ಮರವನ್ನು ಮರೆತರೆ ಬರ ಬಾರದ್ದು ಬಂದೀತು!
– ರೋಹಿತ್ ಚಕ್ರತೀರ್ಥ
ಅವೊತ್ತು ಶುಕ್ರವಾರ. ಆಫೀಸಿನಿಂದ ಹೊರಟು ನಗರದ ಮುಖ್ಯರಸ್ತೆಯೊಂದಕ್ಕೆ ಬಂದು ಸೇರಿದಾಗ, ಆ ಸಾಗರದಲ್ಲಾಗಲೇ ಸಾವಿರಾರು ದೋಣಿಗಳು ಹುಟ್ಟುಹಾಕಲಿಕ್ಕೂ ಜಾಗ ಸಿಗದಂತೆ ತುಂಬಿಕೊಂಡಿದ್ದವು. ಯಾಕೆ ಇಷ್ಟೊಂದು ಟ್ರಾಫಿಕ್‍ಜಾಮ್ ಆಗಿದೆ ಎಂದು ಬಾತುಕೋಳಿಗಳಂತೆ ಕತ್ತು ಎತ್ತರಿಸಿ ನಿರುಕಿಸುತ್ತಿದ್ದವರಿಗೆ ದೂರದಲ್ಲಿ ಮಳೆಯ ರಭಸಕ್ಕೆ ಮರವೊಂದು ಮಾರ್ಗಶಾಯಿಯಾಗಿರುವುದು ಕಾಣಿಸಿತು. ಹತ್ತಾರು ಅಡಿಗಳ ರೆಂಬೆಕೊಂಬೆಗಳನ್ನು ದಶದಿಕ್ಕುಗಳಿಗೂ ಚಾಚಿ ಇಷ್ಟುದಿನ ರಸ್ತೆಯ ಬದಿಯಲ್ಲಿ ಗತ್ತಿನಿಂದ ನಿಂತು ನಮಗೆಲ್ಲ ಹಾಯ್ ಹೇಳುತ್ತ ಕೈಬೀಸುತ್ತಿದ್ದ ಈ ಮರ, ಇವೊತ್ತು ಹೃದಯಾಘಾತವಾದಂತೆ ಮಳೆಯ ಹೊಡೆತಕ್ಕೆ ನೆಲಕ್ಕೆ ಬಿದ್ದಿದೆಯಲ್ಲ ಅಂದುಕೊಂಡೆ. ಮರದ ಶವ ಬಿದ್ದಲ್ಲಿ ಹತ್ತಾರು ಅಧಿಕಾರಿಗಳು ನಿಂತು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದರು. ಅದರ ಕೈಕಾಲುಗಳನ್ನು ಆದಷ್ಟು ಬೇಗ ಕತ್ತರಿಸಿ ಎಲ್ಲಿಗಾದರೂ ಸಾಗಿಸಿಬಿಟ್ಟರೆ ಸಾಕು ಎಂಬ ಧಾವಂತ ಅವರ ಮುಖಗಳಲ್ಲಿ ಕುಣಿದಾಡುತ್ತಿತ್ತು. ಗ್ಯಾಂಗ್ರಿನ್ ಆದ ಕಾಲು ಕತ್ತರಿಸುವ ನಿರ್ಭಾವುಕ ವೈದ್ಯನಂತೆ, ನಾಲ್ಕು ಜನ ಕೆಲಸಗಾರರು ಶಕ್ತಿಮೀರಿ ಬಲಪ್ರಯೋಗಿಸಿ ಅದರ ದೇಹವಿಚ್ಛೇದನದಲ್ಲಿ ನಿರತರಾಗಿದ್ದರು. ಶೋಕೇಸಿನ ಹಲವಾರು ಶೋಪೀಸುಗಳ ನಡುವೆ ಕೈಮೇಲೆತ್ತಿ ನಗುವ ಪುಟ್ಟ ಬುದ್ಧನ ಮೂರ್ತಿಯಂತೆ; ಈ ನಗರದ ಸಾಫ್ಟ್‍ವೇರ್ ತಜ್ಞರು ಬರೆಯುವ ಧೀರ್ಘ ಪ್ರೋಗ್ರಾಮಿನ ಒಂದೇ ಒಂದು ಪುಟ್ಟ ಸಾಲಿನಂತೆ, ಅಥವಾ ಬೀದಿಬದಿಯಲ್ಲಿ ಹುಡುಗ ಮಾರುವ ನೂರಾರು ಪೋಸ್ಟರುಗಳ ನಡುವೆ ತಣ್ಣಗೆ ನಗುತ್ತ ಕೂತ ಹೃತಿಕ್ ರೋಷನ್ನಿನಂತೆ ಇಷ್ಟುದಿನ ಧ್ಯಾನಾಸಕ್ತನಾಗಿ ನಿಂತಿದ್ದ ವೃಕ್ಷ ಇನ್ನು ಅಲ್ಲಿ ಇರುವುದಿಲ್ಲವಲ್ಲ ಅಂತ ಸಂಕಟವಾಯಿತು. ಅದನ್ನು ತುಂಡುತುಂಡಾಗಿ ಕತ್ತರಿಸಿ ತೆಗೆದು ಸ್ಥಳಾವಕಾಶ ಮಾಡಿಕೊಡುತ್ತಲೇ ಅಸಹನೆಯಿಂದ ಕುದಿಯುತ್ತಿದ್ದ ಸವಾರರು ನಿರಾಳತೆಯಿಂದ ನಿಟ್ಟುಸಿರು ಬಿಟ್ಟರು. ಅಣೆಕಟ್ಟಿನ ಬಾಗಿಲು ತೆರೆದಾಗ ಹೊರಹಾರುವ ನೀರಿನ ಧಾರೆಯಂತೆ ಬೈಕು-ಕಾರುಗಳು ಧಿಮ್ಮನೆ ಚಿಮ್ಮಿದವು.
ಆ ಮರ ಅಲ್ಲಿತ್ತು ಎನ್ನುವುದಕ್ಕೆ
ಗುರುತು
ಏನೂ ಇಲ್ಲ ಈಗ ಮುರಿದ
ಗೂಡುಗಳ ಹೊರತು
– ಎಂದು ನಾನು ಹಿಂದೊಮ್ಮೆ ಬರೆದಿದ್ದ ನಾಲ್ಕು ಸಾಲುಗಳು ನೆನಪಾದವು. ಜಾಯ್ಸ್ ಕಿಲ್ಮರ್ ಎಂಬ ಇಂಗ್ಲೀಶ್ ಕವಿ “I think that I shall never see a poem so lovely as a tree” ಎಂದೇ ಹೇಳಿಬಿಡುತ್ತಾನೆ. ಬೆಂಗಳೂರಿನ ಹೂಬಿಡುವ ಮರಗಳನ್ನು ಕಂಡವರಿಗೆ ಈ ಮಾತಿನ ಅಂತರಾರ್ಥ ಥಟ್ಟನೆ ಹೊಳೆಯುತ್ತದೆ.
ಹಾಗೆ ನೋಡಿದರೆ, ಮರಗಳ ವಿಷಯದಲ್ಲಿ ಬೆಂಗಳೂರು ಲಕ್ಕಿ ಎಂದೇ ಹೇಳಬೇಕು. ನ್ಯೂಜಿಲೆಂಡ್, ದಕ್ಷಿಣ ಆಫ್ರಿಕ, ಬ್ರೆಜಿಲ್, ಆಸ್ಟ್ರೇಲಿಯ ಎನ್ನುತ್ತ ಪ್ರಪಂಚದ ನಾನಾ ಭಾಗಗಳಿಂದ ತರಿಸಿ ನೆಟ್ಟ ಮರಗಳು ಬೆಂಗಳೂರಿನ ನೆಲದಲ್ಲಿ ಹೂಹಣ್ಣು ಬಿಡುತ್ತಿವೆ. ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಈ ನೆಲಕ್ಕೆ ಬಂದಿಳಿದ ಅನೇಕ ವಿದೇಶೀ ಮರಗಳಿಗೆ ಇನ್ನೂ ಸರಿಯಾಗಿ ನೂರು ವರ್ಷವೂ ತುಂಬಿಲ್ಲ. ಸೀಮಂತದ ದಿನ ಮೊಣಗಂಟಿನವರೆಗೆ ದಟ್ಟವಾಗಿ ಜಲ್ಲೆ ಇಳಿಬಿಟ್ಟ ಚೆಲುವೆಯಂತೆ ಹಳದಿ ಬಣ್ಣದ ಸಿಂಗಾರ ಮಾಡಿಕೊಂಡು ನಿಲ್ಲುವ ಹೂಕುಚ್ಚಿನ ಮರ ಬೆಂಗಳೂರಿಗೆ ಬಂದದ್ದು ಮಡಗಾಸ್ಕರ್‍ನಿಂದ. ಅಲ್ಲಿಂದಲೇ ಬಂದು ಸದ್ಯಕ್ಕೆ ಭಾರತದ ಬಹುತೇಕ ಎಲ್ಲ ಸಿಟಿಗಳಲ್ಲೂ ಕಾಣಸಿಗುವ ಇನ್ನೊಂದು ಮರ ಕೆಂಪು ಹೂಗಳ ಗುಲ್‍ಮೊಹರ್. ಶಿವಲಿಂಗದ ಮೇಲೆ ನೂರಾರು ಹೆಡೆಗಳ ಸರ್ಪ ನಿಂತಂತೆ ಕಾಣುವ, ಮತ್ತು ಅದೇ ಕಾರಣಕ್ಕೆ ನಾವೆಲ್ಲ ಪರಮಪವಿತ್ರ ಎಂದು ನಂಬುವ, ನಾಗಲಿಂಗದ ಹೂವಿನ ಮರ ಇಲ್ಲಿಗೆ ಬಂದದ್ದು ವೆಸ್ಟ್ ಇಂಡೀಸ್‍ನಿಂದ ಎಂದರೆ ನಂಬುತ್ತೀರಾ? ಮಿದುಳಿಂದ ಹೊರಟ ನರವ್ಯೂಹ ಸುತ್ತ ಹರಡಿಕೊಂಡಂತೆ ಕಾಣುವ ವಿಚಿತ್ರ – ಆದರೂ ಆಕರ್ಷಕ ಬಿಳಿ ಬಣ್ಣದ ಹೂಗೊಂಚಲನ್ನು ಮುಡಿದು ನಿಲ್ಲುವ ಆನೆ ಕಿವಿಯ ಮರ ನಮ್ಮ ನೆಲಕ್ಕೆ ಬಂದದ್ದು ಮೆಕ್ಸಿಕೋ ಮತ್ತು ದಕ್ಷಿಣ ಅಮೆರಿಕದಿಂದ. ಇದರ ಬೀಜ ಆನೆಯ ಮೊರದಂತಹ ಕಿವಿಯ ಹಾಗೆ, ಅದೇ ಆಕಾರದಲ್ಲಿ ಬೆಳೆದುನಿಲ್ಲುತ್ತದೆ ಎನ್ನುವುದೊಂದು ವಿಶೇಷ. ಬಾಟಲ್‍ಗಳೊಳಗೆ ತೂರಿಸಲು ಅನುಕೂಲವಾಗುವಂತಹ ಉದ್ದನೆ ಬ್ರಶ್ಷನ್ನೇ ಹೋಲುವ ಕೆಂಪು ಬಣ್ಣದ ಹೂ ಬಿಡುವ ಮರದ (ಅದಕ್ಕೆ ಬಾಟಲ್ ಬ್ರಶ್ ಎಂದೇ ಹೆಸರು!) ತವರು ಆಸ್ಟ್ರೇಲಿಯ. ಇದೇ ಖಂಡದಿಂದ ಬಂದ ಇನ್ನೊಂದು ವೃಕ್ಷತಳಿ – ಬಾಗೆ. ಇದರ ತಿಳಿಹಸಿರು ಬಣ್ಣದ ಗರಿಗರಿಯಾದ ಹೂಗಳು ಬಿದ್ದು ಆ ಜಾಗದಲ್ಲಿ ಉದ್ದನೆ ನಾಲಗೆಯಂತಹ ಬೀಜದ ಕೋಡು ಹುಟ್ಟುತ್ತದೆ. ಒಂದೆರಡಲ್ಲ ನೂರಾರು ಕೋಡುಗಳು ಹೀಗೆ ಸಾಲುಸಾಲಾಗಿ ಜೋಲಾಡುತ್ತ, ಗಾಳಿ ಬಂದಾಗೆಲ್ಲ ಚಿರೋಬರೋ ಎಂಬ ದೊಡ್ಡ ಗದ್ದಲವನ್ನೇ ಎಬ್ಬಿಸುತ್ತವೆ. ಅದಕ್ಕೇ ಇಂಗ್ಲೀಷಿನಲ್ಲಿ ಇದನ್ನು “ವುಮನ್ಸ್ ಟಂಗ್ ಟ್ರೀ” ಎನ್ನುವುದು! ಇನ್ನು, ಉದ್ದನೆ ಕಡ್ಡಿಗೆ ಸುರುಳಿಸುತ್ತಿ ಕೊಟ್ಟ ನಸುಗೆಂಪು ಬಣ್ಣದ ಬಾಂಬೆ ಮಿಠಾಯಿಯಂತೆ ಕಾಣುವ ಜಾವಾ ಕಾಸಿಯ ಎಂಬ ಹೂಬಿಡುವ ಮರವನ್ನು ಜಾವಾ-ಸುಮಾತ್ರಗಳಿಂದ ತರಲಾಯಿತು. ಇದೇ ಜಾತಿಗೆ ಸೇರಿದ, ಆದರೆ ಅಚ್ಚಹಳದಿ ಬಣ್ಣದ ಹೂಬಿಡುವ ಗೋಲ್ಡನ್ ಕಾಸಿಯ ಬಂದದ್ದು ಸೆಂಟ್ರಲ್ ಅಮೆರಿಕದಿಂದ.
ಹೀಗೆ ಒಟ್ಟು ಇನ್ನೂರಕ್ಕೂ ಹೆಚ್ಚಿನ ವೈವಿಧ್ಯಮಯ ವೃಕ್ಷತಳಿಗಳನ್ನು ಕ್ರಂಬಿಗಲ್ ಎಂಬ ಜರ್ಮನ್ ತೋಟಗಾರಿಕಾ ತಜ್ಞ ಬೆಂಗಳೂರಲ್ಲಿ ನೀರುಣಿಸಿ ಬೆಳೆಸಿದ. ಈ ಊರಿಗೆ ಗಾರ್ಡನ್ ಸಿಟಿ ಎಂಬ ಹೆಸರು ತಂದುಕೊಟ್ಟವನೂ ಅವನೇ. ಆದರೆ ಕಳೆದ ಏಳೆಂಟು ವರ್ಷಗಳಿಂದ ಪ್ರತಿ ಮಳೆಗಾಲಕ್ಕೂ ಉರುಳಿಬೀಳುತ್ತಿರುವ ಮರಗಳ ಸಂಖ್ಯೆ ನೋಡಿದರೆ ಈ ನಗರ ಇನ್ನು ಕೆಲವೇ ವರ್ಷಗಳಲ್ಲಿ ಬ್ಯಾರನ್ ಸಿಟಿ ಆಗುವ ಎಲ್ಲಾ ಲಕ್ಷಣಗಳೂ ಇವೆ ಎನ್ನಬಹುದು. ಪ್ರತಿವರ್ಷ, ಇನ್ನೂ ಮುಂಗಾರು ಸರಿಯಾಗಿ ಶುರುವಾಗುವುದಕ್ಕೂ ಮೊದಲೇ; ಚಿಕ್ಕಪುಟ್ಟ ಗಾಳಿಮಳೆಗೆಲ್ಲ ಬೆಂಗಳೂರಿನ ಮರಗಳು ಕಾಲುಕುಸಿದು ನೆಲಕ್ಕುರುಳುತ್ತವೆ. ಕಳೆದ ವರ್ಷ ಮಳೆಗಾಲದಲ್ಲಿ ನಮ್ಮ ರಾಜಧಾನಿಯಲ್ಲಿ ಧರಾಶಾಯಿಯಾದ ಮರಗಳು ಎಂಟುನೂರಕ್ಕೂ ಹೆಚ್ಚು. ಆದರೆ ಅವು ಎಲ್ಲೆಲ್ಲಿ ಬಿದ್ದವು; ಯಾವ ಜಾತಿಯ ಮರಗಳಿದ್ದವು ಎನ್ನುವುದನ್ನು ಬಹುಶಃ ರಾಜ್ಯಸರಕಾರದ ಯಾವ ಇಲಾಖೆಯೂ ಬರೆದಿಟ್ಟಂತಿಲ್ಲ. ಮರ ಬಿದ್ದಿದೆ ಎಂದೊಡನೆ ಒಂದಿಬ್ಬರು ಜವಾನರನ್ನು ಗರಗಸದೊಡನೆ ಕಳಿಸಿ, ಅದರ ರೆಂಬೆಕೊಂಬೆ ಕತ್ತರಿಸಿ ಆಚೆ ಎಸೆಯುವುದಷ್ಟೇ ತನ್ನ ಜವಾಬ್ದಾರಿ ಎಂದು ಮಹಾನಗರಪಾಲಿಕೆ ಭಾವಿಸಿದೆ. ಕಳೆದ ವರ್ಷದ (2015) ಎಪ್ರೀಲ್ ಕೊನೆಯ ವಾರದಲ್ಲಿ ಅರ್ಧಗಂಟೆ ಸುರಿದ ಧಾರಾಕಾರ ಮಳೆಯ ಆರ್ಭಟಕ್ಕೆ ಬೆಂಗಳೂರಿನ ಒಟ್ಟು 300 ಮರಗಳು ಅಡ್ಡಡ್ಡ ಮಲಗಿಬಿಟ್ಟವು! ನಮ್ಮ ಸಂವೇದನೆ ಹೇಗಿದೆ ಎಂದರೆ, ಯಾವುದಾದರೂ ಮರ ನಡುರಸ್ತೆಯಲ್ಲಿ ಅಡ್ಡಬಿದ್ದರೆ – ಅದು ಟ್ರಾಫಿಕ್ಕಿಗೆ ಅಡ್ಡಿಯಾದ್ದರಿಂದ ದುರಂತ; ಮನೆಗಳ ಮೇಲೋ ನಿಲ್ಲಿಸಿದ ಕಾರುಗಳ ಮೇಲೋ ಮುರಿದುಬಿದ್ದರೆ ಅದೊಂದು ಗಂಭೀರ ಅನಾಹುತ. ಆದರೆ, ಯಾರೂ ಓಡಾಡದ ಜಾಗದಲ್ಲಿ ಯಾವ ಮಹಾವೃಕ್ಷ ಬಿದ್ದರೂ ಅದು ಕಣ್ಣೀರು ಹಾಕಬೇಕಾದ ಸಂಗತಿ ಎಂದು ನಮಗನ್ನಿಸುವುದಿಲ್ಲ! ಮರದ ಕಾಂಡ-ರೆಂಬೆಗಳು ಅಷ್ಟೇನೂ ಉಪಯೋಗಕ್ಕೆ ಬರುವ ಜಾತಿಯವಲ್ಲ ಅನ್ನಿಸಿದರಂತೂ ಅದೊಂದು ಬೀದಿನಾಯಿಯ ಒಂಟಿ ಶವದಂತೆ ಅಲ್ಲಿ ತಿಂಗಳುಗಟ್ಟಲೆ ಬಿದ್ದಿರುತ್ತದೆ. ಯಾರಿಗೂ ಅಲ್ಲೊಂದು ಮರ ಅಕಾಲಿಕವಾಗಿ ನೆಲಕ್ಕುರುಳಿ ತನ್ನ ಇಹಯಾತ್ರೆ ಮುಗಿಸಿದೆ ಅಂತನ್ನಿಸಿ ಕಸಿವಿಸಿ, ಕಳವಳ ಹುಟ್ಟುವುದಿಲ್ಲ.
ಮರ ನಮ್ಮ ನಡುವೆ ಬಾಳಿಬದುಕುವ ಒಂದು ಜೀವಂತ ಶಾಸನ. ಸಿಟಿಯ ಮರಗಳು ನಾವ್ಯಾರೂ ನೋಡದ ಅದೆಷ್ಟೊಂದು ಸ್ಥಿತ್ಯಂತರಗಳಿಗೆ ತಮ್ಮ ಜೀವಿತದಲ್ಲಿ ಸಾಕ್ಷಿಯಾಗಿರುತ್ತವೆ! ರಸ್ತೆಬದಿಯಲ್ಲಿ ಅರಳಿನಿಂತ ಮರ ಎತ್ತಿನಗಾಡಿಗಳನ್ನು ನೋಡಿರುತ್ತದೆ. ಕುದುರೆಗಾಡಿಗಳಿಗೆ ಟಾಟಾ ಹೇಳಿರುತ್ತದೆ. ಐವತ್ತರ ದಶಕದಲ್ಲಿ ರೋಡಿಗಿಳಿದ ಮೊದಮೊದಲ ಮೋಟಾರುಗಾಡಿಗಳನ್ನು ಕಂಡು ವಿಸ್ಮಯಪಟ್ಟಿರುತ್ತದೆ. ಎಪ್ಪತ್ತರ ದಶಕದಲ್ಲಿ ವಾಹನ ಉತ್ಪಾದನೆಯಲ್ಲಿ ಕ್ರಾಂತಿಯಾಗಿ ಕಾರು, ಬಸ್ಸು, ಮೋಟಾರ್‍ಬೈಕುಗಳು ರಸ್ತೆಯ ತುಂಬ ಹರಿದಾಡಿದ್ದನ್ನು ಕಣ್ತುಂಬಿಕೊಂಡಿರುತ್ತದೆ. ಮತ್ತು ಇತ್ತೀಚೆಗೆ ಟ್ರಾಫಿಕ್ಕಿನ ಕಿರಿಕಿರಿ, ಧೂಳು, ಹೊಗೆ, ಹಾರ್ನುಗಳ ಪೋಂಪೋಂ ಗಲಾಟೆಗೆ ತಲೆ ಚಚ್ಚಿಕೊಂಡೂ ಇರುತ್ತದೆ. ಹಿಂದಿನ ಕಾಲದವರಿಗೆ ಹೊಂಗೆ, ಅತ್ತಿ, ತೇಗ, ಮಹಾಗನಿ, ಮಾವು, ಹಲಸು ಎನ್ನುತ್ತ ನೂರಾರು ಮರಗಳ ಸ್ಪಷ್ಟ ಪರಿಚಯ ಇತ್ತು. ಮರವೊಂದನ್ನು ದೂರದಿಂದ ನಿರುಕಿಸಿಯೇ ಅದು ಇಂತಿಂಥಾ ಮರ ಎನ್ನುವ ಜಾಣ್ಮೆ ಇತ್ತು. ಯಾವ ಮರ ಯಾವ ಕಾಲದಲ್ಲಿ ಹೂಬಿಡುತ್ತದೆ; ಹಣ್ಣು ಬಿಡಲು ಯಾವ ಕಾಲ ಉತ್ತಮ; ಈ ವರ್ಷ ಚಳಿ ಹೆಚ್ಚಾದರೆ ಯಾವ ಮರ ಒಳ್ಳೆಯ ಫಸಲು ಕೊಡಬಹುದು, ಅಕಾಲಿಕ ಮಳೆ ಬಂದರೆ ಯಾವ ಮರಕ್ಕೆ ಒಳ್ಳೆಯದಲ್ಲ – ಎನ್ನುವ ಎಲ್ಲ ಮಾಹಿತಿಗಳು ಅವರ ಬೆರಳತುದಿಯಲ್ಲಿ ಕುಣಿಯುತ್ತಿದ್ದವು. ಆದರೆ, ಈಗಿನ ಜಮಾನದ ಪ್ರತಿನಿಧಿಗಳಾದ ನಮಗೆ ಅಂತಹ ಯಾವ ವೃಕ್ಷಜ್ಞಾನ ಇದೆಯೆ? ಎಲೆ, ತೊಗಟೆ, ಹೂವು ನೋಡಿಯೇ ಇದು ಇಂತಿಂಥಾ ಮರ ಎಂದು ಹೇಳಲು ನಮಗೆ ಬರುತ್ತದೆಯೆ? ಬೆಂಗಳೂರಿನಲ್ಲಿ ಹತ್ತಾರು ವರ್ಷಗಳಿಂದ ಉದ್ಯೋಗ ನಿಮಿತ್ತ ಬೀಡುಬಿಟ್ಟಿರುವ ಜನಾಂಗದ ಆಧುನಿಕ ಪ್ರತಿನಿಧಿಗಳಿಗೆ ತಮ್ಮ ಮನೆ ಮತ್ತು ಆಫೀಸಿನ ದಾರಿಯಲ್ಲಿ ಸಿಗುವ ಕನಿಷ್ಠ ಹತ್ತು ಮರಗಳನ್ನು ಗುರುತು ಹಿಡಿದು ಹೆಸರು ಹೇಳಲು ಸಾಧ್ಯವೆ? ಅನುಮಾನ!
ಮೂವತ್ತು ಮೀಟರ್‍ಗಳಷ್ಟು ಎತ್ತರದ ಒಂದು ಸಾಧಾರಣ ಮರ ಕೇವಲ ಒಂದು ವರ್ಷದಲ್ಲಿ 23 ಕಿಲೋಗ್ರಾಂಗಳಷ್ಟು ಕಾರ್ಬನ್ ಡೈ ಆಕ್ಸೈಡ್‍ಅನ್ನು ಒಳಗೆಳೆದುಕೊಳ್ಳುತ್ತದೆ ಮಾತ್ರವಲ್ಲ, ಸುಮಾರು 2700 ಕಿಲೋಗ್ರಾಂಗಳಷ್ಟು ಆಕ್ಸಿಜನ್‍ಅನ್ನು ವಾತಾವರಣಕ್ಕೆ ಕೊಡುತ್ತದೆ. ಇದು ಇಬ್ಬರು ವಯಸ್ಕರ ಉಸಿರಾಟಕ್ಕೆ ಧಾರಾಳವಾಗಿ ಸಾಕು. ಅಷ್ಟು ಮಾತ್ರವಲ್ಲ; ನಮ್ಮೂರಲ್ಲಿ ಬೆಳೆದು ನಿಲ್ಲುವ ಮಾವು, ಅತ್ತಿ, ಹಲಸು, ಹೊಂಗೆಯಂಥ ಮರಗಳು ಒಂದೊಂದೂ 285 ಜಾತಿಯ ಕೀಟ ಪ್ರಭೇದಗಳಿಗೆ ಆಶ್ರಯತಾಣಗಳು. ಕೀಟಗಳಿದ್ದಲ್ಲಿ ಹಕ್ಕಿಗಳ ಕಲರವವೂ ಹೆಚ್ಚು. ಈ ಹಕ್ಕಿಗಳು ಕೀಟಗಳನ್ನು ತಿನ್ನುವ ಜೊತೆಗೆ ಮರದ ಹಣ್ಣುಗಳನ್ನೂ ತಿಂದು ದೂರದೂರಕ್ಕೆ ಹಾರಿ ಹಿಕ್ಕೆ ಹಾಕಿ ಬೀಜಪ್ರಸಾರ ಮಾಡುತ್ತವೆ. ಹಣ್ಣಿನ ಮರಗಳು ಜನರಿಗೆ ಕಾಲಕಾಲಕ್ಕೆ ಬೇಕಾದ ಪೌಷ್ಟಿಕಾಂಶದ ಆಹಾರ ಒದಗಿಸುತ್ತವೆ. ಆಸ್ಪಿರಿನ್ ಮಾತ್ರೆಗಳು, ಕ್ವಿನೈನ್ ಎಂಬ ಮಲೇರಿಯದ ಔಷಧ, ಕ್ಯಾನ್ಸರ್‍ಗೆ ಪ್ರತಿರೋಧ ಒಡ್ಡಲು ನಡೆಸುವ ಕಿಮೋಥೆರಪಿ ಚಿಕಿತ್ಸೆಯಲ್ಲಿ ಬಳಸುವ ಕೆಲವೊಂದು ಮದ್ದುಗಳು ಎಲ್ಲವೂ ವೃಕ್ಷಜನ್ಯವೇ. ಇಷ್ಟಾದರೂ ಮರಗಳ ಬಗ್ಗೆ ಆಧುನಿಕ ವಿಜ್ಞಾನವಾಗಲೀ ವೈದ್ಯಕೀಯ ಜಗತ್ತಾಗಲೀ ತಲೆ ಕೆಡಿಸಿಕೊಂಡದ್ದು ಕಡಿಮೆಯೇ ಎನ್ನಬೇಕು. ವಿಜ್ಞಾನ ಬದಿಗಿಟ್ಟು ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೂ ಮರದಿಂದ ನಮಗೆ ಲಾಭವೇ. ಇಂಗ್ಲೆಂಡಿನಲ್ಲಿ ಮರದ ಪಕ್ಕ ಮನೆಯಿದ್ದರೆ ಆ ಮನೆಯ ಮೌಲ್ಯ ಸರಾಸರಿ 14% ಏರುತ್ತದಂತೆ. ಅದೇ ಅಮೆರಿಕಾದಲ್ಲಿ ಅದರ ಮೌಲ್ಯ 37% ಹೆಚ್ಚಾಗುತ್ತದೆ. ಯಾಕೆಂದರೆ ಮನೆಯ ಆಸುಪಾಸಿನಲ್ಲಿರುವ ಮರಗಳು ಮನೆಯನ್ನು ಸದಾಕಾಲ ತಂಪಾಗಿರಿಸುವುದರಿಂದ ಫ್ಯಾನ್, ಏಸಿ ಇತ್ಯಾದಿಗಳ ಬಳಕೆ ತಗ್ಗುತ್ತದೆ. ಇದು ಒಟ್ಟು ವಿದ್ಯುತ್‍ವ್ಯಯದಲ್ಲಿ 30% ಕಡಿತ ಮಾಡುತ್ತದೆ. ವಟವೃಕ್ಷದಂಥ ಒಂದು ದೊಡ್ಡ ಮರ ಪ್ರತಿದಿನ ಅದೆಷ್ಟು ತಂಗಾಳಿಯನ್ನು ವಾತಾವರಣಕ್ಕೆ ಸೇರಿಸುತ್ತದೆಂದರೆ ಅದನ್ನು ಸರಿಗಟ್ಟಲು ಹತ್ತು ಏಸಿಗಳು ಇಪ್ಪತ್ತುಗಂಟೆ ಎಡೆಬಿಡದೆ ಕೆಲಸ ಮಾಡಬೇಕಾದೀತು ಎಂದು ಅಂದಾಜು ಮಾಡಿದ್ದಾರೆ.
ಅರಣ್ಯಕ್ಕೆ ಅತ್ಯಂತ ನಿಕಟವಾಗಿ ಬದುಕುತ್ತಿದ್ದ ಪ್ರಾಚೀನ ಋಷಿಮುನಿಗಳು ಮರಗಳನ್ನು ದೇವತೆಗಳಂತೆ ಕಂಡರು. ಭಾರತದ ಎರಡು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳ ಬಹುಮುಖ್ಯ ಭಾಗಗಳು ನಡೆಯುವುದು ಅರಣ್ಯದಲ್ಲಿಯೇ. ಶ್ರೀರಾಮ ತಂದೆಯ ಮಾತು ನಡೆಸಿಕೊಡಲು ಹದಿನಾಲ್ಕು ವರ್ಷ ವನವಾಸಕ್ಕೆ ಹೋದರೆ ಪಾಂಡವರು ಕೌರವನೊಡನೆ ದ್ಯೂತದಲ್ಲಿ ಸೋತು ಅರಣ್ಯವಾಸಿಗಳಾಗಬೇಕಾಗುತ್ತದೆ. ಹಾಗಾಗಿ ಎರಡೂ ಕಾವ್ಯಗಳಲ್ಲಿಯೂ ಅರಣ್ಯ ಒಂದು ಪ್ರಮುಖ ಪಾತ್ರವಾಗಿ ದಾಖಲಾಗುತ್ತದೆ. ಕಾಡಿಗೆ ಹೊರಟ ರಾಮನ ಜೊತೆ ನಡೆಯುತ್ತ ಸೀತೆ “ನಿನಗೆ ಅವಶ್ಯಕತೆ ಇಲ್ಲದೆ ಯಾವ ಪ್ರಾಣಿಯನ್ನೂ ಕೊಲ್ಲಬೇಡ, ಯಾವ ಮರದ ಗೆಲ್ಲನ್ನೂ ಕಡಿಯಬೇಡ” ಎಂದು ಉಪದೇಶ ಕೊಡುತ್ತಾಳೆ. ಕಾವ್ಯಗಳು ಮಾತ್ರ ಯಾಕೆ, ಹಸಿಮರವನ್ನು ಸ್ವಲಾಭಕ್ಕಾಗಿ ಕಡಿಯುವವನು ರೌರವ ನರಕವನ್ನನುಭವಿಸುತ್ತಾನೆ ಎಂದು ಸ್ಮೃತಿಗಳೂ ಹೇಳುತ್ತವೆ. ಪರಾಶರ ಮುನಿ ವೃಕ್ಷಾಯುರ್ವೇದ ಎಂಬ ಗ್ರಂಥದಲ್ಲಿ, ಜೀವಿಯು ಹಲವು ಹತ್ತು ಜನ್ಮಗಳನ್ನು ಎತ್ತುತ್ತಾ ಬಂದು ಕೊಟ್ಟಕೊನೆಗೆ ಮರದ ಜನ್ಮವೆತ್ತುತ್ತಾನೆ ಎಂದು ಹೇಳುತ್ತಾನೆ. ಅದು ಅತ್ಯಂತ ಪವಿತ್ರವಾದ ಜನ್ಮ. ಯಾಕೆಂದರೆ, ಉಳಿದ ಪ್ರಾಣಿಪಕ್ಷಿ ಮನುಷ್ಯರಾದರೂ ತಮ್ಮ ಜೀವನದಲ್ಲಿ ಒಂದಿಲ್ಲೊಂದು ಕಾರಣಕ್ಕೆ ರಾಗದ್ವೇಷಗಳನ್ನು ತೋರಿಸುತ್ತಾರೆ; ಹೊಟ್ಟೆ ಹೊರೆಯುವುದಕ್ಕಾಗಿ ಇನ್ನೊಂದು ಜೀವಿಯನ್ನು ಕಡಿದು ತಿನ್ನುತ್ತಾರೆ. ಆದರೆ ಯಾರೊಬ್ಬರಿಗೂ ನೋವನ್ನುಂಟುಮಾಡದ, ಕೊಲ್ಲದ ದೈವಿಕ ಜನ್ಮ ವೃಕ್ಷದ್ದು! ಹಾಗಾಗಿ, ಆ ಜನ್ಮ ಮುಗಿಯುತ್ತಲೇ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುತ್ತಾನೆ ಆತ. ವೇದೋಪನಿಷತ್ತುಗಳನ್ನು ಓದಿಕೊಳ್ಳದ ಹಳ್ಳಿಜನ ಕೂಡ ವೃಕ್ಷಗಳನ್ನು ತಮ್ಮ ಕುಲಬಾಂಧವರಂತೆಯೇ ನಡೆಸಿಕೊಳ್ಳುತ್ತಿದ್ದ ಉದಾಹರಣೆ ನೂರಾರಿದೆ. ಹಳ್ಳಿಗಳಲ್ಲಿ ಈಗಲೂ ಅಶ್ವತ್ಥಕ್ಕೂ ಬೇವಿನಮರಕ್ಕೂ ಮದುವೆ ಮಾಡುವ ಆಚರಣೆ ಜಾರಿಯಲ್ಲಿದೆ. ಮರಗಳ ಜೊತೆಗೆ ಹಳ್ಳಿಗರಿಗಿರುವ ಇಂಥ ಭಾವನಾತ್ಮಕ ಸಂಬಂಧವನ್ನು ನಗರದ ಆಧುನಿಕಸಭ್ಯರು ಅರ್ಥೈಸಿಕೊಂಡಾರೇ?
ಕೇಶಿರಾಜ ತನ್ನ ಶಬ್ದಮಣಿದರ್ಪಣದಲ್ಲಿ ವಿಭಕ್ತಿ-ಪ್ರತ್ಯಯಗಳನ್ನು ವಿವರಿಸಿ ಉದಾಹರಣೆ ಕೊಡಬೇಕಾದಾಗ, ಮರ ಎಂಬ ಶಬ್ದವನ್ನು ಎತ್ತಿಕೊಳ್ಳುತ್ತಾನೆ! ಮರವು, ಮರವನ್ನು, ಮರದಿಂದ ಎನ್ನುತ್ತ ಎಲ್ಲ ಆರು ವಿಭಕ್ತಿಗಳನ್ನು ಹೇಳಿ ಸಂಬೋಧನಾ ವಿಭಕ್ತಿಗೆ ಬರುವಾಗ “ತಳಿರ್ತಿರು ಮರನೇ” ಎನ್ನುತ್ತಾನೆ. ಎಲೆ ಮರವೆ, ಸದಾ ಚಿಗುರುತ್ತಿರು – ಎಂಬ ಆ ಆಶಯ ಎಷ್ಟು ಅರ್ಥಪೂರ್ಣವೂ ಸುಂದರವೂ ಅಭಿನಯಾತ್ಮಕವೂ ಆಗಿದೆ ನೋಡಿ! ಅಂತಹ ಭಾವನಾತೀವ್ರತೆಯಿಂದ ಬಹುದೂರ ಸಾಗಿರುವ ನಾವು ನಮ್ಮ ಸಿಟಿಯ ಬಹುದೊಡ್ಡ ಪ್ರಾಕೃತಿಕ ಸಂಪತ್ತಾದ ಮರಗಳ ಜೊತೆ ಯಾವ ಕರುಳಬಳ್ಳಿಯ ಸಂಬಂಧವೂ ಇಲ್ಲದಂತೆ, ರೋಬೋಟ್‍ಗಳಂತೆ ಬದುಕುತ್ತಿದ್ದೇವಲ್ಲ ಎಂದು ಅನೇಕ ಸಲ ಅನ್ನಿಸಿದೆ ನನಗೆ. ನಮ್ಮ ಸುತ್ತಮುತ್ತಲಿನ ಪರಿಸರದ ಮರಗಳನ್ನು, ಕನಿಷ್ಠಪಕ್ಷ ಗುರುತಿಸುವಷ್ಟು ಜ್ಞಾನವನ್ನಾದರೂ ನಮ್ಮ ಪಠ್ಯಪುಸ್ತಕಗಳು ಕೊಡಬೇಕಾಗಿತ್ತಲ್ಲವೆ? ದೂರದ ಟಂಡ್ರಾ, ಸವನ್ನಾ, ಉಷ್ಣವಲಯದ ಕಾಡು-ಮರ-ಬಳ್ಳಿಗಳ ಸಂಕೀರ್ಣ ಜೀವವ್ಯವಸ್ಥೆಯ ಬಗ್ಗೆ ಪುಟಗಟ್ಟಲೆ ಪಾರಾಯಣ ಮಾಡಿಸುವ ನಮ್ಮ ಶಿಕ್ಷಣಪದ್ಧತಿಗೆ, ನಮ್ಮ ಹಿತ್ತಲಿನ ಮರಗಳ ಬಗ್ಗೆ ಮಾತಾಡುವುದಕ್ಕೆ ಅಸಹ್ಯವೋ ಅಸಡ್ಡೆಯೋ ಇರಬೇಕು! ಹೊರಗಿನ ದೇಶಗಳಿಂದ ಬೆಂಗಳೂರಿಗೆ ಬರುವ ಪ್ರವಾಸಿಗರಿಗಾಗಿ ಅಚ್ಚುಹಾಕಿಸಲ್ಪಡುವ ಪರಿಚಯ ಪುಸ್ತಕಗಳಲ್ಲಿ ಇಲ್ಲಿನ ದೇವಸ್ಥಾನಗಳು, ಕೋಟೆ, ಅರಮನೆಗಳ ವಿವರಗಳು ಇರುತ್ತವೆ ಶಿವಾಯಿ ಇಲ್ಲಿನ ನೂರಾರು ವೈವಿಧ್ಯಮಯ ಮರಗಳ ಬಗ್ಗೆ ಯಾವ ಮಾಹಿತಿಯೂ ಇರುವುದಿಲ್ಲ. ನಮ್ಮ ಸುತ್ತಮುತ್ತ ಆಳೆತ್ತರ ಬೆಳೆದುನಿಲ್ಲುವ ಇಂತಹ ಮರಗಳ ಬಗ್ಗೆ ಏನೇನೂ ತಿಳಿದಿಲ್ಲದ ಮೇಲೆ ನಮಗೆ ಪ್ರೀತಿಯಾದರೂ ಹೇಗೆ ಹುಟ್ಟೀತು? ಒಂದೊಂದು ಮಳೆಗೂ ಸುಸ್ತಾಗಿ ಮೊಣಕಾಲು ಮುರಿಸಿಕೊಂಡು ನೆಲಕ್ಕುರುಳುವ ಮರಗಳ ಬಗ್ಗೆ ನಮಗೆ ಪ್ರೀತಿ, ಅನುಕಂಪ, ಕಾಳಜಿ ಹುಟ್ಟುವುದು ಯಾವಾಗ? ಬದುಕಿದ್ದಾಗ ನೂರಾರು ಹಕ್ಕಿ-ದುಂಬಿಗಳನ್ನು ಸಾಕಿಸಲಹುವ ಮರ ಉರುಳಿಬಿದ್ದಾಗ ನಮ್ಮದೇ ಬದುಕಿನ ಒಂದು ಭಾಗ ಊನವಾಯಿತಲ್ಲಾ ಎಂಬ ಪ್ರಜ್ಞೆ ಮೂಡುವುದು ಬೇಡವೇ? ಕಾಂಕ್ರೀಟಿನ ನೆಲದ ಮೇಲೆ ಅಸಹಾಯವಾಗಿ ಬೇರು ಮೇಲಾಗಿ ಬಿದ್ದಿರುವ ಮರದ ಚೆದುರಿಚೆಲ್ಲಿದ ಜೀವ ಯಾಕೋ ನಮ್ಮನ್ನೇ ಸಂಕೇತಿಸುತ್ತಿದೆ ಅನ್ನಿಸುತ್ತದೆ.
ನಾಗಶೆಟ್ಟಿಯೇ ಮೊದಲಾದ, ಸಲಾಂ ಸಾಬಿಯೇ ಮುಂತಾದ ಮುಠ್ಠಾಳ ಸಂತಾನಗಳು ನಮ್ಮ ಪರಂಪರೆಯಲ್ಲಿ ಇರುವ ಆಚರಣೆಗಳನ್ನು ವಿಡಂಬನೆ ಮಾಡುತ್ತವೆ. ಅದರ ಧಾರ್ಮಿಕ,ಭಾವನಾತ್ಮಕ ಆಯಾಮಗಳ ಅರಿವಿರದ ಕುರುಡರು. ಇಂತಹ ವಿಚಾರಗಳಲ್ಲಿ ಅವರ ಮೂಗು ತಿರುವಿದರೆ ಇಲ್ಲ.
“ನಮ್ಮ ಪರಂಪರೆಯಲ್ಲಿ ಇರುವ ಆಚರಣೆಗಳನ್ನು ವಿಡಂಬನೆ ಮಾಡುತ್ತವೆ.”
This is totally vicious and patently false allegation. Scientific inquiry of ritualistic practices is not ವಿಡಂಬನೆ. It is the process of cultivating rationality, spirit of universal brotherhood and weeding out superstitions. Hindutva brigade wants to take INDIA back to the Middle Ages by opposing scientific inquiry of rituals.
ಮೊನ್ನೆ ನಮ್ಮೂರಿನಿಂದ ದಾಬಸಪೆಟೆಗೆ ಹೊಗುತ್ತಿದ್ದೆ, ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಮರಗಳ ರೆಂಬೆಗಳನ್ನು ಕತ್ತರಿಸಿಬರೀ ಕಾಂಡಗಳು ನಿಂತಿದ್ದವು. ವಿಚಾರಿಸಿದಾಗ ರಸ್ತೆಯ ಅಗಲೀಕರಣಕ್ಕಾಗಿ ಕತ್ತರಿಸಿದ್ದು, ಕತ್ತರಿಸಿಯೇ ಸುಮಾರು ವರ್ಷವಾಗುತ್ತಿದೆಯಂತೆ.ನಮ್ಮಲ್ಲಿರಸ್ತೆ ಅಗಲೀಕರಣಕ್ಕೆ ಕೆಲ ಜನ ಕಾಯುತ್ತಿರುತ್ತಾರೆ. ಅವರು ಮಾಡುವ ಮೊದಲ ಕೆಲಸವೇ ಯ್ಯಾರೋ ಪುಣ್ಯಾತ್ಮರು ಬೆಳೆಸಿದ ಗಿಡಗಳನ್ನು ಕತ್ತರಿಸಿ% ಲೆಕ್ಕದಲ್ಲಿ ಹಂಚಿಕೊಳ್ಳುವುದು. ಅವರಿಗೆ ಗಿಡ ಎಂದರೆ ಸುಲಭದಲಿ ದುಡ್ಡು ಮಾಡುವ ಸಾಧನ ಮಾತ್ರ. ಜೀವಂತ ವಿರುವ ಮನುಷ್ಯರ ಸಂಬಂಧವೇ ಗುರುತಿಸದವರು ಮಾತುಬಾರದ ಗಿಡಗಳು ಯಾವ ಲೆಖ್ಖ.ಮಕ್ಕಳಿಗೆ ನಾವು ಯಾವ ಸಂಬಂಧದ ಪರಿಚಯ ಮಾಡಿಸುತ್ತೆವೆ? ಗಿಡಗಳ ವಿಷಯದಲ್ಲಿ ಪ್ರೀತಿ ಹುಟ್ಟಿಸುವ ನಿಟ್ಟಿನಲ್ಲಿ ನಾವು ಏನು ಮಾಡುತ್ತಿದ್ದೆವೆ? ಆತ್ಮ ವಿಮರ್ಷೆ ಅಗತ್ಯ.
ಸಿದ್ರಾಮು ಸರ್ಕಾರ, ಬಣಜಿ ಮರವೆಂಬ ದೈತ್ಯ ಮರಗಳನ್ನು ಕಡಿಯಲು ಇದ್ದ ಅಡ್ಡಿಗಳನ್ನು ನಿವಾರಿಸಿ ಕತ್ತರಿಸಿಕೊಳ್ಳಿ ಎಂದಿತು. ಟಿಂಬರ್ ಮರ್ಚಂಟುಗಳಿಗೆ ಹಬ್ಬ,ನೂರಾರು ವರ್ಷಗಳ ಪುರಾತನ ಮರಗಳನ್ನು ಕತ್ತರಿಸಿ ತಿಂದು ತೇಗಿದರು ಜೊತೆಗೆ ಯಾವುದಕ್ಕೂ ಇರಲಿ ಅಂತ ಅಕ್ಕಪಕ್ಕ ಸಿಕ್ಕವನ್ನೂ.ಕತ್ತರಿಸಿದ ಜಾಗದಲ್ಲಿ ಸಸಿ ನೆಡಬೇಕು ಎಂಬ ಕಾನೂನು ಮಾತ್ರ ಯಾವ ಮೂರ್ಖ ಸರ್ಕಾರವೂ ಮಾಡುವುದಿಲ್ಲ. ಮರಗಳಿಗೂ ಆಜಾದಿ ಬೇಕಿದೆ
When Hindutva brigade talk about parampare they’re myopic and have only Hindu traditions in mind. But Islam has been in India for over 1400 years now. Islamic traditions are deeply engrained in india’s history and culture. Love and care for environment is very much part of Islam. That’s why Islam doesn’t pollute air and kill forests by burning the deceased. If Hindutva brigade cares for environment they should immediately junk funeral pyre.
Hey Prophet’s molly, when population of a country is more than a certain number, naturally the number of deaths in such a population will be more. The rate of decomposition of these dead bodies is far slower than the number of deaths. Soon, there wouldn’t be enough space to bury such bodies. Hence the practice of cremating the dead. Never mind the practice of Islam and care for nature. Have you ever seen the difference in green cover among countries in the Middle-east? There is a striking difference between Israel and the rest of the surrounding Moslem countries. Anyway, logical argument is never your forte. And of course, where do you live, in the Saudi Desert, or under a rock, perhaps? Have you ever heard of an electrical crematorium?
ನಿಲುಮೆಗೆ ಈ ಮುಲಾಂ ಬಾವನ ಕಮೆಂಟುಗಳಿಂದ ಆಜಾದಿ ಬೇಕಿದೆ. ಈ ಮುಲಾಮ್ ಧಾಟಿಯಲ್ಲೆ ಉತ್ತರಿಸುವ ವಿಟಿಯನ್ ಅವರ ಕೆಟ್ಟ ಅಭಿರುಚಿಯಿಂದೊಡಗೂಡಿರುವ ಕಮೆಂಟಿನಿಂದಲೂ ಆಜಾದಿ ಬೇಕಿದೆ.
ಲಾಲ್ ಸಲಾಂ
Hindutva brigade should convert to Judaism if they think Jewish traditions are responsible for Israel’s green cover. And Hampiholi’s mongrels should be castrated to prevent rabies.
Look at Uttarakhand. The greed of Hindu religious tour industry has resulted in Kedarnath disaster and now in forest fires. Yet Hindutva brigade closes its eyes.
The oil from Islamic countries polluting the whole world salam sabi. It is very much unislamic.
Oh,by the way,if you do not Dafan on the same day,Satan will take the place in Jannat!!.
The torture,these ultasಉಲ್ಟಾ ಹೈದರು,give us in hospital for release of bodies even when we are legally bound to refer to post mortem is the height of superstition and utter disregard for the law of the land. Total nonsense.
By the way, cremation is the most effective way of funeral. Some community in Hindus do bury. Best of all the worlds.
ಸಲಾಂ ಸಾಬಿಯೇ, ನಿನ್ನ myopic ವಾದಗಳು ನಿಲ್ಲಲಾರವು. ಹೋಗಿ ಮೈಕಿನಲ್ಲಿ ಕಿರುಚು..
“The oil from Islamic countries polluting the whole world ”
What a hypocrite! Wants all the benefits of petroleum driven modern life but blames Islamic countries for pollution! Hampiholi’s mongrels don’t even know that Russia, Latin American countries and USA are also major producers are of petroleum. Are they Islamic countries? Or is only the petroleum produced by Islamic countries that pollutes? Hypocrite Hindutva brigade should first recall Hindus who are working in Islamic countries back to india.
“You have come to our country, and begged for a place. Your ancestors converted some of our brothers by either force, temptation or at knife point.”
Standard lies peddled by underdeveloped Hindutva dolts. Hindutva brigade doesn’t know the history of India, they know only Ramayana and Mahabharata. Original inhabitants of Indian subcontinent are Dasyus. The Dalits and tribals of today are the only legitimate lineage of these original inhabitants. India truly belongs to Dalits. Brahmins, Kshatriyas and Vaishyas were outsiders who imposed Hindutva on the original inhabitants and usurped power. The tyranny of Hindutva was opposed by Islam. Most Muslims of india are originally Dalits who embraced Islam to escape the tyranny of Hindutva. Sufi saints played an important role here. Dalits were given equal status for the first time in india by Islam.
ಮುಲಾಂ ಬಾವನಿಗೆ ಹಸುವಿನ ಬಗ್ಗೆ ಬರೆಯಲು ಬರುತಿತ್ತು.ಒಮ್ಮೆ ಅವನಲ್ಲಿ ಏರೋಪ್ಲೇನ್ ಬಗ್ಗೆ ಬರೆಯಲು ಕೇಳಲಾಯಿತು. ಮುಲಾಂ ಬರೆಯಲು ಶುರು ಮಾಡಿದ.
ಏರೋಪ್ಲೇನ್ ಆಕಾಶದಲ್ಲಿ ಎತ್ತರ ಹಾರುತ್ತದೆ.ಎಷ್ಟು ಎತ್ತರವೆಂದರೆ ಮನೆಯ ಮುಂದಿರುವ ದೊಡ್ಡ ಮರದಷ್ಟು ಎತ್ತರ.ಆ ಮರಕ್ಕೆ ಹಸುವನ್ನು ಕಟ್ಟಿರುತ್ತೇವೆ.ಹಸು ಸಾಕು ಪ್ರಾಣಿ. ಇತ್ತೀಚೆಗೆ ರಾಜಕೀಯ ಕಾರಣಗಳಿಗಾಗಿ ನಾವು ಹಸು ತಿನ್ನುತ್ತೇವೆ.ಹಸು… ತ್ತದೆ… ಹೀಗೆ ಏರೋಪ್ಲೇನಿಂದ ಇಳಿದ ಮುಲಾಮು ಹಸುವಿನ ಬಗ್ಗೆಯೇ ಬರೆಯುತ್ತದೆ.
ಈ ಸಾಹೇಬರಾದರೋ ಅದೇ ಧಾಟಿಯವರಾಗಿದ್ದಾರೆ.ಯಾವುದೇ ಲೇಖನ ಕೊಟ್ಟರು ಹಿಂದುತ್ವ ಎನ್ನುತ್ತಾರೆ.
ನಮಗೆ ಆಜಾದಿ ಬೇಕಿದೆ
Aha
Outdated theory mate. Grow up. Doesn’t cut a thing.
Muslims use force,fear and sword. Well recognised. Sufis were not saints either. Bahamani history has blood on Sufis hands.
Islam is written in blood. Don’t preach Nehru!/Romila Thapar written history here.
“ನಮಗೆ ಆಜಾದಿ ಬೇಕಿದೆ”
Yes, freedom from Manuvad, freedom from Superstitions, freedom from social hegemony, freedom from capitalism, freedom from untouchability, freedom from Sati burning, freedom from inequalities, freedom from bigots.
ಲೋ ಸಾಬಿಯೇ,ನಿನಗೆ ಮಾನ ಮರ್ಯಾದೆ ಇದೆಯಾ? ಮನುವಾದ ಒಂದು ಸಾರಿ ಪೂರ್ಣ ಓದಿನೋಡು.ಯಾರೋ ಹೇಳಿದ್ದು ಕೇಳಿ ಕಟುಕರ ಮನೆ ಗಿಳಿ ತರ ಒದರಬೇಡ. ಸ್ಮೃತಿಗಳನ್ನು ವ್ಖ್ಯಾನಿಸುವುದು ಕುರಾನ್ ಓದಿ ಜಿಹಾದ್ ಮಾಡಿದಹಂಗಲ್ಲ.
Hypocrite: ನೀನು ಮತ್ತು ನಿನ್ನ ಶನಿ ಸಂತಾನಗಳಾದ ಧರ್ಮಾಂಧ ಮುಸ್ಲಿಮರು (ಕಲಾಂ,ಬಿಸ್ಮಿಲ್ಲಾ ಖಾನ್,ಜಾಕಿರ್ ಹುಸೇನ್,ನಿಸಾರ್ ಅಹಮದ್ ಅಂತಹವರನ್ನು ಹೊರತು ಪಡಿಸಿ) ಬದುಕಲು ಬಹುಸಂಖ್ಯಾತ ಹಿಂದೂ ದೇಶ ಆರಿಸಿಕೊಂಡು,ಅವರಿಗೇ ಬತ್ತಿ ಇಡುವ ನೀನು/ನೀವು hypocrites. ಎಲ್ಲಾ ಸವಲತ್ತು ಬೇಕು,ಸುರಕ್ಷತೆ ಬೇಕು. ಮಾತು ಮಾತ್ರಾ ವಿಷ.
ಮದರಸಾದದಲ್ಲಿ ಧರ್ಮಾಂಧತೆಯ ಮದಿರೆ ಕುಡಿದರ ಇನ್ನೇನಾಗುತ್ತೆ. ಹೋಗು ಪಾಕಿಸ್ತಾನ, ಬಾಂಗ್ಲಾ ದೇಶ,ಸಿರಿಯಾ ಇರಾಕು ನಿನ್ನ ಕೈಬೀಸಿ ಕರೀತಿದವೆ.ನಿನಗೂ ಕೆರೀತಿದೆ ರಕ್ತ ಪಿಪಾಸೆ.ನಿಮ್ಮ ಸಂತತಿಯೇ ರಕ್ತ ಪಿಪಾಸು ತಾನೇ. ಹಲಾಲು ಹೆಸರಿನಲ್ಲಿ ಹೇಲು ತಿನ್ನುವ ಕೆಲಸ ಮಾಡುವ ನಿನ್ನಂಥ ನಿಷ್ಪರಯೋಜಕರಿಂದ ಇನ್ನೇನು ತಾನೇ ನಿರೀಕ್ಷಿಸಲಾದೀತು. ನಮಕ್ ಹರಾಮುಗಳು.ಉಂಡ ದೇಶಕ್ಕೆರೆಡು ಬಗೆದ ದ್ರೋಹಿಗಳು. ಕಾಶ್ಮೀರಿ ಪಂಡಿತರ ಮಾರಣಹೋಮ ಮಾಡಿದ ಪಾತಕಿಗಳು. ಹೊಡಿ ಬಡಿ ಕೊಲ್ಲು,ದೋಚು,ಬಾಚು,ಅತ್ಯಾಚಾರ ಮಾಎಉ ಇವೇ ನಿಮ್ಮ ಮಂತ್ರ. ದಿನಕ್ಕೆ ೫ ಸಾರಿ ಕಿರುಚುವ ಕಾಗೆಗಳು. ಕಾಗೆಗಳಂತೆ ಬಳಗ ಕರೆಯುವುದು ಮಾತ್ರ ಮಾಡ್ತೀರ. ದೇಶ ಎಕ್ಕುಟ್ಟಿಸಿ ಪಿಂಡ ತಿಂತೀರ
ಸುದರ್ಶನ ಅವರ ಮುಲಾಂ ಬಾವ ರೀತಿಯ ಕಮೆಂಟುಗಳಿಂದಲೂ ಆಜಾದಿ ಬೇಕಿದೆ
ಮುಲಾಮ ಬಾಬಾ ,ನಾಗಶೆಟ್ಟಿಯಂತಹ ಎಕ್ಕುಟ್ಟಿಹೋದ ಜನ ಇರುವ ವರೆಗೆ”ಜಂಗ್ ರಹೇಗಿ”
Yeah and Finally, Freedom from Salam Bava’s nonsense comments
Sorry what’s nonsense in countering right wing Hindutva ideology? When Hindutva dolts attack you just because you’re not an upper caste Hindu, do you fight back or not?
But ru HINDU?
Comrade, don’t put your words into my mouth by misinterpreting what I said. Go back read all my comments in the context in which they were made. There’s nothing nonsensical about them. This forum is plagued by Hindutva dolts who attack anyone who expresses an opinion different from their own. Their foul racist abusive language will make Godess Saraswati proud.
ಮುಲಾಮ ಬಾಬಾ ,ನಾಗಶೆಟ್ಟಿಯಂತಹ ಎಕ್ಕುಟ್ಟಿಹೋದ ಜನ ಇರುವ ವರೆಗೆ”ಜಂಗ್ ರಹೇಗಿ”
Salaam Bava’s spine shuddered at this question
Oh ,yes claiming universal brothelhood in the name religion ,jihad is very sensible. Get a life you moron
Shoo..
“ಮನುವಾದ ಒಂದು ಸಾರಿ ಪೂರ್ಣ ಓದಿನೋಡು.”
No need to read unwritten constitution called Manu Smriti which has put crores of Indians in chains for thousands of years. India since independence has a constitution written by Babasaheb Ambedkar. Babasaheb’s constitution is liberating whereas Manu Smriti is enslaving. Let’s all read the Indian constitution and take pledge to follow it in spirit and action.
” ಜನ್ಮಕ್ಕೆ ನಾಚಿಕೆ ಆಗ್ಬೇಕು”
Those like you who support Manuvad, oppression of women, practice casteism, spread hatred of other religions, believe that India is only for Hindus – you should be ashamed of yourself. You’re anti constitution, anti democracy, anti humanism, anti secularism, anti justice. Is such life of yours worth living?
ಹುಲು ಮಾನವರಾದ ನಾವುಗಳೂ ಕೂಡ ಆ ಮರದಂತೆಯೇ ನೆಲಕಚ್ಚುತ್ತೇವೆ ಎನ್ನುವುದನ್ನು ಸದಾ ಕಾಲ ನೆನಪಿಸಿಕೊಳ್ಳುತ್ತಿರಬೇಕು. ಹಾಗೆಯೇ ಒಂದು ಮರ ಬಿದ್ದ ತಕ್ಷಣ, ಅಲ್ಲೇ ಇನ್ನೊಂದು ಸಸಿಯನ್ನು ನೆಡುವುದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಮರವಿಲ್ಲವೆಂದರೆ ನಾವೂ ಇಲ್ಲ ಎನ್ನುವ ಕಟುಸತ್ಯವನ್ನು ಅನುಗಾಲವೂ ನಾವು ಚಿಂತಿಸಬೇಕು.