ವಿಷಯದ ವಿವರಗಳಿಗೆ ದಾಟಿರಿ

ಜನವರಿ 15, 2016

5

6ನೇ ವರ್ಷದ ಹೊಸ್ತಿಲಲ್ಲಿ ನಿಲುಮೆ…

‍ನಿಲುಮೆ ಮೂಲಕ

Nilume @6ಕಳೆದ ವರ್ಷ ಈ ಸಮಯದಲ್ಲಿ, “5ನೇ ವರ್ಷದ ಸಂಭ್ರಮದಲ್ಲಿ ಶುರುವಾಗಲಿದೆ, ನಿಲುಮೆ ಪ್ರಕಾಶನ” ಎಂದು ನಾವು ಘೋಷಿಸಿದ್ದ ದಿನವೇ,ನಿಲುಮೆಯ ಮೇಲೆ ಕರ್ನಾಟಕದ ಬೌದ್ಧಿಕ ಫ್ಯಾಸಿಸಂನ ದಾಳಿಯಾಗಿತ್ತು.ಹಾಗೇ ದಾಳಿ ಮಾಡಿದವರ ಪೈಕಿ ಹೇಗಿದೆ 5ನೇ ವರ್ಷದ ಗಿಫ್ಟು ಎಂದು ಕುಹುಕವಾಡಿದ್ದರು. ಅದಾದ ನಂತರದ ವಿಷಯಗಳೆಲ್ಲ ನಿಮಗೇ ತಿಳಿದಿವೆ.ಕನ್ನಡ ಪ್ರಭ ಪತ್ರಿಕೆಯೂ ಆ ಎಪಿಸೋಡಿನ ಬಗ್ಗೆ ವಿಸ್ತೃತ ವರದಿ ಮಾಡಿತು.ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಮುಖಾಮುಖಿ ಚರ್ಚೆಯೂ ನಡೆಯಿತು.

ಆ ಚರ್ಚೆಯ ಅಂತ್ಯದಲ್ಲಿ, ”ಇವರಂತೆ ನಮ್ಮದು ವಿಧ್ವಂಸಕ ಮಾರ್ಗವಲ್ಲ;ನಮ್ಮದು ಜ್ಞಾನ ಮಾರ್ಗ” ಎಂದು ಹೇಳಿ,ನಿಲುಮೆಯು ಸಾಗಿ ಬಂದ ಮತ್ತು ಸಾಗಲಿರುವ ಮಾರ್ಗದ ಬಗ್ಗೆ ಸ್ಪಷ್ಟ ಸಂದೇಶವನ್ನು ಕೊಟ್ಟೆವು. ನಾವು ಹೇಳಿದ ಮಾರ್ಗದಲ್ಲಿಯೇ ಸಾಗುತಿದ್ದೇವೆ.ಎನ್ನುವುದಕ್ಕೆ ಸಾಕ್ಷಿಯಾಗಿ,5ನೇ ವರ್ಷಾಚರಣೆಯ ಸಂದರ್ಭದಲ್ಲಿ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳನ್ನು ನಿಮ್ಮ ಕೈಯಲ್ಲಿಟ್ಟಿದ್ದೇವೆ.ಕನಿಷ್ಟ ಐದು ಪುಸ್ತಕಗಳನ್ನಾದರೂ ನಾವು ಪ್ರಕಟಿಸುವ ಇರಾದೆಯಿತ್ತು. ಆದರೆ,ನಮ್ಮ ಇತರೆ ಕೆಲಸ-ಕಾರ್ಯಗಳು ಮತ್ತು ಪುಸ್ತಕ ಮುದ್ರಣಕ್ಕೆ ಬೇಕಾಗುವ ಸಂಪನ್ಮೂಲಗಳ ಕೊರತೆ ಇತ್ಯಾದಿ ಕಾರಣಗಳಿಂದ ಮೂರು ಪುಸ್ತಕಗಳಷ್ಟೇ ಸಾಧ್ಯವಾಗಿದ್ದು.ಕಳೆದ ವರ್ಷ ಸಾಧಿಸಲಾಗದ್ದನ್ನು ಈ ವರ್ಷದಲ್ಲಿ ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ.

ಈ ವರ್ಷ ನಿಲುಮೆಯಿಂದಾದ ಆರು ಕಾರ್ಯಕ್ರಮಗಳನ್ನು ಇಲ್ಲಿ ದಾಖಲಿಸಬೇಕು.

1.ನಿಲುಮೆ ಪ್ರಕಾಶನದ ಮೊದಲ ಪುಸ್ತಕವಾಗಿ ಬೌದ್ಧಿಕ ದಾಸ್ಯದಲ್ಲಿ ಭಾರತ ಬಿಡುಗಡೆಯಾಯಿತು.ಅದೇ ದಿನ ನಿಲುಮೆ ಫೌಂಡೇಶನ್ನಿನ ಉದ್ಘಾಟನೆಯೂ ಆಯಿತು.ನಮ್ಮೊಂದಿಗೆ ಪ್ರೊ.ಬಾಲು,ಶತಾವಧಾನಿ ಗಣೇಶ್,ಪ್ರೊ.ರಾಜಾರಾಮ್ ಹೆಗಡೆ,ಪ್ರೊ.ಪ್ರಧಾನ ಗುರುದತ್ತ ಅವರಿದ್ದರು.
2.ನಿಲುಮೆ ಪ್ರಕಾಶನದ ಎರಡು ಮತ್ತು ಮೂರನೇ ಪುಸ್ತಕ “ಬುದ್ಧಿಜೀವಿಗಳ ಮೂಢನಂಬಿಕೆಗಳು ಮತ್ತು ಕೊಟ್ಟ ಕುದುರೆಯನೇರಲರಿಯದೆ” ಪುಸ್ತಕ ಬಿಡುಗಡೆಯನ್ನು ವಿಶ್ವೇಶ್ವರ ಭಟ್ಟರು ನೆರವೇರಿಸಿದ್ದರು.ಅಂದು ನಮ್ಮೊಂದಿಗೆ ವಿಶ್ವೇಶ್ವರ ಭಟ್,ಪ್ರೊ.ರಾಜಾರಾಮ ಹೆಗಡೆ,ಪ್ರೊ.ಷಣ್ಮುಖ,ಚೈತ್ರ ಮತಿಘಟ್ಟ ಅವರಿದ್ದರು.
3.2015ರಲ್ಲಿ ದೇಶಾದ್ಯಂತ ಸದ್ದು ಮಾಡಿದ್ದು ಕೃತಕ ಅಸಹಿಷ್ಣುತೆಯ ಕ್ಯಾಂಪೇನ್. ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆಯುತ್ತ ಬೆಳವಣಿಗೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಈ ಸಂದರ್ಭದಲ್ಲಿ,ದೇಶದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳುಗೆಡವುತ್ತಿರುವ ’ಸ್ವ-ಹಿತಾಸಕ್ತಿಯ ಒಂದಿಡಿ ಗುಂಪಿನ’ ಎದುರು ದೇಶ ಮಂಡಿಯೂರಲಾರದು ಎಂಬ ಸಂದೇಶವನ್ನು ಜನ ಸಾಮಾನ್ಯರು ನೀಡಬೇಕಾದ ಅನಿವಾರ್ಯತೆಯಿತ್ತು.ನವೆಂಬರ್ 7ನೇ ತಾರೀಖು ಕ್ರಿಯೇಟಿವ್ ಇಂಡಿಯಾ ಸಂಘಟನೆಯ ಅಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ನಿಲುಮಿಗರು ಪಾಲ್ಗೊಂಡಿದ್ದರು.ದೇಶದ ಹಿತಾಸಕ್ತಿಯ ಸಂದರ್ಭದಲ್ಲಿ ನಿಲುಮೆಯು ಬೀದಿಗೂ ಇಳಿಯಬಲ್ಲದು ಎಂಬುದನ್ನು ತೋರಿಸಿಕೊಟ್ಟೆವು.
4.ಭಾರತೀಯ ಸಂಸ್ಕೃತಿಯನ್ನು ತನ್ನ ಬಹುತೇಕ ಸಮಕಾಲೀನರಂತೆ ಪಾಶ್ಚಾತ್ಯ ಚಿಂತನೆಗೊಳಗಾಗದೇ,ತಮ್ಮದೇ ನೆಲೆಯಲ್ಲಿ ಅರ್ಥಮಾಡಿಕೊಂಡವರು ಗಾಂಧೀಜಿ.ಅವರ ಜನ್ಮದಿನದಂದೇ,ಕುಪ್ಪಳ್ಳಿಯ ಕವಿಶೈಲದಲ್ಲಿ ವೈಚಾರಿಕ ಶಿಬಿರವನ್ನು ನಿಲುಮೆ ಆಯೋಜಿಸಿತ್ತು.ರಸರುಷಿ ಕುವೆಂಪು ಅವರು,ತಮ್ಮನೆಚ್ಚಿನ ಸ್ಥಳವಾದ ಕವಿಶೈಲದ ಕುರಿತು “ನೀಂ ಭುವನದಲಿ ಸ್ವರ್ಗವಾಗಿಹೆ ನನಗೆ!” ಎನ್ನುತ್ತಾರೆ.ನಿಲುಮೆಯ ನಿಲುವಿಗೂ ಕುವೆಂಪು ಅವರೇ ಸ್ಪೂರ್ತಿ.ಅವರ ’ಎಲ್ಲ ತತ್ವದ ಎಲ್ಲೆ ಮೀರಿ’ ಎಂಬುದೇ ನಮ್ಮ ಅಡಿಬರಹ.ವೈಚಾರಿಕ ಕ್ರಾಂತಿಗೆ ಆಹ್ವಾನ ನೀಡಿದ ಕವಿಯ ನೆಚ್ಚಿನ ಸ್ಥಳದಲ್ಲಿಯೇ ನಿಲುಮಿಗರು ಸೇರಿಕೊಂಡು,ನಿಲುಮೆಯ ವೈಚಾರಿಕ ಚಳುವಳಿಯ ಕುರಿತು ಚರ್ಚಿಸುವ ಸಂದರ್ಭವೊದಗಿ ಬಂದಿದ್ದು ಅತ್ಯಂತ ಖುಷಿಯ ವಿಚಾರ.ಎರಡು ದಿನಗಳ ವೈಚಾರಿಕ ಚರ್ಚೆಯಲ್ಲಿ ನಿಲುಮೆ ಪ್ರಕಾಶನದ ಪುಸ್ತಕಗಳ ಕುರಿತು,ನಮ್ಮ ಸಂಸ್ಕೃತಿ ಹಾಗೂ ನಿಲುಮೆಯು ಸಾಗಬೇಕಾದ ಹಾದಿಯ ಬಗ್ಗೆ ಚರ್ಚೆಗಳಾದವು.
5. ಅಕ್ಟೋಬರ್ 2ನೇ ತಾರೀಖು,ಮೈಸೂರಿನಲ್ಲಿ “ಮಂಥನ : ಲೇಖಕರ ಬಳಗ”ದ ವತಿಯಿಂದ,ನಿಲುಮೆ ಪ್ರಕಾಶನದ ಬುದ್ಧಿಜೀವಿಗಳ ಮೂಢನಂಬಿಕೆಗಳು ಪುಸ್ತಕದ ಸಾಂಕೇತಿಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
6. ಅಕ್ಟೋಬರ್ 31ರ ಶನಿವಾರ,ದಾವಣಗೆರೆತ ವರ್ತಮಾನ ಗೆಳೆಯರ ಬಳಗದ ವತಿಯಿಂದ,ನಿಲುಮೆ ಪ್ರಕಾಶನದ ಬುದ್ಧಿಜೀವಿಗಳ ಮೂಢನಂಬಿಕೆಗಳು ಪುಸ್ತಕದ ಸಾಂಕೇತಿಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಡೆಯದಾಗಿ,ಈ ಹಿಂದೆ ಹೇಳಿದ್ದ ಮಾತನ್ನು ಮತ್ತೊಮ್ಮೆ ನೆನಪಿಸುತಿದ್ದೇವೆ.

“ನಿಲುಮೆ ಪ್ರಕಾಶನದ ಪುಸ್ತಕಗಳು ಖಂಡಿತವಾಗಿಯೂ ನೀವು ಇದುವರೆಗೆ ನಂಬಿಕೊಂಡು ಬಂದ ಸಿದ್ಧಾಂತಗಳನ್ನು,ಐಡಿಯಾಲಜಿಗಳನ್ನು ಪ್ರಶ್ನಿಸುತ್ತವೆ,ತಲೆಕೆಳಗೂ ಮಾಡುತ್ತವೆ.ಅಂತಿಮವಾಗಿ ಈ ಪುಸ್ತಕಗಳು ಯಾವುದೇ ಐಡಿಯಾಲಜಿಗಳ ನಡುವೆ ಸಿಲುಕಿಕೊಳ್ಳದೇ ಸತ್ಯವನ್ನು ಹುಡುಕುವುದು ಹೇಗೆ ಎಂಬ ಚಿಂತನೆಯನ್ನೂ ಮತ್ತು ನಮ್ಮ ಸಂಸ್ಕೃತಿಯ ಮೇಲೆ ನಮಗರಿವಿಲ್ಲದಂತೆ ತೊಡಿಸಲಾಗಿರುವ ಕನ್ನಡಕವನ್ನು ಸರಿಸಬಲ್ಲವು.ಈ ಕಾರಣದಿಂದಾಗಿಯೇ ನಿಲುಮೆ ಪ್ರಕಾಶನ “ಸಂಸ್ಥೆ”ಯಲ್ಲ, “ಸಾಂಸ್ಕೃತಿಕ ಚಳುವಳಿ” ಎಂದು ನಾವು ಹೇಳುವುದು…”. ಇನ್ನೂ ಈ ವರ್ಷ ನಿಲುಮೆಯ ಮುಂದೆ ಎರಡು ಪ್ರಮುಖ ಆಲೋಚನೆಗಳಿವೆ. ಅವುಗಳಿನ್ನು ಚರ್ಚೆಯ ಹಂತದಲ್ಲಿರುವುದರಿಂದ,ಆ ಕುರಿತು ಸಮಯ ಬಂದಾಗ ತಿಳಿಸುತ್ತೇವೆ. ನಮ್ಮ ಈ ಸಾಂಸ್ಕೃತಿಕ ಚಳುವಳಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಯೋಜನೆಗಳು ಅಂತಷ್ಟೇ ಸದ್ಯಕ್ಕೆ ಹೇಳಬಯಸುತ್ತೇವೆ.

ನಿಲುಮೆಯ ಇಲ್ಲಿಯವರೆಗ ಸಾಗಿ ಬಂದಿರುವುದು ಸಾಂಘಿಕ ಪ್ರಯತ್ನದ ಫಲವಾಗಿ.ಇದರ ಯಶಸ್ಸಿನ ದೊಡ್ಡ ಪಾಲು ನಿಲುಮೆಯ ಬರಹಗಾರರು ಮತ್ತು ಓದುಗರಿಗೇ ಸಲ್ಲುತ್ತದೆ.ಬನ್ನಿ,ನಾವೆಲ್ಲಾ ಜೊತೆಯಾಗಿ ಭಾರತವನ್ನು ಬೌದ್ಧಿಕ ದಾಸ್ಯದಿಂದ ಮುಕ್ತವಾಗಿಸುವತ್ತ ಹೆಜ್ಜೆಯಿಡೋಣ

ನಿಮ್ಮೊಲುಮೆಯ,
ನಿಲುಮೆ ಬಳಗ

5 ಟಿಪ್ಪಣಿಗಳು Post a comment
  1. Dunkin Jalki
    ಜನ 17 2016

    ಅಭಿನಂದನೆಗಳು ನಿಲುಮೆ ಬಳಗಕ್ಕೆ!

    ಉತ್ತರ
  2. Goutham
    ಜನ 21 2016

    ಆರನೇ ವರ್ಷಕ್ಕೆ ಕಾಲಿಟ್ಟಿರುವ ನಿಲುಮೆಗೆ ಅಭಿನಂದನೆಗಳು. ದೇಶಾದ್ಯಂತ ಹರಡಿರುವ ಅಸಹಿಷ್ಟುತೆಯನ್ನು ಕೃತಕ ಎನ್ನುವ೦ತಹ ನಿಲುವುಗಳೇಕೆ ನಿಲುಮೆಗೆ ?

    ಉತ್ತರ
  3. ಫೆಬ್ರ 15 2016

    ಅಭಿನಂದನೆಗಳು. ನಿಲುಮೆಯ ಆರಂಭದ ದಿನಗಳಿಂದ ನಾನೊಬ್ಬ ಇದರ ಓದುಗನಾಗಿ ಹತ್ತಿರದಿಂದ ಎಲ್ಲಾ ಕೆಲಸಗಳನ್ನು ಗಮನಿಸಿದ್ದೇನೆ. ನಿಲುಮೆಯ ಸಮಾಜಪರ ನಿಲುವು ಮತ್ತು ಸಮಾಜಘಾತುಕತೆಯ ವಿರುದ್ಧದ ನಿಲುವು ಶ್ಲಾಘನೀಯ. ಧನ್ಯವಾದಗಳು

    ಉತ್ತರ
  4. “ನಿಲುಮೆ ಪ್ರಕಾಶನದ ಪುಸ್ತಕಗಳು ಖಂಡಿತವಾಗಿಯೂ ನೀವು ಇದುವರೆಗೆ ನಂಬಿಕೊಂಡು ಬಂದ ಸಿದ್ಧಾಂತಗಳನ್ನು,ಐಡಿಯಾಲಜಿಗಳನ್ನು ಪ್ರಶ್ನಿಸುತ್ತವೆ,ತಲೆಕೆಳಗೂ ಮಾಡುತ್ತವೆ.ಅಂತಿಮವಾಗಿ ಈ ಪುಸ್ತಕಗಳು ಯಾವುದೇ ಐಡಿಯಾಲಜಿಗಳ ನಡುವೆ ಸಿಲುಕಿಕೊಳ್ಳದೇ ಸತ್ಯವನ್ನು ಹುಡುಕುವುದು ಹೇಗೆ ಎಂಬ ಚಿಂತನೆಯನ್ನೂ ಮತ್ತು ನಮ್ಮ ಸಂಸ್ಕೃತಿಯ ಮೇಲೆ ನಮಗರಿವಿಲ್ಲದಂತೆ ತೊಡಿಸಲಾಗಿರುವ ಕನ್ನಡಕವನ್ನು ಸರಿಸಬಲ್ಲವು.ಈ ಕಾರಣದಿಂದಾಗಿಯೇ ನಿಲುಮೆ ಪ್ರಕಾಶನ “ಸಂಸ್ಥೆ”ಯಲ್ಲ, “ಸಾಂಸ್ಕೃತಿಕ ಚಳುವಳಿ” ಎಂದು ನಾವು ಹೇಳುವುದು…”.
    ಅದ್ಬುತವಾದ ಮಾತುಗಳು .
    ಸತ್ಯವೆಂಬುದು ಒಂದೇ ಆದರೂ ಅದನ್ನು ಕಾಣಲು, ಕೇಳಲು, ಪಡೆಯಲು ಹಲವು ಮಾರ್ಗಗಳಿವೆ . ಹುಡುಕುವ ಮನಸ್ಸಿರಬೇಕಷ್ಟೆ .

    ಉತ್ತರ
  5. ಜನ 17 2017

    ಅಭಿನಂದನೆಗಳು

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments