ಸಾಯಣರ ವೇದವ್ಯಾಖ್ಯಾನವು ಏನನ್ನು ತಿಳಿಸುತ್ತದೆ?
– ವಿನಾಯಕ ಹಂಪಿಹೊಳಿ
ಸಾಯಣಾಚಾರ್ಯರು ಋಗ್ವೇದಕ್ಕೆ ಭಾಷ್ಯವನ್ನು ಬರೆಯುವಾಗ ಮೊದಲು ವೇದ ಎಂದರೇನು ?, ಅದರ ಲಕ್ಷಣವೇನು ಎಂಬುದರ ಕುರಿತು ಒಂದು ದೀರ್ಘ ಚರ್ಚೆಯನ್ನು ಮಾಡಿದ್ದಾರೆ. ಅದರಲ್ಲಿ ಪೂರ್ವಪಕ್ಷದ ವಾದಗಳನ್ನೆಲ್ಲ ಒಂದೊಂದಾಗಿ ಪರಿಗಣಿಸಿ, ವೇದದ ಲಕ್ಷಣದ ಕುರಿತು ತಮ್ಮ ಸಿದ್ಧಾಂತವನ್ನು ಮಂಡಿಸಿ, ಪೂರ್ವಪಕ್ಷಿಯ ಸಂದೇಹಗಳನ್ನೆಲ್ಲ ಪರಿಹರಿಸುತ್ತಾ ಸಾಗಿದ್ದಾರೆ. ಆ ಚರ್ಚೆ ಏನು ಎಂಬುದು ಮುಖ್ಯವಲ್ಲ. ಆ ಚರ್ಚೆಯಲ್ಲಿ ಪೂರ್ವಪಕ್ಷಿಗಳು ಮತ್ತು ಸಿದ್ಧಾಂತಿಗಳು ವೇದದ ಕುರಿತು ಯಾವ ದೃಷ್ಟಿಕೋಣವನ್ನು ಇಟ್ಟುಕೊಂಡಿದ್ದರು ಎಂಬುದು ಇಲ್ಲಿ ಮುಖ್ಯ. ಹೀಗಾಗಿ ಆ ಚರ್ಚೆಯ ಆದಿಭಾಗದ ಸಾರಾಂಶವನ್ನು ಮಾತ್ರ ನೋಡೋಣ. ಮೊದಲು ಪೂರ್ವಪಕ್ಷದ ವಾದಗಳನ್ನು ಪಟ್ಟಿ ಮಾಡಿ ನಂತರ ಸಾಯಣರು ಕೊಟ್ಟ ವೇದದ ವ್ಯಾಖ್ಯಾನವನ್ನು ನೀಡಲಾಗಿದೆ. ಪೂರ್ವಪಕ್ಷದ ಮತ: ವೇದ ಎನ್ನುವದು ಯಾವದನ್ನು? ವೇದಕ್ಕೆ ಲಕ್ಷಣಗಳೇನಾದರೂ ಇವೆಯೇ? ಪ್ರತ್ಯಕ್ಷ, ಅನುಮಾನ ಮತ್ತು ಆಗಮ ಎಂಬ ಮೂರು ಪ್ರಮಾಣಗಳಿವೆಯಲ್ಲ (ಊಟ ಮಾಡಿದರೆ ಹೊಟ್ಟೆ ತುಂಬುತ್ತದೆ ಎನ್ನುವದಕ್ಕೆ ಪ್ರತ್ಯಕ್ಷ ಪ್ರಮಾಣ, ಹೊಗೆಯಾಡುತ್ತಿರುವಲ್ಲಿ ಬೆಂಕಿಯಿರಬಹುದೆಂಬುದಕ್ಕೆ ಅನುಮಾನ ಪ್ರಮಾಣ, ಯಾಗದಿಂದ ಸ್ವರ್ಗಪ್ರಾಪ್ತಿ ಎಂಬುದಕ್ಕೆ ಆಗಮ ಪ್ರಮಾಣ), ಅವುಗಳಲ್ಲಿ ಕೊನೆಯ ಆಗಮ ಪ್ರಮಾಣವೆಂಬುದೇ ವೇದದ ಲಕ್ಷಣವೆನ್ನಲು ಸಾಧ್ಯವಿಲ್ಲ. ಏಕೆಂದರೆ ಮನ್ವಾದಿ ಸ್ಮೃತಿಗಳೂ ಆಗಮಗಳಾಗಿವೆ. ವೇದ ಎನ್ನುವದು ಸ್ವರ್ಗ ಅಥವಾ ಮೋಕ್ಷಕ್ಕೆ ಸಾಧನ ಎಂಬ ಲಕ್ಷಣವನ್ನೂ ಹೇಳಲು ಸಾಧ್ಯವಿಲ್ಲ ಕಾರಣ ಇತಿಹಾಸ ಪುರಾಣಗಳೂ ಸ್ವರ್ಗ ಅಥವಾ ಮೋಕ್ಷಕ್ಕೆ ಸಾಧನಗಳಾಗಿರುತ್ತವೆ. ಆಗಮವೇ ವೇದದ ಲಕ್ಷಣ ಎನ್ನುವದು ಅತಿವ್ಯಾಪ್ತಿದೋಷ ಒಳಗೊಂಡಿದೆ. ಬೆಳ್ಳಗಿರುವದು ಹಾಲಿನ ಲಕ್ಷಣ ಎಂದರೆ, ಸುಣ್ಣವೂ ಬೆಳ್ಳಗಿರುವದರಿಂದ, ಈ ಲಕ್ಷಣವಾಕ್ಯವು ಅತಿವ್ಯಾಪ್ತಿದೋಷ (Necessary But Not Sufficient) ಎಂಬ ದೋಷವನ್ನು ಹೊಂದಿರುತ್ತದೆ.
ಅಪೌರುಷೇಯತ್ವವೇ ವೇದದ ಲಕ್ಷಣವೆನ್ನಲೂ ಸಾಧ್ಯವಿಲ್ಲ. ಕಾರಣ ಸಹಸ್ರಶೀರ್ಷಾ ಪುರುಷಃ ಎಂದು ವರ್ಣಿತನಾಗುವ ಪರಮೇಶ್ವರನಿಂದಲೇ ವೇದಗಳು ರಚಿತವಾಗಿರುವದನ್ನು ವೈದಿಕರು ಒಪ್ಪುವುದರಿಂದ ಅದಕ್ಕೆ ಪೌರುಷೇಯತ್ವವೇ ಉಂಟಾಯಿತು. ಕರ್ಮಫಲರೂಪವಾದ ಶರೀರಧಾರಿಯಾದವನು ವೇದವನ್ನು ನಿರ್ಮಿಸಲಿಲ್ಲ ಎನ್ನುವದೂ ಸರಿಯಲ್ಲ. ಅಗ್ನಿಯಿಂದ ಋಗ್ವೇದವೂ, ವಾಯುವಿನಿಂದ ಯಜುರ್ವೇದವೂ ಮತ್ತು ಆದಿತ್ಯನಿಂದ ಸಾಮವೇದವೂ ಹುಟ್ಟಿವೆಯೆಂದು ವೇದಗಳಲ್ಲೇ ಇದೆ. ಹೀಗಾಗಿ ಅಪೌರುಷೇಯತ್ವ ಎನ್ನುವದು ವೇದದ ಲಕ್ಷಣವಾಗಲು ಸಾಧ್ಯವಿಲ್ಲ. ಮಂತ್ರಗಳು ಮತ್ತು ಬ್ರಾಹ್ಮಣಗಳ ಗುಂಪೇ ವೇದ ಎನ್ನುವುದೂ ಸರಿಯಲ್ಲ. ಇದು ಮಂತ್ರವು ಇದು ಬ್ರಾಹ್ಮಣವು ಎಂಬ ನಿರ್ಣಯವೇ ಆಗಿಲ್ಲವಾದ್ದರಿಂದ ಇದೂ ಕೂಡ ಸರಿಯಲ್ಲ. ಇಷ್ಟಾಗಿ ವೇದಗಳು ಇವೆ ಎನ್ನುವದಕ್ಕೆ ಯಾವ ಪ್ರಮಾಣವೇ ಇಲ್ಲ. “ಎಲೈ ಪೂಜ್ಯನೇ, ನಾನೀಗ ಋಗ್ವೇದವನ್ನು ಅಧ್ಯಯನ ಮಾಡುತ್ತೇನೆ” ಎಂಬಂಥ ವಾಕ್ಯಗಳು ಆ ವೇದದಲ್ಲೇ ಇವೆಯಾದ್ದರಿಂದ ಇದು ವೇದಗಳ ಅಸ್ತಿತ್ವಕ್ಕೆ ಪ್ರಮಾಣವಾಗುವದಿಲ್ಲ. ಕಾರಣ ಈ ವಾದವು ಆತ್ಮಾಶ್ರಯದೋಷದಿಂದ ಕೂಡಿದೆ. ಯಾಜ್ಞವಲ್ಕ್ಯ ಮತ್ತು ಮನುಸ್ಮೃತಿಗಳೂ ಕೂಡ ವೇದಾನುಸಾರಿಯಾಗಿರುವದರಿಂದ, ವೇದವನ್ನು ಪ್ರಮಾಣವೆಂದು ಒಪ್ಪಿರುವುದರಿಂದ ಅವುಗಳು ವೇದಗಳ ಅಸ್ತಿತ್ವದ ಕುರಿತು ಹೇಳುವ ವಾಕ್ಯಗಳನ್ನೂ ಪ್ರಮಾಣವೆನ್ನಲು ಸಾಧ್ಯವಿಲ್ಲ. ಅದಕ್ಕೂ ಆತ್ಮಾಶ್ರಯದೋಷವು ಬರುವದು. ನಾನು ಹುಬ್ಬಳ್ಳಿಯಲ್ಲಿ ಇದ್ದೇನೆ ಆದ್ದರಿಂದ ನಾನು ಹುಬ್ಬಳ್ಳಿಯಲ್ಲಿ ಇದ್ದೇನೆ ಎನ್ನುವದು ಆತ್ಮಾಶ್ರಯದೋಷ(Circular Reasoning).
ಲೋಕವ್ಯವಹಾರದಲ್ಲಿ ಪ್ರತ್ಯಕ್ಷವಾಗಿ ಕಾಣುವ ವಸ್ತುಗಳನ್ನು ಇಲ್ಲವೆನ್ನಲು ಸಾಧ್ಯವಿಲ್ಲವಷ್ಟೇ. ಎಲ್ಲರೂ ವೇದವಿಚಾರದ ಕುರಿತು ವ್ಯವಹರಿಸುವದರಿಂದ, ವೇದವಿಷಯವು ಲೋಕದಲ್ಲಿ ಪ್ರಸಿದ್ಧವಾಗಿರುವದರಿಂದ ವೇದಗಳು ಇವೆ ಎನ್ನುವುದಕ್ಕೆ ಪ್ರತ್ಯಕ್ಷವೇ ಏಕೆ ಪ್ರಮಾಣವಾಗಬಾರದು ಎನ್ನುವ ವಾಕ್ಯವೂ ಸರಿಯಲ್ಲ. ಕಾರಣ ಆಕಾಶವು ನೀಲಿಯಾಗಿದೆ ಎಂಬುದು ಲೋಕಾರೂಢಿಯಲ್ಲಿದೆ. ಆದರೆ ಅದು ಕೇವಲ ಭ್ರಾಂತಿಯಷ್ಟೇ. ವೇದವೂ ಹಾಗೆಯೇ ಒಂದು ಭ್ರಾಂತಿ ಆಗಿರಬಹುದಲ್ಲವೇ? ಹೀಗಾಗಿ ವೇದವೆನ್ನುವದು ಇಲ್ಲವೇ ಇಲ್ಲ. ಅದಕ್ಕೆ ಯಾವ ಲಕ್ಷಣವಾಗಲೀ ಪ್ರಮಾಣವಾಗಲೀ ಇಲ್ಲ ಎನ್ನುವುದು ತಿಳಿದುಬರುತ್ತದೆ. ಇವಿಷ್ಟು ಮೇಲಿನವು ಪೂರ್ವಪಕ್ಷಿಯ ಅಭಿಪ್ರಾಯ. ಒಂದು ವಸ್ತುವನ್ನು ವಿಮರ್ಶಿಸುವಾಗ ಅದರಲ್ಲಿರುವ ದೋಷಗಳನ್ನೂ ಬಾಧಕಗಳನ್ನೂ ಎತ್ತಿ ತೋರಿಸಿ ಇದು ಸರಿಯಿಲ್ಲ ಎಂದು ಕಾರಣಪೂರ್ವಕವಾಗಿ ತೋರಿಸುವ ಪಕ್ಷವೇ ಪೂರ್ವಪಕ್ಷ. ಅದರಂತೆಯೇ, ವಸ್ತುವಿನಲ್ಲಿ ಆರೋಪಿಸಿದ ಪೂರ್ವಪಕ್ಷದ ದೋಷಗಳನ್ನೂ, ಬಾಧಕಗಳನ್ನೂ ಒಂದೊಂದಾಗಿ ಕಾರಣಪೂರ್ವಕವಾಗಿ ಪರಿಹರಿಸಿ ಆ ವಸ್ತುವು ಈ ರೀತಿಯಾಗಿಯೇ ಇರುವುದೆಂದು ದೃಢಪಡಿಸುವದಕ್ಕೆ ಸಿದ್ಧಾಂತವೆಂದು ಹೆಸರು. ಶಾಸ್ತ್ರಾದಿಗಳಲ್ಲಿ ಪ್ರತಿಪಾದಿಸಿರುವ ವಿಷಯವನ್ನು ತಿಳಿದುಕೊಳ್ಳಲು ಮೊದಲು ಪೂರ್ವಪಕ್ಷವನ್ನಿಟ್ಟುಕೊಂಡು ಸಿದ್ಧಾಂತವನ್ನು ಸ್ಥಾಪಿಸುವದು ರೂಢಿ. ಈಗ ಸಾಯಣಾಚಾರ್ಯರು ಸಿದ್ಧಾಂತವನ್ನು ಮಂಡಿಸುತ್ತಾ ಆರಂಭದಲ್ಲಿ ವೇದವನ್ನು ವ್ಯಾಖ್ಯಾನಿಸಿದ್ದಾರೆ.
ಸಾಯಣರ ಸಿದ್ಧಾಂತದಲ್ಲಿ ವೇದದ ವ್ಯಾಖ್ಯಾನ: ಮಂತ್ರಬ್ರಾಹ್ಮಣಾತ್ಮಕವಾದ ಶಬ್ದರಾಶಿಯೇ ವೇದ ಎನ್ನುವ ವ್ಯಾಖ್ಯಾನವೇ ಸರಿ. ಮಂತ್ರ ಮತ್ತು ಬ್ರಾಹ್ಮಣಗಳ ಸ್ವರೂಪ ನಿರ್ಣಯವಾಗಿಲ್ಲವಾದ್ದರಿಂದ ಈ ವ್ಯಾಖ್ಯಾನ ಸರಿಯಿಲ್ಲ ಎನ್ನುತ್ತೀರೋ? ಹಾಗಲ್ಲ. ಶಾಸ್ತ್ರಾನುಷ್ಠಾನ ದಕ್ಷರು ಯಾವುದನ್ನು ಮಂತ್ರವೆಂದು ಹೇಳುವರೋ, ಅದು ಮಂತ್ರವು, ಮಿಕ್ಕವುಗಳು ಬ್ರಾಹ್ಮಣಗಳು. ಆದ್ದರಿಂದಲೇ ಆಪಸ್ತಂಭ ಮಹರ್ಷಿಗಳು ಯಜ್ಞಪರಿಭಾಷಾಸೂತ್ರದಲ್ಲಿ “ಮಂತ್ರಬ್ರಾಹ್ಮಣಯೋರ್ವೇದನಾಮಧೇಯಮಿತಿ” (ಮಂತ್ರಗಳಿಗೂ ಬ್ರಾಹ್ಮಣಗಳಿಗೂ ವೇದವೆನ್ನುವ ಹೆಸರು ಸಲ್ಲುವದು) ಎಂದು ಹೇಳಿದ್ದಾರೆ. ಈ ಮೇಲಿನ ವೇದವ್ಯಾಖ್ಯಾನವನ್ನು ಇಟ್ಟುಕೊಂಡು ಸಾಯಣರು ವೇದಪ್ರಾಮಾಣ್ಯ ಮತ್ತು ಅಪೌರುಷೇಯತ್ವದ ಕುರಿತು ಇರುವ ಪೂರ್ವಪಕ್ಷಿಯ ಸಂದೇಹಗಳನ್ನೆಲ್ಲ ಜೈಮಿನಿಯ ಪೂರ್ವಮೀಮಾಂಸಾ ಸೂತ್ರಗಳಿಂದ ಪರಿಹರಿಸಿ, ಸಿದ್ಧಾಂತವನ್ನು ಸ್ಥಾಪಿಸಿದ್ದಾರೆ. ಇಲ್ಲಿ ಆ ಚರ್ಚೆ ಮುಖ್ಯವಲ್ಲ. ಸಾಯಣರು ವೇದವನ್ನು ಯಾವ ಲಕ್ಷಣದಿಂದ ವ್ಯಾಖ್ಯಾನಿಸಿದ್ದಾರೆ? “ವೈದಿಕ ಸಂಪ್ರದಾಯಗಳನ್ನು ಅನುಷ್ಠಾನಗೊಳಿಸುವಲ್ಲಿ ದಕ್ಷರಾದವರು ಯಾವುದನ್ನು ಮಂತ್ರ ಮತ್ತು ಯಾವುದನ್ನು ಬ್ರಾಹ್ಮಣ ಎನ್ನುತ್ತಾರೆಯೋ, ಆ ಮಂತ್ರಬ್ರಾಹ್ಮಣಗಳ ಒಟ್ಟೂ ಶಬ್ದರಾಶಿಯೇ ವೇದ” ಎನ್ನುವ ಸಾಯಣರ ವೇದದ ವ್ಯಾಖ್ಯಾನವು ಇಂದೇಕೆ ಪ್ರಸ್ತುತವಾಗಿದೆ?
ಒಬ್ಬ ರಿಲಿಜನ್ನಿನ ಅನುಯಾಯಿ ತನ್ನ ಡಾಕ್ಟ್ರಿನ್ನನ್ನು ಹೇಗೆ ವ್ಯಾಖ್ಯಾನಿಸುತ್ತಾನೆ? ಒಬ್ಬ ಕ್ರಿಶ್ಚಿಯನ್ ಬೈಬಲ್ಲನ್ನು ಹೇಗೆ ವ್ಯಾಖ್ಯಾನಿಸುತ್ತಾನೆ? ಚರ್ಚಿನಲ್ಲಿ ಪೋಪ್ ಯಾವ ಪುಸ್ತಕ ತೋರಿಸಿ “ಇದು ಬೈಬಲ್” ಎನ್ನುತ್ತಾನೋ ಆ ಪುಸ್ತಕವೇ ಬೈಬಲ್ ಎಂದು ಯಾರಾದರೂ ವ್ಯಾಖ್ಯಾನಿಸುತ್ತಾರೆಯೇ? ಬೈಬಲ್ ಎನ್ನುವದು ಕ್ರಿಶ್ಚಿಯನ್ನರ ಸೆಕ್ರೆಡ್ ಗ್ರಂಥವೆಂದೋ, ಇಲ್ಲವೇ ಏಕದೇವನ ಆದೇಶಗಳನ್ನು ಸಾರುವ ಡಾಕ್ಟ್ರಿನ್ ಎಂದೇ ವ್ಯಾಖ್ಯಾನಿಸಲ್ಪಡುತ್ತದೆ. ಜಾಕೀರ್ ನಾಯ್ಕರಂಥ ಕಂಪೇರಿಟಿವ್ ರಿಲಿಜನ್ಸ್ ಸಂಶೋಧಕರು ಇಂದಿಗೂ ವೇದ ಎಂಬುದನ್ನು ಭಾರತದಲ್ಲಿದ್ದ ಜನಾಂಗಕ್ಕೆ ಏಕದೇವನು ನೀಡಿದ ಸಂದೇಶ ಎಂದೇ ಭಾವಿಸುತ್ತಾರೆ. ಕಾರಣ ಅವರಿಗೆ ರಿಲಿಜನ್ನಿಗೆ ಹೊರತಾದ ಬೇರೆ ಚಿತ್ರಣವೇ ಗೊತ್ತಿಲ್ಲ. ಇಂದಿನ ಸಮಾಜವಿಜ್ಞಾನದಲ್ಲಿ ಎಡಪಂಥೀಯರು ಹೇಳುವಂತೆ ವೇದಿಕ್ ರಿಲಿಜನ್ ಎನ್ನುವದು ಇದ್ದಿದ್ದೇ ಹೌದಾಗಿದ್ದರೆ ಸಾಯಣರು ವೇದವನ್ನು ವ್ಯಾಖ್ಯಾನಿಸಲು ಪೂರ್ವಪಕ್ಷದೊಡನೆ ಇಷ್ಟೆಲ್ಲ ಒದ್ದಾಡಬೇಕಾದ ಸಂದರ್ಭವೇ ಇರುತ್ತಿರಲಿಲ್ಲ. ನೇರವಾಗಿ “ವೇದಗಳು ಎನ್ನುವದು ವೈದಿಕ ಧರ್ಮದ ಧರ್ಮಗ್ರಂಥಗಳು” ಎಂದು ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಬಹುದಿತ್ತು. ಮನುಸ್ಮೃತಿಯಲ್ಲಿ ಹೇಳಿದ ಸನಾತನ ಧರ್ಮವು ರಿಲಿಜನ್ನಿನ ಅರ್ಥವನ್ನೇ ಹೊಂದಿದ್ದರೆ, ಕೊನೇ ಪಕ್ಷ “ಸನಾತನ ಧರ್ಮದ ಪವಿತ್ರ ಗ್ರಂಥಗಳೇ ವೇದ” ಎಂದಾದರೂ ವ್ಯಾಖ್ಯಾನಿಸಬಹುದಿತ್ತು. ಆದರೆ ಸಾಯಣರು ಹಾಗೇಕೆ ವ್ಯಾಖ್ಯಾನಿಸಲಿಲ್ಲ?
ವೇದಗಳನ್ನು ನಾವು ಸಂಪ್ರದಾಯಗಳ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು ಎಂಬುದು ಆಪಸ್ತಂಭರ ವೇದದ ವ್ಯಾಖ್ಯಾನ ಮತ್ತು ಸಾಯಣರ ವಿವರಣೆಗಳು ಸ್ಪಷ್ಟಪಡಿಸುವ ಅಂಶ. ನಮ್ಮ ಇಂದಿನ ಸಮಾಜವಿಜ್ಞಾನಿಗಳಿಗೂ ನಾವು ಇದನ್ನೇ ಮನದಟ್ಟು ಮಾಡಿಕೊಡಬೇಕಿದೆ. ಇಂದು ಜಗತ್ತಿನ ಎಲ್ಲ ಮುಖ್ಯ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ವಿಭಾಗಗಳಿವೆ. ಅಲ್ಲೆಲ್ಲ ವೇದಗಳ ಕುರಿತು ಸಂಶೋಧನೆಗಳು ನಡೆಯುತ್ತಿರುತ್ತವೆ. ಅದರಲ್ಲಿ ಸೆಮೆಟಿಕ್ ರಿಲಿಜನ್ನಿನ ಜನರೂ ಇರುತ್ತಾರೆ. ವೇದ ಎನ್ನುವದು ವೇದಿಕ್ ರಿಲಿಜನ್ನಿನ ಡಾಕ್ಟ್ರಿನ್ ಎಂಬ ಈಗಿನ ವಿವರಣೆಗೆ ನಮ್ಮಲ್ಲಿ ಯಾವ ಆಧಾರಗಳೂ ಸಿಗುವದಿಲ್ಲ. ವೈದಿಕ ಸಂಪ್ರದಾಯದ ಜನರಿಗೂ ಅದು ಅನುಭವ ಸಮ್ಮತವಲ್ಲ. ವೇದವನ್ನು ಯಾವ ಲಕ್ಷಣದೊಂದಿಗೆ ವ್ಯಾಖ್ಯಾನ ಮಾಡಲಾಗುತ್ತದೆ ಎಂಬುದರ ಕುರಿತು ನಾವು ಸರಿಯಾಗಿ ತಿಳಿದುಕೊಂಡು ಅವರಿಗೂ ಅರಿವು ಮೂಡಿಸಬೇಕಾದ ಅಗತ್ಯತೆ ಇದೆ.
ರಿಲಿಜನ್ನಿನ ಡಾಕ್ಟ್ರಿನ್ನುಗಳಲ್ಲಿ ಕಂಡುಬರದ ವೇದಗಳ ಮತ್ತೊಂದು ಲಕ್ಷಣ ಅದು ವೈದಿಕ ಕ್ರಿಯೆಗಳಲ್ಲಿ ವಿನಿಯೋಗವಾಗುವದು. ವೈದಿಕ ಸಂಪ್ರದಾಯಗಳು ವೈದಿಕ ಮಂತ್ರಗಳನ್ನು ತಮ್ಮ ಸಂಪ್ರದಾಯಕ್ಕನುಗುಣವಾಗಿ ವಿನಿಯೋಗಿಸುತ್ತವೆ. ಉದಾಹರಣೆಗಾಗಿ ಋಗ್ವೇದದ ಒಂಬತ್ತನೇ ಮಂಡಲದ ಪವಮಾನ ಸೂಕ್ತವನ್ನು ಉತ್ತರ ಕರ್ನಾಟಕದ ಸ್ಮಾರ್ತರು ಸೋಮನಿಗೆ ಹವಿಸ್ಸನ್ನು ಅಥವಾ ವಿಷ್ಣುವಿನ ಅಭಿಷೇಕಕ್ಕೆ ಬಳಸಿದರೆ, ಮಾಧ್ವರು ಹನುಮಂತನ ಪೂಜೆಗೆ ಅಥವಾ ಹವಿಸ್ಸಿಗೆ ಉಪಯೋಗಿಸುತ್ತಾರೆ. ಬ್ರಹ್ಮಣಸ್ಪತಿ ಅಥವಾ ಬ್ರಹಸ್ಪತಿಯ ಕುರಿತಾದ ಮಂತ್ರವೊಂದನ್ನು (ಗಣಾನಾಂತ್ವಾ…) ಪುರೋಹಿತರು ಗಣಪತಿಗೆ ವಿನಿಯೋಗ ಮಾಡುತ್ತಿದ್ದಾರೆ. ಋಗ್ವೇದದಲ್ಲಿ ಬರುವ ಇಂದ್ರನ ಕುರಿತಾದ ಮಂತ್ರವೊಂದನ್ನು (ಕೇತುಂ ಕೃಣ್ವನ್ನಕೇತವೇ..) ಕೇತುವಿನ ಪೂಜೆಗೆ ವಿನಿಯೋಗ ಮಾಡುತ್ತಾರೆ. ಆದರೆ ಅದರ ಅರ್ಥಕ್ಕೂ ಕೇತುವಿಗೂ ಯಾವ ಸಂಬಂಧವೂ ಇಲ್ಲ. ಪುರುಷಸೂಕ್ತ ಮತ್ತು ಶ್ರೀಸೂಕ್ತಗಳು ಅಭಿಷೇಕ ಅಥವಾ ಹೋಮದ ಜೊತೆ ಷೋಡಶ ಪೂಜೆಯಲ್ಲಿ ಕೂಡ ವಿನಿಯೋಗವಾಗುತ್ತದೆ. ವೈದಿಕ ಕ್ರಿಯೆಯಲ್ಲಿ ವಿನಿಯೋಗವಾಲ್ಪಡುವುದು ಮಂತ್ರಗಳ ಮುಖ್ಯ ಉದ್ದೇಶ ಎನ್ನುವದು ನಮಗಿಲ್ಲಿ ಸ್ಪಷ್ಟವಾಗುತ್ತದೆ.
ವೇದಗಳನ್ನು ಕೇವಲ ಓದಿಕೊಂಡು ಅರ್ಥೈಸಿಕೊಳ್ಳುವದಷ್ಟೇ ವೇದಗಳ ಉಪಯೋಗ ಎಂಬುದಾಗಿ ನಮ್ಮ ಸಂಪ್ರದಾಯಗಳು ಎಂದೂ ಭಾವಿಸಿದಂತೆ ಕಾಣುವುದಿಲ್ಲ. ವೈದಿಕ ಮಂತ್ರಗಳು ಒಂದಾನೊಂದು ಕ್ರಿಯೆಯಲ್ಲಿ ವಿನಿಯೋಗವಾಗಬೇಕು. ಈ ಕ್ರಿಯೆಗಳು ಕಾಲಕಾಲಕ್ಕೆ ಬದಲಾಗಿವೆ. ಸಾವಿರ ವರ್ಷಗಳ ಹಿಂದೆ ಯಾವ ಮಂತ್ರವನ್ನು ಯಾವ ಕ್ರಿಯೆಯಲ್ಲಿ ವಿನಿಯೋಗಿಸಲ್ಪಡುತ್ತಿತ್ತೋ ಅದು ಈಗಲೂ ಹಾಗೆಯೇ ಇರಬೇಕೆಂದಿಲ್ಲ. ಆ ಕ್ರಿಯೆಗೆ ಪರ್ಯಾಯವಾಗಿ ಇನ್ನೊಂದು ಕ್ರಿಯೆ ಹುಟ್ಟಿರಬಹುದು. ಇಲ್ಲವೇ ಅದೇ ಕ್ರಿಯೆಗೆ ಇನ್ನೊಂದು ಮಂತ್ರವು ಉಪಯೋಗಿಸಲ್ಪಡಬಹುದು. ಈ ವಿನಿಯೋಗದ ವಿಧಾನವೂ ಸಾರ್ವತ್ರಿಕವಲ್ಲ. ಪ್ರತಿಯೊಂದು ಪರಂಪರೆಯೂ ಯಾವ ಮಂತ್ರವು ಎಲ್ಲಿ ವಿನಿಯೋಗವಾಗಬೇಕೆಂಬುದನ್ನು ಅದೇ ಪರಂಪರೆಗಳೇ ನಿರ್ಧರಿಸಿಕೊಳ್ಳುತ್ತವೆ. ಆದ್ದರಿಂದಲೇ, ನಮ್ಮ ಸಮಾಜದಲ್ಲಿ ಬಹುತೇಕ ವೈದಿಕ ಪುರೋಹಿತರು ವೈದಿಕ ಮಂತ್ರಗಳ ಅರ್ಥಕ್ಕಿಂತ ಅವುಗಳ ವಿನಿಯೋಗದ ಪದ್ಧತಿಗಳನ್ನು ತಿಳಿದುಕೊಳ್ಳುವುದರಲ್ಲಿಯೇ ತಮ್ಮ ಆರಂಭಿಕ ಜೀವನವನ್ನು ಮುಡಿಪಾಗಿಡುತ್ತಾರೆ. ತಮ್ಮ ಬಹುತೇಕ ಜೀವನದ ಭಾಗವನ್ನು ಮಂತ್ರಗಳನ್ನು ವಿನಿಯೋಗಿಸಿಕೊಂಡು ವೈದಿಕ ಕರ್ಮಗಳನ್ನು ಅನುಷ್ಠಾನ ಮಾಡುತ್ತ ಅದರಲ್ಲಿ ದಕ್ಷತೆಯನ್ನು ಪಡೆಯುತ್ತಾರೆ. ಅನಂತರ ವೇದಾರ್ಥ ಮತ್ತು ಭಾಷ್ಯಗಳನ್ನು ಓದುವದರಲ್ಲಿ ಮತ್ತು ಮುಂದಿನ ಪೀಳಿಗೆಗೆ ಅದೇ ಪರಂಪರೆಗಳನ್ನು ದಾಟಿಸುವಲ್ಲಿ ನಿರತರಾಗುತ್ತಾರೆ. ವೇದವನ್ನು ಅರ್ಥೈಸಿಕೊಳ್ಳುವದು ಶಬ್ದಶಃ ಭಾಷಾಂತರದಿಂದಲ್ಲ. ಕ್ರಿಯಾಜ್ಞಾನದಿಂದ ಎಂಬುದು ನಮಗೆ ಇಲ್ಲಿ ಸ್ಪಷ್ಟವಾಗುತ್ತದೆ. ಅಲ್ಲದೇ ವೈದಿಕ ಮಂತ್ರಸಾಹಿತ್ಯವು ಯಾವ ರೂಪದಲ್ಲಿದೆಯೋ ಅದನ್ನು ಹಾಗೆಯೇ ಪ್ರಯೋಗಿಸಿದರೆ ಮಾತ್ರ ಕಾರ್ಯಸಿದ್ಧಿಯಾಗುವುದೆಂದು ವೈದಿಕ ಪರಂಪರೆಗಳು ಭಾವಿಸುತ್ತವೆ.
ಇದೇ ಕಾರಣಕ್ಕಾಗಿ, ವೈದಿಕ ಸಂಪ್ರದಾಯಗಳು ವೈದಿಕ ಮಂತ್ರಗಳ ರೂಪವನ್ನು ಹಾಗೇ ಉಳಿಸಿಕೊಳ್ಳುವಲ್ಲಿ ಬಹುಪಾಲು ಶ್ರಮವನ್ನು ವ್ಯಯಿಸಿವೆ. ಪದಪಾಠ, ಕ್ರಮಪಾಠ ಮುಂತಾದ ಪಾಠಕ್ರಮಗಳ ಸಹಾಯದಿಂದ ಮಂತ್ರಗಳು ಬಾಯಿಯಿಂದ ಬಾಯಿಗೆ ಯಾವ ವ್ಯತ್ಯಾಸವೂ ಇಲ್ಲದೇ ಪ್ರಸಾರವಾಗುತ್ತ ಬಂದಿದೆ. ೧೯೪೦ರಲ್ಲಿ ಋಗ್ವೇದದ ಶಾಕಲ ಶಾಖೆಯ ಅನೇಕ ಪ್ರತಿಗಳನ್ನು ದೇಶದ ಮೂಲೆಮೂಲೆಯಿಂದ ಸಂಪಾದಿಸಿ ಪ್ರಕಟಿಸಿದ ವಸಂತ ಶ್ರೀಪಾದ ಸಾವಳೇಕರ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಇಡೀ ಋಗ್ವೇದದಲ್ಲಿ ಕೇವಲ ಒಂದು ಅಕ್ಷರದಲ್ಲಷ್ಟೇ ಪಾಠಭೇದವು ಇರುವದನ್ನು ದಾಖಲಿಸಿದ್ದಾರೆ. ಆಸೇತುಹಿಮಾಚಲದ ತನಕ ಬಾಯಿಯಿಂದ ಬಾಯಿಗೆ ಪ್ರಸಾರವಾಗುತ್ತ ಋಗ್ವೇದ ಸಾಹಿತ್ಯವು ತನ್ನ ಮೂಲರೂಪದ ೯೯.೯೯೯% ಭಾಗವನ್ನು ಹಾಗೆಯೇ ಉಳಿಸಿಕೊಂಡಿದೆ. ಒಂದು ವೇಳೆ ವೈದಿಕ ಸಂಪ್ರದಾಯಗಳು ಬಹುತೇಕ ಶಕ್ತಿಯನ್ನು ವೈದಿಕ ಸಾಹಿತ್ಯವನ್ನು ಉಳಿಸಿಕೊಳ್ಳಲು ವಿನಿಯೋಗಿಸದಿದ್ದರೆ ಇಂದು ನಮಗೆ ವೇದದ ಕುರಿತು ಚರ್ಚಿಸಲೂ ಸಾಧ್ಯವಾಗುತ್ತಿರಲಿಲ್ಲ.
ವೈದಿಕ ಕರ್ಮಗಳ ಸ್ವರೂಪಗಳು ಬದಲಾದರೂ, ಪೂಜೆಗಳಲ್ಲಿ ವೇದವನ್ನು ವಿನಿಯೋಗಿಸಿಕೊಳ್ಳುವ ಅನೇಕ ಸಂಪ್ರದಾಯಗಳು ನಮ್ಮಲ್ಲಿದ್ದರೂ ವೇದಗಳ ಸಾಹಿತ್ಯ ತನ್ನ ಸ್ವರೂಪವನ್ನು ಉಳಿಸಿಕೊಂಡಿದೆ. ಬಹುಶಃ ಇದೇ ಕಾರಣಕ್ಕೆ ಪಾಶ್ಚಿಮಾತ್ಯ ವಿದ್ವಾಂಸರು ಇದನ್ನು ವೇದಿಕ್ ರಿಲಿಜನ್ನಿನ ಡಾಕ್ಟ್ರಿನ್ ಎಂದು ಭಾವಿಸಿರುವ ಸಾಧ್ಯತೆಯಿದೆ. ಏಕೆಂದರೆ ಡಾಕ್ಟ್ರಿನ್ನಿನ ಮೂಲರೂಪವನ್ನು ರಿಲಿಜನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ವೇದಗಳ ಮಂತ್ರಸಾಹಿತ್ಯವು ಹೇಗಿದೆಯೋ ಅದನ್ನು ಹಾಗೆಯೇ ಉಚ್ಚರಿಸುವುದು ಮತ್ತು ಅದನ್ನು ಹಾಗೆಯೇ ಮುಂದಿನ ಪೀಳಿಗೆಗೆ ದಾಟಿಸುವುದು ವೈದಿಕ ಪರಂಪರೆಗಳಲ್ಲಿ ಕಂಡುಬರುವ ಸಂಪ್ರದಾಯವಾಗಿದೆ. ವೇದಗಳನ್ನು ಮೂಲರೂಪದಲ್ಲಿಯೇ ಉಚ್ಚರಿಸುವ ಅಗತ್ಯತೆಯನ್ನು ತಿಳಿಸುವ ಕತೆಗಳೂ ವೇದದಲ್ಲಿ ನಾವು ಕಾಣಬಹುದಾಗಿದೆ. ನಮ್ಮ ಪೂರ್ವಜರು ಕೇವಲ ಮಂತ್ರಗಳನ್ನು ಗಿಳಿಯಂತೆ ಬಾಯಿಪಾಠ ಹೊಡೆದರೆ ಹೊರತು ಅದನ್ನೆಂದೂ ಅರ್ಥೈಸಿಕೊಳ್ಳಲು ಹೋಗಲಿಲ್ಲ ಎಂಬ ಆಕ್ಷೇಪವೊಂದನ್ನು ಪುರೋಹಿತರ ಮನೆತನಗಳಿಗೆ ಸೇರಿದ ಇಂದಿನ ವಿದ್ಯಾವಂತರು ಮಾಡುತ್ತಾರೆ. ಅವರ ಆಕ್ಷೇಪದಲ್ಲಿ ಹುರುಳಿಲ್ಲವೆಂದಿಲ್ಲ. ಜೈಮಿನಿ ಮತ್ತು ಸಾಯಣರು ವೇದಸಾಹಿತ್ಯದ ಅರ್ಥವನ್ನು ತಿಳಿಯುವದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಆದರೆ ವೇದಗಳನ್ನು ಕಲಿಯುವಾಗಲೇ ಶಬ್ದಶಃ ಭಾಷಾಂತರಿಸಿಕೊಂಡು ಅರ್ಥೈಸುವ ರೀತಿಯು ನಮ್ಮಲ್ಲಿ ಕಂಡು ಬರುವದಿಲ್ಲ. ವೈದಿಕ ಕರ್ಮಗಳನ್ನು ಮಾಡುತ್ತ ಪಡೆಯುವ ಕ್ರಿಯಾಜ್ಞಾನದ ಹಿನ್ನೆಲೆಯಲ್ಲಿ ವೈದಿಕ ಸಾಹಿತ್ಯವನ್ನು ಅರ್ಥೈಸಲ್ಪಡುವ ಪ್ರಕ್ರಿಯೆ ನಮ್ಮ ಪರಂಪರೆಗಳಲ್ಲಿ ಕಂಡುಬರುತ್ತದೆ.
ಸಂಹಿತೆಯ ಮಂತ್ರಗಳನ್ನು ವೈದಿಕ ಕ್ರಿಯೆಗಳಲ್ಲಿ ಅನುಷ್ಠಾನಕ್ಕೆ ತರುವಲ್ಲಿ ದಕ್ಷರಾದ ನಂತರ ಸಾಹಿತ್ಯದ ಅರ್ಥಾನ್ವಯದಲ್ಲಿ ತೊಡಗುವುದು ವೈದಿಕ ಪರಂಪರೆಗಳ ವೈಶಿಷ್ಟ್ಯ. ಸಾಯಣಭಾಷ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮಗೇ ಇದೇ ಅಂಶವು ಕಂಡು ಬರುತ್ತದೆ. ಆದರೆ ಮ್ಯಾಕ್ಸ್ ಮುಲ್ಲರ್ ನಂತಹ ಅನೇಕ ಪಾಶ್ಚಿಮಾತ್ಯ ವಿದ್ವಾಂಸರು, ವೇದಗಳನ್ನು ಒಂದಾನೊಂದು ವೇದಿಕ್ ರಿಲಿಜನ್ನಿನ ಡಾಕ್ಟ್ರಿನ್ ಎಂದು ಪರಿಗಣಿಸಿ, ಶಬ್ದಗಳನ್ನು ನೇರಾನೇರ ಅನುವಾದ ಮಾಡಿಕೊಂಡು ವಿಚಿತ್ರವಾದ ಭಾಷಾಂತರಗಳನ್ನು ಮಾಡಿಕೊಂಡಿದ್ದಾರೆ. ಇವುಗಳು ಸಂಪ್ರದಾಯಸ್ಥರ ಅನುಭವಕ್ಕೆ ವಿರುದ್ಧವಾಗಿರುವದಲ್ಲದೇ, ನಮ್ಮ ಪರಂಪರೆಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುವ ಹೊರಗಿನವರಿಗೆ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿವೆ. ಋಗ್ವೇದದ ೧೦.೮೫.೧೩ನೇ ಋಕ್ಕನ್ನು ಪ್ರಾಚೀನ ಭಾಷ್ಯಕಾರರು ಅನುವಾದಿಸಿರುವ ರೀತಿಗೂ, ಪಾಶ್ಚಿಮಾತ್ಯ ವಿದ್ವಾಂಸರು ಅನುವಾದಿಸಿಕೊಂಡ ರೀತಿಗೂ ಇರುವ ವ್ಯತ್ಯಾಸವು ಇಂತಹ ಅಪಸವ್ಯಗಳಲ್ಲಿ ಒಂದು. ನಮ್ಮ ಇಂದಿನ ಸಂವಿಧಾನವೂ ಕೂಡ ವೇದಗಳನ್ನು ವೇದಿಕ್ ರಿಲಿಜನ್ನಿನ ಡಾಕ್ಟ್ರಿನ್ ಎಂಬ ಹಿನ್ನೆಲೆಯಲ್ಲಿಯೇ ಸಾಮಾಜಿಕ ಸಮಾನತೆಯ ಕಲ್ಪನೆಗಳನ್ನು ಹಾಕಿಕೊಂಡಿದೆ.
ಸಾರಾಂಶವನ್ನು ಕೊನೆಯಲ್ಲಿ ಹೇಳುವದಾದರೆ, ನಮ್ಮ ಇಂದಿನ ಆಡಳಿತ ವ್ಯವಸ್ಥೆ ಮತ್ತು ಸಮಾಜವಿಜ್ಞಾನಿಗಳು ವೇದಗಳಿಗೆ ಯಾವ ಲಕ್ಷಣವನ್ನು ಕಲ್ಪಿಸಿ ವ್ಯಾಖ್ಯಾನಿಸಿದ್ದಾರೋ ಅದು ಜನರ ಅನುಭವಕ್ಕೆ ಹೊಂದುವುದಿಲ್ಲ. ಅದಕ್ಕೆ ಕಾರಣ ವೇದಗಳು ವೇದಿಕ್ ರಿಲಿಜನ್ನಿನ ಡಾಕ್ಟ್ರಿನ್ನುಗಳಲ್ಲ. ವೇದಿಕ್ ರಿಲಿಜನ್ ಎಂಬುದು ಇಲ್ಲವೇ ಇಲ್ಲ. ವೈದಿಕ ಧರ್ಮ ಎಂದು ಸಂಪ್ರದಾಯಸ್ಥರು ಬಳಸುವ ಪದವು ವೈದಿಕ ರಿಲಿಜನ್ ಎಂಬ ಅರ್ಥವನ್ನು ನೀಡುವದಿಲ್ಲ. “ವೈದಿಕ ಧರ್ಮದಲ್ಲಿ ಎರಡು ಪ್ರಕಾರಗಳು ಒಂದು ಪ್ರವೃತ್ತಿ ಧರ್ಮ ಮತ್ತು ಇನ್ನೊಂದು ನಿವೃತ್ತಿ ಧರ್ಮ” ಎಂಬ ಶಂಕರಾಚಾರ್ಯರ ವಾಕ್ಯವನ್ನು ಧರ್ಮಕ್ಕೆ ರಿಲಿಜನ್ ಎಂಬ ಅರ್ಥ ಇಟ್ಟುಕೊಂಡು ಹೇಗೆ ಭಾಷಾಂತರಿಸಲು ಸಾಧ್ಯ? ಆದ್ದರಿಂದ ನಾವು ವೇದವನ್ನು ರಿಲಿಜನ್ನಿನ ಡಾಕ್ಟ್ರಿನ್ನುಗಳ ರೀತಿ ವ್ಯಾಖ್ಯಾನಿಸಬಾರದು. ನಮ್ಮ ಸಂಪ್ರದಾಯಗಳು ವೇದಗಳನ್ನು ಯಾವ ಲಕ್ಷಣದೊಂದಿಗೆ ವ್ಯಾಖ್ಯಾನಿಸಿವೆಯೋ ಅದನ್ನು ನಾವು ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಯಣರ ವ್ಯಾಖ್ಯಾನವು ತುಂಬ ಸಹಾಯಕಾರಿ. ಸಂಸ್ಕೃತ ಹಾಗೂ ವೇದಗಳ ಕುರಿತು ಅಧ್ಯಯನ ನಡೆಸುವ ಪಾಶ್ಚಿಮಾತ್ಯ ವಿಶ್ವವಿದ್ಯಾಲಯಗಳಲ್ಲೂ ನಾವು ಈಗಿರುವ ತಪ್ಪಾದ ಚಿತ್ರಣವನ್ನು ತೆಗೆದು, ಸರಿಯಾದ ಚಿತ್ರಣವನ್ನು ಹಾಕಿಕೊಡಬೇಕಿದೆ.
ಚಿತ್ರಕೃಪೆ :- www.dailyexcelsior.com
ಕಡೆಗೂ ನೀವು ಹೇಳ ಬಯಸುವುದೇನು ಎಂಬುದೇ ಸ್ಪಷ್ಟವಾಗುವುದಿಲ್ಲ. ಕೆಲವು ಸಂದೇಹಗಳು…
“ವೈದಿಕ ಕರ್ಮಗಳ ಸ್ವರೂಪಗಳು ಬದಲಾದರೂ, ಪೂಜೆಗಳಲ್ಲಿ ವೇದವನ್ನು ವಿನಿಯೋಗಿಸಿಕೊಳ್ಳುವ ಅನೇಕ ಸಂಪ್ರದಾಯಗಳು ನಮ್ಮಲ್ಲಿದ್ದರೂ ವೇದಗಳ ಸಾಹಿತ್ಯ ತನ್ನ ಸ್ವರೂಪವನ್ನು ಉಳಿಸಿಕೊಂಡಿದೆ. ಬಹುಶಃ ಇದೇ ಕಾರಣಕ್ಕೆ ಪಾಶ್ಚಿಮಾತ್ಯ ವಿದ್ವಾಂಸರು ಇದನ್ನು ವೇದಿಕ್ ರಿಲಿಜನ್ನಿನ ಡಾಕ್ಟ್ರಿನ್ ಎಂದು ಭಾವಿಸಿರುವ ಸಾಧ್ಯತೆಯಿದೆ. ಏಕೆಂದರೆ ಡಾಕ್ಟ್ರಿನ್ನಿನ ಮೂಲರೂಪವನ್ನು ರಿಲಿಜನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ.” (a) ಪೂಜೆಗಳಲ್ಲಿ ವೇದವನ್ನು ವಿನಿಯೋಗಿಸಿಕೊಳ್ಳುವುದಿಲ್ಲ, ಬದಲಿಗೆ ವೇದಗಳಲ್ಲಿನ ಶ್ಲೋಕ ಮತ್ತು ಮಂತ್ರಗಳನ್ನು ಬಳಸುತ್ತಾರೆ. ಅಲ್ವೇ? (b) “…ವೇದಗಳ ಸಾಹಿತ್ಯ ತನ್ನ ಸ್ವರೂಪವನ್ನು ಉಳಿಸಿಕೊಂಡಿದೆ.” ಏನದು ಸ್ವರೂಪ? ಸಾಹಿತ್ಯದ ಸ್ವರೂಪ? (c) ಸಾಹಿತ್ಯ ತನ್ನ ಸ್ವರೂಪವನ್ನು ಉಳಿಸಿಕೊಂಡಿದ್ದರಿಂದ ಪಾಶ್ಚಿಮಾತ್ಯ ವಿದ್ವಾಂಸರು ಇದನ್ನು ವೇದಿಕ್ ರಿಲಿಜನ್ನಿನ ಡಾಕ್ಟ್ರಿನ್ ಎಂದು ಭಾವಿಸಿರುವ ಸಾಧ್ಯತೆಯಿದೆ ಎಂದರೆ ಏನು? (d) “ಏಕೆಂದರೆ ಡಾಕ್ಟ್ರಿನ್ನಿನ ಮೂಲರೂಪವನ್ನು ರಿಲಿಜನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ.” ಇಲ್ಲಿ ‘ಏಕೆಂದರೆ’ ಪದ ಯಾವ ಸಂಬಂಧವನ್ನು, ಯಾವುದರ ನಡುವಿನ ಸಂಬಂಧವನ್ನು ಸೂಚಿಸುತ್ತಿದೆ? (e) ಡಾಕ್ಟ್ರಿನ್ನಿನ ಮೂಲರೂಪವನ್ನು ರಿಲಿಜನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂದರೆ ಏನು? ಅದರ ಮೂಲ ರೂಪ ಏನು? ಹೇಗೆ ರಿಲಿಜನ್ನು ಈ ಕೆಲಸ ಮಾಡುತ್ತದೆ? ರಿಲಿಜನ್ ಕುಳಿತುಕೊಂಡು ಈ ಕೆಲಸ ಮಾಡುತ್ತದೆಯೋ ಅಥವಾ ಮಲಗಿಕೊಂಡು ಮಾಡುತ್ತದೆಯೋ? (ಈ ಕಡೆಯ ಪ್ರಶ್ನೆಯ ಹಿಂದಿರುವ ತಾರ್ಕಿಕ ವಿಚಾರ ನಿಮಗೆ ಅರ್ಥವಾಗುತ್ತದೆ ಎಂದು ಕೊಂಡಿದ್ದೇನೆ!)
“ಸಾರಾಂಶವನ್ನು ಕೊನೆಯಲ್ಲಿ ಹೇಳುವದಾದರೆ, ನಮ್ಮ ಇಂದಿನ ಆಡಳಿತ ವ್ಯವಸ್ಥೆ ಮತ್ತು ಸಮಾಜವಿಜ್ಞಾನಿಗಳು ವೇದಗಳಿಗೆ ಯಾವ ಲಕ್ಷಣವನ್ನು ಕಲ್ಪಿಸಿ ವ್ಯಾಖ್ಯಾನಿಸಿದ್ದಾರೋ ಅದು ಜನರ ಅನುಭವಕ್ಕೆ ಹೊಂದುವುದಿಲ್ಲ.” ಭೂಮಿ ಸೂರ್ಯನ ಸುತ್ತ ತಿರುಗುತ್ತದೆ ಎಂಬುದೂ ಜನರ ಅನುಭವಕ್ಕೆ ಹೊಂದುವುದಿಲ್ಲವಲ್ಲ!
“ವೈದಿಕ ಧರ್ಮ ಎಂದು ಸಂಪ್ರದಾಯಸ್ಥರು ಬಳಸುವ ಪದವು ವೈದಿಕ ರಿಲಿಜನ್ ಎಂಬ ಅರ್ಥವನ್ನು ನೀಡುವದಿಲ್ಲ.” ವೇದಕಾಲದ ಜನರು ಬಳಸುವ ಯಾವ ಪದವೂ oxygen ಪದಕ್ಕೆ ಸಂವಾದಿಯಾಗಿ ಬಳಕೆಯಾಗಿರುವುದು ಕಾಣಿಸುವುದಿಲ್ಲ. ಅಂದರೆ…?
(a) ಪೂಜೆಗಳಲ್ಲಿ ವೇದವನ್ನು ವಿನಿಯೋಗಿಸಿಕೊಳ್ಳುವುದಿಲ್ಲ, ಬದಲಿಗೆ ವೇದಗಳಲ್ಲಿನ ಶ್ಲೋಕ ಮತ್ತು ಮಂತ್ರಗಳನ್ನು ಬಳಸುತ್ತಾರೆ.=> ವೇದಗಳಲ್ಲಿರುವ ಮಂತ್ರಗಳನ್ನು ಬಳಸಿಕೊಳ್ಳುವದನ್ನೇ ನಾನು ವೇದದ ವಿನಿಯೋಗವೆಂದು ಕರೆದಿದ್ದೇನೆ (ನಾಯಿಯ ಬಾಲವನ್ನು ಎಳೆದರೆ ನಾಯಿಯನ್ನೂ ಎಳೆದಂತೆಯೇ ಅಲ್ಲವೇ?). ಉದಾಹರಣೆಗೆ ಪುರುಷಸೂಕ್ತದ ಹದಿನಾರು ಸೂಕ್ತಗಳನ್ನು ಷೋಡಷೋಪಚಾರದ ಪೂಜೆಯಲ್ಲಿ ಬಳಸುವದು, ಶಿವಲಿಂಗದ ಅಭಿಷೇಕಕ್ಕೆ ರುದ್ರವನ್ನು ವಿನಿಯೋಗಿಸುವದು. ಗಣಪತಿಯನ್ನು ಸ್ತುತಿಸಲು ಗಣಾನಾಂ ತ್ವಾ ಎಂಬ ಮಂತ್ರವನ್ನು ವಿನಿಯೋಗಿಸುವದು. ಹೀಗೆ. ಮಂತ್ರವನ್ನು ವಿನಿಯೋಗಿಸುವಾಗ ನಾವು ಹಾಗೆಯೇ ಹೇಳುತ್ತೇವೆ. ಉದಾ “ಗಣಾನಾಂ ತ್ವಾ ಶೌನಕೋ ……, ಗಣಪತ್ಯಾವಾಹನೇ ವಿನಿಯೋಗಃ”
(b) “…ವೇದಗಳ ಸಾಹಿತ್ಯ ತನ್ನ ಸ್ವರೂಪವನ್ನು ಉಳಿಸಿಕೊಂಡಿದೆ.” ಏನದು ಸ್ವರೂಪ? ಸಾಹಿತ್ಯದ ಸ್ವರೂಪ? => ಉದಾಹರಣೆಗೆ ನಾನು ಪರಂಪರಾಗತವಾಗಿ ಋಗ್ವೇದವನ್ನು ಕಲಿಯುತ್ತಾ ಬಂದ ಮನೆತನದವನು. ಋಗ್ವೇದದ ಶಾಕಲ ಶಾಖೆಯಲ್ಲಿ ಬರುವ ಪ್ರತಿಯೊಂದು ಮಂತ್ರವೂ ಒಂದು ವಿಧದಲ್ಲಿ ಉಲಿಯಲ್ಪಡುತ್ತದೆ. ಕೆಲವು ಅಕ್ಷರಗಳನ್ನು ಉದಾತ್ತದಲ್ಲಿಯೂ, ಕೆಲವು ಅನುದಾತ್ತದಲ್ಲಿಯೂ ಇನ್ನು ಕೆಲವನ್ನು ಸ್ವರಿತದಲ್ಲಿಯೂ ಹೇಳಬೇಕಾಗುತ್ತದೆ. ಅದನ್ನು ಹಾಗೆಯೇ ಹೇಳಬೇಕೆಂದು ಕಲಿಸಲಾಗುತ್ತದೆ. ಈ ಸ್ವರೂಪವು ಇಡೀ ಭಾರತದಾದ್ಯಂತ ಏಕತೆರನಾಗಿದೆ. ಋಗ್ವೇದದ ಶಾಕಲ ಶಾಖೆಯ ಮಟ್ಟಿಗೆ ಹೇಳುವದಾದರೆ ಇಡೀ ಸಂಹಿತೆಯಲ್ಲಿ ಒಂದೇ ಒಂದು ಪಾಠಭೇದವಿದೆ ಎಂದು ಹೇಳಲಾಗಿದೆ.
(c) ಸಾಹಿತ್ಯ ತನ್ನ ಸ್ವರೂಪವನ್ನು ಉಳಿಸಿಕೊಂಡಿದ್ದರಿಂದ ಪಾಶ್ಚಿಮಾತ್ಯ ವಿದ್ವಾಂಸರು ಇದನ್ನು ವೇದಿಕ್ ರಿಲಿಜನ್ನಿನ ಡಾಕ್ಟ್ರಿನ್ ಎಂದು ಭಾವಿಸಿರುವ ಸಾಧ್ಯತೆಯಿದೆ ಎಂದರೆ ಏನು? => ಪಾಶ್ಚಿಮಾತ್ಯ ವಿದ್ವಾಂಸರು ಭಾರತದಲ್ಲಿ ಇರುವ ಹಿಂದೂ ರಿಲಿಜನ್ನಿನ ಡಾಕ್ಟ್ರಿನ್ ಯಾವದು ಎಂದು ಎಲ್ಲ ಕಡೆ ಅನ್ವೇಷಿಸುತ್ತಿದ್ದರು. ಆಗ ವೇದಗಳೇ ಡಾಕ್ಟ್ರಿನ್ ಆಗಿರಬೇಕೆಂಬ ಊಹೆಯು ಅವರಲ್ಲಿ ಬಂದಿತು. (ಹೆಚ್ಚಿನ ವಿವರಣೆ ಮುಂದಿನ ಪ್ರಶ್ನೆಯಲ್ಲಿದೆ)
(d) “ಏಕೆಂದರೆ ಡಾಕ್ಟ್ರಿನ್ನಿನ ಮೂಲರೂಪವನ್ನು ರಿಲಿಜನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ.” ಇಲ್ಲಿ ‘ಏಕೆಂದರೆ’ ಪದ ಯಾವ ಸಂಬಂಧವನ್ನು, ಯಾವುದರ ನಡುವಿನ ಸಂಬಂಧವನ್ನು ಸೂಚಿಸುತ್ತಿದೆ?
ಏಕೆಂದರೆ ಎನ್ನುವ ಪದವು ಹಿಂದಿನ ವಾಕ್ಯದಲ್ಲಿರುವ ಕಾರ್ಯದ ಕಾರಣವನ್ನು ಸ್ಪಷ್ಟೀಕರಿಸುತ್ತದೆ. (ನಾನು ಊಟ ಮಾಡುತ್ತೇನೆ ಏಕೆಂದರೆ ನನಗೆ ಹಸಿವೆಯಾಗಿದೆ) ಪಾಶ್ಚಿಮಾತ್ಯರು ವೇದವನ್ನು ಹಿಂದೂ ರಿಲಿಜನ್ನಿನ ಡಾಕ್ಟ್ರಿನ್ ಎಂದು ಭಾವಿಸಿದರು. ಏಕೆ ಭಾವಿಸಿದರು? ಕಾರಣವೇನೆಂದರೆ ಪ್ರತಿಯೊಂದು ರಿಲಿಜನ್ನಿನ ಜನರೂ ತನ್ನ ಡಾಕ್ಟ್ರಿನ್ನು ಯಾವ ವಿಕಾರಕ್ಕೂ ಒಳಗಾಗದೇ ಮೂಲವನ್ನು ಹಾಗೆಯೇ ಉಳಿಸಿಕೊಂಡಿದೆ ಎಂದೇ ನಂಬುತ್ತಾರೆ. ಮತ್ತು ಆ ಮೂಲವನ್ನು ಹಾಗೆಯೇ ಮುಂದುವರೆಸುತ್ತಾರೆ. ವೈದಿಕರೂ ವೇದಗಳನ್ನು ಹಾಗೆಯೇ ಮೂಲವನ್ನು ಉಳಿಸಿಕೊಳ್ಳುವದರಿಂದ ಅದನ್ನು ಡಾಕ್ಟ್ರಿನ್ ಎಂದು ಭಾವಿಸುವ ಸಾಧ್ಯತೆ ಇದೆ.
(e) ಡಾಕ್ಟ್ರಿನ್ನಿನ ಮೂಲರೂಪವನ್ನು ರಿಲಿಜನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂದರೆ ಏನು? ಅದರ ಮೂಲ ರೂಪ ಏನು? ಹೇಗೆ ರಿಲಿಜನ್ನು ಈ ಕೆಲಸ ಮಾಡುತ್ತದೆ? ರಿಲಿಜನ್ ಕುಳಿತುಕೊಂಡು ಈ ಕೆಲಸ ಮಾಡುತ್ತದೆಯೋ ಅಥವಾ ಮಲಗಿಕೊಂಡು ಮಾಡುತ್ತದೆಯೋ? => ಪ್ರತಿಯೊಂದು ರಿಲಿಜನ್ನಿನ ಜನರೂ ತನ್ನ ಡಾಕ್ಟ್ರಿನ್ನು ಯಾವ ವಿಕಾರಕ್ಕೂ ಒಳಗಾಗದೇ ಮೂಲವನ್ನು ಹಾಗೆಯೇ ಉಳಿಸಿಕೊಂಡಿದೆ ಎಂದೇ ನಂಬುತ್ತಾರೆ. ಮತ್ತು ಆ ಮೂಲವನ್ನು ಹಾಗೆಯೇ ಮುಂದುವರೆಸುತ್ತಾರೆ. ಉದಾಹರಣೆಗಾಗಿ ಕುರಾನ್ ಅವತೀರ್ಣವಾದ ನಂತರ ಅದರ ಮೂಲದಲ್ಲಿ ಎಲ್ಲಿಯೂ ಹಸ್ತಕ್ಷೇಪವಾಗಿಲ್ಲ ಎಂಬುದನ್ನು ಪ್ರತಿಯೊಬ್ಬ ಮುಸಲ್ಮಾನನೂ ನಂಬುತ್ತಾನೆ.
ಭೂಮಿ ಸೂರ್ಯನ ಸುತ್ತ ತಿರುಗುತ್ತದೆ ಎಂಬುದೂ ಜನರ ಅನುಭವಕ್ಕೆ ಹೊಂದುವುದಿಲ್ಲವಲ್ಲ! => ನಿಜ. ಮೊಲಕ್ಕೆ ಕೊಂಬಿದೆ ಅನ್ನುವದೂ ಜನರ ಅನುಭವಕ್ಕೆ ಹೊಂದುವದಿಲ್ಲ. ಭೂಮಿ ಸೂರ್ಯನ ಸುತ್ತ ತಿರುಗುವ ಅನುಭವ ನಮಗೇಕಾಗುವದಿಲ್ಲ ಎಂದು ಒಂದು ವೈಜ್ಞಾನಿಕ ವಿವರಣೆಯಿದೆ. ನೀರಿನಲ್ಲಿ ಮುಳುಗಿದ ಕೋಲು ಹಾಗೆಯೇ ಇದ್ದರೂ, ಸೊಟ್ಟಗೆ ದಪ್ಪಗೆ ಕಾಣುತ್ತದೆ. ಅದು ಹಾಗೇಕೆ ಕಾಣುತ್ತದೆ ಎನ್ನುವದಕ್ಕೆ ವೈಜ್ಞಾನಿಕ ವಿವರಣೆಯಿದೆ. ಆದರೆ ಮೊಲಕ್ಕಿರುವ ಕೊಂಬು ಏಕೆ ಕಾಣುವದಿಲ್ಲ ಎನ್ನುವದಕ್ಕೆ ಯಾವ ವಿವರಣೆಯೂ ಇಲ್ಲ. ಹೀಗಾಗಿ ಮೊಲಕ್ಕೆ ಕೊಂಬು ಇಲ್ಲ. ಹಿಂದೆ ಭೌತಶಾಸ್ತ್ರದಲ್ಲಿಯೂ ಈಥರ್ ಇದೆ ಎನ್ನುವದಕ್ಕೆ ಯಾವ ವಿವರಣೆಯೂ ಸಿಗದಿದ್ದುದರಿಂದ ಈಥರ್ ಥಿಯರಿಯನ್ನು ಬಿಟ್ಟರು. ಹೀಗಾಗಿ ನಮ್ಮ ಇಂದಿನ ಆಡಳಿತ ವ್ಯವಸ್ಥೆ ಮತ್ತು ಸಮಾಜವಿಜ್ಞಾನಿಗಳು ವೇದಗಳಿಗೆ ಯಾವ ಲಕ್ಷಣವನ್ನು (ವೇದಗಳು ವೇದಿಕ್ ರಿಲಿಜನ್ನಿನ ಡಾಕ್ಟ್ರಿನ್ನುಗಳು ಎಂಬ ಲಕ್ಷಣ) ಕಲ್ಪಿಸಿ ವ್ಯಾಖ್ಯಾನಿಸಿದ್ದಾರೋ ಅದು ನಮ್ಮ ಅನುಭವಕ್ಕೆ ಸಮ್ಮತ ಅಲ್ಲ. ನಮಗೆ ಹಾಗೆ ಕಾಣುತ್ತಿಲ್ಲವಾದ್ದರೆ ಆ ಲಕ್ಷಣ ನಮಗೆ ಏಕೆ ಕಾಣುತ್ತಿಲ್ಲ ಎನ್ನುವದರ ವಿವರಣೆ ಬೇಕಿತ್ತು. ಆ ವಿವರಣೆ ಕೂಡ ಇಲ್ಲ. ಒಂದು ವೇಳೆ ವೇದಿಕ್ ರಿಲಿಜನ್ ಇರುವದೇ ಹೌದಾಗಿದ್ದರೆ, ಅದು ರಿಲಿಜನ್ನಿನ ಡಾಕ್ಟ್ರಿನ್ನಿನಂತೆ ಸಾಯಣರು ಏಕೆ ವ್ಯಾಖ್ಯಾನ ಮಾಡಿಲ್ಲ ಎನ್ನುವದರ ಕುರಿತು ಒಂದು ವಿವರಣೆ ಬೇಕಿತ್ತಲ್ಲವೇ?
“ವೈದಿಕ ಧರ್ಮ ಎಂದು ಸಂಪ್ರದಾಯಸ್ಥರು ಬಳಸುವ ಪದವು ವೈದಿಕ ರಿಲಿಜನ್ ಎಂಬ ಅರ್ಥವನ್ನು ನೀಡುವದಿಲ್ಲ.” ವೇದಕಾಲದ ಜನರು ಬಳಸುವ ಯಾವ ಪದವೂ oxygen ಪದಕ್ಕೆ ಸಂವಾದಿಯಾಗಿ ಬಳಕೆಯಾಗಿರುವುದು ಕಾಣಿಸುವುದಿಲ್ಲ. ಅಂದರೆ…? => oxygen ಮೂಲಧಾತು. ಜೀವಿಗಳು ಬೆಳೆಯಲು ಅನುಕೂಲಕರವಾದ ವಾತಾವರಣದಲ್ಲಿ ಇದ್ದೇ ಇರುತ್ತದೆ ಇರಲೇಬೇಕು ಎಂಬುದಕ್ಕೆ ವಿವರಣೆ ಕೂಡ ಸಿಗುತ್ತದೆ. ಆದರೆ ಸಮಾಜವೊಂದು ಬೆಳೆಯಲು ಅನುಕೂಲ ವಾತಾವರಣ ಬೇಕಾದರೆ ರಿಲಿಜನ್ನು ಎಂಬ ಧಾತು ಬೇಕೇ? ಬೇಕು ಎಂಬುದಕ್ಕೆ ವಿವರಣೆ ಇದೆಯೇ? ಇದ್ದರೆ ಭಾರತದಲ್ಲಿಯೂ ವೈದಿಕ ರಿಲಿಜನ್ನು ಇದೆ ಎಂಬುದನ್ನು ಒಪ್ಪಬಹುದಿತ್ತೇನೋ?
ಕಡೆಗೂ ನೀವು ಹೇಳ ಬಯಸುವುದೇನು ಎಂಬುದೇ ಸ್ಪಷ್ಟವಾಗುವುದಿಲ್ಲ. => ಕೊನೆಯಲ್ಲಿ ಹೇಳುವದಿಷ್ಟೇ. ಇಂದಿನ ಸಮಾಜವಿಜ್ಞಾನಿಗಳು ತಿಳಿದಂತೆ ವೇದಗಳು ಹಿಂದೂಯಿಸಂ ಎಂಬ ರಿಲಿಜನ್ನಿನ ಡಾಕ್ಟ್ರಿನ್ನುಗಳಲ್ಲ. ಅವುಗಳನ್ನು ಭಾರತೀಯ ಸಂಪ್ರದಾಯಗಳ ಅಡಿಯಲ್ಲಿ ಆಧ್ಯಾತ್ಮಿಕ ಸಾಧನವೆಂದು ಪರಿಗಣಿಸಬೇಕಾಗುತ್ತದೆ.
ತುಂಬಾ ಚೆನ್ನಾಗಿದೆ ವಿನಾಯಕ ಹಂಪಿಹೊಳಿ
The author is too obsessed with Balagangadhar ‘s thesis that Vedic religion is not the same as Semitic religions. This article is merely a jugglery to obscure the real issue. If Vedas are not dogma, ie a body then why not all Brahmanical sects declare publicly that they don’t believe in Vedas? Why not subject Vedic claims of truth to rigorous scientific scrutiny?
Point 1: There is nothing called Vedic religion. There is no historical proof for its existence. So there is no point in referring vedic religion and its difference semetic religion.
Point 2: why Vedas should be subjected to scientific scrutiny? Is there any Vedic Pundit claiming Vedas are the only door to ಮೋಕ್ಷ and nothing else???
Nit at all. Salami Bava knows only his “guru’s” preachings will lead to “moksha”. In that moksha he will get 72 women. Although lots oh his guru’s preachings are stolen from the old testament and then added all sorts of verses to encourage violence and destruction. He can not envisage the vastness and openness of Vedas.
Gender bias! If men can get 72 ‘houries’ after they die in ‘jihad’, why can’t women get at least 36 men who can satisfy them, after they die in ‘jihad’?
Call it religion or Shahi or Raj, Vedas are a bundle of beliefs that claim to be truth. So they must be subjected to scientific inquiry. If brahmins believe that their parents come in the form of crows to eat pinda, then how can we entrust important positions to these Brahmins?
If Moslems feel that the world was created by Allah in 7 days, if Moslems feel that Allah gave a drop of very hot water, which could dissolve all the mountains of earth, to infidels when they begged for water (scientifically water boils and evaporates at 100 degree Celsius, leave alone melting mountains), how can we entrust them with important decisions/ posts?
What is moksha? Can you define it scientifically without resorting to mystifying semi philosophical language? How’s moksha related to the smooth functioning of secular apparatus and social good?
Call it religion or Shahi or Raj, Vedas are a bundle of beliefs that claim to be truth => What are the beliefs found in Vedas first of all and where are they claimed as truth?
What is moksha? Can you define it scientifically without resorting to mystifying semi philosophical language? => Your question is similar to like this: What is beauty? Can you define it scientifically without resorting to mystifying semi philosophical language?
Science is applicable only where logic and mathematics are applicable. There is no logical or mathematical proof that mother loves her child. There is a vast world out side the room of logic and mathematics. If one poet writes a poem by assuming beauty of sunset why not a brahmin assume something that he loves to do??
“Science is applicable only where logic and mathematics are applicable”
Fact is brahmins believe that their parents come in the form of crows to eat pinda. You need to tell us why is science not applicable for this belief? Is it because the belief is illogical?
brahmins believe that their parents come in the form of crows to eat pinda. => Brahmins feels his parents memory during shraddha in the same way how poet feels beauty in sunset. What is your problem? Should not we feel anything? are we machines?
Dude, it comes back to the same argument of Moslems who say according to Qur’an sun sets in a murky pond. Is that, in every whatever way, scientific?
There is science,philosophy,metaphysics,a state of trans. You try to understand, attain,come back and then apply science-as it is known today:because science would change and so would be our understanding. What you call science is not 100% complete in itself. So,for everything you can not apply science because scieitself doesn’t qualify to be applied. It is like a cat arguing against the existence of “sweet taste ” just because it can’t experience the same.
What is judgement day? Is there something about this on any of the scientific or non scientific calendars existing today (including Hijri, or Gregorian)
Good article
“Your question is similar to like this: What is beauty?”
Again relativistic argument. Moksha is what your religion promises to its followers. Which means it is an attainable state. What are the characteristics of that state? What are the tests for checking whether that state has been attained? What is the contrast set?
The same relativistic argument holds here.. What are characteristics of beauty? what are the tests for checking whether something has beauty? what is the contrast set?
Salam Bava,when u say “Moksha is what your religion promises to its followers”, can u enlighten us that where this is promised and who promised? you can also attain Moksha but ur religion won’t have path for that.right?
Vinayak, my complements to you for such a thought provoking analysis!
ವೇದಗಳು ನಿರರ್ಥಕ ನಾದಪುಂಜಗಳು, ಅವು ಬೈಬಲ್ ಕುರಾನ್ ಟೋರಾಗಳಂತೆ ಸತ್ಯವಾಣಿಯಲ್ಲ, ಅವನ್ನು ನಂಬಕೂಡದು ಅಂತ ತಡವಾಗಿಯಾದರೂ ತಮಗೆ ಅರ್ಥವಾಗಿದೆ!
ಧನ್ಯವಾದಗಳು ಸರ್ Rajaram Hegde