಮಾಲೀಕರೊಬ್ಬರನ್ನು ಭೇಟಿ ಮಾಡಿ ಅವರ ಪತ್ರಿಕೆಯಲ್ಲಿ ಬರುತಿದ್ದ ಅಂಕಣವೊಂದನ್ನು ನಿಲ್ಲಿಸುವಂತೆ ಒತ್ತಡ ಹೇರಿದ್ದರು. ಇನ್ನೊಂದು ಗುಂಪನ್ನು ಜೊತೆ ಮಾಡಿಕೊಂಡು ಕರ್ನಾಟಕದ ಮುಖ್ಯಮಂತ್ರಿಯವರ ಬಳಿಹೋಗಿ ಇವರ ವಿಚಾರಧಾರೆಗಳಿಗೆ ವಿರುದ್ಧವಾಗಿದೆ ಎಂಬ ಕಾರಣಕ್ಕಾಗಿ ಸಮಾಜ ವಿಜ್ನಾನ ಸಂಶೋಧನಾ ಕೇಂದ್ರವನ್ನು ಮುಚ್ಚಿಸುವಂತೆ ಹೇಳಿದರು.ಅವರ ಅಸಹಿಷ್ಣುತೆಯೇ ಅವರ ಹತ್ಯೆಗೇ ಕಾರಣವಾಯಿತೋ ಇಲ್ಲವೋ ಎಂಬುದು ಇನ್ನೂ ಸಾಬೀತಾಗಿಲ್ಲ.ಅಸಹಿಷ್ಣು ಮನಸ್ಥಿತಿಯ ಜನರನ್ನು ಕೊಲ್ಲುವುದರಿಂದ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬುದು ಈ ಜನರ ವಾದವಾದರೇ,ಇವರೇನು ಸಹಿಷ್ಣುಗಳ ಹತ್ಯೆಯನ್ನು ಬಯಸುತಿದ್ದಾರೆಯೇ?

============================================================================================

ನಾಗರಾಜ್ ವರ್ಶನ್ : ದದ್ರಿಯ ಮುಸ್ಲಿಮನನ್ನು ಕೊಲ್ಲುವುದು ಕೇವಲ ಇಂದಿನ ಕಾನೂನುಗಳ ಪ್ರಕಾರ ಮಾತ್ರ ತಪ್ಪು.ಅದು ಅಸಹಿಷ್ಣುತೆಯಲ್ಲ. ಮಾನವ ಇತಿಹಾಸದಲ್ಲಿ ಇಂತಹವು ಬಹಳ ನಡೆದು ಹೋಗಿವೆ.

ಬಾಲು ಹೇಳಿದ್ದೇನು? : ದಾದ್ರಿ ಹತ್ಯೆ ಪ್ರಕರಣವೂ ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಇನ್ನೊಂದು ಉದಾಹರಣೆಯೆಂಬಂತೆ ಬಳಕೆಯಾಗುತ್ತಿದೆ.ಈ ಹತ್ಯೆಯಲ್ಲಿ ಪತ್ರಿಕೆಗಳು ವರದಿ ಮಾಡದ ಇನ್ನೊಂದು ಅಂಶವೇನೆಂದರೆ,ಹತ್ಯೆಗೀಡಾದ ವ್ಯಕ್ತಿ ಹಸುವನ್ನು ಕದ್ದಿದ್ದ ಎಂಬ ವಿಷಯ.ಅಮೇರಿಕಾದಂತಹ ದೇಶಗಳಲ್ಲಿ ಹಸು-ಕುದುರೆಗಳನ್ನು ಕದ್ದವರನ್ನು ಕೊಲ್ಲುತಿದ್ದದ್ದಕ್ಕೆ ಶತಮಾನಗಳ ಕಾಲ ಇತಿಹಾಸವಿದೆ,ಬ್ರಿಟನ್ನಿನಲ್ಲೂ ಹೀಗೆ ನಡೆಯುತಿತ್ತು.ಈ ರೀತಿಯ ಹತ್ಯೆಗಳು ಈಗಿನ ಕಾನೂನಿನ ಪ್ರಕಾರ ಅಪರಾಧವೆಂದು ಪರಿಗಣಿಸಲ್ಪಡುತ್ತದೆ.ಇದನ್ನು ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಉದಾಹರಣೆಯೆಂದು ಬಿಂಬಿಸುವುದು ಮಾನವ ಇತಿಹಾಸದ ಬಗ್ಗೆ ತೋರುವ ಘೋರ ನಿರ್ಲಕ್ಷ್ಯವಷ್ಟೇ.

============================================================================================

ನಾಗರಾಜ್ ವರ್ಶನ್ : ಅರಬ್ ರಾಷ್ಟ್ರಗಳಲ್ಲಿ ಮುಸ್ಲಿಮರು ತಮ್ಮಲ್ಲಿ ತಾವೆ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ.ಅದು ಅಸಹಷ್ಣುತೆಯಲ್ಲವೇ.

ಬಾಲು ಹೇಳಿದ್ದೇನು? : ಮಂಗಳೂರಿನ ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿಯ ಹತ್ಯೆಯನ್ನು ಅಸಹಿಷ್ಣುತೆಯ ಉದಾಹರಣೆಯಾಗಿ ಏಕೆ ತೆಗೆದುಕೊಳ್ಳುವುದಿಲ್ಲ? ಅವನು ಹಿಂದೂ ಎಂಬ ಕಾರಣವೇ ಅಥವಾ ಅವನನ್ನು ಕೊಂದವರು ಮುಸ್ಲಿಮರೆಂಬ ಕಾರಣಕ್ಕೋ? ಒಂದು ವೇಳೆ, ಮುಸ್ಲಿಮರ ಹತ್ಯೆಯನ್ನು ಮಾತ್ರವೇ ಅಸಹಿಷ್ಣುತೆ ಎಂದು ಪರಿಗಣಿಸುವುದಾದರೇ,ಕಳೆದ ದಶಕಗಳ ಮುಸ್ಲಿಂ ದೇಶಗಳಲ್ಲಾಗಿರುವ ಹತ್ಯೆಗಳನ್ನು ಏನೆನ್ನಬೇಕು? ಮುಸ್ಲಿಮರು ತಮ್ಮ ತಮ್ಮಲ್ಲೇ ಬಡಿದಾಡಿಕೊಳ್ಳುತಿದ್ದಾರೆ.ಶಿಯಾ-ಸುನ್ನಿಗಳು ಪರಸ್ಪರ ಹತ್ಯೆಗಳಲ್ಲಿ ನಿರತರಾಗಿದ್ದಾರೆ.ಸರ್ಕಾರ ಬೆಂಬಲದಿಂದಲೋ ಅಥವಾ ವಿರೋಧಿಸಲೋ ಜನರನ್ನು ಬಾಂಬಿಟ್ಟು ಉಡಾಯಿಸಲಾಗುತ್ತಿದೆ.ಹೀಗಿದ್ದಾಗ್ಯೂ ಸೌದಿ ಅರಬ್ಬಿನಿಂದ ಹಿಡಿದು ಲೆಬನಾನ್ ವರೆಗಿನ ಯಾವುದೇ ದೇಶದಲ್ಲೂ ಅಸಹಿಷ್ಣುತೆಯಿದೆ ಎಂದು ಯಾರು ಯಾಕೆ ಹೇಳುತ್ತಿಲ್ಲ?, ಇವೆಲ್ಲವನ್ನೂ ongoing war against terrorism ಎಂದಷ್ಟೇ ಹೇಳುತಿದ್ದಾರೆ.ಅಫ್ಘಾನಿಸ್ತಾನ-ಪಾಕಿಸ್ತಾನದ ಬಾಂಬ್ ಬ್ಲಾಸ್ಟುಗಳಿಂದ ಹಿಡಿದು ಪ್ರಪಂಚಾದಾದ್ಯಂತ ಆಗುತ್ತಿರುವ ಮುಸ್ಲಿಮರ ಹತ್ಯೆಯನ್ನು ಅಸಹಿಷ್ಣುತೆಯೆಂದು ಪರಿಗಣಿಸದವರು,ಭಾರತದಲ್ಲಿ ಒಬ್ಬ ಮುಸ್ಲಿಮನ ಹತ್ಯೆಯಾದರೇ ಭಾರತೀಯರು ಅಸಹಿಷ್ಣುಗಳೆಂದು ಹಣೆಪಟ್ಟಿ ಕಟ್ಟುತ್ತಾರೆ.

============================================================================================

ನಾಗರಾಜ್ ವರ್ಶನ್ :

ಅಂಬೇಡ್ಕರ್ ಒಬ್ಬ ಈಡಿಯಟ್. ಅಂಬೆಡಕರ್ ವಾದಿಗಳು ಅಸಹಿಷ್ಣುಗಳು, ಭಯೋತ್ಪಾದಕರು.

ಅಂಬೇಡ್ಕರ್ ರವರನ್ನು ದೊಡ್ಡದು ಮಾಡಿದ್ದು ಇಂದಿರಾಗಾಂಧಿ-ಜಗಜೀವನರಾಮರನ್ನು ಹಿಡಿತದಲ್ಲಿಟ್ಟುಕೊಳ್ಲುವುದಕ್ಕೆ.ಅವರೇ ಅಸಹನೆಯನ್ನು ಬೆಳೆಸಿದ್ದು.

ಅಂಬೇಡ್ಕರ್ರನ್ನು ಟೀಕಿಸಿದರೆ ದೊಡ್ಡ ಅಸಹನೆ.ಅಂಬೇಡಕರ್ ವಾದಿಗಳನ್ನು ಇಂದಿರಾಗಾಂದಿ ಆದಿಯಾಗಿ ನಾಲ್ಕು ದಶಕಗಳ ಕಾಲ ಎಲ್ಲರೂ ತಿನ್ನಿಸಿ ಕೊಬ್ಬಿಸಿಬಿಟ್ಟಿದ್ದಾರೆ.ನೋಡಿ ಹುಚ್ಚ ವೆಂಕಟನನ್ನು ಮತ್ತು ಈಡಿಯಟ್ ಎಂದ ನನಗೆ ಬೆದರಿಸುತ್ತಿದ್ದಾರೆ.

ಈಡಿಯಟ್ ಎಂದು ಬೈದರೇನು ತಪ್ಪು. ಹಳ್ಳಿಗಳಲ್ಲಿ ಬೈಯುವುದಿಲ್ಲವೇ . .

ಬಾಲು ಹೇಳಿದ್ದೇನು? : ಈ ಅಸಹಿಷ್ಣುತೆಯ ಚರ್ಚೆಯ ವ್ಯಾಪ್ತಿಗೆ ವ್ಯಕ್ತಿಯ ವೈಯುಕ್ತಿಕ ಅಭಿಪ್ರಾಯ ಬರುವುದಿಲ್ಲವೇ? ಎರಡು ಉದಾಹರಣೆಗಳ ಮೂಲಕ ಇದನ್ನು ಉತ್ತರಿಸುತ್ತೇನೆ.

೧.ಹುಚ್ಚ ವೆಂಕಟ್ ಎಂಬುವವರೊಬ್ಬರು ಟೀವಿ ಸಂದರ್ಶನವೊಂದರಲ್ಲಿ ಅಂಬೇಡ್ಕರ್ ಅವರ ಹೆಸರು ತೆಗೆದ ಸಂದರ್ಭದಲ್ಲಿ ಎಕ್ಕಡ ಎಂದಿದ್ದನ್ನು ಯಾವುದೇ ಮಾಧ್ಯಮಗಳು ವೆಂಕಟ್ ಹೇಳಿದ್ದೇನು ಎಂದು ತೋರಿಸುವ ಅಥವಾ ಬರೆಯುವ ಸಾಹಸ ಮಾಡಲಿಲ್ಲ.ಬದಲಿಗೆ ಅಂಬೇಡ್ಕರ್ ಅವರ ಬಗ್ಗೆ ಅವಾಚ್ಯ ಶಬ್ದ ಬಳಕೆ ಅಂತಷ್ಟೇ ಹೇಳಿದವು.ಭಾರತೀಯ ಸಂಸ್ಕೃತಿಯಲ್ಲಿ ವ್ಯಕ್ತಿಗಳ ಟೀಕೆ-ಬಯ್ಯುವುದು ಇದೆ.ದೇವರುಗಳನ್ನೇ ಪ್ರಶ್ನಿಸುತ್ತೇವೆ,ಟೀಕಿಸುತ್ತೇವೆ.ಅಂಬೇಡ್ಕರ್ ದೇವರುಗಳಿಗಿಂತ ದೊಡ್ಡವರೇ?

೨.ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಾದ ಘಟನೆ.ಅಲ್ಲಿ ನಾನು ವೈಚಾರಿಕವಾಗಿ ಅಂಬೇಡ್ಕರ್ ಅವರನ್ನು ಹೀಗಳೆದು ಈಡೀಯಟ್ ಎಂದೆ.(ನಾನು ಮೃದುವಾದೆ ಎನಿಸುತ್ತದೆ,ಅಲಿಯಾ ಭಟ್ ಬುದ್ಧಿಮತ್ತೆಗೆ ಹೋಲಿಸಬೇಕಿತ್ತು).ನನ್ನ ಈ ಪದದ ವಿರುದ್ಧ ಅಂಬೇಡ್ಕರ್ ವಾದಿಗಳು ಒಂದು ಕ್ಯಾಂಪೇನ್ ಅನ್ನೇ ಶುರು ಮಾಡಿದರು.

(ಅ) ರಾಷ್ಟ್ರಪತಿಗಳಿಗೆ ದೂರು ಕೊಟ್ಟರು (ಆ) ನನ್ನ ವೀಸಾವನ್ನು ವಾಪಸ್ ಪಡೆದು ಭಾರತಕ್ಕೆ ಬರದಂತೆ ತಡೆಯಿರಿ ಎಂದು ಬರೆದರು (ಇ) ಬೆಲ್ಜಿಯಂನಲ್ಲಿರುವ ಎಲ್.ಟಿ.ಟಿ.ಇ ಬೆಂಬಲಿಗರೊಂದಿಗೆ ಸೇರಿಕೊಂಡು ನಮ್ಮ ವಿವಿಯ ಮುಖ್ಯಸ್ಥರಿಗೆ ನನ್ನ ವಿರುದ್ಧ ದೂರು ಕೊಟ್ಟರು (ಈ) ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಪ್ರಚಾರವಾಯಿತು (ಉ) ಎಸ್ಸಿ/ಎಸ್ಟಿ ಕಮಿಷನ್ನಿಗೆ,ಹೈದರಬಾದಿನ ವಿವಿಯ ಮುಖ್ಯಸ್ಥರಿಗೆ,ರಾಜ್ಯಪಾಲರಿಗೆ ದೂರು ಕೊಟ್ಟರು (ಊ) ನನ್ನ ದೈಹಿಕ ಹಲ್ಲೆ ಮಾಡುವ ಬೆದರಿಕೆಗಳು ಆದವು. ನಾನು ಕ್ರಿಸ್ಚಿಯನ್ ಥಿಯಾಲಜಿಯನ್ನು ಟೀಕಿಸಿದೆ ಎಂಬ ಕಾರಣಕ್ಕೆ ಕೆಲವು ಅಂಬೇಡ್ಕರ್ ವಾದಿ ಕ್ರಿಶ್ಚಿಯನ್ನರು (ಎರಡು ಗಾಡ್ ಗಳನು ಪೂಜಿಸಬಲ್ಲವರು) ನನ್ನ ವಿರುದ್ಧ ದೂರು ನೀಡಿದರು.

ಈ ಎರಡೂ ಘಟನೆಗಳು ಅಂಬೇಡ್ಕರ್ ಅವರನ್ನು ಟೀಕಿಸುವವರ ವಿರುದ್ಧ ಅಂಬೇಡ್ಕರ್ ವಾದಿಗಳೆಷ್ಟು ಅಸಹಿಷ್ಣುಗಳು ಎಂಬುದನ್ನು ತೋರಿಸುತ್ತವೆ.ಬಾಬು ಜಗಜೀವನ ರಾಂ ಅವರನ್ನು ರಾಜಕೀಯವಾಗಿ ಹದ್ದು ಬಸ್ತಿನಲ್ಲಿಡಲು ಈ ಅಸಹಿಷ್ಣುತೆಯನ್ನು ಇಂದಿರಾಗಾಂಧಿಯವರು ಹುಟ್ಟುಹಾಕಿದರು.ಇಂದಿರಾ ಕಾಲದಿಂದಲೂ ಸರ್ಕಾರವೇ ಈ ಅಸಹಿಷ್ಣುಗಳನ್ನು ಪೋಷಿಸುತ್ತಿದೆ.ನಿಜವಾದ ಅಸಹಿಷ್ಣುತೆ ಎದುರಾಗುವುದು ಅಂಬೇಡ್ಕರ್ ಅವರನ್ನು ಅವರ ವಿಚಾರಗಳನ್ನು ಟೀಕಿಸಿದಾಗ.ಇಂತಹ ನಡವಳಿಕೆಗಳನ್ನು ರಾಜಕೀಯ ಪಕ್ಷಗಳೇ ಹೊರಗಿಡಬೇಕು.ಪ್ರಧಾನಿ ಮೋದಿ,ಮಹಾರಾಷ್ಟ್ರದ ಮುಖ್ಯಮಂತ್ರಿಯವರು ಈ ಅಸಹಿಷ್ಣುತೆಗೆ ಎಷ್ಟು ಬೆದರುತ್ತಾರೆಂದರೇ,ಅಂಬೇಡ್ಕರ್ ಅವರನ್ನು ಹೊಗಳಲು ಸಿಗುವ ಯಾವ ಅವಕಾಶವನ್ನೂ ಬಿಡುವುದಿಲ್ಲ.ಅರುಣ್ ಶೌರಿಯಂತವರನ್ನು ಬಿಟ್ಟರೇ ಒಬ್ಬನೇ ಒಬ್ಬ ಬುದ್ಧಿಜೀವಿಯೂ ಅಂಬೇಡ್ಕರ್ ಅವರನ್ನು ಟೀಕಿಸುವ ಧೈರ್ಯ ತೋರಿಲ್ಲ.ಅಂಬೇಡ್ಕರ್ ವಾದಿಗಳ ಈ ಅಸಹಿಷ್ಣುತೆಯು ನಲ್ವತ್ತು ವರ್ಷಗಳಿಂದಲೂ ನಡೆಯುತಿದ್ದರೂ ಇದನ್ನು ಈಗೀನ ಅಸಹಿಷ್ಣುತೆ ಚರ್ಚೆಯಲ್ಲಿ ಪರಿಗಣಿಸುತ್ತಿಲ್ಲ.

=================================================================================================

ನಾಗರಾಜ್ ವರ್ಶನ್ : ಮೀಸಲಾತಿ ಬುದ್ಧಿಜೀವಿಗಳ ಭೌದ್ದಿಕತೆಯನ್ನು ಕಿತ್ತು ಹಾಕಿಬಿಟ್ಟಿದೆ. ಎಲ್ಲರೂ ಗುಲಾಮರಾಗಿಬಿಟ್ಟಿದ್ದಾರೆ ಹಾಗಿಲ್ಲದಿದ್ದರೆ ನನ್ನ ಸವಾಲು .ಅನುವಾದದ ವಿನಂತಿ ಬಂದ ಕಾರಣ ಈ ಕೆಲ ಅಂಶಗಳು.

ಬಾಲು ಹೇಳಿದ್ದೇನು? : ಒಂದು ಪ್ರಶ್ನೆಯೇಳುತ್ತದೆ.ಚರ್ಚೆಯಾಗುತ್ತಿರುವ ಈ ಅಸಹಿಷ್ಣುತೆಯನ್ನು ಪ್ರಮೋಟ್ ಮಾಡುತ್ತಿರುವುದು ಯಾರು? ಕಾಂಗ್ರೆಸ್ ಸಿಖ್ಖರ ಮಾರಣಹೋಮ ನಡೆಸಿದಾಗ ಈಗ ಮಾತನಾಡುತ್ತಿರುವವರು ಯಾರು ಬಾಯಿ ಬಿಟ್ಟಿಲ್ಲ.ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವೇ ಯುವಕರ ಮೇಲೆ ಪೋಲಿಸ್ ಕೇಸುಗಳನ್ನು ದಾಖಲಿಸುವ ಮೂಲಕ ಹೊಸ ಚಳವಳಿಗಳು ಹುಟ್ಟದಂತೆ ಮಾಡುತ್ತಿದೆ.ಹೀಗಿರುವಾಗ ಅಸಹಿಷ್ಣುತೆ ಎಂಬುದು ವಿರೋಧಿಗಳನ್ನು ಹಣಿಯಲು ಬಳಸುವ ಹಳಸಲು ಪದವೆಂದು ಪರಿಗಣಿಸಬೇಕೆ.ಮೋದಿ ರಾಹುಲ್ ವಿರುದ್ಧ ಅಥವಾ ರಾಹುಲ್ ಮೋದಿಯ ವಿರುದ್ಧ ಇದನ್ನು ಬಳಸುವುದನ್ನು ದುರಾದೃಷ್ಟವಾದರೂ ಅರ್ಥೈಸಿಕೊಳ್ಳಬಹುದು.ನನಗೆ ಗೊತ್ತಿರುವ JNU,DUನ ಬುದ್ಧಿ ಜೀವಿಗಳು ಈ ಚರ್ಚೆಗೆ ಧುಮುಕಿ,ಅವಕಾಶಗಳಿಗೆ ತಮ್ಮ ಕರ್ಚೀಫು ಹಾಕುತಿದ್ದಾರೆ.ಆಶ್ಚರ್ಯವೆಂದರೆ ಯಾವ ಬುದ್ಧಿಜೀವಿಗೂ ಈ ಅಸಹಿಷ್ಣುತೆ ಬಗ್ಗೆ ಸರಿಯಾಗಿ ವಿವರಿಸಲಾಗದಿರುವುದು.

ಕಳೆದ ದಶಕಗಳ ಭಾರತದ ಮೀಸಲಾತಿ ನೀತಿಯು ಕೇವಲ ಸ್ವಹ್ತಾಸಕ್ತಿಯ-ಸ್ವಾರ್ಥವುಳ್ಳ ಬುದ್ಧಿಜೀವಿಗಳನ್ನು ಹುಟ್ಟು ಹಾಕಿದೆಯೇ? ನನ್ನ ಅನುಮಾನದ ಪ್ರಕಾರ ಹೌದಾದರೇ,ಅದು ಭವಿಷ್ಯಕ್ಕೇ ಮಾರಕವಾದುದು.ನನ್ನ ಅನುಮಾನ ಸುಳ್ಳು ಎಂದಾದರೇ,ಅದನ್ನು ಸಾಬೀತು ಮಾಡಬೇಕು.ಬುದ್ಧಿಜೀವಿಗಳಿಗೆ ನನ್ನ ಸವಾಲಿದು ; ಅಂಬೇಡ್ಕರ್ ವಾದಿಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಲ್ಲೆಯಾದಾಗ ನೀವೆಲ್ಲಿದ್ದಿರಿ?

