ಭಾರತದ ಎಡಪಂಥೀಯರು ದೇಶವಿರೋಧದತ್ತೇಕೆ ಸಾಗುತ್ತಾರೆ?
– ವಿನಾಯಕ್ ಹಂಪಿಹೊಳಿ
ಭಾರತದಲ್ಲಿ ಇಂದು ಎಡಪಂಥವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಸರ್ಕಾರದಿಂದ ಎಲ್ಲ ಸವಲತ್ತುಗಳನ್ನು ಪಡೆದರೂ, ಶಿಕ್ಷಣ ಕ್ಷೇತ್ರದ ಎಲ್ಲ ಆಯಕಟ್ಟಿನ ಜಾಗಗಳನ್ನು ಆವರಿಸಿದರೂ, ಸೋಶಿಯಲ್ ಮೀಡಿಯಾ ಹೊರತುಪಡಿಸಿ ಬಹುತೇಕ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಎಡಪಂಥೀಯ ಚಿಂತನೆಯನ್ನೇ ಪ್ರಸಾರ ಮಾಡಿದ್ದರೂ, ಸರ್ಕಾರೀ ಪ್ರಶಸ್ತಿಗಳಲ್ಲಿ ಬಹುತೇಕ ಪಾಲನ್ನು ಎಡಪಂಥೀಯರಿಗೆ ಮೀಸಲಿಟ್ಟಿದ್ದರೂ, ಹಲವಾರು ಜನಪರ ಸರ್ಕಾರೀ ಯೋಜನೆಗಳು ಎಡಪಂಥೀಯ ಚಿಂತನೆಯನ್ನೇ ಅವಲಂಬಿಸಿಕೊಂಡಿದ್ದರೂ ಅದೇಕೋ ಬಹುತೇಕ ಭಾರತೀಯರು ಮಾತ್ರ ಎಡಪಂಥವನ್ನು ಒಪ್ಪಿಕೊಂಡೇ ಇಲ್ಲ.
ಎಡಪಂಥ ಶಬ್ದವು ಫ್ರೆಂಚ್ ಕ್ರಾಂತಿಯ ಅವಧಿಯಲ್ಲಿ ಹುಟ್ಟಿರುವ ಶಬ್ದವಾದರೂ ಕಾಲಕ್ರಮದಲ್ಲಿ, ಸೋಶಿಯಾಲಿಸಂ, ಕಮ್ಯುನಿಸಂ ಮುಂತಾದ ಕಲ್ಪನೆಗಳನ್ನು ಒಳಗೊಳ್ಳುತ್ತ ಹೋಯಿತು. ಸಮಾಜದಿಂದ ಹೆಚ್ಚು ಪ್ರಯೋಜನ ಪಡೆಯಲಾಗದವರ ಕುರಿತು ವಿಶೇಷ ಕಾಳಜಿಯನ್ನು ತೋರಿಸುವದು ಎಡಪಂಥದ ತತ್ತ್ವ. ಬಹುಸಂಖ್ಯಾತ ರಿಲಿಜನ್ನಿನವರಿಂದ ತುಳಿತಕ್ಕೊಳಗಾಗುವ ಅಲ್ಪಸಂಖ್ಯಾತ ರಿಲಿಜನ್ನಿನ ಜನರ ಕುರಿತು ಕಾಳಜಿ ತೋರಿಸುತ್ತದೆ. ಶ್ರೀಮಂತರಿಂದ ಅನ್ಯಾಯಕ್ಕೊಳಗಾದ ಬಡವರ ಪರವಾಗಿ ನಿಲ್ಲುತ್ತದೆ. ಒಟ್ಟಿನಲ್ಲಿ ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಎಂಬ ಆದರ್ಶ ಸ್ಥಾಪಿಸುವದೇ ಇದರ ಉದ್ದೇಶ.
ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗೆ ಕಾರಣವಾಗುವ ಪ್ರತಿಯೊಂದನ್ನೂ ಎಡಪಂಥವು ವಿರೋಧಿಸುತ್ತದೆ. ಬಹುಸಂಖ್ಯಾತರಿರುವ ರಿಲಿಜನ್ನಿನ ಜನರಿಂದ ಅಲ್ಪಸಂಖ್ಯಾತರ ರಿಲಿಜನ್ನಿನ ಜನರಿಗೆ ಸಾಮಾಜಿಕ ಅನ್ಯಾಯಗಳಾಗುವದರಿಂದ ರಿಲಿಜನ್ನುಗಳನ್ನು ವಿರೋಧಿಸುತ್ತದೆ. ಖಾಸಗೀ ಉದ್ಯಮಗಳಿಂದಾಗಿ ಆರ್ಥಿಕ ಸಂಪತ್ತುಗಳು ಉದ್ದಿಮೆದಾದರಲ್ಲಿಯೇ ಕ್ರೋಢೀಕರಣಗೊಳ್ಳುವದರಿಂದ ಖಾಸಗೀಕರಣವನ್ನು ವಿರೋಧಿಸುತ್ತದೆ. ರೈತರು ಬೆಳೆಯುವ ಬೆಳೆಯನ್ನು ಸಂಗ್ರಹಿಸಿಟ್ಟುಕೊಳ್ಳುವ ಜಮೀನುದಾರರನ್ನು ವಿರೋಧಿಸುತ್ತದೆ.
ಪಶ್ಚಿಮದ ದೇಶಗಳಲ್ಲಿ ಎಡಪಂಥವು ಆರ್ಥಿಕವಾಗಿ ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಮಿಸದಿದ್ದರೂ, ಅಲ್ಲಿನ ಸಂವಿಧಾನಗಳು ಸಾಮಾಜಿಕ ಸಮಾನತೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿ, ಸಾಮಾಜಿಕ ಸಮಾನತೆಯು ಆರ್ಥಿಕ ಅಸಮಾನತೆಗೆ ಬಲಿಯಾಗದೇ ಉಳಿಯುವಂತೆ ಪ್ರಯತ್ನಿಸುತ್ತವೆ. ಆದರೆ ಎಡಪಂಥವು ಎಂದಿಗೂ ದೇಶಕ್ಕೆ ವಿರೋಧವಾಗಿ ಚಿಂತಿಸುವದಿಲ್ಲ. ಅದು ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳ ಕಾರಣವನ್ನಷ್ಟೇ ವಿರೋಧಿಸುತ್ತದೆಯೇ ಹೊರತಾಗಿ ದೇಶದ ಅಸ್ತಿತ್ವದ ವಿರುದ್ಧ ಮಾತನಾಡುವದಿಲ್ಲ. ಪೆಟ್ರಿಯೋಟಿಸಂ ಅನ್ನು ಬಿಟ್ಟುಕೊಡುವದಿಲ್ಲ. ದೇಶದ್ರೋಹಿಗಳ ಪರವಾಗಿ ಮಾತಾಡುವದಿಲ್ಲ.
ಎಡಪಂಥವು ರಿಲಿಜನ್ನುಗಳಲ್ಲಿರುವ ಸಾಮಾಜಿಕ ಅಸಮಾನತೆಗೆ ಕಾರಣವಾಗುವ ಪ್ರೀಸ್ಟಹುಡ್ ನಂತಹ ಅಂಶಗಳನ್ನು ಬಲವಾಗಿ ವಿರೋಧಿಸುತ್ತದೆ. “ಜನರು ಸಾಧ್ಯವಾದಷ್ಟೂ ತಾರ್ಕಿಕವಾಗಿ, ವೈಚಾರಿಕವಾಗಿ ಸಿದ್ಧವಾಗುವ ಅಂಶಗಳನ್ನಷ್ಟೇ ಒಪ್ಪಬೇಕು, ಗಾಡ್ ಮುಂತಾದ ಫೇಥ್ ಗಳನ್ನು ಇಟ್ಟುಕೊಳ್ಳಬಾರದು. ಇದ್ದರೂ ಅದು ಖಾಸಗಿಯಾಗಿರಬೇಕು ಎಂಬುದು ಎಡಪಂಥದ ವಿಚಾರ. ಕೆಲವು ಜನರು ತಮ್ಮ ಲಾಭಕ್ಕಾಗಿ ರಿಲಿಜನ್ನನ್ನು ಬಡಜನರ ಮೇಲೆ ಅಫೀಮಂತೆ ಬಳಸುತ್ತಾರೆ. ಆದರೆ ವಾಸ್ತವವಾಗಿ ರಿಲಿಜನ್ನುಗಳು ಸಮಾನತೆ, ಸಹೋದರತೆ ಮತ್ತು ಸ್ವಾತಂತ್ರ್ಯವನ್ನೇ ಬೋಧಿಸುತ್ತವೆ ಮತ್ತು ಬೋಧಿಸಬೇಕು” ಎಂಬುದು ಎಡಪಂಥದ ವಾದ.
ಇನ್ನು ಭಾರತೀಯರ ವಿಷಯಕ್ಕೆ ಬರೋಣ. ಭಾರತದಲ್ಲಿ ಜಾತಿಗಳಿವೆ, ಮತಗಳಿವೆ ಮತ್ತು ಅನೇಕ ಸಂಪ್ರದಾಯಗಳಿವೆ. ಈ ಹಿಂದೆ ಭಾರತದಲ್ಲಿ ಬಹುತೇಕ ಸಂಪ್ರದಾಯಗಳು ತಮ್ಮ ಪರಂಪರಾಗತ ವೃತ್ತಿಯೊಂದನ್ನು ಪಾಲಿಸಿ, ರಕ್ಷಿಸಿ ತಮ್ಮ ಮುಂದಿನ ತಲೆಮಾರಿಗೆ ಹಸ್ತಾಂತರಿಸಿ ಹೋಗುತ್ತಿದ್ದವು. ಅಂಥ ಸಂಪ್ರದಾಯಗಳು ತಮ್ಮ ಕ್ರಿಯಾಜ್ಞಾನವನ್ನು ಸುಲಭವಾಗಿ ಎಲ್ಲರಿಗೂ ಹೇಳಿಕೊಡುತ್ತಿರಲಿಲ್ಲ. ಸಾಧ್ಯವಾದಷ್ಟೂ ಅದನ್ನು ಗುಪ್ತವಾಗಿರಿಸುತ್ತಿದ್ದವು. ಈಗ ಸಾಂಪ್ರದಾಯಿಕ ವೃತ್ತಿಗಳು ಕಡಿಮೆಯಾಗಿವೆ, ಆದರೂ ಜಾತಿಗಳು ಹಾಗೆಯೇ ಮುಂದುವರೆದಿವೆ.
೧೮೫೭ರ ಸಂಗ್ರಾಮದ ನಂತರ ವಸಾಹತುಶಿಕ್ಷಣ ಪಡೆದ ಭಾರತೀಯರು ನಮ್ಮ ದೇಶಕ್ಕೆ ನಮ್ಮದೇ ಆದ ಕಾನೂನುಗಳನ್ನು ಮಾಡಿಕೊಂಡು, ನಮ್ಮದೇ ಸರ್ಕಾರ ನಡೆಸುವ ಸ್ವಾತಂತ್ರ್ಯದ ಅಗತ್ಯತೆಯನ್ನು ಮನಗಂಡರು. ಅದಕ್ಕಾಗಿ ಜನರಲ್ಲಿ ಜನಜಾಗೃತಿ ಮೂಡಿಸಬೇಕಾಯಿತು. ಜನರಲ್ಲಿ ದೇಶಭಕ್ತಿಯನ್ನು ಜಾಗ್ರತಗೊಳಿಸಬೇಕಾಯಿತು. ಇಂಥದೇ ಅಗತ್ಯವು ಕರ್ನಾಟಕ ರಾಜ್ಯವನ್ನು ಕಟ್ಟಬೇಕಾದರೂ ಬಂದೊದಗಿತ್ತು. ಆಗ ನಮ್ಮ ದೇಶದ ಜನರು ಒಂದು ಭೂಕ್ಷೇತ್ರಕ್ಕೆ ನಿಷ್ಠರಾಗಿ, ಅದಕ್ಕಾಗಿ ಹೋರಾಡಲು ಪ್ರೇರೇಪಿಸುವಲ್ಲಿ ಯಾವ ಭಾವನೆಯು ಕೆಲಸ ಮಾಡಿತು?
ನಮ್ಮ ಸಂಪ್ರದಾಯಗಳು ಭೂಮಿಯನ್ನು ತಾಯಿ ಎಂದು ಕರೆಯುತ್ತವೆ. ರೈತನೊಬ್ಬ ತನ್ನ ಭೂಮಿಯನ್ನು ತಾಯಿಯೆಂದು ತಿಳಿಯುತ್ತಾನೆ. ರಾಜನೊಬ್ಬ ತನ್ನ ಆಳ್ವಿಕೆಯಲ್ಲಿರುವ ಭೂಪ್ರದೇಶವನ್ನೂ ತಾಯಿಯೆಂದೇ ತಿಳಿಯುತ್ತಾನೆ. ಅದೇ ಭಾವನೆಯೇ ಇಲ್ಲಿ ಕೆಲಸ ಮಾಡಿತು. ಬಂಕಿಂ ಚಂದ್ರ ಚಟರ್ಜಿ ಬಂಗಾಳದ ದುರ್ಗೆಯನ್ನೇ ಭಾರತ ಮಾತೆಯ ರೂಪದಲ್ಲಿ ಭಾವಿಸಿ ವಂದೇ ಮಾತರಂ ಎಂದು ಹಾಡಿದರು. ಕುವೆಂಪು ಕನ್ನಡ ಭಾಷಿಕರ ಭೂಪ್ರದೇಶವನ್ನೇ ಕರ್ನಾಟಕ ಮಾತೆಯೆಂದು ಭಾವಿಸಿ ನಾಡಗೀತೆ ಬರೆದರು. ಈಗಲೂ ನಾವು ಭುವನೇಶ್ವರಿಯ ಕಲ್ಪನೆಯನ್ನು ಸ್ವಲ್ಪ ಬದಲಾಯಿಸಿಯೇ ತಾನೇ ಕರ್ನಾಟಕ ಮಾತೆ ಎಂದು ಕರೆಯುವದು!!
ನಮ್ಮ ಸಾಹಿತ್ಯದಲ್ಲಿ ರಚಿಸಲ್ಪಡುವ ಬಹುತೇಕ ದೇಶಭಕ್ತಿ, ನಾಡಭಕ್ತಿ ಗೀತೆಗಳು ನಮ್ಮ ದೇಶ ಅಥವಾ ರಾಜ್ಯವನ್ನು ತಾಯಿ ಎಂದೇ ವರ್ಣಿಸುತ್ತವೆ. ಪಾಶ್ಚಿಮಾತ್ಯರ ಪೆಟ್ರಿಯೊಟಿಸಂ ಶಬ್ದವು ಪೆಟ್ರೊಸ್ (ತಂದೆ) ಎಂಬುದರಿಂದ ಹೊರಡುತ್ತದೆ. ಆದರೆ ನಾವು ಭೂಮಿಯನ್ನು ಪರಂಪರಾಗತವಾಗಿ ತಾಯಿ ಎಂದೇ ಕರೆಯುತ್ತ ಬಂದಿದ್ದೇವೆ. ಭಾರತ ಪಿತಾ, ಕರ್ನಾಟಕ ಪಿತಾ ಎಂಬುದು ನಮ್ಮ ಕಲ್ಪನೆಗೂ ಬರುವಂಥದ್ದಲ್ಲ. ಒಂದು ಗುಂಠೆ ಹೊಲದ ಜಾಗದಿಂದ ಹಿಡಿದು ಇಡೀ ಭೂಮಿಯ ತನಕ ಯಾವುದೇ ಪ್ರದೇಶವವನ್ನು ನಾವು ತಾಯಿ ಎಂದು ಕರೆದರಷ್ಟೇ ನಮಗೆ ಅದರ ಜೊತೆ ಭಾವನಾತ್ಮಕ ಸಂಬಂಧವೊಂದು ಹುಟ್ಟಿಕೊಳ್ಳಲು ಸಾಧ್ಯ.
ಈ ಭಾವನೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ, ಸ್ವಾತಂತ್ರ್ಯದ ನಂತರವೂ ಯೋಧರಿಗೆ, ಸೈನಿಕರಿಗೆ ಯುದ್ಧಗಳಲ್ಲಿ ಗೆಲ್ಲುವಂತೆ ಪ್ರೋತ್ಸಾಹಿಸಿದೆ. ಸೈನಿಕರ ತ್ಯಾಗವನ್ನು ಜನರಿಗೆ ಮನದಟ್ಟು ಮಾಡಿಕೊಡುವಲ್ಲಿ ಈ ತಾಯಿ ಎಂಬ ಕಲ್ಪನೆಯು ಹೇರಳವಾಗಿ ವಿನಿಯೋಗವಾಗಿದೆ. ಕನ್ನಡ ನಾಡನ್ನು ಕಟ್ಟುವಲ್ಲಿ ಬಳಸಲ್ಪಟ್ಟಿದೆ. ಒಟ್ಟಿನಲ್ಲಿ ದೇಶವನ್ನು, ರಾಜ್ಯವನ್ನು ತಾಯಿ ಎಂದು ಭಾವಿಸಿ ಪ್ರೀತಿಸುವದು ನಮ್ಮ ಸಂಪ್ರದಾಯದ ಜನರಲ್ಲಿ ಕಂಡು ಬರುವದು ಸಹಜ. ನಮ್ಮ ದೇಶದ ಜನರು ದೇಶಭಕ್ತಿಯನ್ನು ಭಾವಿಸಿಕೊಳ್ಳುವ ವಿಧಾನವೇ ಹೀಗೆ, ದೇಶಕ್ಕಾಗಿ ಪ್ರಚೋದಿತರಾಗುವ ಬಗೆಯೇ ಹೀಗೆ ಎಂದರೊ ತಪ್ಪಿಲ್ಲ. ಹೀಗಾಗಿ ಭಾರತ ಮಾತೆಯ ನಗ್ನ ಚಿತ್ರ ಬಿಡಿಸುವದನ್ನು ನಾವು ವಿಕೃತಿ ಎಂದು ಕರೆಯುತ್ತೇವೆ. ಭಾರತದ ಮೇಲೆ ಪಾಕಿಸ್ತಾನ ದಾಳಿ ಮಾಡಿದಾಗ ನಮ್ಮ ತಾಯಿಯನ್ನು ರಕ್ಷಿಸಿಕೊಳ್ಳುವಾಗ ತೋರಿಸುವ ಆವೇಶವನ್ನೇ ತೋರಿಸುತ್ತೇವೆ.
ಎಡಪಂಥದ ಸಮಸ್ಯೆ ಈಗ ಶುರುವಾಗುತ್ತದೆ. ಮೊದಲನೇಯದಾಗಿ ಈ ಎಡಪಂಥವು ನಮ್ಮ ಸಂಪ್ರದಾಯಗಳನ್ನು ಹಿಂದೂ ರಿಲಿಜನ್ ಎಂಬುದಾಗಿ ಗುರುತಿಸುತ್ತದೆ. ಹಿಂದೂ ರಿಲಿಜನ್ನಿಗೆ ಮನುಸ್ಮೃತಿ, ವೇದಗಳನ್ನು ಡಾಕ್ಟ್ರಿನ್ ಎಂದು ಭಾವಿಸುತ್ತದೆ. ಮತ್ತು ಈ ಡಾಕ್ಟ್ರಿನ್ನುಗಳು ಜಾತಿವ್ಯವಸ್ಥೆಯನ್ನು ಮತ್ತು ಅಸಮಾನತೆಯನ್ನು ಸಾರುವದರಿಂದ ಈ ರಿಲಿಜನ್ನೇ ಅನೈತಿಕವೆಂದು ಪರಿಗಣಿಸುತ್ತದೆ. ಹಾಗೆಯೇ ಬ್ರಾಹ್ಮಣರನ್ನು ಪ್ರೀಸ್ಟ್ ಎಂದು ಗುರುತಿಸುತ್ತದೆ ಮತ್ತು ಈ ಪುರೋಹಿತಶಾಹಿಯೇ ತನ್ನ ಸ್ವಾರ್ಥಕ್ಕಾಗಿ ಇಂಥ ಅಸಮಾನತೆ ಸಾರುವ ಡಾಕ್ಟ್ರಿನ್ನುಗಳನ್ನು ಸೃಷ್ಟಿಸಿಕೊಂಡು ಜನರನ್ನು ಶೋಷಣೆಗೆ ಒಳಪಡಿಸಿದ್ದಾರೆ ಎಂಬುದಾಗಿ ಭಾವಿಸುತ್ತದೆ. ವೇದಗಳನ್ನು ಒಪ್ಪದ ಬೌದ್ಧ ಮತ್ತು ಜೈನರನ್ನು ಹಾಗೂ ಬ್ರಾಹ್ಮಣರನ್ನು ವಿರೋಧಿಸಿದ ಶರಣರನ್ನು ಅಸಮಾನತೆಯ ವಿರೋಧಿಗಳಾದ ಸಾಮಾಜಿಕ ಸುಧಾರಕರೆಂದು ಪರಿಗಣಿಸುತ್ತದೆ.
ಬಹುಸಂಖ್ಯಾತ ಹಿಂದೂ ರಿಲಿಜನ್ನನ್ನೇ ಅನೈತಿಕ ಗೂಡು ಎಂದಾಕ್ಷಣ ಇದೇ ಗೂಡಿನಿಂದ ಬಂದ ಭಾರತ ಮಾತೆ, ವಂದೇ ಮಾತರಂ, ಕನ್ನಡ ತಾಯಿ ಭುವನೇಶ್ವರಿ ಇವೆಲ್ಲವನ್ನೂ ವಿರೋಧಿಸಲೇಬೇಕಾದ ಅನಿವಾರ್ಯತೆಗೆ ಎಡಪಂಥೀಯರು ಸಿಲುಕಿ ಹಾಕಿಕೊಳ್ಳುತ್ತಾರೆ. ಕೇವಲ ನಕಾಶೆ ಮತ್ತು ಬಾವುಟ ನಮ್ಮಲ್ಲಿ ದೇಶಭಕ್ತಿಯನ್ನು ಉಕ್ಕಿಸಲಾರವು. ದೇಶಭಕ್ತಿಯ ಭಾವನೆ ಉಕ್ಕಲು ತಾಯಿಯ ಕಲ್ಪನೆ ಅನಿವಾರ್ಯವಾಗಿದೆ. ಆದರೆ ತಾಯಿ ಎಂಬ ದೈವೀ ಕಲ್ಪನೆಯನ್ನು ಎಡಪಂಥೀಯರು ಒಪ್ಪಿಕೊಳ್ಳಲಾರರು. ಹೀಗಾಗಿ ಎಡಪಂಥೀಯರು ದೇಶದ ಕುರಿತು ನಿರ್ಭಾವುಕರಾಗಿದ್ದಾರೆ ಎಂದೇ ಜನಸಾಮಾನ್ಯರಿಗೆ ಅನಿಸುತ್ತದೆ. ಎಡಪಂಥೀಯರು ಈ ತಾಯಿಯ ಕಲ್ಪನೆಯುಳ್ಳ ದೇಶಭಕ್ತಿಯನ್ನು ಒಪ್ಪಿಕೊಳ್ಳದೇ, ಪರ್ಯಾಯ ಮಾರ್ಗವನ್ನೂ ಕಾಣದೇ, ಬೇಸತ್ತು ಕೊನೆಗೆ “ನಾನೂ ಕೂಡ ದೇಶದ್ರೋಹಿ” ಎಂದೆಲ್ಲ ಹೇಳಿಕೊಳ್ಳುವ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತಾರೆ.
ಇತ್ತೀಚೆಗೆ ಜಗತ್ತಿನಾದ್ಯಂತ ಹೆಚ್ಚುತ್ತಿರುವ ಇಸ್ಲಾಮೀ ಉಗ್ರವಾದವು ನಮ್ಮ ದೇಶವನ್ನು ಬಹುವರ್ಷಗಳಿಂದ ಕಾಡುತ್ತಿದೆ. ಭಾರತಕ್ಕೆ ನಕ್ಸಲಿಸಂ ಮತ್ತು ಮಾವೋಯಿಸಂ ಆಂತರಿಕ ಸಮಸ್ಯೆಗಳಾದರೆ ಇಸ್ಲಾಮಿಕ್ ಉಗ್ರವಾದವು ಪಾಕಿಸ್ತಾನದಿಂದ ಸೃಷ್ಟಿಸಲ್ಪಟ್ಟ ಸಮಸ್ಯೆಯಾಗಿದೆ. “ಇದು ಹಿಂದೂಗಳಲ್ಲಿ ಇಸ್ಲಾಂ ಕುರಿತು ಒಂದು ಅನಪೇಕ್ಷಿತ ಚಿತ್ರಣ ಕಟ್ಟಿಕೊಡುತ್ತದೆ ಮತ್ತು ನಮ್ಮ ದೇಶದಲ್ಲಿ ಇಸ್ಲಾಂ ಅಲ್ಪಸಂಖ್ಯಾತ ರಿಲಿಜನ್ ಆಗಿರುವದರಿಂದ ಈ ಚಿತ್ರಣವು ಇಸ್ಲಾಂ ರಿಲಿಜನ್ನಿನ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಅನ್ಯಾಯಕ್ಕೆ ದಾರಿ ಮಾಡಿಕೊಡುತ್ತದೆ” ಎಂದು ಭಾವಿಸುವ ಎಡಪಂಥಕ್ಕೆ ಆ ಅನ್ಯಾಯದಿಂದ ಅಲ್ಪಸಂಖ್ಯಾತರನ್ನು ರಕ್ಷಿಸುವದು ಜರೂರಾಗುತ್ತದೆ. ಇದನ್ನು ಸಾಧಿಸಲು ದೇಶಕ್ಕೆ ಹೊರಗಿನಿಂದ ಬಂದ ರಿಲಿಜನ್ನುಗಳನ್ನು ಸಮರ್ಥಿಸಿ ಅಲ್ಪಸಂಖ್ಯಾತರನ್ನು ಓಲೈಸುವ, ಮತ್ತು ಮೂಲ ಭಾರತೀಯ ಸಂಪ್ರದಾಯಸ್ಥರನ್ನು ಶೋಷಕರೆಂದು ವಿರೋಧಿಸುವ ಅನಿವಾರ್ಯತೆಗೆ ಸಿಲುಕುತ್ತಾರೆ.
ಪಾಕಿಸ್ತಾನದಿಂದ ಬರುವ ಉಗ್ರಗಾಮಿಗಳು ಸ್ಥಳೀಯ ಮುಸ್ಲಿಮರ ಸಹಾಯದಿಂದ ವಸತಿ ಮತ್ತು ಸೌಕರ್ಯಗಳನ್ನು ಪಡೆಯುತ್ತಾರೆ. ಕೆಲವು ಸಂದರ್ಭದಲ್ಲಿ ಸ್ಥಳೀಯರಿಗೆ ಈ ಉಗ್ರಗಾಮಿಗಳ ಉದ್ದೇಶ ಗೊತ್ತಿರುತ್ತದೆ ಮತ್ತು ಇನ್ನು ಕೆಲವು ಸಂದರ್ಭದಲ್ಲಿ ಅವರಿಗೆ ಗೊತ್ತಿರುವದಿಲ್ಲ. ಆದರೆ ಪೋಲೀಸರು, ಗುಪ್ತದಳದವರು ಇಂಥ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ನಡೆದಾಗ ಆ ಉಗ್ರಗಾಮಿಯೊಡನೆ ಗೊತ್ತೋ ಗೊತ್ತಿಲ್ಲದೆಯೋ ಬೆರೆತಿದ್ದ ಸ್ಥಳೀಯ ಮುಸ್ಲಿಮರೂ ಇದಕ್ಕೆ ಬಲಿಯಾಗುತ್ತಾರೆ. ಆಗ ಅವರ ಹಕ್ಕುಗಳ ರಕ್ಷಣೆಗೆ ಧಾವಿಸುವ ಎಡಪಂಥೀಯರು ಸ್ಥಳೀಯರ ಜೊತೆ ಉಗ್ರಗಾಮಿಗಳ ಪರವಾಗಿಯೂ ಮಾತನಾಡಬೇಕಾದ ಅಗತ್ಯತೆ ಸೃಷ್ಟಿಸಿಕೊಳ್ಳುತ್ತಾರೆ. ಹೀಗೆ ಪೋಲೀಸ್, ಮಿಲಿಟರಿ ಮತ್ತು ನ್ಯಾಯಾಲಯಗಳನ್ನೂ ವಿರೋಧಿಸುತ್ತಾರೆ.
ಪಶ್ಚಿಮದ ದೇಶಗಳಲ್ಲಿ ಐಸಿಸ್ ಬಾಂಬ್ ಸ್ಫೋಟಿಸಿದಾಗ ಅವರನ್ನು ಹುಡುಕುವ ಕಾರ್ಯಾಚರಣೆ ಹೇಗಿರುತ್ತದೆ? ಸಿರಿಯಾ, ಇರಾಕಿನ ನಿರಾಶ್ರಿತರ ಕ್ಯಾಂಪಿನಿಂದ ಬಾಂಬ್ ಸ್ಫೋಟಗೊಂಡ ನಗರಕ್ಕೆ ಬಂದ ಮುಸ್ಲಿಮರನ್ನು ಶೋಧಿಸಿ ಅವರಲ್ಲಿ ಒಬ್ಬೊಬ್ಬರನ್ನೇ ಪ್ರಶ್ನಿಸುತ್ತಾ ಸಾಗುತ್ತಾರೆ. ಇದು ಅಲ್ಲಿನ ಎಡಪಂಥೀಯರಿಗೆ ವಿಚಿತ್ರವಾಗಿ ಕಾಣುವದಿಲ್ಲ. ಕಾರಣ, ಶೋಧನೆಯ ಕಾರ್ಯದಲ್ಲಿ ಇದಕ್ಕಿಂತ ಉತ್ತಮ ವಿಧಾನ ಇನ್ನೊಂದಿಲ್ಲ. ಕಾರಣ ಅಲ್ಲಿನ ಎಡಪಂಥೀಯರು ರಿಲಿಜನ್ನನ್ನು ಭಯೋತ್ಪಾದನೆಯಿಂದ ಸಂಪೂರ್ಣವಾಗಿ ತೆಗೆದು ಬೇರೆಡೆಗೆ ಇರಿಸಬಲ್ಲರು. ಅಂಥವರಿಗೆ ಶಿಕ್ಷೆಯಾದಾಗ ನ್ಯಾಯಾಂಗದ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ಅವರಿಗೆ ಅನಿಸುವದಿಲ್ಲ. ಕಾರಣ ಉಗ್ರಗಾಮಿಗಳಿಗೆ ಶಿಕ್ಷೆ ವಿಧಿಸುವ ಆ ಕ್ರಿಯೆಯು ಅಲ್ಲಿನ ಎಡಪಂಥೀಯರಿಗೆ ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತರಿಂದಾದ ಶೋಷಣೆ ಎಂದು ಅನಿಸುವದೇ ಇಲ್ಲ.
ಭಾರತದ ಎಡಪಂಥೀಯರಿಗೂ ಹಾಗೇ ಅನಿಸಬೇಕಿತ್ತು. ಆದರೆ ಇಲ್ಲೊಂದು ಸಮಸ್ಯೆಯಿದೆ. ಭಾರತದಲ್ಲಿರುವ ಹಿಂದೂ ರಿಲಿಜನ್ನು ಮೇಲ್ವರ್ಗದವರು ಶ್ರಮಿಕ ವರ್ಗದವರನ್ನು ಶೋಷಣೆ ಮಾಡಲು ಸೃಷ್ಟಿಸಲ್ಪಟ್ಟಿದೆ ಎಂದೇ ಭಾವಿಸಿದ್ದಾರೆ. ಹೀಗಾಗಿ “ಇಸ್ಲಾಮಿಗೂ ಭಯೋತ್ಪಾದನೆಗೂ ಸಂಬಂಧವಿಲ್ಲ” ಎಂದು ಹೇಳುವಷ್ಟು ಸುಲಭವಾಗಿ “ಹಿಂದೂ ರಿಲಿಜನ್ನಿಗೂ ಸಮಾಜದಲ್ಲಿನ ಅಸಮಾನತೆಗೂ ಸಂಬಂಧವೇ ಇಲ್ಲ” ಎಂದು ಯಾವ ಎಡಪಂಥೀಯನೂ ಹೇಳುವದಿಲ್ಲ. ಹೀಗಾಗಿ ಭಾರತೀಯ ನ್ಯಾಯಾಂಗ, ಪೋಲೀಸ್ ವ್ಯವಸ್ಥೆಗಳಲ್ಲೂ ಹಿಂದೂ ರಿಲಿಜನ್ನಿನ ಅನೈತಿಕ ಅಂಶಗಳು ಕೆಲಸ ಮಾಡಿರುವ ಸಾಧ್ಯತೆಗಳಿವೆ ಎಂದೇ ಭಾವಿಸುವ ಅನಿವಾರ್ಯತೆ ಈ ಎಡಪಂಥೀಯರಿಗೆ ಉಂಟಾಗಿದೆ. ಭಾರತೀಯ ಪೋಲೀಸರು ಬಾಂಬ್ ಸ್ಫೋಟದ ವಿಚಾರಣೆಯ ವೇಳೆ ಹಲವಾರು ಮುಸ್ಲಿಮರನ್ನು ಬಂಧಿಸಿದಾಕ್ಷಣ ಅದೊಂದು ಕಾರ್ಯಾಚರಣೆಯ ಅಂಗವೆಂದು ಪರಿಗಣಿಸುವದಿಲ್ಲ. ಬದಲಿಗೆ ಅನೈತಿಕ ಹಿಂದೂ ಶಕ್ತಿಗಳ ಸಾಮಾಜಿಕ ಅನ್ಯಾಯ ಎಂದು ತಿಳಿಯುತ್ತಾರೆ. ಹೀಗಾಗಿ ಅಫ್ಜಲ್, ಕಸಬ್ ನಂಥವರ ವಿಧ್ವಂಸಕತೆಯನ್ನು ಕಣ್ಣಾರೆ ಕಂಡಿದ್ದರೂ ಅವರ ಪರವಾಗಿ ವಾದಿಸಲು ತೊಡಗುತ್ತಾರೆ. ಇದು ಜನಸಾಮಾನ್ಯ ಭಾರತೀಯರಿಗೆ ವಿಚಿತ್ರವಾಗಿ ಕಾಣಿಸುತ್ತದೆ.
ಮಾವೋವಾದಿಗಳು ಮತ್ತು ನಕ್ಸಲರಿಗೂ ನಮ್ಮ ಎಡಪಂಥೀಯರು ಕನಿಕರ ತೋರಿಸುತ್ತಾರೆ. ಹಾಗೆ ನೋಡಿದರೆ ಜಮೀನುದಾರರ ದಬ್ಬಾಳಿಕೆ ವಿರುದ್ಧ ಸೆಣೆಸುವದು ಒಳ್ಳೆಯ ವಿಷಯವೇ. “ಸಮಾಜದಲ್ಲಿ ಸಮಾನತೆ ಮತ್ತು ಸ್ವಾತಂತ್ರ್ಯಗಳಿಂದ ವಂಚಿತರಾದ ಬಡವರು ಸಾಮಾಜಿಕ ನ್ಯಾಯಕ್ಕಾಗಿ ಕೈಯಲ್ಲಿ ಶಸ್ತ್ರ ಹಿಡಿದರೆ ತಪ್ಪೇನು?” ಎಂಬ ಎಡಪಂಥೀಯರ ತರ್ಕ ಚೆನ್ನಾಗಿಯೇ ಕಾಣುತ್ತದೆ. ಆದರೆ ಅವರು ಹಿಡಿಯುವ ಎಕೆ-೪೭. ಅಂತಹ ದುಬಾರಿ ಶಸ್ತ್ರಗಳು ಬಡವರ ಕೈಗೆ ಹೇಗೆ ತಲುಪಿದವು? ಕೊಟ್ಟವರು ಬಿಟ್ಟಿ ಏಕೆ ಕೊಟ್ಟರು? ಕೊಟ್ಟವರಿಗೆ ಆ ಬಡವರ ಕಲ್ಯಾಣವೇ ಮುಖ್ಯವಾಗಿದ್ದರೆ ಅದೇ ದುಡ್ಡಿನಲ್ಲಿ ಅವರಿಗೊಂದು ಸ್ವ-ಉದ್ಯೋಗ ನಿರ್ಮಿಸಿ ಕೊಡಬಹುದಿತ್ತಲ್ಲವೇ? ಎಂಬ ಪ್ರಶ್ನೆಗಳನ್ನೆಲ್ಲ ಬದಿಗೊತ್ತಿ ಶತಮಾನಗಳಿಂದ ನಡೆದು ಬಂದಿದೆಯೆನ್ನಲ್ಲಾದ ಶ್ರೇಣೀಕೃತ ವರ್ಣವ್ಯವಸ್ಥೆಯ ಥಿಯರಿ ಇಟ್ಟುಕೊಂಡು ಮಾವೋವಾದಿಗಳ ಮತ್ತು ನಕ್ಸಲರ ಹಿಂಸೆಯ ಸಮರ್ಥನೆಗೆ ತೊಡಗುತ್ತಾರೆ.
ಪಶ್ಚಿಮದ ದೇಶಗಳಿಗೆ ವಿಪರೀತವಾಗಿ ಭಾರತದ ಎಡಪಂಥೀಯರು ಭಾರತೀಯರ ಪ್ರತಿಯೊಂದು ಭಾವನೆಯನ್ನೂ, ಪ್ರತಿಯೊಂದು ವಿಚಾರವನ್ನೂ ವಿರೋಧಿಸುತ್ತ ಸಾಗುತ್ತಾರೆ. ಭಾರತೀಯ ಜನಸಾಮಾನ್ಯನೊಬ್ಬ ಏನನ್ನು ಯೋಚಿಸುತ್ತಾನೋ ಅದನ್ನೆಲ್ಲವನ್ನೂ ವಿರೋಧಿಸುತ್ತ ಸಾಗುವದು ನಮ್ಮ ದೇಶದ ಎಡಪಂಥೀಯರಿಗೆ ಅನಿವಾರ್ಯವಾಗಿಬಿಡುತ್ತದೆ. ಬಹುಪಾಲು ಜನರ ಸಂಪ್ರದಾಯಗಳೇ ಅನೈತಿಕ ಎಂದು ಸಾರಿದ ಮೇಲೆ ಬೇರೆ ಆಯ್ಕೆಯಾದರೂ ಏನಿದೆ ಅವರಿಗೆ?
ನಮ್ಮ ರಾಜಕಾರಣಿಗಳೂ ಎಡಪಂಥವನ್ನು ಊಟದಲ್ಲಿನ ಉಪ್ಪಿನಕಾಯಿಯಂತೆ ಬಳಸುತ್ತಾರೆ. ಮೇಲ್ವರ್ಗೇತರ ವೋಟುಗಳನ್ನು ಕ್ರೋಢೀಕರಿಸುವಲ್ಲಿ, ಅಂಥವರಿಗೆ ಸಮಾಜವಾದೀ ಯೋಜನೆಗಳನ್ನು ರೂಪಿಸುವಲ್ಲಿ ಎಡಪಂಥೀಯ ವಿಚಾರಧಾರೆಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ತಮ್ಮ ಪರಂಪರಾಗತ ಸಂಪ್ರದಾಯಗಳನ್ನು ತುಂಬಾ ನಿಷ್ಠೆಯಿಂದ ಮಾಡುತ್ತಾರೆ. ಪುರೋಹಿತಶಾಹಿಗಳನ್ನೆಲ್ಲ ವೇದಿಕೆಯ ಮೇಲೆ ಬೈದು ತೆಗಳಿ ಮರುದಿನ ಬ್ರಾಹ್ಮಣರನ್ನು ಕರೆಸಿ ಹೊಸದಾಗಿ ಕಟ್ಟಿಸಿದ ಮನೆಯ ಗೃಹಪ್ರವೇಶವನ್ನು ವೇದೋಕ್ತವಾಗಿ ಮಾಡಿಸಿಕೊಳ್ಳುತ್ತಾರೆ. ಅಂದ ಹಾಗೆ ಗೃಹಪ್ರವೇಶ ಮಾಡಿಸುವ ಬ್ರಾಹ್ಮಣರಿಗೂ ಆ ರಾಜಕಾರಣಿ ಹಿಂದಿನ ದಿನ ಮಾಡಿದ್ದ ಪುರೋಹಿತಶಾಹಿ ವಿರುದ್ಧದ ಭಾಷಣದ ಬಗ್ಗೆ ಮಾಹಿತಿ ಇರುತ್ತದೆ. ರಾಜಕಾರಣಿಗಳ ಈ ಇಬ್ಬಂದಿತನವು ಎಡಪಂಥೀಯರಿಗೂ ಗೊತ್ತಿರುತ್ತದೆ. ಆದರೂ ಅದಕ್ಕೆ ಆ ರಾಜಕಾರಣಿಗಳನ್ನು ಪ್ರಶ್ನಿಸುವ ಬದಲು, ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಪುರೋಹಿತಶಾಹಿಯ ಹೆದರಿಕೆಯೇ ಕಾರಣವೆಂದು ಸಂಶಯಿಸುತ್ತಾರೆ. ಇತ್ತೀಚೆಗೆ ತೀರಿಕೊಂಡ ಸಾಹಿತಿಯೊಬ್ಬರು ತಮ್ಮ ಮರಣೋಕ್ತ ಕ್ರಿಯೆಗಳು ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿಯೇ ನಡೆಯಬೇಕೆಂಬ ಬಯಕೆಯು, ಅವರ ಎಡಪಂಥೀಯರ ಬಳಗದ ಮುಖದ ಮೇಲೆ ಪ್ರಶ್ನಾರ್ಥಕ ಚಿಹ್ನೆಯೊಂದನ್ನು ಮೂಡಿಸಿದ್ದನ್ನು ಸ್ಮರಿಸಿಕೊಳ್ಳಬಹುದು. ನಂತರ ಆ ಸಾಹಿತಿಗಳ ಮನಸ್ಸಿನಲ್ಲಿಯೂ ಪುರೋಹಿತಶಾಹಿಯ ಕರಾಳ ಛಾಯೆ ಆವರಿಸಿಕೊಂಡಿತ್ತು ಎಂದು ತಮ್ಮನ್ನು ತಾವೇ ಸಮಾಧಾನಿಸಿಕೊಂಡಿದ್ದನ್ನೂ ನೆನೆಪಿಸಿಕೊಳ್ಳಬಹುದು.
ಭಾರತದ ಸಾಮಾಜಿಕ ರಚನೆಗಳು ನಮ್ಮ ದೇಶದ ಎಡಪಂಥೀಯರು ಕಲ್ಪಿಸಿಕೊಂಡಂತೆ ಇಲ್ಲ. ನಮ್ಮ ದೇಶದ ಸಂಪ್ರದಾಯ ಮತ್ತು ಜಾತಿಗಳು ಅನೈತಿಕ, ಶೋಷಣೆಯ ಹುನ್ನಾರಗಳೆಂಬ ಕಥೆಗಳನ್ನಿಟ್ಟುಕೊಂಡು ನಮ್ಮ ಸಮಾಜವನ್ನು ನೋಡುವ ದೃಷ್ಟಿಕೋಣವನ್ನು ನಮ್ಮ ಎಡಪಂಥೀಯರು ಎಲ್ಲಿಯವರೆಗೆ ಹೊಂದಿರುತ್ತಾರೋ, ಅಲ್ಲಿಯವರೆಗೂ ಅವರ ವಿಚಾರಧಾರೆಗಳು ದೇಶದ ವಾಸ್ತವಕ್ಕೆ ಮತ್ತು ಹಿತಾಸಕ್ತಿಗೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿಯೇ ಸಾಗುತ್ತಿರುತ್ತದೆ. ಆದರೆ ಜನಸಾಮಾನ್ಯರು ಸಹಜವಾಗಿಯೇ ಇವರ ಅತಾರ್ಕಿಕ ವಾದಗಳನ್ನು ಕಸದ ಬುಟ್ಟಿಗೆ ತಳ್ಳಿ ತಮ್ಮ ಸಂಪ್ರದಾಯಗಳನ್ನು ಮುಂದುವರೆಸುತ್ತಾರೆ. ಕಾರಣ ಎಡಪಂಥೀಯರಿಗೆ ಜಾತಿಗಳನ್ನು ಬಿಟ್ಟು ಜಾತ್ಯತೀತನಾಗುವದು ಆದರ್ಶ. ಆದರೆ ಜನಸಾಮಾನ್ಯನಿಗೆ ಜಾತಿ ಬಿಡುವದು, ಜಾತಿ ಬಿಟ್ಟವನು ಎನ್ನುವದು ನಿಂದನೆಯ ಶಬ್ದ. ಈ ವ್ಯತ್ಯಾಸದಿಂದಾಗಿ ಎಡಪಂಥೀಯರ ಹುನ್ನಾರಗಳ ಕಥೆ, ಅವರ ಸಾಮಾಜಿಕ ಕಳಕಳಿಗಳು ಅರಣ್ಯರೋದನವಾಗುತ್ತದೆ. ಇಡೀ ದೇಶದಲ್ಲಿ ಪುರೋಹಿತಶಾಹಿಯ ಬೇರುಗಳು ತುಂಬಾ ಆಳವಾಗಿ ಬೇರೂರಿವೆ ಹೀಗಾಗಿ ನಮ್ಮೆಲ್ಲ ಪ್ರಯತ್ನಗಳು ಪದೇ ಪದೇ ವಿಫಲವಾಗುತ್ತಿವೆ ಎಂಬ ಹತಾಶೆಯು ಅವರಲ್ಲಿ ಮೂಡುತ್ತದೆ. ಪುರೋಹಿತಶಾಹಿಯ ಕಪಿಮುಷ್ಟಿಗೆ ಸಿಲುಕಿರುವ ಈ ಅನೈತಿಕ ಸಮಾಜದ ಪ್ರತಿಯೊಂದು ಭಾವನೆಗಳೂ ಸಮಾಜದ ಶೋಷಣೆಗಾಗಿಯೇ ಇದೆ ಇವೆಲ್ಲವನ್ನೂ ವಿರೋಧಿಸಲೇಬೇಕು ಎಂಬ ಅನಿಸಿಕೆ ಎಡಪಂಥೀಯರಿಗೆ ಅನಿವಾರ್ಯವಾಗುತ್ತದೆ. ಈ ಸನ್ನಿವೇಶವು ದೇಶವನ್ನು ತಾಯಿಯೆಂದು ಗೌರವಿಸುವ ಪ್ರತಿಯೊಂದು ಭಾವನೆಯನ್ನು ವಿರೋಧಿಸುವ ಪ್ರವೃತ್ತಿಯನ್ನು ಸೃಷ್ಟಿಸುತ್ತದೆ. ಅಪರಾಧಿಗಳು ಮತ್ತು ದೇಶದ್ರೋಹಿಗಳನ್ನೂ ಲೆಕ್ಕಿಸದೇ, ಅಲ್ಪಸಂಖ್ಯಾತರನ್ನು ಓಲೈಸುವ ಅಗತ್ಯತೆಯನ್ನು ಉಂಟು ಮಾಡುತ್ತದೆ. ಹೀಗೆ ಜಿಂಕೆಯ ಬಗ್ಗೆಯೇ ಯೋಚಿಸುತ್ತ ಕೂತ ಭರತ ಜಿಂಕೆಯೇ ಆದ ಕಥೆಯಂತೆ ಎಡಪಂಥೀಯರು ದೇಶದ ಜನಸಾಮಾನ್ಯನ ಅನುಭವಕ್ಕೆ ವಿರುದ್ಧವಾಗಿ ವೈಚಾರಿಕತೆಯನ್ನು ಹಾಕುತ್ತ, ಕಾಲಕ್ರಮೇಣ ದೇಶದ ಬಾವುಟವನ್ನೂ, ದೇಶದ ಚಿಹ್ನೆಗಳನ್ನೂ ವಿರೋಧಿಸುವ ಹಂತಕ್ಕೆ ಬಂದು ದೇಶಕ್ಕೇ ವಿರುದ್ಧವಾಗಿ ನಿಲ್ಲುತ್ತಾರೆ. ಭಾರತದ ಎಡಪಂಥೀಯರು ದೇಶವಿರೋಧದತ್ತ ಸಾಗುತ್ತಾರೆ.
ಚಿತ್ರಕೃಪೆ : http://www.rediff.com
Correct
ಚೆನ್ನಾಗಿದೆ, ಭಾರತೀಯ ಎಡಪಂಥೀಯ ಮನೋಸ್ಥಿತಿಯ ಕುರಿತು ವಿವರಣೆ ಬೆಳೆಸಲು ಯತ್ನಿಸಿದ್ದೀರಿ, ಇದು ಅವರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ.
ಸರ್, ಸಾರ್ವಭೌಮತ್ವ ವೆಂದರೆ ವಸಾಹತುಶಾಹಿ ಪ್ರಜ್ಞೆಯಿಂದ ಬಂದಿದ್ದಲ್ಲವೇ? ವಸಾಹತು ಶಾಹಿ ಪ್ರಜ್ಞೆಯನ್ನು ವಿರೋಧಿಸುವ ನೀವು, ಅದೇ ವಸಾಹತುಪ್ರಜ್ಞೆಯಿಂದ ಬಂದ ಸಾರ್ವಭೌಮತ್ವದ ವಿಚಾರದಲ್ಲಿ ಯಾವ ನಿಲುವನ್ನು ಹೊಂದಿದ್ದೀರಿ?
ಧನ್ಯವಾದಗಳು ಸರ್.
“ಜನರಲ್ಲಿ ದೇಶಭಕ್ತಿಯನ್ನು ಜಾಗ್ರತಗೊಳಿಸಬೇಕಾಯಿತು. ಇಂಥದೇ ಅಗತ್ಯವು ಕರ್ನಾಟಕ ರಾಜ್ಯವನ್ನು ಕಟ್ಟಬೇಕಾದರೂ ಬಂದೊದಗಿತ್ತು. ಆಗ ನಮ್ಮ ದೇಶದ ಜನರು ಒಂದು ಭೂಕ್ಷೇತ್ರಕ್ಕೆ ನಿಷ್ಠರಾಗಿ, ಅದಕ್ಕಾಗಿ ಹೋರಾಡಲು ಪ್ರೇರೇಪಿಸುವಲ್ಲಿ ಯಾವ ಭಾವನೆಯು ಕೆಲಸ ಮಾಡಿತು?”
ಖಂಡಿತವಾಗಿಯೂ ಹೇಳುತ್ತೇನೆ, ದೇಶ ಕಟ್ಟುವಿಕೆಯಲ್ಲಿ, ರಾಜ್ಯಕಟ್ಟುವಿಕೆಯಲ್ಲಿ ಸಂಪೂರ್ಣ ಇದ್ದಿದ್ದು ವಸಾಹತುಶಾಹಿ ಪ್ರಜ್ಞೆ. ಇದನ್ನು ಶಿಷ್ಯಕೋಟಿಗಳ ಬಾಯಿಲ್ಲಿಯೇ ಕೇಳಿ. ದೇಶವನ್ನು ತಾಯಿ(ಮದರ್ ಲ್ಯಾಂಡ್) ಎಂದು ಕರೆದದ್ದು ಪಾಶ್ಚಿಮಾತ್ಯರು. ಭಾರತಮಾತೆ, ಕರ್ನಾಟಕ ಮಾತೆ ಎನ್ನುವಲ್ಲಿ ಕಾರ್ಯ ನಿರ್ವಹಿಸಿದ್ದು ವಸಾಹತುಶಾಹಿ ಪ್ರಜ್ಞೆ. ವಸಾಹತುಶಾಹಿ ಪೂರ್ವದಲ್ಲಿ ಎಲ್ಲಿಯಾದರೂ ‘ಭಾರತಮಾತೆ’ ಕರ್ನಾಟಕ ಮಾತೆ ಎಂದು ಎಲ್ಲಿಯಾದರೂ ಕರೆಯಲಾಗಿತ್ತೆ?
ಇದನ್ನು ನಾನು ಈ ಮೊದಲೇ ಹೇಳಿದ್ದೇನೆ. ಬಾಲಗಂಗಾಧರರ ಪ್ರಕಾರ ರಾಷ್ಟ್ರೀಯತೆಯ ಪರಿಕಲ್ಪನೆಯೇ ‘ವಸಾಹತುಶಾಹಿ ಪ್ರಜ್ಞೆ’. ಸಾವರ್ನಿಟಿ(ಸಾರ್ವಭೌಮತ್ವ) ಎನ್ನುವದು ಕ್ರಿಶ್ಚಿಯಾನಿಟಿಯಿಂದಲೇ ಬಂತೆಂದೂ ನಂತರ ಸೆಕ್ಯುಲರ್ ರೂಪ ಪಡೆದುಕೊಂಡಿತೆಂದೂ ಈ ಮೊದಲು ಶಿಷ್ಯಕೋಟಿಗಳಲ್ಲೊಬ್ಬರು ವಾದ ಮಾಡಿದ್ದರು.
ವಸಾಹತುಶಾಹಿ ಪ್ರಜ್ಞೆಯನ್ನು ಬಲವಾಗಿ ವಿರೋಧಿಸುವ ಶಿಷ್ಯಕೋಟಿಗಳು ವಸಾಹತುಶಾಹಿ ಪ್ರಜ್ಞೆಯಿಂದಲೇ ಬಂದ ‘ಸಾರ್ವಭೌಮತ್ವವನ್ನು ವಿರೋಧಿಸುವರೇ? ಜೆ ಏನ್ ಯು ವಿಷಯದಲ್ಲಿ ‘ಸಾರ್ವಭೌಮತ್ವ’ದ ವಿರುದ್ಧ ಮಾತಾಡಿದ ಆರೋಪಿಗಳ ಬಗ್ಗೆ ಮಾತನಾಡುವಾಗ ‘ಸಾರ್ವಭೌಮತ್ವವೆಂದರೆ ವಸಾಹತುಶಾಹಿ ಪ್ರಜ್ಞೆಯಿಂದ ಬಂದಿದ್ದು ಹಾಗಾಗಿ ಅದರ ವಿರುದ್ಧ ಮಾತನಾಡುವದು ತಪ್ಪಿಲ್ಲ’ ಎನ್ನುವ ಬದಲು ಸಾರ್ವಭೌಮತ್ವದ ಪರ ನಿಲ್ಲುತ್ತಿದ್ದಾರಲ್ಲ? ಈ ದ್ವಂದ್ವಕ್ಕೆ ಕಾರಣಗಳೇನು?
ಬಾಟ್ನಿ ಅವರೇ, ಜೆ ಏನ್ ಯೂ ವಿವಾದದ ಬಗ್ಗೆ ನಿಮ್ಮ ಚಿಂತನೆಯನ್ನು ಲೇಖನ ರೂಪದಲ್ಲಿ ಸುವಿವರವಾಗಿ ಬರೆದು ನಿಲುಮೆಯ ಈಮೈಲ್ ವಿಳಾಸಕ್ಕೆ ಕಳುಹಿಸಿ.
ಸಾವರ್ನಿಟಿ(ಸಾರ್ವಭೌಮತ್ವ) ಯ ಹಿಂದಿದ್ದಿದ್ದು ವಸಾಹತುಶಾಹಿ ಪ್ರಜ್ಞೆಯಾದರೂ, ಕ್ರಿಶ್ಚಿಯನ್ ಥಿಯಾಲಜಿ ಇದಕ್ಕೆ ಕಾರಣಿಭೂತವಾಗಿದ್ದರೂ, ಜೆ ಏನ್ ಯು ವಿಷಯದಲ್ಲಿ ತಮ್ಮ ಗುಂಪು ಸಾರ್ವಭೌಮತ್ವದ ಪರ ನಿಲ್ಲಲು ಕಾರಣಗಳೇನು? ‘ಹೀದನ್ ಇನ್ ಹಿಸ್ ಸಿಲೆಕ್ಟಿವ್ ನೆಸ್?’. ನನ್ನ ಪ್ರಶ್ನೆಗೆ ಶಿಷ್ಯಕೋಟಿಗಳಲ್ಲೊಬ್ಬರು ಉತ್ತರಿಸುವಿರಾ?
ನಿಲುಮೆ ಪ್ರಕಟಿಸುವದಾದರೆ ‘ಹೀದನ್ ಇನ್ ಹಿಸ್ ಬ್ಲೈಂಡ್ ನೆಸ್ ಈಸ್ ಹಿಸ್ ಎರೋನಿಯಸ್ ನೆಸ್’ ಅಂತ ಲೇಖನ ಬರೆಯಬೇಕೆಂದಿದ್ದೇನೆ. 😀
ಸಾವರ್ನಿಟಿ(ಸಾರ್ವಭೌಮತ್ವ) ಯ ಹಿಂದಿದ್ದಿದ್ದು ವಸಾಹತುಶಾಹಿ ಪ್ರಜ್ಞೆಯಾದರೂ, ಕ್ರಿಶ್ಚಿಯನ್ ಥಿಯಾಲಜಿ ಇದಕ್ಕೆ ಕಾರಣಿಭೂತವಾಗಿದ್ದರೂ, ಜೆ ಏನ್ ಯು ವಿಷಯದಲ್ಲಿ ತಮ್ಮ ಗುಂಪು ಸಾರ್ವಭೌಮತ್ವದ ಪರ ನಿಲ್ಲಲು ಕಾರಣಗಳೇನು? ‘ಹೀದನ್ ಇನ್ ಹಿಸ್ ಸಿಲೆಕ್ಟಿವ್ ನೆಸ್?’. => ಮೇಡಂ. ಭಾರತೀಯ ಎಡಪಂಥೀಯರು ಅಫ್ಜಲ್ ಪರವಾಗಿ ನಿಲ್ಲುತ್ತಾರೆ ಮತ್ತು ಬಲಪಂಥೀಯರು ನ್ಯಾಯಾಂಗದ ಶಿಕ್ಷೆಯ ಪರವಾಗಿ ನಿಲ್ಲುತ್ತದೆ. ಇದನ್ನು ವಿವರಿಸಲು ಒಂದು ಚಿತ್ರಣ ಬೇಕು. ಇಲ್ಲಿ ಭಾಗವಹಿಸುವ ಎಲ್ಲ ಪಾತ್ರಗಳೂ ಅಂದರೆ, ಎಡಪಂಥೀಯ, ಬಲಪಂಥೀಯ, ಭಾರತ ದೇಶ, ನ್ಯಾಯಾಂಗ, ಪ್ರತಿಭಟನೆ ಇತ್ಯಾದಿಗಳೆಲ್ಲವೂ ಥಿಯಾಲಜಿಯ ಸೃಷ್ಟಿಗಳೇ. ಆದರೆ ಎಡಪಂಥ ಮತ್ತು ಬಲಪಂಥಗಳು ಪಶ್ಚಿಮದಲ್ಲಿ ದೇಶಕ್ಕೆ ವಿರೋಧವಾಗುವದಿಲ್ಲ. ಕಾರಣ ಅಲ್ಲಿನ ಸಮಾಜಗಳು ಅದೇ ಥಿಯಾಲಜಿಯಲ್ಲಿ ಬೆಳೆದಿವೆ. ಆದರೆ ಭಾರತದಲ್ಲಿ ಆ ಥಿಯಾಲಜಿ ಇಲ್ಲ. ಹೀಗಾಗಿ ಭಾರತ ಎಂಬ ದೇಶದ ಸಂವಿಧಾನದ ಅಡಿಯಲ್ಲಿ ಶಿಕ್ಷಿತನಾದ ಉಗ್ರನನ್ನು ದೇಶವನ್ನು ಭಾರತ ಮಾತೆ ಎಂದು ಪೂಜಿಸುವ ಆರ್.ಎಸ್.ಎಸ್. ಎಂಬ ಬಲಪಂಥೀಯ ಸಂಘಟನೆ ವಿರೋಧಿಸುತ್ತದೆ. ಆದರೆ ಎಡಪಂಥೀಯರು ಉಗ್ರನ ಪರವಾಗಿ ಬ್ಯಾಟಿಂಗ್ ಮಾಡುವ ವಾತಾವರಣ ನಿರ್ಮಿಸಿಕೊಳ್ಳುತ್ತಾರೆ. ಇದನ್ನು ವಸಾಹತುಪ್ರಜ್ಞೆಯ ಸಿದ್ಧಾಂತದ ಅಡಿಯಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ. ಹೊರತು ಇಲ್ಲಿ ಸಮರ್ಥನೆ, ವಿರೋಧಗಳ ಪ್ರಸ್ತಾಪ ಇಲ್ಲ.
“ಇಲ್ಲಿ ಭಾಗವಹಿಸುವ ಎಲ್ಲ ಪಾತ್ರಗಳೂ ಅಂದರೆ, ಎಡಪಂಥೀಯ, ಬಲಪಂಥೀಯ, ಭಾರತ ದೇಶ, ನ್ಯಾಯಾಂಗ, ಪ್ರತಿಭಟನೆ ಇತ್ಯಾದಿಗಳೆಲ್ಲವೂ ಥಿಯಾಲಜಿಯ ಸೃಷ್ಟಿಗಳೇ.”
ನೀವು ಹೇಳಿದ್ದು ಸತ್ಯ ಸರ್. ಬಲಪಂಥೀಯ ಹಾಗೂ ಎಡಪಂಥೀಯರು ಥಿಯಾಲಜಿಯ ಸೃಷ್ಟಿ ಎಂಬುದೇನೋ ಸರಿ, ಆದ್ರೆ ಈ ವಿವಾದದಲ್ಲಿ, ಜೆ ಏನ್ ಯು ವಿನ ವಿರುದ್ಧ ನಿಂತ ಸಿಎಸ್ಎಲ್ಸಿ ಗುಂಪಿನ ಅಭಿಪ್ರಾಯಗಳೂ ಥಿಯಾಲಜಿಯ ಸೃಷ್ಟಿಗಳೆ ಅಂತಾಯಿತು ಅಲ್ಲವೇ? ಅದನ್ನು ಶಿಷ್ಯಕೋಟಿಗಳು ಒಪ್ಪಿಕೊಂಡರೆ ಆಯಿತು.
” ಆದರೆ ಎಡಪಂಥೀಯರು ಉಗ್ರನ ಪರವಾಗಿ ಬ್ಯಾಟಿಂಗ್ ಮಾಡುವ ವಾತಾವರಣ ನಿರ್ಮಿಸಿಕೊಳ್ಳುತ್ತಾರೆ. ಇದನ್ನು ವಸಾಹತುಪ್ರಜ್ಞೆಯ ಸಿದ್ಧಾಂತದ ಅಡಿಯಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ. ಹೊರತು ಇಲ್ಲಿ ಸಮರ್ಥನೆ, ವಿರೋಧಗಳ ಪ್ರಸ್ತಾಪ ಇಲ್ಲ.”
ನೋಡಿ ಇಲ್ಲಿ ನೀವು ಎಡಪಂಥೀಯರ ವಸಾಹತುಪ್ರಜ್ನೆಯನ್ನು ವಿವರಿಸಿದ್ದೀರಿ. ಸರಿ ಒಪ್ಪಿಕೊಳ್ಳುವ. ಆದ್ರೆ ಆತನಿಗೆ ಉಗ್ರ ಎಂಬ ಪಟ್ಟ ಬರುವದು ಯಾವಾಗ? ಆತನಿಗೆ ಉಗ್ರನೆಂಬ/ದೇಶದ್ರೋಹಿಯೆಂಬ ಪಟ್ಟ ಸಿಕ್ಕಿದ್ದು ವಸಾಹತುಪ್ರಜ್ನೆಯ ವ್ಯವಸ್ಥೆಯ ನಾಮಕರಣದಿಂದಲ್ಲವೆ? ಉಗ್ರ/ದೇಶದ್ರೋಹಿಯನ್ನು ಪರವಾಗಿರುವವರ ವಸಾಹತುಪ್ರಜ್ನೆಯನ್ನೇನೋ ವಿವರಿಸಿದ್ದೀರಿ, ಸರಿ. ಆದರೆ ವಸಾಹತುಶಾಹಿಪ್ರಜ್ಞೆಯಿಂದ ಮೂಡಿಬಂದ ನಮ್ಮ ದೇಶದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಿಕೆಯಲ್ಲಿದ್ದ ನನ್ನ, ನಿಮ್ಮ, ಶಿಷ್ಯಕೋಟಿಗಳ ವಸಾಹತುಶಾಹಿಪ್ರಜ್ನೆಯ ಬಗ್ಗೆ ಯಾಕೆ ಬರೆಯಲಿಲ್ಲ? ಆತನನ್ನು ‘ಉಗ್ರ’ ಎಂದು ಪರಿಗಣಿಸುವಿಕೆಯಲ್ಲಿ ನಿಮ್ಮಲ್ಲಿದ್ದ ವಸಾಹತುಪ್ರಜ್ಞೆ ನಿಮಗೇಕೆ ಕಾಣಿಸಲಿಲ್ಲ? ನೀವೂ ಯಾವುದೇ ಪರ ವಿರೋಧ ಇಲ್ಲದೆ ಬರೆದಿದ್ದರೆ ‘ಉಗ್ರ, ದೇಶದ್ರೋಹಿ ಇತ್ಯಾದಿ ಪಟ್ಟಗಳೂ ವಸಾಹತುಪ್ರಜ್ನೆಯ ಸೃಷ್ಟಿಯಷ್ಟೆ’ ಎಂದು ಬರೆಯಬಹುದಿತ್ತು.
ಖಂಡಿತ ಕಳುಹಿಸಿ. ಲೇಖನ ಕನ್ನಡದಲ್ಲಿರಲಿ.
1. “ಬಾಟ್ನಿ ಅವರೇ, ಜೆ ಏನ್ ಯೂ ವಿವಾದದ ಬಗ್ಗೆ ನಿಮ್ಮ ಚಿಂತನೆಯನ್ನು ಲೇಖನ ರೂಪದಲ್ಲಿ ಸುವಿವರವಾಗಿ ಬರೆದು ನಿಲುಮೆಯ ಈಮೈಲ್ ವಿಳಾಸಕ್ಕೆ ಕಳುಹಿಸಿ.”
2. “ನಿಲುಮೆ ಪ್ರಕಟಿಸುವದಾದರೆ ‘ಹೀದನ್ ಇನ್ ಹಿಸ್ ಬ್ಲೈಂಡ್ ನೆಸ್ ಈಸ್ ಹಿಸ್ ಎರೋನಿಯಸ್ ನೆಸ್’ ಅಂತ ಲೇಖನ ಬರೆಯಬೇಕೆಂದಿದ್ದೇನೆ. ”
Prajna Anand is Kiran Batni.
QED.
ಖಂಡಿತವಾಗಿಯೂ ಹೇಳುತ್ತೇನೆ, ದೇಶ ಕಟ್ಟುವಿಕೆಯಲ್ಲಿ, ರಾಜ್ಯಕಟ್ಟುವಿಕೆಯಲ್ಲಿ ಸಂಪೂರ್ಣ ಇದ್ದಿದ್ದು ವಸಾಹತುಶಾಹಿ ಪ್ರಜ್ಞೆ. => ಹೌದು. ಅದನ್ನೂ ನಾನೂ ಲೇಖನದಲ್ಲಿ ಹೇಳಿದ್ದೇನೆ. ಈ ವಾಕ್ಯವನ್ನು ಗಮನಿಸಿ
“೧೮೫೭ರ ಸಂಗ್ರಾಮದ ನಂತರ ವಸಾಹತುಶಿಕ್ಷಣ ಪಡೆದ ಭಾರತೀಯರು ನಮ್ಮ ದೇಶಕ್ಕೆ ನಮ್ಮದೇ ಆದ ಕಾನೂನುಗಳನ್ನು ಮಾಡಿಕೊಂಡು, ನಮ್ಮದೇ ಸರ್ಕಾರ ನಡೆಸುವ ಸ್ವಾತಂತ್ರ್ಯದ ಅಗತ್ಯತೆಯನ್ನು ಮನಗಂಡರು. ಅದಕ್ಕಾಗಿ ಜನರಲ್ಲಿ ಜನಜಾಗೃತಿ ಮೂಡಿಸಬೇಕಾಯಿತು.”
ಅಂದರೆ ಈ ಭಾರತ ದೇಶವನ್ನು ಕಟ್ಟುವದರ ಹಿಂದೆ, ಕರ್ನಾಟಕ ರಾಜ್ಯದ ಸ್ಥಾಪನೆಯ ಹಿಂದೆ ವಸಾಹತುಪ್ರಜ್ಞೆ ಇದ್ದೇ ಇದೆ. ಅದರಲ್ಲಿ ಎರಡು ಮಾತಿಲ್ಲ.
ದೇಶವನ್ನು ತಾಯಿ(ಮದರ್ ಲ್ಯಾಂಡ್) ಎಂದು ಕರೆದದ್ದು ಪಾಶ್ಚಿಮಾತ್ಯರು. ಭಾರತಮಾತೆ, ಕರ್ನಾಟಕ ಮಾತೆ ಎನ್ನುವಲ್ಲಿ ಕಾರ್ಯ ನಿರ್ವಹಿಸಿದ್ದು ವಸಾಹತುಶಾಹಿ ಪ್ರಜ್ಞೆ. ವಸಾಹತುಶಾಹಿ ಪೂರ್ವದಲ್ಲಿ ಎಲ್ಲಿಯಾದರೂ ‘ಭಾರತಮಾತೆ’ ಕರ್ನಾಟಕ ಮಾತೆ ಎಂದು ಎಲ್ಲಿಯಾದರೂ ಕರೆಯಲಾಗಿತ್ತೆ? => ಭಾರತ ಮಾತೆ, ಕರ್ನಾಟಕ ಮಾತೆ ಶಬ್ದಗಳು ಮುಂಚೆ ಇರಲಿಲ್ಲ. ಅದು ವಸಾಹತುಪ್ರಜ್ಞೆಯ ಕೊಡುಗೆಯೇ. ದೇಶವನ್ನು, ರಾಜ್ಯವನ್ನು ಕಟ್ಟುವಾಗ ಇದು ಅಗತ್ಯವೇ. ಆದರೆ ದೇಶದ ಕುರಿತು ಮತ್ತು ರಾಜ್ಯದ ಕುರಿತು ಒಂದು ಭಾವನಾ ಪ್ರಪಂಚವನ್ನು ಸೃಷ್ಟಿಸಬೇಕಾದರೆ, ಅದರ ಕುರಿತು ಕಾವ್ಯಗಳನ್ನು ರಚಿಸಬೇಕಾದರೆ ಅಲ್ಲಿ ವಸಾಹತುಪ್ರಜ್ಞೆ ಕೆಲಸ ಮಾಡುವದಿಲ್ಲ. ಹೀಗಾಗಿ God save the queen ಎಂಬ ಬ್ರಿಟಿಷ್ ಗೀತೆಯಂತೆ, ಪರಮಾತ್ಮನು ಭಾರತಮಾತೆಯನ್ನು ರಕ್ಷಿಸಲಿ ಎಂಬಂತಹ ಕಾವ್ಯಗಳು ನಮ್ಮಲ್ಲಿಲ್ಲ. (ಜನಗಣಮನ ಬಿಟ್ಟುಬಿಡಿ ಅದು ಟ್ಯಾಗೋರರು ಯಾವ ಹಿನ್ನೆಲೆಯಲ್ಲಿ ರಚಿಸಿದ್ದಾರೆ ಎನ್ನುವದರ ಕುರಿತು ದೊಡ್ಡ ವಿವಾದವೇ ಇದೆ. ಸದ್ಯಕ್ಕೆ ದೇಶ/ರಾಜ್ಯಕ್ಕಾಗಿಯೇ ರಚಿಸಲ್ಪಟ್ಟ ವಂದೇ ಮಾತರಂ, ಜಯ ಹೇ ಕರ್ನಾಟಕ ಮಾತೆಗಳನ್ನು ಇಟ್ಟುಕೊಳ್ಳೋಣ.)
ವಸಾಹತುಶಾಹಿ ಪ್ರಜ್ಞೆಯನ್ನು ಬಲವಾಗಿ ವಿರೋಧಿಸುವ ಶಿಷ್ಯಕೋಟಿಗಳು ವಸಾಹತುಶಾಹಿ ಪ್ರಜ್ಞೆಯಿಂದಲೇ ಬಂದ ‘ಸಾರ್ವಭೌಮತ್ವವನ್ನು ವಿರೋಧಿಸುವರೇ? => ವಸಾಹತುಪ್ರಜ್ಞೆಯನ್ನು ವಿರೋಧಿಸುವದು ಎಂದರೇನು? ಪ್ರೋಟೋನ್ ಸುತ್ತ ಎಲೆಕ್ಟ್ರಾನ್ ಏಕೆ ಸುತ್ತುತ್ತದೆ ಎಂಬುದರ ಕುರಿತು ಒಂದು ವೈಜ್ಞಾನಿಕ ವಿವರಣೆ ಕಟ್ಟುವಾಗ ನಾವೇನಾದರೂ ಅಲ್ಲಿ ಐಡಿಯಾಲಜಿ ಹಾಕುತ್ತೇವೆಯೇ? ಅಥವಾ ಧೋರಣೆಗಳನ್ನು ಬೆಳೆಸಿಕೊಳ್ಳುತ್ತೇವೆಯೇ? ಪ್ರೋಟಾನಿನ ಶೋಷಣೆ ಎಂದೆಲ್ಲ ಕರೆಯುತ್ತೇವೆಯೇ? ಅಥವಾ ಎಲೆಕ್ಟ್ರಾನನ್ನು ಬಂಧ ಮುಕ್ತ ಮಾಡಬೇಕು ಎಂಬ ಸಂಕಲ್ಪ ತೊಡುತ್ತೇವೆಯೇ?
ವಸಾಹತುಪ್ರಜ್ಞೆಯಡಿಯಲ್ಲಿ ನಾವು ದೇಶವನ್ನು, ಸಂವಿಧಾನವನ್ನು, ರಾಜ್ಯವನ್ನು ನಿರ್ಮಿಸಿಕೊಂಡಿದ್ದೇವೆ ಎನ್ನುವದು ವಿವರಣೆಯಾಯಿತೇ ಹೊರತು ಅದಕ್ಕೆ ಪರವಾಗಲೀ ವಿರೋಧವಾಗಲೀ ಇಲ್ಲ. ಇಲ್ಲಿ ನಾನು ಭಾರತೀಯರು ದೇಶವನ್ನು ಮತ್ತು ರಾಜ್ಯವನ್ನು ತಾಯಿ ಎಂದು ಏಕೆ ತಿಳಿಯುತ್ತಾರೆ ಎಂಬುದನ್ನು ಹೇಳುವಾಗ ಒಂದು ವಿವರಣೆ ಬೆಳೆಸಿಕೊಂಡಿದ್ದೇನೆಯೇ ಹೊರತು ಅದನ್ನೂ ಸಮರ್ಥಿಸುತ್ತಲೂ ಇಲ್ಲ, ವಿರೋಧಿಸುತ್ತಲೂ ಇಲ್ಲ. ಮದರ್ಲ್ಯಾಂಡ್ ಪಾಶ್ಚಿಮಾತ್ಯರ ಕಲ್ಪನೆ ನಿಜ. ಆದರೆ ಭಾರತೀಯರಲ್ಲಿಯೂ ಭೂದೇವಿ, ಭೂತಾಯಿ ಶಬ್ದಗಳು ಇವೆ. ರೈತನೊಬ್ಬ ತನ್ನ ಭೂಮಿಯನ್ನು ಅನ್ನ ನೀಡುವ ತಾಯಿ ಎಂದು ತಿಳಿಯಲು ವಸಾಹತುಪ್ರಜ್ಞೆ ಬೇಕಾಗಿಲ್ಲ. ಆತನ ತಾಯಿಯೇ, ಆತನಿಗೆ, ನೋಡಪ್ಪ ಪರಂಪರಾಗತ ಈ ಭೂಮಿ ನಿನ್ನ ತಾಯಿ. ಇವಳೇ ನಿನ್ನನ್ನು ಸಾಕುವವಳು ಎಂದೇ ಕಲಿಸುತ್ತಾಳೆ. ಈ ಪರಂಪರಾಗತ ಭಾವನೆಯು ವಸಾಹತುಪ್ರಜ್ಞೆಯ ರಾಷ್ಟ್ರದೊಡನೆ ಸೇರಿಕೊಂಡಿದೆ. ಹೀಗಾಗಿ ಭಾರತ ಮಾತೆ, ಕರ್ನಾಟಕಮಾತೆಗಳು ಹುಟ್ಟಿಕೊಂಡಿವೆ. ಇದರಲ್ಲಿ ಸಮರ್ಥನೆಯಾಗಲೀ, ವಿರೋಧವಾಗಲೀ ಎಲ್ಲಿ ಬಂದಿದೆ?
ಜೆ ಏನ್ ಯು ವಿಷಯದಲ್ಲಿ ‘ಸಾರ್ವಭೌಮತ್ವ’ದ ವಿರುದ್ಧ ಮಾತಾಡಿದ ಆರೋಪಿಗಳ ಬಗ್ಗೆ ಮಾತನಾಡುವಾಗ ‘ಸಾರ್ವಭೌಮತ್ವವೆಂದರೆ ವಸಾಹತುಶಾಹಿ ಪ್ರಜ್ಞೆಯಿಂದ ಬಂದಿದ್ದು ಹಾಗಾಗಿ ಅದರ ವಿರುದ್ಧ ಮಾತನಾಡುವದು ತಪ್ಪಿಲ್ಲ’ ಎನ್ನುವ ಬದಲು ಸಾರ್ವಭೌಮತ್ವದ ಪರ ನಿಲ್ಲುತ್ತಿದ್ದಾರಲ್ಲ? ಈ ದ್ವಂದ್ವಕ್ಕೆ ಕಾರಣಗಳೇನು? => ಇಲ್ಲಿ ಯಾವ ದ್ವಂದ್ವವೂ ಇಲ್ಲ. ಎಡಪಂಥೀಯ ಚಿಂತನೆ ಮತ್ತು ರಾಷ್ಟ್ರದ ಪರಿಕಲ್ಪನೆ ಎರಡೂ ವಸಾಹತುಪ್ರಜ್ಞೆಯಿಂದಲೇ ಬಂದಿವೆ. ಪಶ್ಚಿಮ ದೇಶಗಳಲ್ಲಿ ಕ್ರಿಶ್ಚಿಯನ್ ಮತ್ತು ಸೆಕ್ಯುಲರ್ ಥಿಯಾಲಜಿಗಳಿರುವದರಿಂದ ಈ ಎರಡೂ ಪರಿಕಲ್ಪನೆಗಳು ವಿರುದ್ಧವಾಗಿ ನಿಲ್ಲದೇ ಪರಸ್ಪರ ಪೂರಕವಾಗಿ ನಿಲ್ಲುತ್ತವೆ. ಆದರೆ ಭಾರತದಲ್ಲಿ ಆ ಥಿಯಾಲಜಿ ಇಲ್ಲದಿರುವದರಿಂದ, ಇವೆರಡೂ ವಿರುದ್ಧವಾಗಿ ನಿಂತಿವೆ.
ಪ್ರಜ್ಞಾ ಆನಂದ್ ಅವರೇ,
ವೈಜ್ಞಾನಿಕ ವಿವರಣೆ ಎನ್ನುವದು ಸಮರ್ಥನೆಯಾಗಲೀ, ವಿರೋಧವಾಗಲೀ ಅಲ್ಲ. ಗುರುತ್ವದ ವಿವರಣೆಯು ಸೇಬು ತಲೆಯ ಮೇಲೆ ಹೇಗೆ ಬಿತ್ತು ಎಂಬುದರ ವಿವರಣೆಯೇ ಹೊರತು, ಪ್ರಕೃತಿ ಏಕೆ ಪ್ರಪಂಚವನ್ನು ಹೀಗೆಯೇ ಸೃಷ್ಟಿಸಿದೆ ಎಂಬ ಸಮರ್ಥನೆಯಾಗಲೀ ಅಥವಾ ವಾಸ್ತವವಾಗಿ ಹೇಗಿರಬೇಕಿತ್ತು ಆದರೆ ಹೀಗೇಕಿದೆ ಎಂಬ ವಿರೋಧವಾಗಲೀ ಅಥವಾ ಯಾವುದೇ ಐಡಿಯಾಲಜಿಯಾಗಲೀ ಅಲ್ಲ. ನ್ಯೂಟನ್ನಿನ ನಿಯಮಗಳು ಎಲ್ಲಿ ವಾಲಿಡ್ ಅಲ್ಲವೋ ಅಲ್ಲಿ ಐನ್ಸ್ಟೈನ್ ನಿಯಮಗಳು ಅನ್ವಯಿಸಿಕೊಂಡು ಗುರುತ್ವವನ್ನು ಅರಿಯುತ್ತೇವೆ.. ಇದು ಸೆಲೆಕ್ಟೀವ್-ನೆಸ್ ಅಲ್ಲ. ಈಗಲೂ ರಾಕೆಟ್ಟುಗಳು ನ್ಯೂಟನ್ನಿನ ನಿಯಮವನ್ನೇ ಅನುಸರಿಸುತ್ತವೆ. ಇಲ್ಲಿ ಸೂಕ್ಷ್ಮಕಣಗಳು ನ್ಯೂಟನ್ನಿನ ನಿಯಮಗಳನ್ನು ವಿರೋಧಿಸಿವೆ, ಅಥವಾ ವಿರೋಧಿಸಬೇಕು, ಐನ್ಸ್ಟೈನ್ ನಿಯಮಗಳನ್ನು ಸಮರ್ಥಿಸಿವೆ ಅಥವಾ ಸಮರ್ಥಿಸಬೇಕು ಎಂಬುದು ಕೆಲಸಕ್ಕೆ ಬಾರದ ಹರಟೆ.
ವಚನಗಳನ್ನು ಬೌದ್ಧ ಉಪನಿಷತ್ತು ಮುಂತಾದ ದರ್ಶನಗಳನ್ನು ಅಧ್ಯಾತ್ಮದ ಚಿತ್ರಣದ ಅಡಿ ಇಟ್ಟರೆ ಒಂದು ಸುಸಂಬದ್ಧವಾದ ಅರ್ಥ ಸಿಗುತ್ತದೆ. ಆದರೆ ಥಿಯಾಲಜಿಯಲ್ಲಿ ಇಟ್ಟು ನೋಡಿದರೆ ಸುಸಂಬದ್ಧ ಅರ್ಥ ಸಿಗುವದಿಲ್ಲ. ಹೀಗಾಗಿ ಪಾಶ್ಚಿಮಾತ್ಯರು ನಮ್ಮ ಸಂಪ್ರದಾಯಗಳ ಕುರಿತು ಕಟ್ಟಿ ಕೊಡುವ ಚಿತ್ರಣ ಅಸಮರ್ಪಕ. ಆದರೆ ಆ ಚಿತ್ರಣವನ್ನೇ ಸತ್ಯ ಎಂದು ಒಪ್ಪಿಕೊಳ್ಳುವದು ವಸಾಹತುಪ್ರಜ್ಞೆ ಎಂಬುದನ್ನು ನೀವು ಓದಿದ್ದೀರಿ ಎಂದು ನಾನು ಭಾವಿಸಿದ್ದೇನೆ.
ಇಲ್ಲಿ ವಸಾಹತುಪ್ರಜ್ಞೆಯನ್ನು ವಿರೋಧಿಸುವದಾಗಲೀ, ಸಮರ್ಥಿಸುವದಾಗಲೀ ಏನನ್ನೂ ಮಾಡಿಲ್ಲ. ಪಾಶ್ಚಿಮಾತ್ಯರ ಚಿತ್ರಣಗಳು ನಮ್ಮ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಸುಸಂಬದ್ಧವಾಗಿ ಚಿತ್ರಿಸಲು ಸೋಲುವದರಿಂದ ಆ ವಸಾಹತುಪ್ರಜ್ಞೆಯ ಅಗತ್ಯತೆ ಅಲ್ಲಗಳೆಯಲಾಗಿದೆಯೇ ಹೊರತು ವಸಾಹತುಪ್ರಜ್ಞೆಯನ್ನು ವಿರೋಧಿಸುವದಿಲ್ಲ. ಅದರ ಅಗತ್ಯವೂ ಇಲ್ಲ. ವಸಾಹತುಪ್ರಜ್ಞೆ, ಕ್ರಿಶ್ಚಿಯನ್ ಥಿಯಾಲಜಿಗಳನ್ನು ವೈಜ್ಞಾನಿಕ ವಿದ್ಯಾರ್ಥಿಯಾದವನು ಎಲ್ಲಿ ಅನ್ವಯಿಸಬೇಕೋ ಅಲ್ಲಿ ಅನ್ವಯಿಸುತ್ತಾನೆ, ಎಲ್ಲಿ ಅವು ಅನ್ವಯವಾಅಗುತ್ತಿಲ್ಲವೋ ಅಲ್ಲಿ ಪರ್ಯಾಯವನ್ನು ಹುಡುಕುತ್ತಾನೆ. ಸೆಕ್ಯುಲರ್ ಸಂವಿಧಾನಗಳ ರಚನೆ ಅರಿಯಲು ಕ್ರಿಶ್ಚಿಯನ್ ಥಿಯಾಲಜಿ ಬೇಕು. ವಚನಗಳನ್ನು ಅರಿಯಲು ಅಧ್ಯಾತ್ಮದ ಪರಿಕಲ್ಪನೆ ಬೇಕು.
ವೈಜ್ಞಾನಿಕ ವಿವರಣೆಯಲ್ಲಿ ವಿರೋಧ, ಸಮರ್ಥನೆಗಳೆಂಬ ಉಪ್ಪು ಖಾರ ಮಸಾಲೆಗಳೇಕೆ ಬೇಕು?
“ವಸಾಹತುಪ್ರಜ್ಞೆಯನ್ನು ವಿರೋಧಿಸುವದು ಎಂದರೇನು? ..ವಸಾಹತುಪ್ರಜ್ಞೆಯಡಿಯಲ್ಲಿ ನಾವು ದೇಶವನ್ನು, ಸಂವಿಧಾನವನ್ನು, ರಾಜ್ಯವನ್ನು ನಿರ್ಮಿಸಿಕೊಂಡಿದ್ದೇವೆ ಎನ್ನುವದು ವಿವರಣೆಯಾಯಿತೇ ಹೊರತು ಅದಕ್ಕೆ ಪರವಾಗಲೀ ವಿರೋಧವಾಗಲೀ ಇಲ್ಲ.”
ಇದಪ್ಪಾ ಮಾತು. ಇಲ್ಲಿಯತನಕ ‘ಬೌದ್ಧಿಕ ದಾಸ್ಯದಲ್ಲಿ ಭಾರತ’,’ಬುದ್ಧಿಜೀವಿಗಳ ಮೂಢನಂಬಿಕೆಗಳು’ ಪುಸ್ತಕಗಳಲ್ಲಿ ಮೊದಲನೇ ಪುಟದಿಂದ ಕೊನೆಯ ಪುಟದ ವರೆಗೂ ವಿರೋಧಿಸಿದ್ದು, ದಾಸ್ಯ, ಮೂಢನಂಬಿಕೆ ಎಂದಿದ್ದು ಇದೇ ವಸಾಹತುಶಾಹಿ ಪ್ರಜ್ಞೆಯನ್ನೇ ಅಲ್ಲವೇ? ಬಾಲಗಂಗಾಧರರು ಹಾಗೂ ಶಿಷ್ಯಕೋಟಿಗಳು, ಯಾವುದನ್ನಾದರೂ ವಿರೋಧಿಸುವಾಗ, ಒಪ್ಪಿಕೊಳ್ಳುವಾಗ ಉಪಯೋಗಿಸುವ ಮಾನದಂಡವೇ ‘ವಸಾಹತುಶಾಹಿ ಪ್ರಜ್ಞೆ’. ನೀವೆ ಒಮ್ಮೆ ಹೇಳಿದ್ದೀರಿ, ‘“ನಮ್ಮದಲ್ಲದ ಕಲ್ಪನೆ”ಯಿಂದ “ನಮ್ಮದಾಗಿರುವ ಸಂಪ್ರದಾಯ”ಗಳನ್ನು ಅಳೆಯುವದು ತಾರ್ಕಿಕವಾಗಿ ತಪ್ಪು” ಎಂದು ಒಮ್ಮೆ ನೀವೆ ಹೇಳಿದ್ದೀರಿ. ಹಾಗಿದ್ದರೆ ವಸಾಹತುಪ್ರಜ್ಞೆಯಡಿಯಲ್ಲಿನ ಸಂವಿಧಾನ/ಸಾರ್ವಭೌಮತ್ವ ವು ನಮ್ಮದಲ್ಲದ ಸಂಸ್ಕ್ರತಿ ಸಂಪ್ರದಾಯಗಳಿಂದ ಬಂದದ್ದು. ನಾವು ಅದನ್ನು ಒಪ್ಪಿಕೊಳ್ಳುವದು, ಅದರ ಪರ ನಿಲ್ಲುವದು ಅತಾರ್ಕಿಕವಲ್ಲವೇ? ಸಾರ್ವಭೌಮತ್ವದ ಪ್ರಕಾರ ಆತನನ್ನು ದೇಶದ್ರೋಹಿ ಎನ್ನುವದು, ಉಗ್ರ ಎನ್ನುವದು ಅತಾರ್ಕಿಕವಲ್ಲವೇ?
“ವೈಜ್ಞಾನಿಕ ವಿವರಣೆ ಎನ್ನುವದು ಸಮರ್ಥನೆಯಾಗಲೀ, ವಿರೋಧವಾಗಲೀ ಅಲ್ಲ.”
ಬಾಲಗಂಗಾದರರ ಹಾಗೂ ಶಿಷ್ಯಕೋಟಿಗಳ ನಿರೂಪಣೆ ಕೇವಲ ವೈಜ್ಞಾನಿಕ ವಿವರಣೆ ಮಾತ್ರವಾಗಿದ್ದರೆ ಈ ಚರ್ಚೆಯ ಅಗತ್ಯವೇ ಇರಲಿಲ್ಲ. ಅಂಬೇಡ್ಕರರನ್ನು ಈಡಿಯಟ್ ಎನ್ನುವದು ವೈಜ್ಞಾನಿಕ ವಿವರಣೆ ಎಂದು ಕರೆಸಿಕೊಳ್ಳುವದಿಲ್ಲ. ವೈಜ್ಞಾನಿಕ ವಿವರಣೆ ‘Moral assessment ‘ ಮಾಡುವದಿಲ್ಲ. ಯಾವುದೇ ಮನೋವಿಜ್ಞಾನದ ಆಧಾರವಿಲ್ಲದೆ ಆದರೆ ಕಂಡಕಂಡದ್ದನ್ನೆಲ್ಲಾ ‘ವಸಾಹತುಶಾಹಿ ಪ್ರಜ್ಞೆ’/ ಥಿಯಾಲಜಿಯ ಸ್ರಷ್ಟಿ ಎಂದು ಕರೆದರೆ ಅದು ವೈಜ್ಞಾನಿಕ ವಿವರಣೆಯಾಗುವದಿಲ್ಲ. ‘ಥಿಯರಿ ಆಫ್ ಎವೆರಿಥಿಂಗ್’ ನ spoof ಆಗುತ್ತದೆ ಅಷ್ಟೆ.
ಇಲ್ಲಿಯತನಕ ‘ಬೌದ್ಧಿಕ ದಾಸ್ಯದಲ್ಲಿ ಭಾರತ’,’ಬುದ್ಧಿಜೀವಿಗಳ ಮೂಢನಂಬಿಕೆಗಳು’ ಪುಸ್ತಕಗಳಲ್ಲಿ ಮೊದಲನೇ ಪುಟದಿಂದ ಕೊನೆಯ ಪುಟದ ವರೆಗೂ ವಿರೋಧಿಸಿದ್ದು, ದಾಸ್ಯ, ಮೂಢನಂಬಿಕೆ ಎಂದಿದ್ದು ಇದೇ ವಸಾಹತುಶಾಹಿ ಪ್ರಜ್ಞೆಯನ್ನೇ ಅಲ್ಲವೇ? => ಪ್ರಾಕೃತಿಕ ವಿಜ್ಞಾನಗಳನ್ನು ಹೊರತು ಪಡಿಸಿ, ಉಳಿದವುಗಳು ಥಿಯಾಲಜಿಯನ್ನು ಉಳಿಸಿಕೊಂಡಿವೆ ಉದಾ: ಮನೋವಿಜ್ಞಾನ ಸಮಾಜವಿಜ್ಞಾನ ಇತ್ಯಾದಿ. ಭೌತ, ಗಣಿತ ಮುಂತಾದವುಗಳು ಥಿಯಾಲಜಿಯಲ್ಲಿ ಬೆಳೆದುಬಂದರೂ ನಂತರ ಕ್ರಿಶ್ಚಿಯನ್ ನಂಬಿಕೆಗಳನ್ನು ಮೀರಿ ನಿಂತವು. ಉಳಿದವುಗಳು ಅಲ್ಲೇ ಇವೆ. ಸಮಾಜವಿಜ್ಞಾನಗಳು ಇಂದಿಗೂ ಸಮಾಜದಲ್ಲಿ ರಿಲಿಜನ್ ಕಡ್ಡಾಯ ಎಂದು ನಂಬಿವೆ. ಮನೋವಿಜ್ಞಾನವು ಪ್ರತಿಯೊಬ್ಬನಲ್ಲಿಯೂ ಸೆಲ್ಫ್ (ಥಿಯಾಲಜಿಯ ಸೌಲ್) ಇದೆ ಎಂಬ ಥಿಯಾಲಜಿಯ ನಂಬಿಕೆಗಳನ್ನೇ ಉಳಿಸಿಕೊಂಡು ಬಂದಿವೆ. ಅವುಗಳು ಬದಲಾಗಬೇಕು. ಥಿಯಾಲಜಿಯಿಂದ ಹೊರತಾದ ವಿವರಣೆಗಳು ಸಿಗಬೇಕು ಅವು ನಮ್ಮ ಅನುಭವಕ್ಕೂ ಬರುವಂತಹ ವಿವರಣೆಗಳಾಗಿರಬೇಕು ಎಂಬುದು ಈ ಪುಸ್ತಕಗಳ ಉದ್ದೇಶ ಎಂಬುದು ನಾನು ಓದಿದಾಗ ಕಂಡುಕೊಂಡ ಅನುಭವ. ಅಲ್ಲೆಲ್ಲೂ ವಸಾಹತುಪ್ರಜ್ಞೆಯನ್ನು ಈಗಿನ ಬುದ್ಧಿಜೀವಿಗಳ ಪುರೋಹಿತಶಾಹಿಯ ಪೆಡಂಭೂತದಂತೆ ವಿರೋಧಿಸಿ, ಪ್ರತಿಭಟಿಸಿ, ವಸಾಹತುಪ್ರಜ್ಞೆಯ ಪುಸ್ತಕಗಳನ್ನು ಸುಟ್ಟುಬಿಡಿ ಎಂಬ ಪ್ರಚೋದನಕಾರೀ ಶಬ್ದಗಳನ್ನು ಎಲ್ಲಿಯೂ ಬಳಸಿದಂತೆ ಕಾಣುವದಿಲ್ಲ.
ನ್ಯೂಟನ್ನಿನ ನಿಯಮಗಳನ್ನು ಎಲೆಕ್ಟ್ರಾನುಗಳು ಪಾಲಿಸುವದಿಲ್ಲ. ಹೀಗಾಗಿ ಆ ನಿಯಮಗಳನ್ನು ಪಕ್ಕಕ್ಕಿಟ್ಟು, ಹೊಸ ವೈಜ್ಞಾನಿಕ ಥಿಯರಿಗಳ ಕುರಿತು ಚಿಂತಿಸಿ ಎಂದರೆ ನ್ಯೂಟನ್ನಿನ ನಿಯಮಗಳನ್ನು ವಿರೋಧಿಸಿ, ಅವುಗಳ ದಾಸರಾಗಬೇಡಿ, ಆ ನಿಯಮಗಳು ಮೂಢನಂಬಿಕೆ ಎಂದರ್ಥವೇ? ಬುದ್ಧಿಜೀವಿಗಳು ನ್ಯೂಟನ್ನಿನ ನಿಯಮಗಳೇ ಸತ್ಯ ಎಂದು ನಂಬಿಕೊಂಡು ಮುಂದೆ ಯೋಚಿಸಲು ತಯಾರೇ ಇಲ್ಲದಿರುವ ಪ್ರವೃತ್ತಿಯನ್ನು ದಾಸ್ಯ, ಮೂಢನಂಬಿಕೆ ಎನ್ನಲಾಗಿದೆ ಅಷ್ಟೇ. ನೀವು ಮತ್ತೆ ದಾಸ್ಯ, ಮೂಢನಂಬಿಕೆ ವಸಾಹತುಪ್ರಜ್ಞೆಯಲ್ಲವೇ ಎಂದು ಕೇಳಬೇಡಿ. ಹೌದು. ಅವರ ಬಾಣವನ್ನು ಅವರಿಗೇ ತಿರುಗಿಸುವದು ತರ್ಕದಲ್ಲಿ ಒಂದು ಪ್ರಕಾರ. ಒಪ್ಪುತ್ತೀರಿ ಎಂದು ಭಾವಿಸುತ್ತೇನೆ
ಈ ವಿವಾದದಲ್ಲಿ, ಜೆ ಏನ್ ಯು ವಿನ ವಿರುದ್ಧ ನಿಂತ ಸಿಎಸ್ಎಲ್ಸಿ ಗುಂಪಿನ ಅಭಿಪ್ರಾಯಗಳೂ ಥಿಯಾಲಜಿಯ ಸೃಷ್ಟಿಗಳೆ ಅಂತಾಯಿತು ಅಲ್ಲವೇ? => ಒಂದು ನಿಮಿಷ. ಇನ್ನೂ ಡೀಪ್ ಆಗಿ ಯೋಚಿಸಿ. ನಿಮ್ಮ ಈ ವಾದವನ್ನು ಉಪಯೋಗಿಸಿ ರಂಗೋಲಿಯೇಕೆ, ಪೂರಾ ಟೈಲ್ಸ್ ಕೆಳಗೇ ನುಸುಳೋಣ. ಉದಾ: ಸಿ.ಎಸ್.ಎಲ್.ಸಿ. ಕೂಡ ಯುನಿವರ್ಸಿಟಿಯ ಒಂದು ಭಾಗ. ಯುನಿವರ್ಸಿಟಿ ಥಿಯಾಲಜಿಯಿಂದ ಬಂದಿದ್ದು. ಅಂದರೆ ಬಾಲಗಂಗಾಧರರ ಥಿಯರಿ ಒಪ್ಪುವ ನಾವು ನಮ್ಮ ಮಕ್ಕಳನ್ನು ಓದಿಸುವದು ಬೇಡ ಓಕೆನಾ?? ಬೈಕು ಕಾರುಗಳು ಅಭಿವೃದ್ಧಿಗೊಂಡಿದ್ದು ಸಿಸ್ಟಂ ಎಂಬ ಪರಿಕಲ್ಪನೆಯಿಂದ. ಚಕ್ಕಡಿಯಲ್ಲಿ ಅಡ್ಡಾಡೋಣ. ಬಾಲಗಂಗಾಧರರು ಬೆಲ್ಜಿಯಂ ನಿಂದ ಭಾರತಕ್ಕೆ ತೆಪ್ಪದಲ್ಲಿ ಬರಲಿ. ಈ ನಿಲುಮೆ ಬ್ಲಾಗು ನೋಡಿ, ಇದಕ್ಕೊಬ್ಬ ಅಡ್ಮಿನ್ ಇರ್ತಾನೆ. ಆತ ಇಂಡಿವಿಜುಯಲ್ ಅಕೌಂಟುಗಳನ್ನು ನಮಗಾಗಿ ತೆರೆಯುತ್ತಾನೆ. ಅಕ್ಸೆಸ್ ನೀಡುತ್ತಾನೆ. ಇದೂ ಥಿಯಾಲಜಿ. ನಿಲುಮೆ ಬ್ಲಾಗನ್ನು ಮುಚ್ಚೋಣ. ನಾನು ಸಾಪ್ಟವೇರ್ ಎಂಜಿನಿಯರ್. ಅದೂ ಕೂಡ ಸಿಸ್ಟಂ ತಾನೇ? ಬಿಟ್ಟುಬಿಡುತ್ತೇನೆ. ಸರ್ಕಾರೀ ನೌಕರರು ಸರ್ಕಾರವು ವಸಾಹತುಪ್ರಜ್ಞೆಯ ಪ್ರೊಡಕ್ಟ್. ಸೋ ರಾಜೀನಾಮೆ ನೀಡಲಿ. ಸಮಾಧಾನವಾಯಿತೇ?
ಆದರೆ ವಸಾಹತುಶಾಹಿಪ್ರಜ್ಞೆಯಿಂದ ಮೂಡಿಬಂದ ನಮ್ಮ ದೇಶದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಿಕೆಯಲ್ಲಿದ್ದ ನನ್ನ, ನಿಮ್ಮ, ಶಿಷ್ಯಕೋಟಿಗಳ ವಸಾಹತುಶಾಹಿಪ್ರಜ್ನೆಯ ಬಗ್ಗೆ ಯಾಕೆ ಬರೆಯಲಿಲ್ಲ? ಆತನನ್ನು ‘ಉಗ್ರ’ ಎಂದು ಪರಿಗಣಿಸುವಿಕೆಯಲ್ಲಿ ನಿಮ್ಮಲ್ಲಿದ್ದ ವಸಾಹತುಪ್ರಜ್ಞೆ ನಿಮಗೇಕೆ ಕಾಣಿಸಲಿಲ್ಲ? ನೀವೂ ಯಾವುದೇ ಪರ ವಿರೋಧ ಇಲ್ಲದೆ ಬರೆದಿದ್ದರೆ ‘ಉಗ್ರ, ದೇಶದ್ರೋಹಿ ಇತ್ಯಾದಿ ಪಟ್ಟಗಳೂ ವಸಾಹತುಪ್ರಜ್ನೆಯ ಸೃಷ್ಟಿಯಷ್ಟೆ’ ಎಂದು ಬರೆಯಬಹುದಿತ್ತು. => ಲೇಖನದಲ್ಲಿ ನಾನು ಉಗ್ರ ಎಂಬ ಶಬ್ದವನ್ನು ನ್ಯಾಯಾಂಗದ ನಿರ್ಣಯ ಇಟ್ಟುಕೊಂಡೇ ಹೇಳಿದ್ದು. ಬಾಲಗಂಗಾಧರರ ಪುಸ್ತಕ ಓದಿಯೂ ಕೂಡ, ನಾನು ನಾಳೆ ಸೈನ್ಯ ಸೇರಬೇಕಾದರೆ, ಸರ್ಕಾರ, ದೇಶ, ಗಡಿ ಎಂಬ ಅಂಶಗಳನ್ನು ಸ್ವೀಕರಿಸುವದರಲ್ಲಿ ನನಗೆ ಯಾವ ವಿರೋಧಾಭಾಸಗಳೂ ಕಾಣುತ್ತಿಲ್ಲ.
ವಸಾಹತುಪ್ರಜ್ಞೆಯಡಿಯಲ್ಲಿನ ಸಂವಿಧಾನ/ಸಾರ್ವಭೌಮತ್ವ ವು ನಮ್ಮದಲ್ಲದ ಸಂಸ್ಕ್ರತಿ ಸಂಪ್ರದಾಯಗಳಿಂದ ಬಂದದ್ದು. ನಾವು ಅದನ್ನು ಒಪ್ಪಿಕೊಳ್ಳುವದು, ಅದರ ಪರ ನಿಲ್ಲುವದು ಅತಾರ್ಕಿಕವಲ್ಲವೇ? => ಅಲ್ಲ. ನಾವಿಲ್ಲಿ ವಸಾಹತುಪ್ರಜ್ಞೆಯ ವಿರುದ್ಧ ಅಲ್ಲ. ನ್ಯೂಟನ್ನಿನ ನಿಯಮಕ್ಕೆ ನಾವು ವಿರುದ್ಧ ಅಲ್ಲ. ಅದು ನಮ್ಮ ದೇಶದಲ್ಲಿ ಸಂಪೂರ್ಣ ಸಮರ್ಪಕವಲ್ಲವಾದ್ದರಿಂದ ಇನ್ನೂ ಹೆಚ್ಚಿನ ಅಧ್ಯಯನ ಮಾಡಲು ಯತ್ನಿಸುತ್ತಿದ್ದೇವೆ ಅಷ್ಟೇ.
‘“ನಮ್ಮದಲ್ಲದ ಕಲ್ಪನೆ”ಯಿಂದ “ನಮ್ಮದಾಗಿರುವ ಸಂಪ್ರದಾಯ”ಗಳನ್ನು ಅಳೆಯುವದು ತಾರ್ಕಿಕವಾಗಿ ತಪ್ಪು”
“ವೈಜ್ಞಾನಿಕ ವಿವರಣೆ ಎನ್ನುವದು ಸಮರ್ಥನೆಯಾಗಲೀ, ವಿರೋಧವಾಗಲೀ ಅಲ್ಲ.”
ಬಾಲಗಂಗಾದರರ ಹಾಗೂ ಶಿಷ್ಯಕೋಟಿಗಳ ನಿರೂಪಣೆ ಕೇವಲ ವೈಜ್ಞಾನಿಕ ವಿವರಣೆ ಮಾತ್ರವಾಗಿದ್ದರೆ ಈ ಚರ್ಚೆಯ ಅಗತ್ಯವೇ ಇರಲಿಲ್ಲ. => ಹೌದು. ವಸಾಹತುಪ್ರಜ್ಞೆಯನ್ನು ನೀವು ಕೇವಲ ವೈಜ್ಞಾನಿಕ ವಿವರಣೆ ಎಂದು ಭಾವಿಸಿಯೇ ಇಲ್ಲ.ಆಧ್ದರಿಂದಲೇ ನೀವು ನನಗೆ ಥಿಯಾಲಜಿಯನ್ನು ಮತ್ತು ಅದರಿಂದ ಬರುವ ಪ್ರತಿಯೊಂದನ್ನೂ ಪ್ರತಿಭಟಿಸಲೇಬೇಕು ಎಂಬ ಆಗ್ರಹ ಹಾಕುತ್ತಿದ್ದೀರಿ. ವೈಜ್ಞಾನಿಕ ವಿವರಣೆಯೂ ಥಿಯಾಲಜಿಯಲ್ಲೇ ಬಂದಿದ್ದು ಎಂಬುದು ನಿಮಗೆ ಗೊತ್ತಿದೆ. ಹೀಗಾಗಿ ಅದನ್ನೂ ತ್ಯಜಿಸಬೇಕು ಎಂದು ನೀವೊಮ್ಮೆ ಹೇಳಿದ್ದು ನೆನಪಿದೆ. ಆದರೆ ನಾವಿಲ್ಲಿ ಥಿಯಾಲಜಿಯನ್ನು ವಿರೋಧಿಸುತ್ತಿಲ್ಲ. ಥಿಯಾಲಜಿಯ ಕಣ್ಣಿನಿಂದ ನಮ್ಮ ಸಂಪ್ರದಾಯಗಳನ್ನು ನೋಡುವದರಿಂದ ನಮಗೆ ನಮ್ಮ ಸಂಪ್ರದಾಯಗಳ ಕುರಿತು ಸಮರ್ಪಕ ವಿವರಣೆ ಸಿಗುತ್ತಿಲ್ಲ ಎಂಬುದಷ್ಟೇ ನಾನು ಹೇಳುತ್ತಿರುವದು.
ಮೊದಲು ರಾಗ-ದ್ವೇಷಗಳನ್ನು, ಧೋರಣೆ-ನಿಲುವುಗಳನ್ನೆಲ್ಲ ಸಮಾಧಿ ಮಾಡಿ ಆನಂತರ ಬನ್ನಿ.
“ಸಮಾಜವಿಜ್ಞಾನಗಳು ಇಂದಿಗೂ ಸಮಾಜದಲ್ಲಿ ರಿಲಿಜನ್ ಕಡ್ಡಾಯ ಎಂದು ನಂಬಿವೆ.ಮನೋವಿಜ್ಞಾನವು ಪ್ರತಿಯೊಬ್ಬನಲ್ಲಿಯೂ ಸೆಲ್ಫ್ (ಥಿಯಾಲಜಿಯ ಸೌಲ್) ಇದೆ ಎಂಬ ಥಿಯಾಲಜಿಯ ನಂಬಿಕೆಗಳನ್ನೇ ಉಳಿಸಿಕೊಂಡು ಬಂದಿವೆ”
ಇದು ನಿಮ್ಮ ತಪ್ಪು ಗ್ರಹಿಕೆ. ಇಂದಿಗೂ ಸಮಾಜವಿಜ್ನಾನದ ಮೊದಲ ಪಾಠದಲ್ಲಿ ಬರುವ ಅರಿಸ್ಟಾಟಲ್ ಹುಟ್ಟಿದಾಗ ಕ್ರಿಶ್ಚಿಯಾನಿಟಿಯೇ ಇರಲಿಲ್ಲ. ಮನೋವಿಜ್ಞಾನದ ಉಗಮವಾಗುವಾಗಲೂ ಕ್ರಿಶ್ಚಿಯಾನಿಟಿ ಇರಲಿಲ್ಲ. ಇಂದಿನ ಮನೋವಿಜ್ಞಾನ ಥಿಯಾಲಜಿಯ ಯಾವ ಸರಕನ್ನು ಹೊಂದಿಲ್ಲ. ಇರಲಿ ತರ್ಕ ಅದಲ್ಲ, ಥಿಯಾಲಜಿಯಿಂದ ಹೊರತಾದ ಸಮಾಜವಿಜ್ನಾನದ ವಿವರಣೆಗಳು ಸಿಗಬೇಕು ಎಂದು ಅಂದಿದ್ದೀರಿ, ಒಪ್ಪಿಕೊಳ್ಳುವ. ನಾನು ಕೇಳುವದು ಇಷ್ಟೆ, ನೀವು ನಾವು ಒಪ್ಪಿಕೊಳ್ಳುವ ದೇಶದ ಸಾರ್ವಭೌಮತ್ವ ಕೂಡ ಥಿಯಾಲಜಿಯ ವಿವರಣೆಯಿಂದಲೇ ಕೂಡಿದೆ, ಹಾಗಿದ್ದಾಗ ನೀವು ಅದನ್ನು ಯಾಕೆ ಬಿಡುತ್ತಿಲ್ಲ? ಇದು ನನ್ನ ಪ್ರಶ್ನೆ.
“ನಾವಿಲ್ಲಿ ವಸಾಹತುಪ್ರಜ್ಞೆಯ ವಿರುದ್ಧ ಅಲ್ಲ. ನ್ಯೂಟನ್ನಿನ ನಿಯಮಕ್ಕೆ ನಾವು ವಿರುದ್ಧ ಅಲ್ಲ. ಅದು ನಮ್ಮ ದೇಶದಲ್ಲಿ ಸಂಪೂರ್ಣ ಸಮರ್ಪಕವಲ್ಲವಾದ್ದರಿಂದ ಇನ್ನೂ ಹೆಚ್ಚಿನ ಅಧ್ಯಯನ ಮಾಡಲು ಯತ್ನಿಸುತ್ತಿದ್ದೇವೆ ಅಷ್ಟೇ.”
ಸರಿ ಹಾಗಿದ್ದರೆ ನಮ್ಮ ದೇಶದಲ್ಲಿ ವಸಾಹತುಪ್ರಜ್ಞೆ ಸಂಪೂರ್ಣ ಸಮರ್ಪಕವಲ್ಲವಾದರೆ ಅದರಿಂದ ದೊರೆತ ನ್ಯಾಯಾಂಗ, ಸಾರ್ವಭೌಮತ್ವವನ್ನು ಯಾಕೆ ಒಪ್ಪಿಕೊಳ್ಳುತ್ತೀರಿ? ಅಂದರೆ ವಸಾಹತುಪ್ರಜ್ಞೆಯಲ್ಲಿಯೇ ನೀವು ಎರಡು ಬಗೆಯದನ್ನು ವಿಂಗಡಿಸುತ್ತೀರಿ ಎಂದಾಯಿತು. ೧. ನೀವು ಒಪ್ಪಿಕೊಳ್ಳುವ ವಸಾಹತು ಪ್ರಜ್ಞೆ(ನ್ಯಾಯಾಂಗ, ಸಾರ್ವಭೌಮತ್ವ ಇತ್ಯಾದಿ), ೨. ಒಪ್ಪಿಕೊಳ್ಳದ ವಸಾಹತುಶಾಹಿ ಪ್ರಜ್ಞೆ (ಪುರೋಹಿತಶಾಹಿಯ ವ್ಯಾಖ್ಯಾನ, ಎಡಪಂಥೀಯರ ನಿರೂಪಣೆ ಇತ್ಯಾದಿ). ಅಲ್ಲವೇ?
“ನೀವು ನನಗೆ ಥಿಯಾಲಜಿಯನ್ನು ಮತ್ತು ಅದರಿಂದ ಬರುವ ಪ್ರತಿಯೊಂದನ್ನೂ ಪ್ರತಿಭಟಿಸಲೇಬೇಕು ಎಂಬ ಆಗ್ರಹ ಹಾಕುತ್ತಿದ್ದೀರಿ.”
ನಾನು ನಿಮಗೆ ಯಾವುದನ್ನೂ ಆಗ್ರಹಿಸಿಲ್ಲ. ದ್ವಂದ್ವವನ್ನಷ್ಟೆ ಪ್ರಶ್ನಿಸುತ್ತಿದ್ದೇನೆ.
“ವೈಜ್ಞಾನಿಕ ವಿವರಣೆಯೂ ಥಿಯಾಲಜಿಯಲ್ಲೇ ಬಂದಿದ್ದು ಎಂಬುದು ನಿಮಗೆ ಗೊತ್ತಿದೆ.”
ಖಂಡಿತ ಇಲ್ಲ. ಈ ಬಗ್ಗೆ ಮೊದಲು ವಾದ ಮಾಡಿದಾಗ ಶಿಷ್ಯಕೋಟಿಗಳು ಸರಿಯಾಗಿ ವಾದ ಮಾಡದೆ ವೈಯಕ್ತಿಕ ಸಮರ ಕಾಯ್ದು ಪಲಾಯನಕಿತ್ತಿದ್ದರು.
“ಮೊದಲು ರಾಗ-ದ್ವೇಷಗಳನ್ನು, ಧೋರಣೆ-ನಿಲುವುಗಳನ್ನೆಲ್ಲ ಸಮಾಧಿ ಮಾಡಿ ಆನಂತರ ಬನ್ನಿ.”
😀 😀 ಇದನ್ನು ಶಿಷ್ಯಕೋಟಿಗಳಿಗೆ ಹೇಳಿ. ನಾನು ಮುಂಚಿನಿಂದಲೂ ಸಭ್ಯತೆಯನ್ನು ಮೀರಿ ಸಂವಾದ ಮಾಡಿಲ್ಲ. ವಾದ ಮಾಡುವದನ್ನು ಬಿಟ್ಟು ವೈಯಕ್ತಿಕ ನೆಲೆಯಲ್ಲಿ ಮಾತನಾಡಲು ಶುರು ಮಾಡಿದವರು ಶಿಷ್ಯಕೋಟಿಗಳು. ಅದು ತೀರಾ ಅತಿರೇಕ ಎನಿಸಿದಾಗ ವ್ಯಂಗ್ಯವಾಡಿದ್ದೇನೆ ನಿಜ.
ಬಾಟ್ನಿ ಸಾಹೇಬರೇ, ಎಷ್ಟು ಹೇಳಿದರೂ ನಿಮ್ಮ ಕಿವುಡುಕಿವಿಗೆ ಕೇಳಿಸುವುದೇ ಇಲ್ಲ! ನಿಮ್ಮ ಎಲ್ಲಾ ಚಿಂತನೆಯನ್ನು ಒಂದು ಸಾವಿರ ಪದಗಳ ಲೇಖನದ ರೂಪದಲ್ಲಿ ಬರೆದು ಕಳುಹಿಸಿ. ಕಾಮೆಂಟುಗಳ ಮೂಲಕ ಸ್ನೈಪರ್ ಅಟಾಕ್ ಮಾಡುವುದು ತಮ್ಮಂತಹ ಮಹತ್ವದ ಸಾಂಸ್ಕೃತಿಕ ಚಿಂತಕರಿಗೆ ಶೋಭೆ ನೀಡುವುದಿಲ್ಲ ಕಣ್ರೀ!
ಅನಾಮಿಕರೆ, ಸಾಧ್ಯವಾದರೆ ತಾವು ಇಲ್ಲಿಯ ಸಂವಾದದಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ.
Kiran Batni should consult a psychotherapist immediately for help and spare Nilume from his intellectual masturbations.
ನೀವು ನಾವು ಒಪ್ಪಿಕೊಳ್ಳುವ ದೇಶದ ಸಾರ್ವಭೌಮತ್ವ ಕೂಡ ಥಿಯಾಲಜಿಯ ವಿವರಣೆಯಿಂದಲೇ ಕೂಡಿದೆ, ಹಾಗಿದ್ದಾಗ ನೀವು ಅದನ್ನು ಯಾಕೆ ಬಿಡುತ್ತಿಲ್ಲ? => ಥಿಯಾಲಜಿಯಿಂದ ಬೆಳೆದುಬಂದ ಎಂಜಿನೀಯರಿಂಗ್ ಪ್ರೊಡಕ್ಟುಗಳಾದ ಕಾರು ಸ್ಕೂಟರನ್ನು ಬಿಡಬೇಕೆ ಎಂಬ ನನ್ನ ಹಿಂದಿನ ಪ್ರಶ್ನೆಯ ಹಿನ್ನೆಲೆಯನ್ನು ನೀವು ಸೂಕ್ಷ್ಮವಾಗಿ ಗಮನಿಸಿಲ್ಲ ಎಂಬುದು ಖಾತ್ರಿಯಾಯಿತು. ಇರಲಿ. ಮುಂದಿನ ಪ್ರಶ್ನೆಯಲ್ಲಿ ಇದನ್ನು ವಿವರವಾಗಿ ತೆಗೆದುಕೊಂಡಿದ್ದೇನೆ.
ಸರಿ ಹಾಗಿದ್ದರೆ ನಮ್ಮ ದೇಶದಲ್ಲಿ ವಸಾಹತುಪ್ರಜ್ಞೆ ಸಂಪೂರ್ಣ ಸಮರ್ಪಕವಲ್ಲವಾದರೆ ಅದರಿಂದ ದೊರೆತ ನ್ಯಾಯಾಂಗ, ಸಾರ್ವಭೌಮತ್ವವನ್ನು ಯಾಕೆ ಒಪ್ಪಿಕೊಳ್ಳುತ್ತೀರಿ? =>
ಒಪ್ಪಿಕೊಳ್ಳುವದು ಮತ್ತು ಬಿಡುವದು ಎಂದರೇನು? ನಮ್ಮ ದೇಶದಲ್ಲೂ ಒಪ್ಪುವದು-ಬಿಡುವದು ಇದೆ. ಆದರೆ ಯಾವ ರೀತಿಯ ಒಪ್ಪು-ಬಿಡುಗಳಿವೆ? ಕ್ರಿಶ್ಚಿಯನ್ ಥಿಯಾಲಜಿಯನ್ನು ಒಪ್ಪಿಕೊಳ್ಳುವವನು ವಚನಗಳಲ್ಲಿ ಹೇಳಿರುವ ಪ್ರಾಣಿಬಲಿಯ ವಿರೋಧವನ್ನು ಒಪ್ಪಿಕೊಳ್ಳುತ್ತಾನೆ. ಲಿಂಗಪೂಜೆಯನ್ನು ಬಿಡುತ್ತಾನೆ. ಇವು agree-disagree ಎಂಬರ್ಥದಲ್ಲಿವೆ. ಆದರೆ ಈ ರೀತಿಯ ಒಪ್ಪು-ಬಿಡು ಗಳು ನಮ್ಮಲ್ಲಿವೆಯೇ? ನಮ್ಮ ಸಂಪ್ರದಾಯಗಳಲ್ಲಿ ಪರಂಪರೆಗಳನ್ನು ಅಳವಡಿಸಿಕೊಳ್ಳುವ ಮತ್ತು ನಿಲ್ಲಿಸುವ ಪದ್ಧತಿ ಇದೆ. ಈ ರೀತಿ ಒಪ್ಪು-ಬಿಡುಗಳಿವೆ. ಅದಕ್ಕೆ ಯಾವುದಾದರೂ ಪ್ರವಾದಿಗಳ ಡಾಕ್ಟ್ರಿನ್ನನ್ನು ಆಧಾರವಾಗಿಟ್ಟುಕೊಳ್ಳುವದು ನಿಮಗೆ ಕಾಣಿಸುತ್ತದೆಯೇ? ವೇದಪ್ರಾಮಾಣ್ಯ, ವೇದಾನುಸಾರಿ ಶಬ್ದಗಳನ್ನು ನೀವಿಲ್ಲಿ ತರಬಹುದು. ಆದರೆ ವೇದಗಳು ಎಂದರೇನು ಎಂಬ ಪ್ರಶ್ನೆಗೆ ಸಾಯಣಾಚಾರ್ಯರು ಭಾಷ್ಯದಲ್ಲಿ “ಸಂಪ್ರದಾಯಾನುಷ್ಠಾನ ಪರಿಣಿತರು ಯಾವುದನ್ನು ವೇದ ಎನ್ನುತ್ತಾರೋ ಆ ಮಂತ್ರಬ್ರಾಹ್ಮಣಾತ್ಮಕವಾದ ಶಬ್ದ ಸಮೂಹವೇ ವೇದ” ಎಂದು ಹೇಳುತ್ತಾರೆ. ಮತ್ತು ಅದಕ್ಕೆ ಆಧಾರವಾಗಿ ಆಪಸ್ತಂಭ ಸೂತ್ರವನ್ನು (ಮಂತ್ರಬ್ರಾಹ್ಮಣಯೋರ್ವೇದನಾಮಧೇಯಮಿತಿ) ನೀಡುತ್ತಾರೆ. ಒಬ್ಬ ಕ್ರಿಶ್ಚಿಯನ್ ಬೈಬಲ್ಲನ್ನು ತನ್ನ ರಿಲಿಜನ್ನಿನ ಡಾಕ್ಟ್ರಿನ್ ಎನ್ನುತ್ತಾನೋ ಇಲ್ಲವೇ ನನ್ನಪ್ಪ ಯಾವ ಪುಸ್ತಕ ತೋರಿಸಿ ಇದು ಬೈಬಲ್ ಎಂದನೋ ಅದು ಬೈಬಲ್ ಎನ್ನುತ್ತಾನೋ? ಅಲ್ಲದೇ ಆಪಸ್ತಂಭರು ಅಥವಾ ಸಾಯಣರು ವೇದ ಎನ್ನುವದು ಏಷ ಧರ್ಮೋ ಸನಾತನಃ ಎಂಬಲ್ಲಿ ಯಾವ ಸನಾತನ ಧರ್ಮವಿರುವದೋ ಅದರ ಧರ್ಮಗ್ರಂಥ ಎಂದು ಸರಳವಾಗಿ ಹೇಳಬಹುದಿತ್ತಲ್ಲವೇ? ಯಾಕೆ ಅದರ ವ್ಯಾಖ್ಯಾನವನ್ನು ಅಷ್ಟುದ್ದ ಚರ್ಚಿಸಿದರು ? (ಸಾಯಣ ಭಾಷ್ಯ ಓದಿ ಎಷ್ಟುದ್ದ ಎನ್ನುವದು ಗೊತ್ತಾಗಲು)
ಇನ್ನೂ ಒಂದು ಉದಾಹರಣೆ. ವೇದಗಳು ಅಪೌರುಷೇಯವಾಗಿದ್ದಲ್ಲಿ ಅದರಲ್ಲಿ ಬರುವ ಕಥೆಗಳು ಆ ಕಥೆಗಳಲ್ಲಿ ಬರುವ ಮನುಷ್ಯರು ಏನು? ಆ ಘಟನೆ ನಡೆಯುವ ಮೊದಲು ವೇದವಿತ್ತೇ? ಎಂಬ ಪೂರ್ವಪಕ್ಷಿಯ ಪ್ರಶ್ನೆಗೆ ಉತ್ತರವಾಗಿ ಶಂಕರಾಚಾರ್ಯರು ಭಾಷ್ಯದಲ್ಲಿ “ವೇದಗಳೇ ಒಂದು ತತ್ತ್ವವನ್ನು ಹೇಳಲು ಕಥೆಗಳನ್ನು ಸೃಷ್ಟಿಸಿಕೊಂಡಿವೆ” ಎಂದು ಬಾಯಿಬಿಟ್ಟು ಹೇಳಿರುವಾಗ (ಭಾಷ್ಯಗಳನ್ನು ಓದುವಾಗ ನಾನು ಈ ವಾಕ್ಯ ಓದಿದ್ದ ನೆನಪಿದೆ. ನಿಮಗೆ ಆ ಭಾಗವನ್ನು ಮೂಲದೊಂದಿಗೆ ಹುಡುಕಿ ಕೊಡುತ್ತೇನೆ. ಸಮಯ ಬೇಕು.) ಹೀಗಾಗಿ ವೇದಪ್ರಾಮಾಣ್ಯಗಳನ್ನು ಬೈಬಲ್ಲಿನ ಥಿಯಾಲಜಿಯ agree-disagree ಗೆ ಹೋಲಿಸುವದು ಎಷ್ಟು ಸರಿಯಲ್ಲ ಎನ್ನಲು ಇಷ್ಟು ಸಾಕು.
ಈಗ ಹೇಳಿ ಒಪ್ಪಿಕೊಳ್ಳುವದು ಮತ್ತು ಬಿಡುವದು ಎಂದರೇನು? agree and disagree? ಇದು ಭಾರತೀಯರಿಗೆ ಅನುಭವವಿಲ್ಲ. ನ್ಯಾಯಾಂಗ, ಸಂವಿಧಾನ, ದೇಶ, ಗಡಿ, ಪೆಟ್ರಿಯಾಟಿಸಂ ಇವೆಲ್ಲವೂ ಥಿಯಾಲಜಿಯೇ. ಬ್ರಿಟೀಷರು ಕಲಿಸಿ ಬಿಟ್ಟು ಹೋದದ್ದೇ. ಅದನ್ನು ಇಟ್ಟುಕೊಂಡಿದ್ದೇವೆ. ಒಪ್ಪಿಕೊಂಡಿದ್ದಾರೋ, ಬಿಟ್ಟಿದ್ದಾರೋ (agree-disagree ಅರ್ಥದಲ್ಲಿ) ಚರ್ಚೆಯೇ ಅಪ್ರಸ್ತುತ. ಕಾರಣ ಭಾರತೀಯರಿಗೆ ಎರಡೂ ಗೊತ್ತಿಲ್ಲ ಭಾರತೀಯರ ಪಾಲಿಗೆ. ಒಂದು ವ್ಯವಸ್ಥೆಯನ್ನು ಒಪ್ಪಿಕೊಳ್ಳುವದು ಮತ್ತು ಬಿಡುವದು (agree-disagree ಅರ್ಥದಲ್ಲಿ) ಎಂಬ ಎರಡೇ ಆಯ್ಕೆಗಳಿಲ್ಲ. ಭಾರತೀಯರಿಗೆ ಮೂರನೇಯದು/ನಾಲ್ಕನೇಯದು ಆಯ್ಕೆ ಗೊತ್ತಿದೆ. ಅದನ್ನು ನಾವುಗಳು ಮಾಡಿಕೊಂಡಿದ್ದೇವೆ. ಆ ಮೂರನೇಯದು/ನಾಲ್ಕನೇಯದು ಯಾವದು ಎಂಬುದು ನಿಮಗೂ ಗೊತ್ತಿದೆ. 😀 😀 😀 😀 😛 😛 😛 😛
ನಾನು ನಿಮಗೆ ಯಾವುದನ್ನೂ ಆಗ್ರಹಿಸಿಲ್ಲ. ದ್ವಂದ್ವವನ್ನಷ್ಟೆ ಪ್ರಶ್ನಿಸುತ್ತಿದ್ದೇನೆ. => ಒಪ್ಪಿಕೊಳ್ಳುವದು ಮತ್ತು ಬಿಡುವದು (agree-disagree ಅರ್ಥದಲ್ಲಿ) ಎಂಬ ಎರಡೇ ಆಯ್ಕೆಗಳು ಭಾರತೀಯರ ಮುಂದೆ ಇಲ್ಲ. ಅವೆರಡನ್ನೂ ಮೀರಿದ ಆಯ್ಕೆಗಳನ್ನು ಭಾರತೀಯರು ಆಯ್ದುಕೊಂಡಿರುವದರಿಂದ ದ್ವಂದ್ವಕ್ಕೆ ಅವಕಾಶವಿಲ್ಲ. ನಾವು ನಮ್ಮದೇ ಮೂಲ ರೀತಿಯಲ್ಲಿ ಒಪ್ಪಿಕೊಂಡಿದ್ದೇವೆ (ಅಳವಡಿಸಿಕೊಂಡಿದ್ದೇವೆ) ಮತ್ತು ಬಿಟ್ಟಿದ್ದೇವೆ (ತ್ಯಜಿಸಿದ್ದೇವೆ). ಉದಾ: ಅಪ್ಪನ ಹೊಲದಲ್ಲಿ ಪಾಲು ಸಿಗಲಿಲ್ಲ ಎಂದು ಮಗ ಕೋರ್ಟಿಗೆ ಹೋಗುತ್ತಾನೆ. ಆದರೆ ಅವನ ಹೊಲವನ್ನು ದೇಶದ ಒಂದು ಪ್ರೊಜೆಕ್ಟಿಗಾಗಿ ಬಿಡಬೇಕಾದ ಸಂದರ್ಭ ಬಂದರೆ ರಾಜಕಾರಣಿಯನ್ನು ಒಲಿಸಿಕೊಳ್ಳುವ ಯತ್ನ ಮಾಡುತ್ತಾನೆ.
೧. ನೀವು ಒಪ್ಪಿಕೊಳ್ಳುವ ವಸಾಹತು ಪ್ರಜ್ಞೆ(ನ್ಯಾಯಾಂಗ, ಸಾರ್ವಭೌಮತ್ವ ಇತ್ಯಾದಿ), ೨. ಒಪ್ಪಿಕೊಳ್ಳದ ವಸಾಹತುಶಾಹಿ ಪ್ರಜ್ಞೆ (ಪುರೋಹಿತಶಾಹಿಯ ವ್ಯಾಖ್ಯಾನ, ಎಡಪಂಥೀಯರ ನಿರೂಪಣೆ ಇತ್ಯಾದಿ). ಅಲ್ಲವೇ? => ಇಲ್ಲ. again.. ನ್ಯಾಯಾಂಗ, ಸಾರ್ವಭೌಮತ್ವ, ಪುರೋಹಿತಶಾಹಿ, ಎಡಪಂಥಗಳು ಒಪ್ಪಿಕೊಳ್ಳುವ ಅಥವಾ ಬಿಡುವ ಆಯ್ಕೆಗಳಷ್ಟೇ (agree-disagree ಅರ್ಥದಲ್ಲಿ) ನಮಗಿಲ್ಲ. ಅದಕ್ಕಿಂತ ಹೆಚ್ಚಿನ ಆಯ್ಕೆಗಳಿವೆ. ಅವುಗಳನ್ನು ನಾವು ಮಾಡಿಕೊಂಡಿದ್ದೇವೆ.
ನೀವು agree-disagree ಎಂಬರ್ಥದಲ್ಲಿ ಒಪ್ಪು-ಬಿಡುಗಳನ್ನು “ತ್ಯಜಿಸಿ” (ಕ್ರಿಯಾಜ್ಞಾನದ ಅರ್ಥದಲ್ಲಿ) ಏನು ಮಾಡಿಕೊಂಡಿದ್ದೇವೆ ಎಂಬುದರ ಕುರಿತು ವಿಚಾರಿಸಿ ನಂತರ ಬನ್ನಿ. ಚರ್ಚಿಸೋಣ.
“ಥಿಯಾಲಜಿಯಿಂದ ಬೆಳೆದುಬಂದ ಎಂಜಿನೀಯರಿಂಗ್ ಪ್ರೊಡಕ್ಟುಗಳಾದ ಕಾರು ಸ್ಕೂಟರನ್ನು ಬಿಡಬೇಕೆ ಎಂಬ ನನ್ನ ಹಿಂದಿನ ಪ್ರಶ್ನೆಯ ಹಿನ್ನೆಲೆಯನ್ನು ನೀವು ಸೂಕ್ಷ್ಮವಾಗಿ ಗಮನಿಸಿಲ್ಲ ಎಂಬುದು ಖಾತ್ರಿಯಾಯಿತು.”
ಅದನ್ನು ಗಮನಿಸಿದ್ದೇನೆ. ಥಿಯಾಲಜಿಯಿಂದ ಬೆಳೆದುಬಂದ ಯಾವುದೇ ಪ್ರಾದಕ್ಟುಗಳನ್ನು ಬಿಡಬೇಕು ಅಥವಾ ಬಿಡಬಾರದು ಅಂದು ಆಗ್ರಹಿಸುತ್ತಿಲ್ಲ. ವಸಾಹತುಪ್ರಜ್ಞೆ ಯ ವಿಷಯದಲ್ಲಿ ನಿಮ್ಮ ದ್ವಂದ್ವವನ್ನು ಪ್ರಶ್ನಿಸುತ್ತಿದ್ದೇನೆ ಅಷ್ಟೆ. ನಿಮಗೆ ದೇಶದ ಸಾರ್ವಭೌಮತ್ವ, ನ್ಯಾಯಾಂಗದ ಮುಂತಾದ ವಿಷಯದಲ್ಲಿ ವಸಾಹತು ಪ್ರಜ್ಞೆ ಬೇಕು. ಆದರೆ ಎಡಪಂಥಿಯರ ವಸಾಹತುಪ್ರಜ್ಞೆ ಬೇಡ. ಈ ದ್ವಂದ್ವವನ್ನು ನಾನು ಪ್ರಶ್ನಿಸುತ್ತಿರುವದು. ಈ ದ್ವಂದ್ವ ವೈಜ್ಞಾನಿಕ ವಿವರಣೆ ಎನಿಸಿಕೊಳ್ಳುವದಿಲ್ಲ. ಉದಾರಣೆಗೆ ಉಮರ್ ಖಾಲಿದ್ ನಂತವರು ಬಾಲಗಂಗಾಧರ್ ಹಾಗೂ ನಿಮ್ಮ ಲಾಜಿಕ್ಕಿನ ಪ್ರಕಾರ ಹೀಗೆ ಸಮರ್ಥಿಸಿಕೊಳ್ಳಬಹುದು: “ಭಾರತೀಯ ದೇಶ, ಸಾರ್ವಭೌಮತ್ವ, ನ್ಯಾಯಾಂಗ ಎನ್ನುವದೆಲ್ಲ ವಸಾಹತುಪ್ರಜ್ಞೆ. ಈ ವಸಾಹತುಪ್ರಜ್ಞೆಯ ಕಣ್ಣಿನಿಂದ ನೋಡಿದಾಗ ವಿಲನ್ ಆಗುತ್ತೇನೆ ಅಷ್ಟೆ”
ಹಾಗಾಗಿ ದೇಶದ ಪರ ನಿಂತಿರುವ ನೀವೂ(ನನ್ನನ್ನೂ ಸೇರಿದಂತೆ), ದೇಶದ ಸಾರ್ವಭೌಮತ್ವದ ವಿರುದ್ಧ ಇರುವ ಅವನೂ/ಅವರೂ ಇರುವದು ವಸಾಹತುಪ್ರಜ್ನೆಯ ವ್ಯವಸ್ಥೆಯಲ್ಲಿ. ಇವರೀರ್ವರಲ್ಲಿ ಸರಿ ತಪ್ಪನ್ನು ನಿರ್ಣಯಿಸಲಾಗುವದಿಲ್ಲ. ವೈಜ್ಞಾನಿಕ ವಿವರಣೆಯನ್ನು ನೀವು ನೀಡುತ್ತಿದ್ದರೆ ನ್ಯಾಯಾಂಗದ ಪರ, ಸಾರ್ವಭೌಮತೆಯ ಪರ ಹೇಗೆ ನಿಲ್ಲುತ್ತೀರಿ? ಎಡಪಂಥೀಯರನ್ನು ತಪ್ಪಿತಸ್ಥ ಸ್ಥಾನದಲ್ಲಿ ಹೇಗೆ ನಿಲ್ಲುಸಿತ್ತೀರಿ? ಇದು ನನ್ನ ಪ್ರಶ್ನೆ ಅಷ್ಟೆ.
“ಇವು agree-disagree ಎಂಬರ್ಥದಲ್ಲಿವೆ. ಆದರೆ ಈ ರೀತಿಯ ಒಪ್ಪು-ಬಿಡು ಗಳು ನಮ್ಮಲ್ಲಿವೆಯೇ?..ಈಗ ಹೇಳಿ ಒಪ್ಪಿಕೊಳ್ಳುವದು ಮತ್ತು ಬಿಡುವದು ಎಂದರೇನು? agree and disagree? ಇದು ಭಾರತೀಯರಿಗೆ ಅನುಭವವಿಲ್ಲ. ”
agree-disagree ಎಂಬರ್ಥವನ್ನು ಯಾಕೆ ಇಲ್ಲಿ ತರುತ್ತೀರಿ? ನಾನು agree-disagree ಶಬ್ದವನ್ನು ಪ್ರಸ್ಥಾಪಿಸಿಯೇ ಇಲ್ಲ. ಹೇಳದಿದ್ದನ್ನು ಕಲ್ಪಿಸಿ ಯಾಕೆ ನೀವು ವಿಷಯವನ್ನು ಬೇರೆಡೆ ಹೊರಳುಸುತ್ತೀರಿ? ಒಪ್ಪುವದು ವಸಾಹತುಕಾಲಕ್ಕಿಂತಲೂ ಮುಂಚೆ ಇದ್ದ ಕನ್ನಡ ಶಬ್ದ. ‘ನ್ಯಾಯಾಂಗ, ಸಾರ್ವಭೌಮತ್ವವನ್ನು ನಾನು ಒಪ್ಪಿಕೊಳ್ಳುವದಿಲ್ಲ, ಇಟ್ಟುಕೊಳ್ಳುತ್ತೇನೆ’ ಎಂದರೆ ಅದರ ಅರ್ಥ ಏನು ಅಂತ ನೀವೆ ಹೇಳಬೇಕು.
“ಇಲ್ಲ. again.. ನ್ಯಾಯಾಂಗ, ಸಾರ್ವಭೌಮತ್ವ, ಪುರೋಹಿತಶಾಹಿ, ಎಡಪಂಥಗಳು ಒಪ್ಪಿಕೊಳ್ಳುವ ಅಥವಾ ಬಿಡುವ ಆಯ್ಕೆಗಳಷ್ಟೇ (agree-disagree ಅರ್ಥದಲ್ಲಿ) ನಮಗಿಲ್ಲ. ಅದಕ್ಕಿಂತ ಹೆಚ್ಚಿನ ಆಯ್ಕೆಗಳಿವೆ. ಅವುಗಳನ್ನು ನಾವು ಮಾಡಿಕೊಂಡಿದ್ದೇವೆ.”
ಅಂದರೆ ನೀವು, ಹಾಗೂ ಶಿಷ್ಯಕೋಟಿಗಳು ಸಾರ್ವಭೌಮತ್ವವನ್ನು ಒಪ್ಪುವದಿಲ್ಲವೇ?(ನಾನು ಬಳಸದಿರುವ ಶಬ್ದಗಳನ್ನು ಎಳೆತರಬೇಡಿ. ಒಪ್ಪುವದು ಎನ್ನುವದು ಕನ್ನಡ ಶಬ್ದ, ಅದರ ಅರ್ಥದಲ್ಲಿಯೇ ಕೇಳಿದ್ದು). ಅದಕ್ಕಿಂತ ಹೆಚ್ಚಿನ ಆಯ್ಕೆಗಳು ಯಾವವು? ‘ಸಾರ್ವಭೌಮತ್ವವನ್ನು ಒಪ್ಪುವದಿಲ್ಲ’ ಎನ್ನುವದು ಮೊದಲನೆಯದಾಗಿ ದೇಶವಿರೋಧಿ ಮಾತು. ಮತ್ಯಾಕೆ ಎಡಪಂಥೀಯರಿಗೆ ದೇಶವಿರೋಧಿಗಳೆನ್ನುತ್ತೀರಿ?
[ಶಿಶ್ಯಕೋಟಿಗಳು ಇಲ್ಲಿ ಜರೂರಾಗಿ ಬಂದು ಈ ಸಮಸ್ಯೆಯನ್ನು ಬಿಡಿಸತಕ್ಕದ್ದು: ‘ದೇಶದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವದಿಲ್ಲ, ಬದಲಾಗಿ ಇಟ್ಟುಕೊಳ್ಳುತ್ತೇವೆ’ ಎನ್ನುವ ಕಗ್ಗಂಟನ್ನು ಬಗೆಹರಿಸಬೇಕಾಗಿ ವಿನಂತಿ. 😀 ]
ಅದನ್ನು ಗಮನಿಸಿದ್ದೇನೆ. ಥಿಯಾಲಜಿಯಿಂದ ಬೆಳೆದುಬಂದ ಯಾವುದೇ ಪ್ರಾದಕ್ಟುಗಳನ್ನು ಬಿಡಬೇಕು ಅಥವಾ ಬಿಡಬಾರದು ಅಂದು ಆಗ್ರಹಿಸುತ್ತಿಲ್ಲ. => ನಾವು ಥಿಯಾಲಜಿಯ ಪ್ರಾಡಕ್ಟುಗಳಾದ ಕಾರುಗಳನ್ನು ಒಪ್ಪಿಕೊಂಡಿದ್ದೇವೋ ಇಲ್ಲವೇ ವಿರೋಧಿಸಿದ್ದೇವೋ? ಎರಡೂ ಅಲ್ಲ. ನಾವು ಒಂದೋ ನಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳುತ್ತಿದ್ದೇವೆ ಇಲ್ಲವೇ ಉಪಯೋಗಿಸದೇ ಸುಮ್ಮನಿರುತ್ತೇವೆ. ಇದೇ ಮಾತು ಥಿಯಾಲಜಿಯಿಂದ ಬಂದ ಪ್ರಾಡಕ್ಟುಗಳಾದ ಸಂವಿಧಾನ, ನ್ಯಾಯಾಂಗ, ಇತ್ಯಾದಿಗೂ ಅನ್ವಯಿಸುತ್ತದೆ. ಅಪ್ಪನ ಆಸ್ತಿಯನ್ನೆಲ್ಲ ಪಂಚಾಯ್ತಿ ಅಣ್ಣನಿಗೇ ಕೊಟ್ಟಾಗ ಪಾಲನ್ನು ಪಡೆಯಲು ನ್ಯಾಯಾಂಗವನ್ನು ಉಪಯೋಗಿಸುತ್ತೇವೆ.ಆದರೆ ಮಗಳು ಬೇರೆಜಾತಿಯ ಹುಡುಗನನ್ನು ಮದುವೆಯಾಗುವ ಹಠ ತೊಟ್ಟರೆ ಪಂಚಾಯ್ತಿ ಪಂಚರನ್ನು ಬುದ್ಧಿ ಹೇಳಲು ಕರೆಸುತ್ತೇವೆ. ಅಂದರೆ ಭಾರತೀಯರು ತಮ್ಮ ಅಗತ್ಯತೆಗಳನ್ನು ಸ್ಪಷ್ಟವಾಗಿ ಪೂರೈಸುವ ಮಾರ್ಗವನ್ನು ತಿಳಿದುಕೊಂಡಿದ್ದಾರೆ ಮತ್ತು ಅವನ್ನು ಮುಲಾಜಿಲ್ಲದೇ ಆಯ್ದುಕೊಳ್ಳುತ್ತಾರೆ. ನಾವು ಥಿಯಾಲಜಿಯ ಪ್ರಾಡಕ್ಟುಗಳನ್ನು ಬೇಕಾದಲ್ಲಿ ಬಳಸಿಕೊಳ್ಳುತಿದ್ದೇವೆ. ಕಾರನ್ನು ಒಪ್ಪಿಕೊಳ್ಳುವದು ಎನ್ನುವದು ಹೇಗೆ ನಮಗೆ ಅರ್ಥವಾಗುವದಿಲ್ಲವೋ ಹಾಗೇ ಇದೂ. ಇದರಲ್ಲಿ ನಿಮಗೆ ದ್ವಂದ್ವ ಕಾಣಿಸಿದರೆ ನಾನು ಜವಾಬ್ದಾರನಲ್ಲ.
ನಿಮಗೆ ದೇಶದ ಸಾರ್ವಭೌಮತ್ವ, ನ್ಯಾಯಾಂಗದ ಮುಂತಾದ ವಿಷಯದಲ್ಲಿ ವಸಾಹತು ಪ್ರಜ್ಞೆ ಬೇಕು. ಆದರೆ ಎಡಪಂಥಿಯರ ವಸಾಹತುಪ್ರಜ್ಞೆ ಬೇಡ.=> ಅಲ್ಲ. ದೇಶದ ನ್ಯಾಯಾಂಗ, ಸಾರ್ವಭೌಮತ್ವದ ವಸಾಹತುಪ್ರಜ್ಞೆ ಮತ್ತು ಎಡಪಂಥೀಯರ ವಸಾಹತುಪ್ರಜ್ಞೆ ಬೇರೆ ಬೇರೆ ಅಲ್ಲ. ನ್ಯಾಯಾಂಗವನ್ನು, ಸಾರ್ವಭೌಮತ್ವವನ್ನು ಒಪ್ಪುವದಾಗಲೀ, ಬಿಡುವದಾಗಲೀ ಅಲ್ಲ, ಎಲ್ಲಿ ಉಪಯೋಗಿಸಬೇಕೋ ಅಲ್ಲಿ ಉಪಯೋಗಿಸುತ್ತೇವೆ. ಎಲ್ಲಿ ಬೇಡವೋ ಅಲ್ಲಿ ಬಿಡುತ್ತೇವೆ. ನಾನು ಮನೆ ಕಟ್ಟಲು ಜಾಗವನ್ನು ರೆಜಿಸ್ಟ್ರಿ ಮಾಡಬೇಕಾಗುತ್ತದೆ. ಹೀಗಾಗಿ ರೆಜಿಸ್ಟ್ರಾರ್ ಆಫೀಸಿಗೆ ಹೋಗುತ್ತೇನೆ. ಇಲ್ಲವಾದಲ್ಲಿ ನಾನು ಸುರಿಸಿದ ಹಣ ವ್ಯರ್ಥವಾಗುತ್ತದೆ (ಆ ದರ್ದೇ ಕಾರಣ ಹೊರತು ಕಾನೂನಿಗೆ ಹೆದರಿಕೊಂಡಲ್ಲ). ಆದರೆ ರೆಜಿಸ್ಟ್ರಾರಿಗೆ ಬೇರೆ ಲೆಕ್ಕ ತೋರಿಸಿ, ಹಣ ಉಳಿಸಿಕೊಳ್ಳುತ್ತೇವೆ. ಹೀಗಾಗಿ ಆ ಸಂದರ್ಭದ ಅಗತ್ಯತೆಗಳಿಗೆ ತಕ್ಕಂತೆ ನಾವು ವಸಾಹತುಪ್ರಜ್ಞೆಯ ಪ್ರೊಡಕ್ಟನ್ನು ನಮ್ಮ ಇಷ್ಟಪ್ರಾಪ್ತಿ, ಅನಿಷ್ಟಪರಿಹಾರಗಳಿಗೆ ಅನುಕೂಲವಾದಾಗ ಬಳಸಿಕೊಂಡು ಅನಾನುಕೂಲವಾದಾಗ ತ್ಯಜಿಸಿಕೊಂಡು ಮಜವಾಗಿದ್ದೇವೆ.
agree-disagree ಎಂಬರ್ಥವನ್ನು ಯಾಕೆ ಇಲ್ಲಿ ತರುತ್ತೀರಿ? ನಾನು agree-disagree ಶಬ್ದವನ್ನು ಪ್ರಸ್ಥಾಪಿಸಿಯೇ ಇಲ್ಲ. => ನಾವು ಭಾರತೀಯರು ಒಪ್ಪು-ಬಿಡು ಶಬ್ದಗಳನ್ನು ಬಳಸಿಕೊಳ್ಳುವದು ಇಲ್ಲವೇ ಬಳಸದೇ ತ್ಯಜಿಸುವದು ಎಂಬರ್ಥದಲ್ಲಿ ಉಪಯೋಗಿಸುತ್ತೇವೆ. ಹೀಗಾಗಿ ಅದನ್ನು ಪ್ರತ್ಯೇಕಿಸಲು agree-disagree ಎಂಬರ್ಥದಲ್ಲಿ ನಾವು ಒಪ್ಪು-ಬಿಡುಗಳನ್ನು ಬಳಸುವದಿಲ್ಲ ಎಂದಿದ್ದೇನೆ. ನೀವು agree-disagree ಶಬ್ದಗಳನ್ನು ಉಪಯೋಗಿಸಿಲ್ಲ ನಿಜ. ಆದರೆ ಒಪ್ಪು-ಬಿಡುಗಳನ್ನು ಭಾರತೀಯರ ಅರ್ಥದಲ್ಲಿ ಬಳಸದೇ agree-disagree ಅರ್ಥದಲ್ಲಿ ಬಳಸಿದ್ದೀರಿ. ಆದ್ದರಿಂದಲೇ ನೀವು ದ್ವಂದ್ವಗಳನ್ನು ಕಾಣುತ್ತಿದ್ದೀರಿ.
ವೈಜ್ಞಾನಿಕ ವಿವರಣೆಯನ್ನು ನೀವು ನೀಡುತ್ತಿದ್ದರೆ ನ್ಯಾಯಾಂಗದ ಪರ, ಸಾರ್ವಭೌಮತೆಯ ಪರ ಹೇಗೆ ನಿಲ್ಲುತ್ತೀರಿ? ಎಡಪಂಥೀಯರನ್ನು ತಪ್ಪಿತಸ್ಥ ಸ್ಥಾನದಲ್ಲಿ ಹೇಗೆ ನಿಲ್ಲುಸಿತ್ತೀರಿ? ಉದಾರಣೆಗೆ ಉಮರ್ ಖಾಲಿದ್ ನಂತವರು ಬಾಲಗಂಗಾಧರ್ ಹಾಗೂ ನಿಮ್ಮ ಲಾಜಿಕ್ಕಿನ ಪ್ರಕಾರ ಹೀಗೆ ಸಮರ್ಥಿಸಿಕೊಳ್ಳಬಹುದು: “ಭಾರತೀಯ ದೇಶ, ಸಾರ್ವಭೌಮತ್ವ, ನ್ಯಾಯಾಂಗ ಎನ್ನುವದೆಲ್ಲ ವಸಾಹತುಪ್ರಜ್ಞೆ. ಈ ವಸಾಹತುಪ್ರಜ್ಞೆಯ ಕಣ್ಣಿನಿಂದ ನೋಡಿದಾಗ ವಿಲನ್ ಆಗುತ್ತೇನೆ ಅಷ್ಟೆ” => ಆಯಿತು, ಆ ಕಣ್ಣು ತೆಗೆದಿಟ್ಟು ಬೇರೆ ಯಾವುದಾದರೂ ಕಣ್ಣಿನಿಂದ ಆತ ಹೀರೋ ಆಗಿ ಕಾಣಬಹುದೇ? ಹೌದು. ಪಾಕಿಸ್ತಾನಿ ಕಣ್ಣಿಗೆ ಕಾಣಿಸಬಹುದು. ಆದರೆ ನಮ್ಮದೇ ದೇಶದ ಎಡಪಂಥೀಯರ ಕಣ್ಣಿಗೂ (ಎರಡೂ ಕಣ್ಣುಗಳೂ ವಸಾಹತುಪ್ರಜ್ಞೆಯಲ್ಲಿಯೇ ಇವೆ) ಆತ ಹೀರೋ ಆಗುತ್ತಿದ್ದಾನೆ. ನಾವು ಇಲ್ಲಿ ನ್ಯಾಯಾಂಗದಿಂದ ಶಿಕ್ಷೆಗೊಳಗಾದ ಭಯೋತ್ಪಾದಕನನ್ನು ವಿಲನ್ ಎಂದೇ ಕರೆಯುತ್ತೇವೆ. ಕಾರಣ ಭಾರತೀಯರೂ ಸಂದರ್ಭಗಳಿಗನುಸಾರವಾಗಿ ಹೀರೋ-ವಿಲನ್ನುಗಳನ್ನು ಮಾಡಿಕೊಳ್ಳುತ್ತಾರೆ. ಹಾಗೆ ಮಾಡಿಕೊಳ್ಳಲು ಆ ಉಗ್ರರು ಮಾಡಿರುವ ಕೃತ್ಯಗಳು ಮತ್ತು ಅದರಿಂದಾದ ಹಾನಿಗಳನ್ನಷ್ಟೇ ಗಣನೆಗೆ ತೆಗೆದುಕೊಳ್ಳುತ್ತಾರೆ. ಹೊರತು ಅಲ್ಲಿ ಯಾವ ಕಾನೂನುಗಳನ್ನು ಈ ಉಗ್ರರು ಮುರಿದಿದ್ದಾರೆ ಎಂಬುದು ಅವರಿಗೆ ಮುಖ್ಯವೇ ಅಲ್ಲ. ಎಲ್ಲಿ ನ್ಯಾಯಾಂಗದ ನಿರ್ಣಯ ಜನರ ನಿರ್ಣಯದೊಂದಿಗೆ ಸರಿಹೊಂದುತ್ತೋ ಅಲ್ಲಿ ಅದರ ಪರವಾಗಿ ಬರುತ್ತಾರೆ.
‘ನ್ಯಾಯಾಂಗ, ಸಾರ್ವಭೌಮತ್ವವನ್ನು ನಾನು ಒಪ್ಪಿಕೊಳ್ಳುವದಿಲ್ಲ, ಇಟ್ಟುಕೊಳ್ಳುತ್ತೇನೆ’ ‘ಸಾರ್ವಭೌಮತ್ವವನ್ನು ಒಪ್ಪುವದಿಲ್ಲ’ ಎನ್ನುವದು ಮೊದಲನೆಯದಾಗಿ ದೇಶವಿರೋಧಿ ಮಾತು. => ಒಪ್ಪಿಕೊಳ್ಳುವದಿಲ್ಲಅಥವಾ ಒಪ್ಪಿಕೊಳ್ಳುತ್ತೇವೆ ಎಂಬುದೇ ಅಪ್ರಸ್ತುತ. ಕಾರಣ ಸಾರ್ವಭೌಮತ್ವ ಮತ್ತು ನ್ಯಾಯಾಂಗವನ್ನು ಒಪ್ಪಿಕೊಳ್ಳುವದು ಎಂದರೇನು ಎಂಬುದೇ ಸ್ಪಷ್ಟವಿಲ್ಲ. ಕಾರನ್ನು ಮತ್ತು ಸ್ಕೂಟರನ್ನು ಒಪ್ಪಿಕೊಳ್ಳುವದು ಎಂದರೇನು? ಭಾರತೀಯರಿಗೆ ಅನುಕೂಲಕ್ಕೆ ತಕ್ಕಂತೆ ಸಾರ್ವಭೌಮತ್ವ ಮತ್ತು ನ್ಯಾಯಾಂಗವನ್ನು ಬಳಸಿಕೊಳ್ಳುವದಷ್ಟೇ ಗೊತ್ತು.
ಈ ‘ಅಪ್ರಜ್ಞೆ’ಗೆ ಉಮರ್ ಖಾಲೀದ್ ನೂ ಸಹ ‘ವಸಾಹತು ಪ್ರಜ್ಞೆ’ಯ ಸುಪತ್ರನಂತೆ ಯಾಕೆ ಕಾಣುತ್ತಿಲ್ಲ ಅಂತ ನಿಮಗೆ ಗೊತ್ತಾಗಿಲ್ವಾ ಹಂಪಿಹೊಳಿಯವ್ರೇ?
ನಾಳೆ ಈ ‘ಅರೆಪ್ರಜ್ಞೆ’ಯು ಏನು ಹೇಳುತ್ತೆ ಅಂದ್ರೆ: ದೇಶಲ್ಲಿರೋ ವಿಶ್ವವಿಧ್ಯಾಲಯ, ಶಾಲೆ, ಕಾಲೇಜುಗಳಲ್ಲಿ ಯಾರೂ ಸೇರಿಓದಬೇಡಿ, ಕೆಲಸ ಮಾಡಬೇಡಿ, ತಮ್ಮ ತಮ್ಮ ನೌಕರಿ ಬಿಟ್ಟು ಹೊರಬನ್ನಿ, ಕೋರ್ಟು ಕಛೇರಿಗಳಿಗೆ ಹೋಗಬೇಡಿ, ಕಾನೂನು, ರಸ್ತೆ ನಿಯಮಗಳನ್ನು ಸಹ ಪಾಲಿಸಬೇಡಿ, ಓಟ್ ಹಾಕಬೇಡಿ, ವಿಧಾನ ಸಭೆಗೆ ಹೋಗಬೇಡಿ, ಮನೆಗೆ ನಲ್ಲಿ-ನೀರಿನ ವ್ಯವೆಸ್ಥೆಯನ್ನೂ ತಗೋಬೇಡಿ ಎಲ್ವೂ ‘ವಸಾಹತುಶಾಹಿ ಪ್ರಜ್ಞೆ’. ಹಿಗೆಲ್ಲಾ ವರಾತ ತೆಗೀಲಿಲ್ಲ ಅಂದ್ರೆ ಕೇಳಿ. ರೀ ಹಂಪಿಹೊಳಿಯವರೆ… ಸ್ವಲ್ಪವೂ ಕಾಮನ್ ಸೆನ್ಸ್ ಇಲ್ದಿರೋ ‘ಅಪ್ರಜ್ಞೆ’ಯತ್ರ ಏನ್ರೀ ನಿಮ್ ಗೋಳು!! ಅದನ್ನ ಅದರ ಪಾಡಿಗೆ ಒಯ್ಕೊಳಕ್ಕೆ ಬಿಟ್ಟು ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದೆ ಇದೇ ರೀತಿಯ ಇನ್ನೂ ಕೆಲವು ಲೇಖನ ಬರೆದು ನಮಗೆ ಉಣಬಡಿಸ್ರೀ.. 🙂
“ಇದೇ ಮಾತು ಥಿಯಾಲಜಿಯಿಂದ ಬಂದ ಪ್ರಾಡಕ್ಟುಗಳಾದ ಸಂವಿಧಾನ, ನ್ಯಾಯಾಂಗ, ಇತ್ಯಾದಿಗೂ ಅನ್ವಯಿಸುತ್ತದೆ”
ಹೀಗೆ ಎಡಪಂಥೀಯರೂ ವಾದಿಸಬಹುದಲ್ಲವೇ? ‘ನಮಗೆ ಬೇಕಾದ ವಸಾಹತುಪ್ರಜ್ನೆಯನ್ನು ಆಯ್ದುಕೊಳ್ಳುತ್ತೇವೆ’ ಎಂದು. ಅವರ ವಸಾಹತುಪ್ರಜ್ನೆಯನ್ನು ಮತ್ಯಾಕೆ ವಿರೋಧಿಸುತ್ತೀರಿ?
“ಅಪ್ಪನ ಆಸ್ತಿಯನ್ನೆಲ್ಲ ಪಂಚಾಯ್ತಿ ಅಣ್ಣನಿಗೇ ಕೊಟ್ಟಾಗ ಪಾಲನ್ನು ಪಡೆಯಲು ನ್ಯಾಯಾಂಗವನ್ನು ಉಪಯೋಗಿಸುತ್ತೇವೆ. ..ನಾವು ಥಿಯಾಲಜಿಯ ಪ್ರಾಡಕ್ಟುಗಳನ್ನು ಬೇಕಾದಲ್ಲಿ ಬಳಸಿಕೊಳ್ಳುತಿದ್ದೇವೆ.”
ನ್ಯಾಯಾಂಗವನ್ನು ಉಪಯೋಗಿಸುವದು ಎಂದರೆ ಕೋರ್ಟನ್ನು ಉಪಯೋಗಿಸಿದಾಗ ಮಾತ್ರ ಉಪಯೋಗಿಸಿದಂತೆ ಎಂದಲ್ಲ. ವಸಾಹತು ದೇಶಗಳಲ್ಲಿಯೂ ಕೋರ್ಟನ್ನು ಬೇಕಾದಾಗಲೇ ಉಪಯೋಗಿಸುತ್ತಾರೆ. ನೀವು ಪಂಚಾಯತಿಯ ತೀರ್ಮಾನವನ್ನು ಒಪ್ಪಿಕೊಂಡರೂ, ಪಂಚಾಯತಿಯ ತೀರ್ಮಾನ ಎಲ್ಲಿಯವರೆಗೆ ನ್ಯಾಯಾಂಗದ ಪರೀಧಿಯಲ್ಲಿರುತ್ತದೆಯೋ ಅಲ್ಲಿಯವರೆಗೆ ನೀವು ನ್ಯಾಯಾಂಗವನ್ನು ಒಪ್ಪಿಕೊಂಡಿದ್ದೀರಂತಲೇ ಅರ್ಥ. ನಿಮ್ಮ ಪಂಚಾಯತಿಯ ತೀರ್ಮಾನ ನ್ಯಾಯಾಂಗಕ್ಕೆ ವಿರುದ್ಧವಾಗುವಂತಿದ್ದರೆ ಅದು ಅಟ್ರಾಸಿಟಿ ಯೋ ಅಥವಾ ನ್ಯಾಯಾಂಗದ ಉಲ್ಲಂಘನೆಯೋ ಆಗಿ ಬಿಡುವ ಸಾಧ್ಯತೆ ಇದೆ. ಸುಪ್ರೀಮ್ ಕೋರ್ಟ್ ಖಪ್ ಪಂಚಾಯತಿಯಾ ತೀರ್ಮಾನಗಳನ್ನು ಅಸಿಂಧು, ಇಲ್ಲೀಗಲ್ ಎಂದಿದೆ. ಇಂತಹ ಪಂಚಾಯತಿಯ ತೀರ್ಮಾನಗಳು ಭಾರತೀಯರೆಲ್ಲರೂ ಆಯ್ದುಕೊಂಡದ್ದು ಎನ್ನಲು ಸಾಧ್ಯವಿಲ್ಲ. ಎಷ್ಟೊ ಸಮಯದಲ್ಲಿ ಹರ್ಯಾಣದ ಕಪ್ ಪಂಚಾಯತಿ ಕೊಡುವ ತೀರ್ಮಾನಗಳನ್ನು ಜನ ಒಪ್ಪದೇ ಇದ್ದರೂ ಬಲವಂತವಾಗಿ ಅವರ ಮೇಲೆ ಹೇರಿದ ಬೇಕಾದಷ್ಟು ಉದಾರಣೆಗಳಿವೆ. ಅಮಾನವೀಯವೆನಿಸಿದ ಘಟನೆಗಳಿವೆ. ಖಪ್ ಪಂಚಾಯತಿ ಭಾರತೀಯ ಮಾದರಿ, ಸಂಪ್ರದಾಯ ಎನ್ನುತ್ತಾ ಅಲ್ಲಿನ ತೀರ್ಮಾನಗಳನ್ನು ಪುರಸ್ಕರಿಸುವ ಮಹಾಕಾರ್ಯವನ್ನು ಶಿಷ್ಯಕೋಟಿಗಳಂತ ಅಪ್ರಬುದ್ಧರು ಮಾತ್ರ ಮಾಡಬಲ್ಲರು.
” ನಾವು ಭಾರತೀಯರು ಒಪ್ಪು-ಬಿಡು ಶಬ್ದಗಳನ್ನು ಬಳಸಿಕೊಳ್ಳುವದು ಇಲ್ಲವೇ ಬಳಸದೇ ತ್ಯಜಿಸುವದು ಎಂಬರ್ಥದಲ್ಲಿ ಉಪಯೋಗಿಸುತ್ತೇವೆ.”
ಇಲ್ಲಿ ಮೂರು ತಪ್ಪುಗಳಿವೆ. ಒಂದು, ನಾನು ‘ಒಪ್ಪು-ಬಿಡು’ ಎಂಬ ಶಬ್ದ ಉಪಯೋಗಿಸಿಲ್ಲ. ‘ಒಪ್ಪುವದು’ ಎಂಬ ಶಬ್ದ ಮಾತ್ರ ಉಪಯೋಗಿಸಿದ್ದೇನೆ. ಮತ್ತೆ ನೀವು ನಾನು ಬಳಸಿಲ್ಲದ ಶಬ್ದವನ್ನು ಹೊರಡಿಸುತ್ತಿದ್ದೀರಿ.
ಎರಡು: ‘ಒಪ್ಪುವದು’ ಎನ್ನುವದಕ್ಕೆ ‘ಬಳಸುವದು’ ಎಂಬ ಶಬ್ದರ್ಥವಿಲ್ಲ. ಈ ಶಬ್ದಾರ್ಥವನ್ನು ಶಿಷ್ಯಕೋಟಿಗಳು ನಿಮಗೆ ನೀಡಿದ್ದರೆ ಅವರಿಗೆ ಕನ್ನಡ ಶಬ್ದಕೋಶವನ್ನು ನೀಡಿ ತಿದ್ದಿ.
ಮೂರು: ನಿಮ್ಮ ಈ ತಪ್ಪು ತಿಳುವಳಿಕೆಯನ್ನು ಕನ್ನಡದ ತಪ್ಪು ಎಂದುಕೊಂಡಿದ್ದೀರಿ. ‘ಒಪ್ಪುವದು’ ಎನ್ನುವದರ ಅರ್ಥ ಕರ್ನಾಟಕದ ಸಾಮಾನ್ಯ ಮನುಷ್ಯನಿಗೂ ಗೊತ್ತು. ದಯವಿಟ್ಟು ತಪ್ಪು ಅನುವಾದಗಳಿಂದ ಕನ್ನಡವನ್ನು ಅವಮಾನಿಸಬೇಡಿ.
“ಆದರೆ ಒಪ್ಪು-ಬಿಡುಗಳನ್ನು ಭಾರತೀಯರ ಅರ್ಥದಲ್ಲಿ ಬಳಸದೇ agree-disagree ಅರ್ಥದಲ್ಲಿ ಬಳಸಿದ್ದೀರಿ. ಆದ್ದರಿಂದಲೇ ನೀವು ದ್ವಂದ್ವಗಳನ್ನು ಕಾಣುತ್ತಿದ್ದೀರಿ.”
‘ಸಾರ್ವಭೌಮತ್ವವನ್ನು’ ನೀವು ಯಾವ ರೀತಿ ಗ್ರಹಿಸಿದ್ದೀರೋ ಗೊತ್ತಿಲ್ಲ(ಬಳಸುವಿಕೆ ಇಟ್ಟುಕೊಳ್ಳುವಿಕೆ etc ). ಆದ್ರೆ ಸಂವಿಧಾನ ಹೇಳಿರುವದು ಇಂಗ್ಲಿಷಿನ ಅರ್ಥದಲ್ಲಿ. ಸಾವರ್ನಿಟಿ ಯನ್ನು ನೀವು ನಿಮಗೆ ಬೇಕಾದ ಹಾಗೆ ತುರ್ಜುಮೆ ಮಾಡಿ ಬಳಸಿ, ಒಪ್ಪಿ, ಇಟ್ಟುಕೊಂಡರೆ ಸಂವಿಧಾನದ ಕಾರ್ಯ ರೂಪ ಬದಲಾಗುವದಿಲ್ಲ. ಸಂವಿಧಾನ ಅದನ್ನು ಇಂಗ್ಲೀಶ್ ಅರ್ಥದಲ್ಲಿಯೇ ಬಳಸುತ್ತದೆ.
“ನಾವು ಇಲ್ಲಿ ನ್ಯಾಯಾಂಗದಿಂದ ಶಿಕ್ಷೆಗೊಳಗಾದ ಭಯೋತ್ಪಾದಕನನ್ನು ವಿಲನ್ ಎಂದೇ ಕರೆಯುತ್ತೇವೆ”
ನ್ಯಾಯಾಲಯ ಆತನನ್ನು ಭಯೋತ್ಪಾದಕ ಎಂದಿಲ್ಲ. ಆತನನ್ನು ಸೆಡಿಶನ್ ಚಾರ್ಜ್ ಮೇಲೆ ಬಂಧಿಸಲಾಗಿದೆ. ಅದಕ್ಕೆ ಆತ ಬಾಲಾಗಂಗಾಧರ್ ಅವರ ಲಾಜಿಕ್ ಉಪಯೋಗಿಸಿ ಹೇಳಬಹುದು. ಸೆಡಿಶನ್ ಚಾರ್ಜ್ ಎನ್ನುವದು ವಸಾಹತುಶಾಹಿ ಪ್ರಜ್ಞೆಯಿಂದ ಕೂಡಿದ್ದು ಎಂದು. ಸೆಡಿಶನ್ ಚಾರ್ಜ್ ಎನ್ನುವದು ಭಾರತದ ಸಂಪ್ರದಾಯದಲ್ಲೆ ಇಲ್ಲ. ಹಾಗಾಗಿ ತಾನು ಅಪರಾಧಿ ಅಲ್ಲ ಎನ್ನಬಹುದು.
“ಒಪ್ಪಿಕೊಳ್ಳುವದಿಲ್ಲಅಥವಾ ಒಪ್ಪಿಕೊಳ್ಳುತ್ತೇವೆ ಎಂಬುದೇ ಅಪ್ರಸ್ತುತ.”
ಅಪ್ರಸ್ತುತ? ಒಪ್ಪಿಕೊಳ್ಳುವದು ಪ್ರಸ್ತುತವಲ್ಲದಿದ್ದರೆ ನೀವು ಭಾರತದ ನ್ಯಾಯಾಂಗದ ಪ್ರಕಾರ ದೇಶದ್ರೋಹಿಯೇ. ನಿಮ್ಮಂತೆಯೆ ದೇಶದ್ರೋಹದ ಕೂಗು ಕೂಗಿದ ಜನರೂ ಹೀಗೆ ಹೇಳಬಹುದಲ್ಲವೇ? ನನಗೆ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವದು ಅಪ್ರಸ್ತುತ. ನಮ್ಮ ಸಂಪ್ರದಾಯದಲ್ಲಿ ಒಪ್ಪಿಕೊಳ್ಳುವದು ಎನ್ನುವದೇ ಇಲ್ಲ ಎಂದು. ಅವರನ್ನು ದೇಶದ್ರೋಹಿ ಎನ್ನಲು ನಿಮಗ್ಯಾವ ಹಕ್ಕಿದೆ?
“ಭಾರತೀಯರಿಗೆ ಅನುಕೂಲಕ್ಕೆ ತಕ್ಕಂತೆ ಸಾರ್ವಭೌಮತ್ವ ಮತ್ತು ನ್ಯಾಯಾಂಗವನ್ನು ಬಳಸಿಕೊಳ್ಳುವದಷ್ಟೇ ಗೊತ್ತು.”
ದಯವಿಟ್ಟು ನಿಮ್ಮ ಅಜ್ಞಾನದ ಫಲಕ್ಕೆ ಇತರ ಭಾರತೀಯರನ್ನು ಹೊಣೆ ಮಾಡಬೇಡಿ. ಕೋರ್ಟಿಗೆ ಹೋದರೆ ಮಾತ್ರ ನ್ಯಾಯಾಂಗವನ್ನು ಬಳಸಿಕೊಳ್ಳುವದು ಎಂಬ ನಿಮ್ಮ ತಪ್ಪು ಕಲ್ಪನೆಯನ್ನು ನಿವಾರಿಸಿಕೊಳ್ಳಿ. ಸಾರ್ವಭೌಮತ್ವದ ಬಗ್ಗೆ ಸ್ವಲ್ಪ ಓದಿಕೊಳ್ಳಿ. ಸಾರ್ವಭೌಮತ್ವವನ್ನು ಬೇಕಾದಾಗ ಮಾತ್ರ ಉಪಯೋಗಿಸಿಕೊಳ್ಳುತ್ತೇವೆ ಎಂದು ಶಿಷ್ಯಕೋಟಿಗಳು ಸಾರ್ವಜನಿಕವಾಗಿ ಹೇಳಿಬಿಡಲಿ ನೋಡೋಣ.
@Sure
“ನಾಳೆ ಈ ‘ಅರೆಪ್ರಜ್ಞೆ’ಯು ಏನು ಹೇಳುತ್ತೆ ಅಂದ್ರೆ: ದೇಶಲ್ಲಿರೋ ವಿಶ್ವವಿಧ್ಯಾಲಯ, ಶಾಲೆ, ಕಾಲೇಜುಗಳಲ್ಲಿ ಯಾರೂ ಸೇರಿಓದಬೇಡಿ, ಕೆಲಸ ಮಾಡಬೇಡಿ, ತಮ್ಮ ತಮ್ಮ ನೌಕರಿ ಬಿಟ್ಟು ಹೊರಬನ್ನಿ, ಕೋರ್ಟು ಕಛೇರಿಗಳಿಗೆ ಹೋಗಬೇಡಿ, ಕಾನೂನು, ರಸ್ತೆ ನಿಯಮಗಳನ್ನು ಸಹ ಪಾಲಿಸಬೇಡಿ, ಓಟ್ ಹಾಕಬೇಡಿ, ವಿಧಾನ ಸಭೆಗೆ ಹೋಗಬೇಡಿ, ಮನೆಗೆ ನಲ್ಲಿ-ನೀರಿನ ವ್ಯವೆಸ್ಥೆಯನ್ನೂ ತಗೋಬೇಡಿ ಎಲ್ವೂ ‘ವಸಾಹತುಶಾಹಿ ಪ್ರಜ್ಞೆ’”
ಹೌದು. ಆದರೆ ಇದನ್ನು ನಾನು ಹೇಳಿಲ್ಲ. ಬಾಲಗಂಗಾಧರ್ ಅವರ ಲಾಜಿಕ್(ಹಾಗೂ ಅವರ ಶಿಶ್ಯಕೋಟಿಗಳ ಲಾಜಿಕ್) ಹೀಗೆ ಹೇಳುತ್ತೆ ಅಂತ ಹೇಳಿದ್ದೇನೆ. ಪ್ರತಿ ಮಾತಿಗೂ ಅದು ವಸಾಹತುಶಾಹಿ ಪ್ರಜ್ಞೆ, ಇದು ವಸಾಹತುಶಾಹಿ ಪ್ರಜ್ಞೆ ಎನ್ನುತ್ತಾ ಅಂಬೇಡ್ಕರರನ್ನು ಈಡಿಯಟ್ ಎಂದಿಲ್ಲ. ತಮಗೆ ಬೇಕಾದ ವಸಾಹತುಶಾಹಿ ಪ್ರಜ್ಞೆಯನ್ನು ಬಳಸಿ,ಸುತ್ತಮುತ್ತಲಿನವರನ್ನು ಬೌದ್ಧಿಕ ದಾಸ್ಯದಿಂದ ಹೊರಬರಬೇಕು ಎಂದು ಉಪದೇಶಿಸಿದ ದ್ವಂದ್ವಾಧರ ಹಾಗೂ ಶಿಷ್ಯಕೋಟಿಗಳಲ್ಲಿ ನಾನೋಬ್ಬನಿಲ್ಲ.
ಮಹರ್ಷಿ ಮಾರ್ಕ್ಸ್ ಅವರ ಹಾದಿಯನ್ನು ಹಿಡಿಯುವುದೇ ಭಾರತೀಯ ಕಮ್ಯುನಿಸ್ಟರಿಗೆ ಉಳಿದಿರುವ ದಾರಿ
ನಿಮ್ಮ ಮಾತಿನ ಅರ್ಥ ಭಾರತದ ಕಮ್ಮಿನಿಷ್ಟರನ್ನು ಮಾರ್ಕ್ಸ್ ಇರುವ ಜಾಗಕ್ಕೆ ಕಳುಹಿಸುವುದು ಅಂತಾನ?
ಕಾಮ್ರೇಡ್ ಕನ್ನಯ್ಯನಿಂದಾಗಿ,ಭಾರತದಲ್ಲಿ ಧೂಳು ಹಿಡಿದಿರುವ ಕಮ್ಯುನಿಸಂಗೆ ಗುಟುಕು ಜೀವ ಬರಲಿದೆ ಕಾದು ನೋಡಿ ಮಾನ್ಯರೇ
“ಕಾಮ್ರೇಡ್ ಕನ್ನಯ್ಯನಿಂದಾಗಿ,ಭಾರತದಲ್ಲಿ ಧೂಳು ಹಿಡಿದಿರುವ ಕಮ್ಯುನಿಸಂಗೆ ಗುಟುಕು ಜೀವ ಬರಲಿದೆ ಕಾದು ನೋಡಿ ಮಾನ್ಯರೇ”
-ಕಾದು ನೋಡಬೇಕಿರುವುದು ಬಹಳವಿದೆ. ತಮಾಷೆ ಅಂದರೆ…ಹನ್ನೆರಡು ವರ್ಷಗಳ ಕಾಲ ಈ ಕನ್ನಯ್ಯ ಮಹಾರಾಜ್ ಆ ವಿವಿಯಲ್ಲಿ ಅದ್ಯಾವ ವಿಷಯದಲ್ಲಿ ಅದೇನು ಸಂಶೋಧನೆ ನಡೆಸಿದನೋ? ಒಂದು ಪುಟವೂ ಹೊರಬಿದ್ದಿಲ್ಲ! ಇನ್ನು ವಿವಿಯನ್ನು ತೊರೆಯಬೇಕಿರುವ ಕಾರಣದಿಂದ ಆತನೇ ಜೀವನೋಪಾಯಕ್ಕೆ ಈ ಮೂಲಕ ಒಂದು ಮಾರ್ಗ ಕಂಡುಕೊಳ್ಳುತ್ತಿದ್ದಾನೆ. ಇನ್ನು ಪಕ್ಷ…’ರೊಟ್ಟಿ ಹಳಸಿತ್ತು…ನಾಯಿ ಹಸಿದಿತ್ತು’ ಎಂಬ ಗಾದೆ ಮಾತ್ರ ನಿಜ!!
ಸರ್ಕಾರದ ದೊರೆಗಳನ್ನು ಮೆಚ್ಚಿಸುವ ಸಂಶೋಧನೆ ಮಾಡದಿರುವುದು ಸರಿಯಾದುದು.ಕಾಮ್ರೇಡುಗಳಿಗೆ ಕ್ರಾಂತಿ ಮುಖ್ಯವಾಗುತ್ತದೆ ಸಂಶೋಧನೆಯಲ್ಲ ಮಿ.ಶ್ರೀಪಾದ್
“ಕಾಮ್ರೇಡುಗಳಿಗೆ ಕ್ರಾಂತಿ ಮುಖ್ಯವಾಗುತ್ತದೆ” ಅದ್ಯಾವ ಕ್ರಾಂತಿಯೋ ನೀವು ನಂಬದ, ಆದರೆ ಭಾರತೀಯ ಪರಿಕಲ್ಪನೆಯಲ್ಲಿ ದಿವ್ಯ ದರ್ಶನ ಮಾಡಿದವರಿಗೆ ಹೇಳುವ ನಂಬಿಕೆಯ ‘ಮಹರ್ಷಿ’ ಮಾರ್ಕ್ಸ್ ಮತ್ತೆ ಬಂದರೂ ಇಲ್ಲಿ ಸಾಧ್ಯವಿಲ್ಲ. ತಾಪಂ, ಜಿಪಂಗಳ ಸಾವಿರಾರು ಸ್ಥಾನಗಳಲ್ಲಿ ಒಂದೇ ಒಂದನ್ನೂ ಗೆಲ್ಲಲಾಗದ ನೀವು ಕ್ರಾಂತಿ ಮಾಡ್ತೀರಾ? ಮಾಡಿಕೊಳ್ಳಿ ಎಂದೇ ಜನ ಫುಲ್ ಫ್ರೀಯಾಗಿ ಬಿಟ್ಟಿದ್ದಾರೆ! ನಮ್ಮವರಿಗೆ ಮಾರ್ಕ್ಸ್ ಮುಖ್ಯವಾಗುವುದು ಅಂಕಪಟ್ಟಿಯಲ್ಲಿ ಮಾತ್ರ, ಉಳಿದಂತೆ ನಿಮ್ಮ ಸ್ಥಾನ ಯಾವುದೆಂದು ಕಾಲಾಂತರದಿಂದಲೂ ತೋರಿಸಲಾಗಿದೆ. ಸಂಶೋಧನೆಗೂ ತಮಗೂ ತಮ್ಮ ಐಡಿಯಾಲಜಿಗೂ ಸಂಬಂಧವೇ ಇಲ್ಲ ಎಂಬುದು ನನಗೂ ಗೊತ್ತು!!
ಸಂಶೋಧನೆಗಳು ಬೂರ್ಜ್ವಾ ವ್ಯವಸ್ಥೆಯ ಅಂಗಗಳು,ಬಡವರಪರವಾದ ನಮ್ಮದು ಬಂಡಾಯ,ಕ್ರಾಂತಿಗಳ ಸಂಶೋಧನೆಗಳಾಗಿವೆ ಮಿ.ಭಟ್. ನಾವು ಅಧಿಕಾರದಲ್ಲಿರದಿದ್ದರೂ ನಮ್ಮನ್ನು ಯಾರು ತಡೆಯಲಾರರು ಎಂಬುದನ್ನು ನೀವು ಗ್ರಹಿಸಿರಬೇಕು.ನಮ್ಮ ಸದ್ದಿಗೆ ವಿದೇಶಗಳು ದನಿಗೂಡಿಸಿ ನಿಮ್ಮ ಮೋದಿಯವರ ಸರ್ಕಾರಕ್ಕೆ ಪತ್ರ ಬರೆದಿವೆ
ಸಂಶೋಧನೆಗಳು ಬೂರ್ಜ್ವಾ! ನಿಮ್ಮ ಮೋದಿ ಸರ್ಕಾರ! ವಿದೇಶಗಳು ದನಿಗೂಡಿಸಿವೆ!!
ನೀವ್ಯಾಕೆ ಬೂರ್ಜ್ವಾ ಅಲ್ಲ? ಜನತಂತ್ರ ವ್ಯವಸ್ಥೆಯ ಮೇಲೆ ನಂಬಿಕೆ ಇದೆ ಅಂತೀರಿ, ದೇಶದ ಜನ ಆಯ್ಕೆ ಮಾಡಿದ ಸರ್ಕಾರವನ್ನು ಹೀಯಾಳಿಸುತ್ತೀರಿ. ನೀವೆನ್ನುವ ವಿದೇಶ-ಪಾಕಿಸ್ತಾನ, ಬಾಂಗ್ಲಾ ಮತ್ತು ಚೀನ ಇರಬೇಕು?!
-ಜನ ನಿಮಗೆ ಉತ್ತರಿಸಿದಂತೆಯೇ ‘ಏನಾರಾ ಮಾಡ್ಕಳಿ’ ಎಂದು ನಿಮ್ಮಷ್ಟಕ್ಕೆ ನಿಮ್ಮನ್ನು ಬಿಡುವುದು ಬಿಟ್ಟು ನನಗೆ ಬೇರೆ ದಾರಿಯೇ ಇಲ್ಲ!!!
ಜನತಂತ್ರ ವ್ಯವಸ್ಥೆಯ ಮೇಲೆ ನಂಬಿಕೆಯಿಡಲು ನಾನು ಭಾರತೀಯ ಅರೆ ಕಮ್ಯುನಿಸ್ಟನೆಂದುಕೊಂಡಿರುವಿರೆನು ಮಿ.ಭಟ್?
ಮಹರ್ಷಿ ಮಾರ್ಕ್ ಅವರ ವ್ಯವಸ್ಥೆಯೇ ಸರ್ವ ಶ್ರೇಷ್ಟವಾದದ್ದು.ಮಹರ್ಷಿಯವರಿಗೆ ನೀವು ಶರಣು ಬನ್ನಿ
ಮಹರ್ಷಿಯಂತೆ ಮಾರ್ಕ್ಸ್ ಅಂತೆ! ಮಾರ್ಕ್ಸ್ ಗೂ ಮಹರ್ಷಿಗೂ ಏನು ಸಂಬಂಧ? ಮಹರ್ಷಿತನವನ್ನು ನಿಮ್ಮ ಮಾರ್ಕ್ಸ್ ಹೇಗೆ ಒಪ್ಪುತ್ತಾನೆ? ನಿಮ್ಮ ಈ ಗೊಂದಲವನ್ನು ಮೊದಲು ಸರಿಮಾಡಿಕೊಳ್ಳಿ. ಅಂದಹಾಗೆ ನನಗೆ ನಲ್ವತ್ತಾಗಿದೆ. ಇನ್ನೂ ಮಾರ್ಕ್ಸ್, ಕ್ರಾಂತಿ ಅದೂ ಇದೂ ಅನ್ನುತ್ತ ಕೂತರೆ ಇಪ್ಪತ್ತರ ಹರೆಯ ದಾಟಿಲ್ಲ ಅಂತಾರೆ! ಅದೆಲ್ಲ ಮೀಸೆ ಹುಟ್ಟುತ್ತಿರುವಾಗ ಸರಿ. ಈಗಲ್ಲ.
ಈ ‘ಮಹರ್ಷಿ’ ಪ್ರಜ್ಞಾ ಆನಂದಳ(ನ) ಅಪರಾವತಾರ.
‘ಮಹರ್ಷಿ’ –> ‘ಮಂಜು’
M/s Anonymous Pls stop dragging ಪ್ರಜ್ಞಾ ಆನಂದ’s name evrywr. I am ಮಹರ್ಷಿ ಮಾರ್ಕ್ಸ್’s ಶಿಷ್ಯ ಮಾರ್ಕ್ಸ್ ಮಂಜು. That’s it
ವಿನಾಯಕ್ ಹಂಪಿಹೊಳಿಯವರೆ, ಎಡಪಂಥೀಯರು ಮೌಡ್ಯವನ್ನು ಧಿಕ್ಕರಿಸುತ್ತಾರೆ. ವಿಜ್ಞಾನವನ್ನು ನಂಬುತ್ತಾರೆ. ಇವರು ದೇಶವಿರೋಧದತ್ತ ಸಾಗುವುದಿಲ್ಲ. ತಮ್ಮ ಅಭಿಪ್ರಾಯ ತಪ್ಪು.
ವಿಜ್ಞಾನವನ್ನು ನಂಬುತ್ತಾರೆ. => ವಿಜ್ಞಾನದಲ್ಲಿ “ನಂಬಿಕೆ”ಗೆ ಅವಕಾಶವಿದೆಯೇ? ಇಲ್ಲದಿದ್ದಲ್ಲಿ ಎಡಪಂಥೀಯರು ವಿಜ್ಞಾನವನ್ನೇಕೆ “ನಂಬು”ತ್ತಾರೆ?
ಎಡಪಂಥೀಯರು ಮೌಡ್ಯವನ್ನು ಧಿಕ್ಕರಿಸುತ್ತಾರೆ => ಮೌಢ್ಯ (ಮೂಢನಂಬಿಕೆ) ಎಂದರೇನು? ಅದು ನಂಬಿಕೆಗಿಂತ ಹೇಗೆ ಭಿನ್ನ. ಒಂದು ಭಾವನೆಯು ನಂಬಿಕೆಯೋ, ಮೂಢನಂಬಿಕೆಯೋ ಎನ್ನುವದನ್ನು ನಿರ್ಧರಿಸುವದು ಯಾರು? ಯಾವ ಆಧಾರದ ಮೇಲೆ?
vignanavannu opputtaare. sarinaa vinayakhampiholi avare ?
ಎಡಪಂಥೀಯರು ತಮ್ಮ ಸ್ವಾರ್ಥಕ್ಕೆ ರಕ್ತದ ಹೊಳೆಯನ್ನು ಹರಿಸುವುದರಲ್ಲಿ ನಂಬಿಕೆ ಇಟ್ಟಿದ್ದಾರೆ.
ಎಡಪಂಥೀಯರ ಮಹಾನ್ ನಾಯಕ ಸೀತಾರಾಂ ಯಚೂರಿ ಅವರು ೧೯೮೭ರಲ್ಲಿ ರೊಮೇನಿಯಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಲ್ಲಿನ ಕಮ್ಯುನಿಷ್ಟ್ ಆಡಳಿತವನ್ನು ಸಿಕ್ಕಾಪಟ್ಟೆ ಹೊಗಳಿ ಲೇಖನವೊಂದನ್ನು ಬರೆದಿದ್ದರು, ಭಾರತವೂ ರೊಮೇನಿಯಾದಂತೆ ಆದರ್ಶ ದೇಶವಾಗುವ ಕಾಲ ಸನ್ನಿಹಿತದಲ್ಲೇ ಇದೆ, ಓ ಕ್ರಾಂತಿಯೇ ನೀನೇಕೆ ಭಾರತಕ್ಕೆ ಇನ್ನೂ ಬಂದಿಲ್ಲ ಅಂತ ಅವಲತ್ತುಕೊಂಡಿದ್ದರು. ಯಚೂರಿ ಮೆಚ್ಚಿದ ಮಹಾನ್ ಕಮ್ಯೂನಿಸ್ಟ್ ನಾಯಕ ಚಚೆಸ್ಕೋ ತನ್ನ ಅರಮನೆಯಲ್ಲಿ ಚಿನ್ನದ ಕಕ್ಕಸುಮನೆ ಕಟ್ಟಿಸಿದ್ದನಂತೆ, ಸಂಪತ್ತಿನ ಬಗ್ಗೆ ಕಮ್ಯೂನಿಸ್ಟರಿಗಿರುವ ಹೇಸಿಗೆಯನ್ನು ವ್ಯಕ್ತಪಡಿಸಲೆಂದು. ಬಹುಶಃ ಯಚೂರಿ ಅವರಿಗೆ ಪ್ರವಾಸದ ವೇಳೆಯಲ್ಲಿ ಹೇಲು ಅಂಟಿದ ಚಿನ್ನದ ಕಕ್ಕಸುಮನೆಯನ್ನು ನೋಡಿ ಸಂಪತ್ತಿನ ಬಗ್ಗೆ ಮೋಹವೆಲ್ಲಾ ಕರಗಿ ಹೋಯಿತು ಅಂತ ಕಾಣುತ್ತದೆ. ಪಾಪ ಯಚೂರಿ ಲೇಖನ ಬಂದ ಕೆಲವೇ ವಾರಗಳಲ್ಲಿ ರೊಮೇನಿಯಾದ ಬೂರ್ಜ್ವಾ ಜನರು ಕ್ರಾಂತಿ ನಡೆಸಿ ಆದರ್ಶಪ್ರಾಯ ಕಮ್ಯುನಿಷ್ಟ್ ನೇತಾರ ಚಚೆಸ್ಕೋವನ್ನು ಅಧಿಕಾರದಿಂದ ಇಳಿಸಿದರು.
ಪುಸ್ತಕದಲ್ಲಿ ಹಾಗಿದೆ.ವಾಸ್ತವವಾಗಿ ಅವರು ದೇಶದ್ರೋಹಿ ಕೆಲಸಗಳಲ್ಲಿ, ಗೂಂಡಾಗಿರಿಗಳಲ್ಲಿ ತೊಡಗಿಕೊಂಡಿದ್ದಾರೆ.ಅದೇ ವಿಪರ್ಯಾಸ.
ದಯಮಾಡಿ ಈ ಆರೊಪಗಳನ್ನು ಮಾಡಬೇಡಿ. ಸುಳ್ಳು ಹೇಳಿದಂತಾಗುತ್ತದೆ.
ನಿಮ್ಮ ನೆಚ್ಚಿನ ಕಮ್ಯೂನಿಸ್ಟ್ ನೇತಾರ ಯಚೂರಿ ಅವರು ವಿದ್ಯಾರ್ಥಿಯಾಗಿದ್ದಾಗಿಂದ ಇಂದಿನವೆರಗೂ ಮಾರ್ಕ್ಸ್ ವಾದಿ ರಾಜಕಾರಣದಲ್ಲೇ ದಿನದ ೨೪ ಗಂಟೆ ಮುಳುಗಿರುವಂತಹ ತತ್ವನಿಷ್ಠ ವ್ಯಕ್ತಿ. ಇಂತಹವರು ತಮ್ಮ ಜೀವನೋಪಾಯಕ್ಕೆ ಯಾವ ಮಾರ್ಗವನ್ನು ಕಂಡುಕೊಂಡಿದ್ದಾರೆ? ಅವರ ಸಂಸಾರದ ರಥ ಮುಂದೆ ಸಾಗಲು ಎಲ್ಲಿಂದ ಹಣ ತರುತ್ತಿದ್ದಾರೆ? ಇವರ ಕುಟುಂಬವನ್ನು ಯಾರು ಸಲಹುತ್ತಿದ್ದಾರೆ? ಇವರ ದೇಶ ವಿದೇಶ ಪ್ರವಾಸಗಳನ್ನು ಯಾರು ಪ್ರಾಯೋಜಿಸುತ್ತಿದ್ದಾರೆ? ಹೇಳಿ.
ಮಾಡರೇಟರ್ ಮಹೋದಯರೆ,
ನಿಲುಮೆ ತಾಣದಲ್ಲಿ ಕಮೆಂಟಿಗೂ ಲೇಖನಕ್ಕೂ ವ್ಯತ್ಯಾಸ ತಿಳಿಯದ ಕೆಲವು ಓದುಗರಿದ್ದಾರೆ. ಇವರಿಂದ ನಮಗೆ ಲೇಖನವನ್ನು ಓದುವ, ಮತ್ತು ಚುಟುಕಾದ, ಅರ್ಥವತ್ತಾದ, ಕೆಲವೊಮ್ಮೆ ಮೌಲಿಕ ವಿರೋಧವನ್ನು ವ್ಯಕ್ತಪಡಿಸುವ ಪ್ರತಿಕ್ರಿಯೆಗಳನ್ನು ಆಸ್ವಾದಿಸುವ ಸಂತೋಷ ಹಾಳಾಗುತ್ತದೆ. ತಮಗೆ ಒಂದು ಸಲಹೆ, ಪ್ರತಿಕ್ರಿಯೆಗಳನ್ನು ಹ್ರಸ್ವಗೊಳಿಸಿ. ಇಲ್ಲದಿದ್ದರೆ ಪ್ರಜ್ಞಾ ಆನಂದ್ ಅವರನ್ನು ಒಂದು ಲೇಖನ ಬರೆಯಲು ಆಹ್ವಾನಿಸಿ.
ತಮ್ಮ ವಿಶ್ವಾಸಿ
WITIAN
ವಿನಾಯಕ ಹಂಪಿಹೊಳಿ ಯವರೇ, ಬಹಳ ಉತ್ತಮ ಲೇಖನ, ಧನ್ಯವಾದಗಳು. ಹಾಗೆಯೇ ಪ್ರಜ್ಞಾ ಆನಂದ್ ರವರ ಎಲ್ಲಾ ಪ್ರಶ್ನೆಗಳಿಗೆ ಬಹಳ ಸಮರ್ಪಕವಾಗಿ ಉತ್ತರವನ್ನು ಕೊಟ್ಟಿದ್ದೀರ. ನೀವು ನೀಡಿರುವ ಉತ್ತರಗಳನ್ನೋದಿದರೆ, ಪ್ರತಿಯೊಬ್ಬರಿಗೂ ನೀವು ಹೇಳುತ್ತಿರುವುದು ಸರಳವಾಗಿ ಅರ್ಥವಾಗುತ್ತದೆ. ಮತ್ತೊಮ್ಮೆ ಧನ್ಯವಾದಗಳು. ಇನ್ನೂ ಹೆಚ್ಚಿನ ಲೇಖನಗಳನ್ನು ಬರೆಯಿರಿ.
ಹರೀಶ.
ಒಂದಂಕಿ ಶಿಷ್ಯಕೋಟಿಗಳು ತೆರೆಮರೆಯಿಂದ ಕಲ್ಲು ಹೊಡೆಯುವ ಬದಲು ನೇರವಾಗಿ ವಾದ ಮಾಡಲು ಬರಬೇಕೆಂದು ಕೇಳಿಕೊಳ್ಳುತ್ತೇನೆ. ಇಲ್ಲಿಯವರೆಗೂ ಯಾವ ಶಿಷ್ಯಕೋಟಿಗಳೂ ತುಟಿಪಿಟಿಕ್ಕೆನ್ನದೆ ಕೇವಲ ವೈಯಕ್ತಿಕ ಆರೋಪದಲ್ಲಿ ತಲ್ಲೀನರಾಗಿದ್ದಾರೆ. ೨೧ ನೆ ಶತಮಾನದ ಭಾರತ ಕಂಡ ಅದ್ಭುತ ಸಮಾಜವಿಜ್ನಾನಿಯ ಶಿಷ್ಯರುಗಳ ಈ ನಡವಳಿಕೆ ಸಹ್ಯವೇ?ಅಕಟಕಟಾ!!!!!!!!!!!
“ನೇರವಾಗಿ ವಾದ ಮಾಡಲು ಬರಬೇಕೆಂದು ಕೇಳಿಕೊಳ್ಳುತ್ತೇನೆ.”
ಹಲೋ ಬಾಟ್ನಿ, ಹುಚ್ಚರೊಡನೆ ಮಂಡೆ ಸಮ ಇರುವವರು ಯಾರೂ ವಾದ ಮಾಡಲು ಮುಂದಾಗುವುದಿಲ್ಲ. ತಮ್ಮ ಹುಚ್ಚು ಇಳಿದ ಮೇಲೆ ವಾದ ಮಾಡೋಣ. ಆದಷ್ಟು ಬೇಗ ತಮ್ಮ ಹುಚ್ಚಿಗೆ ಚಿಕಿತ್ಸೆ ಸಿಗುವಂತಾಗಲಿ.
“ಹಲೋ ಬಾಟ್ನಿ, ಹುಚ್ಚರೊಡನೆ ಮಂಡೆ ಸಮ ಇರುವವರು ಯಾರೂ ವಾದ ಮಾಡಲು ಮುಂದಾಗುವುದಿಲ್ಲ”
ಮತ್ಯಾಕೆ ಕೆರೆದುಕೊಂಡು ಚರ್ಚೆಗೆ ಸಂಬಂಧವಿಲ್ಲದ ವಿಷಯಗಳ ಬಗ್ಗೆ ಹರಟುತ್ತೀರಿ? ಒಂದೆ ನನ್ನ ಪ್ರಶ್ನೆಗಳಲ್ಲಿರುವ ತಪ್ಪನ್ನು ಎತ್ತಿ ತೋರಿಸಿ, ಇಲ್ಲಾ ಬೌದ್ಧಿಕವಾಗಿ ಎದುರಿಸಲು ಸಾಧ್ಯವಾಗದಿದ್ದರೆ ಸುಮ್ಮನಿರಿ.
ಶಿಷ್ಯಕೋಟಿಗಳೆ, ನನಗೆ ಗೊತ್ತು. ನೀವೆಲ್ಲರೂ ಹಲ್ಲಿಲ್ಲದ ಹಾವಿನಂತಾಗಿದ್ದೀರಿ. ಭಾರತ ಕಂಡ ಮಹಾನ್ ಸಮಾಜ ವಿಜ್ಞಾನಿಯ ಶಿಶ್ಯಕೋಟಿಗಳಾದ ನಿಮಗೆ ಈ ಸಾಮಾನ್ಯ ಮನುಷ್ಯನ ಪ್ರಶ್ನೆಗೆ ಉತ್ತರಿಸುವದು ಸಾಧ್ಯವಾಗುತ್ತಿಲ್ಲ. ನೀವೆ ಸಾಕಿದ ‘ವಸಾಹತುಪ್ರಜ್ನೆಯ ವಿಶ್ವರೂಪ’ ಎಂಬ ಹಳಸಲು ವಾದ ನಿಮಗೆ ಭೂಮ್ ರಾಂಗ್ ನಂತೆ ಬಡಿಯುತ್ತಿರುವದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಬಾಟ್ನಿಯವರು ನಿಮಗೆ ನುಂಗಲಾರದ ಬಿಸಿ ತುಪ್ಪ ಎನ್ನುವದು ಗೊತ್ತು. ಅವರನ್ನು ಪಡೆ ಪಡೆ ಸ್ಮರಿಸಿದರೆ ಚಳಿಜ್ವರ ಜಾಸ್ತಿಯಾಗುತ್ತದೆ ಅಷ್ಟೆ.
“ತಮ್ಮ ಹುಚ್ಚು ಇಳಿದ ಮೇಲೆ ವಾದ ಮಾಡೋಣ. ಆದಷ್ಟು ಬೇಗ ತಮ್ಮ ಹುಚ್ಚಿಗೆ ಚಿಕಿತ್ಸೆ ಸಿಗುವಂತಾಗಲಿ.”
Will the real Kiran Batni listen to these wise words and get treatment before he becomes fully lunatic? Sad to see great talent Batni getting entangled in its own egotism and narcissism.
ಒಂದು ಹೆಣ್ಣು/ಗಂಡು ನೋಡುವ ಕಾರ್ಯಕ್ರಮ ನಡೆಯುತ್ತಿತ್ತಂತೆ. ಗಂಡು ಹೆಣ್ಣು ಪರಸ್ಪರ ನೋಡಿದ ನಂತರ, ಗಂಡು ತನಗೆ ಹೆಣ್ಣು ಒಪ್ಪಿಗೆಯಾಯಿತೆಂದು ಎಂದನಂತೆ. ಹೆಣ್ಣೂ ತನಗೂ ಒಪ್ಪಿಗೆ ಎಂದಳಂತೆ. ಅಲ್ಲೇ ಇದ್ದ ಶಿಷ್ಯಕೋಟಿಗಳು ಪರಸ್ಪರ ಮುಖ ನೋಡಿಕೊಂಡರಂತೆ, ‘ಅರೆ ಇದೇನಿದು ಒಪ್ಪಿಗೆ ಎನ್ನುತ್ತಿದ್ದಾರಲ್ಲ’ ಎಂದು. ಶಿಷ್ಯಕೋಟಿಗಳಿಬ್ಬರೂ ಸಮಾಲೋಚಿಸಿದರಂತೆ, ಇಬ್ಬರೂ ‘ಒಪ್ಪಿಗೆಯಾಯಿತು ಎಂದಿದ್ದಾರೆ, ಅಂದರೆ ಇಬ್ಬರೂ ಒಬ್ಬರನ್ನೊಬ್ಬರು ‘ಬಳಸಿಬಿಟ್ಟರೆ?’ ಎಂದು ಗೊಂದಲಗೊಂಡರಂತೆ. ಗಂಡು ಮತ್ತು ಹೆಣ್ಣಿನ ಮನೆಯವರು ಸಮಾಲೋಚಿಸುತ್ತಿರಬೇಕಾದರೆ, ಶಿಷ್ಯಕೋಟಿಗಳಲ್ಲೊಬ್ಬ ಮಧ್ಯೆ ನುಗ್ಗಿ ‘ನೋಡಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ‘ಒಪ್ಪುವದು’ ಎನ್ನುವದು ನಮಗೆ ಸ್ಪಷ್ಟವಿಲ್ಲ. ‘ಒಪ್ಪುವದು’ ಎನ್ನುವದಕ್ಕೆ ‘ಬೇಕಾದಾಗ ಬಳಸು’ ಎಂಬರ್ಥ ಇದೆ. ಹಾಗಾಗಿ ನೀವಿಬ್ಬರೂ ಒಬ್ಬರನ್ನೊಬ್ಬರು ಬೇಕಾದಾಗ ಬಳಸಬೇಕು’ ಎನ್ನುತ್ತಾನೆ. ನೆರೆದಿರುವವರೆಲ್ಲ ಇದೇನು ಎನ್ನುತ್ತಾ ನೋಡುತ್ತಿರಬೇಕಾದರೆ, ಇನ್ನೊಬ್ಬ ಶಿಷ್ಯಕೋಟಿ ಬಂದು, ನಮ್ಮ ಭಾರತೀಯರಲ್ಲಿ ಒಪ್ಪಿಕೊಳ್ಳುವ ಸಂಪ್ರದಾಯವಿಲ್ಲ, ಇಟ್ಟುಕೊಳ್ಳುವ ಸಂಪ್ರದಾಯವಿದೆ, ಹಾಗಾಗಿ ನೀನು ಇವಳನ್ನು ಇಟ್ಟುಕೊಳ್ಳಬೇಕು ಎಂದೆನ್ನುತ್ತಾನೆ.
ಅಷ್ಟಕ್ಕೆ, ಹುಡುಗಿಯ ಅಪ್ಪನಿಗೆ ಕೋಪ ತಾರಕ್ಕೆರುತ್ತದೆ, ‘ಏಯ್ ಯಾರ್ಲಾ ನೀನು? ಎತ್ತಲೇ $%%^&*%@#…’
ನಂತರ ಶಿಶ್ಯಕೋಟಿಗಳು ಯಾವ ಆಸ್ಪತ್ರೆಗೆ ದಾಖಲಾದರು ಎಂದು ಇನ್ನೂ ಸುದ್ಧಿ ಬಂದಿಲ್ಲ.
ಅವರ ವಸಾಹತುಪ್ರಜ್ನೆಯನ್ನು ಮತ್ಯಾಕೆ ವಿರೋಧಿಸುತ್ತೀರಿ? => ಮೊದಲಿನಿಂದಲೂ ನಾನು ಹೇಳುತ್ತಲೇ ಬಂದಿದ್ದೇನೆ. ನಾನು ವಸಾಹತುಪ್ರಜ್ಞೆಯನ್ನು ವಿರೋಧಿಸುತ್ತಿಲ್ಲ. ಆದರೆ ಆ ಪ್ರಜ್ಞೆಯನ್ನುಹೊಂದಿದ ಎಡ,ಬಲಗಳು ಭಾರತದ ಅನುಭವಕ್ಕೆ ವಿರುದ್ಧವಾಗಿ ಮಾತಾಡುತ್ತಿವೆ ಎಂಬುದಷ್ಟೇ ನನ್ನ ಹೇಳಿಕೆ. ಅದನ್ನು ಬಿಟ್ಟು ಹೊರಗೆಬಂದರೆ ಅನುಭವವನ್ನು ಸರಳವಾಗಿ ವಿವರಿಸಬಹುದು ಎಂಬುದು ಅರಿಕೆ.
ನ್ಯಾಯಾಂಗವನ್ನು ಉಪಯೋಗಿಸುವದು ಎಂದರೆ ಕೋರ್ಟನ್ನು ಉಪಯೋಗಿಸಿದಾಗ ಮಾತ್ರ ಉಪಯೋಗಿಸಿದಂತೆ ಎಂದಲ್ಲ. ವಸಾಹತು ದೇಶಗಳಲ್ಲಿಯೂ ಕೋರ್ಟನ್ನು ಬೇಕಾದಾಗಲೇ ಉಪಯೋಗಿಸುತ್ತಾರೆ. => ಹೌದು. ಆದರೆ ವಿದೇಶಗಳಲ್ಲಿ ಮಗಳು ಬೇರೊಬ್ಬನನ್ನು ಪ್ರೀತಿಸಿದಾಗ ಅದನ್ನು ವಿರೋಧಿಸುವ (ವಸಾಹತುಪ್ರಜ್ಞೆಯ ಪ್ರಕಾರ ಅನ್ಯಾಯದ) ಕೆಲಸ ಮಾಡುವದಿಲ್ಲ ಕಾರಣ ಆತ ನ್ಯಾಯಾಂಗದ ಪರಿಕಲ್ಪನೆಗಳನ್ನು ಒಪ್ಪಿಕೊಂಡಿರುತ್ತಾನೆ. ಆದರೆ ಭಾರತೀಯನೊಬ್ಬ ತನ್ನ ಮಗಳ ಪ್ರೀತಿಯನ್ನು ವಿರೋಧಿಸುತ್ತಾನೆ. ಅಂದರೆ ಕೋರ್ಟು ಹೇಳುವ ಸಮಾನ ನ್ಯಾಯದ, ಸಮಾನ ಹಕ್ಕುಗಳ ಕುರಿತು ಭಾರತೀಯರಿಗೆ ಇನ್ನೂ ಸ್ಪಷ್ಟತೆಯಿಲ್ಲ. ಆದರೆ ಆತ ಅಣ್ಣನಿಂದ ಪರಂಪರಾಗತ ಆಸ್ತಿಯಲ್ಲಿ ಪಾಲು ಕೇಳುವಾಗ ನ್ಯಾಯಾಂಗದ ಈ ಸಮಾನ ನ್ಯಾಯ, ಹಕ್ಕುಗಳನ್ನು “ಬಳಸಿ”ಕೊಳ್ಳುತ್ತಾನೆ.
ನೀವು ಪಂಚಾಯತಿಯ ತೀರ್ಮಾನವನ್ನು ಒಪ್ಪಿಕೊಂಡರೂ, ಪಂಚಾಯತಿಯ ತೀರ್ಮಾನ ಎಲ್ಲಿಯವರೆಗೆ ನ್ಯಾಯಾಂಗದ ಪರೀಧಿಯಲ್ಲಿರುತ್ತದೆಯೋ ಅಲ್ಲಿಯವರೆಗೆ ನೀವು ನ್ಯಾಯಾಂಗವನ್ನು ಒಪ್ಪಿಕೊಂಡಿದ್ದೀರಂತಲೇ ಅರ್ಥ. => ಇನ್ನೂ ಸ್ಪಷ್ಟವಾಗಿಲ್ಲ ನ್ಯಾಯಾಂಗವನ್ನು ಒಪ್ಪಿಕೊಳ್ಳುವದು ಎಂದರೇನು? ಕಾರನ್ನು ಒಪ್ಪಿಕೊಳ್ಳುವದು ಎಂದರೇನು? ಪಂಚಾಯತಿಯನ್ನು ಒಪ್ಪಿಕೊಳ್ಳುತ್ತೇನೆ ಎಂದು ಯಾವ ಭಾರತೀಯನಾದರೂ ಹೇಳುತ್ತಾನೆಯೇ? ಇಲ್ಲ. ಭಾರತೀಯನೊಬ್ಬನಿಗೆ ಪಂಚಾಯತಿಯ ತೀರ್ಮಾನವನ್ನು ಒಪ್ಪಿಕೊಳ್ಳುವದು ಎಂಬುದು ಅರ್ಥವಾಗುತದೆ, ಪಂಚರು ಹೇಳಿದಂತೆ ಕೇಳುತ್ತೇನೆಂದೋ, ಅವರ ಆಜ್ಞೆಯನ್ನು ಪಾಲಿಸುತ್ತೇನೆಂದೋ ಅದರ ಅರ್ಥ. ಪಂಚಾಯತಿಯನ್ನೇ ಒಪ್ಪಿಕೊಳ್ಳುವದು ಎಂದರೆ? ಭಾರತೀಯರು ನ್ಯಾಯಾಂಗ ನೀಡಿದ ನ್ಯಾಯವನ್ನು ಒಪ್ಪಿಕೊಳ್ಳುತ್ತಾರೆಯೇ ಹೊರತು ನ್ಯಾಯಾಂಗವನ್ನೇ ಒಪ್ಪಿಕೊಂಡು ಕೂತಿಲ್ಲ. ಆದ್ದರಿಂದಲೇ, ನ್ಯಾಯಾಂಗ ನೀಡುವ ಅಪ್ಪನ ಪಾಲನ್ನು ಸ್ವೀಕರಿಸುತ್ತಾರೆ. ಮಗಳ ಪ್ರೀತಿಯನ್ನು ವಿರೋಧಿಸುತ್ತಾರೆ. ನ್ಯಾಯಾಂಗವನ್ನೇ ಒಪ್ಪಿ ಕೂತಿದ್ದರೆ ಮಗಳ ಪ್ರೀತಿಯನ್ನೂ ವಿರೋಧಿಸಬಾರದಿತ್ತಲ್ಲವೇ? ನ್ಯಾಯವನ್ನು ಒಪ್ಪುವದೇ ಬೇರೆ, ನ್ಯಾಯಾಂಗವನ್ನು ಒಪ್ಪುವದೇ ಬೇರೆ. ಇದನ್ನು ಅರಿಯಿರಿ.
ನಿಮ್ಮ ಪಂಚಾಯತಿಯ ತೀರ್ಮಾನ ನ್ಯಾಯಾಂಗಕ್ಕೆ ವಿರುದ್ಧವಾಗುವಂತಿದ್ದರೆ ಅದು ಅಟ್ರಾಸಿಟಿ ಯೋ ಅಥವಾ ನ್ಯಾಯಾಂಗದ ಉಲ್ಲಂಘನೆಯೋ ಆಗಿ ಬಿಡುವ ಸಾಧ್ಯತೆ ಇದೆ. ಸುಪ್ರೀಮ್ ಕೋರ್ಟ್ ಖಪ್ ಪಂಚಾಯತಿಯಾ ತೀರ್ಮಾನಗಳನ್ನು ಅಸಿಂಧು, ಇಲ್ಲೀಗಲ್ ಎಂದಿದೆ. ಇಂತಹ ಪಂಚಾಯತಿಯ ತೀರ್ಮಾನಗಳು ಭಾರತೀಯರೆಲ್ಲರೂ ಆಯ್ದುಕೊಂಡದ್ದು ಎನ್ನಲು ಸಾಧ್ಯವಿಲ್ಲ. ಎಷ್ಟೊ ಸಮಯದಲ್ಲಿ ಹರ್ಯಾಣದ ಕಪ್ ಪಂಚಾಯತಿ ಕೊಡುವ ತೀರ್ಮಾನಗಳನ್ನು ಜನ ಒಪ್ಪದೇ ಇದ್ದರೂ ಬಲವಂತವಾಗಿ ಅವರ ಮೇಲೆ ಹೇರಿದ ಬೇಕಾದಷ್ಟು ಉದಾರಣೆಗಳಿವೆ. ಅಮಾನವೀಯವೆನಿಸಿದ ಘಟನೆಗಳಿವೆ. => ಆದರೆ ಪಂಚಾಯತಿಯಲ್ಲಿ ದಿನಕ್ಕೂ ನೂರಾರು ವ್ಯಾಜ್ಯಗಳು ಬಗೆಹರಿಯುತ್ತವೆ. ಆದರೆ ಸುದ್ದಿಯಾಗುವದು ಒಂದೋ ಎರಡೋ, ಕಾರಣ ಅವು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂಬ ಕಾರಣಕ್ಕಷ್ಟೇ. ಪಂಚರು ತಪ್ಪಿದಾಗ ಗ್ರಾಮದ ಜನರು ತಿದ್ದಿದ ಘಟನೆಗಳೂ ಇವೆ. ಪಂಚಾಯತಿ ನಿರ್ಣಯವನ್ನು ಸ್ವ ಇಚ್ಛೆಯಿಂದ ಪಾಲಿಸುವ ಊರೂಗಳೂ ಇವೆ. ನನ್ನ ಊರೂ ಅವುಗಳಲ್ಲೊಂದು. ನನ್ನ ಊರಿನಲ್ಲೇ ಒಂದು ಪರಂಪರೆಯಿದೆ. ಜಾತ್ರೆ ನಡೆಯುವ ಮೊದಲು ಎಲ್ಲ ವ್ಯಾಜ್ಯಗಳೂ ಇತ್ಯರ್ಥವಾಗಲೇಬೇಕು. ಇಲ್ಲವಾದಲ್ಲಿ ವ್ಯಾಜ್ಯಕ್ಕೊಳಗಾದ ಕುಟುಂಬದ ಜಾತಿಯವರು ಕಲಶವನ್ನು ಏಳಿಸುವದೇ ಇಲ್ಲ. ಎಲ್ಲ ಕಲಶಗಳೂ ಏಳಲಿಲ್ಲ ಎಂದರೆ ಜಾತ್ರೆಯೇ ನಡೆಯುವದಿಲ್ಲ. ಇದು ಭಾರತೀಯರು ತ್ವರಿತ-ನ್ಯಾಯಕ್ಕೆ ಗೆ ಎಷ್ಟು ಮಹತ್ವ ನೀಡಿದ್ದರು ಎಂಬುದಕ್ಕೆ ಸಾಕ್ಷಿ. ಈ ಮಹತ್ವ ಈಗಿನ ಕೋರ್ಟುಗಳಲ್ಲಿ ಕಾಣೆಯಾಗಿದೆ. ಪಂಚಾಯತಿಗಳಲ್ಲಿ ೧-೨% ಕೆಟ್ಟ ಅಂಶಗಳಿವೆ ೯೮-೯೯% ಒಳ್ಳೆಯ ಅಂಶಗಳಿವೆ. ಇದು ಕೋರ್ಟಿಗೂ ಅನ್ವಯವಾಗುತ್ತದೆ. ಆದರೆ ನೀವು ಪಂಚಾಯತಿಯ ಕೆಟ್ಟ ಅಂಶಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದ್ದೀರಿ. ಕೋರ್ಟಿನ ಕೆಟ್ಟ ಅಂಶಗಳನ್ನು ಬೇಕೆಂತಲೇ ಉಪೇಕ್ಷಿಸುತ್ತಿದ್ದೀರಿ. ಇದು ನಿಮ್ಮ ದೌರ್ಬಲ್ಯ.
ಎರಡು: ‘ಒಪ್ಪುವದು’ ಎನ್ನುವದಕ್ಕೆ ‘ಬಳಸುವದು’ ಎಂಬ ಶಬ್ದರ್ಥವಿಲ್ಲ. ಈ ಶಬ್ದಾರ್ಥವನ್ನು ಶಿಷ್ಯಕೋಟಿಗಳು ನಿಮಗೆ ನೀಡಿದ್ದರೆ ಅವರಿಗೆ ಕನ್ನಡ ಶಬ್ದಕೋಶವನ್ನು ನೀಡಿ ತಿದ್ದಿ. ಮೂರು: ನಿಮ್ಮ ಈ ತಪ್ಪು ತಿಳುವಳಿಕೆಯನ್ನು ಕನ್ನಡದ ತಪ್ಪು ಎಂದುಕೊಂಡಿದ್ದೀರಿ. ‘ಒಪ್ಪುವದು’ ಎನ್ನುವದರ ಅರ್ಥ ಕರ್ನಾಟಕದ ಸಾಮಾನ್ಯ ಮನುಷ್ಯನಿಗೂ ಗೊತ್ತು. ದಯವಿಟ್ಟು ತಪ್ಪು ಅನುವಾದಗಳಿಂದ ಕನ್ನಡವನ್ನು ಅವಮಾನಿಸಬೇಡಿ.=> ಹೌದು. ಈ ವಾಕ್ಯವನ್ನು ನಾನು ತಪ್ಪಾಗಿ ಬರೆದಿದ್ದೇನೆ. ಒಪ್ಪುವದು ಶಬ್ದಕ್ಕೆ ಬಳಸುವದು ಎಂಬರ್ಥವಿಲ್ಲ. ಆದರೆ ಪಾಶ್ಚಿಮಾತ್ಯರು ಯಾವ ಸಂವಿಧಾನವನ್ನು ಒಪ್ಪುತ್ತಾರೋ, ಅದನ್ನು ನಾವು ಆ ಸಂವಿಧಾನವನ್ನು ಬಳಸುತ್ತೇವೆ ಎಂದು ನಾನು ಬರೆಯಬೇಕಿತ್ತು. ಆದರೆ ನಾನು ಬರೆದಿರುವದು ತಪ್ಪು ಅರ್ಥ ಹೊರಡಿಸುತ್ತದೆ. ಅದಕ್ಕಾಗಿ ಕ್ಷಮೆಯಿರಲಿ. ಹೀಗಾಗಿ ಸರಿಯಾದ ವಾಕ್ಯ ಈಗ ನೀಡುತ್ತೇನೆ. “ಪಾಶ್ಚಿಮಾತ್ಯರು ಯಾವ ಸಂವಿಧಾನವನ್ನು ಒಪ್ಪುತ್ತಾರೋ, ಅದನ್ನು ನಾವು ಆ ಸಂವಿಧಾನವನ್ನು ಬಳಸುತ್ತೇವೆ. ನಮಗೆ ಸಂವಿಧಾನವನ್ನು ಒಪ್ಪುವದು ಎಂಬುದು ಅರ್ಥವಾಗುವದಿಲ್ಲ. ನಮಗೆ ನ್ಯಾಯವು ಒಪ್ಪಿಗೆಯಾಗುತ್ತದೆ. ನ್ಯಾಯಾಂಗವಲ್ಲ. ನ್ಯಾಯಾಂಗ ಬಳಸಲ್ಪಡುತ್ತದೆ.” ಆ ತಪ್ಪು ವಾಕ್ಯದ ಬದಲಾಗಿ ಇದನ್ನು ಪರಿಗಣಿಸುವದು. ಬರೆಯುವ ಭರದಲ್ಲಿ ವಾಕ್ಯಗಳನ್ನು ತಪ್ಪಾಗಿ ಬರೆದಿದ್ದಕ್ಕೆ ಇನ್ನೊಮ್ಮೆ ಕ್ಷಮೆ ಕೇಳುತ್ತೇನೆ.
‘ಸಾರ್ವಭೌಮತ್ವವನ್ನು’ ನೀವು ಯಾವ ರೀತಿ ಗ್ರಹಿಸಿದ್ದೀರೋ ಗೊತ್ತಿಲ್ಲ(ಬಳಸುವಿಕೆ ಇಟ್ಟುಕೊಳ್ಳುವಿಕೆ etc ). ಆದ್ರೆ ಸಂವಿಧಾನ ಹೇಳಿರುವದು ಇಂಗ್ಲಿಷಿನ ಅರ್ಥದಲ್ಲಿ. ಸಾವರ್ನಿಟಿ ಯನ್ನು ನೀವು ನಿಮಗೆ ಬೇಕಾದ ಹಾಗೆ ತುರ್ಜುಮೆ ಮಾಡಿ ಬಳಸಿ, ಒಪ್ಪಿ, ಇಟ್ಟುಕೊಂಡರೆ ಸಂವಿಧಾನದ ಕಾರ್ಯ ರೂಪ ಬದಲಾಗುವದಿಲ್ಲ. ಸಂವಿಧಾನ ಅದನ್ನು ಇಂಗ್ಲೀಶ್ ಅರ್ಥದಲ್ಲಿಯೇ ಬಳಸುತ್ತದೆ. => ಬಳಸಲಿ. ನಮಗೇನೂ ಅಭ್ಯಂತರವಿಲ್ಲ. ಆದರೆ ಒಬ್ಬ ಸಾಮಾನ್ಯ ಭಾರತೀಯನೂ ಅದನ್ನು ತನ್ನ ಅನುಭವಕ್ಕೆ ಹೇಗೆ ಕಾಣುತ್ತಾನೋ, ಹಾಗೆಯೇ ಅದರ ಜೊತೆ ಮುಂದುವರಿಯುತ್ತಾನೆ. ಪಾಶ್ಚಿಮಾತ್ಯರು ಸಂವಿಧಾನವನ್ನು ಹೇಗೆ ಗ್ರಹಿಸುತ್ತಾರೋ, ಹಾಗೆಯೇ ಭಾರತೀಯರೂ ಗ್ರಹಿಸಬೇಕು ಎಂಬುದು ಆಗ್ರಹವಾಗುತ್ತದೆ.
ನ್ಯಾಯಾಲಯ ಆತನನ್ನು ಭಯೋತ್ಪಾದಕ ಎಂದಿಲ್ಲ. ಆತನನ್ನು ಸೆಡಿಶನ್ ಚಾರ್ಜ್ ಮೇಲೆ ಬಂಧಿಸಲಾಗಿದೆ. ಅದಕ್ಕೆ ಆತ ಬಾಲಾಗಂಗಾಧರ್ ಅವರ ಲಾಜಿಕ್ ಉಪಯೋಗಿಸಿ ಹೇಳಬಹುದು. ಸೆಡಿಶನ್ ಚಾರ್ಜ್ ಎನ್ನುವದು ವಸಾಹತುಶಾಹಿ ಪ್ರಜ್ಞೆಯಿಂದ ಕೂಡಿದ್ದು ಎಂದು. ಸೆಡಿಶನ್ ಚಾರ್ಜ್ ಎನ್ನುವದು ಭಾರತದ ಸಂಪ್ರದಾಯದಲ್ಲೆ ಇಲ್ಲ. ಹಾಗಾಗಿ ತಾನು ಅಪರಾಧಿ ಅಲ್ಲ ಎನ್ನಬಹುದು. => ಇಲ್ಲ. ಭಾರತೀಯರು ಕಸಬ್ ನನ್ನು ಭಯೋತ್ಪಾದಕ ಎಂದಿದ್ದು, ಯಾವುದೋ ಚಾರ್ಜ್ ಮೇಲಲ್ಲ. ಆತ ಮಾಡಿದ ಕೊಲೆಗಳ ಮೇಲೆ. ಅಫ್ಜಲ್ ನನ್ನು ಭಯೋತ್ಪಾದಕ ಎಂದಿದ್ದು ಆತ ಸಂಸತ್ತಿನ ದಾಳಿಯ ಸಂಚನ್ನು ರೂಪಿಸಿದ್ದಕ್ಕೆ. ಹೊರತು ಯಾವುದೋ ಸೆಡಿಶನ್ ಚಾರ್ಜ್ ಅದು ಇದು ಅಲ್ಲ. ಮಾಡಿರುವ ಕಾರ್ಯವೊಂದೇ ಸಾಕು, ಅದು ಯಾವ ನಿಯಮವನ್ನು ಮೀರುತ್ತದೆ ಎಂಬುದು ಭಾರತೀಯರಿಗೆ ಬೇಕಾಗೇ ಇಲ್ಲ.
ಅಪ್ರಸ್ತುತ? ಒಪ್ಪಿಕೊಳ್ಳುವದು ಪ್ರಸ್ತುತವಲ್ಲದಿದ್ದರೆ ನೀವು ಭಾರತದ ನ್ಯಾಯಾಂಗದ ಪ್ರಕಾರ ದೇಶದ್ರೋಹಿಯೇ. ನಿಮ್ಮಂತೆಯೆ ದೇಶದ್ರೋಹದ ಕೂಗು ಕೂಗಿದ ಜನರೂ ಹೀಗೆ ಹೇಳಬಹುದಲ್ಲವೇ? ನನಗೆ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವದು ಅಪ್ರಸ್ತುತ. ನಮ್ಮ ಸಂಪ್ರದಾಯದಲ್ಲಿ ಒಪ್ಪಿಕೊಳ್ಳುವದು ಎನ್ನುವದೇ ಇಲ್ಲ ಎಂದು. ಅವರನ್ನು ದೇಶದ್ರೋಹಿ ಎನ್ನಲು ನಿಮಗ್ಯಾವ ಹಕ್ಕಿದೆ? => ಇನ್ನೊಮ್ಮೆ ಹೇಳುತ್ತಿದ್ದೇನೆ. ಭಾರತೀಯರಿಗೆ ನ್ಯಾಯವನ್ನು ಒಪ್ಪಿಕೊಳ್ಳುವದು ಅರ್ಥವಾಗುತ್ತದೆಯೇ ಹೊರತು ನ್ಯಾಯಾಂಗವನ್ನಲ್ಲ. ನ್ಯಾಯಾಂಗವನ್ನು ಒಪ್ಪಿಕೊಳ್ಳುವದು ಎಂಬುದು ಇನ್ನೂ ಅರ್ಥಮಾಡುವಲ್ಲಿ ನೀವು ಪದೇ ಪದೇ ವಿಫಲರಾಗುತ್ತಿದ್ದೀರಿ.
. ಶಿಷ್ಯಕೋಟಿಗಳಿಬ್ಬರೂ ಸಮಾಲೋಚಿಸಿದರಂತೆ, ಇಬ್ಬರೂ ‘ಒಪ್ಪಿಗೆಯಾಯಿತು ಎಂದಿದ್ದಾರೆ, ಅಂದರೆ ಇಬ್ಬರೂ ಒಬ್ಬರನ್ನೊಬ್ಬರು ‘ಬಳಸಿಬಿಟ್ಟರೆ?’ ಎಂದು ಗೊಂದಲಗೊಂಡರಂತೆ. => ನೋಡಿ. ಹೆಣ್ಣನ್ನು ಒಪ್ಪುವದು ಎನ್ನುವದಕ್ಕೆ ಒಂದು ಅರ್ಥವಿದೆ. ಗಂಡಿಗೆ ತನ್ನ ಹೆಣ್ಣು ಹೀಗಿರಬೇಕು ಎಂಬ ಕಲ್ಪನೆಯೊಂದಿರುತ್ತದೆ. ಆ ಕಲ್ಪನೆಯ ಅನುಸಾರ ಅಥವಾ ಅದಕ್ಕೆ ಹತ್ತಿರವಾದ ಹೆಣ್ಣು ಸಿಕ್ಕಾಗ ಒಪ್ಪುತ್ತಾನೆ. ಇದು ನನಗೆ ಅರ್ಥವಾಗುತ್ತದೆ. ಭಾರತದಲ್ಲಿ ನ್ಯಾಯಾಂಗವಿದೆ. ಇದನ್ನು ಒಪ್ಪುವದು ಎಂದರೇನು? ಈ ನ್ಯಾಯಾಗ ನಿನಗೆ ಒಪ್ಪಿಗೆಯೇ ಎಂದು ನನಗೆ ಯಾರೂ ಕೇಳೇ ಇಲ್ಲವಲ್ಲ? ಈ ಸಂವಿಧಾನ ನಿನಗೆ ಒಪ್ಪಿಗೆಯೇ ಎಂದು ಯಾರೂ ಕೇಳಿಲ್ಲವಲ್ಲ? ಇದೆಂಥ ಒಪ್ಪಿಗೆ?
ಒಂದು ಗಂಡು ಹೆಣ್ಣನ್ನು ಒಪ್ಪುವಾಗ ಆತ ಆಕೆಯನ್ನು ಇಡಿಯಾಗಿ ಒಪ್ಪುತ್ತಾನೆ. ಆಕೆಯ ಕೈಯನ್ನೋ ಕಾಲನ್ನೋ ಅಷ್ಟೇ ಅಲ್ಲ. ಹಾಗೆಯೇ, ನ್ಯಾಯಾಂಗವನ್ನು ಒಪ್ಪುವವರು ಇಡೀಯಾಗಿ ಒಪ್ಪಬೇಕಿತ್ತು. ಆದರೆ ಭಾರತೀಯರು ನ್ಯಾಯಾಂಗದ ನ್ಯಾಯಗಳನ್ನು ಮಾತ್ರ ಒಪ್ಪುತ್ತಾರೆ. ಆದರೆ ಆ ನ್ಯಾಯಾಂಗದ ಮೂಲಭೂತ ತತ್ತ್ವಗಳಾದ ಸಮಾನ ಹಕ್ಕುಗಳನ್ನು ಒಪ್ಪಿಲ್ಲ. ಕಾರಣ ಮೇಲೆಯೇ ನೀಡಿದ್ದೇನೆ. ದಯವಿಟ್ಟು ಇದನ್ನೆಲ್ಲ ವಿಚಾರಿಸಿ ನಂತರ ಚರ್ಚೆಗೆ ಬನ್ನಿ.
ಹಾಗೇ ಈ ಪ್ರಶ್ನೆಗಳಿಗೆ ಉತ್ತರಿಸಿ.
೧. ನ್ಯಾಯಾಂಗವನ್ನು ಒಪ್ಪುವದು ಎಂದರೇನು?
೨. ನ್ಯಾಯಾಂಗವನ್ನು ಒಪ್ಪುವದಕ್ಕೂ ನ್ಯಾಯವನ್ನು ಒಪ್ಪುವದಕ್ಕೂ ಇರುವ ವ್ಯತ್ಯಾಸಗಳು ಸುಳ್ಳೇ? ಸ್ಪಷ್ಟೀಕರಿಸಿ.
೩. ನೀವು ಹಳ್ಳಿಗಳ ಪಂಚರ ಕಟ್ಟೆಗಳಲ್ಲಿ ನಡೆಯುವ ಪ್ರಕರಣಗಳಲ್ಲಿ ಎಷ್ಟು ಗಮನಿಸಿದ್ದೀರಿ? ಕೇವಲ ಸುದ್ದಿಯಲ್ಲಿ ಬಂದದ್ದಷ್ಟರ ಮೇಲೇ ನಿರ್ಧಾರ ಮಾಡಿಬಿಟ್ಟಿರಾ?
(ಈ ಪ್ರಶ್ನೆಗಳಿಗೆ ಉತ್ತರಿಸದೇ ಸುಮ್ಮನೇ ಚರ್ಚೆ ಬೆಳೆಸಿ ಉಪಯೋಗವಿಲ್ಲ)
“ಮೊದಲಿನಿಂದಲೂ ನಾನು ಹೇಳುತ್ತಲೇ ಬಂದಿದ್ದೇನೆ. ನಾನು ವಸಾಹತುಪ್ರಜ್ಞೆಯನ್ನು ವಿರೋಧಿಸುತ್ತಿಲ್ಲ.”
ಸರಿ. ಹಾಗಿದ್ದರೆ ದೇಶದ್ರೋಹದ ಹೇಳಿಕೆಗಳನ್ನು ವಿರೋಧಿಸುವದಿಲ್ಲವೇ?
“ಆದರೆ ಆ ಪ್ರಜ್ಞೆಯನ್ನುಹೊಂದಿದ ಎಡ,ಬಲಗಳು ಭಾರತದ ಅನುಭವಕ್ಕೆ ವಿರುದ್ಧವಾಗಿ ಮಾತಾಡುತ್ತಿವೆ ಎಂಬುದಷ್ಟೇ ನನ್ನ ಹೇಳಿಕೆ”
ಇಲ್ಲಿ ಕೇವಲ ಎಡ ಬಲಗಳಲ್ಲ. ಎಲ್ಲವೂ ತಿಯಾಳಜಿಯ ಸೃಷ್ಟಿಗಳೆ ಆಗಿರುವಾಗ(ಸಿ ಎಸ ಎಲ್ ಸಿ ಯೂ ಸೇರಿ) ಯಾವುದೇ ವಿಷಯದಲ್ಲಿ ವಸಾಹತುಪ್ರಜ್ಞೆಯನ್ನು ಆಯ್ಕೆಮಾಡಿಕೊಂಡಿರುವವರೆಲ್ಲರೂ ತಮ್ಮ ಅನುಭವಕ್ಕೆ ವಿರುದ್ಧವಾಗಿ ನಿಂತವರೆ ಆಯಿತಲ್ಲವೇ?
“ಆದರೆ ವಿದೇಶಗಳಲ್ಲಿ ಮಗಳು ಬೇರೊಬ್ಬನನ್ನು ಪ್ರೀತಿಸಿದಾಗ ಅದನ್ನು ವಿರೋಧಿಸುವ (ವಸಾಹತುಪ್ರಜ್ಞೆಯ ಪ್ರಕಾರ ಅನ್ಯಾಯದ) ಕೆಲಸ ಮಾಡುವದಿಲ್ಲ ಕಾರಣ ಆತ ನ್ಯಾಯಾಂಗದ ಪರಿಕಲ್ಪನೆಗಳನ್ನು ಒಪ್ಪಿಕೊಂಡಿರುತ್ತಾನೆ.”
ತಪ್ಪು ತಿಳುವಳಿಕೆ. ‘ಹಾನರ್ ಕಿಲ್ಲಿಂಗ್’ ಎಂಬ ಶಬ್ದ ಹುಟ್ಟಿದ್ದೆ ವಿದೇಶದಲ್ಲಿ. ಇಂಗ್ಲೆಂಡ್, ಅಮೇರಿಕಾಗಳಲ್ಲಿ ಹಾನರ್ ಕಿಲ್ಲಿಂಗ್ ನ ಸಂಖ್ಯೆ ಬಹಳ ಜಾಸ್ತಿ ಇದೆ. ಇತಿಹಾಸದಲ್ಲಿಯೂ ಇಂತಹ ಅನೇಕ ಘಟನೆಗಳು ವಿದೇಶಗಳಲ್ಲಿ ನಡೆದಿವೆ.
” ಅಂದರೆ ಕೋರ್ಟು ಹೇಳುವ ಸಮಾನ ನ್ಯಾಯದ, ಸಮಾನ ಹಕ್ಕುಗಳ ಕುರಿತು ಭಾರತೀಯರಿಗೆ ಇನ್ನೂ ಸ್ಪಷ್ಟತೆಯಿಲ್ಲ”
ನೀವು ಇಂತಹ ಕೆಲವರ ಅಜ್ಞಾನವನ್ನು ಇಡಿ ಭಾರತೀಯರ ಮೇಲೆ ಹೇರುತ್ತೀರಿ. ನಿಮಗೆ, ಹಾಗೂ ಶಿಷ್ಯಕೋಟಿಗಳಿಗೆ ಸಮಾನ ಹಕ್ಕುಗಳ ಕುರಿತು ಸ್ಪಷ್ಟನೆಯಿಲ್ಲದಿದ್ದರೆ ಆ ಅಜ್ಞಾನವನ್ನು ಇಡಿ ಭಾರತೀಯರ ಅಜ್ಞಾನ ಎಂದು ಮಾನ ಕಳೆಯಬೇಡಿ.
“ಇನ್ನೂ ಸ್ಪಷ್ಟವಾಗಿಲ್ಲ ನ್ಯಾಯಾಂಗವನ್ನು ಒಪ್ಪಿಕೊಳ್ಳುವದು ಎಂದರೇನು?”
ಮೊದಲೇ ಹೇಳಿದಂತೆ ಒಪ್ಪಿಕೊಳ್ಳುವದು ಎಂದರೆ ಕನ್ನಡ ಶಬ್ದಕೋಶವನ್ನು ತೆರೆದು ‘ಒಪ್ಪಿಕೊಳ್ಳುವದು’ ಎಂದರೇನು ಎಂದು ನೋಡಿ. ಮೊದಲೇ ಹೇಳಿದಂತೆ ನೀವು ‘ಒಪ್ಪಿಕೊಳ್ಳುವದು’ ಎಂದರೆ ಯಾವ ಅರ್ಥಮಾಡಿಕೊಳ್ಳುತ್ತೀರೋ ಅದು ಮುಖ್ಯ ಅಲ್ಲ. ಸಂವಿಧಾನದ ‘ರೂಲ್ ಆಫ್ ಲಾ’ ಏನು ಹೇಳುತ್ತದೆಯೋ ಅದು ಅನ್ವಯವಾಗುತ್ತದೆ. ಭಾರತೀಯರಿಗೆ ಅದು ಗೊತ್ತಿಲ್ಲ ಇದು ಗೊತ್ತಿಲ್ಲ ಎಂದು ನಿಮ್ಮಿಷ್ಟಕ್ಕೆ ಶಬ್ದಾರ್ಥವನ್ನು ಬಳಸಿಕೊಂಡ ಮಾತ್ರಕ್ಕೆ ‘ರೂಲ್ ಆಫ್ ಲಾ’ ಬದಲಾಗುವದಿಲ್ಲ. ‘ಒಪ್ಪಿಕೊಳ್ಳು’ ಎಂಬ ಶಬ್ದ ನಿಮ್ಮ ಶಬ್ದಕೋಶದಲ್ಲಿಲ್ಲದಿದ್ದರೆ ಆರ್ಟಿಕಲ್ ೫೧ a ಯನ್ನು ನಿಮಗೆ ಬೇಕಾದಂತೆ ಓದಿ ಅರ್ಥೈಸಿಕೊಳ್ಳಿ. ಅದರಲ್ಲಿ ಹೇಳಿರುವ ಯಾವುದೇ ಅಂಶಕ್ಕೆ ಧಕ್ಕೆಯಾದರೂ ಅದು ಅಪರಾಧವಾಗುತ್ತದೆ.
“ಪಂಚಾಯತಿಯನ್ನು ಒಪ್ಪಿಕೊಳ್ಳುತ್ತೇನೆ ಎಂದು ಯಾವ ಭಾರತೀಯನಾದರೂ ಹೇಳುತ್ತಾನೆಯೇ? ಇಲ್ಲ”
‘ಪಂಚಾಯತಿಯನ್ನು ಒಪ್ಪಿಕೊಳ್ಳುತ್ತೇನೆ’ ಎನ್ನುವದಕ್ಕೂ ‘ಪಂಚಾಯತಿಯ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇನೆ’ ಎನ್ನುವದಕ್ಕೂ ಯಾವ ವ್ಯತ್ಯಾಸವಿದೆ? ಒಬ್ಬ ಸಾಮಾನ್ಯ ಮನುಷ್ಯನಿಗೆ ಇವೆರಡರ ವ್ಯತ್ಯಾಸ ಗೊತ್ತಾಗದು. ಸಿ ಎಸ್ ಎಲ್ ಸಿ ಯಾ ಉದ್ಧಾಮ ಭಾಷಾ ಪಂಡಿತರಿಗೆ ಮಾತ್ರ ಇಂತವು ತಿಳಿಯಬೇಕು.
“ಭಾರತೀಯರು ನ್ಯಾಯಾಂಗ ನೀಡಿದ ನ್ಯಾಯವನ್ನು ಒಪ್ಪಿಕೊಳ್ಳುತ್ತಾರೆಯೇ ಹೊರತು ನ್ಯಾಯಾಂಗವನ್ನೇ ಒಪ್ಪಿಕೊಂಡು ಕೂತಿಲ್ಲ.”
ದಯವಿಟ್ಟು ನಿಮ್ಮ(ಇನ್ನೂ ಕೆಲವರ) ಅಜ್ಞಾನವನ್ನು ಎಲ್ಲಾ ಭಾರತೀಯರ ಅಜ್ಞಾನ ಎಂದು ಹೇಳಿ ಎಲ್ಲಾ ಭಾರತೀಯರ ಮಾನ ಕಳೆಯಬೇಡಿ. Article 51A ಪ್ರಕಾರ ಸಂವಿಧಾನ ಹಾಗೂ ಇದರ ಅಂಗಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ‘ಒಪ್ಪಿಕೊಳ್ಳುವದು ಎಂದರೇನು’ ಎನ್ನುವದು ನಿಮ್ಮ ಸಧ್ಯದ ಪ್ರಶ್ನೆ. ಇದನ್ನು ನಮ್ಮ ಸಂವಿಧಾನ ಇಂಗ್ಲಿಷಿನಲ್ಲಿ ಹೀಗೆ ಹೇಳುತ್ತದೆ. ‘Should be abide by constitution and its bodies’ ಎನ್ನುತ್ತದೆ. ಇಲ್ಲಿ ಸಂವಿಧಾನವನ್ನು ಒಪ್ಪು-ಬಿಡು ಎಂದು ಹೇಳುವದಿಲ್ಲ. ಒಪ್ಪಲೇಬೇಕು ಎಂದು ಆಗ್ರಹಿಸುತ್ತದೆ. ಹಾಗಾಗಿ ನಮಗೆ ಬೇಕಾದಾಗ ಬಳಸುವದಕ್ಕೆ ಸಂವಿಧಾನ ಅವಕಾಶ ನೀಡುವದಿಲ್ಲ.
“ಆದರೆ ಪಂಚಾಯತಿಯಲ್ಲಿ ದಿನಕ್ಕೂ ನೂರಾರು ವ್ಯಾಜ್ಯಗಳು ಬಗೆಹರಿಯುತ್ತವೆ.. ಪಂಚರು ತಪ್ಪಿದಾಗ ಗ್ರಾಮದ ಜನರು ತಿದ್ದಿದ ಘಟನೆಗಳೂ ಇವೆ. ಪಂಚಾಯತಿ ನಿರ್ಣಯವನ್ನು ಸ್ವ ಇಚ್ಛೆಯಿಂದ ಪಾಲಿಸುವ ಊರೂಗಳೂ ಇವೆ.”
ಬಗೆಹರಿದ ವ್ಯಾಜ್ಯಗಳು ಭಾರತದ ಕಾನೂನಿಗೆ ಪೂರಕವಾಗುವಂತಿದ್ದರೆ ಸರಿ. ಇಲ್ಲದಿದ್ದರೆ ಆ ತೀರ್ಮಾನ ಅಸಿಂಧು ಆಗುತ್ತದೆ. ನಿಮ್ಮ ಊರಿನಲ್ಲಿ ಅದು ದಿನನಿತ್ಯ ನಡೆಯುತ್ತಿದ್ದರೆ ಅದು ಸಮಸ್ತ ಭಾರತೀಯರ ಲಕ್ಷಣವಾಗಲೇಬೇಕಿಲ್ಲ.
“ಆದರೆ ನೀವು ಪಂಚಾಯತಿಯ ಕೆಟ್ಟ ಅಂಶಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದ್ದೀರಿ. ಕೋರ್ಟಿನ ಕೆಟ್ಟ ಅಂಶಗಳನ್ನು ಬೇಕೆಂತಲೇ ಉಪೇಕ್ಷಿಸುತ್ತಿದ್ದೀರಿ. ಇದು ನಿಮ್ಮ ದೌರ್ಬಲ್ಯ.”
ನಾನು ಕೋರ್ಟು ಸರಿ, ಪಂಚಾಯತಿ ತಪ್ಪು ಎಂದು ವಾದಿಸುತ್ತಿಲ್ಲ. ನೀವು ಕೋರ್ಟಿನ ತೀರ್ಮಾನವನ್ನು , ಸಂವಿಧಾನವನ್ನು ಒಪ್ಪುತ್ತೀರೊ ಬಿಡುತ್ತೀರೊ ಎನ್ನುವದಕ್ಕಿಂತಲೂ ನ್ಯಾಯಾಂಗ, ಸಂವಿಧಾನ ನಿಮ್ಮನ್ನು ಒಪ್ಪುವಂತೆ ಆಗ್ರಹಿಸುತ್ತದೆ ಎಂದಷ್ಟೆ ಹೇಳಿದ್ದೇನೆ. ನೀವು ಪಂಚಾಯತಿಯ ತೀರ್ಮಾನಗಳನ್ನು ಒಪ್ಪಿದ ಮಾತ್ರಕ್ಕೆ ನ್ಯಾಯಾಂಗವನ್ನು ಒಪ್ಪಲಿಲ್ಲವೆಂದಲ್ಲ ಎಂದು ಹೇಳುವದು ನನ್ನ ಉದ್ದೇಶವಾಗಿತ್ತು.
“ಆದರೆ ಒಬ್ಬ ಸಾಮಾನ್ಯ ಭಾರತೀಯನೂ ಅದನ್ನು ತನ್ನ ಅನುಭವಕ್ಕೆ ಹೇಗೆ ಕಾಣುತ್ತಾನೋ, ಹಾಗೆಯೇ ಅದರ ಜೊತೆ ಮುಂದುವರಿಯುತ್ತಾನೆ. ಪಾಶ್ಚಿಮಾತ್ಯರು ಸಂವಿಧಾನವನ್ನು ಹೇಗೆ ಗ್ರಹಿಸುತ್ತಾರೋ, ಹಾಗೆಯೇ ಭಾರತೀಯರೂ ಗ್ರಹಿಸಬೇಕು ಎಂಬುದು ಆಗ್ರಹವಾಗುತ್ತದೆ”
ನೀವು ಹೇಗೆ ಗ್ರಹಿಸುತ್ತೀರೋ ಅದು ಮುಖ್ಯ ಅಲ್ಲ. ಸಂವಿಧಾನ ಹೇಗಿದೆಯೋ ಹಾಗೆಯೇ ಗ್ರಹಿಸಲೆಬೇಕು. ಇದು ಸಂವಿಧಾನದ ಆಗ್ರಹವೆ. ಭಾರತೀಯನ ಅನುಭವಕ್ಕೆ ತಕ್ಕಂತೆ ಸಂವಿಧಾನವನ್ನು ಗ್ರಹಿಸಿ ಮುಂದುವರೆಯುವಂತಿದ್ದರೆ ಊರಿಗೊಂದು ಸಂವಿಧಾನವಿರುತ್ತಿತ್ತು.
” ಇಲ್ಲ. ಭಾರತೀಯರು ಕಸಬ್ ನನ್ನು ಭಯೋತ್ಪಾದಕ ಎಂದಿದ್ದು, ಯಾವುದೋ ಚಾರ್ಜ್ ಮೇಲಲ್ಲ. ಆತ ಮಾಡಿದ ಕೊಲೆಗಳ ಮೇಲೆ”
ನಾನು ಮಾತನಾಡುತ್ತಿರುವದು, ದೇಶದ್ರೋಹದ ಆರೋಪ ಹೊತ್ತ ಉಮರ್ ಖಾಲಿದ್, ಕನ್ನಯ್ಯ ಕುಮಾರ್ ನಂತವರ ಬಗ್ಗೆ. ಇವರುಗಳನ್ನು ನೀವು ದೇಶದ್ರೋಹಿ ಎಂದು ಪರಿಗಣಿಸುತ್ತೀರೆನು? ಇವರು ಅಪರಾಧಿಗಳು ಎಂದು ಪರಿಗಣಿಸುವದು ವಸಾಹತುಪ್ರಜ್ಞೆಯಿಂದಲ್ಲವೆ?
” ಇನ್ನೊಮ್ಮೆ ಹೇಳುತ್ತಿದ್ದೇನೆ. ಭಾರತೀಯರಿಗೆ ನ್ಯಾಯವನ್ನು ಒಪ್ಪಿಕೊಳ್ಳುವದು ಅರ್ಥವಾಗುತ್ತದೆಯೇ ಹೊರತು ನ್ಯಾಯಾಂಗವನ್ನಲ್ಲ. ನ್ಯಾಯಾಂಗವನ್ನು ಒಪ್ಪಿಕೊಳ್ಳುವದು ಎಂಬುದು ಇನ್ನೂ ಅರ್ಥಮಾಡುವಲ್ಲಿ ನೀವು ಪದೇ ಪದೇ ವಿಫಲರಾಗುತ್ತಿದ್ದೀರಿ.”
ಇನ್ನೊಮ್ಮೆ ಹೇಳುತ್ತಿದ್ದೇನೆ.
೧. ಕೆಲವರ ಅಜ್ಞಾನವನ್ನು ಎಲ್ಲಾ ಭಾರತೀಯರ ಅಜ್ಞಾನ ಎಂದು ಜನರಲೈಸ್ ಮಾಡಬೇಡಿ.
೨. ನೀವು ಯಾವ ರೀತಿ ಸಂವಿಧಾನವನ್ನು ಗ್ರಹಿಸುತ್ತಿದ್ದೀರಿ ಎನ್ನುವದು ಮುಖ್ಯ ಅಲ್ಲ. ಸಂವಿಧಾನ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎನ್ನುವದು ಮುಖ್ಯ.
ನ್ಯಾಯಾಂಗದ ಕುರಿತು ನೀವು ನೀಡಿದ ಉತ್ತರಗಳು ನನಗೆ ಸಮಾಧಾನ ತಂದಿಲ್ಲ. ಇನ್ನೊಮ್ಮೆ ಕೇಳುತ್ತಿದ್ದೇನೆ.
೧. ನ್ಯಾಯಾಂಗವನ್ನು ಒಪ್ಪುವದು ಎಂದರೇನು? ಮದುವೆಗೆ ಹುಡುಗಿ ಒಪ್ಪುವದಕ್ಕಿಂತ ಅದು ಹೇಗೆ ಭಿನ್ನ?
(ನಿಮ್ಮ ಬಳಿ ಒಬ್ಬ ಕನ್ನಡವನ್ನು ಚೆನ್ನಾಗಿ ಬಲ್ಲ ೬೦ ವರ್ಷದ ನಿರಕ್ಷರಸ್ಥ ಮುದುಕಿಯೊಬ್ಬಳಿದ್ದಾಳೆ ಎಂದುಕೊಂಡು ಉತ್ತರಿಸಿ. ಹಾಙ್. ಅಂದ ಹಾಗೆ ನಿರಕ್ಷರಸ್ಥರು ಕನ್ನಡ ಹೇಗೆ ಕಲಿತರು ಎಂಬ ಜಾಣತನದ ಪ್ರಶ್ನೆ ಬೇಡ. ನನ್ನಜ್ಜಿಗೆ ಬರೆಯಲು ಓದಲು ಬರುತ್ತಿರಲಿಲ್ಲ. ಆದರೆ ಹೊಸ ದೇವರ ಹಾಡುಗಳನ್ನು ಕಟ್ಟಿ ಮಕ್ಕಳಿಗೆ ಕಲಿಸುತ್ತಿದ್ದಳು ಜನಪದ ಶೈಲಿಯಲ್ಲಿ. ಅದರಲ್ಲಿ ಅಂತ್ಯಪ್ರಾಸವನ್ನು ಕಾಯ್ದುಕೊಳ್ಳುತ್ತಿದ್ದಳು, ತಾಳಗಳನ್ನೆಲ್ಲ ಗಮನದಲ್ಲಿಟ್ಟು ಶಬ್ದಗಳನ್ನು ಪೋಣಿಸುತ್ತಿದ್ದಳು. ಇದು ಈಗಿನ ಎಮ್ಮೆ ಇನ್ ಕನ್ನಡ, ಕೋಣ ಇನ್ ಕನ್ನಡದವರಿಗೂ ಬರುವದಿಲ್ಲ.)
೨. ಸಂವಿಧಾನ ನಮ್ಮ ಮೇಲೆ ಆಗ್ರಹ ಏಕೆ ಮಾಡುತ್ತದೆ? ಹಾಗೂ ಏಕೆ ಮಾಡಬೇಕು? ಕ್ರಿಶ್ಚಿಯಾನಟಿಯಲ್ಲಿ ಪುಸ್ತಕವೊಂದನ್ನು ಕ್ರಿಶ್ಚಿಯನ್ನರು ನಂಬುವಂತೆ ಆಗ್ರಹಿಸುತ್ತದೆ ಎಂಬುದು ಗೊತ್ತು. ಅಲ್ಲೆಲ್ಲೋ ಯಾರೋ ಏನನ್ನೋ ಯಾರ ಮೇಲೋ ಆಗ್ರಹ ಮಾಡುತ್ತಾರಂತ ಅದೇ ಒಳ್ಳೆಯ ವ್ಯವಸ್ಥೆಯಾಗಬೇಕೆ? ಅಥವಾ ಅದಕ್ಕಿಂತ ಒಳ್ಳೆಯ ವ್ಯವಸ್ಥೆ ಇರಲೇಬಾರದು ಎಂಬುದಕ್ಕೇನಾದರೂ ತಾರ್ಕಿಕ ಆಧಾರವಿದೆಯೇ?
(ನಾನೇನೂ ಇಲ್ಲಿ ಸಂವಿಧಾನವನ್ನು ವಿರೋಧಿಸುತ್ತಿಲ್ಲ. ನಿಮ್ಮ ಮೇಲಿನ ಕಮೆಂಟಿನಲ್ಲಿ ಸಂವಿಧಾನವು ಒಂದು ಗೊತ್ತಾದ ವಿಧದಲ್ಲಿ ಕೆಲಸ ಮಾಡುತ್ತದೆ. ಅದು ಹೇಗೆ ಕೆಲಸ ಮಾಡುತ್ತದೆಯೋ, ನಾವು ಹಾಗೆಯೇ ಅದನ್ನು ಅರಿಯಬೇಕು ಎಂಬ ಆಗ್ರಹ ಸಂವಿಧಾನ ಮಾಡುತ್ತದೆ ಎಂದು ಹೇಳಿದಿರಿ. ಅದಕ್ಕೆ ಕೇಳಿದೆ. ಕಾರಣ ನಾನು ಯಾವುದೋ ಆಗ್ರಹಕ್ಕೆ ಒಳಬಿದ್ದು ಪುಣ್ಯಕಾರ್ಯಗಳನ್ನು ಮಾಡುವದಿಲ್ಲ. ಪ್ರತಿಯೊಂದಕ್ಕೂ ನನ್ನ ಮನಸ್ಸೇ ಪ್ರಚೋದಿಸುತ್ತದೆ. ಆ ಪ್ರಚೋದನೆಯ ಲಕ್ಷಣವನ್ನೇ ನನ್ನ ಸಂಪ್ರದಾಯದವರು (ಅಂದರೆ ನನ್ನ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯ) “ಚೋದನ ಲಕ್ಷಣೋ ಧರ್ಮಃ” ಎಂದಿದ್ದಾರೆ. ಧರ್ಮ ಎಂದರೆ ಚೋದಿಸುವ ಲಕ್ಷಣವುಳ್ಳದ್ದು ಎಂದರ್ಥ. ಈ ವಿಧದಲ್ಲಿ ಧರ್ಮ ಎಂದರೇನು ಎಂಬುದೂ ನನಗೆ ಅರ್ಥವಾಗುತ್ತದೆ. ಈ ಧರ್ಮವೊಂದಿದ್ದರೆ ಸಮಾಜ ಹೇಗೆ ಸುಸಂಬದ್ಧವಾಗಿರಬಹುದು ಎಂಬುದೂ ಅಲ್ಲೇ ಮನದಟ್ಟೂ ಆಗುತ್ತದೆ. ಹಾಗಿದ್ದಲ್ಲಿ ಸಂವಿಧಾನ ಆಗ್ರಹದ ಅಗತ್ಯತೆ ಭಾರತಕ್ಕಿದೆಯೇ? ಸೂಜಿಯಿಂದಾಗುವ ಕೆಲಸಕ್ಕೆ ಕೊಡಲಿಯೇಕೆ ತಂದುಕೊಂಡಿದ್ದೇವೆ ಎಂಬುದಷ್ಟೇ ಪ್ರಶ್ನೆ. ಇನ್ನೊಮ್ಮೆ ಹೇಳುತ್ತಿದ್ದೇನೆ. ನಾನು ಸಂವಿಧಾನವನ್ನು ವಿರೋಧಿಸುತ್ತಿಲ್ಲ. ಸಾಂವಿಧಾನಿಕ ಸಿಸ್ಟಂ ಅತ್ಯುತ್ತಮ ಸಿಸ್ಟಂ ಅದರಲ್ಲಿ ಎರಡು ಮಾತಿಲ್ಲ. ಆದರೆ ನಮಗೆ ಅದು ಒಗ್ಗಿಲ್ಲ ಎಂಬುದಷ್ಟೇ ನನ್ನ ನಿಲುವು)
1. ನ್ಯಾಯಾಂಗವನ್ನು ಒಪ್ಪುವದು ಎಂದರೇನು? ಮದುವೆಗೆ ಹುಡುಗಿ ಒಪ್ಪುವದಕ್ಕಿಂತ ಅದು ಹೇಗೆ ಭಿನ್ನ?
ನಮ್ಮ ಸಂವಿಧಾನದ ಆರ್ಟಿಕಲ್ ೧೨೬ – ೧೪೭ ನ್ಯಾಯಾಂಗದ ಲಕ್ಷಣಗಳನ್ನು ವಿವರಿಸುತ್ತದೆ. ನ್ಯಾಯಾಂಗವನ್ನು ಒಪ್ಪುವದು ಎಂದರೆ ನಮ್ಮ ನ್ಯಾಯಾಂಗದ ಲಕ್ಷಣಗಳನ್ನು ಒಪ್ಪುವದು. ನ್ಯಾಯಾಂಗ ನಮ್ಮ ಸಂವಿಧಾನವನ್ನು ಕಾವಲು ಕಾಯುತ್ತದೆ. ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ. ಹಾಗಾಗಿ ನ್ಯಾಯಾಂಗವನ್ನು ಒಪ್ಪುವದು ಎಂದರೆ ಇನ್ನೊಂದರ್ಥದಲ್ಲಿ ಸಂವಿಧಾನದ ಆಶಯವನ್ನು/ಲಕ್ಷಣಗಳಿಗೆ ಕಾಯ್ದುಕೊಳ್ಳುವದು. ಅಂದರೆ ಆ ಲಕ್ಷಣಗಳ ಪ್ರಕಾರ ಜೀವಿಸುವದು. ಇದನ್ನು ನಮ್ಮ ನ್ಯಾಯಾಂಗ ಆಗ್ರಹಿಸುತ್ತದೆ. ಹಾಗೆಯೇ ಈ ಲಕ್ಷಣಗಳಲ್ಲಿ ಹಕ್ಕುಗಳು ಇವೆ. ಈ ಹಕ್ಕುಗಳನ್ನು ನಿಮಗೆ ಬೇಕಾದ ಹಾಗೆ ಬಳಸಬಹುದು ಅಥವಾ ಬಿಡಬಹುದು(ಅಲ್ಲಿಯೂ ಕೂಡ ಹಕ್ಕುಗಳನ್ನು ಉಳಿದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಬಳಸುವಂತಿಲ್ಲ). ಸಂವಿಧಾನದ ಆಶಯಗಳು ಯಾವವು? ಬೇಕಾದಷ್ಟಿವೆ. ಸಧ್ಯ ನಾವು ಸಾರ್ವಭೌಮತ್ವದ ಬಗ್ಗೆ ಮಾತನಾಡಿದ್ದೇವೆ. ನಿಮಗೆ ಬೇಕಾದ ಹಾಗೆ ಬಳಸುವ,ಇರುವ ಹಕ್ಕಿದೆ ನಿಜ, ಆದರೆ ಸಂವಿಧಾನದ ಆಶಯಗಳಿಗೆ ಬದ್ಧವಾಗಿರಲೇಬೇಕು. ನಿಮಗೆ ಇಲ್ಲಿ ನಾನು ಬಳಸಿರುವ ಕನ್ನಡ ಅನುವಾದ ಸರಿಯೇನಿಸದಿದ್ದರೆ ಇಲ್ಲಿ ಇಂಗ್ಲೀಷಿನಲ್ಲಿ ಓದಿಕೊಳ್ಳಿ:
https://en.wikipedia.org/wiki/Judiciary_of_India
ಸಂವಿಧಾನದ ಆಶಯಗಳು ನಮ್ಮ ಸಂಸ್ಕೃತಿಯಿಂದ ಹುಟ್ಟಿದ್ದಲ್ಲ ನಿಜ. ನಾವು ಅದನ್ನು ಅರ್ಥೈಸಿಕೊಂಡಿದ್ದೂ ಬೇರೆಯ ರೀತಿಯಲ್ಲಿಯೇ ಇರಬಹುದು. ಅಥವಾ ನಮಗದು ತಿಳಿಯದೆಯೆ ಇರಬಹುದು. ಅಥವಾ ಸಂವಿಧಾನದಲ್ಲಿರುವ ಇಂಗ್ಲೀಷ್ ಶಬ್ದಗಳಿಗೆ ಸೂಕ್ತ ಭಾರತೀಯ ಶಬ್ದವೇ ಇರಲೂಬಹುದು. ಹಾಗೆಂದ ಮಾತ್ರಕ್ಕೆ ಸಂವಿಧಾನದ ಆಶಯ, ಲಕ್ಷಣ ಅದರ ಮೂಲಭೂತ ರೂಪದಿಂದ ವ್ಯತ್ಯಾಸ ಆಗುವದಿಲ್ಲ. ಈಗ ನಿಮ್ಮ ಇನ್ನೊಂದು ಪ್ರಶ್ನೆ ಏನೆಂದರೆ ಹುಡುಗಿಯನ್ನು ಒಪ್ಪುವದು ಎನ್ನುವದಕ್ಕು ನ್ಯಾಯಾಂಗವನ್ನು ಒಪ್ಪುತ್ತೇನೆ ಎನ್ನುವದಕ್ಕಿಂತಲೂ ವ್ಯತ್ಯಾಸ ಏನು ಎಂದು. ನ್ಯಾಯಾಂಗವನ್ನು ಒಪ್ಪುವದು ಕಡ್ಡಾಯ. ಹುಡುಗಿಯನ್ನು ಒಪ್ಪುವದು ಕಡ್ಡಾಯವೇನಿಲ್ಲ. ‘ಒಪ್ಪು’ ಎಂಬ ಶಬ್ದಾರ್ಥ ಬೇರೆಬೇರೆಯಾಗಿದೆಯಲ್ಲವೇ? ಇದು ನಿಮ್ಮ ಪುಕಾರು ಇರಬಹುದು. ಹೌದು ಅದರಲ್ಲಿ ತಪ್ಪೇನು? ಒಂದು ವೇಳೆ ಒಪ್ಪು ಎನ್ನುವ ಶಬ್ದ ಸರಿಯೇನಿಸದಿದ್ದರೆ ಬೇರೆ ಶಬ್ದವನ್ನು/ವ್ಯಾಖರಣವನ್ನು ಉಪಯೋಗಿಸಿ. ಅಥವಾ ಕನ್ನಡದಲ್ಲಿ ತುರ್ಜುಮೆ ಮಾಡಬಹುದಾದಷ್ಟು ಶಬ್ದವಿರದಿದ್ದರೆ ಬೇರೆ ಶಬ್ದಗಳನ್ನು ಸೃಸ್ಟಿಸಿಕೊಳ್ಳಿ. ಅಥವಾ ಇರುವ ಶಬ್ದಕ್ಕೆ ಹೊಸ ಅರ್ಥ ಕೊಡಿ.ತಪ್ಪೇನಿಲ್ಲವಲ್ಲ! ಶಬ್ದ ಅದರ ಮೂಲರೂಪದಲ್ಲಿಯೇ ಉಪಯೋಗಿಸಲ್ಪಡಬೇಕು ಎನ್ನುವದು ‘ತಿಯಾಲಜಿಯ’ ಧೋರಣೆಯಾಗುತ್ತದೆ. ಎಲ್ಲಾ ಭಾಷೆಗಳಲ್ಲಿಯೂ ಶಬ್ದ ಕಾಲಕಾಲಕ್ಕೆ ತಕ್ಕ ಹಾಗೆ ಬೇರೆ ಬೇರೆ ಶಬ್ದಾರ್ಥವನ್ನು ಪಡೆಯುತ್ತದೆ. ಬಾಲಗಂಗಾಧರರಿಗೆ, ಅವರ ಶಿಷ್ಯರಿಗೆ ಶಬ್ದಗಳ ಗೊಂದಲವೇ ಮುಖ್ಯವಿಷಯವಾಗಿಬಿಡುತ್ತದೆ. ಯಾಕೆಂದರೆ ಅವರು ಒಂದು ಶಬ್ದ ಅದರ ಮೂಲಾರ್ಥದಲ್ಲಿಯೇ ಬಳಸಬೇಕು ಎಂಬ ತಿಯಾಲಜಿಯ ಧೋರಣೆಯನ್ನು ಮೈಗೆ ಹೊತ್ತಿಕೊಂಡಿರುತ್ತಾರೆ. ಹಳ್ಳಿಗಳಲ್ಲಿ ಅನಕ್ಷರಸ್ಥರಿಗೆ ‘ಕಾಗದ ಪತ್ರ’ ಎನ್ನುವದರ ಅರ್ಥ ‘ಡಾಕ್ಯುಮೆಂಟ್ಸ್’ ಎನ್ನುವದು ತಿಳಿದಿರುತ್ತದೆ. ‘ನಮ್ಮಲ್ಲಿ ಕಾಗದ ಹಾಗೂ ಪತ್ರಕ್ಕೆ ಬೇರೆಯದೇ ಅರ್ಥ ಇದೆ, ಈ ಶಬ್ದ ವಸಾಹತು ಪೂರ್ವದಲ್ಲಿ ಇರಲಿಲ್ಲ’ ಎಂದು ಕ್ಯಾತೆ ತೆಗೆಯುವ ಉದ್ದಟತನ(ಹಾಗೂ ಅಜ್ಞಾನ) ಇರುವದು ಶಿಷ್ಯಕೋಟಿಗಳು ಮಾತ್ರ.
೨. ಸಂವಿಧಾನ ನಮ್ಮ ಮೇಲೆ ಆಗ್ರಹ ಏಕೆ ಮಾಡುತ್ತದೆ?
ಸಂವಿಧಾನ ಥಿಯಾಲಜಿಯ ಸರಕಾಗಿರುವದರಿಂದ ಸಹಜವಾಗಿಯೇ ಆಗ್ರಹಿಸುತ್ತದೆ. ಇದಕ್ಕಿಂತ ಒಳ್ಳೆಯ ವ್ಯವಸ್ಥೆ ಇದ್ದರೆ ಖಂಡಿತ ನಾವು ಬಳಸಬಹುದು. ಇದನ್ನೇ ನಾನು ಮೊದಲು ಶಿಷ್ಯಕೋಟಿಗಳಿಗೆ ಕೇಳಿದ್ದು. ‘ತಾವು, ತಮ್ಮ ಗುರುಗಳು ಮಹಾನ್ ಸಮಾಜ ವಿಜ್ಞಾನಿಗಳು.ಅದು ವಸಾಹತುಪ್ರಜ್ಞೆ ಇದು ವಸಾಹತುಪ್ರಜ್ಞೆ ಎಂದು ಬೆಟ್ಟು ಮಾಡಿ ತೋರಿಸುತ್ತಾ ಅವರಿವರನ್ನು ಈಡಿಯಟ್ ಎಂದು ಬೈದು ಕಾಲಕಳೆಯುವ ಬದಲು ಒಂದು ಒಳ್ಳೆಯ ವ್ಯವಸ್ಥೆಯನ್ನು ರೂಪಿಸಿ’ ಎಂದು ಈ ಮೊದಲು ಕೇಳಿಕೊಂಡಿದ್ದೆ. ಆದರೆ ಅವರ ಸಂಶೋಧನಾ ಕೇಂದ್ರದಲ್ಲಿ ವಸಾಹತು ಪ್ರಜ್ಞೆ ಯಾವುದು ಎಂಬ ಸಂಶೋಧನೆ ಬಿಟ್ಟು ಬೇರ್ಯಾವ ಸಂಶೋಧನೆಯೂ ನಡೆಯುತ್ತಿಲ್ಲ.
“ಅವರ ಸಂಶೋಧನಾ ಕೇಂದ್ರದಲ್ಲಿ ವಸಾಹತು ಪ್ರಜ್ಞೆ ಯಾವುದು ಎಂಬ ಸಂಶೋಧನೆ ಬಿಟ್ಟು ಬೇರ್ಯಾವ ಸಂಶೋಧನೆಯೂ ನಡೆಯುತ್ತಿಲ್ಲ.”
What’s your problem? If you want research to be done on your pet concerns why don’t you do it yourself? What stops you from doing independent research?
“ಬಾಲಗಂಗಾಧರರಿಗೆ, ಅವರ ಶಿಷ್ಯರಿಗೆ ಶಬ್ದಗಳ ಗೊಂದಲವೇ ಮುಖ್ಯವಿಷಯವಾಗಿಬಿಡುತ್ತದೆ.”
Surely you must be joking! Or you need to study Balu again.
ಒಂದೂರಿನಲ್ಲಿ ‘ಅರಿವು ಖುಷಿ’ ಎನ್ನುವ ಜನ ಇತ್ತಂತೆ. ಅದರ ಹೆಸರಿನ ಭಾಷಾಂತರದಷ್ಟೇ ಅಸಂಬದ್ಧ ವಾದವನ್ನು ಬಹಳ ಖುಷಿಯಿಂದ ಮಾಡುತ್ತಿತ್ತಂತೆ. ಭಾರತೀಯ ಪದ್ಧತಿಯಲ್ಲಿ ಇಲ್ಲದ ವಿಷಯಗಳನ್ನೂ ಇದೆ ಎಂದು ಸಮರ್ಥಿಸುವಷ್ಟು ‘ದೀಡುಪಂಡಿತ’ ಆಗಿತ್ತಂತೆ. ‘ಗಣಪತಿ ತುಂಗಾ’ ಎನ್ನುವ ಲೇಖಕರಿಗೆ ಸಹನೆ ಕೊಲ್ಲುವಷ್ಟು ದಡ್ಡತನದ ಪ್ರಶ್ನೆಗಳನ್ನು ಹಾಕಿದರೂ ಅವರು ಸಮಾಧಾನದಿಂದ ಉತ್ತರ ಬರೆಯುತ್ತಲೇ ಇದ್ದರಂತೆ. ಪ್ರಶ್ನೆಗಳಿಗೆ ಮಿಕ್ಕ ಎಲ್ಲ ಓದುಗರಿಗೂ ಅರ್ಥವಾಗುವಂತೆ (ಅವರಿಗೆಲ್ಲ ಕೇವಲ ಒಂದೇ ಬುದ್ಧಿ ಇದ್ದುದರಿಂದ) ಉತ್ತರ ಬರೆದಿದ್ದರೂ ಅರ್ಧ ಬುದ್ಧಿ ಜಾಸ್ತಿ ಇದ್ದುದರಿಂದ ಅರಿವುಖುಷಿ ‘ಖೇತಿಯ ಬಗ್ಗೆ ಕೇಳಿದರೆ ಖಲಿಯಾನದ ಬಗ್ಗೆ’ ಪ್ರಶ್ನೆ ಕೇಳುತ್ತಲೇ ಹೋಯಿತಂತೆ! ಲೇಖನ ಬರೆಯಲು ಆಹ್ವಾನಿಸಿದರೆ, ಕುಣಿಯಲಾರದವಳು ನೆಲ ಡೊಂಕು ಎಂದಂತೆ ಹುಚ್ಚು ನಂಬರು ಹೇಳುತ್ತ…..ಅಯ್ಯೋ ಪಾಪ!
ಗಣಪತಿ ತುಂಗಾ => ಸೂಪರ್…. 😀 😀 😀 😀
ಈ ಕಿರಣ್ ಬಾಟ್ನಿ ಮಹಾಶಯನಿಗೆ ದಯವಿಟ್ಟು ಯಾರಾದರೂ ಉತ್ತಮ ಮನೋಚಿಕಿತ್ಸಕರಿಂದ ಶೀಘ್ರದಲ್ಲೇ ಚಿಕಿತ್ಸೆ ಕೊಡಿಸಿ. ಅದರ ಖರ್ಚನ್ನು ನಾವೆಲ್ಲರೂ ವಹಿಸೋಣ.