ರಾಜ್ಯ ಸರ್ಕಾರ ರಾಜ್ಯವನ್ನು ಏನು ಮಾಡಲು ಹೊರಟಿದೆ?
ಎಸ್.ಆರ್. ಅನಿರುದ್ಧ ವಸಿಷ್ಠ, ಭದ್ರಾವತಿ
ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯಲ್ಲಿ ಇನ್ನಿಲ್ಲದ ತಂತ್ರಗಾರಿಕೆ ಮಾಡಿ, ತಮ್ಮ ಪಕ್ಷಕ್ಕೇ ಅಧಿಕಾರ ಬರುವಂತೆ ಮಾಡಿಕೊಂಡಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಈಗ್ಗೆ ಕೆಲವು ತಿಂಗಳ ಹಿಂದೆ ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಜಿಪಂ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿದೆ.ಇದರ ಪರಿಣಾಮ ಈಗ ಅಧ್ಯಕ್ಷರಾಗುವವರಿಗೆ ಮಾಸಿಕ ೩೫ ಸಾವಿರ ವೇತನ, ಆತಿಥ್ಯ ಭತ್ಯೆ ೨ ಲಕ್ಷ, ಮನೆ ಬಾಡಿಗೆಗೆ ಮಾಸಿಕ ೮೦ ಸಾವಿರ, ಮನೆ ನಿರ್ವಹಣೆಗೆ ೨೦ ಸಾವಿರ, ತಿಂಗಳಿಗೆ ೧ ಸಾವಿರ ಲೀಟರ್ ಡೀಸೆಲ್, ರೈಲು ಹಾಗೂ ವಿಮಾನ ಪ್ರಯಾಣ ದರ, ದಿನ ಭತ್ಯೆ ೨ ಸಾವಿರ, ವಸತಿ ಗೃಹ ಭತ್ಯೆ ೫ ವರ್ಷಕ್ಕೆ ೧೦ ಲಕ್ಷ ದೊರೆಯುತ್ತಿದೆ. ಇದರೊಂದಿಗೆ ಅಧ್ಯಕ್ಷರಿಗೆ ಗೂಟದ ಕಾರು, ಚಾಲಕ, ಪೊಲೀಸ್ ಭದ್ರತೆ ಸಹ ಲಭ್ಯವಾಗಲಿದೆ. ಇದು ನೇರವಾಗಿ ಅವರಿಗಾಗಿ ವೆಚ್ಚ ಮಾಡುವ ಲೆಕ್ಕವಾದರೆ, ಪರೋಕ್ಷವಾಗಿ ಇನ್ನು ಲಕ್ಷಗಟ್ಟಲೆ ಇವರಿಗಾಗಿ ಸರ್ಕಾರ ವ್ಯಯ ಮಾಡುತ್ತದೆ.
ಅಲ್ಲ, ರಾಜ್ಯ ಸರ್ಕಾರ ರಾಜ್ಯವನ್ನು ಏನು ಮಾಡಲು ಹೊರಟಿದೆ? ನೀವೇನು ಪ್ರಜಾಸೇವಕರೋ ಇಲ್ಲ ರಾಜ್ಯವನ್ನು ಲೂಟಿ ಮಾಡಲು ನಿಂತವರೋ? ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇವರುಗಳನ್ನೆಲ್ಲಾ ಆಯ್ಕೆ ಮಾಡಲಾಗುತ್ತದೆ. ಹಿಂದೊಮ್ಮೆ ರಾಜಕಾರಣ ಸೇವೆಯಾಗಿತ್ತು. ಪ್ರಜಾಸೇವೆಯೇ ಅಧಿಕಾರದಲ್ಲಿ ಕುಳಿತವರ ಕಾರ್ಯವಾಗಿತ್ತು. ಆದರೆ, ಇಂದು ರಾಜಕಾರಣ ಹಾಗೂ ಸರ್ಕಾರದಲ್ಲಿ ಕೂರುವುದು ವ್ಯವಹಾರಕ್ಕಾಗಿ ಎಂಬಂತೆ ಪರಿಸ್ಥಿತಿ ಬದಲಾಗಿದೆ.ಇಡೀ ಜಿಲ್ಲೆಯನ್ನು ನೋಡಿಕೊಳ್ಳುವ ಜಿಲ್ಲಾಧಿಕಾರಿಗಳ ಅಧಿಕಾರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎನ್ನುವುದಕ್ಕೆ ಸ್ವಾತಂತ್ರ್ಯ ಬಂದ ಆರಂಭದಲ್ಲಿ ಜಿಲ್ಲಾಧಿಕಾರಿಗಳಿಗೆ ಇದ್ದ ಅಧಿಕಾರ ಇಂದು ಇಲ್ಲ ಎನ್ನುವುದು ಸಾಕ್ಷೀಕರಿಸುತ್ತದೆ. ಆದರೆ, ಜನಪ್ರತಿನಿಧಿಗಳ ಅಧಿಕಾರ ಹಾಗೂ ಸವಲತ್ತುಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಿಗೆಯಾಗುತ್ತಲೇ ಇದೆ. ಪ್ರಸ್ತುತ ವಿಚಾರದಲ್ಲಿ ನೋಡುವುದಾದರೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನವೇಕೆ? ನಿಮ್ಮಿಚ್ಚೆಗೆ ಬಂದಂತೆ ನಿರ್ಧಾರಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವೇನು ಸರ್ವಾಧಿಕಾರತ್ವವನ್ನು ಹೊಂದಿದೆಯೇ?
ಜಿಪಂ ಅಧ್ಯಕ್ಷರಿಗೆ ಒಂದು ವೇಳೆ ಮಾಸಿಕ ವೇತನವನ್ನು ಒಪ್ಪಿಕೊಳ್ಳೋಣ ಎಂದುಕೊಂಡರೂ ಭಾರೀ ಪ್ರಮಾಣದ ಭತ್ಯೆ, ಸಾರಿಗೆ ವೆಚ್ಚ, ಪ್ರಯಾಣ ವೆಚ್ಚ, ಮನೆ ಬಾಡಿಗೆ ಬೇಕಾಬಿಟ್ಟಿಯಾಗಿ ನೀಡಿರುವುದು ಯಾವುದೇ ರೀತಿಯಿಂದಲೂ ವೈಜ್ಞಾನಿಕ ಹಾಗೂ ಪ್ರಯೋಗಿಕವಾಗಿಲ್ಲ ಎನ್ನುವುದಂತೂ ಸತ್ಯ. ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ಪ್ರಾಯೋಗಿಕವಲ್ಲದ ಯೋಜನೆಗಳೇ ಹೆಚ್ಚು ಜಾರಿಯಾಗುತ್ತಿದೆ. ಯಾವುದೇ ಸಿದ್ಧಾಂತಗಳೇ ಇಲ್ಲದೇ ಅಧಿಕಾರ ದುರುಪಯೋಗವಾಗುತ್ತಿದೆ. ಇದಕ್ಕೆ ಇದೂ ಒಂದು ತಾಜಾ ಉದಾಹರಣೆ. ಸ್ವಾಮಿ ಸಿದ್ಧರಾಮಯ್ಯನವರೇ ತಮ್ಮದೇನು ಸರ್ವಾಧಿಕಾರತ್ವ ಎಂದುಕೊಂಡಿದ್ದೀರೇ? ಯಾವ ಪುರುಷಾರ್ಥಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆ ಸ್ಥಾನ ನೀಡಿ, ಈ ಭಾರೀ ಪ್ರಮಾಣ ಭತ್ಯೆ ಸವಲತ್ತುಗಳನ್ನು ನೀಡಿದ್ದೀರಿ? ಒಮ್ಮೆ ಇವನ್ನೆಲ್ಲಾ ಜಾರಿಗೊಳಿಸಿದರೆ, ಭವಿಷ್ಯದಲ್ಲಿ ಇನ್ನೂ ಹೆಚ್ಚಿಗೆ ಮಾಡುವುದೇ ಹೊರತು ಕಡಿಮೆ ಮಾಡಲು ಸಾಧ್ಯವಿಲ್ಲ. ಇದರಿಂದ ಸಾರ್ವಜನಿಕರ ತೆರಿಗೆ ಹಣ ಎಷ್ಟರ ಮಟ್ಟಿಗೆ ಪೋಲಾಗುತ್ತದೆ ಎನ್ನುವು ಕನಿಷ್ಠ ಅರಿವು ನಿಮಗಿಲ್ಲ ಎಂದರೆ ನಾಚಿಕೆಯಾಗಬೇಕು ನಿಮ್ಮ ಸರ್ಕಾರಕ್ಕೆ.
ಜಿಪಂ ಅಧ್ಯಕ್ಷರಿಗೆ ಬೇಕಾಬಿಟ್ಟಿಯಾಗಿ ವೇತನ, ಭತ್ಯೆಗಳನ್ನು ನೀಡಿರುವ ಸರ್ಕಾರ, ಅದೇ ಪ್ರಮಾಣದಲ್ಲಿ ಅಭಿವೃದ್ಧಿಯ ಮಾರ್ಗಸೂಚಿಯನ್ನು ನೀಡಬೇಕಿತ್ತು. ಸಾರ್ವಜನಿಕರ ತೆರಿಗೆ ಹಣದಿಂದ ಹೆಚ್ಚಿನ ವೇತನ ಹಾಗೂ ಸವಲತ್ತುಗಳನ್ನು ಪಡೆಯಬೇಕು ಎಂದಾದ ಮೇಲೆ, ಅದೇ ಸಾರ್ವಜನಿಕರಿಗಾಗಿ ಇಂತಿಷ್ಟೇ ಅಭಿವೃದ್ಧಿ ಕಾರ್ಯಗಳು ಆಗಬೇಕು. ದಿನಕ್ಕೆ ಇಂತಿಷ್ಟು ಗಂಟೆ ಕೆಲಸ ಮಾಡಬೇಕು. ಇಂತಹ ಯೋಜನೆಗಳು ನಿಗದಿತ ಅವಧಿಯಲ್ಲಿ, ಗುಣಮಟ್ಟದಿಂದ ಕೂಡಿದಂತೆ ಮುಕ್ತಾಯವಾಗಬೇಕು ಎನ್ನುವ ಅಂಶಗಳೊಂದಿಗೆ ಮಾಸಿಕ ಪ್ರಗತಿಯ ವರದಿಯನ್ನು ಸಲ್ಲಿಸಬೇಕು ಎನ್ನುವ ಕರ್ತವ್ಯಗಳನ್ನೂ ಹೇರಬೇಕು ಎನ್ನುವ ಕನಿಷ್ಠ ಜ್ಞಾನವಿಲ್ಲವೆಂದಾದರೆ ನಿಮ್ಮನ್ನು ಪ್ರಜಾಸೇವಕರೆಂದು, ದೂರದೃಷ್ಟಿ ಉಳ್ಳವರೆಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ಉತ್ತರದಾಯಿ ಪ್ರಶ್ನೆಗಳಿವು:
೧. ಸಾಮಾನ್ಯವಾಗಿ ಜಿಪಂ ಅಧ್ಯಕ್ಷರು ಜಿಲ್ಲಾ ಕೇಂದ್ರದಲ್ಲಿ ನಿವಾಸ ಹೊಂದಿರುತ್ತಾರೆ. ಹೀಗಿದ್ದಾಗೂ ಅವರಿಗೆ ಮಾಸಿಕ ೮೦ ಸಾವಿರ ಮನೆ ಬಾಡಿಗೆಯೇಕೆ?
೨. ಬೆಂಗಳೂರಿನಂತಹ ನಗರದಲ್ಲಿ ನಾಲ್ಕು ರೂಂ ಮನೆ ಪಡೆದರೂ ೩೦ ಸಾವಿರ ಮನೆ ಬಾಡಿಗೆ ದಾಟುವುದಿಲ್ಲ. ಹೀಗಿದ್ದಾಗ ಜಿಲ್ಲಾ ಕೇಂದ್ರದಲ್ಲಿ ಮಾಸಿಕ ಮನೆ ಬಾಡಿಗೆಗೆ ೮೦ ಸಾವಿರ ಯಾವ ಆಧಾರದಲ್ಲಿ ನೀಡುತ್ತೀರಿ?
೩. ೩೦ ಜಿಲ್ಲೆಗಳ ಭೌಗೋಳಿಕ ವಿಸ್ತೀರ್ಣ, ಅಲ್ಲಿನ ಪರಿಸ್ಥಿತಿಗಳು ಸಮನಾಗಿಲ್ಲ. ಹೀಗಿದ್ದಾಗ ಎಲ್ಲ ಜಿಲ್ಲೆಗಳಿಗೂ ಒಂದೇ ರೀತಿಯಲ್ಲಿ ಹೇಗೆ ಬಾಡಿಗೆ ನಿಗದಿ ಪಡಿಸಿದ್ದೀರಿ?
೪. ಸಚಿವರು ಸಾಮಾನ್ಯವಾಗಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಾರೆ. ಆದರೆ ಜಿಲ್ಲೆಯಲ್ಲಿ ಮಾತ್ರ ಅಧಿಕಾರ ವ್ಯಾಪ್ತಿ ಹೊಂದಿರುವ ಜಿಪಂ ಅಧ್ಯಕ್ಷರಿಗೆ ಮಾಸಿಕ ೨ ಲಕ್ಷ ಆತಿಥ್ಯ ಭತ್ಯೆ ಏಕೆ?
೫. ಪ್ರಯಾಣ ದರ ಕಿಮೀಗೆ ೩೦ ರೂ. ನೀಡಲಾಗುತ್ತದೆ. ಅಂದರೆ ಜಿಲ್ಲಾ ಕೇಂದ್ರದಿಂದ ೨೦ ಕಿಮೀ ದೂರದ ಊರಿಗೆ ಹೋಗಿ ಬಂದರೆ ಹೋಗುವುದು ಹಾಗೂ ಬರುವುದು ೪೦ ಕಿಮೀ ಆಯಿತು. ಇಲ್ಲಿ, ಕಿಮೀಗೆ ೩೦ ನಂತೆ ಲೆಕ್ಕಾ ಹಾಕಿದರೆ ೪೦ ಕಿಮೀಗೆ ೧೨೦೦ ರೂ. ಆಯಿತು. ಕೇವಲ ೪೦ ಕಿಮೀ ಹೋಗಿ ಬರಲು ೧೨೦೦ ರೂ. ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡುವುದಾದರೆ ಅಂತಹ ವ್ಯವಸ್ಥೆಯಿಂದ ಅಭಿವೃದ್ಧಿ ನಿರೀಕ್ಷಿಸಲು ಹೇಗೆ ಸಾಧ್ಯ?
೬. ಇಷ್ಟೆಲ್ಲಾ ನೀಡಿದ ಮೇಲೂ ಮನೆ ನಿರ್ವಹಣೆಗೆ ೨೦ ಸಾವಿರ, ಖಾಸಗಿ ಮನೆಯಿದ್ದರೆ ಗರಿಷ್ಠ ೧ ಲಕ್ಷ ನೀಡುವುದೇಕೆ? ಅವರ ಜೀವನ ನಿರ್ವಹಣೆಗೆ ಮಾಸಿಕ ವೇತನ ನೀಡಿದ ಮೇಲೆ ಅವರ ಮನೆ ನಿರ್ವಹಣೆ ಅವರ ಖಾಸಗೀ ವಿಚಾರ. ಹಾಗಿದ್ದಾರೆ ಅದಕ್ಕೆ ಸಾರ್ವಜನಿಕರ ಹಣವನ್ನೇಕೆ ನೀಡಬೇಕು?
೭. ಇಷ್ಟೆಲ್ಲಾ ಸವಲತ್ತುಗಳನ್ನು ನೀಡಿದ ಮೇಲೆ ಅವರಿಗೆ ಸಾರ್ವಜನಿಕರ ಸೇವೆಗೆ ಗುರಿಯನ್ನು ನಿಗದಿಪಡಿಸಬೇಡವೇ? ಸಾರ್ವಜನಿಕರಿಗೆ ಇವರು ಯಾವ ಯಾವ ವಿಚಾರಕ್ಕೆ ಉತ್ತರದಾಯಿಯಾಗುತ್ತಾರೆ ಎನ್ನುವುದಕ್ಕೆ ನಿಮ್ಮಲ್ಲಿ ಉತ್ತರವಿದೆಯೇ?
ಅನಿರುದ್ಧ ಅವರೇ,
ಬಹಳ ಒಳ್ಳೆಯ ವಿಚಾರವನ್ನೆತ್ತಿದ್ದೀರಿ. ನೀವು ಕೇಳಿರುವ ಪ್ರತಿಯೊಂದು ಪ್ರಶ್ನೆಗೂ ಅವಶ್ಯವಾಗಿ ಉತ್ತರ ಕೊಡಬೇಕಾಗಿರುವುದು ಯಾವುದೇ ಚುನಾಯಿತ ಸರ್ಕಾರದ ಕರ್ತವ್ಯ. ಆದರೆ ಉತ್ತರ ಪಡೆಯುವ ಬಗೆಯೇನು? ಈ ಉತ್ತಮ ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು.
ಅರುಣ್
All the political parties endorse this.The government should think that they are spending taxpayers money.It is not the money of CM ‘s personel pockt.What the ghanandhari work the zilla parsad president doing.Oppositin parties should question.but theynot.How many schools without roof,howmany hospitals without doctor..How many rural poor and city middle class suferring from dises like kidny failure cancer are unable to pay their hospital bills.how many agricultraists could not able to loan are suffering.Why not they can diverte that money this side Why our ex PM cannot direct the government.Bari mosalekanniru.Why an effeciant adovcate cannot file a pil against this andadundi expenditure.