ಚಿತ್ರಕೃಪೆ : witness-to-our-times.org

Advertisements
23 ಟಿಪ್ಪಣಿಗಳು Post a comment
 1. ಡಿಸೆ 18 2015

  Good article…yellaaruu prashnatheetare, mattu sarvajanika vyaktigalu teeke ge ola padabekadavare, adu bittu dalitha yemba jathi yava yendakshanna avara bagge yaavude teeke madbardu madidre masi baliyodu Andre adakintha Donna ashahishnuthe bele…

  ಉತ್ತರ
 2. shripad
  ಡಿಸೆ 18 2015

  ಶೈಕ್ಷಣಿಕ ವಲಯದಲ್ಲಿ ಇಂಥ ವಿದ್ಯಮಾನವನ್ನು ಬಹಳ ನೋಡಿದ್ದೇನೆ, ನೋಡುತ್ತಲೂ ಇದ್ದೇನೆ. ಚಿಂತಕ, ಪ್ರಗತಿಪರ ಅಂದುಕೊಳ್ಳುವವರು ಯಾವುದನ್ನು ಯಾವಾಗ ಯಾವ ಕಾರಣಕ್ಕೆ ಒಪ್ಪುತ್ತಾರೆ ಎಂಬುದು ಹದಿನಾಲ್ಕು ವರ್ಷವಾದರೂ ನನಗೆ ತಲೆಬುಡ ಅರ್ಥವಾಗಿಲ್ಲ! ನಾಗರಾಜರ ಹೇಳಿಕೆಯೂ ಇಂಥದ್ದೇ.
  ಬಾಲು ಅವರನ್ನು ಓದದೆಯೇ ಅವರು ಬಲಪಂಥೀಯ ಎಂದು ಇವರೆಲ್ಲ ಹಣೆಪಟ್ಟಿ ಹಚ್ಚಿ ಆಗಿದೆ. ವಚನಗಳನ್ನೂ ಅಷ್ಟೇ. ಕೆಲವರಾಡಿದ, ಕೆಲವು ಆಯ್ದ ವಚನಗಳನ್ನಷ್ಟೇ ಹೆಕ್ಕಿ ಮಾತಾಡುತ್ತಿರಬೇಕು ಇವರಿಗೆ. ಬಾಲು ಅವರನ್ನು, ವಚನಗಳನ್ನು ಇಂಥವರ ಮೇಲ್ ಸ್ತರದ ಹೇಳಿಕೆ ನಂಬಿ ನಾನೂ ಬಹುಕಾಲ ಹೀಗೇ ಅಂದುಕೊಂಡಿದ್ದೆ. ಯಾವಾಗ ಬಾಲು ನಿಜಕ್ಕೂ ಏನು ಹೇಳಿದ್ದಾರೆ ಎಂದು ಅವರ ಕೃತಿಗಳನ್ನೂ ಲೇಖನಗಳನ್ನೂ ಓದತೊಡಗಿದ ಮೇಲೆ ಈ ಚಿಂತಕರೆಂದುಕೊಂಡವರು ವಚನಗಳಿರಲಿ, ಬಾಲುವನ್ನೂ ಸರಿಯಾಗಿ ಓದಿಲ್ಲ ಎಂಬುದು ಅರ್ಥವಾಯಿತು. ಎ ಕೆ ರಾಮಾನುಜನ್ ಅವರ ಮುನ್ನೂರು ರಾಮಾಯಣದ ಬಗ್ಗೆ ಪಾಠ ಮಾಡುವಾಗ ಬಾಲು ಅವರ ‘ನಮಗೆ ಬೇಕಿರುವುದು ಇತಿಹಾಸವೋ ಗತಕಾಲವೋ’ ಲೇಖನವನ್ನೂ ವಚನಗಳ ಬಗ್ಗೆ ಹೇಳುವಾಗ ಡಂಕಿನ್ ಮತ್ತು ಬಾಲು ಅವರ ಸಂಶೋಧನೆಯನ್ನೂ ತಥಾಕಥಿತ ಸಂಶೋಧನೆ ಮತ್ತು ಲೇಖನಗಳ ಜೊತೆಗೆ (ಇದರಲ್ಲಿ ಹಳಕಟ್ಟಿಯವರಿಂದ ಹಿಡಿದು ಚಿಮೂ, ಓಎಲೆನ್, ದರ್ಗಾ ಎಲ್ಲರ ವಿಚಾರಗಳೂ ಇದ್ದವು) ವಿದ್ಯಾರ್ಥಿಗಳಿಗೆ ಹೆಚ್ಚಿನ ಓದಿಗೆ ನೀಡಿದ್ದೆ. ಅಚ್ಚರಿ ಅಂದರೆ ‘ವಚನಗಳನ್ನು ಈವರೆಗೆ ಹೀಗ್ಯಾಕೆ ಯಾರೂ ನೋಡಿರಲಿಲ್ಲಾ ಸಾರ್’ ಎಂದು ವಿದ್ಯಾರ್ಥಿಗಳು ಕೇಳಿದ್ದು ಬಾಲು ಅವರ ಲೇಖನ, ಚಿಂತನೆ ಓದಿದ ಮೇಲೆಯೇ. ಮಕ್ಕಳ ಪ್ರಶ್ನೆಗೆ ನನಗೆ ಇನ್ನೂ ಉತ್ತರ ಸಿಕ್ಕಿಲ್ಲ.
  ರಾಮಾನುಜನ್ ಅವರ ಮುನ್ನೂರು ರಾಮಾಯಣವನ್ನು ದೆಹಲಿ ವಿವಿಯಲ್ಲಿ ಪಠ್ಯದಿಂದ ತೆಗೆಯಲು ಒತ್ತಡ ಬಂದುದರ ಬಗ್ಗೆ ಇಂಥ ಮನೋಧರ್ಮ ಕುರಿತು ಬಲಪಂಥೀಯರ ಬಗ್ಗೆ ಬಾಲು ಬರೆದಂತೆ ಯಾವ ಎಡಪಂಥೀಯನೂ ಟೀಕಿಸಲಿಲ್ಲ!
  ಒಂದಂತೂ ನಿಜ. ಭಿನ್ನಾಭಿಪ್ರಾಯ ಏನೇ ಇರಲಿ, ಸಾಯುತ್ತಿರುವ ನಮ್ಮ ಮಾನವಿಕ, ಸಾಹಿತ್ಯಗಳ ಮುಂದಿನ ಉಳಿವಿಗೆ ಬಾಲು ಚಿಂತನೆಗಳು ಅಗತ್ಯ. ಅವರ ಅಗಾಧ ಓದು, ಅನುಭವಗಳನ್ನು ಟೀಕಿಸುವ ಭರದಲ್ಲಿ ಸಾರಾಸಗಟು ಯಾರೂ ಅಸಡ್ಡೆ ಮಾಡುವಂತಿಲ್ಲ. ಅವರ ಪ್ರಶ್ನೆಗೆ ಐಡಿಯಾಲಜಿಯ ಕಾರಣಕ್ಕೆ ಯಾರಿಗಾದರೂ “ಉರಿ ಹತ್ತಿಕೊಂಡರೆ” ಅಂಥ ಉರಿಗೆ ಶೈಕ್ಷಣಿಕವಾಗಿ ಎಷ್ಟು ಬೆಲೆಕೊಡಬೇಕೋ ನನಗಂತೂ ಗೊತ್ತಿಲ್ಲ.

  ಉತ್ತರ
 3. Ramesh Ka.Na.
  ಡಿಸೆ 19 2015

  ನಾನು ಓದಿದ ಒಬ್ಬ ಒಳ್ಳೆಯ ಲೆಖಕ ಇಂಥ ಹೆಳಿಕೆ ನೀಡಲು ಹೇಗೆ ಸಾಧ್ಯ ಎಂದು ಯೊಚಿಸುತ್ತಿದ್ದೆ. ನಿಮ್ಮ ಲೇಖನ ನನ್ನ ಸಮಸ್ಯೆಯನ್ನು ಬಗೆಹರಿಸಿತು. ತುಂಬಾ ಧನ್ಯವಾದಗಳು.

  ಉತ್ತರ
 4. R.S. Vidyarthi
  ಡಿಸೆ 19 2015

  “ಅಂಬೇಡ್ಕರ್ ಅವರನ್ನು ಹಾಗೇಕೆ ಕರೆಯಬಯಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದ್ದರೇ”… ಅವರು ಆ ಕೆಲಸವನ್ನು ಇಲ್ಲಿ ಮಾಡಿದ್ದಾರೆ. ನಮ್ಮ ಚಂತಕರಿಗೆ ಓದುವ ಕಲೆಯ ಸಣ್ಣ ಪರಿಚಯವಿದ್ದರೂ ಇದಕ್ಕೆ ಈಗಾಗಲೇ ಉತ್ತರ ಕೊಟ್ಟಿರುತ್ತಿದ್ದರು: https://www.academia.edu/16478230/Caste-based_reservation_and_social_justice_in_India

  ಉತ್ತರ
 5. Anonymous
  ಡಿಸೆ 19 2015

  ಬಾಲಗಂಗಾಧರ ಅವರು ಸ್ವಾತಂತ್ರ್ಯೋತ್ತರ ಭಾರತ ಕಂಡ ಅತ್ಯಂತ ಮೇಧಾವಿ ಸಮಾಜ ವಿಜ್ಞಾನಿ ಎಂಬುದು ನಿಸ್ಸಂದೇಹ. ಅಂತಹವರನ್ನು ಜಿ ಏನ್ ನಾಗರಾಜನಂತಹರು ಅಟಾಕ್ ಮಾಡುತ್ತಿರುವುದು ಖೇದನೀಯ. ಏಕೆಂದರೆ ಈ ನಾಗರಾಜ ತನ್ನ ವಿಕ್ಷಿಪ್ತ ಚಿಂತನೆ ಹಾಗೂ ಕುಬ್ಜ ಧೋರಣೆಗಳಿಂದ ನಟೋರಿಯಸ್ ಆಗಿರುವಂತಹ ವ್ಯಕ್ತಿ – ಕೃಷಿ ವಿಜ್ಞಾನದ ಹಿನ್ನೆಲೆ ಇದ್ದರೂ ವೈಜ್ಞಾನಿಕ ಮನೋಭಾವವಿಲ್ಲ. ಭಾರತದ ಸಂಸ್ಕೃತಿ ಎಂದರೆ ಚಟ ಚಟ ಎಂದು ಸಿಡಿದೇಳುವ ಮೆಣಸಿನಕಾಯಿ. ಕರ್ನಾಟಕದಲ್ಲಿ ಕಮ್ಯೂನಿಸಂ ತಳ ಸೇರಿ ಮಟ್ಟಸವಾಗಲು ಕಾರಣರಾದವರಲ್ಲಿ ಈತನೂ ಒಬ್ಬ. ಮಾರ್ಕ್ಸ್ ಇಂದು ಇದ್ದಿದ್ದರೆ ಇಂಥ ಕಮ್ಯೂನಿಸ್ಟರನ್ನು ಕಂಡು ಕುಸಿದು ಬೀಳುತ್ತಿದ್ದ.

  ಉತ್ತರ
 6. ಡಿಸೆ 20 2015

  “ಆದರೆ ಅವರು ಈಡಿಯಟ್ ಎಂಬ ಪದಕ್ಕೆ ಸಂವಾದಿಯಾಗಿ ಬೇರೆ ಪದ ಬಳಸಿದ್ದರೇ ಅಥವಾ ಅಂಬೇಡ್ಕರ್ ಅವರನ್ನು ಹಾಗೇಕೆ ಕರೆಯಬಯಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದ್ದರೇ, ಅವರ ಲೇಖನವನ್ನು ಪ್ರಶ್ನಿಸಲು ಈ ಜನರ ಬಳಿ ಯಾವ ಅಸ್ತ್ರವೂ ಉಳಿಯುತ್ತಿರಲಿಲ್ಲ”
  ಹೌದು ತಾವೇಕೆ ಅಂಬೇಡ್ಕರರನ್ನು ಈಡಿಯಟ್ ಎಂದು ಕರೆದೆ ಎಂದು ಸ್ಪಷ್ಟಪಡಿಸದಿದ್ದರೆ ಬಾಲಗಂಗಾಧರರೂ ಕೆಸರೆರೆಚುವವರಲ್ಲಿ ಒಬ್ಬರಾಗುತ್ತಾರೆ. ‘ಸ್ವಾತಂತ್ರ್ಯೋತ್ತರ ಭಾರತ ಕಂಡ ಅತ್ಯಂತ ಮೇಧಾವಿ ಸಮಾಜ ವಿಜ್ಞಾನಿ’ ಎಂಬ ಶಿಷ್ಯಕೋಟಿ ಬಿರುದಾಂಕಿತ ಎಂದ ಮಾತ್ರಕ್ಕೆ ಸುಖಾ ಸುಮ್ಮನೆ ಇನ್ನೊಬ್ಬರನ್ನು ಈಡಿಯಟ್ ಎಂದು ಕರೆಯುವದು ತರವಲ್ಲ. ಹೌದು ಅಂಬೇಡ್ಕರರ ಸಂವಿಧಾನ ವಸಾಹತು ಪ್ರಜ್ಞೆಯಿಂದಲೆ ಕೂಡಿದ್ದರೂ, ಆ ಕಾರಣಕ್ಕೆ ಅವರನ್ನು ಯಾಕೆ ಹಾಗೆ ಬಯ್ಯಬೇಕು? ಅದು ವಸಾಹತು ಪ್ರಜ್ಞೆ, ಇದು ವಸಾಹತು ಪ್ರಜ್ಞೆ ಎಂದು ಪಟ್ಟಿ ಮಾಡುವ ಬದಲು, ವಸಾಹತು ಪ್ರಜ್ಞೆಯಿಂದ ಬಂದ ಡೆಮಾಕ್ರಸಿ ಗಿಂತಲೂ ಉತ್ತಮವಾದ, ವಸಾಹತುಪ್ರಜ್ಞೆಯಿಂದ ಮುಕ್ತವಾದ ರಾಜಕೀಯ ವ್ಯವಸ್ಥೆಯ ಮಾದರಿಯನ್ನು ಬಾಲಗಂಗಾಧರರವರು ಯಾಕೆ ಹುಟ್ಟುಹಾಕಬಾರದು? ರಾಷ್ಟ್ರೀಯತೆ, ಡೆಮಾಕ್ರಸಿ, ಪಾಶ್ಚಾತ್ಯ ವಿಜ್ಞಾನ, ಟೆಕ್ನಾಲಜಿ ಇವೆಲ್ಲವೂ ವಸಾಹತುಶಾಹಿಯ ಪರಿಣಾಮಗಳೇ ಅಲ್ಲವೇ? ಇವೆಲ್ಲವನ್ನೂ ತೊರೆದು ಹೊಸ ರಾಜಕೀಯ ವ್ಯವಸ್ಥೆಯ ಮಾದರಿಯ ನೀಲನಕ್ಷೆಯಾದರೂ ಇರುವದೆ?
  ಬಾಲಗಂಗಾಧರ ಅವರ ಥಿಯರಿಗಳಲ್ಲಿ ಬೇಕಾದಷ್ಟು ಲೋಪಗಳಿವೆ. ಆದರೆ ನಾಗರಾಜ್ ಮತ್ತಿತರ ಪ್ರಗತಿಪರರು, ಆರಿಸಿಕೊಂಡ ಮಾರ್ಗ ಸರಿಯಲ್ಲ. ವೈಜ್ಞಾನಿಕವಾಗಿ ಬಾಲಗಂಗಾಧರವರ ಲೋಪಗಳನ್ನು ತೋರಿಸುವಲ್ಲಿ ಪ್ರಗತಿಪರರೆನಿಸಿಕೊಂಡವರು ಸಫಲರಾದರೆ, ಅವರ ಪೂರ್ವಾಗ್ರಹಗಳೂ ಮಾಯವಾಗುತ್ತದೆ.

  ಉತ್ತರ
  • Anonymous
   ಡಿಸೆ 21 2015

   ” ‘ಸ್ವಾತಂತ್ರ್ಯೋತ್ತರ ಭಾರತ ಕಂಡ ಅತ್ಯಂತ ಮೇಧಾವಿ ಸಮಾಜ ವಿಜ್ಞಾನಿ’ ಎಂಬ ಶಿಷ್ಯಕೋಟಿ ಬಿರುದಾಂಕಿತ”

   ಬಾಟ್ನಿ ಸಾರ್, ಬಾಲು ಅವರನ್ನು ನಾನು ಮೆಚ್ಚಿದ ತಕ್ಷಣ ನಿಮ್ಮ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಲು ಶುರುವಾಯಿತಲ್ಲ! ಅಸೂಯೆ ಬಿಡಿ, ತಮ್ಮನ್ನೇ “ಸ್ವಾತಂತ್ರ್ಯೋತ್ತರ ಭಾರತ ಕಂಡ ಅತ್ಯಂತ ಮೇಧಾವಿ” ಎಂದು ಕರೆಯುವ.

   ಉತ್ತರ
 7. ರಜತ್ ಲಿಂಗಾಯತ
  ಡಿಸೆ 21 2015

  “ಇನ್ನೊಬ್ಬರನ್ನು ಈಡಿಯಟ್ ಎಂದು ಕರೆಯುವದು ತರವಲ್ಲ” ಎಂದು ಎಲ್ಲರೂ ಹೇಳಿದ್ದೆ ಹೇಳಿದ್ದು. ಆದರೆ ಹಾಗೆ ಕರೆಯುವುದು ಯಾಕೆ ತಪ್ಪು?

  ಉತ್ತರ
  • ರಜತ್ ಲಿಂಗಾಯತ
   ಡಿಸೆ 21 2015

   Definition of idiot in English (ಇಲ್ಲಿಂದ: http://www.oxforddictionaries.com/definition/english/idiot)

   noun: 1 (informal) A stupid person.
   1.1 (archaic) A person of low intelligence.

   Origin: Middle English (denoting a person of low intelligence): via Old French from Latin idiota ‘ignorant person’, from Greek idiōtēs ‘private person, layman, ignorant person’, from idios ‘own, private’.

   ಉತ್ತರ
  • Anonymous
   ಡಿಸೆ 21 2015

   “ಸುಖಾ ಸುಮ್ಮನೆ ಇನ್ನೊಬ್ಬರನ್ನು ಈಡಿಯಟ್ ಎಂದು ಕರೆಯುವದು ತರವಲ್ಲ”

   ಪ್ರಜ್ಞಾ ಆನಂದ್ ಅಕಾ ಬಾಟ್ನಿ ಸರ್ ಅವರನ್ನು ಯಾರೂ ಈಡಿಯಟ್ ಎಂದು ಕರೆಯಕೂಡದು. ಏಕೆಂದರೆ ಅವರು “stupid person” ಅಥವಾ “person of low intelligence” ಅಲ್ಲ. ಅವರದ್ದು ಅತಿಬುದ್ಧಿವಂತಿಕೆ. Narcissist ಎಂಬ ಪದ ಅವರ ವ್ಯಕ್ತಿತ್ವವನ್ನು ತಕ್ಕ ಮಟ್ಟಿಗೆ ಕಟ್ಟಿಕೊಡುತ್ತದೆ.

   ಉತ್ತರ
  • ಡಿಸೆ 21 2015

   ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವವರು ಯಾರನ್ನೂ ಈಡಿಯಟ್ ಎನ್ನುವದಿಲ್ಲ. ನ್ಯೂಟನ್, ಐನ್ ಸ್ಟೀನ್ ಇವರೆಲ್ಲರೂ ತಮ್ಮ ಹಿಂದಿನವರ ನ್ಯೂನ್ಯತೆಗಳನ್ನು ಹೀಗೆಳೆಯುತ್ತಾ ಬಯ್ಯುತ್ತಾ ಕೂರಲಿಲ್ಲ. ಹಳೆಯ ನ್ಯೂನ್ಯತೆಗಳನ್ನು ಸರಿಪಡಿಸಿದರು. ಅವರ ತಪ್ಪುಗಳನ್ನು ಅವರ ಮುಂದಿನವರು ಸರಿಪಡಿಸಿದರು. ಬಾಲಗಂಗಾಧರ್ ಅವರು ಮೇಧಾವಿಯಾಗಿದ್ದರೆ, ಅಷ್ಟೆ ಒಳ್ಳೆಯ ವ್ಯಕ್ತಿತ್ವವೂ ಇದ್ದರೆ ಅಂಬೇಡ್ಕರ್ ರನ್ನು ಹೀಗೆಳೆಯುವ ಬದಲು, ಅವರ ತಪ್ಪನ್ನು ತಿದ್ದಲಿ. ಅದು ವಸಾಹತು ಪ್ರಜ್ಞೆ, ಇದು ವಸಾಹತು ಪ್ರಜ್ಞೆ ಎಂದು ಪಟ್ಟಿ ಮಾಡುವ ಬದಲು, ವಸಾಹತು ಪ್ರಜ್ಞೆಯಿಂದ ಬಂದ ಡೆಮಾಕ್ರಸಿ ಗಿಂತಲೂ ಉತ್ತಮವಾದ, ವಸಾಹತುಪ್ರಜ್ಞೆಯಿಂದ ಮುಕ್ತವಾದ ರಾಜಕೀಯ ವ್ಯವಸ್ಥೆಯ ಮಾದರಿಯನ್ನು ಬಾಲಗಂಗಾಧರರವರು ಯಾಕೆ ಹುಟ್ಟುಹಾಕಬಾರದು?
   ಅದಲ್ಲದಿದ್ದರೆ, ಪೈಪೋಟಿಗಿಳಿವವರಂತೆ ಬೈಗುಳಗಳಿಂದಲೇ ಬೌದ್ಧಿಕ ಪ್ರೌಡಿಮೆಯನ್ನು ಪ್ರದರ್ಷಿಸುವರಲ್ಲಿ ಒಬ್ಬರಾಗುತ್ತಾರೆ ಅಷ್ಟೆ. ‘ನನ್ನೆಲ್ಲಾ ಅಪಶ್ರುತಿಗಳನ್ನು, ಬೈಗುಳಗಳನ್ನು ಮೇಜು ಕುಟ್ಟಿ ಸಮರ್ಥಿಸಲು ನನ್ನ ಶಿಷ್ಯಕೋಟಿಗಳಿವೆ, ನಾನು ಹೀಗೆ ಇರುತ್ತೇನೆ’ ಎಂದಾದರೆ ಇರಲಿ.

   ಕಟ್ಟ ಕಡೆಗೂ ಉಳಿವ ಪ್ರಶ್ನೆ:
   ಬಾಲಗಂಗಾಧರರು ಈಡಿಯಟ್ ಪದವನ್ನು ಬಳಸಿದ್ದು ಸರಿ ಎಂದು ನಿಲುಮೆಯ ನಿರ್ವಾಹಕ ವರ್ಗ ಒಪ್ಪಿಕೊಳ್ಳುತ್ತೆಂದಾದಲ್ಲಿ, ನಿಲುಮೆ ವೇದಿಕೆಯಲ್ಲಿ ‘ಈಡಿಯಟ್’ ಶಬ್ದವನ್ನು ಬಳಸಲು ಅನುಮತಿ ನೀಡುತ್ತದೆಯೆ?

   ಉತ್ತರ
   • R.S. Vidyarthi
    ಡಿಸೆ 21 2015

    “ನ್ಯೂಟನ್, ಐನ್ ಸ್ಟೀನ್ ಇವರೆಲ್ಲರೂ ತಮ್ಮ ಹಿಂದಿನವರ ನ್ಯೂನ್ಯತೆಗಳನ್ನು ಹೀಗೆಳೆಯುತ್ತಾ ಬಯ್ಯುತ್ತಾ ಕೂರಲಿಲ್ಲ”
    I know you are a troll, and use a fake account. Still, for the benefit of other readers who come here, let me point out the obvious. Don’t make a fool of yourself PA. If you care, look for Newton’s wildly accusatory letters to his friends like Samuel Pepys and John Locke. If you can’t understand such stuff, pick up some writings of Ambedkar and read. He doesn’t write, but spits venom in his writings. It is strange that these Ambedkarites go around preaching decency 🙂

    ಉತ್ತರ
   • Anonymous
    ಡಿಸೆ 21 2015

    ” It is strange that these Ambedkarites go around preaching decency”.

    ಬಾಟ್ನಿ ಸರ್ ಅವರು ಖಂಡಿತ ಅಂಬೇಡ್ಕರ್ ವಾದಿಯಲ್ಲ! ಬಾಟ್ನಿ ಸರ್ ಅವರು ಈ ಹಿಂದೆ ಹೀದನ್ ಫೋರಮ್ಮಿನಲ್ಲಿ ಆತ್ಮರತಿ ನಡೆಸಲು ಹೋದಾಗ ಅದಕ್ಕೆ ಪ್ರೋತ್ಸಾಹ ಬಾಲು ಅವರ ಸಂಶೋಧನಾ ತಂಡದಿಂದ ಸಿಗಲಿಲ್ಲ. ಆ ಸಿಟ್ಟು ಇನ್ನೂ ಬಾಟ್ನಿ ಸರ್ ಅವರ ಹೃದಯಾಂತರಾಳದಿಂದ ಮಾಸಿಲ್ಲ. ಬಾಲು ಅವರ ತೇಜೋವಧೆ ಮಾಡಲು ಅವಕಾಶಗಳನ್ನು ಹುಡುಕುತ್ತಾ ಬಾಟ್ನಿ ಸರ್ ಅಂತರ್ಜಾಲದಲ್ಲಿ ನಾರ್ಸಿಸ್ಟ್ ಟ್ರಾಲ್ ಆಗಿ ಬಿಟ್ಟಿದ್ದಾರೆ. ಅಂಬೇಡ್ಕರ್ ವಿವಾದದ ಸಂದರ್ಭದಲ್ಲಿ ಅಂತಹ ಅವಕಾಶವೊಂದನ್ನು ಕಂಡಿದ್ದಾರೆ. ಬಾಲು ಅವರಿಗೆ ಬಿಟ್ಟಿ ಪಾಠ ಹೇಳುವ ನಾಟಕ ಮಾಡುತ್ತಾ ತನ್ನ ಆತ್ಮರತಿ ಮುಂದುವರೆಸಿದ್ದಾರೆ.

    ಉತ್ತರ
    • ಡಿಸೆ 21 2015

     ಇದೊಂದು ಖಾಯಿಲೆ ಆಯ್ತಪ್ಪ. ಬಾಟ್ನಿಯವರನ್ನು ಇಲ್ಲಿ ಎಳೆಯುವದು.’ವಸಾಹತುಶಾಹಿ ಪ್ರಜ್ಞೆ’ ಅನ್ನೋ ಆಬ್ಸೆಶನ್ ನಿಂದ ಈ ಜನರನ್ನು ಪಾರು ಮಾಡಕ್ಕಾಗಲ್ಲ ಅಂತ ನಿರ್ಲಕ್ಷ ಮಾಡಿ ಬಾಟ್ನಿಯವರು ಯಾವತ್ತೋ ಹೊರಹೋಗಿದ್ದಾರೆ. ಅವರಿಗೂ ಗೊತ್ತಿದ್ದಿರಬಹುದು ಅವರ ತಾರ್ಕಿಕ ಪ್ರಶ್ನೆಗಳಿಗೆ ಉತ್ತರ ಸಿಗುವದಿಲ್ಲವೆಂದು. ಅವರಿಗೆ ಅವರ ಮೇಲಿನ ಈ ಅಪಾದನೆಯನ್ನ ತಿಳಿಸೋಣ ಅಂದ್ರೆ ಅವ್ರು ಎಲ್ಲೂ ಸಿಕ್ತಿಲ್ಲ. ನಾನು ಬಾಟ್ನಿ ಸಾರು ಅಲ್ಲ ಜೂಲೋಜಿ ಸಾರು ಅಲ್ಲ.

     ಉತ್ತರ
     • Anonymous
      ಡಿಸೆ 22 2015

      “ನಾನು ಬಾಟ್ನಿ ಸಾರು ಅಲ್ಲ ಜೂಲೋಜಿ ಸಾರು ಅಲ್ಲ”

      ಕೊಳೆತ ಕೋಳಿ ಸಾರು?

      ಉತ್ತರ
 8. ರಜತ್ ಲಿಂಗಾಯತ
  ಡಿಸೆ 21 2015

  *ಅಂಬೇಡ್ಕರ್ ಅವರನ್ನು* ಈಡಿಯಟ್ ಎಂದು ಕರೆಯುವದು ತಪ್ಪು
  *ಯಾರನ್ನೂ* ಈಡಿಯಟ್ ಎಂದು ಕರೆಯುವದು ತಪ್ಪು
  *ಬಾಲು* ಅಂಬೇಡ್ಕರ್ ಅವರನ್ನು ಈಡಿಯಟ್ ಎಂದು ಕರೆಯುವದು ತಪ್ಪು
  *ಬಾಲು* *ಯಾರನ್ನೂ* ಈಡಿಯಟ್ ಎಂದು ಕರೆಯುವದು ತಪ್ಪು

  ಇದರಲ್ಲಿ ಪ್ರಪ ಚಿಂತಕರು ಹೇಳುತ್ತಿರುವುದು ಯಾವುದನ್ನು?

