ವಿಷಯದ ವಿವರಗಳಿಗೆ ದಾಟಿರಿ

ಮೇ 6, 2016

15

ಸೈಕಲ್ಲೇರಿದ ನಲ್ಲ, ದಾಟಿದ ಸಾವಿರ ಮೈಲಿಗಲ್ಲ!

‍ನಿಲುಮೆ ಮೂಲಕ

– ರಾಘವೇಂದ್ರ ಸುಬ್ರಹ್ಮಣ್ಯ

12316585_929706350454452_2022226888221524595_nಒಬ್ಬ ಬಡ ಹುಡುಗ, ಒಂದು ದಿನ ಒಬ್ಬ ಶ್ರೀಮಂತ ಹುಡುಗಿಯನ್ನ ಭೇಟಿಯಾದ. ಇಬ್ಬರಲ್ಲೂ ಪ್ರೇಮಾಂಕುರವಾಯ್ತು. ಹುಡುಗಿ ವಾಪಾಸು ತನ್ನ ದೇಶಕ್ಕೆ ಹೊರಟುಹೋದಳು. ಹುಡುಗ ‘ನನ್ನ ಪ್ರೀತಿಯನ್ನ ಸಾಯೋಕೆ ಬಿಡಲ್ಲ. ಬರ್ತೀನಿ. ಒಂದಲ್ಲಾ ಒಂದು ದಿನ ನಿನ್ನ ಭೇಟಿಯಾಗುತ್ತೇನೆ’ ಅಂತಾ ಆಕೆಗೂ, ಆಕೆಯ ಜೊತೆಗೆ ತನಗೆ ತಾನೇ ಮಾತುಕೊಟ್ಕೊಂಡ. ಆದರೆ ಅವಳಿದ್ದಲ್ಲಿಗೆ ಹೋಗೋಣ ಅಂದ್ರೆ ಇವನ ಹತ್ರ ದುಡ್ಡಿಲ್ಲ. ಬೆಳಾಗಾದ್ರೆ ‘ಇವತ್ತು ಸಾಯಂಕಾಲ ಊಟಕ್ಕೆ ಏನು?’ ಅನ್ನುವಷ್ಟು  ಬಡತನ. ಆದರೆ ಕಮಿಟ್ಮೆಂಟ್ ಕೊಟ್ಟಾಗಿದೆ. ಒಂದಿನ ಆ ಹುಡುಗ ‘ಇನ್ನು ಸುಮ್ನಿದ್ರೆ ಆಗಲ್ಲ. ಶುರು ಮಾಡೇಬಿಡೋಣ’ ಅಂತಾ ಹೇಳ್ಕಂಡು ಒಂದು ಸೈಕಲ್ ತಗಂಡು ಈ ಹುಡುಗಿಯನ್ನು ಭೇಟಿಯಾಗೋಕೆ ಹೊರಟೇ ಬಿಡ್ತಾನೆ. ಎಷ್ಟೂ ದೂರ ಸೈಕಲ್ ಹೊಡೆದ ಅಂತೀರಾ? ನೂರಲ್ಲ, ಐನೂರಲ್ಲ, ಸಾವಿರವೂ ಅಲ್ಲ. ಬರೋಬ್ಬರಿ 9350 ಕಿಲೋಮೀಟರ್ ದೂರ!! ಪ್ರೀತಿಯ ಆಳದ ಮುಂದೆ ಈ ದೂರ ಯಾವ ಲೆಕ್ಕ ಬಿಡ್ರೀ!

ಇಲ್ಲ ಇಲ್ಲ. ಈ ಸಲ ಸೆಪ್ಟೆಂಬರಿಗೆ ರಿಲೀಸ್ ಆಗ್ತಾ ಇರೋ ಯಾವುದೋ ಹಿಂದೀ ಸಿನಿಮಾದ ಕಥೆಯಲ್ಲ ಇದು. ಸಿನಿಮಾ ಕಥೆಯಾಗುವ ಎಲ್ಲಾ ಲಕ್ಷಣಗಳೂ ಇದಕ್ಕಿದೆ ಹೌದು. ಆದರೆ, ಅದೃಷ್ಟವಶಾತ್ ಅಲ್ಲ. ಇದು ಡಾ||ಪ್ರದ್ಯುಮ್ನ ಕುಮಾರ್ ಮಹಾನಂದಿಯಾ ಎಂಬಾ ಭರತಪುತ್ರನೂ ಮತ್ತು ಶಾರ್ಲೆಟ್ ವೋನ್ ಸ್ಕೆಡ್ವಿನ್ ಸ್ವೀಡೀಶ್ ಪುತ್ರಿಯದೂ ಪ್ರೇಮಕಥೆ. ಹೌದು ನಮ್ ಹುಡ್ಗ 9350 ಕಿಮೀ ಸೈಕಲ್ ಹೊಡೆದದ್ದು ಭಾರತದ ದೆಹಲಿಯಿಂದ ಸ್ವೀಡನ್ನಿನ ಗೊತೆನ್ಬರ್ಗಿಗೆ! ಅಪಾರ ಪ್ರೀತಿ, ನಾಟಕೀಯ ತಿರುವುಗಳನ್ನೊಳಗೊಂಡ ಈ ಭಾವುಕ ಕಥಾಹಂದರ ಪೂರ್ತಿ 100% ಬಾಲಿವುಡ್ಡಿನ ಕಥೆಯೇ ಸರಿ. ನಮ್ ಪಿಕೆ, (ಹೂಂ ರೀ! ಪ್ರದ್ಯುಮ್ನ ಕುಮಾರನನ್ನ ಶಾರ್ಲೆಟ್ ಪ್ರೀತಿಯಿಂದ ಪಿಕೆ ಅಂತಲೇ ಕರೆಯೋದು)  ಈ ಪ್ರಣಯ ಮಹಾಕಾವ್ಯದ ಮೂಲಕ ನಿಜವಾದ ಪ್ರೀತಿಗೆ ಯಾವ ಸೀಮಾರೇಖೆಗಳೂ ಅಡ್ಡಿಪಡಿಸುವುದಿಲ್ಲವೆಂದು ನಿರೂಪಿಸಿಯೇ ಬಿಟ್ರು ನೋಡಿ.

ಪಿಕೆಯ ಜೀವನವೂ ಈ ಕಥೆಯಂತೆಯೇ ಸಖತ್ ಇಂಟರೆಸ್ಟಿಂಗ್. 1949ರಂದು ಒರಿಸ್ಸಾದ ಧೇನ್ಕನಾಲ್ ಜಿಲ್ಲೆಯ ಕಂಧಪಾಡ ಎಂಬ ಸಣ್ಣ ಊರಿನಲ್ಲಿ, ಬಡ ನೇಕಾರರ ಕುಟುಂಬವೊಂದರಲ್ಲಿ ಜನಿಸಿದ ಪ್ರದ್ಯುಮ್ನ ಚಿಕ್ಕಂದಿನಲ್ಲಿ ಅಸ್ಪೃಶ್ಯತೆಯ ಕಿಚ್ಚಿನಲ್ಲಿ ಬೆಂದವ. ಆದರೆ ಲಕ್ಶ್ಮಿಗೆ ಇದ್ದಂತೆ ಸರಸ್ವತಿಗೆ ಅಸ್ಪೃಷ್ಯತೆ ಇಲ್ಲ ನೋಡಿ. ಪ್ರದ್ಯುಮ್ನನಿಗೆ ಚಿತ್ರಕಲೆ ಅನ್ನೋದನ್ನ ಎರಡೂ ಕೈಗಳಲ್ಲಿ ಬಾಚಿ ಕೊಟ್ಟಿದಳು. ಆದರೆ ಲಕ್ಷ್ಮಿಯ ಕೃಪೆ ಇಲ್ಲದೇ ಈತನ ಕಲೆ ಬಹಳಷ್ಟು ಕಾಲದವರೆಗೆ ಸುಪ್ತವಾಗಿಯೇ ಉಳಿಯಿತು. ಊರಿನ ಜನರೂ ‘ಚಿತ್ರ ಬರೆದು ಏನ್ಮಾಡ್ತೀಯಾ. ಅಪ್ಪನ ಮಗ್ಗ ಕೆಲ್ಸ ಕಲ್ತುಕೋ’ ಅಂತಾ ಸ್ವಾಟೆ ತಿವಿದಿದ್ರು. ಆದರೆ ಸ್ವತಃ ಪ್ರದ್ಯುಮ್ನನ ಅಪ್ಪನಿಗೂ ತನ್ನ ಮಗ ಮಗ್ಗದಡಿ ಬೇಯೋದು ಇಷ್ಟವಿರಲಿಲ್ಲ. ಬಂಗಾಳದ ವಿಶ್ವ-ಭಾರತಿ ಕಲಾಶಾಲೆಗೆ ಸೀಟು ದೊರೆತಿದ್ದರೂ ಸಹ, ತಿಂಗಳ ಫೀಸು ಕಟ್ಟಲು ಹಣವಿರದೆ, ಪ್ರದ್ಯುಮ್ನ ಮೂರೇ ತಿಂಗಳಲ್ಲಿ ಮನೆಗೆ ಮರಳಿ, ಅಲ್ಲೇ ಹತ್ತಿರದ ಖಲ್ಲಿಕೋಟೆಯ ಕಲಾ ಕಾಲೇಜಿಗೆ ಸೇರಿದ. ಆದರೂ ಕಲೆಯ ಹಸಿವು ಪೂರ್ತಿ ಇಂಗದೆ, ಹೆಂಗೆಂಗೋ ಮಾಡಿ ಪ್ರದ್ಯುಮ್ನ 1971ರಲ್ಲಿ ದೆಹಲಿಯ ಕಾಲೇಜ್ ಆಫ್ ಆರ್ಟ್ಸ್’ಗೆ ಸೇರಿಯೇಬಿಟ್ಟ. ಸೇರಿದ ಕೆಲವೇ ದಿನಗಳಲ್ಲಿ ಇಂದಿರಾಗಾಂಧಿಯ ಚಿತ್ರವೊಂದನ್ನು ಬಿಡಿಸಿದ ಪ್ರದ್ಯುಮ್ನ ರಾತ್ರೋ ರಾತ್ರಿ ಪ್ರಸಿದ್ಧಿಹೊಂದಿದ. ಸ್ವತಃ ಇಂದಿರಾ ಇವನ ಬೆನ್ನು ತಟ್ಟಿದ ಮೇಲೆ ‘ಭಾವಚಿತ್ರಗಳನ್ನು ಬರೆಯೋದರಲ್ಲಿ ಪ್ರದ್ಯುಮ್ನನೇ ಇಡೀ ಕಾಲೇಜಿಗೆ ಎತ್ತಿದ ಕೈ’ ಎಂಬ ಪ್ರಖ್ಯಾತಿ ಹಬ್ಬಿಯಾಯ್ತು. ದೆಹಲಿಯ ‘ಕನ್ನಾಟ್ ಪ್ಲೇಸ್’ನ ಕಾರಂಜಿಯಡಿ ಕೂತು ಚಿತ್ರಬರೆಯಲುಸರ್ಕಾರವೇ ಅವಕಾಶವನ್ನೂ ಮಾಡಿಕೊಟ್ಟಾಯ್ತು.

ಇಂತಿರ್ಪ ದೆಹಲಿಗೆ, 1975ರಲ್ಲಿ ಹತ್ತೊಂಬತ್ತು ವರ್ಷದ ಸ್ವೀಡಿಷ್ ಚೆಲುವೆಯ ಆಗಮನವಾಯ್ತು. ಶಾರ್ಲೆಟ್ ಆಗ ಲಂಡನ್ನಿನಲ್ಲಿ ಸಂಗೀತ ಕಲಿಯುತ್ತಿದ್ದವಳು ಯಾರದ್ದೋ ಮೂಲಕ ಪಿಕೆಯ ಹೆಸರು ಮತ್ತವನ ಕಲಾಪ್ರತಿಭೆಯ ಬಗ್ಗೆ ಕೇಳಿ, ತನ್ನದೊಂದು ಭಾವಚಿತ್ರ ಅವನಬಳಿಗೆ ಬರೆಸಿಕೊಳ್ಳಬೇಕೆಂದು ನಿರ್ಧರಿಸಿದ್ದಳು. ಸ್ನೇಹಿತರೊಂದಿಗೆ ವ್ಯಾನೊಂದನ್ನು ಏರಿ, 22ದಿನಗಳ ಕಾಲ ರಸ್ತೆ ಮೂಲಕ ಪಯಣಿಸಿ, ಲಂಡನ್ನಿನಿಂದ ದೆಹಲಿಗೆ ಬಂದಿಳಿದಳು. ಪಿಕೆಯನ್ನು ಭೇಟಿಯಾಗಿ ತನ್ನದೊಂದು ಚಿತ್ರಬರೆದುಕೊಡೆಂದು ಕೇಳಿಕೊಂಡಳು. ಚಿತ್ರ ಬರೀತಾ ಬರೀತಾ ಇಬ್ಬರಲ್ಲೂ ಪ್ರೇಮಾಂಕುರವಾಯ್ತು. ಪಿಕೆ ಆಕೆಯ ಸೌಂದರ್ಯಕ್ಕೆ ಮನಸೋತ, ಶಾರ್ಲೆಟ್ ನಮ್ಮ ಹುಡುಗನ ಸರಳತೆಗೆ ಇಷ್ಟಪಟ್ಟಳು. ಕಣ್ಮುಚ್ಚಿ ಬಿಡುವುದರಲ್ಲಿ ಪ್ರೀತಿ ಬೇರುಬಿಟ್ಟಾಗಿತ್ತು. ಶಾರ್ಲೆಟ್’ಗೆ ಬರೀ ಎರಡು ವಾರದ ಪ್ರೀತಿಯಲ್ಲಿ ನಂಬಿಕೆಯಿರಲಿಲ್ಲ. ಮದುವೆಯಯಾಗೋಣ ಅಂದಳು. ಪಿಕೆಯೂ ದೂಸರಾ ಮಾತಿಲ್ಲದೇ ಒಪ್ಪಿಯಾಯ್ತು. ಶಾರ್ಲೇಟ್ ‘ಚಾರುಲತಾ’ ಆದ್ಲು. ಮರುದಿನವೇ ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಿತು. ಶಾರ್ಲೇಟ್ ಭಾರತಕ್ಕೆ ಬಂದಿದ್ದೇ ಎರಡು ತಿಂಗಳ ಪ್ಲಾನಿನೊಂದಿಗೆ. ಹೊರಡುವ ಸಮಯ ಬಂತು. ‘ನೀನೂ ಹೊರಡು’ ಅಂತಾ ಪ್ರದ್ಯುಮ್ನನಿಗೆ ಹೇಳಿದಾಗ, ‘ಇಲ್ಲ ಇಲ್ಲ ನಾನು ಈ ಕೋರ್ಸಿಗೆ ಸೇರೋಕೆ ರಕ್ತ ಬಸಿದಿದ್ದೀನಿ. ಇದನ್ನ ಮುಗಿಸದೇ ಬರಲ್ಲ’ ಅಂದ. ಚಾರುಲತಾ ‘ಸರಿ ಹಾಗಾದ್ರೆ, ನಾನು ಸ್ವೀಡನ್ನಿಗೆ ಹೋಗಿ ನಿನಗೆ ವಿಮಾನದ ಟಿಕೆಟ್ ಕಳಿಸ್ತೀನಿ’ ಅಂದ್ರೆ, ‘ಖಂಡಿತಾ ಬೇಡ. ನಾನು ಬರ್ತೀನಿ. ನಿನ್ನ ಭೇಟಿ ಆಗೇ ಆಗ್ತೀನಿ. ಯೋಚಿಸಬೇಡ. ಟಿಕೆಟ್ ಎಲ್ಲಾ ಬ್ಯಾಡ’ ಎಂದು ಹೇಳಿ ಕಳುಹಿಸಿದ. ಆಕೆ ಹೋದನಂತರವೂ ಪತ್ರಗಳ ಮೂಲಕ ಸಂಪರ್ಕ ಇದ್ದೇ ಇತ್ತು.

12360368_929706667121087_60614266376827252_nಬರ್ತೀನಿ ಅಂತಾ ಜೋಶ್’ನಲ್ಲಿ ಮಾತುಕೊಟ್ಟಾಗಿದೆ. ಆದರೆ ಹೆಂಗೆ ಸ್ವೀಡನ್ನಿಗೆ ಹೊಗೋದು?” ಎಂಬ ಪ್ರಶ್ನೆಗೆ ಪಿಕೆಯಲ್ಲಿ ಉತ್ತರವಿರಲಿಲ್ಲ. ಕೋರ್ಸ್ ಮುಗಿದ ಎರಡು ವಾರ ದೆಹಲಿಯಲ್ಲೆಲ್ಲಾ ಓಡಾಡಿ, ಏನೇನು ಕೆಲಸಗಳಿದ್ದವೋ ಅವನ್ನೆಲ್ಲಾ ಪೂರೈಸಿದ. ಇದ್ದಬದ್ದ ಸಾಮಾನುಗಳನ್ನೆಲ್ಲಾ ಮಾರಿ, ಬಂದಹಣದಿಂದ ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ. 1978ರ ಒಂದು ದಿನ ತನ್ನ ಬಣ್ಣ-ಬ್ರಶ್ಶುಗಳ ಚೀಲವನ್ನು ಕ್ಯಾರಿಯರ್ರಿಗೆ ಕಟ್ಟಿ, ಅನೂಹ್ಯವಾದ ಪ್ರಯತ್ನವೊಂದಕ್ಕೆ ‘ಓಂ ಶ್ರೀ’ ಎಂದು ಪ್ರಥಮ ಚರಣ ಬರೆದೇ ಬಿಟ್ಟ. ಸೈಕಲ್ ಏರಿ ವಾಯುವ್ಯ ದಿಕ್ಕಿಗೆ ಹ್ಯಾಂಡಲ್ ತಿರುಗಿಸಿಯೇಬಿಟ್ಟ.

ಗೊತೆನ್ ಬರ್ಗ್ ಅಂದ್ರೆ ಎಲ್ಲಿದೆ ಅಂತಲೂ ಪ್ರದ್ಯುಮ್ನನಿಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಶಾರ್ಲೆಟ್’ಜೊತೆಗಿನ ಮಾತುಕಥೆಯಲ್ಲಿ ಆಕೆ ವ್ಯಾನಿನ ಮೂಲಕ ದೆಹಲಿಗೆ ಹೇಗೆ ಬಂದಿದ್ದಳು ಅಂತಾ ಕೇಳಿ ತಿಳಿದದ್ದಷ್ಟೇ ಗೊತ್ತಿದ್ದದ್ದು. ದೆಹಲಿಯಿಂದ ಅಮೃತಸರ್ ತಲುಪಿದ ಪಿಕೆ ಪಾಕಿಸ್ಥಾನದೊಳಗೆ ಹೇಗೆ ಕಾಲಿಟ್ಟ ಎಂಬುದೂ ಒಂದು ಸಾಹಸಗಾಥೆಯೇ. ಪಾಕಿಸ್ಥಾನ ಬಿಟ್ಟು, ಅಫ್ಘಾನಿಸ್ಥಾನ, ಇರಾನ್, ಟರ್ಕಿ, ಬಲ್ಗೇರಿಯಾ, ಯುಗೋಸ್ಲಾವಿಯಾ, ಆಸ್ಟ್ರಿಯಾ ಮೂಲಕ ಜರ್ಮನಿ ತಲುಪಿದಾಗ, ಯಾರೋ ಅವನಿಗೆ ಲಂಡನ್ ಸ್ವೀಡನ್ ಎರಡೂ ಪೂರ್ವ ಪಶ್ಚಿಮ ಇದ್ದಂಗೆ. ಹಿಂಗಿಂಗೆ ಈ ಕಡೆ ಹೋಗು ಅಂತಾ ದಾರಿ ತೋರಿಸಿದ ಮೇಲೆ, ಡೆನ್ಮಾರ್ಕ್ ಮೂಲಕ ಸೈಕಲ್ ತುಳಿದು ಸ್ವೀಡನ್ನಿನ ಗೊತೆನ್ ಬರ್ಗ್ ತಲುಪಿದ. ಇಡೀ ಪ್ರಯಾಣದಲ್ಲಿ ಸೈಕಲ್ ಹಾಳಾಗಿದ್ದಕ್ಕೂ, ದಿನಗಟ್ಟಲೇ ಅನ್ನವಿಲ್ಲದೇ ಪ್ರಯಾಣಿಸಿದ್ದಕ್ಕೂ ಲೆಕ್ಕವೇ ಇಲ್ಲ. ಆದರೆ ಪ್ರೀತಿ ತುಂಬಿಸಿದ ಆ ಛಲ, ಎಲ್ಲವನ್ನೂ ಸರಿಪಡಿಸಿತ್ತು. ಸೈಕಲ್ ಹಾಳಾದರೂ ಪ್ರೇಮಿಯನ್ನು ಸೇರಲೇಬೇಕೆಂದ ಆ ಮನೋಸ್ಥೈರ್ಯ ಹಾಳಾಗಿರಲಿಲ್ಲ.

12345655_929706907121063_6998001582639072448_nಆಗಿನ್ನೂ ಎಲ್ಲಾ ದೇಶಗಳೂ ಕಟ್ಟುನಿಟ್ಟಾದ ವೀಸಾ ನಿಯಮಗಳನ್ನು ಜಾರಿಗೆ ತಂದಿರಲಿಲ್ಲ. ಇರಾನ್ ಮತ್ತು ಯುಗೋಸ್ಲಾವಿಯಾ ಗಡಿ ಬಿಟ್ಟರೆ  ಪಿಕೆಗೆ ಪ್ರಶ್ನೆ ಕೇಳಿದ್ದು ಡೆನ್ಮಾರ್ಕ್-ಸ್ವೀಡನ್ ಗಡಿಯಲ್ಲಿ. ಅವರಿಗೆ ಈ ಕಥೆಯನ್ನು ನಂಬಲೇ ಸಾಧ್ಯವಿರಲಿಲ್ಲ. ದೇಶಾಂತರ ಪ್ರಯಾಣ ಆಗಿನ ಕಾಲದಲ್ಲಿ, ಭಾರತದ ಕೆಲವೇ ಜನರಿಗೆ ಸಾಧ್ಯ ಎಂಬ ನಂಬಿಕೆಯಿದ್ದ ಇಮಿಗ್ರೇಷನ್ ಅಧಿಕಾರಿಗಳು ಇವನ ಕಥೆ ಕೇಳಿ ನಕ್ಕರು. ಮೊದಲೇ ಕಂದುಬಣ್ಣದ ಭಾರತೀಯ, ಅದಕ್ಕೆ ಸರಿಯಾಗಿ ವಿಮಾನದಲ್ಲೋ ಕಾರಲ್ಲೋ ಬರದೆ ಸೈಕಲ್ಲಲ್ಲಿ ಬಂದಿದ್ದೀನಿ ಅಂತಿದ್ದಾನಲ್ಲಪ್ಪ! ಅಂತಾ ತೆಲೆಕೆಡಿಸಿಕೊಂಡರು. ಕೊನೆಗೆ ಪಿಕೆ ತನ್ನ ಮದುವೆಯ ಕೆಲ ಚಿತ್ರಗಳನ್ನೂ, ಶಾರ್ಲೆಟ್’ನ ಕೆಲ ವರ್ಣಚಿತ್ರಗಳನ್ನೂ ತೋರಿಸಿದ ನಂತರ, ಅವರಿಗೆ ನಂಬದೆ ಬೇರೆ ದಾರಿಯಿರಲಿಲ್ಲ. ಯೂರೋಪಿನ ಕನ್ಯೆಯೊಬ್ಬಳು ಈ ಬಡಕಲು ಭಾರತೀಯನನ್ನು ಮದುವೆಯಾದದ್ದು ಅವರಿಗಿನ್ನೂ ಜೀರ್ಣವಾಗದ ಕಥೆಯಾಗಿತ್ತು. ಕೊನೆಗೂ ಒಳಗೆ ಬಿಟ್ಟು, ಕೋಪನ್ಹೇಗನ್ನಿನಿಂದ 400 ಕಿಮೀ ದೂರದ ಗೊತೆನ್ಬರ್ಗಿಗೆ ದಾರಿತೋರಿಸಿದರು. ಅಂತೂ ಇಂತೂ ನಾಲ್ಕು ತಿಂಗಳು, ಮೂರುವಾರಗಳ ಬೆನ್ನುಮುರಿಯುವ ಸತತ ಪ್ರಯಾಣದ ನಂತರ, ನಮ್ಮ ಪ್ರೇಮಿ ಗೊತೆನ್ಬರ್ಗಿಗೆ ಕಾಲಿಟ್ಟ.

ಬರೋದೇನೋ ಬಂದೆ. ಈ ಹುಡುಗಿ ನನ್ನನ್ನು ಇನ್ನೂ ನೆನಪಿಟ್ಟುಕೊಂಡಿರ್ತಾಳೋ ಇಲ್ವೋ. ನನ್ನನ್ನು ಸ್ವೀಕರಿಸ್ತಾಳೋ ಇಲ್ವೋ ಎಂಬೆಲ್ಲಾ ಸಂದೇಹದ ನಡುವೆ ತೊಳಲಾಡುತ್ತಾ, ಪ್ರದ್ಯುಮ್ನ ಶಾರ್ಲೆಟ್ ಕೊಟ್ಟ ವಿಳಾಸಕ್ಕೆ ಎಡತಾಕಿದರೆ, ಎಲ್ಲಿ ಶಾರ್ಲೆಟ್ ಇಲ್ಲ! ಹುಡುಗನಿಗೆ ದಿಕ್ಕೇ ತೋಚದಂತಾಯ್ತು! ಇಲ್ಲಿಂದ ಮುಂದೆ ಎಲ್ಲಿಗೆ ಹೋಗೋದು ಅಂತಲೂ ಗೊತ್ತಿಲ್ಲದೆ, ಅಲೆಮಾರಿಯಂತೆ ಗೊತೆನ್ ಬರ್ಗಿನ ಬೀದಿ ಅಲೆಯುತ್ತಿದ್ದ ಪ್ರದ್ಯುಮ್ನನನ್ನು ಪೋಲೀಸರು ಹಿಡಿದು ಕೂರಿಸಿದರು. ಇವನ ಕಥೆ ಕೇಳಿದ ಪೋಲೀಸರು, “ಇವನು ಹೇಳ್ತಾ ಇರೋದು ಸುಳ್ಳೋ ನಿಜವೋ ಏನೇ ಆಗ್ಲಿ. ಒಂದೊಳ್ಳೆ ಕಥೆಯಂತೂ ಹೌದು” ಅಂತಾ ಅಂದುಕೊಂಡು ರೇಡಿಯೋದವರನ್ನ ಕರೆಸಿದರು. ಎರಡೇ ದಿನದಲ್ಲಿ ಈ ಕಥೆ ಸ್ವೀಡನಿನ್ನ ತುಂಬೆಲ್ಲಾ ಮನೆಮಾತಾಯ್ತು. ಗೊತೆನ್ಬರ್ಗಿನಿಂದ 65 ಕಿಮೀ ದೂರದ ‘ಬೋರಾಸ್’ ಎಂಬ ಊರಿನಲ್ಲಿ ತನ್ನ ಮನೆಯವರೊಂದಿಗೆ ಇದ್ದ ಶಾರ್ಲೆಟ್, ಕಥೆ ಕೇಳಿದವಳೇ ಕಾರೋಡಿಸಿಕೊಂಡು ಬಂದಳು. ಆಕೆಯ ಸಂತೋಷಕ್ಕೆ ಪಾರವೇ ಇಲ್ಲ! ತಬ್ಬಿಕೊಂಡವಳಿಗೆ ನಂಬಿಕೆಯೇ ಇಲ್ಲ!! ಯಾರು ತಾನೇ ಒಂಬತ್ತುಸಾವಿರ ಚಿಲ್ಲರೆ ಕಿಲೋಮೀಟರ್ ದೂರ ಹುಡುಕಿಕೊಂಡು, ಸೈಕಲ್ ಮೇಲೆ ಬರ್ತಾರೆ ಹೇಳಿ!! ಆಗಿನ ಕಾಲದಲ್ಲಿ ಬಿಳಿಯರಲ್ಲದವರು, ಬಿಳಿಯರೊಂದಿಗೆ ಓಡಾಡುವಂತೆ, ಸಮಾನವಾಗಿ ನಿಲ್ಲುವಂತಿರಲಿಲ್ಲ. ಅದೂ ಅಲ್ಲದೆ ಶಾರ್ಲೆಟ್’ನ ಮನೆತನವೇನೂ ಮಧ್ಯಮವರ್ಗದವರಲ್ಲ. ಸ್ವೀಡನ್ನಿನ್ನ ರಾಜಕುಟುಂಬಕ್ಕೆ ಬಹಳಹತ್ತಿರದ ಹೆಸರುವಾಸಿ ಮನೆತನದವರು. ಎಕರೆಗಟ್ಟಲೇ ಕಾಡು, ಆಸ್ತಿ ಹೊಂದಿದ ಆಗರ್ಭ ಶ್ರೀಮಂತರು. ಆದರೆ ಈ ಕಥೆಯನ್ನು ಕೇಳಿದ ಶಾರ್ಲೆಟ್’ನ ಪೋಷಕರು ಇವರ ಪ್ರೀತಿಗೆ ಸೆಲ್ಯೂಟ್ ಹೊಡೆದು, ತಮ್ಮೆಲ್ಲಾ ಹಮ್ಮಿಬಿಮ್ಮು ಬದಿಗಿಟ್ಟು, ಮನೆಗೆ ಬಂದ ಅಳಿಯನನ್ನು ತುಂಬುಮನಸ್ಸಿನಿಂದ ಸ್ವಾಗತಿಸಿದರು. 1979ರಲ್ಲಿ ಪಿಕೆ-ಶಾರ್ಲೆಟ್ ಇನ್ನೊಮ್ಮೆ ಮದುವೆಯಾದರು. ಅಲ್ಲಿಂದ ಮುಂದೆ ಇಬ್ಬರೂ ಪ್ರೇಮಿಗಳು ಸುಖವಾಗಿ ಬಾಳಿದರು ಎಂಬಲ್ಲಿಗೆ ಕಥೆ ಮುಗಿಯುತ್ತದೆ.

12246645_929706830454404_1133702528538104429_nಈಗಲೂ ಪಿಕೆ ಹಾಗೂ ಶಾರ್ಲೆಟ್, ಸ್ವೀಡನ್ನಿನ ಬೋರಸ್’ನಲ್ಲಿ ಶಾರ್ಲೆಟ್’ನ ಕುಟುಂಬ ವಾಸವಾಗಿದ್ದ ಹಳದಿಬಣ್ಣದ ಕಾಡಿನ ಮಧ್ಯದಲ್ಲಿರುವ, ಮರದ ಮನೆಯಲ್ಲೇ ಇದ್ದಾರೆ. ಶಾರ್ಲೆಟ್ ಈಗಲೂ ಪ್ರದ್ಯುಮ್ನನನ್ನು ಪಿಕೆ ಅಂತಲೇ ಕರೆಯುತ್ತಾಳೆ. ಪಿಕೆ ಆಕೆಯನ್ನು ‘ಲೊಟ್ಟಾ’ ಅಂತಾ ಕರೆಯುತ್ತಾನೆ. ಸಿದ್ಧಾರ್ಥ್ ಮತ್ತು ಎಮಿಲಿ ಎಂಬಿಬ್ಬರು ‘ಆರತಿಗೊಬ್ಬಳು-ಕೀರುತಿಗೊಬ್ಬ’ರೊಂದಿಗೆ ನಾಲ್ಕು ಜನರ ಸಂಸಾರ ನಗುತ್ತಿದೆ. ಪಿಕೆ ತನ್ನ ಕುಂಚಗಳೊಂದಿಗೆ ಆಟವಾಡುತ್ತಿದ್ದಾರೆ. ಶಾರ್ಲೆಟ್ ಈಗಲೂ ಸಂಗೀತ ಕಲಿಸುತ್ತಿದ್ದಾರೆ.  2012ರ ಜನವರಿ ಒರಿಸ್ಸಾದ ಉತ್ಕಲ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಕೊಟ್ಟು ಸನ್ಮಾನಿಸಿದೆ. 40 ವರ್ಷಗಳ ಮದುವೆಯ ನಂತರ ಈಗ ಪ್ರದ್ಯುಮ್ನ ಎಂಬ ಪ್ರೇಮಿ ಹುಡುಗ, ಡಾ|ಪಿ.ಕೆ.ಯಾಗಿದ್ದಾರೆ. ಸ್ವೀಡನ್ನಿಗೆ ಒರಿಸ್ಸಾದ ಸಾಂಸ್ಕೃತಿಕ ರಾಯಭಾರಿ ಎಂದು ಒರಿಸ್ಸಾ ಸರ್ಕಾರ ಹಾಗೂ ಭಾರತ ಸರ್ಕಾರದಿಂದಲೂ ಗುರುತಿಸಲ್ಪಟ್ಟು, ಇಡೀ ಯೂರೋಪಿನಲ್ಲಿ ತಮ್ಮ ಕಲೆಗಾಗಿ ಹೆಸರುಮಾಡಿದ್ದಾರೆ. ಸ್ವೀಡನ್ ಸರ್ಕಾರದ ಕಲೆ ಮತ್ತು ಸಂಸ್ಕೃತಿ ಸಲಹೆಗಾರರಾಗಿ ಕೆಲಸಮಾಡುತ್ತಿದ್ದಾರೆ. ಸ್ವೀಡಿಶ್ ಸರ್ಕಾರ ಇವರ ಪ್ರೇಮಕಥೆಯನ್ನು ಚಲನಚಿತ್ರರೂಪಕ್ಕಿಳಿಸಿದೆ. ಡಾ|ಪಿಕೆಯವರು ರಚಿಸಿದ ವರ್ಣಚಿತ್ರಗಳು ಪ್ರಪಂಚದ ಎಲ್ಲಾ ಮುಖ್ಯ ನಗರಗಳಲ್ಲಿ ಪ್ರದರ್ಶನ ಕಂಡಿವೆ. ಮಾತ್ರವಲ್ಲದೇ UNICEFನ ಗ್ರೀಟಿಂಗ್ ಕಾರ್ಡುಗಳ ರೂಪದಲ್ಲೂ ಅಮರವಾಗಿ ಉಳಿದಿವೆ. ಯಾವ ಹಳ್ಳಿ ಒಂದುಕಾಲದಲ್ಲಿ ಅವರನ್ನು ಅಸ್ಪೃಷ್ಯ ಎಂದು ಜರಿದಿತ್ತೋ, ಅದೇ ಹಳ್ಳಿ ಈಗ ಡಾ|ಪಿಕೆ ಪ್ರತೀಬಾರಿ ಭೇಟಿಕೊಟ್ಟಾಗಲೂ ತಬ್ಬಿ ನಮಸ್ಕರಿಸಿ ಬರಮಾಡಿಕೊಳ್ಳುತ್ತದೆ.

ಸ್ವೀಡಿಷ್ ಲೇಖಕ ಪೆರ್.ಜೆ. ಆಂಡರ್ಸನ್ ಇವರ ಪ್ರೇಮಕಥೆಯನ್ನು ಪುಸ್ತಕ ರೂಪಕ್ಕಿಳಿಸಿದ್ದಾರೆ. ಇದರ ಇಂಗ್ಳೀಷ್ ಭಾಷಾಂತರ  2016ರ ಆಗಸ್ಟ್-ಸೆಪ್ಟೆಂಬರಿನಲ್ಲಿ ಮ್ಯಾಕ್ಮಿಲನ್ ಪಬ್ಲಿಷಿಂಗ್ ಮೂಲಕ ಭಾರತದ ಮಾರುಕಟ್ಟೆಗೆ ಬರಲಿದೆ.  ಮೊನ್ನೆಮೊನ್ನೆಯಷ್ಟೇ ಭಾರತದ ಹೆಸರಾಂತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಪಿಕೆಮಹಾನಂದಿಯಾ ಹಾಗೂ ಶಾರ್ಲೆಟ್’ರ ಕಥೆಯನ್ನು ಚಿತ್ರರೂಪಕ್ಕಿಳಿಸುವ ತಮ್ಮ ಆಸೆಯನ್ನು ಮುಂದಿಟ್ಟಿದ್ದಾರೆ.

ಕೊಸರು: ಸಣ್ಣವನಿದ್ದಾಗ ಪಿಕೆಯ ಹಸ್ತ ನೋಡಿದ ಒಬ್ಬ ಜ್ಯೋತಿಷಿ, “ನೀನು ಈ ಹಳ್ಳಿಯವಳಲ್ಲ, ಈ ಜಿಲ್ಲೆಯವಳಲ್ಲ, ಈ ದೇಶದವಳೇ ಅಲ್ಲ ಹೊರಗಿನ ದೇಶದ ಹುಡುಗಿಯೊಬ್ಬಳನ್ನು ಮದುವೆಯಾಗ್ತೀಯ. ಸಂಗೀತಗಾರ್ತಿಯಾಗಿರ್ತಾಳೆ. ಅವಳದ್ದು ಸ್ವಂತದ್ದೊಂದು ಕಾಡೇ ಇರುತ್ತದೆ….ಹಾಂ ಅವಳು ವೃಷಭರಾಶಿಯವಳಾಗಿರುತ್ತಾಳೆ” ಅಂದಿದ್ದನಂತೆ. ಮಜಾ ಅಂದ್ರೆ ಶಾರ್ಲೆಟ್’ದು ವೃಷಭರಾಶಿ. ಅವರ ಮನೆತನದವರದ್ದು ದೊಡ್ಡ ದೊಡ್ಡ ಎಸ್ಟೇಟುಗಳೇ ಇವೆ. ಶಾರ್ಲೆಟ್ ಇವತ್ತಿಗೂ ಸಂಗೀತ ಕಲಿಸುತ್ತಿದ್ದಾಳೆ. ಶ್……ಪ್ರಗತಿಪರರಿಗೆ ಈ ಜ್ಯೋತಿಷ್ಯದ ಕಥೆ ಹೇಳ್ಬೇಡಿ.

ಈ ಕಥೆಯ ಬಗ್ಗೆ ಹೆಚ್ಚು ತಿಳಿಯುವ ಆಸೆಯಿದ್ದವರಿಗಾಗಿ ಕೆಲ ವಿಡಿಯೋ ಲಿಂಕುಗಳು ಇಲ್ಲಿವೆ:

15 ಟಿಪ್ಪಣಿಗಳು Post a comment
 1. Ravi kashikar
  ಮೇ 6 2016

  Thank you for this wonderful story

  ಉತ್ತರ
 2. ಮೇ 7 2016

  ಭಾವಪೂರ್ಣ ಸವಿವರವಾದ ಬರಹ. ಓದಿ ಖುಷಿಯಾಯಿತು.

  ಉತ್ತರ
 3. Rajkumar.V.Kulkarni
  ಮೇ 7 2016

  ಉತ್ತಮ ಬರಹ. ಪ್ರೀತಿಗೆ ಜಾತಿ, ಭಾಷೆ, ಧರ್ಮ ಮತ್ತು ದೇಶದ ಹಂಗಿಲ್ಲ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ. ಈ ಇಬ್ಬರ ಬದುಕು ಎಲ್ಲರಿಗೂ ಆದರ್ಶವಾಗಲಿ. ಉತ್ತಮ ಲೇಖನವನ್ನು ಓದಲು ಅವಕಾಶಮಾಡಿಕೊಟ್ಟ ಲೇಖಕರಿಗೆ ಧನ್ಯವಾದಗಳು.

  ಉತ್ತರ
 4. Salam Bava
  ಮೇ 7 2016

  Heart warming story no doubt. However I wonder what would have happened if the girl were not a European but an Indian Brahmin or upper caste. Does the Hindutva brigade endorse and encourage love marriages of Dalit boys with upper caste girls? Or Honour killing, assault and murder, threats? Just a few days ago Hindutva brigade hounded a Hindu girl in Mandya for marrying a Muslim whom she loved. Even the two families wanted the wedding to happen but Hindutva brigade saw Love Jihad in it and threatened the two families.

  ಉತ್ತರ
  • ಮೇ 7 2016

   ಲೋ ಸಾಬಿ,
   ಕಬಾಬ್ನಲ್ಲಿ ಕಲ್ಲು ಹುಡುಕಬೇಡ. ಹಂದಿಯ ಕಬಾಬ್ ತಿನ್ನು ಬುದ್ದಿಬರುತ್ತೆ.

   ಉತ್ತರ
  • ಮೇ 7 2016

   Then why did your brothers got her converted you pig. If it was love,then left her alone or the Muslim boy should have got converted to a Hindu. Don’t open your dirty mouth idiotic bigot.

   ಉತ್ತರ
 5. Salam Bava
  ಮೇ 7 2016

  “why did your brothers got her converte”

  She voluntarily converted as she was full of admiration for Islam. Nothing wrong in that.

  ಉತ್ತರ
 6. Salam Bava
  ಮೇ 7 2016

  “ಹಂದಿಯ ಕಬಾಬ್ ತಿನ್ನು ಬುದ್ದಿಬರುತ್ತೆ.”

  Yeah you must have eaten a lot of that shit, it’s quite evident.

  ಉತ್ತರ
 7. ಮೇ 7 2016

  Volunarily!! As if the world doe not know the kind of pressure they put on. Dirty people.

  ಉತ್ತರ
  • Salam Bava
   ಮೇ 8 2016

   Yeah the “dirty” people of London have voluntarily elected Sadiq Khan to the post of Mayor.

   ಉತ್ತರ
   • ಮೇ 8 2016

    Don’t jump. The dirty tactics of Islamic bigots tobforce conversion before marriage is no secret. If it was a gentleman’s love or broadminded marriage, she should have been left to herself or the groom should have converted himself to Hinduism. When that pretext is not there all your claims are dirty ditch water. Go,eat some pig

    ಉತ್ತರ
    • Salam Bava
     ಮೇ 8 2016

     How do you know that Mandya girl was coerced to convert to Islam? Have you verified your claim directly from her?

     Your love for pig clearly says something about your mind. It’s as dirty and wretched as a filthy pig.

     ಉತ್ತರ
 8. ಕಾಮ್ರೇಡ್ ಕನ್ನಯ್ಯ
  ಮೇ 9 2016

  ಮುಲಾಂ ಮಾವನಿಗೆ ಹಸುವಿನ ಬಗ್ಗೆ ಮಾತ್ರ ಬರೆಯಲು ಬರುತಿತ್ತು.ಇಂತಿಪ್ಪ ಮುಲಾಮನಿಗೆ ಚಂದ್ರನ ಬಗ್ಗೆ ಬರೆಯಲು ಕೇಳಲಾಯಿತು.

  ಮುಲಾಮ ಬರೆದ. ಚಂದ್ರ ಪ್ರಕಾಶಮಾನವಾಗಿ ಬೆಳಗುತ್ತಾನೆ.ಹುಣ್ಣಿಮೆಯ ದಿನ ಚಂದ್ರನ ಬೆಳಕು ಭೂಮಿಯ ಮೇಲೆ ಬೀಳುತ್ತದೆ. ಹುಣ್ಣಿಮೆಯ ಬೆಳಕಿನಲ್ಲಿ ನಮ್ಮ ಮನೆಯ ಹಸು ಫಳ ಫಳನೆ ಹೊಳೆಯುತ್ತದೆ.ನಾವು ರಾಜಕೀಯ ಕಾರಣಗಳಿಗಾಗಿ ಹಸು ತಿನ್ನುತ್ತೇವೆ.ಹಸು… ಮಾಡುತ್ತದೆ. ಹಸು…ತ್ತದೆ…

  ಉತ್ತರ
 9. divin
  ಮೇ 10 2016

  thank you.heart touching.while gone through the reading of this article entire scenes coming in front of our eyes like film reels.great job.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments