ಇವರದ್ದು ಅಭಿವೃದ್ಧಿ! ಅವರದ್ದು ವ್ಯಾಪಾರ!?
ರಾಜ್ಯದಲ್ಲಿ ೯೬೩೨ ಕಿಮೀ ರಾಷ್ಟ್ರೀಯ ಹೆದ್ದಾರಿಯಿದ್ದು, ರಾಜ್ಯ ಸರ್ಕಾರ ಭೂಮಿ ನೀಡಿದರೆ, ಕೇಂದ್ರದಿಂದ ೧ ಲಕ್ಷ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿಕೊಡಲು ಸಿದ್ಧರಿದ್ದೇವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎನ್ನುತ್ತಿದ್ದ ಕಾಂಗ್ರೆಸ್ಸಿಗರೇ, ಕೇಂದ್ರ ಈ ತೀರ್ಮಾನಕ್ಕೆ ಈಗೇನು ಹೇಳುತ್ತೀರಿ? ಕೇಂದ್ರದಲ್ಲಿ ನಿಮ್ಮ ಸರ್ಕಾರವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರವಿದ್ದ ವೇಳೆ ಇಂತಹ ವಿಶಾಲ ಮನಸ್ಥಿತಿಯನ್ನು ಪ್ರದರ್ಶಿಸಿದ್ದಿರೇ? ನಾಚಿಕೆಯಾಗಬೇಕು ನಿಮ್ಮ ಮನಸ್ಥಿತಿಗೆ.
– ಎಸ್.ಆರ್ ಅನಿರುದ್ಧ ವಸಿಷ್ಠ,ಭದ್ರಾವತಿ
ಬನ್ನಿ, ಕರ್ನಾಟಕದಲ್ಲಿ ಬಂಡವಾಳ ಹೂಡಿ: ರಾಜ್ಯದ ಪರವಾಗಿ ಉದ್ಯಮಿಗಳ ಕರೆ…
ಎಷ್ಟಾದರೂ ಭೂಮಿ ಕೊಡಲು ಸಿದ್ಧರಿದ್ದೇವೆ: ಸಿದ್ಧರಾಮಯ್ಯ…
ಇದು ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಆಯೋಜಿಸಿರುವ ಇನ್ವಸ್ಟ್ ಕರ್ನಾಟಕ ಸಮಾವೇಶದ ಪ್ರಮುಖ ನುಡಿಮುತ್ತುಗಳು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದ್ದು, ಇದರಲ್ಲಿ ಪಾಲ್ಗೊಂಡ ಗಣ್ಯೋದ್ಯಮಿಗಳು ರಾಜ್ಯದ ಹಲವೆಡೆ ವಿವಿಧ ರೀತಿಯಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದು, ಮೊದಲ ದಿನವೇ ಈ ಕುರಿತ ೯೫ ಸಾವಿರ ಕೋಟಿ ಹೂಡಿಕೆಯ ೧೦೦ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.ದೇಶದ ಉದ್ಯಮ ಕ್ಷೇತ್ರದಲ್ಲಿ ದಿಗ್ಗಜರು ನಿನ್ನೆಯ ವೇದಿಕೆಯಲ್ಲಿ ಉಪಸ್ಥಿತರಿದ್ದು, ಇವರಿಗೆಲ್ಲಾ ರಾಜ್ಯ ಕಾಂಗ್ರೆಸ್ ಸರ್ಕಾರ ಕೆಂಪು ಹಾಸು ಹಾಕಿ ಬರಮಾಡಿಕೊಂಡಿದೆ. ಈ ಮೂಲಕ ಸಮಾಜವಾದ ಹಾಗೂ ಬಡವರ ಪರ ಮಾತನಾಡುವ ರಾಜ್ಯ ಕಾಂಗ್ರೆಸ್ ಸರ್ಕಾರ, ಬಂಡವಾಳಶಾಹಿಗಳಿಗೆ ಮಣೆ ಹಾಕಿದೆ!!
ಹೌದು, ತಮ್ಮದು ಬಡವರ ಪರ ಸರ್ಕಾರ, ಅಹಿಂದ ಪರವಾಗಿಯೇ ನಮ್ಮ ಯೋಜನೆಗಳು, ದೀನ ದ..ರ ಅಭಿವೃದ್ಧಿಯೇ ನಮ್ಮ ಗುರಿ. ಆದರೆ, ಬಿಜೆಪಿ ಹಾಗೂ ನರೇಂದ್ರ ಮೋದಿ ಕಾರ್ಪೊರೇಟ್ ಸಂಸ್ಕೃತಿಯವರು. ಮೋದಿ ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಿದ್ದಾರೆ. ದೇಶದ ಬಡ ರೈತನಿಂದ ಹಿಡಿದು, ಜನ ಸಾಮಾನ್ಯರ ಹಿತವನ್ನು ಕಡೆಗಣಿಸಿರುವ ಮೋದಿ, ಉದ್ಯಮಿಗಳಿಗೆ ಹಾಗೂ ಬಂಡವಾಳಶಾಹಿಗಳಿಗೆ ರತ್ನಗಂಬಳಿ ಹಾಸುವ ಮೂಲಕ ದೇಶವನ್ನು ಮಾರಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಯುವರಾಜ ರಾಹುಲ್ಗಾಂಧಿಯಿಂದ ಮೊದಲ್ಗೊಂಡು, ಕಾಂಗ್ರೆಸ್ನ ಕೆಲ ಹಂತದ ಕಾರ್ಯಕರ್ತನವರೆಗೂ ಹೀಗಳೆದಿದ್ದರು.ಅದರಲ್ಲೂ ಪ್ರಮುಖವಾಗಿ, ಭೂಸ್ವಾಧೀನ ತಿದ್ದುಪಡಿ ಕಾಯ್ದೆಯ ವಿಚಾರದಲ್ಲಿ ಮಾತನಾಡಿದ್ದ ಕಾಂಗ್ರೆಸ್ ಮುಖಂಡರು, ಬುಜೀಗಳೂ ಹಾಗೂ ಪ್ರಪಗಳು, ಮೋದಿ ಉದ್ಯಮಿಗಳ ಪರ. ಬಡ ರೈತರ ಜಮೀನನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ನೀಡುತ್ತಾರೆ. ಉದ್ಯಮಿಗಳಿಗೆ ಸಹಕಾರಿಯಾಗಲೆಂದೇ ಭೂಸ್ವಾಧೀಯ ಕಾಯ್ದೆ ತಂದಿದ್ದಾರೆ. ಬಂಡವಾಳಶಾಹಿಗಳಿಗೆ ರತ್ನಗಂಬಳಿ ಹಾಸುತ್ತಿರುವ ಮೋದಿ, ದೇಶವನ್ನು ಮಾರಲು ಹೊರಟಿದ್ದಾರೆ. ವಸಹಾತುಶಾಹಿ ನೀತಿಯಿಂದ ಭಾರತ ತತ್ತರಿಸಿ ಹೋಗಲಿದೆ. ಇದಕ್ಕೆಲ್ಲಾ ಮೋದಿ ನಾಂದಿ ಹಾಡಿದ್ದು, ಚುನಾವಣೆಯಲ್ಲಿ ಗೆಲ್ಲಲು ಸಹಕರಿಸಿದ ಉದ್ಯಮಿಗಳ ಋಣವನ್ನು ಮೋದಿ ತೀರಿಸುತ್ತಿದ್ಧಾರೆ ಎಂದೆಲ್ಲಾ ನಾಲಿಗೆ ಹರಿಬಿಟ್ಟಿದ್ದರು.ಹಾಗೆ ಅಷ್ಟೆಲ್ಲಾ ಮಾತನಾಡಿದ್ದ ಮಹಾನ್ ವ್ಯಕ್ತಿ(?)ಗಳ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಸೇರಿದ್ದಾರೆ.
ಅಂದು ಮೋದಿ ಬಂಡವಾಳಶಾಹಿ ಎಂದು ಮೂದಲಿಸಿದ್ದ ಸಿದ್ಧರಾಮಯ್ಯ, ಈಗ ಅದಾವ ಮುಖ ಇಟ್ಟಕೊಂಡು ಉದ್ಯಮಿಗಳಿಗೆ ಕೆಂಪು ಹಾಸು ಹಾಸಿದ್ದಾರೆ? ನಮ್ಮದು ಬಡವರ ಪರ ಸರ್ಕಾರ, ಉದ್ಯಮಿಗಳ ಅಡಿಯಾಳಲ್ಲ ಎಂದು ಹೇಳಿದ್ದ ನಿಮಗೆ ಇನ್ವೆಸ್ಟ್ ಕರ್ನಾಟಕ ಸಮಾವೇಶ ಮಾಡುವ ಅನಿವಾರ್ಯತೆಯೇಕೆ? ನೀವು ನಂಬಿದ ತತ್ವ ಸಿದ್ಧಾಂತ(?)ಗಳನ್ನು ಗಾಳಿಗೆ ತೂರಿ ಉದ್ಯಮಿಗಳನ್ನು ರಾಜ್ಯಕ್ಕೆ ಆಹ್ವಾನಿಸಿ, ಒಪ್ಪಂದ ಮಾಡಿಕೊಂಡಿದ್ದೀರಿ ಎಂದರೆ ನಿಮ್ಮ ಹಾಗೂ ನಿಮ್ಮ ಪಕ್ಷ ಗೋಸುಂಬೆ ರೀತಿಯಲ್ಲಿ ಬಣ್ಣ ಬದಲಾಯಿಸುತ್ತಿದೆ ಎಂದೇ ಅರ್ಥ.ಇರಲಿ.ಸ್ವಾಮಿ ಸಿದ್ಧರಾಮಯ್ಯನವರೇ. ಭಾರತ ಅಭಿವೃದ್ಧಿ ಶೀಲ ರಾಷ್ಟ್ರ. ಇಲ್ಲಿ ಯಾವುದೇ ರೀತಿಯ ಅಭಿವೃದ್ಧಿಯಾಗಬೇಕಾದರೆ, ದೊಡ್ಡ ಮಟ್ಟದ ಹೂಡಿಕೆ ಅನಿವಾರ್ಯವಾಗಿದೆ. ಹಿಂದೆ ತಾವು ಮೋದಿಯವರನ್ನು ಟೀಕಿಸಿದ್ದಿರಲ್ಲ, ಒಮ್ಮೆ ಯೋಚಿಸಿ. ಬಂಡವಾಳಶಾಹಿಗಳಿಗೆ ಆಮಟ್ಟಿನ ಮಣೆ ಹಾಕಿ ಮೋದಿ ಆಹ್ವಾನಿಸಬೇಕಾದರೆ, ಸರ್ಕಾರಕ್ಕೆ ಹೂಡಿಕೆಯ ಅನಿವಾರ್ಯತೆ ಎಷ್ಟಿದೆ? ಈ ಅನಿವಾರ್ಯತೆ ಸೃಷ್ಠಿಯಾಗಲು ನಿಮ್ಮ ಯುಪಿಎ ಸರ್ಕಾರದ ಅನೀತಿಗಳು ಹೇಗೆ ಕಾರಣವಾದವು ಎನ್ನುವುದನ್ನು ಒಮ್ಮೆ ಯೋಚಿಸಿ.
ಒಂದು ಮೋದಿ ಅಂಬಾನಿ, ಅದಾನಿಯಂತಹ ಉದ್ಯಮಿಗಳ ಪರ. ಮೋದಿ-ಅದಾನಿ ದೇಶವನ್ನು ಮಾರಲು ಹೊರಟಿದ್ದಾರೆ ಎಂದು ನೀವು ಮೂದಲಲಿಸಿದ್ದ ಅದಾನಿ ೧೫,೫೦೦ ಕೋಟಿ ಹೂಡಿಕೆ ಮಾಡಲು ಒಪ್ಪಿದ್ದಾರೆ. ಅಂದರೆ, ಅಂದು ನೀವು ತೆಗಳಿದ್ದ ಬಂಡವಾಳಶಾಹಿಯೇ ಇಂದು ನಮ್ಮ ಸಹಕಾರಕ್ಕೆ ಬೇಕಾಗಿದ್ದಾರೆ ಎಂದಾಯಿತು.ತಾವೂ ಸಹ ಇನ್ವೆಸ್ಟ್ ಕರ್ನಾಟಕ ಸಮಾವೇಶ ನಡೆಸಿ ಬಂಡವಾಳ ಹೂಡಿಕೆಯಾಗುವಂತೆ ಮಾಡಬೇಕಾದ್ದು ಅನಿವಾರ್ಯವೇ ಹೌದು. ರಾಜ್ಯ ಅಭಿವೃದ್ಧಿಗಾಗಿ ಬಂಡವಾಳ ಹೂಡಿಕೆ ಅನಿವಾರ್ಯವೆನ್ನುವುದು ಒಪ್ಪಲೇ ಬೇಕಾದ ಸತ್ಯ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಇಂದಿನ ಕಾಲಮಾನದಲ್ಲಿ ಅಭಿವೃದ್ಧಿಗಾಗಿ ಬಂಡವಾಳ ಹೂಡಿಕೆ ಎನ್ನುವುದು ಆನಿವಾರ್ಯ. ಇಲ್ಲದೇ ಹೋದಲ್ಲಿ , ಆಭಿವೃದ್ಧಿ ಕುಂಠಿತವಾಗಿ, ಉದ್ಯೋಗ ಸೃಷ್ಠಿಯೂ ಕಡಿಮೆಯಾಗುತ್ತದೆ. ಇದು ನೇರವಾಗಿ ರಾಜ್ಯ ಹಾಗೂ ರಾಷ್ಟ್ರದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.ಹೀಗಾಗಿ, ಇನ್ನಾದರೂ ತಥಾಕತಿಥ ಮನಸ್ಥಿತಿಯಿಂದ ಹೊರಬಂದು, ಅನಾವಶ್ಯಕವಾಗಿ ಪ್ರಧಾನಿ ಮೋದಿಯವರನ್ನು ಟೀಕಿಸುವುದನ್ನು ಬಿಡಿ. ಬಿಡಲು ಸಾಧ್ಯವಿಲ್ಲದೇ ಇದ್ದ ಪಕ್ಷದಲ್ಲಿ, ಮೋದಿಯವರ ಹಾದಿಯಲ್ಲೇ ಪರೋಕ್ಷವಾಗಿ ಸಾಗುವುದನ್ನೂ ಬಿಡಿ.
ಇನ್ವೆಸ್ಟ್ ಕರ್ನಾಟಕ ಮೇಕ್ ಇನ್ ಇಂಡಿಯಾ ಎಫೆಕ್ಟ್
ಮೋದಿ ಪ್ರಧಾನಿಯಾದ ನಂತರ ಕರೆ ನೀಡಿರುವ ಮೇಕ್ ಇಂಡಿಯಾ, ದೇಶ ವಿದೇಶಗಳಲ್ಲೂ ಸದ್ದುಮಾಡಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಬುಜೀ ಹಾಗೂ ಪ್ರಪಗಳು ಮೇಕ್ ಇಂಡಿಯಾವನ್ನು ಟೀಕಿಸಿ, ಇದರಿಂದ ವಸಹಾತುಶಾಹಿ ನೀತಿ ಮತ್ತೆ ಭಾರತಕ್ಕೆ ಬರುತ್ತದೆ. ಇದರಿಂದ ದೇಶವನ್ನು ಮತ್ತೆ ದಾಸ್ಯಕ್ಕೆ ದೂಡಲಾಗುತ್ತದೆ ಎಂದೆಲ್ಲಾ ಮೂದಲಿಸಿದರು.ಆದರೆ, ಇಂದು ಇನ್ವೆಸ್ಟ್ ಕರ್ನಾಟಕ ನಡೆಸಿ ಹಲವು ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆ ರಾಜ್ಯದಲ್ಲಾಗುವ ನಿರೀಕ್ಷೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮೇಕ್ ಇನ್ ಇಂಡಿಯಾ ಕಾರಣ. ದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಅಭಿವೃದ್ಧಿಗೆ ಮೋದಿ ನಾಂದಿ ಹಾಡಿದ ನಂತರ, ದೇಶದ ಉದ್ಯಮಿಗಳು ದೇಶದಲ್ಲೇ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ ಎನ್ನುವುದು ವಾಸ್ತವ ಸತ್ಯ.
ರಾಜ್ಯದಲ್ಲಿ ಬಂಡವಾಳಶಾಹಿಗಳು ಹೂಡಿಕೆ
ಬಂಡವಾಳಶಾಹಿಗಳು ದೇಶವನ್ನು ಕೊಳ್ಳೆಹೊಡೆಯುತ್ತಾರೆ ಎಂದು ಅಬ್ಬರಿಸುತ್ತಿದ್ದ ಕಾಂಗ್ರೆಸ್ಸಿಗರ ಸರ್ಕಾರವಿರುವ ರಾಜ್ಯದಲ್ಲಿ ಇನ್ವೆಸ್ಟ್ ಕರ್ನಾಟಕದಿಂದ ಬಂಡವಾಳ ಹರಿದುಬಂದಿದೆ. ಇದಕ್ಕೆ, ಜಿಂದಾಲ್ನಿಂದ ೩೫ ಸಾವಿರ ಕೋಟಿ ಹೂಡಿಕೆ, ಅದಾನಿಯಿಂದ ೧೫,೫೦೦ ಕೋಟಿ ಹೂಡಿಕೆ, ಬಾಷ್ನಿಂದ ೨ ಸಾವಿರ ಕೋಟಿ, ಬಿರ್ಲಾದಿಂದ ೨ ಸಾವಿರ ಕೋಟಿ ಸೇರಿದಂತೆ ಒಟ್ಟು ೯೫ ಸಾವಿರ ಕೋಟಿ ಹೂಡಿಕೆಯಾಗಿದ್ದು, ೪೫ ಲಕ್ಷ ಕೋಟಿ ಆರ್ಥಿಕತೆಯ ಗುರಿ ಹೊಂದಲಾಗಿದೆ.
ಭೂಮಿ ಹೇಗೆ ಕೊಡುತ್ತೀರಿ ಸಿದ್ಧರಾಮಯ್ಯನವರೇ?
ಭೂಸ್ವಾಧೀನ ಕಾಯ್ದೆಯ ಮೂಲಕ ಅಭಿವೃದ್ಧಿ ನಾಂದಿ ಹಾಡುವ ವೇಳೆ ಮೋದಿ ರೈತರ ಜಮೀನನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಮಾರುತ್ತಿದ್ದಾರೆ ಎಂದಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ, ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹೂಡಿಕೆಗೆ ಎಷ್ಟು ಬೇಕಾದರೂ ಭೂಮಿ ನೀಡುತ್ತೇವೆ ಎಂದಿದ್ದೀರಲ್ಲ, ಅದು ಹೇಗೆ ಭೂಮಿ ನೀಡುತ್ತೀರಿ. ಉದ್ಯಮಿಗಳಿಗೆ ಮೋದಿ ಭೂಮಿ ನೀಡಿದರೆ ಅದು ವ್ಯಾಪಾರ, ನೀವು ನೀಡಿದರೆ ಮಾತ್ರ ಅಭಿವೃದ್ಧಿ ಅಲ್ಲವೇ? ನಿಮ್ಮ ಪಕ್ಷ ಮೊದಲಿನಿಂದಲೂ ಒಡೆದಾಳುವ ನೀತಿಯನ್ನೇ ಅನುಸರಿಸುತ್ತಿತ್ತು. ಅದು ಈಗ ಮತ್ತೆ ಜಗಜ್ಜಾಹೀರಾಗಿ, ಬಂಡವಾಳಶಾಹಿಗಳ ವಿಚಾರದಲ್ಲಿ ನಿಮ್ಮ ದ್ವಂಧ್ವ ನೀತಿಯೂ ಬಟಾಬಯಲಾಗಿದೆ.
ಸಿದ್ಧರಾಮಯ್ಯನವರಿಗೆ ತಮ್ಮ ಜೀವಿತಾವಧಿಯಲ್ಲಿ ಮುಖ್ಯಮಂತ್ರಿಯಾಗಬೇಕೆಂಬ ಒಂದೇ ಒಂದು ಮಹದಾಸೆ ಇದ್ದಿತಾದ್ದರಿಂದ, ಅದು ಈಗ ನೆರವೇರಿರುವುದರಿಂದ ಮಾತಾಡಲು, ಆಡಳಿತ ನಡೆಸಲು ಅವರಲ್ಲಿ ಯಾವ ಆಸಕ್ತಿಯೂ ಉಳಿದಿಲ್ಲ. ಅವರನ್ನು ಅವರ ಪಾಡಿಗೆ ನಿದ್ದೆ ಮಾಡಲು ಬಿಟ್ಟುಬಿಟ್ಟರೆ ಸಾಕಾಗಿದೆ.
“ನಿಮ್ಮ ಪಕ್ಷ ಮೊದಲಿನಿಂದಲೂ ಒಡೆದಾಳುವ ನೀತಿಯನ್ನೇ ಅನುಸರಿಸುತ್ತಿತ್ತು ” ಮುಂತಾಗಿ ಬರೆದು ಸಿದ್ಧರಾಮಯ್ಯನವರ ಪಕ್ಷ ಮೊದಲಿನಿಂದಲೂ ಮಾಡಿದ್ದನ್ನು ಮೋದಿಯವರು ಈಗ ಮಾಡುತ್ತಿದ್ದಾರೆ, ಸಿದ್ಧರಾಮಯ್ಯನವರ ಪಕ್ಷಕ್ಕಿಂತ ಮೋದಿಯವರು ಬಿನ್ನವಾಗಿಲ್ಲ ಎಂದು ಲೇಖನದಲ್ಲಿ ಚೆನ್ನಾಗಿ ತಿಳಿಸಿದ್ದಾರೆ