  ಉತ್ತರ
 9. ಅನ್ ಷಾದ್ ಪಾಳ್ಯ
  ಡಿಸೆ 22 2015

  ಅಂಬೇಡ್ಕರ್ ಕುರಿತು ಹೀಯಾಳಿಸಿದರೂ ಅದನ್ನು ಸಮರ್ಥಿಸಿ ಲೇಖನ ಹಾಕಿದಾಗಲೇ ಗೊತ್ತಾಯಿತು ನಿಮ್ಮ ಬುದ್ಧಿ ಮಟ್ಟ. ಯಾರೂ ಪ್ರಶ್ನಾತೀತರಲ್ಲ. ಆದರೆ ಅದಕ್ಕೊಂದು ಸರಿಯಾದ ಮಾರ್ಗ ಇದೆ. ಈಡಿಯಟ್ ಅನ್ನಬಾರದಿತ್ತು ಅಲಿಯಾ ಭಟ್ ಗಿಂತ ಸ್ವಲ್ಪ ಜಾಸ್ತಿ ತಿಳಿದು ಕೊಂಡಿದ್ದಾರೆ ಎಂದು ಹೇಳುವಾಗ ಈ ಹುಚ್ಚರಿಗಿಂತ ಕಡಿಮೆ ಅಲ್ಲದ ಪದ ಅನಿಸುತ್ತದೆ. ಭಾರತದ ಸಾಂಸ್ಕೃತಿಕ ಸಮಾಜದ ಗಂದ ಗಾಳಿ ಗೊತ್ತಿಲ್ಲದೇ ಜಾತಿ ಶ್ರೇಣಿಗಳೆ ಇಲ್ಲ ಅನ್ನುವವ ಇನ್ನೇನು ಹೇಳಲು ಸಾದ್ಯ. ಅದನ್ನು ಮತ್ತೆ ಸಮರ್ಥಿಸಿ ಹೇಳಿಕೆ ಬೇರೆ. ಅಂಬೇಡ್ಕರ್ ಈ ದೇಶದ ಸಂವಿಧಾನದ ರಚನೆಯ ಅವಕಾಶ ಸಿಕ್ಕಿದ್ದು ಈಡಿಯಟ್ ಆಗಿದ್ದಕ್ಕೆ ಅಲ್ಲ ಅನ್ನುವ ಕನಿಷ್ಟ ಜ್ಞಾನ ಇಲ್ಲದ ಈ ವ್ಯಕ್ತಿ ಬೆಲ್ಜಿಯಂ ಅಲ್ಲಿರಲು ಸೂಕ್ತ ಹೊರತು ಇಲ್ಲಿನ ವಿದ್ಯಾಭ್ಯಾಸ ಮುಗಿಸಿ ಯಾವುದೋ ದೇಶದ ಎಸಿ ರೂಮಿನ ಅಧ್ಯಯನ ದಿಂದ ಇವನಿಗೇನು ಗೊತ್ತು ಭಾರತದ ಭವ್ಯ ಪರಂಪರೆಯ ಸಮಾಜದ ಕಲ್ಪನೆ ಮತ್ತು ಇಲ್ಲಿನ ತುಡಿತ.

  ಉತ್ತರ
  • Ani
   ಡಿಸೆ 22 2015

   ಅನ್ ಷಾದ್ ಪಾಳ್ಯ, ಬಹುಷಃ ತಮ್ಮ ಪ್ರಖಾಂಡ ಪಾಂಡಿಂತ್ಯವನ್ನು ಬಾಲು ಕೇಳಿದ್ದರೆ ಆಲಿಯಭಟ್ ಳನ್ನು ಹೋಲಿಕೆಗೆ ತೆಗೆದುಕೊಂಡಿದ್ದು ತಪ್ಪೆಂದು ತಿಳಿಯುತ್ತಿದ್ದರು! ಆಲಿಯಾ ಭಟ್ ಗಿಂತ ಶ್ರೇಷ್ಠ ಹೋಲಿಕೆ ತಾವೇ ಇರುವಾಗ ಬೇರೆ ಹೋಲಿಕೆ ಸಾಧ್ಯವೇ?!

   ಉತ್ತರ
 10. ಡಿಸೆ 25 2015

  ಗುರು: ಶಿಷ್ಯರೇ. ನಿಮಗಿವತ್ತು ನಾನು Deductive reasoning ಹಾಗೂ inductive reasoning ಬಗ್ಗೆ ಹೇಳಿಕೊಡುತ್ತೇನೆ.
  ಶಿಷ್ಯರು: ಗುರುಗಳೇ Deductive reasoning ಹಾಗೂ inductive reasoning ಎಂದರೇನು?
  ಗುರುಗಳು: ನೀನು ಒಂದು ವೇಳೆ ಒಬ್ಬನನ್ನು ‘ಈಡಿಯಟ್’ ಎಂದು ಕರೆದರೆ, ಅದು ಸಹಜವಾದದ್ದು, ನಮ್ಮ ಸಂಪ್ರದಾಯದಲ್ಲಿ ರೂಢಿಗತವಾದದ್ದು, ತಪ್ಪೇನಿಲ್ಲ ಎಂದು ವಾದಿಸುವದನ್ನು inductive reasoning ಎನ್ನುತ್ತಾರೆ.
  ನಿನಗೆ ಯಾರಾದರೂ ಈಡಿಯಟ್ ಎಂದು ಕರೆದರೆ, ಹಾಗೆ ಕರೆಯುವದು ‘ವಸಾಹತುಶಾಹಿ ಪ್ರಜ್ಞೆ’ ಎಂದು ವಾದಿಸುವದನ್ನು Deductive reasoning ಎಂದು ಕರೆಯುತ್ತಾರೆ.
  ಶಿಷ್ಯ: ಇದೇನು ಗುರುಗಳೇ, ಎರಡೂ ವಾದಗಳ ಕನ್ ಕ್ಲೂಸನ್ ಬೇರೆ ಬೇರೆಯಾಗಿದೆಯಲ್ಲ!!
  ಗುರು: ಸುಮ್ನೆ ಕೂತ್ಗಳ್ರಲಾ.
  ಶಿಷ್ಯರು: ನಮ್ಮ ಗುರುಗಳ ವಾದದಲ್ಲಿ ವೈಜ್ನಾನಿಕತೆಯಿದೆ, ತರ್ಕ ಇದೆ. ಇವರು ಸ್ವಾತಂತ್ರ್ಯೋತ್ತರ ಭಾರತ ಕಂಡ ಮೇಧಾವಿ ಸಮಾಜ ವಿಜ್ಞಾನಿ. ಜೈ.

  ಉತ್ತರ
 11. Dheemanta
  ಡಿಸೆ 25 2015

  Kiran Batni ಇವರು ಸ್ವಾತಂತ್ರ್ಯೋತ್ತರ ಭಾರತ ಕಂಡ ಮೇಧಾವಿ! ಜೈ. Narcissistic creature.

  ಉತ್ತರ
 12. Ckvmurthy
  ಜನ 1 2016

  Balu has made a bold &good precedent. Nobody in this world is excluded from the healthy comments.Father of Nation Gandhi has been commented for his personnel & public life.Our constitution has provided freedom speech.Hence our friends should tolerate the comments of Balu.Mr.Balu is not a street fighter He is faculty member of world famous university. Let there be tolernce to comments.Comments only enhances the real personality of aman.om shant.om shanti

  ಉತ್ತರ
 13. Ckvmurthy
  ಜನ 1 2016

  Balu has made a bold &good precedent. Nobody in this world is excluded from the healthy comments.Father of Nation Gandhi has been commented for his personnel & public life.Our constitution has provided freedom speech.Hence our friends should tolerate the comments of Balu.Mr.Balu is not a street fighter He is faculty member of world famous university. Let there be tolernce to comments.Comments only enhances the real personality of aman.om shant.om shanti
  Balunthhavra santhati saaviravagali

  ಉತ್ತರ
 14. ಜನ 5 2016

  Good article

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments