ವಿಷಯದ ವಿವರಗಳಿಗೆ ದಾಟಿರಿ

ಮೇ 27, 2016

4

ಹೋಮ ಹವನ ಸನಾತನ ಧರ್ಮದ ಪ್ರತೀಕ, ಅದರ ತೇಜೋವಧೆ ಡಂಭಾಚಾರಕ

‍ನಿಲುಮೆ ಮೂಲಕ

– ಸಂದೀಪ್ ಶರ್ಮಾ .ಎಂ

18C9F35-356x340ಕೆಲ ದಿನಗಳ ಹಿಂದೆ ಬಂಡಾಯ ಸಾಹಿತಿಗಳಾದ ಮಾನ್ಯ ವೇಣುರವರು ಕನ್ನಡದ ದಿನಪತ್ರಿಕೆ “ವಿಶ್ವವಾಣಿ”ಯಲ್ಲಿ ಮತ್ತೂರಿನಲ್ಲಿ ನಡೆದ ಸೋಮಯಾಗದ ಬಗ್ಗೆ ತಮ್ಮ ಕಪೋಲಕಲ್ಪಿತ ನಿಲುವನ್ನು ವ್ಯಕ್ತಪಡಿಸಿದ್ದಾರೆ. ವೇಣುರವರು ವೈಭವದ ಮಾತುಗಳಲ್ಲೇ ಮತ್ತು ತಮ್ಮ ಬರಹಗಳಿಂದ ವಾಚಕವೃಂದವನ್ನು ಆಕರ್ಷಿಸಬಹುದು ಎಂದು ತಿಳಿದಿದ್ದರೆ ಅದು ಅವರ ಭ್ರಮಾಲೋಕದ ಪರಮಾವಧಿ ಎಂದರೆ ತಪ್ಪಾಗಲಾರದು. ಬುದ್ಧುಜೀವಿಗಳ ಮುಖದ ರಾಡಿಯನ್ನು ಇವರು ಒರೆಸಲು ಹರಸಾಹಸ ಪಡುತ್ತಿದ್ದಾರೆ ಹಾಗು ಅವರುಗಳ ಗೊಡ್ಡುತನದ ಧೋರಣೆಗಳನ್ನು ಎತ್ತಿ ಹಿಡಿಯಲು ನೋಡುತ್ತಿದ್ದಾರೆ. ಆದರೆ ವಾಚಕವೃಂದದವರನ್ನು ಬೆಪ್ಪು ಮಾಡಲಿಕ್ಕೆ ಸಾಧ್ಯವಿಲ್ಲವೆಂಬುದು ಅವರಿಗೆ ತಿಳಿದಂತಿಲ್ಲ. ಮತ್ತೂರಿನಲ್ಲಿ ಸಂಸ್ಕೃತ ಭಾಷೆ ಮಾತನಾಡಿದರೆ ಇವರ ಗಂಟು ಏನು ಹೋಗುವುದೋ ಗೊತ್ತಿಲ್ಲ, ಇಲ್ಲಿನವರು ಮಾತನಾಡುವ ಭಾಷೆಗು ಹಾಗು ಅಲ್ಲಿ ನಡೆದ ಯಾಗಕ್ಕೂ ಯಾವ ಬಾದರಾಯಣ ಸಂಬಂಧ. ಸಂಸ್ಕೃತ ಮೃತ ಭಾಷೆ ಎಂದು ತಿಳಿದಿರುವ ಇವರು ಆ ಭಾಷೆಯಿಂದಲೇ ಮಿಕ್ಕೆಲ್ಲ ಭಾಷೆಗಳು ಉದ್ಭವಿಸಿದವು ಎಂಬುದನ್ನು ಇವರು ಮನಗಂಡಂತಿಲ್ಲ. ಸುಮಾರು ಅರವತ್ತು ಲಕ್ಷಕ್ಕೂ ಹೆಚ್ಚು ಜನ ಉಪಯೋಗಿಸುವ ಈ ಭಾಷೆಯು ಹೇಗೆ ಇವರ ಪ್ರಕಾರ ಮೃತವಾಯಿತೋ ಎಂಬುದನ್ನು ಇವರ ಅಧ್ಯಯನ ಹಾಗು ಚಿಂತನೆಯಿಂದ ತಿಳಿದುಕೊಳ್ಳಬೇಕಾಗಿದೆ.

ಪ್ರಕೃತಿಯ ಲೋಕಕಲ್ಯಾಣಕ್ಕಾಗಿ ಮಾಡುವ ಯಾಗಕ್ಕೆ ಬ್ರಾಹ್ಮಣರ ನಂಬಿಕೆಗೆ ಅನುಸಾರವಾಗಿ ಕೈಗೊಂಡ ಕಾರ್ಯಕ್ರಮವು ಇವರಿಗೆ ಯಾವ ರೀತಿಯಲ್ಲಾದರೂ ಉಪದ್ರವಾಯಿತೇ? ಇಲ್ಲವಲ್ಲ! ಸಮಾಜದ ಸರ್ವತೋಮುಖ ಏಳ್ಗೆಗಾಗಿ ಬಯಸುವ ಬ್ರಾಹ್ಮಣ ಹೋಮ ಹವನವನ್ನು ಕದ್ದುಮುಚ್ಚಿ ಮಾಡುವ ಪ್ರಸಂಗ ಎಲ್ಲಿಂದ ಉದ್ಭವಿಸುತ್ತದೆ ಎಂಬುದನ್ನು ಇವರು ಮನಗಾಣಬೇಕು. ತುಲನಾತ್ಮಕವಾದ ಅಧ್ಯಯನವಿಲ್ಲದೆ ಸಕಲ ಕೆಲಸಗಳಲ್ಲಿ ಅಜ್ಞಾನವೇ ಮೆಟ್ಟಿನಿಲ್ಲುತ್ತದೆ ಎಂಬುದನ್ನು ನಾನು ಸಣ್ಣವನಿದ್ದಾಗಲೇ ಅರಿತೆ. ವಾಚಕರ ಆಶಯವು ಕೂಡ ಇದೇ ಆಗಿದೆ.

ವೇದಗಳ ಹಾಗು ಅದರ ಶಾಸ್ತ್ರಗಳ ಆಳವಾದ ಅಧ್ಯಯನ ಮಾಡಲು ಮಾನವನ ಒಂದು ಜನ್ಮವು ಸಾಕಾಗುವುದಿಲ್ಲ. ಇವರು ಹೇಳುವಂತೆ ವೈದಿಕರು ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಗಳಾದರು ಎಂಬುದು ಯಾವ ಶಾಸ್ತ್ರದಲ್ಲಿ ಉಲ್ಲೇಖವಾಗಿದೆಯೋ ಅದನ್ನು ತಿಳಿಸಿದರೆ ಬಹಳ ಸೂಕ್ತ. ಹಿಂಸೆಯನ್ನು ಮಾಡುವುದೇ ಕಡುಪಾಪ ಎಂದನ್ನರಿತ ಬ್ರಾಹ್ಮಣ ಇನ್ನು ಪ್ರಾಣಿವಧೆಯನ್ನು ಮಾಡಿ ಅದರ ಮಾಂಸ ಭಕ್ಷಣೆ ಮಾಡುವಷ್ಟು ಕ್ರೂರತೆ ಎಲ್ಲಿಂದ ಉದ್ಭವಿಸಿತತೋ ತಿಳಿಯುತ್ತಿಲ್ಲ. ಮತ್ತೂರಿನಲ್ಲಿ ಪ್ರಾಣಿವಧೆಯೇ ಆಗದಿದ್ದ ಮೇಲೆ ಅಲ್ಲಿದ್ದ ಬ್ರಾಹ್ಮಣರೆಲ್ಲರು ಸಾತ್ವಿಕರೆ. ಇನ್ನು ಅವರಿಂದ ಮಾಂಸ ಭಕ್ಷಣೆ ಹೇಗೆ ಸಾಧ್ಯ? ಡಂಭಾಚಾರ ಹಾಗು ಅಸತ್ಯವನ್ನೇ ಬಿಂಬಿಸುತ್ತ ಮತ್ತಷ್ಟು ಮೂರ್ಖತನದ ಗೋಜಲಿಗೆ ಸಿಕ್ಕಿಕೊಳ್ಳುತ್ತೇನೆ ಎಂಬುದನ್ನು ಬುದ್ಧುಜೀವಿಗಳು ಮೊದಲೇ ಅರಿತಿದ್ದರೆ ತಾವು ನಿರ್ಮಿಸಿದ ಕೆಸರ ತೋಡಿಗೆ ಕಲ್ಲೆಸೆಯುವ ಪ್ರಸಂಗ ಬರುತ್ತಿರಲಿಲ್ಲ.

ಸೋಮರಸವು ಔಷಧೀಯ ಗುಣವುಳ್ಳ ತೀರ್ಥ, ಅಲ್ಲಿ ನೆರೆದಿದ್ದ ಬ್ರಾಹ್ಮಣ ಮಿತ್ರರು ಸೇವಿಸಿದರೆ ಅದು ಅವರ ಆರೋಗ್ಯಕ್ಕೆ ಶ್ರೀರಕ್ಷೆ. ಬ್ರಾಹ್ಮಣ ವಿರೋಧಿಗಳು ಈ ಔಷಧೀಯ ಗುಣವುಳ್ಳ ತೀರ್ಥವು ಬಾರ್ನಲ್ಲಿ ದೊರೆಯುವ ಮದ್ಯಕ್ಕೆ ಹೋಲಿಸಿದರೆ ಬ್ರಾಹ್ಮಣನ ತಾಳ್ಮೆ ತಳಹಿಡಿಯುವುದಿಲ್ಲ ಮತ್ತಷ್ಟು ಹೆಚ್ಚುತ್ತದೆ. ಅಜ್ಞಾನವನ್ನೇ ಮನೆಮಾಡಿಕೊಂಡು ಅದರಲ್ಲಿ ನೆಲೆಯೂರಿರುವಂತಹ ಬ್ರಾಹ್ಮಣ ವಿರೋಧಿಗಳ ಮೇಲೆ ನಮಗೆ ಅಪಾರವಾದ ಕನಿಕರವಿದೆ ಹಾಗು ಸಹಾನುಭೂತಿ ಕೂಡ.

ಕಸಾಯಿಖಾನೆಗಳಲ್ಲಿ ದಿನವೂ ಮಾರಣಹೋಮ ನಡೆಯುವಾಗ ಬ್ರಾಹ್ಮಣ ವಿರೋಧಿಗಳು ಯಾಕೆ ಕಟುಕನಿಗೆ ಮೃದು ಧೋರಣೆ ತೋರುತ್ತ ಗುಂಜಾಯಿಸಿಕೊಂಡು ತಮ್ಮ ನಿತ್ಯ ಅಸತ್ಯ ಕಾರ್ಯಗಳಲ್ಲಿ ಮಗ್ನರಾಗಿರುತ್ತಾರೆ. ಇವರ ಈ ನಿಲುವಿಗೆ ಡಂಭಾಚಾರವೆನ್ನಬಹುದೋ ಅಥವಾ ಸರ್ವ ಅಧರ್ಮ ಕೈಂಕರ್ಯವೋ. ಅನ್ಯಧರ್ಮೀಯರು ಕಡಿದರೆ ಪ್ರಕೃತಿನಿಯಮ ಬ್ರಾಹ್ಮಣ ಹವನ ಮಾಡಿದರೆ ಆಷಾಢಭೂತಿತನ, ಅದು ಸೃಕ್-ಸೃವ ಹಿಡಿದು ತುಪ್ಪವನ್ನು ಅಗ್ನಿಗೆ ಅರ್ಪಿಸುವಾಗ. ಸತ್ಯಾಸತ್ಯತೆ ಕಾಣುತ್ತಿರುವಾಗ ವಿರೋಧಿಗಳ ಅಡ್ಡಗಾಲು ಸಹಜ, ಇದಕ್ಕಾಗಿ ಅಂಜದೆ ನಮ್ಮ ಸನಾತನ ಧರ್ಮವನ್ನು ಉಳಿಸುವುದರಲ್ಲಿ ಬ್ರಾಹ್ಮಣಿಕೆಯ ಪಾಲು ಬಹು ಮಹತ್ವದ್ದು.

4 ಟಿಪ್ಪಣಿಗಳು Post a comment
 1. vasu
  ಮೇ 27 2016

  ಹೋಮ, ಹವನಗಳನ್ನು ವಾತಾವರಣ ಶುದ್ಧಿಗಾಗಿ ಮಾಡಬೇಕೆಂದು ವೇದಗಳ ಆಧೇಶವಿದೆ. ಹೋಮ ಹವನಗಳಲ್ಲಿ ಪ್ರಾಣಿ ಬಲಿ ಬಂದದ್ದು ವಾಮ ಮಾರ್ಗಿಗಳಿಂದ. ಪಶುಬಲಿ ಯಾವತ್ತೂ ಖಂಡನೀಯವೇ. ಆದರೆ ವೇದಗಳಲ್ಲಿ ಈ ಬಗ್ಗೆ ಸುತರಾಂ ಸೊಲ್ಲಿಲ್ಲ. ಆಶ್ವಮೇಧ, ಗೋಮೇಧ, ನರಮೇಧ ಇತ್ಯಾದಿಗಳು ವೇದ ಮೂಲ. ಆದರೆ ಇಂದು ಜನ ತಿಳಿದಿರುವಂತೆ ಅಲ್ಲಿ ಆಶ್ವಗಳ, ಗೋವುಗಳ ಮತ್ತು ಮನುಷ್ಯರ ಬಲಿಯಿಲ್ಲ. ಮೇಧ ಎನ್ನುವ ಶಬ್ಧವು ಮೇಧೃ ಸಂಗಮೇ ಎನ್ನುವ ಮೂಲ ಧಾತುವಿನಿಂದ ಹೊರಟಿದೆ. ಇದರ ಅರ್ಥ ಸಂಗ್ರಹ ಅಥವಾ ಕ್ರೋಡಿಕರಣ. ಹಾಗಾಗಿ ಅಶ್ವಮೇದ ಎಂದಾಗ ವೇದಗಳಲ್ಲಿ ಪ್ರಕರಣಾನುಸಾರವಾಗಿ ಅದು ರಾಷ್ಟ್ರ ಶಕ್ತಿಗಳ ಕ್ರೋಡಿಕರಣವಾಗುತ್ತದೆಯೇ ಹೊರತು ಅಲ್ಲಿ ಆಶ್ವಗಳ ಬಲಿಯಿಲ್ಲ. ವೇದಾರ್ಥಗಳಿಗೆ ಅಪಾರ್ಥಮಾಡಿ ನಮ್ಮ ವೇದಗಳಿಗೆ ಈ ವಾಮ ಮಾರ್ಗಿಗಳು ಮತ್ತು ಇವರಿಂದ ಪ್ರೇರಿತಗೊಂಡ ಕೆಲವು ಭಾರತೀಯ ವಿದ್ವಾಂಸರು ಮತ್ತು ಪಾಶ್ಚಿಮಾತ್ಯರು ಅಪಚಾರವೆಸಗಿದ್ದಾರೆ. ವೇದಗಳಿಗೆ ಸರಿಯಾದ ಅರ್ಥವನ್ನು ನೀಡಿ ವೇದಗಳ ಮಹಿಮೆಯನ್ನು ಎತ್ತಿ ಹಿಡಿದವರಲ್ಲಿ ಆರ್ಯಸಮಾಜದ ಸಂಸ್ತಾಪಕರಾದ ಸ್ವಾಮಿ ದಯಾನಂದರು ಅಗ್ರಗಣ್ಯರು. ಇವರು ಬರೆದ ಸತ್ಯಾರ್ಥ ಪ್ರಕಾಶ , ಮತ್ತು ಋಗ್ವೇದಾದಿ ಭಾಷ್ಯ ಭೂಮಿಕಾ ಮುಂತಾದ ಗ್ರಂಥಗಳನ್ನು ಓದಿ ಮಾಕ್ಯ್ಮುಮುಲೆರ್ ಕೂಡ ಅವನು ವೇದಗಳ ಬಗ್ಗೆ ಇರುವ ಻ಅಭಿಪ್ರಾಯವನ್ನು ಬದಲಿಸಿದ. ಇದನ್ನು ಎಲ್ಲರೂ ಗಮನಿಸಬೇಕು.
  ಅಂದ ಹಾಗೆ ಹೋಮಗಳಲ್ಲಿ ಪ್ರಾಣಿ ಬಲಿ ಖಂಡಿಸುವವರು ಏನು ಸಸ್ಯಾಹಾರಿಗಳೇ? ಕೇವಲ ಸಸ್ಯಾಹಾರಿಗೆ ಮಾತ್ರ ಇಂತಹ ಬಲಿಗಳನ್ನು ಖಂಡಿಸಲು ನೈತಿಕ ಻ಆಧಿಕಾರವಿದೆ. ಮಾಂಸ ಭಕ್ಷಕರಿಗಿಲ್ಲ.

  ಉತ್ತರ
 2. vasu
  ಮೇ 27 2016

  ಹೋಮ, ಹವನಗಳಲ್ಲಿ ಪ್ರಾಣಿ ಬಲಿ ಬಿಡಿ. ಪಿಷ್ಠ ಬಲಿಯನ್ನು ಕೊಡುವುದು ಸಹ ಸೈದ್ಧಾಂತಿಕ ನೆಲೆಯಲ್ಲೂ ತಪ್ಪೇ. ಹಾಗಾಗಿ ಮತ್ತೂರನಲ್ಲಿ ನಡೆದ ಯಾಗದಲ್ಲಿ ಪಿಷ್ಠ ಪ್ರಾಣಿಯ ಬಲಿಯನ್ನು ನೀಡಿದಲ್ಲೇ ಆಗಿದ್ದೇ ಆದಲ್ಲಿ ಅದು ತಪ್ಪು. ವೇದಗಳೆಲ್ಲೂ ಇಂತಹ ಕ್ರಮಗಳನ್ನು ಪ್ರಸ್ತಾವಿಸಿಲ್ಲ.
  ಾಆ

  ಉತ್ತರ
 3. ahcharya
  ಜೂನ್ 12 2016

  poorthy gothide yella gothu antha mathadbardu

  ಉತ್ತರ

ನಿಮ್ಮದೊಂದು ಉತ್ತರ sudarshanarao ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments