ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 23, 2016

2

ನೆಪೋಲಿಯನ್ ಹಾದಿ

‍ನಿಲುಮೆ ಮೂಲಕ

– ರಂಜನ್ ಕೇಶವ

1378983-bona10ಕೇವಲ 27 ವರ್ಷದ ಹರೆಯ ನೆಪೋಲಿಯನ್ ಬೋನಾಪಾರ್ಟ್ ಆಗಷ್ಟೇ ಇಟಲಿಯಲ್ಲಿಯ ಫ್ರೆಂಚ್ ಸೇನೆಗೆ ಬ್ರಿಗೇಡಿಯರ್ ಜನರಲ್ ಆಗಿ ನೇಮಕಗೊಂಡಿದ್ದ . ಅಲ್ಲಿಯತನಕವೂ ಯಾವತ್ತೂ ಒಂದು ಬೃಹತ್ ಸೇನೆಯನ್ನು ನೇತೃತ್ವ ವಹಿಸಿರಲಿಲ್ಲ . ಮೊದಲ ಬಾರಿಗೆ ನೇಮಕಗೊಂಡ ಈ ಚಿಕ್ಕ ಹುಡುಗ ಏನು ಸಾಧಿಸಿ ತೋರಿಸಿಯಾನೋ ಎಂದು ಅವನ ಕೆಳಗಿನವರು ಮೂದಲಿಸುತ್ತಿದ್ದರು. ಅದಲ್ಲದೇ ಕುಬ್ಜಕಾಯ ಬೇರೆ ಎಂದು ಅಣಕಿಸುತ್ತಿದ್ದರಂತೆ. ಆದರೆ ನೆಪೋಲಿಯನ್ನಿನ ಆ ಕುಬ್ಜ ಶರೀರದೊಳಡಗಿತ್ತು ಅಧಮ್ಯ ಆತ್ಮವಿಶ್ವಾಸ ಮಿತಿಮೀರಿದ ಛಲ. ಇದನ್ನು ವ್ಯಕ್ತಪಡಿಸಲು ಒಂದು ಅವಕಾಶಕ್ಕಾಗಿ ಹಾತೊರೆಯುತ್ತಿದ್ದನಷ್ಟೇ. ಸಿಕ್ಕ ಈ ಮೊದಲ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದಕ್ಕಾಗಿ ಜಾಗರೂಕತೆಯಿಂದ ತಯಾರಿಮಾಡುತ್ತಿದ್ದ.

ಅವನ ವ್ಯಕ್ತಿತ್ವದ ವರ್ಚಸ್ಸು ಹೇಗಿತ್ತೆಂದರೆ ಕೇವಲ ನೋಟಮಾತ್ರದಿಂದ ಅವನನ್ನು ಕಡೆಗಣಿಸುವ ಸೇನಾಧಿಕಾರಿಗಳಿಗೆ ಒಂದು ಸಣ್ಣ ನಡುಕ ಹುಟ್ಟಿಸುತ್ತಿತ್ತಂತೆ . ಆದರೆ ನೆಪೋಲಿಯನ್ ಸದಾ ಗಾಂಭೀರ್ಯ ಸ್ವಭಾವದವನಲ್ಲದೇ ಆಗಾಗ ಹಸನ್ಮುಖಿಯಾಗಿ ಕುಚೋದ್ಯ ಮಾಡುತ್ತಲೋ ಎಲ್ಲರೊಂದಿಗೆ ಅವರಂತೆಯೇ ಬೆರೆತು ಉತ್ಸಾಹ ಚಿಮುಕಿಸುತ್ತಾ ಮತ್ತೆ ಕೆಲವು ಬಾರಿ ಸೇನಾಪತಿಯಂತೆ ಸಿಟ್ಟನ್ನೂ ತೋರುತ್ತಿದ್ದ. ಆಗ ಅವನು ನೇತೃತ್ವ ವಹಿಸಿಕೊಂಡಿದ್ದ ಸೇನೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿತ್ತು. ದೂರದ ಪ್ರಾನ್ಸ್ ಸದಾ ಕ್ರಾಂತಿಯಲ್ಲಿ ಮುಳುಗಿ ಆರ್ಥಿಕವಾಗಿ ಮುರಿದು ಬಿದ್ದಿದ್ದರಿಂದ ಇವರಿಗೆ ಸರಿಯಾಗಿ ವೇತನವೂ ದೊರೆಯುತ್ತಿರಲಿಲ್ಲ . ಸರಿಯಾದ ನಾಯಕತ್ವದ ಕೊರೆತೆ ಇದ್ದ ಕಾರಣ ಸೈನಿಕರು ಬೇಸತ್ತಿದ್ದರು ಕೂಡ . ಅದರ ಮೇಲೆ ನೆಪೋಲಿಯನ್ನನಿಗೆ ಮೇಲಿನಿಂದ ಆದೇಶ ಬಂದಿದ್ದೇನೆಂದರೆ ಈ ನಿರುತ್ಸಾಹಿ ಪಡೆಯಿಂದ ಸುಸಜ್ಜಿತ ಆಸ್ಟಿಯನ್ ಮತ್ತು ಪೀಡ್ ಮಾಂಟಿಯನ್ನರನ್ನು ಮಣಿಸಬೇಕೆಂದು .

ನೆಪೋಲಿಯನ್ ಅಲ್ಲಿ ಬಂದ ಕ್ಷಣದಿಂದಲೇ ಸೇನೆಯ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನವಿತ್ತಿದ್ದ . ಸೇನೆಯ ರೀತಿ ರಿವಾಜುಗಳನ್ನು ಸರಿಪಡಿಸುವುದು ಅವಶ್ಯಕ ಸಾಮಾಗ್ರಿಗಳನ್ನು ಎಲ್ಲರಲ್ಲಿ ಹಂಚುವುದು ಇತ್ಯಾದಿ ಕೆಲಸಗಳಲ್ಲಿ ಮಗ್ನನಾದ . ಫ್ರಾನ್ಸ್ ನಿಂದ ಬರುವ ಸರಬರಾಜಿನ ಕೊರತೆಯೂ ಇತ್ತು . ಕೇವಲ 24 ತೋಪುಗಳು , 4000 ಬಳಲಿದ ಕುದುರೆಗಳು, 3 ಲಕ್ಷ ಬೆಳ್ಳಿ ನಾಣ್ಯಗಳು ಮತ್ತು ಕೇವಲ 30000 ಜನರಿಗೆ ಒಂದು ತಿಂಗಳಿಗೆ ಸಾಲುವ ಅರ್ಧದಷ್ಟು ಆಹಾರಸಾಮಾಗ್ರಿಗಳಿಂದ ಈಗ ಇಡೀ ಇಟಲಿಯನ್ನು ಕಬಳಿಸಬೇಕಿತ್ತು !

ಅದರ ಮೇಲೆ ಇವನ ರಣ ಚಾತುರ್ಯವೇನಿತ್ತೆಂದರೆ ಶತ್ರುಗಳಿಗೆ ಗೊತ್ತಾಗದಂತೆಯೇ ಅವನ ಬಳಿ ಅತಿ ವೇಗವಾಗಿ ಸೇನೆಯನ್ನು ಮುನ್ನುಗ್ಗಿಸುವುದು ! ಯಾವ ಚಳಿ, ಮಳೆಗೂ ಅಂಜದೆ ಎಂಥಹ ಗಿರಿಕಂದರಗಳ ನಡುವೆಯೂ ಮುನ್ನುಗ್ಗುವುದು . ಅದು ಆ ಕಾಲದಲ್ಲಿ ಇವನೇ ಕಂಡುಹಿಡಿದ ಬ್ಲಿಟ್ಜ್ ಕ್ರೀಗ್ ತಂತ್ರ .
ತನ್ನ ಸೈನಿಕರಿಗೆ ಉತ್ತೇಜಿಸುತ್ತಿದ್ದ – “ Soldiers, you are half starved and half naked. The Government owes you much, but can do nothing for you. Your patience, your courage, do your honour, but give you no glory, no advantage. I will lead you into the most fertile plains of the world. There you will find flourishing cities, teeming provinces. There you will reap honour, glory, and wealth. Soldiers of the Army of Italy, will you be wanting in courage and firmness?”

ನೆಪೋಲಿಯನ್ನಿನ ಈ ಮಾತುಗಳಿಗೆ ಕೇವಲ ನೀರಸ ಪ್ರತಿಕ್ರಿಯೆ ಇರುತಿತ್ತು. ಆದರೂ ಸೇನೆಯನ್ನು ಉತ್ತೇಜಿಸುತ್ತಿದ್ದ – “ You are asking me to perform miracles, and I cannot do that . . . Only with prudence and foresight can we achieve great ends. It is but a step from victory to defeat. In affairs of magnitude I have learned that, in the last resort, everything invariably turns upon the trifle. ”

ಇನ್ನು ಹೇಳುವ ದೊಡ್ಡ ಮಾತುಗಳನ್ನು ಮಾಡಿ ತೋರಿಸಬೇಕಲ್ಲ. ಆಗಲೇ ಶತ್ರುಗಳ ಚಲನವಲನಗಳನ್ನು ಗಮನಿಸಿತ್ತಿದ್ದ. ಪೀಡ್ ಮಾಂಟೀಸ್ ಮತ್ತು ಆಸ್ಟ್ರಿಯನ್ನರ ಒಟ್ಟು 60000 ಬಲದ ಸೇನೆ. ಅದರಲ್ಲಿ 25000 ಪೀಡ್ ಮಾಂಟಿಯನ್ನರು ಮತ್ತು ಉಳಿದ 35000 ಆಸ್ಟ್ರಿಯನ್ನರ ಪಡೆ ಉತ್ತರಕ್ಕೂ ಮತ್ತು ಪಶ್ಚಿಮಕ್ಕೆ ಹಬ್ಬಿತ್ತು . ನೆಪೋಲಿಯನ್ ಗಮನಿಸಿದ್ದೇನೆಂದರೆ ಆ ಎರಡು ಸೇನೆಯ ನಡುವಿದ್ದ ಅಂತರ . ಆ ಅಂತರವನ್ನು ಮತ್ತಷ್ಟು ಹೆಚ್ಚಿಸಲೆಂದು ಒಂದು ಸಣ್ಣ ಪಡೆಯನ್ನು ಆಸ್ಟ್ರಿಯನ್ನರು ಅಟ್ಟಲೆಂದು ಪಶ್ಚಿಮದ ಬೋಶೆಟ್ಟಾ ಪಾಸ್ ಹಾದಿಯಾಗಿ ಕಳಿಸಿದ . ಆ ಸಣ್ಣ ಪಡೆಯಿಂದ ಮಣ್ಣು ಮುಕ್ಕಿದ ಆಸ್ಟ್ರಿಯನ್ನರು ಅದನ್ನು ಮುತ್ತುವರೆಯಲು ತಮ್ಮ ಸೇನೆಯನ್ನು ಮತ್ತಷ್ಟು ಪಶ್ಚಿಮಕ್ಕೆ ಎರಡು ಪಾರ್ಶ್ವದಲ್ಲಿ ಮುನ್ನುಗ್ಗಿದರು . ಆದರೆ ನೆಪೋಲಿಯನ್ನಿನ ಮುಖ್ಯ ಪಡೆ ಆ ಎರಡು ಸೇನೆಯ ನಡುವೆ ತಲುಪಲೆಂದು ಆಪನ್ನೈನ್ಸ್ ಮೂಲಕ ನಡೆದ . ಆಗ ಆಸ್ಟ್ರಿಯನ್ನಿನ ಒಂದು ಪಾರ್ಶ್ವ ಬೋಶೆಟ್ಟಾನಲ್ಲಿ ಸಿಲುಕಿ (ಬ್ಯಾಟಲ್ ಆಫ್ ಮೊಂಟೆನೊಟ್ಟಾ ಎಂಬಲ್ಲಿ ) ಸೋತುಹೋಯಿತು . ಇದು ನೆಪೋಲಿಯನ್ ಗೆ ಸಂದ ಮೊದಲ ಜಯ. ಮತ್ತೆ ನೆಪೋಲಿಯನ್ ಉತ್ತರಕ್ಕೆ ತಲುಪಿ ಪೀಡ್ ಮಾಂಟೀಸ್ ರನ್ನು ಎರಡೇ ವಾರದಲ್ಲಿ ಆರು ಯುದ್ಧಗಳಲ್ಲಿ ಮಣಿಸಿ ಒಪ್ಪಂದಕ್ಕೆ ಸಹಿ ಹಾಕಿಸಿದ. ಪೀಡ್ ಮಾಂಟಿಯನ್ನರು ಅಪಾರ ಕಪ್ಪ ಕಾಣಿಕೆಗಳನ್ನು ಕೊಟ್ಟರು. ಅವುಗಳನ್ನು ನೆಪೋಲಿಯನ್ ತನ್ನ ಸೈನಿಕರಿಗೆ ಹಂಚಿ ಅಭಿನಂದಿಸಿದ .

ಈ ಬೆಳವಣಿಗೆಯಿಂದ ಮಿಕ್ಕ ಆಸ್ಟ್ರಿಯನ್ ಪಡೆಗಳು ಹೆದರಿದರು. ಅದ್ಯಾವನೋ ಹೊಸ ಬ್ರಿಗೇಡಿಯರ್ ಜನ್ರಲ್ ಅಂತೆ , ಒಂದು ಕಡೆ ಕೈಗೆ ಸಿಗುವುದಿಲ್ಲ , ಪದೇ ಪದೇ ತನ್ನ ಸೇನಾ ನೆಲೆಯನ್ನು ಬದಲಾಯಿಸುತ್ತಾನೆ. ಇವನ ಯುದ್ಧಕೌಶಲ್ಯ ವನ್ನು ಅರಿಯಲಾಗದೆ ಸೇನೆಯನ್ನು ಹಿಂಪಡೆಯುವುದು ಒಳಿತೆಂದು ಆಸ್ಟ್ರಿಯನ್ ಪಡೆ ಕಾಲ್ಕಿತ್ತಿತು . ಆದರೆ ನೆಪೋಲಿಯನ್ ಬೆನ್ನಟ್ಟುತ್ತಾ ಸ್ವಿಜರ್ ಲ್ಯಾಂಡಿನ ಆಲ್ಫ್ಸ್ ತನಕ ಮತ್ತೂ ಮುಂದೆ ತಲುಪಿದ. ಆಸ್ಟ್ರಿಯನ್ ತನ್ನ ಹಿಂಬದಿಯ ಒಂದು ಸೇನಾ ಭಾಗವನ್ನು ಲೋಡಿ ಎಂಬ ಸಣ್ಣ ಪಟ್ಟಣದಲ್ಲಿ ಬಿಟ್ಟು ಮಿಕ್ಕ ಪಡೆಗಳು ಮುಂದೆ ನಡೆದಿದ್ದವು .

ಆ ಲೋಡಿಯಲ್ಲಿ ಒಂದು ಸೇತುವೆಯನ್ನು 14 ತೋಪುಗಳಿಂದ ಮತ್ತು 3 ಬೆಟ್ಯಾಲಿಯನ್ ಗಳಿಂದ ಪ್ರೆಂಚರ ಪಡೆಯನ್ನು ತಡೆಯಲು ನಿಂತಿದ್ದವು . ನದಿಯ ಮತ್ತೊಂದು ದಂಡೆಯಲ್ಲಿ ಬಂದು ನಿಂತಿದ್ದ ನೆಪೋಲಿಯನ್ ಸೇನೆಗೆ ಇದೊಂದು ಸವಾಲಾಗಿ ಎದುರಾಯಿತು. ಯಾವ ರಣತಂತ್ರವೂ ಇಂಥಹ ಸ್ಥಿತಿಯಲ್ಲಿ ನಡೆಯುವುದಿಲ್ಲ. ಇಲ್ಲಿ ಬೇಕಾಗಿರುವುದು ಧೈರ್ಯವಷ್ಟೇ . ಅಲ್ಲಿಯತನಕ ತನ್ನ ಸೇನೆಯನ್ನು ಮುಂದುವರೆಸಿ ಬಂದಿದ್ದ ನೆಪೋಲಿಯನ್ನನಿಗೆ ತನ್ನ ಸೈನಿಕರಿಂದ ಗೌರವ ವಿಶ್ವಾಸ ಗಳಿಸಿದ್ದ. ಈಗ ಮತ್ತಷ್ಟು ಉತ್ತೇಜಿಸಿ ಒಂದೊಂದು ಸುತ್ತಿನಲ್ಲಿ ಅವರ ತೋಪಿನ ಧಾಳಿಯ ನಡುವೆಯೂ ಮುನ್ನುಗ್ಗುವುದೆಂದು ಯೋಜನೆ . ಹಾಗೆಯೇ ಸೈನಿಕರೂ ತಮ್ಮ ಪ್ರಾಣ ಕೊಡುತ್ತಲೇ ಮುಂದೆ ನುಗ್ಗುತ್ತಾ ಸೇತುವೆ ದಾಟಿ ಅವರ ತೋಪುಗಳ ಸದ್ದಡಗಿಸಿ ಜಯಗಳಿಸಿದರು . ಈ ಹೋರಾಟದ ನಡುವೆ ನಪೋಲಿಯನ್ ಸಹಿತವೂ ತಾನೊಬ್ಬ ದಂಡಾಧಿಕಾರಿಯೆಂಬ ಗರ್ವವಿಲ್ಲದೇ ತನ್ನ ಸೈನಿಕರ ಮಧ್ಯೆಯೇ ಓಡಾಡುತ್ತಿದ್ದ. ಪಕ್ಕದಲ್ಲಿಯೇ ತೋಪಿನ ಗುಂಡಿನ ಸ್ಫೋಟಗಳಾಗುತ್ತಿದ್ದರೂ ಭಯವಿಲ್ಲದೇ ತನ್ನ ಸೈನಿಕರಿಗೆ ಉತ್ಸಾಹ ತುಂಬುತ್ತಿದ್ದ. ತದ ನಂತರ ಪುನಃ ತನ್ನ ಸೇನೆಯನ್ನು ಆಸ್ಟ್ರಿಯಾದ ಒಳಗೇ ನುಗ್ಗಿ ವಿಯೆನ್ನಾದ ಕೇವಲ 75 ಕಿ ಮೀ ಸಮೀಪ ತಲುಪಿದ . ಈ ರಭಸದ ವೇಗಕ್ಕೆ ತತ್ತರಿಸಿದ ಆಸ್ಟ್ರಿಯನ್ ರಾಜ ಮರುಮಾತಿಲ್ಲದೇ ಶರಣಾದ. ನೆಪೋಲಿಯನ್ನಿನ ಈ ಇಟಲಿಯ ದಂಡಯಾತ್ರೆ ಪ್ಯಾರಿಸ್ಸಿನಲ್ಲಿ ಮನೆ ಮಾತಾಯಿತು. ಆಗಿನ್ನೂ ಅವನಿಗೆ ಕೇವಲ 28 ವಯಸ್ಸು, ಚಕ್ರವರ್ತಿಯೂ ಆಗಿರಲಿಲ್ಲ ಮತ್ತು ಆಗ ಇದು ಯುರೋಪಿನಲ್ಲಿ ನೆಪೋಲಿಯನ್ನಿನ ಬಿರುಗಾಳಿಯ ಪ್ರಾರಂಭವಷ್ಟೇ .

2 ಟಿಪ್ಪಣಿಗಳು Post a comment
 1. ಏಪ್ರಿಲ್ 23 2016

  ಹೌದು. ನೆಪೋಲಿಯನ್ ಒಬ್ಬ ನಿಷ್ಟಾವಂತ, ಧೈರ್ಯವಂತ, ಪ್ರಾಮಾಣಿಕ ವ್ಯಕ್ತಿ. ಇವರ ಬಗ್ಗೆ ಬರೆದ ಬರಹ ಹಿಂದೆ ಓದಿದ್ದೆ. ಮತ್ತೊಮ್ಮೆ ಓದುವ ಅವಕಾಶ. ಧನ್ಯವಾದಗಳು.

  ಉತ್ತರ
 2. hemapathy
  ಏಪ್ರಿಲ್ 23 2016

  ವಿಷಯ ಮಾರ್ಮಿಕವಾಗಿ ಮೂಡಿ ಬಂದಿದೆ. ಆತನ ಬಗ್ಗೆ ಎಷ್ಟು ತಿಳಿದರೂ ಸಾಲದು. ಆತನ ಶೌರ್ಯ, ಪರಾಕ್ರಮಗಳು, ಆತನ ಯುದ್ಧ ತಂತ್ರಗಳು ಅಜರಾಮರ. ಲೇಖಕರಿಗೆ ಧನ್ಯವಾದಗಳು!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments