ಸುಳ್ಸುದ್ದಿ : ರಾಜ್ಯದಲ್ಲಿ “ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ” ಅಸ್ತಿತ್ವಕ್ಕೆ
– ಪ್ರವೀಣ್ ಕುಮಾರ್ ಮಾವಿನಕಾಡು
ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ”ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ”ಅಸ್ತಿತ್ವಕ್ಕೆ ತರಲಾಗಿದ್ದು, ವೇದಿಕೆಗೆ ನೂತನ ಪದಾಧಿಕಾರಿಗಳನ್ನೂ ಸಹಾ ಆಯ್ಕೆ ಮಾಡಲಾಗಿದೆ.ಶಂಕಿತ ಭಯೋತ್ಪಾದಕರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಾಗೂ ಕೆಲ ಸುಧಾರಣೆಗಳ ಉದ್ದೇಶದಿಂದ ರಾಜ್ಯದಲ್ಲಿ “ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ” ಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಶ್ರೀಯುತ.ಕಾಣೇಶ್ ಜಲ್ಲಿಕಟ್ಟು ಹೇಳಿದರು.ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ವೇದಿಕೆಯ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರವಾಗಿದ್ದು ಆ ವೈವಿಧ್ಯತೆಯಲ್ಲಿ ಭಯೋತ್ಪಾದನೆಯೂ ಒಂದು ಸಂಸ್ಕೃತಿಯಾಗಿದೆ. ಆದರೆ ಇತ್ತೀಚಿಗೆ ಕೆಲವು ಪರಿವಾರಗಳು ಈ ದೇಶದಲ್ಲಿ ಏಕಸಂಸ್ಕೃತಿ ಹೇರುವ ಹುನ್ನಾರ ನಡೆಸಿದ್ದು ಭಯೋತ್ಪಾದಕರ ಮೂಲ ಸಂಸ್ಕೃತಿಯನ್ನು ನಾಶಪಡಿಸಲು ಯತ್ನಿಸುತ್ತಿವೆ ಎಂದು ಕಿಡಿಕಾರಿದರು.ಇಂತಹಾ ಸಂದರ್ಭದಲ್ಲಿ ಶಂಕಿತ ಭಯೋತ್ಪಾದಕರಿಗೆ ನೈತಿಕ ಬೆಂಬಲ ಅತ್ಯಗತ್ಯವಾಗಿದ್ದು ಅವರಿಗೆ ಬೆಂಬಲವಾಗಿ ವೇದಿಕೆ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.ಮುಂದಿನ ತಿಂಗಳು ವೇದಿಕೆಯವತಿಯಿಂದ ಶಂಕಿತ ಉಗ್ರಗಾಮಿಗಳನ್ನು ಸನ್ಮಾನಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ವೇದಿಕೆ ಈಗಾಗಲೇ ಕೇಂದ್ರ ಮಾನವ ಹಕ್ಕು ಆಯೋಗಕ್ಕೆ ದೂರೊಂದನ್ನು ಸಲ್ಲಿಸಿದ್ದು ಉಗ್ರಗಾಮಿಗಳನ್ನು ಬಂಧಿಸುವಾಗ ಹಲವು ರೀತಿನೀತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮತ್ತು ತನಿಖಾ ತಂಡಗಳಿಗೆ ಸೂಚಿಸಲು ಈ ಮೂಲಕ ಒತ್ತಾಯಿಸಿದೆ.
ವೇದಿಕೆ ಸಲ್ಲಿಸಿದ ಮನವಿಯ ಪ್ರಕಾರ ಶಂಕಿತ ಉಗ್ರಗಾಮಿಗಳನ್ನು ಬಂಧಿಸುವ ಸಂದರ್ಭಗಳಲ್ಲಿ ಪಾಲಿಸಬೇಕಾದ ನಿಯಮಗಳು ಈ ಕೆಳಗಿನಂತಿವೆ:
· ಯಾವುದೇ ಮುನ್ಸೂಚನೆಯಿಲ್ಲದೆ ಬಂಧಿಸುವಂತಿಲ್ಲ.ಕನಿಷ್ಠ ಒಂದು ತಿಂಗಳು ಮುಂಚಿತವಾಗಿ ಶಂಕಿತ ಉಗ್ರಗಾಮಿಗೆ ನೋಟೀಸ್ ನೀಡತಕ್ಕದ್ದು.
· ಗಣರಾಜ್ಯೊತ್ಸವ,ಸ್ವಾತಂತ್ರ್ಯೋತ್ಸವ ಮುಂತಾದ ಸಮಾರಂಭಗಳ ಸಿದ್ಧತೆಯಲ್ಲಿ ತೊಡಗಿರುವ ಶಂಕಿತರನ್ನು ಅವರ ಕಾರ್ಯ ಪೂರ್ಣಗೊಳ್ಳುವವರೆಗೂ ಮುಂಚಿತವಾಗಿ ನೋಟೀಸ್ ನೀಡಿಯೂ ಸಹಾ ವಶಕ್ಕೆ ಪಡೆಯುವಂತಿಲ್ಲ.
· ಬಂಧನದ ಸಂದರ್ಭದಲ್ಲಿ ಅಧಿಕಾರಿಗಳು ತಮ್ಮ ಗುರುತು ಪತ್ರವನ್ನು ಕಡ್ಡಾಯವಾಗಿ ತೋರಿಸತಕ್ಕದ್ದು.
· ಬಂಧನದ ಸಂದರ್ಭದಲ್ಲಿ ಉಗ್ರಗಾಮಿಯ ಅವರ ಅನುಮತಿಯಿಲ್ಲದೆ ಲ್ಯಾಪ್ ಟಾಪ್,ಮೊಬೈಲ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಕೂಡದು.
· ಬಂಧನದ ಸಂದರ್ಭದಲ್ಲಿ ಪೊಲೀಸರು ಪಿಸ್ತೂಲ್ ಸೇರಿದಂತೆ ಯಾವುದೇ ಆಯುಧಗಳನ್ನು ಜೊತೆಯಲ್ಲಿರಿಸಿಕೊಳ್ಳತಕ್ಕದ್ದಲ್ಲ.
· ಬಂಧಿತ ಶಂಕಿತ ಉಗ್ರಗಾಮಿಯ ಕೈಗೆ ಕೋಳ ತೊಡಿಸಿ ಕರೆದೊಯ್ಯತಕ್ಕದ್ದಲ್ಲ.
· ಬಂಧಿತ ಶಂಕಿತ ಉಗ್ರಗಾಮಿಯ ಹೆಸರಿನ ಸಂಪೂರ್ಣ ಗೌಪ್ಯತೆ ಕಾಪಾಡುವ ಹೊಣೆ ಅಧಿಕಾರಿಗಳೇ ಹೊರತಕ್ಕದ್ದು.
· ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯ ಸಮಯದಲ್ಲಿ ಮಾತ್ರ ಬಂಧಿಸತಕ್ಕದ್ದು.
· ಬಂಧನದ ವೇಳೆ ತನಿಖಾಧಿಕಾರಿಗಳು ಉಗ್ರಗಾಮಿಗಳ ಎದುರು ಗೌರವಯುತವಾಗಿ ಮತ್ತು ತಗ್ಗೀಬಗ್ಗೀ ನಡೆದುಕೊಳ್ಳತಕ್ಕದ್ದು.
· ಉಗ್ರಗಾಮಿಗಳು ತಮ್ಮ ಹೆಂಡತಿಯರ ಜೊತೆ ಇರುವಾಗ ಬಂಧಿಸಬಾರದು.
· ತನ್ನ ಬಂಧನವನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಎಲ್ಲಾ ಸ್ವಾತಂತ್ರ್ಯ ಭಯೋತ್ಪಾದಕನ ಮರ್ಜಿಗೇ ಬಿಡತಕ್ಕದ್ದು.
· ತನ್ನನ್ನು ಬಂಧಿಸಲು ಬರುವ ತನಿಖಾ ತಂಡ ಅಥವಾ ಪೋಲೀಸರ ಮೇಲೆ ಆ ಭಯೋತ್ಪಾದಕ ಸ್ಥಳದಲ್ಲಿಯೇ ಕೇಸು ದಾಖಲು ಮಾಡುವ ಸೌಲಭ್ಯ ಒದಗಿಸತಕ್ಕದ್ದು.
ಮೇಲೆ ತಿಳಿಸಲ್ಪಟ್ಟ ನಿಯಮಗಳಷ್ಟೇ ಅಲ್ಲದೆ ಇನ್ನೂ ಹಲವಾರು ಕರಾರುಗಳನ್ನು ವೇದಿಕೆ ಅಮಾನವೀಯ ಹಕ್ಕು ಆಯೋಗಕ್ಕೆ ಸಲ್ಲಿಸಿದ್ದು,ಇದರ ಆಧಾರದ ಮೇಲೆ ಅಮಾನವೀಯ ಹಕ್ಕು ಆಯೋಗ ಈಗಾಗಲೇ ಕೇಂದ್ರ ಮತ್ತು ರಾಜ್ಯಸರ್ಕಾರಗಳಿಗೆ ನೋಟೀಸ್ ನೀಡಿದೆ. ಅಲ್ಲದೆ ಕರ್ನಾಟಕ ಸರ್ಕಾರ ಈಗಾಗಲೇ ಅಮಾನವೀಯ ಹಕ್ಕು ಆಯೋಗದ ನೋಟೀಸಿಗೆ ಉತ್ತರಿಸಿದ್ದು ಈ ಮೇಲ್ಕಂಡ ಎಲ್ಲಾ ಷರತ್ತುಗಳಿಗೂ ತನ್ನ ಸಮ್ಮತಿಯನ್ನು ಸೂಚಿಸಿದೆ ಎಂದು ವೇದಿಕೆಯ ಅಧ್ಯಕ್ಷರು ಇದೇ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು.
ಒಂದು ವೇಳೆ ಶಂಕಿತ ಉಗ್ರರು ನಿಜವಾಗಿಯೂ ಈ ದೇಶದ ವಿರುದ್ಧ ಉಗ್ರಗಾಮೀ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು ಸಾಬೀತಾದರೆ ನಂತರವೂ ಅವರಿಗೆ ನಿಮ್ಮ ವೇದಿಕೆಯ ಬೆಂಬಲ ಇರುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವೇದಿಕೆಯ ಕಾನೂನು ಸಲಹೆಗಾರ ಸೃಜೇಶ್ ಕುಳ್ಳಪ್ಪ, ಹೌದು..ಹಾಗೊಂದು ವೇಳೆ ಸಾಬೀತಾಗಿ ಶಿಕ್ಷೆ ಪ್ರಕಟವಾದರೆ ಈ ದೇಶದ ನ್ಯಾಯಾಂಗದ ವಿರುದ್ದವೂ ಹೋರಾಡಲು ನಮ್ಮ ಪಡೆ ಸಿದ್ದವಿದ್ದು ನಂತರ ಅಗತ್ಯ ಬಿದ್ದರೆ ರಾಷ್ಟ್ರಪತಿಗಳ ವಿರುದ್ಧವೂ ಹೋರಾಡುತ್ತೇವೆ ಎಂದು ತಿಳಿಸಿದರು.ಹಾಗೆಯೇ ಹೋರಾಟಗಾರರಿಗೆ ಯಾವುದೇ ಕಾನೂನಿನ ಹಂಗು ಇರಬಾರದು ಎಂದು ಅವರು ಇದೇ ಸಂದರ್ಭದಲ್ಲಿ ಉಚ್ಚರಿಸಿದರು.
ವೇದಿಕೆಯ ಕಾರ್ಯಕ್ರಮಗಳಿಗೆ ತಗುಲಬಹುದಾದ ಖರ್ಚುವೆಚ್ಚಗಳನ್ನು ಯಾರು ನೋಡಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ,ನಿಮ್ಮ ಈ ಪ್ರಶ್ನೆಯ ಹಿಂದೆ ಯಾರಿದ್ದಾರೆ ಎನ್ನುವುದು ನಮಗೆ ಚೆನ್ನಾಗಿ ಗೊತ್ತು ಎಂದು ವೇದಿಕೆಯ ಸದಸ್ಯರುಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ವೇದಿಕೆಯ ಕಾರ್ಯದರ್ಶಿ ಪ್ರೊ.ಬಿ.ಎಂ.ಬೂಸಿ, ಉಪಾಧ್ಯಕ್ಷೆ ಗೌಸಿಯಾ ಲಿಂಗೇಶ್, ಸಹ ಕಾರ್ಯದರ್ಶಿ ಹೋರಾಟಗಾರ್ತಿ ಅಲಾ ಲಾ ಯೂಸುಫ್, ಸಂಚಾಲಕ ನೂತನ್ ಕಿಷ್ಕಿಂದೆ ಮುಂತಾದವರು ಉಪಸ್ಥಿತರಿದ್ದರು.
*ವಿ.ಸೂ: ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಇತ್ತೀಚಿಗೆ ಕೆಲವರು ಇಡೀ ವಿಶ್ವಕ್ಕೇ ಮಾರಕವಾದ ಉಗ್ರಗಾಮಿಗಳ ಬಂಧನವನ್ನೂ ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ ವಿರೋಧಿಸುತ್ತಿರುವುದನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.
ಇದಿ ಅಮೀನ್ ಇದರ ಅಂತರ ರಾಷ್ಟ್ರಿಯ ಅದ್ಯಕ್ಷ ಅಲ್ವೆ!!!
ಹಿತರಕ್ಷಣಾ ವೇದಿಕೆಯ ವತಿಯಿಂದ ಶಂಕಿತರಿಗೆ ಕಾಣೆ ಮೀನು ಸಮಾರಾಧನೆ !!!!
super…. it may comes real when India become Muslims country.