ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 15, 2016

3

ಸುಳ್ಸುದ್ದಿ : ಭಯೋತ್ಪಾದಕಿಯನ್ನು ವರಿಸಲಿರುವ ರಾಷ್ಟ್ರೀಯ ಪಕ್ಷದ ಉಪಾಧ್ಯಕ್ಷ!

‍ನಿಲುಮೆ ಮೂಲಕ

– ಪ್ರವೀಣ್ ಕುಮಾರ್ ಮಾವಿನಕಾಡು

Nilume Sulsuddi - Terro Supporting Politicsಕಳೆದ ಹಲವು ದಶಕಗಳಿಂದ ಭಾರತದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎನಿಸಿಕೊಂಡಿದ್ದ ರಾಷ್ಟ್ರೀಯ ಪಕ್ಷದ ಉಪಾಧ್ಯಕ್ಷರೊಬ್ಬರು ಭಯೊತ್ಪಾದಕಿಯೊಬ್ಬಳನ್ನು ವಿವಾಹವಾಗಲಿರುವುದಾಗಿ ಆ ಪಕ್ಷದ ಹಿರಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಇತ್ತೀಚಿಗೆ ಪಕ್ಷ ಕೈಗೊಂಡ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಭಯೋತ್ಪಾದಕರು ಅಥವಾ ಭಯೋತ್ಪಾದಕರ ಬೆಂಬಲಿಗರು ಸುಮಾರು 15 ರಿಂದ 20 ಪ್ರತಿಶತ ಇದ್ದು,ಅವರೆಲ್ಲರೂ ಈ ಮೊದಲು ನಮ್ಮ ಪಕ್ಷದ ಖಾಯಂ ಮತದಾರರಾಗಿದ್ದರು,ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಪಕ್ಷದಂತೆಯೇ ಹಲವು ಮೂಲಭೂತವಾದೀ ಪಕ್ಷಗಳು ಉದಯಿಸಿದ್ದು, ಇನ್ನು ಕೆಲವು ಪಕ್ಷಗಳು ವೋಟಿಗಾಗಿ ತಮ್ಮ ತತ್ವ-ಸಿದ್ದಾಂತ ಗಳನ್ನು ಬದಲಾಯಿಸಿಕೊಂಡಿದ್ದು,ಇದರಿಂದಾಗಿ ಭಯೋತ್ಪಾದಕರ ಓಟಿಗಾಗಿ ದೇಶದಲ್ಲಿ ತೀವ್ರ ಸ್ಪರ್ದೆ ಏರ್ಪಟ್ಟಿದೆ.ಆದ ಕಾರಣ ಆಂಧ್ರ,ಪಶ್ಚಿಮ ಬಂಗಾಳ,ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿರುವ ನಮ್ಮ ಸಾಂಪ್ರದಾಯಿಕ ಭಯೋತ್ಪಾದಕರ ಮತಗಳನ್ನು ಮತ್ತೆ ಬುಟ್ಟಿಗೆ ಹಾಕಿಕೊಳ್ಳುವ ದೃಷ್ಠಿಯಿಂದಾಗಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಕಳೆದ ತಿಂಗಳು ಹೈದರಾಬಾದ್ ನಲ್ಲಿ ಬಾಂಬ್ ಇಟ್ಟಿದ್ದ ಯಾಕೂಬ್ ಮೆಮನ್ ಎನ್ನುವ ಉಗ್ರವಾದಿಯ ಬೆಂಬಲಿಗರ ಪರವಾಗಿ ಹೋರಾಟ ನಡೆಸಿದ ಆ ಯುವರಾಜನಿಗೆ ಸಿಕ್ಕ ಅಭೂತಪೂರ್ವ ಬೆಂಬಲವನ್ನು ಕಂಡು ಪುಳಕಗೊಂಡ ಪಕ್ಷದಿಂದ ನೇಮಿಸಲ್ಪಟ್ಟ ಹಲವು ಸಲಹೆಗಾರರು,ಆತನ ತಾಯಿಯೂ ಆದ ಪಕ್ಷದ ಅಧ್ಯಕ್ಷೆಯ ಮುಂದೆ ಈ ರೀತಿಯ ಸಲಹೆಯನ್ನಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.ನಂತರ ಪಕ್ಷಾಧ್ಯಕ್ಷೆ ಈ ಬಗ್ಗೆ ಸಕಾರಾತ್ಮಕ  ತೀರ್ಮಾನವನ್ನು ಕೈಗೊಂಡು ಪಕ್ಷದ ನೀತಿ ನಿರೂಪಣಾ ಸಮಿತಿಯ ಮುಂದೆ ಮಂಡಿಸಿದ್ದು, ಸಮಿತಿ ತನ್ನ ಸರ್ವಾನುಮತದ ಒಪ್ಪಿಗೆ ಸೂಚಿಸಿದ ಬಳಿಕ ಪಕ್ಷ ಈ ಕುರಿತು ಅಂತಿಮ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.

ಇದೇ ವೇಳೆ ತಾನು ಈ ದೇಶದ ಪ್ರಧಾನಿಯಾಗಲು ಜೀವಮಾನದಲ್ಲಿ ಸಾಧ್ಯವಿಲ್ಲ ಎನ್ನುವ ಮಾಹಿತಿಯನ್ನೂ ಸಹಾ ತನ್ನ ಗುಪ್ತಚರ ಮೂಲಗಳಿಂದ ಸಂಗ್ರಹಿಸಿದ್ದು,ಒಂದು ವೇಳೆ ಭಾರತದ ಪ್ರಧಾನಿಯಾಗಲು ಸಾಧ್ಯವಾಗದಿದ್ದರೆ ಅದಕ್ಕೆ ಪರ್ಯಾಯವಾಗಿ ಪಾಕೀಸ್ತಾನದ ಪ್ರಧಾನಿಯಾದರೂ ಆಗಲೇ ಬೇಕೆಂದು ನಿರ್ಧರಿಸಿರುವ ಆ ಯುವರಾಜ ಬಹಳ ದಿನಗಳ ಹಿಂದೆಯೇ ಆ ದೇಶಕ್ಕೆ ತನ್ನ ಪಕ್ಷದ ಕೆಲ ಹಿರಿಯ ನಾಯಕರನ್ನು ಕಳಿಸಿದ್ದು,ಅವರುಗಳು ಆ ದೇಶದ ಮಿಲಿಟರಿ ಮತ್ತು ಜಿಹಾದಿ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ಆ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಪಾಕೀಸ್ತಾನೀ ಭಯೋತ್ಪಾದಕಿಯನ್ನು ಮದುವೆಯಾಗುವುದರಿಂದ ಆ ದೇಶದ ಪೌರತ್ವವನ್ನು ಆದಷ್ಟೂ ಶೀಘ್ರವಾಗಿ ಪಡೆಯಲು ಮತ್ತು ಅಲ್ಲಿನ ಚುನಾವಣೆಗಳಲ್ಲಿ ಸ್ಪರ್ಧಿಸಲು ನಮ್ಮ ಯುವನಾಯಕನಿಗೆ ಅನುಕೂಲವಾಗಲಿದೆ ಎಂದು ಹೆಸರು ಹೇಳಲಿಚ್ಚಿಸದ ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಯುವರಾಜ, ಈ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಪಾದಕರಲ್ಲಿ ನೈತಿಕ ಸ್ಥೈರ್ಯ ತುಂಬಲು ನಾನು ಭಯೊತ್ಪಾದಕಿಯೊಬ್ಬಳನ್ನು ಮದುವೆಯಾಗಲು ನಿರ್ಧರಿಸಿದ್ದು, ನಾನೊಬ್ಬ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರ ಪರ ಬಕೆಟ್ ಹಿಡಿದಿದ್ದ ಕುಟುಂಬದಿಂದ ಬಂದವನಾಗಿದ್ದು ನಾನು ಮತ್ತು ನನ್ನ ಪಕ್ಷ ಎಂದೆಂದಿಗೂ ದೇಶವಿರೋಧಿಗಳನ್ನು ಸ್ವಾಂತಂತ್ರ್ಯ ಹೋರಾಟಗಾರರೆಂದೇ ಪರಿಗಣಿಸುತ್ತೇವೆ.ನಮ್ಮ ಪಕ್ಷದ ಕೋಟ್ಯಂತರ ಕಾರ್ಯಕರ್ತರುಗಳು ಭಯೋತ್ಪಾದಕ ಬಂಧುಗಳ ಬೆಂಬಲಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.ನಮ್ಮ ಪಕ್ಷದ ಈ ಪವಿತ್ರ ಕಾರ್ಯಕ್ಕೆ ಯಾವೊಬ್ಬ ಕಾರ್ಯಕರ್ತನ ವಿರೋಧವೂ ಇಲ್ಲ.ಆದ್ದರಿಂದ ಭಯೋತ್ಪಾದಕರು ನಿಶ್ಚಿಂತೆಯಿಂದ ತಮ್ಮ ಕಾರ್ಯಗಳನ್ನು ಮುಂದುವರಿಸಬಹುದು ಎಂದು ಹೇಳಿದರು.ಇದೇ ಸಮಯದಲ್ಲಿ, ನಿಮ್ಮ ತಂದೆ ಮತ್ತು ನಿಮ್ಮ ಅಜ್ಜಿಯನ್ನು ಕೊಂದವರನ್ನೂ ಸ್ವಾತಂತ್ರ್ಯ ಹೋರಾಟಗಾರರೆಂದೇ ಪರಿಗಣಿಸುತ್ತೀರಾ ಎಂದು ಕೇಳಿದ ಪತ್ರಕರ್ತರ ವಿರುದ್ಧ ಆ ವರಮಹಾಶಯ ಕೆಂಡಾಮಂಡಲವಾದ ಪ್ರಸಂಗವೂ ನಡೆಯಿತು!

ಸುಳ್ಸುದ್ದಿ ವಾಹಿನಿಗೆ ತಿಳಿದುಬಂದ ಮಾಹಿತಿಗಳ ಪ್ರಕಾರ ಯುವ ನಾಯಕನನ್ನು ವರಿಸಲಿರುವ ವಧು ಪಾಕೀಸ್ತಾನೀ ಸಂಜಾತೆಯಾಗಿದ್ದು ಇರಾಕ್ ಮತ್ತು ಸಿರಿಯಾ ದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಸದ್ಯ ಭಾರತದಲ್ಲಿ ಸೆಲ್ಫಿ ಬಾಂಬರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ. ಹಾಗೆಯೇ ವಿವಾಹವು ಅತ್ಯಂತ ಸರಳವಾಗಿ “ಜಿಹಾದೀ ನಕ್ಸಲ್ ಯೂನಿವರ್ಸಿಟಿ (JNU)” ಆವರಣದಲ್ಲಿ ನಡೆಯಲಿದ್ದು,”ಹರ್ ಘರ್ ಮೇ ಯಾಕೂಬ್ ಪೈದಾ ಹೋಂಗೇ,ಅಫ್ಜಲ್ ಗುರು ಅಮರ್ ರಹೇ,ಪಾಕಿಸ್ತಾನ್ ಜಿಂದಾಬಾದ್,ಭಾರತ ಕಾ ನಾಶ್ ಕರಕೇ ದೇಂಗೇ’ ಅನ್ನುವ ಮಂತ್ರಘೋಷಗಳು ಮೊಳಗಲಿವೆ. ಈ ವಿಶಿಷ್ಟ ವಿವಾಹ ಸಮಾರಂಭದಲ್ಲಿ ಲಷ್ಕರ್-ಇ-ತೊಯ್ಬಾ,ಅಲ್ ಖೈದಾ,ಹಾಗೂ ಐ ಎಸ್ ಐ ಎಸ್ ನ ಹಲವು ಮುಖಂಡರಲ್ಲದೇ ಜಮ್ಮು ಕಾಶ್ಮೀರದ ಹಲವು ಪ್ರತ್ಯೇಕತಾವಾದೀ ಮುಖಂಡರು ಹಾಗೂ ದೇಶದ ಹಲವು ಬುದ್ಧಿಜೀವಿಗಳು,ವಿಚಾರವಾದಿಗಳು,ಪ್ರೊಫೆಸರ್ ಗಳು ಮತ್ತು ಹಲವು ಪ್ರಗತಿಪರ ಪತ್ರಕರ್ತರುಗಳು ಹಾಜರಿದ್ದು ನೂತನ ವಧೂ-ವರರನ್ನು ಹಾರೈಸಲಿದ್ದಾರೆ.

*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು ಕೇವಲ ಮನರಂಜನೆಗಾಗಿ ಮಾತ್ರ.ಈ ಸುಳ್ಸುದ್ದಿಯು ಇತ್ತೀಚಿಗೆ ಕೇವಲ ತಮ್ಮ ವೋಟ್ ಬ್ಯಾಂಕ್ ಗಾಗಿ ದೇಶದ್ರೋಹಿಗಳನ್ನು ಬಹಿರಂಗವಾಗಿ ಬೆಂಬಲಿಸುತ್ತಿರುವ ಕೆಲವು ರಾಜಕಾರಣಿಗಳನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಹಾಗೊಂದು ವೇಳೆ ಈ ಸುಳ್ಸುದ್ದಿಯಲ್ಲಿ ಯಾವುದಾದರೂ ವ್ಯಕ್ತಿಯ ಹೋಲಿಕೆ ಕಂಡು ಬಂದರೆ ಅಂಥಹಾ ವ್ಯಕ್ತಿಗಳನ್ನು ಕೂಡಲೇ ದೇಶದ್ರೋಹದ ಆರೋಪ ಹೊರಿಸಿ ಬಂಧಿಸಿ ಸೂಕ್ತ ತನಿಖೆ ನಡೆಸಿ ನಂತರ ಆದಷ್ಟೂ ಶೀಘ್ರದಲ್ಲಿ ನೇಣಿಗೇರಿಸಬೇಕೆಂದು ಘನ ಸರ್ಕಾರ ಮತ್ತು ನ್ಯಾಯಾಲಯಕ್ಕೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.

ಚಿತ್ರ ಕೃಪೆ:djwoodymusic.bandcamp.com

3 ಟಿಪ್ಪಣಿಗಳು Post a comment
 1. ಫೆಬ್ರ 15 2016

  supeeeeeer

  ಉತ್ತರ
 2. WITIAN
  ಫೆಬ್ರ 19 2016

  ಆಕೆಯ ಹೆಸರು ‘ಮಿಯಾ ಖಲೀಫಾ’ ಎಂದು ನಂಬಲರ್ಹ ಸುದ್ಧಿ ಮೂಲಗಳಿಂದ ತಿಳಿದು ಬಂದಿದೆ.

  ಉತ್ತರ
 3. Ckvmurthy
  ಫೆಬ್ರ 20 2016

  Yuvrajana maduvge karntada buddigivigalaada, arulumuddappa, veeresha barunaada, ghousi madesh, chamachaa ,arguru bhdrappa, sarlabai hajriddu shubhakoruthtemba suddi bandide.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments