ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 19, 2016

23

‘ಅಪರೇಷನ್ ಪೀಠತ್ಯಾಗ’ದ ಸೂತ್ರದಾರರು ಯಾರು?

‍ನಿಲುಮೆ ಮೂಲಕ

– ಮಂಜುನಾಥ ಹೆಗಡೆ

FB_IMG_1460892892983ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮೇಲೆ ಬಂದಂತಹ ಅತ್ಯಾಚಾರ ಆರೋಪವನ್ನು ಇತ್ತೀಚೆಗೆ ನ್ಯಾಯಾಲಯವು ತಳ್ಳಿಹಾಕಿ, “ಇದು ಶ್ರೀಗಳನ್ನು ಸಿಕ್ಕಿಹಾಕಿಸಲು ನಡೆಸಿದ ಷಡ್ಯಂತ್ರ” ಎಂದು ಷರಾ ಬರೆದಿದ್ದಲ್ಲದೇ, CID ಮತ್ತು FSLಗಳನ್ನು ಕೂಡ ತರಾಟೆಗೆ ತೆಗೆದುಕೊಂಡಿದೆ. ಹಾಗಾದರೆ ಯಾರು, ಯಾಕಾಗಿ ಒಂದು ಧಾರ್ಮಿಕ ಸಂಸ್ಥೆಯ ಮೇಲೆ ಹಗೆ ಸಾಧಿಸಲು ಹೊರಟಿದ್ದಾರೆ ? ಯಾರು ಮಠವನ್ನು ಇನ್ನಿಲ್ಲವಾಗಿಸುವ “ಷಡ್ಯಂತ್ರ” ಮಾಡುತ್ತಿದ್ದಾರೆ? ಆಮೂಲಾಗ್ರವಾಗಿ ಎಲ್ಲವನ್ನೂ ಪರಿಶೀಲಿಸಬೇಕಾಗಿದೆ!

ಸುಮಾರು 1200 ವರ್ಷಗಳ ಹಿಂದೆ ಆದಿಶಂಕರಾಚಾರ್ಯರು ಗೋಕರ್ಣದ ಸಮೀಪದ ಅಶೋಕೆಯಲ್ಲಿನ ಸೌಮ್ಯ ಪ್ರಕೃತಿಯ ಮಡಿಲಲ್ಲಿ ಧರ್ಮಪಾಲನೆಗಾಗಿ ಮಠವೊಂದನ್ನು ಸ್ಥಾಪಿಸಿ ತಮ್ಮ ಜ್ಯೇಷ್ಠ ಶಿಷ್ಯ ಸುರೇಶ್ವರಾಚಾರ್ಯರಿಂದ ಸನ್ಯಾಸ ದೀಕ್ಷೆ ಪಡೆದು ತಮ್ಮಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾನಂದರನ್ನು ಪೀಠಾಧಿಪತಿಯನ್ನಾಗಿ ಮಾಡಿ ಗೋಕರ್ಣ ದೇವಾಲಯದ ಆಡಳಿತವೂ ಸೇರಿದಂತೆ ಹಲವಾರು ಹೊಣೆಗಾರಿಕೆಗಳನ್ನು ಕೊಡುತ್ತಾರೆ. ಇದು ರಾಜಗುರುಪೀಠವಾಗಿದ್ದು ಸಮಾಜದ ಅಂತರಂಗ ಮತ್ತು ಬಹಿರಂಗ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದೆ. ಅಲ್ಲಿಂದ ಇಲ್ಲಿನವರೆಗೂ ಶ್ರೀಮಠದ ಮಾರ್ಗದರ್ಶನದಲ್ಲಿ ಧರ್ಮಪಾಲನೆ ನಡೆಯುತ್ತಾ ಬಂದಿದೆ. ಶಂಕರರಿಂದ ಆರಂಭಿಸಿ 35 ತಲೆಮಾರುಗಳು ಕಳೆದಿವೆ. ಪ್ರಸ್ತುತ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು 36ನೇ ಪೀಠಾಧೀಶರಾಗಿರುತ್ತಾರೆ. ಶ್ರೀಗಳ ಪ್ರೇರಣೆಯಂತೆ ಬಿಂದು-ಸಿಂಧು, ಮುಷ್ಟಿಭಿಕ್ಷೆ, ವಿದ್ಯಾನಿಧಿ, ಕಾಮದುಘಾ, ಗುರುಕುಲ, ಭಾರತೀ ವಿದ್ಯಾಲಯಗಳು, ಗ್ರಾಮರಾಜ್ಯ, ವಿದ್ಯಾನಿಧಿ, ಜೀವನದಾನ ಮೊದಲಾದ ಹತ್ತು ಹಲವಾರು ಸಮಾಜಮುಖಿ ಯೋಜನೆಗಳು ಆರಂಭಗೊಂಡವು. ಅಷ್ಟಾಗಿ ಮಠದ ಸಂಪರ್ಕ ಇಲ್ಲದವರೂ ಮಠಕ್ಕೆ ಬರಲಾರಂಭಿಸಿದರು! ಮಠದ ಪ್ರಸಿದ್ಧಿಯೂ ಜಾಸ್ತಿಯಾಗುತ್ತಾ ಬಂತು! ಬರೀ ಜಪ-ತಪ-ಅನುಷ್ಠಾನಗಳೇ ಆಗಿದ್ದರೆ ತೊಂದರೆ ಇರಲಿಲ್ಲವೇನೋ! ಆದರೆ ಇದು ರಾಜಗುರು ಪೀಠ. ಇಲ್ಲಿ ಕಾವಿಯೂ ಇದೆ, ಕಿರೀಟ-ಶ್ವೇತಛತ್ರಗಳೂ ಇವೆ! ಸಮಾಜದಲ್ಲಿ ನಡೆಯುವ ಅಧರ್ಮ ಕಾರ್ಯಗಳ ನಿಗ್ರಹವೂ ಪೀಠದ ಹೊಣೆಯಾಗಿರುತ್ತದೆ!

ಅದು 2003-04ರ ಸಮಯ; ಶ್ರೀಗಳು ಅಂಬಾರಗುಡ್ಡದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ಹಲವು ಜೀವ ಬೆದರಿಕೆಗಳ ನಡುವೆಯೂ ತಡೆದರು! (ಅಂಬಾರಗುಡ್ಡ ರಕ್ಷಣೆಗಾಗಿ ರಾಘವೇಶ್ವರ ಶ್ರೀಗಳು ನಡೆಸಿದ ಆಂದೋಲನ : http://goo.gl/SRUHf8 ) ಬೆದರಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶ್ರೀಗಳಿಗೆ ಗನ್ ಮ್ಯಾನ್ ರಕ್ಷಣೆ ಒದಗಿಸಿತು. 2007ರಲ್ಲಿ ಹೊಸನಗರದಲ್ಲಿ ವಿಶ್ವ ಗೋಸಮ್ಮೇಳನ ನಡೆದು, 9 ದಿನಗಳಲ್ಲಿ 20 ಲಕ್ಷಕ್ಕೂ ಅಧಿಕ ಜನರು ಸಾಕ್ಷಿಯಾಗಿ ವಿಶ್ವದ ಗಮನ ಸೆಳೆಯಿತು. 2009ರಲ್ಲಿ ಶ್ರೀಗಳ ನೇತೃತ್ವದಲ್ಲಿ ಕುರುಕ್ಷೇತ್ರದಿಂದ ನಾಗಪುರದವರೆಗೆ 108 ದಿನಗಳ ಕಾಲ “ವಿಶ್ವಮಂಗಳ ಗೋ ಗ್ರಾಮ” ಯಾತ್ರೆ ನಡೆದು ಗೋಹತ್ಯೆ ತಡೆಗೆ ಆಗ್ರಹಿಸಿ ಎಂಟೂವರೆ ಕೋಟಿ ಸಹಿ ಸಂಗ್ರಹಿಸಿ ಹಲವು ಸಾಧು ಸಂತರ ನಿಯೋಗದೊಂದಿಗೆ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು. ಈ ನಡುವೆ, 2008ರಲ್ಲಿ, ಕೆಲವು ದುರುಳರಿಂದಾಗಿ ಅನರ್ಥದ ಆಗರವಾಗಿದ್ದ ಗೋಕರ್ಣ ದೇವಾಲಯವನ್ನು ಪುನಃ ಮಠದ ಆಡಳಿತಕ್ಕೆ ಒಪ್ಪಿಸುವಂತೆ ಕೋರಿ ಅಲ್ಲಿನ ಸ್ಥಳೀಯರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. ಪರಂಪರೆಯಲ್ಲಿ ದೇಗುಲವು ಮಠಕ್ಕೆ ಸೇರಿದ್ದನ್ನು ಗಮನಿಸಿದ ಸರ್ಕಾರ ಆಡಳಿತವನ್ನು ಪುನಃ ರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸಿತು. ಅಲ್ಲಿಂದ ಗೋಕರ್ಣದಲ್ಲಿ ಬದಲಾವಣೆಯ ಪರ್ವ ಆರಂಭವಾಯ್ತು. ಅಲ್ಲಿನ ಮಾಜಿ ಜಿಲ್ಲಾಧಿಕಾರಿಯೇ ಹೇಳಿದಂತೆ ಅಲ್ಲಿ ಪವಾಡ ಸದೃಶ ಬದಲಾವಣೆಗಳಾದವು!

ಶ್ರೀಗಳ ಸಮಾಜಮುಖಿ ಕಾರ್ಯಗಳು ಸಹಜವಾಗಿಯೇ “ಸ್ಥಾಪಿತ ಹಿತಾಸಕ್ತಿ” ಗಳ ಕೆಂಗಣ್ಣಿಗೆ ಗುರಿಯಾದವು. ಮಠದ ಕಾರ್ಯಕರ್ತರ ಮೇಲೆ ಹಲ್ಲೆ, ಬೆಂಕಿ ಹಚ್ಚಿ ಕೊಲ್ಲುವ ಯತ್ನ, ಬೆದರಿಕೆ, ನಿರಂತರ ಕಾನೂನಾತ್ಮಕ ಸವಾಲುಗಳು, ಇಷ್ಟಕ್ಕೇ ನಿಲ್ಲದೇ ಶ್ರೀಗಳ ಹೆಸರಿಗೇ ಮಸಿಬಳಿಯುವ “ನಕಲಿ ಅಶ್ಲೀಲ ಸಿಡಿ” ತಯಾರಿಕೆ (ರಾಘವೇಶ್ವರ ಶ್ರೀಗಳ ತೇಜೋವಧೆ ಯತ್ನ: ನಕಲಿ ಸಿಡಿ ಪ್ರಕರಣದ ಸಮಗ್ರ ವಿವರ : http://goo.gl/z8q4KB ) ಹೀಗೆ ದಾಳಿಗಳು ನಿರಂತರವಾಗಿ ಮಠದ ಮೇಲೆ ನಡೆದವು! ಇವೆಲ್ಲವುಗಳ ಹಿಂದೆ ಇದ್ದಿದ್ದು ಗಣಿ, ಡ್ರಗ್, ಗೋಮಾಂಸ ಮಾಫಿಯಾಗಳಷ್ಟೇ ಅಲ್ಲದೇ ಪಾರಂಪರಿಕವಾಗಿ ಮಠದ ಮೇಲೆ ಈರ್ಷೆಯಿದ್ದ ಕೆಲವು ನೆರೆ”ಹೊರೆ”ಯ ಧಾರ್ಮಿಕ ಸಂಸ್ಥೆ-ಮಠಗಳೂ ‘ಹಿಂಬಾಗಿಲ ಬೆಂಬಲ’ ನೀಡಿದ್ದು ದುರ್ದೈವ! “ದುಷ್ಟಕೂಟ”ಗಳು ಒಂದೊಂದಾಗಿ ದಾಳಿ ಮಾಡಿ ವಿಫಲವಾದಾಗ ಎಲ್ಲರೂ ಸೇರಿ ಹೂಡಿದ ಷಡ್ಯಂತ್ರವೇ “ಅಪರೇಷನ್ ಪೀಠತ್ಯಾಗ”!! ಪೀಠವನ್ನೇ ತಮ್ಮ ವಶಕ್ಕೆ ತೆಗೆದುಕೊಂಡರೆ ದುಷ್ಟಕೂಟದ ಎಲ್ಲರಿಗೂ ಅವರವರಿಗೆ ಬೇಕಾಗಿದ್ದು ಸಿಗುತ್ತದೆ ಎಂಬ ಹುನ್ನಾರ! ಈ ಸಾರಿ ದುಷ್ಟಕೂಟಗಳ ನೇತೃತ್ವ ವಹಿಸಿದ್ದು ಧರ್ಮರಕ್ಷಣೆಗೆಂದೇ ಇರುವ ‘ಸಂಘ’ಟನೆಯೊಂದರ ಕೆಲವು ಮೀರ್ ಸಾಧಿಕ್, ಜಯಚಂದ್ರರು! “ನಕಲಿ ಸಾಕ್ಷ್ಯ ಸೃಷ್ಠಿ”ಗೆ ಸಿದ್ಧತೆಗಳು ಭರದಿಂದ ಸಾಗಿದವು!

ಅದು 2014 ಜುಲೈ, ಹೊನ್ನಾವರದ ಕೆಕ್ಕಾರಿನಲ್ಲಿ ಪ್ರತಿವರ್ಷದಂತೆ ಶ್ರೀಗಳು ಚಾತುರ್ಮಾಸ್ಯ ವೃತದಲ್ಲಿದ್ದರು‌. ಮಠವು ನಡೆಸುತ್ತಿದ್ದ ರಾಮಕಥಾ ಕಲಾವಿದರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಅನಾಮಧೇಯ ಬೆದರಿಕೆ ಕರೆಗಳು ಬರಲಾರಂಭಿಸಿದವು‌. ಕಳವಳಗೊಂಡ ಕಲಾವಿದರು ತಮ್ಮ ಸಮೀಪದ ಠಾಣೆಗಳಲ್ಲಿ ದೂರು ದಾಖಲಿಸಿದರು. ಇದೇ ಸಮಯದಲ್ಲಿ ಶ್ರೀಪರಿವಾರದ ವ್ಯವಸ್ಥಾಪಕರಿಗೆ ದಿವಾಕರ ಶಾಸ್ತ್ರೀ ಎಂದು ಹೇಳಿಕೊಂಡ ವ್ಯಕ್ತಿಯು ಕರೆಮಾಡಿ “ಮೂರು ಕೋಟಿ ರೂ. ಕೊಡಿ ಇಲ್ಲವೇ, ಶ್ರೀಗಳ ಮೇಲೆ ಅತ್ಯಾಚಾರ ಆರೋಪ ಮಾಡಿ ಜೈಲಿಗೆ ಕಳಿಸುತ್ತೇವೆ” ಎಂದು ಬೆದರಿಕೆ ಬರುತ್ತದೆ. ದಿ. 17-8-2014 ರಂದು ಮಠದ ಕಡೆಯಿಂದ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಿಸಲ್ಪಟ್ಟು; ಪ್ರಾಥಮಿಕ ತನಿಖೆಯಲ್ಲಿ ಬೆದರಿಕೆ ಕರೆ ಧೃಡಪಟ್ಟು ಹೆಚ್ಚಿನ ವಿಚಾರಣೆಗೆ ಪ್ರೇಮಲತಾ-ದಿವಾಕರ್ ದಂಪತಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿ ಹೊನ್ನಾವರಕ್ಕೆ ಕರೆತರುತ್ತಾರೆ. ಆಗ ನಡೆದ ವಿಚಾರಣೆಯ ವೇಳೆಯೇ ಬಯಲಾದ “ಷಡ್ಯಂತ್ರ”ದ ಜಾಲವನ್ನು ಕಂಡು ಪೋಲೀಸ್ ಇಲಾಖೆಯೇ ಬೆಚ್ಚಿಬೀಳುತ್ತದೆ! ಕರೆಪಟ್ಟಿ ಹೊಂದಾಣಿಕೆ, ಈಮೇಲ್ ಗಳಲ್ಲಿ “ನಕಲಿ ಅತ್ಯಾಚಾರ”ದ ಆರೋಪ ದಾಖಲಿಸಲು ವಕೀಲರೊಡನೆ ಚರ್ಚಿಸಿ ನಡೆಸಿದ ತಯಾರಿ, ದಿನಾಂಕಗಳ ಹೊಂದಾಣಿಕೆಗಾಗಿ ಬಿಟ್ಟಸ್ಥಳಗಳು ಮುಂತಾದ ಪ್ರಬಲ ಆಧಾರಗಳು ಉಚ್ಛನ್ಯಾಯಾಲಯದಲ್ಲಿ ಸಲ್ಲಿಸಲ್ಪಟ್ಟು ಸ್ವತಃ ದಿವಾಕರ ಶಾಸ್ತ್ರೀ ಮತ್ತು ಆತನ ವಕೀಲರೂ ‘ತಾವು ಶ್ರೀಗಳ ವಿರುದ್ಧ ಷಡ್ಯಂತ್ರ ನಡೆಸಿದ್ದು ನಿಜ’ ಎಂದು ಒಪ್ಪಿ, ಸಹಿಹಾಕುತ್ತಾರೆ! ಅದು “ಪಂಚನಾಮೆ”ಯಾಗಿದೆ!

ಆದರೆ ಇದೇ ವೇಳೆಗೆ, (ಅಂದರೆ, ಬ್ಲ್ಯಾಕ್ ಮೇಲ್ ಕೇಸ್ ದಾಖಲೆಯಾಗಿ ದಿವಾಕರ್ ದಂಪತಿಗಳು ಜೈಲು ಸೇರಿದ ನಂತರ) ಪ್ರೇಮಲತಾ-ದಿವಾಕರರ ಪುತ್ರಿ ಅಂಶುಮತಿಯು ದಿನಾಂಕ 26-8-2014ರಂದು, ‘ಶ್ರೀಗಳು ತನ್ನ ತಾಯಿಗೆ ಕಿರುಕುಳ ಕೊಡುತ್ತಿದ್ದರು’ ಎಂದು ಬನಶಂಕರಿ ಠಾಣೆಯಲ್ಲಿ ದೂರು ನೀಡುತ್ತಾಳೆ. ಇದಾದ ಬಳಿಕ ದಿನಾಂಕ 31-8-2014ರಂದು ಮಠಕ್ಕೆ ಹೊರಟಿದ್ದ ಶ್ಯಾಮಶಾಸ್ತ್ರೀ (ದಿವಾಕರರ ತಮ್ಮ) ನಿಗೂಢವಾಗಿ ಅಸಹಜ ಸಾವಿಗೀಡಾಗುತ್ತಾರೆ! ಈ ಮೂರೂ ಪ್ರಕರಣಗಳನ್ನು ಸರ್ಕಾರ ಸಿ.ಆಯ್.ಡಿ. ಗೆ ವರ್ಗಾಯಿಸುತ್ತದೆ. ಸಮಾಜದಲ್ಲಿ ಶ್ರೀಗಳ ತೇಜೋವಧೆ ಮಾಡುವ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆದವು! “ಬೆದರಿಕೆ ಪ್ರಕರಣ” ದಲ್ಲಿ ಪ್ರಬಲ ಆಧಾರಗಳು ಇದ್ದರೂ ಕೂಡ ಅದನ್ನು ಲೆಕ್ಕಿಸದ ತನಿಖಾ ಸಂಸ್ಥೆ ಕೇವಲ ‘ನಕಲಿ ಅತ್ಯಾಚಾರ’ ಪ್ರಕರಣದ ಮೇಲೆ ಆರೋಪಪಟ್ಟಿ ಸಲ್ಲಿಸಿತು! “ಶಾಮ್ ಶಾಸ್ತ್ರಿ ಸಾವು ಮತ್ತು ಮಠವು ದಾಖಲಿಸಿದ ಬೆದರಿಕೆ ಪ್ರಕರಣದ ತನಿಖೆ ಎಲ್ಲಿಯವರೆಗೆ ಬಂತು?” ಎಂದು ಪ್ರಶ್ನಿಸಿದ ನ್ಯಾಯಾಧೀಶರು ಊಟ ಮಾಡಿ ಬರುವುದರೊಳಗೆ ಪ್ರಕರಣದಲ್ಲಿ ಹಿಂದೆ ಸರಿದಿದ್ದು ಇನ್ನೂ ನಿಗೂಢ! ಕೊನೆಗೂ ದಿನಾಂಕ 31-3-2016ರಂದು ‘ಶ್ರೀಗಳ ಮೇಲಿನ ಅತ್ಯಾಚಾರ ಆರೋಪ ನಿರಾಧಾರ ಮತ್ತು ಸಾಕ್ಷ್ಯಗಳು ಸೃಷ್ಠಿಸಲ್ಪಟ್ಟದ್ದು’ ಎಂದ ಸೆಷನ್ ಕೋರ್ಟ್ “ಈ ಪ್ರಕರಣವು ವಿಚಾರಣೆಗೆ ಯೋಗ್ಯವಲ್ಲ” ಎಂದು ಕೈಬಿಡುತ್ತದೆ. ಈಮೂಲಕ ಶ್ರೀಗಳ ಮೇಲೆ ದಾಖಲಾದ ಪ್ರತಿದೂರಿನಲ್ಲಿ ಹುರುಳಿಲ್ಲವೆಂದು ವೇದ್ಯವಾಯಿತು! ಅಲ್ಲದೆ, ಇದರಿಂದ ಮಠದ ಮೇಲೆ ಷಡ್ಯಂತ್ರ ನಡೆಯುತ್ತಿರುವುದೂ ಸಾಭೀತಾಯ್ತು…! (ಶ್ರೀಮಠದ ವಿರುದ್ಧದ ಷಡ್ಯಂತ್ರ ಸಾಬೀತು!: http://goo.gl/OaUSDK )

ಇಲ್ಲಿ ನಿಜಕ್ಕೂ ಮಠದ ಆಡಳಿತವನ್ನು ಶ್ಲಾಘಿಸಲೇಬೇಕು! ಮಠದ ಮೇಲೆ ಆದ ದಾಳಿಗಳನ್ನು ಗೌಪ್ಯಮಾಡದೇ ಸಮಾಜದ ಎದುರು ತೆರೆದಿಟ್ಟು ಪಾರದರ್ಶಕತೆಯನ್ನು ಪಾಲಿಸಿತು. ಸಮಾಜವೂ ಅಷ್ಟೇ, ಕ್ಲಿಷ್ಟ ಪರಿಸ್ಥಿತಿಯಿಂದ ಹಿಡಿದು ಇಂದಿನ ನಿರ್ಣಾಯಕ ಸನ್ನಿವೇಶದವರೆಗೂ ಮಠದ ಜೊತೆ ನಿಂತಿತು. ಇದಕ್ಕೆ ಬಹುಮುಖ್ಯ ಕಾರಣ- “ಸಮಾಜಕ್ಕೆ ಮಠವೆಂದರೆ ಏನು ಎಂಬುದರ ಅರಿವು ಇರುವುದು”. ಹಾಗೆಯೇ ಪ್ರತೀ ಸನ್ನಿವೇಶಗಳಲ್ಲಿಯೂ ಷಡ್ಯಂತ್ರಿಗಳ ಏಕಮಾತ್ರ ಬೇಡಿಕೆ “ಪೀಠತ್ಯಾಗ”!

ಹಾಗಾದರೆ ಪೀಠತ್ಯಾಗದಿಂದ ಯಾರಿಗೆ ಲಾಭ?
ಇಷ್ಟಕ್ಕೂ ಈ  ಷಡ್ಯಂತ್ರದ “ಸೂತ್ರದಾರ”ರು ಯಾರು? ಯಾರು ಶ್ರೀಗಳ ಪೀಠತ್ಯಾಗವನ್ನೇ ಗುರಿಯಾಗಿಸಿ ಈ ಎಲ್ಲಾ ಸಂಚು ಹೂಡಿದ್ದಾರೆ? ಶಾಮಶಾಸ್ತ್ರೀ ನಿಗೂಢ ಸಾವಿನ ಹಿಂದಿನ ರಹಸ್ಯವೇನು? ಯಾರು ತಮ್ಮ ವ್ಯವಸ್ಥಿತ ಪ್ರಭಾವದ ಮೂಲಕ ತನಿಖೆಯನ್ನೇ ದಾರಿತಪ್ಪಿಸಿದ್ದರು? ಮಾಜೀ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ಅವರು ಸಮಾಜವನ್ನೇ ದಾರಿತಪ್ಪಿಸುವಂಥ ಹೇಳಿಕೆ ನೀಡಿದ್ದೇಕೆ? ಐವರು ನ್ಯಾಯಾಧೀಶರುಗಳು ವಿಚಾರಣೆಯಿಂದ ಹಿಂದೆ ಸರಿದಿದ್ದು ಯಾಕೆ? ಮಾಜಿ ಗೃಹಸಚಿವ ಕೆ.ಜೆ.ಜಾರ್ಜ್ ರವರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕಾನೂನು ಸಲಹೆಗಳನ್ನೂ ಧಿಕ್ಕರಿಸಿ ‘ನಕಲಿ ಅಶ್ಲೀಲ ಸಿಡಿ’ ಪ್ರಕರಣವನ್ನು ಕೈಬಿಟ್ಟಿದ್ದು ಯಾಕೆ? ಯಾರ ಒತ್ತಡದ ಮೇರೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಈ ಹುಸಿ ಆರೋಪ ದಾಖಲಿಸಿದ ಮಹಿಳೆಯ ಕುರಿತು ಅಷ್ಟು ಮುತುವರ್ಜಿ ವಹಿಸಿದ್ದು ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಅಷ್ಟೇ ಅಲ್ಲ, ತೆರೆಮರೆಯಲ್ಲಿ ಆಟ ಆಡುತ್ತಿದ್ದವರು ಈ ಸಮಾಜದ ಎದುರು ಬೆತ್ತಲಾಗಬೇಕಿದೆ! ಯಾಕೆಂದರೆ ಇದು ಒಬ್ಬ ವ್ಯಕ್ತಿಯ/ಮಠದ ಪ್ರಶ್ನೆಯಲ್ಲ; ಇಂದು ಇಲ್ಲಿ ಆಗಿದ್ದು ನಾಳೆ ಇನ್ನೊಬ್ಬರಿಗೆ ಆಗಬಹುದು! ಯೋಚಿಸಿ…. “ಒಂದು ವೇಳೆ ಈ ಷಡ್ಯಂತ್ರ ಸಫಲವಾಗಿದ್ದರೆ ನಾಶವಾಗುತ್ತಿದ್ದದ್ದು ಅವಿಚ್ಛಿನ್ನವಾದ ಗುರುಪರಂಪರೆ ಮತ್ತು ಅಸಂಖ್ಯಾತ ಜನರ ಶೃದ್ಧೆ, ನಂಬಿಕೆಗಳು”!

23 ಟಿಪ್ಪಣಿಗಳು Post a comment
  1. ಏಪ್ರಿಲ್ 19 2016

    ಸತ್ಯಕ್ಕೆಂದಿಗೂ ಸಾವಿಲ್ಲ ವೆನ್ನುವುದು ರುಜುವಾತಾಗಿದೆ. ಇಡೀ ಪ್ರಪಂಚ ಸ್ವಾರ್ಥೀ ಜನರಿಂದ ತುಂಬಿ ಹೋಗಿರುವುದರಿಂದ, ಅಂತಹವರು ಬದುಕಿರುವವರೆಗೂ ಇಂತಹ ಅವಘಡಗಳು ನಡೆಯುತ್ತಲೇ ಇರುತ್ತವೆ. ಸತ್ಪ್ರಜೆಗಳಾಗಿ ಬದುಕಬೇಕಾದರೆ ಸದಾ ಜಾಗೃತರಾಗಿರಬೇಕು ಅಷ್ಟೆ.

    ಉತ್ತರ
  2. ಏಪ್ರಿಲ್ 19 2016

    so it was consensual sexual relation…no problem legally..but ethically?….we need to allow our GOD MEN to marry ,like they do in islam and christianity…it ll solve all this problems…no need have this kind secrete affairs

    ಉತ್ತರ
    • WITIAN
      ಏಪ್ರಿಲ್ 19 2016

      Dear Sir, this shows your ignorance about clergy in other religions, and why, ignorance about some of the Hindu Mathas as well. Do you know that the Roman Catholic priests do not marry? OK do you know that some of the Madhwa mathas have their peethadhipatis, who have gone through brahmacarya, grihastha, vaanaprastha and in the end attained samnyAs?

      ಉತ್ತರ
  3. ಶೆಟ್ಟಿನಾಗ ಶೇ.
    ಏಪ್ರಿಲ್ 19 2016

    ಪ್ರಭಾವಶಾಲಿಗಳು ದುಡ್ಡಿರುವವರು ಜಾತಿಬಲ ಇರುವವರು ಎಂತಹ ಅಪರಾಧ ಮಾಡಿದ್ದರೂ ಸಹ ನಮ್ಮ ದೇಶದ ಕಾನೂನಿನ ಬಲೆಯಿಂದ ನುಣುಚಿಕೊಳ್ಳುವುದು ಹೊಸತೇನಲ್ಲ. ಆದರೆ ಸಾಕ್ಷಿಪ್ರಜ್ಞೆಯ ಕಾರಣದಿಂದ ಸ್ವಯಂ ಶರಣಾದ ಯಾಕೂಬ್ ನಂತಹವರನ್ನು ಗಲ್ಲಿಗೆ ಏರಿಸಲು ದೇಶದ ಕಾನೂನು ವ್ಯವಸ್ಥೆ ಸದಾ ಕ್ರಿಯಾಶೀಲವಾಗಿದೆ.

    ಉತ್ತರ
    • ರಂಜನಾ ರಾಮ್ ದುರ್ಗ
      ಏಪ್ರಿಲ್ 19 2016

      ದೇಶದ ಕಾನೂನು ವ್ಯವಸ್ಥೆಗೆ ಮೂಲ ಸಂವಿಧಾನವಲ್ಲವೇನು ಸಹೋದರರೇ.ನೀವು ಸಂವಿಧಾನವನ್ನೇ ಟೀಕಿಸುತ್ತಿರುವುದು ಸೋಜಿಗವಾಗಿದೆ

      ಉತ್ತರ
      • ಶೆಟ್ಟಿನಾಗ ಶೇ.
        ಏಪ್ರಿಲ್ 19 2016

        ಸಹೋದರಿ ರಂಜನಾ, ತಮಗೆ ಸಂವಿಧಾನ ಹಾಗೂ ಕಾನೂನು ಬಗ್ಗೆ ಪ್ರಾಥಮಿಕ ತಿಳುವಳಿಕೆಯೂ ಇಲ್ಲವೆಂದು ಕಾಣುತ್ತದೆ. ಇದು ತಮ್ಮೊಬ್ಬರ ಕತೆಯಲ್ಲ, ನಾಡಿನ ಬಹುತೇಕ ಜನರ ಕತೆಯೂ ಇದೇ ಆಗಿದೆ. ನಿಲುಮೆಯ ನಿರ್ವಾಹಕ ರಾಕೇಶ್ ಶೆಟ್ಟಿ ಅವರಿಗೊಂದು ಮನವಿ – ತಾವೇಕೆ ನಾಡಿನ ಕಾನೂನು ತಜ್ಞ (ಉದಾ: ನಮ್ಮ ಶ್ರೀಧರ್ ಹೆಗಡೆ ಅಥವಾ ರವಿವರ್ಮ ಕುಮಾರ್)ರಿಂದ ಕಾನೂನು ವ್ಯವಸ್ಥೆ ಬಗ್ಗೆ ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ತಿಳುವಳಿಕೆ ಮೂಡಿಸುವ ಲೇಖನಗಳನ್ನು ಬರೆಸಬಾರದು? ಇದರಿಂದ ನಿಲುಮೆಯ ಓದುಗರಿಗೆ ಪ್ರಯೋಜನವಾಗುವುದು ದಿಟ.

        ಉತ್ತರ
    • WITIAN
      ಏಪ್ರಿಲ್ 19 2016

      Exactly! ಕ್ರಿಮಿನಾಗನೇ, ಪ್ರಭಾವಶಾಲಿಗಳು (ಜಯಲಲಿತಾ, ರಾಘವೇಶ್ವರಸ್ವಾಮಿಗಳು ಎಂದುಕೊಳ್ಳೋಣ), ದುಡ್ಡಿದ್ದವರು (ಸಲ್ಮಾನ್ ಖಾನ್) ಮತ್ತು ಜಾತಿಬಲ ಇರುವವರು (ಓ ಹೋ..ಹೋ.. ನಿನ್ನ ಮೆಚ್ಚಿನ ಹೀರೋ ಯಾಕೂಬ್ ಮೇಮನ್, ಲಾಲೂ ಪ್ರಸಾದ ಯಾದವ – ಮೇವು ಚೋರ – ಮಾಯಾವತಿಗಳು ಇತ್ಯಾದಿ – ಪಟ್ಟಿ ದೊಡ್ಡದಿದೆ)

      ಉತ್ತರ
  4. ಈ ಲೇಖನದಲ್ಲಿ ಹೊಸದೇನಿದೆ?
    ಕೇಳಿರುವ ಪ್ರಶ್ನೆಗಳನ್ನೇ ಮತ್ತೆ ಕೇಳಿದಂತಿದೆ.

    ಉತ್ತರ
  5. WITIAN
    ಏಪ್ರಿಲ್ 19 2016

    ಡಿಸ್ ಕ್ಲೇಮರ್ – ನಾನು ರಾಮಚಂದ್ರಾಪುರ ಮಠದ ಭಕ್ತ ಅಲ್ಲ, ಮಠದ ಜತೆ ನನ್ನ ದಿನ ದಿನದ ಒಡನಾಟ ಇಲ್ಲ (ಯಾವುದೇ ಮಠದ ಜತೆಗೂ ಇಲ್ಲ). ಈ ಮಠದ ಯಾವುದೇ ವ್ಯಕ್ತಿಯ ಜತೆಗಿನ ಅಥವಾ ಶ್ರೀ ರಾಘವೇಶ್ವರ ಭಾರತಿಯವರ ವೈಯುಕ್ತಿಕ ಪರಿಚಯವೂ ನನಗಿಲ್ಲ. ಮತ್ತು ಮಠಗಳ ಜತೆ ಗೌರವ ನನಗಿರುವುದು, ಪೀಠಕ್ಕೆ ಗೌರವ ಎನ್ನುವ ತತ್ವದ ಆಧಾರದಲ್ಲಿ ಮಾತ್ರ. ಕೆಲವು ಮಠಗಳ ಗುರುಗಳು ಆ ಪೀಠಕ್ಕೆ ಶೋಭೆಯನ್ನೂ ಗೌರವವನ್ನೂ ತಂದಿದ್ದಾರೆ.

    ದೇಶದ ಸಂವಿಧಾನ ಒಬ್ಬ ವ್ಯಕ್ತಿಗೆ ಆಪಾದಿತನಾದ ಮಾತ್ರಕ್ಕೆ ಅಪರಾಧಿ ಎಂದು ಪರಿಗಣಿಸುವುದಿಲ್ಲ. ಈ ವಿಷಯದಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳನ್ನು ಕಾನೂನು ಅಪರಾಧಿ ಎಂದು ಪರಿಗಣಿಸಿಲ್ಲ, ಮತ್ತು ಸಮರ್ಪಕವಾದ ಸಾಕ್ಷ್ಯಗಳ ಕೊರತೆಯ ಸಂದರ್ಭದಲ್ಲಿ ಅವರ ವಿರುದ್ಧ ತನಿಖೆಯನ್ನು ವಜಾಗೊಳಿಸುವ ಆದೇಶವನ್ನು ನ್ಯಾಯಾಲಯ ನೀಡಿದೆ. ಇದು ‘ತೀರ್ಪು’ ಅಲ್ಲ…ಅತ್ಯಾಚಾರದಂತಹ ಗುರುತರ ಆಪಾದನೆಯನ್ನು ಗಣನೆಗೆ ತೆಗೆದುಕೊಂಡು ಶ್ರೀಗಳ ವಿರುದ್ಧ ವಿಚಾರಣೆಯನ್ನು ನಡೆಸಬೇಕೆ, ಅಥವಾ ಬೇಡವೇ? ಎನ್ನುವ ಆದೇಶವನ್ನು ನ್ಯಾಯಾಲಯ ನೀಡುತ್ತದೆ. ಈ ಆದೇಶವನ್ನು ಪ್ರಾಸಿಕ್ಯೂಶನ್ ನೀಡುವ ಸಾಕ್ಷಿ/ ಆಧಾರಗಳ ಮೇಲೆ ನ್ಯಾಯಾಲಯ ನಿರ್ಧರಿಸುತ್ತದೆ. ಈ ಹಂತದಲ್ಲೇ ಸಮರ್ಪಕ ಸಾಕ್ಶ್ಯಾಧಾರಗಳನ್ನು ನೀಡದ ಪ್ರಾಸಿಕ್ಯೂಶನ್ ಇನ್ನು ಮುಂದೆಯೂ ಅಂಥ ‘ಎವಿಡೆನ್ಸ್’ ಸಾಕ್ಷ್ಯಾಧಾರಗಳನ್ನು ನೀಡುವ ಭರವಸೆ ಇಲ್ಲವಾದ್ದರಿಂದ ಇದು ವಿಚಾರಣೆಗೆ ಅರ್ಹವಾದ ಆಪಾದನೆ ಎನ್ನುವುದು ನ್ಯಾಯಾಲಯಕ್ಕೆ (ಅಥವಾ ನ್ಯಾಯಾಧೀಶರಿಗೆ) ಮನವರಿಕೆ ಆಗಿಲ್ಲ. ಇದು ಇಲ್ಲಿಯವರೆಗೆ ನಡೆದ ವಿದ್ಯಮಾನಗಳು.

    ನ್ಯಾಯಾಲಯದ ಆದೇಶದಲ್ಲಿನ ಬಹುಮುಖ್ಯ ಅಂಶವೇನೆಂದರೆ ಪ್ರಾಸಿಕ್ಯೂಷನ್ ಮುಂದುಮಾಡಿದ ಸಾಕ್ಷ್ಯಗಳಲ್ಲಿ ಒಂದಾದ ಸಂತ್ರಸ್ತೆಯ ಬಟ್ಟೆಯಲ್ಲಿ ಇರುವ ವೀರ್ಯಕ್ಕೂ ಶ್ರೀಗಳ ರಕ್ತದ ಡಿ ಎನ್ ಎ ಗೂ ಹೊಂದಾಣಿಕೆ ಆಗಿಲ್ಲ (ಡಿ ಎನ್ ಎ ರಕ್ತದಲ್ಲಿರಲಿ, ವೀರ್ಯದಲ್ಲಿರಲಿ, ಅಥವಾ ಬಾಯೊಳಗಿನ ಚರ್ಮದಲ್ಲಿರಲಿ – buccal swab – ಒಬ್ಬ ವ್ಯಕ್ತಿಯ ಡಿ ಎನ್ ಎ ಮತ್ತೊಬ್ಬ ವ್ಯಕ್ತಿಯ ಡಿ ಎನ್ ಎ ಗೆ ಹೊಂದುವ ಸಾಧ್ಯತೆಗಳು ೨೦ ಲಕ್ಷದಲ್ಲಿ ಒಂದು!).

    ಆದೇಶದ ತಾತ್ಪರ್ಯ: ಸಂತ್ರಸ್ತೆ ಮತ್ತು ಆರೋಪಿಯ ನಡುವಣ ಸಂಬಂಧ (ಇದ್ದದ್ದೇ ಆದರೆ) ಅದು ನೀತಿಬಾಹಿರ ಸಂಬಂಧವೇ ಹೊರತು ಅತ್ಯಾಚಾರವಲ್ಲ. ಆದರೆ ಆದೇಶದಲ್ಲಿ ಎಲ್ಲೂ ಇಂತಹ ದೈಹಿಕ ಸಂಬಂಧ ಇತ್ತೆಂದು ಹೇಳಿಲ್ಲ.

    ಇನ್ನು ಮಠದ ಭಕ್ತರಿಗೆ: ಇದೊಂದು ದೊಡ್ಡ ಷಡ್ಯಂತ್ರ.. ತೇಜೋವಧೆಗೆ ಪ್ರಯತ್ನ.. ಇತ್ಯಾದಿ ದೊಡ್ಡಗಂಟಲಿನ ಅರಚಾಟವನ್ನು ಬಿಡಿ. ಅತ್ಯಾಚಾರದಂತಹ ಘೋರ ಆರೋಪ ಮಿಕ್ಕ ಯಾವುದೇ ಮಠದ ಬಗ್ಗೆ ಯಾಕೆ ಯಾರೂ ಮಾಡಲಿಲ್ಲ? ಸಿಂಪಲ್.. ಬೇರೆ ಯಾವ ಮಠದಲ್ಲೂ ‘ಏಕಾಂತ ಸೇವೆ’ ‘ಕನ್ಯಾ ಸೇವೆ’ ಇತ್ಯಾದಿ ಹುಬ್ಬೇರುವಂತಹ ಸೇವೆಗಳಿಲ್ಲ.

    ಉತ್ತರ
    • Dattatreya Bhat, Konare.
      ಏಪ್ರಿಲ್ 20 2016

      ನೀವು ಯಾರೆಂದು ನನಗೆ ತಿಳಿದಿಲ್ಲ. “ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವ” ಎನ್ನುವ ವಾಕ್ಯ ತಮ್ಮ ಅನಿಸಿಕೆಯ ಲೇಖನ ನೋಡಿ ನೆನಪಾಯಿತು.
      ಏಕಾಂತ ಸೇವೆ, ಕನ್ಯಾ ಸೇವೆ ಎಂಬುದು ನೀವು ಸೃಷ್ಟಿಸಿದ ವಿಚಾರ. ಮಠದ ಬಗ್ಗೆ ನಿಮಗೇನೂ ತಿಳಿದಿಲ್ಲ ಎಂಬುದು ಸ್ಪಷ್ಟ. ಏನೂತಿಳಿಯದೇ ಮಾತನಾಡುವುದು ಸರಿಯಲ್ಲ ಎಂದು ನನ್ನ ಅಭಿಪ್ರಾಯ.
      ತಿಳಿಯಬೇಕೆಂಬ ಅಪೇಕ್ಷೆ ಇದ್ದಲ್ಲಿ ಮಠದ ಆಡಳಿತ ವ್ಯವಸ್ಥೆಯನ್ನು ಸಂಪರ್ಕಿಸಬಹುದು.

      ಉತ್ತರ
  6. WITIAN
    ಏಪ್ರಿಲ್ 19 2016

    ಪ್ರಾಸಿಕ್ಯೂಶನ್ ಮತ್ತು ಸಿ ಐ ಡಿ ಪೋಲಿಸರಿಗೆ ನನ್ನ (ಬಿಟ್ಟಿ) ಸಲಹೆ, ನಿಜವಾಗಿಯೂ ತನಿಖೆ ಮುಂದುವರಿಸಬೇಕೆಂದು ಮನಸ್ಸಿದ್ದರೆ, ಮಠದ ಕೆಲವು ಬೆಕ್ಕುಗಳನ್ನು ಗಮನಿಸಿ, ಶ್ರೀಗಳ ದೈಹಿಕ ಪರೀಕ್ಷೆಯ ಸಂದರ್ಭದಲ್ಲಿ ಅವರ ಜತೆ ವಿಕ್ಟೋರಿಯ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದ ಪರಿವಾರದ ಸದಸ್ಯರ ರಕ್ತದ sample ಗಳನ್ನು ನಯ-ಭಯಗಳಿಂದ, ಅಥವಾ ಅಗತ್ಯ ಬಿದ್ದರೆ ಕೋರ್ಟಿನ ಆದೇಶದ ಮೇರೆಗೆ ಪಡೆದುಕೊಂಡು, ಶ್ರೀಗಳ ರಕ್ತದ sample ಎಂದು ಹೆಸರಿಸಲಾದ ಮಾದರಿಯ ಜತೆ ಹೋಲಿಸಿ. ಯಾರದ್ದು match ಆಗುತ್ತದೆಯೋ ಅಂಥ ಗಿಂಡಿಮಾಣಿಯನ್ನು, ಶ್ರೀಗಳನ್ನು ಮತ್ತು ದೈಹಿಕ ಪರೀಕ್ಷೆಯನ್ನು ನಡೆಸಿದ ವೈದ್ಯರನ್ನೂ ವಿಚಾರಣೆಗೆ ಒಳಪಡಿಸಿ ನ್ಯಾಯಾಲಯದ ದಿಕ್ಕುತಪ್ಪಿಸಿದ (perjury) ಯ ಆರೋಪದ ಮೇಲೆ ಒಳಗೆ ಹಾಕಿ. ಎರಡನೆಯದಾಗಿ, ಶ್ರೀಗಳ ‘ನಕಲಿ’ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯನ್ನು ಮುಂದುವರಿಸಿ. ಅದು ತಾರ್ಕಿಕ ಅಂತ್ಯವನ್ನು ಕಂಡಾಗ ಅದು ನಕಲಿ ವಿಡಿಯೋ ನೋ, ಅಲ್ಲವೋ ತಿಳಿಯುತ್ತದೆ.

    ಉತ್ತರ
  7. ಶೆಟ್ಟಿನಾಗ ಶೇ.
    ಏಪ್ರಿಲ್ 19 2016

    “‘ಏಕಾಂತ ಸೇವೆ’ ‘ಕನ್ಯಾ ಸೇವೆ’ ಇತ್ಯಾದಿ ಹುಬ್ಬೇರುವಂತಹ ಸೇವೆ”

    ಮಠಮಾನ್ಯಗಳು ಈ ನಮೂನೆಯ ಸೇವೆಗಳನ್ನು ಮುಂದುವರೆಸಿ ಇನ್ನಷ್ಟು ರಾದ್ಧಾಂತ ಮಾಡಿದರೆ ಮುಂದೊಂದು ದಿನ ಜನ ಪುಕ್ಕಟೆ ಚಪ್ಪಲಿ ಸೇವೆ ಮಾಡಲಿದ್ದಾರೆ.

    ಉತ್ತರ
    • ಏಪ್ರಿಲ್ 19 2016

      ಬಂದಾ ಬಂದ ಬಂದೇ ಬಂದ ಕಿಂದರಿ ಜೋಗಿ. ಹಿಂದೆ ತಂದ ಏಟಿನ ಗಾಯಗಳೆಲ್ಲ ಮಾಗಿದವೇ ಗುಡಸೆಟ್ಟಿ!!

      ಉತ್ತರ
    • WITIAN
      ಏಪ್ರಿಲ್ 19 2016

      ಆಹಾ ಬಂದನಪ್ಪ ನಾಗ’ಶಿಟ್ಟಿ’! ಮೊದಲು ನಿನ್ನ ಮನೆಯ ಕಸ ಬಳಿ ಹೋಗು..ಬಸವಧರ್ಮದ (ಇದು ಬಿಜ್ಜಳನ ಭಂಡಾರಿಯಾಗಿದ್ದ ಬಸವೇಶ್ವರರ ಧರ್ಮದ ಬಗ್ಗೆ ಅಲ್ಲ! ನಿನ್ನ ಚೋರಗುರು ಡ್ರಗ್ಗಾಸರ್ ಪ್ರಣೀತ ಖೊಟ್ಟಿ ಶರಣ ಧರ್ಮದ ಕುರಿತ ವ್ಯಾಖ್ಯಾನ) ಬೂಟಾಟಿಕೆಯಲ್ಲಿ, ವಿಕಾ(ಚಾ)ರವ್ಯಾಧಿಯಲ್ಲಿ ಕಣ್ಣುಕುಕ್ಕುವ ದೀಪದ ಕೆಳಗಿರುವ ಅಜ್ಞಾನವನ್ನು ಮೊದಲು ಹೋಗಲಾಡಿಸು, ನಂತರ ಮಠಮಾನ್ಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಬಾ… ಐದನೆ ಕ್ಲಾಸಿನ ಮಟ್ಟದ ವಿದ್ಯಾರ್ಹತೆಯೂ ಇಲ್ಲದ ನಿನ್ನ ಕತ್ತಲನ್ನು ಮತ್ತಷ್ಟು ಹರಡಲು ಬರಬೇಡ!

      ಉತ್ತರ
  8. ಕೃಷ್ಣಾನಂದ ಭಟ್ಟ
    ಏಪ್ರಿಲ್ 19 2016

    ಸರಕಾರಕ್ಕೆ ಜೀವ ಇದ್ದರೆ ಎಲ್ಲವನ್ನೂ ತನಿಖೆ ಮಾಡಬೇಕು, ಈ ಪ್ರಕರಣದ ಹಿಂದೆ ಯಾರಿದ್ದಾರೆ ಅಂತ ಮೊದಲು ತನಿಖೆ ಮಾಡಲಿ.

    ಉತ್ತರ
  9. Salam Bava
    ಏಪ್ರಿಲ್ 20 2016

    ಶೆಟ್ಟಿನಾಗ ಹೇಳಿದ ಸತ್ಯ ಕೆಲವು ಭಕ್ತರಲ್ಲಿ ಸಿಕ್ಕಾಪಟ್ಟೆ ಉರಿ ಉಂಟು ಮಾಡಿದೆ. ಇಂಥಾ ಸ್ವಾಮಿನಿಷ್ಠ ಭಕ್ತರ ಗುರು ರಾ.ಭಾ. ಸ್ವಾಮಿ ತನ್ನ ಶಿಷ್ಯರ ಉರಿ ಕಡಿಮೆ ಮಾಡಲು ಬರ್ನಾಲ್ ಸೇವೆ ಶುರು ಮಾಡತಕ್ಕದ್ದು.

    ಉತ್ತರ
  10. simha s n
    ಏಪ್ರಿಲ್ 20 2016

    ಸಜ್ಜನನ ಸಾವು

    ಒಬ್ಬ ವ್ಯಕ್ತಿ ಇದ್ದ. ಅವನ ಹೆಸರು ಸಜ್ಜನ. ಹೆಸರಿಗೆ ತಕ್ಕಂತೆ ತುಂಬ ಒಳ್ಳೆಯವನು. ಅವನ ಒಳ್ಳೆಯತನದಿಂದಾಗಿ ಮಿಕ್ಕವರೂ ಒಳ್ಳೆಯವರಾಗಿದ್ದರು.
    ಅವನಿದ್ದ ರಾಜ್ಯದಲ್ಲಿ ಕಾಲೂರಲು ಸೈತಾನನಿಗೆ ಸಾದ್ಯವಾಗಿರಲಿಲ್ಲ. ತುಂಬ ಯೋಚಿಸಿದ ಸೈತಾನ. ಸಜ್ಜನ ಸತ್ತುದಲ್ಲದೆ ತನಗೆ ಉಳಿಗಾಲವಿಲ್ಲ. ಅವನನ್ನು ಕೊಂದರೆ ಸಾಮ್ರಾಜ್ಯವೆಲ್ಲ ತನ್ನದೇ.
    ಅದಕ್ಕಾಗಿ ಏನೆಲ್ಲ ಪ್ರಯತ್ನಿಸಿದ!
    ಆಹಾರದಲ್ಲಿ ವಿಷ ಬೆರೆಸಿದ.
    ಬೆಂಕಿಯಲ್ಲಿ ನೂಕಲೆತ್ನಿಸಿದ.
    ಜಲಪಾತದಲ್ಲಿ ತಳ್ಳಲು ನೋಡಿದ.
    ರೈಲು ಕಂಬಿಯ ಮೇಲೆ ಕಟ್ಟಿ ಎಸೆದ.
    ಉಹುಂ, ಸಜ್ಜನನಿಗೆ ಸಾವೇ ಇಲ್ಲ.
    ಪ್ರತಿ ಬಾರಿ ಪವಾಡ ಸದೃಶ ರೀತಿಯಲ್ಲಿ ಆತ ಪಾರಾಗುತ್ತಿದ್ದ.
    ಸೈತಾನನಿಗೆ ತಲೆ ಚಿಟ್ಟು ಹಿಡಿದು ಹೋಯಿತು.
    ಕೊನೆಯ ಯತ್ನವೆಂದು ಒಂದು ಹೆಣ್ಣಿನ ವೇಷ ತಾಳಿ ಬಂದ. ತನಗೆ ವೈರಾಗ್ಯವನ್ನು ಉಪದೇಶಿಸಬೇಕೆಂದು ಕೇಳಿಕೊಂಡಳಾಕೆ. ತನ್ನ ಎಂದಿನ ಹಸನ್ಮುಖದಿಂದ ಒಪ್ಪಿದ ಸಜ್ಜನ.
    ಏಕಾಂತದಲ್ಲಿ ಅವನನ್ನು ತನ್ನ ಸೌಂದರ್ಯದಿಂದ ಒಲಿಸಿಕೊಳ್ಳಲು ಯತ್ನಿಸಿದಳವಳು. ಉಹುಂ, ಜಗ್ಗಲಿಲ್ಲ ಸಜ್ಜನ. ಹತ್ತು ನಿಮಿಷದ ನಂತರ ತನ್ನ ಬಟ್ಟೆಗಳನ್ನು ಹರಿದುಕೊಂಡು ಹೊರಬಂದ ಅವಳು, ಸಜ್ಜನ ತನ್ನ ಮೇಲೆ ಅತ್ಯಾಚಾರವೆಸಗಿದನೆಂದು ಗೋಳಿಡತೊಡಗಿದಳು.
    ಅವಳ ಆಕ್ರಂದನ ಕೇಳಿ ಜನದ ಗುಂಪು ಸೇರಿತು. ಮೊದಲಿಗೆ ಯಾರೂ ಆ ಆರೋಪವನ್ನು ನಂಬಲಿಲ್ಲ.
    ತನ್ನ ಎಂದಿನ ಹಸನ್ಮುಖದಿಂದಲೇ ಹೊರಬಂದ ಸಜ್ಜನ.
    ಗುಂಪಿನಲ್ಲಿದ್ದ ಸೈತಾನನ ಸೇವಕನೊಬ್ಬ ಕೂಗಿದ. ‘ಎಷ್ಟು ಧೂರ್ತ ಇದ್ದಾನೆ ಈತ. ಕಾಮವನ್ನು ಜಯಿಸಿದವರು ಯಾರೂ ಇಲ್ಲ. ಅಲ್ಲದೆ ಹೆಣ್ಣೊಬ್ಬಳು ತನ್ನ ಶೀಲದ ವಿಷಯದಲ್ಲಿ ಸುಳ್ಳು ಹೇಳುವಳೇನು?’
    ಗುಂಪಿನಲ್ಲಿ ಗುಜುಗುಜು. ಯಾರೋ ಒಬ್ಬ ನಿಜ! ನಿಜ! ಎಂದ.
    ಅಷ್ಟೇ!
    ಮರುಕ್ಷಣ ಸಜ್ಜನ ನಿಂತಲ್ಲಿಯೇ ಸತ್ತು ಹೋಗಿದ್ದ!

    *****
    14-10-2001ರ ಕನ್ನಡಪ್ರಭದಲ್ಲಿ ಪ್ರಕಟಿತ. – ಎಸ್ ಎನ್ ಸಿಂಹ, ಮೇಲುಕೋಟೆ

    ಉತ್ತರ
  11. manjuhegade33
    ಏಪ್ರಿಲ್ 20 2016

    ಶೃಂಗೇರಿ ಶಾರದಾ ಪೀಠದ ೧೨ನೆಯ ಪೀಠಾಧೀಶರಾಗಿದ್ದ ಶ್ರೀ ವಿದ್ಯಾರಣ್ಯರು ಗೋಕರ್ಣಕ್ಕೆ ಬಂದಾಗ ಕೊಟ್ಟ ತಾಮ್ರ ಶಾಸನದಲ್ಲಿ ಅಧಿಕೃತತೆಯನ್ನು ದೃಢೀಕರಿಸಿದ್ದಾರೆ ಮತ್ತು ನಿಮ್ಮದು ಶಂಕರರ ಜ್ಯೇಷ್ಠ ಶಿಷ್ಯ ಪರಂಪರೆ ಎಂದಿದ್ದಾರೆ. ಈ ಶಾಸನವನ್ನು ಅಂದಿನ ವಿಜಯನಗರ ಸಂಸ್ಥಾನ ಕೂಡ ಮಾನ್ಯ ಮಾಡಿದೆ.

    ಆ ಶಾಸನದ ಒಂದೊಂದು ಪ್ರತಿಗಳು ಶೃಂಗೇರಿ, ರಾಮಚಂದ್ರಾಪುರಮಠ ಮತ್ತು ಪುರಾತತ್ವ ಇಲಾಖೆಯಲ್ಲಿ ಕೂಡ ಇದೆ.

    ಇದು ಐತಿಹಾಸಿಕ ದಾಖಲೆ. ಜಗದ್ಗುರು ವಿದ್ಯಾರಣ್ಯರು ಎಷ್ಟು ಸತ್ಯವೋ ಈ ಶಾಸನವೂ ಅಷ್ಟೇ ಸತ್ಯ.

    ಉತ್ತರ
  12. GeethaManjappa
    ಏಪ್ರಿಲ್ 20 2016

    ಮಾಹಿತಿಯ ಕೊರತೆಯುಳ್ಳವರಿಗೆ ಸಂಪೂರ್ಣವಾಗಿ ತಿಳಿಯಲು ಸವಿವರಗಳಿಂದ ಕೂಡಿದ ಉತ್ತಮವಾದ ಬರೆಹ ಇದಾಗಿದೆ.
    CID ಯವರಿಗೆ ಇದು ಒಂದು ಷಡ್ಯಂತ್ರ ಎಂಬ ಅರಿವಿದ್ದರೂ, ಇದರಲ್ಲಿ ಹುರುಳಿಲ್ಲ, ಇದು ವಿಚಾರಣೆಗೂ ಅರ್ಹವಲ್ಲದ ಕೇಸ್ ಎಂದು ಗೊತ್ತಿದ್ದರೂ
    ಏನೋ ಕುತೂಹಲ ಸೃಷ್ಟಿ ಮಾಡುತ್ತಾ ಸುಮಾರು ಒಂದೂವರೆ ವರುಷಗಳನ್ನು ಯಾರದ್ದೋ ಒತ್ತಡಕ್ಕೆ ಮಣಿದಂತೆ ಕಳೆದಿದ್ದಂತೂ ಜನ ಸಾಮಾನ್ಯರ ಗಮನಕ್ಕೂ ಬಂದಿದೆ.
    ಈಗ ಘನತೆವೆತ್ತ ನ್ಯಾಯಾಲಯ ಸೂಕ್ತವಾದ ತೀರ್ಪನ್ನು ಜನತೆಯ ಮುಂದಿಟ್ಟಿದೆ…ಈಗ ಬಾಕಿ ಇರುವುದು ಈ ಎಲ್ಲಾ ಪ್ರಕರಣಗಳ ಹಿಂದಿರುವ
    ದೊಡ್ಡ ದೊಡ್ಡ ವ್ಯಕ್ತಿಗಳನ್ನೋ, ಸಂಸ್ಥೆಯನ್ನೋ ಹೊರಗೆ ಎಳೆತಂದು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾತ್ರ..
    ಇದನ್ನು ತನಿಖಾ ತಂಡದವರು ಸಮರ್ಪಕವಾಗಿ ನಿಭಾಯಿಸಬಹುದು ಎಂಬ ಭರವಸೆಯನ್ನಿಡಬಹುದೇ….ಇದು ಮಾತ್ರ ಪ್ರಶ್ನಾರ್ಥಕ !!
    ‘ಸರ್ಕಾರದ ಕೆಲಸ ದೇವರ ಕೆಲಸ’ ನಿಜವೇ ನೋಡಬೇಕು!!

    ಉತ್ತರ
  13. Keshava Bhat Mithur
    ಏಪ್ರಿಲ್ 20 2016

    ಸತ್ಯಕ್ಕೆಂದಿಗೂ ಸಾವಿಲ್ಲ ವೆನ್ನುವುದು ರುಜುವಾತಾಗಿದೆ.

    ಉತ್ತರ
  14. g.k.parameshwara jois
    ಏಪ್ರಿಲ್ 21 2016

    Shri mathada Divya parampareyannu havyakasamaja abhimanadinda ulisi belesi kondu hogabeku.charithryaheena swarthigala bagge sada jagrathe agatya.hareram.

    ಉತ್ತರ
  15. ಮೇ 14 2016

    ಗಾಂಪನಾದ ನನ್ನೊಬ್ಬನ ಬಿಟ್ಟಿಸಲಹೆ:- ಇಷ್ಟೆಲ್ಲ ಆಗುತ್ತಿದ್ದರೂ ನೋವಾಗುತ್ತಿರುವುದು ದೂರುದಾರೆಗೆ ತಾನೆ ? ( 169 ಬಾರಿ ಅತ್ಯಾಚಾರವಾಗಿದ್ದರೆ ) . ದೂರನ್ನು ಸಾಬೀತು ಪಡಿಸಬೇಕಾದುದು ದೂರುದಾರೆಯೇ ತಾನೆ?. ದೂರುದಾರೆಯನ್ನೇ ಸುಳ್ಳುಪತ್ತೆಪರೀಕ್ಷೆಗೆ ಒಳಪಡಿಸಿದರೆ ಹೇಗೆ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments